ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್ – Kannada News | Vijayalakshmi Dhanveer visit Darshan in Parappana Agrahara Jail on his birthday

ಇಂದು (ಫೆಬ್ರವರಿ 16) ನಟ ದರ್ಶನ್ (Darshan) ಅವರ ಹುಟ್ಟುಹಬ್ಬ. ಆದರೆ ಅವರು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಬೇಸರ ಇದೆ. ಒಂದು ವೇಳೆ ದರ್ಶನ್ ಅವರು ಹೊರಗಡೆ ಇದ್ದಿದ್ದರೆ ಜನ್ಮದಿನದ ಸಂಭ್ರಮ ಜೋರಾಗಿ ಇರುತ್ತಿತ್ತು. ಇಂದು ಪತ್ನಿ ವಿಜಯಲಕ್ಷ್ಮಿ (Vijayalakshmi Darshan), ಪುತ್ರ ವಿನೀಶ್, ಸಹೋದರ ದಿನಕರ್ ತೂಗುದೀಪ, ನಟ ಧನ್ವೀರ್ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದು ದರ್ಶನ್​ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಪ್ರಮುಖ ಆರೋಪಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಬ್ಬಳ್ಳಿಯ ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ – Kannada News | More Than 5 Lakh Devotees Participate in Hubballi Siddarudha Rathotsava

ಹುಬ್ಬಳ್ಳಿ, ಫೆಬ್ರವರಿ 16: ಸುಪ್ರಸಿದ್ಧ ಸಿದ್ಧಾರೂಢರ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದಾರೆ. ಎತ್ತ ನೋಡಿದರೂ ಜನ ಸಾಗರವೇ ಕಾಣುತ್ತಿದ್ದು, ಸುಮಾರು ಐದು ಲಕ್ಷ ಭಕ್ತರು ರಥೋತ್ಸವ ಕಣ್ತುಂಬಿಕೊಂಡಿದ್ದಾರೆ. ರಥೋತ್ಸವದ ವೇಳೆ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ ಮಾಡಲಾಗಿದ್ದು, ಸಿದ್ದಾರೂಢ ಮಹರಾಜ ಕಿ ಜೈ ಎಂಬ ಘೋಷಣೆಗಳು ಭಕ್ತರಿಂದ ಮೊಳಗಿವೆ. ಮಹಾರಥೋತ್ಸವ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಶೇಷ ಸೇವೆ ನಡೆದಿದ್ದು, ಭಕ್ತರಿಗೆ ನಿನ್ನೆ ಮತ್ತು ಇಂದು ಮುಂಜಾನೆ ಸೇರಿ ಒಂದು ಲಕ್ಷ ಸೆಟ್ ದೋಸೆ ವಿತರಣೆ ಮಾಡಲಾಗಿದೆ. ರಸ್ತೆಯುದ್ದಕ್ಕೂ ಅನ್ನ ಪ್ರಸಾದ, ಮಜ್ಜಿಗೆ, ಹಣ್ಣುಗಳ ವಿತರಣೆ ಭರದಿಂದ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಹರ್ ಘರ್ ಜಲ್ ಯೋಜನೆ ಹಳ್ಳ ಹಿಡಿಸಿದ ಅಧಿಕಾರಿಗಳು: ಕಾಮಗಾರಿ ಮುಗಿಸಿ 5 ವರ್ಷವಾದ್ರೂ ಬಾರದ ನೀರು – Kannada News | Haveri’s Har Ghar Jal Failure: Neshvi Villagers Lack Water Despite 50 Lakh Scheme

ಹಾವೇರಿ, ಫೆಬ್ರವರಿ 16: ಗ್ರಾಮೀಣ ಭಾಗದ ಊರುಗಳಲ್ಲಿ ಮನೆ ಮನೆಗೆ ಕುಡಿಯುವ ನೀರು (water) ಕೊಡುವ ಉದ್ದೇಶದಿಂದ ಹರ್ ಘರ್ ಜಲ್ ಯೋಜನೆಯನ್ನ (Har Ghar Jal project) ಜಾರಿಗೆ ತಂದಿದೆ. ಆದರೆ ಕೋಟ್ಯಂತರ ರೂ ವೆಚ್ಚದಲ್ಲಿ ಮಾಡಿದ ಯೋಜನೆ ಸದ್ಯ ಹಳ್ಳ ಹಿಡಿದು ಹೋಗಿದೆ. ಕಾಮಗಾರಿ ಮಾಡಿ ಐದು ವರ್ಷ ಕಳೆದರೂ ಮನೆಗೆ ನೀರು ಬರುತ್ತಿಲ್ಲ. ಸಾರ್ವಜನಿಕ ನಳದಲ್ಲಿ ನೀರು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ನೆಶ್ವಿ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನ ಜಾರಿಗೊಳಿಸಲಾಗಿದೆ. ಗ್ರಾಮದ 600ಕ್ಕೂ ಅಧಿಕ ಮನೆಗಳಿಗೆ ಜಲಜೀವನ್ ಮಿಷನ್ ನಳಗಳನ್ನ ಹಾಕಲಾಗಿದೆ. ಆದರೆ ಈಗ ಮನೆಗಳಿಗೆ ನೀರು ಬರುತ್ತಿಲ್ಲ. ಸಾರ್ವಜನಿಕ ನಳಗಳಲ್ಲಿ ನೀರು ತುಂಬುವ ಪರಸ್ಥಿತಿ ಬಂದಿದೆ. ಇನ್ನೂ ಕೆಲವು ಜನಪ್ರತಿನಿಧಿಗಳ ಮನೆಗಳ ಮುಂದೆ ನಳಗಳು‌ ಇವೆ.‌ ಜನರು ಮಾತ್ರ ನೀರು ತರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ

ನೆಶ್ವಿ ಗ್ರಾಮದಲ್ಲಿ ಗುತ್ತಿಗೆದಾರ ಕೆಲಸ ಮಾಡಿ ಐದು ವರ್ಷ ಕಳೆದಿದೆ. ಅಲ್ಲದೆ ಗ್ರಾಮ ಪಂಚಾಯತಿಯಿಂದ ಎನ್​ಓಸಿ ಸಹ ನೀಡಲಾಗಿದೆ. ನೀರು ಬಾರದೆ ಹೇಗೆ ಎನ್​ಓಸಿ ಕೊಟ್ಟಿದ್ದಾರೆ. 50 ರಿಂದ 100 ಕುಟುಂಬಗಳ ನಡುವೆ ಒಂದು ಸಾರ್ವಜನಿಕ ನಳ ಇದ್ದು, ಅದರಲ್ಲಿ ಒಂದು ಗಂಟೆಗಳ ಕಾಲ ನೀರು ಹಿಡಿಯುವ ಪರಸ್ಥಿತಿ ಬಂದಿದೆ. ಅಲ್ಲದೇ ಮನೆ ಮನೆಗೆ ಅಳವಡಿಸಿರುವ ನಳಗಳು ತಕ್ಕು ಹಿಡಿದು ಹಾಳಾಗುತ್ತಿವೆ. ಗುತ್ತಿಗೆದಾರ ನಮ್ಮ ಕೆಲಸ ಮುಗಿದಿದೆ. ನಮ್ಮದು ಏನೋ ಇಲ್ಲ ಅಂತಾರೆ. ಈಗ ಅಧಿಕಾರಿಗಳು ಮಾತ್ರ ಇವತ್ತು, ನಾಳೆ ಅಂದು ಜನರನ್ನ ಓಡಿಸುತ್ತಾರೆ. ಗುತ್ತಿಗೆದಾರ ಮತ್ತು ಪಿಡಿಓ ಸೇವೆ ಗ್ರಾಮ ಪಂಚಾಯತಿ ಸದಸ್ಯರ ಹೊಂದಾಣಿಕೆಯಿಂದ ನೀರು ಬರುತ್ತಿಲ್ಲ. ಸರ್ಕಾರದ ಕೋಟ್ಯಂತರ ರೂ ಹಾಳು ಮಾಡಿದ್ದಾರೆ ಎಂದು ಸ್ಥಳೀಯರಾದ ಚನ್ನಬಸಪ್ಪ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿ: ಶಾಲೆ ಆವರಣದಲ್ಲೇ ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ, ವಿಡಿಯೋ ವೈರಲ್

ಒಟ್ಟಿನಲ್ಲಿ ಸರ್ಕಾರದ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರು ಮನೆಮನೆಗೂ ಬರಲಿ ಅನ್ನೋ ಉದ್ದೇಶದಿಂದ ಮಾಡಿದ್ದಾರೆ. ಅದರೆ ಈಗ ಪಿಡಿಓ ಮತ್ತು ಅಧಿಕಾರಿಗಳ ಯಡವಟ್ಟಿನಿಂದ ನೀರು ಬಾರದೇ ಜನರು ಪರದಾಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚತ್ತುಕೊಂಡು ಗುತ್ತಿಗೆದಾರ ವಿರುದ್ಧ ಕ್ರಮ ತೆಗೆದುಕೊಂಡು ನೀರು ಹರಿಸುವ ಕೆಲಸ ಮಾಡಬೇಕಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಂಗ್ರೆಸ್ ಶಾಸಕ​​ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು: ಬಿಜೆಪಿ ಪರಾಜಿತ ಅಭ್ಯರ್ಥಿ ಫುಲ್ ಖುಷ್, ಹೇಳಿದ್ದೇನು? – Kannada News | Bagepalli Congress MLA Subba Reddy elect Invalidates: What did BJP defeated candidate C Muniraju says

ಎಸ್.ಎನ್.ಸುಬ್ಬಾರೆಡ್ಡಿ, ಸಿ.ಮುನಿರಾಜುImage Credit source: tv9 kannada

ಬೆಂಗಳೂರು, ಫೆಬ್ರವರಿ 16: ಬಾಗೇಪಲ್ಲಿ ಶಾಸಕ ಸ್ಥಾನದಿಂದ ಎಸ್.ಎನ್. ಸುಬ್ಬಾರೆಡ್ಡಿ (Subba Reddy) ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪಿನಿಂದ ನನಗೆ ಖುಷಿಯಿದೆ, ನ್ಯಾಯ ಸಿಕ್ಕಿದೆ. ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಸಾವಿರಾರು ಕೋಟಿ ರೂ ಹಗರಣವಿದೆ. ಕೋರ್ಟ್​ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರಿಂದ ತೀರ್ಪು ಬಂದಿದೆ. ಈ ತೀರ್ಪಿನಿಂದ ನ್ಯಾಯಾಲಯದ ಮೇಲೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ ಎಂದು ದೂರುದಾರ, ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಹೇಳಿದ್ದಾರೆ.

