ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ವಿವಾದ: ಕೇಂದ್ರಕ್ಕೆ ಕ್ಷಮೆಯಾಚಿಸಿ ಸುರಕ್ಷತಾ ಕ್ರಮಗಳ ವಿವರಣೆ ಕೊಟ್ಟ ಮೆಟಾ – Kannada News | PM Modi Video Blocked: Meta Apologizes to India Amid AI Moderation Controversy

ನವದೆಹಲಿ, ಜುಲೈ 30: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿದ್ದ ವೀಡಿಯೊ ಒಂದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮೆಟಾ’ (Meta) ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಖುದ್ದಾಗಿ ಪತ್ರ ಬರೆದಿದ್ದು, ಉನ್ನತ ಮಟ್ಟದ ಸುರಕ್ಷತಾ ಕ್ರಮಗಳ ಭರವಸೆ ನೀಡಿದೆ. ಜುಲೈ 23 ರಂದು ಪರೀಕ್ಷಾ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ನಡುವೆ, ಪ್ರಧಾನಿ ಮೋದಿ ಅವರು ‘ಜೆನ್ ಝಿ’ ಉದ್ದೇಶಿಸಿ ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.

ಪ್ರಧಾನಿ ಮೋದಿ ಸೇರಿದಂತೆ ದೇಶದ ಪ್ರಮುಖ ವಿವಿಐಪಿ ಖಾತೆಗಳ ಪೋಸ್ಟ್‌ಗಳಿಗೆ ಹೆಚ್ಚುವರಿ ಭದ್ರತೆ ಮತ್ತು ಪ್ರತ್ಯೇಕ ಮೇಲ್ವಿಚಾರಣೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.ಇನ್ಮುಂದೆ ಪ್ರಮುಖ ಖಾತೆಗಳ ಯಾವುದೇ ವಿಷಯ ಅಥವಾ ಪೋಸ್ಟ್ ಅನ್ನು ಬ್ಲಾಕ್ ಮಾಡುವ ಮೊದಲು ಮೆಟಾ ಸಂಸ್ಥೆಯ ಕನಿಷ್ಠ ಇಬ್ಬರು ಅತ್ಯುನ್ನತ ಅಧಿಕಾರಿಗಳು ಸಮಗ್ರ ತನಿಖೆ ನಡೆಸಲಿದ್ದಾರೆ. ಕೃತಕ ಬುದ್ಧಿಮತ್ತೆ ಆಧಾರಿತ ‘ಎಐ ಮಾಡರೇಶನ್ ವ್ಯವಸ್ಥೆಯಲ್ಲಾದ’ತಾಂತ್ರಿಕ ದೋಷದಿಂದ ಈ ವಿಡಿಯೋ ಬ್ಲಾಕ್ ಆಗಿತ್ತು ಎಂದು ಮೆಟಾ ಸಮಜಾಯಿಷಿ ನೀಡಿದೆ.

ಮೆಟಾ ವಿವರಣೆಗೆ ತೃಪ್ತಿಯಾಗದ ಸಚಿವಾಲಯ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಮೆಟಾ ನೀಡಿದ ಕ್ಷಮೆಯಾಚನೆ ಮತ್ತು ತಾಂತ್ರಿಕ ದೋಷದ ವಿವರಣೆಯನ್ನು ತಿರಸ್ಕರಿಸಿದೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಪೋಸ್ಟ್ ತಡೆಹಿಡಿದ ಫೇಸ್‌ಬುಕ್: ಇದು ಭಾರತದ ಪ್ರಜಾಪ್ರಭುತ್ವದ ಮೇಲಿನ ಹಸ್ತಕ್ಷೇಪ, ತಜಿಂದರ್ ಬಗ್ಗಾ ಆಕ್ರೋಶ

ಐಟಿ ಕಾರ್ಯದರ್ಶಿ ಹೇಳಿಕೆ: “ಮೆಟಾ ಸಂಸ್ಥೆಯು ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದೆ. ಆದರೆ ಅವರು ನೀಡಿದ ಕಾರಣ ನಮಗೆ ತೃಪ್ತಿ ತಂದಿಲ್ಲ. ದೇಶದ ಪ್ರಧಾನಿಯವರ ಅಧಿಕೃತ ಖಾತೆಯ ಪೋಸ್ಟ್‌ಗೇ ಈ ರೀತಿ ಆದರೆ, ಎಐ (AI) ವ್ಯವಸ್ಥೆಯ ವಿಶ್ವಾಸಾರ್ಹತೆ ಎಲ್ಲಿದೆ?” ಎಂದು ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಪ್ರಶ್ನಿಸಿದ್ದಾರೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಮೆಟಾ ಹಾಗೂ ಇನ್‌ಸ್ಟಾಗ್ರಾಮ್‌ನ ಜಾಗತಿಕ ಮುಖ್ಯಸ್ಥರಿಗೆ ಮುಖಾಮುಖಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿದ್ದು, ಈ ವಾರದ ಕೊನೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ.

ಭಾರತದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಕಾರ, ದೇಶದ ಸಾಂವಿಧಾನಿಕ ಹುದ್ದೆಯಲ್ಲಿರುವವರ ಖಾತೆಗಳನ್ನು ಅಥವಾ ಸರ್ಕಾರದ ಅಧಿಕೃತ ಮಾಹಿತಿಯನ್ನು ಯಾವುದೇ ಆಧಾರವಿಲ್ಲದೆ ನಿರ್ಬಂಧಿಸುವುದು ಕಾನೂನುಬಾಹಿರ.

ಸೋಶಿಯಲ್ ಮೀಡಿಯಾ ಸಂಸ್ಥೆಗಳು ಕಂಟೆಂಟ್ ಮಾಡರೇಶನ್‌ಗೆ ಸಂಪೂರ್ಣವಾಗಿ ‘ಎಐ’ಮೇಲೆ ಅವಲಂಬಿತವಾಗಿರುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಮೃತಧಾರೆ: ಕ್ಯಾನ್ಸರ್ ಹೋರಾಟಕ್ಕೆ ಸಜ್ಜಾದ ಭೂಮಿಕಾ, ಹೊಸ ಗೆಟಪ್ ಕಂಡು ಭಾವುಕರಾದ ಫ್ಯಾನ್ಸ್ – Kannada News | Amruthadhare Serial Twist: Bhumika Fights Cancer, Netizens Emotional Over Her Shocking New Bald Look

ಜೀ ಕನ್ನಡ ವಾಹಿನಿಯ ಜನಪ್ರಿಯ ‘ಅಮೃತಧಾರೆ’ ಧಾರಾವಾಹಿ ಈಗ ಅತ್ಯಂತ ರೋಚಕ ಹಾಗೂ ಭಾವನಾತ್ಮಕ ತಿರುವಿಗೆ ಸಾಕ್ಷಿಯಾಗಿದೆ. ನಾಯಕಿ ಭೂಮಿಕಾ ತಮಗೆ ಬಂದಿರುವ ಮಾರಕ ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಡಲು ಧೈರ್ಯದಿಂದ ಹೆಜ್ಜೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಗೆಟಪ್ ಸಂಪೂರ್ಣ ಬದಲಾಗಿದ್ದು, ಇಡೀ ಸೀರಿಯಲ್ ತಂಡ ಹಾಗೂ ವೀಕ್ಷಕರಲ್ಲಿ ಹೊಸ ಸಂಚಲನ ಮೂಡಿಸಿದೆ.

