Sagittarius Horoscope: ಏಪ್ರಿಲ್​​ ತಿಂಗಳು ಧನು ರಾಶಿಯವರಿಗೆ ಹೇಗಿರಲಿದೆ? ಇಲ್ಲಿದೆ ಮಾಸಭವಿಷ್ಯ

Sagittarius Horoscope: ಏಪ್ರಿಲ್​​ ತಿಂಗಳು ಧನು ರಾಶಿಯವರಿಗೆ ಹೇಗಿರಲಿದೆ? ಇಲ್ಲಿದೆ ಮಾಸಭವಿಷ್ಯ

ಕಾಲಜ್ಙಾನ ಶಾಸ್ತ್ರವು ಸೂಚಿಸುವಂತೆ ಏಪ್ರಿಲ್ 2026ರ ಗ್ರಹಗತಿಗಳನ್ನು ಗಮನಿಸಿದಾಗ, ಧನು ರಾಶಿಯವರಿಗೆ ಅಂದರೆ ಮೂಲ, ಪೂರ್ವಾಷಾಢ, ಉತ್ತರಾಷಾಢ 1ನೇ ಪಾದದ ನಕ್ಷತ್ರದವರಿಗೆ ಈ ತಿಂಗಳು ಮಿಶ್ರಫಲಗಳಿಂದ ಕೂಡಿದೆ. ರಾಶ್ಯಾಧಿಪತಿ ಗುರು ಮಿಥುನ ರಾಶಿಯಲ್ಲಿ, ಶನಿ ಕುಂಭದಲ್ಲಿ ಹಾಗೂ ರಾಹು-ಕೇತುಗಳು ಕುಂಭ ಮತ್ತು ಸಿಂಹ ರಾಶಿಯಲ್ಲಿದ್ದಾರೆ. ನಿಮ್ಮ ಜಾತಕದ ದಶೆ ಮತ್ತು ಗೋಚಾರ ಫಲಗಳು

​​ಅಧಿಕಾರ ಮತ್ತು ಉದ್ಯೋಗ :

ನಿಮ್ಮ ರಾಶ್ಯಾಧಿಪತಿ ಗುರುವು ಏಳನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನು ನೋಡುತ್ತಿರುವುದು ಅತ್ಯಂತ ದೊಡ್ಡ ಬಲ. ಇದು ನಿಮಗೆ ಸಮಾಜದಲ್ಲಿ ಗೌರವ ಮತ್ತು ಕೆಲಸದಲ್ಲಿ ಅಧಿಕಾರ ತಂದುಕೊಡಲಿದೆ. ನಿಮ್ಮ ರಾಶಿಯ ಹಿಂದಿನ ಮನೆಯಲ್ಲಿ (ವೃಶ್ಚಿಕ) ಮಂಗಳ-ಚಂದ್ರ ಇರುವುದರಿಂದ ಕೆಲಸದಲ್ಲಿ ಸ್ವಲ್ಪ ಒತ್ತಡ ಅಥವಾ ಮಾನಸಿಕ ಆತಂಕ ಇರಬಹುದು, ಆದರೆ ಯಶಸ್ಸು ನಿಮ್ಮದಾಗುತ್ತದೆ.

ಆರ್ಥಿಕತೆ ಮತ್ತು ಆದಾಯ :

ಮೂರನೇ ಮನೆಯಲ್ಲಿ ರಾಹು ಮತ್ತು ಬುಧ ಇರುವುದರಿಂದ ನಿಮ್ಮ ಬುದ್ಧಿವಂತಿಕೆಯಿಂದ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹಠಾತ್ ಧನಲಾಭದ ಯೋಗವಿದೆ. ಆದರೆ ನಾಲ್ಕನೇ ಮನೆಯಲ್ಲಿ ಶನಿ-ರವಿ ಇರುವುದರಿಂದ ಮನೆ ಅಥವಾ ವಾಹನದ ಮೇಲಿನ ಖರ್ಚು ಹೆಚ್ಚಾಗಬಹುದು.

ಗೃಹ ನಿರ್ಮಾಣ ಮತ್ತು ಕೃಷಿ :

ನಾಲ್ಕನೇ ಮನೆಯಲ್ಲಿ ಶನಿ ಮತ್ತು ರವಿಯ ಯುತಿ ಇರುವುದರಿಂದ ಗೃಹ ನಿರ್ಮಾಣ ಕಾರ್ಯಗಳಲ್ಲಿ ವಿಳಂಬ ಅಥವಾ ತಾಂತ್ರಿಕ ಅಡೆತಡೆಗಳು ಎದುರಾಗಬಹುದು. ಎಚ್ಚರಿಕೆಯಿಂದ ಮುಂದುವರಿಯಿರಿ. ಕೃಷಿಯಲ್ಲಿ, ವಿಶೇಷವಾಗಿ ಅಡಿಕೆ ಅಥವಾ ತೋಟಗಾರಿಕೆಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮಣ್ಣಿನ ಸತ್ವ ಹೆಚ್ಚಿಸಲು ನೀವು ಮಾಡುತ್ತಿರುವ ನೈಸರ್ಗಿಕ ವಿಧಾನಗಳು ದೀರ್ಘಕಾಲದ ಲಾಭ ನೀಡಲಿವೆ.

ಸಾಲ ಮತ್ತು ಸಮಾಜ ಸೇವೆ:

ಒಂಭತ್ತನೇ ಮನೆಯಲ್ಲಿ ಕೇತು ಇರುವುದರಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ಸಮಾಜ ಸೇವೆಗೆ ಇದು ಸಕಾಲ. ಅನಗತ್ಯ ಸಾಲ ಮಾಡುವುದರಿಂದ ದೂರವಿರಿ, ಏಕೆಂದರೆ 4ನೇ ಮನೆಯ ಶನಿಯು ಮಾನಸಿಕ ನೆಮ್ಮದಿಯನ್ನು ಸ್ವಲ್ಪ ಕಡಿಮೆ ಮಾಡಬಹುದು.

