IND vs SL: ಶೇ. 82 ರಷ್ಟು ಮಳೆ..! ಗಾಲೆ ಟೆಸ್ಟ್ ಮೊದಲ ದಿನದಾಟ ನಡೆಯುವುದು ಅನುಮಾನ – Kannada News | Galle test india sri lanka match 1 pitch report rain threat

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 15 ರ ಶನಿವಾರ ಗಾಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂಬತ್ತು ವರ್ಷಗಳ ಬಳಿಕ ಶ್ರೀಲಂಕಾ ನೆಲದಲ್ಲಿ ಟೀಂ ಇಂಡಿಯಾ ಆಡುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಹೀಗಾಗಿ, ಬಹುತೇಕ ಇಡೀ ತಂಡಕ್ಕೆ ಈ ಪರಿಸ್ಥಿತಿಗಳ ಬಗ್ಗೆ ತಿಳಿದಿಲ್ಲ. ಪ್ರಸ್ತುತ ತಂಡದಲ್ಲಿರುವ ಮೂವರು ಆಟಗಾರರು ಮಾತ್ರ ಗಾಲೆಯಲ್ಲಿ ಟೆಸ್ಟ್ ಪಂದ್ಯ ಆಡಿದ್ದಾರೆ, ಆದರೆ ಕ್ಯಾಪ್ಟನ್ ಗಿಲ್ ಸೇರಿದಂತೆ ಅನೇಕ ಆಟಗಾರರು ಇಲ್ಲಿ ಏಕದಿನ ಅಥವಾ ಟಿ20 ಪಂದ್ಯಗಳನ್ನು ಆಡಿದ್ದಾರೆಯಾದರೂ ರೆಡ್-ಬಾಲ್ ಕ್ರಿಕೆಟ್ ಆಡಿಲ್ಲ. ಹೀಗಾಗಿ ಈ ಸವಾಲನ್ನು ಅನಾನುಭವಿ ಟೀಂ ಇಂಡಿಯಾ ಹೇಗೆ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ? ಪಿಚ್ ಯಾರಿಗೆ ಸಹಕರಿಸಲಿದೆ ಎಂಬುದನ್ನು ನೋಡೋಣ.

ಶೇ. 82 ರಷ್ಟು ಮಳೆ ಸಾಧ್ಯತೆ

ಪಂದ್ಯದ ದಿನದಂದು ಅಂದರೆ ಶನಿವಾರದಂದು ಗಾಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಅಕ್ಯೂವೆದರ್ ಪ್ರಕಾರ, ಹಗಲಿನಲ್ಲಿ ಮಳೆಯಾಗುವ ಸಾಧ್ಯತೆ ಶೇ. 82 ರಷ್ಟು ಇದೆ. ಪಂದ್ಯದ ದಿನದಂದು ಬೆಳಿಗ್ಗೆ 8 ಗಂಟೆಗೆ ಮಳೆಯಾಗುವ ಸಾಧ್ಯತೆ ಶೇ. 65 ರಷ್ಟು ಇದೆ. ಶುಕ್ರವಾರ ಸಂಜೆಯಿಂದ ಇಲ್ಲಿಯೂ ನಿರಂತರ ಮಳೆಯಾಗುವ ನಿರೀಕ್ಷೆಯಿದೆ. ಇದರರ್ಥ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಬಹುದು.

ಗಾಲೆ ಪಿಚ್ ವರದಿ

ಭಾರತವು ಈ ಹಿಂದೆ ಗಾಲೆಯಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಟೀಂ ಇಂಡಿಯಾ ಕೊನೆಯದಾಗಿ 2017 ರಲ್ಲಿ ಗಾಲೆಯಲ್ಲಿ ಆಡಿದ್ದು, 304 ರನ್‌ಗಳ ಬೃಹತ್ ಗೆಲುವು ದಾಖಲಿಸಿತ್ತು. ಇನ್ನು ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್​ನ ಇತ್ತೀಚಿನ ದಾಖಲೆಗಳ ಆಧಾರದ ಮೇಲೆ ಹೇಳುವುದಾದರೆ ಇಲ್ಲಿ ಬ್ಯಾಟ್ಸ್‌ಮನ್‌ಗಳು ಆರಂಭಿಕ ನೆರವು ಪಡೆಯಬಹುದು. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಬಹುದು. ಇದಲ್ಲದೆ, ಮೊದಲ ಎರಡು ದಿನಗಳಲ್ಲಿ ವೇಗದ ಬೌಲರ್‌ಗಳು ಈ ಪಿಚ್‌ನಲ್ಲಿ ಉತ್ತಮ ಬೌನ್ಸ್ ಪಡೆಯುತ್ತಾರೆ. ಇದರರ್ಥ ಈ ಮೈದಾನದಲ್ಲಿ ಬೌಲರ್​ಗಳು ಮೇಲುಗೈ ಸಾಧಿಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ವಿಮಾನ ನಿಲ್ದಾಣ, ಹೈಕೋರ್ಟ್, ಕೆಂಪುಕೋಟೆಗೆ ಬಾಂಬ್ ಬೆದರಿಕೆ! – Kannada News | Delhi airport, High Court and Red Fort gets bomb threats ahead of Independence Day

