ಜಾಗತಿಕ ಫ್ಯಾಷನ್ ವೇದಿಕೆಯಲ್ಲಿ ಮಿಂಚಿದ ಶ್ರೀಲೀಲಾ: ವಿದೇಶಿ ಬ್ರ್ಯಾಂಡಿಗೆ ರಾಯಭಾರಿ – Kannada News | Sreeleela in Milan fashion week, She replaced Rashmika as Onitsuka Tiger brand ambassador

ಬೆಂಗಳೂರಿನ ಚೆಲುವೆ ನಟಿ ಶ್ರೀಲೀಲಾ (Sreeleela), ಸ್ಯಾಂಡಲ್​​ವುಡ್, ಟಾಲಿವುಡ್ ಬಳಿಕ ಈಗ ಬಾಲಿವುಡ್ ಮತ್ತು ಕಾಲಿವುಡ್​​ಗಳಲ್ಲಿ ಸಖತ್ ಹೆಸರು ಮಾಡುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಲ್ಲಿಯೂ ಬ್ಯುಸಿ ಆಗಿದ್ದ ಈ ಚೆಲುವೆ ಇದೀಗ ಫ್ಯಾಷನ್ ಲೋಕಕ್ಕೂ ಕಾಲಿರಿಸಿದ್ದಾರೆ. ಹಿಂದೆಲ್ಲ ಕೆಲ ಸಣ್ಣ-ಪುಟ್ಟ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದ ಶ್ರೀಲೀಲಾ ಇದೀಗ ವಿಶ್ವ ಪ್ರಸಿದ್ಧ ಫ್ಯಾಷನ್ ಶೋ ಆಗಿರುವ ಮಿಲಾನ್ ಫ್ಯಾಷನ್ ವೀಕ್​​​ನ ವೇದಿಕೆಯ ಮೇಲೆ ಬೆಕ್ಕಿನ ನಡಿಗೆ ನಡೆದಿದ್ದಾರೆ.

ಇತ್ತೀಚೆಗೆ ಇಟಲಿಯ ಮಿಲಾನ್‌ನಲ್ಲಿ ನಡೆದ ಪ್ರತಿಷ್ಠಿತ ‘ಮಿಲಾನ್ ಫ್ಯಾಶನ್ ವೀಕ್’ನಲ್ಲಿ ಪಾಲ್ಗೊಂಡು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಜಪಾನ್‌ನ ಪ್ರಸಿದ್ಧ ಬ್ರ್ಯಾಂಡ್ ‘ಒನಿಟ್ಸುಕಾ ಟೈಗರ್’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಲೀಲಾ ವಿಭಿನ್ನ ಹಾಗೂ ಸ್ಟೈಲಿಶ್ ಉಡುಪಿನಲ್ಲಿ ಮಿಂಚಿದರು. ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಹಾಗೂ ಕಿತ್ತಳೆ ಬಣ್ಣದ ಓವರ್‌ಕೋಟ್ ಧರಿಸಿ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದ ಶ್ರೀಲೀಲಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮಿಲಾನ್‌ನ ಐತಿಹಾಸಿಕ ಬೀದಿಗಳನ್ನು ತಮ್ಮ ಫ್ಯಾಶನ್ ರನ್‌ವೇ ಆಗಿ ಬಳಸಿಕೊಂಡ ನಟಿ, ಸೌತ್ ಸಿನಿಮಾರಂಗದ ಗ್ಲಾಮರ್ ಅನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಈ ಹಿಂದೆ ‘ಒನಿಟ್ಸುಕಾ ಟೈಗರ್’ ಬ್ರ್ಯಾಂಡ್‌ನ ಭಾರತೀಯ ರಾಯಭಾರಿಯಾಗಿ ಕನ್ನಡದವರೇ ಆಗಿರುವ ರಶ್ಮಿಕಾ ಮಂದಣ್ಣ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಮಿಲಾನ್‌ನಲ್ಲಿ ಶ್ರೀಲೀಲಾ ಕಾಣಿಸಿಕೊಂಡಿರುವುದು, ರಶ್ಮಿಕಾ ಅವರ ಸ್ಥಾನವನ್ನು ಶ್ರೀಲೀಲಾ ಪಡೆದಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ. ಹಲವು ವರದಿಗಳ ಪ್ರಕಾರ, ಬ್ರ್ಯಾಂಡ್ ತನ್ನ ಪ್ರಚಾರಕ್ಕಾಗಿ ಹೊಸ ಮುಖವನ್ನು ಪರಿಚಯಿಸಲು ಶ್ರೀಲೀಲಾ ಅವರನ್ನು ಆರಿಸಿಕೊಂಡಿದೆ ಎನ್ನಲಾಗುತ್ತಿದೆ. ಇದರಿಂದಾಗಿ ರಶ್ಮಿಕಾ ಮತ್ತು ಶ್ರೀಲೀಲಾ ನಡುವೆ ವೃತ್ತಿಪರ ಪೈಪೋಟಿ ಜೋರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:ವೈದ್ಯೆಯಾಗಿ ಪ್ರತಿಜ್ಞೆ ಸ್ವೀಕರಿಸಿದ ನಟಿ ಶ್ರೀಲೀಲಾ: ವಿಡಿಯೋ

ಕೇವಲ ಫ್ಯಾಶನ್ ಲೋಕದಲ್ಲಷ್ಟೇ ಅಲ್ಲದೆ, ಸಿನಿಮಾರಂಗದಲ್ಲೂ ಶ್ರೀಲೀಲಾ ಭರ್ಜರಿ ಯಶಸ್ಸು ಕಾಣುತ್ತಿದ್ದಾರೆ. ಸದ್ಯ ಅವರು ಪವನ್ ಕಲ್ಯಾಣ್ ಅಭಿನಯದ ಹೈ-ವೋಲ್ಟೇಜ್ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡುಗಳು ಈಗಾಗಲೇ ದೊಡ್ಡ ಹಿಟ್ ಆಗಿದ್ದು, ಶ್ರೀಲೀಲಾ ಅವರ ನೃತ್ಯ ಮತ್ತು ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾನಲ್ಲಿಯೂ ಅವರು ರಶ್ಮಿಕಾಗೆ ಸಖತ್ ಪೈಪೋಟಿಯನ್ನೇ ನೀಡುತ್ತಿದ್ದಾರೆ. ರಶ್ಮಿಕಾ ಬೇಡಿಕೆಯಲ್ಲಿದ್ದ ಟಾಲಿವುಡ್​​ ಮತ್ತು ಬಾಲಿವುಡ್ ಎರಡರಲ್ಲೂ ಶ್ರೀಲೀಲಾ ಮುನ್ನುಗ್ಗುತ್ತಿದ್ದು, ರಶ್ಮಿಕಾರ ಅವಕಾಶಗಳನ್ನೂ ಕಸಿದುಕೊಳ್ಳುತ್ತಿದ್ದಾರೆ. ಇದೀಗ ಫ್ಯಾಷನ್ ಬ್ರ್ಯಾಂಡ್​ ಅನ್ನೂ ಕಸಿದುಕೊಂಡಿದ್ದಾರೆ.