ವಿದ್ಯಾಭ್ಯಾಸ ಮತ್ತು ವಿದೇಶ ಪ್ರವೇಶ :

ವಿದ್ಯಾರ್ಥಿಗಳಿಗೆ ಜ್ಞಾನ ವೃದ್ಧಿಯಾಗಲಿದೆ. ಮೂರನೇ ಮನೆಯ ರಾಹುವು ಧೈರ್ಯವನ್ನು ನೀಡುವುದರಿಂದ ವಿದೇಶ ಪ್ರವೇಶ ಅಥವಾ ದೂರದ ಪ್ರಯಾಣದ ಪ್ರಯತ್ನಗಳು ಫಲಪ್ರದವಾಗಲಿವೆ.

ಆಹಾರ ಉದ್ಯಮ ಮತ್ತು ಸಂಬಂಧ:

ಏಳನೇ ಮನೆಯ ಗುರುವು ಆಹಾರ ಉದ್ಯಮದಲ್ಲಿರುವವರಿಗೆ ಮತ್ತು ವ್ಯಾಪಾರಸ್ಥರಿಗೆ ಅತ್ಯಂತ ಶುಭಕರ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವಿರಲಿದ್ದು, ಹೊಸ ಒಪ್ಪಂದಗಳಿಗೆ ಇದು ಸರಿಯಾದ ಸಮಯ.

– ಲೋಹಿತ ಹೆಬ್ಬಾರ್

Source link

ಒತ್ತಡಕ್ಕೆ ಬಲಿಯಾಯಿತೇ ಮರಿ?: ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆಯ ಮರಿಯೂ ಗರ್ಭದಲ್ಲೇ ಸಾವು!

ಶಿವಮೊಗ್ಗ, ಏ.11: ಕಳೆದ ಮಾರ್ಚ್ 19 ರಂದು ತ್ಯಾವರೆಕೊಪ್ಪ ಸಫಾರಿಯಲ್ಲಿ ತರಬೇತಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಗರ್ಭಿಣಿ ನೀರಾನೆ ಹಂಸಿನಿಯ (Hamsini Hippo) ಆರೋಗ್ಯ ತಪಾಸಣೆ ನಡೆಸುತ್ತಿದ್ದಾಗ, ಹಂಸಿನಿ ಏಕಾಏಕಿ ದಾಳಿ ಮಾಡಿ ಅವರ ಸಾವಿಗೆ ಕಾರಣವಾಗಿತ್ತು. ಈಗ ಅದೇ ನೀರಾನೆಯ ಮರಿಯು ಗರ್ಭದಲ್ಲೇ ಸಾವನ್ನಪ್ಪಿದೆ. ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಹೀಗೆ ಸರಣಿ ದುರಂತಗಳು ನಡೆಯುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೂಡ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಇದೀಗ ಹಂಸಿನಿಯ ಮರಿಯು ಸಾವನ್ನಪ್ಪಿರುವುದಕ್ಕೆ ಸಫಾರಿ ಸಿಬ್ಬಂದಿ ಹಾಗೂ ಪ್ರಾಣಿ ಪ್ರೇಮಿಗಳಲ್ಲಿ ತೀವ್ರ ವಿಷಾದ ಮೂಡಿಸಿದೆ.

ಮಾರ್ಚ್ 19 ರಂದು ತ್ಯಾವರೆಕೊಪ್ಪ ಸಫಾರಿಯಲ್ಲಿ ಕರ್ತವ್ಯದಲ್ಲಿದ್ದ ತರಬೇತಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಗರ್ಭಿಣಿ ನೀರಾನೆ ಹಂಸಿನಿಯ ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದರು. ಈ ವೇಳೆ ಹಂಸಿನಿ ಏಕಾಏಕಿ ದಾಳಿ ಮಾಡಿತ್ತು. ಈ ಭೀಕರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದು ಅಲ್ಲಿನ ಸ್ಥಳೀಯರನ್ನು ಹಾಗೂ ಸಮೀಕ್ಷಾ ಅವರ ಮನೆಯವರ ಆಕ್ರೋಶಕ್ಕೆ ಕಾರಣವಾಗಿತ್ತು. ಸರಿಯಾದ ಸುರಕ್ಷತೆಯ ಕ್ರಮಗಳು ಇಲ್ಲದೆ ಕಳಿಸಿರುವುದು ಅರಣ್ಯಾ ಹಾಗೂ ಅಲ್ಲಿನ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.

