ಇನ್ಮುಂದೆ ಒಂದೇ ಕರೆಯಲ್ಲಿ ಸಿಗುತ್ತೆ ಪೊಲೀಸ್-ಆರೋಗ್ಯ-ಅಗ್ನಿಶಾಮಕ ಸೇವೆ; ರಾಜ್ಯದಲ್ಲಿ ಹೈಟೆಕ್ ‘ಹೆಲ್ತ್ ಎಮರ್ಜೆನ್ಸಿ ಸೆಂಟರ್’ ಲೋಕಾರ್ಪಣೆ! – Kannada News | Karnataka Launches 24/7 Health Emergency Operation Centre (HEOC) for Rapid Relief

ರಾಜ್ಯದಲ್ಲಿ ಹೈಟೆಕ್ ‘ಹೆಲ್ತ್ ಎಮರ್ಜೆನ್ಸಿ ಸೆಂಟರ್’ ಲೋಕಾರ್ಪಣೆ

ಬೆಂಗಳೂರು, ಮೇ 08: ಜನರಿಗೆ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆ ಪಡೆಯಲು ಸುಲಭ ದಾರಿ ಸಿಕ್ಕಿದ್ದು, ಆರೋಗ್ಯ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನದಡಿ ‘ಹೆಲ್ತ್ ಎಮರ್ಜೆನ್ಸಿ ಆಪರೇಷನ್ ಸೆಂಟರ್’ (HEOC) ಆರಂಭಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಈ ನೂತನ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಈ ಕೇಂದ್ರವು ಕೇವಲ ಒಂದು ಸಹಾಯವಾಣಿಯಾಗಿರದೆ, ವಿವಿಧ ಇಲಾಖೆಗಳ ಸಮನ್ವಯದ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.

ಮುಖ್ಯಾಂಶಗಳು

  • ತುರ್ತು ಸೇವೆಗಳಿಗಾಗಿ ರಾಜ್ಯದಲ್ಲಿ ಅತ್ಯಾಧುನಿಕ ಹೆಲ್ತ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ ಆರಂಭ.
  •  ಆರೋಗ್ಯ, ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳು ಇನ್ಮುಂದೆ ಒಂದೇ ಸೂರಿನಡಿ ಲಭ್ಯ.
  • ಈ ಕೇಂದ್ರವು ದಿನದ ಇಪ್ಪತ್ನಾಲ್ಕು ಗಂಟೆಯೂ ಸಾರ್ವಜನಿಕರ ತುರ್ತು ಸೇವೆಗೆ ಲಭ್ಯವಿರುತ್ತದೆ.

ಏನಿದರ ವಿಶೇಷತೆ?

ಈ ಕೇಂದ್ರವು WHO ಮಾರ್ಗದರ್ಶನದಂತೆ ಮತ್ತು ‘ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್’ ಅಡಿಯಲ್ಲಿ ಸ್ಥಾಪಿತವಾಗಿದೆ. ಇಲ್ಲಿ ಕೇವಲ ಆರೋಗ್ಯ ಇಲಾಖೆಯಷ್ಟೇ ಅಲ್ಲದೆ, ತುರ್ತು ಸಂದರ್ಭಗಳಲ್ಲಿ ಕಂದಾಯ, ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಮತ್ತು ಅಗ್ನಿಶಾಮಕ ದಳದಂತಹ ಪ್ರಮುಖ ಸೇವೆಗಳು ಒಂದೇ ಸೂರಿನಡಿ ಸಿಗಲಿವೆ.

ಈ ಕೇಂದ್ರವು ದಿನದ 24 ಗಂಟೆಯೂ ಸಕ್ರಿಯವಾಗಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಸಾಂಕ್ರಾಮಿಕ ರೋಗಗಳ ಉಲ್ಬಣ, ಬೆಂಕಿ ಅವಘಡ ಅಥವಾ ಪ್ರಕೃತಿ ವಿಕೋಪದಂತಹ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತಕ್ಷಣ ಮಾಹಿತಿ ವಿನಿಮಯ ಮಾಡಿ, ಸ್ಥಳೀಯ ಮಟ್ಟದಲ್ಲಿ ಸೂಕ್ತ ನಿರ್ದೇಶನ ನೀಡಲು ಇದು ಸಹಕಾರಿಯಾಗಿದೆ. ಹಲವಾರು ಸಹಾಯವಾಣಿಗಳಿಗೆ ಕರೆ ಮಾಡಿ ಕಾಯುವ ಬದಲು, ಈಗ ಒಂದೇ ಕೇಂದ್ರದ ಮೂಲಕ ಎಲ್ಲಾ ತುರ್ತು ಸೇವೆಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ ಪೀಣ್ಯ ಕೈಗಾರಿಕೆಗಳಿಗೆ ಯುದ್ಧದ ಬಿಸಿ: ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ, ಸಾವಿರಾರು ಕಾರ್ಮಿಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ

ಆರೋಗ್ಯ ಸಚಿವ ಏನಂದ್ರು?

ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊವಿಡ್ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆ ಕೊರತೆ ಇತ್ತು. ಮುಂದೆ ಈ ರೀತಿಯ ಪರಿಸ್ಥಿತಿ ಬಂದಾಗ ಸ್ಪಷ್ಟ ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಬೇಕು. WHO ಮತ್ತು ವಿಶ್ವ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ದೇಶದ ಎಲ್ಲಾ ಕಡೆ ಈ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಇದನ್ನು ಸ್ಥಾಪನೆ ಮಾಡಿದ್ದೇವೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಈ ಕೇಂದ್ರ ನಿರ್ಮಾಣ ಮಾಡಿದ್ದೇವೆ.ಇಲಾಖೆ ಅಧಿಕಾರಿಗಳು ಇತರೆ ಅಧಿಕಾರಿಗಳು ಎಲ್ಲರು ಸಹ ಕನೆಕ್ಟ್ ಮಾಡೋಕೆ ಸಹಾಯಕವಾಗಲಿದೆ. ಆ್ಯಂಬುಲೆನ್ಸ್ ಕೂಡ ಇದರ ಜೊತೆ ಸಹಯೋಗದಲ್ಲಿ ಇರುತ್ತದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಅಪಘಾತದ ನಾಟಕವಾಡಿ ಒಂಟಿ ಮಹಿಳೆಯ ಕೊಲೆ, ಹಣಕ್ಕಾಗಿ ಸಂಚು ರೂಪಿಸಿದ್ದ ಐವರ ಬಂಧನ – Kannada News | Bengaluru Crime: Five Arrested for Murdering Woman by Staging Fake Accident for Robbery in Mahalakshmi Layout

ಪ್ರಾತಿನಿಧಿಕ ಚಿತ್ರImage Credit source: TV9 Network

ಬೆಂಗಳೂರು, ಮೇ 8: ಬೆಂಗಳೂರಿನಲ್ಲಿ (Bengaluru) ಹಣದ ಆಸೆಗಾಗಿ ಒಂಟಿ ಮಹಿಳೆಯೊಬ್ಬರನ್ನು ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡು ಮಾಡಿ ಕೊಲೆ ಮಾಡಿರುವ ಸಿನಿಮೀಯ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ 21ರಂದು ಕುರುಬರಹಳ್ಳಿಯ ಪೈಪ್ ಲೇನ್ ರಸ್ತೆಯಲ್ಲಿ ನಡೆದ ಈ ಘಟನೆಯನ್ನು ಆರಂಭದಲ್ಲಿ ಕೇವಲ ‘ಅಪಘಾತ’ ಎಂದು ಬಿಂಬಿಸಲಾಗಿತ್ತು. ಆದರೆ ಮಹಾಲಕ್ಷ್ಮಿ ಲೇಔಟ್ ಪೊಲೀಸರ ಚುರುಕಿನ ತನಿಖೆಯಿಂದಾಗಿ ಇದು ಸುಲಿಗೆಗಾಗಿ ನಡೆದ ವ್ಯವಸ್ಥಿತ ಕೊಲೆ ಎಂಬುದು ಸಾಬೀತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್ ಮತ್ತು ಯೋಹಾನ್ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುಖ್ಯಾಂಶಗಳು

  • ಆರೋಪಿ ಚೇತನ್ ಮೃತ ಮಹಿಳೆಯ ಬಳಿ ಸಾಲ ಪಡೆದಿದ್ದ ಹಾಗೂ ಆಕೆಯ ಬಳಿ ಹೆಚ್ಚಿನ ಹಣವಿದೆ ಎಂಬ ಮಾಹಿತಿ ಹೊಂದಿದ್ದ.
  • ಅಪಘಾತವೆಸಗಿದವರೇ ರಕ್ಷಕರಂತೆ ನಟಿಸಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ, ಮನೆಯ ಕೀ ಕಳವು ಮಾಡಿದ್ದರು.
  • ಪೊಲೀಸರಿಗೆ ದೂರು ನೀಡುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಿದ್ದ ಆರೋಪಿಗಳು.

ಸಿನಿಮೀಯ ರೀತಿಯ ಸ್ಕೆಚ್

ಆರೋಪಿ ಚೇತನ್ ಎಂಬಾತ ವಿಜಯಲಕ್ಷ್ಮಿ ಎಂಬುವರ ಪರಿಚಯ ಹೊಂದಿದ್ದ ಹಾಗೂ ಅವರ ಬಳಿ ಸಾಲ ಪಡೆದಿದ್ದ. ಆಕೆಯ ಬಳಿ ಹೆಚ್ಚಿನ ಹಣ ಮತ್ತು ಚಿನ್ನಾಭರಣ ಇದೆ ಎಂದು ತಿಳಿದಿದ್ದ ಚೇತನ್, ಸ್ನೇಹಿತರೊಂದಿಗೆ ಸೇರಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಪ್ಲಾನ್‌ನಂತೆ ಏಪ್ರಿಲ್ 21ರಂದು ವಿಜಯಲಕ್ಷ್ಮಿ ಅವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ರಾಕೇಶ್ ಎಂಬಾತ ಬೈಕ್‌ನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಅಲ್ಲಿಗೆ ಆಟೋದಲ್ಲಿ ಬಂದ ಇತರ ಆರೋಪಿಗಳು ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಸೇರಿಸುವ ನಾಟಕವಾಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ, ಮನೆಯಲ್ಲಿ ಕಳ್ಳತನ!

ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಸೋಗಿನಲ್ಲಿ ಮಂಜುನಾಥ್ ಎಂಬ ಆರೋಪಿ ಆಕೆಯ ಪರ್ಸ್‌ನಲ್ಲಿದ್ದ ಮನೆ ಕೀಲಿಯನ್ನು ಕಳವು ಮಾಡಿದ್ದ. ನೇರವಾಗಿ ವಿಜಯಲಕ್ಷ್ಮಿ ಅವರ ಮನೆಗೆ ತೆರಳಿ ಕಳ್ಳತನಕ್ಕೆ ಯತ್ನಿಸಿದ್ದಾಗ, ಅಕ್ಕಪಕ್ಕದ ಮನೆಯವರು ಪ್ರಶ್ನಿಸಿದ್ದಾರೆ. ಈ ವೇಳೆ ಆಧಾರ್ ಕಾರ್ಡ್ ಬೇಕೆಂದು ಸುಳ್ಳು ಹೇಳಿ ಅಲ್ಲಿಂದ ಪರಾರಿಯಾಗಿದ್ದ. ಇತ್ತ ರಾಕೇಶ್ ಎಂಬ ಆರೋಪಿ ಸಂಚಾರ ಪೊಲೀಸ್ ಠಾಣೆಗೆ ತೆರಳಿ, ‘ಪರಿಚಯಸ್ಥ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ನಾನೇ ಅವರನ್ನು ಕಾಪಾಡಿ ಆಸ್ಪತ್ರೆಗೆ ಸೇರಿಸಿದ್ದೇನೆ’ ಎಂದು ಸುಳ್ಳು ದೂರು ನೀಡಿದ್ದ.

