ದಿನ ಭವಿಷ್ಯ: ಈ ರಾಶಿಯವರಿಂದ ಇಂದು ಅಧಿಕಾರವನ್ನು ಕಸಿದುಕೊಳ್ಳುವ ಸಂಭವ – Kannada News | Horoscope May 08 Thursday 2026; Dina Rashi Bhavishya Today, Checkout the details here

ಮೇಷ ರಾಶಿ:

ವೃತ್ತಿ ಜೀವನದಲ್ಲಿ ಹೊಸ ರೀತಿಯ ಒತ್ತಡ ಎದುರಿಸಬೇಕಾಗಬಹುದು. ಆರ್ಥಿಕ ನಿರ್ವಹಣೆಯಲ್ಲಿ ಸಮರ್ಪಕ ವ್ಯವಸ್ಥೆ ಅಗತ್ಯ. ಹೊಸ ಸಂಬಂಧಗಳನ್ನೊಳಗೊಂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ಯಾವುದೇ ದಾಖಲೆಗಳಿಲ್ಲದೇ ವ್ಯವಹಾರ ಬೇಡ. ಅನಂತರ ಅದೇ ತಿರುಗು ಬಾಣವಾಗಿ ಚುಚ್ಚುವುದು. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ.

ವೃಷಭ ರಾಶಿ:

ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೋಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ಆರ್ಥಿಕ ಸ್ಥಿರತೆ ಹೆಚ್ಚಿಸಲು ಹೊಸ ಮಾರ್ಗಗಳ ಅನ್ವೇಷಣೆ ಅಗತ್ಯ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ದೈಹಿಕ ಶ್ರಮಕ್ಕೆ ಮಾನಸಿಕ ಸಮಾಧಾನ ನೀಡುವ ಕೆಲಸದಲ್ಲಿ ತೊಡಗಿರಿ. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲ‌ವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವ್ಯವಹಾರದಲ್ಲಿ ವಂಚನೆಯಾಗುವುದು ಗೊತ್ತಾಗಿ ಸರಿ ಮಾಡಿಕೊಳ್ಳುವಿರಿ.

ಮಿಥುನ ರಾಶಿ:

ವೃತ್ತಿ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶಗಳು ಬರುವುದು. ಕೊಟ್ಟಿದ್ದನ್ನು ಹಿಂದಿರುಗಿಸಲು ಕಾಯುವಿರಿ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಆತ್ಮವಿಶ್ವಾಸದಿಂದ ಕಾರ್ಯ ನಡೆಸಿ. ಸಂಬಂಧಗಳಲ್ಲಿ ಸ್ವಚ್ಚತೆ ಬೇಡಿಕೆಯಾಗಿದೆ. ಶಾಂತ ಮನಃಸ್ಥಿತಿಯಿಂದ ಸಮಸ್ಯೆ ಪರಿಹರಿಸಿ. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡಿ.

ಕರ್ಕಾಟಕ ರಾಶಿ:

ಅತಿಯಾದ ಪ್ರವಾಸಕ್ಕೆ ಮನಸ್ಸು ಮಾಡುವಿರಿ. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ತರ್ಕಬದ್ಧವಾದ ವಾದಕ್ಕೆ ಪ್ರಶಂಸೆ. ಅನುಭವದಿಂದ ಹೊಸ ಅವಕಾಶಗಳು ಲಭ್ಯ. ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳಿ. ಹಣಕಾಸಿನ ವಿಷಯದಲ್ಲಿ ಹೆಚ್ಚು ವೆಚ್ಚ ತಪ್ಪಿಸಿ. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಆಸ್ತಿಯ‌ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ.

ಸಿಂಹ ರಾಶಿ:

ಮೇಲಧಿಕಾರಿಗಳಿಗೆ ಇಷ್ಟವಾಗುವಂತೆ ಕಾರ್ಯ ಮಾಡಿ ಅವರಿಂದ ಪ್ರಶಂಸೆ ಪಡೆಯುವಿರಿ. ಆತ್ಮವಿಶ್ವಾಸ ಕಡಿಮೆಯಾಗುವ ಸಂದರ್ಭ ಎದುರಿಸಬಹುದು. ಹಣಕಾಸಿನ ವಿಚಾರದಲ್ಲಿ ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಪ್ರೀತಿಯ ಸಂಬಂಧಗಳಲ್ಲಿ ಚರ್ಚೆಯಿಂದ ಸಮಸ್ಯೆ ನಿವಾರಣೆ. ಸಂಗಾತಿಯಿಂದ ಪೂರ್ಣ ತೃಪ್ತಿ ಸಿಗದು. ಪ್ರಸಿದ್ಧ ಸಂಸ್ಥೆಯ ಉನ್ನತ ಅಧಿಕಾರದ ಪ್ರಾಪ್ತಿಯ ಅವಕಾಶವು ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು.

ಕನ್ಯಾ ರಾಶಿ:

ಉದ್ವೇಗಕ್ಕೆ ಒಳಗಾಗಲು ಅನೇಕ ಸಂದರ್ಭಗಳು ಬರಬಹುದು. ವೃತ್ತಿಯಲ್ಲಿ ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ದುಡುಕಿನಿಂದ ಮುನ್ನಡೆ ಬೇಡ. ಮನೆಗೆ ಬಂದ ಅತಿಥಿಗಳಿಂದ ಭವಿಷ್ಯಕ್ಕೆ ಸಹಾಯ ಸಿಗುವುದು. ಪ್ರೀತಿಪಾತ್ರರೊಂದಿಗೆ ಮನಸ್ತಾಪ ಪರಿಹರಿಸಿ. ಸಂಗಾತಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು. ಕೆಲವರಿಗೆ ಸೌಕರ್ಯಗಳು ಕಡಿಮೆಯಾದಂತೆ ಅನ್ನಿಸುವುದು.

