ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ – Kannada News | Bengaluru Fake Beggar Exposed: UP Man Faked Disability, Stole Mobiles in Byatarayanapura
ಬೆಂಗಳೂರು, ಜುಲೈ 29: ನಗರದ ಬೈಯತರಾಯನಪುರ ಬಳಿಯ ಐಟಿಐ ಲೇಔಟ್‌ನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ಮುಕೇಶ್ ಎಂಬಾತ ನಗರದಲ್ಲಿ ಭಿಕ್ಷಾಟನೆ ಮಾಡುವ ನೆಪದಲ್ಲಿ ಅಂಗವಿಕಲನಂತೆ ನಟಿಸಿ ಜನರನ್ನು ವಂಚಿಸುತ್ತಿದ್ದ. ಕರುಣೆ ಬರುವಂತೆ ಕುಂಟುತ್ತಾ ನಡೆದು ಜನರ ಸಹಾನುಭೂತಿ ಗಳಿಸುತ್ತಿದ್ದ ಈತ, ಭಿಕ್ಷೆ ಬೇಡುವ ಸೋಗಿನಲ್ಲಿ ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದಾನೆ. ಸ್ಥಳೀಯರು ಈತನ ನಡವಳಿಕೆ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ, ಮುಕೇಶ್‌ನ ಕಳ್ಳಾಟ ಬಯಲಾಗಿದೆ. ಕೈಕಾಲು ನೆಟ್ಟಗಿದ್ದರೂ ಕೂಡ ಶೋಕಿ ಜೀವನಕ್ಕಾಗಿ…