ಶ್ರೀಲೀಲಾ ಪ್ರಸ್ತುತ ‘ಉಸ್ತಾದ್ ಭಗತ್ ಸಿಂಗ್’, ಬಾಲಿವುಡ್​​ನ ‘ಆಶಿಖಿ 3’, ಸೈಫ್ ಅಲಿ ಖಾನ್ ಪುತ್ರನ ಜೊತೆಗೆ ಹೊಸ ಸಿನಿಮಾ, ರಣ್ವೀರ್ ಸಿಂಗ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ತಮಿಳಿನಲ್ಲಿ ಸಾಯಿ ಪಲ್ಲವಿ ಜೊತೆಗೆ ಒಂದು ಸಿನಿಮಾ ಮತ್ತು ಡ್ರ್ಯಾಗನ್ ನಾಯಕ ಪ್ರದೀಪ್ ಅವರ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಯತುಲ್ಲಾ ಖಮೇನಿ ಮೇಲೆ ದಾಳಿಗೆ ಶನಿವಾರ ಬೆಳಗಿನ ಸಮಯ ಆರಿಸಿದ್ದು ಯಾಕೆ? ಬೇರೆ ಇದ್ದ ಪ್ಲಾನ್ ಬದಲಾಗಿದ್ದು ಯಾಕೆ? – Kannada News | Reason why US Israel picked Saturday Morning to attack and Kill Iran Supremo Ayatollah Ali Khamenei

ಇರಾನ್ ಮಹಿಳೆಯರು…

ವಾಷಿಂಗ್ಟನ್, ಮಾರ್ಚ್ 1: ಇರಾನ್ ದೇಶದ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಜೊತೆಯಾಗಿ ಸೇರಿ ಮುಗಿಬಿದ್ದಿವೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಾ ಬಂದಿದೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ವಿವಿಧ ಸೇನಾ ನೆಲೆಗಳು ಹಾಗು ಅಮೆರಿಕ ಪರವಾಗಿರುವ ಕೆಲ ದೇಶಗಳ ಪ್ರಮುಖ ನಗರಗಳ ಮೇಲೂ ಇರಾನ್ ದಾಳಿ ನಡೆಸುತ್ತಿದೆ. ಇದೇ ವೇಳೆ ನಿನ್ನೆ ಬೆಳಗ್ಗೆ (ಶನಿವಾರ) ಅಮೆರಿಕವು ಇರಾನ್ ಮೇಲೆ ಕ್ಷಿಪ್ರ ವಾಯು ದಾಳಿ ನಡೆಸಿತು. ಅದರಲ್ಲಿ ಇರಾನ್ ಮುಖ್ಯಸ್ಥ ಆಯತುಲ್ಲಾ ಅಲಿ ಖಮೇನಿ (Ayatollah Ali Khamenei) ಹಾಗೂ ಅವರ ಕುಟುಂಬ ಸದಸ್ಯರು ಹಾಗು ಸರ್ಕಾರದ ಕೆಲ ಪ್ರಬಲ ವ್ಯಕ್ತಿಗಳು ಹತರಾಗಿದ್ದಾರೆ.

ವರದಿಗಳ ಪ್ರಕಾರ, ಖಮೇನಿ ಜೊತೆ ಪ್ರಬಲ ಸೇನಾ ನೇತಾರರಾದ ಅಲಿ ಶಂಖಾನಿ, ಮೊಹಮ್ಮದ್ ಪಕಪೂರ್ (Mohammad Pakpour) ಅವರೂ ಬಲಿಯಾಗಿದ್ದಾರೆ. ಅಲಿ ಶಂಖಾನಿ (Ali Shamkhani) ಅವರು ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್​ನ ಮಾಜಿ ಕಾರ್ಯದರ್ಶಿಯಾಗಿದ್ದರು. ಪಕಪೂರ್ ಅವರು ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್​ನ ಕಮಾಂಡರ್ ಆಗಿದ್ದರು.

ಇದನ್ನೂ ಓದಿ: ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ?

ಶನಿವಾರ ಸಂಜೆ ಆಗಬೇಕಿದ್ದ ದಾಳಿ ಬೆಳಗ್ಗೆ ಆಗಲು ಕಾರಣ?

‘ನಮ್ಮ ಬೇಹುಗಾರಿಕೆ ಮತ್ತು ಅತ್ಯುತ್ತಮ ಟ್ರ್ಯಾಕಿಂಗ್ ಸಿಸ್ಟಂಗಳ ಕಣ್ತಪ್ಪಿಸಲು ಅವರಿಂದಾಗಲಿಲ್ಲ. ಅವರಿಗೆ ಬೇರೇನೂ ಮಾಡಲು ಸಾಧ್ಯವಿರಲಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಂದರೆ, ಇರಾನ್ ಮುಖ್ಯಸ್ಥರು ಹಾಗೂ ಇತರರ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ಗೂಢಚಾರರು ಮತ್ತು ಟ್ರ್ಯಾಕಿಂಗ್ ಸಿಸ್ಟಂಗಳು ಸದಾ ಕಣ್ಣಿಟ್ಟಿದ್ದರು ಎಂದಾಯಿತು.

ಟೆಹರಾನ್​ನಲ್ಲಿ ಶನಿವಾರ ಸಂಜೆ ಖಮೇನಿ ಅವರು ಇತರ ಪ್ರಮುಖ ವ್ಯಕ್ತಿಗಳ ಜೊತೆ ರಹಸ್ಯ ಸಭೆ ನಡೆಸಲು ನಿಶ್ಚಿತವಾಗಿತ್ತು. ಈ ವಿಚಾರ ಕೂಡ ಅಮೆರಿಕ, ಇಸ್ರೇಲ್ ಗುಪ್ತಚರರಿಗೆ ಗೊತ್ತಾಗಿತ್ತು. ಇರಾನ್ ಮುಖ್ಯಸ್ಥರು ಸೇರಿದಂತೆ ಆ ದೇಶದ ಅತ್ಯಂತ ಪ್ರಬಲ ನಾಯಕರು ಒಂದೆಡೆ ಇರುವಾಗಲೇ ದಾಳಿ ಮಾಡಿ ಒಟ್ಟಿಗೆ ಮುಗಿಸುವುದು ಅಮೆರಿಕ, ಇಸ್ರೇಲ್​ನ ಪ್ಲಾನ್ ಆಗಿತ್ತು. ಅಂತೆಯೇ ಶನಿವಾರ ಸಂಜೆ ದಾಳಿ ಮಾಡುವುದೆಂದು ತೀರ್ಮಾನಿಸಲಾಯಿತು.

ಇದನ್ನೂ ಓದಿ: ಓಮನ್ ಬಿಟ್ಟು ಉಳಿದ ಗಲ್ಫ್ ದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಆ ಒಂದು ರಾಷ್ಟ್ರ ಬಿಟ್ಟಿದ್ದೇಕೆ?

ನಂತರ ಖಮೇನಿ ಅವರ ಪ್ಲಾನ್ ಬದಲಾಯಿತು. ಸಂಜೆ ಬದಲು ಬೆಳಗ್ಗೆ ರಹಸ್ಯ ಸಭೆ ನಡೆಸಿದರು. ಈ ಮಾಹಿತಿಯೂ ಕೂಡ ಅಮೆರಿಕ ಮತ್ತು ಇಸ್ರೇಲ್​ಗೆ ಗೊತ್ತಾಗಿ ಹೋಗಿತ್ತು. ಅವರ ದಾಳಿ ಕಾರ್ಯಾಚರಣೆಯ ಸಮಯವೂ ಕೂಡ ಶನಿವಾರ ಬೆಳಗ್ಗೆಗೆ ಹಿಂದೂಡಿಕೆ ಆಯಿತು. ಅದರಂತೆ ಇಸ್ರೇಲ್ ಅಮೆರಿಕ ಜಂಟಿ ಕಾರ್ಯಾಚರಣೆ ನಡೆಸಿ ಖಮೇನಿ ಇದ್ದ ಸ್ಥಳದ ಮೇಲೆ ದಾಳಿ ಮಾಡಲಾಯಿತು ಎನ್ನಲಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯಪ್ರಾಚ್ಯದಲ್ಲಿ ಯುದ್ಧ: ಹೊರದೇಶಗಳಲ್ಲಿ ಸಿಲುಕಿರುವ ರಕ್ಷಣೆಗೆ ಕೋಲಾರ ಜಿಲ್ಲಾಡಳಿತದಿಂದ ಸಹಾಯವಾಣಿ – Kannada News | Kolar district administration sets up helpline for residents stranded abroad amid Middle East war

ಕೋಲಾರ, ಮಾರ್ಚ್​ 01: ಅಮೆರಿಕ ಮತ್ತು ಇಸ್ರೇಲ್​ ಜಂಟಿ ದಾಳಿಯಲ್ಲಿ 201ಕ್ಕೂ ಹೆಚ್ಚು ಇರಾನಿಯನ್ನರು ಸಾವನ್ನಪ್ಪಿದ್ದಾರೆ. ಇರಾನ್​ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮನೈ ಕೂಡ ಹತ್ಯೆವಾಗಿದ್ದಾರೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ (Middle East Conflict) ಯುದ್ಧದ ವಾತಾವರಣ ಹಿನ್ನೆಲೆ ಹೊರದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಸಹಾಯವಾಣಿ ಪ್ರಕಟಿಸಲಾಗಿದೆ. ಈ ಬಗ್ಗೆ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ನೀಡಿದ್ದಾರೆ.