ಎಸ್.ಎನ್. ಸುಬ್ಬಾರೆಡ್ಡಿ ವಿರುದ್ಧ ಸಿ. ಮುನಿರಾಜು ವಾಗ್ದಾಳಿ

ನಗರದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು, ತಪ್ಪು ಮಾಹಿತಿ ಕೊಟ್ಟು ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ವಂಚನೆ ಮಾಡಿದ್ದನ್ನು ಅರ್ಜಿ ಸಲ್ಲಿಸಿದ್ದೆವು. ಜನರಿಗೆ ಮೋಸ ಮತ್ತು ಸರ್ಕಾರಕ್ಕೆ ವಂಚನೆ ಮಾಡಿರುವುದರಿಂದ ಅವರು ಇಂದು ವಜಾ ಆಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ MLA​ಗೆ ಬಿಗ್ ಶಾಕ್: ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

2023ರ ಅಫಿಡವಿಟ್​ನಲ್ಲಿ ಹಿಂದಿನ ಅಫಿಡವಿಟ್​ ಅನ್ನೇ ಹಾಗೆ ತಂದು ಹಾಕಿದ್ದರು. 9 ಜಿಎಸ್​​ಟಿ ಇದ್ದರೂ ಒಂದೇ ಜಿಎಸ್​ಟಿ ತೋರಿಸಿದ್ದಾರೆ. ಆ ಮೂಲಕ ಜಿಎಸ್​​ಟಿ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ವಾಸದ ಮನೆ, ಕಮರ್ಷಿಯಲ್ ಕಟ್ಟಡ, ಬಾರ್​ಗಳ ತೆರಿಗೆಯನ್ನು ನಾಲ್ಕೈದು ವರ್ಷಗಳಿಂದ ಬಿಬಿಎಂಪಿಗೆ ಕಟ್ಟಿರಲಿಲ್ಲ. ಹಿಂದೊಮ್ಮೆ 100 ಕೋಟಿ ರೂ ಜಿಎಸ್​​ಟಿ ಇದ್ದರೂ ಅದನ್ನು 25 ಕೋಟಿಗೆ ಆದೇಶ ಮಾಡಿಸಿಕೊಂಡು ಬೋಗಸ್ ಮಾಡಿಸಿಕೊಂಡಿದ್ದರಂತೆ. ಅವರ ಆಸ್ತಿಗಳನ್ನು ಮುಚ್ಚಿಟ್ಟಿದ್ದರು ಎಂದಿದ್ದಾರೆ.

ನಾನು ಅರ್ಜಿ ಹಾಕಿದ ಮೇಲೆ ಸರ್ಕಾರಕ್ಕೆ ಜಿಎಸ್​​ಟಿ ತೆರಿಗೆ ಕಟ್ಟಿದ್ದಾರೆ

ಪುತ್ರಿಯ ಹೆಸರಿನಲ್ಲಿರುವ ಜಮೀನು ವಿವರ ತೋರಿಸಿರಲಿಲ್ಲ. ಪತ್ನಿಯ ಹೆಸರಿನಲ್ಲಿ ಜಮೀನು ಮತ್ತು ಕಂಪನಿ ಇದ್ದರೂ ತೋರಿಸಿರಲಿಲ್ಲ. ಕುಣಿಗಲ್ ಶಾಸಕ ಡಾ. ರಂಗನಾಥ್ ಅವರಿಗೆ 23 ಲಕ್ಷ ರೂ. ದುಡ್ಡು ಕೊಟ್ಟಿದ್ದು ತೋರಿಸಿರಲಿಲ್ಲ. ವೈ.ಎ. ನಾರಾಯಣಸ್ವಾಮಿ ಅವರಿಗೂ 28 ಲಕ್ಷ ರೂ ದುಡ್ಡು ಕೊಟ್ಟಿದ್ದು ತೋರಿಸಿಕೊಂಡಿಲ್ಲ. ನಾನು ಅರ್ಜಿ ಹಾಕಿದ ಮೇಲೆ ಸರ್ಕಾರಕ್ಕೆ ಜಿಎಸ್​​ಟಿ ತೆರಿಗೆ ಕಟ್ಟಿದ್ದಾರೆ. ಸಣ್ಣಪುಟ್ಟ ತಪ್ಪಾಗಿದೆ ಎಂದು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ ಎಂದರು.

ಬೇನಾಮಿ ಆಸ್ತಿಗಳನ್ನು ತೆಗೆದುಕೊಂಡು ಎಂ.ಬಿ. ಪಾಟೀಲ್ ಹತ್ತಿರ ಕುಳಿತುಕೊಂಡು ಕಡಿಮೆ ಹಣಕ್ಕೆ ಫಿಕ್ಸ್ ಮಾಡಿಕೊಂಡಿದ್ದಾರೆ. ಸಾವಿರಾರು ರೂ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ನನ್ನನ್ನು ವಿಜೇತ ಎಂದು ಘೋಷಣೆ ಮಾಡಲು ನಾವು ಕೇಳಿದ್ದೆವು. ಕಾನೂನಿನಲ್ಲಿ ಅವಕಾಶ ಇದ್ದರೂ ನ್ಯಾಯಾಧೀಶರು ಅದನ್ನು ಮಾನ್ಯ ಮಾಡಿಲ್ಲ. ನಮ್ಮ ವಕೀಲರು ಮತ್ತು ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ಹೋರಾಟ ನಿರ್ಧರಿಸಲಾಗುವುದು. ಉಪಚುನಾವಣೆ ಎದುರಾದರೆ ನಾನು ರೆಡಿ ಇದ್ದೇನೆ, ಆದರೆ ಅದು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿ. ಮುನಿರಾಜು ಹೇಳಿದ್ದಾರೆ.

