Category Archives: Blog

Your blog category

ಊಟವಾದ ತಕ್ಷಣ ಮಾಡುವ ಈ ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು – Kannada News | Never make this mistake after eating

ಆರೋಗ್ಯಕರವಾಗಿರಬೇಕು, ಸದೃಢರಾಗಿರಬೇಕು ಎಂಬ ಕಾರಣಕ್ಕೆ ಪ್ರತಿಯೊಬ್ಬರೂ ಆರೋಗ್ಯಕ್ಕೆ ಆಹಾರವನ್ನು ಸೇವನೆ ಮಾಡುತ್ತಾರೆ, ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾರೆ. ಆರೋಗ್ಯಕ ಆಹಾರ ಸೇವನೆ ಮಾಡಿದರೂ, ಸಮಯಕ್ಕೆ ಸರಿಯಾಗಿ ಊಟ ಮಾಡಿದರೂ, ಊಟ ಮಾಡಿದ ತಕ್ಷಣ ಮಾಡುವ ಈ ಕೆಲವೊಂದು ತಪ್ಪುಗಳಿಂದಾಗಿ (after meals mistakes) ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಹೌದು ಊಟದ ಬಳಿಕ ಮಾಡುವ ಸಣ್ಣ ತಪ್ಪು ಕೆಲಸಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಅಭ್ಯಾಸಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ, ಜೀರ್ಣಾಂಗ ವ್ಯವಸ್ಥೆಯು ಕ್ರಮೇಣ ದುರ್ಬಲಗೊಳ್ಳಬಹುದು. ಹಾಗಿದ್ದರೆ ಊಟವಾದ ತಕ್ಷಣ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಊಟದ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ:

ಊಟ ಮಾಡಿದ ತಕ್ಷಣ ಮಲಗುವುದು: ನೀವು ಮಾಡುವ ದೊಡ್ಡ ತಪ್ಪುಗಳಲ್ಲಿ ಇದು ಸಹ ಒಂದು.  ಊಟ ಮಾಡಿದ ತಕ್ಷಣ ಮಲಗಿದಾಗ, ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ, ಮತ್ತು ಇದರಿಂದಾಗಿ ನೀವು ಆಮ್ಲೀಯತೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಎದುರಿಸಬಹುದು. ಅಲ್ಲದೆ ಎದೆಯುರಿ ಸಮಸ್ಯೆ ಕೂಡ ಉಂಟಾಗಬಹುದು. ಆದ್ದರಿಂದ ಊಟವಾದ ಕನಿಷ್ಠ 30 ನಿಮಿಷಗಳ ಬಳಿಕವೇ ಮಲಗಿ.

ಚಹಾ ಅಥವಾ ಕಾಫಿ ಕುಡಿಯುವುದು: ಊಟವಾದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಅನೇಕ ಜನರಿಗೆ ಇರುತ್ತದೆ. ಈ ತಪ್ಪು ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಊಟವಾದ ನಂತರ ನೀವು ಚಹಾ ಅಥವಾ ಕಾಫಿ ಕುಡಿಯುವಾಗ, ಅವುಗಳಲ್ಲಿರುವ ಅಂಶಗಳು ದೇಹವು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದು. ನೀವು ಚಹಾ ಅಥವಾ ಕಾಫಿ ಕುಡಿಯಲೇಬೇಕಾದರೆ, ಊಟವಾದ ಬಳಿಕ ಕನಿಷ್ಠ 45 ನಿಮಿಷಗಳ ಕಾಲ ಕಾಯಿರಿ.

ಹೆಚ್ಚು ನೀರು ಕುಡಿಯುವುದು: ಊಟವಾದ ತಕ್ಷಣ ನೀವು ಹೆಚ್ಚು ನೀರು ಕುಡಿಯಬಾರದು. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆಯಲ್ಲಿರುವ ಜೀರ್ಣಕಾರಿ ರಸಗಳು ದುರ್ಬಲಗೊಳ್ಳುತ್ತವೆ, ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಇದನ್ನು ಪದೇ ಪದೇ ಮಾಡುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಊಟ ಮಾಡುವಾಗ ಸ್ವಲ್ಪ ನೀರು ಕುಡಿಯುವುದು ಒಳ್ಳೆಯದು, ಆದರೆ ಊಟವಾದ ತಕ್ಷಣ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: ಮನುಷ್ಯನ ದೇಹದ ಯಾವ ಭಾಗ ಅತೀ ಕೊಳಕಾಗಿರುವುದು ಗೊತ್ತಾ?

ತಕ್ಷಣ ಸ್ನಾನ ಮಾಡುವುದು ಕೂಡ ತಪ್ಪು: ಊಟ ಮಾಡಿದ ತಕ್ಷಣ ಸ್ನಾನ ಮಾಡಬಾರದು. ಊಟ ಮಾಡಿದ ತಕ್ಷಣ ಸ್ನಾನ ಮಾಡುವುದರಿಂದ ಹೊಟ್ಟೆಯಿಂದ ರಕ್ತ ಪರಿಚಲನೆ ಚರ್ಮದ ಕಡೆಗೆ ಚಲಿಸುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ವಿಶೇಷವಾಗಿ, ನೀವು ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಊಟ ಮಾಡಿದ ಕನಿಷ್ಠ ಒಂದು ಗಂಟೆಯ ನಂತರವೇ ಸ್ನಾನ ಮಾಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ – Kannada News | West Bengal Assembly Elections PM Narendra Modi holds massive roadshow in Howrah

ಹೌರಾ, ಏಪ್ರಿಲ್ 23: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣಾ ಪ್ರಚಾರದ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಂಗಾಳದ ಹೌರಾದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಬಿಜೆಪಿ ಅಭ್ಯರ್ಥಿಗಳ ಜೊತೆ ರೋಡ್ ಶೋ ನಡೆಸಿದ ಮೋದಿಯವರನ್ನು ನೋಡಲು ಜನಸಾಗರವೇ ನೆರೆದಿತ್ತು. ಈ ವೇಳೆ ಪ್ರಧಾನಿ ಮೋದಿಯವರ ಮುಖವಿರುವ ಮಾಸ್ಕ್ ಧರಿಸಿದ್ದ ಜನರು ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಇದಕ್ಕೂ ಮುನ್ನ ಮಥುರಾಪುರದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿ ಬಂಗಾಳದ ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.

