Headlines

ರಕ್ತದೊತ್ತಡ ಹೆಚ್ಚಾಗದಿರಲು ಉಪ್ಪಿನ ಪ್ರಮಾಣ ಎಷ್ಟಿರಬೇಕು? ಇಲ್ಲಿದೆ ತಜ್ಞರ ಸಲಹೆ – Kannada News | Want to Control High BP? Know How Much Salt You Should Eat

ಹೈ ಬಿಪಿ ಅಥವಾ ಅಧಿಕ ರಕ್ತದೊತ್ತಡ ಇರುವವರು ಆಹಾರದಲ್ಲಿ ಉಪ್ಪಿನ ಪ್ರಮಾಣದ ಬಗ್ಗೆ ವಿಶೇಷ ಗಮನಹರಿಸುವುದು ಬಹಳ ಮುಖ್ಯ. ನಾವು ಅಡುಗೆಯಲ್ಲಿ ಬಳಸುವ ಉಪ್ಪು ಮಾತ್ರವಲ್ಲದೆ, ಪ್ಯಾಕೇಜ್ಡ್ ಫುಡ್ಸ್, ಚಿಪ್ಸ್, ಉಪ್ಪಿನಕಾಯಿ, ಸಾಸ್, ಇನ್‌ಸ್ಟಂಟ್ ನೂಡಲ್ಸ್ ಸೇರಿದಂತೆ ಹಲವು ಆಹಾರಗಳಲ್ಲಿ ಸೋಡಿಯಂ ಅಡಗಿರುತ್ತದೆ. ಇದನ್ನು ಹೆಚ್ಚು ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಹಾಗಾದರೆ ಹೈ ಬಿಪಿ ಇರುವವರು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಉಪ್ಪನ್ನು ಸೇವಿಸಬೇಕು ಮತ್ತು ಯಾವ ಆಹಾರಗಳಲ್ಲಿ ಹೆಚ್ಚು ಸೋಡಿಯಂ ಇರುತ್ತದೆ ಎಂಬುದನ್ನು ಸ್ಟೋರಿ ಮೂಲಕ…

Read More

ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ – Kannada News | Bengaluru Shocked: Techies Asked ‘Are You Terrorists?’, Brutally Assaulted with Baseball Bat in AECS Layout

ಬೆಂಗಳೂರು, ಆಗಸ್ಟ್​​ 09: ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಇಬ್ಬರು ಟೆಕ್ಕಿಗಳ ಮೇಲೆ ದುಷ್ಕರ್ಮಿಯೋರ್ವ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಹೆಚ್ಎಎಲ್ ಬಳಿಯ ಎಇಸಿಎಸ್ ಲೇಔಟ್‌ನಲ್ಲಿ ನಡೆದಿದೆ. ಸಾಫ್ಟ್‌ವೇರ್ ಉದ್ಯೋಗಿಗಳಾದ ಸಂದೀಪ್ ಕುಮಾರ್ ಗೋಂಡ್ ಹಾಗೂ ರೋಹಿತ್ ಕುಮಾರ್ ಮೇಲೆ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಆಗಸ್ಟ್ 6ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಘಟನೆ ನಡೆದಿರುವ ಬಗ್ಗೆ ಪೊಲೀಸ್​​ ದೂರು ದಾಖಲಾಗಿದೆ. ಘಟನೆ ಏನು? ಸಂದೀಪ್ ಕುಮಾರ್…

Read More

‘ಸೆಂಟರ್ ಆಫ್ ಎಕ್ಸಲೆನ್ಸ್’ನಲ್ಲಿ ತುರ್ತು ಸಭೆ ಕರೆದ ಬಿಸಿಸಿಐ – Kannada News | BCCI Chief Saikia Meets Laxman At CoE Amid Injury Crisis

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇಂದು (ಭಾನುವಾರ) ಬೆಂಗಳೂರಿನ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಕ್ರೀಡಾ ಸಂಕೀರ್ಣದಲ್ಲಿ ಹೆಡ್ ಆಫ್ ಕ್ರಿಕೆಟ್ ವಿವಿಎಸ್ ಲಕ್ಷ್ಮಣ್ ಅವರನ್ನು ಭೇಟಿಯಾಗಿ ಮಹತ್ವದ ಸಭೆ ನಡೆಸಲಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಸರಣಿ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವುದು ಮತ್ತು ಚೇತರಿಕೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲಗಳ ಹಿನ್ನೆಲೆಯಲ್ಲಿ ಈ ಹಠಾತ್ ಸಭೆಯನ್ನು ಕರೆಯಲಾಗಿದೆ. ಮಿನಿ ಆಸ್ಪತ್ರೆ’ಯಾದ ಕ್ರೀಡಾ ಸಂಕೀರ್ಣ: ಪ್ರಸ್ತುತ ಬೆಂಗಳೂರಿನ CoE ನಲ್ಲಿ ಜಸ್​ಪ್ರೀತ್…