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧದ ವಾತಾವರಣ ಹಿನ್ನೆಲೆ ಎಲ್ಲೆಡೆ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಪರಿಣಾಮ ದುಬೈ ಸೇರಿದಂತೆ ಹಲವೆಡೆ ಕನ್ನಡಿಗರು ಸೇರಿದಂತೆ ಭಾರತೀಯರು ಸಿಲುಕಿಕೊಂಡಿದ್ದಾರೆ. ಹಾಗಾಗಿ ಹೊರದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧದ ವಾತಾವರಣ ಹಿನ್ನೆಲೆ ಹೊರದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಸಹಾಯವಾಣಿ ಪ್ರಕಟಿಸಲಾಗಿದೆ. ಈ ಬಗ್ಗೆ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ನೀಡಿದ್ದಾರೆ. ಕೋಲಾರ ಜಿಲ್ಲಾಡಳಿತ ಸಹಾಯವಾಣಿ ಪ್ರಕಟಿಸಿದೆ.

ಸಹಾಯವಾಣಿ ಹೀಗಿದೆ

  • ಕತಾರ್ 00974-55647502
  • ಬಹ್ರೇನ್ 00973-39418071
  • ಜೋರ್ಡಾನ್ ಸಹಾಯವಾಣಿ ನಂಬರ್​ 00962-770 422 276
  • ಇರಾಕ್ +964 7716511185
  • ಕುವೈತ್ +965 65501946
  • ಪ್ಯಾಲೆಸ್ಟೈನ್ ಸಹಾಯವಾಣಿ ನಂಬರ್​ +970 592916418

ಕೋಲಾರದಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ಆರಂಭ

ಇನ್ನು ಕೋಲಾರ ಜಿಲ್ಲೆಯಲ್ಲೂ ವಿಪತ್ತು ನಿರ್ವಹಣಾ ಕೇಂದ್ರ ಆರಂಭಿಸಲಾಗಿದ್ದು, 9740050061 ಅಥವಾ 9606241449 ನಂಬರ್​ಗೆ ಕರೆ ಮಾಡಬಹುದು ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾಹಿತಿ ನೀಡಿದ್ದಾರೆ.

ದುಬೈನಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ಮುಂದಾದ ಮಾಜಿ ಸಚಿವ ಬಿ.ನಾಗೇಂದ್ರ

ಯುದ್ಧದ ಕಾರ್ಮೋಡ ಹಿನ್ನೆಲೆ ದುಬೈನಲ್ಲಿ ಬಳ್ಳಾರಿ ಜಿಲ್ಲೆಯ 50ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ಸದ್ಯ ಇವರ ನೆರವಿಗೆ ಮಾಜಿ ಸಚಿವ ಬಿ ನಾಗೇಂದ್ರ ಮುಂದಾಗಿದ್ದಾರೆ. ದುಬೈನಲ್ಲಿರುವ ಸ್ನೇಹಿತ ನಜೀಬ್ ಮೂಲಕ ಬಿ.ನಾಗೇಂದ್ರ ನೆರವಿಗೆ ಮುಂದಾಗಿದ್ದು, ಕನ್ನಡಿಗರಿಗೆ ಊಟ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ. ವಿಡಿಯೋ ಕಾಲ್​ನಲ್ಲಿ ಬಳ್ಳಾರಿ ಜನರ ಜತೆ ಸಿಎಂ ಸಿದ್ದರಾಮಯ್ಯ ಮತ್ತು ಬಿ. ನಾಗೇಂದ್ರ ಮಾತನಾಡಿದ್ದಾರೆ.

ಕನ್ನಡಿಗರ ರಕ್ಷಣೆಗೆ ಮುಂದಾದ ದುಬೈ ಒಕ್ಕಲಿಗರ ಸಂಘ 

ದುಬೈನಲ್ಲಿ ಇರುವ ಕನ್ನಡಿಗರ ರಕ್ಷಣೆಗೆ ದುಬೈ ಒಕ್ಕಲಿಗರ ಸಂಘ ಮುಂದಾಗಿದೆ. ಏನೇ ಸಹಾಯ ಬೇಕಿದ್ದರು ಸಂಪರ್ಕ ಮಾಡುವಂತೆ ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಕಿರಣ್ ಗೌಡ ತಿಳಿಸಿದ್ದಾರೆ. ಊಟ, ವಸತಿ, ವಿಮಾನ ಟಿಕೆಟ್ ಏನೇ ಬೇಕಾದರೂ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು 971 52 699 5413 ಈ ನಂಬರ್​ಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಶ್ರೀಮಂತಿಕೆಯನ್ನು ಗಳಿಸಬೇಕೆಂದರೆ ಮೊದಲು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ – Kannada News | Chanakya Niti: Acharya Chanakya says that these habits can make even the poorest person rich

ಶ್ರೀಮಂತರಾಗಬೇಕೆಂಬ (rich) ಆಸೆ ಯಾರಿಗೆ ತಾನೆ ಇರೋಲ್ಲ ಹೇಳಿ. ಪ್ರತಿಯೊಬ್ಬರೂ ಸಹ ಶ್ರೀಮಂತಿಕೆ, ಸಂಪತ್ತನ್ನು ಗಳಿಸಬೇಕು ಎಂದು ಬಯಸುತ್ತಾರೆ. ಆದರೆ ಶ್ರೀಮಂತಿಕೆಯನ್ನು ಗಳಿಸುವ ಸರಿಯಾದ ಮಾರ್ಗದ ಬಗ್ಗೆ ಹಲವರಿಗೆ ತಿಳಿದಿಲ್ಲ. ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಬಡತನವನ್ನು ನಿವಾರಿಸಿ ಶ್ರೀಮಂತರಾಗುವುದು ಹೇಗೆ, ಶ್ರೀಮಂತರಾಗಲು ಯಾವೆಲ್ಲಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದಾರೆ. ಈ ಸಕಾರಾತ್ಮಕ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಕಡು ಬಡವನು ಸಹ ಶ್ರೀಮಂತನಾಗುತ್ತಾನಂತೆ. ಹಾಗಿದ್ರೆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು?

ಎಲ್ಲವನ್ನೂ ಪೂರ್ಣ ಶ್ರದ್ಧೆಯಿಂದ ಮಾಡಿ: ಕಠಿಣ ಪರಿಶ್ರಮವಿಲ್ಲದೆ ಜೀವನದಲ್ಲಿ ಯಶಸ್ಸು ಅಸಾಧ್ಯ ಎಂದು ಚಾಣಕ್ಯ ನಂಬಿದ್ದರು. ನೀವು ನಿಜವಾಗಿಯೂ ಶ್ರೀಮಂತರಾಗಲು ಬಯಸಿದರೆ, ನೀವು ಪ್ರತಿದಿನ ಶ್ರದ್ಧೆಯಿಂದ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.

ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಿ: ನೀವು ಶ್ರೀಮಂತರಾಗಲು ಬಯಸಿದರೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು, ಏಕೆಂದರೆ ಅದು ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ವರ್ತಮಾನದಲ್ಲಿ, ವ್ಯರ್ಥ ಖರ್ಚು ಮತ್ತು ಪದೇ ಪದೇ ಸಾಲ ಪಡೆಯುವುದು ನಿಮ್ಮನ್ನು ಶ್ರೀಮಂತರಾಗುವುದನ್ನು ತಡೆಯುವ ಬಹುದೊಡ್ಡ ತಪ್ಪುಗಳಾಗಿದ್ದು, ಈ ತಪ್ಪುಗಳನ್ನು ಮಾಡದಿರಿ.

ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ: ಒಬ್ಬ ವ್ಯಕ್ತಿಯು ಬಡತನದಿಂದ ಮೇಲೆದ್ದು ಶ್ರೀಮಂತನಾಗಲು ಬಯಸಿದರೆ, ಅವನು ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು. ಸೋಮಾರಿತನವನ್ನು ಬಿಟ್ಟು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಬೇಕು.

ನಿರಂತರ ಕಲಿಕೆ: ಚಾಣಕ್ಯ ನೀತಿಯ ಪ್ರಕಾರ, ಜ್ಞಾನವು ಜಗತ್ತಿನ ಅತ್ಯಂತ ದೊಡ್ಡ ಸಂಪತ್ತು ಮತ್ತು ಅದನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ನೀವು ಯಶಸ್ಸಿನ ಏಣಿಯನ್ನು ಏರಲು ಬಯಸಿದರೆ, ನೀವು ಕಲಿಯುವ ಅಭ್ಯಾಸವನ್ನು ಬಿಟ್ಟುಕೊಡಬಾರದು ಮತ್ತು ಪ್ರತಿದಿನ ಹೊಸದನ್ನು ಕಲಿಯಬೇಕು.

ನಿಮ್ಮ ಬಗ್ಗೆ ವಿಶ್ವಾಸವಿರಲಿ: ಬಡತನದ ಬೇಗೆಯಿಂದ ಹೊರಬರಲು ಬಯಸಿದರೆ ಮೊದಲು ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿರಬೇಕು ಎಂದು ಆಚಾರ್ಯ ಚಾಣಕ್ಯ ವಿವರಿಸುತ್ತಾರೆ. ಜೀವನವು ಸವಾಲುಗಳನ್ನು ಒಡ್ಡಿದಾಗಲೆಲ್ಲಾ, ಭಯಪಟ್ಟು ಹಿಂದೆ ಸರಿಯಬಾರದು, ಬದಲಾಗಿ ಆ ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸಬೇಕು. ಆಗ ಮಾತ್ರ ಯಶಸ್ಸು ಶ್ರೀಮಂತಿಕೆ ಗಳಿಸಲು ಸಾಧ್ಯ.

ವ್ಯರ್ಥ ಖರ್ಚು ಬೇಡ: ಶ್ರೀಮಂತರಾಗಲು ಹಣ ಸಂಪಾದನೆ ಮಾಡುವುದು ಮಾತ್ರವಲ್ಲ, ಅದನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಸಹ ಮುಖ್ಯ. ಹಾಗಾಗಿ ಹಣವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಖರ್ಚು ಮಾಡಬೇಡಿ.

ಇದನ್ನೂ ಓದಿ: ಮನೆಯಲ್ಲಿ ಹಣ ಉಳಿಯದಿರಲು ಕಾರಣವೇ ತಪ್ಪುಗಳು

ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ: ನಿಮ್ಮ ಆಲೋಚನೆ, ಯೋಜನೆಗಳನ್ನು ಅವು ಪೂರ್ಣಗೊಳ್ಳುವವರೆಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಆದ್ದರಿಂದ ನಿಮ್ಮ ಎಲ್ಲಾ ಸೀಕ್ರೆಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಕಠಿಣ ಪರಿಶ್ರಮ: ಕಷ್ಟಪಟ್ಟು ಕೆಲಸ ಮಾಡಲು ಹೆದರುವ ವ್ಯಕ್ತಿಯ ಬಳಿ ಹಣ ಎಂದಿಗೂ ಉಳಿಯುವುದಿಲ್ಲ, ಹಾಗಾಗಿ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಲಕ್ಷ್ಮಿ ದೇವಿಯು ಸಂತೃಪ್ತಳಾಗುತ್ತಾಳೆ  ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಯಾವುದೇ ಅಡ್ಡದಾರಿಯಿಂದ ಶ್ರೀಮಂತಿಕೆ ಗಳಿಸಲು ಸಾಧ್ಯವಿಲ್ಲ, ಕಠಿಣ ಪರಿಶ್ರಮದ ಮೂಲಕ ಮಾತ್ರ ಸಾಧ್ಯ. ಆದ್ದರಿಂದ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್-ಇಸ್ರೇಲ್ ಯುದ್ಧ: ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಪಂದ್ಯ ರದ್ದು – Kannada News | Security Alert: Pakistan Shaheens vs. England Lions Match Canceled Due to Middle East Conflict

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮದಿಂದಾಗಿ ಅಬುಧಾಬಿಯಲ್ಲಿ ನಡೆಯಬೇಕಿದ್ದ ಪಾಕಿಸ್ತಾನ್ ಶಹೀನ್ಸ್ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಎರಡನೇ ಅನಧಿಕೃತ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಪೂರ್ವ ನಿಗದಿಯಂತೆ ಈ ಪಂದ್ಯ ಮಾರ್ಚ್ 1, 2026 ರಂದು ಅಬುಧಾಬಿಯ ಓವಲ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಭದ್ರತಾ ಕಾಳಜಿಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಇಂಗ್ಲೆಂಡ್-ಪಾಕಿಸ್ತಾನ ಪಂದ್ಯ ರದ್ದು

ದುಬೈ ಮತ್ತು ಅಬುಧಾಬಿಯ ಪ್ರಮುಖ ಸ್ಥಳಗಳ ಮೇಲೆ ಇರಾನ್ ರಾಕೆಟ್ ದಾಳಿ ನಡೆಸಿದೆ. ಇದರ ಪರಿಣಾಮವಾಗಿ ವಾಯು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಭದ್ರತಾ ತಜ್ಞರು ಮತ್ತು ಸರ್ಕಾರದ ಸಲಹೆಯ ಆಧಾರದ ಮೇಲೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಪಂದ್ಯ ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ತಂಡಗಳು ಮತ್ತು ಸಿಬ್ಬಂದಿಯ ಸುರಕ್ಷತೆಯೇ ಪ್ರಮುಖ ಆದ್ಯತೆ ಎಂದಿರುವ ಇಸಿಬಿ, ಎರಡೂ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ತಾವು ತಂಗಿರುವ ಹೋಟೆಲ್‌ಗಳಿಂದ ಹೊರಬರದಂತೆ ಆದೇಶ ಹೊರಡಿಸಿದೆ. ಹಾಗೆಯೇ ಸಧ್ಯದ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ವಿಮಾನ ಹಾರಾಟ ಮರು ಆರಂಭವಾದ ನಂತರ ತಂಡಗಳು ಸರಣಿಗೆ ಮರಳುವ ಅಥವಾ ಸರಣಿಯನ್ನು ಮುಂದುವರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದೆ.

ಪ್ರವಾಸ ರದ್ದು?

ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಅಬುಧಾಬಿಯಲ್ಲಿ ನಡೆಯಬೇಕಿತ್ತು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ತಂಡ ಪಾಕಿಸ್ತಾನ ಶಾಹೀನ್ ಶಾಹೀನ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶಾಹೀನ್ ಶಾಹೀನ್ ತಂಡ 152 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಸುಲಭವಾಗಿ ಜಯಗಳಿಸಿತು. ಇದಕ್ಕೂ ಮುನ್ನ ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು ಇಂಗ್ಲೆಂಡ್ 3-0 ಅಂತರದಿಂದ ಗೆದ್ದುಕೊಂಡಿತ್ತು. ಈ ಇಂಗ್ಲೆಂಡ್ ಪ್ರವಾಸವು ಮಾರ್ಚ್ 9 ರಂದು ಕೊನೆಗೊಳ್ಳಬೇಕಿತ್ತು. ಆದಾಗ್ಯೂ, ಇದನ್ನು ರದ್ದುಗೊಳಿಸಲಾಗುತ್ತದೆಯೇ ಅಥವಾ ಮರು ನಿಗದಿಪಡಿಸಲಾಗುತ್ತದೆಯೇ ಎಂಬುದರ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

ಈ ಸರಣಿ ನಡೆಯುವುದು ಅನುಮಾನ

ಈ ಬಿಕ್ಕಟ್ಟಿನಿಂದಾಗಿ ಅಬುಧಾಬಿಯಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ಮಹಿಳಾ ತಂಡದ ತರಬೇತಿ ಶಿಬಿರವನ್ನು ಮುಂದೂಡಲಾಗಿದೆ. ಇದರ ಜೊತೆಗೆ ಮಾರ್ಚ್ 13 ರಂದು ಯುಎಇಯಲ್ಲಿ ಪ್ರಾರಂಭವಾಗಲಿರುವ ಅಫ್ಘಾನಿಸ್ತಾನ-ಶ್ರೀಲಂಕಾ ನಡುವಿನ ಟಿ20 ಮತ್ತು ಏಕದಿನ ಸರಣಿಗಳು ಸಹ ನಡೆಯುವುದು ಅನುಮಾನವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬದುಕು ನಿರ್ವಹಿಸುವಷ್ಟು ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ? ಬೆಲೆ ಏರಿಕೆ ಇತ್ಯಾದಿ ಅಂಶಗಳನ್ನೂ ಮರೆಯದಿರಿ; ಇಲ್ಲಿದೆ ಟಿಪ್ಸ್ – Kannada News | How to generate inflation beating regular income stream for retired life

ಇವತ್ತಿನ ಎಐ ಯುಗದಲ್ಲಿ ಯಾರ ಕೆಲಸ ಯಾವಾಗ ಹೊರಟುಹೋಗುತ್ತೋ ಗೊತ್ತಿರುವುದಿಲ್ಲ. ಕೆಲಸ ಹೋದರೂ ಒಂದು ಖಾಯಂ ಆದ ಮಾಸಿಕ ವರಮಾನ ಬರಬೇಕೆನ್ನುವ ಅಪೇಕ್ಷೆ ಹಲವರಿಗೆ ಇರುತ್ತದೆ. ಹಾಗೆಯೇ, ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಇಲ್ಲದವರು ಮಾಸಿಕ ವರಮಾನಕ್ಕೆ ಏನು ಮಾಡುವುದು? ಇವತ್ತು ನೀವು ಬಾಡಿಗೆ ಮನೆಯಲ್ಲಿ ವಾಸ ಇದ್ದು ಬಹಳ ಸರಳ ಜೀವನ ನಡೆಸುತ್ತೇನೆಂದರೂ ತಿಂಗಳಿಗೆ 50,000 ರೂ ಬೇಕಾಗಬಹುದು. ಇಷ್ಟಾದರೂ ಮಾಸಿಕ ಆದಾಯ ಸೃಷ್ಟಿಸುವ ತಂತ್ರ ಇಲ್ಲಿದೆ.

ನಿಮ್ಮ ವಯಸ್ಸು ಈಗ 40 ವರ್ಷ ಇದ್ದು, ಈಗಿನಿಂದಲೇ ನೀವು ಉದ್ಯೋಗಕ್ಕೆ ಪೂರ್ಣ ವಿರಾಮ ಹಾಕಲು ಬಯಸುತ್ತೀರಿ ಎಂದಿಟ್ಟುಕೊಳ್ಳಿ. ನಿಮಗೆ ಈಗ 50,000 ರೂ ಮಾಸಿಕ ವೆಚ್ಚವಾಗುತ್ತಿದೆ ಎಂದಾದರೂ, ವರ್ಷದಿಂದ ವರ್ಷಕ್ಕೆ ಈ ವೆಚ್ಚವು ಹಣದುಬ್ಬರಕ್ಕೆ ಅನುಗುಣವಾಗಿ ಹೆಚ್ಚುತ್ತಾ ಹೋಗುತ್ತದೆ. ನಿಮಗೆ 40 ವರ್ಷ ವಯಸ್ಸಾಗಿದ್ದರೆ ನಿಮ್ಮ ಆಯುಸ್ಸು ಇನ್ನೂ 40 ವರ್ಷ ಎಂದು ಭಾವಿಸಿ ಅದರಂತೆ ಹಣಕಾಸು ಲೆಕ್ಕಾಚಾರ ಹಾಕಬಹುದು.

40 ವರ್ಷ ಎಂದರೆ 480 ತಿಂಗಳು. ನಿಮ್ಮ ತಿಂಗಳ ವೆಚ್ಚ 50,000 ರೂ ಎಂದರೆ ವರ್ಷಕ್ಕೆ 6 ಲಕ್ಷ ರೂ ಬೇಕಾಗುತ್ತದೆ. 40 ವರ್ಷ ಕಾಲ ಇಷ್ಟು ಹಣ ಹಿಂಪಡೆಯಬೇಕೆಂದರೆ ನಿಮ್ಮ ಬಳಿ ಒಂದೂವರೆ ಕೋಟಿ ರೂ ಹಣ ಇರಬೇಕು.

ಇದನ್ನೂ ಓದಿ: ಕ್ಯಾಷ್ ಪೆಮೆಂಟ್​ನಿಂದ ಹಿಡಿದು ವಿತ್​ಡ್ರಾಯಲ್​ವರೆಗೆ, ಆದಾಯ ತೆರಿಗೆ ಇಲಾಖೆಯ ಕಣ್ಣಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳಿವು…

ಈ ಹಣವನ್ನು ಉತ್ತಮ ರಿಟರ್ನ್ ತರಬಲ್ಲಂತಹ ಕಡೆ ಹೂಡಿಕೆ ಮಾಡಬೇಕು. ಹಣದುಬ್ಬರ ವರ್ಷಕ್ಕೆ ಶೇ. 6ರಷ್ಟು ಹೆಚ್ಚಬಹುದು ಎಂಬುದನ್ನು ಗಣನೆಗೆ ತೆಗೆದುಕೊಂಡು, ಅದನ್ನು ಮೀರಿಸುವಂತಹ ರಿಟರ್ನ್ ಸಿಗುವಂತಿರಬೇಕು.

ಎಲ್ಲಿ ಹೂಡಿಕೆ ಮಾಡಬಹುದು?

ಷೇರು ಮಾರುಕಟ್ಟೆ ಕೆಲವೊಮ್ಮೆ ಕುಸಿದು ಬೀಳಬಹುದು. ಉದಾಹರಣೆಗೆ, ಕಳೆದ ಒಂದು ವರ್ಷದಲ್ಲಿ ಷೇರುಪೇಟೆ ಹಿನ್ನಡೆ ಕಂಡಿದೆ. ಈ ರೀತಿ ಅಗಾಗ್ಗೆ ಮಾರುಕಟ್ಟೆ ಸಂಚಲನ ಕಾಣುತ್ತಿರುತ್ತದೆ. ಹೀಗಾಗಿ, ಎಲ್ಲಾ ಹಣವನ್ನು ಈಕ್ವಿಟಿಗಳಿಗೆ ಹೂಡಿಕೆ ಮಾಡುವುದು ತಪ್ಪು. ನಿಮ್ಮ ಬಳಿ 2 ಕೋಟಿ ರೂ ಕಾರ್ಪಸ್ ಇದೆ ಎಂದಿಟ್ಟುಕೊಳ್ಳೋಣ. ತಜ್ಞರು ಈ ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ ಎಂಬುದನ್ನು ತಿಳಿಸಿದ್ದಾರೆ:

