Daily Devotional: ವಧು-ವರರಿಗೆ ಈ ವಸ್ತುಗಳನ್ನು ನೀಡಿದರೆ ನಿಮಗೆ ಆಯಸ್ಸು ಜಾಸ್ತಿ!

ಮದುವೆಗೆ ಯಾವ ಯಾವ ಸಹಾಯ ಮಾಡಿದರೆ ಏನೇನು ಫಲ ಸಿಗುತ್ತೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಇಂದಿನ ದಿನಗಳಲ್ಲಿ ಮದುವೆಗೆ ಸಹಾಯ ಮಾಡುವುದನ್ನು ಜನರು ಮರೆಯುತ್ತಿದ್ದಾರೆ, ಆದರೆ ವಿವಾಹದ ಸಮಯದಲ್ಲಿ ಗಂಡು ವಿಷ್ಣುವಿನ ರೂಪ ಮತ್ತು ಹೆಣ್ಣು ಮಹಾಲಕ್ಷ್ಮಿಯ ರೂಪವಾಗಿರುವುದರಿಂದ ಅಲ್ಲಿ ಸರ್ವ ದೇವತೆಗಳ ಉಪಸ್ಥಿತಿ ಇರುತ್ತದೆ ಎಂದು ಗುರೂಜಿ ಹೇಳಿದ್ದಾರೆ. ಮದುವೆಗೆ ಹಣ, ವಸ್ತ್ರ, ಅಕ್ಕಿ ಅಥವಾ ತರಕಾರಿ ದಾನ ಮಾಡುವುದರಿಂದ ಹೋಮ-ಯಜ್ಞ ಮಾಡಿದ ಪುಣ್ಯ ಸಿಗಲಿದ್ದು, ಪಿತೃ ದೋಷ, ಸರ್ಪ ದೋಷ ಮತ್ತು ಅಕಾಲಿಕ ಮರಣದ ಭೀತಿ ದೂರವಾಗುತ್ತದೆ ಎಂದು ಅವರು ವಿವರಿಸಿದ್ದಾರೆ

 

 

 

Source link

Horoscope Today: ಇಂದು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 17, ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಪಾಡ್ಯ ತಿಥಿ ಮತ್ತು ಕೃತಿಕಾ ನಕ್ಷತ್ರದೊಂದಿಗೆ ವಿಶಿಷ್ಟ ಮಹತ್ವವನ್ನು ಹೊಂದಿದೆ.

ಇಂದಿನ ದಿನವು ಪ್ರಸನ್ನ ಗೌರಿ ಕರವೀರ ವ್ರತ, ದಶಹರ ವ್ರತಾರಂಭ, ಕೃತಿಕಾ ಮಳೆ ಪ್ರಾರಂಭ ಹಾಗೂ ವಿಶ್ವ ದೂರ ಸಂಪರ್ಕ ದಿನ ಎಂದೂ ಆಚರಿಸಲ್ಪಡುತ್ತದೆ. ರವಿ ವೃಷಭ ರಾಶಿಯಲ್ಲಿ ಮತ್ತು ಚಂದ್ರ ಸಹ ವೃಷಭ ರಾಶಿಯ ಕೃತಿಕಾ ನಕ್ಷತ್ರದಲ್ಲಿ ಸಂಚರಿಸುತ್ತಾನೆ ಎಂದು ಗುರೂಜಿ ಹೇಳಿದ್ದಾರೆ. ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಅವರು ವಿವರಿಸಿದ್ದಾರೆ.

 

 

 

Source link

ಉದ್ಯೋಗ ಭವಿಷ್ಯ: ಉದ್ಯೋಗ ಭವಿಷ್ಯ: ಈ ವಾರ ಯಾರಿಗೆ ಸಿಗಲಿದೆ ಪ್ರಮೋಷನ್ ಹಾಗೂ ವಿದೇಶಿ ಯೋಗ? – Kannada News | May 17 23 Job Outlook: Unpredictable Career Trends and Financial Hurdles Ahead

ಮೇ 17ರಿಂದ ಮೇ 23ರವರೆಗಿನ ಎರಡನೇ ವಾರವಾಗಿದ್ದು ಉದ್ಯೋಗರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಆತಂಕ ಸೃಷ್ಟಿ ಆಗಬಹುದು. ಹಲವು ಆದಾಯ ಮೂಲಕ್ಕೆ ಹಿನ್ನಡೆ ಸಾಧ್ಯತೆ. ಕೆಲವರಿಗೆ ನಿರ್ವಹಣೆ ಕಷ್ಟ.

​ಮೇಷ :

​ಅಂಗಾರಕನ ಶಕ್ತಿಯು ನಿಮ್ಮಲ್ಲಿ ಅಡಗಿದೆ. ಕಚೇರಿಯ ಕಣದಲ್ಲಿ ನಿಮ್ಮದೇ ಪಾರುಪತ್ಯ. ಪದೋನ್ನತಿಯ ಕೆಂಪುಹಾಸು ಸ್ವಾಗತಿಸಲು ಸಿದ್ಧವಾಗಿದೆ. ಕಾರ್ಯದೊತ್ತಡದ ಬಿರುಗಾಳಿ ಬೀಸಿದರೂ, ನಿಮ್ಮ ದಕ್ಷತೆಯ ನೌಕೆ ಸ್ಥಿರವಾಗಿರುತ್ತದೆ. ವಿದೇಶಿ ದಿಗಂತಗಳತ್ತ ವೃತ್ತಿಯ ಪಯಣ ಬೆಳೆಯುವ ಶುಭ ಸೂಚನೆಯಿದೆ.

​ವೃಷಭ :

​ವೃತ್ತಿ ಜೀವನದ ಉದ್ಯಾನದಲ್ಲಿ ಸಮೃದ್ಧಿಯ ಹೂವು ಅರಳಲಿದೆ. ಅನಿರೀಕ್ಷಿತ ವರ್ಗಾವಣೆಯು ಲಾಭದಾಯಕ ತಿರುವು ನೀಡಲಿದೆ. ಹಿರಿಯ ಅಧಿಕಾರಿಗಳ ವಿಶ್ವಾಸವು ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಲಿದೆ. ವಿದೇಶ ಪ್ರವಾಸದ ಬಾಗಿಲು ತೆರೆಯಲಿದ್ದು, ನಿಮ್ಮ ಪರಿಶ್ರಮಕ್ಕೆ ಜಾಗತಿಕ ಮನ್ನಣೆ ಸಿಗುವ ಸುಸಂದರ್ಭ ಇದು.

​ಮಿಥುನ :

​ಬುದ್ಧಿವಂತಿಕೆಯ ಮಾತುಗಳೇ ನಿಮ್ಮ ವೃತ್ತಿಯ ಅಸ್ತ್ರ. ಸವಾಲುಗಳ ಸುಳಿಯಲ್ಲಿ ಸಿಲುಕಿದರೂ ಯುಕ್ತಿಯಿಂದ ಪಾರಾಗುವಿರಿ. ವರ್ಗಾವಣೆಯ ವಿಷಯದಲ್ಲಿ ಗೊಂದಲ ಬೇಡ, ಸಮಯವೇ ಎಲ್ಲವನ್ನೂ ನಿರ್ಧರಿಸಲಿದೆ. ಕಚೇರಿಯ ಒತ್ತಡವನ್ನು ನಗುವಿನಿಂದ ಎದುರಿಸಿ. ವಿದೇಶಿ ಸಂಪರ್ಕಗಳು ಹೊಸ ಆದಾಯದ ದಾರಿ ತೋರಿಸಲಿವೆ.

​ಕರ್ಕಾಟಕ :

​ಚಂದ್ರನ ತಂಪು ನಿಮ್ಮ ನಿರ್ಧಾರಗಳಲ್ಲಿ ಪ್ರತಿಫಲಿಸಲಿದೆ. ಉದ್ಯೋಗದಲ್ಲಿನ ಅಸ್ಥಿರತೆ ದೂರವಾಗಿ ಸ್ಥಿರತೆ ಮೂಡಲಿದೆ. ಬಡ್ತಿಯ ಸಿಹಿ ಸುದ್ದಿ ಕಿವಿಗೆ ಬೀಳುವ ಕಾಲವಿದು. ದೂರದ ಊರಿಗೆ ವರ್ಗಾವಣೆಯಾದರೂ ಅದು ಹಿತಕರವಾಗಿರಲಿದೆ. ಕಾರ್ಯದೊತ್ತಡದ ನಡುವೆಯೂ ಸೃಜನಶೀಲತೆಯ ಚಿಲುಮೆ ನಿಮ್ಮಲ್ಲಿ ಬತ್ತದಿರಲಿ.

ಸಿಂಹ :

​ಸೂರ್ಯನ ತೇಜಸ್ಸಿನಂತೆ ನಿಮ್ಮ ವೃತ್ತಿ ಗೌರವ ಬೆಳಗಲಿದೆ. ನಾಯಕತ್ವದ ಜವಾಬ್ದಾರಿಗಳು ಹೆಗಲೇರಲಿವೆ. ಪದೋನ್ನತಿಯು ಅಧಿಕಾರ ಮತ್ತು ಜವಾಬ್ದಾರಿ ಎರಡನ್ನೂ ತರಲಿದೆ. ವಿದೇಶಿ ಪ್ರವಾಸದ ಯೋಗವು ನಿಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಇಡಲಿದೆ. ಒತ್ತಡವನ್ನು ಮೆಟ್ಟಿ ನಿಂತು ಸಿಂಹನಡೆಯ ಪ್ರದರ್ಶನ ನೀಡುವಿರಿ.