ಕ್ಯಾನ್ಸರ್‌ನಿಂದ ಬದಲಾದ ಲುಕ್

ಧಾರಾವಾಹಿಯ ಮುಖ್ಯ ಪಾತ್ರಧಾರಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಚಿಕಿತ್ಸೆಯ ಭಾಗವಾಗಿ ಅವರು ತಮ್ಮ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಸೀರಿಯಲ್‌ನಲ್ಲಿ ಮೊದಲ ಬಾರಿಗೆ ಬೋಳು ತಲೆಯ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಭಾರಿ ಬೇಸರ

ಸದಾ ಸೌಮ್ಯ ಹಾಗೂ ಸುಂದರವಾಗಿ ಕಂಗೊಳಿಸುತ್ತಿದ್ದ ಭೂಮಿಕಾ ಅವರ ಈ ದಿಢೀರ್ ಬದಲಾವಣೆಯನ್ನು ಕಂಡು ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಈ ಹೊಸ ಲುಕ್‌ನ ಫೋಟೋಗಳು ಭಾರೀ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಕಣ್ಣೀರು ಹಾಕುತ್ತಿದ್ದಾರೆ.

ಧೈರ್ಯ ತುಂಬಿದ ಗೌತಮ್

ಪತ್ನಿಯ ಈ ಕಠಿಣ ಪರಿಸ್ಥಿತಿಯಲ್ಲಿ ಪತಿ ಗೌತಮ್ (ರಾಜೇಶ್ ನಟರಂಗ) ಬೆಟ್ಟದಂತೆ ಜೊತೆಗೆ ನಿಂತಿದ್ದಾರೆ. ಭೂಮಿಕಾ ಧೈರ್ಯಗೆಡದಂತೆ ನೋಡುಕೊಳ್ಳುತ್ತಾ, ಅವಳಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಆದರ್ಶ ಪತಿಯಾಗಿ ಗೌತಮ್ ಜವಾಬ್ದಾರಿ ಮೆರೆದಿದ್ದಾರೆ.

ಇದನ್ನೂ ಓದಿ: ‘ಅಮೃತಧಾರೆ’: ಭೂಮಿಕಾಗೆ ಈಗ ಕ್ಯಾನ್ಸರ್​; ಇದರಲ್ಲಿದೆ ಬೇರೆ ಟ್ವಿಸ್ಟ್?

ಕಣ್ಣೀರು ತರಿಸಿದ ಪ್ರೋಮೋ

ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ಭೂಮಿಕಾ ತನ್ನ ಹೊಸ ರೂಪವನ್ನು ಕನ್ನಡಿಯ ಮುಂದೆ ನೋಡಿ ಧೈರ್ಯ ತಂದುಕೊಳ್ಳುವ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತಿದೆ. ಇಡೀ ಕುಟುಂಬವೇ ಈ ಸಂಕಷ್ಟದ ಸಮಯದಲ್ಲಿ ಭೂಮಿಕಾ ಪರವಾಗಿ ನಿಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೊಹಮ್ಮದ್ ಶಮಿ ಖೇಲ್ ಖತಂ? – Kannada News | Mohammed Shami Sidelined from India’s Future Plans

ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಹಾಗೂ ಅಪಾಯಕಾರಿ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವು ಬಹುತೇಕ ಅಂತ್ಯದ ಹಂತಕ್ಕೆ ಬಂದು ತಲುಪಿದೆಯೇ? ಬಿಸಿಸಿಐ  ಮೂಲಗಳು ಮತ್ತು ಇತ್ತೀಚಿನ ಆಯ್ಕೆ ಸಮಿತಿಯ ನಿರ್ಧಾರಗಳನ್ನು ಗಮನಿಸಿದರೆ ಹೌದು ಎನ್ನುವ ಉತ್ತರ ಸಿಗುತ್ತಿದೆ. ಶಮಿ ಅಧಿಕೃತವಾಗಿ ನಿವೃತ್ತಿ ಘೋಷಿಸದಿದ್ದರೂ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮಾತ್ರ ಅವರ ಹೆಸರನ್ನು ಮುಂದಿನ ಯೋಜನೆಗಳಿಂದ ಕೈಬಿಟ್ಟಿರುವುದು ಸ್ಪಷ್ಟವಾಗಿದೆ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಸದ್ಯ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆಗೆ ಕೈಹಾಕಿದ್ದಾರೆ. 2027ರ ಏಕದಿನ ವಿಶ್ವಕಪ್ ಮತ್ತು ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಸಂಪೂರ್ಣ ಯುವ ತಂಡವನ್ನು ಕಟ್ಟಲು ಮುಂದಾಗಿದೆ.

15 ಯುವ ವೇಗಿಗಳ ಬ್ಲೂಪ್ರಿಂಟ್:

ಟೀಮ್ ಇಂಡಿಯಾ ಭವಿಷ್ಯದ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಲು 15 ಯುವ ಬೌಲರ್‌ಗಳ ವಿಶೇಷ ಪಡೆಯನ್ನು ಸಿದ್ಧಪಡಿಸುತ್ತಿದೆ.

ಇದೇ ಕಾರಣದಿಂದಾಗಿ ಅಫ್ಘಾನಿಸ್ತಾನ್ ಸರಣಿ, ಇಂಗ್ಲೆಂಡ್, ಐರ್ಲೆಂಡ್ ಹಾಗೂ ಝಿಂಬಾಬ್ವೆ ವಿರುದ್ಧದ ಸರಣಿಗಳಲ್ಲಿ ಯುವ ವೇಗಿಗಳನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿಯೇ ಈ ನಾಲ್ಕು ಸರಣಿಗಳಿಗೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಲಾಗಿಲ್ಲ.

ಸ್ಥಿರ ಪ್ರದರ್ಶನ ನೀಡಿದರೂ ನಿರ್ಲಕ್ಷ್ಯ:

ಮೊಹಮ್ಮದ್ ಶಮಿ ಇತ್ತೀಚೆಗೆ ದೇಶೀಯ ಕ್ರಿಕೆಟ್‌ನ ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಗಳಲ್ಲಿ ಬೆಂಗಾಲ್ ತಂಡದ ಪರ ಆಡಿ, ತಮ್ಮ ಮ್ಯಾಚ್ ಫಿಟ್‌ನೆಸ್ ಹಾಗೂ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಆದಾಗ್ಯೂ, ಇತ್ತೀಚಿನ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಸರಣಿಗೆ ಅವರನ್ನು ಪರಿಗಣಿಸಲಾಗಿಲ್ಲ.

ಅಂದರೆ ಇನ್ಮುಂದೆ ಟೆಸ್ಟ್​ಗೆ ಮೊಹಮ್ಮದ್ ಶಮಿ ಆಯ್ಕೆಯಾಗುವ ಸಾಧ್ಯತೆ ಇಲ್ಲ. ಏಕೆಂದರೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಯುವ ವೇಗಿ ಗುರ್ನೂರ್​ ಬ್ರಾರ್​ಗೆ ಅವಕಾಶ ನೀಡಲಾಗಿದೆ. ಇಲ್ಲಿ ಶಮಿ ಅವರ ಸ್ಥಾನಕ್ಕೆ ಬ್ರಾರ್​ ಅವರನ್ನು ಪರಿಗಣಿಸುತ್ತಿರುವುದು ಸ್ಪಷ್ಟ.

ನಿವೃತ್ತಿ ಬಗ್ಗೆ ಶಮಿ ಮಾತು!

ತಮ್ಮನ್ನು ತಂಡದಿಂದ ದೂರ ಇಟ್ಟಿರುವುದರ ಬಗ್ಗೆ ಮೊಹಮ್ಮದ್ ಶಮಿ ಎಲ್ಲೂ ಬೇಸರ ವ್ಯಕ್ತಪಡಿಸಿಲ್ಲ. ಹಾಗೆಯೇ ನಿವೃತ್ತಿ ಘೋಷಿಸುವ ಯಾವುದೇ ಆತುರದಲ್ಲೂ ಅವರಿದ್ದಂತೆ ಕಾಣುತ್ತಿಲ್ಲ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, “ನನಗೆ ಕ್ರಿಕೆಟ್ ಆಡುವುದು ಬೋರ್ ಎನಿಸಿದ ದಿನ ನಾನೇ ಆಟ ಬಿಡುತ್ತೇನೆ. ಆದರೆ, ವಯಸ್ಸು, ಗಾಯ ಅಥವಾ ತಂಡದಿಂದ ಕೈಬಿಟ್ಟರು ಎಂಬ ಕಾರಣಕ್ಕಾಗಿ ನಾನು ಖಂಡಿತಾ ನಿವೃತ್ತಿ ಪಡೆಯುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಕೊನೆಯ ಬಾರಿ ಕಣಕ್ಕಿಳಿದದ್ದು ಯಾವಾಗ?

ಒಂದು ವೇಳೆ ಬಿಸಿಸಿಐ ಶಮಿ ಅವರನ್ನು ಮತ್ತೆ ಅಂತರರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆ ಮಾಡದಿದ್ದರೆ, 2025ರ ಮಾರ್ಚ್ 9 ರಂದು ನ್ಯೂಝಿಲೆಂಡ್ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವೇ ಭಾರತೀಯ ಜೆರ್ಸಿಯಲ್ಲಿ ಮೊಹಮ್ಮದ್ ಶಮಿ ಅವರ ಕೊನೆಯ ಪಂದ್ಯವಾಗಲಿದೆ.

ಇದನ್ನೂ ಓದಿ: CWG 2026: ಒಂದೇ ಸ್ಪರ್ಧೆಯಲ್ಲಿ ಭಾರತಕ್ಕೆ 2 ಪದಕ!

ಒಟ್ಟಾರೆಯಾಗಿ ಹೇಳುವುದಾದರೆ, ಮೊಹಮ್ಮದ್ ಶಮಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವು ಮುಕ್ತಾಯದ ಹಂತ ತಲುಪಿದ್ದರೂ, ಭಾರತೀಯ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆ ಎಂದಿಗೂ ಮರೆಯಲಾಗದ್ದು. ತಂಡದಿಂದ ದೂರ ಉಳಿದರೂ ತಮ್ಮ ನಿವೃತ್ತಿಯ ನಿರ್ಧಾರವನ್ನು ತಾವೇ ತೆಗೆದುಕೊಳ್ಳುವ ಅವರ ಖಡಕ್ ನಿಲುವು, ಅವರ ಆಟದ ಮೇಲಿರುವ ಗೌರವ ಮತ್ತು ಆತ್ಮವಿಶ್ವಾಸವನ್ನು ತೋರಿಸುತ್ತದೆ. ಇದಾಗ್ಯೂ ಅವರಿಗೆ ಕಂಬ್ಯಾಕ್​ಗೆ ಮತ್ತೆ ಅವಕಾಶ ಸಿಗಲಿದೆಯಾ ಎಂಬ ಪ್ರಶ್ನೆಗೆ  ಕಾಲವೇ ಉತ್ತರಿಸಲಿದೆ.

Source link

ವಿಜಯ್ ದೇವರಕೊಂಡ ವೃತ್ತಿ ಜೀವನಕ್ಕೆ 10 ವರ್ಷ; ಇಲ್ಲಿದೆ ಕರಿಯರ್ ವಿವರ – Kannada News | 10 Years Of Vijay Deverakonda: The Phenomenal Journey Of A Solo Hero

ಟಾಲಿವುಡ್‌ನ ಸ್ಟಾರ್ ನಟ ವಿಜಯ್ ದೇವರಕೊಂಡ ಸೋಲೋ ಹೀರೋ ಆಗಿ ಚಿತ್ರರಂಗದಲ್ಲಿ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದ್ದಾರೆ. ಈ ಸುದೀರ್ಘ ಪಯಣವು ಅವರ ಸಿನಿ ಬದುಕಿನ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಕೇವಲ ಒಂದು ದಶಕದಲ್ಲೇ ಅವರು ತೆಲುಗು ಚಿತ್ರರಂಗದಲ್ಲಿ ತಮಗಾಗಿಯೇ ಒಂದು ಗಟ್ಟಿಯಾದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಅವರ ನಟನೆ ಹಾಗೂ ವಿಶಿಷ್ಟ ಶೈಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದೆ.

ಅರ್ಜುನ್ ರೆಡ್ಡಿ ಕೊಟ್ಟ ಬ್ರೇಕ್

2016ರಲ್ಲಿ ತೆರೆಕಂಡ ‘ಪೆಳ್ಳಿ ಚೂಪುಲು’ ಸಿನಿಮಾ ಮೂಲಕ ವಿಜಯ್ ಅವರ ನಾಯಕ ನಟನ ಜರ್ನಿ ಆರಂಭವಾಯಿತು. ಆ ಬಳಿಕ ಬಂದ ‘ಅರ್ಜುನ್ ರೆಡ್ಡಿ’ ಸಿನಿಮಾ ಇವರ ಚಿತ್ರಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸಿತು. ಈ ಚಿತ್ರವು ವಿಜಯ್ ದೇವರಕೊಂಡ ಅವರನ್ನು ಇಡೀ ಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ಯುವ ನಟನನ್ನಾಗಿ ಮಾಡಿತು.

ಸರಣಿ ಹಿಟ್‌ಗಳ ಸರದಾರ

‘ಅರ್ಜುನ್ ರೆಡ್ಡಿ’ ಯಶಸ್ಸಿನ ನಂತರ ವಿಜಯ್ ದೇವರಕೊಂಡ ಹಿಂದಿರುಗಿ ನೋಡಲಿಲ್ಲ. ‘ಗೀತಾ ಗೋವಿಂದಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೀಪಟ ಮಾಡಿದವು. ಇತ್ತೀಚೆಗೆ ಬಂದ ‘ಖುಷಿ’, ‘ಫ್ಯಾಮಿಲಿ ಸ್ಟಾರ್’ ಹಾಗೂ ‘ಕಿಂಗ್ಡಮ್’ ಚಿತ್ರಗಳು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದವು. ಈ ಚಿತ್ರಗಳು ಇವರ ಅಭಿಮಾನಿ ಬಳಗವನ್ನು ಮತ್ತಷ್ಟು ಗಟ್ಟಿಗೊಳಿಸಿದವು.

ಯುವ ಸಮೂಹದ ಕ್ರೇಜ್

ವಿಜಯ್ ದೇವರಕೊಂಡ ಅವರಿಗೆ ಯುವ ಪ್ರೇಕ್ಷಕರಲ್ಲಿ ಅಗಾಧವಾದ ಬೇಡಿಕೆಯಿದೆ. ಇದುವೇ ಅವರ ಸಿನಿಮಾ ರಂಗದ ಅತಿ ದೊಡ್ಡ ಶಕ್ತಿಯಾಗಿದೆ. ಅವರ ಹೊಸ ಸಿನಿಮಾಗಳ ಘೋಷಣೆ, ಫಸ್ಟ್ ಲುಕ್ ಮತ್ತು ಸಂದರ್ಶನಗಳು ಸೋಷಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡುತ್ತವೆ. ಏರಿಳಿತಗಳ ನಡುವೆಯೂ ಅವರ ಮುಂದಿನ ಚಿತ್ರಗಳ ಮೇಲಿನ ನಿರೀಕ್ಷೆ ಎಂದೂ ಕಡಿಮೆಯಾಗಿಲ್ಲ.

