ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು

ಬೀಜಿಂಗ್, ಮೇ 3: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ತೆಗೆದುಹಾಕಿ ಅವರ ಜಾಗಕ್ಕೆ AI ಅಳವಡಿಸಿಕೊಳ್ಳುತ್ತಿವೆ. ಆದರೆ ಚೀನಾದ ನ್ಯಾಯಾಲಯವೊಂದು ಈ ಬಗ್ಗೆ ಐತಿಹಾಸಿಕ ತೀರ್ಪು ನೀಡಿದ್ದು, “ಕಂಪನಿಗಳು ಲಾಭಕ್ಕಾಗಿ ಅಥವಾ ಕೆಲಸದ ವೇಗಕ್ಕಾಗಿ AI ಬಳಸಿಕೊಳ್ಳುವುದು ಅವರ ವೈಯಕ್ತಿಕ ನಿರ್ಧಾರ. ಆದರೆ ಈ ನಿರ್ಧಾರದ ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಅಥವಾ ಅವರ ಸಂಬಳ ಕಡಿತಗೊಳಿಸುವುದು ಕಾನೂನುಬಾಹಿರ” ಎಂದು ಹೇಳಿದೆ.

ಚೀನಾದ ಹ್ಯಾಂಗ್‌ಝೌ (Hangzhou) ನ್ಯಾಯಾಲಯದಿಂದ ಈ ತೀರ್ಪು ಬಂದಿದೆ. ವರದಿ ಪ್ರಕಾರ, ತಂತ್ರಜ್ಞಾನ ಕಂಪನಿಯೊಂದು ತನ್ನ ಹಿರಿಯ ಉದ್ಯೋಗಿಯೊಬ್ಬರ ಕೆಲಸವನ್ನು AI ಮೂಲಕ ಮಾಡಿಸಲು ಮುಂದಾಯಿತು. ಆ ಉದ್ಯೋಗಿಗೆ ನೀಡುತ್ತಿದ್ದ ಕೆಲಸವನ್ನು AI ಮಾಡಬಲ್ಲದು ಎಂಬ ಕಾರಣ ನೀಡಿ, ಕಂಪನಿಯು ಅವರ ಸಂಬಳವನ್ನು ಶೇ. 40 ರಷ್ಟು ಕಡಿತಗೊಳಿಸಿ ಕೆಳಮಟ್ಟದ ಹುದ್ದೆಗೆ ವರ್ಗಾಯಿಸಿತು. ಉದ್ಯೋಗಿ ಇದಕ್ಕೆ ಒಪ್ಪದಿದ್ದಾಗ ಅವರನ್ನು ಕೆಲಸದಿಂದಲೇ ತೆಗೆದುಹಾಕಲಾಯಿತು.

ಇದನ್ನೂ ಓದಿ: ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?

ಕಂಪನಿಯ ನಿರ್ಧಾರಕ್ಕೆ ನೌಕರರು ಬಲಿಪಶುವಾಗಬಾರದು

ಕಂಪನಿಯು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಉದ್ಯಮದ ಲಾಭಕ್ಕಾಗಿ ಮಾಡುವ ನಿರ್ಧಾರವೇ ಹೊರತು, ಅದು ಅನಿವಾರ್ಯ ಪರಿಸ್ಥಿತಿಯಲ್ಲ. ಇಂತಹ ಸಂದರ್ಭದಲ್ಲಿ ಉದ್ಯೋಗಿಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಚೀನಾದ ಕಾರ್ಮಿಕ ಕಾನೂನಿನ ಪ್ರಕಾರ, ಕಂಪನಿಯು ನಷ್ಟದಲ್ಲಿದ್ದಾಗ ಅಥವಾ ಸಂಪೂರ್ಣವಾಗಿ ಮುಚ್ಚುವ ಹಂತದಲ್ಲಿದ್ದಾಗ ಮಾತ್ರ ಉದ್ಯೋಗಿಗಳನ್ನು ತೆಗೆಯಬಹುದು. AI ಬಂದಿದೆ ಎಂಬುದು ಉದ್ಯೋಗಿಗಳನ್ನು ತೆಗೆಯಲು ಕಾನೂನುಬದ್ಧ ಕಾರಣವಾಗುವುದಿಲ್ಲ. AI ಬಳಕೆ ಮಾಡುವುದರಿಂದ ಉದ್ಯೋಗಿಯ ಜವಾಬ್ದಾರಿ ಕಡಿಮೆಯಾದರೂ, ಅವರ ಸಂಬಳವನ್ನು ಅಸಮಂಜಸವಾಗಿ ಕಡಿತಗೊಳಿಸುವುದು ತಪ್ಪು ಎಂದು ನ್ಯಾಯಾಲಯ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಇದರ ಮಹತ್ವ

ಪ್ರಪಂಚದಾದ್ಯಂತ AI ಕಾರಣದಿಂದ ಉದ್ಯೋಗ ನಷ್ಟವಾಗುವ ಭೀತಿ ಎದುರಾಗಿರುವ ಸಮಯದಲ್ಲಿ, ಚೀನಾ ನ್ಯಾಯಾಲಯದ ಈ ತೀರ್ಪು ಉದ್ಯೋಗಿಗಳ ಪರವಾಗಿ ದೊಡ್ಡ ಶಕ್ತಿಯಾಗಿ ನಿಂತಿದೆ. ಕಂಪನಿಗಳು ಕೇವಲ ತಂತ್ರಜ್ಞಾನದ ಹಿಂದೆ ಓಡದೆ, ತಮ್ಮ ಕೆಳಗೆ ಕೆಲಸ ಮಾಡುವ ಮನುಷ್ಯರ ಸಾಮಾಜಿಕ ಮತ್ತು ಆರ್ಥಿಕ ಸುರಕ್ಷತೆಯ ಜವಾಬ್ದಾರಿಯನ್ನೂ ಹೊರಬೇಕು ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ.

