All posts by nagaraj11081993

ಲಕ್ಕುಂಡಿಗೆ ಹರಿದುಬರುತ್ತಿದ್ದಾರೆ ಪ್ರವಾಸಿಗರು! ನಿಧಿಸಿಕ್ಕ ಬೆನ್ನಲ್ಲೇ ಬದಲಾಯ್ತು ಚಹರೆ – Kannada News | Tourist Rush to Lakkundi After Treasure Discovery: Historic Manikesvara Temple and Stepwell Seek Urgent Development

ಲಕ್ಕುಂಡಿಯ ಐತಿಹಾಸಿಕ ದೇಗುಲImage Credit source: tv9

ಗದಗ, ಫೆಬ್ರವರಿ 17: ಸೂಕ್ಷ್ಮ ಕೆತ್ತನೆಯ ಸುಂದರ ಶಿಲ್ಪಕಲೆ ಹೊಂದಿರುವ ಮಾಣಿಕ್ಯೇಶ್ವರ ದೇವಸ್ಥಾನ. ಕಲ್ಯಾಣ ಚಾಲುಕ್ಯ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ವಿಹಂಗನೋಟ. ಮುಸುಕಿನ ಬಾವಿಯಲ್ಲಿ 12 ಶಿವಲಿಂಗ ಸ್ಥಾಪನೆಯ ಪುಟ್ಟ ಪುಟ್ಟ ದೇವಸ್ಥಾನಗಳ ಸಂಕೀರ್ಣ. ದೇವಸ್ಥಾನದ ಶಿಲ್ಪಕಲೆ ಹಾಗೂ ಬಾವಿನ ಅದ್ಭುತ ಶೈಲಿ ಸಾರಿ ಸಾರಿ ಹೇಳುತ್ತಿವೆ ಗದಗ (Gadag) ಜಿಲ್ಲೆಯ ಲಕ್ಕುಂಡಿ ಗತವೈಭವ. ಲಕ್ಕುಂಡಿ ಎಂದರೆ ಅದು ಐತಿಹಾಸಿಕ ದೇವಾಲಯಗಳ ಸ್ವರ್ಗ. ಶಿಲ್ಪಕಲೆಗಳ ಬೀಡು. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾದ ಬೆನ್ನಲ್ಲೇ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಂದು ಕಾಲದಲ್ಲಿ ಕಲ್ಯಾಣ ಚಾಲುಕ್ಯರ ವೈಭವದ ಕೇಂದ್ರವಾಗಿದ್ದ ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳು ಹಾಗೂ ಪುರಾತನ ಬಾವಿಗಳು ಗತ ವೈಭವವನ್ನು ಇಂದಿಗೂ ಜೀವಂತವಾಗಿ ಹೇಳುತ್ತಿವೆ. ಲಕ್ಕುಂಡಿ ಗ್ರಾಮದ ಪ್ರಮುಖ ಆಕರ್ಷಣೆಯಾಗಿ ಮಾಣಿಕ್ಯೇಶ್ವರ ದೇವಾಲಯ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಕಲ್ಯಾಣ ಚಾಲುಕ್ಯರು ನಿರ್ಮಾಣ ಮಾಡಿದ ಈ ಅಮೋಘ, ಅದ್ಭುತ, ಸುಂದರ ಕೆತ್ತನೆಯ ದೇವಾಲಯವು ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿತವಾಗಿದ್ದು, ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಸಾಲಿಗ್ರಾಮ ಶಿಲೆಯಿಂದ ಕೆತ್ತನೆ ಮಾಡಲಾದ ಅಪರೂಪದ ಶಿವಲಿಂಗವು ದೇವಾಲಯದ ವಿಶೇಷತೆಯಾಗಿದೆ. ದೇವಾಲಯದ ಗೋಡೆಗಳ ಮೇಲೆ ಕಂಡುಬರುವ ಸೂಕ್ಷ್ಮ ಕೆತ್ತನೆಗಳು ಮತ್ತು ಶಿಲ್ಪಕಲೆಗಳು ಆ ಕಾಲದ ಶಿಲ್ಪಿಗಳ ಕೈಚಾಣಾಕ್ಷತೆಯನ್ನು ಸಾರುತ್ತವೆ. ದೇವಾಲಯದ ಮುಂಭಾಗದಲ್ಲಿರುವ ಮುಸುಕಿನ ಬಾವಿಯೂ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ. ಎರಡು ಅಂತಸ್ತಿನಂತೆ ಕಾಣುವ ಕಂಬಗಳು, ಶಿಲ್ಪಕಲೆಯಿಂದ ಕೆತ್ತನೆ ಮಾಡಲಾದ ವಿನ್ಯಾಸಗಳು ನೋಡುಗರನ್ನು ಅಚ್ಚರಿಗೊಳಿಸುತ್ತವೆ. ಮಾಣಿಕ್ಯೇಶ್ವರ ದೇವಸ್ಥಾನದ ಮುಂದಿನ ಎರಡು ಅಂತಸ್ತಿನ ಮುಸುಕಿನ ಬಾವಿಯ ವಿಹಂಗನೋಟ ಸಾಕಷ್ಟು ಆಕರ್ಷಣೆಯಾಗಿದೆ. 12 ಜ್ಯೋತಿರ್ಲಿಂಗ ಗೋಪುರಗಳು, ಬಾವಿಯೊಳಗೆ ಮೆಟ್ಟಿಲುಗಳು, ಶಿಲ್ಪಕಲೆ ಅಬ್ಬಾ ಅದ್ಭುತ. ಅಷ್ಟೊಂದು ಅಮೋಘವಾಗಿ ನಿರ್ಮಾಣ ಮಾಡಲಾಗಿದೆ.

