ಕಾಂಗ್ರೆಸ್ ಮಾತ್ರವಲ್ಲ ದಾವಣಗೆರೆ ಬಿಜೆಪಿಯಲ್ಲೂ ಮತ್ತೆ ಭಿನ್ನಮತ ಸ್ಫೋಟ, ಸಿಡಿದೆದ್ದ ರೇಣುಕಾಚಾರ್ಯ

ಕಾಂಗ್ರೆಸ್ ಮಾತ್ರವಲ್ಲ ದಾವಣಗೆರೆ ಬಿಜೆಪಿಯಲ್ಲೂ ಮತ್ತೆ ಭಿನ್ನಮತ ಸ್ಫೋಟ, ಸಿಡಿದೆದ್ದ ರೇಣುಕಾಚಾರ್ಯ

ದಾವಣಗೆರೆ, (ಏಪ್ರಿಲ್ 12): ದಾವಣಗೆರೆ (Davanagere) ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ (BJP) ಸಹ ಭಾರೀ ಗೊಂದಲಗಳು ಏರ್ಪಟ್ಟಿದ್ದವು. ಒಂದೆಡೆ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಇನ್ನೊಂದೆಡೆ ಎಂಪಿ ರೇಣುಕಾಚಾರ್ಯ ಬಣದ ನಡುವೆ ಟಿಕೆಟ್ ಫೈಟ್ ಜೋರಾಗಿತ್ತು. ಅಂತಿಮವಾಗಿ ಹೈಕಮಾಂಡ್ ಎರಡು ಬಣಗಳ ಕಿತ್ತಾಟ ನಡುವೆ ಮೂರನೇ ವ್ಯಕ್ತಿಗೆ ಮಣೆ ಹಾಕಿತ್ತು. ಇದೀಗ ಬೈ ಎಲೆಕ್ಷನ್ ಎಲ್ಲಾ ಮುಗಿದು ಫಲಿತಾಂಶಕ್ಕಾಗಿ ಕಾಯುವಂತಾಗಿದೆ. ಇದರ ನಡುವೆ ಇದೀಗ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. ಅದರಲ್ಲೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಎಂಪಿ ರೇಣುಕಾಚಾರ್ಯ ಕ್ಷೇತ್ರಕ್ಕೆ ಬೇರೊಬ್ಬ ನಾಯಕ ಟವೆಲ್ ಹಾಕಿದ್ದು, ಇದು ರೇಣುಕಾಚಾರ್ಯ ಅವರನ್ನ ಕೆರಳಿಸುವಂತೆ ಮಾಡಿದೆ. ಇದರೊಂದಿಗೆ ದಾವಣಗೆರೆ ಬಿಜೆಪಿಯ ಒಳಜಗಳ ಮತ್ತೆ ಮುನ್ನಲೆಗೆ ಬಂದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲವೆಂದು ದಾವಣಗೆರೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗಮನಸೆಳೆದಿದ್ದ ಸ್ವಾಭಿಮಾನಿ ಬಳಗ ಹಾಗೂ ಇನ್ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಅಧ್ಯಕ್ಷ ಜಿಬಿ. ವಿನಯಕುಮಾರ್, ಮುಂಬರುವ ವಿಧಾನಸಭೆ ಚುನಾವಣೆಯ ಬಿಜೆಪಿ ಟಿಕೆಟ್​​ ಮೇಲೆ ಕಣ್ಣಿಟ್ಟಿದ್ದಾರೆ. ಹೌದು…ದಾವಣಗೆರೆ ಉತ್ತರ ಹಾಗೂ ಎಂಪಿ ರೇಣುಕಾಚಾರ್ಯ ಪ್ರತಿನಿಧಿಸುವ ಹೊನ್ನಾಳಿ ಕ್ಷೇತ್ರದ ಟಿಕೆಟ್​​ಗೆ ಈಗಾಲೇ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ಕಿಚ್ಚು ಹೊತ್ತಿಸಿದ ದಾವಣಗೆರೆ ದಂಗಲ್, ಪಕ್ಷದ ವಿರುದ್ಧ ಜಮೀರ್ ಷಡ್ಯಂತ್ರ ರೂಪಿಸಿದ್ರಾ?

ರೇಣುಕಾಚಾರ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟ ವಿನಯ್ ಕುಮಾರ್

ಈ ಸಂಬಂಧ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ವಿನಯ್ ಕುಮಾರ್, ಈ ಹಿಂದೆ ಮ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನನಗೆ ಟಿಕೆಟ್ ಸಿಗುವ ಸಾದ್ಯತೆ ಇತ್ತು. ಆದ್ರೆ ಕೈ ತಪ್ಪಿದೆ.‌ ಈಗ ನಾನು ದಾವಣಗೆರೆ ಉತ್ತರ ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಚ್ಚೆ ಇದೆ.‌ ಬಿಜೆಪಿ ಟಿಕೆಟ್ ಸಿಗಲಿ ಬಿಡಲಿ ನಾನು ಮಾತ್ರ ಹೋರಾಟ ಮಾಡುವೆ ಎಂದಿದ್ದಾರೆ. ಇದು ಬಿಎಸ್​​ವೈ ಮಾನಸ ಪುತ್ರ ಎಂಪಿ ರೇಣುಕಾಚಾರ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಹೊನ್ನಾಳಿ ಕ್ಷೇತ್ರದಲ್ಲಿ ಬರೋಬ್ಬರಿ ಐದು ಬಾರಿ ಸ್ಪರ್ಧೆ ಮಾಡಿರುವ ರೇಣುಕಾಚಾರ್ಯ ಮೂರು ಬಾರಿ ಗೆಲುವು ಸಾಧಿಸಿ ಎರಡು ಸಲ ಸೋತಿತ್ತಿದ್ದಾರೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ಸಹ ರೇಣುಕಾಚಾರ್ಯ ಹೊನ್ನಾಳಿಯಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹ ಈಗಾಗಲೇ ಹೊನ್ನಾಳಿಗೆ ರೇಣುಕಚಾರ್ಯ ಎಂದು ಬಹಿರಂಗ ವೇದಿಕೆಯಲ್ಲೇ ಘೋಷಣೆ ಮಾಡಿದ್ದಾರೆ. ಆದ್ರೆ, ಇದೀಗ ವಿನಯ್ ಕುಮಾರ್ ಹೊನ್ನಾಳಿ ಕ್ಷೇತದ್ರ ಮೇಲೆ ಕಣ್ಣಿಟ್ಟಿರುವುದು ರೇಣುಕಾಚಾರ್ಯ ಕಣ್ಣು ಕೆಂಪಾಗಿಸಿದೆ.