ನವದೆಹಲಿ, ಆಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆಗೆ (Independence Day) ಕೇವಲ ಒಂದು ದಿನ ಬಾಕಿ ಇರುವಾಗ, ಶುಕ್ರವಾರ ಸಾಲು ಸಾಲು ಬಾಂಬ್ ಬೆದರಿಕೆ ಕರೆಗಳಿಂದ ರಾಷ್ಟ್ರ ರಾಜಧಾನಿ ದೆಹಲಿ ಆತಂಕಕ್ಕೊಳಗಾಗಿದೆ. ದೆಹಲಿ ಕೆಂಪುಕೋಟೆ ಹಾಗೂ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಟರ್ಮಿನಲ್ 3 ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಥಳದಲ್ಲೂ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಇಮೇಲ್‌ನಲ್ಲಿ ದೆಹಲಿ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು, ಕೆಂಪುಕೋಟೆ ಹಾಗೂ ದೆಹಲಿಯ ರೈಲುಗಳನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೆ, ದೆಹಲಿಯನ್ನು ‘ಖಾಲಿಸ್ತಾನ್’ನ ಭಾಗವಾಗಿ ಮಾಡುವುದಾಗಿಯೂ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. “ಮಧ್ಯಾಹ್ನ 2:11ಕ್ಕೆ ದೆಹಲಿ ಹೈಕೋರ್ಟ್‌ನಲ್ಲಿ ಬಾಂಬ್ ಸ್ಫೋಟ” ಎಂದು ಇ-ಮೇಲ್​ನಲ್ಲಿ ಬರೆಯಲಾಗಿದ್ದು, 1984ರ ಸಿಖ್ ವಿರೋಧಿ ದಂಗೆ ಸೇರಿದಂತೆ ಸಿಖ್ಖರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ದೆಹಲಿ ಹೈಕೋರ್ಟ್ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೂಡ ಆರೋಪಿಸಲಾಗಿದೆ. ಇದನ್ನೇ ದಾಳಿಯ ಬೆದರಿಕೆಗೆ ಕಾರಣವೆಂದು ಬಿಂಬಿಸಲು ಯತ್ನಿಸಲಾಗಿದೆ.

ಇದನ್ನೂ ಓದಿ: Independence Day 2026: 79 ಅಥವಾ 80? ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕಾಚಾರದಲ್ಲಿ ನಿಮಗೂ ಗೊಂದಲವಿದೆಯೇ? ಇಲ್ಲಿದೆ ಸ್ಪಷ್ಟ ಉತ್ತರ!

ಬಾಂಬ್ ಬೆದರಿಕೆ ಬಂದ ಇತರ ಸ್ಥಳಗಳು:

ಇಮೇಲ್‌ನಲ್ಲಿ ಉಲ್ಲೇಖಿಸಲಾದ ಸ್ಥಳಗಳ ಜೊತೆಗೆ, ಜಾಮ್ ನಗರ ಹೌಸ್, ಜಂಡೇವಾಲನ್‌ನಲ್ಲಿರುವ FLATED ಕಟ್ಟಡ, ಎಂ.ಬಿ ಸಾಕೆಟ್‌ನಲ್ಲಿರುವ ಡಿಎಂ ಕಚೇರಿ, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ಮತ್ತು ದೆಹಲಿ ಕಾಂಟೋನ್ಮೆಂಟ್‌ನಲ್ಲಿರುವ ಎಸ್‌ಡಿಎಂ ಕಚೇರಿ ಸೇರಿದಂತೆ ಇತರೆ ಹಲವು ಸಂಸ್ಥೆಗಳಿಗೂ ಬಾಂಬ್ ಬೆದರಿಕೆ ಕರೆಗಳು ಬಂದಿವೆ.

ಬೆದರಿಕೆ ಬೆನ್ನಲ್ಲೇ ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿಯನ್ನು ಎಲ್ಲಾ ಸ್ಥಳಗಳಲ್ಲೂ ನಿಯೋಜಿಸಲಾಗಿದೆ. ಆದರೆ, ತನಿಖೆಯ ವೇಳೆ ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲನ್ನು ತೀವ್ರಗೊಳಿಸಿವೆ.

ಇದನ್ನೂ ಓದಿ: Independence Day 2026: ಭಾರತದಂತೆಯೇ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳಿವು

19 ಜನ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆ:

ಈ ವಾರದ ಆರಂಭದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು, ಖಾಲಿಸ್ತಾನಿ ಬೆಂಬಲಿತ ಗ್ರೂಪ್‌ಗಳು ಮತ್ತು ದಿಢೀರ್ ಪ್ರತಿಭಟನೆಗಳ ಬೆದರಿಕೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು. ಹೆಚ್ಚುವರಿ ಭದ್ರತಾ ಯೋಜನೆಯ ಭಾಗವಾಗಿ, ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಮತ್ತು ಖಾಲಿಸ್ತಾನಿ ಗುಂಪುಗಳಿಗೆ ಸೇರಿದ 19 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಫೋಟೋಗಳನ್ನು ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗಿತ್ತು.

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹಾಗೂ ಖಾಲಿಸ್ತಾನಿ ಶಕ್ತಿಗಳಿಂದ ಬೆದರಿಕೆ ಇರುವ ಬಗ್ಗೆ ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಚರಣೆಗೆ ಧಕ್ಕೆ ತರಬಹುದಾದ ತಡರಾತ್ರಿ ಅಥವಾ ದಿಢೀರ್ ಪ್ರತಿಭಟನೆಗಳ ಮೇಲೆಯೂ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಾತಂತ್ರ್ಯೋತ್ತರ ಎಂಟು ದಶಕದಲ್ಲಿ ಭಾರತದ ಪ್ರಮುಖ ಸಾಧನೆಗಳೇನು? ಒಂದು ನೋಟ – Kannada News | What India achieved in eight decades after getting Independence

ಭಾರತದ ಸ್ವಾತಂತ್ರ್ಯೋತ್ಸವImage Credit source: PTI

1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ (India Independence) ಭಾರತವು ಬಡತನ, ಅಕ್ಷರಸ್ಥರ ಕೊರತೆ ಮತ್ತು ಆಹಾರ ಧಾನ್ಯಗಳ ಅಭಾವ ಎದುರಿಸುತ್ತಿದ್ದ ದೇಶವಾಗಿತ್ತು. ಜನರ ಆರೋಗ್ಯ ಪರಿಸ್ಥಿತಿಯೂ ಕಳಪೆ ಇತ್ತು. ಬ್ರಿಟಿಷರು ಲೂಟಿ ಮಾಡಿ ಉಳಿದ ಆರ್ಥಿಕತೆಯನ್ನು ಇಟ್ಟುಕೊಂಡು ಭಾರತ ಅ, ಆ, ಇ, ಈ ಇಂದ ಆಟ ಆರಂಭಿಸಬೇಕಾಯಿತು. ಇವತ್ತು ಮಧ್ಯರಾತ್ರಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಬಿಟ್ಟುಕೊಟ್ಟು ಹೋಗಿ 79 ವರ್ಷ ಆಗಿದೆ. ಈ ಎಂಟು ದಶಕಗಳಲ್ಲಿ ಭಾರತವು ತಂತ್ರಜ್ಞಾನ, ಆರ್ಥಿಕತೆ, ಆರೋಗ್ಯ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ತಂತ್ರಜ್ಞಾನ ಮತ್ತು ಜಾಗತಿಕ ನಾಯಕತ್ವ