ಹಂಸಿನಿ ನೀರಾನೆಯು ಮರಿಯನ್ನು ಕಳೆದುಕೊಳ್ಳುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆಯೂ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿದ್ದ ಹಂಸಿನಿ, ಹುಟ್ಟಿದ ಕೆಲವೇ ದಿನಗಳಲ್ಲಿ ಅವುಗಳನ್ನು ಕಳೆದುಕೊಂಡಿತ್ತು. ಈ ಬಾರಿಯಾದರೂ ಮರಿ ಉಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಫಾರಿ ಸಿಬ್ಬಂದಿಗೆ ಈಗ ನಿರಾಸೆಯಾಗಿದೆ. ವನ್ಯಜೀವಿ ತಜ್ಞರ ಪ್ರಕಾರ, ಮಾರ್ಚ್‌ನಲ್ಲಿ ನಡೆದ ಆ ಅನಿರೀಕ್ಷಿತ ಘಟನೆಯ ಸಮಯದಲ್ಲಿ ಹಂಸಿನಿ ತೀವ್ರ ದೈಹಿಕ ಅನಾರೋಗ್ಯ ಮತ್ತು ಮಾನಸಿಕ ಒತ್ತಡಕ್ಕೆ (Stress) ಒಳಗಾಗಿತ್ತು. ಸಾಮಾನ್ಯವಾಗಿ ಗರ್ಭಿಣಿ ಪ್ರಾಣಿಗಳು ಅತಿಯಾದ ಸೂಕ್ಷ್ಮತೆಯನ್ನು ಹೊಂದಿರುತ್ತವೆ. ವೈದ್ಯೆಯ ಮೇಲೆ ದಾಳಿ ಮಾಡಿದ ಆಘಾತ ಮತ್ತು ನಂತರದ ಚಿಕಿತ್ಸಾ ಪ್ರಕ್ರಿಯೆಗಳು ಹಂಸಿನಿಯ ದೈಹಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿದ್ದವು. ಈ ಮಾನಸಿಕ ಆಘಾತ ಮತ್ತು ಹಾರ್ಮೋನುಗಳ ಏರುಪೇರಿನಿಂದಾಗಿ ಮರಿಯು ಗರ್ಭದಲ್ಲೇ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕೊಪ್ಪಳ: ಬಸ್‌ನಲ್ಲಿ ಅರಳಿದ ಪ್ರೇಮ, ದೇವಸ್ಥಾನದಲ್ಲಿ ಮದುವೆಯಾದ ಜೋಡಿಗೆ ಈಗ ಜೀವಭಯ!

ಪ್ರಸ್ತುತ ಹಂಸಿನಿಯ ಆರೋಗ್ಯದ ಮೇಲೆ ಅರಣ್ಯ ಇಲಾಖೆ ಮತ್ತು ಪಶುವೈದ್ಯರು ತೀವ್ರ ನಿಗಾ ಇರಿಸಿದ್ದಾರೆ. ಗರ್ಭದಲ್ಲಿರುವ ಮೃತ ಮರಿಯನ್ನು ಹೊರತೆಗೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹಂಸಿನಿಯ ಜೀವಕ್ಕೆ ಅಪಾಯವಾಗದಂತೆ ವೈದ್ಯಕೀಯ ತಂಡ ಜಾಗ್ರತೆ ವಹಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Source link

PBKS vs SRH IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ – Kannada News | Punjab Kings vs Sunrisers Hyderabad IPL 2026 Live Cricket Score PBKS vs SRH Match on 11th April latest news in Kannada

ಐಪಿಎಲ್ 2026 ರ 17 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ. ನ್ಯೂ ಚಂಡೀಗಢದಲ್ಲಿ ಶನಿವಾರ ನಡೆದ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಪಂಜಾಬ್ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಅವಕಾಶವನ್ನು ಹೊಂದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ತಂಡಕ್ಕೆ ಮಳೆ ಅವಕಾಶ ಕಸಿದುಕೊಂಡಿತು. ಆದಾಗ್ಯೂ, ಈ ಬಾರಿ ಅಂತಹ ಯಾವುದೇ ಅಡಚಣೆಯನ್ನು ನಿರೀಕ್ಷಿಸಲಾಗುವುದಿಲ್ಲ. ಏತನ್ಮಧ್ಯೆ, ಇಶಾನ್ ಕಿಶನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ ನಂತರ ಎರಡನೇ ಗೆಲುವನ್ನು ಎದುರು ನೋಡುತ್ತಿದೆ.

Source link

ಈ ವಾರ ಒಟಿಟಿಗೆ ಬಂದಿವೆ ಕೆಲ ನೋಡಲೇಬೇಕಾದ ಸಿನಿಮಾಗಳು: ಪಟ್ಟಿ ಇಲ್ಲಿದೆ

Source link

Weekly Love Horoscope: ಪ್ರೇಮ – ಪ್ರೀತಿ ಭವಿಷ್ಯ; ಈ ವಾರ ಈ ರಾಶಿಯ ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಲಿದೆ

ಏಪ್ರಿಲ್ 12ರಿಂದ ಏಪ್ರಿಲ್ 18ರವರೆಗಿನ ಎರಡನೇ ವಾರವಾಗಿದ್ದು ಈ ವಾರದಲ್ಲಿ ಪರಿಚಿತವು ಪ್ರೇಮವಾಗಬಹುದು, ವರ್ತನೆ ನೇರವಾಗಿರಲಿ, ಅನುಮಾನಕ್ಕೆ ಆಸ್ಪದ ಬೇಡ. ಪ್ರೀತಿಯ ಕೊರತೆ ಕೆಲವರಿಗೆ ಆಗಲಿದ್ದು, ಮನಸ್ಸಿನೊಳಗೇ ದುಃಖಿಸಬೇಕಾಗುವುದು.

​ಮೇಷ:

​ಜೀವನ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಪ್ರೀತಿ ಗಟ್ಟಿಯಾಗಿರುತ್ತದೆ. ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಬಹುದು. ಮಾತಿನಲ್ಲಿ ಸಂಯಮವಿರಲಿ, ಆಪ್ತತೆಯು ಹೆಚ್ಚಾಗಲಿದೆ.

​ವೃಷಭ:

​ಪ್ರೇಮ ಜೀವನದಲ್ಲಿ ಮಧುರವಾದ ಕ್ಷಣಗಳನ್ನು ಕಳೆಯುವಿರಿ. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಸಂತೋಷ ನೀಡುತ್ತದೆ. ದಾಂಪತ್ಯದಲ್ಲಿ ಪರಸ್ಪರ ಗೌರವ ಮತ್ತು ನಂಬಿಕೆ ವೃದ್ಧಿಯಾಗುವ ಸಮಯವಿದು.

