ತಮಿಳುನಾಡಿನಲ್ಲಿ ಇಂದೂ ಸರ್ಕಾರ ರಚನೆ ಅನುಮಾನ; 2 ಶಾಸಕರಿರುವ ವಿಸಿಕೆ ಮೇಲೆ ನಿಂತಿದೆ ಟಿವಿಕೆ ಭವಿಷ್ಯ – Kannada News | Tamil Nadu Government Formation Crisis TVK Chief Vijay waiting for VCK support

ಚೆನ್ನೈ, ಮೇ 9: ತಮಿಳುನಾಡಿನಲ್ಲಿ ಟಿವಿಕೆ ಎಂಬ ಹೊಸ ಪಕ್ಷ ಕಟ್ಟಿ ಮೊದಲ ಚುನಾವಣೆಯಲ್ಲೇ ಬರೋಬ್ಬರಿ 108 ಸ್ಥಾನಗಳನ್ನು ಪಡೆದ ವಿಜಯ್ (Vijay) ಅವರಿಗೆ ಬಹುಮತ ಲಭಿಸದ ಹಿನ್ನೆಲೆಯಲ್ಲಿ ಎಡಪಕ್ಷಗಳ ಕೈಗೊಂಬೆಯಾಗುವಂತಾಗಿದೆ. ವಿಜಯ್ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದರಿಂದಾಗಿ ಟಿವಿಕೆ ಬಳಿ ಈಗಿರುವ ಸಂಖ್ಯೆ 107. ಇದರ ಜೊತೆ ಕಾಂಗ್ರೆಸ್​ನ 5, ಸಿಪಿಐನ 2, ಸಿಪಿಎಂನ 2 ಸ್ಥಾನಗಳು ಸೇರಿ ವಿಜಯ್ ಅವರಿಗೆ ಇರುವ ಸಂಖ್ಯೆ 116 ಆಗಿದೆ. ಆದರೆ, ಸರ್ಕಾರ ರಚನೆಗೆ ವಿಜಯ್​ಗೆ 118 ಸ್ಥಾನಗಳು ಬೇಕಾಗಿವೆ. ಒಂದುವೇಳೆ ವಿಸಿಕೆ ತನ್ನ ಬಳಿ ಇರುವ ಇಬ್ಬರು ಶಾಸಕರ ಬೆಂಬಲ ಘೋಷಿಸಿದರೆ ಮಾತ್ರ ವಿಜಯ್ ಮುಖ್ಯಮಂತ್ರಿಯಾಗಲು ಸಾಧ್ಯ. ಹೀಗಾಗಿ, ವಿಸಿಕೆ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿದೆ. ನಿನ್ನೆ ವಿಜಯ್​ಗೆ ಬೆಂಬಲ ಘೋಷಿಸಿದಾಗಿನಿಂದ ವಿಸಿಕೆ ಟ್ವಿಟ್ಟರ್​ ಹ್ಯಾಂಡಲ್ ಬ್ಲಾಕ್ ಆಗಿತ್ತು.

ಇದೀಗ ವಿಸಿಕೆ ಸಭೆಯನ್ನು ನಡೆಸುತ್ತಿದ್ದು, ಈ ಸಭೆಯ ಬಳಿಕ ವಿಜಯ್ ಅವರಿಗೆ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಲಿದೆ. ಒಂದುವೇಳೆ ಟಿವಿಕೆಗೆ ಬೆಂಬಲ ನೀಡುವುದಾದರೂ ವಿಸಿಕೆ ತನಗೆ ಡಿಸಿಎಂ ಹುದ್ದೆ ಬೇಕೆಂದು ಬೇಡಿಕೆ ಇಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, 108 ಸ್ಥಾನಗಳನ್ನು ಪಡೆದರೂ ಟಿವಿಕೆ 2 ಸ್ಥಾನಗಳನ್ನು ಪಡೆದ ಪಕ್ಷಗಳ ಮುಂದೆ ಮಂಡಿಯೂರುವಂತಾಗಿದೆ.

ಇದನ್ನೂ ಓದಿ: Vijay Swearing-In: ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ

ನಿನ್ನೆ ವಿಜಯ್ ಅವರಿಗೆ ವಿಸಿಕೆ ಜೊತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ಬೆಂಬಲ ಘೋಷಿಸಿದ್ದರಿಂದ ಬಹುಮತದ ಬಗ್ಗೆ ತಲೆಬಿಸಿ ಇರಲಿಲ್ಲ. ಆದರೆ, ಇದ್ದಕ್ಕಿದ್ದಂತೆ ನಿನ್ನೆ ರಾತ್ರಿ ಮುಸ್ಲಿಂ ಲೀಗ್ ತಾನು ಡಿಎಂಕೆ ನೇತೃತ್ವದ ಮೈತ್ರಿಕೂಟದ ಜೊತೆಯೇ ಇರುತ್ತೇನೆ ಎಂದು ಘೋಷಿಸುವ ಮೂಲಕ ಟಿವಿಕೆಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿತ್ತು. ಇತ್ತ ವಿಸಿಕೆ ಕೂಡ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸುತ್ತಿರುವುದರಿಂದಾಗಿ ತಮಿಳುನಾಡಿನಲ್ಲಿ ಇಂದು ಸರ್ಕಾರ ರಚನೆಯಾಗಲಿದೆಯಾ, ಇಲ್ಲವಾ ಎಂಬ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:55 am, Sat, 9 May 26

Source link

Delhi Capitals: ಏಳು ಸೋಲಿನ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ತಲುಪಬಹುದೇ?: ಇಲ್ಲಿದೆ ಲೆಕ್ಕಾಚಾರ – Kannada News | DC IPL 2026 Can Delhi Capitals reach the playoffs despite seven losses?: Here’s the calculation

ಬೆಂಗಳೂರು (ಮೇ. 09): ಐಪಿಎಲ್ 2026 ರ 11 ನೇ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಮುಂದಿನ ಹಾದಿ ತುಂಬಾ ಕಷ್ಟಕರವಾಗಿದೆ. ಶುಕ್ರವಾರ ತಮ್ಮ ತವರು ಮೈದಾನವಾದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು, ಡೆಲ್ಲಿ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 142 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಕೋಲ್ಕತ್ತಾ ತಂಡಕ್ಕೆ ಗೆಲುವು

