‘ಕೆಡಿ’ ರೀತಿ ಸಿನಿಮಾ ಮಾಡೋಕೆ ತುಂಬಾ ತಾಕತ್ತು ಬೇಕು: ಆರ್. ಚಂದ್ರು ಮೆಚ್ಚುಗೆ – Kannada News | R Chandru shares his review after watching KD Movie Jogi Prem Dhruva Sarja

‘ಕೆಡಿ’ ಸಿನಿಮಾದ (KD Movie) ಸೆಲೆಬ್ರಿಟಿ ಶೋ ನಡೆದಿದೆ. ಚಿತ್ರ ನೋಡಿದ ಅನೇಕರು ಭೇಷ್ ಎಂದಿದ್ದಾರೆ. ಆರ್. ಚಂದ್ರು, ಪ್ರಮೋದ್ ಶೆಟ್ಟಿ, ಉಪೇಂದ್ರ, ತರುಣ್ ಸುಧೀರ್, ಮಿಲನಾ ನಾಗರಾಜ್, ಮಾನ್ವಿತಾ ಹರೀಶ್, ಪಿ. ರವಿಶಂಕರ್, ಎಸ್. ಮಹೇಂದರ್ ಮುಂತಾದವರು ಸೆಲೆಬ್ರಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಆರ್. ಚಂದ್ರು ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಈ ರೀತಿಯ ಸಿನಿಮಾ ಮಾಡೋಕೆ ತುಂಬಾ ಗುಂಡಿಗೆ ಬೇಕು. ಅಷ್ಟು ದೊಡ್ಡ ದೃಶ್ಯಕಾವ್ಯವನ್ನು ಕಟ್ಟಿಕೊಡುವುದು ಸುಲಭ ಅಲ್ಲ. ಅದಕ್ಕೆ ಎಷ್ಟು ಶ್ರಮ ಇದೆ ಅಂತ ನನಗೆ ಗೊತ್ತಿದೆ. ಇದು ನಮ್ಮ ಕನ್ನಡದ ಹೆಮ್ಮೆ. ಎಲ್ಲರೂ ಬಂದು ಸಿನಿಮಾ ನೋಡಬೇಕು. ಈ ರೀತಿ ಸಿನಿಮಾ ಮಾಡೋಕೆ ತುಂಬಾ ತಾಕತ್ತು ಬೇಕು. ಪಾರ್ಟ್ 2 ನೋಡಲು ಕಾಯುತ್ತಿದ್ದೇನೆ’ ಎಂದು ಆರ್. ಚಂದ್ರು (R Chandru) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಗಣನೀಯ ಏರಿಕೆ – Kannada News | India forex reserves down by 4 billion USD, while gold share in forex reserves rises to 16pc

ನವದೆಹಲಿ, ಮೇ 3: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಮತ್ತೆ 700 ಬಿಲಿಯನ್ ಡಾಲರ್ ಮಟ್ಟಕ್ಕಿಂತ ತುಸು ಕೆಳಗೆ ಇಳಿದಿದೆ. ಆರ್​ಬಿಐ ಮೊನ್ನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಏಪ್ರಿಲ್ 24ರಂದು ಅಂತ್ಯಗೊಂಡ ವಾರದಲ್ಲಿ (ಏಪ್ರಿಲ್ 18-24) 4.82 ಬಿಲಿಯನ್ ಡಾಲರ್​ನಷ್ಟು ಕುಸಿದಿದೆ. ಇದರೊಂದಿಗೆ ಒಟ್ಟು ಫಾರೆಕ್ಸ್ ರಿಸರ್ವ್ಸ್ 698.49 ಬಿಲಿಯನ್ ಡಾಲರ್ ಆಗಿದೆ. ಫಾರೆಕ್ಸ್ ರಿಸರ್ವ್ಸ್​ನ ಎಲ್ಲಾ ಭಾಗಗಳೂ ಇಳಿದಿವೆ. ಫಾರೀನ್ ಕರೆನ್ಸಿ ಅಸೆಟ್​ಗಳು 2.84 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆದರೆ, ಚಿನ್ನದ ನಿಧಿ 1.90 ಬಿಲಿಯನ್ ಡಾಲರ್ ತಗ್ಗಿದೆ. ಎಸ್​ಡಿಆರ್ ಮತ್ತು ಐಎಂಎಫ್ ಪಾಲು ಕೂಡ ಕಡಿಮೆಗೊಂಡಿವೆ.

ಭಾರತದ ಫಾರೆಕ್ಸ್ ರಿಸರ್ವ್ಸ್ (ಏಪ್ರಿಲ್ 24ಕ್ಕೆ)

ಒಟ್ಟು ಫಾರೆಕ್ಸ್ ರಿಸರ್ವ್ಸ್: 698.49 ಬಿಲಿಯನ್ ಡಾಲರ್

  • ವಿದೇಶೀ ಕರೆನ್ಸಿ: 554.62 ಬಿಲಿಯನ್ ಡಾಲರ್
  • ಚಿನ್ನದ ನಿಧಿ: 120.24 ಬಿಲಿಯನ್ ಡಾಲರ್
  • ಎಸ್​ಡಿಆರ್: 18.77 ಬಿಲಿಯನ್ ಡಾಲರ್
  • ಐಎಂಎಫ್ ನಿಧಿ: 4.85 ಬಿಲಿಯನ್ ಡಾಲರ್

