All posts by nagaraj11081993

Vastu Tips: ಈ ಒಂದು ವಸ್ತುವನ್ನು ಅಕ್ಕಿ ಪಾತ್ರೆಯಲ್ಲಿ ಇರಿಸಿ, ಆಹಾರ, ಹಣದಕ್ಕೆಂದೂ ಕೊರತೆಯಾಗದು! – Kannada News | Rice in Hinduism: Symbol of Prosperity, Annapoorne Blessings and Vastu Tips

ಹಿಂದೂ ಧರ್ಮದಲ್ಲಿ ಅಕ್ಕಿ ಕೇವಲ ಒಂದು ಧಾನ್ಯವಲ್ಲ, ಅದು ಜೀವನದ ಆಧಾರ, ಸಮೃದ್ಧಿಯ ಸಂಕೇತ ಮತ್ತು ದೈವಿಕ ಆಶೀರ್ವಾದದ ರೂಪವಾಗಿದೆ. ನಮ್ಮ ಸಂಪ್ರದಾಯದಲ್ಲಿ ಅಕ್ಕಿಯನ್ನು ದೇವಿ ಅನ್ನಪೂರ್ಣೆ ಅವರ ಕೃಪೆಯಾಗಿ ಕಾಣಲಾಗುತ್ತದೆ. ಅನ್ನಪೂರ್ಣೆ ಎಂದರೆ ಅನ್ನವನ್ನು ನೀಡುವ ತಾಯಿ, ಮನೆಗಳಲ್ಲಿ ಅನ್ನದ ಕೊರತೆ ಬರದಂತೆ ಕಾಪಾಡುವ ಶಕ್ತಿ. ಅದಕ್ಕಾಗಿ ಅಡುಗೆಮನೆಯ ಅಕ್ಕಿ ಡಬ್ಬಿ ಯಾವಾಗಲೂ ತುಂಬಿರಬೇಕು ಎಂಬ ನಂಬಿಕೆ ಇದೆ. ಡಬ್ಬಿ ಸಂಪೂರ್ಣ ಖಾಲಿಯಾಗುವುದು ಜೀವನದಲ್ಲಿ ಕೊರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದರೆ ಸ್ವಲ್ಪವಾದರೂ ಅಕ್ಕಿ ಉಳಿದಿದ್ದರೆ ಮನೆಗೆ ಸದಾ ಆಹಾರ ಮತ್ತು ಹಣದ ಹರಿವು ನಿರಂತರವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಅಡುಗೆಮನೆ ಮನೆಯ ಹೃದಯವಾಗಿದ್ದು, ವಾಸ್ತು ಪ್ರಕಾರ ಅದು ಅಗ್ನಿ ತತ್ವವನ್ನು ಪ್ರತಿನಿಧಿಸುತ್ತದೆ. ಈ ಸ್ಥಳ ಸ್ವಚ್ಛವಾಗಿದ್ದರೆ ಮತ್ತು ಧಾನ್ಯಗಳು ಸಮರ್ಪಕವಾಗಿ ಸಂಗ್ರಹವಾಗಿದ್ದರೆ, ಮನೆಯ ಆರ್ಥಿಕ ಸ್ಥಿತಿ ಸ್ಥಿರವಾಗುತ್ತದೆ ಎಂಬ ನಂಬಿಕೆ ಇದೆ. ಅಕ್ಕಿ ಡಬ್ಬಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ತೇವ ಅಥವಾ ಕೀಟಗಳಿಲ್ಲದಂತೆ ನೋಡಿಕೊಳ್ಳುವುದು ಕೇವಲ ಆಧ್ಯಾತ್ಮಿಕ ದೃಷ್ಟಿಯಿಂದಲ್ಲ, ಆರೋಗ್ಯದ ದೃಷ್ಟಿಯಿಂದಲೂ ಮುಖ್ಯ.

