ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು – Kannada News | Heavy Rains Bring Relief to Drought Hit Farmers in Yadagir

ಯಾದಗಿರಿ, ಜುಲೈ 29: ಯಾದಗಿರಿ ನಗರ ಸೇರಿದಂತೆ ಹಲವು ಕಡೆ ಒಂದೂವರೆ ಗಂಟೆ ಮಳೆ ಅಬ್ಬರಿಸಿದೆ. ಆ ಮೂಲಕ ಬರದಿಂದ ಬಳಲಿ ಬೆಂಡಾಗಿದ್ದ ರೈತರಿಗೆ ಕೊಂಚ ನಿರಾಳತೆ ಮೂಡಿದೆ. ಒಣಗುವ ಹಂತಕ್ಕೆ ಬಂದಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದ್ದು, ಇತ್ತ ರೈತರ ಮೊಗದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ದಾನೆ. ಇನ್ನು ಮಳೆ ಅಬ್ಬರದಿಂದ ನಗರದ ಕೆಲ ಕಡೆ ರಸ್ತೆಗಳು ಜಲಾವೃತಗೊಂಡವು. ಯಾದಗಿರಿಯ ಕೇಂದ್ರ ಬಸ್ ನಿಲ್ದಾಣದ ಬಳಿ, ರೈಲ್ವೆ ನಿಲ್ದಾಣ ಹಾಗೂ ಗಾಂಧಿ ಸರ್ಕಲ್​ನಲ್ಲಿ ರಸ್ತೆಗಳು ಕರೆಯಂತಾಗಿದ್ದವು. ಮಳೆ ಹೊಡೆತದಿಂದ ವಾಹನ ಸವಾರರ ಪರದಾಡಿದರು. ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿದ್ದರೆ, ಇತ್ತ ರೈತಾಪಿ ವರ್ಗಕ್ಕೆ ಸಂತಸ ಮನೆ ಮಾಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ – Kannada News | Actress Urvashi Comeback Kannada Cinema Bully Film with Bhuvan Ponnanna

ನಟ ಭುವನ್ ಪೊನ್ನಣ್ಣ (Bhuvan Ponnanna) ಅವರ ಹೊಸ ಸಿನಿಮಾಗೆ ‘ಬುಲ್ಲಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾಗೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ ಆಗಿದೆ. ಬಹುಭಾಷಾ ತಾರೆ, ಹಿರಿಯ ನಟಿ ಊರ್ವಶಿ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಊರ್ವಶಿ ಅವರ ಪುತ್ರಿ ತೇಜ ಊರ್ವಶಿ ನಾಯರ್ ಅವರು ಈ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅನೂಪ್ ಆಂಟೋನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಲಾಯಿತು. ಚಿತ್ರದ ಫಸ್ಟ್ ಲುಕ್ ಪೋಸ್ಟರ್​ ನೋಡಿ ಊರ್ವಶಿ ಅವರು ಅಚ್ಚರಿಗೊಂಡರು. ಹಲವು ವರ್ಷಗಳ ಬಳಿಕ ಊರ್ವಶಿ ಅವರು ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ ಎಂಬುದು ವಿಶೇಷ. ‘ರಾಮ ಶಾಮ ಭಾಮ’ ಬಳಿಕ ಕನ್ನಡ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡುತ್ತಿರುವುದಕ್ಕೆ ಅವರಿಗೆ ಖುಷಿ ಇದೆ. ಈ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL: ಅತ್ಯಧಿಕ ಬ್ರಾಂಡ್ ಮೌಲ್ಯ ಹೊಂದಿರುವ ತಂಡ ಆರ್​ಸಿಬಿ; ಸಿಎಸ್​ಕೆಗೆ ಯಾವ ಸ್ಥಾನ?

Source link

ಐಸ್‌ಕ್ರೀಮ್ ತಿಂದ ಬಳಿಕ ವೈದ್ಯರು ಹೇಳುವ 5 ಆರೋಗ್ಯ ಸಲಹೆಗಳನ್ನು ತಪ್ಪದೆ ಪಾಲಿಸಿ – Kannada News | How to Prevent Colds and Sore Throat After Eating Ice Cream

ಐಸ್‌ಕ್ರೀಮ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ತಿನಿಸು. ಬೇಸಿಗೆಯಷ್ಟೇ ಅಲ್ಲ, ಮಳೆ, ಚಳಿಯ ವಾತಾವರಣದಲ್ಲಿಯೂ ಹಲವರು ಐಸ್‌ಕ್ರೀಮ್ ಸೇವಿಸುತ್ತಾರೆ. ಆದರೆ ಐಸ್‌ಕ್ರೀಮ್ ತಿಂದ ನಂತರ ಕೆಲವು ಅಭ್ಯಾಸಗಳನ್ನು ಅನುಸರಿಸಿದರೆ ಗಂಟಲು ನೋವು, ಕೆಮ್ಮು, ಅಜೀರ್ಣ ಮತ್ತು ಬಾಯಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಗಮನಿಸಬೇಕಾದ ವಿಷಯವೆಂದರೆ, ಐಸ್‌ಕ್ರೀಮ್ ತಿನ್ನುವುದರಿಂದಲೇ ಗಂಟಲು ನೋವು ಉಂಟಾಗುವುದಿಲ್ಲ. ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕು ಇದ್ದಾಗ ಅಥವಾ ಈಗಾಗಲೇ ಗಂಟಲು ಸಮಸ್ಯೆ ಇರುವವರಲ್ಲಿ ಚಳಿ ಆಹಾರ ತಾತ್ಕಾಲಿಕವಾಗಿ ಅಸ್ವಸ್ಥತೆಯನ್ನು ಹೆಚ್ಚಿಸಬಹುದು. ಆದ್ದರಿಂದ ಸರಿಯಾದ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಮುಖ್ಯ.

ಐಸ್‌ಕ್ರೀಮ್ ತಿಂದ ತಕ್ಷಣ ತುಂಬಾ ಬಿಸಿ ನೀರು ಕುಡಿಯಬೇಡಿ

ಅನೇಕರು ಐಸ್‌ಕ್ರೀಮ್ ತಿಂದ ಕೂಡಲೇ ಕುದಿಯುವಷ್ಟು ಬಿಸಿ ನೀರು ಕುಡಿಯುತ್ತಾರೆ. ಆದರೆ ತಕ್ಷಣದ ತಾಪಮಾನ ಬದಲಾವಣೆ ಹಲ್ಲುಗಳ ಎನಾಮೆಲ್‌ಗೆ ಅಸಹನೀಯವಾಗಬಹುದು ಮತ್ತು ಹಲ್ಲಿನ ಸೂಕ್ಷ್ಮ ಸಂವೇದನೆ ಹೆಚ್ಚಿಸಬಹುದು ಕೆಲವೊಮ್ಮೆ ಭೇದಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಕನಿಷ್ಠ 10–15 ನಿಮಿಷ ಕಾಯಿರಿ. ನಂತರ ಸಾಮಾನ್ಯ ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.

ಬಾಯಿ ಚೆನ್ನಾಗಿ ತೊಳೆಯಿರಿ

ಐಸ್‌ಕ್ರೀಮ್‌ನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ತಿಂದ ನಂತರ ಬಾಯಿ ತೊಳೆಯದೇ ಇದ್ದರೆ ಬ್ಯಾಕ್ಟೀರಿಯಾ ಹೆಚ್ಚಾಗಿ ಹಲ್ಲು ಹುಳು, ದುರ್ವಾಸನೆ ಮತ್ತು ಪ್ಲಾಕ್ ಸಮಸ್ಯೆ ಉಂಟಾಗಬಹುದು. ಸಾಮಾನ್ಯ ನೀರಿನಿಂದ ಬಾಯಿ ಮುಕ್ಕಳಿಸಿ. ತಕ್ಷಣ ಹಲ್ಲು ತೊಳೆಯುವ ಬದಲು ಸುಮಾರು 30 ನಿಮಿಷಗಳ ನಂತರ ಬ್ರಷ್ ಮಾಡುವುದು ಉತ್ತಮ.

ತಿಂದ ತಕ್ಷಣ ಮಲಗಬೇಡಿ

ರಾತ್ರಿ ಊಟದ ನಂತರ ಐಸ್‌ಕ್ರೀಮ್ ಸೇವಿಸಿ ತಕ್ಷಣ ಮಲಗುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳಬಹುದು. ಕೆಲವರಿಗೆ ಅಜೀರ್ಣ, ಆಸಿಡ್ ರಿಫ್ಲಕ್ಸ್ ಅಥವಾ ಎದೆಯುರಿ ಕಾಣಿಸಬಹುದು. ಐಸ್‌ಕ್ರೀಮ್ ತಿಂದ ಬಳಿಕ ಕನಿಷ್ಠ 30–45 ನಿಮಿಷ ಮಲಗಬೇಡಿ. ಅಥವಾ ರಾತ್ರಿ ಸಮಯದಲ್ಲಿ ಐಸ್‌ಕ್ರೀಮ್ ಸೇವನೆ ಮಾಡಬೇಡಿ.