ಇದನ್ನೂ ಓದಿ: ಆರ್​ಬಿಐ ಉಪ ಗವರ್ನರ್ ಆಗಿ ರೋಹಿತ್ ಜೈನ್ ನೇಮಕ

ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಪಾಲು ಹೆಚ್ಚಳ

ಆರ್​ಬಿಐ ಬಿಡುಗಡೆ ಮಾಡಿದ ಮತ್ತೊಂದು ವರದಿ ಪ್ರಕಾರ ಫಾರೆಕ್ಸ್ ರಿಸರ್ವ್ಸ್​ನಲ್ಲಿ ಚಿನ್ನದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. 2026ರ ಮಾರ್ಚ್ 31ಕ್ಕೆ ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಪಾಲು ಶೇ. 16.7ಕ್ಕೆ ಏರಿದೆ. ಆರು ತಿಂಗಳ ಹಿಂದೆ (2025ರ ಸೆಪ್ಟೆಂಬರ್) ಇದು ಶೇ. 13.92ರಷ್ಟು ಇತ್ತು. ಆರ್​ಬಿಐ ಸತತವಾಗಿ ಚಿನ್ನದ ಖರೀದಿ ಮಾಡುತ್ತಿರುವುದು ಇದಕ್ಕೆ ಕಾರಣ. ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರ್​ಬಿಐ ಮಾತ್ರವಲ್ಲ ಹೆಚ್ಚಿನ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಮಾಡುತ್ತಿರುವುದು ಗಮನಾರ್ಹ ಸಂಗತಿ.

ಭಾರತದ ಗೋಲ್ಡ್ ರಿಸರ್ವ್​ಗಳಲ್ಲಿ ಹೆಚ್ಚಿನವು ದೇಶದೊಳಗೆಯೇ ಇದೆ. ಆರ್​ಬಿಐ ಬಳಿ 880.52 ಮೆಟ್ರಿಕ್ ಟನ್ ಚಿನ್ನ ಇದೆ. ಇದರಲ್ಲಿ 680 ಮೆಟ್ರಿಕ್ ಟನ್​ಗಳಷ್ಟು ಚಿನ್ನವನ್ನು ದೇಶದೊಳಗೆಯೇ ಇರಿಸಿಕೊಳ್ಳಲಾಗಿದೆ. ಉಳಿದವು ವಿದೇಶಗಳಲ್ಲಿ ಇವೆ.

ಇದನ್ನೂ ಓದಿ: ಆರ್​ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್​ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್​ಗೆ ಒಟಿಪಿ ಬೇಕಿಲ್ಲ

ಭಾರತ ಚಿನ್ನವನ್ನು ಯಾಕೆ ತರುತ್ತಿದೆ?

ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ಸದ್ದುಗದ್ದಲವಿಲ್ಲದೆ ಸಾಕಷ್ಟು ಚಿನ್ನವನ್ನು ಭಾರತಕ್ಕೆ ಸಾಗಿಸುತ್ತಿದೆ. ಸಾಮಾನ್ಯವಾಗಿ ಆರ್​ಬಿಐ ತಾನು ಖರೀದಿಸಿದ ಚಿನ್ನವನ್ನು ವಿದೇಶಗಳಲ್ಲಿ ಇರಿಸುತ್ತದೆ. ಆದರೆ, ಜಾಗತಿಕ ರಾಜಕೀಯ ಅನಿಶ್ಚಿತತೆ ಇರುವ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಚಿನ್ನವನ್ನು ಇರಿಸುವುದು ಸುರಕ್ಷಿತ ಎನಿಸುವುದಿಲ್ಲ. ಹೀಗಾಗಿ, ಭಾರತವು ತನ್ನ ಪಾಲಿನ ಚಿನ್ನವನ್ನು ತನ್ನ ದೇಶದೊಳಗೆಯೇ ಇರಿಸಿಕೊಳ್ಳಲು ಯತ್ನಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ತಂಡಗಳಿಗೆ ಬಿಸಿಸಿಐ ಕಡೆಯಿಂದ ಖಡಕ್ ಎಚ್ಚರಿಕೆ! – Kannada News | Did Punjab Police Approach BCCI After Riyan Parag Vaping Incident?

ಐಪಿಎಲ್ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ (ವೇಪಿಂಗ್) ಸೇವಿಸಿದ ಘಟನೆಗೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕಠಿಣ ಎಚ್ಚರಿಕೆ ನೀಡಿದ್ದಾರೆ. ಆಟಗಾರರು ಮತ್ತು ಅಧಿಕಾರಿಗಳು ಮೈದಾನದ ಒಳಗೆ ಮತ್ತು ಹೊರಗೆ ಕ್ರೀಡೆಯ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಖಡಕ್ ಆಗಿ ಸೂಚಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಭಾರತದಲ್ಲಿ ಇ-ಸಿಗರೇಟ್ ನಿಷೇಧಿತ ವಸ್ತುವಾಗಿದ್ದು, ಕ್ರೀಡಾಂಗಣದ ನಿಯಮಗಳನ್ನೂ ಇದು ಮೀರಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಪರಾಗ್‌ಗೆ ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ವಿಧಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್ ಆಟಗಾರರಿಗೆ ಬಿಸಿಸಿಐ ಖಡಕ್ ಎಚ್ಚರಿಕೆ ನೀಡಿದೆ.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಹೇಳಿಕೆಯ ಮುಖ್ಯಾಂಶಗಳು:

  • ಪೊಲೀಸ್ ಹಸ್ತಕ್ಷೇಪವಿಲ್ಲ: ಈ ವಿಷಯವಾಗಿ ಪಂಜಾಬ್ ಪೊಲೀಸರು ಬಿಸಿಸಿಐ ಅನ್ನು ಇದುವರೆಗೆ ಸಂಪರ್ಕಿಸಿಲ್ಲ ಎಂದು ಸೈಕಿಯಾ ಸ್ಪಷ್ಟಪಡಿಸಿದ್ದಾರೆ.
  •  ಶಿಸ್ತು ಕ್ರಮ: ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು.
  • ತಂಡಗಳಿಗೆ ಎಚ್ಚರಿಕೆ: ಕೇವಲ ಆಟಗಾರರಷ್ಟೇ ಅಲ್ಲದೆ, ನಿಯಮ ಉಲ್ಲಂಘಿಸುವ ತಂಡಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ.

ಇದನ್ನೂ ಓದಿ: ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಗೆ ಭರ್ಜರಿ ಗಿಫ್ಟ್​ ನೀಡಿದ ಪಂಜಾಬ್ ಕಿಂಗ್ಸ್

ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಕೂಡ ಡಗೌಟ್‌ನಲ್ಲಿ ಮೊಬೈಲ್ ಬಳಸಿದ ಕಾರಣಕ್ಕೆ ದಂಡಕ್ಕೊಳಗಾಗಿದ್ದು, ಈ ಸರಣಿ ಘಟನೆಗಳಿಂದಾಗಿ ತಂಡದ ಶಿಸ್ತಿನ ಬಗ್ಗೆ ಪ್ರಶ್ನೆಗಳು ಎದ್ದಿವೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ನಡೆದರೆ ಆಟಗಾರರ ಮೇಲೆ ನಿಷೇಧ ಹೇರುವಂತಹ ಕಠಿಣ ಆಯ್ಕೆಗಳನ್ನೂ ಬಿಸಿಸಿಐ ಮುಕ್ತವಾಗಿರಿಸಿಕೊಂಡಿದೆ.

Source link

ಮೇ ತಿಂಗಳಿನಲ್ಲಿ ಈ ರಾಶಿಗೆ ಸಾಡೇ ಸಾಥ್ ಕೊನೆಯ ಕಾಲ: ನಿಮ್ಮೆಲ್ಲ ಕಷ್ಟದ ದಿನಗಳು ಇಲ್ಲಿಗೆ ಅಂತ್ಯ – Kannada News | Kumbha Rashi May 2026 Predictions: Sade Sati’s Last Phase and Major Life Changes

ಮೇ 2026ರ ಗ್ರಹಗತಿಗಳ ಆಧಾರದ ಮೇಲೆ ಕುಂಭ ರಾಶಿಯವರಿಗೆ ಈ ತಿಂಗಳ ಭವಿಷ್ಯ ಹಲವು ತಿರುವುಗಳಿಗೆ ಕಾರಣವಾಗಲಿದೆ. ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ ನಕ್ಷತ್ರದವರಿಗೆ ಗ್ರಹಗಳ ಪ್ರಭಾವ ಇರಲಿದೆ. ಸಾಡೆಸಾಥ್ ನ ಕೊನೆಯ ಭಾಗವಾದ ಕಾರಣ ತೊಂದರೆ ಹೆಚ್ಚು ಕಾಣಿಸಲಿದೆ.

​ಶುಭ ದಶೆ :

​ಗುರು ಬಲ :

ಕುಂಭ ರಾಶಿಯವರಿಗೆ ಗುರುವು ಪಂಚಮ ಸ್ಥಾನದಲ್ಲಿದ್ದಾನೆ. ಇದು ಅತ್ಯಂತ ಶುಭಕರ. ಬುದ್ಧಿಶಕ್ತಿ ಚುರುಕಾಗುತ್ತದೆ, ಗೌರವ ವೃದ್ಧಿಯಾಗುತ್ತದೆ. ಸಂತಾನ ಭಾಗ್ಯ ಅಥವಾ ಮಕ್ಕಳಿಂದ ಸುಖದಾಯಕ ವಾರ್ತೆಗಳು ಸಿಗಲಿವೆ.

​ಶುಕ್ರ ಸ್ವಸ್ಥಾನ :

ಶುಕ್ರನು ತನ್ನ ಸ್ವಕ್ಷೇತ್ರವಾದ ವೃಷಭದಲ್ಲಿದ್ದಾನೆ. ಮನೆ, ವಾಹನ ಖರೀದಿ ಅಥವಾ ಮನೆಯ ನವೀಕರಣಕ್ಕೆ ಇದು ಸಕಾಲ. ಕಲೆ, ಹವ್ಯಾಸ ಮತ್ತು ಐಷಾರಾಮಿ ಜೀವನದ ಮೇಲೆ ಆಸಕ್ತಿ ಹೆಚ್ಚುತ್ತದೆ.

​ರವಿ ಉಚ್ಚ :

ಧೈರ್ಯ ಮತ್ತು ಪರಾಕ್ರಮ ಹೆಚ್ಚುತ್ತದೆ. ಕಿರಿಯ ಸಹೋದರರಿಂದ ಬೆಂಬಲ ಸಿಗಲಿದೆ.

