PAK vs SL: ಟಿ20 ವಿಶ್ವಕಪ್​ನಿಂದ ಹೊರಬಿದ್ದ ‘ಪ್ಯಾಕಿ’ಸ್ತಾನ; ಕಿವೀಸ್​ಗೆ ಸೆಮೀಸ್ ಟಿಕೆಟ್ – Kannada News | T20 World Cup 2026: Pakistan Eliminated in Super 8s; New Zealand Qualifies for Semis

2026 ರ ಟಿ20 ವಿಶ್ವಕಪ್​ನಲ್ಲಿ ಸಿಕ್ಕಿದ್ದ ಕೊನೆಯ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಪಾಕಿಸ್ತಾನ ತಂಡ ಸೂಪರ್ 8 ಸುತ್ತಿನಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿದೆ. ವಾಸ್ತವವಾಗಿ ಪಾಕಿಸ್ತಾನ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಬೇಕೆಂದಿದ್ದರೆ, ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಿತ್ತು. ಆದರೆ ಆ ಕೆಲಸ ಮಾಡುವಲ್ಲಿ ಪಾಕಿಸ್ತಾನ ತಂಡ ವಿಫಲವಾಯಿತು. ಇದರ ಪರಿಣಾಮವಾಗಿ ಪಾಕ್ ತಂಡಕ್ಕೆ ಸೆಮಿಫೈನಲ್‌ ಬಾಗಿಲು ಅಧಿಕೃತವಾಗಿ ಮುಚ್ಚಿದೆ. ಹೀಗಾಗಿ ನ್ಯೂಜಿಲೆಂಡ್ ತಂಡ ಗ್ರೂಪ್ 2 ರಿಂದ ಎರಡನೇ ತಂಡವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇದೀಗ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.

ಪಾಕಿಸ್ತಾನ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಬೇಕಿದ್ದಿದ್ದರೆ ಶ್ರೀಲಂಕಾ ತಂಡವನ್ನು ಭಾರಿ ಅಂತರದಲ್ಲಿ ಸೋಲಿಸಬೇಕಿತ್ತು. ಅದರಂತೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 213 ರನ್ ಕಲೆಹಾಕಿತು. ಹೀಗಾಗಿ ಈ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾ ತಂಡವನ್ನು 147 ರನ್​ಗಳಿಗೆ ಕಟ್ಟಿಹಾಕಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಶ್ರೀಲಂಕಾ ತಂಡ 16ನೇ ಓವರ್​ನಲ್ಲಿ 150 ರನ್​ಗಳ ಗಡಿ ದಾಟುವ ಮೂಲಕ ಪಾಕಿಸ್ತಾನದ ಕನಸನ್ನು ಭಗ್ನಗೊಳಿಸಿತು.

Published On – 10:33 pm, Sat, 28 February 26

Source link

ಈ ರಾಶಿಯವರಿಗೆ ಮಾರ್ಚ್ 01ರಿಂದ 07 ರವರೆಗೆ ಉದ್ಯೋಗದಲ್ಲಿ ದೊಡ್ಡ ಮನ್ನಣೆ – Kannada News | Career Forecast March 1 7: Promotions, Transfers & Opportunities by Zodiac Sign

ಮಾರ್ಚ್ 01ರಿಂದ 07 ರವರೆಗೆ ಮೊದಲ ವಾರವಾಗಿದ್ದು ಉದ್ಯೋಗದಲ್ಲಿ ಕೆಲವರಿಗೆ ಆತಂಕ, ಸಂತೋಷ, ಆಲಸ್ಯ, ಪ್ರಯತ್ನ ಎಲ್ಲವೂ ಮಿಶ್ರವಾಗಿರುವುದು. ಒಂದನ್ನೇ ನಂಬಿ ಇರುವುದು ಬೇಕಾಗಿಲ್ಲ, ಬೇರೆ ಕ್ಷೇತ್ರಗಳ ಜ್ಞಾನವೂ ಮುಖ್ಯ. ಎರಡು ದೋಣಿಯಲ್ಲಿ ಹೋಗುವುದು ಕಷ್ಟ.

ಮೇಷ

​ಈ ವಾರ ಸೃಜನಾತ್ಮಕ ಕೆಲಸಗಳಿಗೆ ಮನ್ನಣೆ ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವಿರಿ. ಆದರೆ ಸಣ್ಣ ತಪ್ಪುಗಳು ಅವಮಾನಕ್ಕೆ ದಾರಿಯಾಗದಂತೆ ಎಚ್ಚರವಹಿಸಿ. ಭಡ್ತಿಯ ಮಾತುಕತೆಗಳು ಸಕಾರಾತ್ಮಕವಾಗಿ ನಡೆಯಲಿವೆ. ಹೊಸ ಜವಾಬ್ದಾರಿಗಳು ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತವೆ. ಸಹೋದ್ಯೋಗಿಗಳ ಸಹಕಾರವಿದ್ದರೆ ಗುರಿ ತಲುಪುವುದು ಸುಲಭವಾಗುತ್ತದೆ.

ವೃಷಭ

​ವೃತ್ತಿಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗಬಹುದು. ಹಠಾತ್ ವರ್ಗಾವಣೆಯ ಸಾಧ್ಯತೆಯಿದೆ, ಆದರೆ ಇದು ನಿಮ್ಮ ಭವಿಷ್ಯಕ್ಕೆ ಒಳಿತು ಮಾಡಲಿದೆ. ಕಚೇರಿಯಲ್ಲಿ ವಿನಾಕಾರಣ ವಾದ ಮಾಡಬೇಡಿ, ಇದರಿಂದ ಸ್ಥಾನಮಾನಕ್ಕೆ ಧಕ್ಕೆ ಬರಬಹುದು. ಹೊಸ ಐಡಿಯಾಗಳನ್ನು ಜಾರಿಗೆ ತರಲು ಇದು ಸೂಕ್ತ ಸಮಯ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಭಡ್ತಿಯ ರೂಪದಲ್ಲಿ ದೊರೆಯುವ ಮುನ್ಸೂಚನೆ ಇದೆ.