ಪೊಲೀಸ್ ತನಿಖೆಯಲ್ಲಿ ಅಸಲಿ ಸತ್ಯ ಬಯಲು

ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆಯ ಮನೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವ ಬಗ್ಗೆ ಮನೆ ಮಾಲೀಕರು ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಕೃತ್ಯ ಬಯಲಾಗಿದೆ. ದುರದೃಷ್ಟವಶಾತ್, ಚಿಕಿತ್ಸೆ ಫಲಿಸದೆ ವಿಜಯಲಕ್ಷ್ಮಿ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ಬೆಂಗಳೂರು ಇಡಿ ಅಧಿಕಾರಿಗಳಿಂದ ದಾಳಿ, ಕೋಟ್ಯಾಂತರ ಮೌಲ್ಯದ ಆಸ್ತಿ ವಶಕ್ಕೆ

ಪ್ರಕರಣದ ಮತ್ತೊಂದು ಟ್ವಿಸ್ಟ್ ಎಂದರೆ, ಬಂಧಿತ ಆರೋಪಿಗಳ ಪೈಕಿ ಮಂಜುನಾಥ್ ಎಂಬಾತ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಸದ್ಯ ಪೊಲೀಸರು ಕೊಲೆ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಯನತಾರಾ-ವಿಘ್ನೇಶ್ ಒಂದು ದಿನದ ಖರ್ಚು ಎಷ್ಟು ಲಕ್ಷ? – Kannada News | Nayanthara and Vignesh Shivan’s Lavish Life: Daily Expenses Revealed

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾದಷ್ಟೇ ಐಷಾರಾಮಿ ಜೀವನಕ್ಕೂ ಹೆಸರಾದ ಈ ದಂಪತಿಗಳ ದಿನದ ಖರ್ಚು ಎಷ್ಟಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಯಾವಾಗಲೂ ಇರುತ್ತದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ವಿಘ್ನೇಶ್ ಶಿವನ್ ತಮ್ಮ ಜೀವನಶೈಲಿಯ ವೆಚ್ಚದ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಯನತಾರಾ ಕುಟುಂಬದ ದಿನದ ಖರ್ಚು ಎಷ್ಟು ಎಂಬ ಪ್ರಶ್ನೆಗೆ ವಿಘ್ನೇಶ್ ಶಿವನ್ ನೇರವಾಗಿ ಉತ್ತರಿಸದಿದ್ದರೂ, ಒಂದು ಅಂದಾಜು ಅಂಕಿಅಂಶದ ಮೂಲಕ ಅದರ ಸುಳಿವು ನೀಡಿದ್ದಾರೆ. ‘ಒಬ್ಬ ವ್ಯಕ್ತಿಯ ಬಳಿ 350 ಕೋಟಿ ರೂಪಾಯಿ ಹಣವಿದ್ದರೆ, ಅದಕ್ಕೆ ವಾರ್ಷಿಕವಾಗಿ ಸುಮಾರು 21 ರಿಂದ 24 ಕೋಟಿ ರೂಪಾಯಿ ಬಡ್ಡಿ ಬರುತ್ತದೆ. ಅಂದರೆ ತಿಂಗಳಿಗೆ ಸರಾಸರಿ 2 ಕೋಟಿ ರೂಪಾಯಿ ಅಥವಾ ದಿನಕ್ಕೆ ಅಂದಾಜು 6 ಲಕ್ಷ ರೂಪಾಯಿ ಬಡ್ಡಿಯಾಗುತ್ತದೆ. ಇಷ್ಟು ಮೊತ್ತವಿದ್ದರೆ ಒಂದು ಕುಟುಂಬವು ಅತ್ಯಂತ ಸಂತೋಷದಿಂದ ಮತ್ತು ವೈಭವದಿಂದ ಬದುಕಲು ಸಾಧ್ಯ’ ಎಂದು ಅವರು ವಿವರಿಸಿದ್ದಾರೆ. ಅವರ ಈ ಮಾತಿನಿಂದ ನಯನತಾರಾ ಕುಟುಂಬದ ದೈನಂದಿನ ಜೀವನಕ್ಕೆ ಸರಿಸುಮಾರು 6 ಲಕ್ಷ ರೂಪಾಯಿ ಬೇಕಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿರುವ ನಯನತಾರಾ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ದಕ್ಷಿಣದ ಕೆಲವೇ ನಟಿಯರ ಬಳಿ ಇರುವಂತೆ ನಯನತಾರಾ ಸ್ವಂತ ಖಾಸಗಿ ವಿಮಾನವನ್ನು ಹೊಂದಿದ್ದಾರೆ ಎನ್ನಲಾಗಿದೆ. ಚೆನ್ನೈನಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ 4 BHK ಅಪಾರ್ಟ್‌ಮೆಂಟ್ ಮತ್ತು ಹೈದರಾಬಾದ್ ಸೇರಿದಂತೆ ಹಲವು ಕಡೆ ಬಂಗಲೆಗಳನ್ನು ಹೊಂದಿದ್ದಾರೆ. ನಟನೆಯ ಜೊತೆಗೆ ‘ದಿ ಲಿಪ್ ಬಾಮ್ ಕಂಪನಿ’ ಎಂಬ ಸೌಂದರ್ಯವರ್ಧಕ ಬ್ರಾಂಡ್ ಮತ್ತು ಚಾಯ್ ವಾಲಾ ಉದ್ಯಮದಲ್ಲಿ ಅವರು ಹೂಡಿಕೆ ಮಾಡಿದ್ದಾರೆ.

ಜೂನ್ 2022ರಲ್ಲಿ ವಿವಾಹವಾದ ಈ ಜೋಡಿ, ಅದೇ ವರ್ಷ ಬಾಡಿಗೆ ತಾಯ್ತನದ (Surrogacy) ಮೂಲಕ ‘ಉಯಿರ್’ ಮತ್ತು ‘ಉಲಗ್’ ಎಂಬ ಅವಳಿ ಪುತ್ರರನ್ನು ಸ್ವಾಗತಿಸಿದರು. ಸಿನಿಮಾದ ವಿಷಯಕ್ಕೆ ಬಂದರೆ, ಶಾರುಖ್ ಖಾನ್ ಅವರ ‘ಜವಾನ್’ ಮೂಲಕ ಬಾಲಿವುಡ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು.

