ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಡಿಜಿಲಾಕರ್ (DigiLocker) ಡಿಜಿಟಲ್ ಇಂಡಿಯಾ ಪರಿಚಯಿಸಲಾದ ಸುರಕ್ಷಿತ ಕ್ಲೌಡ್ ಆಧಾರಿತ ವೇದಿಕೆಯಾಗಿದೆ. ಇದೊಂದು ಡಿಜಿಟಲ್ ದಾಖಲೆಗಳ ಲಾಕರ್. ಈ ಖಾತೆ ಮೂಲಕ ನೀವು ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪತ್ರ, ಅಂಕಪಟ್ಟಿಗಳು ಮತ್ತು ಪ್ಯಾನ್ ಕಾರ್ಡ್ಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬಹುದಾಗಿದೆ. ಒಂದು ವೇಳೆ ನಿಮ್ಮ ಡಿಜಿಲಾಕರ್ ಹ್ಯಾಕ್ ಆಗಿದೆ ಎಂದು ಈ ಕೆಲವು ಸಣ್ಣ ಬದಲಾವಣೆಯಿಂದ ತಿಳಿಯಬಹುದು. ಒಂದು ವೇಳೆ ನೀವು ಈ ಕೆಲಸ ಮೊದ್ಲು ಮಾಡಿದ್ರೆ ಹ್ಯಾಕ್ ಆದ ಖಾತೆ ಸುರಕ್ಷಿತವಾಗಿರುತ್ತದೆ.
ಡಿಜಿಲಾಕರ್ ಹ್ಯಾಕ್ ಆಗಿದೆ ಎಂದು ತಿಳಿಯುವುದು ಹೇಗೆ?
- ನೀವು ಡಿಜಿಲಾಕರ್ಗೆ ಲಾಗಿನ್ ಆಗದಿದ್ರೂ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
- ಡಿಜಿ ಲಾಕರ್ ಪ್ರೊಫೈಲ್ನಲ್ಲಿನ ಹೆಸರು, ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಬದಲಾಗಿರುತ್ತದೆ.
- ಡಿಜಿ ಲಾಕರ್ ಖಾತೆಗೆ ಲಾಗಿನ್ ಆಗಲು ಪಾಸ್ವರ್ಡ್ ಬಳಸಿದ್ರೂ ಲಾಗಿನ್ ಆಗಲು ಆಗಲ್ಲ.
- ಡಿಜಿ ಲಾಕರ್ ನಲ್ಲಿ ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಅಥವಾ ಇತರ ದಾಖಲೆಗಳನ್ನು ಡೌನ್ಲೋಡ್ ಮಾಡಲಾಗಿರುತ್ತದೆ.
ಡಿಜಿಲಾಕರ್ ಹ್ಯಾಕ್ ಆಗಿದ್ರೆ ನೀವು ಮೊದಲು ಏನು ಮಾಡಬೇಕು?
ಪಾಸ್ವರ್ಡ್ ಬದಲಾಯಿಸುವುದನ್ನು ಮರೆಯದಿರಿ: ನಿಮ್ಮ ಡಿಜಿಲಾಕರ್ ಖಾತೆಗೆ ಲಾಗಿನ್ ಆಗಿ ತಕ್ಷಣವೇ ನಿಮ್ಮ ಪಾಸ್ವರ್ಡ್ ಬದಲಾಯಿಸಿ.
ನಕಲಿ ಆಪ್ಗಳನ್ನು ಬಳಸುವುದನ್ನು ತಪ್ಪಿಸಿ: ಈಗ ನಕಲಿ ಆ್ಯಪ್ ಗಳ ಸಂಖ್ಯೆ ಹೆಚ್ಚಾಗಿದೆ. ನೀವೇನಾದ್ರೂ ನಕಲಿ ಡಿಜಿಲಾಕರ್ ಆ್ಯಪ್ ಡೌನ್ಲೋಡ್ ಅದನ್ನು ಡಿಲೀಟ್ ಮಾಡಿ . ನ್ಯಾಷನಲ್ ಇ- ಗವರ್ನೆನ್ಸ್ ಡಿವಿಷನ್ ವತಿಯಿಂದ ಮಾತ್ರ ಡಿಜಿ ಲಾಕರ್ ಡೌನ್ಲೋಡ್ ಮಾಡಿ ಬಳಸಿಕೊಂಡು ಖಾತೆ ತೆರೆಯಿರಿ.
ಇತರ ಸಾಧನಗಳಲ್ಲಿ ನೀವು ಲಾಗಿನ್ ಆಗಿದ್ದರೆ ತಪ್ಪದೇ ಪರಿಶೀಲಿಸಿ: ನಿಮ್ಮ ಖಾತೆಯ ಸೆಟ್ಟಿಂಗ್ಗಳಿಗೆ ಹೋಗಿ, ಅಲ್ಲಿ ನೀವು ಇನ್ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಲಾಗಿನ್ ಆಗಿದ್ದರೆ, ಅವುಗಳನ್ನು ತಕ್ಷಣವೇ ಲಾಗ್ ಔಟ್ ಮಾಡುವುದು ಉತ್ತಮ.
ಇದನ್ನೂ ಓದಿ: Ration Card: ಕಳೆದುಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಮೊಬೈಲ್ನಲ್ಲಿ ಹೀಗೆ ಕಂಡು ಹಿಡಿಯಿರಿ
ಹ್ಯಾಕ್ ಆದದ್ದು ತಿಳಿದರೆ ಸೈಬರ್ ಕ್ರೈಮ್ಗೆ ದೂರು ನೀಡಿ: ಡಿಜಿ ಲಾಕರ್ ಹ್ಯಾಕ್ ಆಗಿದೆ ಎಂದು ತಿಳಿದರೆ, ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ನಲ್ಲಿ ದೂರು ದಾಖಲಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 5:32 pm, Thu, 9 July 26