​ಮಿಥುನ

​ನಿಮ್ಮ ಕ್ರಿಯಾಶೀಲತೆ ಈ ವಾರ ಉತ್ತುಂಗದಲ್ಲಿರುತ್ತದೆ. ಕಲಾತ್ಮಕ ಮತ್ತು ಸೃಜನಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ ಗೌರವ ವೃದ್ಧಿಯಾಗಲಿದೆ. ಆದರೆ ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ, ಅವರು ನಿಮ್ಮ ಹೆಸರಿಗೆ ಕಳಂಕ ತರಲು ಯತ್ನಿಸಬಹುದು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಕಂಡುಬರಲಿದೆ. ತಾಳ್ಮೆಯೇ ಈ ವಾರದ ನಿಮ್ಮ ಯಶಸ್ಸಿನ ಸೂತ್ರ.

ಕರ್ಕಾಟಕ

​ಉದ್ಯೋಗದಲ್ಲಿ ಹಿರಿಯರ ಬೆಂಬಲದಿಂದ ಸ್ಥಾನಮಾನ ಭದ್ರವಾಗಲಿದೆ. ನಿಗದಿತ ಸಮಯಕ್ಕೆ ಕೆಲಸ ಮುಗಿಸುವುದರಿಂದ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಉತ್ತಮ ಫಲಿತಾಂಶ ಸಿಗಲಿದೆ. ಸೃಜನಾತ್ಮಕ ಆಲೋಚನೆಗಳು ಯೋಜನೆಯ ಯಶಸ್ಸಿಗೆ ಕಾರಣವಾಗುತ್ತವೆ. ಅವಮಾನದ ಪ್ರಸಂಗಗಳು ಎದುರಾದರೆ ಮೌನವಾಗಿರುವುದು ಒಳಿತು. ಭಡ್ತಿಗಾಗಿ ನೀವು ಪಟ್ಟ ಶ್ರಮಕ್ಕೆ ಈಗ ಬೆಲೆ ಸಿಗುವ ಕಾಲ ಬಂದಿದೆ.

ಸಿಂಹ

​ಸಿಂಹ ರಾಶಿಯವರಿಗೆ ಈ ವಾರ ಅಧಿಕಾರ ಪ್ರಾಪ್ತಿಯ ಯೋಗವಿದೆ. ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದ್ದು, ಸ್ಥಾನಮಾನದಲ್ಲಿ ಏರಿಕೆಯಾಗಲಿದೆ. ಸೃಜನಾತ್ಮಕ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಹೋದ್ಯೋಗಿಗಳೊಂದಿಗೆ ಸೌಮ್ಯವಾಗಿ ವರ್ತಿಸಿ, ಇಲ್ಲದಿದ್ದರೆ ಭಿನ್ನಾಭಿಪ್ರಾಯ ಮೂಡಿ ಸ್ಥಾನಕ್ಕೆ ಅಡಚಣೆಯಾಗಬಹುದು. ಬದಲಾವಣೆಯನ್ನು ಧೈರ್ಯದಿಂದ ಸ್ವೀಕರಿಸಿ. ಉತ್ತಮ ಸಂಬಳದೊಂದಿಗೆ ಭಡ್ತಿ ಸಿಗುವ ಸಾಧ್ಯತೆಗಳು ಈ ವಾರ ದಟ್ಟವಾಗಿವೆ.

ಕನ್ಯಾ

​ಕೆಲಸದಲ್ಲಿ ಅತಿಯಾದ ಒತ್ತಡವಿದ್ದರೂ ನಿಮ್ಮ ಕೌಶಲದಿಂದ ಎಲ್ಲವನ್ನೂ ನಿಭಾಯಿಸುವಿರಿ. ಅನಗತ್ಯ ಟೀಕೆಗಳಿಂದಾಗಿ ಸ್ವಲ್ಪ ಅವಮಾನ ಅನುಭವಿಸಬೇಕಾಗಬಹುದು, ಆದರೆ ಅದನ್ನು ಸವಾಲಾಗಿ ಸ್ವೀಕರಿಸಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಸೃಜನಾತ್ಮಕ ಶಕ್ತಿ ಹೊಸ ಯೋಜನೆಗಳಿಗೆ ಜೀವ ತುಂಬಲಿದೆ. ಸದ್ಯಕ್ಕೆ ಭಡ್ತಿ ವಿಳಂಬವಾದರೂ, ನಿಮ್ಮ ಶ್ರದ್ಧೆ ಮುಂದಿನ ದಿನಗಳಲ್ಲಿ ದೊಡ್ಡ ಗೌರವ ತಂದುಕೊಡಲಿದೆ.

ತುಲಾ

​ಉದ್ಯೋಗ ಕ್ಷೇತ್ರದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ನಿಮ್ಮ ಸೃಜನಾತ್ಮಕ ಕೆಲಸಗಳಿಗೆ ಸಾರ್ವಜನಿಕವಾಗಿ ಗೌರವ ಸಿಗಬಹುದು. ಸಹೋದ್ಯೋಗಿಗಳ ನಡುವೆ ನಿಮ್ಮ ಸ್ಥಾನಮಾನ ಉನ್ನತ ಮಟ್ಟಕ್ಕೆ ಏರಲಿದೆ. ಹಳೆಯ ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಇದು ಸರಿಯಾದ ಸಮಯ. ಹೊಸ ಉದ್ಯೋಗದ ಆಫರ್ ಬರಬಹುದು. ಯಾರನ್ನಾದರೂ ಅಂಧವಾಗಿ ನಂಬಬೇಡಿ, ಅದು ವೃತ್ತಿಜೀವನದಲ್ಲಿ ಹಿನ್ನಡೆಗೆ ಕಾರಣವಾಗಬಹುದು.