​ಕನ್ಯಾ :

​ಸೂಕ್ಷ್ಮ ಸಂವೇದನೆ ಮತ್ತು ಯೋಜಿತ ಕೆಲಸವೇ ನಿಮ್ಮ ಯಶಸ್ಸಿನ ಮಂತ್ರ. ವರ್ಗಾವಣೆಯ ಪ್ರಯತ್ನಗಳಿಗೆ ಫಲ ಸಿಗುವ ಸಮಯ. ಕೆಲಸದ ಒತ್ತಡವು ನಿಮ್ಮ ತಾಳ್ಮೆಗೆ ಒರೆಹಚ್ಚಬಹುದು. ವಿದೇಶಿ ಕಂಪನಿಗಳ ಜೊತೆಗಿನ ಒಪ್ಪಂದಗಳು ನಿಮ್ಮ ವೃತ್ತಿ ಬದುಕಿಗೆ ಹೊಸ ಆಯಾಮ ನೀಡಲಿವೆ. ಶಿಸ್ತಿನಿಂದ ಅಸಾಧ್ಯವಾದುದನ್ನು ಸಾಧಿಸುವಿರಿ.

​ತುಲಾ :

​ವೃತ್ತಿ ಮತ್ತು ವೈಯಕ್ತಿಕ ಬದುಕಿನ ತಕ್ಕಡಿ ಸಮತೋಲನದಲ್ಲಿರಲಿ. ಹೊಸ ಉದ್ಯೋಗದ ಪ್ರಸ್ತಾಪಗಳು ನಿಮ್ಮನ್ನು ಹುಡುಕಿ ಬರಲಿವೆ. ಪದೋನ್ನತಿಯ ಹಾದಿಯಲ್ಲಿನ ಮುಳ್ಳುಗಳು ದೂರವಾಗಲಿವೆ. ವರ್ಗಾವಣೆಯು ನಿಮ್ಮ ಇಚ್ಛೆಯಂತೆಯೇ ನಡೆಯುವ ಸಾಧ್ಯತೆ ಇದೆ. ವಿದೇಶ ಪ್ರವಾಸದ ಯೋಜನೆಗಳು ಕಾರ್ಯರೂಪಕ್ಕೆ ಬರಲು ಇದು ಪ್ರಶಸ್ತ ಕಾಲ.

​ವೃಶ್ಚಿಕ :

​ರಹಸ್ಯ ತಂತ್ರಗಾರಿಕೆಯೇ ನಿಮ್ಮ ಗೆಲುವಿನ ಸೂತ್ರ. ಕಚೇರಿಯಲ್ಲಿನ ಪಿತೂರಿಗಳನ್ನು ಮೆಟ್ಟಿ ನಿಂತು ಪದೋನ್ನತಿ ಪಡೆಯುವಿರಿ. ಅನಿರೀಕ್ಷಿತ ವರ್ಗಾವಣೆಯು ಆರಂಭದಲ್ಲಿ ಕಷ್ಟವೆನಿಸಿದರೂ ಅನಂತರ ಸುಖ ನೀಡಲಿದೆ. ವಿದೇಶಿ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಕೆಲಸದ ಒತ್ತಡವನ್ನು ಧ್ಯಾನದ ಮೂಲಕ ಗೆದ್ದು ಮುನ್ನಡೆಯಿರಿ.

​ಧನು

​ಲಕ್ಷ್ಯದ ಮೇಲೆ ಕಣ್ಣಿಟ್ಟ ಧನುರ್ಧರನಂತೆ ಮುನ್ನುಗ್ಗಿ. ಉದ್ಯೋಗದಲ್ಲಿ ಬಹುದಿನದ ಕನಸು ನನಸಾಗಲಿದೆ. ವಿದೇಶಿ ನೆಲದಲ್ಲಿ ಕೆಲಸ ಮಾಡುವ ಆಸೆ ಈಡೇರುವ ಲಕ್ಷಣಗಳಿವೆ. ಪದೋನ್ನತಿಯ ಜೊತೆಗೆ ಹೊಸ ಕಲಿಕೆಗೆ ಅವಕಾಶ ಸಿಗಲಿದೆ. ಕಾರ್ಯದೊತ್ತಡವು ನಿಮ್ಮ ಜ್ಞಾನದ ಹಸಿವನ್ನು ಹೆಚ್ಚಿಸಲಿದೆ ಅಷ್ಟೇ.

ಮಕರ :

​ಪರಿಶ್ರಮದ ಪರ್ವತ ಏರುವ ನಿಮಗೆ ವಿಜಯದ ಪತಾಕೆ ಹತ್ತಿರದಲ್ಲಿದೆ. ಅಧಿಕಾರ ವರ್ಗಾವಣೆಯು ನಿಮ್ಮ ವೃತ್ತಿ ಗೌರವವನ್ನು ಹೆಚ್ಚಿಸಲಿದೆ. ಶಿಸ್ತುಬದ್ಧ ಕೆಲಸದಿಂದ ಉನ್ನತ ಪದವಿ ಅಲಂಕರಿಸುವಿರಿ. ವಿದೇಶ ಪ್ರವಾಸದ ದಾಖಲೆಗಳು ಕೈಸೇರಲಿವೆ. ಕಠಿಣ ಸವಾಲುಗಳೇ ನಿಮ್ಮ ಏಣಿಯಾಗಲಿವೆ, ಎದೆಗುಂದದೆ ಸಾಗಿ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ?

ಕುಂಭ :

ಈ ವಾರ ​ಹೊಸ ಅನ್ವೇಷಣೆಗಳೇ ನಿಮ್ಮ ಗುರುತು. ಉದ್ಯೋಗದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವಿರಿ. ಪದೋನ್ನತಿಯು ನಿಮ್ಮ ಪ್ರತಿಭೆಗೆ ಸಿಕ್ಕ ಪ್ರತಿಫಲ. ಬಯಸದ ವರ್ಗಾವಣೆಯಾದರೂ ಅದು ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪಲಿದೆ. ವಿದೇಶ ಪ್ರವಾಸದ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ನಿಮ್ಮ ಛಾಪು ಮೂಡಿಸುವಿರಿ.

​ಮೀನ :

​ಭಾವನಾತ್ಮಕ ಬುದ್ಧಿವಂತಿಕೆಯೇ ನಿಮ್ಮ ಶಕ್ತಿ. ವೃತ್ತಿ ಕ್ಷೇತ್ರದಲ್ಲಿ ಶಾಂತಿ ಮತ್ತು ಸಮಾಧಾನ ನೆಲೆಸಲಿದೆ. ವರ್ಗಾವಣೆಯು ಹೊಸ ಪರಿಸರಕ್ಕೆ ನಿಮ್ಮನ್ನು ಕರೆದೊಯ್ಯಲಿದೆ. ವಿದೇಶಕ್ಕೆ ಹಾರುವ ಹಕ್ಕಿಯಂತೆ ನಿಮ್ಮ ವೃತ್ತಿ ಕನಸುಗಳು ರೆಕ್ಕೆ ಬಿಚ್ಚಲಿವೆ. ಒತ್ತಡವನ್ನು ಕಲೆಯನ್ನಾಗಿ ಬದಲಿಸಿ ಯಶಸ್ಸಿನ ಶಿಖರ ಏರುವಿರಿ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಹೇಳಿಕೊಳ್ಳುವುದಕ್ಕೆ ಯಾರೂ ಇರದಂತಹ ಸ್ಥಿತಿ – Kannada News | Horoscope May 17 Sunday 2026; Dina Rashi Bhavishya Today, Checkout the details here

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಶೋಭನ, ಕರಣ : ಕಿಂಸ್ತುಘ್ನ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 43 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:18 – 18:44, ಯಮಗಂಡ ಕಾಲ 12:21 – 13:57, ಗುಳಿಕ ಕಾಲ 15:32 – 17:08

ಮೇಷ ರಾಶಿ :

ನೀವು ಯಾರನ್ನೂ ಸುಮ್ಮನೇ ಬಿಡದೇ ಎಲ್ಲರಿಗೂ ಕೆಲಸ ಕೊಡುವಿರಿ. ಸವಾಲಿನ ಪರಿಸ್ಥಿತಿಗಳು ಬರಬಹುದು. ನಿಮ್ಮ ಧೈರ್ಯದಿಂದ ಎಲ್ಲವೂ ನಯವಾಗುತ್ತದೆ. ಸ್ನೇಹಿತರಿಂದ ಕಾರ್ಯಸಿದ್ಧಿಯಾಗುತ್ತದೆ. ಖರ್ಚಿನಲ್ಲಿ ನಿಯಂತ್ರಣ ಇರಿಸಿಕೊಳ್ಳುವುದು ಅಗತ್ಯ. ಕಚೇರಿಯಲ್ಲಿ ನಿಮಗೆ ಹೊಸ ಕೆಲಸದ ನಿರ್ವಹಣೆ ಬಂದೀತು. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು.