143 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡಕ್ಕೆ ದೆಹಲಿ ತಂಡ ಆರಂಭಿಕ ಹೊಡೆತ ನೀಡಿತು, ಆದರೆ ಗೆಲುವು ಸಾಧಿಸಲು ಅವು ಸಾಕಾಗಲಿಲ್ಲ. ದೆಹಲಿಯ ಬೌಲರ್‌ಗಳು ಮೊದಲ ನಾಲ್ಕು ಓವರ್‌ಗಳಲ್ಲಿ ರಹಾನೆ (13) ಮತ್ತು ಅಂಗ್‌ಕ್ರಿಶ್ ರಘುವಂಶಿ (1) ಅವರನ್ನು ಔಟ್ ಮಾಡಿದರು, ಆದರೆ ನಂತರ, ದೆಹಲಿ ಯಾವುದೇ ಯಶಸ್ಸನ್ನು ಕಾಣಲಿಲ್ಲ. ಕೆಕೆಆರ್ ಈ ಸಣ್ಣ ಗುರಿಯನ್ನು ಸುಲಭವಾಗಿ ಬೆನ್ನಟ್ಟಿ ದೆಹಲಿ ಅಭಿಮಾನಿಗಳನ್ನು ನಿರಾಶೆಗೊಳಿಸಿತು. ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಏಳನೇ ಸೋಲು ಇದು, ಈ ಸೋಲಿನ ಮೂಲಕ ಅವರ ಪ್ಲೇಆಫ್ ಆಸೆ ತೂಗುಯ್ಯಾಲೆಯಲ್ಲಿದೆ.

ದೆಹಲಿ ತಂಡಕ್ಕೆ ಬೇಕು 14 ಅಂಕ

ಪಾಯಿಂಟ್ ಟೇಬಲ್ ಬಗ್ಗೆ ಹೇಳುವುದಾದರೆ, ಡೆಲ್ಲಿ ತಂಡವು ಈಗ 11 ಪಂದ್ಯಗಳಿಂದ ಕೇವಲ 8 ಅಂಕಗಳನ್ನು ಮಾತ್ರ ಹೊಂದಿದೆ. ಅಕ್ಷರ್ ಪಟೇಲ್ ನಾಯಕತ್ವದ ತಂಡವು ಲೀಗ್ ಹಂತದಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಹೊಂದಿದೆ. ಡೆಲ್ಲಿ ತನ್ನ ಮೂರು ಪಂದ್ಯಗಳನ್ನು ಗೆದ್ದರೆ, ಅದು ಗರಿಷ್ಠ 14 ಅಂಕಗಳನ್ನು ತಲುಪಬಹುದು.

ಪ್ಲೇಆಫ್‌ಗೆ ಹೋಗುವ ಹಾದಿ ಕಷ್ಟಕರ

14 ಅಂಕಗಳು ಪ್ಲೇಆಫ್ ಸ್ಥಾನವನ್ನು ಖಾತರಿಪಡಿಸದಿದ್ದರೂ, ಡೆಲ್ಲಿ ಲೆಕ್ಕಚಾರದ ಸ್ಪರ್ಧೆಯಲ್ಲಿದೆ. ಪ್ರತಿಯೊಂದು ಪಂದ್ಯವೂ ಈಗ ತಂಡಕ್ಕೆ ಮಾಡು-ಇಲ್ಲ-ಮಡಿ ವಿಷಯವಾಗಿದೆ, ಒಂದೇ ಒಂದು ಸೋಲು ಅವರನ್ನು ಪಂದ್ಯಾವಳಿಯಿಂದ ಹೊರಬೀಳಬಹುದು.

DC vs KKR: ಪೋಸ್ಟ್ ಮ್ಯಾಚ್​ನಲ್ಲಿ ಭಾವುಕರಾದ ಅಕ್ಷರ್ ಪಟೇಲ್

ಪಂಜಾಬ್ ವಿರುದ್ಧ ಮುಂದಿನ ಪಂದ್ಯ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಂದಿನ ಪಂದ್ಯವು ಮೇ 11, ಸೋಮವಾರದಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿದೆ. ನಂತರ ಅವರು ಮೇ 17 ರಂದು ತಮ್ಮ ತವರಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದಾರೆ. ನಂತರ ಡೆಲ್ಲಿ ತಂಡವು ಮೇ 24 ರಂದು ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತನ್ನ ಅಭಿಯಾನವನ್ನು ಕೊನೆಗೊಳಿಸಲಿದೆ.

ಇತರ ತಂಡಗಳ ಫಲಿತಾಂಶ

ತಂಡವು ತಮ್ಮ ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೆ ಇತರ ತಂಡಗಳ ಫಲಿತಾಂಶಗಳನ್ನು ಸಹ ಅವಲಂಬಿಸಬೇಕಾಗಿರುವುದರಿಂದ ತಂಡವು ಕಠಿಣ ಸವಾಲನ್ನು ಎದುರಿಸುತ್ತಿದೆ. ಒಟ್ಟಾರೆಯಾಗಿ, ಡೆಲ್ಲಿ ಕ್ಯಾಪಿಟಲ್ಸ್‌ನ ಚೇತರಿಕೆಯ ಹಾದಿ ಈಗ ಕಿರಿದಾಗಿದೆ. ಅಕ್ಷರ್ ಪಟೇಲ್ ಸೈನ್ಯವು ಮ್ಯಾಜಿಕ್ ಪ್ರದರ್ಶಿಸಲಿ ಮತ್ತು ಉಳಿದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ, ಇಲ್ಲದಿದ್ದರೆ 2026 ರ ಸೀಸನ್ ದೆಹಲಿಗೆ ದುಃಸ್ವಪ್ನದಂತೆ ಕೊನೆಗೊಳ್ಳಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಲ್ಬರ್ಗಾ ವಿವಿ ಕುಲಪತಿಗೆ ಆ್ಯಸಿಡ್ ದಾಳಿ ಬೆದರಿಕೆ: ಬಿಇಡಿ ಅಂಕ ಹಗರಣ ಬಯಲಿಗೆಳೆದಿದ್ದೇ ಮುಳುವಾಯ್ತು – Kannada News | Gulbarga University VC Prof. Shashikanth Receives Acid Attack Threat Over B.Ed Scam Investigation

ಪ್ರೊ. ಶಶಿಕಾಂತ್ & ಗುಲ್ಬರ್ಗಾ ವಿವಿImage Credit source: tv9

ಕಲಬುರಗಿ, ಮೇ 9: ಗುಲ್ಬರ್ಗಾ ವಿಶ್ವವಿದ್ಯಾಲಯದ (Gulbarga University) ಕುಲಪತಿ ಪ್ರೊ. ಶಶಿಕಾಂತ್ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಆ್ಯಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಪತ್ರ ಬರೆದಿದ್ದಾನೆ. 2024ರಲ್ಲಿ ನಡೆದ ಬಿಇಡಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ನಡೆದಿದ್ದ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಕುಲಪತಿಗಳು ಪತ್ತೆಹಚ್ಚಿ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಈ ಬೆದರಿಕೆ ಹಾಕಲಾಗಿದೆ. ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಕುಲಪತಿಗಳ ವಿರುದ್ಧ ಈ ಮಟ್ಟದ ಬೆದರಿಕೆ ಬಂದಿರುವುದು ಇದೇ ಮೊದಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • 2024ರ ಬಿಇಡಿ ಮೌಲ್ಯಮಾಪನ ಅಕ್ರಮ ಪತ್ತೆಹಚ್ಚಿದ್ದ ಕುಲಪತಿ ಪ್ರೊ. ಶಶಿಕಾಂತ್.
  • ಅಂಕ ತಿದ್ದುಪಡಿ ಹಗರಣದ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ.
  • ಮರುಮೌಲ್ಯಮಾಪನದಲ್ಲಿ ಫೇಲ್ ಆದರೆ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ಅನಾಮಧೇಯ ಬೆದರಿಕೆ.