ಇದನ್ನೂ ಓದಿ: ವಿವಾಹಕ್ಕೂ ಮೊದಲು ನಯನತಾರಾ-ವಿಘ್ನೇಶ್ ಮಧ್ಯೆ ಆಗಿತ್ತು ಒಪ್ಪಂದ; ಇನ್ನೂ ಇದೆ ಆ ಡೀಲ್

ಕೇವಲ ನಟನೆಯಿಂದ ಮಾತ್ರವಲ್ಲದೆ, ತಮ್ಮ ಶಿಸ್ತು ಮತ್ತು ವ್ಯವಹಾರ ಜ್ಞಾನದಿಂದ ನಯನತಾರಾ ಭಾರತದ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:13 am, Fri, 8 May 26

Source link

LSG vs RCB: ಕೃನಾಲ್ ಎಸೆದ ಬೌನ್ಸರ್​ಗೆ ತಾಳ್ಮೆ ಕಳೆದುಕೊಂಡ ಪೂರನ್: ಮೈದಾನದಲ್ಲಿ ನಡೆಯಿತು ಜಟಾಪಟಿ – Kannada News | Nicholas Pooran lost patience with Krunal Pandya’s bouncer in LSG vs RCB IPL 2026 Match

ಬೆಂಗಳೂರು (ಮೇ. 08): 2026 ರ ಐಪಿಎಲ್​ನಲ್ಲಿ ಗುರುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಆರ್‌ಸಿಬಿಯನ್ನು (Royal Challengers Bengaluru) ಕೊನೆಯ ಓವರ್​ನಲ್ಲಿ ಸೋಲಿಸಿ ರೋಚಕ ಜಯ ಸಾಧಿಸಿತು. ಲಕ್ನೋ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಗೆದ್ದರೆ ತನ್ನ ಪ್ಲೇಆಫ್ ಸ್ಥಾನವನ್ನು ಉಳಿಸಿಕೊಳ್ಳುವ ಅವಕಾಶ ಅತ್ತ ಆರ್​​ಸಿಬಿಗೂ ಗೆಲುವು ಅವಶ್ಯಕವಿತ್ತು. ಹೀಗಾಗಿ ಉಭಯ ಆಟಗಾರರು ಮೈದಾನದಲ್ಲಿ ಹೋರಾಡುತ್ತಿದ್ದರು. ಈ ಬಿಸಿ ವಾತಾವರಣದ ಮಧ್ಯೆ ಆರ್‌ಸಿಬಿಯ ಕೃನಾಲ್ ಪಾಂಡ್ಯ ಮತ್ತು ಲಕ್ನೋದ ನಿಕೋಲಸ್ ಪೂರನ್ ನಡುವೆ ಜಗಳ ಕೂಡ ನಡೆಯಿತು.

ಪಾಂಡ್ಯ ಮತ್ತು ಪೂರನ್ ನಡುವಿನ ಸಂಘರ್ಷ

ಈ ಘಟನೆಯು ಕೃನಾಲ್ ಪಾಂಡ್ಯ, ಅರ್ಶಿನ್ ಕುಲಕರ್ಣಿ ಅವರನ್ನು ಔಟ್ ಮಾಡಿದ ಬಳಿಕ ಹಾಗೂ ನಿಕೋಲಸ್ ಪೂರನ್ ಕ್ರೀಸ್​ಗೆ ಬಂದಾಗ ಸಂಭವಿಸಿತು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಿಕೋಲಸ್ ಪೂರನ್ ಅವರನ್ನು ಕೃನಾಲ್ ತೀಕ್ಷ್ಣವಾದ ಬೌನ್ಸರ್ ಮೂಲಕ ಸ್ವಾಗತಿಸಿದರು. ಗಂಟೆಗೆ ಸುಮಾರು 119 ಕಿ.ಮೀ ವೇಗದಲ್ಲಿ ಬಂದ ಚೆಂಡು ಪೂರನ್ ಅವರನ್ನು ಭಯ ಹುಟ್ಟಿಸಿತು.

ಮುಂದಿನ ಎಸೆತದಲ್ಲಿಯೇ ಕೃನಾಲ್ ಮತ್ತೊಂದು ಬೌನ್ಸರ್ ಎಸೆದರು, ಇದರಿಂದ ಪೂರನ್ ರನ್ ಗಳಿಸಿದರು. ರನ್ ಪೂರ್ಣಗೊಳಿಸಿದ ನಂತರ, ಪೂರನ್ ಕೃನಾಲ್ ಬಳಿ ಬಂದು ಏನೋ ಹೇಳುತ್ತಿದ್ದಂತೆ ಪರಿಸ್ಥಿತಿ ಉದ್ವಿಗ್ನವಾಯಿತು. ಇಬ್ಬರೂ ಎದುರೆದುರಾಗಿ ಕೆಲ ಸೆಕೆಂಡ್ ನಿಂತರು. ಆದಾಗ್ಯೂ, ಈ ಬಿಸಿಯ ವಾತಾರವಣ ಹೆಚ್ಚು ಕಾಲ ಉಳಿಯಲಿಲ್ಲ, ತಜ್ಷಣವೇ ಇಬ್ಬರೂ ಆಟಗಾರರು ಆಟಕ್ಕೆ ಮರಳಿದರು. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಪ್ಲೇಆಫ್ ರೇಸ್‌ಗೆ ಇನ್ನೂ ಅವಕಾಶ

ಆರ್​ಸಿಬಿ ವಿರುದ್ಧದ ಈ ಗೆಲುವು ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿದೆ. ಆರು ಪಂದ್ಯಗಳ ಸೋಲಿನ ಸರಣಿಯನ್ನು ಮುರಿದು, ಲಕ್ನೋ ತಮ್ಮ ಸತತ ಮೂರನೇ ಗೆಲುವು ದಾಖಲಿಸಿದೆ. ಆದಾಗ್ಯೂ, ಅವರ ಹಾದಿಯು ಅಷ್ಟೊಂದು ಸುಲಭವಾಗಿಲ್ಲ. ಎಲ್​ಎಸ್​ಜಿ ತಂಡವು ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೆ, ಇತರ ತಂಡಗಳ ಫಲಿತಾಂಶಗಳನ್ನು ಸಹ ಅವಲಂಬಿಸಬೇಕಾಗುತ್ತದೆ. ಈ ಗೆಲುವು ಖಂಡಿತವಾಗಿಯೂ ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಪಂತ್ ಪಡೆ ಈಗ ಉಳಿದ ಪಂದ್ಯಗಳನ್ನು ಮಾಡು ಇಲ್ಲವೇ ಮಡಿ ಎಂಬ ಮನೋಭಾವದಿಂದ ಎದುರುಸಬೇಕಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