ವೃಷಭ ರಾಶಿ :

ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ನಿಮ್ಮ ಮಹಾಗುರಿಯನ್ನು ಸಾಧಿಸುವ ವಿಶ್ವಾಸವನ್ನು ಬಿಟ್ಟುಕೊಡಬೇಡಿ. ಹಗಲು ದರೋಡಯಾಗುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ಪ್ರಶಂಸೆ ಲಭಿಸಬಹುದು. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಿ. ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿದರೆ ನಿರ್ಧಾರಗಳನ್ನು ಸರಿಯಾಗಿರುತ್ತವೆ.

ಮಿಥುನ ರಾಶಿ:

ಇಂದು ನಿಮ್ಮ ಜೀವನದಲ್ಲಿ ಕೆಲವರ ಬಗ್ಗೆ ತಪ್ಪು ತಿಳುವಳಿಕೆ ಬರುವುದು. ನಿಮ್ಮ ಮಾತಿನ ಮೇಲೆ ಗಮನವಿರಲಿ. ನೀವು ಶಾಂತವಾಗಿ ಇದ್ದಷ್ಟೂ ನಿಮ್ಮ ಸಂಬಂಧವನ್ನು ಗಟ್ಟಿಯಾಗುವುದು. ಕಚೇರಿ ಸ್ವಲ್ಪ ಒತ್ತಡವನ್ನು ಅನುಭವಿಸಬೇಕಾದೀತು. ಇಲ್ಲವಾದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ ಕಾನೂನಾತ್ಮಕ ತೊಂದರೆಗಳನ್ನು ಪರಿಹರಿಸಿಕೊಳ್ಳಿ.

ಕರ್ಕಾಟಕ ರಾಶಿ :

ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ಹೊಂದಿರುವಿರಿ. ಆರ್ಥಿಕವಾಗಿ ಲಾಭದಾಯಕ ಸಮಯ ಇದಾಗಿದೆ. ಜೀವನ ಸಂಗಾತಿಯ ಜೊತೆ ಸಮಯ ಕಳೆಯಬಹುದು. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು.

ಸಿಂಹ ರಾಶಿ :

ನಿಮ್ಮ ಹೊಸ ಪ್ರೇಮಪ್ರಕರಣವು ಪ್ರಾರಂಭವಾಗಬಹುದು. ಆಕರ್ಷಣೆಯ ಹಿಡಿತದಿಂದ ತಪ್ಪಿಸಿಕೊಳ್ಳಲಾಗದು. ಹಣಕಾಸಿನಲ್ಲಿ ಲಾಭದಾಯಕ ನಿರ್ಧಾರ ತೆಗೆದುಕೊಳ್ಳಬಹುದು. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಸಂತಸ ತಂದೀತು. ಸಂಗಾತಿಯ ಜೊತೆ ಪ್ರೀತಿಯ ಮಾತುಕತೆಗಳನ್ನು ಆಡುವಿರಿ. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ಬಂಧುಗಳ ವಿಚಾರದಲ್ಲಿ ನಿಮಗೆ ನಂಬಿಕೆ ಕಡಿಮೆಯಾಗುವುದು.

ಕನ್ಯಾ ರಾಶಿ :

ನಿಮ್ಮ ವ್ಯವಹಾರದಲ್ಲಿ ಯಶಸ್ಸಿಗೆ ನೀವು ಹೊಸ ಆಲೋಚನೆಗಳೊಂದಿಗೆ ಮುಂದುವರಿಯಬೇಕು. ಜನಮನ್ನಣೆ ನಕಲಿ ಎನಿಸಬಹುದು. ವ್ಯಕ್ತಿತ್ವ ಇಂದು ಇನ್ನಷ್ಟು ಬಲುಷ್ಠವಾಗುತ್ತದೆ. ಬೆಳಗುತ್ತದೆ. ಜನರ ಗಮನ ಸೆಳೆಯುವಂತೆ ನೀವು ನಡೆದುಕೊಳ್ಳುವಿರಿ. ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದು. ಇಂದು ನಿಮಗೆ ಇಷ್ಟವಾದವರ ಜೊತೆ ಕುಳಿತು ಹರಟೆ ಹೊಡೆಯುವಿರಿ. ನಿಮ್ಮ ಸಂಬಂಧವನ್ನು ಒಂದು ಹೆಜ್ಜೆ ಮುಂದೆ ಇಡಲು ಯೋಚಿಸುತ್ತೀರಿ.

ತುಲಾ ರಾಶಿ :

ಸಣ್ಣಪುಟ್ಟ ಕಲಹಗಳಿದ್ದರೂ ಮನೆಯಲ್ಲಿ ಸುಖ, ಶಾಂತಿಯ ವಾತಾವರಣ ಇರುತ್ತದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ನೀವು ತೃಪ್ತರಾಗಿರುವಿರಿ. ನಿಮ್ಮ ಸೃಜನಶೀಲತೆ ಬೆಳೆಸುವ ಅವಕಾಶ ಲಭ್ಯವಿದೆ. ಹಣಕಾಸಿನಲ್ಲಿ ಸ್ಥಿರತೆ ಕಾಣಬಹುದು. ಕುಟುಂಬದವರೊಂದಿಗೆ ಭಾವನಾತ್ಮಕ ಸಂಪರ್ಕ ಉಂಟಾಗುವುದು. ಹೆಚ್ಚು ಖರ್ಚು ಮಾಡಿ ವಸ್ತುಗಳನ್ನು ಖರೀದಿಸುವಿರಿ. ಪೂರ್ವಜರ ಆಸ್ತಿಯು ನಿಮ್ಮ ಕೈ ಸೇರುವ ಸಾಧ್ಯತೆಗಳು ಹೆಚ್ಚಿರುವುದು. ಪ್ರೀತಿಯ ಜೀವನವು ಮಿಶ್ರವಾಗಿರಬಹುದು.

ವೃಶ್ಚಿಕ ರಾಶಿ :

ನೀವು ಏನನ್ನಾದರೂ ಸಾಧಿಸುವ ನಿಮ್ಮ ಹೋರಾಟದಲ್ಲಿ ಸ್ವಲ್ಪ ನಿರ್ದಯತ್ವದಿಂದ ಇರಬೇಕಾಗುತ್ತದೆ. ಆರ್ಥಿಕ ವಿಷಯದಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಂದರ್ಭ ಬರುತ್ತದೆ. ಪ್ರೀತಿಯವರು ನಿಮ್ಮ ಜತೆ ಸಮಯ ಕಳೆಯಲು ಆಸಕ್ತಿ ತೋರುತ್ತಾರೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ, ಹೊಸ ಉದ್ಯೋಗವು ನಿಮಗೆ ಉತ್ತಮ ಅವಕಾಶಗಳನ್ನು ತರುತ್ತದೆ.

ಧನು ರಾಶಿ :

ಹಣದ ಯೋಜನೆಯಲ್ಲಿ ಏರಿಳಿತಗಳು ಆಗಲಿವೆ. ಅಧಿಕಾರವನ್ನು ಸದುಪಯೋಗ ಮಾಡಿಕೊಂಡು ಯಶಸ್ವಿಯಾಗುವಿರಿ. ಹಳೆಯ ಯೋಜನೆಗಳ ಪೂರ್ಣತೆಗೆ ಪೂರಕ ಪರಿಸ್ಥಿತಿಗಳು ಇರುತ್ತವೆ. ಹಣಕಾಸು ಸ್ಥಿತಿಯಲ್ಲಿ ಬೆಳವಣಿಗೆ ಕಂಡುಬರುತ್ತದೆ. ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ಪ್ರಪಂಚದಿಂದ ಮರೆ ಮಾಡುವ ಅಗತ್ಯವಿಲ್ಲ. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಒಂದು ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ.

ಮಕರ ರಾಶಿ :

ನಿಮ್ಮ ಉದ್ಯೋಗದ ಕಡೆಗೆ ಹೆಚ್ಚು ಗಮನವಿರಲಿ, ಒಂದರೀತಿಯಲ್ಲಾದರೂ ಲಾಭವಾದೀತು. ವ್ಯವಹಾರಗಳಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಬುದ್ದಿವಂತಿಕೆ ಬಳಸಿ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿ. ಯಾವ ಅಡ್ಡಿಗಳನ್ನೂ ನೀವು ಸುಲಭಕ್ಕೆ ಸಹಿಸಲಾಗದು. ಕೂಡಲೇ ಅದರಿಂದ ಹೊರಬರಲು ಯೋಚಿಸುವಿರಿ. ಕಛೇರಿಯಲ್ಲಿ ಕೆಲಸವು ನಿಧಾನವಾಗಿ ಸಾಗಬಹುದು. ಆಲಸ್ಯವನ್ನು ಬಿಟ್ಟು ಕೆಲಸ ಮಾಡಿ‌. ಹೊಸ ಪ್ರೇಮವು ಅಂಕುರಿಸು ಸಾಧ್ಯತೆ. ಪ್ರೇಮಿಸುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇರಲಿ.