‘ಭಾರತ್ ಮಾತಾ ಕಿ ಜೈ’, ‘ಜೈ ಶ್ರೀರಾಮ್’ ಮತ್ತು ಬಿಜೆಪಿಯ ಪಶ್ಚಿಮ ಬಂಗಾಳ ಚುನಾವಣಾ ಘೋಷಣೆಯಾದ ‘ಪಲ್ಟಾನೋ ದರ್ಕಾರ್, ತೈ ಬಿಜೆಪಿ ಸರ್ಕಾರ್’ (ಬದಲಾವಣೆ ತರಲು ಬಿಜೆಪಿ ಸರ್ಕಾರ ಬೇಕು) ಘೋಷಣೆಗಳ ನಡುವೆ ಕೇಸರಿ ಬಣ್ಣದ ಟ್ರಕ್‌ನ ಮೇಲಿನಿಂದ ಪ್ರಧಾನಿ ಮೋದಿ ಜನಸಮೂಹದತ್ತ ಕೈ ಬೀಸಿದರು. ಸಾವಿರಾರು ಜನರು ಬೀದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿ ಮಕ್ಕಳ ಅಪಹಾಸ್ಯವೇಕೆ? ವಿಪಕ್ಷಗಳಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು! – Kannada News | Priyank Kharge Hits back at JDS And BJP for Mocks kalaburagi Last place In SSLC Results 2026

ಬೆಂಗಳೂರು, (ಏಪ್ರಿಲ್ 23): ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Results 2026) ಪ್ರಕಟವಾಗಿದ್ದು, ಕಳೆದ ವರ್ಷ 80.04ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ ಈ ವರ್ಷ ಶೇ‌.94.01ರಷ್ಟು ಫಲಿತಾಂಶದೊಂದಿಗೆ ಶೇ.14ರಷ್ಟು ಫಲಿತಾಂಶ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಅಂದರೆ 35ನೇ ಸ್ಥಾನದಲ್ಲಿದೆ. ಆದರೂ ಕಳೆದ ವರ್ಷಕ್ಕಿಂತ ಶೇ.28.17ರಷ್ಟು ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಇನ್ನು ಕಲಬುರಗಿ (Kalaburagi) ಕೊನೆ ಸ್ಥಾನದಲ್ಲಿರುವುದನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ಖರ್ಗೆ (Priyank Kharge) ವಿರುದ್ಧ ಮುಗಿಬಿದ್ದಿವೆ. ಇನ್ನು ಇದಕ್ಕೆ ಖರ್ಗೆ ಸಹ ತಿರುಗೇಟು ನೀಡಿದ್ದಾರೆ. ಬಿಜೆಪಿ ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ನಿಮಗೆ ಸಮಸ್ಯೆ ಇದ್ರೆ ನನ್ನ ನಿಂದಿಸಿ, ಮಕ್ಕಳ ಅಪಹಾಸ್ಯವೇಕೆ? ಎಂದು ಪ್ರಶ್ನಿಸಿದ್ದಾರೆ.

ಎಸ್​​ಎಸ್​​ಎಲ್​ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಬುರಗಿ ಕೊನೆಯ ಅಂದರೆ 35 ಸ್ಥಾನ ಪಡೆದುೊಂಡಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ವ್ಯಂಗ್ಯ ಮಾಡಿದ್ದು, ಇದಕ್ಕೆ ಪ್ರಿಯಾಂಕ್ ಖರ್ಗೆ ಸಹ ಸಾಮಾಜಿಕ ತಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸ್ತಿದೆ. ಅವರ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಅಡಗಿಸುವ ಪ್ರಯತ್ನ. ನಿಮಗೆ ಸಮಸ್ಯೆ ಇದ್ರೆ ನನ್ನ ನಿಂದಿಸಿ, ಮಕ್ಕಳ ಅಪಹಾಸ್ಯವೇಕೆ? ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಕಲಬುರಗಿಗೆ ಕೊನೇ ಸ್ಥಾನ: ಪ್ರಿಯಾಂಕ್​​ ಖರ್ಗೆ ಗುರಿಯಾಗಿಸಿ ಬಿಜೆಪಿ, ಜೆಡಿಎಸ್​​ ವ್ಯಂಗ್ಯ

ಕಲಬುರಗಿ ಜಿಲ್ಲೆಯ ಶೇಕಡಾವಾರು ಫಲಿತಾಂಶ 85%ರಷ್ಟಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಶೈಕ್ಷಣಿಕ ಗುಣಮಟ್ಟದ ಸುಧಾರಿಸಿಕೊಳ್ಳುವ ಶಕ್ತಿ ಮಕ್ಕಳಲ್ಲಿದೆ. ಆದರೆ ಪ್ರತಿ ಬಾರಿಯೂ ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸ್ತಿರುವ ಬಿಜೆಪಿ ರಾಜಕೀಯ ದಿವಾಳಿತನದಿಂದ ಕೂಡಿದೆ. ಕಲಬುರಗಿ ಬಿಜೆಪಿಗರ ಮಕ್ಕಳಿಗೂ ‘ದಡ್ಡರು ಎಂಬ ಹಣೆಪಟ್ಟಿಯನ್ನು ಬಿಜೆಪಿ ಕಟ್ಟುತ್ತಿದೆಯೇ? ಎಂದು ತಿರುಗೇಟು ನೀಡಿದ್ದಾರೆ.