ವೃಶ್ಚಿಕ

​ಈ ವಾರ ಉದ್ಯೋಗದಲ್ಲಿ ಸ್ವಲ್ಪ ಏರಿಳಿತ ಇರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗಬಹುದು. ನಿಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ವೇದಿಕೆ ಸಿದ್ಧವಾಗಲಿದೆ. ಅಧಿಕಾರ ಬದಲಾವಣೆಯಿಂದ ನಿಮಗೆ ಅನುಕೂಲವಾಗಲಿದೆ. ಸಣ್ಣ ಪುಟ್ಟ ಅವಮಾನಗಳನ್ನು ನಿರ್ಲಕ್ಷಿಸಿ ಗುರಿಯತ್ತ ಗಮನಹರಿಸಿ. ಭಡ್ತಿ ಪಡೆಯಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ದೂರದ ಊರಿಗೆ ವೃತ್ತಿ ಸಂಬಂಧಿ ಪ್ರಯಾಣ ಮಾಡಬೇಕಾಗಿ ಬರಬಹುದು.

ಧನುಸ್ಸು

​ಧನು ರಾಶಿಯವರಿಗೆ ವೃತ್ತಿಯಲ್ಲಿ ಭಾಗ್ಯೋದಯದ ವಾರವಿದು. ನಿಮ್ಮ ಕಲ್ಪನಾಶಕ್ತಿ ಮತ್ತು ಸೃಜನಾತ್ಮಕತೆ ಎಲ್ಲರ ಗಮನ ಸೆಳೆಯುತ್ತದೆ. ದೊಡ್ಡ ಸಂಸ್ಥೆಗಳಿಂದ ಕೆಲಸದ ಆಹ್ವಾನ ಬರಬಹುದು. ಸ್ಥಾನಮಾನ ಹೆಚ್ಚಾಗುವ ಜೊತೆಗೆ ಆದಾಯದಲ್ಲೂ ವೃದ್ಧಿಯಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಭಡ್ತಿ ಹಾಗೂ ವರ್ಗಾವಣೆಯ ವಿಷಯದಲ್ಲಿ ಶುಭ ವಾರ್ತೆ ಕೇಳುವಿರಿ. ನಿಮ್ಮ ಶೌರ್ಯ ಮತ್ತು ಚಾತುರ್ಯ ಯಶಸ್ಸು ತರಲಿದೆ.

ಮಕರ

​ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಸೃಜನಾತ್ಮಕವಾಗಿ ಯೋಚಿಸಿ ಸಮಸ್ಯೆಗಳನ್ನು ಬಗೆಹರಿಸುವಿರಿ. ಸದ್ಯಕ್ಕೆ ಸ್ಥಾನ ಬದಲಾವಣೆಯ ನಿರ್ಧಾರ ಬೇಡ. ಹಿರಿಯ ಅಧಿಕಾರಿಗಳೊಂದಿಗೆ ಘರ್ಷಣೆ ಉಂಟಾಗದಂತೆ ನೋಡಿಕೊಳ್ಳಿ, ಇದರಿಂದ ಅವಮಾನವಾಗುವ ಸಾಧ್ಯತೆಯಿದೆ. ಪರಿಶ್ರಮ ಪಟ್ಟರೆ ಭಡ್ತಿಯ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ವೃತ್ತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಈ ವಾರದ ಮುಖ್ಯ ಗುರಿಯಾಗಿರಲಿ.

ಕುಂಭ

​ಹೊಸ ಪ್ರಯೋಗಗಳನ್ನು ಮಾಡಲು ಇದು ಸಕಾಲ. ನಿಮ್ಮ ಸೃಜನಾತ್ಮಕ ಕಲ್ಪನೆಗಳು ಉದ್ಯೋಗದಲ್ಲಿ ದೊಡ್ಡ ಬದಲಾವಣೆ ತರಲಿವೆ. ಗೌರವ, ಸ್ಥಾನಮಾನಗಳು ತಾವಾಗಿಯೇ ಒಲಿದು ಬರಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷ ಮನ್ನಣೆ ಸಿಗಲಿದೆ. ಈ ವಾರ ಭಡ್ತಿಯ ಆಸೆ ಈಡೇರಬಹುದು. ಆದರೆ ಅಹಂಕಾರ ಪ್ರದರ್ಶಿಸಿದರೆ ಅವಮಾನ ಎದುರಿಸಬೇಕಾದೀತು, ಎಚ್ಚರ. ಕೆಲಸದಲ್ಲಿ ಹೊಸತನ ರೂಢಿಸಿಕೊಳ್ಳುವುದು ನಿಮ್ಮ ಯಶಸ್ಸಿನ ಗುಟ್ಟು.

ಮೀನ

​ಉದ್ಯೋಗದಲ್ಲಿ ಈ ವಾರ ಮಿಶ್ರ ಫಲಿತಾಂಶವಿದೆ. ಸೃಜನಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಉತ್ತಮ ಹೆಸರು ಗಳಿಸುವಿರಿ. ವರ್ಗಾವಣೆಯ ಬಯಕೆ ಇದ್ದವರಿಗೆ ಇಷ್ಟದ ಜಾಗ ಸಿಗಬಹುದು. ಕೆಲಸದ ವಿಚಾರದಲ್ಲಿ ಪರರ ಮಧ್ಯಪ್ರವೇಶದಿಂದ ಅಸಮಾಧಾನ ಮೂಡಬಹುದು. ಸಮಾಧಾನದಿಂದ ಕೆಲಸ ಮಾಡಿದರೆ ಭಡ್ತಿಯ ಹಾದಿ ಸುಗಮವಾಗಲಿದೆ. ನಿಮ್ಮ ವ್ಯಕ್ತಿತ್ವ ಮತ್ತು ದಕ್ಷತೆ ಮೇಲಧಿಕಾರಿಗಳಿಗೆ ಮೆಚ್ಚುಗೆಯಾಗಲಿದೆ. ಸ್ಥಾನಮಾನದಲ್ಲಿ ಧನಾತ್ಮಕ ಬದಲಾವಣೆ ನಿರೀಕ್ಷಿಸಬಹುದು.

