IND vs PAK: ಪಾಕಿಸ್ತಾನವನ್ನು ಎರಡಂಕಿ ಮೊತ್ತಕ್ಕೆ ಆಲೌಟ್ ಮಾಡಿ 8 ವಿಕೆಟ್​ಗಳಿಂದ ಗೆದ್ದ ಭಾರತ – Kannada News | India Women Dominates Pakistan A by 8 Wickets; Vrinda Dinesh Shines in Asia Cup Win

2026 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಕೆಲವೇ ಗಂಟೆಗಳಲ್ಲಿ ಪಂದ್ಯ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಬ್ಯಾಂಕಾಕ್‌ನಲ್ಲಿ ನಡೆದ ಮಹಿಳಾ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ (Women’s Rising Stars Asia Cup) ಪಾಕಿಸ್ತಾನ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ ಭಾರತ ಮಹಿಳಾ ತಂಡ ದಾಖಲೆಯ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ ಕೇವಲ 93 ರನ್​ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ತಂಡದ ಪರ ಕೇವಲ ಮೂವರು ಆಟಗಾರ್ತಿಯರಿಗೆ ಮಾತ್ರ ಎರಡಂಕಿ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಭಾರತದ ಈ ಗೆಲುವಿನಲ್ಲಿ ಕನ್ನಡತಿ ವೃಂದಾ ದಿನೇಶ್ ಅವರ ಅರ್ಧಶತಕ ಪ್ರಮುಖ ಪಾತ್ರವಹಿಸಿತು.

ಎರಡಂಕಿ ಮೊತ್ತಕ್ಕೆ ಪಾಕ್ ಆಲೌಟ್

ಪಾಕಿಸ್ತಾನ ಎ ತಂಡದ ಬ್ಯಾಟಿಂಗ್ ನಿರ್ಧಾರ ಸರಿ ಎಂದು ಸಾಬೀತಾಗುವ ಮೊದಲೇ ಭಾರತೀಯ ಎ ತಂಡದ ಮಹಿಳಾ ಬೌಲರ್‌ಗಳು ಪಾಕ್ ತಂಡದ ಬ್ಯಾಟಿಂಗ್ ಬೆನ್ನೇಲುಬನ್ನು ಪುಡಿಪುಡಿ ಮಾಡಿದರು. ಪಾಕಿಸ್ತಾನ ಎ ತಂಡದ ಆರಂಭಿಕ ಜೋಡಿ ಕೇವಲ ಎರಡು ರನ್‌ಗಳಿಸಲಷ್ಟೇ ಶಕ್ತವಾಯಿತು. ಆ ಬಳಿಕ 15 ರನ್‌ಗಳೊಳಗೆ ಎರಡನೇ ವಿಕೆಟ್ ಪತನವಾಯಿತು. ನಂತರ ಮುಂದಿನ 17 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. 32 ರನ್ ಕಲೆಹಾಕುವಷ್ಟರಲ್ಲಿ ಪಾಕ್ ತಂಡದ 6 ವಿಕೆಟ್​ಗಳು ಉರುಳಿದವು. ಪರಿಣಾಮವಾಗಿ, ಪಾಕಿಸ್ತಾನ ಎ ತಂಡವು 18.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 93 ರನ್‌ಗಳಿಗೆ ಆಲೌಟ್ ಆಯಿತು.

ಪಾಕಿಸ್ತಾನ ಎ ತಂಡದ ಬ್ಯಾಟಿಂಗ್ ಕಳಪೆಯಾಗಿತ್ತು, ಆರಂಭಿಕ ಆಟಗಾರ್ತಿ ಶವಾಲ್ ಜುಲ್ಫಿಕರ್ 23 ರನ್ ಗಳಿಸಿದ್ದು ಸೇರಿದಂತೆ ತಂಡದ ಮೂವರು ಬ್ಯಾಟರ್​ಗಳಿಗೆ ಮಾತ್ರ ಎರಡಂಕಿಯ ತಲುಪಲು ಸಾಧ್ಯವಾಯಿತು. ಗುಲ್ ರುಖ್ 21 ರನ್ ಗಳಿಸಿದರೆ, ಅನೂಷಾ ನಾಸೀರ್ 17 ರನ್ ಗಳಿಸಿದರು. ಭಾರತ ಎ ಪರ ರಾಧಾ ಯಾದವ್, ಪ್ರೇಮಾ ರಾವತ್ ಮತ್ತು ಸಲ್ಮಾ ಠಾಕೂರ್ ತಲಾ ಎರಡು ವಿಕೆಟ್ ಪಡೆದರೆ, ಮಿನು ಮಣಿ ಮತ್ತು ಜಿಂಟಿಮಣಿ ಕಲಿತಾ ತಲಾ ಒಂದು ವಿಕೆಟ್ ಪಡೆದರು.

IND vs PAK: ಟಿ20 ವಿಶ್ವಕಪ್​ನಲ್ಲಿ ಭಾರತ- ಪಾಕ್ ಮುಖಾಮುಖಿ ದಾಖಲೆ ಹೇಗಿದೆ?

ಕನ್ನಡತಿಯ ಗೆಲುವಿನ ಅರ್ಧಶತಕ

ಬೌಲರ್‌ಗಳ ನಂತರ, ಭಾರತದ ಬ್ಯಾಟರ್​ಗಳು ಸಹ ಅದ್ಭುತ ಪ್ರದರ್ಶನ ನೀಡಿದರು. 94 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡವು ಸ್ಕೋರ್‌ಬೋರ್ಡ್‌ಗೆ ಒಂದು ರನ್ ಸೇರಿಸದೆಯೇ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ, ಆ ನಂತರ ಭಾರತ, ಪಾಕಿಸ್ತಾನಕ್ಕೆ ಯಾವುದೇ ಅವಕಾಶ ನೀಡಲಿಲ್ಲ. 79 ರನ್‌ಗಳಿಗೆ ತಂಡದ ಎರಡನೇ ವಿಕೆಟ್ ಪತನವಾಯಿತು. ಭಾರತವು 10.1 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳ ನಷ್ಟಕ್ಕೆ 94 ರನ್‌ಗಳ ಗುರಿ ತಲುಪಿತು. ಕನ್ನಡತಿ ವೃಂದಾ ದಿನೇಶ್ 29 ಎಸೆತಗಳಲ್ಲಿ ಅಜೇಯ 55 ರನ್ ಗಳಿಸುವ ಮೂಲಕ ಭಾರತ ಎ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:51 pm, Sun, 15 February 26