ಅಕ್ರಮಕ್ಕೆ ತಡೆಯೊಡ್ಡಿದ್ದೇ ಮುಳುವಾಯಿತೇ?

ಕಳೆದ ಬಿಇಡಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವುದು ವಿವಿಯ ಆಂತರಿಕ ಸಮಿತಿಯ ವರದಿಯಿಂದ ದೃಢಪಟ್ಟಿತ್ತು. ಕುಲಪತಿಗಳು ಈ ವಿಷಯವನ್ನು ತಕ್ಷಣವೇ ಸರ್ಕಾರ ಮತ್ತು ರಾಜ್ಯಪಾಲರ ಗಮನಕ್ಕೆ ತಂದಿದ್ದರು. ರಾಜ್ಯಪಾಲರ ಆದೇಶದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆಯಾಗಿದ್ದು, ಸಮಿತಿಯ ಸೂಚನೆಯ ಮೇರೆಗೆ ಸದ್ಯ ಮರುಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ. ಈ ಮರುಮೌಲ್ಯಮಾಪನದಿಂದಾಗಿ ಅಕ್ರಮವಾಗಿ ಅಂಕ ಪಡೆದವರಿಗೆ ಸಂಕಷ್ಟ ಎದುರಾಗಿದೆ.

ಬೆದರಿಕೆ ಪತ್ರದಲ್ಲೇನಿತ್ತು?

‘2 ಲಕ್ಷ ರೂಪಾಯಿ ನೀಡಿ ಬಿಇಡಿ ಪ್ರವೇಶ ಪಡೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ವಿವಿಯ ಸತ್ಯಶೋಧನಾ ಸಮಿತಿಯ ನಿರ್ಧಾರ ನಮಗೆ ಇಷ್ಟವಾಗಿಲ್ಲ. ಒಂದು ವೇಳೆ ಮರುಮೌಲ್ಯಮಾಪನದಿಂದಾಗಿ ಅಂಕಗಳು ಕಡಿಮೆಯಾದರೆ ಅಥವಾ ನಾವು ಅನುತ್ತೀರ್ಣರಾದರೆ, ನಿಮ್ಮ ಮುಖಕ್ಕೆ ಆ್ಯಸಿಡ್ ಹಾಕಿ ನರಳಿ ಬದುಕುವಂತೆ ಮಾಡುತ್ತೇವೆ’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಹಣ ಕೊಟ್ಟವರಿಗೆ ಬೇಕಾಬಿಟ್ಟಿ ಅಂಕ: ಗುಲಬರ್ಗಾ ವಿವಿಯ ಕರ್ಮಕಾಂಡ ಬಯಲು

ಈ ಅನಾಮಧೇಯ ಪತ್ರದಿಂದ ಆತಂಕಗೊಂಡ ಕುಲಪತಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ಈಗ ಕೋರ್ಟ್ ನಿರ್ದೇಶನದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಬ್ಬರ ನಡುವೆ ಪೈಪೋಟಿ: ಯಾರಾಗ್ತಾರೆ ಟೀಮ್ ಇಂಡಿಯಾ ನಾಯಕ? – Kannada News | Who will be the next Team India T20I Captain?

ಭಾರತ ಟಿ20 ತಂಡಕ್ಕೆ ಹೊಸ ಸಾರಥಿಯ ಹುಡುಕಾಟ ಶುರುವಾಗಿದೆ. ಸೂರ್ಯಕುಮಾರ್ ಯಾದವ್ ಅವರ ಉತ್ತರಾಧಿಕಾರಿಯಾಗಲು ಸ್ಫೋಟಕ ದಾಂಡಿಗ ಸಂಜು ಸ್ಯಾಮ್ಸನ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ ಶ್ರೇಯಸ್ ಅಯ್ಯರ್ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಒಬ್ಬರ ಬಳಿ ಪ್ರಚಂಡ ಫಾರ್ಮ್ ಇದ್ದರೆ, ಮತ್ತೊಬ್ಬರ ಬಳಿ ಐಪಿಎಲ್ ಟ್ರೋಫಿ ಗೆದ್ದ ನಾಯಕತ್ವದ ಚಾಕಚಕ್ಯತೆಯಿದೆ. ಹೀಗಾಗಿಯೇ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲ ಏರ್ಫಟ್ಟಿದೆ.

ರೇಸ್‌ನಲ್ಲಿ ಸಂಜು ಸ್ಯಾಮ್ಸನ್:

ಟೀಮ್ ಇಂಡಿಯಾದ ನಾಯಕನ ಸ್ಥಾನಕ್ಕೆ ಮೊದಲು ಶ್ರೇಯಸ್ ಅಯ್ಯರ್ ಅವರ ಹೆಸರು ಕೇಳಿಬಂದಿತ್ತಾದರೂ, ಇತ್ತೀಚಿನ ವರದಿಗಳ ಪ್ರಕಾರ ಸಂಜು ಸ್ಯಾಮ್ಸನ್ ಈಗ ನಾಯಕತ್ವದ ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. 2026ರ ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಅರ್ಧಶತಕಗಳನ್ನು ಸಿಡಿಸಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದಿರುವುದು ಸಂಜು ಅವರ ಆಯ್ಕೆಗೆ ಬಲವಾದ ಕಾರಣವಾಗಿದೆ.

ಆಯ್ಕೆ ಸಮಿತಿಯ ಒಲವು ಏಕೆ?

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸಂಜು ಅವರ ಶಾಂತ ಸ್ವಭಾವ ಮತ್ತು ಸ್ಥಿರ ಪ್ರದರ್ಶನಕ್ಕೆ ಮನಸೋತಿದೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್  ಪರ ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿ ಅಮೋಘ ಫಾರ್ಮ್‌ನಲ್ಲಿದ್ದಾರೆ.