ಕಾಂಗ್ರೆಸ್​ ವಿರುದ್ಧ ಆರ್​​.ಅಶೋಕ್​ ಕಿಡಿ

ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ವಿಚಾರವಾಗಿ ಎಕ್ಸ್​ ಖಾತೆ ಮೂಲಕ ಕಾಂಗ್ರೆಸ್​ ವಿರುದ್ಧ ಆರ್​.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೋಟ್ ಚೋರಿ ಕಹಾ ಹೈ? ಕಾಂಗ್ರೆಸ್ ಪಾರ್ಟಿ ಮೇ ಹೈ! ರಾಹುಲ್ ಗಾಂಧಿ ಅವರು ಈಗ ಬಾಗೇಪಲ್ಲಿಗೆ ಬಂದು ವೋಟ್ ಚೋರಿ, ಎಲೆಕ್ಷನ್ ಚೋರಿ ವಿರುದ್ಧ ಪ್ರತಿಭಟನೆ ಮಾಡ್ತಾರಾ? ನಮ್ಮ ದೇಶದಲ್ಲಿ ಮತಗಳ್ಳತನ, ಚುನಾವಣಾ ಅಕ್ರಮಕ್ಕೆ ಯಾರಾದರೂ ಪಿತಾಮಹ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ಪೂರ್ವಜರು ಎಂದು ವಾಗ್ದಾಳಿ ಮಾಡಿದ್ದಾರೆ.

ಹಿರಿಯ ವಕೀಲ ನಳೀನಿ ಮಾಯಗೌಡ ಹೇಳಿದ್ದಿಷ್ಟು 

ಇನ್ನು ಟಿವಿ9ಗೆ ಹಿರಿಯ ವಕೀಲ ನಳೀನಿ ಮಾಯಗೌಡ ಹೇಳಿಕೆ ನೀಡಿದ್ದು, ಸುಬ್ಬಾರೆಡ್ಡಿ ಅವರು ಪ್ರಾಪರ್ಟಿ ಡಿಸ್ಕ್ಲೋಸ್ ಮಾಡಿರಲಿಲ್ಲ. ಜಿಎಸ್​​ಟಿ ಫೈಲ್ ಮಾಡಿರಲಿಲ್ಲ. ಇದೇ ಕಾರಣಕ್ಕಾಗಿ ಸುಬ್ಬಾರೆಡ್ಡಿ ಅವರನ್ನ ಹೈಕೋರ್ಟ್ ಅಸಿಂಧು ಮಾಡಿದೆ. ಇದರ ಜೊತೆ ನನ್ನನ್ನ ಶಾಸಕನಾಗಿ ಘೋಷಣೆ ಮಾಡಿ ಎಂದು ಮುನಿರಾಜು ಅವರು ಕೇಳಿದರು. ಈಗ ಎರಡೂವರೆ ವರ್ಷ ವಾದ ಮಾಡಿ ಕೋರ್ಟ್ ಅಸಿಂಧು ಮಾಡಿದೆ. ಶಾಸಕರನ್ನ ಅನರ್ಹ ಮಾಡಿದೆ, ಈಗ ಅವರು ಶಾಸಕರು ಅಲ್ಲ. ಒಂದು ವೇಳೆ ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್​ಗೆ ಹೋದರೆ ಹೈಕೋರ್ಟ್ ಆದೇಶ ಸ್ಟೇ ಆಗಬಹುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Bengaluru ED Raid: ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳು ಸೇರಿ ಬೆಂಗಳೂರಿನ 5 ಕಡೆ ಇಡಿ ದಾಳಿ

ಎರಡು ಕೋಟಿ ರೂ.ಯಷ್ಟು ತೆರಿಗೆ ಕಟ್ಟಿಲ್ಲ, ಶಾಸಕರು ಆಗಿರುವವರೇ ಟ್ಯಾಕ್ಸ್ ಕಟ್ಟಿಲ್ಲ ಎಂದು ವಾದ ಮಾಡಿದಿದ್ದೇವೆ. ಹೀಗಾಗಿ ಇವರನ್ನ ಮುಂದುವರಿಯುವುದಕ್ಕೆ ಬಿಡಬಾರದು ಎಂದು ವಾದಿಸಿದ್ದೇವೆ. ಸುಪ್ರೀಂ ಕೋರ್ಟ್​ನವರು ಕೂಡ ನಮ್ಮ ವಾದಕ್ಕೆ ಅವರು ತೀರ್ಪು ಕೊಡಬಹುದು. ಇಲ್ಲಂದರೆ ಹೊಸ ಚುನಾವಣೆಗೆ ಹೋಗಬಹುದು. ಮುನಿರಾಜು ಗೆಲುವು ಅಂತ ಕೋರ್ಟ್ ಹೇಳಿಲ್ಲ, ಇದಕ್ಕೆ ಕಾರಣವೂ ಕೊಟ್ಟಿಲ್ಲ. ಎರಡನೇ ಅತೀ ಹೆಚ್ಚು ಮತ ತೆಗೆದುಕೊಂಡಿದ್ಧು ಮುನಿರಾಜು ಅವರು. ಅವರು ತೀರ್ಮಾನ ಮಾಡಿದರೆ ಸುಪ್ರೀಂ ಕೋರ್ಟ್​ಗೆ ಹೋಗಬಹುದು. ಗೆಜೆಟ್ ನೋಟಿಫಿಕೇಶನ್ ಆದರೆ ಅನರ್ಹ ಎಂದು ಆದೇಶ ಆಗುತ್ತದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನನ್ನಿಂದ ತಪ್ಪಾಗಿದೆ: ತ್ರಿಷಾ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್ – Kannada News | Nainar Nagendran apologises for remark on Trisha and Thalapathy Vijay

ಖ್ಯಾತ ನಟಿ ತ್ರಿಷಾ (Trisha Krishnan) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಈಗ ಕ್ಷಮೆ ಕೇಳಿದ್ದಾರೆ. ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ (Thalapathy Vijay) ಬಗ್ಗೆ ಟೀಕೆ ಮಾಡುವಾಗ ನಾಗೇಂದ್ರನ್ ಅವರು ನಾಲಿಗೆ ಹರಿಬಿಟ್ಟಿದ್ದರು. ‘ವಿಜಯ್ ಅವರಿಗೆ ರಾಜಕೀಯದ ಅನುಭವ ಕಡಿಮೆ. ರಾಜಕೀಯದ ಅನುಭವ ಆಗಬೇಕಾದ್ರೆ ತ್ರಿಷಾ ಮನೆಯಿಂದ ವಿಜಯ್ ಹೊರಬರಲಿ’ ಎಂದು ನೈನಾರ್ ನಾಗೇಂದ್ರನ್ (Nainar Nagendran) ಹೇಳಿದ್ದರು. ಅವರ ಆ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಒಂದು ದಿನದ ಬಳಿಕ ಅವರು ಕ್ಷಮೆ ಕೇಳಿದ್ದಾರೆ.