Source link

ಅಗ್ನಿಶಾಮಕ ಇಲಾಖೆ ಹುದ್ದೆಗಳ ಮರು ನಾಮಕರಣಕ್ಕೆ ಸರ್ಕಾರ ಅಸ್ತು: ಇನ್ಮುಂದೆ ಫೈರ್​ಮ್ಯಾನ್ ಅಲ್ಲ ಫೈರ್​​​ಫೈಟರ್ – Kannada News | Karnataka fire department: Fireman Renamed Fire Fighter; 10 percent Women Quota in Recruitment

ಅಗ್ನಿಶಾಮಕ (ಸಂಗ್ರಹ ಚಿತ್ರ)Image Credit source: google

ಬೆಂಗಳೂರು. ಫೆಬ್ರವರಿ 15: ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅಗ್ನಿಶಾಮಕ ಇಲಾಖೆಯ ಹುದ್ದೆ ಮರು ನಾಮಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಇನ್ಮುಂದೆ ‘ಫೈರ್‌ಮ್ಯಾನ್’ (Fireman) ಬದಲಿಗೆ ‘ಫೈರ್ ಫೈಟರ್’ (Fire Fighter) ಎಂದು ಬದಲಾವಣೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಸಭೆಯ ತೀರ್ಮಾನದಂತೆ ಕ್ರಮಕೈಗೊಳ್ಳಲಾಗಿದೆ. ಆ ಮೂಲಕ ಅಗ್ನಿಶಾಮಕ ಇಲಾಖೆಯ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಸಿದ್ಧತೆ ನಡೆದಿದೆ.

ಆದೇಶದಲ್ಲೇನಿದೆ? 

ಕೇಂದ್ರ ಗೃಹ ಸಚಿವಾಲಯವು SFAC ಸಭೆಯಲ್ಲಿ ತೀರ್ಮಾನಿಸಿದಂತೆ ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಫೈರ್‌ಮ್ಯಾನ್ ಹುದ್ದೆಯ ಹೆಸರನ್ನು ಫೈರ್ ಫೈಟರ್ ಎಂದು ಬದಲಾಯಿಸಲು ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯಾದ್ಯಂತ ಏರುತ್ತಿದೆ ಗರಿಷ್ಠ ತಾಪಮಾನ, ಕರಾವಳಿ ಜಿಲ್ಲೆಗಳಲ್ಲಿ ಸೆಕೆ ಸೆಕೆ

ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಇವರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು 1964 ರಿಂದ ಜಾರಿಗೆ ಬಂದಿದ್ದು, ಅಗ್ನಿ ಅವಘಡ, ಪ್ರಕೃತಿ ವಿಕೋಪ, ನೆರೆ ಹಾವಳಿ, ಜಾನುವಾರುಗಳ ರಕ್ಷಣೆ, ವಿವಿಧ ಕಟ್ಟಡಗಳಲ್ಲಿ ಅಗ್ನಿಸುರಕ್ಷತೆ ಹಾಗೂ ಇತ್ಯಾದಿಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತ ಬಂದಿದ್ದಾರೆ.

ಈ ಇಲಾಖೆಯಲ್ಲಿ ಪ್ರಸ್ತುತ ಒಟ್ಟು 7159 ವಿವಿಧ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ವಿವಿಧ ಹುದ್ದೆಗಳಲ್ಲಿ ಪ್ರಸ್ತುತ 5272 ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವುಗಳ ಪೈಕಿ ‘ಅಗ್ನಿಶಾಮಕ’ ಮತ್ತು ‘ಅಗ್ನಿಶಾಮಕ ಠಾಣಾಧಿಕಾರಿ’ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಶೇ.10 ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲು ಕ್ರಮಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಗುಡ್ ನ್ಯೂಸ್; ಬಳ್ಳಾರಿ- ಹೊಸಪೇಟೆ ನಡುವೆ ಹೊಸ ರೈಲು ಮಾರ್ಗಕ್ಕೆ ಒಪ್ಪಿಗೆ

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿಯಮಗಳು, 2013 ‘ಫೈರ್ ಮ್ಯಾನ್’ ಬದಲಿಗೆ ‘ಫೈರ್ ಫೈಟರ್’ ಹುದ್ದೆಗಳ ಪದನಾಮವಿರುತ್ತದೆ. ಈ ಹುದ್ದೆಗಳ ಪದನಾಮವನ್ನು ಅನುಕ್ರಮವಾಗಿ ‘ಲೀಡಿಂಗ್ ಫೈರ್‌ಮ್ಯಾನ್’ ಹುದ್ದೆಯು ‘ಲೀಡಿಂಗ್ ಫೈರ್ ಫೈಟರ್’ ಎಂದು ಮರು ನಾಮಕರಣಗೊಳಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Mahashivratri Fasting: ಈ 5 ವರ್ಗದ ಜನರು ಹಬ್ಬದ ದಿನದಂದು ಉಪವಾಸ ಮಾಡಲೇಬೇಡಿ – Kannada News | Safe Fasting: Mahashivratri Health Guide and Precautions, Who Should Avoid Upavasa?

ಉಪವಾಸ ಎಂದರೆ ಕೇವಲ ಊಟ ತ್ಯಜಿಸುವುದಲ್ಲ, ಅದು ಮನಸ್ಸನ್ನು ಶುದ್ಧಗೊಳಿಸಿ ದೇವರ ಧ್ಯಾನದಲ್ಲಿ ತೊಡಗುವ ಒಂದು ಆಧ್ಯಾತ್ಮಿಕ ವಿಧಾನ. ವಿಶೇಷವಾಗಿ ಮಹಾಶಿವರಾತ್ರಿ ದಿನ ಉಪವಾಸವನ್ನು ಅನೇಕರು ಭಕ್ತಿಯಿಂದ ಆಚರಿಸುತ್ತಾರೆ. ಆದರೆ ಭಕ್ತಿಯ ಜೊತೆಗೆ ಆರೋಗ್ಯದ ಬಗ್ಗೆ ಜಾಗರೂಕತೆಯೂ ಅತ್ಯಗತ್ಯ. ದೇಹ ಸಹಕರಿಸದಿದ್ದರೆ ಕಠಿಣ ಉಪವಾಸ ಮಾಡುವುದು ಸೂಕ್ತವಲ್ಲ.