ಇದನ್ನೂ ಓದಿ: ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಗಣನೀಯ ಏರಿಕೆ

ಸಂಕ್ಷಿಪ್ತವಾಗಿ ಹೇಳುವುದಾದರೆ, “ನೀವು AI ಬಳಸುವುದಾದರೆ ಬಳಸಿ, ಆದರೆ ಅದರ ಹೆಸರಿನಲ್ಲಿ ನೌಕರರ ಜೀವನದ ಜೊತೆ ಆಟವಾಡಬೇಡಿ” ಎಂದು ಚೀನಾ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುಡು ಬಿಸಿಲಿನಲ್ಲಿ ದ್ವಿಚಕ್ರ ವಾಹನ ಚಲಾಯಿಸುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ – Kannada News | It is essential to take care of these things while riding two wheeler in the summer

ಈ ಸುಡು ಬೇಸಿಗೆಯಲ್ಲಿ (summer) ಮನೆಯಿಂದ ಹೊರಗಡೆ ಕಾಲಿಡಲು ಸಹ ಸಾಧ್ಯವಾಗುವುದಿಲ್ಲ. ಅದರಲ್ಲೂ ಸೂರ್ಯನ ಪ್ರಕರ ಶಾಖದ ನಡುವೆ ದ್ವಿಚಕ್ರ ವಾಹನ ಸವಾರಿ ಮಾಡುವುದು ಸವಾಲಿನ ಕೆಲಸವೇ ಸರಿ. ಹೌದು ತೀವ್ರವಾದ ಬಿಸಿಲು ಮತ್ತು ಬಿಸಿ ಗಾಳಿಯು ದೇಹವನ್ನು ಆಯಾಸಗೊಳಿಸುತ್ತದೆ. ದೇಹವು ಬೇಗನೆ ದಣಿದಿದೆ, ಗಮನವು ವಿಚಲಿತವಾಗುತ್ತದೆ ಮತ್ತು ಸಣ್ಣದೊಂದು ಅಜಾಗರೂಕತೆಯು ಸಹ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಈ ಶಾಖದ ಸಮಯದಲ್ಲಿ ಬೈಕ್‌, ಸ್ಕೂಟರ್‌ ಓಡಿಸುವಾಗ ನಿಮ್ಮ ಆರೋಗ್ಯದ ಜೊತೆಗೆ ಸುರಕ್ಷತೆಯನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಈ ವಾಹನ ಚಲಾಯಿಸುವಾಗ ಈ ಕೆಲವು ಪ್ರಮುಖ ವಿಚಾರಗಳನ್ನು ಗನಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ತೀವ್ರ ಬಿಸಿಲಿನಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಈ ವಿಚಾರಗಳನ್ನು ಗಮನದಲ್ಲಿಡಿ:

ತೀವ್ರ ಬಿಸಿಲಿನ ಶಾಖದಲ್ಲಿ ಬೈಕ್ ಸವಾರಿ ಮಾಡುವುದರಿಂದ ಆಯಾಸವಾಗುವುದಲ್ಲದೆ, ಆರೋಗ್ಯಕ್ಕೂ ಹಾನಿಯಾಗುತ್ತದೆ. ಸ್ವಲ್ಪ ಕಾಳಜಿ ವಹಿಸಿದರೆ, ಸುರಕ್ಷಿತವಾಗಿ ಚಾಲನೆ ಮಾಡಬಹುದು.