ಒಂದೇ ಬಾರಿ ಹಲವು ತಣ್ಣನೆಯ ಪದಾರ್ಥಗಳನ್ನು ಸೇವಿಸಬೇಡಿ

ಐಸ್‌ಕ್ರೀಮ್ ಜೊತೆಗೆ ತಂಪು ಪಾನೀಯ, ಐಸ್ ನೀರು ಅಥವಾ ಫ್ರಿಜ್‌ನಿಂದ ತೆಗೆದ ಹಣ್ಣುಗಳನ್ನು ಸೇವಿಸುವುದರಿಂದ ಕೆಲವರಿಗೆ ಗಂಟಲು ಅಸ್ವಸ್ಥತೆ ಹೆಚ್ಚಾಗಬಹುದು.

ಗಂಟಲು ನೋವು ಇದ್ದರೆ ಎಚ್ಚರಿಕೆ ಅಗತ್ಯ

ಈಗಾಗಲೇ ಗಂಟಲು ಸೋಂಕು, ಟಾನ್ಸಿಲ್ ಉರಿಯೂತ ಅಥವಾ ಜ್ವರ ಇದ್ದರೆ ಐಸ್‌ಕ್ರೀಮ್ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ತೂಕ ಇಳಿಸಲು ಬೆಳಗಿನ ಉಪಹಾರದಲ್ಲಿ ಈ ಒಂದು ಬದಲಾವಣೆ ಸಾಕು! ಇಲ್ಲಿದೆ ಡಯಟಿಷಿಯನ್ ನೀಡಿದ ಸಲಹೆ

ಗಂಟಲು ಕಿರಿಕಿರಿ ಕಂಡುಬಂದರೆ:

  • ಉಪ್ಪು ಬೆರೆಸಿದ ಉಗುರುಬೆಚ್ಚಗಿನ ನೀರಿನಿಂದ ಗಾರ್ಗಲ್ ಮಾಡಿ.
  • ಸಾಕಷ್ಟು ನೀರು ಕುಡಿಯಿರಿ.
  • ಲಕ್ಷಣಗಳು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ.

ಐಸ್‌ಕ್ರೀಮ್ ತಿನ್ನುವಾಗ ಗಮನಿಸಬೇಕಾದ ವಿಷಯಗಳು:

  • ವಿಶ್ವಾಸಾರ್ಹ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಮಾತ್ರ ಆಯ್ಕೆಮಾಡಿ.
  • ಕರಗಿದ ಐಸ್‌ಕ್ರೀಮ್ ಅನ್ನು ಮತ್ತೆ ಫ್ರೀಜ್ ಮಾಡಿ ತಿನ್ನಬೇಡಿ.
  • ಮಧುಮೇಹ ಇರುವವರು ಕಡಿಮೆ ಸಕ್ಕರೆ ಅಂಶವಿರುವ ಅಥವಾ ವೈದ್ಯರ ಸಲಹೆಯಂತೆ ಆಯ್ಕೆ ಮಾಡುವುದು ಉತ್ತಮ.
  • ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ಡೈರಿ-ಫ್ರೀ ಆಯ್ಕೆಗಳನ್ನು ಪರಿಗಣಿಸಬಹುದು.
  • ಮಕ್ಕಳಿಗೆ ಮಿತ ಪ್ರಮಾಣದಲ್ಲಿ ಮಾತ್ರ ನೀಡಿ.

ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ಐಸ್‌ಕ್ರೀಮ್ ತಿನ್ನುವುದರಿಂದಲೇ ಗಂಟಲು ನೋವು ಉಂಟಾಗುತ್ತದೆ ಎಂಬುದಕ್ಕೆ ಸ್ಪಷ್ಟ ವೈಜ್ಞಾನಿಕ ಸಾಕ್ಷ್ಯವಿಲ್ಲ. ಆದರೆ ಈಗಾಗಲೇ ಸೋಂಕು, ಅಲರ್ಜಿ ಅಥವಾ ಇತರೆ ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆಯಂತೆ ಆಹಾರವನ್ನು ಆಯ್ಕೆ ಮಾಡುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ – Kannada News | Harish Raj talks about why his movie named as Love Cocktail