  • ಈಕ್ವಿಟಿ ಮ್ಯೂಚುವಲ್ ಫಂಡ್: 90 ಲಕ್ಷ ರೂ (ಶೇ. 11 ರಿಟರ್ನ್ ನಿರೀಕ್ಷೆ)
  • ಡೆಟ್ ಫಂಡ್ಸ್ ಅಥವಾ ಬಾಂಡ್​ಗಳು: 60 ಲಕ್ಷ ರೂ (ಶೇ. 7.5 ರಿಟರ್ನ್ ನಿರೀಕ್ಷೆ)
  • ಸರ್ಕಾರಿ ಬಾಂಡ್​ಗಳು: 30 ಲಕ್ಷ ರೂ (ಶೇ. 8 ರಿಟರ್ನ್ ನಿರೀಕ್ಷೆ)
  • ಲಿಕ್ವಿಡ್ ಅಥವಾ ಎಮರ್ಜೆನ್ಸಿ ಫಂಡ್: 20 ಲಕ್ಷ ರೂ (ಶೇ. 7 ರಿಟರ್ನ್ ನಿರೀಕ್ಷೆ)

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಅಂದರೆ, ಶೇ. 45ರಷ್ಟು ಹಣವು ಈಕ್ವಿಟಿ ಫಂಡ್​ಗಳಲ್ಲಿ ಇರಬೇಕು. ಡೆಟ್ ಫಂಡ್​ಗಳಲ್ಲಿ ಶೇ. 30, ಸರ್ಕಾರಿ ಬಾಂಡ್​ಗಳಲ್ಲಿ ಅಥವಾ ಎಫ್​ಡಿಗಳಲ್ಲಿ ಶೇ. 15, ಎಮರ್ಜೆನ್ಸಿ ಫಂಡ್ ಆಗಿ ಶೇ. 10ರಷ್ಟು ಇರಬೇಕು ಎಂಬುದು ಸಲಹೆ. ಈಕ್ವಿಟಿ ಫಂಡ್​ಗಳಲ್ಲಿ ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್ ಆಯ್ಕೆ ಮಾಡಿಕೊಂಡು, ವರ್ಷಕ್ಕೆ ಶೇ. 4 ಅಥವಾ ಶೇ. 3 ಹಣವನ್ನು ಹಿಂಪಡೆಯುತ್ತಾ ಹೋಗಬಹುದು. ಮಾರುಕಟ್ಟೆ ಹಿನ್ನಡೆಯಲ್ಲಿದ್ದ ಸಂದರ್ಭದಲ್ಲಿ ಡೆಟ್ ಫಂಡ್​ಗಳಿಂದ ಹಣ ಹಿಂಪಡೆಯಲು ಯತ್ನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚುನಾವಣೆಗೂ ಮುನ್ನ ಪುದುಚೇರಿಯಲ್ಲಿ ಪ್ರಧಾನಿ ಮೋದಿ ಘರ್ಜನೆ, ಕಾಂಗ್ರೆಸ್-ಡಿಎಂಕೆ ಮೇಲೆ ಭ್ರಷ್ಟಾಚಾರ ಆರೋಪ – Kannada News | Puducherry Elections: PM Modi Attacks Rivals, Highlights Development and Tourism Vision

ಪುದುಚೇರಿ, ಮಾರ್ಚ್​ 01: ತಮಿಳುನಾಡಿನಲ್ಲಿ ಶೀಘ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ಭೇಟಿ ನೀಡಿ, ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದು, ಎರಡೂ ಪಕ್ಷಗಳ ಆಡಳಿತ ಭ್ರಷ್ಟಾಚಾರದಿಂದ ತುಂಬಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಡಿಎಂಕೆ ಆಡಳಿತದ ಅವಧಿಯಲ್ಲಿ ಪುದುಚೇರಿಯ ಜನರು ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಳ್ಳಿ, ಆ ವರ್ಷಗಳು ಭ್ರಷ್ಟಾಚಾರ, ಅಪರಾಧ ಮತ್ತು ಯಾತನೆಗಳಿಂದ ತುಂಬಿದ್ದವು. ಗೂಂಡಾಗಳು ಮತ್ತು ಮಾದಕವಸ್ತು ಮಾಫಿಯಾಗಳು ಬೀದಿಗಳನ್ನು ಆಳುತ್ತಿದ್ದವು ಎಂದು ಹೇಳಿದರು.
ಅವರು ಕಾಂಗ್ರೆಸ್ ಮತ್ತು ಡಿಎಂಕೆ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದರು, ಕಾಂಗ್ರೆಸ್ ಪುದುಚೇರಿಯನ್ನು ದೆಹಲಿಯಲ್ಲಿ ಒಂದು ಕುಟುಂಬಕ್ಕೆ ಎಟಿಎಂ ಆಗಿ ಪರಿವರ್ತಿಸಿದೆ.

ನಾವು ಡಿಎಂಕೆ ಬಗ್ಗೆ ಮಾತನಾಡಿದರೆ, ಹಗರಣಗಳ ಸುದೀರ್ಘ ಪಟ್ಟಿಯನ್ನೇ ಮಾಡಬಹುದು. ಕಾಂಗ್ರೆಸ್ ಮತ್ತು ಡಿಎಂಕೆ ಪುದುಚೇರಿಯ ಅಭಿವೃದ್ಧಿಗೆ ಅಡ್ಡಿಯಾಗಿವೆ. ಈಗ ಅದೇ ಶಕ್ತಿಗಳು ಮತ್ತೆ ಅಧಿಕಾರಕ್ಕಾಗಿ ಹಾತೊರೆಯುತ್ತಿವೆ.

ಮತ್ತಷ್ಟು ಓದಿ: ಗುಜರಾತ್​​ನಲ್ಲಿ ಮೈಕ್ರಾನ್‌ನ ಸೆಮಿಕಂಡಕ್ಟರ್ ಸೌಲಭ್ಯ ಉದ್ಘಾಟಿಸಿದ ಪ್ರಧಾನಿ ಮೋದಿ

ಪುದುಚೇರಿ ಭ್ರಷ್ಟಾಚಾರ ಮತ್ತು ಅಪರಾಧದ ಯುಗಕ್ಕೆ ಮರಳಬೇಕೇ? ಖಂಡಿತ, ಪುದುಚೇರಿಯ ಜನರು ಅದನ್ನು ಬಯಸುವುದಿಲ್ಲ, ಪುದುಚೇರಿ ನಮ್ಮ ಸ್ವಾತಂತ್ರ್ಯ ಹೋರಾಟದ ಪ್ರಮುಖ ಭಾಗವಾಗಿದೆ.1947 ರಲ್ಲಿ ಭಾರತದ ಸ್ವಾತಂತ್ರ್ಯದಲ್ಲಿ ಪುದುಚೇರಿ ಪ್ರಮುಖ ಪಾತ್ರ ವಹಿಸಿತು. 2047 ರ ವೇಳೆಗೆ ನಾವು ಪುದುಚೇರಿ ಮತ್ತು ಭಾರತವನ್ನು ಅಭಿವೃದ್ಧಿಪಡಿಸಬೇಕು, ಅತ್ಯುತ್ತಮ ಪುದುಚೇರಿಗಾಗಿ ನಾವು ಶ್ರಮಿಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

ಪುದುಚೇರಿಯ ಚುನಾವಣಾ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ. ಚುನಾವಣಾ ಆಯೋಗವು ಇಲ್ಲಿ ಒಂದೇ ಹಂತದ ಚುನಾವಣೆಯ ಬಗ್ಗೆಯೂ ಸುಳಿವು ನೀಡಿದೆ. ಪುದುಚೇರಿಯಲ್ಲಿ ಭಾನುವಾರ 2,700 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವಾರು ಯೋಜನೆಗಳಿಗೆ ಪ್ರಧಾನಿ ಮೋದಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಮಗ್ರ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ನಗರ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ ಎಂದು ಹೇಳಿದರು.

