All posts by nagaraj11081993

ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ: ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಕನಸು ನುಚ್ಚುನೂರು – Kannada News | Bengaluru BMTC bus accident: Engineering student death

ಬಿಎಂಟಿಸಿ ಬಸ್ ಅಪಘಾತImage Credit source: tv9 kannada

ಬೆಂಗಳೂರು, ಏಪ್ರಿಲ್​ 25: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್‌ಗೆ (BMTC Bus) ಮತ್ತೊಂದು ಬಲಿಯಾಗಿದೆ (death). ನಗರದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ನಡೆದ ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಬಿಎಂಟಿಸಿ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಶಿರೀಷಾ(21) ಮೃತ ಇಂಜಿನಿಯರಿಂಗ್‌ ವಿದ್ಯಾರ್ಥಿನಿ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಶಿರೀಷಾ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸಪುರ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಅಂತರ ಕಡಿಮೆಯಾದ ಕಾರಣ, ಬೈಕ್‌ನ ಹ್ಯಾಂಡಲ್ ಬಸ್‌ಗೆ ತಗುಲಿದೆ. ಪರಿಣಾಮ ಶಿರೀಷಾ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ವೇಗವಾಗಿ ಬಂದ ಬಸ್ ಯುವತಿಯ ಮೇಲೆ ಹರಿದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬಿಎಂಟಿಸಿ ಬಸ್ ಚಾಲಕ ವಶಕ್ಕೆ

ಅಪಘಾತದ ಬಳಿಕ ಸ್ಥಳಕ್ಕೆ ಧಾವಿಸಿದ ಕೆಂಗೇರಿ ಸಂಚಾರಿ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಬಸ್ ಚಾಲಕ ಚಂದ್ರು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದ್ದಾರೆ.

ಪ್ರತ್ಯಕ್ಷದರ್ಶಿ ಶಂಕರ್ ಪಾಟಿಲ್​ ಹೇಳಿದ್ದಿಷ್ಟು 

ಇನ್ನು ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಶಂಕರ್ ಪಾಟಿಲ್​ ಎಂಬುವವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮಧ್ಯಾಹ್ನ 2:15ಕ್ಕೆ ಘಟನೆ ನಡೆದಿದೆ. ಆಕೆ ಆರ್​​ಎನ್​​ಎಸ್​ ಕಾಲೇಜು ವಿದ್ಯಾರ್ಥಿನಿ. ತಲೆ ಮೇಲೆ ಬಸ್​ನ‌ ಹಿಂದಿನ ಚಕ್ರ ಹತ್ತಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದರು.

ಇದನ್ನೂ ಓದಿ: ನೆಲಮಂಗಲ ಬಳಿ ಭೀಕರ ಅಪಘಾತ: ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​

ಈ ರಸ್ತೆಯಲ್ಲಿ ಒಂದು ಕಡೆಯು ಹಂಪ್ಸ್ ಇಲ್ಲ. ಅತೀ ವೇಗವಾಗಿ ಬಸ್​ಗಳು ಸಂಚರಿಸುತ್ತವೆ. ಪೊಲೀಸರಿಗೆ ಹಲವು ಬಾರಿ ಹೇಳಿದರೂ ಹಂಪ್ಸ್ ಹಾಕಿಸಿಲ್ಲ. ಹೀಗಾಗಿ ತಿಂಗಳಿಗೆ ಮೂರ್ನಾಲ್ಕು ಅಪಘಾತ ಇಲ್ಲಿ ಆಗುತ್ತಲ್ಲೇ ಇರುತ್ತವೆ ಎಂದಿದ್ದಾರೆ.

ವರದಿ: ವಿಕಾಸ್, ಟಿವಿ9 ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಜ್​ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚೇತನ್ ಅಹಿಂಸ, ಕ್ಷಮೆ ಯಾಚನೆ – Kannada News | Chetan Ahimsa asks apology after Dr Rajkumar fans express anger

ಡಾ ರಾಜ್​ಕುಮಾರ್ (Rajkumar) ಅವರ ಸಮಾಧಿಗೆ 2.50 ಎಕರೆ ಸ್ಥಳ ನೀಡಿರುವ ಸರ್ಕಾರದ ನಿರ್ಧಾರವನ್ನು ಟೀಕೆ ಮಾಡಿ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನಿನ್ನೆ ಹಾಕಿದ್ದ ಪೋಸ್ಟ್​​ಗೆ ರಾಜ್​ಕುಮಾರ್ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಂದು (ಏಪ್ರಿಲ್ 25) ಹಲವಾರು ಕಡೆ ರಾಜ್​ಕುಮಾರ್ ಅಭಿಮಾನಿಗಳು ನಟ ಚೇತನ್ ಅಹಿಂಸ ವಿರುದ್ಧ ದೂರುಗಳನ್ನು ದಾಖಲಿಸಿದ್ದರು. ಸಾರಾ ಗೋವಿಂದು ಸೇರಿದಂತೆ ಇನ್ನೂ ಕೆಲವು ಹಿರಿಯರು ಚೇತನ್ ಅಹಿಂಸ ವಿರುದ್ಧ ಕಟು ವಾಗ್ದಾಳಿ ಮಾಡಿದ್ದರ ಜೊತೆಗೆ ಚೇತನ್ ಅವರ ಗಡಿಪಾರಿಗೆ ಒತ್ತಾಯಿಸಿದ್ದರು. ಕೊನೆಗೆ ಅಣ್ಣಾವ್ರ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು ನಟ ಚೇತನ್ ಅಹಿಂಸ ಕ್ಷಮಾಪಣೆ ಕೇಳಿದ್ದಾರೆ.

ಇಂದು ಸಂಜೆ ವೇಳೆಗೆ ಸಾರಾ ಗೋವಿಂದು, ಕರವೇ ಕಾರ್ಯಕರ್ತರು, ಇನ್ನೂ ಕೆಲವು ಕನ್ನಡ ಪರ ಸಂಘಟನೆ ಕಾರ್ಯಕರ್ತರು, ರಾಜ್​ಕುಮಾರ್ ಅಭಿಮಾನಿ ಸಂಘದ ಸದಸ್ಯರು ರಾಜ್​ಕುಮಾರ್ ಅಭಿಮಾನಿಗಳು ಚೇತನ್ ಅಹಿಂಸ ಮನೆಗೆ ಮುತ್ತಿಗೆ ಹಾಕಿದರು. ಚೇತನ್ ಅಹಿಂಸ ಮನೆ ಎದುರು ಘೋಷಣೆಗಳನ್ನು ಕೂಗಿದರು. ಕೊನೆಗೆ ಚೇತನ್ ಅಹಿಂಸ ಜೊತೆಗೆ ಹಲವು ಸಂಘಟನೆಗಳ ಮುಖಂಡರು ಮಾತನಾಡಿ, ತಮ್ಮ ಆಕ್ರೋಶ, ಅಸಾಮಾಧಾನವನ್ನು ವ್ಯಕ್ತಪಡಿಸಿದರು. ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚೇತನ್ ಅಹಿಂಸ ಬೇಷರತ್ ಕ್ಷಮೆ ಕೇಳಿದ್ದಾರೆ.

‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ, ಕ್ಷಮೆ ಯಾಚನೆಯನ್ನೂ ಮಾಡುತ್ತೇನೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಉದ್ದೇಶ ಅಲ್ಲ. ನಾನೂ ಸಹ ರಾಜ್​ಕುಮಾರ್ ಅವರ ಅಭಿಮಾನಿ. ಸಮಾಜದ ಜಾಗೃತಿ ಆಗಬೇಕು, ಒಂದು ಉತ್ತಮ ಪ್ರಜಾಪ್ರಭುತ್ವ ಕಟ್ಟಬೇಕು. ರಾಜ್​​ಕುಮಾರ್ ಅವರ ಕನಸಿನ ಚಿತ್ರರಂಗವನ್ನು ಕಟ್ಟಬೇಕು ಎಂಬುದು ನನ್ನ ಉದ್ದೇಶ ಕೂಡ’ ಎಂದಿದ್ದಾರೆ.

ನಿನ್ನೆ (ಏಪ್ರಿಲ್ 24) ಪೋಸ್ಟ್ ಹಂಚಿಕೊಂಡಿದ್ದ ನಟ ಚೇತನ್ ಅಹಿಂಸ, ‘ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ “ಸಮಾಧಿ ಕಾಂಪ್ಲೆಕ್ಸ್”ಕ್ಕಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು; ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ’ ಎಂದಿದ್ದರು. ಅವರ ಈ ಪೋಸ್ಟ್​​ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ:ರಾಜ್​ಕುಮಾರ್ ಸಮಾಧಿ ಜಾಗ: ಚೇತನ್ ಪ್ರಶ್ನೆಗೆ ಅಭಿಮಾನಿಗಳ ಆಕ್ರೋಶ

ಕನ್ನಡಪರ ಸಂಘಟನೆಗಳವರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ, ‘ಕರ್ನಾಟಕ ಸಾಂಸ್ಕೃತಿಕ ರಾಯಭಾರಿಗೆ, ಕಲಾ ಚೇತನ ರಾಜ್​ಕುಮಾರ್ ಅವರಿಗೆ ಸರ್ಕಾರ ಗೌರವ ನೀಡುವ ಉದ್ದೇಶದಿಂದ ಸ್ಮಾರಕಕ್ಕಾಗಿ ಜಾಗ ನೀಡಿದೆ. ಅದನ್ನು ರಾಜ್​ಕುಮಾರ್ ಆಗಲಿ, ಅವರ ಕುಟುಂಬದವರಾಗಲಿ ಕೇಳಿ ಪಡೆದಿದ್ದಲ್ಲ. ಅಲ್ಲದೆ, ಈ ಘಟನೆಗಳು ನಡೆದು 20 ವರ್ಷಗಳಾಗಿವೆ. ಆದರೆ ಈಗ ಕೇವಲ ಪ್ರಚಾರಕ್ಕಾಗಿ ಚೇತನ್, ರಾಜ್​ಕುಮಾರ್ ಅವರ ಸ್ಮಾರಕದ ವಿಷಯ ಎತ್ತಿದ್ದಾರೆ’ ಎಂದು ಆರೋಪಿಸಿದ್ದರು.

ಚೇತನ್ ಅವರ ಗಡಿಪಾರು ಮಾಡುವ ಬಗ್ಗೆ, ಚೇತನ್ ವಿರುದ್ಧ ಶಾಂತಿ ಕದಡುವ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಒತ್ತಾಯಗಳು ಕೇಳಿ ಬಂದಿದ್ದವು. ಸಾರಾ ಗೋವಿಂದು ಹಾಗು ಕೆಲವರು ಚೇತನ್ ಈ ಬಾರಿ ಅಭಿಮಾನಿಗಳಿಂದ ಒದೆ ತಿನ್ನಲಿದ್ದಾನೆ ಎಂದು ಕಟುವಾಗಿ ಬೆದರಿಕೆ ಸಹ ಹಾಕಿದ್ದರು. ಆದರೆ ಕೊನೆಗೆ ಚೇತನ್ ಕ್ಷಮೆ ಕೇಳುವ ಮೂಲಕ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಟೋ ಸೈಡ್‌ಗೆ ಹಾಕಿ ಎಂದ ಅಣ್ತಾಮ್ಮಾಸ್ ಮೇಲೆ ಸೈಯದ್ ಜಮೀರ್ ಸಹೋದರರಿಂದ ಮಾರಣಾಂತಿಕ ಹಲ್ಲೆ – Kannada News | A Muslim Brothers brutal assaults On Hindu family In bhimalli village at Kalaburagi

ಕಲಬುರಗಿ, (ಏಪ್ರಿಲ್ 25): ಸಹೋದರಿಬ್ಬರು ತಮ್ಮ ಸಹೋದರಿಯನ್ನ ಬಿಡಲು ಆಕೆಯ ಗಂಡನ ಊರಿಗೆ ಹೋಗಿದ್ದು, ಈ ವೇಳೆ ರಸ್ತೆ ಮೇಲೆ ನಿಲ್ಲಿಸಲಾಗಿದ್ದ ಆಟೋಗಳನ್ನು ಸ್ವಲ್ಪ ಸೈಡಿಗೆ ಸರಿಸಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕಲಬುರಗಿ (Kalaburagi) ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ನಡೆದಿದೆ. ತೋಟೆಂದ್ರ ಮತ್ತು ಸುನಿಲ್ ಸಹೋದರ ಮೇಲೆ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರಾದ ಸೈಫಾಬ್ ಒಂಟಿ, ಆರಿಫ್, ಆಸಿಫ್, ಇಮ್ರಾನ್ ಸೇರಿಕೊಂಡು ಕಟ್ಟಿಗೆಯಿಂದ ಮನಸ್ಸೋ ಇಚ್ಛೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸ್ತೆಯಲ್ಲಿ ನಿಲ್ಲಿಸಲಾಗಿದ್ದ ಆಟೋಗಳನ್ನು ಸ್ವಲ್ಪ ಸೈಡಿಗೆ ಹಾಕಿ ಎಂದಿದ್ದಾರೆ. ಇಷ್ಟು ಹೇಳಿದ್ದೇ ತಡ ರಣರಂಗವಾಗಿದೆ.

ಆಟೋ ಸೈಡಿಗೆ ಹಾಕಿ ಅಂದಿಕ್ಕೆ ಹಲ್ಲೆ

ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ತೋಟೆಂದ್ರ ಮತ್ತು ಸುನಿಲ್ ಸಹೋದರರು ತಮ್ಮ ಸಹೋದರಿಯನ್ನ ಬಿಡಲು ಗಂಡನ ಮನೆ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಬಂದಿದ್ದಾರೆ.. ಕಾರಿನಲ್ಲಿ ಸಹೋದರಿಯನ್ನ ಬಿಟ್ಟು ವಾಪಸು ಹೋಗೋವಾಗ, ಗ್ರಾಮದ ರಸ್ತೆ ಮೇಲೆಯೇ ಆಟೋ ನಿಲ್ಲಿಸಲಾಗಿತ್ತು. ಆಟೋ ಸೈಡಗೆ ಹಾಕಿ ನಮ್ಮ ಕಾರು ಹೋಗೊಕೆ ಸಾಧ್ಯವಾಗ್ತಿಲ್ಲ ಎಂದು ಮನವಿ ಮಾಡಿದ್ದಾರೆ. ಇಷ್ಟೇ ಅಂದಿದ್ದೇ ತಡ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರಾದ ಸೈಫಾಬ್ ಒಂಟಿ, ಆರಿಫ್, ಆಸಿಫ್, ಇಮ್ರಾನ್ ಸೇರಿಕೊಂಡು ಇಬ್ಬರು ಸಹೋದರರ ಮೇಲೆ ಮುಗಿಬಿದ್ದು, ಕಟ್ಟಿಗೆಯಿಂದ ಹೊಡೆದಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ತೋಟೆಂದ್ರ ಮತ್ತು ಸುನಿಲ್ ಕುಟುಂಬಸ್ಥರುಗ್ಗೆ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾ ಕೇಸ್​​ ಮತ್ತೆ ಮುನ್ನೆಲೆಗೆ: ಯುಟಿ ಖಾದರ್​​ ಪತ್ರಕ್ಕೆ ಹಿಂದೂ ಸಂಘಟನೆಗಳು ಸಿಡಿದಿದ್ದೇಕೆ?