ತುಲಾ ರಾಶಿ:

ದಾಯಾದಿಗಳ ಕಡೆಯವರಿಂದ ಮಾನಸಿಕ ಕಿರಿಕಿರಿ ಹೆಚ್ಚಾಗಲಿದೆ. ಇಂದು ನಿಮ್ಮ ‌ಮುಂದಿನ ಕಾರ್ಯಕ್ಕೆ ಅನುಕೂಲಕರವಾಗಿರಲಿದೆ. ಸರ್ಜನಾತ್ಮಕ ಕಾರ್ಯಗಳಲ್ಲಿ ಯಶಸ್ಸು ಸಾಧಿಸುವಿರಿ. ವೃತ್ತಿ ಜೀವನದಲ್ಲಿ ಅಡಚಣೆಗಳು ಪರಿಹಾರವಾಗುತ್ತವೆ. ಸಂಬಂಧಗಳಲ್ಲಿ ಸಹಕಾರ ಮತ್ತು ಮನವಿ ಮುಖ್ಯ. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ನಿಮ್ಮ ವರ್ತನೆಗಳು ಯಾರ ಮೇಲಾದರೂ ಪ್ರಭಾವ ಬೀರಬಹುದು.

ವೃಶ್ಚಿಕ ರಾಶಿ:

ನಿಃಸ್ವಾರ್ಥವಾಗಿ ಇಚಮಷ್ಟಪಡುವವರನ್ನು ಸಂಶಯಿಸಬೇಡಿ.‌ ನಿಮ್ಮ ಜೊತೆಗಿರುವವರು ಯಾರು ಯಾವ ರೀತಿಯವರು ಎಂಬುದು ಗೊತ್ತಾಗುತ್ತದೆ. ಸಹನೆ ಮೀರದಂತೆ ನೀವೇ ನೋಡಿಕೊಳ್ಳಬೇಕು. ವ್ಯಾಪಾರದಲ್ಲಿ ಲಾಭದಾಯಕ ಹೊಣೆಗಾರಿಕೆ ಬರುತ್ತದೆ. ಸ್ನೇಹಿತರಿಂದ ಉತ್ತಮ ಸಹಕಾರ ಲಭ್ಯ. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಮಕ್ಕಳ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿಯು ಸಿಗಬಹುದು.

ಧನು ರಾಶಿ:

ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ವಿವೇಕದಿಂದ ಸಂಕಷ್ಟಗಳನ್ನು ಪರಿಹರಿಸುವಿರಿ. ಆರ್ಥಿಕ ವ್ಯವಹಾರವನ್ನು ಅರ್ಥಮಾಡಿಕೊಂಡು ನಡೆಸಲಾಗದು. ಉದ್ಯೋಗದಲ್ಲಿ ಅಲ್ಪ ಸಮಸ್ಯೆ ಎದುರಾಗಬಹುದು, ಧೈರ್ಯದಿಂದ ಮುನ್ನಡೆಯಿರಿ. ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆಯಿಂದಿರಬೇಕು. ಯಾರದ್ದಾದರೂ ಮನವೊಲಿಸುವ ಕೆಲಸವು ನಿಮಗೆ ಬರಬಹುದು. ಇದರಿಂದ‌ ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ಸಾಲವನ್ನು ಸ್ವಲ್ಪವೂ ಉಳಿಯದಂತೆ ಮುಗಿಸಿ.

ಮಕರ ರಾಶಿ:

ಸಂಗಾತಿಗೆ ನೀವು ಸ್ನೇಹದಿಂದ ವರ್ತಿಸುವುದು ಇಷ್ಟವಗುವುದು. ಇಲ್ಲವಾದರೆ ಭಿನ್ನಾಭಿಪ್ರಾಯಗಳು ಸವಕಾಶ ಸಿಗುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮ ಫಲ ನೀಡಲಿದೆ. ಅನಾರೋಗ್ಯದಿಂದ ಮಾಡುವ ಕಾರ್ಯ ಅರ್ಧಕ್ಕೆ ಸ್ಥಗಿತ. ಸಹೋದ್ಯೋಗಿಗಳ ಸಹಕಾರ ದೊರೆಯಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಸಂಯಮ ಇರಲಿ. ಹಣದ ಹರಿವು‌ ಕಡಿಮೆ ಇರುವುದರಿಂದ ಖರ್ಚನ್ನು ಸರಿಯಾಗಿ ನಿಭಾಯಿಸುವುದು ಒಳ್ಳೆಯದು. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ.

ಕುಂಭ ರಾಶಿ:

ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸಹೋದ್ಯೋಗಿಗಳ ಬೆಂಬಲ ನಿಮ್ಮ ಮನೋಬಲ ಹೆಚ್ಚಿಸುತ್ತದೆ. ಆರ್ಥಿಕ ವಿಷಯಗಳಲ್ಲಿ ವ್ಯರ್ಥ ವೆಚ್ಚ ತಪ್ಪಿಸಿ. ಆರೋಗ್ಯದತ್ತ ಗಮನ ಹರಿಸುವುದು ಸೂಕ್ತ. ಸಂಬಂಧಗಳಲ್ಲಿ ಸಮಾಲೋಚನೆ ಮಾಡಿ ನಿರ್ಧಾರ ಕೈಗೊಳ್ಳಿ. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು.

ಮೀನ ರಾಶಿ:

ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಆತ್ಮವಿಶ್ವಾಸ ಮತ್ತು ದೃಢ ನಿರ್ಧಾರಗಳಿಂದ ಯಶಸ್ಸು. ಹೊಸ ಕಾರ್ಯಗಳ ಯೋಜನೆ ಸಕಾರಾತ್ಮಕ ಫಲ ನೀಡುವುದು. ಕುಟುಂಬದಲ್ಲಿ ಸಂಧಾನ ಮತ್ತು ಸಮರ್ಪಣೆ ಮುಖ್ಯ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅಗತ್ಯ. ಪ್ರೀತಿಯ ಸಂಬಂಧಗಳಲ್ಲಿ ನಿಷ್ಠೆ ಮತ್ತು ನಿಷ್ಠುರತೆಯ ಮಧ್ಯೆ ಸಮತೋಲನ ಕಾಯ್ದುಕೊಳ್ಳಿ. ಇಂದಿನ ಕಾರ್ಯಗಳಲ್ಲಿ ಪ್ರಗತಿ ಇರಲಿದ್ದು ಸಂತೋಷವಾಗುವುದು. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಬೆರೆಯುವುದು ಕಷ್ಟವಾದೀತು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಶುಭ, ಕರಣ : ಭದ್ರ, ಸೂರ್ಯೋದಯ – 06 – 00 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:46 – 12:21, ಯಮಗಂಡ ಕಾಲ 15:31 – 17:06, ಗುಳಿಕ ಕಾಲ 07:36 – 09:11

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಆಪರೇಷನ್ ಸಿಂಧೂರ್ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ರಾಜನಾಥ್ ಸಿಂಗ್ – Kannada News | Union Minister Rajnath Singh Releases Documentary On Operation Sindoor

ಜೈಪುರ, ಮೇ 7: ಆಪರೇಷನ್ ಸಿಂಧೂರ್‌ನ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ರಾಜನಾಥ್ ಸಿಂಗ್ (Rajnath Singh) ಇಂದು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಜೈಪುರದಲ್ಲಿ ನಡೆದ ಜಂಟಿ ಕಮಾಂಡರ್‌ಗಳ ಸಮ್ಮೇಳನದ ಸಂದರ್ಭದಲ್ಲಿ 28 ನಿಮಿಷಗಳ ಈ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ. 28 ನಿಮಿಷಗಳ ಈ ಸಾಕ್ಷ್ಯಚಿತ್ರವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪೂರ್ತಿ ಮಾಹಿತಿ ನೀಡುತ್ತದೆ.

ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಉಪಗ್ರಹಗಳನ್ನು ಗಡಿಯಾಚೆಗಿನ ಟಾರ್ಗೆಟ್​​ಗಳನ್ನು ಪತ್ತೆಹಚ್ಚುವಲ್ಲಿ ಹೇಗೆ ಬಳಸಲಾಗಿತ್ತು ಎಂಬುದನ್ನು ಈ ಸಾಕ್ಷ್ಯಚಿತ್ರ ತೋರಿಸುತ್ತದೆ. ಇದು ಭಾರತದ ಮಿಲಿಟರಿ ಕಾರ್ಯಾಚರಣೆಯ ಯೋಜನಾ ಹಂತದಲ್ಲಿ ಒಳಗೊಂಡಿರುವ ಸಂಕೀರ್ಣತೆಯ ಬಗ್ಗೆಯೂ ವಿವರಗಳನ್ನು ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಾಕ್ಷ್ಯಚಿತ್ರದಲ್ಲಿ ಇದ್ದಾರೆ.

ಇದನ್ನೂ ಓದಿ: Video: ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧದ ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ

ಭಾರತದ ಆಪರೇಷನ್ ಸಿಂಧೂರ್ ಗಡಿಯುದ್ದಕ್ಕೂ ಭಯೋತ್ಪಾದಕ ಮೂಲಸೌಕರ್ಯ ಮತ್ತು ಮಿಲಿಟರಿ ಸ್ವತ್ತುಗಳ ಮೇಲೆ ಭಾರೀ ಹಾನಿಯನ್ನು ಉಂಟುಮಾಡಿತು. ಭಾರತದ ಮಟ್ಟಿಗೆ ಈ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮಹತ್ವದ್ದಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಪರೇಷನ್ ಸಿಂಧೂರ್ ಅನ್ನು ಆಧುನಿಕ ಯುದ್ಧದ ಮಾನದಂಡ ಎಂದು ಬಣ್ಣಿಸಿದರು. ಕಳೆದ ವರ್ಷ ಮೇ 7ರಂದು, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ 100 ಭಯೋತ್ಪಾದಕರು ಸಾವನ್ನಪ್ಪಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿ ಪೊಲೀಸರ ಭರ್ಜರಿ ಕಾರ್ಯಚರಣೆ: 1.44 ಕೋಟಿ ರೂ ಮೌಲ್ಯದ 785 ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ? – Kannada News | Kalaburagi Police Recover 785 Lost Phones Worth 1.44 Crore Using CEIR Portal

ಕಲಬುರಗಿ, ಮೇ 07: ನಗರ ಪೊಲೀಸರು ಕಳೆದ ಎರಡು ತಿಂಗಳಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯ ಮೂಲಕ ಸಿಇಐಆರ್ (CEIR) ಪೋರ್ಟಲ್ ಬಳಸಿ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳೆದುಹೋಗಿದ್ದ ದಾಖಲೆ ಮಟ್ಟದ ಬರೋಬ್ಬರಿ 1,44,90,000 ರೂ ಮೌಲ್ಯದ 785 ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ವಿವಿಧ ಕಂಪನಿಗಳ ಈ ಕೋಟ್ಯಂತರ ರೂ ಮೌಲ್ಯದ ಮೊಬೈಲ್ ಫೋನ್‌ಗಳನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ, ಮಾಲೀಕರಿಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದ ಮೊಬೈಲ್ ಫೋನ್‌ಗಳನ್ನು ಮರಳಿ ವಾರಸುದಾರರಿಗೆ ತಲುಪಿಸಿರುವುದು ಪೊಲೀಸ್ ಇಲಾಖೆಯ ದಕ್ಷತೆಗೆ ಸಾಕ್ಷಿಯಾಗಿದೆ. ತಾಂತ್ರಿಕ ನೆರವಿನೊಂದಿಗೆ ಕಳೆದುಹೋದ ಮೊಬೈಲ್​​ಗಳನ್ನು ಪತ್ತೆ ಹಚ್ಚಲಾಗಿದೆ. ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಹೇಳಿದ್ದಾರೆ. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಬಿಲ್ ಇಲ್ಲದ ಅಥವಾ ಸೂಕ್ತ ದಾಖಲೆಗಳಿಲ್ಲದ ಮೊಬೈಲ್ ಫೋನ್‌ಗಳನ್ನು ಯಾರೂ ಖರೀದಿಸಬಾರದು. ಒಂದು ವೇಳೆ ಕಳ್ಳತನದ ಫೋನ್ ಎಂದು ತಿಳಿದಿದ್ದರೂ ಖರೀದಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

LSG vs RCB: ಆರ್​ಸಿಬಿ ವಿರುದ್ಧ ಅಬ್ಬರಿಸಿ ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್ – Kannada News | Mitchell Marsh’s Explosive IPL 2026 Century: LSG’s Fastest Ever vs RCB!

ಐಪಿಎಲ್ 2026 ರ 50 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಸ್ಫೋಟಕ ಶತಕ ಸಿಡಿಸಿದರು. ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮಾರ್ಷ್​, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಲಕ್ನೋ ತಂಡದ ಪರ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಇದು ಐಪಿಎಲ್‌ನಲ್ಲಿ ಮಾರ್ಷ್​ ಅವರ ಎರಡನೇ ಶತಕವಾಗಿದ್ದರೆ, ಈ ಆವೃತ್ತಿಯಲ್ಲಿ ಮೊದಲ ಶತಕವಾಗಿದೆ.