ಶ್ರೇಯಸ್ ಅಯ್ಯರ್​ ಸವಾಲು:

ಶ್ರೇಯಸ್ ಅಯ್ಯರ್ ಅವರು 2023 ರಿಂದ ಟಿ20 ತಂಡದಿಂದ ಹೊರಗುಳಿದಿರುವುದು ಅವರ ಆಯ್ಕೆಗೆ ಅಡ್ಡಿಯಾಗಬಹುದು. ಒಂದು ವೇಳೆ ಸೂರ್ಯಕುಮಾರ್ ಅವರನ್ನು ಮುಂದುವರಿಸಲು ನಿರ್ಧರಿಸಿದರೆ, ಸಂಜು ಅವರನ್ನು ಉಪನಾಯಕನನ್ನಾಗಿ ನೇಮಿಸುವ ಸಾಧ್ಯತೆಯೂ ಇದೆ. ಇದರೊಂದಿಗೆ ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಹೆಸರುಗಳೂ ಚರ್ಚೆಯಲ್ಲಿವೆ.

ಈ ಹಿಂದೆ ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದ್ದರೂ, ಇದೀಗ ಈ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಹೆಸರು ಕೇಳಿ ಬರುತ್ತಿವೆ. ಅದರಲ್ಲೂ ಶ್ರೇಯಸ್​ಗಿಂತ ಗೌತಮ್ ಗಂಭೀರ್ ಸಂಜು ಸ್ಯಾಮ್ಸನ್ ಪರ ಇದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹೀಗಾಗಿ ಬಿಸಿಸಿಐ ಅಂತಿಮವಾಗಿ ಯಾರಿಗೆ ಕ್ಯಾಪ್ಟನ್ ಪಟ್ಟ ನೀಡಲಿದ್ದಾರೆ ಎಂಬುದೇ ಈಗ ಕುತೂಹಲ.

ಇದನ್ನೂ ಓದಿ: ಕೃನಾಲ್ ಪಾಂಡ್ಯ ಕಾಲರ್ ಪಟ್ಟಿ ಹಿಡಿದ ನಿಕೋಲಸ್ ಪೂರನ್!

ಮುಂಬರುವ ಸವಾಲುಗಳು:

ಐಪಿಎಲ್ 2026 ಮುಗಿದ ತಕ್ಷಣ ಭಾರತ ತಂಡವು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಗಳಲ್ಲೇ ಭಾರತದ ಹೊಸ ಟಿ20 ನಾಯಕ ಯಾರು ಎಂಬುದು ಅಧಿಕೃತವಾಗಿ ತಿಳಿಯಲಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ಮುಂದಿನ ಟಿ20 ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.

Source link

ಜಾತಿ ವ್ಯವಸ್ಥೆ ನಿರ್ಮೂಲನೆಗೆ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೊಟ್ಟ ಐಡಿಯಾ ಏನು ನೋಡಿ! – Kannada News | See what idea RSS chief Mohan Bhagwat has given in Mysuru to eradicate the caste system!

ಮೈಸೂರು, ಮೇ 9: ಭಾರತದ ಸರ್ವತೋಮುಖ ಪ್ರಗತಿಗೆ ಸಾಮಾಜಿಕ ಸಾಮರಸ್ಯ ಮತ್ತು ಭಾವನಾತ್ಮಕ ಏಕೀಕರಣ ಅತ್ಯಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ಉಪನ್ಯಾಸ ಮಾಲಿಕೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ಸಾಮರಸ್ಯವೇ ಪ್ರೇರಕ ಶಕ್ತಿ’ ಎಂಬ ವಿಷಯದ ಕುರಿತು ಅವರು ಗುರುವಾರ ವಿಶೇಷ ಉಪನ್ಯಾಸ ನೀಡಿದರು. ಸಮಾಜವು ಜಾತಿ ಮತ್ತು ಧರ್ಮದ ಸಂಕುಚಿತ ಮನೋಭಾವದಿಂದ ಹೊರಬರಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಮುಖ್ಯಾಂಶಗಳು

  • ಜನಸಂಖ್ಯಾ ನಿಯಂತ್ರಣಕ್ಕಿಂತ ಜನಸಂಖ್ಯಾ ಅಸಮತೋಲನದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ.
  • ಜಾತಿ ಆಧಾರಿತ ರಾಜಕೀಯವನ್ನು ಕೊನೆಗಾಣಿಸಲು ಸಮಾಜವೇ ಮೊದಲು ಜಾತಿಯನ್ನು ಮರೆಯಬೇಕು.
  • ಏಕರೂಪ ನಾಗರಿಕ ಸಂಹಿತೆ (UCC) ದೇಶಾದ್ಯಂತ ಹಂತಹಂತವಾಗಿ ಜಾರಿಗೆ ಬರಲಿದೆ ಎಂಬ ವಿಶ್ವಾಸ.

ಅಭಿವೃದ್ಧಿ ಎಂದರೆ ಕೇವಲ ಭೌತಿಕ ಸಮೃದ್ಧಿಯಲ್ಲ, ಅದು ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪಬೇಕು ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟರು. ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಸ್ಮರಿಸಿದ ಅವರು, ಸಾಮಾಜಿಕ ಸಮಾನತೆ ಮತ್ತು ಭ್ರಾತೃತ್ವವಿಲ್ಲದೆ ರಾಜಕೀಯ ಮತ್ತು ಆರ್ಥಿಕ ಸಮಾನತೆ ಉಳಿಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಜಾತಿ ವಿಭಜನೆಯನ್ನು ಹೋಗಲಾಡಿಸಲು ಜನರ ನಡುವೆ ಪರಸ್ಪರ ಒಡನಾಟ ಹೆಚ್ಚಾಗಬೇಕು. ಪರಸ್ಪರರ ಮನೆಗಳಿಗೆ ಭೇಟಿ ನೀಡಬೇಕು ಮತ್ತು ಅಂತರಜಾತಿ ವಿವಾಹಗಳನ್ನು ಪ್ರೋತ್ಸಾಹಿಸಬೇಕು. ಸಮಾಜ ಜಾತಿ ಮರೆತರೆ ರಾಜಕೀಯ ಕ್ಷೇತ್ರದಿಂದಲೂ ಅದರ ನಿರ್ಮೂಲನೆ ಸಾಧ್ಯ ಎಂದು ಅವರು ಹೇಳಿದರು.