ಮಧುಮೇಹಿಗಳು:

ಮಧುಮೇಹಿಗಳು ಊಟ ಮಾಡದೇ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಕುಸಿಯುವ (ಹೈಪೊಗ್ಲೈಸಿಮಿಯಾ) ಅಪಾಯವಿದೆ. ಇದು ತಲೆ ಸುತ್ತು, ಅಸ್ವಸ್ಥತೆ, ಗಂಭೀರ ಪರಿಸ್ಥಿತಿಯಲ್ಲಿ ಕೋಮಾಗೆ ಕಾರಣವಾಗಬಹುದು. ಆದ್ದರಿಂದ ಉಪವಾಸ ಮಾಡದೇ ಭಕ್ತಿಯಿಂದ ಶುದ್ಧ ಮನಸ್ಸಿನಿಂದ ಶಿವನನ್ನು ಪೂಜಿಸಿ.

ಗರ್ಭಿಣಿಯರು:

ತಾಯಿ ಮತ್ತು ಭ್ರೂಣಕ್ಕೆ ನಿರಂತರ ಪೋಷಕಾಂಶ ಅಗತ್ಯ. ಉಪವಾಸದಿಂದ ಉಂಟಾಗುವ ಪೌಷ್ಟಿಕಾಂಶ ಕೊರತೆ ಭ್ರೂಣದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಿಣಿಯರು ಉಪವಾಸ ಮಾಡದೇ ಭಕ್ತಿಯಿಂದ ಶುದ್ಧ ಮನಸ್ಸಿನಿಂದ ಶಿವನನ್ನು ಪೂಜಿಸಿ.

ಮಕ್ಕಳು ಮತ್ತು ವೃದ್ಧರು:

ಮಕ್ಕಳು ಮತ್ತು ವೃದ್ಧರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇಡೀ ದಿನ ಆಹಾರವಿಲ್ಲದೆ ಇದ್ದರೆ ನಿರ್ಜಲೀಕರಣ, ತೀವ್ರ ದೌರ್ಬಲ್ಯ ಉಂಟಾಗಬಹುದು. ಇದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಉಪವಾಸ ಮಾಡದೇ ಇರುವುದು ಒಳಿತು.

ಮೂತ್ರಪಿಂಡದ ಸಮಸ್ಯೆ ಇರುವವರು:

ಮೂತ್ರಪಿಂಡದ ಕಾಯಿಲೆ ಇರುವವರು ನಿಯಮಿತವಾಗಿ ನೀರು ಮತ್ತು ಔಷಧಿ ತೆಗೆದುಕೊಳ್ಳಬೇಕು. ಉಪವಾಸವು ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಹದಗೆಡಿಸಿ ಸಮಸ್ಯೆ ಹೆಚ್ಚಿಸಬಹುದು. ಆದ್ದರಿಂದ ಮೂತ್ರಪಿಂಡದ ಸಮಸ್ಯೆ ಇರುವವರು ಉಪವಾಸ ಮಾಡದೇ ಭಕ್ತಿಯಿಂದ ಶುದ್ಧ ಮನಸ್ಸಿನಿಂದ ಶಿವನನ್ನು ಪೂಜಿಸಿ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು:

ಖಾಲಿ ಹೊಟ್ಟೆ ಇರುವುದರಿಂದ ಆಮ್ಲ ಉತ್ಪಾದನೆ ಹೆಚ್ಚಾಗಿ ತೀವ್ರ ಹೊಟ್ಟೆನೋವು, ವಾಂತಿ ಅಥವಾ ಹುಣ್ಣಿನ ಸಮಸ್ಯೆ ಉಲ್ಬಣವಾಗಬಹುದು. ಇದಲ್ಲದೇ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು, ದೀರ್ಘಕಾಲೀನ ಔಷಧಿಗಳನ್ನು ಸೇವಿಸುತ್ತಿರುವವರು, ಹಾಲುಣಿಸುವ ತಾಯಂದಿರು ಉಪವಾಸ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಹಾಲುಣಿಸುವ ತಾಯಂದಿರಲ್ಲಿ ಉಪವಾಸದಿಂದ ಹಾಲಿನ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ.

ಉಪವಾಸ ಮಾಡಬೇಕೆಂದಿದ್ದರೆ ಏನು ಮಾಡಬೇಕು?

ದೇಹ ಸಂಪೂರ್ಣ ಸಹಕರಿಸದಿದ್ದರೂ ಭಕ್ತಿಯಿಂದ ಆಚರಿಸಲು ಬಯಸುವವರು ಕಠಿಣ ಉಪವಾಸದ ಬದಲು ಹಣ್ಣುಗಳು, ಹಾಲು, ಲಘು ಆಹಾರ ಸೇವಿಸುವ ‘ಫಲಾಹಾರ ಉಪವಾಸ’ವನ್ನು ಅನುಸರಿಸಬಹುದು. ‘ನಿರ್ಜಲ ಉಪವಾಸ’ (ನೀರು ಕೂಡ ಸೇವಿಸದಿರುವುದು) ಸಂಪೂರ್ಣ ಆರೋಗ್ಯವಂತರಿಗೆ ಮಾತ್ರ ಸೂಕ್ತ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

4000 ಕೋಟಿ ಬಜೆಟ್ ಹಾಕಿ ‘ರಾಮಾಯಣ’ ನಿರ್ಮಿಸುತ್ತಿರುವುದೇಕೆ? ಉತ್ತರ ಕೊಟ್ಟ ನಿರ್ಮಾಪಕ – Kannada News | Ramayana producer Namit Malhotra talks about why he produce the movie

ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ದ (Ramayana) ಹಾಲಿವುಡ್​ನಲ್ಲಿ ಈಗಾಗಲೇ ದೊಡ್ಡ ಹೆಸರು ಮಾಡಿರುವ ಸ್ಟುಡಿಯೋ ಹೊಂದಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಹಾಲಿವುಡ್​​ನಲ್ಲಿ ಭಾರತದ ಸಿನಿಮಾಕ್ಕೆ ಮೌಲ್ಯ ತಂದುಕೊಡಬೇಕೆಂಬ ಘನ ಉದ್ದೇಶದಿಂದಲೇ ಈ ಸಿನಿಮಾಕ್ಕೆ ಕೈ ಹಾಕಿರುವುದಾಗಿ ಈ ಹಿಂದೆ ಅವರು ಹೇಳಿಕೊಂಡಿದ್ದರು. ಇದೀಗ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿರುವ ನಮಿತ್ ಮಲ್ಹೋತ್ರಾ ಹಾಲಿವುಡ್‌ನಲ್ಲಿ ಭಾರತವನ್ನು, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಮಿತ್, ‘ನಾನು ಹಾಲಿವುಡ್‌ಗೆ ಹೋದಾಗ ಅಲ್ಲಿ ನಮ್ಮ ಇತಿಹಾಸ ಅಥವಾ ಸಂಸ್ಕೃತಿಗೆ ಯಾವುದೇ ಸರಿಯಾದ ಪ್ರಾತಿನಿಧ್ಯ ಇರದೇ ಇರುವುದು ಗಮನಿಸಿದೆ. ಇದು ನನ್ನನ್ನು ಕಾಡುತ್ತಲೇ ಇತ್ತು. ಹಣಕಾಸು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯರು ಜಾಗತಿಕವಾಗಿ ಗುರುತಿಸಿಕೊಂಡಿದ್ದರೂ, ಸಿನಿಮಾ ರಂಗದಲ್ಲಿ ನಮ್ಮ ಸಂಸ್ಕೃತಿಯನ್ನು ಅವರು ಸರಿಯಾಗಿ ಗೌರವಿಸುತ್ತಿಲ್ಲ ಅಥವಾ ಅರ್ಥಮಾಡಿಕೊಳ್ಳುತ್ತಿಲ್ಲ’ ಎಂದಿದ್ದಾರೆ.

‘ಬಹಳ ವರ್ಷಗಳಿಂದಲೂ ಹಾಲಿವುಡ್ ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ‘ಸ್ಲಂಡಾಗ್ ಮಿಲಿಯನೇರ್’ ನಂತಹ ಚಿತ್ರಗಳಲ್ಲಾಗಲಿ ಅಥವಾ ಇತರ ಚಿತ್ರಗಳಲ್ಲಾಗಲಿ ಭಾರತೀಯರನ್ನು ಕೇವಲ ಸಂತ್ರಸ್ತರನ್ನಾಗಿ ಅಥವಾ ಬಡವರನ್ನಾಗಿ ತೋರಿಸಲಾಗಿದೆ. ಇದು ನನಗೆ ಬಹಳ ನೋವುಂಟು ಮಾಡಿತ್ತು. ನಮ್ಮ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಇಡೀ ಜಗತ್ತು ಹೆಮ್ಮೆಪಡುವಂತೆ ತೋರಿಸಬೇಕು ಎಂಬ ಹಠದಿಂದಲೇ ‘ರಾಮಾಯಣ’ ಸಿನಿಮಾ ಹುಟ್ಟಿಕೊಂಡಿತು’ ಎಂದಿದ್ದಾರೆ. ಆ ಮೂಲಕ ಹಾಲಿವುಡ್​​ಗೆ ಪ್ರತ್ಯುತ್ತರ ನೀಡಲೆಂದೇ ತಾವು ‘ರಾಮಾಯಣ’ ಸಿನಿಮಾ ನಿರ್ಮಿಸುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಯಶ್, ರಣ್​​ಬೀರ್ ಕಪೂರ್ ‘ರಾಮಾಯಣ’ ಸಿನಿಮಾಕ್ಕೆ ಕೊರಿಯೋಗ್ರಾಫರ್ ಯಾರು ಗೊತ್ತೆ?

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಸಿನಿಮಾ ಮೇಲೆ ಸುಮಾರು 4000 ಕೋಟಿ ಬಂಡವಾಳವನ್ನು (ಎರಡೂ ಭಾಗಗಳಿಗೆ ಸೇರಿ) ನಮಿತ್ ಹೂಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಇದು ವಿಶ್ವದ ಅತಿ ದೊಡ್ಡ ಸ್ವತಂತ್ರ್ಯ ಬಜೆಟ್ ಸಿನಿಮಾ. ಅಂದರೆ ಬೇರೆ ಬೇರೆ ಸಂಸ್ಥೆಗಳ ಬದಲಿಗೆ ಕೇವಲ ಒಂದು ಸಂಸ್ಥೆಯೇ ಸಿನಿಮಾದ ಮೇಲೆ ದೊಡ್ಡ ಬಜೆಟ್ ಹೂಡಿಕೆ ಮಾಡಿದೆ. ಹಾಗಾಗಿ ಇದನ್ನು ಸ್ವತಂತ್ರ್ಯ ಫೈನ್ಯಾನ್ಸ್ಡ್ ಎಂದು ನಮಿತ್ ಕರೆದಿದ್ದಾರೆ.

ಈ ಸಿನಿಮಾನಲ್ಲಿ ಹಲವು ಖ್ಯಾತ ನಾಮ ನಟ-ನಟಿಯರು ಕೆಲಸ ಮಾಡಿದ್ದಾರೆ. ರಣ್​​ಬೀರ್ ಕಪೂರ್ ಈ ಸಿನಿಮಾನಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರ, ನಟ ಯಶ್ ರಾವಣನ ಪಾತ್ರದಲ್ಲಿ ನಟಿಸಿರುವ ಜೊತೆಗೆ ಸಹ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸನ್ನಿ ಡಿಯೋಲ್, ವಿಜಯ್ ಸೇತುಪತಿ, ಕಾಜಲ್ ಅಗರ್ವಾಲ್ ಇನ್ನೂ ಹಲವಾರು ಕಲಾವಿದರು ಸಿನಿಮಾನಲ್ಲಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರುಗಳಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೈಮರ್. ಸಿನಿಮಾ ನಿರ್ದೇಶನ ಮಾಡಿರುವುದು ನಿತೇಶ್ ತಿವಾರಿ. ಚಿತ್ರದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಎರಡನೇ ಭಾಗವು 2027ರ ದೀಪಾವಳಿಗೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟ್ಯಾಕ್ಸ್ ಪಾವತಿಯಿಂದ ಹಿಡಿದು ದಾಖಲೆಗಳವರೆಗೆ, ಪಿತ್ರಾರ್ಜಿತ ಆಸ್ತಿ ವರ್ಗಾವಣೆಗೆ ಅಗತ್ಯವಾದವುಗಳು – Kannada News | Inheritance property and the tax rules for heirs in India