ಮಳೆಯಿಂದ ಬಾಧಿತವಾದ ಈ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಕೂಡ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಕೇವಲ 49 ಎಸೆತಗಳಲ್ಲಿ 100 ರನ್ ಗಳಿಸಿದರು, ಇದು ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ಗಳಿಸಿದ ಅತ್ಯಂತ ವೇಗದ ಶತಕವಾಗಿದೆ. ಈ ಇನ್ನಿಂಗ್ಸ್‌ನಲ್ಲಿ ಅವರು ಒಂಬತ್ತು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳನ್ನು ಬಾರಿಸಿ ಶತಕ ತಲುಪಿದರು. ಇದಕ್ಕೂ ಮೊದಲು, ಕಳೆದ ವರ್ಷ ಇದೇ ಆರ್​ಸಿಬಿ ವಿರುದ್ಧ 54 ಎಸೆತಗಳಲ್ಲಿ ಶತಕ ಗಳಿಸಿದ್ದ ರಿಷಭ್ ಪಂತ್ ಈ ದಾಖಲೆಯನ್ನು ಹೊಂದಿದ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಮಾರ್ಷ್ 56 ಎಸೆತಗಳನ್ನು ಎದುರಿಸಿ ಒಟ್ಟು 111 ರನ್ ಬಾರಿಸಿದರು. ಇದರಲ್ಲಿ ಒಂಬತ್ತು ಬೌಂಡರಿಗಳು ಮತ್ತು ಅಷ್ಟೇ ಸಿಕ್ಸರ್‌ಗಳು ಸೇರಿದ್ದವು.

Source link

‘ಎರಡು ಚಿತ್ರದ ಜಗದೇಕವೀರ’ ಚೇತನ್​​ಗೆ ಜಗ್ಗೇಶ್ ಮಾತಿನ ಚಾಟಿ – Kannada News | Actor Jaggesh criticize Chetan Ahimsa’s statement about Dr Rajkumar’s memorial

ನಟ ಚೇತನ್ ಅಹಿಂಸ, ಡಾ ರಾಜ್​ಕುಮಾರ್ (Dr Rajkumar) ಅವರ ಸಮಾಧಿ ಕುರಿತು ಆಡಿರುವ ಅಸೂಕ್ಷ್ಮ ಮಾತುಗಳು ತೀವ್ರ ಟೀಕೆಗೆ, ನಿಂದನೆಗೆ ಗುರಿ ಆಗಿವೆ. ಕನ್ನಡಪರ ಸಂಘಟನೆಗಳು, ಅಣ್ಣಾವ್ರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಸಹ ನಡೆಸಿದ್ದಾರೆ. ಹಲವು ವಿಚಾರವಾದಿಗಳು, ಸಾಹಿತಿಗಳು ಸಹ ಚಿತ್ರರಂಗ ಹಾಗೂ ಕರ್ನಾಟಕಕ್ಕೆ ಅಣ್ಣಾವ್ರ ಕೊಡುಗೆಯನ್ನು ವಿವರಿಸಿದ್ದಾರೆ. ಇದೀಗ ನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಚಿತ್ರರಂಗಕ್ಕೆ ಅಣ್ಣಾವ್ರ ಮಹತ್ವದ ಕೊಡುಗೆಯನ್ನು ವಿವರಿಸಿರುವ ಜೊತೆಗೆ ಚೇತನ್ ಅಹಿಂಸ ಹೇಳಿಕೆಯನ್ನು ಟೀಕೆ ಮಾಡಿದ್ದಾರೆ.

‘ಹೋದವರೆಲ್ಲಾ ಒಳ್ಳೆಯವರು ನಮ್ಮ ಹಿರಿಯರು, ಆ ಹಿರಿಯರಲ್ಲಿ ನಮ್ಮ ತಂದೆ ತಾಯಿ ತಾತ ಅಜ್ಜಿ ವಂಶದ ಪರಂಪರೆಯೇ ಸೇರಿರುತ್ತದೆ ಅಲ್ಲವೆ? ಹಿರಿಯರು ಎಂದ ಮೇಲೆ ನಮ್ಮ ಮನೆಯವರೆ ಅಲ್ಲಾ ಸಂಬಂದಿಗಳು ಅಥವ ಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನಮ್ಮ ವಂಶದ ಹಿರಿಯರ ಸಮ ಅಲ್ಲವೆ? ಇದು ಹೇಳುವ ಕಾರಣ ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು, ಮನಸ್ಸಿಗೆ ಬಹಳ ನೋವುಂಟು ಮಾಡಿತು. ಆತನಿಗೆ ನನ್ನ ಕಿವಿಮಾತು 1954ರಲ್ಲಿ ಕನ್ನಡ ಚಿತ್ರರಂಗಕ್ಕೆ ನೆಲೆ ಬೆಲೆ ಇಲ್ಲದ ಕಾಲ. ಇರಲು ಸೂರಿಲ್ಲಾ ಉದರಕ್ಕೆ ತೃಪ್ತ ಆಹಾರವಿಲ್ಲಾ ಅಂಥಹ ಸಮಯದಿಂದ ಕನ್ನಡ ಚಿತ್ರರಂಗ ಕಟ್ಟಿ ಬೆಳೆಸಿ ಅರಮನೆಯಂತೆ ಮಾಡಿ ಹೋಗಿದ್ದಾರೆ.’ ಎಂದಿದ್ದಾರೆ ಜಗ್ಗೇಶ್.

‘ಇಂದು ಅದರ ಬೆಲೆ ಅರಿಯದೆ ಒಂದು ಅಥವ ಎರಡು ಚಿತ್ರಕ್ಕೆ ಜಗದೇಕವೀರರಂತೆ ಮಾತಾಡಿ ಮಲೀನವಾಗೋ ಸಂಪ್ರದಾಯ ಹುಟ್ಟಿ ಹಿರಿಯರೆಲ್ಲಾ ಮೂಖರಂತೆ ಯಾರ ತಂಟೆ ಬೇಡವೆಂದು ಉಳಿದುಬಿಟ್ಟಿದ್ದಾರೆ. ದ್ವನಿ ಎತ್ತಿದರೆ ಸರ್ಕಾರ ಬದಲಾಗುತ್ತಿತ್ತು ಅದು ರಾಜಣ್ಣನ ತಾಕತ್ತು, ಅಂಥಹ ಸಾಧಕ ಹೋದಾಗ ಇಡಿ ಚಿತ್ರರಂಗ ಸರ್ಕಾರ ಒಟ್ಟುಗೂಡಿ ಅವರ ಶ್ರಮಕ್ಕೆ ಗೌರವ ನೀಡಲು ಅವರ ಕೊನೆಯ ಚಿರನಿದ್ರೆಗೆ ಕಲಾವಿದರ ರಂಗಸ್ಥಳವನ್ನ ಪ್ರೀತಿಯ ಹಾಸಿಗೆ ಮಾಡಿ ಮಲಗಿಸಿದ್ದಾರೆ’ ಎಂದಿದ್ದಾರೆ ನಟ ಜಗ್ಗೇಶ್.