ಕಲಬುರಗಿ ಕೊನೆ ಸ್ಥಾನದಲ್ಲಿದ್ರೂ ಸುಧಾರಣೆ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಕ್ರಮವಾಗಿ ಮೊದಲ, ಎರಡನೇ ಸ್ಥಾನದಲ್ಲಿವೆ. ಇನ್ನು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿಯೂ ಕಲಬುರಗಿ 29ನೇ ಸ್ಥಾನದಲ್ಲಿತ್ತು. ಆದ್ರೆ, ಎಸ್​​ಎಸ್​​ಎಲ್​​ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದರೂ ಕಳೆದ ವರ್ಷಕ್ಕಿಂತ ಈ ಬಾರಿ ಶೇ.28.17ರಷ್ಟು ಫಲಿತಾಂಶದಲ್ಲಿ ಏರಿಕೆ ಕಂಡಿದೆ.

ಇನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಮಧುಬಂಗಾರಪ್ಪ, ಉತ್ತರ ಕರ್ನಾಟಕ ಭಾಗದಲ್ಲಿ ನಾವು ಹೆಚ್ಚು ಶ್ರಮ ಹಾಕಿದ ಪರಿಣಾಮ ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ಜಿಲ್ಲೆಯ ಅಧಿಕಾರಿಗಳು ವಿಶೇಷ ಕ್ಲಾಸ್, ಕೆಲವು ನಿಯಮಗಳನ್ನು ರೂಪಿಸುವ ಮೂಲಕ ಫಲಿತಾಂಶ ಸುಧಾರಣೆಗೆ ಕಾರಣವಾಗಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:29 pm, Thu, 23 April 26

Source link

IPL 2026: ಬೆಂಗಳೂರಿನಲ್ಲಿ ಆರ್​​ಸಿಬಿಗೆ ಕೊನೆಯ ಲೀಗ್ ಪಂದ್ಯ; ಎದುರಾಳಿ ಯಾರು ಗೊತ್ತಾ? – Kannada News | IPL 2026: RCB vs GT Match 34 Preview – Last Bengaluru League Game at Chinnaswamy

ಐಪಿಎಲ್ 2026 ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ಇದಾಗಿದೆ. ಹಾಗೆಯೇ ಆರ್​ಸಿಬಿ ತನ್ನ ಮೊದಲ ತವರು ನೆಲವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಹೀಗಾಗಿ ಈ ಪಂದ್ಯ ಆರ್​​ಸಿಬಿ ಅಭಿಮಾನಿಗಳಿಗೆ ಬಹಳಷ್ಟು ವಿಶೇಷವಾಗಿದೆ. ವಾಸ್ತವವಾಗಿ ಆರ್​ಸಿಬಿ ಈ ಆವೃತ್ತಿಯಲ್ಲಿ ಎರಡು ತವರು ಮೈದಾನಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಮೊದಲ ತವರು ಮೈದಾನವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳನ್ನು ಆಡಲಿದ್ದು, ಎರಡನೇ ತವರು ಮೈದಾನದ ರಾಯ್​ಪುರದಲ್ಲಿ ಉಳಿದ ಎರಡು ಪಂದ್ಯಗಳನ್ನು ಆಡಲಿದೆ. ಹಾಗಾಗಿ ಬೆಂಗಳೂರಿನಲ್ಲಿ ಆರ್​ಸಿಬಿಗೆ ನಾಳಿನ ಪಂದ್ಯ ಕೊನೆಯ ಲೀಗ್ ಪಂದ್ಯವಾಗಲಿದೆ.

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಯಾವಾಗ ನಡೆಯಲಿದೆ?

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಏಪ್ರಿಲ್ 24 ರಂದು ನಡೆಯಲಿದೆ.

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಎಲ್ಲಿ ನಡೆಯಲಿದೆ?

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಸಂಜೆ 7:30 ಕ್ಕೆ ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಹಾಟ್ ಸ್ಟಾರ್​​ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಉಭಯ ತಂಡಗಳು

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ,

ಗುಜರಾತ್ ಟೈಟಾನ್ಸ್: ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ಅಮೆರಿಕದ ಉತ್ತಮ ಸ್ನೇಹಿತ; ವಿವಾದದ ಬಳಿಕ ತೇಪೆ ಹಚ್ಚಿದ ಟ್ರಂಪ್ – Kannada News | India is a Great Country; Donald Trump’s Damage Control After Hell Hole Row