ಕುಂಭ ರಾಶಿ :

ಇಂದು ಉತ್ತಮ ಮಾನಸಿಕ ಸ್ಥಿತಿಯಿಂದ ಹೊಸ ಕೆಲಸಗಳಿಗೆ ತಯಾರಿ ಸಾಧ್ಯ. ಇರುವುದನ್ನು ಸರಿಯಾಗಿ ಇಟ್ಟುಕೊಂಡರೆ ಸಾಕು, ಹೊಸದನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕೆಲವು ಹಳೆಯ ಸಮಸ್ಯೆಗಳು ಪರಿಹಾರ ಕಾಣುವ ಸಾಧ್ಯತೆ. ಹಣಕಾಸಿನಲ್ಲಿ ಅಲ್ಪ ಲಾಭ ಸಿಗಬಹುದು. ನಿಮ್ಮ ಜೀವನಸಂಗಾತಿಯು ನಿಮ್ಮ ಪ್ರೋತ್ಸಾಹಕ್ಕೆ ಕಾರಣವಾಗುತ್ತಾರೆ. ಸಂಗಾತಿಗಳು ಪರಸ್ಪರ ಅನ್ಯೋನ್ಯವಾಗಿ ಇರಲಿದ್ದೀರಿ. ಹೊಂದಾಣಿಕೆಯ ಬದುಕು ನಿಮ್ಮದಾಗಲಿದೆ. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು.

ಮೀನ ರಾಶಿ :

ನೀವಿಂದು ಅಲ್ಪ ಪ್ರಯತ್ನದಿಂದ ಕೆಲಸವನ್ನು ಸಾಧಿಸಿಕೊಳ್ಳಬಹುದು. ತೆರಿಗೆಯನ್ನು ಸರಿಯಾದ ಸಮಯಕ್ಕೆ ಕಟ್ಟಿ ದಂಡವನ್ನು ತಪ್ಪಿಸಿಕೊಳ್ಳುವಿರಿ. ಇಂದು ಬಂದಿರುವ ಹಣಕಾಸಿನಲ್ಲಿ ನಿರ್ವಹಣಾ ಸಾಮರ್ಥ್ಯವನ್ನು ತೋರಬೇಕಾಗಬಹುದು. ಮನೆಯ ಕೆಲಸಗಳಲ್ಲಿ ಸಹಕಾರ ಬೇಕಾದ ಸಮಯ. ಹೊಸ ಜ್ಞಾನವನ್ನು ಪಡೆಯಲು ಯತ್ನಮಾಡಿ. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ನೂತನ ವಸ್ತುಗಳನ್ನು ಖರೀದಿಸಿದರೂ ಅದನ್ನು ಉಪಯೋಗಿಸಲು ಆಗದೇ, ಇಂದು ಅದನ್ನು ಬಳಸುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)

Source link

KKR vs GT: ಕಳಪೆ ಫಿಲ್ಡಿಂಗ್​ಗೆ ಸೋಲಿನ ಬೆಲೆ ತೆತ್ತ ಗುಜರಾತ್​; ಕೆಕೆಆರ್​ಗೆ 29 ರನ್ ಜಯ – Kannada News | KKR Keeps Playoff Hopes Alive: Beats GT by 29 Runs in IPL 2026 Match 60

ಐಪಿಎಲ್ 2026 ರ 60 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಗುಜರಾತ್ ಟೈಟಾನ್ಸ್ ತಂಡವನ್ನು 29 ರನ್‌ಗಳಿಂದ ಸೋಲಿಸಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಕೆಕೆಆರ್ ತಂಡ ಪ್ಲೇಆಫ್‌ ರೇಸ್​ನಲ್ಲಿ ಇರಬೇಕೆಂದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಅದರಂತೆ ಗುಜರಾತ್​ನ ಕಳಪೆ ಫಿಲ್ಡಿಂಗ್ ಹಾಗೂ ಬ್ಯಾಟರ್​ಗಳ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ಕೆಕೆಆರ್ ಸುಲಭ ಜಯ ದಾಖಲಿಸಿತು. ಈಡನ್ ಗಾರ್ಡನ್ಸ್ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 247 ರನ್ ಗಳಿಸಿತು, ಇದು ಗುಜರಾತ್ ವಿರುದ್ಧ ಕೆಕೆಆರ್ ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಗುಜರಾತ್ 218 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

Source link

TV9 Kannada News Live: ಟೌನ್‌ಶಿಪ್‌ ವಿವಾದ; ನನ್ನ ಹೋರಾಟ ಪ್ರಾರಂಭ ಎಂದ ದೇವೇಗೌಡ; ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: Township Dispute; Deve Gowda Says ‘My Fight Has Begun; Top News of the Day

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡImage Credit source: tv9 kannada

ಬೆಂಗಳೂರು, ಮೇ 16: ಬಿಡದಿ ಟೌನ್‌ಶಿಪ್‌ (Bidadi Township) ನಿರ್ಮಾಣಕ್ಕೆ ಸ್ಥಳೀಯ ರೈತರ ಜಮೀನನ್ನು ಇಟ್ಕೊಂಡು ದಂಧೆ ನಡೆಸುತ್ತಿದ್ದಾರೆ. ಕನಕಪುರದಲ್ಲಿ ಎಷ್ಟು ಜಮೀನು ವಶಪಡಿಸಿಕೊಂಡಿದ್ದಾರೆಂಬ ಮಾಹಿತಿ ಇದೆ. ಬಿಡದಿಯಲ್ಲಿ ಕಣ್ಣೀರು ಹಾಕ್ತಿದ್ದಾರೆ, ನಾನು ಸಿಎಂಗೆ ಪತ್ರ ಬರೆದಿದ್ದೇನೆ. ನನ್ನ ಹೋರಾಟ ಇವತ್ತಿನಿಂದ‌ ಪ್ರಾರಂಭ ಆಗಿದೆ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Deve Gowda) ಹೇಳಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳದೆ ವಾಗ್ದಾಳಿ ಮಾಡಿದ ಹೆಚ್‌ಡಿ ದೇವೇಗೌಡ

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಬಿಡದಿ ಬಳಿ ಹೋಗೋಣ, ನಾನು ಬರ್ತೀನಿ, ಸಿದ್ದರಾಮಯ್ಯ ನೀವು ಬನ್ನಿ. ಸ್ಥಳೀಯ ಶಾಸಕರು, ತಹಶೀಲ್ದಾರ್‌ ಇಲ್ಲಿಯವರೆಗೂ ಜನರ ಸಮಸ್ಯೆ ಕೇಳಿಲ್ಲ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರು ಹೇಳದೆ ತೀವ್ರ ವಾಗ್ದಾಳಿ ಮಾಡಿದ ಅವರು ಕನಕಪುರದಲ್ಲಿ ಎಷ್ಟು ಜಮೀನು ವಶಪಡಿಸಿಕೊಂಡಿದ್ದಾರೆಂಬ ಮಾಹಿತಿ ಇದೆ ಎಂದರು. ಸ್ಥಳಕ್ಕೆ ಹೋಗ್ತೀನಿ, ರೈತರು ಹೊಡೆದ್ರೂ ಹೊಡೆಸಿಕೊಳ್ಳುತ್ತೇನೆ ಎಂಬ ಡಿಕೆ ಶಿವಕುಮಾರ್​ ಹೇಳಿಕೆಗೆ ಕೌಂಟರ್ ನೀಡಿದ ದೇವೇಗೌಡರು, ಅವರು ಹೋಗಿ ರೈತರಿಂದ ಹೊಡೆಸಿಕೊಂಡು ಬರಲಿ, ಆಮೇಲೆ ಮಾತಾಡ್ತೇನೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಬಿಡದಿ ಟೌನ್‌ಶಿಪ್‌: ಜಮೀನು ಕೊಟ್ಟವರಿಗೆ 2 ಕೋಟಿ ಅಥವಾ 50*50 ನಿವೇಶನ: ರೈತರಿಗೆ ಡಿಕೆಶಿ ಆಫರ್

ಬೆಂಗಳೂರಿನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಮಾಗಡಿ, ಹೊಸಕೋಟೆ ಸೇರಿ ಬೆಂಗಳೂರು ಅಕ್ಕಪಕ್ಕದಲ್ಲಿ 5 ಟೌನ್‌ಶಿಪ್‌ಗಳನ್ನು ನಿರ್ಮಿಸಲು ಅಂದಿನ ಸಿಎಂ ಕುಮಾರಸ್ವಾಮಿ ಮುಂದಾಗಿದ್ದರು. ಆದರೆ ರೈತರು, ಸಾರ್ವಜನಿಕ ವಿರೋಧ ಹಿನ್ನೆಲೆ ಪ್ರಾಜೆಕ್ಟ್ ಕೈಬಿಡುತ್ತಾರೆ. ಈಗ ಬೇರೆ ಬೇರೆ ಪ್ರಾಜೆಕ್ಟ್ ಬಂದಿದೆ ಎಂದರು.