ನಟ ಹರೀಶ್ ರಾಜ್ (Harish Raj) ಅವರು ಹಲವು ಸಿನಿಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ. ಇದೀಗ ಅವರು ‘ಲವ್ ಕಾಕ್ಟೆಲ್’ ಸಿನಿಮಾದ ಮೂಲಕ ಮತ್ತೆ ದೊಡ್ಡ ತೆರೆಗೆ ಬರುತ್ತಿದ್ದಾರೆ. ‘ಲವ್ ಮಾಕ್ಟೆಲ್’ ಈಗಾಗಲೇ ಕನ್ನಡದಲ್ಲಿ ಜನಪ್ರಿಯತೆ ಪಡೆದಿರುವ ಸಿನಿಮಾ ಸರಣಿ. ಇದೀಗ ಹರೀಶ್ ರಾಜ್ ಅವರು ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದಾರೆ. ಅಸಲಿಗೆ ಈ ಸಿನಿಮಾಕ್ಕೆ ‘ವೆಂಕಟೇಶಾಯ ನಮಃ’ ಎಂದು ಹೆಸರಿಡಲಾಗಿತ್ತು. ಬಳಿಕ ಅದನ್ನು ‘ಲವ್ ಕಾಕ್ಟೆಲ್’ ಎಂದು ಬದಲಾಯಿಸಲಾಗಿದೆ. ಇದಕ್ಕಾ ಕಾರಣವನ್ನು ಹರೀಶ್ ರಾಜ್ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಿಷಭ್ ಪಂತ್ ಆಯ್ಕೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಡಿವಿಲಿಯರ್ಸ್

Source link

ಬೆಂಗಳೂರಿನಲ್ಲಿ ಕಾವೇರಿ ನೀರು ದುರ್ಬಳಕೆ: 692 ಜನರಿಗೆ BWSSB ದಂಡ; 34.60 ಲಕ್ಷ ರೂ ವಸೂಲಿ – Kannada News | BWSSB Fines 692 Bengaluru Residents 34.6 Lakh for Cauvery Water Misuse

ಬಿಡಬ್ಲ್ಯೂಎಸ್‍ಎಸ್‍ಬಿImage Credit source: x.com/chairmanbwssb

ಬೆಂಗಳೂರು, ಜುಲೈ 29: ಕಾವೇರಿಯಿಂದ (Cauvery water) ಪ್ರತಿನಿತ್ಯ 3500 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ. ಇದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಬೆಂಗಳೂರಿನಲ್ಲಿ ಕುಡಿಯುವ ಕಾವೇರಿ ನೀರನ್ನು ಅನಗತ್ಯವಾಗಿ ದುರ್ಬಳಕೆ ಮಾಡುತ್ತಿದ್ದ ಗ್ರಾಹಕರಿಗೆ ಬೆಂಗಳೂರು ಜಲಮಂಡಳಿ (BWSSB) ಬಿಸಿ ಮುಟ್ಟಿಸಿದೆ.  692 ಜನರಿಗೆ ತಲಾ‌ 5 ಸಾವಿರ ರೂ. ಅಂತೆ ಒಟ್ಟು 34.60 ಲಕ್ಷ ರೂ. ದಂಡ ವಸೂಲಿ ಮಾಡಿದೆ.

34 ಲಕ್ಷದ 60 ಸಾವಿರ ರೂ ದಂಡ ವಸೂಲಿ

ಬೆಂಗಳೂರಿನಲ್ಲಿ ಕಾವೇರಿ ನೀರು ದುರ್ಬಳಕೆ ಮಾಡಿದ 692 ಜನರಿಗೆ ದಂಡ ವಿಧಿಸಲಾಗಿದೆ. ವಾಹನ ತೊಳೆಯಲು ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಕುಡಿಯುವ ನೀರನ್ನು ಬಳಸಿದ ಒಟ್ಟು 692 ಜನರಿಗೆ ಜಲಮಂಡಳಿ ಅಧಿಕಾರಿಗಳು ತಲಾ 5 ಸಾವಿರ ರೂ.ಗಳಂತೆ ಒಟ್ಟು 34 ಲಕ್ಷದ 60 ಸಾವಿರ ರೂ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳಲ್ಲಿ ಸದ್ಯ ಇರುವ ನೀರೆಷ್ಟು? ಇಲ್ಲಿದೆ ಮಾಹಿತಿ

ನಗರದ ವಿವಿಧ ವಲಯಗಳಲ್ಲಿ ಪರಿಶೀಲನೆ ನಡೆಸಿದ ಜಲಮಂಡಳಿ, ದಕ್ಷಿಣ ವಲಯದಲ್ಲಿ ಗರಿಷ್ಠ 206 ಜನರಿಗೆ ದಂಡ ವಿಧಿಸಿದೆ. ಉಳಿದಂತೆ ಪಶ್ವಿಮ ವಲಯದಲ್ಲಿ 165, ಕೇಂದ್ರ ವಲಯದಲ್ಲಿ 135, ಪೂರ್ವ ವಲಯದಲ್ಲಿ 100 ಹಾಗೂ ಉತ್ತರ ವಲಯದಲ್ಲಿ 86 ಜನರಿಂದ ನಿಯಮ ಉಲ್ಲಂಘನೆಗೆ ದಂಡ ವಸೂಲಿ ಮಾಡಲಾಗಿದೆ.