Read More

ಹಾಸ್ಟೆಲ್ ಶೌಚಾಲಯದಲ್ಲೇ ಕುಸಿದುಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಾವು! – Kannada News | Tragedy in Tumakuru: 8th Standard Girl Dies After Collapsing in Hostel Toilet

ಹಾಸ್ಟೆಲ್ ಶೌಚಾಲಯದಲ್ಲೇ ಕುಸಿದುಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಾವು! ತುಮಕೂರು, ಆಗಸ್ಟ್ 09: ತಾಲೂಕಿನ ರಂಗಸಮುದ್ರ ಗ್ರಾಮದ ಬಳಿ ಇರುವ ಕಸ್ತೂರಿಬಾ ಗಾಂಧಿ ಬಾಲಕಿಯರ ಹಾಸ್ಟೆಲ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಕಾರಗಾನಹಟ್ಟಿ ಗ್ರಾಮದ ನಿವಾಸಿಗಳಾದ ನರಸಿಂಹಮೂರ್ತಿ ಮತ್ತು ಶಾರದಮ್ಮ ದಂಪತಿಯ 14 ವರ್ಷದ ಪುತ್ರಿ ಪ್ರಿಯಾಂಕಾ ಮೃತಪಟ್ಟ ದುರ್ದೈವಿ. ಈಕೆ ರಂಗಸಮುದ್ರದ ತ್ರಿಯಂಬಕೇಶ್ವರ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು ಎನ್ನಲಾಗಿದೆ. ಅನಾರೋಗ್ಯದ ಬೆನ್ನಲ್ಲೇ ಸಂಭವಿಸಿದ ದುರಂತ…

Read More

‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್ ಕೊಟ್ಟಿರುವ ಕೊಡುಗೆ ಏನು? – Kannada News | Yash and others praised Radhika Pandith for her scarifies for Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ನಿನ್ನೆ (ಆಗಸ್ಟ್ 8) ಬಿಡುಗಡೆ ಆಗಿದೆ. ಬೆಂಗಳೂರಿನ ಎಎಂಬಿ ಮಾಲ್​​​ನಲ್ಲಿ ನಿನ್ನೆ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ‘ಟಾಕ್ಸಿಕ್’ ಸಿನಿಮಾ ಎಲ್ಲ ಪ್ರಮುಖ ತಾರೆಯರು, ತಂತ್ರಜ್ಞರು ಭಾಗಿ ಆಗಿದ್ದರು. ಪ್ರತಿಯೊಬ್ಬರೂ ಸಹ ಇತರೆ ಕಲಾವಿದರು, ತಂತ್ರಜ್ಞರು ಸಿನಿಮಾಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಪರಸ್ಪರ ಕೊಂಡಾಡಿದರು. ಇದರ ಜೊತೆಗೆ ನಟಿ ರಾಧಿಕಾ ಪಂಡಿತ್ ನೀಡಿರುವ ಕೊಡುಗೆಯನ್ನೂ ಸಹ ಹಲವರು ಮೆಚ್ಚಿಕೊಂಡರು. ‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್​​…

Read More

Weekly Horoscope: ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರ ಭವಿಷ್ಯ ಇಲ್ಲಿದೆ – Kannada News | Dr. Basavaraj Gurujis Weekly Horoscope: Predictions for 10 16 August 2026

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 10 ರಿಂದ 16 ರವರೆಗಿನ ವಾರ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ವಾರದಲ್ಲಿ ಗ್ರಹಗಳ ಸಂಚಾರ, ವಿಶೇಷ ದಿನಗಳು ಮತ್ತು ದ್ವಾದಶ ರಾಶಿಗಳ ಮೇಲಿನ ಅವುಗಳ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ. ಮೀನ ರಾಶಿಯಲ್ಲಿ ಶನಿ, ಮಿಥುನ ರಾಶಿಯಲ್ಲಿ ಕುಜ, ಹಾಗೂ ಗುರು, ರವಿ, ಬುಧ ತ್ರಿಗ್ರಹ ಕೂಟವು ಕರ್ಕಾಟಕದಲ್ಲಿ ಸಂಚಾರ ಮಾಡಲಿದ್ದು, ಕೇತು ಸಿಂಹ ರಾಶಿಯಲ್ಲಿ ಹಾಗೂ ಶುಕ್ರ ಕನ್ಯಾ ರಾಶಿಯಲ್ಲಿ ನೀಚನಾಗಿ ಸಂಚರಿಸಲಿದ್ದಾನೆ ಎಂದು…

Read More

ಬರೋಬ್ಬರಿ 8 ವಿಕೆಟ್​… ಆಸ್ಟ್ರೇಲಿಯಾದ ಯುವ ವೇಗಿಯ ಮಿಂಚಿನ ದಾಳಿ! – Kannada News | Aussie Pacer Campbell Thompson’s Lethal 8 Wicket Haul Demolishes Bangladesh