ಬಹಳಷ್ಟು ನಿರೀಕ್ಷೆಯಲ್ಲಿ ಬಂದ ಪ್ರವಾಸಿಗರಿಗೆ ನಿರಾಸೆ

ಆದರೆ, ಪುರಾತನ ಕಾಲದ ಈ ಬಾವಿಯಲ್ಲಿ ಪಾಚಿ ಬೆಳೆದು, ಕಲುಷಿತ ನೀರು ನಿಂತಿದ್ದು, ನಿರ್ವಹಣೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆಕರ್ಷಣೆಯಾಗಿದ್ದರೂ, ಸುತ್ತಮುತ್ತಲಿನ ಅವ್ಯವಸ್ಥೆ ಪ್ರವಾಸಿಗರನ್ನು ನಿರಾಶೆಗೊಳಿಸುತ್ತಿದೆ. ದೇವಾಲಯ ಮತ್ತು ಬಾವಿಗೆ ತಲುಪುವ ಸರಿಯಾದ ರಸ್ತೆ ಇಲ್ಲದೆ ಸಮಸ್ಯೆ ಎದುರಾಗಿದೆ.

ಸ್ವಚ್ಛತೆಯ ಕೊರತೆ, ಪಾಚಿ ಕಟ್ಟಿದ ನೀರು ಮತ್ತು ನಿರ್ಲಕ್ಷ್ಯ ವಾತಾವರಣ ಇದೆ. ಅಭಿವೃದ್ಧಿ ಮಾಡುವ ಅಗತ್ಯ ಇದೆ. ದೇವಸ್ಥಾನದ ಒಳಗಡೆ ಲೈಟ್ ವ್ಯವಸ್ಥೆ ಇಲ್ಲದೆ ಪ್ರವಾಸಿಗಳು ಮೊಬೈಲ್ ಟಾರ್ಚ್​ನಿಂದಲೇ ದೇವಸ್ಥಾನಗಳ ಸೌಂದರ್ಯ ಸವಿಯುವ ದುಃಸ್ಥಿತಿ ಇದೆ.

ಪುರಾತತ್ವ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರ ಆಕ್ರೋಶ

ಮಾಣಿಕ್ಯೇಶ್ವರ ದೇವಸ್ಥಾನ ಕೇಂದ್ರ ಪುರಾತತ್ವ ಇಲಾಖೆಗೆ ಒಳಪಟ್ಟಿದೆ. ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ರಸ್ತೆ ಅಭಿವೃದ್ಧಿ, ಬಾವಿ ಸ್ವಚ್ಛತೆ ಹಾಗೂ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಆಗ ಮಾತ್ರ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೌಡಿ ಶೀಟರ್ ಬಿಕ್ಲು ಶಿವ ಹತ್ಯೆಗೆ ಕಾರಣವಾಗಿದ್ದು ಇದೇ ಘಟನೆ: Exclusive ವಿಡಿಯೋ ಇಲ್ಲಿದೆ – Kannada News | Biklu Shiva Murder Case: Exclusive Video Reveals Genesis of Rivalry and Conspiracy

ಬೆಂಗಳೂರು, ಫೆಬ್ರವರಿ 17: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಪ್ರಕರಣದ ಹಿಂದಿನ ಪಿತೂರಿ ಹಾಗೂ ವೈರತ್ವಕ್ಕೆ ಕಾರಣವಾದ ವಿಡಿಯೋ TV9ಗೆ ಲಭಿಸಿದ್ದು, ಮೂಲಗಳ ಪ್ರಕಾರ ಬಿಕ್ಲು ಶಿವ ಮತ್ತು ಜಗ್ಗ ಈ ಹಿಂದೆ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಮಲಯಾಳಿ ಅಜಿತ್‌ನ ಬಂಟ ಆಟೋ ಜೈ, ಜಗ್ಗ ಮತ್ತು ಶಿವನ ನಡುವೆ ವೈಮನಸ್ಸು ಮೂಡಿಸಲು ಸಂಚು ರೂಪಿಸಿದ್ದ. ಡಾನ್ ಪದದ ಕುರಿತು ನಡೆದ ಸಣ್ಣ ಗಲಾಟೆಯನ್ನು ದೊಡ್ಡದು ಮಾಡಿ, ಜಗ್ಗನ ವಿರುದ್ಧ ಬಿಕ್ಲು ಶಿವ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಮಾಡಿದ್ದ. ನಂತರ ಆಟೋ ಜೈ, ಕೊಲೆ ಪ್ರಕರಣದ ಎ2 ಆರೋಪಿ ಕಿರಣ್‌ಗೆ (ಜಗ್ಗನ ಭಾವ) ಕರೆ ಮಾಡಿ, ಬಿಕ್ಲು ಶಿವ ಜಗ್ಗನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾನೆ ಎಂದು ಪ್ರಚೋದಿಸಿದ್ದ. ಇದರಿಂದ ಕೆರಳಿದ ಕಿರಣ್ ಕೆ.ಆರ್. ಪುರಂ ಮತ್ತು ಅಮೃತಹಳ್ಳಿ ಹುಡುಗರ ತಂಡವನ್ನು ಕಟ್ಟಿಕೊಂಡು ಜುಲೈ 15ರಂದು ಬಿಕ್ಲು ಶಿವನನ್ನು ಆತನ ಮನೆಯ ಬಳಿಯೇ ಕೊಲೆ ಮಾಡಿದ್ದ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಮನೆಯಿಲ್ಲದ, ಶಾಲೆಗೆ ಹೋಗಲು ಆಗದ ಮಕ್ಕಳಿಗೆ ಫುಟ್ಪಾತ್​ನಲ್ಲಿ ಕುಳಿತು ಪಾಠ ಮಾಡಿದ ವ್ಯಕ್ತಿ – Kannada News | Delhi Man Holds Street Classes for Homeless Kids, Internet Applauds