ಗೂಗಲ್ (ಸುಂದರ್ ಪಿಚೈ), ಮೈಕ್ರೋಸಾಫ್ಟ್ (ಸತ್ಯ ನಾಡೆಲ್ಲಾ), ಅಡೋಬ್ (ಶಂತನು ನಾರಾಯಣ್) ನಂತಹ ವಿಶ್ವದ ದೈತ್ಯ ತಂತ್ರಜ್ಞಾನ ಸಂಸ್ಥೆಗಳನ್ನು ಭಾರತೀಯ ಮೂಲದ ನಾಯಕರು ಮುನ್ನಡೆಸುತ್ತಿದ್ದಾರೆ.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ

  • UPI: ಜಗತ್ತಿನಲ್ಲೇ ಅತ್ಯಂತ ಯಶಸ್ವಿ ರಿಯಲ್-ಟೈಮ್ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ.
  • ಆಧಾರ್: ವಿಶ್ವದ ಅತಿ ದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದ್ದು, ನಕಲಿ ದಾಖಲೆ ತಡೆದು ಕೋಟ್ಯಂತರ ಜನರಿಗೆ ನೇರ ಸೌಲಭ್ಯ ಒದಗಿಸಲು ನೆರವಾಗಿದೆ.

ಆರ್ಥಿಕತೆ ಮತ್ತು ಜಿಡಿಪಿ ಜಿಗಿತ

ಸ್ವಾತಂತ್ರ್ಯ ಲಭಿಸಿದಾಗ ವಿಶ್ವದ ಆರ್ಥಿಕತೆಯಲ್ಲಿ ಭಾರತದ ಪಾಲು ಅತ್ಯಲ್ಪವಾಗಿತ್ತು. ಆದರೆ ಇಂದು ಭಾರತವು ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ 3ನೇ ಸ್ಥಾನಕ್ಕೇರುವ ಹಾದಿಯಲ್ಲಿದೆ.

1991ರ ಆರ್ಥಿಕ ಉದಾರೀಕರಣದ ನಂತರ ಭಾರತದ ಕೈಗಾರಿಕಾ, ಸೇವಾ ವಲಯ ಮತ್ತು ಉತ್ಪಾದನಾ ರಂಗದಲ್ಲಿ ಅಭೂತಪೂರ್ವ ಪ್ರಗತಿಯಾಗಿದೆ.

ಇದನ್ನೂ ಓದಿ: ಭಾರತದಲ್ಲೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ ತಯಾರಿಕೆಗೆ ಎಲ್‌&ಟಿ ಸಜ್ಜು; ಚೀನಾ ಪ್ರಾಬಲ್ಯಕ್ಕೆ ಸವಾಲು

ಭಾರತ ಮಾಡಿರುವ ಇನ್ನೂ ಕೆಲ ಸಾಧನೆಗಳು

  • ವಿಶ್ವದ ಔಷಧಾಗಾರ: ಕೈಗೆಟುಕುವ ಬೆಲೆಯ ಜೆನೆರಿಕ್ ಔಷಧಗಳು ಮತ್ತು ಲಸಿಕೆಗಳನ್ನು ಉತ್ಪಾದಿಸುವಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ವಿಶ್ವದ ಫಾರ್ಮಸಿ (Pharmacy of the World) ಎನಿಸಿದೆ.
  • ಆಯುಷ್ಯ ಏರಿಕೆ: 1947ರಲ್ಲಿ ಭಾರತೀಯರ ಸರಾಸರಿ ಆಯಸ್ಸು (Life Expectancy) ಕೇವಲ 32 ವರ್ಷಗಳಷ್ಟಿತ್ತು, ಆದರೆ ಇಂದು ಅದು 70 ವರ್ಷ ಮೀರಿದೆ.
  • ಪೋಲಿಯೋ ಮತ್ತು ಸಿಡಬು ನಿರ್ಮೂಲನೆ: ಸಾಂಕ್ರಾಮಿಕ ರೋಗಗಳನ್ನು ಯಶಸ್ವಿಯಾಗಿ ನಿಯಂತ್ರಿಸಿ ನಿರ್ಮೂಲನೆ ಮಾಡಲಾಗಿದೆ.
  • ಸಾಕ್ಷರತೆ ಮತ್ತು ಶಿಕ್ಷಣ: 1947ರಲ್ಲಿ ಭಾರತದ ಸಾಕ್ಷರತಾ ಪ್ರಮಾಣ (Literacy) ಕೇವಲ 12% ಇತ್ತು, ಆದರೆ ಇಂದು ಅದು 77% ಗೂ ಹೆಚ್ಚಾಗಿದೆ. ಐಐಟಿ (IIT), ಐಐಎಮ್ (IIM), ಮತ್ತು ಐಐಎಸ್‌ಸಿ (IISc) ನಂತಹ ವಿಶ್ವಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಜಾಗತಿಕ ಮಟ್ಟದ ಪ್ರತಿಭೆಗಳನ್ನು ದೇಶ ರೂಪಿಸಿದೆ.
  • ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಾಧನೆ: ಚಂದ್ರಯಾನ, ಮಂಗಳಯಾನ ಯೋಜನೆಗಳನ್ನು ಕೈಗೊಂಡಿದೆ. ಇತ್ತೀಚಿನ ಚಂದ್ರಯಾನ-3ರ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಚಂದ್ರನಲ್ಲಿ ಮನುಷ್ಯರನ್ನು ಕರೆದೊಯ್ಯುವುದು, ಸ್ವಂತ ಅಂತರಿಕ್ಷ ನಿಲ್ದಾಣ ನಿರ್ಮಿಸುವುದು ಇತ್ಯಾದಿ ಇನ್ನೂ ಗುರುತರ ಯೋಜನೆಗಳಿವೆ. ಹಾಗೆಯೇ, ಅತ್ಯಂತ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುವ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ.
  • ಹಸಿರು ಕ್ರಾಂತಿ: ಆಹಾರ ಧಾನ್ಯಗಳಿಗಾಗಿ ಇತರ ದೇಶಗಳನ್ನು ಅವಲಂಬಿಸಿದ್ದ ಭಾರತ, ಇಂದು ಆಹಾರ ಧಾನ್ಯಗಳನ್ನು ರಫ್ತು ಮಾಡುವ ಹಂತಕ್ಕೆ (Green Revolution) ಬೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಕೊಳ್ಳದಿದ್ದರೆ ಡಿವೋರ್ಸ್‌ ಆಗುತ್ತಿತ್ತು’: ಬ್ರೇಕಪ್ ಬಗ್ಗೆ ಅನುಪಮಾ ಮಾತು – Kannada News | Anupama Parameswaran reveals postponing Engagement Breakup with Narcissistic Ex Boyfriend

ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅವರು ತಮ್ಮ ವೈಯಕ್ತಿಕ ಜೀವನ ಹಾಗೂ ಇತ್ತೀಚಿನ ಬ್ರೇಕಪ್ (Breakup) ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಧನ್ಯಾ ವರ್ಮಾ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು ಪ್ರೀತಿಸಿದ ವ್ಯಕ್ತಿ ನಿಯಂತ್ರಣ ಸಾಧಿಸುವ ಸ್ವಭಾವದವನಾಗಿದ್ದ ಹಾಗೂ ಅತಿಯಾದ ಆತ್ಮರತಿ ಗುಣ ಹೊಂದಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೇವಲ ಮೂರೇ ತಿಂಗಳಲ್ಲಿ ನಿಶ್ಚಿತಾರ್ಥಕ್ಕೆ (Engagement) ಮುಂದಾಗಿದ್ದ ಆತನ ಪ್ರಸ್ತಾಪವನ್ನು ತಾವು ಮುಂದೂಡದೇ ಹೋಗಿದ್ದರೆ, ತಮ್ಮ ಜೀವನ ವಿಚ್ಛೇದನದಲ್ಲಿ ಅಂತ್ಯವಾಗುತ್ತಿತ್ತು ಎಂದು ಅನುಪಮಾ ನೋವು ಹಂಚಿಕೊಂಡಿದ್ದಾರೆ.

‘ಮೂರೇ ತಿಂಗಳಿಗೆ ಮದುವೆಗೆ ಆತುರ’

ತಮ್ಮ ಕಹಿ ಅನುಭವವನ್ನು ನೆನಪಿಸಿಕೊಂಡ ಅನುಪಮಾ, ‘ನಾವು ಪ್ರೀತಿ ಮಾಡಲು ಆರಂಭಿಸಿದ ಮೂರೇ ತಿಂಗಳಿಗೆ ಆತ ನಿಶ್ಚಿತಾರ್ಥದ ಮಾತು ಎತ್ತಿದ್ದ. ಮನೆಯವರನ್ನು ಭೇಟಿ ಮಾಡಿಸಿ, ಯಾವ ಜಾಗದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಬೇಕು ಎಂದು ಚರ್ಚಿಸಲು ಶುರು ಮಾಡಿದ್ದ. ಸಂಬಂಧ ಆರಂಭವಾದ ಮೂರೇ ತಿಂಗಳಿಗೆ ಇಷ್ಟೊಂದು ಆತುರ ಸರಿಯಲ್ಲ ಅನಿಸಿತು. ನನ್ನನ್ನು ಸಂಪೂರ್ಣವಾಗಿ ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಹಾಗೂ ನಟನೆಯಿಂದ ದೂರ ತಳ್ಳಲು ಈ ರೀತಿ ಆತುರಪಡುತ್ತಿದ್ದ’ ಎಂದು ಹೇಳಿದ್ದಾರೆ.

‘ಗೋಲ್ಡ್ ಡಿಗ್ಗರ್ ಎಂದವರಿಗೆ ಉತ್ತರ’

ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ ನಟಿ, ‘ನನ್ನನ್ನು ಗೋಲ್ಡ್ ಡಿಗ್ಗರ್ (ಹಣಕ್ಕಾಗಿ ಪ್ರೀತಿಸುವವಳು) ಎಂದು ಕಾಗೆಗಳಂತೆ ಕೂಗಾಡಿದವರಿಗೆ ಒಂದೇ ಮಾತು ಹೇಳಲು ಬಯಸುತ್ತೇನೆ. ಒಂದು ವೇಳೆ ನಾನು ಆ ನಿಶ್ಚಿತಾರ್ಥವನ್ನು ಮುಂದೂಡದೇ ಹೋಗಿದ್ದರೆ, ಇಂದು ನಮ್ಮ ಮದುವೆ ವಿಚ್ಛೇದನದಲ್ಲಿ ಮುಕ್ತಾಯವಾಗುತ್ತಿತ್ತು. ಅದು ಪ್ರೀತಿಯಾಗಿರಲಿಲ್ಲ, ಬದಲಿಗೆ ನನ್ನನ್ನು ನಿಯಂತ್ರಿಸುವ ಹತಾಶೆಯಾಗಿತ್ತು. ಈ ಮದುವೆ ಸರಿಯಲ್ಲ ಎಂಬ ಬಲವಾದ ಭಾವನೆ ನನಗಿತ್ತು’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರೀತಿಯ ಹೆಸರಿನಲ್ಲಿ ಮಾನಸಿಕ ಒತ್ತಡ:

ಸಂಬಂಧದಲ್ಲಿದ್ದಾಗ ತಮಗೆ ನೆಮ್ಮದಿ ಸಿಗಲೇ ಇಲ್ಲ ಎಂದು ಹೇಳಿದ ಅನುಪಮಾ, ‘ಆ ಸಂಬಂಧದಲ್ಲಿದ್ದಷ್ಟು ದಿನ ನನಗೆ ಶಾಂತಿ ಸಿಗಲಿಲ್ಲ. ಬದಲಿಗೆ ಯಾವಾಗಲೂ ಆತಂಕವೇ ಕಾಡುತ್ತಿತ್ತು. ನಮಗೆ ಇನ್ನೂ ವಯಸ್ಸಿದೆ, ಸ್ವಲ್ಪ ಸಮಯ ತಗೊಳ್ಳೋಣ ಅಂತ ನಾನು ಸದಾ ನಿಶ್ಚಿತಾರ್ಥವನ್ನು ಮುಂದೂಡುತ್ತಿದ್ದೆ’ ಎಂದಿದ್ದಾರೆ. ಈ ಸಂದರ್ಶನದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ಇದನ್ನೂ ಓದಿ: ಟಾಕ್ಸಿಕ್ ಸಂಬಂಧದ ಕಷ್ಟ ತೆರೆದಿಟ್ಟ ನಟಿ ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಅವರು ಸಂದರ್ಶನದಲ್ಲಿ ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ. ಕಳೆದ ಜುಲೈ ತಿಂಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ತಾವು ಕಂಟ್ರೋಲಿಂಗ್ ರಿಲೇಶನ್‌ಶಿಪ್‌ನಿಂದ ಹೊರಬಂದು ಚೇತರಿಸಿಕೊಳ್ಳುತ್ತಿರುವ ಬಗ್ಗೆ ಪೋಸ್ಟ್ ಮಾಡುತ್ತಿದ್ದರು. ಈ ಮೊದಲು ನಟ ಧ್ರುವ್ ವಿಕ್ರಮ್ ಜೊತೆ ಅವರು ಆಪ್ತವಾಗಿದ್ದರು ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ED ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬಯಲಿಗೆ: ಶಿವಾನಂದ ನೀಲಣ್ಣನವರ್ ಅರೆಸ್ಟ್ – Kannada News | Belagavi Shivam Associates Fraud Case: ED Arrests Shivananda Neelannavar; Explosive Details Emerge in Probe

ಶಿವಾನಂದ ನೀಲಣ್ಣನವರ್Image Credit source: tv9 kannada

ಬೆಂಗಳೂರು, ಆಗಸ್ಟ್​ 14: ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯಿಂದ ಹೂಡಿಕೆದಾರರಿಗೆ ವಂಚನೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. 2,110 ಕೋಟಿ ರೂ. ವಂಚನೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದೀಗ ಮಂಗಳೂರು ವಲಯ ಇಡಿ ಅಧಿಕಾರಿಗಳು ಶಿವಾನಂದ ಸಿದ್ದಪ್ಪ ನೀಲಣ್ಣನವರ್‌ನನ್ನು (Shivanand Neelannavar) ಬಂಧಿಸಿದ್ದಾರೆ (arrest). ಬಳಿಕ ಮಂಗಳೂರಿನ ವಿಶೇಷ ಇಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು 12 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇತ್ತೀಚೆಗೆ ಮಂಗಳೂರು ವಲಯ ಇಡಿ ಅಧಿಕಾರಿಗಳು ಶಿವಾನಂದಗೆ ಸೇರಿದ ವಿವಿಧ ಸ್ಥಳಗಳ ಮೇಳೆ ದಾಳಿ ಮಾಡಿದ್ದರು.

ಅಕ್ರಮವಾಗಿ 2,110 ಕೋಟಿ ರೂ ಸಂಗ್ರಹ

ಇಡಿ ನಡೆಸಿದ ತನಿಖೆಯಲ್ಲಿ ಶಿವಾನಂದ ಕಂಪನಿಯ ಹಣಕಾಸು ವ್ಯವಹಾರಗಳ ಪ್ರಮುಖ ವ್ಯಕ್ತಿಯಾಗಿದ್ದು, ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಗೋವಾ ಹಾಗೂ ಛತ್ತೀಸ್‌ಗಢ ರಾಜ್ಯಗಳಾದ್ಯಂತ ಪೋಂಜಿ ಶೈಲಿಯ ಸ್ಕೀಮ್‌ಗಳ ಮೂಲಕ ಸಾರ್ವಜನಿಕರಿಂದ ಅಕ್ರಮವಾಗಿ ಹೂಡಿಕೆ ಸಂಗ್ರಹಿಸಿರುವುದು ಪತ್ತೆಯಾಗಿದೆ. ಸಂಸ್ಥೆಯು ಒಟ್ಟು 2,110.97 ಕೋಟಿ ರೂ ಅಕ್ರಮವಾಗಿ ಸಂಗ್ರಹಿಸಿದ್ದು, ಕೇವಲ ಅತ್ಯಲ್ಪ ಭಾಗವನ್ನು ಮಾತ್ರ ಮರುಪಾವತಿಸಿದೆ.

ಇದನ್ನೂ ಓದಿ: ಶಿವಾನಂದ ನೀಲಣ್ಣನವರ್​​ ಕಳ್ಳಾಟ ಬಯಲು: ಶಿವಂ ಅಸೋಸಿಯೇಟ್ಸ್​ನಿಂದ 2,110 ಕೋಟಿ ವಂಚನೆ, ಇಡಿ ತನಿಖೆಯಲ್ಲಿ ಬಹಿರಂಗ

2019ರಿಂದಲೇ ಷೇರು ಮಾರುಕಟ್ಟೆಯಲ್ಲಿ ಸಂಸ್ಥೆಯು ತೀವ್ರ ನಷ್ಟ ಅನುಭವಿಸುತ್ತಿದ್ದರೂ, ಆ ನ್ಯೂನತೆಯನ್ನು ಮರೆಮಾಚಿ ಮಾರುಕಟ್ಟೆಯಲ್ಲಿ ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳಲು ಹೊಸ ಹೂಡಿಕೆದಾರರಿಂದ ಸಂಗ್ರಹಿಸಿದ ಠೇವಣಿ ಹಣವನ್ನು ಹಳೆಯ ಹೂಡಿಕೆದಾರರಿಗೆ ಬಡ್ಡಿ ನೀಡಲು ಬಳಸಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ.