ವಾಷಿಂಗ್ಟನ್, ಏಪ್ರಿಲ್ 23: ಭಾರತ ಮತ್ತು ಚೀನಾದಂತಹ ದೇಶಗಳಿಗೆ 9 ತಿಂಗಳಾದ ಬಳಿಕ ಅಮೆರಿಕಕ್ಕೆ ಬರುವ ಮಹಿಳೆಯರು ಇಲ್ಲೇ ಬಂದು ಮಗುವನ್ನು ಹೆರುತ್ತಾರೆ. ಆಗ ಆ ಮಗುವಿಗೆ ಇಲ್ಲಿನ ಪೌರತ್ವ ಸಿಗುತ್ತದೆ. ನಂತರ ಭಾರತ ಮತ್ತು ಚೀನಾದಂತಹ ನರಕಗಳಿಂದ ತಮ್ಮ ಸಂಬಂಧಿಕರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಅಮೆರಿಕದ ಜನ್ಮಸಿದ್ಧ ಪೌರತ್ವಕ್ಕಾಗಿ ಇಲ್ಲಿಗೆ ವಲಸೆ ಬರುತ್ತಾರೆ ಎಂದು ಅಮೆರಿಕದ ಪಾಡ್​ಕಾಸ್ಟ್​ನಲ್ಲಿ ರಾಜಕೀಯ ವಿಶ್ಲೇಷಕ ಹಾಗೂ ರೇಡಿಯೋ ಜಾಕಿ ಮೈಕಲ್ ಸ್ಯಾವೇಜ್ ವಿವಾದಾತ್ಮಕವಾಗಿ ಮಾತನಾಡಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆ ಹೇಳಿಕೆಗೆ ತನ್ನ ಸಹಮತ ಸೂಚಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್ ಭಾರತ ಅತ್ಯುತ್ತಮ ದೇಶ ಎಂದಿದ್ದಾರೆ.

ತನ್ನ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿರುವ ಡೊನಾಲ್ಡ್ ಟ್ರಂಪ್ ಭಾರತವನ್ನು ಹೊಗಳಿದ್ದಾರೆ. ಭಾರತ ದೇಶವನ್ನು ಮುನ್ನಡೆಸುವ ನನ್ನ ಬಹಳ ಉತ್ತಮ ಸ್ನೇಹಿತ ಅಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಂಘರ್ಷದ ಹಾದಿಯಲ್ಲಿ ಬಲಿಷ್ಠ ರಾಷ್ಟ್ರಗಳು: ಇರಾನ್ ಹಠಕ್ಕೆ ಅಮೆರಿಕ ಕೆಂಡಾಮಂಡಲ, ಟ್ರಂಪ್‌ನಿಂದ ಖಡಕ್ ವಾರ್ನಿಂಗ್

ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯ ವಕ್ತಾರ ಕ್ರಿಸ್ಟೋಫರ್ ಎಲ್ಮ್ಸ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಮೆರಿಕದ ನಾಯಕ ಟ್ರಂಪ್ ಭಾರತದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ, ಭಾರತವನ್ನು ಒಂದು ಉತ್ತಮ ರಾಷ್ಟ್ರ ಎಂದು ಕರೆದಿದ್ದಾರೆ. ಅವರು ಭಾರತದ ಪ್ರಧಾನಿಯೊಂದಿಗೆ ವೈಯಕ್ತಿಕ ಸ್ನೇಹವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್

ಯುನೈಟೆಡ್ ಸ್ಟೇಟ್ಸ್‌ನ ಜನ್ಮಸಿದ್ಧ ಪೌರತ್ವ ಕಾನೂನಿನಲ್ಲಿ ಬದಲಾವಣೆಗಳಿಗೆ ಕರೆ ನೀಡುವ ಜನಾಂಗೀಯ ವಾಗ್ದಾಳಿಯಲ್ಲಿ ರೇಡಿಯೋ ಜಾಕಿ ಸ್ಯಾವೇಜ್ ಏಷ್ಯಾದ 2 ರಾಷ್ಟ್ರಗಳ ಜನರು 9ನೇ ತಿಂಗಳಲ್ಲಿ ಮಗುವನ್ನು ಹೆರುವ ಸಲುವಾಗಿಯೇ ಯುಎಸ್‌ಗೆ ಬರುತ್ತಾರೆ. ಇಲ್ಲಿನ ಕಾನೂನು ಅವರನ್ನು ಕೂಡಲೇ ಅಮೆರಿಕದ ನಾಗರಿಕರನ್ನಾಗಿ ಮಾಡುತ್ತದೆ ಎಂದು ಆರೋಪಿಸಿದ್ದರು. ಅಲ್ಲದೆ, ಭಾರತೀಯ ಮತ್ತು ಚೀನೀ ವಲಸಿಗರನ್ನು “ಲ್ಯಾಪ್‌ಟಾಪ್‌ಗಳನ್ನು ಹೊಂದಿರುವ ದರೋಡೆಕೋರರು” ಎಂದು ಟೀಕಿಸಿದ್ದರು. ಈ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ಮರು-ಪೋಸ್ಟ್ ಮಾಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 8:44 pm, Thu, 23 April 26

Source link

ಲಂಗ್ಸ್ ಡಿಟಾಕ್ಸ್ ನಿಜವಾಗಿಯೂ ಶ್ವಾಸಕೋಶವನ್ನು ಕ್ಲೀನ್ ಮಾಡುತ್ತದೆಯೇ? ಇಲ್ಲಿದೆ ಸ್ಪಷ್ಟ ಮಾಹಿತಿ – Kannada News | How to Cleanse Lungs Naturally at Home: Foods and Exercises

ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ಧೂಮಪಾನದಿಂದ ಲಂಗ್ಸ್ (Lungs) ಅಂದರೆ ಶ್ವಾಸಕೋಶದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಲಂಗ್ಸ್ ಆರೋಗ್ಯ ಕಾಪಾಡಿಕೊಳ್ಳಲು ಹಲವಾರು ರೀತಿಯ ಸಲಹೆಗಳನ್ನು ಅನುಸರಿಸುವುದು ಅನಿವಾರ್ಯವಾದರೂ ಕೂಡ ಅದರ ಬಗ್ಗೆ ತಿಳಿಯದೆಯೇ ಮಾಡುವುದು ತಪ್ಪು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “ಲಂಗ್ಸ್ ಡಿಟಾಕ್ಸ್” ಎಂಬ ಹೆಸರಿನಲ್ಲಿ ಹಲವು ಪಾನೀಯಗಳು ಮತ್ತು ಉತ್ಪನ್ನಗಳು ಪ್ರಚಾರವಾಗುತ್ತಿವೆ. ಆದರೆ ಇದು ನಿಜವಾಗಿಯೂ ಶ್ವಾಸಕೋಶವನ್ನು ಡಿಟಾಕ್ಸ್ ಮಾಡುತ್ತದೆಯೇ, ಈ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಜ್ಞರ ಪ್ರಕಾರ, ಯಾವುದೇ ವಿಶೇಷ ಡಿಟಾಕ್ಸ್ ಡ್ರಿಂಕ್ ಮೂಲಕ ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಇವು ಸ್ವಾಭಾವಿಕವಾಗಿ ತಮ್ಮನ್ನು ತಾವು ಶುದ್ಧಗೊಳಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ ಲಂಗ್ಸ್ ಆರೋಗ್ಯ ಕಾಪಾಡಲು ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಧೂಮಪಾನದಿಂದ ಉರಿಯೂತ ಉಂಟಾಗುತ್ತದೆ ಮತ್ತು ದೀರ್ಘಕಾಲದಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Lung Health: ನಿಮ್ಮ ಶ್ವಾಸಕೋಶ ಆರೋಗ್ಯವಾಗಿರಲು ನಿಯಮಿತವಾಗಿ ಈ ಹಣ್ಣುಗಳ ಸೇವನೆ ಮಾಡಿ

ವಾಯುಮಾಲಿನ್ಯದಿಂದ ರಕ್ಷಣೆ ಹೇಗೆ?

ಇಂದಿನ ದಿನಗಳಲ್ಲಿ ಕೆಟ್ಟ ಗಾಳಿಯ ಗುಣಮಟ್ಟವೂ ಲಂಗ್ಸ್ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಧೂಳು ಮತ್ತು ಮಾಲಿನ್ಯದ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ಒಳನುಗ್ಗಿ ಹಾನಿ ಮಾಡುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಧೂಳು ಇರುವ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡಿ, ಅಗತ್ಯವಿದ್ದರೆ N-95 ಮಾಸ್ಕ್ ಬಳಸುವುದು ಉತ್ತಮ. AQI ಹೆಚ್ಚಿರುವ ದಿನಗಳಲ್ಲಿ ಹೊರಗೆ ವಾಕಿಂಗ್ ಮತ್ತು ವ್ಯಾಯಾಮ ಮಾಡುವುದನ್ನು ತಪ್ಪಿಸಿ, ಅದರ ಬದಲು ಮನೆಯಲ್ಲೇ ವ್ಯಾಯಾಮ ಮಾಡುವುದು ಸೂಕ್ತ. ಅದರ ಜೊತೆಗೆ ಪ್ರತಿದಿನ ಕನಿಷ್ಠ 30 ನಿಮಿಷಗಳಷ್ಟು ವಾಕಿಂಗ್, ಜಾಗಿಂಗ್ ಅಥವಾ ಯೋಗ ಮಾಡುವುದರಿಂದ ಲಂಗ್ಸ್ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಹಣ್ಣು ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಸಹಾಯಕ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ ಸಿನಿಮಾಗೆ ನಿಜವಾದ ಹೀರೋ ಕೆವಿಎನ್’: ಟ್ರೇಲರ್ ರಿಲೀಸ್ ವೇಳೆ ಪ್ರೇಮ್ ಮಾತು – Kannada News | Jogi Prem talks about KVN productions during KD movie trailer launch

ಏಪ್ರಿಲ್ 30ರಂದು ‘ಕೆಡಿ’ ಸಿನಿಮಾ (KD Movie) ರಿಲೀಸ್ ಆಗಲಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಜೋಗಿ ಪ್ರೇಮ್ (Jogi Prem) ಅವರು ಮಾತನಾಡಿದರು. ‘ಕೆಡಿ ಸಿನಿಮಾ ಹೀರೋ ಯಾರು ಎಂದರೆ ಧ್ರುವ ಅಲ್ಲ, ಪ್ರೇಮ್ ಅಲ್ಲ, ರವಿಚಂದ್ರನ್ ಅಲ್ಲ, ರಮೇಶ್ ಅಲ್ಲ. ಅದು ಕೆವಿಎನ್ ಸರ್ ಮಾತ್ರ’ ಎಂದು ಪ್ರೇಮ್ ಹೇಳಿದ್ದಾರೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾ ಅದ್ದೂರಿಯಾಗಿ ಮೂಡಿಬರಲು ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಗೆ ಚಿತ್ರದ ಮೇಲಿರುವ ಪ್ಯಾಷನ್ ಕಾರಣ ಎಂದು ಅವರು ಹೇಳಿದರು.

‘ನನ್ನ ಸಿನಿಮಾಗೆ ಸಂಗೀತ ನಿರ್ದೇಶಕರೇ ಹೀರೋ ಅಂತ ನಾನು ಯಾವಾಗಲೂ ಹೇಳುತ್ತಿದ್ದೆ. ಆದರೆ ಈಗ ಕೆಡಿ ಸಿನಿಮಾಗೆ ನಿಜವಾಗಿಯೂ ಕೆವಿಎನ್ (ವೆಂಕಟ್ ಕೆ. ನಾರಾಯಣ್) ಸರ್ ಹೀರೋ. ಪ್ರತಿ ನಿರ್ಮಾಪಕರಿಗೆ ಒಂದು ಬಜೆಟ್​ನ ಮಿತಿ ಇರುತ್ತದೆ. ಒಂದು ವರ್ಷದಲ್ಲಿ ಸಿನಿಮಾ ಮುಗಿಸಿ ರಿಲೀಸ್ ಮಾಡಬೇಕು ಎಂಬ ಲೆಕ್ಕಾಚಾರ ಇರುತ್ತದೆ. ಎಲ್ಲ ನಿರ್ಮಾಪಕರ ಆಸೆ ಇದೇ ಆಗಿರುತ್ತದೆ. ಯಾಕೆಂದರೆ, ಬಂಡವಾಳ ಹಾಕುವ ಎಲ್ಲರೂ ಅದೇ ರೀತಿ ಯೋಚನೆ ಮಾಡುತ್ತಾರೆ. ಆದರೆ ಕೆವಿಎನ್ ಅವರಿಗೆ ಅದಕ್ಕಿಂತ ಹೆಚ್ಚಾಗಿ ಪ್ಯಾಷನ್ ಇದೆ’ ಎಂದು ಜೋಗಿ ಪ್ರೇಮ್ ಹೇಳಿದರು.