  • ಮಧ್ಯಾಹ್ನ 12:00 ರಿಂದ ಸಂಜೆ 4:00 ರವರೆಗೆ ಬಿಸಿಲು ಜಾಸ್ತಿ ಇರುವಂತಹ ಸಂದರ್ಭದಲ್ಲಿ ದ್ವಿಚಕ್ರ ವಾಹನ ಓಡಿಸುವುದನ್ನು ತಪ್ಪಿಸಿ. ತೀರಾ ಅಗತ್ಯವಿದ್ದರೆ ಮಾತ್ರ ಆ ಸಮಯದಲ್ಲಿ ಪ್ರಯಾಣಿಸಿ.
  • ಬಿಸಿ ಗಾಳಿಯಿಂದಾಗಿ ಶುಷ್ಕತೆ ಹೆಚ್ಚಾಗುತ್ತದೆ. ಬಿಸಿ ಗಾಳಿಯೊಂದಿಗೆ ಧೂಳು ಕೂಡ ಹಾರುತ್ತಿರುತ್ತವೆ. ಇದರಿಂದಾಗಿ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ಶಾಖದಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಯಾವಾಗಲೂ ಹೆಲ್ಮೆಟ್ ಧರಿಸಿ. ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದರಿಂದ, ಶಾಖದ ಹೊಡೆತದಿಂದ ಪಾರಾಗಬಹುದು. ಧೂಳಿನಿಂದ ಕಣ್ಣಿಗೆ ಹಾನಿಯಾಗದಂತೆ ನೋಡಿಕೊಳ್ಳಬಹುದು.
  • ದೀರ್ಘ ಪ್ರಯಾಣಗಳಲ್ಲಿ ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ ಮತ್ತು ಆಗಾಗ್ಗೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಬಾಯಾರಿಕೆಯಾಗುವವರೆಗೂ ಕಾಯುವ ಬದಲು ಆಗಾಗ್ಗೆ ನೀರು ಕುಡಿಯಿರಿ. ಹೆಚ್ಚುವರಿಯಾಗಿ, ಶಕ್ತಿಯನ್ನು ಕಾಪಾಡಿಕೊಳ್ಳಲು ORS ಅಥವಾ ಎಳನೀರನ್ನು ಸಹ ಕುಡಿಯಬಹುದು.
  • ಬಿಸಿಲಿನ ಶಾಖದಲ್ಲಿ ದ್ವಿಚಕ್ರ ವಾಹನ ಚಲಾಯಿಸುವಾಗ ತಲೆತಿರುಗುವಿಕೆ, ಅತಿಯಾದ ಬೆವರುವಿಕೆ, ತಲೆನೋವು ಅಥವಾ ಹಠಾತ್ ಆಯಾಸ ಕಂಡುಬಂದರೆ, ಅವುಗಳನ್ನು ನಿರ್ಲಕ್ಷಿಸಬೇಡಿ. ಇವು ಶಾಖದ ಹೊಡೆತದ ಆರಂಭಿಕ ಲಕ್ಷಣಗಳಾಗಿರಬಹುದು. ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ನಿಲ್ಲಿಸಿ ನೆರಳಿನ ಅಥವಾ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯಿರಿ.
  • ಬೇಸಿಗೆಯಲ್ಲಿ ಸರಿಯಾದ ಬಟ್ಟೆಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.  ದಪ್ಪ ಚರ್ಮ ಅಥವಾ ಭಾರವಾದ ಬಟ್ಟೆಯ ಜಾಕೆಟ್‌ಗಳ ಬದಲಿಗೆ, ಮೆಶ್ ರೈಡಿಂಗ್ ಜಾಕೆಟ್‌ಗಳನ್ನು ಧರಿಸಿ. ಇವು ಗಾಳಿಯನ್ನು ಪ್ರಸಾರ ಮಾಡಲು ಅನುಮತಿಸುವ ಸಣ್ಣ ರಂಧ್ರಗಳನ್ನು ಹೊಂದಿರುತ್ತವೆ ಮತ್ತು ಸುರಕ್ಷತಾ ರಕ್ಷಾಕವಚವನ್ನು ಸಹ ಹೊಂದಿವೆ.
  • ಗಾಢ ಬಣ್ಣಗಳು ಸೂರ್ಯನ ಬೆಳಕನ್ನು ಆಕರ್ಷಿಸುತ್ತವೆ, ಆದ್ದರಿಂದ ಯಾವಾಗಲೂ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಯಾವಾಗಲೂ ಪೂರ್ಣ ತೋಳಿನ ಟಿ-ಶರ್ಟ್ ಧರಿಸಿ. ಹೆಚ್ಚು ಬಿಸಿಯಾಗದ ಮತ್ತು ಆರಾಮದಾಯಕವಾದ ಬೂಟುಗಳನ್ನು ಧರಿಸಿ.
  • ಬಿಸಿಲಿನಲ್ಲಿ ದೀರ್ಘಕಾಲ ಬೈಕ್ ಓಡಿಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ವಿಶೇಷವಾಗಿ ಕೈಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದ, ಬೈಕ್ ಸವಾರಿ ಮಾಡುವಾಗ, ಹತ್ತಿ ಅಥವಾ ತಿಳಿ ಬಟ್ಟೆಯ ಕೈಗವಸುಗಳನ್ನು ಧರಿಸಿ ಮತ್ತು ಕೈಗಳಿಗೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ.
  • ಪ್ರಕಾಶಮಾನವಾದ ಸೂರ್ಯನ ಬೆಳಕು ಮತ್ತು UV ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು, ಉತ್ತಮ ಗುಣಮಟ್ಟದ ಸನ್ಗ್ಲಾಸ್ ಧರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:02 pm, Sun, 3 May 26

Source link

ನಟ ಸುದೀಪ್ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು? – Kannada News | Actor sudeep helicopter Landing in DCM DK Shivakumar helipad In Sindhanur

ರಾಯಚೂರು, (ಮೇ 03): ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್(actor sudeep) , ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಇತರೆ ನಾಯಕರು ಭಾಗವಹಿಸಿದ್ದು, ನವದಂಪತಿಗಳಿಗೆ ಶುಭ ಹಾರೈಸಿದರು. ಆದ್ರೆ, ಸುದೀಪ್ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲವಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಹೆಲಿಕಾಪ್ಟರ್​​ ಲ್ಯಾಂಡಿಂಗ್​​ಗೆ ನಿಗದಿಯಾಗಿದ್ದ ಹೆಲಿಪ್ಯಾಡ್​​ ನಲ್ಲಿ ಸುದೀಪ್ ಹೆಲಿಕಾಪ್ಟರ್ ಲ್ಯಾಂಡ್ ಆಗಿರುವ ಘಟನೆ ನಡೆದಿದೆ.

ಸಿಂಧನೂರು ನಗರದ ಸರ್ಕಾರಿ ಕಾಲೇಜಿನಲ್ಲಿ ಡಿಸಿಎಂ, ನಟ ಸುದೀಪ್ ಸೇರಿ 3 ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಆದ್ರೆ, ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮೊದಲು ಬಂದ ನಟ ಸುದೀಪ್ ಇದ್ದ ಹೆಲಿಕಾಪ್ಟರ್, ಡಿಸಿಎಂಗೆ ನಿಗದಿಯಾಗಿದ್ದ ಸ್ಥಳದಲ್ಲಿ ಲ್ಯಾಂಡ್ ಆಗಿದೆ. ಬಳಿಕ ಎಚ್ಚೆತ್ತ ಪೊಲೀಸರು, ಹೆಲಿಕಾಪ್ಟರ್ ರೀ ಲ್ಯಾಂಡಿಂಗ್‌ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ತಮಗೆ ನಿಗದಿಪಡಿಸಿದ್ದ ಹೆಲಿಪ್ಯಾಡ್​​ನಲ್ಲಿ ಸುದೀಪ್ ಹೆಲಿಕಾಪ್ಟರ್ ರೀ ಲ್ಯಾಂಡಿಂಗ್‌ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

UPSSSC Recruitment: 708 ಅರಣ್ಯ ಮತ್ತು ವನ್ಯಜೀವಿ ರಕ್ಷಕ ಹುದ್ದೆಗೆ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಸಾಕು! – Kannada News | UPSSSC Forest and Wildlife Guard Recruitment 2026: 708 Vacancies, Apply Now!