– ಲೋಹಿತ ಹೆಬ್ಬಾರ್ – 8762924271

Source link

ಚೆಕ್ ಬೌನ್ಸ್ ಪ್ರಕರಣದ ಬಗ್ಗೆ ವಿವರವಾಗಿ ಮಾತನಾಡಿದ ರಾಜ್​​ಪಾಲ್ ಯಾದವ್ – Kannada News | Rajpal Yadav talks about his cheque bounce case

ರಾಜ್​ಪಾಲ್ ಯಾದವ್ (Rajpal Yadav) ಅವರು ಸಾಲ ಮರುಪಾವತಿ ಮಾಡದಿರುವ, ಚೆಕ್ ಬೌನ್ಸ್ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತವಾಗಿದ್ದು ಜೈಲುವಾಸಿಯಾಗಿದ್ದರು. ಆದರೆ ಸಹೋದರನ ಮಗಳ ಮದುವೆಗಾಗಿ ಒಂದು ತಿಂಗಳ ಕಾಲ ಜೈಲಿನಿಂದ ಜಾಮೀನು ಪಡೆದು ಹೊರಬಂದಿದ್ದು, ಇಂದು ಡಿಜಿಟಲ್ ವೇದಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ರಾಜ್​​ಪಾಲ್ ಯಾದವ್ ಅವರು ತಾವು ಶಿಕ್ಷೆ ಅನುಭವಿಸುತ್ತಿರುವ ಚೆಕ್ ಬೌನ್ಸ್ ಪ್ರಕರಣ, ಸಾಲ ಇನ್ನೂ ಇತರೆ ವಿಷಯಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬೆಂಗಳೂರಿನಲ್ಲಿ ಮೂವರನ್ನು ಬಲಿ ಪಡೆದ ಮಳೆ ನೀರಿನ ಇಂಗು ಗುಂಡಿ – Kannada News | Bengaluru Sump Tragedy: 3 Dead Due to Chemical Fumes in Rainwater Pit

ಬೆಂಗಳೂರು, ಫೆಬ್ರವರಿ 28: ಮಳೆ ನೀರಿನ ಇಂಗು ಗುಂಡಿಗೆ ಮೂರು ಬಲಿ (death) ಆಗಿರುವಂತಹ ಘಟನೆ ನಗರದ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲದ ವೃತ್ತದ ಬಳಿ ನಡೆದಿದೆ. ಮುನಿಶಾಮಪ್ಪ(67), ರುದ್ರಕುಮಾರ್(40) ಮತ್ತು ವಿಶ್ವನಾಥ್ ಆಚಾರಿ(24) ಮೃತರು. ವೈಟ್‌ಫೀಲ್ಡ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಮಾಲೀಕ ಮುನಿಶಾಮಪ್ಪ 12 ವರ್ಷಗಳ ಹಿಂದೆಯೇ ಇಂಗು ಗುಂಡಿ ನಿರ್ಮಿಸಿದ್ದರೂ ಬಳಸುತ್ತಿರಲಿಲ್ಲ. ಹೀಗಾಗಿ ನೀರಿನಲ್ಲಿ ಬಿದ್ದ ವಸ್ತುಗಳು ಕೊಳೆತು ನಾರುತ್ತಿದ್ದವು. ಕೆಮಿಕಲ್ ಹಾಕಿ ಕ್ಲೀನ್ ಮಾಡಲು ಮುಂದಾಗಿದ್ದರು. ಈ ವೇಳೆ  ಉಸಿರಾಟದ ತೊಂದರೆಯಾಗಿ ಮುನಿಶಾಮಪ್ಪ ಮೂರ್ಛೆ ಹೋಗಿದ್ದಾರೆ.

ಇದನ್ನೂ ಓದಿ: ಕುಡಿದ ನಶೆಯಲ್ಲಿ ವ್ಯಕ್ತಿ ಮೇಲೆ ಕಾರು ಹರಿಸಿ ಕೊಲೆ; ಪ್ರಭಾವಿ ಮುಖಂಡರ ಮಕ್ಕಳು ಅಂದರ್!

ಮಾಲೀಕನನ್ನು ರಕ್ಷಿಸಲು ಹೋದ ಪ್ಲಂಬರ್ ರುದ್ರಕುಮಾರ್​​ ಮೂರ್ಛೆ ಹೋಗಿದ್ದಾರೆ. ಇವರಿಬ್ಬರನ್ನು ನೋಡಲು ಹೋದ ವಿಶ್ವನಾಥ್ ಆಚಾರಿ ಎಂಬ ಯುವಕ ಕೂಡ ಮೂರ್ಛೆಹೋಗಿದ್ದಾನೆ. ವಿಶ್ವನಾಥ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೂವರು ಮೃತಪಟ್ಟಿದ್ದಾರೆ.