ಕೆಲವು ಮನೆಗಳಲ್ಲಿ ಅಕ್ಕಿ ಕಾಳುಗಳೊಳಗೆ ಎರಡು ಬೆಳ್ಳಿ ನಾಣ್ಯಗಳನ್ನು ಅಥವಾ ಹಳದಿ ಅರಿಶಿನದ ಕೊಂಬು ಕೆಂಪು ಬಟ್ಟೆಯಲ್ಲಿ ಕಟ್ಟಿಟ್ಟು ಇಡುವ ಪದ್ಧತಿ ಇದೆ. ಕೆಂಪು ಬಣ್ಣ ಶಕ್ತಿ ಮತ್ತು ಲಕ್ಷ್ಮೀ ತತ್ವದ ಸಂಕೇತವಾಗಿದ್ದು, ಅರಿಶಿನ ಪವಿತ್ರತೆ ಮತ್ತು ಆರೋಗ್ಯವನ್ನು ಸೂಚಿಸುತ್ತದೆ. ಬೆಳ್ಳಿ ನಾಣ್ಯಗಳು ಶುದ್ಧತೆ ಮತ್ತು ಧನಾಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಣ್ಣ ಪರಿಹಾರದಿಂದ ಅಡುಗೆಮನೆಯಲ್ಲಿ ಅನ್ನಪೂರ್ಣೆಯ ನೆಲೆಸುವಿಕೆ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿ ಕಡಿಮೆಯಾಗುವುದಿಲ್ಲ ಎಂಬ ವಿಶ್ವಾಸ ಇದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಪೂರ್ವಜರು ಅಕ್ಕಿಯನ್ನು ಅತ್ಯಂತ ಗೌರವದಿಂದ ಬಳಕೆ ಮಾಡುತ್ತಿದ್ದರು. ಅಕ್ಕಿ ನೆಲಕ್ಕೆ ಬಿದ್ದರೆ ಅದನ್ನು ತುಳಿಯದೆ ಎತ್ತಿ ತಲೆಗೆ ಸ್ಪರ್ಶಿಸುವ ಸಂಸ್ಕಾರವೂ ಅದೇ ಗೌರವದ ಸೂಚನೆ. ಹೊಸ ಅಕ್ಕಿ ಮನೆಗೆ ಬಂದಾಗ ಮೊದಲು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಬಳಸುವ ಪದ್ಧತಿ ಇನ್ನೂ ಹಲವಾರು ಮನೆಗಳಲ್ಲಿ ಕಂಡುಬರುತ್ತದೆ. ಶುಭ ದಿನಗಳಲ್ಲಿ ಬಡವರಿಗೆ ಅಕ್ಕಿ ದಾನ ಮಾಡುವುದು ಧನಪ್ರವಾಹವನ್ನು ಹೆಚ್ಚಿಸುತ್ತದೆ ಮತ್ತು ಮನೆಗೆ ಪುಣ್ಯ ತರುತ್ತದೆ ಎಂದು ನಂಬಲಾಗುತ್ತದೆ. ಈ ಎಲ್ಲಾ ಆಚರಣೆಗಳು ಕೇವಲ ಅಂಧನಂಬಿಕೆಗಳಲ್ಲ; ಅವು ಸಂಗ್ರಹದ ಮಹತ್ವ, ಶಿಸ್ತಿನ ಜೀವನ ಮತ್ತು ಆಹಾರದ ಪಾವಿತ್ರ್ಯವನ್ನು ನೆನಪಿಸುವ ಸಾಂಸ್ಕೃತಿಕ ಮೌಲ್ಯಗಳಾಗಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೈಕ್​​ ಡಿಕ್ಕಿ ರಭಸಕ್ಕೆ ಮುರಿದುಬಿದ್ದ ವಿದ್ಯುತ್​​ ಕಂಬ: ಸವಾರರು ಬದುಕಿದ್ದೇ ಪವಾಡ! – Kannada News | Speeding Motorcycle Crashes into Electric Pole; Rider and Pillion Survive in Ullal, Mangaluru

ಮಂಗಳೂರು, ಫೆಬ್ರವರಿ 17: ವೇಗವಾಗಿ ಬಂದ ಬೈಕ್​​ ನಿಯಂತ್ರಣ ತಪ್ಪಿ ವಿದ್ಯುತ್​​ ಕಂಬಕ್ಕೆ ಗುದ್ದಿದ ಪರಿಣಾಮ ಕಂಬವೇ ತುಂಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕಿನ್ಯಾ ಸಂಕೇಶದಲ್ಲಿ ನಡೆದಿದೆ. ನಿನ್ನೆ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಅಪಘಾತದಲ್ಲಿ ವಿಜಯಪುರ ಮೂಲದ ಇಬ್ಬರು ವಿದ್ಯಾರ್ಥಿಗಳು ಪವಾಡಸದೃಶ ಎಂಬಂತೆ ಪಾರಾಗಿದ್ದಾರೆ.  ಕಂಬ ತುಂಡಾಗುತ್ತಲೇ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಯಾವಾಗ? ಬಿಡುಗಡೆ ದಿನಾಂಕ ನಿಗದಿ – Kannada News | Toxic movie trailer will release in March first week