​ಅಶುಭ ದಶೆ

​ಶನಿ-ಕುಜ-ಬುಧ ಸಂಯೋಗ :

ಇದು ನಿಮ್ಮ ರಾಶಿಯ ಧನ ಸ್ಥಾನ. ಇಲ್ಲಿ ಶನಿ ಮತ್ತು ಕುಜ ಸೇರಿರುವುದರಿಂದ ಅಂಗಾರಕ ಯೋಗ’ ಉಂಟಾಗುತ್ತದೆ. ಮಾತಿನಲ್ಲಿ ಕಟುತ್ವ ಬರಬಹುದು. ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ಸಂಭವಿಸಬಹುದು. ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಖರ್ಚುಗಳು ಎದುರಾಗುತ್ತವೆ.

ಕೃಷಿ ಮತ್ತು ಪರಿಶ್ರಮ :

ಮೀನದಲ್ಲಿರುವ ಶನಿ ನಿಮ್ಮನ್ನು ಕಠಿಣ ದುಡಿಮೆಗೆ ಹಚ್ಚುತ್ತಾನೆ. ಫಲಿತಾಂಶ ತಡವಾದರೂ ನಿಶ್ಚಿತವಾಗಿ ಸಿಗಲಿದೆ. ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವಿದೆ. ಆದರೆ, ಕೆಲಸಗಾರರ ಕೊರತೆ ಅಥವಾ ಯಂತ್ರೋಪಕರಣಗಳ ದುರಸ್ತಿಯಿಂದ ಸ್ವಲ್ಪ ಅಡೆತಡೆ ಉಂಟಾಗಬಹುದು.

ಪ್ರೇಮ ಮತ್ತು ವಿವಾಹ :

​ಗುರುವಿನ ದೃಷ್ಟಿ ಇರುವುದರಿಂದ ಪ್ರೇಮ ಸಂಬಂಧಗಳು ಗಟ್ಟಿಯಾಗುತ್ತವೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ಮನೆಯಲ್ಲಿ ಮಂಗಲ ಕಾರ್ಯದ ಮಾತುಕತೆ ನಡೆಯಲಿದೆ.

​ಸ್ವ-ಉದ್ಯೋಗ, ವ್ಯಾಪಾರ ಮತ್ತು ಅಧಿಕಾರ :

​ಹೊಸ ಐಡಿಯಾಗಳನ್ನು ಜಾರಿಗೆ ತರಲು ಇದು ಸಕಾಲ. ಲಾಭದ ಪ್ರಮಾಣ ಸಾಧಾರಣವಾಗಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ ಇರಲಿ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಹೆಚ್ಚಿನ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ.

ಹವ್ಯಾಸ ಮತ್ತು ಕಲೆ

​ಶುಕ್ರನು ನಾಲ್ಕನೇ ಮನೆಯಲ್ಲಿರುವುದರಿಂದ ಸಂಗೀತ, ಸಾಹಿತ್ಯ, ನೃತ್ಯ ಅಥವಾ ಯಾವುದೇ ಸೃಜನಶೀಲ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಮಾಡ್ತೀರಿ. ನಿಮ್ಮ ಪ್ರತಿಭೆಗೆ ವೇದಿಕೆ ದೊರೆಯುವ ಸಾಧ್ಯತೆ ಇದೆ.

ಹೂಡಿಕೆ :

​ದೀರ್ಘಕಾಲದ ಹೂಡಿಕೆಗೆ ಶುಕ್ರನ ಬೆಂಬಲವಿದೆ. ​ಆದರೆ, ಶೇರು ಮಾರುಕಟ್ಟೆ ಅಥವಾ ಅನಿಶ್ಚಿತ ಹೂಡಿಕೆಗಳಲ್ಲಿ ಬುಧ-ಕುಜ ಸಂಯೋಗ ಇರುವುದರಿಂದ ತುರ್ತು ನಿರ್ಧಾರ ಬೇಡ. ಹಣ ಸಿಕ್ಕಿಬೀಳುವ ಸಂಭವವಿರುತ್ತದೆ.

– ಲೋಹಿತ ಹೆಬ್ಬಾರ್

Source link

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿರುವ ವಿಮಾನದ ಎಕ್ಸಿಟ್ ಡೋರ್ ತೆರೆದು ಹಾರಿದ ಪ್ರಯಾಣಿಕ – Kannada News | Mid Flight Incident at Chennai International Airport Prompts Emergency Response

