Headlines

ವೈಭವ್ ವಯಸ್ಸೆಷ್ಟು? 15 ಅಥವಾ 18… ಬ್ರೆಟ್ ಲೀ ಖಡಕ್ ಉತ್ತರ – Kannada News | Brett Lee’s Blunt Take on Vaibhav Suryavanshi’s Age Row

ಟಿ20 ಕ್ರಿಕೆಟ್​ನ ನ್ಯೂ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ವಯಸ್ಸಿನ ಸುತ್ತ ಕೇಳಿಬರುತ್ತಿರುವ ವಿವಾದಗಳಿಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಖಡಕ್ ಉತ್ತರ ನೀಡಿದ್ದಾರೆ. “ಅವನಿಗೆ 15 ವರ್ಷ ಇರಲಿ ಅಥವಾ 18 ವರ್ಷ ಇರಲಿ, ಅದರಿಂದ ಯಾರಿಗೂ ಯಾವುದೇ ನಷ್ಟವಿಲ್ಲ. ಆ ಹುಡುಗನಲ್ಲಿ ಅದ್ಭುತ ಕ್ರಿಕೆಟ್ ಕೌಶಲ್ಯವಿದೆ” ಎಂದು ಬ್ರೆಟ್ ಲೀ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್​ವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬ್ರೆಟ್ ಲೀ, ವೈಭವ್ ಸೂರ್ಯವಂಶಿಯ ಆಟದ ಶೈಲಿ ಮತ್ತು…

Read More

Gold Rates 09 Aug: ಹತ್ತು ಗ್ರಾಮ್ ಚಿನ್ನದ ಬೆಲೆ ಈ ವಾರ 7,650 ರೂ ಹೆಚ್ಚಳ – Kannada News | Gold Price Today on 9th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 9: ಚಿನ್ನದ ಬೆಲೆ ಸತತ ಏರಿಕೆ ಈ ವಾರದ ಕೊನೆಯವರೆಗೂ ಮುಂದುವರಿದಿದೆ. ವಾರಾಂತ್ಯದಲ್ಲಿ ಇದರ ಬೆಲೆ (Gold Price) 225 ರೂ ಹೆಚ್ಚಿದೆ. ಕಳೆದ ನಾಲ್ಕೈದು ದಿನದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 765 ರೂ ಏರಿದೆ. ಅಪರಂಜಿ ಚಿನ್ನದ ಬೆಲೆ 15,000 ರೂ ಗಡಿ ದಾಟಿದೆ. ಆಭರಣ ಚಿನ್ನದ ಬೆಲೆ 14,000 ರೂ ಸಮೀಪಕ್ಕೆ ಹೋಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಏರಿದೆ. ಬೆಳ್ಳಿ ಬೆಲೆಯೂ ವಾರಾಂತ್ಯದಲ್ಲಿ ಐದು…

Read More

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್​​ ಪಾದಯಾತ್ರೆಗೆ ಚಾಲನೆ: ಯಾರೆಲ್ಲ ಭಾಗಿ? – Kannada News | JDS BJP Alliance Launches 3 Day ‘Namma Bhoomi Namma Hakku’ Padayatra Against Bidadi Township Project

ಜೆಡಿಎಸ್​​ ಪಾದಯಾತ್ರೆImage Credit source: Tv9 Kannada ರಾಮನಗರ, ಆಗಸ್ಟ್​​ 09: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್​​ ಪಾದಯಾತ್ರೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬೈರಮಂಗಲ ಗ್ರಾಮದಲ್ಲಿ ಚಾಲನೆ ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ಮತ್ತು ಆರ್​. ಅಶೋಕ್​​​​​ ಚಾಲನೆ ನೀಡಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ನೇತೃತ್ವದಲ್ಲಿ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂಪಾರ್ಕ್​ವರೆಗೂ ಪಾದಯಾತ್ರೆ ನಡೆಯಲಿದೆ. ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನಲ್ಲಿ ಜೆಡಿಎಸ್​ ಪಾದಯಾತ್ರೆಗೆ ಮೈತ್ರಿ ಪಕ್ಷ…

Read More

ಎಲ್ಲ ದಾಖಲೆಗಳ ಮುರಿದು ಹಾಕಿದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ – Kannada News | SpiderMan Brand New Day breaking records in Indian Box Office

‘ಸ್ಪೈಡರ್ ಮ್ಯಾನ್’ (Spider Man) ಸರಣಿಯ ಹೊಸ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಜುಲೈ 30ರಂದು ಬಿಡುಗಡೆ ಆಯ್ತು. ಟಾಮ್ ಹಾಲೆಂಡ್, ‘ಸ್ಪೈಡರ್ ಮ್ಯಾನ್’ ಆಗಿ ನಟಿಸುತ್ತಿರುವ ಕೊನೆಯ ಸಿನಿಮಾ ಇದು ಎನ್ನಲಾಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ ಸಹ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ವಿಶೇಷವಾಗಿ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಈ ಹಿಂದೆ ಇದ್ದ ಎಲ್ಲ ದಾಖಲೆಗಳನ್ನು ಬಿಡುಗಡೆ ಆದ ಕೇವಲ ಒಂಬತ್ತೇ ದಿನದಲ್ಲಿ ಒಡೆದು ಹಾಕಿದೆ. ಜುಲೈ…