ನಿಮ್ಮ ತಂದೆ ಮತ್ತು ತಾಯಿ ನಿಧನದ ನಂತರ, ಅವರ ವಾರಸುದಾರರಾದ ನೀವು ಅವರ ಆಸ್ತಿಪಾಸ್ತಿ ಪಡೆಯಲು ಅರ್ಹರಿರುತ್ತೀರಿ. ಈ ಪಿತ್ರಾರ್ಜಿತ ಆಸ್ತಿ (Inherited property) ಹಲವರಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಬಹುದು. ಪಿತ್ರಾರ್ಜಿತ ಆಸ್ತಿ ವರ್ಗಾವಣೆ ಮಾಡಿಕೊಳ್ಳುವ ಮುನ್ನ ಅನುಸರಿಸಬೇಕಾದ ಕೆಲ ವಿಧಾನಗಳು ಮತ್ತು ಬಾಧ್ಯತೆಗಳು ಇವೆ. ಮೃತರ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಿಂದ ಹಿಡಿದು ಆಸ್ತಿಯ ಲಾಭ ಗಳಿಕೆ ಟ್ಯಾಕ್ಸ್​ವರೆಗೂ ನೀವು ತೆಗೆದುಕೊಳ್ಳಬೇಕಾದ ಕ್ರಮಗಳ ವಿವರ ಇಲ್ಲಿದೆ.

ಮೃತರ ಐಟಿ ರಿಟರ್ನ್ ಸಲ್ಲಿಕೆ

ಮೃತರು ನಿಧನವಾದ ವರ್ಷಕ್ಕೆ ಅವರ ಐಟಿ ರಿಟರ್ನ್ ಸಲ್ಲಿಕೆ ಮಾಡಬೇಕು. ಆ ವರ್ಷದ ಅವರ ಯಾವುದೇ ಆದಾಯವಿದ್ದರೂ ಅದನ್ನು ತೋರಿಸಿ, ಅದಕ್ಕೆ ತೆರಿಗೆ ಕಟ್ಟುವುದಿದ್ದರೆ ಕಟ್ಟಬೇಕು.

ಪಿತ್ರಾರ್ಜಿತ ಆಸ್ತಿಗೆ ಟ್ಯಾಕ್ಸ್ ಇರುವುದಿಲ್ಲ, ಆದರೆ ಇದು ಇರುತ್ತೆ…

ಅಮೆರಿಕದಲ್ಲಿರುವಂತೆ ಪಿತ್ರಾರ್ಜಿತ ಆಸ್ತಿಗೆ ಎಸ್ಟೇಟ್ ಟ್ಯಾಕ್ಸ್ ಎಂಬುದು ಭಾರತದಲ್ಲಿ ಇರುವುದಿಲ್ಲ. ನೀವು ಟ್ಯಾಕ್ಸ್ ರಹಿತವಾಗಿ ಆಸ್ತಿ ವರ್ಗಾವಣೆ ಮಾಡಿಕೊಳ್ಳಬಹುದು. ಆದರೆ, ಮುಂದೆ ಆ ಆಸ್ತಿಯಿಂದ ಆದಾಯ ಗಳಿಸತೊಡಗಿದರೆ ಅದಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತದೆ.

ಇದನ್ನೂ ಓದಿ: ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

ನಿಮ್ಮ ಇನ್ಕಮ್ ಟ್ಯಾಕ್ಸ್​ಗೆ ರಿಟರ್ನ್ ಸಲ್ಲಿಸುವಾಗ ಪಿತ್ರಾರ್ಜಿತ ಆಸ್ತಿ ಹಾಗೂ ಅದರಿಂದ ಸೃಷ್ಟಿಯಾಗುವ ಆದಾಯದ ಮಾಹಿತಿ ಇರಬೇಕು. ಪಿತ್ರಾರ್ಜಿತ ಆಸ್ತಿಯಾಗಿ ಬಂದ ಮನೆಯ ಬಾಡಿಗೆ ಆದಾಯವನ್ನು ‘ಇನ್ಕಮ್ ಫ್ರಂ ಹೌಸ್ ಪ್ರಾಪರ್ಟಿ’ ಎಂದು ತೋರಿಸಬೇಕು. ಬಡ್ಡಿ, ಡಿವಿಡೆಂಡ್ ಆದಾಯ ಇದ್ದರೆ ‘ಇನ್ಕಮ್ ಫ್ರಂ ಅದರ ಸೋರ್ಸಸ್’ ಎಂದು ತೋರಿಸಬೇಕು.

ಕ್ಯಾಪಿಟಲ್ ಗೇನ್ ಟ್ಯಾಕ್ಸ್

ನೀವು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಮಾರಿದಾಗ ಅದಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕು. ಆ ಆಸ್ತಿಯನ್ನು ನಿಮ್ಮ ತಂದೆ ಅಥವಾ ತಾಯಿ ಖರೀದಿಸಿದಾಗ ಯಾವ ದರ ಇತ್ತು, ಮತ್ತು ಈಗ ದರಕ್ಕೆ ಮಾರಲಾಗಿದೆ, ಅದರಿಂದ ಬಂದಿರುವ ಲಾಭಕ್ಕೆ ಟ್ಯಾಕ್ಸ್ ಕಟ್ಟಬೇಕು. ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಎರಡಕ್ಕೂ ಹೆಚ್ಚು ವರ್ಷದ ಬಳಿಕ ಮಾರಿದಾಗ ಎಲ್​ಟಿಸಿಜಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಇಲ್ಲದಿದ್ದರೆ ಎಸ್​​ಟಿಸಿಜಿ ಟ್ಯಾಕ್ಸ್ ಅನ್ವಯ ಆಗುತ್ತದೆ.