‘ಕಳೆದುಹೋದ ಸಮಯ ವಿಷಯ ಪ್ರಚಾರಕ್ಕಾಗಿ ಈಗ ಮಾತಾಡುವ ಚಿಕ್ಕಮನಸ್ಸು ಕಂಡು ಅಸಹ್ಯವಾಯಿತು. ಉತ್ತಮ ಚಿತ್ರಮಾಡಿ ಪ್ರೇಕ್ಷಕರ ರಂಜಿಸಿ ಹೆಸರುಮಾಡಿ (ಪ್ರೇಕ್ಷಕ ಇಷ್ಟಪಟ್ಟರೆ), ಇಲ್ಲದಿದ್ದರೆ ಗಳಿಸಿದ ಅಲ್ಪ ಹೆಸರು ಮಾಸಿ ಜೀವನ ರೋಸಿ ಹೋಗುತ್ತದೆ’ ಎಂದು ನಟ ಜಗ್ಗೇಶ್ ಕಿವಿಮಾತನ್ನು ನಟ ಚೇತನ್ ಅಹಿಂಸ ಕುರಿತು ಹೇಳಿದ್ದಾರೆ.

ಡಾ ರಾಜ್​ಕುಮಾರ್ ಅವರ ಅಪ್ಪಟ ಅಭಿಮಾನಿ ಜಗ್ಗೇಶ್. ಸಾಮಾಜಿಕ ಜಾಲತಾಣದಲ್ಲಿ ರಾಜ್​ಕುಮಾರ್ ಅವರ ಕುರಿತು ಹಲವು ಅಪರೂಪದ ಸಂಗತಿಗಳನ್ನು ಜಗ್ಗೇಶ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಚೇತನ್ ಅಹಿಂಸ ಆಡಿರುವ ಮಾತುಗಳು ಸಹಜವಾಗಿಯೇ ಅವರಿಗೆ ನೋವುಂಟು ಮಾಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫೋನ್‌ ಕಳೆದುಕೊಂಡು ಅಲೆದಾಡಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ? ಅನುಭವದ ಮಾತು ಕೇಳಿ – Kannada News | What you should do if you lose your phone, here Is Kalaburagi victim suggestions

ಕಲಬುರಗಿ, (ಮೇ 07): ಕಲಬುರಗಿ ನಗರ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ದಾಖಲೆ ಮಟ್ಟದ ಬರೋಬ್ಬರಿ 1,44,90,000 ರೂಪಾಯಿ ಮೌಲ್ಯದ ಮೊಬೈಲ್ ಪೋನ್ ಗಳನ್ನ ಪತ್ತೆ ಹಚ್ಚಿದ್ದಾರೆ. ಕಲಬುರಗಿ ನಗರ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ 785 ಮೊಬೈಲ್ ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಕೇವಲ ಎರಡು ತಿಂಗಳಲ್ಲಿ ಪತ್ತೆ ಮಾಡಿದ್ದು, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ವಾರಸುದಾರರಿಗೆ ಮರಳಿ ಮೊಬೈಲ್ ಹಸ್ತಾಂತರಿಸಿದರು. ಇನ್ನು ವ್ಯಕ್ತಿಯೋರ್ವ ಮೊಬೈಲ್ ಸಿಕ್ಕ ಖುಷಿಯನ್ನು ಟಿವಿ9 ಜೊತೆ ಹಂಚಿಕೊಂಡಿದ್ದು, ಮೊಬೈಲ್ ಕಳೆದು ಹೋದ ಬಳಿಕ ಏನು ಮಾಡಬೇಕು? ತಾನು ಏನು ಮಾಡಿದ್ದ ಎನ್ನುವುದನ್ನು ಅನುಭವನ್ನು ಹಂಚಿಕೊಂಡಿದ್ದಾರೆ. ನಿಮ್ಮ ಮೊಬೈಲ್ ಸಹ ಕಳೆದು ಹೋದರೆ ನೀವು ಇದೆ ಟ್ರಿಕ್ ಅನುಸರಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಡಿಎ ಆಸ್ತಿ ಮೇಲೆ ಬ್ರೋಕರ್ ಕಣ್ಣು: ನೌಕರನೆಂದು ನಂಬಿಸಿ ಸೈಟ್ ಕಬಳಿಸಿದ್ದ ಕಿಂಗ್‌ಪಿನ್ ಬಂಧನ – Kannada News | Fake BDA Employee Arrested in Bengaluru Property Grabbing Case

ಬೆಂಗಳೂರು, ಮೇ 07: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸುತ್ತಿದ್ದ ದೊಡ್ಡ ಜಾಲವೊಂದನ್ನು ಬಿಡಿಎ ಜಾಗೃತ ದಳ ಪತ್ತೆಹಚ್ಚಿದೆ. ಪ್ರಾಧಿಕಾರದ ನೌಕರನೆಂದು ಸುಳ್ಳು ಹೇಳಿ ಸೈಟ್ (Land Scam) ಪಡೆದಿದ್ದ ಬ್ರೋಕರ್ ನಾಗರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರೆ, ನೂರಾರು ಕೋಟಿ ರೂ ಮೌಲ್ಯದ ಜಾಗಕ್ಕೆ ಸ್ಕೆಚ್ ಹಾಕಿದ್ದ ಲಕ್ಷ್ಮೀನಾರಾಯಣ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಮುಖ್ಯಾಂಶಗಳು