ಹೊನ್ನಾಳಿಗೆ ನಾನೇ ಬಿಜೆಪಿ ಅಭ್ಯರ್ಥಿ ಎಂದ ರೇಣುಕಾಚಾರ್ಯ

ಹೊನ್ನಾಳಿ ಕ್ಷೇತ್ರದ ಬಿಜೆಪಿ ಟಿಕೆಟ್​ಗೆ ಯಾರೇ ಬಂದರೂ ಬಾಗಿಲು ಬಂದ್. ಹೊನ್ನಾಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೆ. ನನ್ನ ವಿರುದ್ಧ ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ನಾನು ಮನಸ್ಸು ಮಾಡಿದ್ರೆ ಅವರ ಕ್ಷೇತ್ರಗಳಲ್ಲೂ ಹೀಗೆಯೇ ಮಾಡಬಹುದು. ಹೊನ್ನಾಳಿ ಕ್ಷೇತ್ರದಲ್ಲಿ ನಾನು 5 ಬಾರಿ ಸ್ಪರ್ಧೆ ಮಾಡಿ, 3 ಬಾರಿ ಗೆದ್ದಿದ್ದೇನೆ. ಕ್ಷೇತ್ರದಲ್ಲಿ ಹುಟ್ಟಿದ ಮಗುವಿಂದ ಸಾಯೋ ಮುದುಕರವರೆಗೂ ನಾನು ಗೊತ್ತು. ಯಾರು ಏನೇ ಹೇಳಲಿ, ಯಾರೇ ಬರಲಿ ಹೊನ್ನಾಳಿಗೆ ನಾನೇ ಬಿಜೆಪಿ ಅಭ್ಯರ್ಥಿ, ಹೈಕಮಾಂಡ್ ಕೂಡ ನನ್ನ ಪರವಾಗಿಯೇ ಇದೆ, ನನ್ನನ್ನು ಬದಲಿಸಲು ಅಸಾಧ್ಯ. ಜಿ.ಬಿ.ವಿನಯಕುಮಾರ್ ಹೇಳಿಕೆ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುವೆ. ಆದ್ರೆ ಹೊನ್ನಾಳಿ ಬಿಜೆಪಿ ಬಾಗಿಲು ನನ್ನನ್ನ ಹೊರತುಪಡಿಸಿ ಬೇರೆಯವರಿಗೆ ಬಂದ್  ಎಂದು ಎಂದಿದ್ದಾರೆ.

ಉಪ ಚುನಾವಣೆಗೆ ಸ್ಪರ್ಧಿಸಿದ್ದ ಶ್ರೀನಿವಾಸ್ ಒಂದು ಗುಂಪಿನ ಅಭ್ಯರ್ಥಿಯಲ್ಲ. ಶ್ರೀನಿವಾಸ್ ಬಿಜೆಪಿ ರಾಷ್ಟ್ರೀಯ ನಾಯಕರು ಆಯ್ಕೆ ಮಾಡಿದ್ದ ಅಭ್ಯರ್ಥಿ. ಇದೇ ಕಾರಣಕ್ಕೆ ನಾವೆಲ್ಲರೂ ಸೇರಿ ಉಪಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ದಾವಣಗೆರೆ ಬಿಜೆಪಿ ಘಟಕದಲ್ಲಿ ಒಳಜಗಳ ಮುಗಿದ ಕಥೆ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಾಕೃತಿಕ ಸಂಪತ್ತಿನಿಂದ ಖ್ಯಾತಿ ಪಡೆದ ಉಡುಪಿಗೆ ಇದೆಂಥಾ ಸ್ಥಿತಿ? ಜಿಲ್ಲೆಯ ಜನರಲ್ಲಿ ಶುರುವಾದ ಆತಂಕವೇನು?

ಉಡುಪಿ, ಏಪ್ರಿಲ್​ 12: ಪ್ರಾಕೃತಿಕ ಸಂಪತ್ತಿನಿಂದ ಖ್ಯಾತಿ ಪಡೆದ ಕರಾವಳಿ ನಗರ ಉಡುಪಿಯಲ್ಲಿ ಹೊಸ ಆತಂಕ ಎದುರಾಗಿದೆ. ಉಡುಪಿಯ (udupi) ವಾಯು ಗುಣಮಟ್ಟ (air quality) ಹದಗೆಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿ ಉತ್ತಮ ಮಳೆ ಮತ್ತು ಹವಾಮಾನ ಇದ್ದರೂ ಗಾಳಿಯ ಗುಣಮಟ್ಟದಲ್ಲಿ ನಿರಂತರ ಏರುಪೇರು ಕಂಡುಬರುತ್ತಿದೆ.

ಗಾಳಿಯಲ್ಲಿ ಅತಿಸೂಕ್ಷ್ಮ ಕಣಗಳು ಪತ್ತೆ

ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 2.5 ಮೈಕ್ರೋನ್​ಗಿಂತ ಕಡಿಮೆ ವ್ಯಾಸದ ಅತಿಸೂಕ್ಷ್ಮ ಕಣಗಳು (PM2.5) ಗಾಳಿಯಲ್ಲಿ ಪತ್ತೆಯಾಗಿವೆ. ಜೊತೆಗೆ ಕಾರ್ಬನ್ ಮಾನಾಕ್ಸೈಡ್ ಹಾಗೂ ಸಲ್ಫರ್ ಅಂಶಗಳ ಪ್ರಮಾಣವೂ ಹೆಚ್ಚಿರುವುದನ್ನು ತಜ್ಞರು ಗಮನಿಸಿದ್ದಾರೆ. ಪರಿಸರ ತಜ್ಞರ ಪ್ರಕಾರ, ಜಿಲ್ಲೆಯ ಗಡಿಯಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೊರಬರುವ ಹೊಗೆ ಪ್ರಮುಖ ಕಾರಣವಾಗಿರಬಹುದು. ಯೋಜನೆ ಆರಂಭದಲ್ಲೇ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಪ್ರೇಮಾನಂದ ಕಲ್ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಹೆಚ್ಚಾಯ್ತು ತಾಪಮಾನ; ಉಡುಪಿ, ಉತ್ತರ ಕನ್ನಡದಲ್ಲಿಂದು ಹೀಟ್ ವೇವ್ ಅಲರ್ಟ್​!

