9ನೇ ಕ್ಲಾಸ್ ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ – Kannada News | Gujarat Teacher gets 3 years Jail sentence For Slapping Class 9 Student Leaving Her Partially Deaf
ನವದೆಹಲಿ, ಫೆಬ್ರವರಿ 10: 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಹೋಂ ವರ್ಕ್ ಪೂರ್ಣಗೊಳಿಸದ ಕಾರಣದಿಂದಾಗಿ ಶಿಕ್ಷಕರೊಬ್ಬರು ಕಪಾಳಮೋಕ್ಷ ಮಾಡಿದ್ದರು. ಹೀಗಾಗಿ ಗುಜರಾತ್ ನ್ಯಾಯಾಲಯವು ಆ ಶಾಲಾ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಹಲ್ಲೆಯಿಂದಾಗಿ ಬಾಲಕಿಯ ಕಿವಿಯೋಲೆ ಕಿತ್ತುಬಂದು ಒಂದು ಕಿವಿಯೇ ಕೇಳದಂತಾಗಿದೆ. ಜನವರಿ 30ರಂದು ನೀಡಿದ ತೀರ್ಪಿನಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹಿಮಾಂಶು ಚೌಧರಿ ಈ ಅಪರಾಧದ ಮೂಲಕ ಶಿಕ್ಷಕಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಇದರಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದೆ ಎಂದು…