ಬಿಸಿನೆಸ್ ಹಾಗೂ ಸಮಾಜ ಸೇವೆ

ನಟನೆಯ ಜೊತೆಗೆ ವಿಜಯ್ ಅವರು ಉದ್ಯಮ ರಂಗಕ್ಕೂ ಕಾಲಿಟ್ಟಿದ್ದಾರೆ. ‘ರೌಡಿ ವೇರ್’ ಎಂಬ ಸ್ವಂತ ಬಟ್ಟೆ ಬ್ರ್ಯಾಂಡ್ ಆರಂಭಿಸಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ‘ದಿ ದೇವರಕೊಂಡ ಫೌಂಡೇಶನ್’ ಮೂಲಕ ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ಈ ಸಂಸ್ಥೆಯ ಅಡಿಯಲ್ಲಿ ಅವರು ಹಲವು ಬಡ ಕುಟುಂಬಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಬೆಂಗಳೂರಿನಲ್ಲಿ 3 ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಎಫ್‌ಐಆರ್ – Kannada News | Rahul Gandhi Defamation: Bengaluru Cyber Crime Files FIR Against 3 Instagram Handles

ಬೆಂಗಳೂರು, ಜು.30: ಲೋಕಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ, ನಿಂದನೀಯ ಹಾಗೂ ಅವಹೇಳನಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದಡಿಯಲ್ಲಿ ಬೆಂಗಳೂರು ಪೊಲೀಸರು ಮೂರು ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಪ್ರಕರಣ (FIR) ದಾಖಲಿಸಿಕೊಂಡಿದ್ದಾರೆ.

ಕೆಪಿಸಿಸಿ ಶಾಸನಬದ್ಧ ಹಾಗೂ ಕಾನೂನು ಕೋಶದ (Legal Cell) ಸದಸ್ಯರೊಬ್ಬರು ನೀಡಿರುವ ದೂರಿನ ಆಧಾರದ ಮೇರೆಗೆ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಜುಲೈ 27ರಂದು ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ground.reality_india’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜುಲೈ 16ರಂದು 30 ಸೆಕೆಂಡುಗಳ ವೀಡಿಯೊ ಒಂದನ್ನು ಅಪ್‌ಲೋಡ್ ಮಾಡಲಾಗಿತ್ತು. ಈ ವೀಡಿಯೊಗೆ “ವಿಪಕ್ಷಗಳು ಏಕೆ ಮೌನವಾಗಿವೆ?” (Why is the Opposition party silent) ಎಂಬ ಕ್ಯಾಪ್ಷನ್ ನೀಡಲಾಗಿದ್ದು, ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ನಿಂದನೀಯ ಹಾಗೂ ಲೈಂಗಿಕ ಪ್ರಚೋದಕ/ಅವಹೇಳನಕಾರಿ ಕಾಮೆಂಟ್‌ಗಳನ್ನು ಬಳಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೀಡಿಯೊ ಮತ್ತು ಪೋಸ್ಟ್ ಜನಪ್ರತಿನಿಧಿಯೊಬ್ಬರ ಗೌರವಕ್ಕೆ ಧಕ್ಕೆ ತರುವ ಹಾಗೂ ಅವರ ತೇಜೋವಧೆ ಮಾಡುವ ದುರುದ್ದೇಶದಿಂದ ಕೂಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ವೀಡಿಯೊ ಕೆಳಗೆ ಪ್ರಚೋದನಕಾರಿ ಹಾಗೂ ನಿಂದನೀಯ ಕಾಮೆಂಟ್‌ಗಳನ್ನು ಹಾಕಿದ್ದ ‘raashtravaadhi2’ ಹಾಗೂ ‘manvithamanojsamanvi’ ಎಂಬ ಇಬ್ಬರು ಇನ್‌ಸ್ಟಾಗ್ರಾಮ್ ಬಳಕೆದಾರರ ಹೆಸರುಗಳನ್ನು ಸಹ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: ಪತಿ ಕಿರುಕುಳಕ್ಕೆ ಬೇಸತ್ತು ರಾಜಸ್ಥಾನದಿಂದ ಮಂಗಳೂರಿಗೆ ಬಂದಿದ್ದ ಮಹಿಳೆ ರಕ್ಷಣೆ: ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ

ಪ್ರಸ್ತುತ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಈ ಖಾತೆಗಳ ಮಾಲೀಕರನ್ನು ಪತ್ತೆ ಹಚ್ಚಲು ಹಾಗೂ ತನಿಖೆ ಚುರುಕುಗೊಳಿಸಲು ಮುಂದಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇ20 ಪೆಟ್ರೋಲ್‌ನಿಂದ ವಾಹನದ ಎಂಜಿನ್‌ಗೆ ಹಾನಿ, ಮೈಲೇಜ್ ಇಳಿಯುತ್ತೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ:ನಿತಿನ್ ಗಡ್ಕರಿ ಸ್ಪಷ್ಟನೆ – Kannada News | E20 Petrol: Nitin Gadkari Dispels Myths on Engine Damage and Mileage Drop

ನವದೆಹಲಿ, ಜುಲೈ 30: ಪೆಟ್ರೋಲ್ ಈಗ ಹೆಚ್ಚಿನ ಪ್ರಮಾಣದ ಎಥೆನಾಲ್(Ethanol) ಒಳಗೊಂಡಿರುವುದರಿಂದ ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್‌ ಹಾಳಾಗುತ್ತದೆ ಅಥವಾ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬ ಸಾರ್ವಜನಿಕರ ಆತಂಕಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಶೇ. 80ರಷ್ಟು ಪೆಟ್ರೋಲ್ ಹಾಗೂ ಶೇಕಡಾ 20 ರಷ್ಟು ಎಥೆನಾಲ್ ಒಳಗೊಂಡಿರುವ E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್‌ ಹಾಳಾಗುತ್ತದೆ ಅಥವಾ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬ ಸಾರ್ವಜನಿಕರ ಆತಂಕಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಹೇಳಿದೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಇ20 ಇಂಧನವನ್ನು ದೇಶಾದ್ಯಂತ ಜಾರಿಗೆ ತರುವ ಮುನ್ನ ತಜ್ಞ ಸಂಸ್ಥೆಗಳೊಂದಿಗೆ ಸುದೀರ್ಘ ವೈಜ್ಞಾನಿಕ ಅಧ್ಯಯನ ಮತ್ತು ಕ್ಷೇತ್ರ ಪ್ರಯೋಗಗಳನ್ನು ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಡೆಹ್ರಾಡೂನ್‌ನ ಐಐಪಿ, ಆಟೋಮೊಬೈಲ್ ತಯಾರಕರ ಸಂಘ (SIAM) ಮತ್ತು ಎಆರ್​ಎಐ ಜಂಟಿಯಾಗಿ ನಡೆಸಿದ ಪರೀಕ್ಷೆಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಎಂಜಿನ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ತಿಳಿದುಬಂದಿದೆ. ಸಾಮಾನ್ಯ ಚಾಲನೆ, ಇಂಧನ ಸಾಗಣೆ ಅಥವಾ ಲೋಹದ ಭಾಗಗಳಿಗೆ ಇ20 ಇಂಧನದಿಂದ ಯಾವುದೇ ಹಾನಿಯಾಗುವುದಿಲ್ಲ. ಹಳೆಯ ಕಾರು ಮತ್ತು ಬೈಕ್‌ಗಳಲ್ಲಿಯೂ ಅಸಹಜ ಸವೆತ ಅಥವಾ ಕಾರ್ಯಕ್ಷಮತೆಯ ಕುಸಿತ ಕಂಡುಬಂದಿಲ್ಲ.