ಅರ್ಷದೀಪ್ ಸುತ್ತ ಸುತ್ತುವ ಈ ಸುಂದರಿ ಯಾರು? ಈ ನಟಿಗೆ ಇದೆ ಬೇಡಿಕೆ – Kannada News | Arshdeep Singh and Samreen Kaur Dating: IPL Star and Punjabi Actress Spark Romance Rumors

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಮತ್ತು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಮಿಂಚುತ್ತಿರುವ ಅರ್ಷದೀಪ್ ಸಿಂಗ್ ಸದ್ಯ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ತಮ್ಮ ಮಾರಕ ಬೌಲಿಂಗ್‌ನಿಂದಲ್ಲ, ಬದಲಾಗಿ ತಮ್ಮ ವೈಯಕ್ತಿಕ ಜೀವನದಿಂದ. ಹೌದು, ಅರ್ಷದೀಪ್ ಸಿಂಗ್ ಅವರು ಖ್ಯಾತ ಪಂಜಾಬಿ ನಟಿ ಸಮ್ರೀನ್ ಕೌರ್ ಅವರೊಂದಿಗೆ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ.

ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದು ಪ್ರತ್ಯಕ್ಷ

ಇತ್ತೀಚೆಗೆ ಅಂದರೆ ಏಪ್ರಿಲ್ 22, 2026 ರಂದು ಪಂಜಾಬ್ ಕಿಂಗ್ಸ್ ತಂಡವು ಪಂದ್ಯಕ್ಕಾಗಿ ದೆಹಲಿಗೆ ಆಗಮಿಸಿದಾಗ, ಎಲ್ಲರ ಕಣ್ಣು ಅರ್ಷದೀಪ್ ಸಿಂಗ್ ಅವರ ಮೇಲಿತ್ತು. ಇದಕ್ಕೆ ಕಾರಣ, ಅವರು ವಿಮಾನ ನಿಲ್ದಾಣದಿಂದ ಹೊರಬರುವಾಗ ಒಬ್ಬ ಸುಂದರ ಯುವತಿಯ ಕೈ ಹಿಡಿದು ತಂಡದ ಬಸ್ಸಿನತ್ತ ಹೆಜ್ಜೆ ಹಾಕುತ್ತಿದ್ದರು. ಆ ಯುವತಿ ಬೇರೆ ಯಾರೂ ಅಲ್ಲ, ಪಂಜಾಬಿ ಚಿತ್ರರಂಗದ ಉದಯೋನ್ಮುಖ ತಾರೆ ಸಮ್ರೀನ್ ಕೌರ್. ಅಂದಿನಿಂದ ಅಭಿಮಾನಿಗಳು ಈ ಜೋಡಿಯ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕಲಾರಂಭಿಸಿದ್ದಾರೆ.

ಯಾರು ಈ ಸಮ್ರೀನ್ ಕೌರ್?

26 ವರ್ಷದ ಸಮ್ರೀನ್ ಕೌರ್ ಮೂಲತಃ ಜಮ್ಮು ಮತ್ತು ಕಾಶ್ಮೀರದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ವೃತ್ತಿಯಿಂದ ನಟಿ ಮತ್ತು ಮಾಡೆಲ್. ಅರ್ಷದೀಪ್‌ಗಿಂತ ಒಂದು ವರ್ಷ ಚಿಕ್ಕವರಾಗಿರುವ ಸಮ್ರೀನ್, ತಮ್ಮ ವೃತ್ತಿಜೀವನವನ್ನು ಸೌಂದರ್ಯ ಸ್ಪರ್ಧೆಗಳ ಮೂಲಕ ಆರಂಭಿಸಿದ್ದರು. 2018ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿಷ್ಠಿತ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ ಖ್ಯಾತಿ ಇವರದ್ದು.

ಸಿನಿಮಾ ಪ್ರಯಾಣ ಮತ್ತು ಸಾಧನೆ:

ಸಮ್ರೀನ್ ಕೌರ್ ಈಗಾಗಲೇ ಬಾಲಿವುಡ್ ಮತ್ತು ಪಂಜಾಬಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ರಣವೀರ್ ಸಿಂಗ್ ಅಭಿನಯದ ’83’ ಸಿನಿಮಾದಲ್ಲಿ ಅಮ್ಮಿ ವಿರ್ಕ್ ಅವರ ನಿಶ್ಚಿತಾರ್ಥದ ಹುಡುಗಿಯ ಪಾತ್ರದಲ್ಲಿ ಸಮ್ರೀನ್ ಮಿಂಚಿದ್ದರು. ಅಲ್ಲದೆ, ಪಂಜಾಬಿ ಸೂಪರ್ ಸ್ಟಾರ್ ದಿಲ್ಜಿತ್ ದೋಸಾಂಜ್ ಅವರ ‘ಸದಾರ್ ಜಿ 2’ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಕೇವಲ ಸಿನಿಮಾಗಳಷ್ಟೇ ಅಲ್ಲದೆ, ಬಾದ್‌ಶಾ ಮತ್ತು ಗುರು ರಾಂಧವಾ ಅವರಂತಹ ಖ್ಯಾತ ಗಾಯಕರ ಆಲ್ಬಂ ಹಾಡುಗಳಲ್ಲೂ ಸಮ್ರೀನ್ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಇವರಿಗೆ ಬರೊಬ್ಬರಿ 4.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಇದನ್ನೂ ಓದಿ: ತಂಡದಿಂದ ದೂರ; ಈ ಐಪಿಎಲ್‌ನಲ್ಲಿ ಧೋನಿ ಆಡುವುದು ಅನುಮಾನ?