Read More

Video: ತಂದೆಯ ಬರ್ತ್ಡೇಗೆ ಬಾಲ್ಯದ ಸ್ನೇಹಿತರನ್ನೇ ಮನೆಗೆ ಆಹ್ವಾನಿಸಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ಮಗಳು – Kannada News | The daughter invited her father’s childhood friends to the house for his birthday.

ತಂದೆ ತಾಯಿ ತಮ್ಮ ಮಕ್ಕಳ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಾರೆ. ಹೀಗಿರುವಾಗ ಮಕ್ಕಳು ತಮ್ಮ ವಿಶೇಷ ದಿನಗಳಲ್ಲಿ ಮರೆಯಲಾಗದ ಉಡುಗೊರೆ (gift) ನೀಡಿದ್ರೆ ಆ ಕ್ಷಣ ಹೇಗಿರಬಹುದು ಎಂದು ಒಮ್ಮೆ ಊಹಿಸಿ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಮಗಳೊಬ್ಬಳು ತನ್ನ ತಂದೆಗೆ ಹುಟ್ಟುಹಬ್ಬಕ್ಕೆ (father birthday) ಸರ್ಪ್ರೈಸ್ ನೀಡಿದ್ದಾಳೆ. ಮನೆಗೆ ತನ್ನ ಅಪ್ಪನ ಬಾಲ್ಯದ ಸ್ನೇಹಿತರನ್ನು ಆಹ್ವಾನಿಸಿ  ಖುಷಿ ಪಡಿಸಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಹುಟ್ಟುಹಬ್ಬಕ್ಕೆ ತಂದೆಗೆ ಸರ್ಪ್ರೈಸ್ ನೀಡಿದ ಮಗಳು ಮೇಘಾ…

Read More

ಮಳೆಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು ಹೆಚ್ಚುತ್ತಾ? ಈ ವಿಚಾರದಲ್ಲಿ ತಜ್ಞರು ಹೇಳುವುದೇನು? – Kannada News | Should You Avoid Curd During Monsoon? Know the Right Way to Eat It

ಮಳೆಗಾಲ ಆರಂಭವಾಗುತ್ತಿದ್ದಂತೆ ಆಹಾರ ಸೇವನೆಯ ಬಗ್ಗೆ ಹಲವು ರೀತಿಯಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲಿಯೂ ಮಳೆಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು ಅಥವಾ ಕಫ ಹೆಚ್ಚಾಗುತ್ತದೆ ಎಂಬ ಮಾತನ್ನು ಅನೇಕರು ನಂಬುತ್ತಾರೆ. ಹೀಗಾಗಿ ಕೆಲವರು ಈ ಋತುವಿನಲ್ಲಿ ಮೊಸರು, ಮಜ್ಜಿಗೆ ಸೇರಿದಂತೆ ಕೆಲವು ಆಹಾರಗಳಿಂದ ದೂರವಿರುತ್ತಾರೆ. ಆದರೆ ನಿಜಕ್ಕೂ ಮಳೆಗಾಲದಲ್ಲಿ ಮೊಸರು ತಿನ್ನುವುದರಿಂದ ಎಲ್ಲರಿಗೂ ಶೀತ-ಕೆಮ್ಮು ಬರುತ್ತದೆಯೇ ಎಂಬುದನ್ನು ತಿಳಿಯುವುದು ಒಳ್ಳೆಯದು. ತಜ್ಞರ ಪ್ರಕಾರ, ಮಳೆಗಾಲದಲ್ಲಿ ಮೊಸರು ತಿನ್ನಬಾರದು ಎಂಬುದು ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ. ಮೊಸರಿನ ತಾಪಮಾನ, ತಾಜಾತನ…

Read More

UPSC Recruitment 2026: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 34 ಹುದ್ದೆಗಳಿಗೆ ಅರ್ಜಿ ಆಹ್ವಾನ! – Kannada News | UPSC Recruitment 2026: Apply Online for 34 Vacancies Before August 28

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುವ ಅಧಿಕೃತ ಅಧಿಸೂಚನೆಯನ್ನು ಕೇಂದ್ರ ಲೋಕಸೇವಾ ಆಯೋಗ (UPSC) ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 34 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 28 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇಲಾಖಾವಾರು ಖಾಲಿ ಹುದ್ದೆಗಳ ವಿವರಗಳು: ಈ ನೇಮಕಾತಿ ಅಭಿಯಾನದ ಮೂಲಕ ವಿಭಿನ್ನ ವಿಭಾಗಗಳಲ್ಲಿ…