2005ರಿಂದ 2016 ರ ಅವಧಿಯಲ್ಲಿ ತಯಾರಾದ ಹಳೆಯ BS-III (ಭಾರತ್ ಸ್ಟೇಜ್-3) ವಾಹನಗಳಲ್ಲಿ ಮಾತ್ರ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸಬೇಕಾಗಬಹುದು. ನಿಯಮಿತ ವಾಹನ ಸರ್ವೀಸಿಂಗ್ ವೇಳೆ ಇದನ್ನು ಸುಲಭವಾಗಿ ಸರಿಪಡಿಸಬಹುದು ಎಂದರು.

ಮತ್ತಷ್ಟು ಓದಿ: ಅಡುಗೆ ಇಂಧನವಾಗಿ ಎಥನಾಲ್; ಎಲ್​ಪಿಜಿಗೆ ಮತ್ತೊಂದು ಪರ್ಯಾಯಕ್ಕೆ ಸರ್ಕಾರ ಯತ್ನ; ಸಕ್ಕರೆ ಬಗ್ಗೆ ಆವತ್ತು ಮೋದಿ ಹೇಳಿದ್ದರ ಅರ್ಥ ಇದಾ?

ಮೈಲೇಜ್ ಕುರಿತು ಸರ್ಕಾರದ ಸ್ಪಷ್ಟನೆ
ಮೈಲೇಜ್ ಇಳಿಕೆಯ ದೂರುಗಳಿಗೆ ಉತ್ತರಿಸಿದ ಸಚಿವರು, ವಾಹನದ ಮೈಲೇಜ್ ಎಂಬುದು ಕೇವಲ ಇಂಧನದ ಪ್ರಕಾರವನ್ನು ಮಾತ್ರವೇ ಅವಲಂಬಿಸಿಲ್ಲ. ಚಾಲನಾ ಶೈಲಿ, ರಸ್ತೆಯ ಸ್ಥಿತಿ, ವಾಹನದ ನಿರ್ವಹಣೆ ಹಾಗೂ ಟೈರ್ ಒತ್ತಡ ಸೇರಿದಂತೆ ಹಲವಾರು ಅಂಶಗಳು ಮೈಲೇಜ್ ಅನ್ನು ನಿರ್ಧರಿಸುತ್ತವೆ ಎಂದು ತಿಳಿಸಿದ್ದಾರೆ. E20 ಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸದ ಹಳೆಯ ವಾಹನಗಳ ಇಂಧನ ವ್ಯವಸ್ಥೆಗೆ ಹಾನಿಯಾದರೆ ಯಾರು ಜವಾಬ್ದಾರರು ಮತ್ತು ರಿಪೇರಿ ವೆಚ್ಚದ ಹೊಣೆ ಯಾರದ್ದು ಎಂದು ವಿರೋಧ ಪಕ್ಷಗಳು ಹಾಗೂ ಗ್ರಾಹಕರ ಹಿತರಕ್ಷಣಾ ಗುಂಪುಗಳು ಪ್ರಶ್ನಿಸಿದ್ದವು.

ಇದಕ್ಕೆ ಉತ್ತರಿಸಿದ ಗಡ್ಕರಿ, ನೀತಿ ಆಯೋಗದ ‘2020-25ರ ಎಥೆನಾಲ್ ಮಾರ್ಗಸೂಚಿ’ಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. 2001 ರಲ್ಲಿ ಪೈಲಟ್ ಯೋಜನೆಯಾಗಿ ಆರಂಭವಾದ ಎಥೆನಾಲ್ ಮಿಶ್ರಣವು (E5, E10 ದಾಟಿ) ಸಮಗ್ರ ಪ್ರಯೋಗಗಳ ನಂತರವೇ 2026 ರಿಂದ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿದೆ ಎಂದು ವಿವರಿಸಿದ್ದಾರೆ.

E20 ಇಂಧನ ಎಂದರೇನು?: ಇದು ಶೇ.80ರಷ್ಟು ಸಾಮಾನ್ಯ ಪೆಟ್ರೋಲ್ ಹಾಗೂ ಶೇ.20ರಷ್ಟು ಕಬ್ಬು,ಧಾನ್ಯಗಳಿಂದ ತಯಾರಿಸಿದ ಜೈವಿಕ ಇಂಧನ ‘ಎಥೆನಾಲ್’ ಮಿಶ್ರಣವಾಗಿದೆ. E20 ಬಳಕೆಯಿಂದ ವಾಹನಗಳು ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಮಾಲಿನ್ಯ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಜೊತೆಗೆ, ಕಚ್ಚಾ ತೈಲ ಆಮದಿನ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಿ, ದೇಶದ ಕಬ್ಬು ಬೆಳೆಗಾರ ರೈತರಿಗೆ ಹೆಚ್ಚುವರಿ ಆದಾಯ ಸಿಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:56 am, Thu, 30 July 26

Source link

ಪತಿ ಕಿರುಕುಳಕ್ಕೆ ಬೇಸತ್ತು ರಾಜಸ್ಥಾನದಿಂದ ಮಂಗಳೂರಿಗೆ ಬಂದಿದ್ದ ಮಹಿಳೆ ರಕ್ಷಣೆ: ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ – Kannada News | From Rajasthan to Mangaluru: Abused Woman Rescued, NGO Facilitates Emotional Family Reunion

ಮಂಗಳೂರು, ಜು.30: ಪತಿಯ ಸತತ ಕಿರುಕುಳ ತಾಳಲಾರದೆ ದೂರದ ರಾಜಸ್ಥಾನದಿಂದ ಕರಾವಳಿಯ ಮಂಗಳೂರಿಗೆ ಬಂದು ದಿಕ್ಕು ಕಾಣದೆ ಒಂಟಿಯಾಗಿ ಅಲೆಯುತ್ತಿದ್ದ ಮಹಿಳೆಯನ್ನು ರಕ್ಷಿಸಿ, ಆಕೆಯ ತಂದೆಯ ವಶಕ್ಕೆ ಒಪ್ಪಿಸುವಲ್ಲಿ ಪಾಂಡೇಶ್ವರ ಪೊಲೀಸರು ಹಾಗೂ ಸ್ಥಳೀಯ ಸ್ವಯಂಸೇವಾ ಸಂಸ್ಥೆ (NGO) ಯಶಸ್ವಿಯಾಗಿವೆ. ರಾಜಸ್ಥಾನದಲ್ಲಿ ಪತಿಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದ ಗೋಪಿ, ಮಾನಸಿಕವಾಗಿ ಜರ್ಜರಿತರಾಗಿ ಮನೆ ತೊರೆದು ಜೂನ್ 26ರಂದು ಮಂಗಳೂರಿಗೆ ಬಂದಿಳಿದಿದ್ದರು. ನಗರದ ಬೀದಿಗಳಲ್ಲಿ ದಿಕ್ಕು ತೋಚದೆ ಒಂಟಿಯಾಗಿ ತಿರುಗಾಡುತ್ತಿದ್ದರು. ಜೂನ್ 26ರಂದು ನಗರದಲ್ಲಿ ಒಂಟಿಯಾಗಿ ಅನುಮಾನಾಸ್ಪದ ಹಾಗೂ ಸಂಕಷ್ಟದ ಸ್ಥಿತಿಯಲ್ಲಿ ಓಡಾಡುತ್ತಿದ್ದ ಈಕೆಯನ್ನು ಗಮನಿಸಿದ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಆಕೆಯನ್ನು ರಕ್ಷಿಸಿದ್ದರು. ರಕ್ಷಿಸಲ್ಪಟ್ಟ ಮಹಿಳೆಯನ್ನು ಸುರಕ್ಷತೆಯ ದೃಷ್ಟಿಯಿಂದ ಮಂಗಳೂರಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ (NGO) ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಆಕೆಗೆ ಸೂಕ್ತ ಆರೈಕೆ ಹಾಗೂ ಕೌನ್ಸೆಲಿಂಗ್ ನೀಡಲಾಯಿತು.