ಜನಸಂಖ್ಯಾ ನೀತಿ ಮತ್ತು ಏಕರೂಪ ನಾಗರೀಕ ಸಂಹಿತೆ

ಜನಸಂಖ್ಯಾ ನೀತಿಯ ಕುರಿತು ಮಾತನಾಡಿದ ಅವರು, ಸರ್ಕಾರವು ಮುಂದಿನ ನೂರು ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ದೀರ್ಘಾವಧಿಯ ನೀತಿಗಳನ್ನು ರೂಪಿಸಬೇಕು. ಜನಸಂಖ್ಯಾ ಅಸಮತೋಲನವು ದೊಡ್ಡ ಸವಾಲಾಗಿದ್ದು, ಯಾವುದೇ ತಾರತಮ್ಯವಿಲ್ಲದೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಇನ್ನು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಿರ್ಧಾರಗಳು ಸಾಮೂಹಿಕವಾಗಿ ರೂಪುಗೊಳ್ಳಬೇಕಾದ್ದರಿಂದ ತಾಳ್ಮೆ ಅಗತ್ಯ. ಯುಸಿಸಿ ಶೀಘ್ರದಲ್ಲೇ ದೇಶಾದ್ಯಂತ ಜಾರಿಯಾಗುವ ಆಶಾವಾದ ಇದೆ ಎಂದರು.

ಧರ್ಮ ಮತ್ತು ದೇಶದ ಅಸ್ಮಿತೆ

ಭಾರತದ ಅಸ್ಮಿತೆಯು ಇಲ್ಲಿನ ಸಂಸ್ಕೃತಿ ಮತ್ತು ನಾಗರಿಕತೆಯಿಂದ ರೂಪುಗೊಂಡಿದೆ. ನಮಗೆ ಈ ಭೂಮಿ ಕೇವಲ ನೆಲವಲ್ಲ, ಅದು ‘ಮಾತೃಭೂಮಿ’. ಎಲ್ಲಾ ಧರ್ಮಗಳೂ ಒಂದೇ ಸತ್ಯವನ್ನು ಹುಡುಕುತ್ತವೆ, ಆದರೆ ದಾರಿಗಳು ಮಾತ್ರ ಬೇರೆ ಬೇರೆ. ಮಾನವಕುಲದ ಉಳಿವಿಗೆ ಧರ್ಮಗಳ ನಡುವಿನ ಸಾಮರಸ್ಯವು ಅನಿವಾರ್ಯವಾಗಿದೆ. ಸಮಾಜವು ಜಾತಿಯನ್ನು ಮರೆತರೆ, ರಾಜಕೀಯವೂ ಜಾತಿಯನ್ನು ಮರೆಯುತ್ತದೆ ಎಂದು ಮೋಹನ್ ಭಾಗವತ್ ಈ ಸಂದರ್ಭದಲ್ಲಿ ಮಾರ್ಮಿಕವಾಗಿ ನುಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೀತಾ ಸ್ವಯಂವರಕ್ಕೆ ರಾವಣನ ಎಂಟ್ರಿ; ಭವ್ಯ ಸೆಟ್​ನಲ್ಲಿ ಯಶ್ ಶೂಟಿಂಗ್ – Kannada News | Ramayana Movie: Yash’s Grand Ravana Entry, Sita Swayamvar Shoot Begins in Mithila Set

ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ‘ರಾಮಾಯಣ’ ಮುಂಚೂಣಿಯಲ್ಲಿದೆ. ಈ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯ ಈ ಸಿನಿಮಾದ ಬಗ್ಗೆ ಒಂದು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ರಾವಣನ ಪಾತ್ರಧಾರಿ ಯಶ್ ಅವರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಅದ್ದೂರಿಯಾಗಿ ನಿರ್ಮಿಸಲಾಗಿರುವ ‘ಮಿಥಿಲಾ ನಗರ’ದ ಸೆಟ್‌ನಲ್ಲಿ ಯಶ್ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

1. ರಾವಣನಾಗಿ ಯಶ್ ಅವರ ಮಾಸ್ ಎಂಟ್ರಿ ದೃಶ್ಯದ ಶೂಟಿಂಗ್

2. ಮಿಥಿಲಾ ಸಾಮ್ರಾಜ್ಯದ ಮರುಸೃಷ್ಟಿ ಮತ್ತು ಸೀತಾ ಸ್ವಯಂವರದ ಸೀನ್

3. 2026ರ ದೀಪಾವಳಿಗೆ ಪಾರ್ಟ್-1 ತೆರೆಗೆ

ಭವ್ಯ ಸೆಟ್‌ನಲ್ಲಿ ಸೀತಾ ಸ್ವಯಂವರ

ಸೀತಾ ಸ್ವಯಂವರದ ದೃಶ್ಯಕ್ಕಾಗಿ ಮುಂಬೈನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಅರಮನೆಯ ಪ್ರಾಂಗಣ, ಸುಂದರವಾದ ಬಾಲ್ಕನಿಗಳು ಹಾಗೂ ಹೂವುಗಳಿಂದ ಅಲಂಕೃತವಾದ ರಂಗೋಲಿ ವಿನ್ಯಾಸ ಈ ಸೆಟ್​​ನ ಹೈಲೈಟ್. ಮಿಥಿಲಾ ಸಾಮ್ರಾಜ್ಯದ ವೈಭವವನ್ನು ಮರುಸೃಷ್ಟಿಸಲು ನೂರಾರು ಜೂನಿಯರ್ ಆರ್ಟಿಸ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಶಿವಧನುಸ್ಸು ಎತ್ತಲು ಬರ್ತಾರೆ ಯಶ್

ಈ ದೃಶ್ಯದಲ್ಲಿ ಯಶ್ (ರಾವಣ) ಅವರ ಎಂಟ್ರಿ ಅತ್ಯಂತ ಪವರ್‌ಫುಲ್ ಆಗಿರಲಿದೆ ಎನ್ನಲಾಗಿದೆ. ಸೀತಾ ಸ್ವಯಂವರಕ್ಕೆ ರಾವಣನ ಆಗಮನ ಹಾಗೂ ಆತ ‘ಶಿವಧನುಸ್ಸು’ ಎತ್ತಲು ಪ್ರಯತ್ನಿಸಿ ವಿಫಲವಾಗುವ ದೃಶ್ಯವನ್ನು ಈಗ ಚಿತ್ರೀಕರಿಸಲಾಗುತ್ತಿದೆ. ರಾವಣ ಸಭೆಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ವಾತಾವರಣವೇ ಬದಲಾಗುವ ರೀತಿಯಲ್ಲಿ ಈ ಸೀನ್ ವಿನ್ಯಾಸ ಮಾಡಲಾಗಿದೆಯಂತೆ. ಸೀತೆಯ ಪಾತ್ರ ಮಾಡುತ್ತಿರುವ ಸಾಯಿ ಪಲ್ಲವಿ ಶೀಘ್ರದಲ್ಲೇ ಈ ಶೆಡ್ಯೂಲ್​​ಗೆ ಲಭ್ಯವಾಗಲಿದ್ದಾರೆ. ಆದರೆ, ಈ ಶೆಡ್ಯೂಲ್‌ನಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಭಾಗಿಯಾಗುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ‘ಉತ್ತರ ರಾಮಾಯಣ’ದ ಕುಶ ಈಗ 1400 ಕೋಟಿ ರೂ. ಕಂಪನಿಯ ಒಡೆಯ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಬಂದರೆ, ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ. ರಾಮನಾಗಿ ರಣಬೀರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಪವರ್​ಫುಲ್ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಉಳಿದಂತೆ ಸನ್ನಿ ಡಿಯೋಲ್ (ಹನುಮಂತ), ಅರುಣ್ ಗೋವಿಲ್ (ದಶರಥ), ರಾಕುಲ್ ಪ್ರೀತ್ ಸಿಂಗ್ (ಶೂರ್ಪನಖಿ) ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

TV9 Kannada News Live: ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ ಸಂಭ್ರಮ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: BSY Abhimanotsava in Chitradurga; Bengaluru Hotel Fire Tragedy; Suvendu Adhikari Oath in West Bengal

ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ ಸಂಭ್ರಮ!