ಪ್ರೇಮ ಪಕ್ಷಿಗಳ ಡೇಟಿಂಗ್:

ಅರ್ಷದೀಪ್ ಅವರು ಐಪಿಎಲ್ ಆಡುವ ಹೆಚ್ಚಿನ ನಗರಗಳಿಗೆ ಸಮ್ರೀನ್ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಸಮ್ರೀನ್ ಗ್ಯಾಲರಿಯಲ್ಲಿ ಕುಳಿತು ಅರ್ಷದೀಪ್ ಅವರನ್ನು ಹುರಿದುಂಬಿಸುತ್ತಿದ್ದ ಫೋಟೋಗಳು ವೈರಲ್ ಆಗಿವೆ. ಅಷ್ಟೇ ಅಲ್ಲದೆ, ಇವರಿಬ್ಬರೂ ಚಂಡೀಗಢ ವಿಮಾನ ನಿಲ್ದಾಣ ಮತ್ತು ಗುರುದ್ವಾರಕ್ಕೂ ಒಟ್ಟಿಗೆ ಭೇಟಿ ನೀಡಿದ್ದು, ಇವರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿರುವುದು ಬಹುತೇಕ ಖಚಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಕಿ ಬಾಲ್​ಗೆ ಕಂಗಾಲಾದ ವಿರಾಟ್; ಕೊಹ್ಲಿ ಡಕ್​ ಔಟ್ ಮಾಡಲು ಬೇಕಾಯ್ತು 8 ವರ್ಷ – Kannada News | RCB’s 9 Run Defeat to LSG: Virat Kohli’s Historic Duck Shocks Fans in IPL Thriller

ಎಲ್​​ಎಸ್​​ಜಿ ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿ ತಂಡ ಸೋತಿದೆ. ರೋಚಕ ಪಂದ್ಯದಲ್ಲಿ ಆರ್​​ಸಿಬಿ 9 ರನ್​​ಗಳ ಸೋಲು ಕಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಕ್ ಬಿದ್ದಿದ್ದಾರೆ. ಒಂದೆಡೆ ವಿರಾಟ್ ಕೊಹ್ಲಿ ಅವರ ಅಪರೂಪದ ‘ಡಕ್ ಔಟ್’ ಅಭಿಮಾನಿಗಳಿಗೆ ಆಘಾತ ನೀಡಿದರೆ, ಮತ್ತೊಂದೆಡೆ ರಿಷಬ್ ಪಂತ್ ನೇತೃತ್ವದ ತಂಡ ಸತತ ಆರು ಸೋಲುಗಳ ನಂತರ ಗೆಲುವಿನ ಹಳಿಗೆ ಮರಳಿದೆ.

209 ರನ್​​ಗಳ (19 ಓವರ್) ಬೃಹತ್ತ ಮೊತ್ತ ಬೆನ್ನು ಹತ್ತಿದ ಆರ್​​ಸಿಬಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಕೊಹ್ಲಿ ಹಾಗೂ ಬೆತೆಲ್ ಔಟ್ ಆದರು. ಪಂದ್ಯದ ಗೆಲುವಿನಲ್ಲಿ 24 ವರ್ಷದ ಯುವ ವೇಗಿ ಯಾದವ್ ಪ್ರಮುಖ ಪಾತ್ರ ವಹಿಸಿದರು. ಕೇವಲ 33 ರನ್ ನೀಡಿ 3 ವಿಕೆಟ್ ಕಬಳಿಸಿದ ಇವರು, ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೊಹ್ಲಿ ಔಟ್ ಆದ ಬಳಿಕ ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟಿದಾರ್ ನಡುವಿನ 95 ರನ್‌ಗಳ ಜೊತೆಯಾಟವನ್ನು ಮುರಿಯುವ ಮೂಲಕ ಪಂತ್ ಪಡೆಗೆ ಗೆಲುವಿನ ಹಾದಿಯನ್ನು ಸುಗಮ ಮಾಡಿದರು. ಅದೇ ಓವರ್‌ನಲ್ಲಿ ಜಿತೇಶ್ ಶರ್ಮಾ ಅವರ ವಿಕೆಟ್ ಕೂಡ ಪಡೆದ ಯಾದವ್, ಅಂತಿಮವಾಗಿ 9 ರನ್‌ಗಳ ರೋಚಕ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಅಚ್ಚರಿ ಮೂಡಿಸಿದರು. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ, 269 ಇನಿಂಗ್ಸ್‌ಗಳನ್ನು ಆಡಿರುವ ಕೊಹ್ಲಿಕೇವಲ 11ನೇ ಬಾರಿಗೆ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ವಿಶೇಷವೆಂದರೆ, ರನ್ ಚೇಸಿಂಗ್ ವೇಳೆ ಅವರು ಔಟಾಗುತ್ತಿರುವುದು ಇದು 6ನೇ ಬಾರಿ.

ಇದನ್ನೂ ಓದಿ:  ಲಕ್ನೋ ವಿರುದ್ಧ ಆರ್​​ಸಿಬಿಗೆ 9 ರನ್ ಸೋಲು​

ವಿರಾಟ್ ಕೊಹ್ಲಿ ರನ್ ಚೇಸಿಂಗ್ ವೇಳೆ ಶೂನ್ಯಕ್ಕೆ ಔಟಾಗಿ ಬರೋಬ್ಬರಿ 3,301 ದಿನಗಳು ಕಳೆದಿವೆ. ಅಂದರೆ ಸುಮಾರು 8 ವರ್ಷಗಳು. ಕೊನೆಯ ಬಾರಿಗೆ 2017ರ ಏಪ್ರಿಲ್ 23ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಮೊದಲ ಎಸೆತದಲ್ಲೇ ಔಟ್ ಆಗಿದ್ದರು. ಅಂದು ಆರ್‌ಸಿಬಿ ತಂಡವು ಐಪಿಎಲ್ ಇತಿಹಾಸದ ಕನಿಷ್ಠ ಮೊತ್ತವಾದ 49 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಡಕ್ ಬಿದ್ದಿದ್ದು ಇದೇ ಮೊದಲು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:39 am, Fri, 8 May 26

Source link

LSG vs RCB: ಆರ್​ಸಿಬಿ ಸೋಲಿಗೆ ಕಾರಣವಾಗಿದ್ದು ಕೊನೆಯಲ್ಲಿ ರಿಷಭ್ ಪಂತ್ ತೆಗೆದುಕೊಂಡ ಆ ಒಂದು ನಿರ್ಧಾರ – Kannada News | LSG vs RCB IPL 2026 Rishabh Pant’s one decision at the end led to RCB’s defeat