‘ಸಿನಿಮಾದ ಯಾವುದೇ ಕಂಟೆಂಟ್ ಅವರಿಗೆ ಕಳಿಸಿದರೂ ಇನ್ನೂ ಏನಾದರೂ ಚೆನ್ನಾಗಿ ಮಾಡಬಹುದಾ ನೋಡಿ ಅಂತ ಹುರಿದುಂಬಿಸುತ್ತಾರೆ. ತಮ್ಮ ಕೆಲಸಗಳ ನಡುವೆಯೂ ಅದನ್ನೆಲ್ಲ ನೋಡಿ ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಇಷ್ಟು ಬೆಂಬಲ ನೀಡುವ ಈ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡದು. ಸಾವಿರಾರು ಜನರಿಗೆ ಅನ್ನ ಹಾಕಿದ್ದಾರೆ. ಹೀಗೆಯೇ ಈ ಸಂಸ್ಥೆ ದೊಡ್ಡದಾಗಿ ಬೆಳೆಯಲಿ ಅಂತ ನಾನು ಆಶಿಸುತ್ತೇನೆ’ ಎಂದಿದ್ದಾರೆ ಪ್ರೇಮ್.

ಇದನ್ನೂ ಓದಿ: ‘ಕೆಡಿ’ ಸಿನಿಮಾ ಟ್ರೇಲರ್ ಬಿಡುಗಡೆ; ಧ್ರುವ ಸರ್ಜಾ, ಸಂಜಯ್ ದತ್ ಆ್ಯಕ್ಷನ್ ಅಬ್ಬರ

ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ಈಗಾಗಲೇ ಹಾಡುಗಳು ಹಿಟ್ ಆಗಿವೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಟ್ರೇಲರ್​​ನಲ್ಲಿ ಕ್ರೌರ್ಯ ಕಾಣಿಸಿದೆ. ಆದರೂ ಇದೊಂದು ಫ್ಯಾಮಿಲಿ ಎಂಟರ್​ಟೇನರ್ ಸಿನಿಮಾ ಎಂದು ಧ್ರುವ ಸರ್ಜಾ ಅವರು ಹೇಳಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಬಂತು ಆನೆ ಬಲ

Source link

ಏ 24ರಂದು ಬೆಂಗಳೂರಿನಲ್ಲಿ ಆರ್​ಸಿಬಿ ಪಂದ್ಯ: ವಾಹನ ಪಾರ್ಕಿಂಗ್, ಸಂಚಾರ ಬದಲಾವಣೆ – Kannada News | RCB vs GT Match: bengaluru traffic advisory; Chinnaswamy Traffic and Parking Guide

ಪ್ರಾತಿನಿಧಿಕ ಚಿತ್ರ (ai generated image)Image Credit source: tv9 kannada

ಬೆಂಗಳೂರು, ಏಪ್ರಿಲ್​ 23: ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಅಂದರೆ ಏಪ್ರಿಲ್​ 24ರಂದು ಆರ್​ಸಿಬಿ ಮತ್ತು ಜಿಟಿ ನಡುವೆ ಐಪಿಎಲ್ ಪಂದ್ಯ (RCB vs GT Match) ನಡೆಯಲಿದೆ. ಫ್ಯಾನ್ಸ್​​ ಪಂದ್ಯ ನೋಡಲು ಕಾತರರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು ಸ್ಟೇಡಿಯಂ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ಹಲವು ಸ್ಥಳಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ವಾಹನಗಳ ನಿಲುಗಡೆ ನಿಷೇಧ ಇರುವ ಸ್ಥಳಗಳು

ಕ್ವೀನ್ಸ್ ರಸ್ತೆಯ ಬಾಳೆಕುಂದ್ರಿ ವೃತ್ತದಿಂದ ಸಿಟಿಒ ಜಂಕ್ಷನ್‌ವರೆಗೆ ಮತ್ತು ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ. ಇದರೊಂದಿಗೆ ಲಿಂಕ್ ರಸ್ತೆ, ರಾಜಭವನ್ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್ ರಸ್ತೆಗಳಲ್ಲಿಯೂ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಐಪಿಎಲ್​​ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ BMRCL ಮತ್ತು BMTC: ಇಲ್ಲಿದೆ ಮಾಹಿತಿ

ಇನ್ನು ಕಬ್ಬನ್ ರಸ್ತೆಯ ಸಿಟಿಒ ವೃತ್ತದಿಂದ ಡಿಕ್ಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಹಾಗೂ ಕಾಮರಾಜ್ ರಸ್ತೆ ಜಂಕ್ಷನ್‌ನಿಂದ ಡಿಕ್ಕೆನ್ಸನ್ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಲವೆಲ್ಲೆ ರಸ್ತೆ ಹಾಗೂ ವಿಟ್ಠಲ್ ಮಲ್ಯ ರಸ್ತೆಗಳ ಪ್ರಮುಖ ಜಂಕ್ಷನ್‌ಗಳ ನಡುವೆಯೂ ಈ ನಿಯಮ ಅನ್ವಯವಾಗಲಿದೆ. ಅಲ್ಲದೆ, ಕಬ್ಬನ್ ಪಾರ್ಕ್ ಒಳಗಿನ ಕಿಂಗ್ ರಸ್ತೆ, ಪ್ರೆಸ್ ಕ್ಲಬ್, ಬಾಲಭವನ್ ಹಾಗೂ ಫೌಂಟನ್ ರಸ್ತೆಗಳಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡದಂತೆ ಸೂಚಿಸಲಾಗಿದೆ.