​ಮಿಥುನ:

​ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ದೊರೆಯಬಹುದು. ಪ್ರೀತಿಯ ವಿಷಯದಲ್ಲಿ ಗೊಂದಲಗಳಿದ್ದರೆ ಈ ವಾರ ನಿವಾರಣೆಯಾಗಲಿವೆ. ಸ್ನೇಹ ಸಂಬಂಧಗಳು ಗಾಢವಾಗಲಿದ್ದು, ಪ್ರೇಮಿಗಳಿಗೆ ಮನೆಯವರ ಬೆಂಬಲ ಸಿಗಬಹುದು.

​ಕರ್ಕಾಟಕ:

ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ದಾಂಪತ್ಯದಲ್ಲಿನ ಕಹಿ ಮರೆತು ಹೊಸ ಆರಂಭಕ್ಕೆ ನಾಂದಿ ಹಾಡುವಿರಿ. ಭಾವನಾತ್ಮಕವಾಗಿ ಸಂಗಾತಿಗೆ ಹತ್ತಿರವಾಗುವಿರಿ. ಹೊಸ ಪರಿಚಯಗಳು ಸ್ನೇಹಕ್ಕೆ ತಿರುಗಲಿವೆ.

​ಸಿಂಹ:

​ಆಪ್ತ ಸಂಬಂಧಗಳಲ್ಲಿ ಸ್ವಲ್ಪ ಬಿಗುವಿನ ವಾತಾವರಣ ಇರಬಹುದು. ಅಹಂಕಾರ ಬಿಟ್ಟು ನಡೆದರೆ ಪ್ರೇಮ ಜೀವನ ಸುಖಮಯವಾಗಿರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಾಳ್ಮೆ ಇಲ್ಲಿ ಅತಿ ಮುಖ್ಯ.

​ಕನ್ಯಾ:

​ನಿಮ್ಮ ಸಂವಹನ ಶೈಲಿಯಿಂದ ಪ್ರೀತಿ ಪಾತ್ರರ ಮನ ಗೆಲ್ಲುವಿರಿ. ಒಂಟಿಯಾಗಿರುವವರಿಗೆ ಆಕರ್ಷಕ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆಯಿದೆ. ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸಲಿದ್ದು, ಆಪ್ತತೆ ಹೆಚ್ಚಾಗಲಿದೆ.

​ತುಲಾ:

ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಸಂಗಾತಿಯ ಬೆಂಬಲ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಪ್ರೇಮಿಗಳು ವಿವಾಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಹಳೆಯ ಸ್ನೇಹ ಮರುಕಳಿಸಬಹುದು.

​ವೃಶ್ಚಿಕ:

​ಭಾವನಾತ್ಮಕವಾಗಿ ಸ್ವಲ್ಪ ಏರಿಳಿತಗಳಿರಬಹುದು. ಪ್ರೀತಿಪಾತ್ರರ ಮೇಲೆ ಸಂಶಯ ಬೇಡ, ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ದಾಂಪತ್ಯದಲ್ಲಿ ರೊಮ್ಯಾಂಟಿಕ್ ಕ್ಷಣಗಳು ಹೆಚ್ಚಾಗಲಿವೆ.

​ಧನು:

ಹೊಸ ಸ್ನೇಹವು ಪ್ರೇಮಕ್ಕೆ ತಿರುಗುವ ಸಾಧ್ಯತೆಯಿದೆ. ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ಸಂಬಂಧಗಳು ವೃದ್ಧಿಯಾಗುತ್ತವೆ. ಸಂಗಾತಿಯೊಡನೆ ದೂರದ ಪ್ರಯಾಣ ಕೈಗೊಳ್ಳುವ ಸಂಭವವಿದೆ.

​ಮಕರ:

​ಕೆಲಸದ ಒತ್ತಡದ ನಡುವೆಯೂ ಸಂಗಾತಿಗೆ ಸಮಯ ನೀಡುವಿರಿ. ದಾಂಪತ್ಯದಲ್ಲಿ ಪ್ರೀತಿ ಮತ್ತು ಜವಾಬ್ದಾರಿ ಸಮಾನವಾಗಿರುತ್ತದೆ. ಆಪ್ತ ಸ್ನೇಹಿತರ ಮಾರ್ಗದರ್ಶನ ನಿಮ್ಮ ಪ್ರೇಮ ಜೀವನಕ್ಕೆ ಸಹಕಾರಿಯಾಗಲಿದೆ.

​ಕುಂಭ:

ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇದು ಸಕಾಲ. ನಿಮ್ಮ ಆಕರ್ಷಣೆ ಹೆಚ್ಚಾಗಲಿದ್ದು, ಪ್ರೇಮಿಗಳ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಸಂಗಾತಿಯಿಂದ ವಿಶೇಷ ಪ್ರೋತ್ಸಾಹ ಸಿಗಲಿದ್ದು, ನೆಮ್ಮದಿಯ ವಾರವಿದು.

​ಮೀನ:

​ಸಂಬಂಧಗಳಲ್ಲಿ ಮೃದುತ್ವವಿರಲಿ. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ. ಸಣ್ಣ ವಿವಾದಗಳನ್ನು ಬೆಳೆಸಬೇಡಿ. ವಾರದ ಅಂತ್ಯಕ್ಕೆ ಪ್ರೇಮ ಜೀವನದಲ್ಲಿ ಹೊಸ ಚೈತನ್ಯ ಮೂಡಲಿದೆ ಮತ್ತು ಆಪ್ತತೆ ಹೆಚ್ಚಲಿದೆ.