ಅಕ್ರಮ ಹಣದಿಂದ ಐಷಾರಾಮಿ ಜೀವನ 

ಹೂಡಿಕೆದಾರರ ಈ ಅಕ್ರಮ ಬಂಡವಾಳವನ್ನು ಆರೋಪಿಗಳು ವೈಯಕ್ತಿಕ ಐಷಾರಾಮಿ ವಾಹನಗಳ ಖರೀದಿ, ಭವ್ಯ ಬಂಗಲೆಗಳ ನಿರ್ಮಾಣ, ಪಾಲುದಾರರ ಹೆಸರಿನಲ್ಲಿ ಸ್ಥಿರಾಸ್ತಿ ಖರೀದಿ ಹಾಗೂ ಚಲನಚಿತ್ರ ನಿರ್ಮಾಣಗಳಿಗೆ ಅಕ್ರಮವಾಗಿ ವರ್ಗಾಯಿಸಿ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಎಲ್ಲಾ ದುರುಪಯೋಗದ ಹಣವನ್ನು ಅಪರಾಧದ ಆದಾಯ ಎಂದು ಪರಿಗಣಿಸಿರುವ ಇಡಿ, ಪ್ರಕರಣದ ಕುರಿತು ತೀವ್ರ ತನಿಖೆ ಮುಂದುವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SL: ಟಿಕೆಟ್ ಖರೀದಿಸಬೇಕಿಲ್ಲ; ಅಭಿಮಾನಿಗಳಿಗೆ ಉಚಿತ ಪ್ರವೇಶ – Kannada News | India vs Sri Lanka Test Series: Free Entry for Fans in Galle and Colombo!

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಗಾಲೆಯಲ್ಲಿ ನಡೆದರೆ, ಎರಡನೇ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವ ಸಲುವಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಿದೆ. ಅಂದರೆ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರು ಯಾವುದೇ ಟಿಕೆಟ್ ಖರೀದಿಸುವ ಅಗತ್ಯವಿರುವುದಿಲ್ಲ.

ಮೇಲೆ ಹೇಳಿದಂತೆ ಭಾರತ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯ ಮೊದಲ ಪಂದ್ಯ ಗಾಲೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಆಗಸ್ಟ್ 15 ರಿಂದ ಆಗಸ್ಟ್ 19 ರವರೆಗೆ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23 ರಿಂದ ಆಗಸ್ಟ್ 27 ರವರೆಗೆ ಕೊಲಂಬೊದ ಆರ್ ಎಸ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುಮಾರು ನಾಲ್ಕೂವರೆ ವರ್ಷಗಳ ನಂತರ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಸರಣಿ ಇದಾಗಿದ್ದು, 2017 ರ ನಂತರ ಶ್ರೀಲಂಕಾ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವಾಗಿದೆ.

ಪ್ರೇಕ್ಷಕರಿಗೆ ಉಚಿತ ಪ್ರವೇಶ

ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ಶ್ರೀಲಂಕಾ ಮತ್ತು ಭಾರತ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಪ್ರೇಕ್ಷಕರಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ವಿಶ್ವ ದರ್ಜೆಯ ಟೆಸ್ಟ್ ಕ್ರಿಕೆಟ್ ಅನ್ನು ವೀಕ್ಷಿಸಲು ಉತ್ತಮ ಅವಕಾಶವನ್ನು ನೀಡುತ್ತದೆ. ಹೀಗಾಗಿ ಈ ಉಪಕ್ರಮದ ಲಾಭವನ್ನು ಪಡೆಯಲು ಮತ್ತು ಶ್ರೀಲಂಕಾ ಮತ್ತು ಭಾರತ ನಡುವಿನ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನ ರೋಮಾಂಚನವನ್ನು ಅನುಭವಿಸಲು ದೇಶಾದ್ಯಂತದ ಕ್ರಿಕೆಟ್ ಅಭಿಮಾನಿಗಳು, ಯುವ ಉದಯೋನ್ಮುಖ ಕ್ರಿಕೆಟಿಗರು, ಕುಟುಂಬಗಳು ಮತ್ತು ಕ್ರೀಡಾ ಉತ್ಸಾಹಿಗಳನ್ನು ಶ್ರೀಲಂಕಾ ಕ್ರಿಕೆಟ್ ಆಹ್ವಾನಿಸುತ್ತದೆ’ ಎಂದಿದೆ.

IND vs SL: ಭಾರತ- ಲಂಕಾ ಮೊದಲ ಟೆಸ್ಟ್ ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಯಾವಾಗ ಆರಂಭ?

ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯ

ಕಳೆದ ಕೆಲವು ವರ್ಷಗಳಿಂದ ಶ್ರೀಲಂಕಾದಲ್ಲಿ ಟೆಸ್ಟ್ ಕ್ರಿಕೆಟ್ ಪ್ರೇಕ್ಷಕರನ್ನು ಆಕರ್ಷಿಸಲು ಕಷ್ಟಪಡುತ್ತಿದೆ. ಟೀಂ ಇಂಡಿಯಾ ಈ ಹಿಂದೆಯೂ ಸಹ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಡಿತ್ತು. ಹೀಗಾಗಿ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಭಾರತ ಮತ್ತು ಶ್ರೀಲಂಕಾ ನಡುವೆ ಕೇವಲ ಎರಡು ಟೆಸ್ಟ್ ಪಂದ್ಯಗಳು ನಡೆಯುವುದರಿಂದ ಟೀಂ ಇಂಡಿಯಾ ಮತ್ತೆ ಆಡುವುದನ್ನು ನೋಡಲು ಅಭಿಮಾನಿಗಳು ಸಾಕಷ್ಟು ಸಮಯ ಕಾಯಬೇಕಾಗುತ್ತದೆ. ಆದ್ದರಿಂದ ಉಭಯ ದೇಶಗಳ ಅಭಿಮಾನಿಗಳು ಕ್ರೀಡಾಂಗಣದಲ್ಲಿ ತಮ್ಮ ತಂಡಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:00 pm, Fri, 14 August 26