ನವದೆಹಲಿ, ಫೆಬ್ರವರಿ 17: ಮನೆಯಿಲ್ಲದ, ಶಾಲೆಗೆ ಹೋಗಲು ಸಾಧ್ಯವಾಗದ ಮಕ್ಕಳಿಗೆ ವ್ಯಕ್ತಿಯೊಬ್ಬ ಫುಟ್ಪಾತ್​ನಲ್ಲಿ ಕುಳಿತು ಪಾಠ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ದೆಹಲಿಯ ಫುಟ್ಪಾತ್​ನಲ್ಲಿ ಮಕ್ಕಳ ಮಧ್ಯೆ ಕುಳಿತು ವ್ಯಕ್ತಿಯೊಬ್ಬ ಪಾಠ ಮಾಡಿದ್ದಾರೆ. ಆಶ್ರಯವಿಲ್ಲದ ಮಕ್ಕಳಿಗೆ ಕಲಿಸುತ್ತಿರುವುದು ಖ್ಯಾತಿಗಾಗಿ ಅಲ್ಲ, ಚಪ್ಪಾಳೆಗಾಗಿ ಅಲ್ಲ ಆದರೆ ಮಾನವೀಯತೆಗಾಗಿ. ವಿಡಿಯೋವನ್ನು ಗಮನಿಸಿದ ವಿದ್ಯಾರ್ಥಿಯೊಬ್ಬರು ಇವರು ನಮ್ಮ ಶಿಕ್ಷಕರು ನನಗೆ 10ನೇ ತರಗತಿಯಲ್ಲಿ ಪಾಠ ಮಾಡಿದ್ದರು ಎಂದು ಕಮೆಂಟ್ ಮಾಡಿದ್ದಾರೆ.ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಕೋಪದಲ್ಲಿ ಚೆರ್ರಿ ಹಣ್ಣು ಹಾಕಿದ್ದ ತಟ್ಟೆಯನ್ನೇ ಎಸೆದ ಗಿಳಿ – Kannada News | Parrot throws fruit from plate in anger, video goes viral

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಹೃದಯ ಗೆಲ್ಲುತ್ತವೆ. ಅದರಲ್ಲೂ ಈ ಪ್ರಾಣಿ ಪಕ್ಷಿಗಳಿಗೆ ಸಂಬಂಧ ಪಟ್ಟ ದೃಶ್ಯಗಳು ಬಹುಬೇಗನೆ ವೈರಲ್ ಆಗುತ್ತವೆ. ಆದರೆ ಇದೀಗ ಗಿಳಿಯೊಂದು (Parrot) ಮನೆಮಾಲೀಕನೊಂದಿಗೆ ಕೋಪಿಸಿಕೊಂಡಿದೆ. ಮನೆ ಮಾಲೀಕ ತಟ್ಟೆಗೆ ಚೆರ್ರಿ ಹಣ್ಣು ಹಾಕುತ್ತಿದ್ದಂತೆ ಕೋಪದಲ್ಲಿ ತಟ್ಟೆಯನ್ನು ಎಸೆದಿದೆ. ಕೋಪಿಸಿಕೊಂಡ ಗಿಳಿಯ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಚಂದು ಡಾಟ್‌ ಕಾಮ್‌ (Chandu Dot Com) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೋಪಗೊಂಡ ಗಿಳಿಯ ರಿಯಾಕ್ಷನ್ ಹೇಗಿತ್ತು ಎನ್ನುವುದನ್ನು ನೋಡಬಹುದು. ಮಾಲೀಕನು ಗಿಳಿಯ ಮುಂದೆ ತಟ್ಟೆಯಿಟ್ಟು ಅದಕ್ಕೆ ಚೆರ್ರಿ ಹಣ್ಣನ್ನು ಹಾಕಿದ್ದಾನೆ. ಕೋಪಗೊಂಡಿದ್ದ ಗಿಳಿಯೂ ಚೆರ್ರಿ ಹಣ್ಣು ಸಹಿತ ತಟ್ಟೆಯನ್ನು ಎಸೆಯುತ್ತಿರುವುದನ್ನು ಕಾಣಬಹುದು. ಪ್ರತಿ ಸಲನು ಚೆರ್ರಿ ಹಣ್ಣು ತಟ್ಟೆಯಲ್ಲಿ ಇಟ್ಟೊಡನೆ ಇದೇ ರೀತಿ ಮಾಡುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಟೊಮೊಟೊ ಕೊಡಲ್ಲ ಎಂದಿದ್ದಕ್ಕೆ ಮನೆಯೊಡತಿಗೆ ಬೆದರಿಕೆ ಹಾಕಿದ ಸಾಕು ಗಿಳಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯಾಕೆ ಗಿಳಿಯೂ ಕೋಪಗೊಂಡಿದೆ ಎಂದು ಕೇಳಿದ್ದಾರೆ. ಮತ್ತೊಬ್ಬರು, ಅದಕ್ಕೆ ಈ ಹಣ್ಣು ಇಷ್ಟ ಇಲ್ಲ ಎಂದು ಕಾಣಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟ್ಟೊಟ್ಟಿಗೆ ಐದು ಸಿನಿಮಾ ಹಿಡಿದು ಬಂದ ರಕ್ಷಿತ್ ಶೆಟ್ಟಿ – Kannada News | Rakshit Shetty is ready with five movie scripts

