All posts by nagaraj11081993

ಓರಗಿತ್ತಿಯಿಂದ ಹಲ್ಲೆ: ವಿಡಿಯೋ ಬಿಡುಗಡೆ ಮಾಡಿದ ನಟಿ ಕಾವ್ಯಾ – Kannada News | Kavya Gowda released a CCTV video regarding her complaint

‘ರಾಧಾ ರಮಣ’ ಸೇರಿದಂತೆ ಇನ್ನೂ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯಾ ಗೌಡ (Kavya Gowda) ಅವರ ಕುಟುಂಬದ ಜಗಳ ಬೀದಿ ರಂಪವಾಗಿ ಬದಲಾಗಿದೆ. ಕಾವ್ಯಾ ಮತ್ತು ಅವರ ಓರಗಿತ್ತಿ ಪ್ರೇಮ ಹಾಗೂ ಕಾವ್ಯಾರ ಪತಿ ಹಾಗೂ ಪ್ರೇಮಾರ ಪತಿಯ ನಡುವೆ ಜಗಳ, ಕಾದಾಟಗಳು ನಡೆದಿದ್ದವು. ಕೆಲ ದಿನಗಳ ಹಿಂದೆ ಕಾವ್ಯಾ ಹಾಗೂ ಅವರ ಪತಿ ಈ ಬಗ್ಗೆ ದೂರು ದಾಖಲಿಸಿದ್ದರು. ಪ್ರೇಮಾ ಸಹ ಆ ಬಳಿಕ ಕಾವ್ಯಾ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಇದೀಗ ಕಾವ್ಯಾ ಅವರು ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ್ದು, ಪ್ರೇಮಾನೇ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ್ದಾರೆ.

ಪ್ರೇಮಾ ಅವರೇ ತಮ್ಮ ಮೇಲೆ ಚಪ್ಪಲಿ ಎಸೆದು, ಹಲ್ಲೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಕಾವ್ಯಾ ಇದೀಗ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆ ಬಗ್ಗೆ ಮಾತನಾಡಿರುವ ಕಾವ್ಯಾ, ‘ನಾನು ಜನವರಿ 26ರಂದೇ ವಿಡಿಯೋ ಬಿಡುಗಡೆ ಮಾಡಬಹುದಿತ್ತು, ಆದರೆ ನಮ್ಮ ವಕೀಲರು ನೀಡಿದ ಸಲಹೆಯಿಂದಾಗಿ ಸುಮ್ಮನಾದೆ. ಸಾಕಷ್ಟು ವಿಡಿಯೋ ಸಾಕ್ಷಿ ನನ್ನ ಬಳಿ ಇದ್ದು, ಅದರಲ್ಲಿ ಕೆಲವಷ್ಟನ್ನೇ ಬಿಡುಗಡೆ ಮಾಡಿದ್ದೀನಿ. ಇನ್ನುಳಿದ ವಿಡಿಯೋಗಳನ್ನು ನ್ಯಾಯಾಲಯಕ್ಕೆ ನೀಡಲಿದ್ದೇನೆ’ ಎಂದಿದ್ದಾರೆ ಕಾವ್ಯಾ.

ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ಘಟನೆಯ ಹಿನ್ನೆಲೆ ನೀಡಿರುವ ಕಾವ್ಯಾ, ‘ಮಾತಿಗೆ ಮಾತು ಬೆಳೆಯುತ್ತಾ ಹೋದಾಗ ಅವರು ನನ್ನ ಮಗಳನ್ನು ‘ಕಳ್ಳಿ’ ಎಂದು ಕರೆದರು. ಒಬ್ಬ ತಾಯಿಯಾಗಿ ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ನನ್ನ ನಂಬಿಕೆ ಮತ್ತು ನನ್ನ ಮಗಳಿಗಾಗಿ ನಾನು ಧ್ವನಿ ಎತ್ತಬೇಕಾಯಿತು. ವಿಡಿಯೋದಲ್ಲಿ ನೀವು ನೋಡುತ್ತಿರುವುದಕ್ಕಿಂತ ಹೆಚ್ಚಿನ ನೋವನ್ನು ನಾನು ಅನುಭವಿಸಿದ್ದೇನೆ. ಅದನ್ನೆಲ್ಲಾ ನೋಡಿದರೆ ನಿಮಗೂ ಬೇಜಾರಾಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ:ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?

ನಾನು ಎಲ್ಲೂ ಕೆಟ್ಟ ಪದಗಳನ್ನು ಬಳಸಿ ಮಾತನಾಡಿಲ್ಲ. ಕಾನೂನಿನ ಮೇಲೆ ನನಗೆ ನಂಬಿಕೆಯಿದೆ. ಸತ್ಯವಂತೂ ಹೊರಬಂದೇ ಬರುತ್ತದೆ. ನನ್ನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು, ಅದಕ್ಕಾಗಿಯೇ ನಾನು ಈ ನಿರ್ಧಾರ ತಳೆಯಬೇಕಾಯಿತು. ನಾನು ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದೇನೆ. ನಾನು ಯಾವತ್ತೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದವಳಲ್ಲ. ಆದರೆ ಇಂತಹ ಪರಿಸ್ಥಿತಿ ಬಂದಾಗ ನನ್ನ ಹೆಸರು ಹಾಳಾಗುತ್ತದೆ ಎನ್ನುವ ಆತಂಕವಿತ್ತು’ ಎಂದಿದ್ದಾರೆ. ಅಲ್ಲದೆ, ತಮ್ಮ ಬೆಡ್​​ರೂಂನಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿರುವ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ನನ್ನ ಮಗಳ ಭದ್ರತೆಗಾಗಿ ನಾವು ಕ್ಯಾಮೆರಾ ಹಾಕಿಸಿದ್ದೇವೆ ಬೇರೆ ಉದ್ದೇಶಗಳಿಗಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:34 pm, Sun, 22 February 26

Source link

ENG vs SL: ಸೂಪರ್ 8 ಸುತ್ತಿನಲ್ಲಿ ಇಂಗ್ಲೆಂಡ್ ವಿರುದ್ಧ ಎರಡಂಕಿ ಮೊತ್ತಕ್ಕೆ ಶ್ರೀಲಂಕಾ ಆಲೌಟ್ – Kannada News | T20 World Cup Super 8: England Dominates Sri Lanka, Extends Win Streak to 12

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಸತತ ಮೂರು ಪಂದ್ಯಗಳನ್ನು ಗೆದ್ದು ಉತ್ತಮ ಆರಂಭ ಪಡೆದುಕೊಂಡಿದ್ದ ಟೂರ್ನಮೆಂಟ್‌ನ ಸಹ-ಆತಿಥೇಯ ಶ್ರೀಲಂಕಾ ಇದೀಗ ಸತತ ಎರಡನೇ ಸೋಲಿನ ಆಘಾತಕ್ಕೀಡಾಗಿದೆ. ತನ್ನ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತಿದ್ದ ಶ್ರೀಲಂಕಾ, ಇದೀಗ ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿಯೇ ಇಂಗ್ಲೆಂಡ್ (Sri Lanka vs England) ವಿರುದ್ಧ 51 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದೆ. ಗೆಲುವಿಗೆ 147 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ, 100 ರನ್‌ ಗಳಿಸಲು ಸಾಧ್ಯವಾಗದೆ ಕೇವಲ 95 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಇಂಗ್ಲೆಂಡ್, ಶ್ರೀಲಂಕಾ ವಿರುದ್ಧ ಸತತ 12 ನೇ ಟಿ20ಪಂದ್ಯ ಗೆದ್ದು ಸೂಪರ್ 8 ರ ಗುಂಪು 2 ರಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಇಂಗ್ಲೆಂಡ್​ಗೆ ಸಾಲ್ಟ್ ಆಸರೆ