– ಲೋಹಿತ ಹೆಬ್ಬಾರ್

Source link

‘ಜನ ನಾಯಗನ್’ ಲೀಕ್ ವೀಷಯ; ಸುತ್ತಿ ಬಳಸಿ ವಿಜಯ್ ಮೇಲೆ ಬಂತು ಆರೋಪ

‘ಜನ ನಾಯಗನ್’ ಸಿನಿಮಾ (Jana Nayagan Movie) ರಿಲೀಸ್​​ಗೂ ಮೊದಲೇ ಲೀಕ್ ಆಗಿದೆ. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಜನರು ಈ ಬಗ್ಗೆ ಸಾಕಷ್ಟು ಪ್ರಶ್ನೆ ಮಾಡುತ್ತಿದ್ದಾರೆ. ಅನೇಕರು ಲೀಕ್ ಮಾಡಿದವರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಹೀಗಿರುವಾಗಲೇ ‘ಜನ ನಾಯಗನ್’ ಸಿನಿಮಾ ಕ್ಲಿಪ್ ಸೋರಿಕೆಗೆ ವಿಜಯ್ ಕೈವಾಡವೇ ಇದೆ ಎಂದು ಕೆಲವರು ಆರೋಪಿಸಿದ್ದಾರೆ. ಇದಕ್ಕೆ ವಿಜಯ್ ಅಭಿಮಾನಿಗಳು ಖಡಕ್ ಆಗಿ ಉತ್ತರಿಸುವ ಕೆಲಸ ಮಾಡುತ್ತಿದ್ದಾರೆ.

ಎಲ್ಲಾ ಹೀರೋಗಳಿಗೆ ತಾವು ಮಾಡಿದ ಸಿನಿಮಾಗಳ ಮೇಲೆ ಪ್ರೀತಿ ಇರುತ್ತದೆ. ಅದು ಲೀಕ್ ಆಗಲಿ ಎಂದು ಯಾರೊಬ್ಬರೂ ಬಯಸುವುದಿಲ್ಲ. ಹಾಗಿದ್ದರೂ ವಿಜಯ್ ಮೇಲೆ ಈ ರೀತಿಯ ಗಂಭೀರ ಆರೋಪವನ್ನು ಕೆಲವರು ಮಾಡಿದ್ದಾರೆ. ‘ಜನ ನಾಯಗನ್ ಲೀಕ್ ಮಾಡಿ ಸಿಂಪತಿ ಗಿಟ್ಟಿಸಿಕೊಳ್ಳುವ ಪ್ಲ್ಯಾನ್ ವಿಜಯ್ ಅವರದ್ದು’ ಎಂದು ಕೆಲವರು ಆರೋಪ ಮಾಡಿದ್ದಾರೆ.

‘ಜನ ನಾಯಗನ್’ ಎಲ್ಲಿಯೂ ಪ್ರದರ್ಶನ ಆಗಿಲ್ಲ. ಹೀಗಾಗಿ, ಇದರ ಲೀಕ್ ಹಿಂದೆ ತಂಡದವರಲ್ಲಿದ್ದವರ ಕೈವಾಡ ಇರಬಹುದು ಎಂಬುದು ಕೆಲವರ ಅನುಮಾನ. ಈ ಕಾರಣದಿಂದ ಈಗಾಗಲೇ ಕೆವಿಎನ್ ಸಂಸ್ಥೆ ತನಿಖೆಗೆ ಆದೇಶ ಮಾಡಿದೆ. ಈ ವರದಿ ಹೊರ ಬಂದ ಬಳಿಕ ಅಸಲಿಯತ್ತು ತಿಳಿಯಲಿದೆ. ಇದರ ವರದಿ ಬರೋದಕ್ಕೂ ಮೊದಲೇ ಕೆಲವರು ವಿಜಯ್ ಹಾಗೂ ಅವರ ತಂಡದ ಮೇಲೆ ಸುಖಾಸುಮ್ಮನೆ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್

ಇನ್ನು, ಸಿನಿಮಾ ಲೀಕ್ ಬಗ್ಗೆ ವಿಜಯ್ ಮೌನವಹಿಸಿದ್ದಾರೆ. ಅವರು ಸಂಪೂರ್ಣವಾಗಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಅವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಇನ್ನು, ಕೆಲವು ಪೈರಸಿ ಸೈಟ್​​ಗಳು ಒಳ್ಳೆಯತನ ಮೆರೆಯುವ ಕೆಲಸ ಮಾಡುತ್ತಿವೆ. ಸಿನಿಮಾ ರಿಲೀಸ್ ಆದ ಹೊರತಾಗಿಯೂ ಪೈರಸಿ ಕಾಪಿಯನ್ನು ಅಪ್​​ಲೋಡ್ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿವೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಓರ್ವ ಆಟಗಾರ ಹೊರಕ್ಕೆ… ಹೀಗಿರಲಿದೆ RCB ಪ್ಲೇಯಿಂಗ್ 11

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಾಳೆ (ಏ.12) ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ಒಂದು ಬದಲಾವಣೆ ಮಾಡುವುದು ಖಚಿತ.

ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಆರ್​ಸಿಬಿ ವೇಗಿ ಅಭಿನಂದನ್ ಸಿಂಗ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿದ ಮೂರು ಮ್ಯಾಚ್​ಗಳಲ್ಲಿ ಒಟ್ಟು 58 ಎಸೆತಗಳನ್ನು ಎಸೆದಿರುವ ಅಭಿನಂದನ್ ನೀಡಿರುವುದು ಬರೋಬ್ಬರಿ 122 ರನ್​ಗಳು. ಅದರಲ್ಲೂ ರಾಜಸ್ಥಾನ್ ರಾಯಲ್ಸ್ ವಿರುದ್ಧ 3 ಓವರ್​ಗಳಲ್ಲಿ ಬರೋಬ್ಬರಿ 54 ರನ್​ ಚಚ್ಚಿಸಿಕೊಂಡಿದ್ದರು.