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಟೀಸರ್ ಈಗಾಗಲೇ ಜಾಗತಿಕ ಮಟ್ಟದಲ್ಲಿ ಹವಾ ಸೃಷ್ಟಿಸಿದೆ. ಕೆಲ ವಾರಗಳ ಹಿಂದೆ ಬಿಡುಗಡೆ ಆಗಿದ್ದ ಟೀಸರ್ ಈಗಲೂ ಚರ್ಚೆಯಲ್ಲಿದೆ. ಈ ನಡುವೆ ಸಿನಿಮಾದ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಟ್ರೈಲರ್ ಇನ್ನೂ ದೊಡ್ಡ ಟ್ರೆಂಡ್ ಸೃಷ್ಟಿಸುವ ಸಾಧ್ಯತೆ ಇದೆ. ಸಿನಿಮಾದ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮಾರ್ಚ್ 19ರಂದು ಆಗಲಿದೆ, ಸಿನಿಮಾದ ಬಿಡುಗಡೆಗೆ ಒಂದು ವಾರದ ಹಿಂದಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಮಾರ್ಚ್ ಮೊದಲ ವಾರದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಬಿಡುಗೆಡ ಆಗಿರುವ ಟೀಸರ್​​ಗಿಂತಲೂ ಸಖತ್ ಪವರ್​​ಫುಲ್ ಆಗಿರಲಿದೆಯಂತೆ ಸಿನಿಮಾದ ಟ್ರೈಲರ್.

‘ಟಾಕ್ಸಿಕ್’ ಸಿನಿಮಾದ ಹಕ್ಕುಗಳ ಮಾರಾಟ ಚಾಲ್ತಿಯಲ್ಲಿದ್ದು, ಆಂಧ್ರ-ತೆಲಂಗಾಣ, ಉತ್ತರ ಭಾರತ, ವಿದೇಶದ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಆಂಧ್ರ-ತೆಲಂಗಾಣದಲ್ಲಂತೂ ‘ಟಾಕ್ಸಿಕ್’ ಸಿನಿಮಾ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಸಿನಿಮಾದ ಹಕ್ಕುಗಳ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ಸೈಟ್ ವಿವಾದ; ಯಶ್ ತಾಯಿ ಪುಷ್ಪಾಗೆ ಮೊದಲ ಹಂತದ ಜಯ

‘ಟಾಕ್ಸಿಕ್’ ಸಿನಿಮಾದ ಪ್ರಚಾರವನ್ನು ಯಶ್ ಇನ್ನಷ್ಟೆ ಆರಂಭಿಸಬೇಕಿದೆ. ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದ ಪ್ರಚಾರಗಳಿಗೆ ದೇಶವೆಲ್ಲ ಸಂಚರಿಸಿ ಬಹಳ ಸಕ್ರಿಯಾಗಿ ಪರಚಾರ ಮಾಡಿದ್ದರು ಯಶ್. ಆದರೆ ‘ಟಾಕ್ಸಿಕ್’ ಸಿನಿಮಾಕ್ಕೆ ಬೇರೆಯದೇ ಮಾದರಿಯನ್ನು ಅನುಸರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಮುಖ ನಗರಗಳಲ್ಲಿ ದೊಡ್ಡ ಪ್ರೀ ರಿಲೀಸ್​​ಗಳನ್ನು ಆಯೋಜನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ಸಾಸ್ ನಿರ್ದೇಶನ ಮಾಡಿದ್ದು, ಸಿನಿಮಾದ ಕತೆಯನ್ನು ಯಶ್ ಅವರೂ ಸಹ ಬರೆದಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರುಗಳು ನಾಯಕಿಯರುಗಳಾಗಿ ನಟಿಸಿದ್ದಾರೆ. ಯಶ್ ಅವರು ಗ್ಯಾಂಗ್​​ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: 30 ನಿಮಿಮಿಷಗಳ ಕಾಲ ಸಿಪಿಆರ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯೆ – Kannada News | Half an Hour of Relentless Effort of Doctor in ICU Brings Patient Back to Life