ಪಲ್ಲೆಕೆಲೆಯಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇಂಗ್ಲೆಂಡ್‌ನ ಅಗ್ರ ಮತ್ತು ಮಧ್ಯಮ ಕ್ರಮಾಂಕ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಆದಾಗ್ಯೂ, ಆರಂಭಿಕ ಆಟಗಾರ ಫಿಲ್ ಸಾಲ್ಟ್ ಏಕಾಂಗಿ ಹೋರಾಟ ನೀಡಿ 36 ಎಸೆತಗಳಲ್ಲಿ ಅರ್ಧಶತಕ ಬಾರಿಸುವುದರ ಜೊತೆಗೆ 14 ಓವರ್‌ಗಳಲ್ಲಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು.

ಸಾಲ್ಟ್ ಜೊತೆಗೆ ವಿಲ್ ಜ್ಯಾಕ್ಸ್ ಕೂಡ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ 14 ಎಸೆತಗಳಲ್ಲಿ 21 ರನ್ ಗಳಿಸಿ ತಂಡವನ್ನು 146ರನ್​ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಶ್ರೀಲಂಕಾ ಪರ, ಯುವ ಸ್ಪಿನ್ನರ್ ಡುನಿತ್ ವೆಲ್ಲಾಲಗೆ ಮೂರು ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರೆ, ಮಹೇಶ್ ತೀಕ್ಷಣ ಮತ್ತು ದಿಲ್ಶನ್ ಮಧುಶಂಕ ತಲಾ ಎರಡು ವಿಕೆಟ್ ಪಡೆದರು.

ಲಂಕಾ ಬ್ಯಾಟಿಂಗ್ ವೈಫಲ್ಯ

ಹಿಂದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತಿದ್ದ ಶ್ರೀಲಂಕಾ ಈ ಪಂದ್ಯದಲ್ಲಿ ಪುಟಿದೇಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪವರ್‌ಪ್ಲೇನಲ್ಲಿ ಕೇವಲ 35 ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ತಂಡದ ಸೋಲು ಆರಂಭದಲ್ಲೇ ಖಚಿತವಾಯಿತು. ಫಾರ್ಮ್‌ನಲ್ಲಿರುವ ಪಾಥಮ್ ನಿಸ್ಸಂಕಾ ಸೇರಿದಂತೆ ಮೊದಲ ನಾಲ್ವರು ಬ್ಯಾಟ್ಸ್‌ಮನ್‌ಗಳು ಒಂದಂಕಿಗೆ ಸ್ಕೋರ್‌ಗೆ ಔಟಾದರು.

IND vs SA T20 WC Live Score: ಆಫ್ರಿಕಾ 3ನೇ ವಿಕೆಟ್ ಪತನ

ಶ್ರೀಲಂಕಾವನ್ನು ಒತ್ತಡಕ್ಕೆ ತಳ್ಳುವಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್ ವಿಲ್ ಜ್ಯಾಕ್ಸ್ ಮತ್ತು ವೇಗಿ ಜೋಫ್ರಾ ಆರ್ಚರ್ ಪ್ರಮುಖ ಪಾತ್ರ ವಹಿಸಿದರು. ಪವರ್‌ಪ್ಲೇ ನಂತರವೂ ತಂಡದ ಸ್ಥಿತಿ ಕಳಪೆಯಾಗಿತ್ತು. ಇದರ ಲಾಭ ಪಡೆದ ಆದಿಲ್ ರಶೀದ್ ಮತ್ತು ಲಿಯಾಮ್ ಡಾಸನ್ ಒಟ್ಟಾಗಿ ಲಂಕಾ ತಂಡದ ಕೆಳ ಕ್ರಮಾಂಕವನ್ನು ಬೇಗನೇ ಪೆವಿಲಿಯನ್​ಗಟ್ಟಿದರು. ಅಂತಿಮವಾಗಿ, ಶ್ರೀಲಂಕಾ ಕೇವಲ 16.4 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ ವಿರುದ್ಧ ಸತತ 12 ನೇ ಪಂದ್ಯವನ್ನು ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:27 pm, Sun, 22 February 26

Source link

ಸಿಎಂ ಸಿದ್ದರಾಮಯ್ಯ ಬಂಪರ್ ಘೋಷಣೆ: ಉತ್ತರ ಕನ್ನಡ ಜನರ ದಶಕಗಳ ಕನಸು ನನಸು – Kannada News | Will Announce super multi specialty hospital In Uttara Kannada District in Budget Says siddaramaiah

ಕಾರವಾರ, (ಫೆಬ್ರವರಿ 22): ಹಲವು ವರ್ಷಗಳಿಂದ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ  (super multi specialty hospital)ಬೇಕೆಂಬ ಉತ್ತರ ಕನ್ನಡ (Uttara Kannada) ಜಿಲ್ಲೆಯ ಜನರ ಕನಸು ನನಸಾಗಿದೆ. ಹೌದು….ಮುಂದಿನ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಘೋಷಣೆ ಮಾಡಿದ್ದಾರೆ. ಈ ಮೂಲಕ ಉತ್ತರ ಕನ್ನಡ ಭಾಗದ ಜನರ ಬಹು ವರ್ಷಗಳ ಬೇಡಿಕೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ.ಅಪಘಾತಗಳು ಸಂಭವಿಸಿದಾಗ ಈ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಗಳಿಲ್ಲದೇ ಹುಬ್ಬಳ್ಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈಗ ಸಿಎಂ ಆಸ್ಪತ್ರೆ ಘೋಷಣೆ ಮಾಡಿದ್ದರಿಂದ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಕಾರವಾರದಲ್ಲಿ ಇಂದು (ಫೆಬ್ರವರಿ 22) 450 ಬೆಡ್‌ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಶಾಸಕ ಸತೀಶ್ ಸೈಲ್ ಮನವಿ ಮೇರೆಗೆ ಮುಂದಿನ ರಾಜ್ಯ ಆಯವ್ಯಯದಲ್ಲಿ (ಬಜೆಟ್) ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುತ್ತೇನೆ ಎಂದು ಅಧಿಕೃತ ಭರವಸೆ ನೀಡಿದರು. ಅಲ್ಲದೇ ನಾನೇ ಬಂದು ಆಸ್ಪತ್ರೆ ಉದ್ಘಾಟನೆಯನ್ನೂ ಮಾಡುತ್ತೇನೆ ಎಂದು ಡಿಕೆಶಿ ಮುಂದೆ ಹೇಳಿದರು.

ಶ್ರೀಮಂತರು ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು. ಆದರೆ ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳೇ ಗತಿ ಎಂದು ಭಾವುಕರಾಗಿ ನುಡಿದ ಸಿಎಂ, ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ತಮ್ಮ ಸರ್ಕಾರ ಬದ್ಧವಾಗಿದೆ. 2016ರಲ್ಲಿ ಕಾರವಾರದ ಮೆಡಿಕಲ್ ಕಾಲೇಜ್ ಉದ್ಘಾಟನೆ ಮಾಡಿದ್ದೆವು. ಇಂದು 200ಕೋಟಿ ರೂ. ವೆಚ್ಚದಲ್ಲಿ 450 ಬೆಡ್‌ಗಳ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ಹಣವಿಲ್ಲ ಎಂದು ಟೀಕಿಸುತ್ತಿದ್ದ ಬಿಜೆಪಿಗೆ ಸಿಎಂ ಅಂಕಿ-ಅಂಶಗಳ ಮೂಲಕವೇ ತಿರುಗೇಟು ನೀಡಿದ ಸಿದ್ದರಾಮಯ್ಯ, ಸರ್ಕಾರದಲ್ಲಿ ಹಣವಿಲ್ಲದಿದ್ದರೆ 200 ಕೋಟಿ ರೂ. ವೆಚ್ಚದ ಆಸ್ಪತ್ರೆ ಮತ್ತು ಸೇತುವೆಗಳನ್ನು ನಿರ್ಮಿಸಲು ಹೇಗೆ ಸಾಧ್ಯ? ನಾವು ಗ್ಯಾರಂಟಿ ಮತ್ತು ಅಭಿವೃದ್ಧಿ ಎರಡನ್ನೂ ಜೊತೆಜತೆಯಾಗಿ ಕೊಂಡೊಯ್ಯುತ್ತಿದ್ದೇವೆ ಎಂದು ಟಾಂಗ್ ಕೊಟ್ಟರು.

ರಾಜೀನಾಮೆ ಎಚ್ಚರಿಕೆ ನೀಡಿದ ಶಾಸಕ ಸೈಲ್

ಸಿಎಂ ಸಿದ್ದರಾಮಯ್ಯಗೂ ಮುನ್ನ ಮಾತನಾಡಿದ ಶಾಸಕ ಸತೀಶ್ ಸೈಲ್, ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸುವ ಭರವಸೆ ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಆಸ್ಪತ್ರೆ ಘೋಷಿಸದಿದ್ರೆ ಹೇಳಿದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸಿಎಂ, ಡಿಸಿಎಂ ಮುಂದೆಯೇ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SA: ಸೂಪರ್ 8 ಪಂದ್ಯದಿಂದ ಉಪನಾಯಕನನ್ನೇ ಹೊರಗಿಟ್ಟ ಸೂರ್ಯ – Kannada News | IND vs SA Super 8: Ahmedabad Showdown! Toss Update, Playing XIs and Head to Head Edge

2026 ರ ಟಿ20 ವಿಶ್ವಕಪ್​ನ (T20 World Cup 2026) ಗುಂಪು ಹಂತದ ಅಂತ್ಯದ ನಂತರ, ಸೂಪರ್ 8 ಸುತ್ತು ಆರಂಭವಾಗಿದೆ. ಸೂಪರ್ 8 ಸುತ್ತಿನಲ್ಲಿ ಆತಿಥೇಯ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಆಡುತ್ತಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಲೀಗ್ ಹಂತದಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಉಭಯ ತಂಡಗಳು ಗೆದ್ದುಕೊಂಡಿವೆ. ಆದ್ದರಿಂದ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯಾರೇ ಸೋತರೂ ಅದು ಪಂದ್ಯಾವಳಿಯ ಮೊದಲ ಸೋಲಾಗಲಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ

ಉಭಯ ತಂಡಗಳ ನಡುವಿನ ಈ ಕದನದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಆದ್ದರಿಂದ, ಟೀಂ ಇಂಡಿಯಾ ರನ್‌ಗಳನ್ನು ಬೆನ್ನಟ್ಟಿ ಗೆಲ್ಲಬೇಕಾಗುತ್ತದೆ. ಟಾಸ್ ಬಳಿಕ ಮಾತನಾಡಿದ ಐಡೆನ್ ಮಾರ್ಕ್ರಾಮ್ ತಂಡದ ಪ್ಲೇಯಿಂಗ್​ 11 ನಲ್ಲಿ 4 ಬದಲಾವಣೆಗಳನ್ನು ಮಾಡಿರುವುದಾಗಿ ಘೋಷಿಸಿದರು.

ಅಕ್ಷರ್ ಪಟೇಲ್ ಔಟ್

ಇತ್ತ ಟಾಸ್ ಸೋತ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ‘ನಾವು ಕೂಡ ಮೊದಲು ಬ್ಯಾಟಿಂಗ್ ಮಾಡುವ ಬಗ್ಗೆ ಯೋಚಿಸುತ್ತಿದ್ದೆವು. ಆದರೆ ಟಾಸ್ ನಮ್ಮ ಪರವಾಗಿ ಹೋಗಲಿಲ್ಲ. ಕಳೆದ ಪಂದ್ಯವನ್ನು ಇಲ್ಲಿಯೇ ಆಡಿರುವುದರಿಂದ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವಾಗ ಸಿಗುವ ಅನುಕೂಲಗಳನ್ನು ಉಪಯೋಗಿಸಿಕೊಳ್ಳುತ್ತೇವೆ ಎಂದರು. ಹಾಗೆಯೇ ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ಸೂರ್ಯ, ಅಕ್ಷರ್ ಪಟೇಲ್ ಇಲ್ಲದೆ ಆಡುತ್ತಿದ್ದೇವೆ. ಆದ್ದರಿಂದ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದರು.

ಮುಖಾಮುಖಿ ದಾಖಲೆ

ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸ್ಪಷ್ಟ ಮುನ್ನಡೆ ಸಾಧಿಸಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಒಟ್ಟು 35 ಟಿ20 ಪಂದ್ಯಗಳು ನಡೆದಿವೆ. ಈ 35 ಪಂದ್ಯಗಳಲ್ಲಿ ಭಾರತ 21 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 13 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 1 ಪಂದ್ಯವ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

IND vs SA T20 WC Live Score: ಟಾಸ್ ಗೆದ್ದ ಆಫ್ರಿಕಾ ಬ್ಯಾಟಿಂಗ್ ಆಯ್ಕೆ

ಉಭಯ ತಂಡಗಳು

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಯಾನ್ ರಿಕಲ್ಟನ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಯಾನ್ಸೆನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್, ಕಾಗಿಸೊ ರಬಾಡ, ಲುಂಗಿ ಎನ್‌ಗಿಡಿ.

ಭಾರತದ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:51 pm, Sun, 22 February 26

Source link

ಭಾರತೀಯರು ಬೇರೆಯವರಿಗೆ ಸೇವೆ ಸಲ್ಲಿಸಿದ್ದೇ ಆಯ್ತು, ಸ್ವಂತದ್ದೇನೂ ಸಾಧಿಸಲಿಲ್ಲ: ಸ್ಯಾಮ್ ಪಿತ್ರೋಡಾ – Kannada News | Sam Pitroda says Indian talent is used for serving others

ನವದೆಹಲಿ, ಫೆಬ್ರುವರಿ 22: ಭಾರತ ಸಾಕಷ್ಟು ಯುವ ಪ್ರತಿಭೆಗಳನ್ನು ಸೃಷ್ಟಿಸಿದೆ. ಆದರೆ, ಅವರು ಇತರರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಒಂದೇ ಒಂದು ಜಾಗತಿಕ ಮಟ್ಟದ ತಂತ್ರಜ್ಞಾನ ಉತ್ಪನ್ನಗಳನ್ನು ಭಾರತೀಯರು ಸೃಷ್ಟಿಸಲಿಲ್ಲ. 150 ಕೋಟಿ ಜನಸಂಖ್ಯೆ ಇರುವ ದೇಶಕ್ಕೆ ಇದು ನಾಚಿಕೆಗೇಡಿತನದ ಸಂಗತಿ. ಹೀಗಂದವರು ಕಾಂಗ್ರೆಸ್​ನ ವಿದೇಶೀ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ (Sam Pitroda). ಯೂಟ್ಯೂಬ್ ವಾಹಿನಿಯೊಂದರಲ್ಲಿ ಸಂದರ್ಶನದಲ್ಲಿ ಪಾಲ್ಗೊಂಡು ಅವರು ಈ ಮಾತುಗಳನ್ನಾಡಿದ್ದಾರೆ.

‘ನಾವು ಬಹಳ ಸಂಖ್ಯೆಯಲ್ಲಿ ಯುವ ಪ್ರತಿಭೆಗಳನ್ನು ಸೃಷ್ಟಿಸಿದ್ದೇವೆ. ಆದರೆ ಅವರೆಲ್ಲರೂ ಕಚ್ಚಾ ಪ್ರತಿಭೆಗಳು. ಬಹುರಾಷ್ಟ್ರೀಯ ಕಂಪನಿಗಳ ಪ್ರೋಗ್ರಾಮಿಂಗ್, ಬ್ಯಾಂಕಿಂಗ್, ಲೀಗಲ್ ಸಿಸ್ಟಂ, ಕೈಗಾರಿಕೆ, ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್​ಗಳಗೆ ಈ ಪ್ರತಿಭೆಗಳಿಂದ ಸಹಾಯವಾಗಿದೆಯಷ್ಟೇ’ ಎಂದು ಹಿರಿಯ ಕಾಂಗ್ರೆಸ್ಸಿಗರಾದ ಸ್ಯಾಮ್ ಅಭಿಪ್ರಾಯಪಟ್ಟಿದ್ಧಾರೆ. ಹಾಗೆಯೇ, ಜಾಗತಿಕ ಮಟ್ಟದ ತಂತ್ರಜ್ಞಾನ ಉತ್ಪನ್ನಗಳನ್ನು ಸೃಷ್ಟಿಸಲು ಭಾರತೀಯರು ವಿಫಲರಾಗಿದ್ದಾರೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ನೀವೀಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚಿದ್ಯಾಕೆ?’ – ಕಾಂಗ್ರೆಸ್​ಗೆ ಪ್ರಧಾನಿ ಮೋದಿ ತರಾಟೆ

‘ನಮ್ಮದೇ ಸ್ವಂತ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ನಿರ್ಮಿಸಲಿಲ್ಲ. ಮೈಕ್ರೋಸಾಫ್ಟ್​ನಂತಹ ದೊಡ್ಡ ಕಂಪನಿಯನ್ನೂ ಹುಟ್ಟುಹಾಕಲಿಲ್ಲ. ನಮ್ಮದೇ ಸ್ವಂತ ಆಪರೇಟಿಂಗ್ ಸಿಸ್ಟಂ ಕಟ್ಟಲಿಲ್ಲ. 150 ಕೋಟಿ ಜನ ಸಂಖ್ಯೆ ಇರುವ ದೇಶಕ್ಕೆ ಅದರದ್ದೇ ಸ್ವಂತ ಆಪರೇಟಿಂಗ್ ಸಿಸ್ಟಂ ಇಲ್ಲ ಎನ್ನುವುದು ನಾಚಿಕೆಗೇಡಿತನದ ಸಂಗತಿ. ಮೊಬೈಲ್ ಫೋನ್​ಗಳಿಗೂ ಒಂದು ಆಪರೇಟಿಂಗ್ ಸಿಸ್ಟಂ ನಿರ್ಮಿಸಲು ನಮ್ಮಿಂದ ಆಗಿಲ್ಲ. ನಮ್ಮ ಪ್ರತಿಭೆಯನ್ನು ಬೇರೆಯವರಿಗೆ ಸೇವೆ ಸಲ್ಲಿಸಲು ಬಳಸುತ್ತಿದ್ದೇವೆ ಅಷ್ಟೇ’ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಸ್ಯಾಮ್ ಪಿತ್ರೋಡಾ ಅವರ ಈ ಅಭಿಪ್ರಾಯಗಳು ವಿವಾದಕ್ಕೆ ಗ್ರಾಸವಾಗಿವೆ. ಬಿಜೆಪಿ ಪಕ್ಷ ಅವರ ಅನಿಸಿಕೆಯನ್ನು ಟೀಕಿಸಿದೆ. ಸ್ಯಾಮ್ ಪಿತ್ರೋಡಾ ಅವರನ್ನು ಲಷ್ಕರೆ ಕಾಂಗ್ರೆಸ್​ನ ಸಲಹೆಗಾರರೆಂದು ವ್ಯಂಗ್ಯ ಮಾಡಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಅವರು ಭಾರತೀಯರು ಅಭಿವೃದ್ಧಿಪಡಿಸಿದ ಆಪರೇಟಿಂಗ್ ಸಿಸ್ಟಂಗಳ ಪಟ್ಟಿಯನ್ನೇ ನೀಡಿ ಸ್ಯಾಮ್ ಪಿತ್ರೋಡಾ ಅವರಿಗೆ ಕೌಂಟರ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಅತಿವೇಗದ ಮೆಟ್ರೋ ಮತ್ತು ನಮೋ ಭಾರತ್ ಕಾರಿಡಾರ್ ಉದ್ಘಾಟಿಸಿದ ಪಿಎಂ ಮೋದಿ

ಬಾಸ್ ಲಿನಕ್ಸ್, ಮಾಯಾ ಆಪರೇಟಿಂಗ್ ಸಿಸ್ಟಂ, ಪ್ರೈಮ್ ಒಎಸ್, ಭಾರತ್ ಒಎಸ್, ನೆಕ್ಸ್ಟ್​ ಕ್ವಾಂಟಂ ಒಎಸ್ ಇತ್ಯಾದಿ ಆಪರೇಟಿಂಗ್ ಸಿಸ್ಟಂಗಳು ಭಾರತೀಯರಿಂದ ಅಭಿವೃದ್ಧಿಗೊಂಡಿವೆ ಎಂದು ಪಟ್ಟಿ ಮಾಡಿದ ಬಿಜೆಪಿ ವಕ್ತಾರರು, ಯುಪಿಐ ಡಿಜಿಟಲ್ ಪೇಮೆಂಟ್ ಸಿಸ್ಟಂ, ವ್ಯಾಕ್ಸಿನ್ ತಯಾರಿಕೆ, ದೇಶದ ಆರ್ಥಿಕ ಅಭಿವೃದ್ಧಿ ಇತ್ಯಾದಿ ಸಾಧನೆಗಳನ್ನೂ ಉಲ್ಲೇಖಿಸಿದ್ದಾರೆ.

ಸ್ಯಾಮ್ ಪಿತ್ರೋಡಾ ಈ ಹಿಂದೆ ಹಲವು ಬಾರಿ ವಿವಾದಾಸ್ಪದ ಹೇಳಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ನೀಡಿರುವುದುಂಟು. ಪಾಕಿಸ್ತಾನ ಸೇರಿದಂತೆ ನೆರೆ ದೇಶಗಳೊಂದಿಗೆ ಸಂಬಂಧ ಗಟ್ಟಿಗೊಳಿಸುವ ವಿದೇಶ ನೀತಿ ಭಾರತದ್ದಾಗಿರಬೇಕು ಎಂದೊಮ್ಮೆ ಹೇಳಿದ್ದರು. ಪಾಕಿಸ್ತಾನಕ್ಕೆ ಹೋದಾಗ ಸ್ವಂತ ದೇಶದಲ್ಲಿದ್ದಂತೆ ಭಾಸವಾಗುತ್ತದೆ. ಬಾಂಗ್ಲಾದೇಶ, ನೇಪಾಳಕ್ಕೂ ಹೋಗಿದ್ದೇನೆ. ಬೇರೆ ದೇಶ ಎಂದನಿಸುವುದಿಲ್ಲ ಎಂದೂ ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಕ್ರೂರ ಸ್ವಭಾವದ ನಾಯಿಗಳ ಸೆರೆಗೆ ಮುಂದಾದ ಜಿಬಿಎ: ಶೆಲ್ಟರ್ ನಿರ್ಮಾಣಕ್ಕೆ ಜಾಗ ಹುಡುಕಾಟ – Kannada News | GBA to Shelter 2,500 Aggressive Stray Dogs in Bengaluru: Land Hunt On

ಬೆಂಗಳೂರು, ಫೆಬ್ರವರಿ 22: ನಗರದಲ್ಲಿ ಬೀದಿ ನಾಯಿಗಳ (Stray Dogs) ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಾಗಿ ಬೀದಿನಾಯಿಗಳ‌ ಆಟಾಟೋಪಕ್ಕೆ ಬ್ರೇಕ್ ಹಾಕುವಂತೆ ಸುಪ್ರೀಂಕೋರ್ಟ್ ಕೂಡ ಸೂಚನೆ ನೀಡಿತ್ತು. ಅದರಂತೆ ಇದೀಗ ಜಿಬಿಎ ಕ್ರೂರ ಸ್ವಭಾವವುಳ್ಳ ನಾಯಿಗಳಿಗೆ ಶೆಲ್ಟರ್ (Shelter) ನಿರ್ಮಾಣ ಮಾಡಲು ಜಾಗದ ಹುಡುಕಾಟಕ್ಕೆ ಮುಂದಾಗಿದೆ.

ಶೆಲ್ಟರ್ ನಿರ್ಮಾಣಕ್ಕೆ 5 ಪಾಲಿಕೆ ವ್ಯಾಪ್ತಿಯಲ್ಲೂ ಜಾಗ ಹುಡುಕಾಟ

ಬೆಂಗಳೂರಿನಲ್ಲಿ‌ ಸರಿಸುಮಾರು 2 ಲಕ್ಷ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿದ್ದು, ಅದರಲ್ಲಿ 2,500ಕ್ಕೂ ಹೆಚ್ಚು ಕ್ರೂರ ಸ್ವಭಾವವುಳ್ಳ ಬೀದಿನಾಯಿಗಳನ್ನ‌ ಗುರುತು ಮಾಡಲಾಗಿದೆ. ಇವುಗಳನ್ನ ರಕ್ಷಣೆ ಮಾಡಿ ಸಾಕುವ ಉದ್ದೇಶಕ್ಕಾಗಿ‌ ಶೆಲ್ಟರ್ ನಿರ್ಮಾಣಕ್ಕೆ 5 ಪಾಲಿಕೆ ವ್ಯಾಪ್ತಿಯಲ್ಲೂ ಜಿಬಿಎ ಜಾಗ ಹುಡುಕಾಟ ನಡೆಸುತ್ತಿದೆ. ಈಗಾಗಲೇ ನಗರದ  ಭಂಗೀಪುರ, ಬೆಟ್ಟಹಳ್ಳಿ ಹಾಗೂ ಮಹದೇವಪುರ ಹೊರವಲಯದಲ್ಲಿ ಜಾಗ ಗುರುತು ಮಾಡಲಾಗಿದೆ.

7 ಕೋಟಿ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣ

ಸುಮಾರು 7 ಕೋಟಿ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಜಿಬಿಎ ಮುಂದಾಗಿದೆ. ಒಂದೊಂದು ಪಾಲಿಕೆಯಲ್ಲಿ ನಿರ್ಮಾಣ ಮಾಡಲಾಗುವ ಶೆಲ್ಟರ್‌ಗಳಲ್ಲಿ ಸರಿಸುಮಾರು 500 ರಿಂದ 600 ಕ್ರೂರ ಬೀದಿನಾಯಿಗಳ ಸಂರಕ್ಷಣೆ ಮಾಡಲು ಪ್ರಾಣಿ ಕಾಯ್ದೆಯಡಿ ಜಿಬಿಎ ಪ್ಲಾನ್ ನಡೆಸಿದೆ. ಈ ಕ್ರೂರ ಸ್ವಭಾವವುಳ್ಳ ನಾಯಿಗಳ ಉಪಚಾರವನ್ನ‌ ಸಂಪೂರ್ಣವಾಗಿ ಜಿಬಿಎ ನೋಡಿಕೊಳ್ಳಲಿದೆ. ಅವುಗಳಿಗೆ ಬೇಕಾದ ಆಹಾರ, ರೇಬಿಸ್ ಇಂನ್ಜೆಕ್ಷನ್, ಸಂತಾನಹರಣ ಚಿಕಿತ್ಸೆ ಸೇರಿದಂತೆ ಪ್ರತಿಯೊಂದನ್ನು ಜಿಬಿಎ ನಿರ್ವಹಿಸಲಿದೆ.

ಇದನ್ನೂ ಓದಿ: 8 ವಾರದೊಳಗೆ ದೆಹಲಿಯ ಬೀದಿ ನಾಯಿಗಳನ್ನು ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ; ಏನಿದಕ್ಕೆ ಕಾರಣ?

ಇನ್ನು ನಾಯಿಗಳ ಕಡಿತಕ್ಕೆ ಅನೇಕರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಆದರೆ ಇದೀಗ ಜಿಬಿಎ ಕ್ರೂರ ಸ್ವಭಾವದ ಬೀದಿನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಜನರಲ್ಲಿ ಒಂದು ಮಟ್ಟಿಗೆ ಸಮಾಧಾನ ಉಂಟುಮಾಡಿದೆ.

ಇದನ್ನೂ ಓದಿ: ನಾಯಿಗಳ ಹಾವಳಿ: ವಿಧಾನಸೌಧದೊಳಗೆ ಶ್ವಾನಗಳಿಗೆ ಶೆಲ್ಟರ್, ಇತಿಹಾಸದಲ್ಲೇ ಮೊದಲ

ಒಟ್ಟಿನಲ್ಲಿ ಜಿಬಿಎ ಬೀದಿನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಸಾಕಷ್ಟು ಪ್ರಯತ್ನ ಮದ್ಯ ಇದೀಗ ಕ್ರೂರ ಸ್ವಭಾವದ ಬೀದಿನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SA T20 WC Live Score: ಟಾಸ್ ಗೆದ್ದ ಆಫ್ರಿಕಾ ಬ್ಯಾಟಿಂಗ್ ಆಯ್ಕೆ – Kannada News | India vs South Africa T20 World Cup 2026 Live Cricket Score IND vs SA Today Match highlights latest news in Kannada

ಟಿ20 ವಿಶ್ವಕಪ್ 2026 ರ ಗುಂಪು ಹಂತದ ಪಂದ್ಯಗಳು ಮುಗಿದಿದ್ದು ಸೂಪರ್ 8 ಸುತ್ತು ಪ್ರಾರಂಭವಾಗಿದೆ. ಈ ಸುತ್ತಿನ ಮೂರನೇ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಪರಸ್ಪರ ಮುಖಾಮುಖಿಯಾಗಿವೆ. ಇದು ಸೂಪರ್ 8 ನಲ್ಲಿ ಉಭಯ ತಂಡಗಳ ಮೊದಲ ಪಂದ್ಯವಾಗಿದೆ. ಕುತೂಹಲಕಾರಿಯಾಗಿ, ಎರಡೂ ತಂಡಗಳು ಪಂದ್ಯಾವಳಿಯ ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿವೆ. ಆದ್ದರಿಂದ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯಾರೇ ಸೋತರೂ ಅದು ಪಂದ್ಯಾವಳಿಯ ಮೊದಲ ಸೋಲಾಗಲಿದೆ.

Source link

ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲಿ ಭಾರೀ ಬಿಸಿಲು: ಹವಾಮಾನ ಇಲಾಖೆ ಎಚ್ಚರಿಕೆ ಏನು? – Kannada News | Karnataka Summer Forecast: IMD Predicts Intense Heatwaves and Rising Temperatures for Bengaluru

ಬೆಂಗಳೂರು, (ಫೆಬ್ರವರಿ 22): ಕರ್ನಾಟಕದಲ್ಲಿ (Karnataka) ಈಗಾಗಲೇ ಬೇಸಿಗೆ (Summer)  ಶುರುವಾಗಿದ್ದು, ದಿನನಿತ್ಯ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಅದರಲ್ಲೂ ಬೆಂಗಳೂರಿನ (Bengaluru) ಬಿಸಿಲಿಗೆ ಜನರು ತತ್ತರಿಸಿದ್ದಾರೆ. ಮನೆಗಳಲ್ಲಿ , ಕಚೇರಿಗಳಲ್ಲಿ ಏರ್ ಕೂಲರ್‌ಗಳನ್ನ ಹಾಕಿಕೊಂಡು ಕೂರುವ ಪರಿಸ್ಥಿತಿ ಇದೆ ಹೀಗಿರುವಾಗ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ ಇನ್ನಷ್ಟು ತಾಪಮಾನ ಹೆಚ್ಚಾಗಲಿದೆ. ಹೌದು…ಮಾರ್ಚ್‌ನಿಂದ ಮೇ ತಿಂಗಳವರೆಗೆ ರಾಜ್ಯದಲ್ಲಿ ಬೇಸಿಗೆ (summer) ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಸಿಲಿಕಾನ್ ಸಿಟಿ ಜನ್ರೇ ಎಚ್ಚರ ಎಚ್ಚರದಿಂದ ಇರಿ, ಕೂಲ್ ಸಿಟಿ ಅಂತಾನೇ ಕರೆಸಿಕೊಳುವ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿ ಬದಲಾಗಿದೆ.ಕಳೆದ ಒಂದು ವಾರದಿಂದ ರಾಜಧಾನಿಯಲ್ಲಿ ತಾಪಮಾನ ಏರಿಕೆ ಹಿನ್ನಲೆ ಎಂಥ ಶೆಕೆಯಪ್ಪ ಅಂತ ಸಿಟಿ ಜನ ಶಾಪ್ ಹಾಕೋಕ್ಕೆ ಶುರು ಮಾಡಿದ್ದಾರೆ. ಮಾರ್ಚ್ 2ನೇ ವಾರದ ಬಳಿಕ ಬೆಂಗಳೂರಿನ ತಾಪಮಾನ 38-39* ಡಿಗ್ರಿ ತಲುಪಲಿದೆ. ಈ ಹಿನ್ನೆಲೆ ಹವಮಾನ ಇಲಾಖೆ ಸೂಚನೆ ನೀಡಿದ್ದು, ಸಿಲಿಕಾನ್ ಸಿಟಿ ಜನರ ನೆತ್ತಿ ಸುಡಲಿದೆ. ಇತ್ತ ಹವಮಾನ ಇಲಾಖೆ ಸೂಚನೆ ಬೆನ್ನಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಉರಿಯುವ ಬಿಸಿಲಿಗೆ ಹೀಟ್ ಸ್ಟ್ರೋಕ್ ಭೀತಿ ಒಂದು ಕಡೆಯಾದರೆ, ಖಾಯಿಲೆ ಹೆಚ್ಚಳ ಆತಂಕ ಶುರವಾಗಿದೆ. ತಾಪಮಾನ ಏರಿಕೆ ಬೆನ್ನಲ್ಲೇ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮುಂದಾಗಿದ್ದು, ಹೀಟ್ ಸ್ಟೋಕ್ ಬಗ್ಗೆ ವೈದ್ಯರ ಎಚ್ಚರಿಕೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಬೇಸಿಗೆ ಅಂತ ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಬಿ ಕೇರ್​ಫುಲ್ ಎಂದ ಆರೋಗ್ಯ ಇಲಾಖೆ: ಏಕೆ?

ಸಾರ್ವಜನಿಕರಿಗೆ ಎಚ್ಚರಿಕೆ

ಅಂದುಕೊಂಡದಕ್ಕಿಂದ ಈ ಸಲ ಬಿಸಲು ಶೆಖೆ ಜಾಸ್ತಿನೇ ಇರಲಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಆಗಲಿದೆ. ಹೀಗಾಗಿ ಹೈಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ನೀಡಿದೆ.

ದೇಹದ ಉಷ್ಣತೆಯು 40 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟೋಕ್ ಕೂಡಾ ಸಾಧ್ಯತೆ ಇದ್ದು, ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನ ತಾಪಮಾನ ಇಳಿಕೆಯವರೆಗೂ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದೆ ಇರುವಂತೆ ವೈದ್ಯರ ಸಲಹೆ ನೀಡುತ್ತಿದ್ದಾರೆ. ಜೊತೆಗೆ ಹೆಚ್ಷಾಗಿ ನೀರು, ತಂಪು ಪಾನೀಯಗಳು ಸೇರಿದಂತೆ ಡಿಹೈಡ್ರೇಟ್ ಆಗದಂತದ ಆಹಾರವನ್ನ ಹೆಚ್ಚಾಗಿ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಈ ವರ್ಷವೂ ಕೂಡ ಬೆಂಗಳೂರು ಮಂದಿಗೆ ಬೇಸಿಗೆಯ ಧಗೆ ಕಾಡಲಿದ್ದು, ಜನರು ಬಿಸಿಲಿನಿಂದ ಉಂಟಾಗುವ ಆರೋಗ್ಯದ ಸಮಸ್ಯೆಯಿಂದ ದೂರ ಇರಲು ಹೆಚ್ಚು ಗಮನ ಹರಿಸಬೇಕಿದೆ. ಜೊತೆಗೆ ಆರೋಗ್ಯ ಇಲಾಖೆಯಿಂದಲೂ ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

HPCL Recruitment 2026: HPCLನಲ್ಲಿ 608 ಅಪ್ರೆಂಟಿಸ್ ಟ್ರೈನಿ ನೇಮಕಾತಿ; ತರಬೇತಿಯ ಜೊತೆಗೆ ಆಕರ್ಷಕ ವೇತನ – Kannada News | HPCL Recruitment 2026: 608 Graduate Apprentice Trainee Jobs Apply Now!

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅವಕಾಶವು ನಿರ್ದಿಷ್ಟವಾಗಿ ಪ್ರತಿಷ್ಠಿತ ಸಾರ್ವಜನಿಕ ವಲಯದ ಕಂಪನಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಹೊಸಬರಿಗೆ ಆಗಿದೆ. ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಅರ್ಹತೆಯನ್ನು ಆಧರಿಸಿರುತ್ತದೆ ಮತ್ತು ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

HPCL ಒಟ್ಟು 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮವು ಯುವಜನರಿಗೆ ಪ್ರಾಯೋಗಿಕ ಉದ್ಯಮ ಅನುಭವವನ್ನು ಒದಗಿಸುತ್ತದೆ. ಈ ಅನುಭವವು PSU ಗಳು ಅಥವಾ ಖಾಸಗಿ ಕಂಪನಿಗಳಲ್ಲಿ ಭವಿಷ್ಯದಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳಲು ಸಹಾಯಕವಾಗಲಿದೆ.

ಶೈಕ್ಷಣಿಕ ಅರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿ.ಟೆಕ್ ಪದವಿಯನ್ನು ಹೊಂದಿರಬೇಕು. ಏಪ್ರಿಲ್ 1, 2023 ರಂದು ಅಥವಾ ನಂತರ ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಹರಾಗಿರುತ್ತಾರೆ.

ಸಾಮಾನ್ಯ, ಒಬಿಸಿ (ಎನ್‌ಸಿಎಲ್) ಮತ್ತು ಇಡಬ್ಲ್ಯೂಎಸ್ ವರ್ಗಗಳಿಗೆ ಕನಿಷ್ಠ ಶೇ.60 ಅಂಕಗಳು ಮತ್ತು ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶೇ. 50 ಅಂಕಗಳು ಕಡ್ಡಾಯವಾಗಿದೆ. ಮಾರ್ಚ್ 2, 2026 ರಂತೆ ಅಭ್ಯರ್ಥಿಗಳು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು. ಮೀಸಲು ವರ್ಗಗಳಿಗೆ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ಸ್ಟೈಫಂಡ್ ಮತ್ತು ಆಯ್ಕೆ ಪ್ರಕ್ರಿಯೆ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,000ರೂ. ಸ್ಟೈಫಂಡ್ ಸಿಗಲಿದ್ದು, ಇದರಲ್ಲಿ HPCL ನಿಂದ 20,500ರೂ. ಮತ್ತು ಕೇಂದ್ರ ಸರ್ಕಾರದ DBT ಯೋಜನೆಯ 4,500ರೂ. ಸೇರಿದೆ. ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಾತ್ರ ಆಯ್ಕೆ ನಡೆಯಲಿದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಅರ್ಜಿಗಳು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿರುತ್ತವೆ ಮತ್ತು ಯಾವುದೇ ಶುಲ್ಕವಿಲ್ಲ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ hindustanpetroleum.com ಅಥವಾ jobs.hpcl.co.in ಗೆ ಭೇಟಿ ನೀಡುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಅರ್ಜಿ ಸಲ್ಲಿಸುವ ಮೊದಲು NATS 2.0 ಪೋರ್ಟಲ್‌ನಲ್ಲಿ ನೋಂದಯಿಸಿಕೊಳ್ಳಿ. ಆನ್‌ಲೈನ್ ಅರ್ಜಿ ಸಲ್ಲಿಕೆ ಫೆಬ್ರವರಿ 16ರಿಂದ ಪ್ರಾರಂಭವಾಗಿದ್ದು,ಮಾರ್ಚ್ 2ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆ ಅಂತ ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಬಿ ಕೇರ್​ಫುಲ್ ಎಂದ ಆರೋಗ್ಯ ಇಲಾಖೆ: ಏಕೆ? – Kannada News | Bengaluru Summer Food Alert: Watermelon, Ice Cream Safety Doubts and health department Tests

ಬೆಂಗಳೂರು, ಫೆಬ್ರವರಿ 22: ಬೇಸಿಗೆಕಾಲ ಶುರು ಆಯ್ತು. ಕಲ್ಲಂಗಡಿ ಹಣ್ಣು (watermelon), ಜ್ಯೂಸ್, ಐಸ್ ಕ್ರೀಂ ತಿಂದು ತಂಪಾಗೋಣ ಅಂತ ಏನಾದರೂ ಪ್ಲ್ಯಾನ್​ ಮಾಡಿದ್ದರೆ ಎಚ್ಚರವಾಗಿರಿ. ಏಕೆಂದರೆ ನೀವು ತಿನ್ನುವ ಕಲ್ಲಂಗಡಿ ಹಣ್ಣು, ಖುಷ್​ ಖುಷಿಯಿಂದ ಸವಿಯುವ ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಎಷ್ಟು ಸುರಕ್ಷಿತ? ಹೀಗಂತ ನಾವಲ್ಲ, ಖುದ್ದು ಆರೋಗ್ಯ ಇಲಾಖೆ (health department) ಶಂಕೆ ವ್ಯಕ್ತಪಡಿಸಿದೆ. ಹೀಗಾಗಿ ಸದ್ಯದಲ್ಲೇ ಸ್ಯಾಂಪಲ್ ಟೆಸ್ಟ್ ಕೂಡ ನಡೆಯಲಿದೆ.

ಬೇಸಿಗೆ ಕಾಲದ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಳವಾಗಿದೆ. ಆದರೆ ಕಲ್ಲಂಗಡಿ ಹಣ್ಣು ನಿಜಕ್ಕೂ ಸುರಕ್ಷಿತನಾ ಎನ್ನುವ ಅನುಮಾನ ಮೂಡಿದೆ. ಕಳೆದ ಸಲ ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಉಪಯೋಗಿಸುವ ಆತಂಕ ಎದುರಾದ ಬೆನ್ನಲ್ಲೇ ಈ ವರ್ಷನೂ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಪಡೆಯುವುದಕ್ಕೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಕಲ್ಲಂಗಡಿ ಹಣ್ಣಿನ ಜೊತೆಗೆ ಐಸ್ ಕ್ರೀಂ, ಜ್ಯೂಸ್​​ಗಳ ಸ್ಯಾಂಪಲ್ ಪಡೆಯುವುದಕ್ಕೂ ತೀರ್ಮಾನಿಸಲಾಗಿದೆ.

ಕಲ್ಲಂಗಡಿಗೆ ಎರಿಥ್ರೋಸಿನ್ ಬಳಕೆ?

ಬೇಸಿಗೆ ದಿನದಲ್ಲಿ ಕಲ್ಲಂಗಡಿಗೆ ಭಾರೀ ಬೇಡಿಕೆ ಇದ್ದು, ಹೆಚ್ಚೆ ಮಾರಾಟ ಮಾಡಲು ಹಾಗೂ ಜನರನ್ನು ಆಕರ್ಷಿಸಲು ವ್ಯಾಪಾರಿಗಳು ಕೃತಕ ಬಣ್ಣ ಬಳಕೆ ಮಾಡುವ ಪ್ರಕರಣಗಳು ಪತ್ತೆಯಾಗಿವೆ. ಕಲ್ಲಂಗಡಿ ಹಣ್ಣಿನ ಬಳ್ಳಿಗೆ ಎರಿಥ್ರೋಸಿನ್ ಇಂಜೆಕ್ಟ್ ಮಾಡುವ ಸುಳಿವು ಸಿಕ್ಕಿದೆ. ಹೀಗಾಗಿ ಮಾರ್ಚ್ ತಿಂಗಳ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಟೆಸ್ಟ್ ನಡೆಸಲು ಆಹಾರ ಮತ್ತು ಸುರಕ್ಷಿತಾ ಇಲಾಖೆಗೆ ಆರೋಗ್ಯ ಇಲಾಖೆ ಸೂಚಿಸಿದೆ. ಇಂಜೆಕ್ಷನ್ ಕೊಟ್ಟ ಕಲ್ಲಂಗಡಿ ಹಣ್ಣಿನಲ್ಲಿ ನೈಟ್ರೇಟ್ ಮತ್ತು ಕೃತಕ ಡೈ(ಕ್ರೋಮೇಟ್, ಮೆಥನಾಲ್ ಹಳದಿ, ಸುಡಾನ್ ಕೆಂಪು) ಕಾರ್ಬೈಡ್, ಆಕ್ಸಿಟಾಸಿನ್ ಇರಬಹುದು. ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಡೇಂಜರ್.

ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್​? ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ

ಕಲ್ಲಂಗಡಿ ಹಣ್ಣು ಬೇಗನೆ ಬೆಳೆಯಲು ನಿಟ್ರೋಜನ್ ಬಳಸಲಾಗುತ್ತದೆ. ನಿಟ್ರೋಜನ್ ದೇಹದೊಳಗೆ ಹೋದರೆ ಅದು ತುಂಬಾ ಹಾನಿಕರ ಮತ್ತು ಇದರಲ್ಲಿ ವಿಷಕಾರಿ ಅಂಶಗಳಿವೆ. ಕ್ರೋಮೇಟ್, ಮೆಂಥಾಲ್ ಯಲ್ಲೋ ಮತ್ತು ಸುಡಾನ್ ರೆಡ್ ಬಣ್ಣವು ಕಲ್ಲಂಗಡಿಗೆ ಗಾಢವಾದ ಬಣ್ಣ ನೀಡಲು ಬಳಸುತ್ತಾರೆ. ಕಾರ್ಬೈಡ್ ಕಿಡ್ನಿ ಮತ್ತು ಯಕೃತ್​ಗೆ ತುಂಬಾ ಅಪಾಯಕಾರಿ. ಇದರಿಂದ ಕಿಡ್ನಿಯು ತೀವ್ರವಾಗಿ ಹಾನಿಗೀಡಾಗಬಹುದು. ಮೆಂಥಾಲ್ ಯಲ್ಲೋ ಬಳಕೆಯಿಂದ ಕ್ಯಾನ್ಸರ್ ಬರುವ ಅಪಾಯವೂ ಇದೆ ಎಂದು ಆಹಾರ ತಜ್ಞೆ ಡಾ.ಕೀರ್ತಿ ಹಿರಿಸಾವೆ ಹೇಳುತ್ತಾರೆ. ಇನ್ನು ಗ್ರಾಹಕರು ಮಾತ್ರ ಇತ್ತೀಚೆಗೆ ಯಾವ ಆಹಾರ ತಿನ್ನುವುದು, ಯಾವುದು ಬಿಡುವುದು ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎನ್ನುತ್ತಾರೆ.

ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ: ಉಚಿತ ಸ್ಕ್ಯಾನಿಂಗ್‌ಗೆ ಪರ್ಯಾಯ ವ್ಯವಸ್ಥೆ

ಇಂಜೆಕ್ಷನ್ ನೀಡಿರುವ ಕಲ್ಲಂಗಡಿ ಹಣ್ಣು ತುಂಬಾ ಕೆಂಪಾಗಿರುತ್ತದೆ. ಕಲ್ಲಂಗಡಿ ಹಣ್ಣಿನ ಪರೀಕ್ಷೆಯನ್ನ ಮನೆಯಲ್ಲೇ ಮಾಡಬಹುದು. ಕಲ್ಲಂಗಡಿ ಹಣ್ಣನ್ನು ಎರಡು ಹೋಳಾಗಿ ಮಾಡಿ ಟಿಶ್ಯೂ ಅಥವಾ ಕಾಟನ್ ಪೇಪರ್​​ಗೆ ಕೆಂಪು ಬಣ್ಣ ಹತ್ತಿದರೆ ಅದಕ್ಕೆ ಕೃತಕ ಬಣ್ಣ ಬಳಕೆ ಮಾಡಿದ್ದಾರೆ ಎಂಬುದು ಧೃಡಪಡುತ್ತದೆ. ಒಟ್ಟಿನಲ್ಲಿ ಮತ್ತೊಮ್ಮೆ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಂ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಬೇಸಿಗೆ ಮುನ್ನವೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link