ಬಿಡಿಎನಲ್ಲಿ ಅಕ್ರಮ ನಡೆದಿದೆ, ಅದರ ಬಗ್ಗೆಯೂ ಹೋರಾಟ ಮಾಡುತ್ತೇನೆ: ದೇವೇಗೌಡ

ಬಿಡದಿ ಸುತ್ತಮುತ್ತ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ಮಾಡ್ತಿದ್ದಾರೆ. ಈ ಭಾಗಕ್ಕೆ 250 ಕೋಟಿ ವೆಚ್ಚದ ನೀರಾವರಿ ಯೋಜನೆ ತಂದಿದ್ದಾರೆ. ಇಂತಹ ನೀರಾವರಿ ಜಾಗವನ್ನು ಸ್ವಾಧೀನ ಮಾಡಿಕೊಳ್ಳಲು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ನನ್ನ ಜೊತೆಗೆ ಕೆಲಸ ಮಾಡಿದ್ದೀರಿ, ಬಡವರು, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಕೊಡಬಾರದಾ? ಬೆಂಗಳೂರು ಹೊಣೆಗಾರಿಕೆ ಹೊತ್ತಿರುವ ಡಿಸಿಎಂ ಡಿಕೆ ಶಿವಕುಮಾರ್​ ಒತ್ತಡಕ್ಕೆ ಮಣಿದು ಜನ ಸಾಮಾನ್ಯರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಲು ಆಗುತ್ತಿಲ್ಲವಾ ಎಂದು ಪ್ರಶ್ನಿಸಿದರು. ಬಿಡಿಎನಲ್ಲಿ ಅಕ್ರಮ ನಡೆದಿದೆ, ಅದರ ಬಗ್ಗೆಯೂ ಹೋರಾಟ ಮಾಡುತ್ತೇನೆ ಎಂದರು.

ರಾಜ್ಯಾದ್ಯಂತ ವರುಣನ ಆರ್ಭಟದ ಮುನ್ಸೂಚನೆ: ಮುಂದಿನ 4 ದಿನ ಭಾರಿ ಮಳೆ

ಬಿಸಿಲಿನ ಬೇಗೆಯ ನಡುವೆ ರಾಜ್ಯದ ಜನತೆಗೆ ವರುಣನ ಆರ್ಭಟದ ಮುನ್ಸೂಚನೆ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ. ಮೇ 16ರಿಂದ ಮೇ 19 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 64.5mm ನಿಂದ 115.5mm ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಈ ಭಾಗಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಇದನ್ನೂ ಓದಿ: Weather Forecast: ಇಂದಿನಿಂದ 4 ದಿನ ರಾಜ್ಯದ ಈ ಭಾಗಗಳಲ್ಲಿ ಭಾರಿ ಮಳೆ: ಆಲಿಕಲ್ಲು ಮಳೆ , ಬಿರುಗಾಳಿಯ ಮುನ್ನೆಚ್ಚರಿಕೆ!

ಮತ್ತೊಂದೆಡೆ, ಉತ್ತರ ಒಳನಾಡಿನಲ್ಲಿ ಗುಡುಗು, ಸಿಡಿಲು ಹಾಗೂ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇರುವುದರಿಂದ ಆ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಮತ್ತು ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಇಲಾಖೆ ಸೂಚಿಸಿದೆ.

ಸಿಎಂ ಚಂದ್ರಬಾಬು ನಾಯ್ಡು ಬಂಪರ್ ಆಫರ್: 3ನೇ ಮಗುವಿಗೆ 30 ಸಾವಿರ, 4ನೇ ಮಗುವಿಗೆ 40 ಸಾವಿರ ರೂ.!

ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನನ ದರ ಹಾಗೂ ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಿಎಂ ಎನ್. ಚಂದ್ರಬಾಬು ನಾಯ್ಡು, ರಾಜ್ಯದಲ್ಲಿ ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸಲು ಅತ್ಯಂತ ಕುತೂಹಲಕಾರಿ ಮತ್ತು ವಿನೂತನ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ. ನರಸನ್ನಪೇಟೆಯಲ್ಲಿ ಶನಿವಾರ ನಡೆದ ‘ಸ್ವರ್ಣ ಆಂಧ್ರ-ಸ್ವಚ್ಛ ಆಂಧ್ರ’ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಯಾವುದೇ ಕುಟುಂಬದಲ್ಲಿ ಮೂರನೇ ಮಗುವಿನ ಜನನವಾದರೆ ಆ ಕುಟುಂಬಕ್ಕೆ ಸರ್ಕಾರದಿಂದ 30 ಸಾವಿರ ರೂ ಹಾಗೂ ನಾಲ್ಕನೇ ಮಗುವಿನ ಜನನಕ್ಕೆ 40 ಸಾವಿರ ರೂ ನಗದು ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಹತ್ವದ ಘೋಷಣೆ ಮಾಡಿದ್ದಾರೆ.

ಇನ್ಮುಂದೆ ಬೆಳ್ಳಿ ಬಾರ್‌ ಆಮದಿಗೆ ವಿಶೇಷ ಪರವಾನಗಿ ಕಡ್ಡಾಯ

ಇನ್ಮುಂದೆ ದೇಶಕ್ಕೆ ಆಮದು ಮಾಡಿಕೊಳ್ಳಲಾಗುವ ಬೆಳ್ಳಿ ಬಾರ್‌ಗಳ ಮೇಲಿನ ನಿಯಮಗಳನ್ನು ಕೇಂದ್ರ ಸರ್ಕಾರವು ಕಠಿಣಗೊಳಿಸಿದ್ದು, ಆಮದಿಗೆ ಕಡ್ಡಾಯ ನಿರ್ಬಂಧಗಳನ್ನು ಹೇರಲಾಗಿದೆ. ಈವರೆಗೂ ಭಾರತಕ್ಕೆ ಸಿಲ್ವರ್ ಬಾರ್ಸ್ ಆಮದು ಮಾಡಿಕೊಳ್ಳುವುದರ ಮೇಲೆ ಯಾವುದೇ ರೀತಿಯ ಕಠಿಣ ನಿರ್ಬಂಧಗಳು ಇರಲಿಲ್ಲ. ಆದರೆ, ಕೇಂದ್ರ ವಾಣಿಜ್ಯ ಸಚಿವಾಲಯದ ನೂತನ ಆದೇಶದ ಪ್ರಕಾರ, ಇನ್ನು ಮುಂದೆ ವಿದೇಶಗಳಿಂದ ಬೆಳ್ಳಿ ಬಾರ್ ಆಮದು ಮಾಡಿಕೊಳ್ಳಲು ವಿಶೇಷ ಪರವಾನಗಿ ಕಡ್ಡಾಯವಾಗಿದೆ. ವಿಶೇಷವಾಗಿ 99.9% ಅತ್ಯಂತ ಶುದ್ಧತೆಯ ಬೆಳ್ಳಿ ಬಾರ್ ಆಮದಿಗೆ ಈ ಪರವಾನಗಿ ನಿಯಮವನ್ನು ಕಡ್ಡಾಯವಾಗಿ ಅನ್ವಯಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:15 pm, Sat, 16 May 26

Source link

ವಾರ ಭವಿಷ್ಯ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲಿದ್ದಾರೆ ಗ್ರಹಗಳ ರಾಜರು; ನಿಮ್ಮ ರಾಶಿ ಭವಿಷ್ಯ ಇಲ್ಲಿದೆ – Kannada News | Rashiphala 2026: May 17 24 Weekly Astrological Forecast for All Signs

2026ರ ಮೇ 17ರಿಂದ 24ರವರೆಗೆ ಮೂರನೇ ವಾರದಲ್ಲಿ ಎಲ್ಲ ಫಲಗಳನ್ನು ಬೇಗ ನಿರೀಕ್ಷಿಸಿ, ದುಃಖ ತಂದುಕೊಳ್ಳಬೇಕಾಗುವುದು. ನಿಮ್ಮ ಶ್ರಮವನ್ನು ಲೋಪವಿಲ್ಲದಂತೆ ಮಾಡಿ. ಶುಭವಾಗಲಿ.

​ಮೇಷ ರಾಶಿ :

​ರಾಶಿಯಲ್ಲಿ ಕುಜ ಹಾಗೂ ಪಂಚಮದಲ್ಲಿ ಚಂದ್ರ-ಕೇತು ಇದ್ದಾರೆ. ದ್ವಿತೀಯದ ರವಿ-ಬುಧರಿಂದ ಆರ್ಥಿಕ ಲಾಭವಿದ್ದರೂ, ಮಾತಿನಲ್ಲಿ ತಾಳ್ಮೆ ಇರಲಿ. ಮಕ್ಕಳ ವಿಷಯದಲ್ಲಿ ಸಣ್ಣ ಆತಂಕ ಎದುರಾಗಬಹುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.

ವೃಷಭ ರಾಶಿ :

​ನಿಮ್ಮ ರಾಶಿಯಲ್ಲಿ ರವಿ, ಬುಧ ಮತ್ತು ಮಾಂದಿ ಇರುವುದರಿಂದ ದೈಹಿಕ ಆಲಸ್ಯ ಅಥವಾ ತಲೆನೋವು ಕಾಡಬಹುದು. ಚತುರ್ಥ ಚಂದ್ರನಿಂದಾಗಿ ತಾಯಿಯ ಆರೋಗ್ಯದ ಕಡೆ ಗಮನವಿರಲಿ. ದ್ವಿತೀಯದ ಗುರು-ಶುಕ್ರರಿಂದ ಧನ ಲಾಭವಾಗಲಿದೆ.