ಐಸಿಯುನಲ್ಲಿ ಯಮನ ವಿರುದ್ಧ ವೈದ್ಯೆ ಹೋರಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ವೈದ್ಯೆಯೊಬ್ಬರು 30 ನಿಮಿಷಗಳ ಕಾಲ ಸಿಪಿಆರ್ ಮಾಡಿ ರೋಗಿಯನ್ನು ಬದುಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರೋಗಿಯನ್ನು ಬದುಕಿಸಲೇ ಬೇಕೆನ್ನುವ ದೃಢ ಸಂಕಲ್ಪಕ್ಕೆ ಎಲ್ಲರೂ ಧನ್ಯವಾದ ವ್ಯಕ್ತಪಡಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

VIDEO: ಅದ್ಭುತ, ಅತ್ಯದ್ಭುತ… ಇದು ವಿಶ್ವಕಪ್​ನ ಬೆಸ್ಟ್ ಕ್ಯಾಚ್! – Kannada News | Pathum nissanka’s Catch video

ಟಿ20 ವಿಶ್ವಕಪ್​ನ 30ನೇ ಪಂದ್ಯದಲ್ಲಿ ಶ್ರೀಲಂಕಾ ತಂಡದ ಆಟಗಾರ ಪಾತುಮ್ ನಿಸ್ಸಂಕಾ ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಈ ಪಂದ್ಯದ 17ನೇ ಓವರ್​ನ ಮೊದಲ ಎಸೆತದಲ್ಲಿ ಆಸ್ಟ್ರೇಲಿಯಾ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ ಸ್ವಿಚ್ ಹಿಟ್ ಶಾಟ್ ಬಾರಿಸಿದ್ದರು. ಈ ವೇಳೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಪಾತುಮ್ ನಿಸ್ಸಂಕಾ ಗಾಳಿಯಲ್ಲಿ ಹಿಂಬದಿಯಾಗಿ ಜಿಗಿದು ಅದ್ಭುತವಾಗಿ ಚೆಂಡನ್ನು ಹಿಡಿದಿದ್ದಾರೆ.

ಇದೀಗ ಪಾತುಮ್ ನಿಸ್ಸಂಕಾ ಅವರ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಬಾರಿಯ ವಿಶ್ವಕಪ್​ನ ಬೆಸ್ಟ್ ಕ್ಯಾಚ್ ಎಂದು ವರ್ಣಿಸಲಾಗುತ್ತಿದೆ.

ಇನ್ನು ಈ  ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್​ಗಳಲ್ಲಿ 181 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಶ್ರೀಲಂಕಾ ತಂಡ 18 ಓವರ್​ಗಳಲ್ಲಿ ಚೇಸ್ ಮಾಡಿ 8 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಲಂಕಾ ಪಡೆ ಟಿ20 ವಿಶ್ವಕಪ್​ನ ದ್ವಿತೀಯ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

 

Source link

ಮುಡಾ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​: ಆಡಿಯೋ ಬಾಂಬ್​​ ಸಿಡಿಸಿದ ಸ್ನೇಹಮಯಿ ಕೃಷ್ಣ – Kannada News | MUDA Site Scam: Snehamayi Krishna Accuses CS Shalini Rajaneesh of Bribery in D.B. Natesh Promotion

ಮೈಸೂರು, ಫೆಬ್ರವರಿ 17: ಮುಡಾ ಸೈಟ್ ಹಂಚಿಕೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ತಮ್ಮ ಮುಂಬಡ್ತಿಗಾಗಿ ಶಾಲಿನಿ ರಜನೀಶ್ ಅವರಿಗೆ 1 ಕೋಟಿ 60 ಲಕ್ಷ ರೂಪಾಯಿ ಲಂಚ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ. ಈ ಕುರಿತು ತಮಗೆ ಫೆಬ್ರವರಿ 9 ರಂದೇ ಮಾಹಿತಿ ಲಭ್ಯವಾಗಿದ್ದು, ಇದಕ್ಕೆ ಪೂರಕವಾಗಿ ಸಾಕ್ಷಿಗಳೂ ಸಿಕ್ಕಿವೆ ಎಂದು ಹೇಳಿದ್ದಾರೆ. ಲಂಚದ ಬಗ್ಗೆ ಮಾಹಿತಿ ಬಂದ ಮರುದಿನವೇ ನಟೇಶ್‌ಗೆ ಮುಂಬಡ್ತಿ ನೀಡಿರುವುದು ಅನುಮಾನಕ್ಕೆ ಎಡೆಮಾಡಿದೆ. ಹೀಗಾಗಿ ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿರೋದಾಗಿ ಅವರು ತಿಳಿಸಿದ್ದಾರೆ. ಶಾಲಿನಿ ರಜನೀಶ್ ಅವರಿಂದ ಸ್ಪಷ್ಟೀಕರಣ ಕೋರಿ ಪತ್ರ ಬರೆದಿರುವ ಕೃಷ್ಣ, ಪ್ರಕರಣದಿಂದ ಹೊರಬರಲು ನಟೇಶ್ ತಮ್ಮನ್ನು ಸಂಪರ್ಕಿಸಲು ಯತ್ನಿಸಿದ್ದರು ಎನ್ನಲಾದ ಆಡಿಯೋ ಕ್ಲಿಪ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ – Kannada News | India’s Largest Railway Mega Coaching Terminal to Come Up in Bengaluru’s Yelahanka: V Somanna Announcement