ಹಲ್ಲೊಗೊಳಗಾದವರು ನೀಡಿದ ದೂರಿನಲ್ಲೇನಿದೆ?

ಆಳಂದ ತಾಲೂಕಿನ ಗೋಳಾ ಗ್ರಾಮದಲ್ಲಿನ ಲಕ್ಕಮ್ಮದೇವಿ ದೇವಸ್ಥಾನದಲ್ಲಿ ದೇವರ ಕಾರ್ಯ ಏರ್ಪಡಿಸಲಾಗಿತ್ತು.. ಕಾರ್ಯವನ್ನ ಮುಗಿದ ಬಳಿಕ ತಮ್ಮ ಸಹೋದರಿಯನ್ನ ಗೋಳಾ ಗ್ರಾಮದಿಂದ ಭೀಮಳ್ಳಿ ಗ್ರಾಮಕ್ಕೆ ಕರೆತಂದು ಬಿಡಲು ಬಂದಿದ್ದು, ವಾಪಾಸ್ ಹೋಗೋವಾಗ ಸಹೋದರಿ ಮನೆ ಬಳಿ ರಸ್ತೆ ಮೇಲೆ ನಿಲ್ಲಿಸಲಾಗಿದ್ದ ಎರಡು ಆಟೋಗಳನ್ನ ಸೈಡ್‌ಗೆ ಹಾಕಿ ಅಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಇನ್ನು ಗಲಾಟೆ ಬಿಡಿಸಲು ಬಂದಂತ ತಾಯಿ ಮತ್ತು ಸಹೋದರಿ ಮಕ್ಕಳ ಮೇಲೆಯೋ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದಲ್ಲದೇ ಬಾಯಿಗೆ ಬಂದಹಾಗೇ ಬೈಯ್ದು ನಿಮ್ಮನ್ನ ಈ ಊರಿನಿಂದ ಆಚೆ ಹೋಗೊಕೆ ಬಿಡೋದಿಲ್ಲ ಅಂತಾ ಧಮ್ಕಿ ಹಾಕಿದ್ದು, ತಮಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಹಲ್ಲೆಗೊಳಗಾದ ತೋಟೆಂದ್ರ ಮತ್ತು ಸುನೀಲ್ ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಹಲ್ಲೆ ಮಾಡಿದ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ: ವಾಹನಗಳನ್ನ ತೊಳೆಯದಂತೆ ಸೂಚನೆ – Kannada News | Water Crisis: Thumbay Dam Levels Drop, Bi Daily Supply From May 1st

ಮಂಗಳೂರು, ತುಂಬೆ ವೆಂಟೆಡ್ ಡ್ಯಾಂImage Credit source: tv9 kannada

ಮಂಗಳೂರು, ಏಪ್ರಿಲ್​ 25: ರಾಜ್ಯದಲ್ಲಿ ಕುಡಿಯುವ ನೀರಿಗೆ (drinking water) ಬರ ಎದುರಾಗಿದೆ. ಕಡಲನಗರಿ ಮಂಗಳೂರಿನಲ್ಲೂ (mangaluru) ನೀರಿನ ಕೊರತೆ ಕಂಡುಬಂದಿದೆ. ನಗರಕ್ಕೆ ನೀರು ಪೊರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿತವಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಎರಡು ದಿನಕ್ಕೊಮ್ಮೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನಿರ್ಧಾರ ಮಾಡಿದೆ.

ಕರಾವಳಿಯಲ್ಲಿ ಸದ್ಯ ಬಿಸಿಲ ಝಳ ಹೆಚ್ಚುತ್ತಿದೆ. ಬೇಸಿಗೆಯ ಬೇಗೆಯಿಂದ ಜನ ಮನೆಯಿಂದ ಹೊರ ಬರುವುದಕ್ಕೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ತಾಪಮಾನ ಏರಿಕೆಯಿಂದಾಗಿ ಬಾವಿ, ನದಿಗಳಲ್ಲೂ ನೀರು ಬತ್ತಿ ಹೋಗಿದೆ. ಅದರಲ್ಲೂ ಕರಾವಳಿಯ ಜೀವನದಿ ನೇತ್ರಾವತಿಯ ಒಡಲಲ್ಲಿ ನೀರಿನ ಮಟ್ಟ ಸಾಕಷ್ಟು ಕುಸಿದಿದೆ. ಹೀಗಾಗಿ ಮಂಗಳೂರು ನಗರಕ್ಕೆ ನೀರು ಪೂರೈಸುತ್ತಿರುವ ತುಂಬೆ ವೆಂಟೆಡ್ ಡ್ಯಾಮ್‌ನಲ್ಲೂ ನೀರಿಗೆ ಬರಬಂದಿದೆ.

ಮೇ 1ರಿಂದ ಎರಡು ದಿನಕ್ಕೊಮ್ಮೆ ನೀರು

ಡ್ಯಾಮ್‌‌‌ನಲ್ಲಿ ನೀರಿನ ಮಟ್ಟ 4.53 ಮೀಟರ್‌ಗೆ ಇಳಿಕೆಯಾಗಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ನಗರಕ್ಕೆ ಮೇ 1ರಿಂದ ಎರಡು ದಿನಕ್ಕೊಮ್ಮೆ ನೀರಿನ ಸರಬರಾಜು ಮಾಡುವ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ಮೀನುಗಾರಿಕೆಗೆ ತಟ್ಟಿದ ತಾಪಮಾನ ಬಿಸಿ: ಮತ್ಸ್ಯಕ್ಷಾಮ, ಮೀನುಗಾರಿಕೆ ಸ್ಥಗಿತಗೊಳಿಸಿ ದಡ ಸೇರಿದ ಸಾವಿರಾರು ಬೋಟ್‌ಗಳು!

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಐದೂವರೆ ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ತುಂಬೆ ಡ್ಯಾಂ‌ನಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಂಗಳೂರು ನಗರಕ್ಕೆ ಪ್ರತಿ ದಿನ ಸುಮಾರು 160 ಎಂಎಲ್​​ಡಿ ನೀರನ್ನು ಪಂಪಿಂಗ್ ಮಾಡಲಾಗುತ್ತೆ. ಸದ್ಯ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ಮಾಡುವುದರಿಂದ ನಿತ್ಯ ಸುಮಾರು 40ರಿಂದ 50 ಎಂಎಲ್​ಡಿ ನೀರು ಉಳಿಕೆಯಾಗಲಿದೆ.

ಗಾರ್ಡನಿಂಗ್‌, ವಾಹನ ತೊಳೆಯುವುದಕ್ಕೆ ನೀರು ಬಳಸುವಂತ್ತಿಲ್ಲ  

ಸದ್ಯ ಎಎಂಆರ್​ ಮತ್ತು ಬಿಳಿಯೂರು ಡ್ಯಾಂನಲ್ಲಿರುವ ನೀರಿನ ಸಂಗ್ರಹದ ಲೆಕ್ಕಚಾರದಂತೆ ಜೂನ್ ಮೊದಲ ವಾರದವರೆಗೆ ಕುಡಿಯುವ ನೀರಿನ ಪೂರೈಕೆಯನ್ನು ಮ್ಯಾನೇಜ್ ಮಾಡಬಹುದಾಗಿದೆ. ಇದರ ಜೊತೆ ತುಂಬೆ ವೆಂಟೆಡ್ ಡ್ಯಾಂನ ಕೆಳಭಾಗದಲ್ಲಿರುವ ನೀರನ್ನು ಸಹ ಡ್ಯಾಂಗೆ ಮತ್ತೆ ಪಂಪಿಂಗ್ ಮಾಡಬಹುದಾಗಿದೆ. ಹೀಗಾಗಿ ನೀರನ್ನು ಗಾರ್ಡನಿಂಗ್‌ಗೆ, ವಾಹನ ತೊಳೆಯುವುದಕ್ಕೆ ಬಳಸದಂತೆ ಪಾಲಿಕೆ ಸೂಚನೆ ನೀಡಿದೆ.

ಇದನ್ನೂ ಓದಿ: ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿಬಿದ್ದು ಅವಘಡ, ವಿಡಿಯೋ ವೈರಲ್

ಜೂನ್ ಮೊದಲ ವಾರದೊಳಗೆ ಮುಂಗಾರು ಬಂದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಹೀಗಾಗಿ ಶೀಘ್ರ ವರುಣ ದೇವ ಕೃಪೆ ತೋರಲಿ ಎಂಬ ಪ್ರಾರ್ಥನೆ ಎಲ್ಲರದ್ದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ – Kannada News | BJP MLA Anupama Jaiswal injured in Bahraich during effigy burning watch video

ನವದೆಹಲಿ, ಏಪ್ರಿಲ್ 25: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು (Women’s Reservation Bill) ಬೆಂಬಲಿಸಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರತಿಕೃತಿ ದಹನ ಮಾಡುವಾಗ ಸದರ್ ಶಾಸಕಿ ಅನುಪಮಾ ಜೈಸ್ವಾಲ್ ಅವರ ಮೈಗೆ ಸ್ವಲ್ಪ ಬೆಂಕಿ ತಾಗಿದೆ. ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಗಂಭೀರ ಹಾನಿಯಿಂದ ಪಾರಾಗಿದ್ದಾರೆ. ನಾರಿ ವಂದನ್ ಕಾಯ್ದೆ ಅಭಿಯಾನದಡಿ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿ ವಿರೋಧ ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಲಾಯಿತು. ಈ ವೇಳೆ ಪ್ರತಿಕೃತಿಯ ಜ್ವಾಲೆಗಳು ಅನಿರೀಕ್ಷಿತವಾಗಿ ತೀವ್ರಗೊಂಡು ಅನುಪಮಾ ಜೈಸ್ವಾಲ್ ಅವರಿಗೂ ಬೆಂಕಿ ತಾಗಿತು. ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಾವುದೇ ಗಂಭೀರ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇತಿಹಾಸ ನಿರ್ಮಿಸಿದ ಕರ್ನಲ್ ನೊರೀನ್; ಬೆಂಗಳೂರಿನ MEG ತರಬೇತಿ ಬೆಟಾಲಿಯನ್ ಮುನ್ನಡೆಸುತ್ತಿರುವ ಮೊದಲ ಮಹಿಳಾ ಅಧಿಕಾರಿ! – Kannada News | Colonel Noreen John: First Woman to Command Madras Sappers MEG Training Battalion

ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಕೇವಲ ಭಾಗವಹಿಸುವುದು ಮಾತ್ರವಲ್ಲದೆ, ಪ್ರಮುಖ ವಿಭಾಗಗಳನ್ನು ಮುನ್ನಡೆಸುವ ಮೂಲಕ ಇತಿಹಾಸ ನಿರ್ಮಿಸುತ್ತಿದ್ದಾರೆ. ಈ ಹಾದಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (MEG) ಕೇಂದ್ರದ ತರಬೇತಿ ಬೆಟಾಲಿಯನ್ ಅನ್ನು ಕಮಾಂಡ್ ಮಾಡಲು ಕರ್ನಲ್ ನೊರೀನ್ ಶಾನೆಟ್ ಜಾನ್ ಅವರನ್ನು ನೇಮಿಸಲಾಗಿದೆ. ಈ ಮೂಲಕ, ಸೈನ್ಯದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಎಂಜಿನಿಯರಿಂಗ್ ಘಟಕವಾದ ‘ಮದ್ರಾಸ್ ಸಪ್ಪರ್ಸ್’ನ ತರಬೇತಿ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿರುವ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದ ಅಗ್ನಿವೀರ್‌ಗಳಿಗೆ ತರಬೇತಿ ನೀಡುವಲ್ಲಿ ಇವರು ಈಗ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಕರ್ನಲ್ ನೊರೀನ್ ಯಾರು?

ಕರ್ನಲ್ ನೊರೀನ್ ಅವರ ಈ ಸಾಧನೆಯ ಬುನಾದಿ ಅವರ ವಿದ್ಯಾರ್ಥಿ ಜೀವನದ ಎನ್‌ಸಿಸಿ (NCC) ದಿನಗಳಲ್ಲೇ ನಿರ್ಮಾಣವಾಗಿತ್ತು. ಕೇರಳದ ಕ್ಯಾಲಿಕಟ್‌ನ ಪ್ರಾವಿಡೆನ್ಸ್ ಮಹಿಳಾ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅವರು ಎನ್‌ಸಿಸಿ ಚಟುವಟಿಕೆಗಳಲ್ಲಿ ಅತ್ಯಂತ ಸಕ್ರಿಯರಾಗಿದ್ದರು. 1989ರ ಗಣರಾಜ್ಯೋತ್ಸವ ಶಿಬಿರದಲ್ಲಿ ‘ಅಖಿಲ ಭಾರತ ಅತ್ಯುತ್ತಮ ಕೆಡೆಟ್’ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದ ಅವರು, 1993ರಲ್ಲಿ ಅತ್ಯುತ್ತಮ ಪರೇಡ್ ಕಮಾಂಡರ್ ಗೌರವಕ್ಕೂ ಪಾತ್ರರಾಗಿದ್ದರು. ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ರ್ಯಾಲಿಯಲ್ಲಿ ‘ಗಾರ್ಡ್ ಆಫ್ ಹಾನರ್’ ಅನ್ನು ಮುನ್ನಡೆಸಿದ್ದ ಅನುಭವಗಳು ಅವರಲ್ಲಿ ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿದವು.

ಮಾರ್ಚ್ 7, 1998 ರಂದು ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ಗೆ ನಿಯೋಜನೆಗೊಂಡ ಕರ್ನಲ್ ನೊರೀನ್, ಕಳೆದ 26 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಅಲಹಾಬಾದ್‌ನ ಸೇವೆಗಳ ಆಯ್ಕೆ ಮಂಡಳಿಯಲ್ಲಿ (SSB) ಹಿರಿಯ ಗುಂಪು ಪರೀಕ್ಷಾ ಅಧಿಕಾರಿಯಾಗಿ ಕೆಲಸ ಮಾಡಿ, ಭವಿಷ್ಯದ ಸೇನಾ ಅಧಿಕಾರಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಅವರ ಸಮರ್ಪಿತ ಸೇವೆಯನ್ನು ಗುರುತಿಸಿ ಜನವರಿ 2020 ರಲ್ಲಿ ಅವರಿಗೆ ಶಾಶ್ವತ ಆಯೋಗ (Permanent Commission) ನೀಡಲಾಯಿತು ಮತ್ತು ಜನವರಿ 2023 ರಲ್ಲಿ ಅವರು ಕರ್ನಲ್ ಹುದ್ದೆಗೆ ಪದೋನ್ನತಿ ಪಡೆದರು.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ವೈಯಕ್ತಿಕ ಜೀವನದಲ್ಲೂ ಕರ್ನಲ್ ನೊರೀನ್ ಅವರಿಗೆ ಸೈನ್ಯದ ಬೆಂಬಲವಿದೆ. ಅವರು ಈಗ ನಿವೃತ್ತರಾಗಿರುವ ಕರ್ನಲ್ ಮೋನಿಶ್ ದಾಸ್ ಅವರನ್ನು ವಿವಾಹವಾಗಿದ್ದು, ಅವರ ಪತಿಯೂ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ. ಒಬ್ಬ ಸಾಮಾನ್ಯ ಎನ್‌ಸಿಸಿ ಕೆಡೆಟ್‌ನಿಂದ ಹಿಡಿದು ಇಂದು ಪ್ರತಿಷ್ಠಿತ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್‌ವರೆಗೆ ಬೆಳೆದು ಬಂದಿರುವ ನೊರೀನ್ ಅವರ ಪ್ರಯಾಣವು ಸಮವಸ್ತ್ರ ಧರಿಸಿ ರಾಷ್ಟ್ರಸೇವೆ ಮಾಡಬಯಸುವ ದೇಶದ ಲಕ್ಷಾಂತರ ಯುವತಿಯರಿಗೆ ದೊಡ್ಡ ಸ್ಫೂರ್ತಿಯಾಗಿದೆ. ಅವರ ನಾಯಕತ್ವವು ಸೈನ್ಯದ ಎಂಜಿನಿಯರಿಂಗ್ ವಿಭಾಗವನ್ನು ಬಲಪಡಿಸುವುದಲ್ಲದೆ, ಸಾಮರ್ಥ್ಯಕ್ಕೆ ಲಿಂಗದ ಹಂಗಿಲ್ಲ (No boundary of gender) ಎಂಬುದನ್ನು ಸಾಬೀತುಪಡಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:39 pm, Sat, 25 April 26

Source link

‘ಒದೆ ತಿಂತೀಯ, ಅವನನ್ನ ಬದುಕೋಕೆ ಬಿಡಲ್ಲ’: ಚೇತನ್ ವಿರುದ್ಧ ಸಾರಾ ಕೆಂಡ – Kannada News | Sa Ra Govindu Launches Sharp verbal Attack Against Chetan Ahimsa for talking about Dr Rajkumar

ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನಿನ್ನೆ ಡಾ ರಾಜ್​ಕುಮಾರ್ (Dr Rajkumar) ಸಮಾಧಿಯ ಬಗ್ಗೆ ಮಾಡಿರುವ ಪೋಸ್ಟ್​​ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಚೇತನ್ ಅಹಿಂಸ ವಿರುದ್ಧ ಈಗಾಗಲೇ ಕೆಲ ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳ ಸಂಘಗಳು ಪೊಲೀಸ್ ಠಾಣೆಯಲ್ಲಿ ಮತ್ತು ಚಲನಚಿತ್ರ ಸಂಘಗಳಿಗೆ ದೂರು ನೀಡಿವೆ. ಇದೀಗ ರಾಜ್​ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದು, ಚೇತನ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ಜೊತೆಗೆ ಚೇತನ್ ಅವರಿಗೆ ನೇರವಾಗಿ, ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ‘ಈ ಬಾರಿ ಚೇತನ್​​ಗೆ ಒದೆ ಬೀಳುವುದು ಖಂಡಿತ’ ಎಂದಿದ್ದಾರೆ.

‘ಈ ಹಿಂದೆ ಗೌರಿ ಹತ್ಯೆ ನಡೆದ ಸಂದರ್ಭದಲ್ಲಿ ಆತ ವಾಟಾಳ್ ನಾಗರಾಜ್ ಜೊತೆಗೆ ನಡೆದುಕೊಂಡ ರೀತಿಗೆ ಅಂದೇ ನನ್ನ ಕೈಯಲ್ಲಿ ಒದೆ ತಿನ್ನುತ್ತಿದ್ದ ಆದರೆ ಅಂದು ಪೊಲೀಸರು ಆತನನ್ನು ಕಾಪಾಡಿದರು. ಆದರೆ ಈಗ ಖಂಡಿತ ಒದೆ ತಿನ್ನುತ್ತಾನೆ. ಆತ ಮಾತನಾಡಿರುವುದು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಡಾ ರಾಜ್​ಕುಮಾರ್ ಅವರ ಬಗ್ಗೆ. ಅವರ ಸಾಧನೆ, ಸೇವೆಯ ಬಗ್ಗೆ ಎಳ್ಳಷ್ಟೂ ಸಹ ಆತನಿಗೆ ಗೊತ್ತಿಲ್ಲ. ಈ ಬಾರಿ ಜನ, ಅಭಿಮಾನಿಗಳು ಸುಮ್ಮನೆ ಬಿಡಲ್ಲ. ಸಾಮಾಜಿಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಅವನನ್ನು ಕೂಡಲೇ ಗಡಿಪಾರು ಮಾಡಬೇಕು, ಅವನು ರಾಜ್ಯದಲ್ಲೇ ಇದ್ದರೆ ಅವನನ್ನು ಬದುಕಲು ಬಿಡಲ್ಲ’ ಎಂದು ಸಾರಾ ಗೋವಿಂದು ಹೇಳಿದ್ದಾರೆ.

‘ಬಹಳಷ್ಟು ಜನರನ್ನು ಆತನ ಮಾತು ಕೆರಳಿಸಿದೆ. ಕ್ಷಮೆ ಕೇಳುವುದಕ್ಕೂ ಸಹ ಅವನಿಗೆ ಯೋಗ್ಯತೆ ಇಲ್ಲ. ಕರ್ನಾಟಕಕ್ಕೆ ಅವನ (ಚೇತನ್ ಅಹಿಂಸ) ಕೊಡುವೆ ಏನು? ಎಷ್ಟು ಸಿನಿಮಾ ಮಾಡಿದ್ದಾನೆ ಅವನು? ತಿರ್ಕೋಂಡು ತಿಂತಿದ್ದಾನೆ. ಹಾದಿ ಬೀದಿಯಲ್ಲಿ ಬೇಡಿಕೊಂಡು ತಿಂತಿದ್ದೀಯ? ನೀನು ಮೇರು ನಟರ ಬಗ್ಗೆ ಮಾತನಾಡುತ್ತೀಯ. ಆತನೊಬ್ಬ ನಿರುದ್ಯೋಗಿ, ಕೈಯಲ್ಲಿ ಮಾಡೋಕೆ ಕೆಲಸ ಇಲ್ಲ, ಮೊದಲು ಕೆಲಸ ಹುಡುಕಿಕೊ. ನಾವು ಸರ್ಕಾರದ ಮೇಲೆ ಒತ್ತಡ ಹಾಕುತ್ತೀವಿ, ಆತನನ್ನು ಈ ಕೂಡಲೇ ರಾಜ್ಯದಿಂದ ಹೊರಗೆ ಹಾಕಬೇಕು’ ಎಂದಿದ್ದಾರೆ.

‘ಹೊರದೇಶದಲ್ಲಿ ಹುಟ್ಟಿಬಂದು ಅಲ್ಲಿನ ಸಂಸ್ಕೃತಿ ಮೈಗೂಡಿಸಿಕೊಂಡಿದ್ದಾನೆ. ಅವನಿಗೆ ಇಲ್ಲಿನ ಸಂಸ್ಕೃತಿ, ಸಂಸ್ಕಾರ ಇಲ್ಲ. ಅಣ್ಣಾವ್ರಿಗೆ ಕೊಟ್ಟಿರುವ ಪ್ರಶಸ್ತಿಗಳ ಬಗ್ಗೆ ಮಾತನಾಡುತ್ತಾನೆ ಅವನು. ಭಾವನಾತ್ಮಕವಾಗಿ ನೋಡಬೇಡಿ ಅನ್ನೋದು ಸಹ ತಪ್ಪು. ನಾವು ಭಾವನಾತ್ಮಕವಾಗಿಯೇ ನೋಡುವುದು. ಅಣ್ಣಾವ್ರು, ವಿಷ್ಣುವರ್ಧನ್ ಅವರಂಥಹಾವರನ್ನು ಸಹ ನಾವು ನೆನಪಿಸಿಕೊಳ್ಳದೇ ಹೋದರೆ ಹೇಗೆ? ಚೇತನ್, ಅಣ್ಣಾವ್ರ ಬಗ್ಗೆ ಮಾತನಾಡಿ ಬಹಳ ಚಿಕ್ಕವನಾಗಿದ್ದಾನೆ. ಅವನೊಬ್ಬ ಶುದ್ಧ ಹುಚ್ಚ, ಪ್ರಚಾರ ಪಡೆಯಲು ಮಾತ್ರವೇ ಆತ ಹೀಗೆಲ್ಲ ಮಾಡ್ತಿದ್ದಾನೆ. ನಿಜವಾಗಿಯೂ ಕನ್ನಡಪರ ಆಗಿದ್ದರೆ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವವರ ಮುಂದೆ ಹೋಗಿ ಧರಣಿ ಮಾಡು, ನಿನ್ನ ಹಿಂದೆ ನಾಲ್ಕು ಜನ ಇಲ್ಲ’ ಎಂದೆಲ್ಲ ಕಟುವಾಗಿಯೇ ಸಾರಾ ಗೋವಿಂದು ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗ: ಲವ್ ವಿಚಾರಕ್ಕೆ ಯುವಕನ ಮೇಲೆ ಡೆಡ್ಲಿ ಅಟ್ಯಾಕ್; ತಲೆಯಲ್ಲೇ ಮಚ್ಚು ಬಿಟ್ಟು ಪರಾರಿ – Kannada News | Machete Attack: Teen Critically Injured in Love Affair Violence

ಶಿವಮೊಗ್ಗ, ಏಪ್ರಿಲ್​ 25: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ (shivamogga) ಮತ್ತೆ ನೆತ್ತರು ಹರಿದಿದೆ. ಲವ್ (Love)​​ ವಿಚಾರಕ್ಕೆ ಶುರುವಾದ ಜಗಳವೊಂದು ಕೊಲೆ ಯತ್ನದಲ್ಲಿ ಅಂತ್ಯವಾಗಿದ್ದು, 17 ವರ್ಷದ ಯುವಕನ ತಲೆಯನ್ನ ಮಚ್ಚಿನಿಂದ ಸೀಳಿ ವಿಕೃತಿ ಮೆರೆಯಲಾಗಿದೆ. ತಲೆಯಲ್ಲೇ ಮಚ್ಚು ಸಿಲುಕಿಕೊಂಡ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ.

ನಡೆದಿದ್ದೇನು?

ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿ ಲವ್​​ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಆರೋಪಿ ಸೊಹೇಲ್ ಎಂಬಾತನಿಗೆ ಯುವತಿಯೊಬ್ಬಳ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ, ತಾನು ಮದುವೆಯಾಗಲಿರುವ ಯುವತಿಯನ್ನು 17 ವರ್ಷದ ಅಪ್ರಾಪ್ತ ಯುವಕ ಪ್ರೀತಿಸುತ್ತಿದ್ದಾನೆ ಮತ್ತು ಆಕೆಯ ಸಂಪರ್ಕದಲ್ಲಿದ್ದಾನೆ ಎಂಬ ವಿಷಯ ಸೊಹೇಲ್​ಗೆ ತಿಳಿದು ಕೆಂಡಾಮಂಡಲವಾಗಿದ್ದ. ಇದೇ ಸೇಡಿನಿಂದ ಯುವಕನನ್ನು ಮುಗಿಸಲು ಸೊಹೇಲ್ ಸಂಚು ರೂಪಿಸಿದ್ದ.

ತಲೆಯಲ್ಲೇ ಮಚ್ಚು ಬಿಟ್ಟು ಕ್ರೌರ್ಯ

ನಿನ್ನೆ ರಾತ್ರಿ ಸೊಹೇಲ್ ತನ್ನ ಐವರು ಸಹಚರರೊಂದಿಗೆ ಯುವಕನ ಮನೆ ಬಳಿ ಹೊಂಚು ಹಾಕಿ ಕುಳಿತಿದ್ದ. ಯುವಕ ಕಾಣಿಸಿಕೊಳ್ಳುತ್ತಿದ್ದಂತೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಮಚ್ಚಿನಿಂದ ತಲೆಗೆ ಹೊಡೆದಾಗ ಆ ಮಚ್ಚು ತಲೆಯ ಒಳಗೇ ಸಿಲುಕಿಕೊಂಡಿದೆ. ನನ್ನವಳ ತಂಟೆಗೆ ಬಂದರೆ ಇದೇ ಗತಿ ಎಂಬಂತೆ ಮಚ್ಚನ್ನು ತಲೆಯಲ್ಲೇ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮದ್ವೆಗೆ ಕೆಲವೇ ಗಂಟೆಗಳಿರುವಾಗಲೇ ವಧು ನಾಪತ್ತೆ: ಪೋಷಕರಲ್ಲಿ ಅದೊಂದು ಅನುಮಾನ

ಹಿಂದೆ-ಮುಂದೆ ನೋಡದೆ ಸೊಹೇಲ್​​ 17 ವರ್ಷದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ಇದರಿಂದ ಆತನ ಸ್ಥಿತಿ ಗಂಭೀರವಾಗಿದೆ. ವೈದ್ಯರು ಹರಸಾಹಸ ಪಟ್ಟು ತಲೆಯಲ್ಲಿದ್ದ ಮಚ್ಚನ್ನು ಹೊರ ತೆಗೆದಿದ್ದಾರೆ. ಸದ್ಯ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಘಟನೆಯಿಂದ ವಾದಿ ಎ ಹುದಾ ಬಡಾವಣೆ ಮತ್ತು ನಗರದ ಜನರು ಬೆಚ್ಚಿಬಿದ್ದಿದ್ದಾರೆ. ತುಂಗಾ ನಗರ ಪೊಲೀಸರು ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ ಈಗಾಗಲೇ ಕೆಲವರನ್ನು ವಶಕ್ಕೆ ಕೂಡ ಪಡೆದುಕೊಂಡಿದ್ದಾರೆ. ಇನ್ನು ನಾಪತ್ತೆಯಾದ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

ಇದನ್ನೂ ಓದಿ: ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜತೆ ಸಂಸಾರ: ಇದೇನಿದು ವಿದ್ಯೆ ಕಲಿಸುವ ಗುರುವಿನ ಆಟ?