ಏರ್ ಅರೇಬಿಯಾ ವಿಮಾನ Image Credit source: Times Of India

ಚೆನ್ನೈ, ಮೇ 03: ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Airport)ದಲ್ಲಿ ಇಂದು ಮುಂಜಾನೆ ನಡೆದ ಅನಿರೀಕ್ಷಿತ ಘಟನೆಯು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಶಾರ್ಜಾದಿಂದ ಬಂದ ಏರ್ ಅರೇಬಿಯಾ ವಿಮಾನವು ಇಳಿದ ನಂತರ ವಿಮಾನದೊಳಗಿನ ವ್ಯಕ್ತಿಯೊಬ್ಬರು ತೋರಿದ ಹಠಾತ್ ವರ್ತನೆಯು ಭದ್ರತಾ ಆತಂಕಕ್ಕೆ ಕಾರಣವಾಯಿತು.ಶಾರ್ಜಾ-ಚೆನ್ನೈ ಏರ್ ಅರೇಬಿಯಾ ವಿಮಾನವು ರನ್‌ವೇಯಲ್ಲಿ ಇಳಿದು ಟ್ಯಾಕ್ಸಿವೇಯಲ್ಲಿ ನಿಧಾನವಾಗಿ ಚಲಿಸುತ್ತಿತ್ತು. ವಿಮಾನವು ಪಾರ್ಕಿಂಗ್ ಬೇ ತಲುಪುವ ಮೊದಲೇ, ಪುರುಷ ಪ್ರಯಾಣಿಕನೊಬ್ಬ ಹಠಾತ್ತಾಗಿ ತುರ್ತು ನಿರ್ಗಮನ ಬಾಗಿಲನ್ನು ತೆರೆದು ಹೊರಗೆ ಜಿಗಿದಿದ್ದಾನೆ. ವಿಮಾನ ನಿಂತಿರದ ಸಮಯದಲ್ಲಿ ಸಂಭವಿಸಿದ ಈ ಘಟನೆಯು ಸಹ-ಪ್ರಯಾಣಿಕರಲ್ಲಿ ಭೀತಿಯನ್ನು ಉಂಟುಮಾಡಿತು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಪ್ರಯಾಣಿಕನು ಪ್ರಯಾಣದ ಅವಧಿಯಲ್ಲಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ.ಪ್ರಯಾಣದ ಸಮಯದಲ್ಲಿ ಆತ ತನಗೆ ವಾಂತಿ ಬರುತ್ತಿದೆ ಎಂದು ದೂರಿದ್ದ.ವಿಮಾನದ ಒಳಗೆ ಎರಡು ಬಾರಿ ವಾಂತಿ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಂತಿಯ ಅನುಭವ ಮತ್ತು ಮಾನಸಿಕ ಒತ್ತಡದಿಂದಾಗಿ ಆತ ಈ ರೀತಿ ವರ್ತಿಸಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ನಡೆದ ಕೂಡಲೇ ವಿಮಾನದ ಪೈಲಟ್ ನೆಲದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದರು. ಹೆಚ್ಚಿನ ತನಿಖೆಗಾಗಿ ಆತನನ್ನು ಈಗ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವರದಿಗಳ ಪ್ರಕಾರ, ಈ ವ್ಯಕ್ತಿ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: ಇನ್ನೇನು ಟೇಕ್ ಆಫ್ ಆಗುವಷ್ಟರಲ್ಲೇ ಪ್ರಯಾಣಿಕ ಅಸ್ವಸ್ಥ: ಮಾನವೀಯತೆಗೆ ಸಾಕ್ಷಿಯಾದ ವಿಮಾನ

ಈ ಘಟನೆಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಮುಖ್ಯ ರನ್‌ವೇಯನ್ನು ಬೆಳಗ್ಗೆ 03.23 ರಿಂದ 04.23 ರವರೆಗೆ ಮುಚ್ಚಲಾಗಿತ್ತು. ಈ ಒಂದು ಗಂಟೆಯ ಅವಧಿಯಲ್ಲಿ ವಿಮಾನಗಳ ಸಂಚಾರವನ್ನು ದ್ವಿತೀಯ ರನ್‌ವೇಗೆ ತಿರುಗಿಸಲಾಯಿತು.

ಅದೃಷ್ಟವಶಾತ್, ಈ ಘಟನೆಯಲ್ಲಿ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ ಅಥವಾ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ. ವಿಮಾನಯಾನ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಕುರಿತು ಅಧಿಕಾರಿಗಳು ಸಮಗ್ರ ತನಿಖೆಯನ್ನು ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

13 ವರ್ಷದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ – Kannada News | 13 Year Old Girls Sudden Death Due to Heart Attack in Karnataka

ಉತ್ತರ ಕನ್ನಡ, ಮೇ.3: ಜಿಲ್ಲೆಯ ಜೋಯಿಡಾ ತಾಲೂಕಿನ ಚಾಪಾಲಿ ಗವಳಿವಾಡದಲ್ಲಿ ಒಂದು ಹೃದಯವಿದ್ರಾವಕ ಘಟನೆ ಸಂಭವಿಸಿದೆ. 13 ವರ್ಷದ ಗಂಗುಕವಳಿ ಎಂಬ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಈ ಘಟನೆ ಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.ಮೃತ ವಿದ್ಯಾರ್ಥಿನಿಗೆ ಯಾವುದೇ ರೀತಿಯ ಕಾಯಿಲೆಗಳು ಇರಲಿಲ್ಲ ಎಂದು ತಿಳಿದುಬಂದಿದೆ. ಆಕೆಗೆ ಹೃದಯ ಸಂಬಂಧಿ ಸಮಸ್ಯೆಗಳೂ ಇರಲಿಲ್ಲ ಎನ್ನಲಾಗಿದೆ. ಗಂಗುಕವಳಿ ಎಲ್ಲಾ ಮಕ್ಕಳಂತೆ ಪ್ರತಿದಿನ ಆಟಪಾಠಗಳಲ್ಲಿ ತೊಡಗಿಕೊಳ್ಳುತ್ತಿದ್ದಳು. ಸಾವಿಗೂ ಹಿಂದಿನ ದಿನ ಸಂಜೆಯವರೆಗೂ ಆಟವಾಡಿ ಸಂತೋಷದಿಂದಿದ್ದಳು. ಆದರೆ, ಮರುದಿನ ಬೆಳಗ್ಗೆ ವಾಂತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆ ಅಸುನೀಗಿದ್ದಾಳೆ. ಈ ಆಘಾತಕಾರಿ ಘಟನೆ ಕುರಿತು ರಾಮನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕಿಯ ಅಕಾಲಿಕ ಮರಣಕ್ಕೆ ಕಾರಣ ಏನೆಂದು ತಿಳಿಯಲು ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಯವಿಟ್ಟು ಆ ವಿಡಿಯೋ ಹಾಕಬೇಡಿ: ಜನರಿಗೆ ‘ಕೆಡಿ’ ನಿರ್ದೇಶಕ ಪ್ರೇಮ್ ಮನವಿ – Kannada News | KD Movie director Jogi Prem requests not to share any video online