  • ಗ್ರೂಪ್-ಡಿ ನೌಕರನ ಸೋಗಿನಲ್ಲಿ ವಂಚನೆ
  • ಅಧಿಕಾರಿಗಳು ಶಾಮೀಲು ಶಂಕೆ
  • 160 ಕೋಟಿ ಮೌಲ್ಯದ ಭೂಮಿಗೆ ಸ್ಕೆಚ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬಡಾವಣೆ ನಿರ್ಮಾಣ ಮಾಡಲಾಗಿತ್ತು. ಬಿಡಿಎನಲ್ಲಿ ಬ್ರೋಕರ್ ಆಗಿದ್ದ ನಾಗರಾಜ್​ ಎಂಬಾತ ತಾನು ಗ್ರೂಪ್ ಡಿ ನೌಕರ ಎಂದು ಹೇಳಿ ಸೈಟ್ ಮೇಲೆ ಕಣ್ಣು ಹಾಕಿದ್ದ. ಸುಳ್ಳು ದಾಖಲೆ ನೀಡಿ ಬಡಾವಣೆಯ ಸೈಟುಗಳನ್ನ ಪಡೆದಿದ್ದ ಆತ ಕೆಲ ಅಧಿಕಾರಿಗಳನ್ನು ಯಾಮಾರಿಸಿದ್ದ.

ಇದನ್ನೂ ಓದಿ: ಕೋಟ್ಯಂತರ ಮೌಲ್ಯದ ಜಮೀನು ಕಬಳಿಕೆಗೆ ಯತ್ನ: ಬದುಕಿರುವಾಗಲೇ ನಿವೃತ್ತ ಉದ್ಯೋಗಿಯ ಚಟ್ಟ ಕಟ್ಟಿದ ಭೂಗಳ್ಳರು

ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸಿದ ತನಿಖೆಯಲ್ಲಿ ಈತನ ಅಕ್ರಮ ಬಯಲಾಗಿತ್ತು. ನಾಗರಾಜ್  ಪ್ರಾಧಿಕಾರದ ನೌಕರನಲ್ಲ ಎಂಬುವುದು ಸಾಬೀತಾಗಿತ್ತು. ತನಿಖೆಯಲ್ಲಿ ನಾಗರಾಜ್ ಜೊತೆ ಬಿಡಿಎಯ ಕೆಲ ಅಧಿಕಾರಿಗಳು ಶಾಮೀಲಾಗಿರುವುದು ಕೂಡ ಪತ್ತೆಯಾಗಿತ್ತು. ನಾಗರಾಜ್ ಇದೇ ರೀತಿ 10ಕ್ಕೂ ಹೆಚ್ಚು ಕಡೆ ಸೈಟ್ ಗಳನ್ನ ಪಡೆದಿರುವುದು ಕೂಡ ಪತ್ತೆಯಾಗಿದೆ. ಈ ಹಿನ್ನಲೆ ಬಿಡಿಎ ಡಿವೈಎಸ್​ಪಿ ಹನುಮಂತರಾಯ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು. FIR ದಾಖಲಿಸಿಕೊಂಡ ಪೊಲೀಸರು ನಾಗರಾಜ್ ನನ್ನ ಬಂಧಿಸಿ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ‌ ನಡೆಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ 160 ಕೊಟಿ ರೂ ಮೌಲ್ಯದ ಜಾಗ ಮಾರಾಟಕ್ಕೆ ಸ್ಕೆಚ್

ಮತ್ತೊಂದೆಡೆ ಬಿಡಿಎ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಹೊರಟಿದ್ದ ಲಕ್ಷ್ಮೀನಾರಾಯಣ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಕಳೆದ ವಾರ ಶೇಷಾದ್ರಿಪುರಂ ಠಾಣೆಯಲ್ಲಿ ಲಕ್ಷ್ಮೀನಾರಾಯಣ್ ಗ್ಯಾಂಗ್ ಮೇಲೆ FIR ದಾಖಲಾಗಿತ್ತು. ಬೆಂಗಳೂರು ದಕ್ಷಿಣ ಕೊತ್ತನೂರಿನ ಬಿಡಿಎ ಜಾಗಕ್ಕೆ ಲಕ್ಷ್ಮೀನಾರಾಯಣ್ ನಕಲಿ ದಾಖಲೆ ಸೃಷ್ಟಿಸಿದ್ದ. ಸುಮಾರು 160 ಕೊಟಿ ರೂ ಮೌಲ್ಯದ ಜಾಗ ಮಾರಾಟ ಮಾಡಲು ಹೊರಟಿದ್ದ.

ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ

ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಬಿಡಿಎ, ತನಿಖೆ ನಡೆಸಿ ಲಕ್ಷ್ಮೀನಾರಾಯಣ್ ಮೇಲೆ ದೂರು ನೀಡಿದ್ದರು. ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಇತ್ತ ಲಕ್ಷ್ಮೀನಾರಾಯಣ್ ಎಸ್ಕೇಪ್ ಆಗಿದ್ದಾನೆ. ಅಲ್ಲದೇ ಪೊಲೀಸ್ ತನಿಖೆ ವೇಳೆ ಈತ ಇದೇ ರೀತಿ ನೂರಾರು ಕೋಟಿ ರೂ ಬಿಡಿಎ ಜಾಗ ಕಬಳಿಸಿರುವುದು ಪತ್ತೆಯಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಲಕ್ಷ್ಮೀನಾರಾಯಣ್​ಗಾಗಿ ಶೇಷಾದ್ರಿಪುರಂ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ವಾಕರ್ಸ್ ಅಸೋಸಿಯೇಷನ್ ವಿರೋಧ: ಏಕೆ?

ಒಟ್ಟಾರೆ ಬಿಡಿಎ ಜಾಗವನ್ನ ಕಂಡಕಂಡವರು ಲೂಟಿಗೆ ಮುಂದಾಗಿದ್ದಾರೆ‌. ಬೆಂಗಳೂರಿನಾದ್ಯಂತ ಹಲವು ಕಡೆ ಇದೇ ರೀತಿಯ ದೂರುಗಳು ದಾಖಲಾಗುತ್ತಿದ್ದು, ಬಿಡಿಎ ತನಿಖೆ ಚುರುಕುಗೊಳಿಸಿದೆ‌.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೇಂದ್ರದ ವಿರುದ್ಧ ಮತ್ತೆ ಸಿಡಿದೆದ್ದ ರಾಜ್ಯ ಸರ್ಕಾರ, ವಿಬಿ ಜಿ ರಾಮ್ ಜೀ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲು ತೀರ್ಮಾನ – Kannada News | Karnataka cabinet decides Going Court Against Union Governmnet for Changed MGNREGA as VB G RAM G