ವಾಹನಗಳ ಪಾರ್ಕಿಂಗ್ ಸ್ಥಳಗಳು

ಪಂದ್ಯ ವೀಕ್ಷಿಸಲು ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಟೇಡಿಯಂ ಸುತ್ತಮುತ್ತಲಿನ ವಿವಿಧೆಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ವಾಹನ ಸವಾರರು ಸಿದ್ಧಲಿಂಗಯ್ಯ ವೃತ್ತದ ಬಳಿಯಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ ಹಾಗೂ ಮ್ಯೂಸಿಯಂ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಇವುಗಳ ಜೊತೆಗೆ ಫ್ರೀಡಂ ಪಾರ್ಕ್‌ನ ಬಹುಮಹಡಿ ಪಾರ್ಕಿಂಗ್ (MLCP), ಗರುಡ ಮಾಲ್, ಯು.ಬಿ. ಸಿಟಿ ಹಾಗೂ ಕಂಠೀರವ ಕ್ರೀಡಾಂಗಣದ ಆವರಣದಲ್ಲಿಯೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿಯೂ ಸಹ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ.

ಸ್ಟೇಡಿಯಂ ಪ್ರವೇಶಿಸುವು ಹೇಗೆ?

  • ಕಬ್ಬನ್ ರಸ್ತೆ ಮೂಲಕ: ಗೇಟ್ ಸಂಖ್ಯೆ E-1 ರಿಂದ E-3, E-18, E-19, E-22 ಮತ್ತು E-23.
  • ಲಿಂಕ್ ರಸ್ತೆ ಮೂಲಕ: ಗೇಟ್ ಸಂಖ್ಯೆ E-11 ರಿಂದ E-17.
  • ಕ್ವೀನ್ಸ್ ರಸ್ತೆ ಮೂಲಕ: ಗೇಟ್ ಸಂಖ್ಯೆ E-05 ಮತ್ತು E-08.
  • ಗೇಟ್ ಸಂಖ್ಯೆ E-10 ಕೇವಲ ಆಟಗಾರರು ಮತ್ತು VIPಗಳಿಗೆ ಮಾತ್ರ ಮೀಸಲು.

ಬಿಆರ್‌ವಿ ಮೈದಾನ (ಗೇಟ್ ನಂ. 06) ಮತ್ತು ಮನೆಕ್‌ಶಾ ಪೆರೇಡ್ ಮೈದಾನ (ಗೇಟ್ ನಂ. 03) ಓಲಾ, ಉಬರ್, ಆಟೋ ಪಿಕ್-ಅಪ್ ಮತ್ತು ಡ್ರಾಪ್ ಸ್ಥಳಗಳಿಗೆ ಅವಕಾಶ ನೀಡಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಪಾರ್ಕಿಂಗ್ ಸಮಸ್ಯೆ ನೀಗಿಸಲು ಸಾರ್ವಜನಿಕರು ಹೆಚ್ಚಾಗಿ ಮೆಟ್ರೋ ಅಥವಾ ಬಿಎಂಟಿಸಿ ಬಸ್‌ಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ವರದಿ: ವಿಕಾಸ್​, ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:17 pm, Thu, 23 April 26

Source link

ನೀವು ಆತ್ಮೀಯರಿಗೆ ಸಾಲ ಕೊಟ್ಟ ಹಣವನ್ನು ವಾಪಸ್‌ ಪಡೆಯಲು ಈ ಸಲಹೆ ಪಾಲಿಸಿ – Kannada News | Follow these advice to get back the money you lent to your loved ones?

ಕೆಲವೊಂದು ಬಾರಿ ನಾವು ಆರ್ಥಿಕ ಸಂಕಷ್ಟದಲ್ಲಿರುವ ಸಂಬಂಧಿಕರು, ಸ್ನೇಹಿತರಿಗೆ ಸಾಲದ ರೂಪದಲ್ಲಿ ಹಣವನ್ನು (money) ನೀಡುತ್ತೇವೆ. ಆರ್ಥಿಕ ಸಹಾಯ ಮಾಡುತ್ತೇವೆ. ಆದರೆ ಕೆಲವೊಂದು ಬಾರಿ  ಸಾಲ ತೆಗೆದುಕೊಂಡ ಸ್ನೇಹಿತರು ನಾವು ನೀಡಿದಂತಹ ಹಣವನ್ನು ಮರಳಿ ಕೊಡಲು ಮರೆತುಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಹಲವರು ಸಂಬಂಧ ಎಲ್ಲಿ ಹಾಳಾಗಿಬಿಡುತ್ತದೋ ಎಂಬ ಕಾರಣಕ್ಕೆ ತಮ್ಮ ಹಣವನ್ನು ಮರಳಿ ಕೊಡಿ ಎಂದು ಕೇಳಲು ಹಿಂಜರಿಯುತ್ತಾರೆ. ನೀವು ಕೂಡ ಇದೇ ರೀತಿ ಸಾಲ ಕೊಟ್ಟ ಹಣವನ್ನು ವಾಪಸ್‌ ಕೇಳಲು ಹಿಂಜರಿಯುತ್ತಿದ್ದೀರಾ ಅಥವಾ ಸಾಲ ಕೊಟ್ಟ ಹಣವನ್ನು ಮರಳಿ ಕೇಳುವುದು ಹೇಗೆ ಎಂಬುದು ತಿಳಿದಿಲ್ವಾ? ಹಾಗಿದ್ರೆ ಈ ಸಿಂಪಲ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಸುಲಭವಾಗಿ ನಿಮ್ಮ ಹಣವನ್ನು ಮರಳಿ ಪಡೆಯಿರಿ.