ನಿರ್ದೇಶಕ ಜೋಗಿ ಪ್ರೇಮ್ ಅವರು ‘ಕೆಡಿ’ ಸಿನಿಮಾದ (KD Movie) ಸೆಲೆಬ್ರಿಟಿ ಶೋ ಬಳಿಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಿನಿಮಾ ನೋಡಿದ ಅನೇಕ ಪ್ರೇಕ್ಷಕರು ಚಿತ್ರದ ಕೆಲವು ಮುಖ್ಯ ದೃಶ್ಯಗಳನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಅದರಿಂದ ಸಿನಿಮಾದ ಸಸ್ಪೆನ್ಸ್ ಹಾಳಾಗುತ್ತದೆ. ಆ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ‘ಆನ್​ಲೈನ್​​ನಲ್ಲಿ ಕೆಲವರು ವಿಡಿಯೋ ಹಾಕುತ್ತಿದ್ದೀರಿ. ಕೈ ಮುಗಿದು ಬೇಡುತ್ತೇನೆ, ದಯವಿಟ್ಟು ಹಾಗೆ ಮಾಡಬೇಕು’ ಎಂದು ಪ್ರೇಮ್ (Jogi Prem) ಅವರು ಮನವು ಮಾಡಿಕೊಂಡಿದ್ದಾರೆ.

‘ನನಗೆ ಗೊತ್ತು, ಆ ವಿಡಿಯೋಗಳನ್ನು ನೀವು ಉದ್ದೇಶಪೂರ್ವಕವಾಗಿ ಹಾಕುತ್ತಿಲ್ಲ. ಧ್ರುವ ಎಂಟ್ರಿ ಹೀಗಿದೆ, ಸುದೀಪ್ ಎಂಟ್ರಿ ಹೀಗಿದೆ, ರಮೇಶ್ ಪಾತ್ರ ಹೀಗಿದೆ ಎಂಬ ಖುಷಿಯಲ್ಲಿ ಅದನ್ನು ಹಂಚಿಕೊಳ್ಳುತ್ತಿದ್ದೀರಿ. ಆದರೆ ದಯವಿಟ್ಟು ಆ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಡಿ. ಚಿತ್ರಕ್ಕಾಗಿ ತುಂಬ ಶ್ರಮಪಟ್ಟಿದ್ದೇವೆ. ಕೆವಿಎನ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ನಮಗೆ ಬೆಂಬಲ ನೀಡಿದೆ’ ಎಂದು ಪ್ರೇಮ್ ಅವರು ಹೇಳಿದ್ದಾರೆ.

‘ಇಡೀ ಕನ್ನಡ ಚಿತ್ರರಂಗ ನಮಗೆ ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ನಾವು ಎಲ್ಲರನ್ನೂ ಕರೆದು ಒಂದು ಸೆಲೆಬ್ರಿಟಿ ಶೋ ಆಯೋಜನೆ ಮಾಡಿದ್ದೇವೆ. ಚಿತ್ರರಂಗದ ನನ್ನ ಎಲ್ಲ ಸ್ನೇಹಿತರಿಗೆ ಧನ್ಯವಾದಗಳು. ಎಲ್ಲರೂ ಈ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ. ಮುಂದಿನ ವಾರ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿದೆ. ಅಲ್ಲಿ ಸೆನ್ಸಾರ್ ಆಗುವುದು ಬಾಕಿ ಇದೆ’ ಎಂದಿದ್ದಾರೆ ಪ್ರೇಮ್.

‘ಸಿನಿಮಾದ ಕೊನೇ ಹಂತದಲ್ಲಿ ನನಗೆ ಆತಂಕ ಆಗಿತ್ತು. ಆದರೆ ನಿರ್ಮಾಪಕರು ಕರೆದು ನನಗೆ ಒಂದು ಮಾತು ಹೇಳಿದರು. ಎಷ್ಟು ಬೇಗ ಮಾಡಲು ಸಾಧ್ಯವೋ ಅಷ್ಟು ಬೇಗ ಮಾಡಿ ಎಂದರು. ಅವರು ನನ್ನನ್ನು ನಂಬಿದ್ದಾರೆ. ಅವರಿಗೆ ನಾವು ನೋವು ಮಾಡಬಾರದು. ಎಷ್ಟೇ ಒತ್ತಡ ಇದ್ದರೂ ಕೆವಿಎನ್ ಅವರು ನಮ್ಮ ಬೆನ್ನ ಹಿಂದೆ ನಿಂತುಕೊಂಡರು’ ಎಂದು ಪ್ರೇಮ್ ಹೇಳಿದ್ದಾರೆ.

