Video: ಮೂರುವರೆ ವರ್ಷದ ಬಳಿಕ ವಿದೇಶದಿಂದ ಬಂದ ಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ಮನೆ ಮಂದಿ – Kannada News | Family gives grand welcome to daughter who went abroad for work upon her return home

ಪ್ರತಿಯೊಬ್ಬ ತಂದೆ ತಾಯಂದಿರು (parents) ಮಕ್ಕಳ  ಭವಿಷ್ಯ ಚೆನ್ನಾಗಿರಬೇಕೆಂದು ಬಯಸುವುದು ಸಹಜ. ಹೀಗಾಗಿ ಕಷ್ಟವಾದ್ರೂ ಸರಿಯೇ, ಮಕ್ಕಳನ್ನು ದೂರದ ಊರು, ದೇಶಕ್ಕೆ ಕಳುಹಿಸಿಕೊಡುತ್ತಾರೆ. ತಮ್ಮ ಮಕ್ಕಳು ಮನೆಗೆ ಬರುತ್ತಾರೆ ಎಂದರೆ ಹೆತ್ತವರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಈ ಸಂಭ್ರಮಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮೂರುವರೆ ವರ್ಷದ ಬಳಿಕ ವಿದೇಶದಿಂದ ಬಂದ ಮಗಳನ್ನು ಮನೆಮಂದಿಯೆಲ್ಲಾ ಜತೆ ಸೇರಿ ಸಂಪ್ರದಾಯಿಕವಾಗಿ ಬರಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹೃದಯ ಗೆದ್ದಿದೆ.

ಕೆನ್ನಿ ಪಟೇಲ್ (@kennypatel_20) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವಿದೇಶದಿಂದ ಬಂದ ಮಗಳನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳುವುದನ್ನು ಕೊಳ್ಳಬಹುದು. ಪ್ರವೇಶದ್ವಾರದ ಹೊರಗೆ, ಹಲವಾರು ಕುಟುಂಬ ಸದಸ್ಯರು ಅವಳನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಯುವತಿ ಮನೆಗೆ ಬರುತ್ತಿದ್ದಂತೆ ಅವಳ ಅಜ್ಜಿ ಆಕೆಯ ತಲೆಯ ಸುತ್ತಲೂ ನೀರನ್ನು ಸುತ್ತುವ ಮೂಲಕ ದೃಷ್ಟಿ ತೆಗೆಯುತ್ತಾರೆ. ಯುವತಿ ತನ್ನ ತಾಯಿಯನ್ನು ಅಪ್ಪಿಕೊಳ್ಳುತ್ತಾಳೆ. ಮನೆ, ಮೆಟ್ಟಿಲು ಹಾಗೂ ದ್ವಾರವನ್ನು ಹೂಗಳಿಂದ ಅಲಂಕರಿಸಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಪುಟ್ಟ ಹುಡುಗನು ಗಂಟೆ ಬಾರಿಸುತ್ತಾ ಆಕೆಯನ್ನು ಸ್ವಾಗತಿಸುತ್ತಾನೆ. ಆ ಮಹಿಳೆಯೊಬ್ಬರು ಯುವತಿಗೆ ಆರತಿ ಬೆಳಗಿದ್ದಾರೆ. ಮನೆ ಮಗಳು ಮನೆಯ ಹೊಸ್ತಿಲು ದಾಟಿ ಒಳಗ ಬರುವ ಮುನ್ನ ಕೆಂಪು ಬಣ್ಣದ ಓಕುಳಿ ನೀರಿರುವ ತಟ್ಟೆಗೆ ಪಾದವನ್ನು ಇಟ್ಟು , ಬಿಳಿ ಬಟ್ಟೆಯ ಮೇಲೆ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾಳೆ. ಕೊನೆಗೆ ತನ್ನ ಪೋಷಕರು ಮತ್ತು ಅಜ್ಜಿಯೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುವ ದೃಶ್ಯ ಇಲ್ಲಿದೆ.

ಇದನ್ನೂ ಓದಿ: ಹೆತ್ತವರನ್ನು ತಾನು ಕೆಲಸ ಮಾಡುವ ಅಮೆಜಾನ್ ಆಫೀಸಿಗೆ ಕರೆತಂದ ಉದ್ಯೋಗಿ

ಈ ವಿಡಿಯೋ ಅಧಿಕ ವೀಕ್ಷಣೆ 82 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಕುಟುಂಬವನ್ನು ಪಡೆದ ನೀವೇ ಅದೃಷ್ಟವಂತರು ಎಂದಿದ್ದಾರೆ. ಮತ್ತೊಬ್ಬರು, ಇಂತಹ ಹಳೆಯ ಆಚರಣೆಗಳನ್ನು ಭಾರತದಲ್ಲಿ ಕಾಣಲು ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮನೆ ಮಂದಿಯ ಖುಷಿ ಮುಖದಲ್ಲೇ ವ್ಯಕ್ತವಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *