All posts by nagaraj11081993

ನರೇಗಾ ಹೆಸರು ಬದಲಾವಣೆ ವಿರೋಧಿಸಿ ನಾಳೆ ಕಾಂಗ್ರೆಸ್​ನಿಂದ ರಾಜಭವನ ಚಲೋ: ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ – Kannada News | Congress Raj Bhavan Chalo: DK Shivakumar Leads Protest Against MGNREGA Changes in Bengaluru on Jan 27th

ಬೆಂಗಳೂರು, ಜನವರಿ 26: ನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಕ್ರಮಗಳ ವಿರುದ್ಧ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ರಾಜಭವನ ಚಲೋ ಕಾರ್ಯಕ್ರಮದ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಮಂಗಳವಾರ ಫ್ರೀಡಂಪಾರ್ಕ್​​ನಿಂದ ರಾಜಭವನದತ್ತ ನಡೆಯುವ ಈ ಪ್ರತಿಭಟನೆಗೆ ರಾಜ್ಯಾದ್ಯಂತ ಎಲ್ಲ ಶಾಸಕರು, ಎಂಎಲ್​ಸಿಗಳು ಹಾಗೂ ನರೇಗಾ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಈ ಕಾರ್ಯಕ್ರಮದ ಜತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ಕ್ಷೇತ್ರದಲ್ಲೂ ಕನಿಷ್ಠ 5 ಕಿಲೋಮೀಟರ್ ಪಾದಯಾತ್ರೆ ನಡೆಸುವಂತೆ ಸೂಚಿಸಲಾಗಿದೆ. ಮಹಾತ್ಮ ಗಾಂಧೀಜಿ ಅವರ ಹೆಸರಿನಲ್ಲಿ ಸೋನಿಯಾ ಗಾಂಧಿ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ಜಾರಿಗೊಳಿಸಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತರುವುದು ಈ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಪ್ರತಿ ವರ್ಷ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುಮಾರು 6 ಸಾವಿರ ಕೋಟಿ ರೂಪಾಯಿಗಳ ಕೆಲಸ ನಡೆಯುತ್ತಿತ್ತು. ಇದನ್ನು ನಿಲ್ಲಿಸಲು ಹೊಸ ಕಾನೂನು ತರಲಾಗಿದೆ ಎಂದು ಡಿಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಜನವಿರೋಧಿ, ಗ್ರಾಮೀಣ ಅಭಿವೃದ್ಧಿ ವಿರೋಧಿ ಮತ್ತು ಬಡವರ ವಿರೋಧಿ ನೀತಿ ಎಂದು ಅವರು ಖಂಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಜತೆಗಿನ ಒಂದೇ ಒಂದು ಮಾತು: ಪಾಕ್​​ನ ಮಹತ್ವ ಯೋಜನೆ ಭಾರತಕ್ಕೆ ತಂದ ಯುಎಇ – Kannada News | India UAE Strategic Alliance Deepens: Pakistan’s Isolation Amidst Economic Crisis and New Deals

ದೆಹಲಿ, ಜ.26: 77ನೇ ಗಣರಾಜ್ಯೋತ್ಸವದ (2026) ಹೊತ್ತಿನಲ್ಲೇ ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದಲ್ಲಿ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಯುಎಇ (UAE) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಬೆನ್ನಲ್ಲೇ, ಪಾಕಿಸ್ತಾನದ ವಿಮಾನ ನಿಲ್ದಾಣದ ಒಪ್ಪಂದದಿಂದ ಯುಎಇ ಹಿಂದೆ ಸರಿದಿದೆ . ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಯುಎಇಗೆ ಹಸ್ತಾಂತರಿಸಲು ಮಾತುಕತೆ ನಡೆದಿತ್ತು. ಈ ಒಪ್ಪಂದವು ಸುಮಾರು ಆಗಸ್ಟ್ 2025 ರಿಂದ ಚರ್ಚೆಯಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಈ ಒಪ್ಪಂದದ ಮಾತುಕತೆಗಳು ವಿಫಲವಾಗಿವೆ. ಯುಎಇ ಈ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ, ಇದು ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದೆ.

ಜನವರಿ 19, 2026 ರಂದು ಯುಎಇ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ಚರ್ಚೆಯ ನಂತರ ಯುಎಇ ಈಗ ಪಾಕಿಸ್ತಾನದಂತಹ ಸಾಲದ ಸುಳಿಯಲ್ಲಿರುವ ದೇಶಗಳಿಗಿಂತ ಭಾರತದಂತಹ ಸ್ಥಿರ ಮತ್ತು ಬೆಳೆಯುತ್ತಿರುವ ಆರ್ಥಿಕತೆಯ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ ಎಂದು ಹೇಳಲಾಗಿದೆ. ಭಾರತದೊಂದಿಗೆ $200 ಬಿಲಿಯನ್ (Rs. 16,60,000 Crore) ವ್ಯಾಪಾರದ ಗುರಿಯನ್ನು ಯುಎಇ ಹೊಂದಿದೆ. ಈ ಹಿಂದೆ ಯುಎಇ ಪಾಕಿಸ್ತಾನಕ್ಕೆ ಆಪ್ತ ಮಿತ್ರನಾಗಿತ್ತು. ಆದರೆ ಈಗ ರಕ್ಷಣೆ, ತಂತ್ರಜ್ಞಾನ ಮತ್ತು ಶಕ್ತಿಯ ಕ್ಷೇತ್ರದಲ್ಲಿ ಭಾರತದೊಂದಿಗೆ ಯುಎಇ ಮಾಡಿಕೊಳ್ಳುತ್ತಿರುವ ದೊಡ್ಡ ಒಪ್ಪಂದಗಳು ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿ ಮಾಡುತ್ತಿವೆ.

ಗುಜರಾತ್‌ನ ಧೋಲೇರಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಲು ಯುಎಇ ಆಸಕ್ತಿ ತೋರಿದೆ. ಅಂದರೆ ಪಾಕಿಸ್ತಾನದಲ್ಲಿ ಹೂಡಿಕೆ ಮಾಡಬೇಕಿದ್ದ ಹಣ ಈಗ ಭಾರತದ ಕಡೆಗೆ ಹರಿಯುತ್ತಿದೆ. ಈ ಮೂಲಕ ಯುಎಇ ಅಧ್ಯಕ್ಷರ ಭೇಟಿಯು ಭಾರತದ ಪಾಲಿಗೆ ಅತ್ಯಂತ ಯಶಸ್ವಿಯಾಗಿದೆ. ಅದರಲ್ಲೂ ವಿಶೇಷವಾಗಿ ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಆಗಿರುವ ಒಪ್ಪಂದಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿವೆ.

ಭಾರತ – ಯುಎಇ ಪ್ರಮುಖ ಒಪ್ಪಂದಗಳ:

ಭಾರತದ ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ ಮತ್ತು ಲಘು ಶಸ್ತ್ರಾಸ್ತ್ರಗಳನ್ನು (Small Arms) ಜಂಟಿಯಾಗಿ ತಯಾರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಇವುಗಳನ್ನು ಭಾರತ ಮತ್ತು ಯುಎಇ ಸೇನೆಗಳು ಬಳಸುವುದಲ್ಲದೆ, ಇತರ ದೇಶಗಳಿಗೂ ರಫ್ತು ಮಾಡುವ ಗುರಿ ಹೊಂದಲಾಗಿದೆ.ಯುಎಇಯ ಗಗನಯಾತ್ರಿಗಳಿಗೆ ಭಾರತದ ಇಸ್ರೋ (ISRO) ತರಬೇತಿ ನೀಡುವ ಬಗ್ಗೆ ಒಪ್ಪಂದವಾಗಿದೆ. ಮುಂದಿನ ದಿನಗಳಲ್ಲಿ ಭಾರತದ ‘ಗಗನ್ಯಾನ್’ ನೌಕೆಯಲ್ಲಿ ಯುಎಇಯ ಗಗನಯಾತ್ರಿಯೊಬ್ಬರು ಪ್ರಯಾಣಿಸುವ ಸಾಧ್ಯತೆಯಿದೆ. ಕೃತಕ ಬುದ್ಧಿಮತ್ತೆ (AI) ಬಳಸಿ ಸೈಬರ್ ದಾಳಿಗಳನ್ನು ತಡೆಯಲು ಮತ್ತು ಸಮುದ್ರ ಮಾರ್ಗದ ಭದ್ರತೆಯನ್ನು (Maritime Security) ಹೆಚ್ಚಿಸಲು ಜಂಟಿ ಕಾರ್ಯಪಡೆ ರಚಿಸಲಾಗಿದೆ.

ಇದನ್ನೂ ಓದಿ: ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಪಾಕಿಸ್ತಾನದ ಇತ್ತೀಚಿನ ಆರ್ಥಿಕ ಸ್ಥಿತಿ:

ಪಾಕಿಸ್ತಾನವು ಚೀನಾ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಗೆ ನೀಡಬೇಕಾದ ಸಾಲದ ಕಂತುಗಳನ್ನು ತೀರಿಸಲು ಹೆಣಗಾಡುತ್ತಿದೆ. ದೇಶದ ಒಟ್ಟು ಆದಾಯದ ಬಹುಪಾಲು ಸಾಲದ ಬಡ್ಡಿಯನ್ನು ಕಟ್ಟಲೇ ವ್ಯಯವಾಗುತ್ತಿದೆ. ಇದೀಗ ಯುಎಇ ಅಧ್ಯಕ್ಷರು ಪಾಕಿಸ್ತಾನಕ್ಕೆ ಭೇಟಿ ನೀಡುವ ಬದಲು ಭಾರತಕ್ಕೆ ಬಂದಿರುವುದು, ಹೂಡಿಕೆದಾರರಿಗೆ ಪಾಕಿಸ್ತಾನವು ಹೂಡಿಕೆಗೆ ಸುರಕ್ಷಿತವಲ್ಲ ಎಂಬ ಸಂದೇಶ ನೀಡಿದೆ.ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಪಾಕಿಸ್ತಾನವು ತನ್ನ ಪ್ರಮುಖ ಬಂದರುಗಳು (Ports) ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ವಿದೇಶಿ ಕಂಪನಿಗಳಿಗೆ ಗುತ್ತಿಗೆ ನೀಡಲು ಪ್ರಯತ್ನಿಸುತ್ತಿದೆ, ಆದರೆ ಇದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

400 ಕೋಟಿ ದರೋಡೆಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್​: ಹಣ ಆ ಪವರ್​​ಫುಲ್​ ರಾಜಕಾರಣಿಗೆ ಸೇರಿದ್ದಾ? – Kannada News | Chorla Ghat Robbery Case: Does the 400 Crore Belong to a Gujarat Politician? SIT Probe Continues

ಬೆಳಗಾವಿ, ಜನವರಿ 26: ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಾಟ್ ಬಳಿ 400 ಕೋಟಿ ರಾಬರಿ ಪ್ರಕರಣ ವಿಚಾರವಾಗಿ ಬಗೆದಷ್ಟು ಶಾಕಿಂಗ್​​ ವಿಚಾರಗಳು ಬಯಲಾಗ್ತಿವೆ. ಹಣ ತುಂಬಿದ್ದ ಕಂಟೇನರ್​​ಗಳ ಹೈಜಾಕ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ, ಎಸ್‌ಐಟಿಯಿಂದ ತನಿಖೆ ಚುರುಕುಗೊಳಿಸಿದೆ. ಈ ನಡುವೆ ಕೆಲ ಪ್ರಮುಖ ಅಂಶಗಳು ಹುಬ್ಬೇರುವಂತೆ ಮಾಡಿದ್ದು, ಎರಡು ಸಾವಿರ ಮುಖ ಬೆಲೆಯ ನೋಟುಗಳು ಗುಜರಾತ್​​ನ ಪವರ್ ಫುಲ್ ರಾಜಕಾರಣಿಗೆ ಸೇರಿದ್ದು ಎಂಬ ಸುದ್ದಿ ಹರಿದಾಡತೊಡಗಿದೆ.

ಕಿಶೋರ್ ಸಾಳ್ವೆ ಅಲಿಯಾಸ್ ಸೇಠ್ ಬರೀ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ, ನೋಟು ಬದಲಾವಣೆಗಾಗಿ ಗೋವಾದಿಂದ ಹಣ ಸಾಗಿಸಲಾಗುತ್ತಿತ್ತು. ಇದರ ಜವಾಬ್ದಾರಿ ಆರೋಪಿ ವಿರಾಟ್​​ಗೆ ಕಿಶೋರ್ ನೀಡಿದ್ದ. ವಿರಾಟ್ ಹುಡುಗರಿಂದ ಹಣ ಸಾಗಾಟದ ವೇಳೆ ಕಂಟೇನರ್ ಮಿಸ್ಸಿಂಗ್ ಆಗಿದೆ. ಹಣದ ಸಮೇತ ಹುಡುಗರು ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ. ಇನ್ನು ಕಿಶೋರ್ ಮತ್ತು ಜಯೇಶ್ ಮಾತನಾಡಿರುವ ಸಂಭಾಷಣೆಯಲ್ಲಿ ಹಣ ಗುಜರಾತ್​​ನ ರಾಜಕಾರಣಿಗೆ ಸೇರಿದ್ದು ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ. ಹೀಗಾಗಿ ಆಡಿಯೋ ಸಂಭಾಷಣೆ ಹಾಗೂ ವಾಟ್ಸ್ಯಾಪ್​​ ಕಾಲ್ ಸಂಭಾಷಣೆ ಆಧಾರದ ಮೇಲೆ ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಸದ್ಯ ವಿರಾಟ್​​ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ.

ಇದನ್ನೂ ಓದಿ: 400 ಕೋಟಿ ರೂ ರಾಬರಿ; ಚೋರ್ಲಾ ಘಾಟ್​ನಲ್ಲೇ ದರೋಡೆ ನಡೆದಿದ್ದೇಕೆ? ಎಸ್​​ಪಿ ಹೇಳಿದ್ದಿಷ್ಟು

ತನಿಖೆಗೆ ಸಹಕರಿಸದ ಮಹಾರಾಷ್ಟ್ರ ಪೊಲೀಸರು

ಇನ್ನು ರಾಬರಿ ಪ್ರಕರಣ ಸಂಬಂಧ ಕರ್ನಾಟಕ ಪೊಲೀಸರಿಗೆ ಮಹಾರಾಷ್ಟ್ರ ಪೊಲೀಸರು ಸಹಕರಿಸುತ್ತಿಲ್ಲ ಎಂದು ಸಚಿವ ಸತೀಶ್​​ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಯಾರಾದ್ರು ಬಂದು ದೂರು ಕೊಟ್ಟರೆ ನಮ್ಮ ಪೊಲೀಸರು ತನಿಖೆ ಮಾಡ್ತಾರೆ. ಚೋರ್ಲಾ ಘಾಟ್ ಬಹಳ ದೊಡ್ಡದಿದ್ದು ಘಟನೆ ನಡೆದ ಸ್ಥಳ ಮಹಾರಾಷ್ಟ್ರ, ಗೋವಾ ಅಥವಾ ಕರ್ನಾಟಕಕ್ಕೆ ಸೇರಿದ್ದಾ ಎಂಬ ಬಗ್ಗೆ ಗೊಂದಲ ಇದೆ ಎಂದಿದ್ದಾರೆ. 400 ಕೋಟಿ ಕಾಂಗ್ರೆಸ್​​ಗೆ ಸೇರಿದ ಹಣ ಎಂಬ ಮಹಾರಾಷ್ಟ್ರ ಸಿಎಂ ಆರೋಪ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಹಣ ಎಣಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಎಲ್ಲಿ ಘಟನೆ ನಡೆದಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ಅಲ್ಲಿ ನಿಜವಾಗಿ ಏನಾಗಿದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಬಿಜೆಪಿ ವಿರುದ್ಧ ಪ್ರಿಯಾಂಕ್​​ ಖರ್ಗೆ ಕಿಡಿ

ದರೋಡೆಯಾಗಿರುವ 400 ಕೋಟಿ ಹಣ ಯಾರದ್ದು ಏನು ಅಂತಾ ಗೊತ್ತಿಲ್ಲ. ಗೋವಾ, ಗುಜರಾತ್, ಮಹಾರಾಷ್ಟ್ರ ಲಿಂಕ್ ಇದೆ ಅಂತಿದ್ದಾರೆ. ಯಾರದ್ದೇ ಇರಲಿ, ಆ ಬಗ್ಗೆ ತನಿಖೆಯಾಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಇಲ್ಲಿನ ಬಿಜೆಪಿ ಎಂಎಲ್​ಸಿ ಹಣ ತಿರುಪತಿಗೆ ಹೋಗುತ್ತಿತ್ತು ಎಂದಿದ್ದಾರೆ. ಬಿಜೆಪಿಯವರಿಗೆ ಹಣದ ಬಗ್ಗೆ ಹೇಗೆ ಗೊತ್ತಾಯಿತು? ಚುನಾವಣೆ ವೇಳೆ ಬರುವ ಅಮಿತ್ ಶಾ ಇವಾಗ ಎಲ್ಲಿ ಹೋದರು? ಕಲಬುರಗಿಯಲ್ಲಿ ರೊಟ್ಟಿ ಮಾಡುವುದು ಮೋದಿಗೆ ಗೊತ್ತಾಗುತ್ತದೆ. ಈ ಹಣದ ಬಗ್ಗೆ ಯಾಕೆ ಗೊತ್ತಾಗಿಲ್ಲ ಎಂದೂ ಪ್ರಿಯಾಂಕ್ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಇದು ಲೀಗಲ್ ಹಣ ಆಗುವುದಕ್ಕೆ ಸಾಧ್ಯವೇ ಇಲ್ಲ. ತನಿಖೆಯಾಗಲಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗಿಲ್ಲಿಗೆ ವೇಟ್ ಮಾಡ್ತಾ ಇದೀರಾ ಎಂದು ಕೇಳಿದಾಗ ‘ಡಿ ಬಾಸ್’ ಎಂದು ಕೂಗಿದ ಫ್ಯಾನ್ಸ್

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಖ್ಯಾತಿ ಹೆಚ್ಚಾಗಿದೆ. ಇತ್ತೀಚೆಗೆ ಬೊಂಬೆನಾಡ ಗಂಗೋತ್ಸವದಲ್ಲಿ ಗಿಲ್ಲಿಗೆ ಜನರು ಕಾದರು. ‘ಗಿಲ್ಲಿ ಕಾಯ್ತಾ ಇದೀರಾ’ ಎಂದು ಕೇಳಿದರು. ಜನರು ಹೌದು ಎಂದರು. ಆದರೆ, ಅವರು ಬರೋದಿಲ್ಲ ಎಂದು ಡಿಕೆ ಸುರೇಶ್ ತಿಳಿಸಿದರು. ಆ ಬಳಿಕ, ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಕೂಗಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

ಗದಗ: ಚಿನ್ನದ ನಿಧಿ ಒಪ್ಪಿಸಿದ ಲಕ್ಕುಂಡಿಯ ಕುಟುಂಬಕ್ಕೆ ಗಣರಾಜ್ಯೋತ್ಸವ ದಿನ ಭರ್ಜರಿ ಉಡುಗೊರೆ ನೀಡಿದ ಸರ್ಕಾರ – Kannada News | Republic Day in Gadag: Karnataka Government Rewards Lakkundi Family for Handing Over Gold Treasure

ಚಿನ್ನದ ನಿಧಿ ಒಪ್ಪಿಸಿದ ಲಕ್ಕುಂಡಿಯ ಕುಟುಂಬಕ್ಕೆ ಭರ್ಜರಿ ಉಡುಗೊರೆ!

ಗದಗ, ಜನವರಿ 26: ಗದಗ (Gadag) ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗಣರಾಜ್ಯೋತ್ಸವದ ದಿನವೇ ರಾಜ್ಯ ಸರ್ಕಾರ ಬಂಪರ್ ಉಡುಗೊರೆ ಘೋಷಿಸಿದೆ. ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ಬಳಿಕ ಸಚಿವ ಎಚ್​ಕೆ ಪಾಟೀಲ್ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 30×40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ನಗದು ಸಹಾಯ ಹಾಗೂ ಪ್ರಜ್ವಲ್ ಅವರ ತಾಯಿ ಕಸ್ತೂರೆವ್ವ ರಿತ್ತಿಗೆ ಹೊರಗುತ್ತಿಗೆ ಆಧಾರದ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ಸಚಿವರು ಘೋಷಣೆ ಮಾಡಿದರು. ಈ ವೇಳೆ ಬಾಲಕ ಪ್ರಜ್ವಲ್ ರಿತ್ತಿ ಮತ್ತು ಅವರ ತಾಯಿ ಕಸ್ತೂರೆವ್ವ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಚಿವ ಪಾಟೀಲ್ ಅವರು ಕುಟುಂಬಕ್ಕೆ ನಿವೇಶನ ಪ್ರಮಾಣ ಪತ್ರ ಹಾಗೂ ಕಸ್ತೂರೆವ್ವ ಅವರಿಗೆ ಉದ್ಯೋಗದ ಆದೇಶ ಪತ್ರವನ್ನು ವಿತರಿಸಿದರು. ಸರ್ಕಾರದ ಈ ನಡೆ ಪ್ರಾಮಾಣಿಕತೆಗೆ ಸಿಕ್ಕ ಗೌರವ ಎಂದು ಸ್ಥಳೀಯರು ಪ್ರಶಂಸಿಸಿದ್ದಾರೆ.

ಜನವರಿ 10ರಂದು ಲಕ್ಕುಂಡಿಯಲ್ಲಿ ಪ್ರಜ್ವಲ್ ರಿತ್ತಿ ಕುಟುಂಬ ಮನೆ ನಿರ್ಮಾಣಕ್ಕಾಗಿ ಪಾಯ ಅಗೆಯುವ ವೇಳೆ 466 ಗ್ರಾಂ ತೂಕದ ಪುರಾತನ ಚಿನ್ನದ ಆಭರಣಗಳ ತಂಬಿಗೆ ಪತ್ತೆಯಾಗಿತ್ತು. ಚಿನ್ನ ನಿಧಿ ರೂಪದಲ್ಲಿ ಸಿಕ್ಕಿದ್ದರೂ ಯಾವುದೇ ಲಾಲಸೆಗೆ ಒಳಗಾಗದೆ ಕುಟುಂಬವು ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದು ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು.

ಲಕ್ಕುಂಡಿ ಗದಗ ಜಿಲ್ಲೆಯ ಐತಿಹಾಸಿಕ ಗ್ರಾಮವಾಗಿದ್ದು, ಚಾಲುಕ್ಯರ ಕಾಲದ ದೇವಾಲಯಗಳು, ಕೆರೆಗಳು ಹಾಗೂ ಪುರಾತತ್ವ ಮಹತ್ವದ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಹಿಂದೆಯೂ ಅನೇಕ ಬಾರಿ ಪುರಾತನ ವಸ್ತುಗಳು ಮತ್ತು ಅವಶೇಷಗಳು ಪತ್ತೆಯಾಗಿರುವ ದಾಖಲೆಗಳಿವೆ. ಪುರಾತತ್ವ ತಜ್ಞರ ಪ್ರಕಾರ, ಲಕ್ಕುಂಡಿ ಮಧ್ಯಯುಗೀನ ಕಾಲದಲ್ಲಿ ಪ್ರಮುಖ ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದ್ದ ಕಾರಣ ಇಲ್ಲಿ ಚಿನ್ನ, ನಾಣ್ಯಗಳು ಮತ್ತು ಆಭರಣಗಳನ್ನು ನೆಲದಲ್ಲಿ ಸಂಗ್ರಹಿಸುವ ಪದ್ಧತಿ ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಪ್ರಜ್ವಲ್ ರಿತ್ತಿ ಕುಟುಂಬ ಪತ್ತೆಹಚ್ಚಿದ ಚಿನ್ನದ ನಿಧಿಯೂ ಈ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!

ಒಟ್ಟಿನಲ್ಲಿ, ರಿತ್ತಿ ಕುಟುಂಬಕ್ಕೆ ಚಿನ್ನದ ನಿಧಿ ಸಿಕ್ಕ ಬಳಿಕ ಲಕ್ಕುಂಡಿಯಲ್ಲಿ ಆರಂಭವಾದ ಉತ್ಖನನ ಕಾರ್ಯ ಅನೇಕ ರಹಸ್ಯಗಳನ್ನು ಬಯಲಿಗೆಳೆಯುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪ್ರಿಂಗ್ ಇದೆಯಾ? ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ನ್ಯೂಝಿಲೆಂಡ್ ಆಟಗಾರರು – Kannada News | New Zealand players checks Abhishek Sharma’s bat

ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಕ್ಷರಶಃ ಅಬ್ಬರಿಸಿದ್ದರು. ಈ ಅಬ್ಬರದೊಂದಿಗೆ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅರ್ಧಶತಕದ ಬಳಿಕ ಕೂಡ ಕಿವೀಸ್ ಬೌಲರ್​ಗಳ ಬೆಂಡೆತ್ತಿದ ಯುವ ದಾಂಡಿಗ 20 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 68 ರನ್ ಬಾರಿಸಿದ್ದರು.

ಈ ಮೂಲಕ ಟೀಮ್ ಇಂಡಿಯಾ ಕೇವಲ 10 ಓವರ್​ಗಳಲ್ಲಿ 155 ರನ್ ಸಿಡಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ನ್ಯೂಝಿಲೆಂಡ್ ಆಟಗಾರರಾದ ಮಿಚೆಲ್ ಸ್ಯಾಂಟ್ನರ್, ಡೆವೊನ್ ಕಾನ್ವೆ ಹಾಗೂ ಜೇಕಬ್ ಡಫಿ ಅಭಿಷೇಕ್ ಶರ್ಮಾ ಅವರ ಬ್ಯಾಟ್ ಅನ್ನು ಪರಿಶೀಲಿಸುತ್ತಿರುವುದು ಕಂಡು ಬಂತು.

ಅಭಿಷೇಕ್ ಶರ್ಮಾ ಅವರ ಆರ್ಭಟವನ್ನು ಕಣ್ತುಂಬಿಕೊಂಡಿದ್ದ ಕಿವೀಸ್ ಆಟಗಾರರು ಇದೇನು ಬ್ಯಾಟಾ? ಅಥವಾ ಬ್ಯಾಟ್​ನಲ್ಲಿ ಸ್ಪ್ರಿಂಗ್ ಏನಾದ್ರೂ ಇಟ್ಟಿದೆಯಾ ಎಂಬಾರ್ಥದಲ್ಲಿ ಟೀಮ್ ಇಂಡಿಯಾ ದಾಂಡಿಗನ ಕಾಲೆಳೆಯುತ್ತಿರುವುದು ಕಂಡು ಬಂತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್​ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ ಕೇವಲ 10 ಓವರ್​ಗಳಲ್ಲಿ ಚೇಸ್ ಮಾಡಿ ಹೊಸ ಇತಿಹಾಸವನ್ನು ನಿರ್ಮಿಸಿದೆ.

 

 

 

Source link

ಮನೆಕೆಲಸದವಳಿಗೆ ಲೈಂಗಿಕ ಕಿರಕುಳ; ‘ಧುರಂದರ್’ ಕಲಾವಿದನ ಬಂಧನ – Kannada News | Dhurandhar Actor Nadeem Khan Arrested for Domestic Help Physical Harassment Allegations

ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧುರಂಧರ್ (Dhurandhar) ಸಿನಿಮಾ ಕಲಾವಿದ ನದೀಮ್ ಖಾನ್ ಅವರನ್ನು ಬಂಧಿಸಲಾಗಿದೆ. ಇವರು ‘ಧುರಂಧರ್’ ಸಿನಿಮಾದಲ್ಲಿ ಡಕಾಯಿತ್ ರೆಹಮಾನ್ ಮನೆಯ ಬಾಣಸಿಗ ಅಖ್ಲಾಕ್ ಆಗಿ ಕಾಣಿಸಿಕೊಂಡಿದ್ದರು. ನದೀಮ್ ಖಾನ್ ಅವರನ್ನು ಪೊಲೀಸರು ವಶದಲ್ಲಿ ಇಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ 10 ವರ್ಷಗಳಿಂದ ಮನೆ ಕೆಲಸದಾಕೆಯನ್ನ ನದೀಮ್ ಖಾನ್ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಮದುವೆ ಆಗೋದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಈಗ ಅವರು ಮೋಸ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ.

41 ವರ್ಷದ ಮಹಿಳೆ ಈ ದೂರನ್ನು ನೀಡಿದ್ದಾರೆ. 2015ರಲ್ಲಿ ನದೀಮ್ ಖಾನ್ ಅವರನ್ನು ಸಂತ್ರಸ್ತೆ ಭೇಟಿ ಮಾಡಿದರು. ಆಗ ಅವರಿಗೆ 31 ವರ್ಷ. ಮನೆಕೆಲಸದವಳಾಗಿ ಅವರು ಸೇರಿಕೊಂಡರು. ನಂತರ ಇದು ದೈಹಿಕ ಸಂಬಂಧಕ್ಕೆ ತಿರುಗಿತು. ಇಬ್ಬರೂ ಆಪ್ತರಾದರು. ಈ ವೇಳೆ ನದೀಮ್ ಖಾನ್ ಅವರಿಗೆ ಮದುವೆ ಆಗುವ ಭರವಸೆ ನೀಡಿದರು ಎನ್ನಲಾಗಿದೆ.

ಈ ಭರವಸೆ ಮೇಲೆ ಅವರು ದೈಹಿಕ ಸಂಪರ್ಕಕ್ಕೆ ಒಪ್ಪಿದರು.ಇದು 10 ವರ್ಷಗಳ ಕಾಲ ಮುಂದುವರಿಯಿತು. ಈಗ ಅವರು ಮದುವೆ ಆಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಪೊಲೀಸರನ್ನು ಸಂಪರ್ಕಿಸಲು ಅವರು ನಿರ್ಧರಿಸಿದರು.

ಆರಂಭಿಕ ತನಿಖೆ ನಡೆಸಿ ನದೀಮ್ ಖಾನ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದ್ದು, ಅಧಿಕಾರಿಗಳು ಹೆಚ್ಚುವರಿ ಹೇಳಿಕೆಗಳನ್ನು ದಾಖಲಿಸುವ ಮತ್ತು ಆರೋಪಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:ಸಿನಿಪ್ರಿಯರಿಗೆ ಖುಷಿ ಸುದ್ದಿ; ಒಟಿಟಿಗೆ ಬರೋಕೆ ರೆಡಿ ಆಯ್ತು ‘ಧುರಂಧರ್’ 

ಧುರಂಧರ್ ಸಿನಿಮಾ ಹೊಸ ದಾಖಲೆ ಬರೆದಿದೆ. ಈ ಚಿತ್ರ ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಜನವರಿ 30ರಂದು ಸಿನಿಮಾ ನೆಟ್​​ಫ್ಲಿಕ್ಸ್ ಮೂಲಕ ಪ್ರಸಾರ ಕಾಣಲಿದೆ. ರಣವೀರ್ ಸಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಕನ್ನಡದ ‘ಟಾಕ್ಸಿಕ್’ ಎಸುರು ಸಿನಿಮಾ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಲವು ವಿಶೇಷಗಳಿಂದ ಗಮನ ಸೆಳೆದ ಗಣರಾಜ್ಯೋತ್ಸವ! ಈ ಬಾರಿ ಏನೆಲ್ಲ ಇತ್ತು? ಇಲ್ಲಿದೆ ನೋಡಿ – Kannada News | Republic Day 2026: 150 Years of Vande Mataram, Operation Sindoor, and Key Highlights of the Parade

ನವದೆಹಲಿ, ಜನವರಿ 26: ದೇಶದಾದ್ಯಂತ ಇಂದು 77ನೇ ಗಣರಾಜ್ಯೋತ್ಸವವನ್ನು (Republic Day 2026) ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೆಹಲಿಯ ಕರ್ತವ್ಯಪಥ, ಬೆಂಗಳೂರಿನ ಮಾಣೆಕ್ ಶಾ ಮೈದಾನ ಸೇರಿದಂತೆ ನಾಡಿನಾದ್ಯಂತ ಗಣರಾಜ್ಯೋತ್ಸವ ದಿನನ ಆಚರಿಸಲಾಗಿದ್ದು, ಸಂಭ್ರಮ ಮುಗಿಲುಮುಟ್ಟಿದೆ. ಹಲವು ಕಾರಣಗಳಿಂದ ಈ ವರ್ಷದ ಗಣರಾಜ್ಯೋತ್ಸವ ವಿಶೇಷ ಮಹತ್ವವನ್ನೂ ಪಡೆದಿದೆ. ಹಾಗಾದರೆ, ಈ ಬಾರಿಯ ಗಣತಂತ್ರ ದಿವಸನದ ವಿಶೇಷಗಳೇನು? ಇಲ್ಲಿದೆ ಮಾಹಿತಿ.

  1. ಈ ವರ್ಷದ ಪ್ರಮುಖ ಆಕರ್ಷಣೆ ಎಂದರೆ ಬಂಕಿಮಚಂದ್ರ ಚಟರ್ಜಿ (ಬಂಕಿಮಚಂದ್ರ ಚಟ್ಟೋಪಾಧ್ಯಾಯ) ರಚಿಸಿದ ‘ವಂದೇ ಮಾತರಂ’ನ 150ನೇ ವರ್ಷಾಚರಣೆ. ಈ ಸಂಭ್ರಮವನ್ನು ವರ್ಷಪೂರ್ತಿ ಆಚರಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 2025 ರ ನವೆಂಬರ್ 7 ರಂದು ಕರೆ ನೀಡಿದ್ದರು.
  2. ಸಮೃದ್ಧಿ ಕಾ ಮಂತ್ರ್- ಆತ್ಮನಿರ್ಭರ ಭಾರತ: ರಾಷ್ಟ್ರದ ಸ್ವಾವಲಂಬನೆ ಮತ್ತು ಕಳೆದ ವರ್ಷದ ಸಾಧನೆಗಳನ್ನು ಈ ಥೀಮ್ ಪ್ರತಿಬಿಂಬಿಸುತ್ತದೆ.
  3. ಆಪರೇಷನ್ ಸಿಂದೂರ್ ಮತ್ತು ಮಿಷನ್ ಸುದರ್ಶನ ಚಕ್ರ: ಭಯೋತ್ಪಾದನೆಯ ವಿರುದ್ಧ ಭಾರತದ ದಿಟ್ಟ ಪ್ರತಿಕ್ರಿಯೆಯನ್ನು ಪರೇಡ್​​ನ ಈ ಥೀಮ್ ಮೂಲಕ ಎತ್ತಿ ತೋರಿಸಲಾಯಿತು. ವಿಶೇಷವಾಗಿ 2025ರ ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ ‘ಆಪರೇಷನ್ ಸಿಂದೂರ್’ ಥೀಮ್ ಪ್ರದರ್ಶಿಸುತ್ತಿರುವುದು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ವಿಶೇಷ.
  4. ಭಾರತೀಯ ಸೇನೆಯು ಆಧುನಿಕ ಯುದ್ಧ ಸನ್ನದ್ಧ ಮತ್ತು ರಕ್ಷಣಾ ಸಾಮರ್ಥ್ಯವನ್ನು ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಾಯಿತು.
  5. ಪ್ಯಾರಾಶೂಟ್ ರೆಜಿಮೆಂಟ್, ಬ್ರಿಗೇಡ್ ಆಫ್ ದಿ ಗಾರ್ಡ್ಸ್ ಮತ್ತು ರಜಪೂತಾನ ರೈಫಲ್ಸ್‌ನ 75 ಸಂಗೀತಗಾರರ ತಂಡವು ಲತಾ ಮಂಗೇಶ್ಕರ್ ಅವರು ಹಾಡಿರುವ ‘ವಂದೇ ಮಾತರಂ’ ಆವೃತ್ತಿಯನ್ನು ನುಡಿಸಿತು.
  6. ‘ಆಯುಷ್ ಕಾ ತಂತ್ರ, ಸ್ವಾಸ್ಥ್ಯ ಕಾ ಮಂತ್ರ’ ಎಂಬ ವಿಷಯದ ಅಡಿಯಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಿ ಪ್ರದರ್ಶನ.
  7. ಎಐ, ನವೀಕರಿಸಬಹುದಾದ ಇಂಧನ ಮತ್ತು ಸೆಮಿಕಂಡಕ್ಟರ್‌ಗಳಂತಹ ಭವಿಷ್ಯದ ಕ್ಷೇತ್ರಗಳ ಮೇಲೆ ಗಮನ ಹರಿಸಿದ ಟ್ಯಾಬ್ಲೋಗಳು.
  8. ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಭಾರತದ ಮೊದಲ ಡಿಜಿಟಲ್ ವಸ್ತುಸಂಗ್ರಹಾಲಯವನ್ನು ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ.
  9. ಬಿಎಸ್​​ಎಫ್​​ನ ವಿಶ್ವದ ಏಕೈಕ ಒಂಟೆ ಸವಾರರ ಬ್ಯಾಂಡ್ ತಂಡವು ಈ ಮೆರವಣಿಗೆಯಲ್ಲಿ ಭಾಗವಹಿಸಿದೆ.
  10. ಭಾರತ್ ಪರ್ವ ಕಾರ್ಯಕ್ರಮ: ವಿವಿಧ ರಾಜ್ಯಗಳ ಆಹಾರ, ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ಕಾರ್ಯಕ್ರಮ.
  11. ವೀರ್ ಗಾಥಾ 5.0: ದೇಶಾದ್ಯಂತ 1.92 ಕೋಟಿ ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ 100 ವಿಜೇತ ವಿದ್ಯಾರ್ಥಿಗಳನ್ನು ಕರ್ತವ್ಯ ಪಥದಲ್ಲಿ ಗೌರವಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Gold Rate Today: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 26th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 26: ಚಿನ್ನದ ಬೆಲೆ ಭರ್ಜರಿ ಏರಿಕೆ ಮುಂದುವರಿದೆ. ಬೆಳ್ಳಿ ಬೆಲೆಯೂ ಭರ್ಜರಿಯಾಗಿ ಏರಿದೆ. ಅಪರಂಜಿ ಚಿನ್ನದ ಬೆಲೆ 16,000 ರೂ ಗಡಿ ದಾಟಿ ಹೋಗಿದೆ. ಆಭರಣ ಚಿನ್ನದ ಬೆಲೆ (Gold Rate) 15,000 ರೂ ಸಮೀಪಕ್ಕೆ ಹೋಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ತೀವ್ರವಾಗಿ ಹೆಚ್ಚಿದೆ. ಬೆಳ್ಳಿ ಬೆಲೆಯೂ ಗಗನಕ್ಕೇರುತ್ತಲೇ ಇದೆ. ಚೆನ್ನೈ ಮೊದಲಾದ ಕಡೆ ಬೆಳ್ಳಿ ಬೆಲೆ ಒಂದು ಕಿಲೋಗೆ 3,75,000 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,49,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,62,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 34,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,49,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 34,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 37,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,271 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,915 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,203 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 340 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,271 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,915 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 340 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,915 ರೂ
  • ಚೆನ್ನೈ: 15,025 ರೂ
  • ಮುಂಬೈ: 14,915 ರೂ
  • ದೆಹಲಿ: 14,930 ರೂ
  • ಕೋಲ್ಕತಾ: 14,915 ರೂ
  • ಕೇರಳ: 14,915 ರೂ
  • ಅಹ್ಮದಾಬಾದ್: 14,920 ರೂ
  • ಜೈಪುರ್: 14,930 ರೂ
  • ಲಕ್ನೋ: 14,930 ರೂ
  • ಭುವನೇಶ್ವರ್: 14,915 ರೂ

ಇದನ್ನೂ ಓದಿ: ಯೂರೋಪ್​ನ ಕಾರುಗಳ ಮೇಲಿನ ಟ್ಯಾರಿಫ್ ಶೇ. 110ರಿಂದ ಶೇ. 40ಕ್ಕೆ ಇಳಿಸಲಿದೆಯಾ ಭಾರತ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 630 ರಿಂಗಿಟ್ (14,527 ರುಪಾಯಿ)
  • ದುಬೈ: 556.50 ಡಿರಾಮ್ (13,872 ರುಪಾಯಿ)
  • ಅಮೆರಿಕ: 155 ಡಾಲರ್ (14,195 ರುಪಾಯಿ)
  • ಸಿಂಗಾಪುರ: 200.60 ಸಿಂಗಾಪುರ್ ಡಾಲರ್ (14,482 ರುಪಾಯಿ)
  • ಕತಾರ್: 552 ಕತಾರಿ ರಿಯಾಲ್ (13,867 ರೂ)
  • ಸೌದಿ ಅರೇಬಿಯಾ: 563 ಸೌದಿ ರಿಯಾಲ್ (13,746 ರುಪಾಯಿ)
  • ಓಮನ್: 59 ಒಮಾನಿ ರಿಯಾಲ್ (14,031 ರುಪಾಯಿ)
  • ಕುವೇತ್: 45.26 ಕುವೇತಿ ದಿನಾರ್ (13,584 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 340 ರೂ
  • ಚೆನ್ನೈ: 375 ರೂ
  • ಮುಂಬೈ: 340 ರೂ
  • ದೆಹಲಿ: 340 ರೂ
  • ಕೋಲ್ಕತಾ: 340 ರೂ
  • ಕೇರಳ: 375 ರೂ
  • ಅಹ್ಮದಾಬಾದ್: 340 ರೂ
  • ಜೈಪುರ್: 340 ರೂ
  • ಲಕ್ನೋ: 340 ರೂ
  • ಭುವನೇಶ್ವರ್: 375 ರೂ
  • ಪುಣೆ: 340

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Republic Day 2026: ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು – Kannada News | President Droupadi Murmu Honours Group Captain Shubhanshu Shukla with Ashoka Chakra on 77th Republic Day

ದೆಹಲಿ, ಜ.26: 2026ರ ಗಣರಾಜ್ಯೋತ್ಸವದಂದು ದೇಶವು ಅತ್ಯಂತ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪ್ರದಾನ ಮಾಡಿದರು. ಇದು 77ನೇ ಗಣರಾಜ್ಯೋತ್ಸವದ ಪ್ರಮುಖ ಘಟನೆಗಳಲ್ಲಿ ಒಂದಾಗಿತ್ತು. ಶುಭಾಂಶು ಶುಕ್ಲಾ ಅವರ ಈ ಗೌರವಕ್ಕೆ ಕಾರಣ ಅವರ ಅಸಾಧಾರಣ ಸೇವೆ ಮತ್ತು ಸಾಹಸಮಯ ಕಾರ್ಯ. ಬಾಹ್ಯಾಕಾಶದಲ್ಲಿ ಭಾರತದ ಪತಾಕೆಯನ್ನು ಹಾರಿಸಿದಂತಹ ಮಹತ್ತರ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಅನನ್ಯ ಸಾಧನೆ ಮತ್ತು ಧೈರ್ಯಕ್ಕಾಗಿ ಅಶೋಕ ಚಕ್ರದಂತಹ ಶ್ರೇಷ್ಠ ಗೌರವವನ್ನು ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯು ಅವರ ಸಮರ್ಪಣೆ, ಸಾಹಸ ಮತ್ತು ರಾಷ್ಟ್ರಕ್ಕಾಗಿ ಮಾಡಿದ ಅಪ್ರತಿಮ ಕೊಡುಗೆಯನ್ನು ಗುರುತಿಸುತ್ತದೆ. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಈ ಸಾಧನೆಯು ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಮತ್ತು ಭಾರತೀಯ ಸೇನೆಯ ಶೌರ್ಯ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ದೇಶದ ಗೌರವ ಮತ್ತು ಕೀರ್ತಿಯನ್ನು ಬಾಹ್ಯಾಕಾಶದಲ್ಲೂ ಎತ್ತಿ ಹಿಡಿದ ಅವರ ಕಾರ್ಯ ಸದಾ ಸ್ಮರಣೀಯ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link