ವನ್ಯಜೀವಿ ರಕ್ಷಕ ಹುದ್ದೆImage Credit source: Naturesafariindia

ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಉತ್ತರ ಪ್ರದೇಶ ಅಧೀನ ಸೇವೆಗಳ ಆಯ್ಕೆ ಆಯೋಗವು (UPSSSC) ಅರಣ್ಯ ರಕ್ಷಕ ಮತ್ತು ವನ್ಯಜೀವಿ ರಕ್ಷಕ ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 708 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಇದು ಉತ್ತಮ ವೇದಿಕೆಯಾಗಿದೆ.

ಹುದ್ದೆಗಳ ವರ್ಗೀಕರಣ:

ಈ ನೇಮಕಾತಿಯಲ್ಲಿ ಅರಣ್ಯ ರಕ್ಷಕ ಮತ್ತು ವನ್ಯಜೀವಿ ರಕ್ಷಕ ಎಂಬ ಎರಡು ಪ್ರಮುಖ ವಿಭಾಗಗಳಿವೆ. ಅರಣ್ಯ ರಕ್ಷಕ ವಿಭಾಗದಲ್ಲಿ ಸಾಮಾನ್ಯ ಆಯ್ಕೆಗೆ 318 ಮತ್ತು ವಿಶೇಷ ಆಯ್ಕೆಗೆ 329 ಹುದ್ದೆಗಳನ್ನು ಮೀಸಲಿಡಲಾಗಿದೆ. ಅದೇ ರೀತಿ ವನ್ಯಜೀವಿ ರಕ್ಷಕ ವಿಭಾಗದಲ್ಲಿ ಸಾಮಾನ್ಯ ವರ್ಗಕ್ಕೆ 10 ಮತ್ತು ವಿಶೇಷ ವರ್ಗಕ್ಕೆ 51 ಹುದ್ದೆಗಳು ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಆಸಕ್ತಿಯ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತೀಯ ನಾಗರಿಕರಾಗಿರಬೇಕು ಮತ್ತು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ PET-2025 ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಯೋಮಿತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳು 18 ರಿಂದ 40 ವರ್ಷದೊಳಗಿರಬೇಕು. ಸರ್ಕಾರದ ನಿಯಮದಂತೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಯ್ಕೆ ಪ್ರಕ್ರಿಯೆಯ ಹಂತಗಳು:

ಆಯ್ಕೆ ಪ್ರಕ್ರಿಯೆಯು ಬಹಳ ವ್ಯವಸ್ಥಿತವಾಗಿದ್ದು, ಅಭ್ಯರ್ಥಿಗಳನ್ನು ಮೊದಲು ಅವರ PET-2025 ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ 100 ಅಂಕಗಳ ಲಿಖಿತ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ನಕಾರಾತ್ಮಕ ಅಂಕಗಳ (Negative Marking) ವ್ಯವಸ್ಥೆ ಇರುತ್ತದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ದೈಹಿಕ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಪುರುಷರು 25 ಕಿ.ಮೀ ಮತ್ತು ಮಹಿಳೆಯರು 14 ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿರಬೇಕು. ಅಂತಿಮವಾಗಿ ವೈದ್ಯಕೀಯ ಪರೀಕ್ಷೆಯ ನಂತರ ನೇಮಕಾತಿ ಪೂರ್ಣಗೊಳ್ಳುತ್ತದೆ.

ಅರ್ಜಿ ಸಲ್ಲಿಕೆ ಮತ್ತು ಶುಲ್ಕ:

ಆಸಕ್ತ ಅಭ್ಯರ್ಥಿಗಳು UPSSSC ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು. ವಿಶೇಷವೆಂದರೆ ಈ ನೇಮಕಾತಿಗೆ ಯಾವುದೇ ಭಾರಿ ಮೊತ್ತದ ಅರ್ಜಿ ಶುಲ್ಕವಿಲ್ಲ, ಕೇವಲ  25ರೂ. ಸಂಸ್ಕರಣಾ ಶುಲ್ಕವನ್ನು ಪಾವತಿಸಿದರೆ ಸಾಕಾಗುತ್ತದೆ. ಅಭ್ಯರ್ಥಿಗಳು ತಮ್ಮ PET-2025 ನೋಂದಣಿ ಸಂಖ್ಯೆಯನ್ನು ಬಳಸಿ ಲಾಗಿನ್ ಆಗುವ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಪೂರ್ಣಗೊಳಿಸಿ, ಮುಂದಿನ ಉಲ್ಲೇಖಕ್ಕಾಗಿ ಪ್ರತಿಯನ್ನು ಮುದ್ರಿಸಿಕೊಳ್ಳಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:45 pm, Sun, 3 May 26

Source link

ಜಸ್ಟ್​​ ಹತ್ತೇ ನಿಮಿಷ ಲೇಟ್ ಆಗಿದ್ದಕ್ಕೆ​ ನೀಟ್ ಎಕ್ಸಾಂ ಬರೆಯಲು ನಿರಾಕರಣೆ: ಕಣ್ಣೀರಿಟ್ಟ ವಿದ್ಯಾರ್ಥಿನಿಯರು – Kannada News | Students Denied NEET Entry for Arriving 10 Minutes Late, Left in Tears