ರಕ್ಷಿತ್ ಶೆಟ್ಟಿ (Rakshit Shetty), ಸ್ಯಾಂಡಲ್​​ವುಡ್​​ನ ಇತರೆ ನಾಯಕ ನಟರು ಹಾಗೂ ನಿರ್ದೇಶಕರುಗಳ ರೀತಿಯಲ್ಲ. ಅವರಿಗೆ ಅವರದ್ದೇ ಆದ ಮಾದರಿಯಿದೆ, ಬೇರೆ ನಟರುಗಳ ಅಥವಾ ಸಿನಿಮಾ ರಂಗದ ಸಿದ್ಧ ಮಾದರಿಗಳನ್ನು ಅವರು ಅನುಸರಿಸುವುದಿಲ್ಲ. ‘ಉಳಿದವರು ಕಂಡಂತೆ’ ಅಂಥಹಾ ಕಲ್ಟ್ ಸಿನಿಮಾ ನಿರ್ದೇಶಿಸಿರುವ ರಕ್ಷಿತ್ ಅವರ ನಿರ್ದೇಶನಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಇಷ್ಟೆಲ್ಲ ಇದ್ದರೂ ಸಹ ರಕ್ಷಿತ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ತೆಗೆದುಕೊಂಡಿರುವುದು 12-13 ವರ್ಷ. ನಟನಾಗಿಯೂ ಸಹ ರಕ್ಷಿತ್ ಶೆಟ್ಟಿಗೆ ಹಲವು ಆಫರ್​​ಗಳಿವೆ, ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ತಯಾರಾಗಿರುವ ನಿರ್ದೇಶಕರು, ನಿರ್ಮಾಪಕರು ಕಡಿಮೆ ಇಲ್ಲ. ಆದರೂ ಸಹ ರಕ್ಷಿತ್ ಅದನ್ನೆಲ್ಲ ಗಣನೆಗೆ ತೆಗೆದುಕೊಂಡಿಲ್ಲ.

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಒಮ್ಮೆಲೆ ಕಾಣೆ ಆಗಿಬಿಟ್ಟ ರಕ್ಷಿತ್ ಶೆಟ್ಟಿ ಕೆಲ ವರ್ಷಗಳ ಹಿಂದೆ ಘೋಷಿಸಿದ್ದ ‘ರಿಚರ್ಡ್ ಆಂಟೊನಿ’ ಸಿನಿಮಾದ ಚಿತ್ರಕತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ಸಿನಿಮಾದ ಚಿತ್ರಕತೆಗಾಗಿ ‘ಅಂಡರ್​​ಗ್ರೌಂಡ್’ ಆಗಿದ್ದ ರಕ್ಷಿತ್ ಶೆಟ್ಟಿ ಇದೀಗ ಹೊರಗೆ ಬಂದಾಗ ಐದು ಸಿನಿಮಾಗಳ ಸ್ಕ್ರಿಪ್ಟ್ ಹಿಡಿದುಕೊಂಡು ಹೊರಬಂದಿದ್ದಾರೆ.

ಹೌದು, ರಕ್ಷಿತ್ ಶೆಟ್ಟಿ ಬರೋಬ್ಬರಿ ಐದು ಸಿನಿಮಾಗಳ ಚಿತ್ರಕತೆಗಳೊಟ್ಟಿಗೆ ಬರುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಕ್ಷಿತ್ ಶೆಟ್ಟಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ರಿಚರ್ಡ್ ಆಂಟೊನಿ’, ‘ಪುಣ್ಯಕೋಟಿ’ ಜೊತೆಗೆ ಇನ್ನೂ ಮೂರು ಸಿನಿಮಾಗಳ ಚಿತ್ರಕತೆಗಳನ್ನು ರೆಡಿ ಮಾಡಿಕೊಂಡಿದ್ದು, ‘ಚಿತ್ರಕತೆಗಳು ನಾನಂದುಕೊಂಡಂತೆ ಬಂದಿವೆ’ ಎಂದಿದ್ದಾರೆ.