ಸಾಲ ಬಾಧ್ಯತೆ ಉಳಿದಿದ್ದರೆ ಕಟ್ಟಿರಿ…

ಮೃತರು ಯಾವುದಾದರೂ ಸಾಲ ಬಾಧ್ಯತೆ ಉಳಿಸಿಕೊಂಡಿದ್ದರೆ ಅದನ್ನು ತೀರಿಸುವುದು ವಾರಸುದಾರರ ಕರ್ತವ್ಯ. ಅದರಲ್ಲೂ ಆಸ್ತಿಯನ್ನು ಅಡಮಾನ ಇಟ್ಟು ಪಡೆದ ಸಾಲವನ್ನು ತೀರಿಸಿದರೆ ಮಾತ್ರವೇ ಆಸ್ತಿ ವರ್ಗಾವಣೆ ಸಾಧ್ಯ.

ಇದನ್ನೂ ಓದಿ: ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಸರಿಯಾದ ದಾಖಲೆಗಳು ಜೊತೆಗಿರಲಿ…

ನೀವು ಪಿತ್ರಾರ್ಜಿತವಾಗಿ ಆಸ್ತಿ ಪಡೆಯಲು ಹಕ್ಕುದಾರರಾಗಿದ್ದರೆ ಸರಿಯಾದ ದಾಖಲೆಗಳನ್ನು ಹೊಂದಿರಬೇಕು. ಉಯಿಲು ಇದ್ದರೆ ಅದು ಇರಬೇಕು. ಸಕ್ಸಶನ್ ಸರ್ಟಿಫಿಕೇಟ್, ಡೆತ್ ಸರ್ಟಿಫಿಕೇಟ್​ಗಳು ಇರಬೇಕು. ಆಸ್ತಿ ಮೌಲ್ಯಮಾಪನ ಮಾಡುವ ವ್ಯಾಲ್ಯುಯೇಶನ್ ರಿಪೋರ್ಟ್ ಇರಬೇಕು. ಆಸ್ತಿ ವರ್ಗಾವಣೆ ವೇಳೆ ಇದನ್ನು ಕೇಳಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾರಿಕೇಡ್ ಮುರಿದು ಪೊಲೀಸ್ ವಾಹನಕ್ಕೆ ಗುದ್ದಿದ ಥಾರ್, ನಿತೀಶ್ ಕುಮಾರ್ ನಿವಾಸದ ಬಳಿ ಘಟನೆ – Kannada News | SUV Smashes Barricade, Collides With Police Vehicle Near CM Residence

ಪಾಟ್ನಾ, ಫೆಬ್ರವರಿ 15: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ನಿವಾಸದ ಬಳಿ ಥಾರ್ ಬ್ಯಾರಿಕೇಡ್ ಮುರಿದು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಪಾಟ್ನಾ ಪೊಲೀಸರ ಶಕ್ತಿ ಸುರಕ್ಷಾ ತಂಡಕ್ಕೆ ಸೇರಿದ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಅಪಘಾತದ ನಂತರ, ಎರಡೂ ವಾಹನಗಳ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿತ್ತು. ಗಸ್ತು ವಾಹನದೊಳಗಿದ್ದ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದು ಸಂಚಾರ ವಿಭಾಗದ ಡಿಎಸ್‌ಪಿ ಅಜಿತ್ ಕುಮಾರ್ ಹೇಳಿದ್ದಾರೆ.

ಡಿಕ್ಕಿಯಲ್ಲಿ ಎರಡೂ ವಾಹನಗಳು ಹಾನಿಗೊಳಗಾಗಿವೆ ಮತ್ತು ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಅವರು ದೃಢಪಡಿಸಿದರು. ಅಪಘಾತದ ಸಮಯದಲ್ಲಿ ಥಾರ್ ಚಾಲಕ ಅತಿ ವೇಗದಲ್ಲಿ ಚಲಿಸುತ್ತಿತ್ತು ಎಂದು ಅವರು ಹೇಳಿದರು.
ಚಾಲಕನ ಹೇಳಿಕೆಯ ಆಧಾರದ ಮೇಲೆ ಸಂಚಾರ ಪೊಲೀಸ್ ಠಾಣೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್ಪಿ ಅಜಿತ್ ಕುಮಾರ್ ತಿಳಿಸಿದ್ದಾರೆ. ಅತಿ ವೇಗದ ಚಾಲನೆಯ ವಿರುದ್ಧ ಇಲಾಖೆ ನಿರಂತರ ಕ್ರಮ ಕೈಗೊಳ್ಳುತ್ತಿದೆ.

ಮತ್ತಷ್ಟು ಓದಿ: Video: ಇದೇನ್ ಮಾಡಿದ್ರಿ? ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್

ಯಾರಾದರೂ ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಕಂಡುಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ವಿಚಾರಣೆಗಾಗಿ ನಾಲ್ವರನ್ನು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಹೆಚ್ಚಿನ ವಿವರಗಳು ಇನ್ನೇನು ತಿಳಿದುಬರಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ ನೋಡಿ. – Kannada News | Kantara actor Rishab Shetty visits Kollur Mookambika Temple with family

ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ಬಂದು ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬಳಿಕ ರಿಷಬ್ ಅವರ ಬೇಡಿಕೆ ಹೆಚ್ಚಾಗಿದೆ. ಹೊಸ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಅವರು ಫ್ಯಾಮಿಲಿಗೆ ಸಮಯ ನೀಡುತ್ತಿದ್ದಾರೆ. ರಿಷಬ್ ಅವರು ಪರಮ ದೈವಭಕ್ತ ಎಂಬುದು ಗೊತ್ತೇ ಇದೆ. ಈ ಮೊದಲು ಕೂಡ ಅವರು ಕೊಲ್ಲೂರು ಮೂಕಾಂಬಿಕೆ (Kollur Mookambika Temple) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿ ಅವರ ಭೇಟಿ ಹೇಗಿತ್ತು ಎಂಬುದನ್ನು ಈ ವಿಡಿಯೋ ವಿವರಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದ್ವೆಗೆಂದು ಹೋಗಿ ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP – Kannada News | Hassan SP Talks about Tumakuru Lady Priyanaka Found with Her Lover