ಬೆಂಗಳೂರು, ಫೆಬ್ರವರಿ 17: ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಮಹತ್ವದ ರೈಲ್ವೆ ಯೋಜನೆಗಳ ಕುರಿತು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಲಹಂಕದಲ್ಲಿ 5754 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದ್ದು, ಇದು ಭಾರತದ ಅತಿದೊಡ್ಡ ಕೋಚಿಂಗ್ ಸೆಂಟರ್ ಆಗಲಿದೆ. ಆರಂಭದಲ್ಲಿ ದೇವನಹಳ್ಳಿಯಲ್ಲಿ ಪ್ರಸ್ತಾಪಿಸಲಾಗಿದ್ದ ಈ ಯೋಜನೆ, ದೂರದ ಕಾರಣ ಯಲಹಂಕಕ್ಕೆ ಸ್ಥಳಾಂತರಗೊಂಡಿದೆ. ರೈಲ್ವೆ ಮಂಡಳಿಯು ಯಲಹಂಕದಲ್ಲಿ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಅನುಮೋದನೆ ನೀಡಿದೆ ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ 1370 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲಾನ್ ಅನುಮೋದನೆ ಹಂತದಲ್ಲಿದೆ. ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕಾಗಿ ತಲಾ 485-500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ವೈಟ್‌ಫೀಲ್ಡ್‌ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದವರೆಗಿನ ನಾಲ್ಕು ಪಥದ ರೈಲ್ವೆ ಮಾರ್ಗ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತುಮಕೂರು-ಬೆಂಗಳೂರು ನಾಲ್ಕು ಪಥದ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಕ್ಯಾಬಿನೆಟ್‌ಗೆ ಸಲ್ಲಿಸಲಾಗಿದೆ. ವೈಟ್‌ಫೀಲ್ಡ್‌ನಿಂದ ಕೋಲಾರಕ್ಕೆ ನೇರ ರೈಲು ಸಂಪರ್ಕಕ್ಕಾಗಿ ಸಮೀಕ್ಷೆ ನಡೆಸಲು ಡಿಆರ್‌ಎಂ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bilva Patra: ಶಿವ ಪೂಜೆಯಲ್ಲಿ ಬಿಲ್ವಪತ್ರೆ ಅರ್ಪಿಸುವ ನಿಯಮ ಮತ್ತು ಮಂಗಳಕರ ದಿನಗಳು – Kannada News | Bilva Patra for Shiva Puja: Spiritual Benefits, Rituals and Mahashivaratri Importance