ಇನ್ನು ವಿಶೇಷವಾಗಿ ಶ್ವಾಸಕೋಶ ಸಂಬಂಧಿ ಸಮಸ್ಯೆ ಹೊಂದಿರುವವರು, ಹಿರಿಯ ನಾಗರಿಕರು ಮತ್ತು ಅಶಕ್ತರು ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಾಸ್ಕ್ ಧರಿಸುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎನ್ನುವ ವಿಚಾರ ತಜ್ಞರು ತಿಳಿಸಿದ್ದಾರೆ. ಇನ್ನೊಂದೆಡೆ, ಪರಿಸರ ಸಂರಕ್ಷಣೆಗಾಗಿ ಖಾಲಿ ಜಾಗಗಳಲ್ಲಿ ಹಸಿರು ವಲಯವನ್ನು ವಿಸ್ತರಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಬಿದಿರು ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೆಡುವಂತೆ ಬೆಂಗಳೂರಿನ ಪರಿಸರ ಸಂಘಟನೆಗಳು ಒತ್ತಾಯಿಸಿವೆ. ಬಿದಿರು ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುವುದರಿಂದ ವಾಯು ಗುಣಮಟ್ಟ ಸುಧಾರಣೆಗೆ ಸಹಕಾರಿ ಎನ್ನಲಾಗಿದೆ.

ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ತೀರ್ಥಹಳ್ಳಿ, ಕುಂದಾಪುರ ರಾಜ್ಯ ಹೆದ್ದಾರಿ ಬಂದ್​​; ಬದಲಿ ಮಾರ್ಗಗಳ ಮಾಹಿತಿ ಇಲ್ಲಿದೆ

ಒಟ್ಟಾರೆಯಾಗಿ, ಪ್ರಕೃತಿಯ ಮಧ್ಯೆಯೇ ಇರುವ ಊರಿನಲ್ಲಿ ವಾಯು ಮಾಲಿನ್ಯದ ನೆರಳು ಆವರಿಸಿದ್ದು, ಉಡುಪಿ ನಗರದಲ್ಲಿ ತಕ್ಷಣದ ಕ್ರಮದ ಅಗತ್ಯತೆ ಎದುರಾಗಿದೆ. ಇನ್ನಾದರೂ ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನರು ಗಮನ ಹರಿಸುತ್ತಾರಾ ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

MI vs RCB IPL 2026 Live Score: ಮುಂಬೈ- ಆರ್​ಸಿಬಿ ನಡುವೆ ಪಂದ್ಯ – Kannada News | Mumbai Indians vs Royal Challengers Bengaluru IPL 2026 Live Cricket Score MI vs RCB Match on 12th April latest news in Kannada

ಐಪಿಎಲ್ 2026 ರಲ್ಲಿ ಇಂದು ಒಂದು ಸೂಪರ್ ಹಿಟ್ ಪಂದ್ಯ ನಡೆಯಲಿದ್ದು, ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ರಸ್ತುತ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಇದಾಗಿದ್ದು, ಎರಡೂ ತಂಡಗಳು ಗೆಲುವಿನ ಹಾದಿಗೆ ಮರಳಲು ಇದು ಒಂದು ಅವಕಾಶವಾಗಿದೆ. ಆತಿಥೇಯ ಮುಂಬೈ ಇದುವರೆಗೆ ಮೂರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ. ಏತನ್ಮಧ್ಯೆ, ಸ್ಫೋಟಕ ಆರಂಭ ಹೊಂದಿದ್ದ ಬೆಂಗಳೂರು, ಸತತ ಎರಡು ಗೆಲುವಿನ ನಂತರ ಸೋಲು ಅನುಭವಿಸಿದೆ.

Source link

ಪಾಕಿಸ್ತಾನದ ಮಧ್ಯಸ್ತಿಕೆ ಇಲ್ಲದೇ ಇದ್ದಿದ್ದರೆ ಇಸ್ರೇಲ್​ಗೆ ತಕ್ಕ ಶಾಸ್ತಿಯಾಗುತ್ತಿತ್ತು: ಟರ್ಕಿ ಅಧ್ಯಕ್ಷ ಎರ್ಡೋಗನ್ ಗುಡುಗು

ನವದೆಹಲಿ, ಏಪ್ರಿಲ್ 12: ಟರ್ಕಿ ಅಧ್ಯಕ್ಷ ರೆಸೆಪ್ ತಯಿಪ್ ಎರ್ಡೋಗನ್ (Turkey president Erdogen) ಅವರು ಇಸ್ರೇಲ್ ಮೇಲೆ ದಾಳಿ ಎಸಗಿ ಹೊಸಕಿ ಹಾಕುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಪಾಕಿಸ್ತಾನವೇನಾದರೂ ಮಧ್ಯಸ್ತಿಕೆ ವಹಿಸಿಕೊಂಡಿಲ್ಲದೇ ಇದ್ದಿದ್ದರೆ ಇಸ್ರೇಲ್​ಗೆ ತಕ್ಕ ಶಾಸ್ತಿ ಆಗಿರುತ್ತಿತ್ತು ಎಂದು ಎರ್ಡೋಗನ್ ಗುಡುಗಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಧಾನ ಮಾತುಕತೆ ಮುರಿದುಬೀಳುವ ಮುನ್ನ ಟರ್ಕಿ ಅಧ್ಯಕ್ಷರು ನೀಡಿದ ಹೇಳಿಕೆ ಇದು.

‘ನಾವು ಲಿಬಿಯಾ ಮತ್ತು ಕರಬಾಖ್ ಅನ್ನು ಪ್ರವೇಶಿಸಿದಂತೆ ಇಸ್ರೇಲ್ ಅನ್ನೂ ಪ್ರವೇಶಿಸಬಲ್ಲೆವು’ ಎಂದೂ ಎರ್ಡೋಗನ್ ಬೆದರಿಕೆ ಹಾಕಿದ್ದಾರೆ. ಹಾಗೆಯೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರನ್ನು ಈಗಿನ ಕಾಲದ ಹಿಟ್ಲರ್ ಎಂದು ಟರ್ಕಿ ವಿದೇಶಾಂಗ ಸಚಿವಾಲಯ ಆರೋಪಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಸಂಧಾನ ಮಾತುಕತೆಗಳು ಮುರಿದುಬೀಳುವಂತೆ ಮಾಡುವುದು ಈತನ ಗುರಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್-ಅಮೆರಿಕ ಸಂಧಾನಕ್ಕೆ ‘ಪರಮಾಣು’ ತಡೆ: ಇಸ್ಲಾಮಾಬಾದ್ ಮ್ಯಾರಥಾನ್ ಮಾತುಕತೆ ಹಳಿ ತಪ್ಪಿದ್ದೇಕೆ?