ಜುಲೈ 31 ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕಾವೇರಿ ನೀರು ಸರಬರಾಜು ಯೋಜನೆ–5ನೇ ಹಂತದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಜುಲೈ 31 ಅಂದರೆ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಬಂಧಿತ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.

ಈ ಅವಧಿಯಲ್ಲಿ ಅಗತ್ಯ ನಿರ್ವಹಣಾ ಕಾಮಗಾರಿಗಳನ್ನು ಸುರಕ್ಷಿತವಾಗಿ ಹಾಗೂ ಪರಿಣಾಮಕಾರಿಯಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಜಲರೇಚಕ ಯಂತ್ರಾಗಾರಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ, ಸಂಬಂಧಿತ ಪ್ರದೇಶಗಳ ಸಾರ್ವಜನಿಕರು ತಮ್ಮ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಂಡು, ಲಭ್ಯವಿರುವ ನೀರನ್ನು ಮಿತವಾಗಿ ಹಾಗೂ ಜವಾಬ್ದಾರಿಯಿಂದ ಬಳಸುವಂತೆ ವಿನಂತಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದ ಜಲ ಪ್ರದೇಶಗಳನ್ನು ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ

ಇನ್ನು ಈ ತಾತ್ಕಾಲಿಕ ವ್ಯತ್ಯಯದಿಂದ ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಗರಕ್ಕೆ ನಿರಂತರ ಹಾಗೂ ವಿಶ್ವಾಸಾರ್ಹ ನೀರು ಪೂರೈಕೆಯನ್ನು ಖಚಿತಪಡಿಸಲು ಸಹಕಾರ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಂದೇ ಮಾತರಂ ಗೀತೆಗೆ ಅವಮಾನ ಮಾಡುವುದು ಕ್ರಿಮಿನಲ್ ಅಪರಾಧ; ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ – Kannada News | Rajya Sabha passes Bill to make insult to Vande Mataram Song is a criminal offence

ನವದೆಹಲಿ, ಜುಲೈ 29: ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ಗೆ ಅವಮಾನ ಮಾಡುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮಹತ್ವದ ವಿಧೇಯಕವನ್ನು ರಾಜ್ಯಸಭೆ ಇಂದು ಅಂಗೀಕರಿಸಿದೆ. ರಾಷ್ಟ್ರಗೀತೆಯಾದ ಜನಗಣಮನ ಗೀತೆಗೆ ನೀಡುವ ಗೌರವವನ್ನೇ ವಂದೇ ಮಾತರಂ ಗೀತೆಗೂ ನೀಡಬೇಕೆಂದು ಉಲ್ಲೇಖಿಸಲಾಗಿದೆ. ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ – 2026’ (Prevention of Insults to National Honour (Amendment) Bill, 2026) ಅನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಇಂದು ಬೆಳಗ್ಗೆ ಎರಡು ಬಾರಿ ಕಲಾಪ ಮುಂದೂಡಲ್ಪಟ್ಟ ನಂತರ, ಮಧ್ಯಾಹ್ನದ ಭೋಜನದ ಬಳಿಕ ಸದನ ಸಮಾವೇಶಗೊಳ್ಳುತ್ತಿದ್ದಂತೆ ಉಪಸಭಾಪತಿ ಹರಿವಂಶ್ ಅವರು ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರಿಗೆ ಕಲಾಪದ ಘನತೆಯನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.

ಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿಯಾಗಿದ್ದ ಈ ವಿಧೇಯಕದ ಮೇಲಿನ ಚರ್ಚೆಯನ್ನು ಪೀಠವು ಕೈಗೆತ್ತಿಕೊಳ್ಳುತ್ತಿದ್ದಂತೆ, ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದವು ಮತ್ತು ಘೋಷಣೆಗಳನ್ನು ಕೂಗಿದವು. ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದವರ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯಿಸಬೇಕು ಎಂದು ಅವರು ಆಗ್ರಹಿಸಿದರು.