ಸಾರಿಗೆ ಬಸ್​ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ದುರ್ಮರಣ

ಸಾರಿಗೆ ಬಸ್​ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಬಸವರಾಜ್​(21) ಮೃತ ವಿದ್ಯಾರ್ಥಿ. ಆಟೋದಲ್ಲಿ ಹೋಗ್ತಿದ್ದಾಗ ಬಸವರಾಜ್ ಆಯತಪ್ಪಿ ಕೆಳಗೆ ಬಿದಿದ್ದಾರೆ. ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದ. ರಾಯಚೂರು ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಓರ್ವ ಸಾವು, ಮೂವರಿಗೆ ಗಾಯ

ಹಾಸನ‌ ಜಿಲ್ಲೆ ಸಕಲೇಶಪುರ ತಾಲೂಕಿನ ಗುಲಗಳಲೆ ಬಳಿ ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿರುವಂತಹ ಘಟನೆ ನಡೆದಿದೆ. ತಮಿಳುನಾಡು ಮೂಲದ ಧನುಷ್(25) ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 5.24 ಕೋಟಿ ರೂ ಮೌಲ್ಯದ ಡ್ರಗ್ಸ್, ಗಾಂಜಾ ಜಪ್ತಿ: ಮಹಿಳೆಯರಿಬ್ಬರು ಸೇರಿ 16 ಆರೋಪಿಗಳ ಬಂಧನ

ಗಂಭೀರ ಗಾಯಗೊಂಡ ಮೂವರಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ನೇಹಿತರ ಜೊತೆ ಕಾರಿನಲ್ಲಿ ಧರ್ಮಸ್ಥಳಕ್ಕೆ ಧನುಷ್ ಹೊರಟಿದ್ದರು. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಧನು ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಏನೆಲ್ಲ ಸಿಗಲಿದೆ…?

ಮಾರ್ಚ್ 2026ರಲ್ಲಿ ಧನು ರಾಶಿಯವರಿಗೆ ಗ್ರಹಗತಿಗಳ ಸಂಚಾರವು ಜೀವನದ ವಿವಿಧ ಆಯಾಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಧನು ರಾಶಿಯ ಅಧಿಪತಿ ಗುರುವು ಈ ಸಮಯದಲ್ಲಿ ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ನಿಮಗೆ ವಿಶೇಷ ಶಕ್ತಿಯನ್ನು ನೀಡುತ್ತದೆ.

ಧನು ರಾಶಿ:

ಮಾರ್ಚ್ 2026ರ ದಶಫಲಗಳ ಸಮೀಕ್ಷೆಯಲ್ಲಿ
​ಧನು ರಾಶಿಯವರಿಗೆ ಈ ತಿಂಗಳು ಸಾಮಾಜಿಕ ಗೌರವ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರುವ ಲಕ್ಷಣಗಳಿವೆ. ಆದರೆ, ನಾಲ್ಕನೇ ಮನೆಯಲ್ಲಿರುವ ಶನಿಯ ಪ್ರಭಾವವು ಸ್ವಲ್ಪ ಎಚ್ಚರಿಕೆಯನ್ನು ಬಯಸುತ್ತದೆ.

​ಉತ್ತಮ ಫಲ ನೀಡುವ ದಶೆಗಳು

​ಈ ದಶೆಗಳು ನಡೆಯುತ್ತಿದ್ದರೆ ನಿಮಗೆ ಅದೃಷ್ಟ ಮತ್ತು ಯಶಸ್ಸು ಒದಗಿ ಬರಲಿದೆ.

​ಗುರು ದಶೆ :

ಧನು ರಾಶಿಯವರಿಗೆ ಗುರುವು ಲಗ್ನಾಧಿಪತಿಯಾಗಿದ್ದು, ಈ ಸಮಯದಲ್ಲಿ ಏಳನೇ ಮನೆಯಲ್ಲಿ ಇರುತ್ತಾನೆ. ಈ ದಶೆ ನಡೆಯುತ್ತಿದ್ದರೆ ಅವಿವಾಹಿತರಿಗೆ ವಿವಾಹ ಯೋಗ, ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಲಾಭ ಮತ್ತು ಸಮಾಜದಲ್ಲಿ ದೊಡ್ಡ ಮಟ್ಟದ ಹೆಸರು ಸಿಗಲಿದೆ.

​ಸೂರ್ಯ ದಶೆ :

ಮಾರ್ಚ್ ಮಧ್ಯಭಾಗದವರೆಗೆ ಸೂರ್ಯನು ಅನುಕೂಲಕರ ಸ್ಥಾನದಲ್ಲಿರುವುದರಿಂದ ಸರ್ಕಾರಿ ಕೆಲಸಗಳಲ್ಲಿ ಜಯ ಮತ್ತು ತಂದೆಯ ಕಡೆಯಿಂದ ಆರ್ಥಿಕ ಸಹಾಯ ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿರುವವರಿಗೆ ಇದು ಸುವರ್ಣ ಕಾಲ.

​ಮಧ್ಯಮ ಫಲ ನೀಡುವ ದಶೆಗಳು

​ಈ ದಶೆಗಳು ನಡೆಯುತ್ತಿದ್ದರೆ ಫಲಿತಾಂಶಗಳು ಮಿಶ್ರಿತವಾಗಿರುತ್ತವೆ. ಕೆಲಸಗಳು ಸ್ವಲ್ಪ ವಿಳಂಬವಾಗಿ ಪೂರ್ಣಗೊಳ್ಳುತ್ತವೆ.

​ಬುಧ ದಶೆ :

ಬುಧನು ನಿಮ್ಮ ಹತ್ತನೇ ಮನೆಯ ಅಧಿಪತಿಯಾಗಿದ್ದರೂ, ಮಾರ್ಚ್ ಆರಂಭದಲ್ಲಿ ವಕ್ರಗತಿಯಲ್ಲಿರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಗೊಂದಲಗಳು ಉಂಟಾಗಬಹುದು. ಮಾತಿನ ಮೇಲೆ ಸಂಯಮವಿದ್ದರೆ ವ್ಯಾಪಾರದಲ್ಲಿ ಸಾಧಾರಣ ಲಾಭ ಗಳಿಸಬಹುದು.