ಇದನ್ನೂ ಓದಿ: KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ

‘ಎಲ್ಲರೂ ಈ ಸಿನಿಮಾವನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಯಾರೂ ಕೂಡ ನೆಗೆಟಿವ್ ಮಾತನಾಡುತ್ತಿಲ್ಲ. ಎಲ್ಲರೂ ಪಾಸಿಟಿವ್ ಆಗಿ ಹೇಳುತ್ತಿದ್ದಾರೆ. ಅದಕ್ಕಾಗಿ ಎಲ್ಲರಿಗೂ ನಮಸ್ಕಾರ ಮಾಡುತ್ತೇನೆ’ ಎಂದು ಪ್ರೇಮ್ ಅವರು ಧನ್ಯವಾದ ತಿಳಿಸಿದ್ದಾರೆ. ಧ್ರುವ ಸರ್ಜಾ ಅವರಿಗೆ ಈ ಸಿನಿಮಾದಿಂದ ಗೆಲುವು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:46 pm, Sun, 3 May 26

Source link

ಗುರುಗ್ರಾಮ: ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ – Kannada News | Multiple Deaths Reported in Gurugram, Investigation Underway

ಗುರುಗ್ರಾಮ, ಮೇ 03: ವ್ಯಕ್ತಿಯೊಬ್ಬ ತನ್ನ ಸುಖ ಸಂಸಾರವನ್ನೇ ಬಲಿಪಡೆದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ನಜೀಮ್ ಎಂಬಾತ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ(Suicide)ಗೆ ಯತ್ನಿಸಿದ್ದಾನೆ. ಶನಿವಾರ ರಾತ್ರಿ ಸುಮಾರು 9.30 ರ ವೇಳೆಗೆ ನಜೀಮ್‌ನ ಸಹೋದರ ಮನೆಗೆ ಹಿಂದಿರುಗಿದಾಗ, ಮೊದಲ ಮಹಡಿಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಹಿಳೆ ಮತ್ತು ನಾಲ್ವರು ಮಕ್ಕಳು ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ನಜೀಮ್ ಹೇರ್ ಸಲೂನ್ ನಡೆಸುತ್ತಿದ್ದು, ಆತ ಬದುಕುಳಿದಿದ್ದಾನೆ. ಪತ್ನಿ ನಜ್ಮಾ, ಮಕ್ಕಳಾದ ಇಕ್ರಾ, ಶಿಫಾ (11), ಆರಾಮ್ (9) ಮತ್ತು ಖತೀಜಾ (6) ಸಾವನ್ನಪ್ಪಿದ್ದಾರೆ. ಯಾರಿಗೂ ಬಯಸದ ಕಾರಣ ಈ ಕೃತ್ಯ ಎಸಗಿರುವುದಾಗಿ ನಜೀಮ್ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ, ಅವರನ್ನು ವಿಷಪ್ರಾಶನ ಮಾಡಿ ಕೊಲ್ಲಲಾಗಿದೆಯೇ ಅಥವಾ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿದುಬರಬೇಕಿದೆ.

ಮಥುರಾದ ವೃಂದಾವನದಲ್ಲಿ ಮತ್ತೊಂದು ಕರುಣಾಜನಕ ಘಟನೆ ನಡೆದಿದ್ದು, ಸುಭಾಷ್ ಠಾಕೂರ್ ಎಂಬ ವ್ಯಕ್ತಿ ತನ್ನ ಲಿವ್-ಇನ್ ಸಂಗಾತಿ ರಾಧಿಕಾಳನ್ನು ಕೊಂದ ನಂತರ ತಾನೂ ನೇಣಿಗೆ ಶರಣಾಗಿದ್ದಾನೆ.
ಕಳೆದ ಎರಡು ವರ್ಷಗಳಿಂದ ಈ ದಂಪತಿಗಳು ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಇತ್ತೀಚೆಗೆ ಸುಭಾಷ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ರಾಧಿಕಾ ಪೊಲೀಸ್ ದೂರು ನೀಡಿದ್ದರು. ಈ ದೂರಿನಿಂದ ತೀವ್ರ ಆಕ್ರೋಶಗೊಂಡಿದ್ದ ಸುಭಾಷ್, ರಾಧಿಕಾಳನ್ನು ಕತ್ತು ಹಿಸುಕಿ ಕೊಂದು ತಾನೂ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮತ್ತಷ್ಟು ಓದಿ: ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್!