ವಿಪಕ್ಷಗಳ ಪ್ರತಿಭಟನೆಯ ನಡುವೆಯೂ ಉಪಸಭಾಪತಿ ಸದನದ ಕಲಾಪವನ್ನು ಮುಂದುವರಿಸಿದರು. ಚರ್ಚೆಯಲ್ಲಿ ಭಾಗವಹಿಸುವಂತೆ ರಾಜ್ಯಸಭಾ ಸದಸ್ಯರಲ್ಲಿ ವಿನಂತಿಸಿದರು. ಆದರೂ ವಿರೋಧ ಪಕ್ಷಗಳು ತಮ್ಮ ಬೇಡಿಕೆಯನ್ನು ಮುಂದುವರಿಸಿದವು. ನಂತರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಥಾವಳೆ ಅವರು ಪ್ರಸ್ತಾವಿತ ಮಸೂದೆಯ ಕುರಿತು ಮಾತನಾಡುತ್ತಿದ್ದಾಗ ವಿಪಕ್ಷಗಳ ಸಂಸದರು ಕಲಾಪದಿಂದ ಹೊರನಡೆದರು.

ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ, ಕಾಂಗ್ರೆಸ್ ಪಕ್ಷವು ತುಷ್ಟೀಕರಣ ರಾಜಕಾರಣಕ್ಕೆ ಮೊರೆಹೋಗುವ ಮೂಲಕ ದೇಶದ ಗೌರವವಾದ ‘ವಂದೇ ಮಾತರಂ’ ರಾಷ್ಟ್ರಗೀತೆಯನ್ನು ಅವಮಾನಿಸಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡುವಾಗ ಹಲವು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಕೊನೆಯ ನುಡಿಯಾಗಿ ‘ವಂದೇ ಮಾತರಂ’ ಎಂದು ಹೇಳಿದ್ದ ಹಲವು ನಿದರ್ಶನಗಳನ್ನು ಅವರು ಸ್ಮರಿಸಿದರು.

ವಿಧೇಯಕದ ಪ್ರಮುಖ ಅಂಶಗಳು:

ಪ್ರಸ್ತಾವಿತ ಶಾಸನವು ರಾಷ್ಟ್ರಧ್ವಜ, ಸಂವಿಧಾನ ಮತ್ತು ರಾಷ್ಟ್ರಗೀತೆ ಸೇರಿದಂತೆ ದೇಶದ ರಾಷ್ಟ್ರೀಯ ಸಂಕೇತಗಳಿಗೆ ಅಪಚಾರ ಅಥವಾ ಅಸಮಾಧಾನ ವ್ಯಕ್ತಪಡಿಸುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಲು ಹೊರಟಿದ್ದು, 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ನಿಬಂಧನೆಯನ್ನು ಹೊಂದಿದೆ. ಜುಲೈ 24ರಂದು ಸದನದಲ್ಲಿ ಮಂಡಿಸಲಾದ ಈ ವಿಧೇಯಕವು ರಾಷ್ಟ್ರಗೀತೆ ‘ಜನ ಗಣ ಮನ’ಗೆ ಇರುವಂತಹುದೇ ಶಾಸನಬದ್ಧ ರಕ್ಷಣೆಯನ್ನು ‘ವಂದೇ ಮಾತರಂ’ಗೂ ನೀಡಲು ಉದ್ದೇಶಿಸಿದೆ. ವಂದೇ ಮಾತರಂ ರಚನೆಯಾಗಿ 150 ವರ್ಷಗಳು ಪೂರೈಸುತ್ತಿರುವುದರ ನಡುವೆಯೇ ಸರ್ಕಾರ ಈ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂ ಎನ್​​ಟಿಆರ್ ಎದುರಾಗಿ ಸಿನಿಮಾ ಘೋಷಿಸಿದ ಧನುಶ್ – Kannada News | Dhanush announced movie on lord Murugan after Jr NTR