‘ನಮ್ಮ ಕಾಲದ ಹಿಟ್ಲರ್ ಎನಿಸಿರುವ ನೆತಾನ್ಯಹು ಯಾರು, ಏನು ಎಂಬುದು ಜಗತ್ತಿಗೇ ಗೊತ್ತಿದೆ. ಯುದ್ಧ ಅಪರಾಧಗಳಿಗಾಗಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು ಆತನಿಗೆ ಅರೆಸ್ಟ್ ವಾರಂಟ್ ನೀಡಿದೆ. ನೆತಾನ್ಯಹು ನಾಯಕತ್ವದಲ್ಲಿ ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧದ ಆರೋಪದ ವಿಚಾರಣೆ ನಡೆಯುತ್ತಿದೆ’ ಎಂದು ಟರ್ಕಿ ವಿದೇಶಾಂಗ ಸಚಿವಾಲಯವು ತಿಳಿಸಿದೆ.

2025ರ ಅಕ್ಟೋಬರ್​ನಲ್ಲಿ ಇಸ್ರೇಲ್ ವಿರುದ್ಧ ನಡೆದ ಸುಮುದ್ ಗಾಜಾ ಫ್ಲೋಟಿಲಾ ನೌಕಾ ಕಾರ್ಯಾಚರಣೆಯನ್ನು ಇಸ್ರೇಲೀ ಪಡೆಗಳು ತಡೆದಿದ್ದವು. ಆ ಸಂಬಂಧ ಟರ್ಕಿ ದೇಶವು ಬೆಂಜಮಿನ್ ನೆತಾನ್ಯಹು ಹಾಗೂ 35 ಇತರ ಇಸ್ರೇಲೀ ಅಧಿಕಾರಿಗಳ ವಿರುದ್ಧ 4,596 ವರ್ಷಗಳ ಕಾರಾಗೃಹ ಶಿಕ್ಷೆಗೆ ಆಗ್ರಹಿಸುತ್ತಿದೆ.

ಇದನ್ನೂ ಓದಿ: ಇರಾನ್ ಬಯಸಿದರೂ ಹಾರ್ಮುಜ್ ಜಲಸಂಧಿ ತೆರೆಯಲು ಸಾಧ್ಯವಿಲ್ಲ; ಇಲ್ಲಿದೆ ಕಾರಣ

ಟರ್ಕಿ ವಿರುದ್ಧ ಇಸ್ರೇಲ್ ತಿರುಗೇಟು

ಇದೇ ವೇಳೆ ಟರ್ಕಿ ವಿರುದ್ಧ ಇಸ್ರೇಲ್ ಕೂಡ ಆರೋಪಗಳನ್ನು ಮಾಡುತ್ತಿದೆ. ಇರಾನ್​ನ ಭಯೋತ್ಪಾದಕ ಆಡಳಿತ ಹಾಗೂ ಅದರ ಪ್ರಾಕ್ಸಿಗಳ ವಿರುದ್ಧ ಇಸ್ರೇಲ್ ಹೋರಾಟ ಮುಂದುವರಿಯುತ್ತದೆ. ಟರ್ಕಿಯಲ್ಲಿರುವ ಕುರ್ಡಿಶ್ ನಾಗರಿಕರನ್ನು ಎರ್ಡೋಗನ್ ಹತ್ಯೆ ಮಾಡಿಸುತ್ತಿದ್ದಾರೆ. ಟರ್ಕಿ ದೇಶವು ಯಹೂದಿ ವಿರೋಧಿ ಧೋರಣೆ ಹೊಂದಿದೆ. ಇಸ್ರೇಲಿಗರ ಮೇಲೆ ಸುಳ್ಳು ವಿಚಾರಣೆಗಳನ್ನು ನಡೆಸುತ್ತದೆ ಎಂದು ಇಸ್ರೇಲ್ ಪಿಎಂ ಬೆಂಜಮಿನ್ ನೆತಾನ್ಯಹು ಕೆಂಡಕಾರಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಮನೆಯಲ್ಲಿ ನವಿಲು ಗರಿ ಇಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ; ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ!

ನವಿಲು ಗರಿ ಎಂದರೆ ಸೌಂದರ್ಯದ ಸಂಕೇತ ಮಾತ್ರವಲ್ಲ, ಅದು ಧನಾತ್ಮಕ ಶಕ್ತಿಯ ಸೆಲೆ ಕೂಡ ಹೌದು. ಅನೇಕ ಜನರು ವಾಸ್ತು ದೋಷ ನಿವಾರಣೆಗಾಗಿ ಮತ್ತು ಅದೃಷ್ಟಕ್ಕಾಗಿ ಮನೆಯಲ್ಲಿ ನವಿಲು ಗರಿಗಳನ್ನು ಇಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿಗಳನ್ನು ಎಲ್ಲಿ ಇಡಬೇಕು ಮತ್ತು ಎಲ್ಲಿ ಇಡಬಾರದು ಎಂಬ ಬಗ್ಗೆ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಶುಭ ಫಲಗಳ ಬದಲು ಅಶುಭ ಫಲಗಳನ್ನು ಅನುಭವಿಸಬೇಕಾಗಬಹುದು.