​ಶುಕ್ರ ದಶೆ :

ಐಷಾರಾಮಿ ಜೀವನದ ಮೇಲೆ ಆಸೆ ಹೆಚ್ಚಾಗಲಿದೆ. ಶುಕ್ರನ ದಶೆಯು ಹಣಕಾಸಿನ ಹರಿವನ್ನು ನೀಡಿದರೂ, ಅನಗತ್ಯ ಖರ್ಚುಗಳನ್ನು ಸಮತೋಲನ ಮಾಡುವುದು ಸವಾಲಾಗಬಹುದು. ಪ್ರೇಮ ಜೀವನದಲ್ಲಿ ಮಿಶ್ರ ಪ್ರತಿಕ್ರಿಯೆ ಇರುತ್ತದೆ.

​ಅಧಮ ಅಥವಾ ಎಚ್ಚರಿಕೆಯ ದಶೆಗಳು

​ಈ ದಶೆಗಳು ನಡೆಯುತ್ತಿರುವಾಗ ಮಾನಸಿಕ ಮತ್ತು ದೈಹಿಕ ಜಾಗರೂಕತೆ ಅತ್ಯಗತ್ಯ.

​ಶನಿ ದಶೆ :

ಧನು ರಾಶಿಯವರಿಗೆ ಶನಿಯು ಪ್ರಸ್ತುತ ನಾಲ್ಕನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದನ್ನು ಅರ್ಧಾಷ್ಟಮ ಶನಿ ಎನ್ನಲಾಗುತ್ತದೆ. ಶನಿ ದಶೆ ಅಥವಾ ಅಂತರ್ದಶೆ ನಡೆಯುತ್ತಿದ್ದರೆ ಮನೆಯಲ್ಲಿ ಅಶಾಂತಿ, ತಾಯಿಯ ಆರೋಗ್ಯದಲ್ಲಿ ಏರುಪೇರು ಅಥವಾ ಆಸ್ತಿ ವಿಚಾರದಲ್ಲಿ ವಿವಾದಗಳು ಉಂಟಾಗಬಹುದು.

​ರಾಹು ದಶೆ :

ರಾಹುವು ನಾಲ್ಕನೇ ಮನೆಯಲ್ಲಿ ಶನಿಯೊಂದಿಗೆ ಸೇರುವುದರಿಂದ ಮಾನಸಿಕ ನೆಮ್ಮದಿಗೆ ಭಂಗ ಬರಬಹುದು. ವಿನಾಕಾರಣ ಭಯ ಅಥವಾ ಗಾಬರಿ ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹೊಸ ಮನೆ ಖರೀದಿಸುವ ನಿರ್ಧಾರವನ್ನು ಮುಂದೂಡುವುದು ಉತ್ತಮ.

ಗುರುವು ನಿಮ್ಮ ರಾಶ್ಯಾಧಿಪತಿಯಾಗಿರುವುದರಿಂದ ವಿಷ್ಣುವಿನ ಆರಾಧನೆ ನಿಮಗೆ ಆರ್ಥಿಕ ಮತ್ತು ಮಾನಸಿಕ ಇನ್ನಷ್ಟು ಸ್ಥಿರತೆ ನೀಡುತ್ತದೆ. ಪ್ರತಿ ಶನಿವಾರ ಹನುಮಂತನಿಗೆ ಅಥವಾ ಶನಿದೇವನಿಗೆ ಎಳ್ಳೆಣ್ಣೆ ದೀಪ ಹಚ್ಚಿ. ಇದು ಅರ್ಧಾಷ್ಟಮ ಶನಿಯ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದರಿಂದ ಗುರುವಿನ ಕೃಪೆಗೂ ಪಾತ್ರರಾಗಲು ಸಾಧ್ಯ.

– ಲೋಹಿತ ಹೆಬ್ಬಾರ್

Source link

ದಯವಿಟ್ಟು ನಮ್ಮನ್ನು ಬೇಗ ಇಲ್ಲಿಂದ ಕರೆದುಕೊಂಡು ಹೋಗಿ: ಭಾರತ ಸರ್ಕಾರಕ್ಕೆ ಮನವಿ ಮಾಡಿದ ವಿದ್ಯಾರ್ಥಿ – Kannada News | Urgent Plea: Indian Students in Iran Seek Govt Help Amidst Israel US Airstrikes

ಇಸ್ರೇಲ್ ಮತ್ತು ಅಮೆರಿಕದ ಭೀಕರ ವೈಮಾನಿಕ ದಾಳಿಯಿಂದಾಗಿ ಇರಾನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಈಗ ತೀವ್ರ ಆತಂಕದಲ್ಲಿದ್ದಾರೆ. ವಿಶೇಷವಾಗಿ ತೆಹ್ರಾನ್‌ನಲ್ಲಿರುವ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾರತ ಸರ್ಕಾರಕ್ಕೆ ತುರ್ತು ತೆರವು ಕಾರ್ಯಾಚರಣೆ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಸರಣಿ ವೈಮಾನಿಕ ದಾಳಿಗಳು ನಡೆಯುತ್ತಿವೆ. ನಾವು ಇರುವ ಜಾಗದ ಹತ್ತಿರವೇ ಭಾರಿ ಸ್ಫೋಟದ ಶಬ್ದಗಳು ಕೇಳಿಸುತ್ತಿವೆ. ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುತ್ತಿದೆ, ಆಹಾರ ಮತ್ತು ನೀರಿಗೆ ತೊಂದರೆಯಾಗುತ್ತಿದೆ. ನಾವು ಇಲ್ಲೇ ಸಿಲುಕಿಕೊಂಡಿದ್ದೇವೆ, ದಯವಿಟ್ಟು ಭಾರತ ಸರ್ಕಾರ ನಮ್ಮನ್ನು ಬೇಗ ಇಲ್ಲಿಂದ ಕರೆದೊಯ್ಯಲಿ.” ಎಂದು ಭಾರತೀಯ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬುದಾಭಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ಡ್ರೋನ್ ಪ್ರತಾಪ್ – Kannada News | Drone Prathap Stuck in Abu Dhabi airport shared video