ನೈನಾರ್ ನಾಗೇಂದ್ರನ್ ಅವರ ಹೇಳಿಕೆಗೆ ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಾಗೇಂದ್ರನ್ ಹೇಳಿಕೆಯನ್ನು ನಟಿ ತ್ರಿಷಾ ಕೃಷ್ಣನ್ ಅವರು ಕಟು ಶಬ್ದಗಳಲ್ಲಿ ಖಂಡಿಸಿದ್ದರು. ‘ಉನ್ನತ ಸ್ಥಾನದಲ್ಲಿರುವವರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ’ ಎಂದು ತ್ರಿಷಾ ಕೃಷ್ಣನ್ ಹೇಳಿದ್ದರು. ನೈನಾರ್ ನಾಗೇಂದ್ರನ್ ವಿರುದ್ಧ ಡಿಎಂಕೆ, ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿತ್ತು.

ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಎಂದು ಡಿಎಂಕೆ ನಾಯಕರು ಟೀಕಿಸಿದ್ದರು. ರಾಜಕೀಯ ಸಂಘರ್ಷದ ನಡುವೆ ತ್ರಿಷಾ ಹೆಸರು ಎಳೆದುತಂದಿದ್ದಕ್ಕೆ ಖಂಡನೆ ವ್ಯಕ್ತವಾಗಿತ್ತು. ಬಳಿಕ ಕೆ. ಅಣ್ಣಾಮಲೈ, ವಾನತಿ ಶ್ರೀನಿವಾಸನ್ ಅವರ ಸೂಚನೆ ಮೇರೆಗೆ ನೈನಾರ್ ನಾಗೇಂದ್ರನ್ ಕ್ಷಮೆ ಕೇಳಿದ್ದಾರೆ. ‘ನನ್ನ ಹೇಳಿಕೆ ತಪ್ಪು ಅರ್ಥದಿಂದ ಕೂಡಿದೆ’ ಎಂದು ನೈನಾರ್ ನಾಗೇಂದ್ರನ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ

‘ತಪ್ಪಾಗಿ ನಾನು ಹೇಳಿಕೆ ನೀಡಿದ್ದೆ. ಕೆ. ಅಣ್ಣಾಮಲೈ ಮತ್ತು ವಾನತಿ ಶ್ರೀನಿವಾಸನ್ ಅವರು ಈ ವಿಷಯದ ಬಗ್ಗೆ ನನ್ನ ಬಳಿ ಮಾತನಾಡಿದರು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ’ ಎಂದು ನೈನಾರ್ ನಾಗೇಂದ್ರನ್ ಅವರು ಕ್ಷಮೆ ಯಾಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೇಮಿಗಳ ದಿನದಂದೇ ಹರಿದ ನೆತ್ತರು: ಲವ್​ ಪ್ರಪೋಸಲ್​​ ಒಪ್ಪದಿದ್ದಕ್ಕೆ ಯುವತಿಗೆ ಇರಿದ ಪಾಗಲ್​​ – Kannada News | Tirthahalli Valentine’s Day Attack: Girl Stabbed for Rejecting Love Proposal

ಆಸ್ಪತ್ರೆಗೆ ದಾಖಲಾಗಿರುವ ಪಾಗಲ್​​ ಪ್ರೇಮಿImage Credit source: Tv9 Kannada

ಶಿವಮೊಗ್ಗ, ಫೆಬ್ರವರಿ 16: ಲವ್​ ಪ್ರಪೋಸಲ್​​ ಒಪ್ಪದಿದ್ದಕ್ಕೆ ಪಾಗಲ್​​ ಪ್ರೇಮಿಯೊಬ್ಬ ಯುವತಿಗೆ ಬಿಯರ್​ ಬಾಟಲ್​​ ಚೂರಿನಿಂದ ಇರಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಲ್ಮನೆ ಗ್ರಾಮದಲ್ಲಿ ನಡೆದಿದೆ. ಪ್ರೇಮಿಗಳ ದಿನವಾದ ಫೆ.14ರಂದೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಯುವಕ ಸ್ವರೂಪ್​​ ವಿರುದ್ಧ ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಆರೋಪಿ ಯುವಕ ಪ್ರೇಮಿಗಳ ದಿನಾಚರಣೆಯಂದು ಯುವತಿ ಬಳಿ ತನ್ನ ಪ್ರೇಮ ನಿವೇದನೆ ಮಾಡಿದ್ದ. ಆದರೆ ಯುವತಿ ಆತನ ಪ್ರಪೋಸಲ್​​ ಒಬ್ಬಪದ ಕಾರಣ ಆಕೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಯುವತಿಯ ಕೈ ಮತ್ತು ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಆಕೆಗೆ ಪಟ್ಟಣದ ಜೆ.ಸಿ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಣಿಪಾಲಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ: ಸೆಪ್ಟಿಕ್ ಟ್ಯಾಂಕ್​​ನಲ್ಲಿದ್ದಿದ್ದು ಸಿಯಾಳ ಶವ, ಕೊಲೆ ಮಾಡಿದ್ದು ಆಕೆಯ ಪ್ರೇಮಿ, ಅಂತೂ ಪ್ರಕರಣ ಇತ್ಯರ್ಥ