ಈ ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ಇಡಬೇಡಿ:

ನವಿಲು ಗರಿಗಳನ್ನು ಮನೆಯ ಪ್ರತಿಯೊಂದು ಮೂಲೆಯಲ್ಲಿ ಇಡುವುದು ಒಳ್ಳೆಯದಲ್ಲ. ವಿಶೇಷವಾಗಿ ಅಡುಗೆಮನೆ, ಸ್ನಾನಗೃಹ ಅಥವಾ ಶೌಚಾಲಯ. ಈ ಸ್ಥಳಗಳಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಶಕ್ತಿ ಬರಿದಾಗುತ್ತದೆ. ಇದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಕುಟುಂಬ ಸದಸ್ಯರಲ್ಲಿ ಮಾನಸಿಕ ಶಾಂತಿಯ ಕೊರತೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಮುರಿದ ಗರಿಗಳು ನಕಾರಾತ್ಮಕತೆಯ ಸಂಕೇತ:

ಮನೆಯಲ್ಲಿ ಎಂದಿಗೂ ಮುರಿದ ಅಥವಾ ಹಾನಿಗೊಳಗಾದ ನವಿಲು ಗರಿಗಳನ್ನು ಇಟ್ಟುಕೊಳ್ಳಬೇಡಿ. ಇಂತಹ ಗರಿಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಉತ್ಪಾದಿಸುತ್ತವೆ. ಇದು ಮನೆಯಲ್ಲಿ ಅಶಾಂತಿ ಮತ್ತು ಕಲಹಗಳಿಗೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಶೀಘ್ರದಲ್ಲೇ ರೂಪುಗೊಳ್ಳಲಿರುವ ಪ್ರಭಾವಶಾಲಿ ರಾಜಯೋಗ; ಈ 4 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

ಸಂಖ್ಯೆಯ ಬಗ್ಗೆ ಇರಲಿ ಗಮನ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನವಿಲು ಗರಿಗಳನ್ನು ರಾಶಿ ಹಾಕಬಾರದು. ನೀವು ನವಿಲು ಗರಿಗಳನ್ನು ಇಡಲು ಬಯಸಿದರೆ ಅವು 1,3 ಅಥವಾ 5 ರಂತಹ ಬೆಸ ಸಂಖ್ಯೆಯಲ್ಲಿರಲಿ. ಇದು ಶುಭ ಫಲಗಳನ್ನು ನೀಡುತ್ತದೆ.

ಧೂಳು ಮತ್ತು ಸ್ವಚ್ಛತೆ:

ನವಿಲು ಗರಿಗಳನ್ನು ಅಲಂಕಾರಕ್ಕಾಗಿ ಇಟ್ಟು ಅವುಗಳ ಮೇಲೆ ಧೂಳು ಕುಳಿತುಕೊಳ್ಳಲು ಬಿಡಬೇಡಿ. ಧೂಳಿನಿಂದ ಕೂಡಿದ ನವಿಲು ಗರಿಗಳು ಮನೆಯಲ್ಲಿ ಮಾನಸಿಕ ಅಶಾಂತಿಯನ್ನು ತರುತ್ತವೆ. ಆದ್ದರಿಂದ ಅವುಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಪುರ: 21 ವರ್ಷಗಳ ಕಳ್ಳ-ಪೊಲೀಸ್​​ ಆಟಕ್ಕೆ ಬ್ರೇಕ್: ಪೆರೋಲ್ ಮೇಲೆ ಎಸ್ಕೇಪ್ ಆಗಿದ್ದ ಕೈದಿ ಅಂದರ್

ವಿಜಯಪುರ, ಏಪ್ರಿಲ್​ 12: ಜೀವಾವಧಿ ಶಿಕ್ಷೆಗೆ ಗುರಿಯಾಗಿ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೈದಿಯನ್ನು (Prisoner) ವಿಜಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಯುಕ್ತ ಕಾರ್ಯಾಚರಣೆ ನಡೆಸಿ ಆಜಾನ್ ಮಜಾವರ್ ಎಂಬ ಕೈದಿಯನ್ನು ಬಂಧಿಸಿದ್ದಾರೆ.

ಪೆರೋಲ್​​ ರಜೆ ಮೇಲೆ ಸ್ವಗ್ರಾಮಕ್ಕೆ ತೆರಳಿದ್ದ ಆರೋಪಿ

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆಜಾನ್ ಮಜಾವರ್​ 2005ರಲ್ಲಿ ಮಾರ್ಚ್​ 25ರಂದು 10 ದಿನ ಪೆರೋಲ್​​ ರಜೆಯ ಮೇಲೆ ವಿಜಯಪುರ ಕೇಂದ್ರ ಕಾರಾಗೃಹದಿಂದ ಮಹಾರಾಷ್ಟ್ರದ ತನ್ನ ಸ್ವಗ್ರಾಮ ವಾಗೋಳಿಗೆ ತೆರಳಿದ್ದ. ಆದರೆ ಪೆರೋಲ್ ಅವಧಿ ಮುಗಿದ ಬಳಿಕ ಕಾರಾಗೃಹಕ್ಕೆ ವಾಪಸ್​​ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್​ನಲ್ಲಿ ಪಾಸಾದ ಬಳ್ಳಾರಿ ಸೆಂಟ್ರಲ್ ಜೈಲಿನ ಶಿಕ್ಷಾ ಬಂಧಿ

ಆರೋಪಿಯನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ನಿರ್ದೇಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. 2026ರ ಏಪ್ರಿಲ್​ 11ರಂದು ಕೊನೆಗೂ ಮಹಾರಾಷ್ಟ್ರ ರಾಜ್ಯದ ಇಚಲಕರಂಜಿ ಪಟ್ಟಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಎಸ್​ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.

ಹಳೆ ವೈಷಮ್ಯಕ್ಕೆ ರಕ್ತಪಾತ: ಹತ್ತು ಹಂತಕರಿಗೆ ಜೀವಾವಧಿ ಶಿಕ್ಷೆ

ಗ್ರಾಮ ಪಂಚಾಯತ್ ಚುನಾವಣೆಯ ಕಿಡಿ, ಗ್ರಾಮವೊಂದರಲ್ಲಿ ರಕ್ತದ ಹೋಕುಳಿಯನ್ನೇ ಹರಿಸಿತ್ತು. ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ 10 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಸೇರಿದಂತೆ ತಲಾ 19,500 ರೂ ದಂಡ ವಿಧಿಸಿ ರಾಯಚೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ವಿಧಿಸಿದೆ. ರಾಯಚೂರು ಜಿಲ್ಲೆಯೆ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ.

ಆ ರಾತ್ರಿ ನಡೆದಿದ್ದೇನು?