ಬೆಂಗಳೂರು, (ಮೇ 07): ಮನ್​ರೇಗಾ (MGNREGA) ಎನ್ನುವುದನ್ನು ವಿಬಿ ಜಿ ರಾಮ್ ಜೀ (VB-G RAM G) ಎಂದು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಮೊರೆ ಹೋಗಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಸಂಬಂಧ ಇಂದು (ಮೇ 07) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಚರ್ಚಿಸಿದ್ದು, ಮನ್​ರೇಗಾ ಹೆಸರು ಬದಲಾವಣೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ. ಈ ಬಗ್ಗೆ ಕಾನೂನು ಸಚಿವ ಎಚ್​​ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

  • ಮನ್​ರೇಗಾ ಹೆಸರು ಬದಲಾವಣೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ
  • ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
  • ವಿಬಿ ಜಿ ರಾಮ್ ಜೀ ಎಂದು ಬದಲಿಸಿದ್ದ ಕೇಂದ್ರ ಸರ್ಕಾರ

ಇದನ್ನೂ ಓದಿ: G-RAM-G: ಜಿ ರಾಮ್‌ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ

ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್​​ಕೆ ಪಾಟೀಲ್, ಮನ್​ರೇಗಾವನ್ನು ವಿಬಿ ಜಿ ರಾಮ್ ಜೀ ಎಂದು ಬದಲಿಸಿದ ಕೇಂದ್ರ ಸರ್ಕಾರ ನಡೆಯನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ಸಂಪುಟದಲ್ಲಿ ನಿರ್ಧರಿಸಿದ್ದೇವೆ. ಈ ಬಗ್ಗೆ ಸಂಪುಟ ಸಭೆಯಲ್ಲಿ 15 ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಮನ್​ರೇಗಾ ಸ್ಥಗಿತ ಮಾಡಿದ್ದರಿಂದ ಬಡವರಿಗೆ ಅನಾನುಕೂಲವಾಗಲಿದೆ. ಹೀಗಾಗಿ ಮನ್​ರೇಗಾ ಮರು ಸ್ಥಾಪನೆಗೆ ನಾವು ಚಳವಳಿ ಮಾಡಿದ್ದೆವು. ಮೇ ತಿಂಗಳಾದರೂ ವಿಬಿ ಜಿ ರಾಮ್​​ಜೀ ನೋಟಿಫೈ ಆಗಿಲ್ಲ. ಇದುವರೆಗೆ ವಿಬಿ ಜಿ ರಾಮ್​​ಜೀ ದೇಶದಲ್ಲಿ ಇನ್ನೂ ಬಂದಿಲ್ಲ. ಮನ್​ರೇಗಾ ಬಾಕಿ ಕೆಲಸ ಮುಂದುವರಿಸಬಹುದೆಂದು ಆದೇಶಿಸಿದೆ. ಆದರೆ ಕೇಂದ್ರ ಸರ್ಕಾರ ಯಾವುದೇ ಅನುದಾನ ನೀಡಿಲ್ಲ ಎಂದು ಹೇಳಿದರು.

ಈ ಬಾರಿ ಮಳೆ ಕೊರತೆಯಿಂದ ನೀರಿನ ಸಂಕಷ್ಟ ಅಂತಿದ್ದಾರೆ. ಆದರೂ ಬಡವರ ಕೆಲಸದ ಬಗ್ಗೆ ಕೇಂದ್ರ ಚಿಂತನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಣಯದ ಮೂಲಕ ಒತ್ತಡ ಹೇರಿದ್ದೇವೆ. ಮುಖ್ಯಮಂತ್ರಿ ಕೂಡ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು.

ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸು ಮಂಡನೆ

ಸಂಪುಟ ಸಭೆಯಲ್ಲಿ ಆಯೋಗದ ಶಿಫಾರಸುಗಳ ಬಗ್ಗೆ ಚರ್ಚೆ ಆಗಿದ್ದು, ಆಯೋಗದ ವರದಿಯ ಅನುಷ್ಠಾನಕ್ಕೆ ಸಂಪುಟ ಉಪ ಸಮಿತಿ ರಚಿಸಲು ಸಂಪುಟದಲ್ಲಿ ನಿರ್ಧಾರವಾಗಿದೆ. ಈ ಸಂಪುಟ ಉಪ ಸಮಿತಿಯು, ಆಯೋಗದ ಶಿಫಾರಸು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ – Kannada News | Tamil Nadu DMK chief MK Stalin Asks DMK MLAs to Stay in Chennai Till May 10

ಚೆನ್ನೈ, ಮೇ 7: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಸದ್ಯಕ್ಕೆ ಚೆಂಡು ಟಿವಿಕೆ ಮುಖ್ಯಸ್ಥ ವಿಜಯ್ (Vijay) ಅವರ ಮೈದಾನದಲ್ಲಿದ್ದರೂ ಯಾರು ಬಹುಮತ ಸಾಬೀತುಪಡಿಸುತ್ತಾರೋ ಅವರಿಗೆ ಸರ್ಕಾರ ರಚಿಸುವ ಅವಕಾಶ ಸಿಗಲಿದೆ. ಹೀಗಾಗಿ, ಡಿಎಂಕೆ ಮತ್ತು ಎಐಎಡಿಎಂಕೆ ಕೂಡ ತಮ್ಮ ಪಕ್ಷದ ಶಾಸಕರ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ. ಡಿಎಂಕೆ ವಿಧಾನಸಭಾ ಶಾಸಕರು ಇಂದು ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ (MK Stalin) ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಈ ವೇಳೆ ಮಾತನಾಡಿದ ಎಂ.ಕೆ ಸ್ಟಾಲಿನ್, “ಉತ್ತಮ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವುದು ನನ್ನ ಆಸೆ. ಆದರೆ ಕೆಲವು ನಿರ್ಧಾರಗಳನ್ನು ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ನಿರ್ಧಾರ ತೆಗೆದುಕೊಂಡರೂ, ಸದಸ್ಯರು ಅದಕ್ಕೆ ಬದ್ಧರಾಗಿರಬೇಕು. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ನಮ್ಮ ಪಕ್ಷದ ಎಲ್ಲ ಶಾಸಕರು ಮೇ 10ರವರೆಗೆ ಚೆನ್ನೈನಲ್ಲಿಯೇ ಇರಬೇಕು” ಎಂದು ಆದೇಶಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲುಬುಗಳಲ್ಲಿ ನೋವು ಕಂಡುಬರುವುದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ? ಇದನ್ನು ತಡೆಗಟ್ಟಲು ಸಿಂಪಲ್ ಟ್ರಿಕ್ ಇಲ್ಲಿದೆ – Kannada News | Vitamin Deficiencies That Cause Bone Pain: What You Need to Know