ಯುವತಿ ಕಡೆಯವರಿಂದ ಯುವಕನ ಮೇಲೂ ಹಲ್ಲೆ

ಇನ್ನು ತನ್ನ ಪ್ರೀತಿ ಒಪ್ಪಿಕೊಳ್ಳದ ಯುವತಿಗೆ ಬಿಯರ್​​ ಬಾಟಲಿ ಚೂರಿನಿಂದ ಸ್ವರೂಪ್​​ ಇರಿದ ವಿಚಾರ ಗೊತ್ತಾಗುತ್ತಿದ್ದಂತೆ ಇತ್ತ ಯುವಕನ ಮೇಲೂ ಹಲ್ಲೆ ನಡೆದಿದೆ. ಗಾಯಾಳು ಯುವತಿಯ ಕಡೆಯವರು ಸ್ವರೂಪ್​​ ಮೇಲೆ ಅಟ್ಯಾಕ್​​ ಮಾಡಿದ್ದು, ಘಟನೆಯಲ್ಲಿ ಆತನಿಗೂ ತಲೆ ಭಾಗ ಸೇರಿ ಕೆಲವೆಡೆ ಗಾಯಗಳಾಗಿವೆ. ಗಾಯಾಳುವನ್ನು ನಗರದ ಜೆ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ವಿಜರ್ಲೆಂಡ್​​ನಲ್ಲಿ ಭಾರೀ ಹಿಮಪಾತ; 80 ಪ್ರಯಾಣಿಕರಿದ್ದ ರೈಲು ಹಳಿ ತಪ್ಪಿ ಹಲವರಿಗೆ ಗಾಯ – Kannada News | Several injured after avalanche derails train in Swiss Alps Carrying 80 Passengers

ನವದೆಹಲಿ, ಫೆಬ್ರವರಿ 16: ಸ್ವಿಸ್ ಆಲ್ಪ್ಸ್‌ನಲ್ಲಿ ಹಿಮಪಾತ (Avalanche) ಅಪ್ಪಳಿಸಿದ ನಂತರ ದಕ್ಷಿಣ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇಂದು ಮುಂಜಾನೆ ರೈಲು ಹಳಿತಪ್ಪಿತು. ಈ ರೈಲಿನಲ್ಲಿ 80 ಜನರು ಪ್ರಯಾಣಿಸುತ್ತಿದ್ದರು. ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. “ಹಿಮಪಾತದಿಂದಾಗಿ ಗೋಪೆನ್‌ಸ್ಟೈನ್ ಮತ್ತು ಬ್ರಿಗ್ ನಡುವೆ ರೈಲು ಸಂಚಾರಕ್ಕೆ ಅಡಚಣೆಯಾಗಿದೆ” ಎಂದು ಫೆಡರಲ್ ರೈಲು ಆಪರೇಟರ್ CFF ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಸ್ಥಳೀಯ ಸುದ್ದಿಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸ್ಥಳೀಯ ಸಮಯ ಸಂಜೆ 4 ಗಂಟೆಯವರೆಗೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಸ್ಟಾಕ್‌ಗ್ರಾಬೆನ್ ಪ್ರದೇಶದಲ್ಲಿ ಹಲವಾರು ಬೋಗಿಗಳು ಹಳಿತಪ್ಪಿದಾಗ ಸ್ಥಳೀಯ ಸಮಯ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ರೈಲು ನಿರ್ವಾಹಕ ಬರ್ನ್-ಲೋಟ್ಸ್‌ಬರ್ಗ್-ಸಿಂಪ್ಲಾನ್ (BLS) ಪ್ರಕಾರ, ಈ ರೈಲು ಬೆಳಿಗ್ಗೆ 6.12ಕ್ಕೆ ಸ್ಪೀಜ್‌ನಿಂದ ಹೊರಟು ಬ್ರಿಗ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಹಿಮಪಾತ ಸಂಭವಿಸಿದೆ. ಹೀಗಾಗಿ, ರೈಲು ಹಳಿ ತಪ್ಪಿದೆ.

ಇದನ್ನೂ ಓದಿ: ಹಿಮಪಾತದ ನಡುವೆ ಸಿಲುಕಿದ್ದ ಕಾರನ್ನು ತಳ್ಳಿದ ಕೇಂದ್ರ ಸಚಿವ ಕಿರಣ್ ರಿಜಿಜು

ಮಧ್ಯಾಹ್ನದ ವೇಳೆಗೆ 30 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ. ತುರ್ತು ತಂಡಗಳು ಹಳಿಯಲ್ಲಿದ್ದವರನ್ನು ತಲುಪಲು ಕೆಲಸ ಮಾಡುತ್ತಿದ್ದರಿಂದ ಆಂಬ್ಯುಲೆನ್ಸ್ ಮತ್ತು ರಕ್ಷಣಾ ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಫ್ರುಟಿಜೆನ್-ಬ್ರಿಗ್ ಮಾರ್ಗದಲ್ಲಿ ಸೇವೆಗಳನ್ನು ಮಂಗಳವಾರದವರೆಗೆ ಸ್ಥಗಿತಗೊಳಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Ranji Trophy Semifinal: ಪಡಿಕ್ಕಲ್ ದ್ವಿಶತಕ, ಸ್ಮರಣ್ ಶತಕ; 700 ರನ್​ಗಳ ಗಡಿಯಂಚಿನಲ್ಲಿ ಕರ್ನಾಟಕ – Kannada News | Ranji Semi Final: Karnataka’s Mammoth 689/6; Padikkal Hits Maiden Double Century