2021ರ ಫೆಬ್ರುವರಿ 15ರಂದು ರಾತ್ರಿ 10:30ರ ಸಮಯಕ್ಕೆ ಇಡೀ ಗ್ರಾಮ ಮಲಗುವ ಸಜ್ಜಾಗಿತ್ತು. ಹನಮಂತಮ್ಮ ಅವರ ಮನೆಯ ಮುಂದೆ ಅಟ್ಟಹಾಸ ಮೆರೆದಿದ್ದ ಅಕ್ರಮ ಕೂಟವೊಂದು ದಾಳಿ ನಡೆಸಿತ್ತು. ಚುನಾವಣೆಯ ಹಳೆಯ ಹಗೆ ಹಿನ್ನೆಲೆ ಆರೋಪಿಗಳು ಹನಮಂತಮ್ಮ ಹಾಗೂ ಅವರ ಪುತ್ರರಾದ ಶರಣಬಸವ ಮತ್ತು ಅಮರೇಶ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ ರಕ್ತಪಾತ ಮಾಡಿದ್ದರು. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಏಪ್ರಿಲ್​ 10ರಂದು ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ಪ್ರಕಟಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಹೋದರರ ನಡುವಿನ ಶೀತಲ ಸಮರಕ್ಕೆ ಅಂತ್ಯ ಹಾಡುತ್ತಾ ಆರ್​ಸಿಬಿ- ಮುಂಬೈ ಪಂದ್ಯ?

ಏಪ್ರಿಲ್ 12 ರ ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026 (IPL 2026) ರ 20 ನೇ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಎರಡು ಚಾಂಪಿಯನ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ಬಾರಿ ಐಪಿಎಲ್ ಟ್ರೋಫಿ ವಿಜೇತ ಮುಂಬೈ ಇಂಡಿಯನ್ಸ್ (RCB vsMI) ವಿರುದ್ಧ ಸೆಣಸಲಿದೆ. ಪಂದ್ಯವು ಸಂಜೆ 7:30 ಕ್ಕೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಇಬ್ಬರು ಸಹೋದರರು ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಅದರಲ್ಲೂ ಈ ಇಬ್ಬರು ಸಹೋದರರ ನಡುವೆ ಕಳೆದ ಕೆಲವು ತಿಂಗಳುಗಳಿಂದ ಶೀತಲ ಸಮರ ನಡೆಯುತ್ತಿರುವುದು ಈ ಪಂದ್ಯದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹಾರ್ದಿಕ್ vs ಕೃನಾಲ್

ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃನಾಲ್ ಮುಂಬೈ vs ಬೆಂಗಳೂರು ಪಂದ್ಯದಲ್ಲಿ ಪರಸ್ಪರ ವಿರುದ್ಧವಾಗಿ ಆಡಲಿದ್ದಾರೆ. ಹಾರ್ದಿಕ್ ಮತ್ತು ಕೃನಾಲ್ ಇಬ್ಬರೂ ಆಲ್ರೌಂಡರ್‌ಗಳಾಗಿದ್ದು ಕೃನಾಲ್ ಆರ್‌ಸಿಬಿಯನ್ನು ಪ್ರತಿನಿಧಿಸಿದರೆ, ಪಾಂಡ್ಯ ಮುಂಬೈ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ಮುಂಬೈ vs ಆರ್‌ಸಿಬಿ ಈ ಪಂದ್ಯಾವಳಿಯ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ, ಇಬ್ಬರು ಸಹೋದರರು ಕ್ರಿಕೆಟ್‌ನಲ್ಲಿ ಹಲವು ಬಾರಿ ಒಟ್ಟಿಗೆ ಮತ್ತು ಪರಸ್ಪರ ವಿರುದ್ಧವಾಗಿ ಆಡಿದ್ದಾರೆ. ಆದರೆ ಮುಂಬೈ-ಆರ್‌ಸಿಬಿ ಪಂದ್ಯವು ಸ್ವಲ್ಪ ಮಟ್ಟಿಗೆ ವಿಶೇಷವಾಗಲಿದೆ. ಏಕೆಂದರೆ ಕಳೆದ ಕೆಲವು ತಿಂಗಳುಗಳಿಂದ ಪಾಂಡ್ಯ ಸಹೋದರರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ಹೇಳಲಾಗುತ್ತದೆ. ಪರಸ್ಪರರ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂತಲೂ ವರದಿಯಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಈ ಸಹೋದರರಿಬ್ಬರು ಮುಖಾಮುಖಿಯಾದಾಗ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಮನಸ್ತಾಪಕ್ಕೆ ಪುಷ್ಠಿ ನೀಡುತ್ತಿದೆ ಇಬ್ಬರ ನಡೆ

ವಾಸ್ತವವಾಗಿ ಮಾರ್ಚ್ 8 ರಂದು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು. ಚಾಂಪಿಯನ್ ಟೀಂ ಇಂಡಿಯಾಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದಿತ್ತು. ಆದರೆ ಭಾರತ ತಂಡದ ಭಾಗವಾಗಿದ್ದ ಹಾರ್ದಿಕ್ ಪಾಂಡ್ಯಗೆ ಅವರ ಸಹೋದರ ಕೃನಾಲ್ ಪಾಂಡ್ಯ ಕಡೆಯಿಂದ ಯಾವುದೇ ಅಭಿನಂದನೆಯಾಗಲಿ, ಶುಭಾಶಯವಾಗಲಿ ವ್ಯಕ್ತವಾಗಿರಲಿಲ್ಲ.

PBKS vs SRH: ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಪ್ರಿಯಾಂಶ್ ಆರ್ಯ

ಇದಾದ ಬಳಿಕವೇ ಇವರಿಬ್ಬರ ನಡುವೆ ಏನೂ ಸರಿ ಇಲ್ಲ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಯಿತು. ಆದರೆ ಈ ವದಂತಿಯ ಬಗ್ಗೆ ಇಬ್ಬರು ಸಹೋದರರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಹೀಗಾಗಿ ಇಂದಿನ ಮುಂಬೈ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಹಾರ್ದಿಕ್-ಕೃನಾಲ್ ಸಹೋದರರು ಈ ವದಂತಿಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಶಾ ಭೋಸ್ಲೆ ನಿಧನ, ನಟ ರಾಘವೇಂದ್ರ ರಾಜ್​​ಕುಮಾರ್ ಸಂತಾಪ

ಖ್ಯಾತ ಗಾಯಕಿ ಆಶಾ ಭೊಸ್ಲೆ (Asha Bhosle) ಇಂದು ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಮಂದಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ನಟ, ನಿರ್ಮಾಪಕ ರಾಘವೇಂದ್ರ ರಾಜ್​​ಕುಮಾರ್ ಸಹ ಆಶಾ ಭೊಸ್ಲೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಅಪ್ಪಾಜಿ‌ ನಿಧನರಾದ ದಿನವೇ ಅವರನ್ನ ಕಳೆದುಕೊಂಡಿದ್ದೀವಿ, ನಮ್ಮ ತಂದೆಯವರು ಆಶಾ ಬೋಸ್ಲೆ ಅವರ ದೊಡ್ಡ ಅಭಿಮಾನಿ ಆಗಿದ್ದರು. ನಮ್ಮ ತಂದೆಗೆ ಅವರ ಹಾಡುಗಳು ಎಂದರೇ ಬಹಳ ಇಷ್ಟ, ಅಪ್ಪಾಜಿ ಆಶಾ ಬೋಸ್ಲೆ ಅವರನ್ನ ಭೇಟಿ ಆಗಿದ್ದಾರೆ, ಮಹಾನ್ ವ್ಯಕ್ತಿಗಳನ್ನ‌ ಒಂದೇ ದಿನ ಕಳೆದುಕೊಂಡಿದ್ದೀವಿ, ಅವರು ಎಲ್ಲಾ ರೀತಿಯ ಹಾಡುಗಳನ್ನು ಹಾಡಿದ್ದಾರೆ, ನಾನು‌ ಅವರನ್ನ ಭೇಟಿ‌ ಮಾಡಿಲ್ಲ. ಆದರೆ ಅವರ ಹಾಡುಗಳನ್ನ ಸದಾ ಕೇಳುತ್ತಿರ್ತಿನಿ, ಆಶಾ ಬೋಸ್ಲೆ ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಾ ನಷ್ಟ ಆಗಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Chanakya Niti: ಈ ಅಭ್ಯಾಸಗಳು ಪುರುಷರ ಬದುಕನ್ನೇ ಸರ್ವನಾಶ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿ ಶಾಸ್ತ್ರದಲ್ಲಿ ಯಶಸ್ಸು ಮತ್ತು ಶ್ರೀಮಂತಿಕೆ ಗಳಿಕೆಯ ಬಗ್ಗೆ ಮಾತ್ರವಲ್ಲದೆ ಜೀವನವನ್ನು ಯಾವ ರೀತಿ ನಡೆಸಬೇಕು, ಜೀವನವನ್ನು ಯಾವ ರೀತಿ ಜೀವಿಸಬೇಕು, ಸಮಾಜದಲ್ಲಿ ಗೌರವಯುತವಾಗಿ ಬಾಳಲು ಏನು ಮಾಡಬೇಕು ಎಂಬುದರ ಬಗ್ಗೆಯೂ ಸಾಕಷ್ಟು ಹೇಳಿದ್ದಾರೆ. ಅದೇ ರೀತಿ ಪುರುಷ ಜೀವನಕ್ಕೆ ಸಂಬಂಧಿಸಿದ ಒಂದಷ್ಟು ರಹಸ್ಯಗಳ ಬಗ್ಗೆಯೂ ಹೇಳಿದ್ದು, ಒಬ್ಬ ವ್ಯಕ್ತಿಯ ಯಶಸ್ಸಿಗೆ ಬುದ್ದಿವಂತಿಕೆ ಮಾತ್ರ ಸಾಕಾಗುವುದಿಲ್ಲ, ಶಿಸ್ತಿನ ನಡವಳಿಕೆಯೂ ಅಗತ್ಯ. ಅದರಲ್ಲೂ ಒಂದು ವೇಳೆ ಈ ಕೆಲವು ಅಭ್ಯಾಸ ಪುರುಷನಿಗಿದ್ದರೆ ಮತ್ತು ಆತ ಮಾಡುವ ಕೆಲವೊಂದು ತಪ್ಪುಗಳು ಆತನ ವೃತ್ತಿ ಜೀವನ, ಖ್ಯಾತಿ ಎರಡೂ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗಿದ್ದರೆ ಪುರುಷರ ಜೀವನ ಹಾಳು ಮಾಡುವ ಆ  ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳು ಪುರುಷರ ಬದುಕನ್ನೇ ನಾಶ ಮಾಡುತ್ತದೆ:

ಸೋಮಾರಿತನ: ಸೋಮಾರಿತನ ಯಶಸ್ಸಿನ ದೊಡ್ಡ ಶತ್ರು ಎನ್ನುತ್ತಾರೆ ಚಾಣಕ್ಯ. ಸೋಮಾರಿ ವ್ಯಕ್ತಿಗೆ ಯಾವುದೇ ಭವಿಷ್ಯ ಇಲ್ಲ. ಇಂದಿನ ಕೆಲಸವನ್ನು ಇಂದೇ ಮಾಡಿ ಮುಗಿಸದೆ ನಾಳೆಗೆ  ಮುಂದೂಡುವವನು ವೃತ್ತಿಪರ ಸ್ಪರ್ಧೆಯಲ್ಲಿ ಯಾವಾಗಲೂ ಹಿಂದುಳಿಯುತ್ತಾನೆ. ಅವನು ಜೀವನದಲ್ಲಿಮುಂದುವರಿಯಲು ಸಾಧ್ಯವಾಗದು, ಆತ ಖಂಡಿತವಾಗಿಯೂ ಪತನಗೊಳ್ಳುತ್ತಾರೆ ಎನ್ನುತ್ತಾರೆ ಚಾಣಕ್ಯ. ಹಾಗಾಗಿ ಸೋಮಾರಿತನವನ್ನು ಇಂದೇ ಬಿಟ್ಟುಬಿಡಿ.