Source link

KSRTC, BMTC-NWKSRTC, KKRTC ಸಂಕಷ್ಟದಲ್ಲಿ: ಶಕ್ತಿ ಯೋಜನೆಯ ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಪತ್ರ – Kannada News | Transport corporations Letter To Karnataka Government For release RS 5418 crore Shakti scheme reimbursement pending

ಬೆಂಗಳೂರು, (ಆಗಸ್ಟ್ 14): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (KKRTC) ಸಂಸ್ಥೆಗಳು ನಷ್ಟದಲ್ಲಿದೆ. ಕಳೆದ 5 ವರ್ಷಗಳಿಗೆ ಹೋಲಿಕೆ ಮಾಡಿದರೆ ಶಕ್ತಿ ಯೋಜನೆಯಿಂದಾಗಿ (Karnataka Shakathi Scheme) ನಿಗಮಗಳು ಮತ್ತಷ್ಟು ನಷ್ಟ ಅನುಭವಿಸುತ್ತಿವೆ. ಸಿಬ್ಬಂದಿಗೆ ಸಂಬಳ ನೀಡಲು ಸಹ ಹಣವಿಲ್ಲದಂತಾಗಿದೆ. ಹೀಗಾಗಿ ಶಕ್ತಿ ಯೋಜನೆಯ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ನಾಲ್ಕು ನಿಗಮಗಳ ಎಂಡಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 11.06.2023 ರಿಂದ 30.06.2026 ರವರೆಗೆ ಬರೋಬ್ಬರಿ 5,418 ಕೋಟಿ ರೂ. ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕೆಎಸ್​​​ಆರ್​​​ಟಿಸಿಯ ಅತಿ ಹೆಚ್ಚು ಹಣ ಬಾಕಿ

ಯಾವ್ಯಾವ ನಿಗಮಗಳಿಗೆ ಎಷ್ಟೆಷ್ಟು ಬಾಕಿ ಇದೆ ಎನ್ನುವುದನ್ನು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಇದರ ಪ್ರಕಾರ, ಅತೀ ಹೆಚ್ಚಿನ ಬಾಕಿ ಹಣವನ್ನು ಕೆಎಸ್ಆರ್ಟಿಸಿಗೆ ಸರ್ಕಾರ ಕೊಡಬೇಕಿದೆ. ಕೆಎಸ್ ಆರ್ ಟಿಸಿಗೆ ಬರೋಬ್ಬರಿ 2,943 ಕೋಟಿ ರೂಪಾಯಿ ಬಾಕಿ ಹಣವನ್ನು ರಾಜ್ಯ ಸರ್ಕಾರ ಕೊಡಬೇಕಿದೆ.

ಬಿಡಿ ಭಾಗಗಗಳ ಖರೀದಿಗೂ ಬಿಎಂಟಿಸಿ ಬಳಿ ಹಣವಿಲ್ಲ

ಶಕ್ತಿ ಯೋಜನೆಯ ಬಾಕಿ ಬಿಡುಗಡೆ ಮಾಡದ್ದರಿಂದ ಸಾರಿಗೆ ನಿಗಮಗಳು ತೀವ್ರವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ ಬಳಿ ಸಮಾನು ಖರೀದಿಸಲು ಸಹ ಹಣವಿಲ್ಲ. ನಾಲ್ಕು ವರ್ಷಗಳ ಅವಧಿಯಲ್ಲಿ ಬಿಎಂಟಿಸಿಗೆ ಸರ್ಕಾರ ಬರೋಬ್ಬರಿ 1,019 ಕೋಟಿ ರೂ.ಬಾಕಿ ಹಣ ನೀಡಬೇಕಿದೆ. ಹೀಗಾಗಿ ಸ್ಪೇರ್ ಪಾರ್ಟ್ಸ್ ಖರೀದಿ ಮಾಡಲು ಬಿಎಂಟಿಸಿ ಬಳಿ ಹಣವಿಲ್ಲ. ಸಾರಿಗೆ ನೌಕರಿಗೆ ಬಿಡುಗಡೆ ಮಾಡಬೇಕಿರುವ ವೇತನ ಹಿಂಬಾಕಿ 821 ಕೋಟಿ ರೂ. ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. 2023-24 ರಲ್ಲಿ 205 ಕೋಟಿ ರೂ., 2024-25ರಲ್ಲಿ 194 ಕೋಟಿ ರೂ. 2025-26ರಲ್ಲಿ 496 ಕೋಟಿ ರೂ. ಹಾಗೂ 2026-27ರಲ್ಲಿ 122 ಕೋಟಿ ರೂ. ಬಾಕಿ ಹಣವನ್ನು ಸರ್ಕಾರ ನೀಡಬೇಕಿದೆ.

ಯಾವ ನಿಗಮದ ಎಷ್ಟು ಹಣ ಬಾಕಿ?

ರಾಜ್ಯ ಸರ್ಕಾರ, ಯಾವ ನಿಗಮಕ್ಕೆ ಎಷ್ಟು ಬಾಕಿ ಹಣ ನೀಡಬೇಕು ಎನ್ನುವುದನ್ನು ನೋಡುವುದಾರೆ, ಕೆಎಸ್​​ಆರ್​​​ಸಿಗೆ ಅತಿ ಹೆಚ್ಚು.  ಕೆಎಸ್​​​ಆರ್​​​ಟಿಸಿ- 2,943 ಕೋಟಿ ರೂಪಾಯಿ,  ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 999 ಕೋಟಿ ರೂ., ಬಿಎಂಟಿಸಿ ಗೆ 1,019 ಕೋಟಿ ರೂ., ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 1306 ಕೋಟಿ ರೂಪಾಯಿ ಬಾಕಿ ಇದೆ.