ಬೆಂಗಳೂರು, ಮೇ 09: ಇಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೃಹತ್ ಅಭಿಮಾನೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿಯ (Suvendhu Adhikari) ಪದಗ್ರಹಣದಂತಹ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಸಂಭವಿಸಿದ ಅಗ್ನಿ ದುರಂತವೊಂದು ಜನರನ್ನು ಬೆಚ್ಚಿ ಬೀಳಿಸಿದೆ.

ಮುಖ್ಯಾಂಶಗಳು

  • ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ: ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿ ಕಾರ್ಯಕ್ರಮ
  • ನಾಗರಬಾವಿ ಹೋಟೆಲ್ ಅಗ್ನಿ ಅವಘಡ: ಹೊಗೆಯಿಂದ ಉಸಿರುಗಟ್ಟಿ ಓರ್ವ ಸಾವು, ನಾಲ್ವರು ಗಂಭೀರ
  • ಬಂಗಾಳದಲ್ಲಿ ಸುವೇಂದು ಅಧಿಕಾರಿ ಪ್ರಮಾಣ ವಚನ

ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ!

ಕೋಟೆ ನಾಡು ಚಿತ್ರದುರ್ಗ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ಕ್ಕೆ ಸಾಕ್ಷಿಯಾಗುತ್ತಿದೆ. ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯು ಏಳುಸುತ್ತಿನ ಕೋಟೆಯ ಮಾದರಿಯಲ್ಲಿದ್ದು, ಬಿಎಸ್ ವೈ ಮತ್ತು ಅಮಿತ್ ಶಾ ಅವರ ಬೃಹತ್ ಭಾವಚಿತ್ರಗಳಿಂದ ಕಂಗೊಳಿಸುತ್ತಿದೆ. ಈ ಸಮಾರಂಭದ ವಿಶೇಷ ಆಕರ್ಷಣೆಯೆಂದರೆ ಯಡಿಯೂರಪ್ಪನವರು ತಮ್ಮ ಆರಂಭಿಕ ರಾಜಕೀಯ ದಿನಗಳಲ್ಲಿ ಬಳಸುತ್ತಿದ್ದ ಅಂಬಾಸಿಡರ್ ಕಾರು ಪ್ರದರ್ಶನಕ್ಕೆ ಇಟ್ಟಿರುವುದು. ಲಕ್ಷಾಂತರ ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ.

ಬೆಂಗಳೂರಿನ ನಾಗರಬಾವಿ ಹೋಟೆಲ್‌ನಲ್ಲಿ ಅಗ್ನಿ ಅವಘಡ!

ಬೆಂಗಳೂರಿನ ನಾಗರಬಾವಿಯ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಆವರಿಸಿದ್ದರಿಂದ ರಾಜಕುಮಾರ್ (45) ಎಂಬುವವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಕಟ್ಟಡದೊಳಗೆ ಸಿಲುಕಿದ್ದ ಭೀಮ, ಶಿವಾನಂದ, ಸತೀಶ್ ಮತ್ತು ರಾಜಕುಮಾರ್ ಸೇರಿ ಐವರನ್ನು ಅಗ್ನಿಶಾಮಕ ದಳದವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ರಾಜಕುಮಾರ್ ಕೊನೆಯುಸಿರೆಳೆದಿದ್ದು, ಉಳಿದ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ ನಾಗರಬಾವಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ, ಉಸಿರುಗಟ್ಟಿ ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ

ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ!

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಇಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ಇತ್ತೀಚಿನ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬಿಜೆಪಿ, ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರ ಹಿಡಿದಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ವಿಶ್ವಕವಿ ರವೀಂದ್ರನಾಥ ಠಾಗೋರ್ ಅವರ 165ನೇ ಜನ್ಮದಿನವಾಗಿರುವುದರಿಂದ, ಬಂಗಾಳಿಗಳ ಭಾವನೆಗಳಿಗೆ ಗೌರವ ನೀಡಲು ಇದೇ ದಿನವನ್ನು ನಿಗದಿಪಡಿಸಲಾಗಿದೆ. ನಂದಿಗ್ರಾಮದ ಕಲಿ ಎಂದೇ ಖ್ಯಾತರಾದ ಸುವೇಂದು ಅವರು ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದು, ಬಂಗಾಳದಲ್ಲಿ ಕಮಲ ಪಾಳೆಯದ ಆಡಳಿತ ಆರಂಭವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Axar Patel: ಮುಂದಿನ ವರ್ಷಕ್ಕೆ ನಾವು ಪ್ಲ್ಯಾನ್ ರೂಪಿಸುತ್ತೇವೆ..! – Kannada News | Axar patel post match interview after DCvs KKR match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಡೆಲ್ಲಿ ಕ್ಯಾಫಿಟಲ್ಸ್ ತಂಡದ ಸೋಲಿನ ಸರಪಳಿ ಮುಂದುವರೆದಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್​ನ 51ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 142 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 14.2 ಓವರ್​ಗಳಲ್ಲಿ ಚೇಸ್ ಮಾಡಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಫಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್,  “ಕೇವಲ ಎರಡು-ಮೂರು ಓವರ್‌ಗಳಲ್ಲಿ ನಾವು ಐದು ವಿಕೆಟ್‌ಗಳನ್ನು ಕಳೆದುಕೊಂಡೆವು. ಅಲ್ಲಿಯೇ ಪಂದ್ಯ ನಮ್ಮ ಕೈತಪ್ಪಿತು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ರೀತಿ ಆರಂಭ ಉತ್ತಮವಾಗಿದ್ದರೂ ನಂತರ ಹಠಾತ್ ವಿಕೆಟ್ ಕಳೆದುಕೊಂಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಈ ಪಿಚ್ ಸ್ಪಿನ್ನರ್‌ಗಳಿಗೆ ಪೂರಕವಾಗಿದ್ದರೂ, ನಮ್ಮ ಸ್ಪಿನ್ನರ್‌ಗಳು ಅದರ ಲಾಭ ಪಡೆಯುವಲ್ಲಿ ಎಡವಿದರು ಎಂದು ಅಕ್ಷರ್ ಒಪ್ಪಿಕೊಂಡಿದ್ದಾರೆ. ಪಿಚ್ ವರ್ತಿಸಿದ ರೀತಿ ನೋಡಿದರೆ, ಸ್ಪಿನ್ನರ್‌ಗಳು ಸಾಕಷ್ಟು ತಪ್ಪುಗಳನ್ನು ಮಾಡಿದರು ಎನಿಸುತ್ತದೆ. ನಾವು ಇದಕ್ಕಿಂದಲೂ ಉತ್ತಮವಾಗಿ ಬೌಲಿಂಗ್ ಮಾಡಬಹುದಿತ್ತು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಬ್ಯಾಟಿಂಗ್ ವೈಫಲ್ಯ ಹಾಗೂ ಸತತವಾಗಿ ವಿಕೆಟ್ ಬೀಳುತ್ತಿರುವಾಗ ಅದನ್ನು ಹೇಗೆ ತಡೆಯಬಹುದು ಎಂಬ ಪ್ರಶ್ನೆಗೆ  ಸರಳ ಉತ್ತರ ನೀಡಿದ ಅಕ್ಷರ್. “ಇದಕ್ಕೆ ಯಾವುದೇ ಸಂಕೀರ್ಣ ಪರಿಹಾರವಿಲ್ಲ. ವಿಕೆಟ್‌ಗಳು ಬೀಳುತ್ತಿರುವಾಗ ಒಂದೆರಡು ಓವರ್‌ಗಳ ಕಾಲ ತಾಳ್ಮೆಯಿಂದ ಕ್ರೀಸ್‌ನಲ್ಲಿ ನಿಂತು ಒತ್ತಡವನ್ನು ಹೀರಿಕೊಳ್ಳಬೇಕು. ಆ ಮೈಂಡ್‌ಸೆಟ್ ಅಳವಡಿಸಿಕೊಳ್ಳುವುದು ಬಹಳ ಮುಖ್ಯ,” ಎಂದಿದ್ದಾರೆ.