Read More

ಹೋಟೆಲ್‌ಗಳ ಬೆನ್ನಲ್ಲೇ ನಕಲಿ ಕಾಸ್ಮೆಟಿಕ್ಸ್ ಮೇಲೆ ಸರ್ಕಾರದ ಹದ್ದಿನ ಕಣ್ಣು! – Kannada News | After Hotels, Karnataka Drugs Control Board to Raid Fake Cosmetics Network in Bengaluru

ಬೆಂಗಳೂರು, ಆಗಸ್ಟ್ 09: ನಗರದ ಹೋಟೆಲ್‌ಗಳು ಹಾಗೂ ಪಂಚತಾರಾ ಹೋಟೆಲ್‌ಗಳ ಕಿಚನ್ ಮೇಲೆ ಸರಣಿ ದಾಳಿ ನಡೆಸಿ ಶಾಕ್ ನೀಡಿದ್ದ ಆರೋಗ್ಯ ಇಲಾಖೆ, ಈಗ ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತಿರುವ ಮತ್ತೊಂದು ದಂಧೆಯ ಮೇಲೆ ಮುಗಿಬೀಳಲು ಸಜ್ಜಾಗಿದೆ.  ಬೆಂಗಳೂರಿನಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿರುವ ಕಳಪೆ ಹಾಗೂ ನಕಲಿ ಸೌಂದರ್ಯವರ್ಧಕಗಳ (Fake Cosmetics) ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಲು ಡ್ರಗ್ಸ್ ಕಂಟ್ರೋಲ್ ಬೋರ್ಡ್ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿದೆ. ಬ್ರಾಂಡೆಡ್ ವಸ್ತುಗಳ ನಕಲಿ ಜಾಲ; ಲ್ಯಾಬ್ ಟೆಸ್ಟ್‌ಗೆ ಸ್ಯಾಂಪಲ್ಸ್ ಬೆಂಗಳೂರಿನ ಮಾರುಕಟ್ಟೆಗಳಲ್ಲಿ…

Read More

90ರ ದಶಕದ ಕರಾಳ ಕಾಶ್ಮೀರಿ ಉಗ್ರ ಇತಿಹಾಸ ಮರುಕಳಿಸುತ್ತಿದೆಯೇ? ಪಂಡಿತರಿಗೆ ಶುರುವಾಗಿವೆ ಉಗ್ರ ಬೆದರಿಕೆಗಳು – Kannada News | Kashmiri Pandit employees face terror threat, security on high alert at valley

ಕಾಶ್ಮೀರಿ ಭದ್ರತಾ ಪಡೆ ಸಿಬ್ಬಂದಿImage Credit source: PTI ಶ್ರೀನಗರ, ಆಗಸ್ಟ್ 9: ಮೂರ್ನಾಲ್ಕು ದಶಕದ ಹಿಂದೆ ಕಾಶ್ಮೀರದಲ್ಲಿ ಪಂಡಿತ (Kashmiri Pandit) ಸಮುದಾಯದವರು ತಮ್ಮ ಊರು, ರಾಜ್ಯ ತೊರೆದು ವಲಸೆ ಹೋಗುವಂತೆ ಮಾಡಿದ ರೀತಿಯ ವಿದ್ಯಮಾನಗಳು ನಡೆಯುತ್ತಿರುಂತೆ ತೋರುತ್ತಿದೆ. ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಆನ್‌ಲೈನ್ ಮೂಲಕ ಹೊಸದಾಗಿ ಉಗ್ರರ ಬೆದರಿಕೆಗಳು ಬಂದಿದ್ದು, ಭದ್ರತಾ ಸಂಸ್ಥೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಮತ್ತು ‘ಕಾಶ್ಮೀರ್ ಫೈಟ್’…

Read More

110 ರನ್​ಗಳ ಗುರಿ… 94 ರನ್​ಗಳಿಸಿ ಗೆದ್ದ TKR​! – Kannada News | St Kitts and Nevis Patriots vs Trinbago Knight Riders Highlights

ಕೆರಿಬಿಯನ್ ಪ್ರೀಮಿಯರ್ ಲೀಗ್​ನ (CPL 2026) 2ನೇ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ (TKR) ತಂಡ ಭರ್ಜರಿ ಜಯ ಸಾಧಿಸಿದೆ. ಅದು ಕೂಡ ಕೇವಲ 94 ರನ್​ಗಳಿಸುವ ಮೂಲಕ. ಕಿಂಗ್ಸ್​ಟೌನ್​ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ನಾಯಕ ಅಕೀಲ್ ಹೊಸೈನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್…

Read More