ಮಿಥುನ ರಾಶಿ :

​ನಿಮ್ಮ ರಾಶಿಯಲ್ಲಿ ಗುರು ಮತ್ತು ಶುಕ್ರ ಇರುವುದರಿಂದ ಅತ್ಯಂತ ಶುಭ ವಾರವಿದು. ಕೀರ್ತಿ, ಗೌರವ ಹೆಚ್ಚಾಗಲಿದೆ. ತೃತೀಯದಲ್ಲಿ ಚಂದ್ರನಿರುವುದರಿಂದ ಧೈರ್ಯ ಮತ್ತು ಸೋದರರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ಕಂಡುಬರಲಿದೆ.

ಕರ್ಕಾಟಕ ರಾಶಿ :

​ರಾಶ್ಯಾಧಿಪತಿ ಚಂದ್ರನು ದ್ವಿತೀಯದಲ್ಲಿ ಕೇತುವಿನೊಂದಿಗಿದ್ದಾನೆ. ಧನ ಹರಿವು ಚೆನ್ನಾಗಿದ್ದರೂ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ವ್ಯಯಸ್ಥಾನದ ಗುರು-ಶುಕ್ರರಿಂದ ಧಾರ್ಮಿಕ ಕಾರ್ಯಗಳಿಗಾಗಿ ಹಣ ವಿನಿಯೋಗವಾಗಲಿದೆ. ಆರೋಗ್ಯ ಸಾಧಾರಣವಾಗಿರುತ್ತದೆ.

ಸಿಂಹ ರಾಶಿ :

​ನಿಮ್ಮ ರಾಶಿಯಲ್ಲೇ ಚಂದ್ರ ಮತ್ತು ಕೇತು ಇರುವುದರಿಂದ ಮಾನಸಿಕವಾಗಿ ಸಣ್ಣಪುಟ್ಟ ಗೊಂದಲಗಳಿರಬಹುದು. ಆದರೆ ಲಾಭಸ್ಥಾನದ ಗುರು-ಶುಕ್ರ ಹಾಗೂ ಭಾಗ್ಯದ ಕುಜನ ಬಲದಿಂದ ಎಲ್ಲ ಸವಾಲುಗಳನ್ನು ಜಯಿಸಿ ಆರ್ಥಿಕವಾಗಿ ಪ್ರಗತಿ ಹೊಂದುವಿರಿ.

​ಕನ್ಯಾ ರಾಶಿ :

​ನಿಮ್ಮ ರಾಶಿಗೆ ವ್ಯಯಸ್ಥಾನದಲ್ಲಿ ಚಂದ್ರನಿದ್ದಾನೆ. ಅನಗತ್ಯ ಪ್ರಯಾಣ ಮತ್ತು ಖರ್ಚುಗಳು ಹೆಚ್ಚಾಗಬಹುದು. ದಶಮದ ಗುರು-ಶುಕ್ರರಿಂದ ಉದ್ಯೋಗದಲ್ಲಿ ಉತ್ತಮ ಬದಲಾವಣೆ ಹಾಗೂ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಜಾಗ್ರತೆ ಇರಲಿ.

ತುಲಾ ರಾಶಿ :

​ನಿಮ್ಮ ರಾಶಿಗೆ ಲಾಭಸ್ಥಾನದಲ್ಲಿ ಚಂದ್ರ-ಕೇತು ಹಾಗೂ ಭಾಗ್ಯದಲ್ಲಿ ಗುರು-ಶುಕ್ರರಿದ್ದಾರೆ. ಅದೃಷ್ಟ ಒಲಿದು ಬರುವ ವಾರವಿದು. ದೀರ್ಘಕಾಲದ ಆಸೆಗಳು ಈಡೇರಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆ.

ವೃಶ್ಚಿಕ ರಾಶಿ :

​ನಿಮ್ಮ ರಾಶ್ಯಾಧಿಪತಿ ಕುಜನು ಷಷ್ಠದಲ್ಲಿದ್ದಾನೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕರ್ಮಸ್ಥಾನದಲ್ಲಿ ಚಂದ್ರನಿರುವುದರಿಂದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಅಷ್ಟಮದ ರವಿ-ಬುಧರಿಂದ ಆರೋಗ್ಯದ ಕಡೆ ಗಮನವಿರಲಿ.

ಧನು ರಾಶಿ :

​ನಿಮ್ಮ ರಾಶಿಗೆ ಭಾಗ್ಯಸ್ಥಾನದಲ್ಲಿ ಚಂದ್ರನಿದ್ದಾನೆ. ಹಿರಿಯರ ಮತ್ತು ಗುರುಗಳ ಆಶೀರ್ವಾದದಿಂದ ನಿಂತುಹೋದ ಕೆಲಸಗಳು ಪುನಃ ಆರಂಭವಾಗಲಿವೆ. ಸಪ್ತಮದ ಗುರು-ಶುಕ್ರರ ಪ್ರಭಾವದಿಂದ ಸಂಗಾತಿಯೊಂದಿಗೆ ಸುಂದರ ಸಮಯ ಕಳೆಯುವಿರಿ.


ಮಕರ ರಾಶಿ :

​ನಿಮ್ಮ ರಾಶಿಗೆ ಅಷ್ಟಮದಲ್ಲಿ ಚಂದ್ರ-ಕೇತು ಇರುವುದರಿಂದ ವಾಹನ ಚಾಲನೆಯಲ್ಲಿ ತೀವ್ರ ಎಚ್ಚರಿಕೆ ಅಗತ್ಯ. ಕಚೇರಿಯಲ್ಲಿ ವಾದ-ವಿವಾದಗಳಿಂದ ದೂರವಿರಿ. ಷಷ್ಠದ ಗುರು-ಶುಕ್ರರಿಂದಾಗಿ ಸಾಲದ ಬಾಧೆಗಳು ಸದ್ಯಕ್ಕೆ ನಿವಾರಣೆಯಾಗಲಿವೆ.

ಕುಂಭ ರಾಶಿ :

​ನಿಮ್ಮ ರಾಶಿಯಲ್ಲಿ ರಾಹು ಇದ್ದು, ಸಪ್ತಮದಲ್ಲಿ ಚಂದ್ರನಿದ್ದಾನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ. ಪಂಚಮದ ಗುರು-ಶುಕ್ರರಿಂದಾಗಿ ಬುದ್ಧಿವಂತಿಕೆಯ ನಿರ್ಧಾರಗಳು ಕೈಗೂಡಲಿವೆ. ಮಕ್ಕಳ ಕಡೆಯಿಂದ ಶುಭ ವಾರ್ತೆ ಕೇಳುವಿರಿ.

ಮೀನ ರಾಶಿ :

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ?

ನಿಮ್ಮ ರಾಶಿಯಲ್ಲಿ ಶನಿ ಇದ್ದು, ಷಷ್ಠದಲ್ಲಿ ಚಂದ್ರನಿದ್ದಾನೆ. ಏಳನೇ ಶನಿಯ ಪ್ರಭಾವದಿಂದ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾದರೂ, ಷಷ್ಠ ಚಂದ್ರನ ಬಲದಿಂದ ಶತ್ರು ಬಾಧೆ ನಿವಾರಣೆಯಾಗಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಹೆಚ್‌ಡಿ ಕುಮಾರಸ್ವಾಮಿ

ನೆಲಮಂಗಲ, ಮೇ 16: ಬಿಡದಿ ಟೌನ್‌ಶಿಪ್ ವಿವಾದದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ನನ್ನ ಕಾಲದಲ್ಲೇ ಟೌನ್‌ಶಿಪ್ ಮಾಡಬೇಕೆಂದು ಇದ್ದಿದ್ದು. ಬೆಂಗಳೂರನ್ನು 5 ಭಾಗವಾಗಿ ಟೌನ್‌ಶಿಪ್ ಮಾಡಲು ಪ್ಲ್ಯಾನ್ ಇತ್ತು. ಆಗ ನಾನು ರೈತರ ಬಳಿಯೂ ಚರ್ಚಿಸಿ ಅವರ ಒಪ್ಪಿಗೆ ಪಡೆದಿದ್ದೆ. ಆದರೆ ಇವರೇ ವಿರೋಧಿಸಿ ಸತ್ಯ ಶೋಧನಾ ಸಮಿತಿ ರಚಿಸಿದ್ದರು. ಈ ಹಿಂದೆ ಏನೇನೋ ಡ್ರಾಮಾ ಮಾಡಿದ್ದರು. ಆ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಭಾರಿ ವ್ಯತ್ಯಾಸವಿದೆ. ಈ ಟೌನ್‌ಶಿಪ್‌ಗೆ ಅಲ್ಲಿನ ರೈತರ ಸಹಮತ ಇಲ್ಲ. ಕೃಷಿಭೂಮಿ ವಶಕ್ಕೆ ಪಡೆದು ಟೌನ್‌ಶಿಪ್ ಮಾಡಲು ಯತ್ನ ನಡೆಯುತ್ತಿದೆ. ಆ ಭಾಗದ ರೈತರು ತೀವ್ರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರಿಗೆ ಗೌರವ ಕೊಡದೇ ಟೌನ್‌ಶಿಪ್‌ ಮಾಡಲು ಯತ್ನ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಕೃಷಿಕರನ್ನ ಭೇಟಿ ಮಾಡದೇ ಕಾನೂನು ಬಾಹಿರ ಚಟುವಟಿಕೆ ಮಾಡಲು ಹೊರಟಿದ್ದಾರೆ. ನಮ್ಮನ್ನ ಬೆಳೆಸಿದ ಜನರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ? – Kannada News | Love and Compatibility: Zodiac Predictions May 17 25 with Venus Transit