ಇದನ್ನೂ ಓದಿ:ನೇಮೋತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿ

ಇದೀಗ ಮಾರ್ಚ್ ತಿಂಗಳ ಅಂತ್ಯದಿಂದ ‘ರಿಚರ್ಡ್ ಆಂಟೊನಿ’ ಮತ್ತು ‘ಪುಣ್ಯಕೋಟಿ’ ಎರಡೂ ಸಿನಿಮಾಗಳ ಕೆಲಸ ಒಟ್ಟಿಗೆ ಪ್ರಾರಂಭ ಆಗಲಿವೆಯಂತೆ. ‘ಪುಣ್ಯಕೋಟಿ’ ಸಿನಿಮಾಕ್ಕೆ ಸಾಕಷ್ಟು ವಿಎಫ್​​ಎಕ್ಸ್ ಅವಶ್ಯಕತೆ ಇರುವುದರಿಂದ ವಿಎಫ್​ಎಕ್ಸ್ ಕೆಲಸಗಳನ್ನು ಈಗಿನಿಂದಲೇ ಆರಂಭಿಸುತ್ತಿದ್ದಾರೆ ರಕ್ಷಿತ್. ‘ರಿಚರ್ಡ್ ಆಂಟೊನಿ’ಗೂ ಸಹ ವಿಎಫ್​​ಎಕ್ಸ್ ಅವಶ್ಯಕತೆ ಇದೆ ಆದರೆ ಹೆಚ್ಚೇನೂ ಅಲ್ಲ ಹಾಗಾಗಿ ಅದರ ಚಿತ್ರೀಕರಣವನ್ನು ಶೀಘ್ರವೇ ಶುರು ಮಾಡುತ್ತಿದ್ದೀನಿ’ ಎಂದು ಹೇಳಿದ್ದಾರೆ.

‘ಉಳಿದವರು ಕಂಡಂತೆ’ ಸಿನಿಮಾನಲ್ಲಿ ರಕ್ಷಿತ್ ಶೆಟ್ಟಿ ರಿಚ್ಚಿ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಅದೇ ಪಾತ್ರವನ್ನು ಆಧರಿಸಿದ ಸ್ಪಿನ್ ಓವರ್ ಮಾದರಿಯ ಸಿನಿಮಾವನ್ನು ಇದೀಗ ‘ರಿಚರ್ಡ್ ಆಂಟೊನಿ’ ಮೂಲಕ ಮಾಡುತ್ತಿದ್ದಾರೆ ರಕ್ಷಿತ್ ಶೆಟ್ಟಿ. ಈ ಸಿನಿಮಾನಲ್ಲಿ ರಕ್ಷಿತ್ ಜೊತೆಗೆ ಪ್ರಮೋದ್ ಶೆಟ್ಟಿ ಸಹ ನಟಿಸಲಿದ್ದಾರೆ. ಆದರೆ ಇತರೆ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ರಕ್ಷಿತ್ ಅವರು ಘೋಷಣೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

13 ಕಿಲೋ ಮೀಟರ್ ಪಾದಯಾತ್ರೆ ಮಾಡಿದ 6 ವರ್ಷದ ಬಾಲಕ! – Kannada News | 6 Year Old Samarth’s 13km Barefoot Pilgrimage to Kuruvatti Basaveshwara Jatre

ಹಾವೇರಿ, ಫೆಬ್ರವರಿ 17: ಕುರವತ್ತಿ ಬಸವೇಶ್ವರ ಜಾತ್ರೆ ಅಂಗವಾಗಿ ಹಾವೇರಿ ತಾಲೂಕಿನ ಗುತ್ತಲ ಗ್ರಾಮದ 6 ವರ್ಷದ ಸಮರ್ಥ ಶಿವಯೋಗಿ ಕಾಗಿನಲ್ಲಿ ಸುಮಾರು 13 ಕಿಮೀ ದೂರವನ್ನು ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿ ಜನರ ಗಮನ ಸೆಳೆದಿದ್ದಾನೆ. ಎರಡೂವರೆ ಗಂಟೆಯಲ್ಲಿ ಗುರಿ ತಲುಪಿದ ಬಾಲಕ ಕುಟುಂಬದವರೊಂದಿಗೆ ರಥೋತ್ಸವದಲ್ಲಿ ಭಾಗಿಯಾಗಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

ಬರ್ತಿದೆ ‘ತುಂಬಾಡ್ 2’ ಸಿನಿಮಾ; ಖಳನಾಗಿ ಅಕ್ಷಯ್ ಖನ್ನಾ ಎಂಟ್ರಿ? – Kannada News | Tumbbad 2: Akshaye Khanna or Nawazuddin Siddiqui to Play Vinayak Rao’s Nemesis?