ಬಾಂಗ್ಲಾದೇಶ್ ಕ್ರಿಕೆಟ್ ತಂಡಕ್ಕೆ ಆಸ್ಟ್ರೇಲಿಯಾದ ಯುವ ವೇಗಿಯೊಬ್ಬ ಅಕ್ಷರಶಃ ನಡುಕ ಹುಟ್ಟಿಸಿದ್ದಾನೆ. ಕೇವಲ 22 ವರ್ಷದ ಆಸ್ಟ್ರೇಲಿಯಾದ ಯುವ ಎಡಗೈ ವೇಗದ ಬೌಲರ್ ಕ್ಯಾಂಪ್​ಬೆಲ್ ಥಾಂಪ್ಸನ್, ಬಾಂಗ್ಲಾದೇಶ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಬರೋಬ್ಬರಿ 8 ವಿಕೆಟ್ ಕಬಳಿಸಿದ್ದಾರೆ. ಇವರ ಈ ಕರಾರುವಾಕ್ ದಾಳಿಗೆ ಧೂಳೀಪಟವಾದ ಬಾಂಗ್ಲಾದೇಶ್, ತನ್ನ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 54 ರನ್‌ಗಳಿಗೆ ಆಲೌಟ್ ಆಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಡಾರ್ವಿನ್‌ನ ಮರಾರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರು…

Read More

ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ – Kannada News | Union Minister HD Kumaraswamy Offers Special Prayers at Mysurus Chamundi Temple

ಮೈಸೂರು, ಆಗಸ್ಟ್​​ 09: ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದು, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. H.D.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಶಾಸಕರು ಈ ವೇಳೆ ಸಾಥ್ ನೀಡಿದ್ದು, ಬಿಡದಿ ಪಾದಯಾತ್ರೆಗೆ ಚಾಲನೆಗೂ ಮುನ್ನ ಅವರು ದೇಗುಲಕ್ಕೆ ಭೇಟಿ ನೀಡಿರುವುದು ಗಮನ ಸೆಳೆದಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

Weak Venus: ಜಾತಕದಲ್ಲಿ ಶುಕ್ರ ಗ್ರಹ ದುರ್ಬಲವಾಗಿದ್ದರೆ ಕಾಣಿಸಿಕೊಳ್ಳುವ ಲಕ್ಷಣಗಳಿವು! – Kannada News | Signs of a Weak Venus in Your Horoscope and Simple Remedies

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆಯಿದೆ. ಅವುಗಳಲ್ಲಿ ಶುಕ್ರ (Venus) ಗ್ರಹವನ್ನು ಪ್ರೀತಿ, ಸೌಂದರ್ಯ, ಕಲೆ, ಸಂಪತ್ತು, ಐಷಾರಾಮಿ ಜೀವನ ಮತ್ತು ಭೌತಿಕ ಸುಖಗಳ ಕಾರಕ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಬಲವಾಗಿದ್ದಾಗ ವ್ಯಕ್ತಿಯ ಜೀವನದಲ್ಲಿ ಸೌಕರ್ಯ, ಆಕರ್ಷಣೆ ಮತ್ತು ಸಮೃದ್ಧಿ ನೆಲೆಸುತ್ತದೆ. ಆದರೆ, ಶುಕ್ರನು ದುರ್ಬಲನಾಗಿದ್ದರೆ ಅಥವಾ ಅಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಸ್ವಭಾವ, ದಿನಚರಿ ಮತ್ತು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಶುಕ್ರ ಗ್ರಹ ದುರ್ಬಲವಾಗಿದ್ದಾಗ ಎದುರಾಗುವ ಮುಖ್ಯ ಲಕ್ಷಣಗಳು…

Read More

Dharmendra Pradhan Resignation: ರಾಜೀನಾಮೆ ನೀಡಿದ ರಹಸ್ಯ ಬಿಚ್ಚಿಟ್ಟ ಧರ್ಮೇಂದ್ರ ಪ್ರಧಾನ್! – Kannada News | Dharmendra Pradhan Explains Resignation: Former Education Minister Reveals Why He Quit Amid NEET Protests

ಭುವನೇಶ್ವರ, ಆಗಸ್ಟ್ 09: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪೇಪರ್ ಲೀಕ್ ಹಗರಣ ಹಾಗೂ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್, ಶನಿವಾರ ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಒಡಿಶಾದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೀಟ್ ಪೇಪರ್ ಲೀಕ್ ಪ್ರತಿಭಟನೆಯ ಸಂದರ್ಭದಲ್ಲಿ ದೇಶದ ಯುವ ಪೀಳಿಗೆಯನ್ನು (Gen Z)…

Read More