ರಾಧಿಕಾಳ ಸಹೋದರಿ ಅನಿತಾ ಪದೇ ಪದೇ ಕರೆ ಮಾಡಿದರೂ ಯಾವುದೇ ಉತ್ತರ ಬಾರದಿದ್ದಾಗ ಆತಂಕಗೊಂಡು ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಕಿಟಕಿಯ ಮೂಲಕ ನೋಡಿದಾಗ ಮನೆಯೊಳಗೆ ಶವಗಳು ಪತ್ತೆಯಾಗಿವೆ. ಈ ಎರಡೂ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಕೋನಗಳಿಂದ ತನಿಖೆ ಮುಂದುವರೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗರ್ಭಿಣಿ ಹೆಂಡತಿ ಬೀದಿಗೆ! ಗಂಡನ ಮೊಬೈಲ್‌ನಲ್ಲಿತ್ತು ಅಸಹ್ಯ ಚಿತ್ರಗಳು – Kannada News | Dasarahalli Illicit Affair: Pregnant Wife Harassed, Left Homeless by BMTC Officer

ಬೆಂಗಳೂರು, ಮೇ.3: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗರ್ಭಿಣಿ ಹೆಂಡತಿಯನ್ನೇ ಮನೆಯಿಂದ ಆಚೆ ಹಾಕಿರುವ ಅಮಾನವೀಯ ಘಟನೆ ದಾಸರಹಳ್ಳಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಎಂಟಿಸಿ ಸೆಕ್ಯೂರಿಟಿ ಇನ್‌ಚಾರ್ಜ್ ಆಗಿರುವ ಜಗದೀಪ್ (42) ತನ್ನ ಪತ್ನಿ ಶ್ವೇತಾ (32)ಗೆ ದ್ರೋಹ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಶ್ವೇತಾ ಮತ್ತು ಜಗದೀಪ್ 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಜಯನಗರದ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ಇಬ್ಬರೂ ವಾಸವಿದ್ದರು.

ಪತಿ ಜಗದೀಪ್‌ನ ವರ್ತನೆಯಲ್ಲೂ ತುಂಬಾ ಬದಲಾವಣೆಗಳು ಆಗಿತ್ತು. ಇದರಿಂದ ಅನುಮಾನಗೊಂಡು ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದಾಗ ಆತನಿಗೆ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರುವುದು ಪತ್ನಿ ಶ್ವೇತಾಗೆ ಗೊತ್ತಾಗಿದೆ. ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಜಗದೀಪ್ ಪತ್ನಿಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಪ್ರಸ್ತುತ ಆರು ತಿಂಗಳ ಗರ್ಭಿಣಿಯಾಗಿರುವ ಶ್ವೇತಾಗೆ “ಮಗು ತೆಗೆಸಿಬಿಡು, ನೀನು ನನಗೆ ಬೇಡ” ಎಂದು ಕಿರುಕುಳ ನೀಡಿದ್ದಾನೆ.

ಇದನ್ನೂ ಓದಿ: ದೇಹದಲ್ಲಿ ಒಂದೇ ಒಂದು ಮಚ್ಚೆ ಇರಬಾರದು, ಬೆತ್ತಲೆ ಪೂಜೆಗೆ 30 ಲಕ್ಷ ರೂ. : ಯುವತಿಗೆ ಕಾಲ್‌ ಮಾಡಿ ಟಾರ್ಚರ್ ನೀಡುತ್ತಿದ್ದ ಕಿರಣ್

ಕಳೆದ ಆರು ತಿಂಗಳ ಹಿಂದೆ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕಿರುವ ಜಗದೀಪ್, ಈಗ ಆಕೆಗೆ ಯಾವುದೇ ಆಸರೆ ಇಲ್ಲದಂತೆ ಮಾಡಿದ್ದಾನೆ. ನ್ಯಾಯಕ್ಕಾಗಿ ಆಗ್ರಹಿಸಿ ನೊಂದ ಗರ್ಭಿಣಿ ಶ್ವೇತಾ ಬಾಗಲಗುಂಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನ್ನ ಗಂಡನ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ವರದಿ: ಮಂಜುನಾಥ್ ಟಿವಿ9 ಕನ್ನಡ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:08 pm, Sun, 3 May 26

Source link

Video: ರೈಲಿನ ಸೀಟುಗಳ ಹರಿದು ಯುವಕರ ಪುಂಡಾಟ – Kannada News | Vandalism on Train Caught on Camera, Sparks Calls for Strict Action

ಯುವಕರು ರೈಲಿನ ಸೀಟುಗಳನ್ನು ಹರಿದು ಹಾಕಿರುವ ವಿಡಿಯೋ ವೈರಲ್ ಆಗಿದೆ. ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಒದಗಿಸಿರುವ ಸೌಲಭ್ಯಗಳನ್ನು ಈ ಕಿಡಿಗೇಡಿಗಳು ತಮ್ಮ ವೈಯಕ್ತಿಕ ಮೋಜಿನ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ರೈಲಿನ ಸೀಟುಗಳನ್ನು ಹರಿದು ಹಾಕುವುದು ಮತ್ತು ಅವುಗಳನ್ನು ಕಿತ್ತು ಎಸೆಯುವ ಮೂಲಕ ವಿಕೃತ ಆನಂದ ಪಡೆಯುತ್ತಾ, ಈ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರೈಲ್ವೆಯು ದೇಶದ ಜೀವನಾಡಿ ಹಾಗೂ ಸಾಮಾನ್ಯ ಜನರ ಆಸ್ತಿಯಾಗಿದೆ. ಇಂತಹ ಗೂಂಡಾವರ್ತನೆಯಿಂದ ಕೇವಲ ಆರ್ಥಿಕ ನಷ್ಟವಾಗುವುದು ಮಾತ್ರವಲ್ಲದೆ, ಪ್ರಾಮಾಣಿಕ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದರೂ, ಇಂತಹ ವ್ಯಕ್ತಿಗಳು ವ್ಯವಸ್ಥೆಯನ್ನು ಹಾಳುಮಾಡಲು ಮುಂದಾಗುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version