ಹಾಸನ, (ಫೆಬ್ರವರಿ 15): ಮದುವೆಗೆಂದು ಹಾಸನಕ್ಕೆ ಹೋಗಿದ್ದ ತುಮಕೂರು ಮೂಲದ ಪ್ರಿಯಾಂಕಾ ನಾಪತ್ತೆ ಪ್ರಕರಣವು ರೋಚಕ ತಿರುವು ಪಡೆದಿದ್ದು, ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ, ಬೇಲೂರಿನ ಪೊಲೀಸರ ತನಿಖೆಯಿಂದ ಆಕೆ ತನ್ನ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಹಾಸನದ ಡಿವೈಎಸ್ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ನಾಪತ್ತೆಯಾದಾಗ ಆಕೆ ಕೊಲೆಯಾಗಿರಬಹುದು ಅಥವಾ ಅಪಹರಣಕ್ಕೊಳಗಾಗಿರಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ, ಕತೆ ಕಟ್ಟಿದ್ದ ಆಕೆ ಪತಿಯ ಸ್ನೇಹಿತನ ಜೊತೆಗೆ ಕಳೆದ ಎರಡುದಿನಗಳಿಂದ ಇದ್ದಿದ್ದು ತನಿಖೆ ವೇಳೆ ಬಯಲಾಗಿದೆ. ಇನ್ನು ಈ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾಸ್ಟೆಲ್ ರೂಂ ಬಾಗಿಲು ಲಾಕ್, ಕರೆಗಳಿಗೆ ಉತ್ತರವಿಲ್ಲ, ನೇಣು ಬಿಗಿದ ಸ್ಥಿತಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಪತ್ತೆ – Kannada News | MBBS Student Found Dead in Locked Hostel Room in West Bengal

ಕೋಲ್ಕತ್ತಾ, ಫೆಬ್ರವರಿ 13: ಹಾಸ್ಟೆಲ್(Hostel) ಕೋಣೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಯಾಗಿದ್ದ ಲಾವನ್ಯ ಪ್ರತಾಪ್ ಸಾವನ್ನಪ್ಪಿದ್ದಾರೆ. ಹಾಸ್ಟೆಲ್ ಕೋಣೆಯ ಬಾಗಿಲ್ ಲಾಕ್ ಆಗಿತ್ತು, ಸ್ನೇಹಿತರು ಕರೆ ಮಾಡಿದರೂ ಆಕೆ ಉತ್ತರಿಸದ ಕಾರಣ ಅನುಮಾನ ಬಂದು ಬಾಗಿಲು ಒಡೆದು ನೋಡಿದಾಗ ಆತ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.

ಮಾಹಿತಿ ಪಡೆದ ನಂತರ ದುರ್ಗಾಪುರ ಪೊಲೀಸ್ ಠಾಣೆಯ ಪೊಲೀಸರು ಕ್ಯಾಂಪಸ್‌ಗೆ ತಲುಪಿ ಹಾಸ್ಟೆಲ್ ಕೊಠಡಿಯಿಂದ ಶವವನ್ನು ವಶಪಡಿಸಿಕೊಂಡರು. ಆಸ್ಪತ್ರೆಯಲ್ಲಿ ಇರಿಸಿ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಭಾನುವಾರದ ಹೊತ್ತಿಗೆ ಕ್ಯಾಂಪಸ್​​ನಲ್ಲಿ ನೀರವ ಮೌನ ಆವರಿಸಿಕೊಂಡಿತ್ತು. ಪ್ರತಾಪ್ ತಂದೆ ಅನಿಲ್ ಕುಮಾರ್, ಕಾಲೇಜು ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು, ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮೃತರನ್ನು ಬಿಹಾರದ ಪಾಟ್ನಾ ನಿವಾಸಿ ಲಾವಣ್ಯ ಪ್ರತಾಪ್ ಎಂದು ಗುರುತಿಸಲಾಗಿದೆ. ಅವರು ವೈದ್ಯಕೀಯ ಅಧ್ಯಯನ ಮಾಡುವಾಗ ಕಾಲೇಜು ಹಾಸ್ಟೆಲ್‌ನಲ್ಲಿ ತಂಗಿದ್ದರು. ಕಳೆದ ಕೆಲವು ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣರಾದ ನಂತರ ವಿದ್ಯಾರ್ಥಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ಅವರ ಸ್ನೇಹಿತರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಅಂಶಗಳು ಒಳಗೊಂಡಿವೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಮತ್ತಷ್ಟು ಓದಿ: Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ

ಶನಿವಾರ ರಾತ್ರಿ ಸಹ ವಿದ್ಯಾರ್ಥಿಗಳು ಹಾಸ್ಟೆಲ್ ಶೌಚಾಲಯದಲ್ಲಿ ನೇತಾಡುತ್ತಿರುವ ಅವರ ಶವವನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತು. ದುರ್ಗಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತಲುಪಿ, ಶವವನ್ನು ಹೊರತೆಗೆದು, ಭಾನುವಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಕಳೆದ ವರ್ಷ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆ ಇದೇ ಕಾಲೇಜಿನಲ್ಲಿ ನಡೆದಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಈ ಪ್ರಕರಣವು ಆ ಸಮಯದಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND vs PAK: ಮಳೆ ಬಂದರೆ ಭಾರತಕ್ಕೆ ನೀಡಲಾಗುವ ಟಾರ್ಗೆಟ್ ಎಷ್ಟು? – Kannada News | IND vs PAK Estimated DLS Targets for Team India

ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕೊಲಂಬೊ ಭಾಗದಲ್ಲಿ ಭಾನುವಾರ ಮಧ್ಯಾಹ್ನ ಮತ್ತು ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ಪಂದ್ಯದ ವೇಳೆ ಸುಮಾರು 60% ರಿಂದ 80% ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ತಡವಾಗಿ ಆರಂಭವಾಗಬಹುದು ಅಥವಾ ಓವರ್‌ಗಳನ್ನು ಕಡಿತಗೊಳಿಸಿ (DLS ನಿಯಮದಡಿ) ಪಂದ್ಯವನ್ನು ನಡೆಸಬಹುದು.