ಅಹಂಕಾರ: ತನ್ನ ಅಧಿಕಾರ, ಸ್ಥಾನಮಾನ ಅಥವಾ ಸಂಪತ್ತಿನ ಬಗ್ಗೆ ಅಹಂಕಾರ ಪಡುವ ವ್ಯಕ್ತಿಯು ಇತರರನ್ನು ಕೀಳಾಗಿ ಕಾಣಲು ಪ್ರಾರಂಭಿಸಿದಾಗ ಅದು ಆತನ ವಿನಾಶದ ಆರಂಭ ಎನ್ನುತ್ತಾರೆ ಚಾಣಕ್ಯ. ಅಹಂಕಾರ ಎಲ್ಲಿ ಬೆಳೆಯುತ್ತದೆಯೋ ಅಲ್ಲಿ ಕಲಿಯುವ ಬಯಕೆ ಸಾಯುತ್ತದೆ. ಹೊಸ ವಿಷಯಗಳನ್ನು ಕಲಿಯುವುದನ್ನು ನಿಲ್ಲಿಸಿದಾಗ, ಆ ವ್ಯಕ್ತಿಯ ಅವನತಿ ಪ್ರಾರಂಭವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ನೋವುಂಟುಮಾಡುವ ಮಾತುಗಳು: ಕಠಿಣ ಮಾತುಗಳನ್ನಾಗಿಡಿದರೆ ಸಂಬಂಧವೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ.  ಒಬ್ಬ ವ್ಯಕ್ತಿಯ ಕೆಟ್ಟ ಮಾತು ಅಥವಾ ನೋವುಂಟುಮಾಡುವ ಮಾತುಗಳು ಆತನ ಖ್ಯಾತಿಯನ್ನೇ ಹಾಳು ಮಾಡುತ್ತದೆ. ಕಟುವಾಗಿ ಮಾತನಾಡುವ ಪುರುಷರು ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳ ಗೌರವವನ್ನು ಗಳಿಸುವುದಿಲ್ಲ ಮತ್ತು ಮನೆಯಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಾರೆ. ಅಲ್ಲದೆ ಇದು ಸಂಬಂಧವನ್ನು ಸಹ ಹಾಳು ಮಾಡುತ್ತದೆ. ಆದ್ದರಿಂದ ಮಾತಿನ ಮೇಲೆ ಹಿಡಿತವನ್ನು ಹೊಂದಿರಬೇಕು.

ಕೆಟ್ಟವರ  ಸ್ನೇಹ: ಕೆಟ್ಟವರ ಸಹವಾಸದಿಂದ ವ್ಯಕ್ತಿತ್ವದ ಮೇಲೆ ಕಳಂಕ ಉಂಟಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಹೌದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆತನ ಸ್ನೇಹಿತರಿಂದಲೂ ನಿರ್ಣಯಿಸಬಹುದು. ಕೆಟ್ಟ ಅಭ್ಯಾಸಗಳನ್ನು ಹೊಂದಿರುವ ಜನರೊಂದಿಗೆ ನೀವು ಸ್ನೇಹ ಬೆಳೆಸಿದರೆ, ಅದು ನಿಮ್ಮ ಕೆಲಸ ಮತ್ತು ಖ್ಯಾತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯಶಸ್ಸನ್ನು ಸಾಧಿಸಲು ಬಯಸುವವರು ಯಾವಾಗಲೂ ಅವರಿಗಿಂತ ಹೆಚ್ಚು ಸಮರ್ಥರು ಮತ್ತು ಉತ್ತಮ ಆಲೋಚನೆಗಳನ್ನು ಹೊಂದಿರುವ ಜನರ ಸಹವಾಸ ಮಾಡಬೇಕು ಎಂದಿದ್ದಾರೆ ಚಾಣಕ್ಯ.

ಇದನ್ನೂ ಓದಿ: ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ

ದುಂದು ವೆಚ್ಚ: ಇದು ಬಡತನಕ್ಕೆ ಆಹ್ವಾನ ನೀಡುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಿ ಕೇವಲ ಆಡಂಬರಕ್ಕಾಗಿ ಬದುಕುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಅಲ್ಲದೆ ಸಂಪಾದನೆಯ ಒಂದು ಭಾಗ ಉಳಿತಾಯ ಮಾಡದವರು ಬಡವರಾಗಿಯೇ ಉಳಿಯುತ್ತಾರೆ, ಅವರು ಎಂದಿಗೂ ಶ್ರೀಮಂತಿಕೆ ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಎಂದಿಗೂ ದುಂದುವೆಚ್ಚ ಮಾಡಬೇಡಿ, ಯೋಚಿಸಿ ಹಣವನ್ನು ಖರ್ಚು ಮಾಡಿ.

ಕೆಟ್ಟ ಚಟ: ಮದ್ಯ, ಧೂಮಪಾನ ಸೇರಿದಂತೆ ಯಾವುದೇ ರೀತಿಯ ವ್ಯಸನವು ವ್ಯಕ್ತಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲಗೊಳಿಸುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಕೆಟ್ಟ ಚಟಗಳಿಗೆ ದಾಸನಾದ ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ಮರೆತುಬಿಡುತ್ತಾನೆ ಅಂತಹ ವ್ಯಕ್ತಿಯು ತನ್ನ ವ್ಯವಹಾರ ಅಥವಾ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಮತ್ತು ಅವನ ಕುಟುಂಬವನ್ನು ಸಹ ತೊಂದರೆಗೆ ಸಿಲುಕಿಸುತ್ತಾನೆ ಎನ್ನುತ್ತಾರೆ ಚಾಣಕ್ಯ.

ನೀವು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಬಯಸಿದರೆ, ಚಾಣಕ್ಯರು ಹೇಳಿರುವ ಈ ಆರು ಅಭ್ಯಾಸಗಳನ್ನು ತಕ್ಷಣವೇ ತ್ಯಜಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರವಾಸಿಗರ ಮೇಲೆ ಎರಗಲು ಯತ್ನಿಸಿದ ಹುಲಿ, ಇಲ್ಲಿದೆ ಭಯಾನಕ ವಿಡಿಯೋ

ಶಿವಮೊಗ್ಗ, (ಏಪ್ರಿಲ್ 12): ಹುಲಿ (Tiger) ಪ್ರವಾಸಿಗರ (Tourists) ಮೇಲೆ ಎರಗಲು ಯತ್ನಿಸಿದ ವಿಡಿಯೋವೊಂದು ವೈರಲ್ ಆಗಿದೆ. ಘರ್ಜಿಸುತ್ತಲೇ ಪ್ರವಾಸಿಗರ ಬಳಿಕ ಬಂದ ಹುಲಿ, ಏಕಾಏಕಿ ಜಾಲರಿ ಮೇಲೆ ಜಿಗಿದು ದಾಳಿಗೆ ಯತ್ನಿಸಿದೆ. ಇದರಿಂದ ಪ್ರವಾಸಿಗರು ಒಂದು ಕ್ಷಣ ಗಾಬರಿಗೊಂಡು ಚೀರಿದ್ದಾರೆ. ಶಿವಮೊಗ್ಗದ (Shivamogga) ಹುಲಿ ಮತ್ತು ಸಿಂಹಧಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.  ಅಕಸ್ಮಾತ್ ಕೈ ಬೆರಳು ಏನಾದರೂ ಇಟ್ಟಿದ್ದರೆ ಅನಾಹುತ ಆಗಿರೋದು.

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version