ನಟ ಜೂ ಎನ್​​ಟಿಆರ್ (Jr NTR) ಪ್ರಸ್ತುತ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಜೂ ಎನ್​​ಟಿಆರ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಲಿರುವ ಸಿನಿಮಾನಲ್ಲಿ ಜೂ ಎನ್​​ಟಿಆರ್ ನಟಿಸಲಿದ್ದು, ಸಿನಿಮಾವು ಮುರುಗನ್ ದೇವರ ಕುರಿತು ಆಧರಿಸಿದ್ದಾಗಿದೆ. ಸಿನಿಮಾಕ್ಕೆ ‘ಗಾಡ್ ಆಫ್ ವಾರ್’ ಎಂದು ಹೆಸರಿಡಲಾಗಿದೆ. ಆದರೆ ಈ ಸಿನಿಮಾದ ಟೀಸರ್ ಮತ್ತು ಪೋಸ್ಟರ್ ವಿವಾದ ಹುಟ್ಟುಹಾಕಿತ್ತು. ಸಿನಿಮಾಕ್ಕೆ ತಮಿಳುನಾಡಿನ ಜನ ಆಕ್ಷೇಪ ಎತ್ತಿದ್ದರು. ರಾಜಕಾರಣಿ ಸೀಮನ್ ಸಹ ಈ ಬಗ್ಗೆ ಕಟು ಟೀಕೆ, ನಿಂದೆಗಳನ್ನು ಮಾಡಿದ್ದರು. ಅದೆಲ್ಲ ಆದ ಬೆನ್ನಲ್ಲೆ ತಮಿಳು ನಟ ಧನುಶ್, ಜೂ ಎನ್​​ಟಿಆರ್ ಸಿನಿಮಾಕ್ಕೆ ಎದುರಾಗಿ ಮುರುಗನ್ ಕುರಿತಾಗಿಯೇ ಸಿನಿಮಾ ಘೋಷಿಸಿದ್ದಾರೆ.

ಜೂ ಎನ್​​ಟಿಆರ್ ಅವರ ಸಿನಿಮಾನಲ್ಲಿ ಮುರುಗನ್ ಅನ್ನು ಉತ್ತರ ಭಾರತದ ಮೂಲದ ದೇವರು ಎಂದು ಹೇಳಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪವನ್ನು ಮುರುಗನ್ ಅನ್ನು ಆರಾಧ್ಯ ದೈವವಾಗಿ ಪೂಜಿಸುವ ತಮಿಳರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಧನುಶ್ ಅವರು ‘ತಮಿಳ್ ಮುರುಗನ್’ ಹೆಸರಿನಲ್ಲಿ ಸಿನಿಮಾ ಘೋಷಿಸಿದ್ದಾರೆ. ಧನುಶ್ ಅವರ ಸಿನಿಮಾ ಸಹ ಮುರುಗನ್ ದೇವರ ಕುರಿತಾಗಿಯೇ ಆಗಿದೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಧನುಶ್, ಕೈಯಲ್ಲಿ ಮುರುಗನ್ ದೇವರ ಆಯುಧ ಹಿಡಿದು ಆನೆಯ ಕೂತಿರುವ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಮುರುಗನ್, ದಕ್ಷಿಣ ಭಾರತೀಯ, ಆತ ತಮಿಳುನಾಡಿನಲ್ಲೇ ಜನಿಸಿದ, ಇಲ್ಲಿಯೇ ನೆಲೆಸಿದ ದೇವರು ಎಂದು ತಮಿಳರು ವಾದಿಸಿದ್ದರು. ಆದರೆ ಜೂ ಎನ್​​ಟಿಆರ್ ಅವರ ಸಿನಿಮಾ ತಂಡದಿಂದ ಅಥವಾ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅದರ ಬೆನ್ನಲ್ಲೆ ಈಗ ಧನುಶ್ ಸಿನಿಮಾ ಘೋಷಿಸಿದ್ದಾರೆ. ಮಾತ್ರವಲ್ಲದೆ, ಮುರುಗನ್, ತಮಿಳ ಎಂದು ಒತ್ತಿ ಹೇಳುವ ಸಲುವಾಗಿ ‘ತಮಿಳ್ ಮುರುಗನ್’ ಎಂದೇ ಸಿನಿಮಾಕ್ಕೆ ಹೆಸರಿಡಲಾಗಿದೆ.

ಇದನ್ನೂ ಓದಿ:ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ

ಈ ಸಿನಿಮಾ ಮೂಲಕ ಐದನೇ ಭಾರಿ ವೆಟ್ರಿಮಾರನ್ ಮತ್ತು ಧನುಶ್ ಒಂದಾಗುತ್ತಿದ್ದಾರೆ. ಈ ಹಿಂದೆ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿರುವ ಜೊತೆಗೆ ರಾಷ್ಟ್ರಪ್ರಶಸ್ತಿಗಳನ್ನು ಸಹ ಬಾಚಿಕೊಂಡಿವೆ. ‘ಪೊಲ್ಲಾಧವನ್’, ‘ಆಡುಕುಲಂ’, ‘ವಡಾ ಚೆನ್ನೈ’ ಮತ್ತು ‘ಅಸುರನ್’ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿದೆ. ಇದೀಗ ‘ತಮಿಳ್ ಮುರುಗನ್’ ಸಿನಿಮಾಕ್ಕೆ ಮತ್ತೊಮ್ಮೆ ಇವರಿಬ್ಬರೂ ಒಂದಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಐಸಿಸಿ ಅಧ್ಯಕ್ಷ ಖರ್ಗೆಗೆ ಕೋರ್ಟ್​ನಿಂದ ಜಾಮೀನು ಸಹಿತ ವಾರಂಟ್: ಸೆ. 19ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ – Kannada News | Legal Trouble: Punjab Court Issues Bailable Warrant Against AICC Chief Mallikarjun Kharge in Bajrang Dal Defamation Case