ಕಣ್ಣೀರು ಹಾಕಿದ ವಿದ್ಯಾರ್ಥಿನಿImage Credit source: tv9 kannada

ಬೆಂಗಳೂರು, ಮೇ 03: ನೀಟ್ (NEET) ಪರೀಕ್ಷೆಗೆ ನಿಗದಿತ ಸಮಯಕ್ಕಿಂತ ಕೆಲವೇ ನಿಮಿಷ ತಡವಾಗಿ ಆಗಮಿಸಿದ ಇಬ್ಬರು ವಿದ್ಯಾರ್ಥಿನಿಯರಿಗೆ (Students) ಪ್ರವೇಶ ನಿರಾಕರಿಸಿದ ಘಟನೆ ಬೆಂಗಳೂರಿನ ಎರಡು ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. 10 ನಿಮಿಷ ತಡವಾಗಿ ಬಂದಿದ್ದಕ್ಕೆ ಪರೀಕ್ಷೆ ಬರೆಯಲು ಸಿಬ್ಬಂದಿ ನಿರಾಕರಿಸಿದ್ದಾರೆ. ಪರೀಕ್ಷೆ ಬರೆಯಲು ಆಗದ ಹಿನ್ನಲೆ ವಿದ್ಯಾರ್ಥಿನಿಯರು ಕಣ್ಣೀರು ಹಾಕಿದ್ದಾರೆ.

ಬೆಂಗಳೂರಿನ ಯಲಹಂಕದ ಪ್ರಥಮ ದರ್ಜೆ ಕಾಲೇಜ್​ ಮತ್ತು ಚಾಲುಕ್ಯ ಸರ್ಕಲ್ ಬಳಿಯ ಆರ್​ಸಿ ಕಾಲೇಜಿನ ಎಕ್ಸಾಂ ಸೆಂಟರ್‌ನಲ್ಲಿ ಘಟನೆ ಕಂಡುಬಂದಿವೆ. ಮಧ್ಯಾಹ್ನ 2 ಗಂಟೆಗೆ ನೀಟ್ ಎಕ್ಸಾಂ ಆರಂಭವಾಗಿದೆ. ಮಧ್ಯಾಹ್ನ 1.30ರವರೆಗೆ ಎಕ್ಸಾಂ ಸೆಂಟರ್‌ನ ಗೇಟ್‌ ಓಪನ್​ ಮಾಡಲಾಗಿತ್ತು.

ಇದನ್ನೂ ಓದಿ: NEET UG 2026: ನೀಟ್ ಯುಜಿ ಪರೀಕ್ಷಾ ದಿನದ ಡ್ರೆಸ್ ಕೋಡ್ ಮತ್ತು ಪ್ರಮುಖ ಮಾರ್ಗಸೂಚಿ ಪ್ರಕಟ!

ಯಲಹಂಕದ ಪ್ರಥಮ ದರ್ಜೆ ಕಾಲೇಜಿಗೆ ನೀಟ್ ಎಕ್ಸಾಂ ಬರೆಯಲು ಓರ್ವ ವಿದ್ಯಾರ್ಥಿನಿ ಆಗಮಿಸಿದ್ದಾರೆ. ಆದರೆ ಅಷ್ಟರಲ್ಲಿ 10 ನಿಮಿಷ ತಡವಾಗಿದೆ. ಹೀಗಾಗಿ ಸಿಬ್ಬಂದಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದಾರೆ. ಇನ್ನು ಇದೇ ರೀತಿಯಾಗಿ ನಗರದ ಚಾಲುಕ್ಯ ಸರ್ಕಲ್ ಬಳಿಯ ಆರ್​ಸಿ ಕಾಲೇಜಿನಲ್ಲೂ ಘಟನೆ ನಡೆದಿದೆ.

ಕಣ್ಣೀರು ಹಾಕಿದ ವಿದ್ಯಾರ್ಥಿನಿಯರು 

ಅತ್ತಿಬೆಲೆಯಿಂದ ಓರ್ವ ವಿದ್ಯಾರ್ಥಿನಿ ಎಕ್ಸಾಂ ಸೆಂಟರ್​ಗೆ ತಡವಾಗಿ ಆಗಮಿಸಿದ್ದಾಳೆ. ಟ್ರಾಫಿಕ್‌ಜಾಮ್‌ನಿಂದ 20 ನಿಮಿಷ ತಡವಾಗಿ ಬಂದಿದ್ದ ಯುವತಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಗೇಟ್ ಕ್ಲೋಸ್ ಆಗಿದೆ, ಪ್ರೊಸೀಜರ್ ಮುಗಿದಿದೆ. ಏನು ಮಾಡುವುದಕ್ಕೆ ಆಗಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ ಪರೀಕ್ಷೆ ಬರೆಯಲು ಆಗದ ಹಿನ್ನಲೆ ವಿದ್ಯಾರ್ಥಿನಿಯರು ಕಣ್ಣೀರು ಹಾಕಿದ್ದಾರೆ. ವರ್ಷವಿಡೀ ಕಷ್ಟಪಟ್ಟು ಓದಿದರೂ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲವಲ್ಲ ಎಂದು ವಿದ್ಯಾರ್ಥಿನಿಯರು ಮರುಗಿದರು.