2018 ರಲ್ಲಿ ಬಿಡುಗಡೆಯಾದ ‘ತುಂಬಾಡ್’ ಚಿತ್ರ ಅನೇಕರಿಗೆ ಇಷ್ಟ ಆಗಿದೆ. ನಿಗೂಢ ಪ್ರಪಂಚ ಪ್ರೇಕ್ಷಕರಿಗೆ ರೋಮಾಂಚನ ಮೂಡಿಸುತ್ತಿತ್ತು. ಈ ಚಿತ್ರವು ಹಲವು ದಾಖಲೆಯನ್ನು ಸೃಷ್ಟಿಸಿತು. ಈ ಚಿತ್ರವು 2024ರಲ್ಲಿ ಮತ್ತೆ ದೊಡ್ಡ ಪರದೆಯ ಮೇಲೆ ಬಿಡುಗಡೆಯಾಯಿತು. ಈಗ ‘ತುಂಬಾಡ್ 2′ ಶೀಘ್ರದಲ್ಲೇ ಬರಲಿದೆಯಂತೆ. ಚಿತ್ರದ ನಟ ಮತ್ತು ನಿರ್ಮಾಪಕ ಸೋಹಮ್ ಶಾ, ಚಿತ್ರವನ್ನು ಇನ್ನಷ್ಟು ಅದ್ದೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ, ಪೆನ್ ಸ್ಟುಡಿಯೋಸ್‌ನ ಜಯಂತಿಲಾಲ್ ಗಡಾ ಅವರೊಂದಿಗೆ ಕೈಜೋಡಿಸಿದ್ದಾರೆ.

‘ಗಂಗೂಬಾಯಿ ಕಥಿಯಾವಾಡಿ’ ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಬಾಲಿವುಡ್‌ಗೆ ನೀಡಿದ್ದು ಪೆನ್ ಸ್ಟುಡಿಯೋಸ್. ಇದು ‘ತುಂಬಾಡ್ 2’ನಲ್ಲಿಯೂ ಕೆಲಸ ಮಾಡುತ್ತಿದೆ. ಈ ಬಾರಿ ನಿರ್ಮಾಪಕರು ಸೋಹಮ್ ಶಾ ಪಾತ್ರದ ವಿನಾಯಕ್ ರಾವ್‌ಗೆ ಪರದೆಯ ಮೇಲೆ ಕಠಿಣ ಸ್ಪರ್ಧೆಯನ್ನು ನೀಡುವ ಪ್ರಬಲ ಖಳನಾಯಕನನ್ನು ಹುಡುಕುತ್ತಿದ್ದಾರೆ. ಈ ಪಾತ್ರಕ್ಕೆ ಇಬ್ಬರು ಜನಪ್ರಿಯ ಬಾಲಿವುಡ್ ನಟರನ್ನು ಪರಿಗಣಿಸಲಾಗುತ್ತಿದೆ. ಮೊದಲ ಹೆಸರು ನಟ ಅಕ್ಷಯ್ ಖನ್ನಾ, ಎರಡನೇ ಹೆಸರು ನವಾಜುದ್ದೀನ್ ಸಿದ್ದಿಕಿ.ಹಾಗಾಗಿ ಈಗ ಅಕ್ಷಯ್ ಖನ್ನಾ ‘ತುಂಬಾಡ 2’ ನಲ್ಲಿಯೂ ಕಾಣಿಸಿಕೊಳ್ಳುತ್ತಾರೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಒಂದೇ ಗುರಿ ಇದೆ – ಅದು ಭಯಾನಕ ಖಳನಾಯಕನನ್ನು ಹೊರತರುವುದು. ಸದ್ಯದ ಮಾಹಿತಿಯ ಪ್ರಕಾರ, ಚಿತ್ರತಂಡವು ಭಯಾನಕ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುವ ವ್ಯಕ್ತಿಯನ್ನು ಹುಡುಕುತ್ತಿದೆ. ನಟರ ಆಯ್ಕೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲವಾದರೂ, ಈ ಎರಡು ಹೆಸರುಗಳು ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಮರು ಬಿಡುಗಡೆಯಲ್ಲಿ ಖುಲಾಯಿಸಿದ ಅದೃಷ್ಟ, ‘ತುಂಬಾಡ್’ ಭರ್ಜರಿ ಕಲೆಕ್ಷನ್

ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ದುರಾಸೆ, ಪುರಾಣ ಮತ್ತು ಮಾನಸಿಕ ಭಯಾನಕತೆಯನ್ನು ಸಿನಿಮಾ ಹೊಂದಿದೆ. ಕೊರೊನಾ ನಂತರ ಚಿತ್ರವು OTT ಪ್ಲಾಟ್‌ಫಾರ್ಮ್‌ನಲ್ಲಿ ಹಿಟ್ ಆಯಿತು. ಅದರ ನಂತರ, ಚಿತ್ರವು ಮತ್ತೆ ದೊಡ್ಡ ಪರದೆಯ ಮೇಲೆ ಬಿಡುಗಡೆಯಾಯಿತು. ನಂತರ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಲಾಭವನ್ನು ಗಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ – Kannada News | Property Dispute Turns Fatal in Bengaluru: Sons Kill Father in Indiranagar’s Doopanahalli