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್‌ (Ranji Trophy Semi-final) ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ( Karnataka vs Uttarakhand) ತಂಡ ಬೃಹತ್ ಮೊತ್ತ ಕಲೆಹಾಕಿದೆ. ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 689 ರನ್ ಕಲೆಹಾಕಿದೆ. ತಂಡದ ಪರ ಎರಡನೇ ದಿನದಾಟದಲ್ಲಿ ನಾಯಕ ದೇವದತ್ ಪಡಿಕ್ಕಲ್ (Devdutt Padikkal) ದ್ವಿಶತಕ ಸಿಡಿಸಿದರೆ, ಸ್ಮರಣ್ ರವಿಚಂದ್ರನ್ (Smaran Ravichandran) ಅಜೇಯ ಶತಕ ಸಿಡಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಸ್ಮರಣ್​ಗೆ ಸಾಥ್ ನೀಡಿರುವ ವಿದ್ಯಾದರ್ ಪಾಟೀಲ್ ಕೂಡ ಅಜೇಯ 35 ರನ್ ಬಾರಿಸಿದ್ದಾರೆ.

ರಾಹುಲ್, ಪಡಿಕ್ಕಲ್ ಶತಕ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಮೊದಲ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 355 ರನ್ ಕಲೆಹಾಕಿತ್ತು. ಮೊದಲ ದಿನದಾಟದಲ್ಲಿ ಆರಂಭಿಕ ಕೆಎಲ್ ರಾಹುಲ್ 141 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕ ದೇವದತ್ ಪಡಿಕ್ಕಲ್ 148 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಎರಡನೇ ದಿನದಾಟದಲ್ಲಿ ಅನುಭವಿ ಕರುಣ್ ನಾಯರ್ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ದೇವದತ್ ಪಡಿಕ್ಕಲ್ ತಮ್ಮ ವೃತ್ತಿಜೀವನದ ಮೊದಲ ದ್ವಿಶತಕ ಬಾರಿಸಿದರು.

ದ್ವಿಶತಕ ಬಾರಿಸಿದ ಪಡಿಕ್ಕಲ್

ತಮ್ಮ ಇನ್ನಿಂಗ್ಸ್​ನಲ್ಲಿ 330 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 29 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 232 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದು ಪಡಿಕ್ಕಲ್ ಅವರ ಪ್ರಥಮ ದರ್ಜೆ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಮಾತ್ರವಲ್ಲದೆ, ಅವರ ಮೊದಲ ದ್ವಿಶತಕವೂ ಆಗಿದೆ. ಇದಕ್ಕೂ ಮೊದಲು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದೇವದತ್ ಪಡಿಕ್ಕಲ್ ಅವರ ಅತ್ಯಧಿಕ ಸ್ಕೋರ್ 193 ರನ್‌ಗಳಾಗಿತ್ತು.

Ranji Trophy Semifinal: ಸ್ಮರಣ್ ಶತಕ; ಬೃಹತ್​ ಮೊತ್ತದತ್ತ ಕರ್ನಾಟಕ

ಸ್ಮರಣ್ ಶತಕ

ಆ ಬಳಿಕ ತಂಡದ ಇನ್ನಿಂಗ್ಸ್ ಮುಂದುವರೆಸಿದ ಸ್ಮರಣ್ ರವಿಚಂದ್ರನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಬದುಕಿನ 5ನೇ ಶತಕ ಸಿಡಿಸಿ ತಂಡವನ್ನು 600 ರನ್​ಗಳ ಗಡಿ ದಾಟಿಸಿದರು. ಇದು ಈ ಆವೃತ್ತಿಯಲ್ಲಿ ಸ್ಮರಣ್ ಅವರ ಮೂರನೇ ಶತಕವಾಗಿದ್ದು, ಎರಡು ದ್ವಿಶತಕಗಳನ್ನು ಬಾರಿಸಿದ್ದಾರೆ. ಸ್ಮರಣ್​ಗೆ ಸಾಥ್ ನೀಡಿದ ಕೆ. ಕೃಷ್ಣ ಕೂಡ ತಂಡಕ್ಕೆ 60 ರನ್​ಗಳ ಕಾಣಿಕೆ ನೀಡಿದರು. ಕೃಷ್ಣ ಔಟಾದ ಬಳಿಕ ಬಂದ ವಿದ್ಯಾದರ್ ಪಾಟೀಲ್ ಕೂಡ ಸ್ಮರಣ್​ ಜೊತೆ ಉತ್ತಮ ಜೊತೆಯಾಟ ಕಟ್ಟಿದರು. ಈ ಜೋಡಿ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದು ತಂಡವನ್ನು 689 ರನ್​ಗಳಿಗೆ ಕೊಂಡೊಯ್ದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು, ವಿಡಿಯೋ ನೋಡಿ – Kannada News | Officers Busy With Their Mobiles And Sleeping in KDP Meeting at Koppal

ಕೊಪ್ಪಳ, (ಫೆಬ್ರವರಿ 16): ಜಿಲ್ಲೆಯ ಸಮಸ್ಯೆ, ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಕೆಡಿಪಿ ಸಭೆ ನಡೆಸಲಾಗುತ್ತೆ. ಆದ್ರೆ, ಕೊಪ್ಪಳ ಜಿಲ್ಲಾ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ನೋಡುತ್ತಾ, ನಿದ್ರೆ ಮಾಡುತ್ತಾ ಕಾಲಹರಣ ಮಾಡಿರುವುದು ಬೆಳಕಿಗೆ ಬಂದಿದೆ. ಇಂದು (ಫೆಬ್ರವರಿ 16) ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಆಡಳಿತ ಭವನದ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಕೆಲ ಅಧಿಕಾರಿಗಳು ನಿದ್ರೆಗೆ ಜಾರಿದ್ರೆ, ಇನ್ನು ಕೆಲವರು ಮೊಬೈಲ್​​ ನೋಡುತ್ತಾ ಟೈಮ್ ಪಾಸ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಹೈಟೆಕ್​ ಮದ್ಯ ಮಳಿಗೆ ಮುಂದೆ ತಾಸುಗಟ್ಟಲೆ ಕಾದು ನಿಂತ ಪ್ರೇಮಿಗಳು: 2000 ರೂ. ಕವರ್ ಚಾರ್ಜ್ ಹಾಕಿದ ಬ್ರೂವರಿ – Kannada News | Viral Video: Bangalore Valentine’s Day Disaster at Popular Brewery; Customers Outraged!