ಹಿಂದೂ ಧರ್ಮದಲ್ಲಿ, ಅದರಲ್ಲೂ ಶಿವನ ಆರಾಧನೆಯಲ್ಲಿ, ಬಿಲ್ವಪತ್ರೆಯು ಪವಿತ್ರ ಸ್ಥಾನವನ್ನು ಪಡೆದಿದೆ. ಬಿಲ್ವಾಷ್ಟಕಂನಲ್ಲಿ “ಏಕಬಿಲ್ವಂ ಶಿವಾರ್ಪಣಂ” ಎಂದು ಹೇಳುವಂತೆ, ಶಿವನಿಗೆ ಒಂದು ಬಿಲ್ವಪತ್ರೆ ಅರ್ಪಿಸಿದರೆ ಕೋಟಿ ಕನ್ಯಾದಾನ ಮಾಡಿದ ಫಲ ಲಭಿಸುತ್ತದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಬಿಲ್ವಪತ್ರೆಯು ಮೂರು ಎಲೆಗಳನ್ನು, ಅಂದರೆ ಮೂರು ದಳಗಳನ್ನು ಹೊಂದಿರುತ್ತದೆ, ಇದು ತ್ರಿಗುಣಗಳ (ಸತ್ವ, ರಜೋ, ತಮೋಗುಣ) ಮತ್ತು ಶಿವನ ತ್ರಿನೇತ್ರಗಳ ಪ್ರತೀಕವಾಗಿದೆ. “ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ” ಎಂಬ ಶ್ಲೋಕ ಇದರ ಮಹತ್ವವನ್ನು ಸಾರುತ್ತದೆ. ಬಿಲ್ವಪತ್ರೆಯ ಪೂಜೆಯಿಂದ ಮೂರು ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ, ಇದು ಭಕ್ತಿ ಮತ್ತು ಶ್ರದ್ಧೆಯ ಫಲವಾಗಿದೆ. ಮಹಾಲಕ್ಷ್ಮಿ ದೇವಿಯು ಈ ತ್ರಿದಳಗಳಲ್ಲಿ ವಾಸವಾಗಿರುತ್ತಾಳೆ ಎಂದು ಹೇಳಲಾಗುತ್ತದೆ.

ಬಿಲ್ವಪತ್ರೆಯನ್ನು ಅರ್ಪಿಸುವಾಗ ಕೆಲವು ನಿಯಮಗಳಿವೆ. ಎಲೆಗಳು ಹರಿದಿರಬಾರದು ಮತ್ತು ಶುದ್ಧವಾಗಿ ನೀರಿನಿಂದ ತೊಳೆದಿರಬೇಕು. ಒಣಗಿದ ಬಿಲ್ವಪತ್ರೆಯನ್ನೂ ಹಲವು ದಿನಗಳವರೆಗೆ ಪೂಜೆಗೆ ಬಳಸಬಹುದು. ಚತುರ್ದಶಿ, ಅಷ್ಟಮಿ, ಅಮಾವಾಸ್ಯೆ, ಸಂಕ್ರಾಂತಿ ಮತ್ತು ಮಹಾಶಿವರಾತ್ರಿಯಂದು ಶಿವನ ಲಹರಿಗಳು ಅಧಿಕವಾಗಿರುವುದರಿಂದ ಈ ದಿನಗಳಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದು ಹೆಚ್ಚು ಮಂಗಳಕರ. ಮಹಾಶಿವರಾತ್ರಿಯಂದು ಸೂರ್ಯೋದಯದಿಂದ ಮರುದಿನದ ಸೂರ್ಯೋದಯದವರೆಗೆ ಪ್ರತಿ ಕ್ಷಣವೂ ಭಗವಂತನ ಅವಿರ್ಭಾವ ಇರುತ್ತದೆ.

ಇದನ್ನೂ ಓದಿ: ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯಗ್ರಹಣ; ಉಂಗುರಾಕಾರದಲ್ಲಿ ಸೂರ್ಯ ಗೋಚರ

ಬಿಲ್ವಪತ್ರೆಯ ಆವಿರ್ಭಾವಕ್ಕೆ ಸಂಬಂಧಿಸಿದಂತೆ ಶಿವಪುರಾಣ ಮತ್ತು ಸ್ಕಂದಪುರಾಣಗಳಲ್ಲಿ ಹಲವು ಕಥೆಗಳಿವೆ. ಒಂದು ಕಥೆಯ ಪ್ರಕಾರ, ಪಾರ್ವತಿ ದೇವಿಯು ಮಂದಾರ ಪರ್ವತದ ಮೇಲೆ ಕಠೋರ ತಪಸ್ಸು ಮಾಡುತ್ತಿದ್ದಾಗ, ಆಕೆಯ ಬೆವರಿನಿಂದ ಬಿಲ್ವ ವೃಕ್ಷ ಉದ್ಭವಿಸಿತು. ಈ ವೃಕ್ಷದ ಬೇರಿನಲ್ಲಿ ಗಿರಿಜಾದೇವಿ, ಕಾಂಡದಲ್ಲಿ ಮಹೇಶ್ವರಿ, ಕೊಂಬೆಗಳಲ್ಲಿ ದಾಕ್ಷಾಯಿಣಿ, ಎಲೆಗಳಲ್ಲಿ ಪಾರ್ವತಿ, ಹೂವುಗಳಲ್ಲಿ ಗೌರಿ ಮತ್ತು ಹಣ್ಣುಗಳಲ್ಲಿ ಕಾತ್ಯಾಯಿನಿ ದೇವಿಯು ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಮತ್ತೊಂದು ಕಥೆಯು, ಮಹಾಲಕ್ಷ್ಮಿಯ ತಪಸ್ಸಿನಿಂದ ಶಿವನು ಮೆಚ್ಚಿ ಈ ಬಿಲ್ವಪತ್ರೆಯನ್ನು ಉದ್ಭವಿಸಿದನು ಎಂದು ಹೇಳುತ್ತದೆ. ಶುಕಮುನಿಗಳ ಕಥೆಯಲ್ಲಿ, ಬೇಟೆಗೆ ಹೋದ ಬೇಡನೊಬ್ಬ ಅರಿವಿಲ್ಲದೆ ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸಿ ಪುಣ್ಯ ಗಳಿಸಿದ ಪ್ರಸಂಗವೂ ಇದೆ.

ಬಿಲ್ವಪತ್ರೆಯನ್ನು ನಿಯಮಿತವಾಗಿ, ವಿಶೇಷವಾಗಿ ಸೋಮವಾರಗಳಂದು, ಮಾಸಿಕ ಶಿವರಾತ್ರಿಯಂದು ಅಥವಾ ಶಿವನಾಮ ಸ್ಮರಣೆಯೊಂದಿಗೆ ಅರ್ಪಿಸುವುದರಿಂದ ಶುಭ ಫಲಗಳು ಪ್ರಾಪ್ತವಾಗುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:14 am, Tue, 17 February 26

Source link

Gold Rate Today: ಮುಂದುವರಿದಿದೆ ಚಿನ್ನ, ಬೆಳ್ಳಿ ಬೆಲೆಗಳ ಕುಸಿತ – Kannada News | Gold Price Today on 17th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 17: ಚಿನ್ನ, ಬೆಳ್ಳಿ ಬೆಲೆಗಳೆರಡೂ ಮಂಗಳವಾರ ಕುಸಿತ ಕಂಡಿವೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ (Gold Rates) ಇಳಿಕೆ ಮುಂದುವರಿದಿದೆ. ಭಾರತದಲ್ಲಿ ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 140 ರೂ ಕಡಿಮೆ ಆಗಿದೆ. ಇದಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆಯ ಕುಸಿತ ಹೆಚ್ಚಿನ ತೀವ್ರತೆ ಹೊಂದಿದೆ. ಗ್ರಾಮ್​ಗೆ 8 ರೂನಷ್ಟು ಇಳಿಕೆ ಆಗಿದೆ. ಕಳೆದ ಐದು ದಿನಗಳ ಅಂತರದಲ್ಲಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 35 ರೂಗಳಷ್ಟು ಇಳಿಕೆ ಆಗಿದೆ. ಕಳೆದ ಮೂರು ವಾರಗಳಲ್ಲಿ ಇದರ ಬೆಲೆ 410 ರೂನಿಂದ 260 ರೂಗೆ ಇಳಿದಿದೆ. ಅಂದರೆ, ಶೇ. 60ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ತಗ್ಗಿದೆ. ಜನವರಿ 10ರಂದು ಇದ್ದ ಬೆಲೆಗೆ ಸದ್ಯ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,910 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 17ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,491 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,200 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,618 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,491 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,200 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,200 ರೂ
  • ಚೆನ್ನೈ: 14,320 ರೂ
  • ಮುಂಬೈ: 14,200 ರೂ
  • ದೆಹಲಿ: 14,215 ರೂ
  • ಕೋಲ್ಕತಾ: 14,200 ರೂ
  • ಕೇರಳ: 14,200 ರೂ
  • ಅಹ್ಮದಾಬಾದ್: 14,205 ರೂ
  • ಜೈಪುರ್: 14,215 ರೂ
  • ಲಕ್ನೋ: 14,215 ರೂ
  • ಭುವನೇಶ್ವರ್: 14,200 ರೂ