ಮಹಿಳೆಯಿಂದ ಮಾಹಿತಿ ಕಲೆಹಾಕಿದ ಎನ್‌ಜಿಒ ಸಂಸ್ಥೆಯ ಪದಾಧಿಕಾರಿಗಳು, ರಾಜಸ್ಥಾನದಲ್ಲಿದ್ದ ಆಕೆಯ ತಂದೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಮಂಗಳೂರಿಗೆ ಧಾವಿಸಿ ಬಂದ ತಂದೆಗೆ ಸಂಸ್ಥೆಯು ಮಗಳನ್ನು ಸುರಕ್ಷಿತವಾಗಿ ಹಸ್ತಾಂತರಿಸಿದೆ. ದೀರ್ಘಕಾಲದ ನಂತರ ಕಷ್ಟದಲ್ಲಿದ್ದ ಮಗಳನ್ನು ಕಂಡ ತಂದೆ ಹಾಗೂ ತಂದೆಯನ್ನು ಅಪ್ಪಿಕೊಂಡ ಮಗಳ ಭಾವುಕ ಕ್ಷಣಕ್ಕೆ ಮಂಗಳೂರಿನ ಎನ್‌ಜಿಒ ಸಂಸ್ಥೆ ಸಾಕ್ಷಿಯಾಯಿತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಒಂದೇ ಸ್ಪರ್ಧೆಯಲ್ಲಿ ಭಾರತಕ್ಕೆ 2 ಪದಕ! – Kannada News | Glasgow 2026: India Bags 3 Track & Field Medals in a Single Day!

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನ 6ನೇ ದಿನದಂದು ಭಾರತೀಯ ಕ್ರೀಡಾಪಟುಗಳು ಒಟ್ಟು ಮೂರು ಪದಕಗಳನ್ನು ಗೆದ್ದಿದ್ದಾರೆ. ಈ ಮೂರು ಪದಕಗಳು ಟ್ರ್ಯಾಕ್ ಅಂಡ್ ಫೀಲ್ಡ್ (ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್) ವಿಭಾಗದಲ್ಲೇ ಬಂದಿರುವುದು ವಿಶೇಷ. ಪ್ಯಾರಾ ಟ್ರ್ಯಾಕ್‌ನಲ್ಲಿ ದಿಲೀಪ್ ಮಹಾದು ಗಾವಿತ್ ಚಿನ್ನ ಗೆದ್ದರೆ, ಮೊಹಮ್ಮದ್ ಬಾಸಿಲ್‌ಗೆ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಇನ್ನು ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಾವಿತ್‌ಗೆ ಚಿನ್ನ, ಬಾಸಿಲ್‌ಗೆ ಬೆಳ್ಳಿ:

ಪುರುಷರ 100 ಮೀಟರ್ (T47 ವಿಭಾಗ) ಓಟದ ಸ್ಪರ್ಧೆಯಲ್ಲಿ. ಭಾರತದ ಹೆಮ್ಮೆಯ ಪ್ಯಾರಾ ಅಥ್ಲೀಟ್ ದಿಲೀಪ್ ಮಹಾದು ಗಾವಿತ್ ಕೇವಲ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಇದು ಕೇವಲ ಚಿನ್ನದ ಪದಕವಲ್ಲ, ಬದಲಿಗೆ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯಾಗಿದೆ!

ಏಕೆಂದರೆ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಈ ನಿರ್ದಿಷ್ಟ ವಿಭಾಗದಲ್ಲಿ ಇದುವರೆಗೆ ಯಾವುದೇ ಕ್ರೀಡಾಪಟು 10.71 ಸೆಕೆಂಡುಗಳಷ್ಟು ವೇಗವಾಗಿ ಓಡಿ ಗುರಿ ತಲುಪಿಲ್ಲ.

ಇದೇ ರೇಸ್‌ನಲ್ಲಿ ಭಾರತದ ಮತ್ತೊಬ್ಬ ಪ್ರತಿಭಾವಂತ ಓಟಗಾರ ಮೊಹಮ್ಮದ್ ಬಾಸಿಲ್ ಎಂ 10.83 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡರು.

ಲಾಂಗ್ ಜಂಪ್‌ನಲ್ಲಿ ಮುರಳಿ ಮಿಂಚಿಂಗ್:

ಭಾರತದ ಸ್ಟಾರ್ ಅಥ್ಲೀಟ್ ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್ ಫೈನಲ್‌ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದರು. ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ಶ್ರೀಶಂಕರ್ 8.09 ಮೀಟರ್ ದೂರ ಜಿಗಿಯುವ ಮೂಲಕ ಜಂಟಿಯಾಗಿ ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಬಂದ ನಂತರ ಶ್ರೀಶಂಕರ್ ನೀಡಿದ ಈ ಪ್ರದರ್ಶನ ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’

ಈ ಮೂರು ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಭಾರತವು 8ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಈವರೆಗೆ ಒಟ್ಟು 15 ಪದಕಗಳನ್ನು (3 ಚಿನ್ನ, 9 ಬೆಳ್ಳಿ, 3 ಕಂಚು) ಗೆದ್ದಿರುವ ಭಾರತ ಮುಂಬರುವ ಪಂದ್ಯಗಳಲ್ಲಿ ಮತ್ತಷ್ಟು ಮೆಡಲ್​ಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ಭಾರತದ ಪರ ಪದಕ ಗೆದ್ದವರ ಪಟ್ಟಿ:

ಕ್ರೀಡಾಪಟು  ಕ್ರೀಡೆ ಮತ್ತು ವಿಭಾಗ ಪದಕದ ಪ್ರಕಾರ
ಮಿರಾಬಾಯಿ ಚಾನು ವೇಟ್‌ಲಿಫ್ಟಿಂಗ್ (ಮಹಿಳೆಯರ 48 ಕೆಜಿ) 🥇 ಚಿನ್ನ
ಶರ್ಮಿಳಾ ಧಂಕರ್ ಪ್ಯಾರಾ ಅಥ್ಲೆಟಿಕ್ಸ್ (ಮಹಿಳೆಯರ ಶಾಟ್‌ಪುಟ್ F57) 🥇 ಚಿನ್ನ
ದಿಲೀಪ್ ಮಹಾದು ಗಾವಿತ್ ಪ್ಯಾರಾ ಅಥ್ಲೆಟಿಕ್ಸ್ (ಪುರುಷರ 100 ಮೀ T47) 🥇 ಚಿನ್ನ
ಮುರಳಿ ಶ್ರೀಶಂಕರ್ ಅಥ್ಲೆಟಿಕ್ಸ್ (ಪುರುಷರ ಲಾಂಗ್ ಜಂಪ್) 🥈 ಬೆಳ್ಳಿ
ಗುಲ್ವೀರ್ ಸಿಂಗ್ ಅಥ್ಲೆಟಿಕ್ಸ್ (ಪುರುಷರ 10,000 ಮೀ ಓಟ) 🥈 ಬೆಳ್ಳಿ
ಮೊಹಮ್ಮದ್ ಬಾಸಿಲ್ ಪ್ಯಾರಾ ಅಥ್ಲೆಟಿಕ್ಸ್ (ಪುರುಷರ 100 ಮೀ T47) 🥈 ಬೆಳ್ಳಿ
ಸಂಕೇತ್ ಸರ್ಗರ್ ವೇಟ್‌ಲಿಫ್ಟಿಂಗ್ (ಪುರುಷರ 55 ಕೆಜಿ) 🥈 ಬೆಳ್ಳಿ
ಬಿಂದ್ಯಾರಾಣಿ ದೇವಿ ವೇಟ್‌ಲಿಫ್ಟಿಂಗ್ (ಮಹಿಳೆಯರ 55 ಕೆಜಿ) 🥈 ಬೆಳ್ಳಿ
ಸುಶೀಲಾ ದೇವಿ ಲಿಕ್ಮಾಬಾಮ್ ಜೂಡೋ (ಮಹಿಳೆಯರ 48 ಕೆಜಿ) 🥈 ಬೆಳ್ಳಿ
ವಿಕಾಸ್ ಠಾಕೂರ್ ವೇಟ್‌ಲಿಫ್ಟಿಂಗ್ (ಪುರುಷರ 96 ಕೆಜಿ) 🥈 ಬೆಳ್ಳಿ
ತುಲಿಕಾ ಮಾನ್ ಜೂಡೋ (ಮಹಿಳೆಯರ +78 ಕೆಜಿ) 🥈 ಬೆಳ್ಳಿ
ಅಂಶು ಮಲಿಕ್ ಕುಸ್ತಿ (ಮಹಿಳೆಯರ 57 ಕೆಜಿ ಫ್ರೀಸ್ಟೈಲ್) 🥈 ಬೆಳ್ಳಿ
ಗುರುರಾಜ ಪೂಜಾರಿ ವೇಟ್‌ಲಿಫ್ಟಿಂಗ್ (ಪುರುಷರ 61 ಕೆಜಿ) 🥉 ಕಂಚು
ವಿಜಯ್ ಕುಮಾರ್ ಯಾದವ್ ಜೂಡೋ (ಪುರುಷರ 60 ಕೆಜಿ) 🥉 ಕಂಚು
ಹರ್ಜಿಂದರ್ ಕೌರ್ ವೇಟ್‌ಲಿಫ್ಟಿಂಗ್ (ಮಹಿಳೆಯರ 71 ಕೆಜಿ) 🥉 ಕಂಚು

Published On – 7:35 am, Thu, 30 July 26

Source link

ರಾಮಾಯಣ ಟ್ರೇಲರ್​ನಲ್ಲಿ ರಾವಣನ ಪಾತ್ರದ ಮೂಲಕ ಅಬ್ಬರಿಸಿ ಬೊಬ್ಬಿರಿದ ಯಶ್ – Kannada News | Yash Fierce Ravana Avatar Unveiled: The King of Lanka Takes Center Stage

ಮೊದಲ ದೃಶ್ಯದಲ್ಲಿ ಭವ್ಯವಾದ ಅರಮನೆಯ ಮುಂಭಾಗ ನೆರೆದಿರುವ ಅಪಾರ ಸೈನ್ಯದ ಎದುರು ರಾವಣನು ಕೈಚಾಚಿ ನಿಂತಿರುವ ನೋಟ ಗಾಂಭೀರ್ಯದಿಂದ ಕೂಡಿದೆ. ಅವನ ವಿಶಾಲವಾದ ಸಾಮ್ರಾಜ್ಯ ಮತ್ತು ಅಧಿಪತ್ಯದ ಶಕ್ತಿಯನ್ನು ಈ ಭವ್ಯ ಹಿನ್ನೆಲೆಯು ಅತ್ಯಂತ ಶ್ರೀಮಂತವಾಗಿ ಬಿಂಬಿಸುತ್ತದೆ.

ಮತ್ತೊಂದು ರೋಮಾಂಚಕ ದೃಶ್ಯದಲ್ಲಿ ರಾವಣನು ವನ್ಯಮೃಗದ ಎದುರು ಅತ್ಯಂತ ರೌದ್ರಾವತಾರದಲ್ಲಿ ಆರ್ಭಟಿಸುತ್ತಿರುವುದು ಕಂಡುಬಂದಿದೆ. ಅವನ ಹಣೆಯ ಮೇಲಿನ ಶಿವನ ನಾಮ ಮತ್ತು ಕ್ರೋಧಭರಿತ ಕಣ್ಣುಗಳು ಅವನ ಒಳಗಿನ ಅಗಾಧ ಶಕ್ತಿ ಹಾಗೂ ಶಿವಭಕ್ತಿಯನ್ನು ನೆನಪಿಸುತ್ತವೆ.

ಚಿನ್ನದ ಆಭರಣಗಳು ಮತ್ತು ನವರತ್ನ ಖಚಿತ ಭವ್ಯ ಕಿರೀಟವನ್ನು ಧರಿಸಿರುವ ರಾವಣನ ನೋಟ ಕಣ್ಣು ಕೋರೈಸುವಂತಿದೆ. ಅವನ ದಟ್ಟವಾದ ಗಡ್ಡ, ತೇಜಸ್ಸು ಹಾಗೂ ಮುಖದಲ್ಲಿನ ಗಾಂಭೀರ್ಯವು ಲಂಕಾಧಿಪತಿಯ ಅಹಂಕಾರದ ವ್ಯಕ್ತಿತ್ವಕ್ಕೆ ಸಂಪೂರ್ಣ ನ್ಯಾಯ ಒದಗಿಸಿದೆ.

ಸಿಂಹಾಸನದ ಮೇಲೆ ರಾಜಗಾಂಭೀರ್ಯದಿಂದ ಕುಳಿತಿರುವ ರಾವಣನ ರಾಜವೈಭೋಗದ ದೃಶ್ಯವು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕಪ್ಪು ಮತ್ತು ಹಸಿರು ಬಣ್ಣದ ರೇಷ್ಮೆ ಉಡುಪು ಹಾಗೂ ಚಿನ್ನದ ಕವಚಗಳು ಅವನ ಸೌಂದರ್ಯ ಮತ್ತು ಅಧಿಕಾರವನ್ನು ಎತ್ತಿಹಿಡಿದಿವೆ.

ವಿಶಾಲವಾದ ಅರಮನೆಯ ಆವರಣದಲ್ಲಿ ಎರಡೂ ಕೈಗಳನ್ನು ಚಾಚಿ ಆರ್ಭಟಿಸುತ್ತಿರುವ ರಾವಣನ ತೋಳಿನ ಶಕ್ತಿ ಅದ್ಭುತವಾಗಿ ಮೂಡಿಬಂದಿದೆ. ಇಡೀ ಜಗತ್ತನ್ನೇ ತನ್ನ ಮುಷ್ಟಿಗೆ ತೆಗೆದುಕೊಳ್ಳಲು ಸಜ್ಜಾಗಿರುವ ಮಹಾನ್ ಪರಾಕ್ರಮಿಯಂತೆ ಯಶ್ ಈ ಅವತಾರದಲ್ಲಿ ಮಿಂಚಿದ್ದಾರೆ.