ಬೆಂಗಳೂರು, ಫೆಬ್ರವರಿ 17: ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿಯಲ್ಲಿ ಆಸ್ತಿ ವಿವಾದವೊಂದು ವೃದ್ಧರೊಬ್ಬರs ಸಾವಿಗೆ ಕಾರಣವಾಗಿದೆ. ಬಿಎಂಟಿಸಿಯ ನಿವೃತ್ತ ಕಂಡಕ್ಟರ್ 70 ವರ್ಷದ ಮುನಿಕೃಷ್ಣಪ್ಪ ಅವರನ್ನು ಅವರ ಇಬ್ಬರು ಮಕ್ಕಳೇ ಆಸ್ತಿ ಆಸೆಗಾಗಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಶನಿವಾರ ರಾತ್ರಿ ದೂಪನಹಳ್ಳಿಯ ಮುತ್ತಿಯಾಲಮ್ಮ ದೇವಾಲಯದ ಬಳಿ ತಂದೆ ಮುನಿಕೃಷ್ಣಪ್ಪ ಮತ್ತು ಅವರ ಪುತ್ರರಾದ ಮೋಹನ್ ಕುಮಾರ್ ಹಾಗೂ ಗಜೇಂದ್ರ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮಗ ಮೋಹನ್ ಕುಮಾರ್ ಹಾಕಿ ಸ್ಟಿಕ್ ಮತ್ತು ರಾಡ್‌ನಿಂದ ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ತೀವ್ರವಾಗಿ ರಕ್ತಸ್ರಾವಗೊಂಡು ಕುಸಿದುಬಿದ್ದ ಮುನಿಕೃಷ್ಣಪ್ಪ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಮುನಿಕೃಷ್ಣಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದು ಮುನಿಕೃಷ್ಣಪ್ಪ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಮಕ್ಕಳಿಗೆ ಪಾಲು ನೀಡದ ಕಾರಣ ಹಲವು ಬಾರಿ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಘಟನೆ ಸಂಬಂಧ ಹಲ್ಲೆ ನಡೆಸಿದ ಮೋಹನ್ ಕುಮಾರ್‌ನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ: ಮೂರುವರೆ ವರ್ಷಕ್ಕೆ ಎಸ್ಪಿ ಆದ ಈ ಬಾಲಕ! – Kannada News | Davangere SP fulfills cancer stricken Hitharth’s police dream

ಮೂರುವರೆ ವರ್ಷಕ್ಕೆ ಎಸ್ಪಿ ಆದ ಈ ಬಾಲಕ!

ದಾವಣಗೆರೆ, ಫೆಬ್ರವರಿ 17: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೂರುವರೆ ವರ್ಷದ ಬಾಲಕ ಹಿತಾರ್ಥ್‌ ಅವರ ಕನಸನ್ನು ನನಸುಗೊಳಿಸಿದ ಅಪರೂಪದ ಘಟನೆ ದಾವಣಗೆರೆ (Davanagere) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಮಗನನ್ನು ಪೊಲೀಸ್ ಮಾಡಬೇಕೆಂಬ ಬಾಲಕನ ತಂದೆಯ ಆಸೆಗೆ ಸ್ಪಂದಿಸಿದ ಎಸ್ಪಿ ಶೇಖರ್ ಹೆಚ್ ಟಿ, ಖಾಕಿ ತೊಟ್ಟು ಬಂದ ಪುಟ್ಟ ಮಗುವನ್ನು ತಮ್ಮ ಚೇರ್ ಮೇಲೆ ಕೂರಿಸಿ ಮಾನವೀಯತೆ ಮೆರೆದಿದ್ದಾರೆ.

ಒಂದೂವರೆ ವರ್ಷಕ್ಕೆ ಕಾನ್ಸರ್!

ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪ್ರಭು ಹಾಗೂ ಅನುಷಾ ದಂಪತಿಯ ಎರಡನೇ ಪುತ್ರನಾದ ಹಿತಾರ್ಥ್‌ಗೆ ಒಂದುವರೆ ವರ್ಷ ವಯಸ್ಸಿನಲ್ಲಿಯೇ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಆತ ಚಿಕಿತ್ಸೆ ಪಡೆಯುತ್ತಿದ್ದನಲ್ಲದೆ, ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಎಂಟು ತಿಂಗಳು ನಿರಂತರ ಚಿಕಿತ್ಸೆ ಪಡೆದಿದ್ದಾನೆ. ಚಿಕಿತ್ಸೆ ಫಲವಾಗಿ ಈಗಾಗಲೇ ಶೇಕಡಾ 80ರಷ್ಟು ಚೇತರಿಕೆ ಕಂಡಿದ್ದರೂ ಪಾಲಕರ ಮನಸ್ಸು ಜರ್ಜರಿತವಾಗಿಯೇ ಉಳಿದಿದೆ.