ಅಮೆರಿಕ ಮತ್ತು ಇಸ್ರೇಲ್, ಇರಾನಿನ ಮೇಲೆ ದಾಳಿ ಮಾಡಿದ್ದು ಯದ್ಧ ಭೀತಿ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಭಾರತದ ಅನೇಕ ಅಂತರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿದೆ. ವಿಶೇಷವಾಗಿ ಮಧ್ರಪ್ರಾಚ್ಯ ದೇಶಗಳಿಗೆ ಹೋಗಬೇಕಿದ್ದ ಎಲ್ಲ ವಿಮಾನಗಳನ್ನು ಸಹ ವಿಮಾನಯಾನ ಸಂಸ್ಥೆಗಳು ರದ್ದು ಮಾಡಿದ್ದು, ಇದರಿಂದಾಗಿ ವಿದೇಶಕ್ಕೆ ತೆರಳಿದ್ದ ಸಾವಿರಾರು ಭಾರತೀಯರು ವಿಮಾನ ನಿಲ್ದಾಣಗಳಲ್ಲಿಯೇ ಸಿಲುಕಿಕೊಂಡಿದ್ದಾರೆ. ಮಾಜಿ ಬಿಗ್​​ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಸಹ ವಿದೇಶದಲ್ಲಿ ಸಿಲುಕಿಕೊಂಡಿದ್ದು, ವಿಮಾನ ನಿಲ್ದಾಣದಿಂದ ವಿಡಿಯೋ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ.

ಡ್ರೋನ್ ಪ್ರತಾಪ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ತಾವು ಅಬುದಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ಹೇಳಿದ್ದಾರೆ. ಇಂದು ರಾತ್ರಿ ಅವರು ಬೆಂಗಳೂರಿಗೆ ವಾಪಸ್ ಹೊರಡಬೇಕಿತ್ತಂತೆ ಅದಕ್ಕಾಗಿ ಟಿಕೆಟ್ ಸಹ ಬುಕ್ ಮಾಡಿದ್ದರಂತೆ, ಆದರೆ ಯುದ್ಧ ಭೀತಿಯಿಂದಾಗಿ ಭಾರತದ ಎಲ್ಲ ವಿಮಾನಗಳನ್ನು ರದ್ದು ಮಾಡಲಾಗಿದೆ. ಇದೇ ಕಾರಣಕ್ಕೆ ತಾವು ಅಬುದಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ಡ್ರೋನ್ ಪ್ರತಾಪ್ ಹೇಳಿದ್ದಾರೆ.

‘ಮುಂದಿನ 12 ಗಂಟೆಗಳ ಕಾಲದ ಎಲ್ಲ ವಿಮಾನ ಸೇವೆಗಳನ್ನು ರದ್ದು ಮಾಡಿರುವುದಾಗಿ ಹೇಳುತ್ತಿದ್ದಾರೆ, 12 ಗಂಟೆ ಆದ ಬಳಿಕ ಹೊಸ ಅಪ್​​​ಡೇಟ್ ಕೊಡುತ್ತಾರಂತೆ. ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಅನೌನ್ಸ್​​ಮೆಂಟ್ ಮಾಡುತ್ತಿದ್ದಾರೆ’ ಎಂದಿರುವ ಡ್ರೋನ್ ಪ್ರತಾತ್, ಅಲ್ಲಿ ವಿಮಾನಗಳು ಕ್ಯಾನ್ಸಲ್ ಆಗಿರುವ ದೊಡ್ಡ ಪಟ್ಟಿಯನ್ನು ವಿಡಿಯೋನಲ್ಲಿ ತೋರಿಸಿದ್ದಾರೆ. ಮುಂದಿನ ಅರ್ಧದಿನ ಡ್ರೋನ್ ಪ್ರತಾಪ್ ಮತ್ತು ಭಾರತಕ್ಕೆ ಬರಲು ಅಣಿಯಾಗಿದ್ದ ಹಲವಾರು ಮಂದಿ ವಿಮಾನ ನಿಲ್ದಾಣದಲ್ಲಿಯೇ ಕಳೆಯಬೇಕಿದೆ.