ಮೇ 17ರಿಂದ ಮೇ 25ರವರೆಗೆ ಪ್ರೇಮ, ಸ್ತ್ರೀ ಪುರುಷರ ನಡುವೆ ಹೊಂದಾಣಿಕೆ ಹೇಗಿದೆ ಎಂದು ತಿಳಿಯಲು ಮುಖ್ಯವಾಗಿ ನೋಡಬೇಕಾದ ಶುಕ್ರನ ಸ್ಥಾನವು ರಾಶಿಯ ಪ್ರಕಾರ ಮಿಥುನದಲ್ಲಿ, ಹೋರೆಯ ಪ್ರಕಾರ ಸಿಂಹದಲ್ಲಿ, ದ್ರೇಕ್ಕಾಣದ ಪ್ರಕಾರ ಮಿಥುನದಲ್ಲಿ, ನವಾಂಶದ ಪ್ರಕಾರ ತುಲಾದಲ್ಲಿ ಇರುವ ಕಾರಣ ತನ್ನ ಸ್ಥಾನದ ಆಧಾರದ ಮೇಲೆ ಫಲವನ್ನು ನೀಡುವನು.

ಮೇಷ ರಾಶಿ :

​ಶುಕ್ರನ ಸಂಚಾರವು ಪ್ರೇಮದಲ್ಲಿ ಹೊಸ ಉತ್ಸಾಹ ತರಲಿದೆ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಹಳೆ ವಿವಾದ ಮರೆತು ಸಂಗಾತಿಯ ಜೊತೆ ಸುಂದರ ಕ್ಷಣ ಕಳೆಯಿರಿ. ಕಾಮನೆಗಳ ಮೇಲೆ ಹಿಡಿತವಿರಲಿ, ಇಲ್ಲವಾದರೆ ಮನಸ್ತಾಪ ಸಂಭವ.

ವೃಷಭ ರಾಶಿ :

​ನಿಮ್ಮ ರಾಶಿಯಲ್ಲಿ ಗ್ರಹಗಳ ಸಮಾಗಮವಿರುವುದರಿಂದ ಆಕರ್ಷಣೆ ಹೆಚ್ಚಲಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಆದರೆ, ಸಣ್ಣ ವಿಷಯಕ್ಕೆ ವಿಚ್ಛೇದನದ ಮಾತು ಬೇಡ. ತಾಳ್ಮೆಯಿಂದ ವರ್ತಿಸಿದರೆ ಸಂಬಂಧ ಗಟ್ಟಿಯಾಗುವುದು. ಕಾಮದ ಹಸಿವಿಗಿಂತ ಭಾವನೆಗೆ ಒತ್ತು ನೀಡಿ.

ಮಿಥುನ ರಾಶಿ :

​ಮಿಥುನ ರಾಶಿಯವರಿಗೆ ಈ ವಾರ ಸ್ವಲ್ಪ ಮಿಶ್ರಫಲ. ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮೂಡಬಹುದು. ಕಾಮಪ್ರಚೋದಕ ಆಲೋಚನೆಗಳು ಹೆಚ್ಚಾಗಲಿವೆ. ಸಂಬಂಧದಲ್ಲಿ ಪಾರದರ್ಶಕತೆ ಇರಲಿ. ಮದುವೆಯ ಮಾತುಕತೆ ಸದ್ಯಕ್ಕೆ ಮುಂದುೂಡುವುದು ಒಳಿತು.

​ಕರ್ಕಾಟಕ ರಾಶಿ :

​ಭಾವನಾತ್ಮಕ ಜೀವಿಗಳಾದ ನಿಮಗೆ ಸಂಗಾತಿಯ ಬೆಂಬಲ ಸಿಗಲಿದೆ. ಪ್ರೇಮ ವಿವಾಹಕ್ಕೆ ಮನೆಯವರ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಹಳೆಯ ಸಂಬಂಧದ ನೆನಪುಗಳು ಕಾಡಬಹುದು. ದೈಹಿಕ ಸುಖಕ್ಕಿಂತ ಮಾನಸಿಕ ನೆಮ್ಮದಿಗೆ ಆದ್ಯತೆ ನೀಡಿ, ಸಂಬಂಧ ಸುಸ್ಥಿರವಾಗಿರುತ್ತದೆ.

ಸಿಂಹ ರಾಶಿ :

​ಸಂಗಾತಿಯ ಮೇಲೆ ಸವಾರಿಕೆ ಮಾಡಬೇಡಿ. ಪ್ರೇಮ ಜೀವನದಲ್ಲಿ ಅಹಂಕಾರ ಬೇಡ. ವಿಚ್ಛೇದನದ ಅಂಚಿನಲ್ಲಿರುವವರಿಗೆ ರಾಜಿ ಸಂಧಾನದ ಅವಕಾಶವಿದೆ. ವೈವಾಹಿಕ ಜೀವನದಲ್ಲಿ ಕಾಮ ಮತ್ತು ಸಂವಹನ ಸಮತೋಲನದಲ್ಲಿರಲಿ. ಹೊಸ ವ್ಯಕ್ತಿಯ ಪರಿಚಯ ಆಕರ್ಷಣೆಗೆ ನಾಂದಿ ಹಾಡಬಹುದು.

ಕನ್ಯಾ ರಾಶಿ :

​ಅತಿಯಾದ ವಿಮರ್ಶೆ ಪ್ರೇಮವನ್ನು ಕೊಲ್ಲಬಹುದು. ಸಂಗಾತಿಯ ತಪ್ಪು ಹುಡುಕುವುದನ್ನು ಬಿಟ್ಟರೆ ವಾರ ಸುಗಮವಾಗಿರುತ್ತದೆ. ವಿವಾಹ ಪ್ರಸ್ತಾಪಗಳು ಯಶಸ್ವಿಯಾಗಲಿವೆ. ಏಕಾಂತದ ಕ್ಷಣಗಳು ಸಂಬಂಧವನ್ನು ಮತ್ತಷ್ಟು ಹತ್ತಿರ ತರಲಿವೆ. ಕಾಮನೆಗಳ ಪೂರೈಕೆಯಲ್ಲಿ ಪರಸ್ಪರ ಗೌರವವಿರಲಿ.

ತುಲಾ ರಾಶಿ :

​ಶುಕ್ರನ ಪ್ರಭಾವದಿಂದ ನಿಮ್ಮ ಆಕರ್ಷಣೆ ಹೆಚ್ಚಲಿದೆ. ಪ್ರೇಮ ಸಂಬಂಧಗಳು ವಿವಾಹಕ್ಕೆ ನಾಂದಿ ಹಾಡಲಿವೆ. ಕಾಮದ ತುಡಿತ ಹೆಚ್ಚಿದ್ದರೂ, ವಿವೇಚನೆ ಮರೆಯಬೇಡಿ. ಕಾನೂನುಬದ್ಧ ವಿಚ್ಛೇದನ ಪ್ರಕ್ರಿಯೆಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಸಂಬಂಧದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ.

ವೃಶ್ಚಿಕ ರಾಶಿ :

ವಿಚ್ಛೇದನದಲ್ಲಿ ನಿಮಗೆ ತೀವ್ರವಾದ ಕಾಮನೆಗಳು ಕಾಡಲಿವೆ. ಗುಪ್ತ ಸಂಬಂಧಗಳಿಂದ ದೂರವಿರಿ, ಇದು ಸಂಸಾರದಲ್ಲಿ ಬಿರುಕು ತರಬಹುದು. ದಾಂಪತ್ಯದಲ್ಲಿ ವಿಚ್ಛೇದನದ ಆಲೋಚನೆ ಬಿಟ್ಟು ಸಮನ್ವಯಕ್ಕೆ ಪ್ರಯತ್ನಿಸಿ. ಪ್ರೇಮದಲ್ಲಿ ನಂಬಿಕೆಯೇ ಜೀವಾಳ, ಅದನ್ನು ಹೇಗಾದರೂ ಉಳಿಸಿಕೊಳ್ಳಿ.