ಇದನ್ನೂ ಓದಿ: UGC NET 2026: ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಹತೆ, ಶುಲ್ಕ ಮತ್ತು ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ

2026-27ನೇ ಸಾಲಿನ ವೈದ್ಯಕೀಯ ಪ್ರವೇಶಾತಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಇಂದು ನಡೆದಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ನಡೆದಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರ ಒಳಗೆ ಬರಬೇಕು. ಪ್ರವೇಶಾತಿ ಪತ್ರದೊಂದಿಗೆ ಕಾಲೇಜಿನಿಂದ ನೀಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್‌ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಇತರೆ ಯಾವುದಾದರೂ ಅಂಗೀಕೃತ ಗುರುತಿನ ಚೀಟಿ ಜೊತೆ ಒಂದು ಪೋಸ್ಟ್ ಕಾರ್ಡ್ ಮತ್ತು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಹಿತ ಹಾಜರಾಗುವಂತೆ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:45 pm, Sun, 3 May 26

Source link

ವಿಜಯ್ ರಾಘವೇಂದ್ರ ನಟನೆಯ ‘ಶ್ರೀಮತಿ ಸಿಂಧೂರ’ ಟೀಸರ್, ಹಾಡು ರಿಲೀಸ್ – Kannada News | Vijay Raghavendra starrer Srimathi Sindhura Kannada movie song and teaser released

ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಹೊಸ ಸಿನಿಮಾ ‘ಶ್ರೀಮತಿ ಸಿಂಧೂರ’ (Srimathi Sindhura) ಬಿಡುಗಡೆಗೆ ಸಿದ್ಧವಾಗುತ್ತಿದೆ. ‘ಆರ್ ಆ್ಯಂಡ್ ಆರ್ ಎಂಟರ್‌ಪ್ರೈಸಸ್’ ಮೂಲಕ ಸಿನಿಮಾ ನಿರ್ಮಾಣ ಆಗಿದೆ. ರಿಯಲ್ ಎಸ್ಟೆಟ್ ಉದ್ಯಮಿ ಡಿ.ಎನ್. ನಾಗೀರೆಡ್ಡಿ ಅವರು ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಆರ್. ಅನಂತರಾಜು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಜಯ್ ರಾಘವೇಂದ್ರ (Vijay Raghavendra) ಜೊತೆ ನಾಯಕಿಯಾಗಿ ಪ್ರಿಯಾ ಹೆಗಡೆ ಅವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

ಡಿ.ಎನ್. ಲಿಯೋ ಮನೋಜ್, ಸಹ ನಿರ್ಮಾಪಕ ಡಿ.ಎನ್. ಜೈ ನಾರಾಯಾಣ್, ಗಣೇಶ್‌ ರಾವ್ ಕೇಸರಕರ್, ರೇಷ್ಮಾ ವಿ. ಗೌಡ, ಸಾಹಿತಿ ಕವಿರಾಜ್, ಪ್ರಸನ್ನ ಬಾಗೀನ, ಉಗ್ರಂ ರವಿ, ಮಾಸ್ಟರ್ ಮೌರ್ಯ, ನೃತ್ಯ ಸಂಯೋಜಕ ಫೈವ್‌ ಸ್ಟಾರ್ ಗಣೇಶ್, ಗಂಗಾಧರ್ ಅವರು ಟೀಸರ್ ಮತ್ತು ಹಾಡುಗಳ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

‘ಶ್ರೀಮತಿ ಸಿಂಧೂರ’ ಸಿನಿಮಾದ ಹಾಡು:

ಈ ವೇಳೆ ನಟ ವಿಜಯ್ ರಾಘವೇಂದ್ರ ಅವರು ಮಾತನಾಡಿದರು. ‘ನಿರ್ಮಾಪಕರು ಹರಸಾಹಸ ಮಾಡಿದ್ದಾರೆ. ಮನೆಗೆ ಬಂದು ನಿರ್ದೇಶಕರು ಸಾರಾಂಶ ಹೇಳಿದಾಗ, ಸಿನಿಮಾ ನೋಡಿದಂತೆ ಭಾಸವಾಯಿತು. ಈಗಿನ ಸಿನಿಮಾಗಳ ಟ್ರೆಂಡ್ ಹೊಡಿ, ಬಡಿ, ಹಾರರ್, ಥ್ರಿಲ್ಲರ್ ಎಂದು ಹೇಳುತ್ತದೆ. ಇವುಗಳ ಮಧ್ಯೆ ಅಪ್ಪಟ ಕುಟುಂಬಸಮೇತ ಮನಸ್ಸಿಗೆ ಮುದ ನೀಡುವ ಸಿನಿಮಾ ಇದಾಗಿದೆ. ಇದನ್ನು ಯಾವುದೇ ವರ್ಗಕ್ಕೆ ಬೇಕಾದರೂ ಸೇರಿಸಬಹುದು. ಯಾವ ಕಾಲಕ್ಕಾದರೂ ಜನರು ಇಂತಹ ಚಿತ್ರವನ್ನು ಇಷ್ಟಪಡುತ್ತಾರೆ’ ಎಂದು ಅವರು ಹೇಳಿದರು.

Srimathi Sindhura Movie Team

ನಿರ್ಮಾಪಕರಿಗೆ ಈ ಸಿನಿಮಾ 20 ವರ್ಷಗಳ ಕನಸು. ‘ಸಿನಿಮಾ ಕಾರ್ಮಿಕರಿಗೆ ಏನಾದರೂ ಕೆಲಸ ಕೊಡಬೇಕೆಂಬ ಒಳ್ಳೆಯ ಉದ್ದೇಶದಿಂದ ಬಂಡವಾಳ ಹೂಡಿದ್ದೇನೆ. ಆಂಜನೇಯನ ಹಾಡು ಸಿನಿಮಾದ ಹೈಲೈಟ್. ಕೈಲಾಶ್‌ ಖೇರ್ ಅವರು ಈ ಗೀತೆ ಹಾಡಿ ಇದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ. ಇಡೀ ಇಂಡಿಯಾಗೆ ಹಾಡಿದ್ದೇನೆಂದು ಸಂತಸ ಪಟ್ಟರು. ಇದೊಂದು ಪಕ್ಕಾ ಕೌಟುಂಬಿಕ ಮನರಂಜನೆಯಿಂದ ಕೂಡಿದ ಸಿನಿಮಾ’ ಎಂದು ಅವರು ಹೇಳಿದರು.