ಇದನ್ನೂ ಓದಿ:ಸಹಾಯ ಮಾಡಿದವರನ್ನು ಮರೆಯಲಿಲ್ಲ ಡ್ರೋನ್ ಪ್ರತಾಪ್

ಕಳೆದ ಜನವರಿಯಲ್ಲಿ ವಿಡಿಯೋ ಮಾಡಿದ್ದ ಡ್ರೋನ್ ಪ್ರತಾಪ್, ತಮ್ಮ ಡ್ರೋನಾರ್ಕ್ ಕಂಪೆನಿಯನ್ನು ದುಬೈನಲ್ಲಿ ನೊಂದಣಿ ಮಾಡಿಸಿದ್ದಾಗಿ ಹೇಳಿದ್ದರು. ಇತ್ತೀಚೆಗೆ ದುಬೈಗೆ ಹೋಗಿದ್ದ ಡ್ರೋನ್ ಪ್ರತಾಪ್ ಅಲ್ಲಿ ತಮ್ಮ ಬೆಂಬಲಿಗರೊಬ್ಬರನ್ನು ಭೇಟಿಯಾಗಿ ಅವರಿಗೆ ಉಡುಗೊರೆ ನೀಡಿದ್ದರು. ಬಳಿಕ ಅಲ್ಲಿನ ಫಾರಂ ಒಂದರಲ್ಲಿ ಹಣ್ಣು ಕೃಷಿ ನೋಡಿ, ಮಾಹಿತಿಯನ್ನು ವ್ಲಾಗ್​​​ನಲ್ಲಿ ಹಂಚಿಕೊಂಡಿದ್ದರು. ಅಲ್ಲಿನ ಕನ್ನಡಿಗರ ಹೋಟೆಲ್​​ಗೆ ಭೇಟಿ ನೀಡಿ ಮುದ್ದೆ ಸಹ ಮಾಡಿದ್ದರು. ಆದರೆ ಇದೀಗ ವಾಪಸ್ ಬೆಂಗಳೂರಿಗೆ ಬರುವ ಸಮಯದಲ್ಲಿ ಅವರ ವಿಮಾನ ರದ್ದಾಗಿ ಅಬುದಾಬಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:56 pm, Sat, 28 February 26

Source link

ದೇವಸ್ಥಾನ ನಿರ್ಮಾಣಕ್ಕೆ ಟೊಂಕ ಕಟ್ಟಿದ ಗೃಹಲಕ್ಷ್ಮಿಯರು: ಗ್ಯಾರಂಟಿ ಹಣ ದೇಣಿಗೆ ನೀಡಿದ ಮಹಿಳೆಯರು – Kannada News | Gadag: Gruhalakshmi Beneficiaries Donate Scheme Funds for Renuka Yellamma Temple

ಗದಗ, ಫೆಬ್ರವರಿ 28: ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಮಾದರಿ ಕಾರ್ಯ ಮಾಡಿದ್ದಾರೆ. ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದ ನಿರ್ಮಾಣ ಕಾಮಗಾರಿಗೆ ತಮ್ಮ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಸುಮಾರು 850 ಮಹಿಳೆಯರು ಸ್ವಯಂಪ್ರೇರಣೆಯಿಂದ ಈ ದೇಣಿಗೆ ಸಂಗ್ರಹದಲ್ಲಿ ಭಾಗವಹಿಸಿದ್ದಾರೆ. ನಾಲ್ಕು ದಿನದಲ್ಲಿ 2 ಲಕ್ಷ 50 ಸಾವಿರ ರೂ ಸಂಗ್ರಹಿಸಿದ್ದಾರೆ. ದೇವಸ್ಥಾನದ ಕಟ್ಟಡ ಕಾಮಗಾರಿಯು ಹಣಕಾಸಿನ ತೊಂದರೆಯಿಂದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೀಗ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು ಕೆಲಸವನ್ನು ಪುನರಾರಂಭಿಸಲು ಮಹಿಳೆಯರು ನಿರ್ಧರಿಸಿದ್ದಾರೆ. ದೇವಾಲಯ ಸಂಪೂರ್ಣಗೊಳ್ಳುವವರೆಗೂ ಅಗತ್ಯಬಿದ್ದರೆ ಮತ್ತಷ್ಟು ದೇಣಿಗೆ ನೀಡುವುದಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಆಂಧ್ರದ ಕಾಕಿನಾಡ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 21 ಜನರ ಸಜೀವದಹನ – Kannada News | Andhra Pradesh Kakinada fireworks factory blast kills 21 dozens injured

ಕಾಕಿನಾಡ, ಫೆಬ್ರವರಿ 28: ಆಂಧ್ರದ ಕಾಕಿನಾಡ ಜಿಲ್ಲೆಯ ಸಮರ್ಲಕೋಟ ಮಂಡಲದ ವೆಟ್ಲಪಲೆಂನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 21 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಘಟನೆಯ ಕುರಿತು ಆಂಧ್ರದ (Andhra Pradesh) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ವಿಜಯನಗರದ ಉನ್ನತ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚಂದ್ರಬಾಬು ಮಾತನಾಡಿದರು. ಅಪಘಾತದ ಕಾರಣಗಳ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳಿಂದ ವಿಚಾರಿಸಿದರು.

ಸ್ಫೋಟದ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳೀಯರು ಕೂಡ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ. ಪಟಾಕಿಗಳನ್ನು ತಯಾರಿಸುವಾಗ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದ ಪರಿಣಾಮವಾಗಿ ಕಾರ್ಖಾನೆಯ ಬಳಿಯ ಕಟ್ಟಡಗಳು ಸಹ ನಾಶವಾದವು.

ಇದನ್ನೂ ಓದಿ: ಕಾಂಗ್ರೆಸ್ ಕುರ್ಚಿ ಕದನ: ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಸತೀಶ್ ಜಾರಕಿಹೊಳಿ ಸ್ಫೋಟಕ ಮಾಹಿತಿ

ಅಪಘಾತ ಸಂಭವಿಸಿದ ಸೂರ್ಯ ಪಟಾಕಿ ಕಾರ್ಖಾನೆಯಲ್ಲಿ ಸುಮಾರು 30 ಜನರು ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ತಿಳಿಸಿದರು. ಈ ಹಠಾತ್ ಸ್ಫೋಟದಿಂದಾಗಿ ಕಾರ್ಖಾನೆಯಲ್ಲಿದ್ದ ಕಾರ್ಮಿಕರು ಬೆಂಕಿಯಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯ ಪಟಾಕಿ ತಯಾರಕರ ಪ್ರಾಣಹಾನಿಗೆ ಸಿಎಂ ಚಂದ್ರಬಾಬು ದುಃಖ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PAK vs SL: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆಗಳನ್ನು ಮುರಿದ ಸಾಹಿಬ್ಜಾದಾ ಫರ್ಹಾನ್

Source link

Exit mobile version