ಇತ್ತ ಮೂರು ಮ್ಯಾಚ್​ಗಳಲ್ಲಿ 12.62ರ ಸರಾಸರಿಯಲ್ಲಿ ರನ್ ನೀಡಿರುವ ಅಭಿನಂದನ್ ಸಿಂಗ್ ಪಡೆದಿರುವುದು ಕೇವಲ ಮೂರು ವಿಕೆಟ್​ಗಳು ಮಾತ್ರ. ಹೀಗಾಗಿಯೇ ಮುಂದಿನ ಪಂದ್ಯದಿಂದ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ.  ಅದರಂತೆ ಮುಂಬೈ ಇಂಡಿಯನ್ಸ್ ವಿರುದ್ಧ ಅಭಿನಂದನ್ ಬದಲಿಗೆ ಆರ್​ಸಿಬಿ ರಾಸಿಖ್ ದಾರ್ ಸಲಾಂ ಅಥವಾ ಮಂಗೇಶ್ ಯಾದವ್ ಅವರನ್ನು ಕಣಕ್ಕಿಳಿಸಬಹುದು.

ಇಲ್ಲಿ ಅನುಭವಕ್ಕೆ ಮಣೆಹಾಕುವುದಾದರೆ ರಾಸಿಖ್ ದಾರ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಏಕೆಂದರೆ ರಾಸಿಖ್ ಈಗಾಗಲೇ 13 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ವಾಂಖೆಡೆ ಪಿಚ್​ನಲ್ಲಿ ಜಮ್ಮು-ಕಾಶ್ಮೀರದ ಯುವ ವೇಗಿಗೆ ಅವಕಾಶ ನೀಡಬಹುದು. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಫಿಲ್ ಸಾಲ್ಟ್
  • ವಿರಾಟ್ ಕೊಹ್ಲಿ
  • ದೇವದತ್ ಪಡಿಕ್ಕಲ್
  • ರಜತ್ ಪಾಟಿದಾರ್ (ನಾಯಕ)
  • ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  • ಟಿಮ್ ಡೇವಿಡ್
  • ರೊಮಾರಿಯೋ ಶೆಫರ್ಡ್
  • ಕೃನಾಲ್ ಪಾಂಡ್ಯ
  • ಭುವನೇಶ್ವರ್ ಕುಮಾರ್
  • ರಾಸಿಖ್ ದಾರ ಸಲಾಂ
  • ಜೋಶ್ ಹೇಝಲ್​ವುಡ್.
  • ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ಯಶ್ ದಯಾಳ್ (ಅಲಭ್ಯ).

 

Source link

ಬೇಲೂರು: ದೇವಾಲಯದ ಆಸ್ತಿ ಕಂಡೋರ ಪಾಲು! ಕೋಟಿ ಬೆಲೆಯ ಭೂಮಿ ಹೊಡೆಯಲು ಅಧಿಕಾರಿಗಳ ಜತೆಗೂಡಿ ಸ್ಕೆಚ್?

ಹಾಸನ, ಏಪ್ರಿಲ್ 11: ಹಾಸನ (Hassan) ಜಿಲ್ಲೆಯ ವಿಶ್ವವಿಖ್ಯಾತ ಬೇಲೂರಿನಲ್ಲಿ (Belur) ಕಂದಾಯ ಮತ್ತು ಪುರಸಭೆ ಅಧಿಕಾರಿಗಳ ಕರಾಮತ್ತಿನಿಂದಾಗಿ ಐತಿಹಾಸಿಕ ದೇವಾಲಯಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಖಾಸಗಿ ವ್ಯಕ್ತಿಯ ಪಾಲಾಗಿದೆ. ವಿದ್ಯಾಗಣಪತಿ ಟ್ರಸ್ಟ್ ಹೆಸರಿನಲ್ಲಿದ್ದ ಜಮೀನನ್ನು ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಹಗರಣ ನಡೆದಿದ್ದು ಹೇಗೆ?

ಪುರಸಭೆಯ ಸರ್ವೆ ನಂಬರ್ 27ರಲ್ಲಿ ಸುಮಾರು 50 ವರ್ಷಗಳಿಂದ ವಿದ್ಯಾಗಣಪತಿ ಟ್ರಸ್ಟ್ ಹೆಸರಿನಲ್ಲಿ 20 ಗುಂಟೆ ಭೂಮಿ ಇತ್ತು. ಈ ಪೈಕಿ 10 ಗುಂಟೆಯನ್ನು ಅರ್ಚಕರಿಗೆ ನೀಡಲಾಗಿತ್ತು. 1995ರಲ್ಲಿ ಅರ್ಚಕರು ತಮಗೆ ಮಂಜೂರಾಗಿದ್ದ 10 ಗುಂಟೆಯನ್ನು ಮಲ್ಲಿಕಾರ್ಜುನ್ ಎಂಬುವವರಿಗೆ ಮಾರಾಟ ಮಾಡಿದ್ದರು. ಆದರೆ, ಭೂಮಿ ಖರೀದಿ ಮಾಡಿದ ವ್ಯಕ್ತಿ ಅಧಿಕಾರಿಗಳ ಜೊತೆ ಶಾಮೀಲಾಗಿ, ತಾನು ಖರೀದಿಸಿದ 10 ಗುಂಟೆಯ ಜೊತೆಗೆ ದೇವಾಲಯಕ್ಕೆ ಸೇರಿದ ಉಳಿದ 10 ಗುಂಟೆಯನ್ನೂ ಸೇರಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ.