ಸಂಗ್ರೂರ್, ಜುಲೈ 29: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪಂಜಾಬ್‌ನ ಸಂಗ್ರೂರ್ ನ್ಯಾಯಾಲಯ ಜಾಮೀನು ಸಹಿತ ವಾರಂಟ್ ಹೊರಡಿಸಿದೆ. 2026ರ ಸೆಪ್ಟೆಂಬರ್ 19ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಜಾಮೀನು ಪಡೆಯುವಂತೆ ಖರ್ಗೆಗೆ ಸೂಚನೆ ನೀಡಲಾಗಿದೆ. ಸಂಗ್ರೂರ್ ನಿವಾಸಿ ಹಾಗೂ ಬಜರಂಗ ದಳದ ಕಾರ್ಯಕರ್ತ ಹಿತೇಶ್ ಭಾರ್ದ್ವಾಜ್ 2023ರಲ್ಲಿ ದಾಖಲಿಸಿದ್ದ ಮಾನಹಾನಿ ದೂರಿನ ಆಧಾರದ ಮೇಲೆ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿ ಈ ದೂರು ಸಲ್ಲಿಸಲಾಗಿತ್ತು.

ಪ್ರಕರಣ ಏನು?

ದೂರುದಾರ ಹಿತೇಶ್ ಭಾರ್ದ್ವಾಜ್ ಅವರ ಆರೋಪದ ಪ್ರಕಾರ, ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸೇರಿದಂತೆ ಇತರ ಸಂಘಟನೆಗಳೊಂದಿಗೆ ಹೋಲಿಕೆ ಮಾಡಿತ್ತು. ಇದರಿಂದ ಬಜರಂಗ ದಳದ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದರು. ಅಕ್ರಮ ಸಂಘಟನೆಗಳೊಂದಿಗೆ ಬಜರಂಗ ದಳವನ್ನು ಸಂಪರ್ಕಿಸಿರುವುದರಿಂದ ಅದರ ಸದಸ್ಯರು ಮತ್ತು ಬೆಂಬಲಿಗರ ಮಾನಹಾನಿಯಾಗಿದೆ ಎಂದು ಭಾರ್ದ್ವಾಜ್ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ 100 ಕೋಟಿ ಮಾನಹಾನಿ ಪರಿಹಾರ ಹಾಗೂ 10 ಲಕ್ಷ ಕಾನೂನು ವೆಚ್ಚ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ: ವಿದ್ಯಾರ್ಥಿ ಚಳವಳಿಯಲ್ಲಿದ್ದ ಮೇಲೆ ಬಂಧನ ಎದುರಿಸಲು ಸಿದ್ಧರಿರಬೇಕು: ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮ ಸಮರ್ಥಿಸಿಕೊಂಡ ಜೆಪಿ ನಡ್ಡಾ

ಕಾಂಗ್ರೆಸ್ ಪ್ರಣಾಳಿಕೆ ವಿವಾದ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗ ದಳ, PFI ಹಾಗೂ ಇತರ ದ್ವೇಷ ಹರಡುವ ಸಂಘಟನೆಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿತ್ತು. ಈ ಹೇಳಿಕೆ ದೇಶಾದ್ಯಂತ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಹಿತೇಶ್ ಭಾರ್ದ್ವಾಜ್ ಖರ್ಗೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ್ದರು.

ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಈ ಹಿಂದೆ ನ್ಯಾಯಾಲಯವು ಪ್ರಕರಣವನ್ನು ನಾಗರಿಕ (ಸಿವಿಲ್) ಸ್ವರೂಪದ್ದೆಂದು ಪರಿಗಣಿಸಿತ್ತು. ಆದರೆ ಈಗ ಇದನ್ನು ಕ್ರಿಮಿನಲ್ ಪ್ರಕರಣವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದೆ. ಸೆಪ್ಟೆಂಬರ್ 19ರಂದು ಮಲ್ಲಿಕಾರ್ಜುನ ಖರ್ಗೆ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ, ಅವರ ವಿರುದ್ಧ ಜಾಮೀನುರಹಿತ ವಾರಂಟ್ (NBW) ಹೊರಡಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:54 pm, Wed, 29 July 26

Source link

Exit mobile version