ಪ್ರವಾಸೋದ್ಯಮವನ್ನು ಪುದುಚೇರಿಯ ಶಕ್ತಿ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ವಾರಾಂತ್ಯದ ತಾಣವಾಗಿ, ಇದು ಈಗಾಗಲೇ ಸಾವಿರಾರು ಪ್ರಯಾಣಿಕರನ್ನು ಆಕರ್ಷಿಸುತ್ತದೆ. ರೈಲುಗಳು ಮತ್ತು ವಿಮಾನಗಳು ಯಾವಾಗಲೂ ತುಂಬಿರುತ್ತವೆ.

ಇದು ಪುದುಚೇರಿಯ ಜನರ ಪ್ರೀತಿಯಿಂದಾಗಿ. ಆಧ್ಯಾತ್ಮಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ ಮತ್ತು ಆರೋಗ್ಯ ಪ್ರವಾಸೋದ್ಯಮದಲ್ಲಿ ಹೂಡಿಕೆಗಳೊಂದಿಗೆ, ನಾವು ಹೊಸ ಶಿಖರವನ್ನು ತಲುಪುತ್ತಿದ್ದೇವೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇರಾನ್ ಸಹಾಯದಿಂದ ಚಿಕ್ಕಬಳ್ಳಾಪುರದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆಗೆ ಭೇಟಿ ನೀಡಿದ್ದ ಖಮೇನಿ – Kannada News | Iran And Israel War: Ali Khamenei visited in 1981 for alipur Village hospital

ಚಿಕ್ಕಬಳ್ಳಾಪುರ, (ಮಾರ್ಚ್​ 1): ಇಸ್ರೆಲ್ ಹಾಗೂ ಅಮೆರಿಕಾ ನಡೆದಿಸ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ( Ali Khamenei) ಹತ್ಯೆಯಾಗಿದ್ದು, ಈ ಸುದ್ದಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಲ್ಲಿ ಆಳವಾದ ಶೋಕ ಮಡುಗಟ್ಟಿದೆ. ಹತ್ಯೆ ವಿಚಾರ ಹೊರಬಂದ ಬಳಿಕ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ನಡೆಸಿದರು. ಅಲಿಪುರ ಗ್ರಾಮವನ್ನು ‘ಮಿನಿ ಇರಾನ್’ ಎಂದೇ ಕರೆಯಲಾಗುತ್ತದೆ.

ಇನ್ನು ಇರಾನ್ ಸಹಾಯದಿಂದ ಅಲಿಪುರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ಈ ಆಸ್ಪತ್ರೆ ಶಂಕು ಸ್ಥಾಪನಾ ಕಾರ್ಯಕ್ರಮಕ್ಕೆ  1981ರಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರು ಅಲಿಪುರ ಗ್ರಾಮಕ್ಕೆ ಆಗಮಿಸಿದ್ದರು. ಈ ಬಗ್ಗೆ ಸ್ಥಳೀಯರಲ್ಲಿ ನೆನಪು ಇನ್ನೂ ಹಸಿರಾಗಿದೆ. ಗ್ರಾಮದಲ್ಲಿರುವ ಮಸೀದಿಯಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ್ದನ್ನು ಹಿರಿಯರು ಸ್ಮರಿಸುತ್ತಿದ್ದಾರೆ. ಅಲಿಪುರದ ಸುಮಾರು 20 ಸಾವಿರ ಜನರು ಖಮೇನಿ ಅವರನ್ನು ಧರ್ಮಗುರುವೆಂದು ಗೌರವಿಸುತ್ತಾರೆ. ಇನ್ನು ಅಲಿಪುರದ ಖಮೇನಿ ನಿರ್ಮಿಸಿದ್ದ ಆಸ್ಪತ್ರೆ ಇದೆ ನೋಡಿ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಅಲೀಪುರದ 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು! ಕರ್ನಾಟಕದ ಮಿನಿ ಇರಾನ್ ಬಗ್ಗೆ ನಿಮಗೆ ಗೊತ್ತೇ!

Source link

ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ ಸಿದ್ದರಾಮಯ್ಯ – Kannada News | CM Siddaramaiah Condemns US Israel Action on Iran, Criticises Trumps Dual Policy

ಶಿವಮೊಗ್ಗ, ಮಾರ್ಚ್​ 01: ಈ ಯುದ್ಧ ಅಗತ್ಯ ಇರಲಿಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇರಾನ್​ ಮೇಲೆ ಇಸ್ರೇಲ್​-ಅಮೆರಿಕದಿಂದ ಜಂಟಿ ದಾಳಿ ವಿಚಾರವಾಗಿ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಮಾತನಾಡಿದ ಅವರು, ಒಂದೆಡೆ ಶಾಂತಿ ಮಂತ್ರ ಮತ್ತೊಂದೆಡೆ ಯುದ್ಧ ಮಾಡುತ್ತಿದ್ದಾರೆ. ದಾಳಿ ವೇಳೆ ಇರಾನ್ ಪರಮೋಚ್ಛ ನಾಯಕ ಖಮನೈ ಹತ್ಯೆಗೀಡಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಖಮೇನಿ ಹತ್ಯೆ ಮಾಡಿದ್ದು ಖಂಡನೀಯ ಎಂದಿದ್ದಾರೆ. ಇನ್ನು ಯುದ್ಧ ಆರಂಭವಾದ ಮೇಲೆ ಕನ್ನಡಿಗರು ಸಿಲುಕಿಕೊಂಡಿದ್ದಾರೆ, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Holi 2026: ಭಾರತದಂತೆಯೇ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ದೇಶಗಳಿವು – Kannada News | Holi 2026: These are the countries that celebrate Holi festival like India

ನಮ್ಮ ಭಾರತದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬಗಲ್ಲಿ ಹೋಳಿ (Holi)ಹಬ್ಬವೂ ಒಂದು. ಈ ಬಾರಿ ಮಾರ್ಚ್‌ 3 ಮತ್ತು 4 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಂಭ್ರಮದ ಕ್ಷಣಕ್ಕಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ವರ್ಣರಂಜಿತವಾದ ಈ ಹಬ್ಬದಲ್ಲಿ ಪರಸ್ಪರ ಬಣ್ಣಗಳನ್ನು ಮೈಮೇಲೆ ಎರಚಿಕೊಳ್ಳುತ್ತಾ  ಸಂತೋಷವನ್ನು ಹಂಚಿಕೊಳ್ಳುತ್ತಾರೆ, ಯಾವುದೇ ಜಾತಿ ಮತಗಳ ಭೇದವಿಲ್ಲದೆ ಜನ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ.  ಭಾರತದಂತೆ ವಿಶ್ವದ ನಾನಾ ಭಾಗಗಳಲ್ಲೂ ಹೋಳಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಆ ದೇಶಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಭಾರತದಂತೆಯೇ ಈ ದೇಶಗಳಲ್ಲೂ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ:

ನೇಪಾಳ: ನೇಪಾಳದಲ್ಲಿ, ಹೋಳಿಯನ್ನು ಫಾಗು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಇಲ್ಲಿ ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ, ಹೋಳಿಕಾ ದಹನ್ ಆಚರಿಸಲಾಗುತ್ತದೆ, ಮತ್ತು ಎರಡನೇ ದಿನ, ಜನರು ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಸಾಂಪ್ರದಾಯಿಕ ಹಾಡು ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ, ಈ ಹಬ್ಬವನ್ನು ಹಿಂದೂ ಮತ್ತು ಬೌದ್ಧ ಸಮುದಾಯಗಳು  ಆಚರಿಸುತ್ತವೆ.

ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿಯೂ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ಹೋಳಿಯನ್ನು ಡೋಲ್ ಪೂರ್ಣಿಮಾ ಅಥವಾ ವಸಂತ ಹಬ್ಬ ಎಂದು ಆಚರಿಸಲಾಗುತ್ತದೆ. ಇಲ್ಲಿ, ಹಿಂದೂ ಸಮುದಾಯದವರು ಬಣ್ಣಗಳೊಂದಿಗೆ ಓಕುಳಿಯಾಡುತ್ತಾರೆ ಮತ್ತು  ಶ್ರೀಕೃಷ್ಣನನ್ನು ಪೂಜಿಸುತ್ತಾರೆ, ರಾಧಾ-ಕೃಷ್ಣ ಮೆರವಣಿಗೆಗಳನ್ನು ನಡೆಸುತ್ತಾರೆ.  ಬಾಂಗ್ಲಾದೇಶದಲ್ಲಿ ಹೋಳಿ ಹಬ್ಬವು ಧಾರ್ಮಿಕ ಮತ್ತು ಸಾಂಸ್ಕೃತಿಕ ಏಕತೆಯನ್ನು ಸಂಕೇತಿಸುತ್ತದೆ.