ಇತ್ತೀಚಿನ ದಿನಗಳಲ್ಲಿ ಎಲುಬು ನೋವು ಮತ್ತು ದೇಹದ ದುರ್ಬಲತೆ ಸಮಸ್ಯೆಗಳು ಅನೇಕರಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಹಲವರು ಇದನ್ನು ಸಾಮಾನ್ಯ ದಣಿವು ಅಥವಾ ವಯಸ್ಸಿನ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ದೇಹದಲ್ಲಿ ಅಗತ್ಯ ವಿಟಮಿನ್ (Vitamin Deficiencies) ಮತ್ತು ಖನಿಜಗಳ ಕೊರತೆ ಕೂಡ ಎಲುಬು ನೋವಿಗೆ ಪ್ರಮುಖ ಕಾರಣವಾಗಬಹುದು. ತಜ್ಞರ ಪ್ರಕಾರ, ವಿಶೇಷವಾಗಿ ವಿಟಮಿನ್ ಡಿ ಕೊರತೆಯು ಎಲುಬು ನೋವಿಗೆ ಪ್ರಮುಖ ಕಾರಣವಾಗಿದೆ. ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಪೋಷಣೆಗೆ ಸಹಾಯ ಮಾಡುತ್ತದೆ. ಇದು ಎಲುಬುಗಳನ್ನು ಗಟ್ಟಿಯಾಗಿಡಲು ಅಗತ್ಯವಾದ ಪೋಷಕಾಂಶವಾಗಿದೆ. ಇದರ ಕೊರತೆಯಿಂದ ಎಲುಬುಗಳಲ್ಲಿ ನೋವು (Bone Pain), ದುರ್ಬಲತೆ ಮತ್ತು ಗಟ್ಟಿತನದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾದರೆ ಈ ರೀತಿಯ ಕೊರತೆ ನೀಗಿಸಿಕೊಳ್ಳುವುದು ಹೇಗೆ, ಎಲುಬು ಗಟ್ಟಿಯಾಗಿರಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇತರ ವಿಟಮಿನ್ ಕೊರತೆಯೂ ಸಮಸ್ಯೆಗೆ ಕಾರಣ:

ವೈದ್ಯರು ತಿಳಿಸುವಂತೆ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ12 ಕೊರತೆಯೂ ದೇಹದ ಸ್ನಾಯುಗಳು ಮತ್ತು ಎಲುಬುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಟಮಿನ್ C ಕೊರತೆಯಿಂದ ದೇಹದಲ್ಲಿ ದೌರ್ಬಲ್ಯ, ಸಂಧಿ ನೋವು ಮತ್ತು ದಣಿವು ಹೆಚ್ಚಾಗಬಹುದು. ಈ ರೀತಿಯ ಕೊರತೆ ದೀರ್ಘಕಾಲ ಮುಂದುವರಿದರೆ ಎಲುಬುಗಳು ದುರ್ಬಲವಾಗಿ, ಮುರಿತದ ಅಪಾಯವೂ ಹೆಚ್ಚಾಗುತ್ತದೆ.

ಇದನ್ನೂ ಓದಿ: ಡಾರ್ಕ್ ಸ್ಕಿನ್ ಮತ್ತು ಒಬೆಸಿಟಿ ಇರುವವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುವುದಕ್ಕೆ ಕಾರಣ ಏನ್ ಗೊತ್ತಾ?

ವಿಟಮಿನ್ ಕೊರತೆಯನ್ನು ಹೇಗೆ ಪೂರೈಸಬೇಕು?

ಸಾಮಾನ್ಯವಾಗಿ ವಿಟಮಿನ್ ಕೊರತೆಯನ್ನು ನಿವಾರಿಸಲು ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ಹಾಲು, ಮೊಸರು, ಹಸಿರು ತರಕಾರಿ, ಮೊಟ್ಟೆ, ಹಣ್ಣು ಮತ್ತು ಒಣಹಣ್ಣುಗಳು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಪ್ರತಿದಿನ ಕೆಲವು ಸಮಯ ಸೂರ್ಯನ ಬೆಳಕಿನಲ್ಲಿ ಇರುವುದರಿಂದ ವಿಟಮಿನ್ ಡಿ ಪಡೆದುಕೊಳ್ಳಬಹುದು. ಕೊರತೆ ಹೆಚ್ಚು ಇದ್ದರೆ ವೈದ್ಯರ ಸಲಹೆಯ ಮೇರೆಗೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು. ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಕೂಡ ಅಗತ್ಯ.

ಎಲುಬು ಗಟ್ಟಿಯಾಗಿರಲು ಏನು ಮಾಡಬೇಕು?

ಸರಿಯಾದ ಆಹಾರದ ಜೊತೆಗೆ ನಿಯಮಿತ ವ್ಯಾಯಾಮವೂ ಎಲುಬುಗಳ ಆರೋಗ್ಯಕ್ಕೆ ಅಗತ್ಯವಾಗಿದೆ. ದಿನನಿತ್ಯ ನಡೆಯುವುದು, ಲಘು ವ್ಯಾಯಾಮ ಮಾಡುವುದು ಎಲುಬುಗಳನ್ನು ಗಟ್ಟಿಗೊಳಿಸಲು ಸಹಕಾರಿಯಾಗಿದೆ. ಧೂಮಪಾನ ಮತ್ತು ಹೆಚ್ಚು ಜಂಕ್ ಫುಡ್ ಸೇವನೆಯನ್ನು ತಪ್ಪಿಸುವುದು ಉತ್ತಮ. ಒಟ್ಟಾರೆ, ದೇಹದಲ್ಲಿ ಅಗತ್ಯ ವಿಟಮಿನ್‌ಗಳ ಸಮತೋಲನ ಕಾಪಾಡಿಕೊಳ್ಳುವುದರಿಂದ ಎಲುಬು ನೋವು ಮತ್ತು ದುರ್ಬಲತೆ ಸಮಸ್ಯೆಗಳನ್ನು ತಡೆಗಟ್ಟಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version