ಇದನ್ನೂ ಓದಿ: ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು

ಕವಿರಾಜ್, ಕೆ. ಕಲ್ಯಾಣ್ ಮತ್ತು ನಿರ್ದೇಶಕ ಆರ್. ಅನಂತರಾಜು ಅವರು ಹಾಹಿತ್ಯ ಬರೆದಿದ್ದಾರೆ. ರಾಜೇಶ್‌ ರಾಮನಾಥ್ ಅವರು ಸಂಗೀತ ಸಂಯೋಜಿಸಿದ್ದಾರೆ. ಪಿ.ಕೆ.ಹೆಚ್. ದಾಸ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಆರ್. ಗಂಗಾಧರ್ ಅವರು ಕೆಲಸ ಮಾಡಿದ್ದಾರೆ. ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಒಂದೇ ಸೂರಿನಡಿ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಪರಿಚಯಿಸಿದ ಟಿವಿ9 – Kannada News | TV9 Education Expo 2026: Bringing Premier Institutions to Shivamogga

ಶಿವಮೊಗ್ಗದಲ್ಲಿ ನಡೆದ ಟಿವಿ9 ಎಜುಕೇಷನ್ ಎಕ್ಸ್​ಪೋ , ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉನ್ನತ ಶಿಕ್ಷಣದ ಕುರಿತು ಮಹತ್ವದ ಮಾಹಿತಿ ಒದಗಿಸಿದೆ. ಶಿವಮೊಗ್ಗದ ಪೊಲೀಸ್ ಭವನದಲ್ಲಿ ನಡೆದ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯದ ಹಾಗೂ ನೆರೆಯ ಚೆನ್ನೈನ 24 ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಭಾಗವಹಿಸಿದ್ದವು.

ಈ ಮೇಳವು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಶೈಕ್ಷಣಿಕ ಆಯ್ಕೆಗಳನ್ನು ಒಂದೇ ಸ್ಥಳದಲ್ಲಿ ಅನ್ವೇಷಿಸಲು ಅನುವಾಗಿದೆ. ದೂರದ ಬೆಂಗಳೂರಿಗೆ ಪ್ರಯಾಣಿಸಿ ವಿವಿಧ ಸಂಸ್ಥೆಗಳನ್ನು ಸಂದರ್ಶಿಸುವ ಶ್ರಮವನ್ನು ತಪ್ಪಿಸಿದೆ. ಭಾಗವಹಿಸಿದ ಸಂಸ್ಥೆಗಳು ಶುಲ್ಕ ರಚನೆ, ಹಾಸ್ಟೆಲ್ ಸೌಲಭ್ಯಗಳು ಮತ್ತು ಸಾರಿಗೆ ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿಯನ್ನು ಉಚಿತವಾಗಿ ಒದಗಿಸಿದವು. ಶಿಕ್ಷಣದ ಜೊತೆಗೆ, ಟಿವಿ9 ಈ ಹಿಂದೆ ಆಯೋಜಿಸಿದ್ದ ವಸತಿ, ಸಾಲ, ಮತ್ತು ಕಾರು ಎಕ್ಸ್​ಪೋಗಳಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹೋಲಿಸಿ, ಶಿಕ್ಷಣ ಮೇಳವು ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

Source link

SRH vs KKR: ಸುನಿಲ್ ನರೈನ್ ‘ಡಬಲ್ ಸೆಂಚುರಿ’; ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿಗ

Source link

ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ:ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ? – Kannada News | Counting for Bagalkot, Davanagere South bypolls on May 4 amid tight security

ದಾವಣಗೆರೆ, (ಮೇ 03) : ತೀವ್ರ ಜಿದ್ದಾಜಿದ್ದಿನಿಂದ ನಡೆದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ನಾಳೆ ಅಂದರೆ ಮೇ 04ರಂದು ಬೆಳಗ್ಗೆ 8 ಗಂಟೆಯಿಂದ ಎರಡೂ ಕಡೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಇನ್ನು  ದಾವಣಗೆರೆ ನಗರದ ಡಿಆರ್‌ಆರ್ ವಿದ್ಯಾಸಂಸ್ಥೆಯಲ್ಲಿ ನಾಳೆ(ಮೇ 04) ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಇಂದು (ಮೇ 03) ಡಿಆರ್‌ಆರ್ ವಿದ್ಯಾಸಂಸ್ಥೆಗೆ ಚುನಾವಣಾಧಿಕಾರಿ ಸಂತೋಷ್ ಕುಮಾರ್ ಭೇಟಿ ನೀಡಿ ಮತ ಎಣಿಕೆ ಕೇಂದ್ರವನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚುನಾವಣಾ ಅಧಿಕಾರಿ ಸಂತೋಷ ಕುಮಾರ್, ನಾಳೆ ಅಂದರೆ ಸೋಮವಾರ ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 7.35 ರಿಂದ 7.45 ರೊಳಗೆ ಅಭ್ಯರ್ಥಿ ಗಳ ಎಜೆಂಟರ್ ಸಮ್ಮುಖದಲ್ಲಿ ಇವಿಎಂ ಇಟ್ಟಿರುವ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗುವುದು. ಮೊದಲಿಗೆ ಅಂಚೆ ಮತ ಮತಗಳಿ ಎಣಿಕೆ ಮಾಡಲಾಗುವುದು. ಒಟ್ಟು 217 ಅಂಚೆ ಮತಗಳಿವೆ. ಸೇವಾ ಮತದಾರು ಇನ್ನೂ 25 ಮತಗಳ ಬೇಕು. ನಾಳೆ 7.45 ವರೆಗೆ ಬರುವ ಇಂತಹ ಮತಗಳನ್ನ ಸ್ವೀಕರಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SRH vs KKR: ಕನ್ನಡಿಗ ಸ್ಮರಣ್​ಗೆ ಸ್ಮರಣೀಯವಾಗದ ಚೊಚ್ಚಲ ಐಪಿಎಲ್ ಪಂದ್ಯ – Kannada News | IPL 2026: Smaran Ravichandran’s SRH Debut vs KKR; Kannada Star’s First Match