ಪಾಕಿಸ್ತಾನ: ಭಾರತದ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿಯೂ ಹೋಳಿಯನ್ನು ಆಚರಿಸಲಾಗುತ್ತದೆ. ಪಾಕಿಸ್ತಾನದಲ್ಲಿ, ಹಿಂದೂ ಸಮುದಾಯ, ಮುಖ್ಯವಾಗಿ ಸಿಂಧ್ ಪ್ರಾಂತ್ಯದಲ್ಲಿ, ದೇವಾಲಯಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳೊಂದಿಗೆ ಹೋಳಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಜನರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಸಿಹಿತಿಂಡಿಗಳನ್ನು ವಿತರಿಸುತ್ತಾರೆ. ಪಾಕಿಸ್ತಾನದಲ್ಲಿ ಹೋಳಿ ಹಬ್ಬವು ಧಾರ್ಮಿಕ ಸಾಮರಸ್ಯ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುತ್ತದೆ.

ಮಾರಿಷಸ್: ಹಿಂದೂ ಮಹಾಸಾಗರದಲ್ಲಿರುವ ದ್ವೀಪ ರಾಷ್ಟ್ರವಾದ ಮಾರಿಷಸ್‌ನಲ್ಲಿ ಹೋಳಿ ಹಬ್ಬವನ್ನು ಸಹ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಮಾರಿಷಸ್‌ನಲ್ಲಿರುವ ಭಾರತೀಯ ಮೂಲದ ಜನರು ಹೋಳಿ ಹಬ್ಬವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಾರೆ. ಇದು ಇಲ್ಲಿನ ರಾಷ್ಟ್ರೀಯ ಹಬ್ಬವಾಗಿದ್ದು, ಇಲ್ಲಿ “ಹೋಳಿ ಮೇಳ”ವನ್ನು ಆಯೋಜಿಸಲಾಗುತ್ತದೆ, ಇದು ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಹಾಡುಗಳು, ನೃತ್ಯಗಳು ಮತ್ತು ಸಾಂಪ್ರದಾಯಿಕ ಪಾಕಪದ್ಧತಿಗಳು ಸೇರಿದಂತೆ ವಿವಿಧ ವರ್ಣರಂಜಿತ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.

ಫಿಜಿ: ಪೆಸಿಫಿಕ್ ಮಹಾಸಾಗರದಲ್ಲಿರುವ ದ್ವೀಪ ರಾಷ್ಟ್ರವಾದ ಫಿಜಿಯಲ್ಲಿಯೂ ಹೋಳಿಯನ್ನು ಆಚರಿಸಲಾಗುತ್ತದೆ. ಫಿಜಿಯಲ್ಲಿ ಹೋಳಿಯನ್ನು “ಫಾಗ್ವಾ” ಅಥವಾ “ಹೋಳಿ” ಎಂದು ಕರೆಯಲಾಗುತ್ತದೆ.  ಇಂಡೋ-ಫಿಜಿಯನ್ ಸಮುದಾಯದವರು ಸಾಂಪ್ರದಾಯಿಕ ಹಾಡುಗಳು, ನೃತ್ಯಗಳು ಮತ್ತು ಬಣ್ಣಗಳೊಂದಿಗೆ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.

ಟ್ರಿನಿಡಾಡ್ ಮತ್ತು ಟೊಬಾಗೋ: ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಹೋಳಿಯನ್ನು ಫಾಗ್ವಾ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಇಲ್ಲಿ, ಹಬ್ಬವನ್ನು ಸಾಂಪ್ರದಾಯಿಕ ಚೌಟಲ್ ಹಾಡುಗಳು ಮತ್ತು ಬಣ್ಣಗಳ ಓಕುಳಿಯಾಟದೊಂದಿಗೆ ಆಚರಿಸಲಾಗುತ್ತದೆ.

ಇದನ್ನೂ ಓದಿ: ಮೈಮೇಲೆ ಅಂಟಿದ ಹೋಳಿ ಬಣ್ಣವನ್ನು ತೆಗೆದು ಹಾಕಲು ಸಲಹೆಯನ್ನು ಪಾಲಿಸಿ

ಯುನೈಟೆಡ್ ಕಿಂಗ್‌ಡಮ್: ಬಣ್ಣಗಳ ಹಬ್ಬವಾದ ಹೋಳಿಯನ್ನು ಪ್ರತಿ ವರ್ಷ ಲಂಡನ್‌ನಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಲಂಡನ್ ಮತ್ತು ಲೀಸೆಸ್ಟರ್‌ನಂತಹ ನಗರಗಳಲ್ಲಿ ದೊಡ್ಡ ಪ್ರಮಾಣದ ಹೋಳಿ ಹಬ್ಬಗಳನ್ನು ಆಯೋಜಿಸಲಾಗುತ್ತದೆ, ಭಾರತೀಯ ಆಹಾರ, ನೃತ್ಯ ಮತ್ತು ಸಂಗೀತ ಹಬ್ಬದ ಪ್ರಮುಖ ಆಕರ್ಷಣೆಗಳಾಗಿವೆ. ಈ ಕಾರ್ಯಕ್ರಮಗಳಲ್ಲಿ ಭಾರತೀಯ ಮೂಲದವರು  ಮತ್ತು ಅಲ್ಲಿನ ಸ್ಥಳೀಯರು ಉತ್ಸಾಹದಿಂದ ಭಾಗವಹಿಸುತ್ತಾರೆ.

ಅಮೆರಿಕ ಮತ್ತು ಕೆನಡಾ:  ಅಮೆರಿಕ ಮತ್ತು ಕೆನಡಾದಲ್ಲಿಯೂ  ಹೋಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅನೇಕ ನಗರಗಳಲ್ಲಿ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಮೆರಿಕದ ಉತಾಹ್‌ನ ಸ್ಪ್ಯಾನಿಷ್ ಫೋರ್ಕ್‌ನಲ್ಲಿರುವ ಶ್ರೀ ಶ್ರೀ ರಾಧಾ ಕೃಷ್ಣ ದೇವಾಲಯವು ದೊಡ್ಡ ಪ್ರಮಾಣದ ಹೋಳಿ ಆಚರಣೆಯನ್ನು ಆಯೋಜಿಸುತ್ತದೆ.ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದಂತಹ ನಗರಗಳು ಸಹ ಓಕುಳಿಯಾಟ ಮತ್ತು ಮೆರವಣಿಗೆಗಳೊಂದಿಗೆ ಹೋಳಿಯನ್ನು ಆಚರಿಸುತ್ತವೆ.

ಇದರ ಜೊತೆಗೆ, ಆಸ್ಟ್ರೇಲಿಯಾದ ಸಿಡ್ನಿ ಮತ್ತು ಮೆಲ್ಬೋರ್ನ್ ಕೂಡ  ಹೋಳಿ ಆಚರಣೆಗಳನ್ನು ಆಯೋಜಿಸುತ್ತವೆ. ದಕ್ಷಿಣ ಆಫ್ರಿಕಾ, ಡರ್ಬನ್ ಮತ್ತು ಜೋಹಾನ್ಸ್‌ಬರ್ಗ್‌ನಂತಹ ನಗರಗಳಲ್ಲಿ, ಭಾರತೀಯ ಸಮುದಾಯಗಳು ಹೋಳಿಯನ್ನು ಸಡಗರದಿಂದ ಆಚರಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version