ಬೆಂಗಳೂರು, ಫೆ.16: ಬೆಂಗಳೂರಿನ ಜೋಡಿ ಹಕ್ಕಿಗಳಿಗೆ ಫೆ.14 ತುಂಬಾ ನಿರಾಸೆದಾಯಕವಾಗಿತ್ತು. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ವ್ಯಾಲೆಂಟೈನ್ಸ್ ಡೇ ಸಂಭ್ರಮಿಸಲು ಯೋಜಿಸಿದ್ದ ನೂರಾರು ಜೋಡಿಗಳಿಗೆ ಬೆಂಗಳೂರಿನ ಜನಪ್ರಿಯ ಬ್ರೂವರಿ (Bangalore brewery) ನಿರಾಶೆ ಉಂಟು ಮಾಡಿದ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಹೇಳಲಾಗಿದೆ. ಟೇಬಲ್‌ಗಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ಬುಕ್ ಮಾಡಿರುವ ಕಾರಣ, ಜೋಡಿಗಳು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸಂಜೆಯ ಚಳಿಯಲ್ಲಿ ಹೊರಗೆ ಉದ್ದವಾದ ಸಾಲಿನಲ್ಲಿ ನಿಂತು ಸುಸ್ತಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಅಕ್ಷಯ್ ಕುಮಾವತ್ ಎಂಬ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ ಮಾಡಿದಾಗ ಏನಾಗುತ್ತದೆ ನೋಡಿ” ಎಂಬ ಶೀರ್ಷಿಕೆ ನೀಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಭಾರಿ ವೈರಲ್ ಆಗಿದ್ದು, ಬೆಂಗಳೂರಿನ ಬ್ರೂವರಿಯ ಮ್ಯಾನೇಜ್‌ಮೆಂಟ್ ವೈಫಲ್ಯವನ್ನು ಬಯಲು ಮಾಡಿದೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ನೂರಾರು ಜೋಡಿಗಳು ಚಳಿಯಲ್ಲಿ ಮಳಿಗೆಯ ಹೊರಗೆ ಉದ್ದನೆಯ ಸಾಲಿನಲ್ಲಿ ಕಾಯುತ್ತಿರುವುದು ಕಂಡುಬಂದಿದೆ. ಟೇಬಲ್ ರಿಸರ್ವೇಶನ್ ಮಾಡಿದ್ದರೂ ಸಹ ಸೀಟು ಸಿಗದೆ ಕೋಪ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಗೆ ತಲಾ 2,000 ರೂ. ವರೆಗೆ ಭಾರಿ ಪ್ರಮಾಣದ ಕವರ್ ಚಾರ್ಜ್ ವಸೂಲಿ ಮಾಡಲಾಗಿತ್ತು. ಇಷ್ಟೊಂದು ಹಣ ನೀಡಿದರೂ ಸರಿಯಾದ ವ್ಯವಸ್ಥೆ ಇರಲಿಲ್ಲ ಎಂಬುದು ಗ್ರಾಹಕರ ದೂರು. ಸೀಟು ಸಿಗದೆ ಹಿಂತಿರುಗಿದ ಅನೇಕ ಗ್ರಾಹಕರು ತಾವು ಪಾವತಿಸಿದ ಹಣವನ್ನು ಮರಳಿ ಪಡೆಯಲು ಬ್ರೂವರಿ ಸಿಬ್ಬಂದಿಯೊಂದಿಗೆ ಹರಸಾಹಸ ಪಡಬೇಕಾಯಿತು.ಫೆಬ್ರವರಿ 15ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ನೆಟ್ಟಿಗರು ಬ್ರೂವರಿಯ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ .

ಇದನ್ನೂ ಓದಿ: “ಇಷ್ಟು ಕೆಟ್ಟದಾಗಿ ಸೋಲುವ ಬದಲು ಬಾಯ್ಕಾಟ್ ಮಾಡೋದೇ ಲೇಸಾಗಿತ್ತು”: ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

ಅತಿಯಾದ ದರ ಮತ್ತು ಕಳಪೆ ನಿರ್ವಹಣೆಯ ಬಗ್ಗೆಯೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.”ಕೇವಲ ಸಾಮಾಜಿಕ ಜಾಲತಾಣದ ಹೈಪ್‌ಗಾಗಿ ಇಷ್ಟು ಕಷ್ಟ ಪಡಬೇಕೇ?” ಎಂದು ಒಬ್ಬರು ಪ್ರಶ್ನಿಸಿದರೆ, “ಮನೆಯಲ್ಲೇ ಉಳಿದ ಜೋಡಿಗಳೇ ಇಂದು ಅದೃಷ್ಟವಂತರು” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ಒಳ್ಳೆಯ ದಿನದಲ್ಲಿ ಸಾಲಿನಲ್ಲಿ ನಿಂತು ಶಾಂತಿಯನ್ನು ಕಳೆದುಕೊಳ್ಳಬೇಕೇ?” ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version