ಅಧಿಕಾರಿಗಳ ಸಾಥ್

ಅನ್ಯಕ್ರಾಂತ (ಅಲಿನೇಷನ್) ಮಾಡುವಾಗ ದಿಕ್ಕುಗಳನ್ನು ಅದಲುಬದಲು ಮಾಡಿ ನಕ್ಷೆ ತಯಾರಿಸಲಾಗಿದೆ. ಕೇವಲ 10 ಸಾವಿರ ಅಡಿ ಜಾಗಕ್ಕೆ ದಾಖಲೆ ಇರಬೇಕಾಗಿದ್ದರೂ, ಪುರಸಭೆ ಅಧಿಕಾರಿಗಳು ಬರೋಬ್ಬರಿ 24 ಸಾವಿರ ಅಡಿಗೆ ಇ-ಸ್ವತ್ತು ಮಾಡಿಕೊಟ್ಟಿದ್ದಾರೆ. ಈ ಅಕ್ರಮದ ಬಗ್ಗೆ ದೂರು ನೀಡಿದ್ದರೂ, 2019ರಲ್ಲಿ ಅಧಿಕಾರಿಗಳು ಅದೇ ಅಕ್ರಮ ಅಳತೆಗೆ ದಾಖಲೆ ನೀಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ತನಿಖೆಗೆ ಉಸ್ತುವಾರಿ ಸಚಿವರ ಆದೇಶ

ಬೇಲೂರಿನಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಈ ಬಗ್ಗೆ ದೂರು ಕೇಳಿಬರುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಒಂದು ವಾರದೊಳಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ರೂ. ಅಕ್ರಮ ಆಸ್ತಿ! ಬೆಳಗಾವಿ ನಗರಾಭಿವೃದ್ಧಿ ಇಂಜಿನಿಯರ್ ಆಸ್ತಿ ಕಂಡು ಲೋಕಾಯುಕ್ತರೇ ಶಾಕ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಏಪ್ರಿಲ್ 15ರಂದು ಮಂಡ್ಯಕ್ಕೆ ಆಗಮಿಸಲಿರುವ ಮೋದಿ! ಆದಿಚುಂಚನಗಿರಿ ಮಠದಲ್ಲಿ ಗದ್ದಿಗೆ ಉದ್ಘಾಟನೆ

ಮಂಡ್ಯ, ಏಪ್ರಿಲ್ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಏಪ್ರಿಲ್ 15ರಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ನೂತನ ಗದ್ದಿಗೆ ಉದ್ಘಾಟಿಸಲಿರುವ ಅವರು, ನಂತರ ಕೇರಳಕ್ಕೆ ಪ್ರಯಾಣಿಸಲಿದ್ದಾರೆ.

ಮೋದಿಯ ಅಂದಿನ ದಿನಚರಿಯೇನು?

ಬೆಳಿಗ್ಗೆ ದೆಹಲಿಯಿಂದ ಹೊರಟು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್‌ಗೆ ಸುಮಾರು 10:50ಕ್ಕೆ ತಲುಪಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಮಠಕ್ಕೆ ತೆರಳಿ, ಬೆಳಗ್ಗೆ 11 ಗಂಟೆಗೆ ಮಾಜಿ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮಿ ಅವರ ನೂತನ ಗದ್ದಿಗೆ (ಮಂದಿರ) ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ BGS ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮರಳಿ ಅಲ್ಲಿಂದ ಕೇರಳಕ್ಕೆ ಪ್ರಯಾಣ ಮುಂದುವರಿಸಲಿದ್ದಾರೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಪ್ರಧಾನಿ ಭೇಟಿ ಹಿನ್ನೆಲೆ ಜಿಲ್ಲಾಧಿಕಾರಿ ಕುಮಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಭದ್ರತೆ, ಪ್ರೋಟೋಕಾಲ್ ಹಾಗೂ ಲಾಜಿಸ್ಟಿಕ್ಸ್ ವ್ಯವಸ್ಥೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗಿದೆ. ಕಾರ್ಯಕ್ರಮ ಸ್ಥಳದ ಸಮೀಪ ಮೂರು ಹೆಲಿಪ್ಯಾಡ್‌ಗಳ ನಿರ್ಮಾಣ, ವಿಶೇಷ ಗ್ರೀನ್ ರೂಂ ಸಿದ್ಧತೆ, ನಿರಂತರ ವಿದ್ಯುತ್ ಪೂರೈಕೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಎಸ್‌ಪಿ ವಿ.ಜೆ. ಶೋಭಾರಾಣಿ ಹಾಗೂ ಎಡಿಸಿ ಬಿ.ಸಿ. ಶಿವಾನಂದ ಮೂರ್ತಿ ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RCB ಪರ ಈವರೆಗೆ ಎಷ್ಟು ಆಟಗಾರರು ಆಡಿದ್ದಾರೆ ಗೊತ್ತಾ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ವೆಂಕಟೇಶ್ ಅಯ್ಯರ್ ಪಾದಾರ್ಪಣೆ ಮಾಡಿದ್ದಾರೆ. ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಮೂಲಕ ವೆಂಕಿ ಐಪಿಎಲ್​ನಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಈ ಮೂಲಕ ಆರ್​ಸಿಬಿ ಪರ ಕಣಕ್ಕಿಳಿದ 179ನೇ ಆಟಗಾರ ಎನಿಸಿಕೊಂಡಿದ್ದಾರೆ.