ಲವ್ ವಿಚಾರಕ್ಕೆ ಯುವಕರ ನಡುವೆ ಶುರುವಾದ ಗಲಾಟೆ ಕೊಲೆ ಮಾಡುವ ಹಂತಕ್ಕೆ ಹೋಗಿದ್ದು ಮಾತ್ರ ಆತಂಕ ಸೃಷ್ಟಿಸಿದೆ. ಅತ್ತ 17 ವರ್ಷದ ಯುವಕ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೊಲೀಸಪ್ಪನ ಪ್ರೇಮ ಪುರಾಣ; ಕಾನ್​ಸ್ಟೆಬಲ್​ನ​ ಹೆಂಡತಿ, ಮಗುವಿಗೆ ಚಾಕುವಿನಿಂದ ಇರಿದು ಕೊಂದ ಪ್ರೇಯಸಿ – Kannada News | Chhattisgarh Constable’s Lover kills His Wife and Son in house, Daughters Critical

ರಾಯ್ಪುರ, ಏಪ್ರಿಲ್ 25: ಛತ್ತೀಸ್​​ಗಢದಲ್ಲಿ ಪೊಲೀಸ್ ಕಾನ್​ಸ್ಟೆಬಲ್​ನ ಲವ್ ಸ್ಟೋರಿಗೆ (Love Story) ಆತನ ಇಡೀ ಕುಟುಂಬವೇ ಛಿದ್ರವಾಗಿದೆ. ಮದುವೆಯಾಗಿ, ಹೆಂಡತಿಗೆ ಮೂರು ಮಕ್ಕಳನ್ನು ಕರುಣಿಸಿದ್ದರೂ ಇನ್ನೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದ ಕಾನ್​ಸ್ಟೆಬಲ್ ಆಕೆಯ ಮನೆಯಲ್ಲೇ ಇರುತ್ತಿದ್ದ. ಇದು ಆತನ ಹೆಂಡತಿಗೂ ಗೊತ್ತಿತ್ತು. ಆದರೆ, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಆಕೆ ಅಸಹಾಯಕಳಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಆತ ತನ್ನ ಮನೆಯಲ್ಲಿದ್ದಾಗಲೂ ಆ ಪ್ರೇಯಸಿ ಆಗಾಗ ಬಂದು ಆತನ ಹೆಂಡತಿ, ಮಕ್ಕಳ ಮುಂದೆಯೇ ಆತನೊಂದಿಗೆ ಸಲ್ಲಾಪ ನಡೆಸುತ್ತಿದ್ದಳು.

ಮದುವೆಯಾಗಿ 3 ಮಕ್ಕಳಿದ್ದ ಪೊಲೀಸ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ 25 ವರ್ಷದ ಯುವತಿ ಈ ಬಾರಿ ಆತನಿಂದ ಆತನ ಕುಟುಂಬವನ್ನು ಸಂಪೂರ್ಣವಾಗಿ ದೂರ ಮಾಡಲೆಂದೇ ಬಂದಿದ್ದಳು. ಕಾನ್ಸ್‌ಟೇಬಲ್‌ನ ಮನೆಗೆ ಬಲವಂತವಾಗಿ ನುಗ್ಗಿದ ಆಕೆ ಆತನ ಪತ್ನಿ ಮತ್ತು ಮೂವರು ಮಕ್ಕಳನ್ನು ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ತೀವ್ರವಾಗಿ ಗಾಯಗೊಂಡ ಕಾನ್​ಸ್ಟೆಬಲ್​ನ ಹೆಂಡತಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಡಬಾರದ ತಪ್ಪು ಮಾಡಿದ್ದು ಪೊಲೀಸ್ ಆದರೂ ಶಿಕ್ಷೆ ಅನುಭವಿಸಿದ್ದು ಮಾತ್ರ ಆತನ ಹೆಂಡತಿ ಮತ್ತು ಮಕ್ಕಳು.

ಇದನ್ನೂ ಓದಿ: ಶಾಲೆಗೆ ಹೋಗುತ್ತಿದ್ದಾಗ ರಾಜಸ್ಥಾನದ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಇಂದು ಬೆಳಿಗ್ಗೆ ಆರೋಪಿ ಸರೋಜಿನಿ ಭಾರದ್ವಾಜ್ ತಮ್ಮ ಊರಿಗೆ ಹೋಗಲು ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾಗ ದುರ್ಗದಲ್ಲಿರುವ ಕಾನ್ಸ್‌ಟೇಬಲ್ ಲಲಿತೇಶ್ ಯಾದವ್ ಮನೆಗೆ ನುಗ್ಗಿದ್ದಳು. ಮನೆಯೊಳಗೆ ನುಗ್ಗಿದ ಸರೋಜಿನಿ ಲಲಿತೇಶ್ ಯಾದವ್​​ನ ಹೆಂಡತಿ ರೀನಾ ಯಾದವ್ ಜೊತೆ ಜಗಳವಾಡಿದಳು. ಈ ಜಗಳದ ನಡುವೆ ಆಕೆ ರೀನಾಳಿಗೆ ಚಾಕುವಿನಿಂದ ಚುಚ್ಚಿದಳು. ನಂತರ ಆಕೆಯ ಮೂವರು ಮಕ್ಕಳ ಮೇಲೂ ಹಲ್ಲೆ ನಡೆಸಿದಳು. ರೂಂಗೆ ಹೋಗಿ ಅಲ್ಲಿ ಹಾಸಿಗೆಯ ಮೇಲೆ ನಿದ್ರೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಮಗುವಿಗೆ ಪದೇಪದೇ ಚಾಕುವಿನಿಂದ ಇರಿದ ಹಿನ್ನೆಲೆಯಲ್ಲಿ ಆತ ಅಲ್ಲೇ ಸಾವನ್ನಪ್ಪಿದ್ದಾನೆ. ರೀನಾಳಿಗೂ ಮನಸೋಇಚ್ಛೆ ಇರಿದಿದ್ದರಿಂದ ಆಕೆಯೂ ಮೃತಪಟ್ಟಿದ್ದಾಳೆ. ಇನ್ನಿಬ್ಬರು ಹೆಣ್ಣುಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ವಿಪರ್ಯಾಸವೆಂದರೆ ಸರೋಜಿನಿ ಈ ರೀತಿ ದಾಳಿ ಮಾಡುವಾಗ ಲಲಿತೇಶ್ ಕೂಡ ಅಲ್ಲಿಯೇ ಇದ್ದ. ತನ್ನ ಮಕ್ಕಳ ಮೇಲೆ ಚಾಕುವಿನಿಂದ ಇರಿಯುವಾಗಲೂ ಆತ ಆಕೆಯನ್ನು ತಡೆಯಲಿಲ್ಲ. ಮಕ್ಕಳಿಗೆ ಇರಿಯುವುದನ್ನು ನೋಡಿದ ರೀನಾ ತನ್ನ ಗಂಡನ ಬಳಿ ಮಕ್ಕಳನ್ನು ಕಾಪಾಡುವಂತೆ ಗೋಗರೆದಿದ್ದಾಳೆ. ತನ್ನ ನೋವಿನ ನಡುವೆಯೂ ರೀನಾ ತನ್ನ ಮಕ್ಕಳಾದ ನೈನಾ ಮತ್ತು ತಾನಿಯಾರನ್ನು ಬಾತ್​​ರೂಂನಲ್ಲಿ ಲಾಕ್ ಮಾಡಿ ಸರೋಜಿನಿಯಿಂದ ಕಾಪಾಡಲು ಪ್ರಯತ್ನಿಸಿದ್ದಾಳೆ. ಮಕ್ಕಳನ್ನು ಏನೂ ಮಾಡಬೇಡ ಎಂದು ಸರೋಜಿನಿಯ ಕಾಲು ಹಿಡಿದು ಬೇಡಿಕೊಂಡಿದ್ದಾಳೆ.

