ಮಗಳ ಮದುವೆಗೆ ಖರೀದಿಸಿದ್ದ ಚಿನ್ನವನ್ನು ಹೋಟೆಲ್ನಲ್ಲಿ ಮರೆತುಹೋದ ತಾಯಿ: ಮುಂದಾಗಿದ್ದು ಭಾವುಕ ಕ್ಷಣ – Kannada News | Bagalkote Hotel Owner Returns 1.5 Lakh Worth Forgotten Gold to Woman; Honesty Wins Praise
ಮಹಿಳೆಗೆ ಬಂಗಾರ ಹಸ್ತಾಂತರImage Credit source: Tv9 Kannada ಬಾಗಲಕೋಟೆ, ಮೇ 06: ಮಗಳ ಮದುವೆಗೆಂದು ಖರೀದಿಸಿದ್ದ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಅಭರಣವನ್ನು ಮಹಿಳೆಯೋರ್ವರು ಹೋಟೆಲ್ನಲ್ಲಿಯೇ ಮರೆತು ಬಿಟ್ಟು ಹೋಗಿದ್ದು, ಇದನ್ನು ಹೋಟೆಲ್ ಮಾಲೀಕರು ಮರಳಿ ಆಕೆಗೆ ಹಸ್ತಾಂತರಿಸಿರುವ ಘಟನೆಗೆ ಬಾಗಲಕೋಟೆ ಸಾಕ್ಷಿಯಾಗಿದೆ. ಸಿಕ್ಕ ಬಂಗಾರವನ್ನು ಇಟ್ಟುಕೊಳ್ಳದೆ ಅದರ ನಿಜ ವಾರಸುದಾರರಿಗೆ ಹಸ್ತಾಂತರಿಸಿದ ಹೋಟೆಲ್ ಮಾಲೀಕನ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮರಳಿ ಬಂಗಾರ ಸಿಕ್ಕ ಹಿನ್ನೆಲೆ ಮಹಿಳೆ ಕೆಲ ಕಾಲ ಭಾವುಕರಾದ…