ಅಂದರೆ 19 ಸೀಸನ್‌ಗಳಲ್ಲಿ ಆರ್​ಸಿಬಿ ಪರ ಒಟ್ಟು 179 ಆಟಗಾರರು ಕೆಂಪು ಮತ್ತು ಕಪ್ಪು ಜರ್ಸಿಯನ್ನು ಧರಿಸಿ ಮೈದಾನಕ್ಕಿಳಿದಿದ್ದಾರೆ.  ಈ 179 ಆಟಗಾರರ ಪೈಕಿ ಆರ್​ಸಿಬಿ ಪರ ಅತ್ಯಧಿಕ ಪಂದ್ಯಗಳನ್ನಾಡಿದ ಆಟಗಾರ ವಿರಾಟ್ ಕೊಹ್ಲಿ.

2008ರಿಂದ 2026ರವರೆಗೆ, ಅಂದರೆ ಐಪಿಎಲ್ ಆರಂಭದಿಂದ ಇಂದಿನವರೆಗೆ ಒಂದೇ ತಂಡಕ್ಕಾಗಿ ಆಡುತ್ತಿರುವ ವಿಶ್ವದ ಏಕೈಕ ಆಟಗಾರ ಕಿಂಗ್ ಕೊಹ್ಲಿ.

ಅಂದರೆ ಆರ್​ಸಿಬಿ ಪರ ಕಣಕ್ಕಿಳಿದ ಎಲ್ಲಾ ಆಟಗಾರರೊಂದಿಗೆ ಕಾಣಿಸಿಕೊಂಡ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕೂಡ ವಿರಾಟ್ ಕೊಹ್ಲಿಗೆ ಸಲ್ಲುತ್ತದೆ.

ಆರ್​ಸಿಬಿ ಮೂರು ಯುಗ:

ಇನ್ನು ಆರ್​ಸಿಬಿ ಪರ ಆಡಿದ ಆಟಗಾರರನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು. ಇಲ್ಲಿ ಆರಂಭದಲ್ಲಿ ಕಾಣಿಸಿಕೊಂಡಿದ್ದು ದಿಗ್ಗಜರು ಎಂಬುದು ವಿಶೇಷ. ಆ ಆಟಗಾರೆಂದರೆ…

ದಿಗ್ಗಜರ ಯುಗ (2008 – 2010):

ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ, ಜಾಕ್ ಕಾಲಿಸ್, ಮಾರ್ಕ್ ಬೌಚರ್, ಡೇಲ್ ಸ್ಟೇಯ್ನ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ವಿನಯ್ ಕುಮಾರ್, ಪ್ರವೀಣ್ ಕುಮಾರ್, ರಾಸ್ ಟೇಲರ್, ಕೆವಿನ್ ಪೀಟರ್ಸನ್.

ಸುವರ್ಣ ಯುಗ (2011 – 2017):

ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಡೇನಿಯಲ್ ವೆಟ್ಟೋರಿ, ಮುತ್ತಯ್ಯ ಮುರಳೀಧರನ್, ತಿಲಕರತ್ನೆ ದಿಲ್ಶನ್, ರವಿ ರಾಂಪಾಲ್, ಮಿಚೆಲ್ ಸ್ಟಾರ್ಕ್, ಯಜುವೇಂದ್ರ ಚಹಲ್, ಸರ್ಫರಾಝ್ ಖಾನ್, ಎಸ್. ಅರವಿಂದ್, ಕೆ.ಎಲ್. ರಾಹುಲ್, ಶೇನ್ ವ್ಯಾಟ್ಸನ್.

ಮಧ್ಯಂತರ ಯುಗ (2018 – 2021):

ಕ್ವಿಂಟನ್ ಡಿ ಕಾಕ್, ಬ್ರೆಂಡನ್ ಮೆಕಲಮ್, ಮೊಯೀನ್ ಅಲಿ, ಪಾರ್ಥಿವ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ಮಾರ್ಕಸ್ ಸ್ಟೋಯಿನಿಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಕೈಲ್ ಜೇಮಿಸನ್.

ಇತ್ತೀಚಿನ ಯುಗ (2022 – 2025):

ಫಿಲ್ ಸಾಲ್ಟ್, ಫಾಫ್ ಡು ಪ್ಲೆಸಿಸ್, ಭುವನೇಶ್ವರ್ ಕುಮಾರ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಜೋಶ್ ಹೇಝಲ್‌ವುಡ್, ರಜತ್ ಪಾಟಿದಾರ್, ಮಹಿಪಾಲ್ ಲೋಮ್ರೋರ್, ಕ್ಯಾಮರೋನ್ ಗ್ರೀನ್, ವಿಲ್ ಜಾಕ್ಸ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಕಬ್ ಬೆಥೆಲ್.

ಹೊಸ ಯುಗ (2026-):

ಜೇಕಬ್ ಡಫಿ, ಅಭಿನಂದನ್ ಸಿಂಗ್ , ವೆಂಕಟೇಶ್ ಅಯ್ಯರ್.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 19 ಸೀಸನ್​ಗಳಲ್ಲಿ ಬರೋಬ್ಬರಿ 179 ಆಟಗಾರರು ಕಣಕ್ಕಿಳಿದಿದ್ದಾರೆ. ಈ 179 ಆಟಗಾರರಲ್ಲಿ ಟ್ರೋಫಿ ಎತ್ತಿ ಹಿಡಿದ ಆಟಗಾರರೆಂದರೆ…

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (2025): ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್​ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಝಲ್​ವುಡ್, ರಾಸಿಖ್ ಸಲಾಂ, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್​ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್​ಗಿಡಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ.

 

Source link

Exit mobile version