ಒಂದು ವೇಳೆ ಪಾಕಿಸ್ತಾನ್ ಅಥವಾ ಭಾರತ ತಂಡವು 20 ಓವರ್​​ಗಳನ್ನು ಆಡಿ 200 ರನ್​​ಗಳಿಸಿದ ಬಳಿಕ ಮಳೆ ಬಂದರೆ, ಓವರ್‌ಗಳು ಕಡಿತಗೊಂಡು ಭಾರತ ಅಥವಾ ಪಾಕಿಸ್ತಾನಕ್ಕೆ ನೀಡಲಾಗುವ ಅಂದಾಜು DLS (Duckworth-Lewis-Stern) ಗುರಿಗಳು ಈ ಕೆಳಗಿನಂತಿರುತ್ತವೆ…

  • 15 ಓವರ್‌ಗಳಲ್ಲಿ- 166 ರಿಂದ 168 ರನ್​​​ಗಳ ಗುರಿ ನೀಡಬಹುದು.
  • 12 ಓವರ್‌ಗಳಲ್ಲಿ- 140 ರಿಂದ 142 ರನ್​​ಗಳ ಗುರಿ ನೀಡಬಹುದು.
  • 10 ಓವರ್‌ಗಳಲ್ಲಿ- 122 ರಿಂದ 124 ರನ್​​ಗಳ ಗುರಿ ನೀಡಬಹುದು.
  • 5 ಓವರ್‌ಗಳಲ್ಲಿ 71 ರಿಂದ 74 ರನ್​​ಗಳ ಗುರಿ ನೀಡಬಹುದು.

ಇನ್ನು ಈ ಪಂದ್ಯವು 10 ಓವರ್​​ಗಳಿಗೆ ಸೀಮಿತವಾಗಿ ಮೊದಲು ಬ್ಯಾಟ್ ಮಾಡಿದ ತಂಡವು 10 ಓವರ್​ಗಳಲ್ಲಿ 125 ರನ್​​ಗಳಿಸಿತು ಎಂದಿಟ್ಟುಕೊಳ್ಳಿ. ಇದಾದ ಬಳಿಕ ಮಳೆ ಬಂದು ಓವರ್ ಕಡಿತವಾದರೆ ಡಿಎಲ್​​ಎಸ್​ ನಿಯಮದ ಪ್ರಕಾರ ಈ ಕೆಳಗಿನಂತೆ ಗುರಿ ನೀಡಲಾಗುತ್ತದೆ…

  • 8 ಓವರ್​​ಗಳಲ್ಲಿ- 105 ರಿಂದ 110 ರನ್​​​ಗಳ ಗುರಿ ನೀಡಬಹುದು.
  • 5 ಓವರ್​​​ಗಳಲ್ಲಿ- 75 ರಿಂದ 110 ರನ್​​ಗಳ ಗುರಿ ನೀಡಬಹುದು.

DLS ಗುರಿ ಏಕೆ ಹೆಚ್ಚಾಗುತ್ತದೆ?

ಮೊದಲ ಇನಿಂಗ್ಸ್ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸುವ ತಂಡದ ಬಳಿ ಇನ್ನೂ 10 ವಿಕೆಟ್‌ಗಳು ಬಾಕಿ ಇರುವುದರಿಂದ, ಕಡಿಮೆ ಓವರ್‌ಗಳಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಆಡಲು ಅವಕಾಶವಿರುತ್ತದೆ. ಆದ್ದರಿಂದ, ಓವರ್‌ಗಳು ಕಡಿಮೆಯಾದಂತೆ ರನ್ ರೇಟ್ ಮತ್ತು ಗುರಿಯನ್ನು DLS ನಿಯಮದಡಿ ಹೆಚ್ಚಿಸಲಾಗುತ್ತದೆ.

ಇದನ್ನೂ ಓದಿ: ಮೂರೇ 3 ಎಸೆತಗಳಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಸೌತ್ ಆಫ್ರಿಕಾ

ಅದರಂತೆ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೆ, ಓವರ್​ಗಳ ಕಡಿತದೊಂದಿಗೆ ಮೇಲೆ ನೀಡಿದಂತೆ ಗುರಿಗಳನ್ನು ನಿಗದಿ ಮಾಡಲಿದ್ದಾರೆ. ಅಂದರೆ ಇಲ್ಲಿ ಮಳೆ ಬರುವ ಸಾಧ್ಯತೆ ಇರುವುದರಿಂದ ದ್ವಿತೀಯ ಇನಿಂಗ್ಸ್ ಆಡುವ ತಂಡಕ್ಕೆ ಅನುಕೂಲ ಹೆಚ್ಚು. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

5 ಓವರ್​ ಆಡಲೇಬೇಕು:

ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಮಳೆಗೆ ಆಹುತಿಯಾದರೆ ಡಕ್​ ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಲೇಬೇಕು.

ಉದಾಹರಣೆಗೆ, ಪಾಕಿಸ್ತಾನ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್​ಗಳಲ್ಲಿ 150 ರನ್​ ಕಲೆಹಾಕಿದೆ ಎಂದಿಟ್ಟುಕೊಳ್ಳಿ. ಈ ಗುರಿಯನ್ನು ಬೆನ್ನತ್ತುವಾಗ ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ, ಡಿಎಲ್​​ಎಸ್ ನಿಯಮದಡಿ ಫಲಿತಾಂಶ ನಿರ್ಧರಿಸಲು ಟೀಮ್ ಇಂಡಿಯಾ ಕನಿಷ್ಠ 5 ಓವರ್​ ಆಡಿರಬೇಕಾಗುತ್ತದೆ.

ಅಂದರೆ ದ್ವಿತೀಯ ಇನಿಂಗ್ಸ್ ಆಡುವ ತಂಡಕ್ಕೆ ಕನಿಷ್ಠ 5 ಓವರ್​ಗಳನ್ನು ಆಡುವ ಅವಕಾಶ ಇರದಿದ್ದರೆ ಮಾತ್ರ ಪಂದ್ಯವನ್ನು ರದ್ದುಪಡಿಸಲಾಗುತ್ತದೆ. ಇನ್ನು ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದೆ.

Source link

Exit mobile version