ಇದನ್ನೂ ಓದಿ: ಕೃನಾಲ್ ಪಾಂಡ್ಯ ಕಾಲರ್ ಪಟ್ಟಿ ಹಿಡಿದ ನಿಕೋಲಸ್ ಪೂರನ್!

ಟೂರ್ನಿಯ ಮುಂದಿನ ಪಂದ್ಯಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಕ್ಷರ್, ಈ ವರ್ಷದ ತಪ್ಪುಗಳಿಂದ ಕಲಿಯುವುದು ಬಹಳಷ್ಟಿದೆ ಎಂದಿದ್ದಾರೆ. ಮುಂದಿನ ವರ್ಷದ ದೃಷ್ಟಿಯಿಂದ ತಂಡದಲ್ಲಿ ಯಾವ ಬದಲಾವಣೆ ಮಾಡಬಹುದು ಮತ್ತು ಬೆಂಚ್‌ನಲ್ಲಿರುವ ಆಟಗಾರರಿಗೆ ಹೇಗೆ ಅವಕಾಶ ನೀಡಬಹುದು ಎಂಬ ಬಗ್ಗೆ ಮ್ಯಾನೇಜ್‌ಮೆಂಟ್ ಆಲೋಚಿಸಲಿದೆ. ಈ ಮೂಲಕ ಮುಂದಿನ ವರ್ಷಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲ್ಯಾನ್ ರೂಪಿಸುವ ಸುಳಿವು ನೀಡಿದ್ದಾರೆ.

ಒಟ್ಟಾರೆಯಾಗಿ, ಅಕ್ಷರ್ ಅವರ ಮಾತುಗಳು ತಂಡದಲ್ಲಿ ತಾಂತ್ರಿಕ ಬದಲಾವಣೆಗಿಂತ ಹೆಚ್ಚಾಗಿ ಮಾನಸಿಕ ಸ್ಥಿರತೆ ಮತ್ತು ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಆಡುವ ಜಾಣ್ಮೆಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿವೆ. ಈ ಎಲ್ಲಾ ತಪ್ಪುಗಳನ್ನು ತಿದ್ದಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ ಮ್ಯಾಚ್​ನಲ್ಲಿ ಕಂಬ್ಯಾಕ್ ಮಾಡಲಿದೆಯಾ ಕಾದು ನೋಡಬೇಕಿದೆ.

Source link

ಕನ್ನಡದ ಯಾವ ಹೀರೋಗೆ ವಿಜಯ್ ರೀತಿಯ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು  – Kannada News | Thalapathy Vijay’s Success Sparks Debate in Karnataka: Upendra Shares His Unique Take

ದಳಪತಿ ವಿಜಯ್ ಅವರು ಹೀರೋ ಆಗಿದ್ದವರು. ಅವರು ತಮಿಳುನಾಡಿನಲ್ಲಿ ದೊಡ್ಡ ಗೆಲುವು ಕಂಡಿದ್ದಾರೆ. ಅವರ ಗೆಲುವಿನ ಬೆನ್ನಲ್ಲೇ ಕರ್ನಾಟಕದ ಯಾವ ಹೀರೋಗೆ ಆ ರೀತಿಯ ಗೆಲುವು ಕಾಣುವ ತಾಕತ್ತಿದೆ ಎಂಬ ಚರ್ಚೆ ಶುರುವಾಗಿದೆ. ಈ ಚರ್ಚೆಯ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ‘ಹೀರೋಗಳು ಚುನಾವಣೆ ಗೆಲ್ಲೋದು ಒಂದು ಕಡೆ ಆಯ್ತು. ಜನಸಾಮಾನ್ಯರೇ ಸ್ಟಾರ್ ಆಗುವ ಸಂದರ್ಭದ ಬರಬೇಕು’ ಎಂದಿದ್ದಾರೆ ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

DC vs KKR: ಪೋಸ್ಟ್ ಮ್ಯಾಚ್​ನಲ್ಲಿ ಭಾವುಕರಾದ ಅಕ್ಷರ್ ಪಟೇಲ್ – Kannada News | DC vs KKR, IPL 2026 Our season is over let’s see next year Axar Patel emotional in post match

ಬೆಂಗಳೂರು (ಮೇ. 09): ಐಪಿಎಲ್ 2026 ರ 51 ನೇ ಪಂದ್ಯದಲ್ಲಿ ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಎಂಟು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅನುಭವಿಸಿದ ಮತ್ತೊಂದು ಸೋಲಿನಿಂದ ನಾಯಕ ಅಕ್ಷರ್ ಪಟೇಲ್ ತೀವ್ರ ನಿರಾಶೆಗೊಂಡಿದ್ದಾರೆ. ಎರಡರಿಂದ ಮೂರು ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಪ್ರಮುಖ ಕಾರಣ ಎಂದು ಪಟೇಲ್ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಸಂದರ್ಭ ಹೇಳಿದ್ದಾರೆ.