ಇದನ್ನೂ ಓದಿ: ಗುರುಕುಲದಲ್ಲಿ 11 ವರ್ಷದ ವಿದ್ಯಾರ್ಥಿಯ ಬರ್ಬರ ಹತ್ಯೆ; ಮೈಮೇಲಿತ್ತು 42 ಗಾಯ

ಅಷ್ಟರಲ್ಲಿ ಗಲಾಟೆ ಕೇಳಿ ಅಕ್ಕಪಕ್ಕದ ಫ್ಲಾಟ್​ನವರು ಬಂದ ಕಾರಣದಿಂದ ಆ ಇಬ್ಬರು ಹೆಣ್ಣುಮಕ್ಕಳ ಜೀವ ಉಳಿದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ ಅಕ್ಕಪಕ್ಕದವರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರು ಲಲಿತೇಶ್ ಯಾದವ್ ಮತ್ತು ಸರೋಜಿನಿಯನ್ನು ಬಂಧಿಸಿದ್ದಾರೆ. ರೀನಾ ಯಾದವ್ ಮತ್ತು ಅವರ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ರೀನಾ ಮತ್ತು ಅವರ ಮಗ ಮೃತಪಟ್ಟಿದ್ದರು. ಪೊಲೀಸರ ಮನೆಯಲ್ಲಿಯೇ ನಡೆದ ಈ ಕೊಲೆ ಆತಂಕ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs PBKS: ಡೆಲ್ಲಿ ಬೌಲರ್​ ಲುಂಗಿ ಎನ್​ಗಿಡಿಗೆ ಗಂಭೀರ ಗಾಯ; ಆಸ್ಪತ್ರೆಗೆ ರವಾನೆ – Kannada News | Lungi Ngidi Suffers Serious Head Injury During Match; IPL Future in Doubt for DC Bowler

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮಹಾ ಅವಘಡವೊಂದು ಸಂಭವಿಸಿದೆ. ಕ್ಯಾಚ್ ಹಿಡಿಯುವ ಯತ್ನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ವೇಗದ ಬೌಲರ್ ಲುಂಗಿ ಎನ್​ಗಿಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂಜಾಬ್ ಬ್ಯಾಟರ್ ಪ್ರಿಯಾಂಶ್ ಆರ್ಯ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ಎನ್​ಗಿಡಿ ಅವರ ತಲೆ ನೆಲಕ್ಕೆ ಜೋರಾಗಿ ಅಪ್ಪಳಿಸಿತು. ಇದರಿಂದ ಎನ್​ಗಿಡಿ ಮೈದಾನದಲ್ಲೇ ಬಿದ್ದು ನೋವಿನಲ್ಲಿ ನರಳಾಡಲಾರಂಬಿಸಿದರು.

ಎನ್​ಗಿಡಿ ಅವರ ಗಾಯದ ತೀವ್ರತೆ ಎಷ್ಟಿತ್ತೆಂದರೆ ಅವರಿಗೆ ಮೇಲೇಳಲು ಸಾಧ್ಯವಾಗಲಿಲ್ಲ. ಕೂಡಲೇ ಮೈದಾನಕ್ಕೆ ಆಗಮನಿಸಿದ ಡೆಲ್ಲಿ ತಂಡದ ಫಿಸಿಯೋ ಎನ್​ಗಿಡಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೂ ಎನ್​ಗಿಡಿ ಚೇತರಿಸಿಕೊಳ್ಳುವಂತೆ ಕಾಣಲಿಲ್ಲ. ಕೂಡಲೇ ಸ್ಟ್ರೆಚರ್ ಮೂಲಕ ಎನ್​ಗಿಡಿ ಅವರನ್ನು ಡಗೌಟ್​ಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಗಾಯದ ಗಂಭೀರತೆಯನ್ನು ಅರಿತು ಕೂಡಲೇ ಆಂಬುಲೆನ್ಸ್ ಅನ್ನು ಮೈದಾನಕ್ಕೆ ಕರೆತರಲಾಯಿತು. ನಂತರ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಪ್ರಸ್ತುತ ಎನ್​ಗಿಡಿ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಬಳಿಕವಷ್ಟೇ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂದು ತಿಳಿಯಲಿದೆ. ಎನ್​ಗಿಡಿ ಅವರನ್ನು ಸ್ಕ್ಯಾನಿಂಗ್​ ಒಳಪಡಿಸುವ ಸಾಧ್ಯತೆ ಇದ್ದು, ಅದರ ವರದಿ ಬಂದ ಬಳಿಕವಷ್ಟೇ ಅವರ ಚೇತರಿಕೆಯ ಬಗ್ಗೆ ಹಾಗೂ ಅವರ ಲಭ್ಯತೆಯ ಬಗ್ಗೆ ಮಾಹಿತಿ ತಿಳಿಯಲಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಎನ್​ಗಿಡಿ ಚೇತರಿಸಿಕೊಳ್ಳಲು ಸಾಕಷ್ಟು ದಿನಗಳು ಬೇಕಾಗಬಹುದು. ಇದರಿಂದ ಅವರು ಐಪಿಎಲ್​ನಿಂದ ಹೊರಬೀಳುವ ಸಾಧ್ಯತೆಗಳೆ ಹೆಚ್ಚಿವೆ. ಅದೇನೆ ಆಗಲಿ ಎನ್​ಗಿಡಿ ಬೇಗ ಗುಣಮುಖರಾಗಿ ಆಟಕ್ಕೆ ಮರಳುವಂತ್ತಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ವಾಸ್ತವವಾಗಿ ಕಳೆದ 24 ಗಂಟೆಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದು ಎರಡನೇ ಆಘಾತವಾಗಿದೆ. ಈ ಪಂದ್ಯಕ್ಕೂ ಒಂದು ದಿನ ಮೊದಲು ಅಭ್ಯಾಸದ ವೇಳೆ ತಂಡದ ಯುವ ಆಟಗಾರ ಮುಖಕ್ಕೆ ಚೆಂಡು ಬಡಿದು ತೀವ್ರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಕೂಡ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಎನ್​ಗಿಡಿ ಹೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ಇವರಿಬ್ಬರ ಗಾಯದ ತೀವ್ರತೆ ಎಷ್ಟಿದೆ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

Source link