ಬೆಂಗಳೂರು (ಮೇ. 08): ಐಪಿಎಲ್ 2026 ರಲ್ಲಿ ಗುರುವಾರ ಏಕಾನಾ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗೆಲುವು ಸಾಧಿಸಿದೆ. ಈ ಪಂದ್ಯ ಕೊನೆಯ ಓವರ್ ವರೆಗೂ ರೋಚಕತೆಯಿಂದ ಕೂಡಿತ್ತು. 20ನೇ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲು 20 ರನ್‌ಗಳ ಅಗತ್ಯವಿದ್ದಾಗ, ಮೈದಾನದಲ್ಲಿ ಹೈವೋಲ್ಟೇಜ್ ನಾಟಕ ನಡೆಯಿತು. ಆ ಕ್ಷಣದಲ್ಲಿ, ರಿಷಭ್ ಪಂತ್ (Rishabh Pant) ತೆಗೆದುಕೊಂಡ ಆ ಒಂದು ನಿರ್ಧಾರ ಮತ್ತು ಅವರ ನಾಯಕತ್ವವು ಎಲ್​ಎಸ್​ಜಿ ತಂಡಕ್ಕೆ ಜಯವನ್ನು ಖಚಿತಪಡಿಸಿತು.

ಕೊನೆಯ ಓವರ್‌ನಲ್ಲಿ ರಿಷಭ್ ಪಂತ್ ದಿಟ್ಟ ಹೆಜ್ಜೆ

ಅನುಭವಿ ಶಹಬಾಜ್ ಅಹ್ಮದ್ ಮತ್ತು ಯುವ ದಿಗ್ವಿಜಯ್ ಸಿಂಗ್ ರಥಿ ಇಬ್ಬರೂ ಅಂತಿಮ ಓವರ್ ಎಸೆಯಲು ಸಿದ್ಧರಾಗಿದ್ದರು. ನಾಯಕ ರಿಷಭ್ ಪಂತ್ ಆರಂಭದಲ್ಲಿ ಶಹಬಾಜ್‌ಗೆ ಚೆಂಡನ್ನು ನೀಡಲು ಬಯಸಿದ್ದರು, ಆದರೆ ಮಿಚೆಲ್ ಮಾರ್ಷ್ ಅವರೊಂದಿಗೆ ಸಮಾಲೋಚಿಸಿದ ನಂತರ, ನಿರ್ಧಾರವನ್ನು ಬದಲಾಯಿಸಲಾಯಿತು ಮತ್ತು ಚೆಂಡನ್ನು ರಥಿಗೆ ನೀಡಲಾಯಿತು. ಈ ಸಮಯದಲ್ಲಿ, ಶಹಬಾಜ್ ತುಂಬಾ ಕೋಪಗೊಂಡಂತೆ ಕಂಡುಬಂದರು ಮತ್ತು ಪಂತ್‌ಗೆ ಚೆಂಡನ್ನು ನೀಡುವಂತೆ ಒತ್ತಾಯಿಸಿದರು. ಪರಿಸ್ಥಿತಿ ಎಷ್ಟು ಉದ್ವಿಗ್ನವಾಯಿತು ಎಂದರೆ ನಾಯಕ ಪಂತ್ ಮೈದಾನದಲ್ಲಿ ಶಹಬಾಜ್‌ ಮೇಲೆ ಕೋಪಗೊಂಡರು. ಕೊನೆಯಲ್ಲಿ, ಪಂತ್ ತಮ್ಮ ನಿರ್ಧಾರದಲ್ಲಿ ದೃಢವಾಗಿ ಉಳಿದು ಚೆಂಡನ್ನು ರಥಿಗೆ ನೀಡಿದರು.

ದಿಗ್ವಿಜಯ್ ರಥಿ ಅವರ ಕೊನೆಯ ಮ್ಯಾಜಿಕ್ ಓವರ್

ಪಂತ್ ಅವರ ಈ ದೊಡ್ಡ ನಿರ್ಧಾರ ಫಲ ನೀಡಿತು, ಮತ್ತು ರಥಿ ತನ್ನ ಸ್ಪಿನ್‌ನಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಸಿಲುಕಿಸಿ, ಅವರು ಗೆರೆ ದಾಟದಂತೆ ತಡೆದರು. ರೊಮಾರಿಯೊ ಶೆಫರ್ಡ್ ಮತ್ತು ಕೃನಾಲ್ ಪಾಂಡ್ಯ ಅವರಂತಹ ಆಟಗಾರರು ಓವರ್‌ನಲ್ಲಿ ಒಂದೇ ಒಂದು ಸಿಕ್ಸರ್ ಹೊಡೆಯದಂತೆ ದಿಗ್ವೇಶ್ ತಡೆದರು. ದಿಗ್ವೇಶ್ ಕೇವಲ 10 ರನ್‌ಗಳನ್ನು ಬಿಟ್ಟುಕೊಟ್ಟರು, ಅಂತಿಮವಾಗಿ ಆರ್‌ಸಿಬಿ 9 ರನ್‌ಗಳಿಂದ ಪಂದ್ಯವನ್ನು ಸೋತಿತು.

ಬೆಂಕಿ ಬಾಲ್​ಗೆ ಕಂಗಾಲಾದ ವಿರಾಟ್; ಕೊಹ್ಲಿ ಡಕ್​ ಔಟ್ ಮಾಡಲು ಬೇಕಾಯ್ತು 8 ವರ್ಷ

ಪಂತ್ ಮಾಸ್ಟರ್ ಸ್ಟ್ರೋಕ್ ಗೆಲುವಿಗೆ ಕಾರಣ

ಲಕ್ನೋ ತಂಡವು ಪಂದ್ಯವನ್ನು 9 ರನ್‌ಗಳಿಂದ ಗೆದ್ದಿತು. ಪಂತ್ ಶಹಬಾಜ್ ಅವರ ಒತ್ತಾಯಕ್ಕೆ ಮಣಿದಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು, ಆದರೆ ಯುವ ದಿಗ್ವಿಜಯ್ ರಥಿಯನ್ನು ನಂಬಿದ್ದು ಪಂದ್ಯ ಗತಿಯನ್ನೇ ಬದಲಾಯಿಸಿತು. ರಥಿ ಒತ್ತಡವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಮಾತ್ರವಲ್ಲದೆ ರೊಮಾರಿಯೊ ಶೆಫರ್ಡ್‌ನಂತಹ ಅಪಾಯಕಾರಿ ಹಿಟ್ಟರ್​ ಅನ್ನು ತಮ್ಮ ನಿಖರವಾದ ಗೂಗ್ಲಿಗಳೊಂದಿಗೆ ದೂರವಿಟ್ಟರು. ಈ ಗೆಲುವಿನೊಂದಿಗೆ, ಲಕ್ನೋ ತನ್ನ ಪ್ಲೇಆಫ್ ಭರವಸೆಯನ್ನು ಇನ್ನೂ ಉಳಿಸಿಕೊಂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ! – Kannada News | Tamil Nadu Govt Formation: Vijay’s TVK Eyes Magic Number as AIADMK Faces Split and Resort Politics Begins

ಚೆನ್ನೈ, ಮೇ 7: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 107 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಯ ಮ್ಯಾಜಿಕ್ ನಂಬರ್ ತಲುಪಲು ತೀವ್ರ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಬೇಕು. 118 ಶಾಸಕರ ಪಟ್ಟಿ ನೀಡುವಂತೆ ವಿಜಯ್​​ ರಾಜ್ಯಪಾಲರು ಸೂಚಿಸಿದ್ದಾರೆ. ಟಿವಿಕೆ ಬಳಿ ಪ್ರಸ್ತುತ 112 ಶಾಸಕರ ಬೆಂಬಲವಿದೆ (ಟಿವಿಕೆಯ 107 + ಕಾಂಗ್ರೆಸ್‌ನ 5 ಶಾಸಕರು). ಇನ್ನು ಕೇವಲ 6 ಶಾಸಕರ ಬೆಂಬಲ ಸಿಕ್ಕರೆ ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತ.

ಏತನ್ಮಧ್ಯೆ ಎಐಎಡಿಎಂಕೆಯ (AIADMK) ಸಿ.ವಿ. ಷಣ್ಮುಗಂ ಬಣದ ಶಾಸಕರು ಟಿವಿಕೆಗೆ ಬೆಂಬಲ ನೀಡುವಂತೆ ಪಳನಿಸ್ವಾಮಿಗೆ ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ಬೆಂಬಲ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಪುದುಚೇರಿಯ ರೆಸಾರ್ಟ್‌ಗೆ ಎಐಎಡಿಎಂಕೆಯ 28 ಶಾಸಕರನ್ನು ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಪಳನಿಸ್ವಾಮಿ ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅತ್ತ ಡಿಎಂಕೆ ಶಾಸಕರು ಮೇ 10ರವರೆಗೆ ಚೆನ್ನೈ ಬಿಟ್ಟು ಹೋಗದಂತೆ ನಿರ್ಗಮಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಜಯ್ ಸರ್ಕಾರ ರಚನೆ ಮಾಡಲಿ, ನಾವು ಆರು ತಿಂಗಳವರೆಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಸ್ಟಾಲಿನ್ ಗುರುವಾರ ಅಚ್ಚರಿಯ ಹೇಳಿಕೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಅಂತೂ ಸುಧಾರಿಸಿತು ಬೆಂಗಳೂರಿನ ವಾಯು ಗುಣಮಟ್ಟ! – Kannada News | Bengaluru Air Quality gets better, Mangalore AQI is also Good

ಅಂತೂ ಸುಧಾರಿಸಿತು ಬೆಂಗಳೂರಿನ ವಾಯು ಗುಣಮಟ್ಟ!

ಬೆಂಗಳೂರು, ಮೇ 08: ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ಏರ್ ಕ್ವಾಲಿಟಿ  (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಮಂಗಳೂರು ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಕೇವಲ 66ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಏರ್ ಕ್ವಾಲಿಟಿ ಇಂದು 86ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 66
  • ಮಂಗಳೂರು-86
  • ಮೈಸೂರು – 74
  • ಬೆಳಗಾವಿ – 68
  • ಕಲಬುರ್ಗಿ-64
  • ಶಿವಮೊಗ್ಗ –66
  • ಬಳ್ಳಾರಿ – 86
  • ಹುಬ್ಬಳ್ಳಿ- 87
  • ಉಡುಪಿ –64
  • ವಿಜಯಪುರ – 67

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ಮುನ್ಸೂಚನೆ: ಮುಂದಿನ 3 ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ – Kannada News | Karnataka Weather Forecast: IMD Predicts Thunderstorms and Heavy Rain Across State for Next 3 Days

ಬೆಂಗಳೂರು, ಮೇ 8: ರಾಜ್ಯದ ಜನತೆಗೆ ಬಿಸಿಲಿನ ಬೇಗೆಯಿಂದ ಕೊಂಚ ಉಪಶಮನ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಭಾರತೀಯ ಹವಾಮಾನ ಇಲಾಖೆ (IMD Bengaluru) ನೀಡಿರುವ ಮುನ್ಸೂಚನೆಯಂತೆ (Weather Forecast), ಮುಂದಿನ ಮೂರು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಮುಖ್ಯಾಂಶಗಳು

  • ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಎಚ್ಚರಿಕೆ.
  • ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ.
  • ಬೆಂಗಳೂರಿನಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯ ಮುನ್ಸೂಚನೆ.

ಎಲ್ಲೆಲ್ಲಿ ಮಳೆಯಾಗಲಿದೆ?

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮೇ 8 ಮತ್ತು 9 ರಂದು ಗುಡುಗು ಸಹಿತ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಉತ್ತರ ಒಳನಾಡಿನ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮೇ 8 ರಂದು ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

ಮುಂದುವರಿಯಲಿದೆ ಗರಿಷ್ಠ ತಾಪಮಾನ

ಮಳೆಯ ಮುನ್ಸೂಚನೆಯಿದ್ದರೂ ರಾಜ್ಯದ ಗರಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 38 ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ಮುಂದುವರಿಯಲಿದೆ. ಮಳೆಯ ಸಮಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.

ಬೆಂಗಳೂರು ಹವಾಮಾನ ಮುನ್ಸೂಚನೆ

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮುಂದಿನ 24 ರಿಂದ 48 ಗಂಟೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಗರದ ಗರಿಷ್ಠ ತಾಪಮಾನ 33 ಡಿಗ್ರಿ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ ಎಂದು ಐಎಂಡಿಯ ಬೆಂಗಳೂರು ಕೇಂದ್ರದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version