ಇದನ್ನೂ ಓದಿ: ಅಮೆರಿಕದ ಟ್ಯಾರಿಫ್ ಪರಿಣಾಮ ನಡುವೆಯೂ ಜನವರಿಯಲ್ಲಿ ಭಾರತದ ರಫ್ತು ಶೇ. 13.16 ಹೆಚ್ಚಳ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 599 ರಿಂಗಿಟ್ (13,879 ರುಪಾಯಿ)
  • ದುಬೈ: 557.50 ಡಿರಾಮ್ (13,778 ರುಪಾಯಿ)
  • ಅಮೆರಿಕ: 155 ಡಾಲರ್ (14,066 ರುಪಾಯಿ)
  • ಸಿಂಗಾಪುರ: 195.50 ಸಿಂಗಾಪುರ್ ಡಾಲರ್ (14,048 ರುಪಾಯಿ)
  • ಕತಾರ್: 551 ಕತಾರಿ ರಿಯಾಲ್ (13,722 ರೂ)
  • ಸೌದಿ ಅರೇಬಿಯಾ: 563 ಸೌದಿ ರಿಯಾಲ್ (13,627 ರುಪಾಯಿ)
  • ಓಮನ್: 59.20 ಒಮಾನಿ ರಿಯಾಲ್ (13,958 ರುಪಾಯಿ)
  • ಕುವೇತ್: 45.53 ಕುವೇತಿ ದಿನಾರ್ (13,543 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 265 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 265 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಅಪ್ಪಟ ಭಾರತೀಯ ನಿರ್ಮಿತ ಎಐ ಮಾಡಲ್​ಗಳು ಎಂಥೆಂಥವಿವೆ ನೋಡಿ… – Kannada News | India AI Impact Expo 2026, Narendra Modi happy with Indian made AI solutions for various sectors

ನವದೆಹಲಿ, ಫೆಬ್ರುವರಿ 17: ಫೆಬ್ರುವರಿ 20ರವರೆಗೆ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ (India AI Impact Summit) ಭಾರತೀಯ ಎಐ ಎಕ್ಸ್​ಪೋ ಪ್ರಮುಖ ಆಕರ್ಷಣೆ ಆಗಿದೆ. ಭಾರತದಲ್ಲಿ ಮತ್ತು ಭಾರತೀಯರೇ ಸ್ವಂತವಾಗಿ ನಿರ್ಮಿಸಿದ ಎಐ ಮಾಡಲ್​ಗಳು, ಎಐ ಏಜೆಂಟ್​ಗಳು, ರೋಬೋಗಳ ಪ್ರದರ್ಶನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತೀ ಸ್ಟಾಲ್​ಗೂ ಹೋಗಿ ಹೊಸ ಆವಿಷ್ಕಾರಗಳನ್ನು ಕಣ್ಣಾರೆ ಕಂಡಿದ್ದಾರೆ. ಅದರ ಬಗ್ಗೆ ವಿವರಣೆಗಳನ್ನೂ ಪಡೆದಿದ್ದಾರೆ. ಶಿಕ್ಷಣ, ಕೃಷಿ, ತಂತ್ರಜ್ಞಾನ, ಫೈನಾನ್ಸ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಎಐ ಅನ್ನು ಹೇಗೆ ಸಮರ್ಥವಾಗಿ ಉಪಯೋಗಿಸಬಹುದು ಎಂಬುದನ್ನು ಈ ಪ್ರದರ್ಶನದಲ್ಲಿ ಕಾಣಬಹುದು. ಸರ್ವಮ್ ಎಐ, ಮೈಕೋ ರೋಬೋ ಇತ್ಯಾದಿ ನಾನಾ ರೀತಿಯ ಎಐ ಮಾಡಲ್​ಗಳು, ಎಐ ಆವಿಷ್ಕಾರಗಳು ಎಐ ಇಂಪ್ಯಾಕ್ಟ್ ಸಮಿಟ್​ನ ಮೊದಲ ದಿನ ಪ್ರದರ್ಶನಗೊಂಡವು. ಭಾರತವು ಎಐ ಅನ್ನು ಲೋಕಕಲ್ಯಾಣಕ್ಕಾಗಿ ಜವಾಬ್ದಾರಿಯುತವಾಗಿ ಬಳಕೆ ಮಾಡುವ ಮೂಲಕ ಮಾದರಿಯಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಭಾರತ್ ಮಂಟಪಂನಲ್ಲಿ ನಿನ್ನೆ (ಫೆ. 16) ಆರಂಭಗೊಂಡ ಎಐ ಇಂಪ್ಯಾಕ್ಟ್ ಸಮಿಟ್ ಫೆಬ್ರುವರಿ 20ರವರೆಗೂ ಇದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link