​ಧನು ರಾಶಿ :

ಸದಾ ​ಸ್ವಾತಂತ್ರ್ಯವನ್ನೇ ಬಯಸುವ ನಿಮಗೆ ಸಂಗಾತಿಯ ಅತಿಯಾದ ಹಸ್ತಕ್ಷೇಪ ಕಿರಿಕಿರಿ ಎನಿಸಬಹುದು. ವಿವಾಹ ಜೀವನದಲ್ಲಿ ತಾಳ್ಮೆ ಅಗತ್ಯ. ಪ್ರೇಮಿಗಳಿಗೆ ಪ್ರವಾಸದ ಯೋಗ ತಾನಾಗಿಯೇ ಒದಗುವ ಸಾಧ್ಯಯೆ ಇದೆ. ಕಾಮದ ವಿಷಯದಲ್ಲಿ ನವೀನತೆ ಬಯಸುವಿರಿ. ಹಳೆಯ ವಿವಾದಗಳನ್ನು ಕೆದಕದೆ ವರ್ತಮಾನದಲ್ಲಿ ಬದುಕಿದರೆ ಚೆನ್ನ.

​ಮಕರ ರಾಶಿ :

​ಕೆಲಸದ ಒತ್ತಡದ ನಡುವೆ ಪ್ರೇಮಕ್ಕೆ ಸಮಯ ಮೀಸಲಿಡಿ. ಸಂಗಾತಿಯ ಪ್ರೀತಿಯನ್ನು ಕೇವಲವಾಗಿ ಕಂಡು ಕಡೆಗಣಿಸಬೇಡಿ. ವಿವಾಹ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ವಿಚ್ಛೇದನ ಬಯಸುವವರಿಗೆ ಹಿರಿಯರ ಮಧ್ಯಸ್ಥಿಕೆಯಿಂದ ಸಹಾಯವಾಗಲಿದೆ. ಸಂಬಂಧದಲ್ಲಿ ಸ್ಥಿರತೆ ಮತ್ತು ಬದ್ಧತೆ ಮುಖ್ಯವಾಗಲಿ.

ಇದನ್ನೂ ಓದಿ: ಮನೆಯಲ್ಲಿ ಆಮೆ ಪ್ರತಿಮೆ ಇಟ್ಟರೆ ಅದೃಷ್ಟ ಖುಲಾಯಿಸುತ್ತಾ? ವಾಸ್ತು ಶಾಸ್ತ್ರ ಹೇಳುವುದೇನು?

ಕುಂಭ ರಾಶಿ :

​ವ್ಯಕ್ತಿತ್ವದಲ್ಲಿನ ಬದಲಾವಣೆ ಸಂಗಾತಿಗೆ ಅಚ್ಚರಿ ತರಬಹುದು. ಪ್ರೇಮದಲ್ಲಿ ಹೊಸತನ ಕಾಣುವಿರಿ. ದೈಹಿಕ ಆಕರ್ಷಣೆಗಿಂತ ಬೌದ್ಧಿಕ ಸಂವಾದ ಆಪ್ತವೆನಿಸಲಿದೆ. ವಿಚ್ಛೇದನ ಪ್ರಕರಣಗಳಲ್ಲಿ ನಿಮ್ಮ ಪರ ತೀರ್ಪು ಬರುವ ಸಾಧ್ಯತೆ ಇದೆ. ಮದುವೆಯ ಮಾತುಕತೆ ಯಶಸ್ವಿಯಾಗಲಿದೆ.

​ಮೀನ ರಾಶಿ :

​ಕನಸಿನ ಲೋಕದಿಂದ ಹೊರಬಂದು ವಾಸ್ತವದ ಪ್ರೇಮವನ್ನು ಒಪ್ಪಿಕೊಳ್ಳುವುದು ಕಷ್ಟ. ಸಂಗಾತಿಯ ಜೊತೆಗಿನ ಕಾಮನೆಗಳು ತೃಪ್ತಿ ನೀಡಲಿವೆ. ವಿವಾಹ ಆಕಾಂಕ್ಷಿಗಳಿಗೆ ಶುಭ ವಾರ್ತೆಯಿಂದ ಸಂತೋಷ. ವಿಚ್ಛೇದನದ ಭಯ ದೂರವಾಗಿ ಮತ್ತೆ ಒಂದಾಗುವ ಲಕ್ಷಣಗಳಿವೆ. ಪ್ರೀತಿಯಲ್ಲಿ ನಿಃಸ್ವಾರ್ಥತೆ ಇರಲಿ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲಾ ಸುಳ್ಳು.. ಮೊಹ್ಸಿನ್ ನಖ್ವಿಗೆ ಯಾವುದೇ ಆಹ್ವಾನ ನೀಡಿಲ್ಲ – Kannada News | Mohsin Naqvi Not Invited to IPL Final 2026 in Ahmedabad; Attends ICC Meet Virtually

ಮೇ 31 ರಂದು 2026 ರ ಐಪಿಎಲ್​ನ (IPL 2026) ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ. ಅದೇ ದಿನ ಐಸಿಸಿಯ (ICC) ವಾರ್ಷಿಕ ಮಂಡಳಿ ಸಭೆಯೂ ಅಹಮದಾಬಾದ್‌ನಲ್ಲಿ ನಡೆಯಲಿದೆ. ಹೀಗಾಗಿ ಈ ಎರಡು ಕಾರ್ಯಕ್ರಮಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ (Mohsin Naqvi) ಆಹ್ವಾನ ಬಂದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ನಖ್ವಿಗೆ ಆಹ್ವಾನ ನೀಡಿರುವುದಕ್ಕೆ ಭಾರತೀಯರು ಆಕ್ರೋಶ ಹೊರಹಾಕಿದ್ದರು. ಆದರೀಗ ಈ ಬಗ್ಗೆ ಆಪ್ತ ಮೂಲಗಳಿಂದ ಮಾಹಿತಿ ಹೊರಬಿದ್ದಿದ್ದು, ಮೊಹ್ಸಿನ್ ನಖ್ವಿಗೆ ಯಾವುದೇ ರೀತಿಯ ಆಹ್ವಾನ ನೀಡಲಾಗಿಲ್ಲ ಎಂಬುದು ತಿಳಿದುಬಂದಿದೆ. ಅಲ್ಲದೆ ನಖ್ವಿ ವಿಡಿಯೋ ಕಾನ್ಫರೆನ್ಸ್ ಮೂಲಕ ಐಸಿಸಿ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಭಾರತಕ್ಕೆ ಆಹ್ವಾನಿಸಲಾಗಿಲ್ಲ

ಪಿಟಿಐ ವರದಿಯ ಪ್ರಕಾರ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಅಹಮದಾಬಾದ್‌ನಲ್ಲಿ ನಡೆಯುವ ಐಪಿಎಲ್ 2026 ರ ಫೈನಲ್‌ಗೆ ಆಹ್ವಾನಿಸಲಾಗಿಲ್ಲ. ಅಲ್ಲದೆ ನಖ್ವಿ ಮೇ 31 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಐಸಿಸಿ ಮಂಡಳಿಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯು ಮೂಲತಃ ಕಳೆದ ತಿಂಗಳು ದೋಹಾದಲ್ಲಿ ನಡೆಯಬೇಕಿತ್ತು, ಆದರೆ ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಬಿಕ್ಕಟ್ಟಿನಿಂದಾಗಿ ಮುಂದೂಡಲ್ಪಟ್ಟಿತು. ಇದೀಗ ಆ ಸಭೆ ಭಾರತದಲ್ಲಿ ನಡೆಯಲಿದೆ.

ಸಭೆಯಲ್ಲಿ ಏನೆಲ್ಲ ಚರ್ಚೆಯಾಗಲಿದೆ?

ವಾಸ್ತವವಾಗಿ ಪ್ರಯಾಣಿಸಲು ಸಾಧ್ಯವಾಗದ ಸದಸ್ಯ ಪ್ರತಿನಿಧಿಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅದರಂತೆ ನಖ್ವಿ ಸೇರಿದಂತೆ ಇನ್ನು ಇಬ್ಬರು ಪ್ರತಿನಿಧಿಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇನ್ನು ಈ ಸಭೆಯಲ್ಲಿ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿ (ಸಿಇಸಿ) ಮತ್ತು ಮಂಡಳಿ ಸೇರಿದಂತೆ ಹಲವಾರು ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ನ ಭವಿಷ್ಯದ ರಚನೆ ಮತ್ತು ನಿರ್ದೇಶನದ ಬಗ್ಗೆಯೂ ಚರ್ಚಿಸುವ ನಿರೀಕ್ಷೆಯಿದೆ.

ಪಾಕ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ತನ್ನ ದೇಶದ ಪ್ರಧಾನಿ ಹೆಸರೇ ಗೊತ್ತಿಲ್ಲ

ಫೈನಲ್ ಬೆಂಗಳೂರಿನಿಂದ ಶಿಫ್ಟ್

ಐಪಿಎಲ್ 2026 ರ ಫೈನಲ್ ಪಂದ್ಯವನ್ನು ಹಾಲಿ ಚಾಂಪಿಯನ್ ಆರ್‌ಸಿಬಿಯ ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಟಿಕೆಟ್ ವಿವಾದದಿಂದಾಗಿ, ಬಿಸಿಸಿಐ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿತು. ಪ್ಲೇಆಫ್ ಪಂದ್ಯಗಳು ಮೇ 26 ರಂದು ಪ್ರಾರಂಭವಾಗಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯವು ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಕ್ರಮವಾಗಿ ಮೇ 27 ಮತ್ತು 29 ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version