ಮಗನನ್ನು ಪೊಲೀಸ್ ಮಾಡಬೇಕೆಂಬ ತಂದೆಯ ಆಸೆಗೆ ಸ್ಪಂದನೆ

ಓರ್ವ ಪೊಲೀಸ್ ಅಧಿಕಾರಿಯಾಗಬೇಕೆಂದು ಆಸೆ ಹೊತ್ತಿದ್ದ ಬಾಲಕನ ತಂದೆ ಪ್ರಭುವಿಗೆ ಆ ಆಸೆ ಈಡೇರಿಸಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಹಿತಾರ್ಥ್ ಹುಟ್ಟಿದ ದಿನವೇ ತಮ್ಮ ಮಗ ಪೊಲೀಸ್ ಅಧಿಕಾರಿ ಆಗಬೇಕು ಎಂಬ ಆಸೆಯೂ ಹುಟ್ಟಿಕೊಂಡಿತ್ತು. ಆದರೆ ಮಗುವಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ತಂದೆ ತಾಯಿ ಇಬ್ಬರ ಹೃದಯವೂ ನುಚ್ಚು ನೂರಾಗಿತ್ತು. ಆದರೆ ಮಗನನ್ನು ಪೊಲೀಸ್ ಯೂನಿಫಾರ್ಮ್​ನಲ್ಲಿ ನೋಡಬೇಕೆನ್ನುವ ಪ್ರಭುವಿನ ಆಸೆ ಹಾಗೆಯೇ ಇತ್ತು. ಆದ ಕಾರಣ ಮಗನಿಗೆ ಖಾಕಿ ಯೂನಿಫಾರ್ಮ್ ಧರಿಸಿ ಎಸ್‌ಪಿ ಕಚೇರಿಗೆ ಕರೆದುಕೊಂಡು ಬಂದಿದ್ದರು. ಪರಿಸ್ಥಿತಿ ತಿಳಿದ ಎಸ್‌ಪಿ ಶೇಖರ್ ಹೆಚ್.ಟಿ. ಅವರು ಹಿತಾರ್ಥ್‌ಗೆ ಹೂಗುಚ್ಛ ನೀಡಿ ಸ್ವಾಗತಿಸಿ, ತಮ್ಮ ಕುರ್ಚಿಯಲ್ಲಿ ಕೂರಿಸಿ ಕೆಲಕಾಲ “ಎಸ್‌ಪಿ” ಆಗುವ ಅವಕಾಶ ನೀಡಿದರು.

ಇದನ್ನೂ ಓದಿ ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ

ಮಗು ನಗುಮುಖದಿಂದ ಕುರ್ಚಿಯಲ್ಲಿ ಕುಳಿತ ದೃಶ್ಯ ಕಂಡು ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾವುಕರಾದರು. ಎಸ್‌ಪಿ ಅವರ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಬಾಲಕನ ಕನಸಿಗೆ ಚಿಗುರುಕೊಟ್ಟ ಈ ಘಟನೆ ಎಲ್ಲರ ಹೃದಯ ಸ್ಪರ್ಶಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್; ನಂತರ ಆಗಿದ್ದೇನು? – Kannada News | Kannada Actress Blackmailed Over Private Video from Cricket Event; Cybercrime Police Investigate

ಕನ್ನಡದ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನಡೆದ ಮಹಿಳಾ ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಘಟನೆ ಇದಾಗಿದ್ದು, ಈ ಸಂಬಂಧ ಸಂತ್ರಸ್ತೆ ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿ ಈ ಕೃತ್ಯ ನಡೆಸಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.

ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ಕ್ರಿಕೆಟ್ ಟೂರ್ನಿ ನಡೆದಿತ್ತು. ಟೂರ್ನಿಯ ಎರಡನೇ ದಿನ ವಾಶ್ ರೂಂ ಹೋದಾಗ ಎದುರಾದ ಅಪರಿಚಿತ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿದ್ದ ಮತ್ತು ಫೊಟೋ ತೆಗೆದಿದ್ದ. ಬ್ಲ್ಯಾಕ್​​ಮೇಲ್ ಮಾಡುವ ಉದ್ದೇಶದಿಂದಲೇ ಫೊಟೋ ವಿಡೀಯೋ ರೆಕಾರ್ಡ್ ಮಾಡಿದ್ದ ಎಂಬ ಆರೋಪವನ್ನು ಮಾಡಲಾಗಿದೆ.

ಸಾಮಾನ್ಯವಾಗಿ ವಿಡಿಯೋ ಮಾಡಿದವರು ಅವರಿಗೆ ಕಳುಹಿಸಿ ಬ್ಲ್ಯಾಕ್​ಮೇಲ್ ಮಾಡುತ್ತಾರೆ. ಆದರೆ, ಇಲ್ಲಿ ಆಗಿದ್ದೇ ಬೇರೆ. ವಿಡಿಯೋ ರೆಕಾರ್ಡ್ ಮಾಡಿ ಯುವತಿಗೆ ಕಳುಹಿಸಿದೆ ಆಕೆಯ ಆಪ್ತ ಸ್ನೇಹಿತೆಗೆ ಕಳುಹಿಸಿದ್ದ. ‘Swan.3704722’ ಇನ್ಸ್ಟಾ ಅಕೌಂಟ್​ನಿಂದ ಸಂದೇಶ ಕಳುಹಿಸಲಾಗಿದೆ.

ಇದನ್ನೂ ಓದಿ: ‘ಯಾರ ಜೊತೆ ಬೇಕಾದರೂ ಹೋಗಿ ಮಲಗು’: ಕನ್ನಡದ ನಟಿಗೆ ಗಂಡನಿಂದ ಕಿರುಕುಳ

‘ವಿಡೀಯೋ ವೈರಲ್ ಮಾಡಬಾರದೆಂದರೆ ಹಣ ಕೊಡಬೇಕು’ ಎಂದು ಅಪರಿಚಿತ ಬೆದರಿಕೆ ಹಾಕಿದ್ದ. ವೀಡಿಯೋ ಕಾಲ್ ಮಾಡಿಯೂ ಬೆದರಿಕೆ ಹಾಕಿದ್ದ. ಸದ್ಯ ಆತ ಕಳಿಸಿರುವ ಪೊಟೋಸ್, ವಿಡಿಯೋಗಳನ್ನ ನೀಡಿ ನಟಿ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಸದ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link