ಸೋಲಿಗೆ ಯಾರು ಹೊಣೆ?

“ನಾವು ನಿರೀಕ್ಷೆಗಿಂತ ಕಡಿಮೆ ರನ್ ಗಳಿಸಿದ್ದೇವೆ ಮತ್ತು ಸ್ಪಿನ್ನರ್‌ಗಳು ಕೂಡ ಬಹಳಷ್ಟು ತಪ್ಪುಗಳನ್ನು ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಪಿಚ್ ವರ್ತಿಸುತ್ತಿದ್ದ ರೀತಿಯನ್ನು ಪರಿಗಣಿಸಿದರೆ, ಸ್ಪಿನ್ನರ್‌ಗಳು ತಪ್ಪುಗಳನ್ನು ಮಾಡಿದ್ದಾರೆ. ಆದಾಗ್ಯೂ, ನಾವು ಎರಡು ಅಥವಾ ಮೂರು ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡೆವು, ಅಲ್ಲಿಂದ ಪಂದ್ಯವು ನಮ್ಮಿಂದ ಜಾರಿತು. ಬಹುಶಃ ನಾವು ಅದರ ಬಗ್ಗೆ ಯೋಚಿಸಬೇಕಾಗಬಹುದು ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಅದೇ ಸಂಭವಿಸಿದೆ. ನಾವು ಉತ್ತಮ ಆರಂಭವನ್ನು ಪಡೆದುಕೊಂಡೆವು, ನಂತರ ಇದ್ದಕ್ಕಿದ್ದಂತೆ ವಿಕೆಟ್‌ಗಳು ಬೀಳಲು ಪ್ರಾರಂಭಿಸಿದವು,” ಎಂದು ಅವರು ಋತುವಿನ ಏಳನೇ ಸೋಲಿನ ನಂತರ ಹೇಳಿದರು.

ಬ್ಯಾಟ್ಸ್‌ಮನ್‌ಗಳ ತಪ್ಪು

“ನೀವು ಇದನ್ನು ಕಠಿಣ ರೀತಿಯಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಅಶುತೋಷ್ ಮತ್ತು ನಾನು ಬ್ಯಾಟಿಂಗ್ ಮಾಡುವಾಗ, ನಾವು ಅಲ್ಲಿ ತಪ್ಪು ಮಾಡಿದರೆ, ಮುಂದಿನ ಬ್ಯಾಟ್ಸ್‌ಮನ್‌ಗೆ ಅದು ತುಂಬಾ ಕಷ್ಟಕರವಾಗಿರುತ್ತದೆ ಎಂದು ನಾವು ಭಾವಿಸಿದ್ದೆವು. ಅದಕ್ಕಾಗಿಯೇ ಸರಿಯಾದ ಮನಸ್ಥಿತಿಯನ್ನು ಹೊಂದಿರುವುದು ಹೆಚ್ಚು ಮುಖ್ಯ ಎಂದು ನಾನು ಭಾವಿಸುತ್ತೇನೆ. ನೀವು ಒಂದು ಅಥವಾ ಎರಡು ವಿಕೆಟ್‌ಗಳನ್ನು ಕಳೆದುಕೊಂಡರೂ ಸಹ, ನೀವು ಇನ್ನೂ ಕ್ರೀಸ್‌ನಲ್ಲಿ ಸಮಯ ಕಳೆಯಬಹುದು ಮತ್ತು ಆಡಬಹುದು. ಅದನ್ನೇ ಅಳವಡಿಸಿಕೊಳ್ಳಬೇಕಾಗಿದೆ. ವಿಕೆಟ್‌ಗಳು ತ್ವರಿತವಾಗಿ ಬೀಳುತ್ತಿರುವಾಗ, ನೀವು ಒಂದು ಅಥವಾ ಎರಡು ಓವರ್‌ಗಳಿಗೆ ಒತ್ತಡವನ್ನು ಹೀರಿಕೊಳ್ಳಬೇಕು.”

ಈಗ ನಾವು ಮುಂದಿನ ವರ್ಷಕ್ಕೆ ತಯಾರಿ ನಡೆಸುತ್ತೇವೆ – ಅಕ್ಷರ್

ಮುಂಬರುವ ಪಂದ್ಯಗಳಿಗೆ ಸಿದ್ಧತೆಗಳ ಕುರಿತು ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ, “ಸದ್ಯಕ್ಕೆ ನಾವು ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಬೇಕು. ನಂತರ, ಇನ್ನೂ ಬಹಳ ದೂರ ಸಾಗಬೇಕಾಗಿದೆ, ಮತ್ತು ಮುಂದಿನ ವರ್ಷ ಅತ್ಯುತ್ತಮವಾಗಿ ಬರುತ್ತೇವೆ. ಮುಂದಿನ ವರ್ಷಕ್ಕೆ ನಾವು ಯಾವ ಯೋಜನೆಗಳನ್ನು ಮಾಡಬಹುದು ಮತ್ತು ನಾವು ಯಾವ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಯೋಚಿಸುತ್ತೇವೆ. ಜೊತೆಗೆ ನಾವು ಬೆಂಚ್‌ನಲ್ಲಿರುವ ಆಟಗಾರರನ್ನು ಸಹ ನೋಡಬೇಕು ಮತ್ತು ಯಾರಿಗೆ ಅವಕಾಶಗಳನ್ನು ನೀಡಬಹುದು ಮತ್ತು ನಾವು ಯಾವ ಬದಲಾವಣೆಗಳನ್ನು ಮಾಡಬಹುದು ಎಂಬುದನ್ನು ನಿರ್ಧರಿಸಬಹುದು.”

ಫಿನ್ ಅಲೆನ್ ಶತಕ

ಮೊದಲು ಬ್ಯಾಟಿಂಗ್ ಮಾಡಿದ ಡಿಸಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಿತು. ಪಾಥುಮ್ ನಿಸ್ಸಂಕ 50 ರನ್‌ಗಳೊಂದಿಗೆ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದಾಗ್ಯೂ, ಇತರ ಬ್ಯಾಟ್ಸ್‌ಮನ್‌ಗಳು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೆಕೆಆರ್ 14.2 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು 143 ರನ್‌ಗಳ ಗುರಿಯನ್ನು ತಲುಪಿತು. ಕೆಕೆಆರ್ ಪರ ಫಿನ್ ಅಲೆನ್ 47 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ 33 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

Source link

Exit mobile version