Chanakya Niti: ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ ಅನ್ನೋದು ಇದೇ ಕಾರಣಕ್ಕೆ ನೋಡಿ – Kannada News | Chanakya Niti: What happens when you have too many expectations?
ನಿರೀಕ್ಷೆ (expectations) ಇಟ್ಟುಕೊಳ್ಳುವುದು, ಒಬ್ಬರಿಂದೊಬ್ಬರು ಏನನ್ನಾದರೂ ಅಪೇಕ್ಷಿಸುವುದು ಮನುಷ್ಯನ ಸಹಜ ಗುಣ. ಕೆಲವೊಂದು ಬಾರಿ ನಾವು ಒಬ್ಬರ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತೇವೆ. ಅವರು ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳದಿದ್ದಾಗ ಮನಸ್ಸು ಒಡೆದು ಹೋಗುತ್ತದೆ. ಆದ್ದರಿಂದ ಯಾರಿಂದಲೂ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಹೀಗೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಕ್ರಮೇಣ ನಮ್ಮ ಮನಸ್ಸು, ಆಲೋಚನೆ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಮನಸ್ಸು, ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆಯಾಗಿ ಅತಿಯಾದ ನಿರೀಕ್ಷೆಯಿಂದ…