Published On – 7:36 am, Thu, 30 July 26

Source link

ಆರು ದಿನ ಜನಮೆಚ್ಚುಗೆ ಗಳಿಸಿದ ಬೈಕ್ ಸಾಹಸಿ: 7ನೇ ದಿನ ‘ಜೀವಂತ ಸಮಾಧಿ’ಯಾದ ಯುವಕ – Kannada News | Haryana Stuntman Deepak Dies in Live Burial After 6 Days of Bike Stunts: Negligence

ನುಹ್, ಜುಲೈ 30: ಆರು ದಿನಗಳ ಕಾಲ ಸೈಕಲ್ ಹಾಗೂ ಬೈಕ್(Bike) ಮೇಲೆ ವಿಚಿತ್ರ ಸಾಹಸಗಳನ್ನು ಪ್ರದರ್ಶಿಸಿ, ಒಂದೇ ಒಂದು ಸಣ್ಣ ಗೀರೂ ಇಲ್ಲದೆ ಸಾವಿರಾರು ಜನರನ್ನು ರಂಜಿಸಿದ್ದ ಆ ಯುವಕ, 7ನೇ ದಿನ ನಡೆಸಿದ ಒಂದೇ ಒಂದು ದುರಂತ ಸಾಹಸಕ್ಕೆ ಪ್ರಾಣವನ್ನೇ ತೆತ್ತಿದ್ದಾರೆ. ಹರಿಯಾಣದ ನುಹ್ ಜಿಲ್ಲೆಯ ಖೋರಿ ಕಲಾನ್ ಗ್ರಾಮದಲ್ಲಿ ನಡೆದ  ಸೈಕಲ್ ಸರ್ಕಸ್‌ ಬಳಿಕ 27 ವರ್ಷದ ಸಾಹಸಿ ದೀಪಕ್,ನೆಲದಡಿಯಲ್ಲಿ ಸಮಾಧಿಯಾಗುವ ಸಾಹಸ ಪ್ರದರ್ಶನ ನಡೆಸುವಾಗ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.

ಫರಿದಾಬಾದ್ ಜಿಲ್ಲೆಯ ಗೌಂಚಿ ಗ್ರಾಮದ ನಿವಾಸಿಯಾದ ದೀಪಕ್, ಚಲಿಸುವ ಸೈಕಲ್ ಮೇಲೆ ನೇರವಾಗಿ ನಿಲ್ಲುವುದು, ಹ್ಯಾಂಡಲ್‌ಬಾರ್‌ಗಳ ಮೇಲೆ ಸಮತೋಲನ ಸಾಧಿಸುವುದು ಹಾಗೂ ಕಣ್ಣು ಮುಚ್ಚಿ ಸವಾರಿ ಮಾಡುವಂತಹ ಸಾಹಸಗಳಿಗೆ ಹೆಸರಾಗಿದ್ದರು. ಖೋರಿ ಕಲಾನ್ ಗ್ರಾಮದಲ್ಲಿ ಸರ್ಕಸ್‌ನ ಕೊನೆಯ ದಿನದ ಅಂಗವಾಗಿ ದೀಪಕ್ ಅವರನ್ನು ವಿಶೇಷ ಚೀಲದೊಳಗೆ ಇರಿಸಿ, ಅಗೆಯಲಾಗಿದ್ದ ಗುಂಡಿಯಲ್ಲಿ ಮುಚ್ಚಿ ಸಮಾಧಿ ಮಾಡಲಾಯಿತು. 24 ಗಂಟೆಗಳ ನಂತರ ಅವರನ್ನು ಸಮಾಧಿಯಿಂದ ಜೀವಂತವಾಗಿ ಹೊರತರಲಾಗುವುದು ಎಂದು ಸರ್ಕಸ್ ಆಯೋಜಕರು ಪ್ರೇಕ್ಷಕರಿಗೆ ಭರವಸೆ ನೀಡಿದ್ದರು.

ಹೊರಬರಲೇ ಇಲ್ಲ ಸಾಹಸಿ
ಭರವಸೆ ನೀಡಿದಂತೆ 24 ಗಂಟೆಗಳ ನಂತರ ದೀಪಕ್ ಅವರನ್ನು ಹೊರಗೆ ತೆಗೆಯಲಿಲ್ಲ. ಪ್ರತ್ಯಕ್ಷದರ್ಶಿ ಸಂಚಿತ್ ಸಿಂಗ್ ಅವರ ಪ್ರಕಾರ, ಪ್ರೇಕ್ಷಕರಿಂದ ಒಟ್ಟು 7,100 ರೂ. ದೇಣಿಗೆ ಸಂಗ್ರಹವಾಗುವವರೆಗೆ ದೀಪಕ್ ಅವರನ್ನು ಹೊರಗೆ ತೆಗೆಯುವುದಿಲ್ಲ ಎಂದು ಆಯೋಜಕರು ಷರತ್ತು ವಿಧಿಸಿದ್ದರು. ಹಣ ಸಂಗ್ರಹಿಸುವ ಹುಚ್ಚಿನಲ್ಲಿ ದೀಪಕ್ ಅವರನ್ನು ಸುಮಾರು 36 ಗಂಟೆಗಳ ಕಾಲ ನೆಲದಡಿಯಲ್ಲೇ ಬಿಡಲಾಯಿತು. ಕೊನೆಗೆ ಸಾರ್ವಜನಿಕರು ಮತ್ತು ಪೊಲೀಸರ ಸಮ್ಮುಖದಲ್ಲಿ ಗುಂಡಿಯನ್ನು ಅಗೆದು ತೆರೆದಾಗ, ದೀಪಕ್ ಉಸಿರುಗಟ್ಟಿ ಮೃತಪಟ್ಟಿರುವುದು ಕಂಡುಬಂದಿದೆ.

ಮತ್ತಷ್ಟು ಓದಿ: ಪೆಟ್ರೋಲ್ ಬಂಕ್ ಸಂಬಳ ಸಾಕಾಗದೆ ಬೈಕ್ ಕಳ್ಳನಾದ ಭೂಪ! 42 ಬೈಕ್ ಜಪ್ತಿ ಮಾಡಿ ಮಾಲೀಕರಿಗೆ ನೀಡಿದ ವಿಜಯಪುರ ಪೊಲೀಸರು

ಆರು ದಿನಗಳ ಕಾಲ ತಮ್ಮನ್ನು ನಗಿಸಿ ರಂಜಿಸಿದ ಯುವಕ, ಆಯೋಜಕರ ನಿರ್ಲಕ್ಷ್ಯ ಹಾಗೂ ಹಣದಾಸೆಯಿಂದಾಗಿ ಹೆಣವಾಗಿ ಹೊರಬಂದಿದ್ದನ್ನು ಕಂಡು ಇಡೀ ಗ್ರಾಮವೇ ಕಣ್ಣೀರಿಟ್ಟಿದೆ. ಇಂತಹ ಪ್ರಾಣಾಪಾಯವಿರುವ ಸಾಹಸ ಪ್ರದರ್ಶನಗಳಿಗೆ ಕನಿಷ್ಠ ಆಮ್ಲಜನಕ ವ್ಯವಸ್ಥೆ ಅಥವಾ ಸುರಕ್ಷತಾ ಕ್ರಮ ಕೈಗೊಳ್ಳದ ಆಯೋಜಕರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯನ್ನು ದೃಢಪಡಿಸಿರುವ ಜಿಲ್ಲಾ ಪೊಲೀಸ್ ವಕ್ತಾರ ಕೃಷ್ಣ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಯ್ದೆಯಡಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ರಕ್ಷಣೆ ಮಾಡದಿರಲು ಕಾರಣರಾದವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version