ಐಪಿಎಲ್ 2026 (IPL 2026) ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (SRH vs KKR )​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳು ಕನ್ನಡಿಗರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಿದ್ದವು. ಸನ್‌ರೈಸರ್ಸ್ ಪರ ಸ್ಮರಣ್ ರವಿಚಂದ್ರನ್ (Smaran Ravichandran) ತಮ್ಮ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದರೆ, ಇತ್ತ ಕೆಕೆಆರ್ ಪರ ಮನೀಶ್ ಪಾಂಡೆ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಪರ ಸ್ಮರಣ್​ಗೆ ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿತು. ಆದರೆ ಸಿಕ್ಕ ಜೊಚ್ಚಲ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸ್ಮರಣ್ ಎಡವಿದರು.

ಬದಲಿ ಆಟಗಾರನಾಗಿ ಆಯ್ಕೆ

ನಿತೀಶ್ ಕುಮಾರ್ ರೆಡ್ಡಿ ಅನುಪಸ್ಥಿತಿಯಿಂದಾಗಿ ಸ್ಮರಣ್​ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು. ವಾಸ್ತವವಾಗಿ 2025 ರ ಐಪಿಎಲ್‌ನಲ್ಲಿ ಆಡಮ್ ಜಂಪಾ ಗಾಯಗೊಂಡ ನಂತರ ಸ್ಮರಣ್ ಅವರನ್ನು ಸನ್‌ರೈಸರ್ಸ್ ಫ್ರಾಂಚೈಸಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ ಆ ಆವೃತ್ತಿಯಲ್ಲಿ ಸ್ಮರಣ್​ಗೆ ಆಡುವ ಅವಕಾಶ ಸಿಗಲಿಲ್ಲ. ಇದರ ಹೊರತಾಗಿಯೂ ಸನ್‌ರೈಸರ್ಸ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಇದೀಗ ಪ್ಲೇಯಿಂಗ್​ 11 ನಲ್ಲಿ ಆಡುವ ಅವಕಾಶ ಪಡೆದ ಸ್ಮರಣ್ 4 ಎಸೆತಗಳಲ್ಲಿ 1 ಬೌಂಡರಿ ಸಹಿತ 4 ರನ್ ಕಲೆಹಾಕಲಷ್ಟೇ ಶಕ್ತರಾಗಿ ವಿಕೆಟ್ ಒಪ್ಪಿಸಿದರು. ಅಂದರೆ ಸ್ಮರಣ್​ಗೆ ತಮ್ಮ ಚೊಚ್ಚಲ ಐಪಿಎಲ್ ಪಂದ್ಯ ಸ್ಮರಣೀಯವಾಗಲಿಲ್ಲ.

ದೇಶಿ ಟೂರ್ನಿಯಲ್ಲಿ ಅಬ್ಬರ

ದೇಶಿ ಟೂರ್ನಿಯಲ್ಲಿ ಕರ್ನಾಟಕದ ಪರ ಆಡುವ ಸ್ಮರಣ್, ತಮ್ಮ ಅಲ್ಪ ವೃತ್ತಿಜೀವನದಲ್ಲೇ ತಂಡದ ನಂಬಿಕಸ್ತ ಆಟಗಾರನಾಗಿದ್ದಾರೆ. 2024 ರಲ್ಲಿ ಕರ್ನಾಟಕ ಪರ ದೇಶೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಮರಣ್, 2024-25 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ 72.16 ಸರಾಸರಿಯಲ್ಲಿ ಮತ್ತು 100 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 433 ರನ್ ಗಳಿಸಿದರು ಮತ್ತು ಕರ್ನಾಟಕ ಟ್ರೋಫಿ ಗೆಲ್ಲಲು ಸಹಾಯ ಮಾಡಿದರು.

CSK vs DC: ಸಿಎಸ್​​ಕೆ ವಿರುದ್ಧ ಸೋತ ಮುಂಬೈ ಐಪಿಎಲ್​ನಿಂದ ಭಾಗಶಃ ಔಟ್

ರಣಜಿಯಲ್ಲಿ ರನ್ ಮಳೆ

ಅದೇ ಆವೃತ್ತಿಯಲ್ಲಿ ಸ್ಮರಣ್, ಕರ್ನಾಟಕ ಪರ ಏಳು ರಣಜಿ ಟ್ರೋಫಿ ಪಂದ್ಯಗಳಲ್ಲಿ 64.50 ಸರಾಸರಿಯಲ್ಲಿ 516 ರನ್ ಗಳಿಸಿದ್ದರು. ಇನ್ನು ಕಳೆದ ರಣಜಿ ಟ್ರೋಫಿಯಲ್ಲಿ ರನ್​ಗಳ ಶಿಖರ ಕಟ್ಟಿದ್ದ ಸ್ಮರಣ್, ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳೊಂದಿಗೆ 86.36 ಸರಾಸರಿಯೊಂದಿಗೆ 950 ರನ್ ಗಳಿಸಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದರು. ಅವರ ವಿಜಯ್ ಹಜಾರೆ ಟ್ರೋಫಿ ಅಭಿಯಾನವು ಅಷ್ಟೇನೂ ಯಶಸ್ವಿಯಾಗಲಿಲ್ಲ, ಆದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಆಡಿದ ಏಳು ಪಂದ್ಯಗಳಲ್ಲಿ 63.80 ಸರಾಸರಿ ಮತ್ತು 158.70 ಸ್ಟ್ರೈಕ್ ರೇಟ್‌ನಲ್ಲಿ ವೃತ್ತಿಜೀವನದ ಅತ್ಯಧಿಕ 319 ರನ್ ಕಲೆಹಾಕಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version