ನೀವು ಸಾಲ ಕೊಟ್ಟ ಹಣವನ್ನು  ಆತ್ಮೀಯರಿಂದ ಮರಳಿ ಪಡೆಯುವುದು ಹೇಗೆ?

ನಿಮ್ಮ ಕಷ್ಟಗಳ ಬಗ್ಗೆ ಒತ್ತಿ ಹೇಳಿ: ನೀವು ಸ್ನೇಹಿತರಿಂದ ಹಣವನ್ನು ಮರಳಿ ಪಡೆಯಲು ನಿಮ್ಮ ಅಗತ್ಯಗಳನ್ನು ಬಹಿರಂಗವಾಗಿ ವಿವರಿಸಿ. ನೀವು ಕಷ್ಟದಲ್ಲಿದ್ದೀರಿ ಆದ ಕಾರಣ ತುರ್ತಾಗಿ ಹಣದ ಅವಶ್ಯಕತೆಯಿದೆ ಎಂದು ಅವರಿಗೆ ತಿಳಿಸಿ. ಹಣದ ವಹಿವಾಟಿನ ಬಗ್ಗೆ ನಿಮ್ಮ ಸ್ನೇಹಿತನೊಂದಿಗೆ ಫೋನ್ ಮೂಲಕ ಅಲ್ಲ, ಮುಖಾಮುಖಿಯಾಗಿ ಚರ್ಚಿಸಿ. ಈ ಟ್ರಕ್ಸ್‌ ನಿಮ್ಮ ಸ್ನೇಹಿತ ನಿಮ್ಮ ಹಣವನ್ನು ವಾಪಸ್‌ ನೀಡುವಂತೆ ಮಾಡುತ್ತದೆ.

ಪ್ರಾಮಾಣಿಕತೆಯಿಂದ ಹಣವನ್ನು ಕೇಳಿ: ಯಾವುದೇ ಕಾರಣಕ್ಕೂ ಕೊಟ್ಟ ಹಣವನ್ನು ವಾಪಸ್‌ ಕೇಳಲು ಹಿಂಜರಿಯಬೇಡಿ, ಪ್ರಾಮಾಣಿಕವಾಗಿ ನನಗೆ ಹಣದ ಅವಶ್ಯಕತೆಯಿದೆ, ದಯವಿಟ್ಟು ಹಣವನ್ನು ಮರಳಿ ಕೊಡಿ ಎಂದು ಕೇಳಿ. ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿವರಿಸಿ. ಈ ಮೂಲಕ ಸಂಬಂಧ ಹಾಳಾಗದ ರೀತಿಯಲ್ಲಿ ನಿಮ್ಮ ಹಣವನ್ನು ನೀವು ವಾಪಸ್‌ ಪಡೆಯಬಹುದು.

ಕಂತುಗಳನ್ನು ಹೊಂದಿಸಿ: ನೀವು ಸ್ನೇಹಿತರಿಗೆ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡಿದರೆ, ಮತ್ತು ನಿಮ್ಮ ಸ್ನೇಹಿತರಿಗೆ ಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಲು ಸಾಧ್ಯವಾಗದಿದ್ದರೆ, ನೀವು ಸಾಲವನ್ನು ಮರುಪಾವತಿಸಲು ಕಂತುಗಳನ್ನು ಹೊಂದಿಸಬಹುದು. ತಿಂಗಳು ತಿಂಗಳು ಇಎಮ್‌ಐ ರೂಪದಲ್ಲಿ ಸಾಲದ ಮೊತ್ತವನ್ನು ಪಾವತಿಸುವಂತೆ ಮಾಡಬಹುದು. ಇದು ಸಂಬಂಧವನ್ನು ಹಾಳಾಗದಂತೆಯೂ ನೋಡಿಕೊಳ್ಳುತ್ತದೆ ಮತ್ತು ನಿಮ್ಮ ಸ್ನೇಹಿತರಿಗೆ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲು ಸಹಕಾರಿಯಾಗಿದೆ.

ಇದನ್ನೂ ಓದಿ: ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು

ಕುಟುಂಬ ಅಥವಾ ಇತರ ಸ್ನೇಹಿತರಿಂದ ಸಹಾಯ ಪಡೆಯಿರಿ: ನಿಮ್ಮ ಸ್ನೇಹಿತ ನಿಮ್ಮ ಹಣವನ್ನು ವಾಪಸ್‌ ನೀಡಲು ಒಲ್ಲೆ ಎನ್ನುತ್ತಿದ್ದರೆ, ಹಣವನ್ನು ಎರವಲು ಪಡೆದ ಸ್ನೇಹಿತನ ಕುಟುಂಬದೊಂದಿಗೆ ಮಾತನಾಡಿ, ಅಥವಾ ನಿಮ್ಮ ಫ್ರೆಂಡ್ಸ್‌, ಕುಟುಂಬದ ಮೂಲಕ ನಿಮ್ಮ ಸ್ನೇಹಿತನ ಮನವೊಲಿಸಲು ಪ್ರಯತ್ನಿಸಿ. ಈ ಮೂಲಕವೂ ಹಣವನ್ನು ವಾಪಸ್‌ ಕೇಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link