ಇನ್ನು ಈ ಬಗ್ಗೆ ಸಾರಿಗೆ ಸಚಿವ ಭೈರತಿ ಸುರೇಶ್ ಪ್ರತಿಕ್ರಿಯಿಸಿದ್ದು, ಸರ್ಕಾರಕ್ಕೆ ನಾವು ಈಗಾಗಲೇ ಹಣವನ್ನು ಕೇಳಿದ್ದೇವೆ. ಹಂತ ಹಂತವಾಗಿ ನಿಗಮಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದ್ದು, ಬಿಡುಗಡೆ ಮಾಡುತ್ತೆ. ಇನ್ನು ಇವಿ ಬಸ್ ಕ್ಯಾನ್ಸಲ್ ಆಗೋದಿಲ್ಲ. ಈಗಾಗಲೇ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇವೆ. ಮುಂದಿನ ಕ್ಯಾಬಿನೆಟ್ ನಲ್ಲಿ 4500 ಎಲೆಕ್ಟ್ರಿಕ್ ಬಸ್ಸುಗಳನ್ನು ತೆಗೆದುಕೊಳ್ಳಲು ಅನುಮತಿ ಸಿಗಲಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

13,000 ಕೋಟಿ ಡ್ರಗ್ಸ್ ಪ್ರಕರಣದ ಕಿಂಗ್‌ಪಿನ್ ವೀರೇಂದ್ರ ಸಿಂಗ್ ಭಾರತಕ್ಕೆ ಹಸ್ತಾಂತರ – Kannada News | Rs 13,000 Crore Drug Case Kingpin Extradited To India from UAE Amit Shah stresses ruthless approach

ನವದೆಹಲಿ, ಆಗಸ್ಟ್ 14: ಸುಮಾರು 13,000 ಕೋಟಿ ರೂ. ಮೌಲ್ಯದ ಭಾರಿ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕಿಂಗ್‌ಪಿನ್ ವೀರೇಂದ್ರ ಸಿಂಗ್ ಬಸೋಯಾ (Virender Singh Basoya) ಎಂಬ ವ್ಯಕ್ತಿಯನ್ನು ಯುಎಇಯಿಂದ ಭಾರತಕ್ಕೆ ಕರೆತರಲಾಗಿದ್ದು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಆತನನ್ನು ವಶಕ್ಕೆ ಪಡೆದುಕೊಂಡಿದೆ. ಎನ್​ಸಿಬಿ ಮನವಿಯ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ್ದ ‘ರೆಡ್ ಕಾರ್ನರ್ ನೋಟಿಸ್’ ಆಧಾರದ ಮೇಲೆ ಈ ವರ್ಷದ ಜೂನ್ ತಿಂಗಳಲ್ಲಿ ಬಸೋಯಾನನ್ನು ಯುಎಇಯಲ್ಲಿ ಬಂಧಿಸಲಾಗಿತ್ತು.

ವೀರೇಂದ್ರ ಬಸೋಯಾ ಅವರನ್ನು ದುಬೈನಿಂದ ಏರ್ ಇಂಡಿಯಾ ವಿಮಾನ ಸಂಖ್ಯೆ 4310ರಲ್ಲಿ ಕರೆತರಲಾಯಿತು. ಪುಣೆಯಲ್ಲಿ ನಡೆದ 6,000 ಕೋಟಿ ರೂ. ಡ್ರಗ್ಸ್ ಪ್ರಕರಣದಲ್ಲಿ ಬಸೋಯಾ ಆರೋಪಿಯಾಗಿದ್ದರು. ವೀರೇಂದ್ರ ಬಸೋಯಾ ವಿರುದ್ಧ NCB ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಅವರನ್ನು ದುಬೈನಲ್ಲಿ ಬಂಧಿಸಲಾಯಿತು. ಭಾರತ ಸರ್ಕಾರದ ಉಪಕ್ರಮದ ಮೇರೆಗೆ ಬಸೋಯಾ ಅವರನ್ನು ಗಡೀಪಾರು ಮಾಡಲಾಯಿತು. ವೀರೇಂದ್ರ ಬಸೋಯಾ ದೆಹಲಿ ಪೊಲೀಸರ 13,000 ಮಾದಕ ವಸ್ತು ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಸಂದೀಪ್ ಧುನಿಯಾ ಅವರ ಆಪ್ತ. ಸಂದೀಪ್ ಧುನಿಯಾ ದುಬೈನಿಂದ ಪಾಕಿಸ್ತಾನಕ್ಕೆ ಪರಾರಿಯಾಗುವಲ್ಲಿ ಯಶಸ್ವಿಯಾದರು. ಇದು ಮಾದಕ ವಸ್ತುಗಳ ವಿರುದ್ಧ ಭಾರತ ಸರ್ಕಾರಕ್ಕೆ ಸಿಕ್ಕ ಪ್ರಮುಖ ಯಶಸ್ಸು ಎಂದು ಪರಿಗಣಿಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ಎನ್‌ಸಿಬಿ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ; ಬರೋಬ್ಬರಿ 50 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ!

ಎನ್‌ಸಿಬಿ ದಾಖಲೆಗಳ ಪ್ರಕಾರ, ಆರೋಪಿಯು ಪ್ರಮುಖ ಅಕ್ರಮ ಮಾದಕವಸ್ತು ಕಳ್ಳಸಾಗಣೆ ಜಾಲದೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಲಂಡನ್‌ಗೆ ಮೆಫೆಡ್ರೋನ್ ಸರಕನ್ನು ಕಳುಹಿಸುವ ಸಂಚಿನಲ್ಲಿ ಆತ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ, ಪುಣೆ ಪೊಲೀಸರು ಫೆಬ್ರವರಿ 21, 2024ರಂದು ದೆಹಲಿಯಲ್ಲಿ ದಿವೇಶ್ ಚರಣ್‌ಜೀತ್ ಭೂತಾನಿ ಮತ್ತು ಸಂದೀಪ್‌ಕುಮಾರ್ ರಾಜ್‌ಪಾಲ್ ಬಸೋಯಾ ಅವರನ್ನು ಬಂಧಿಸಿದರು. ಅವರ ಬಳಿಯಿಂದ ಸುಮಾರು 970 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಯಿತು.

ತನಿಖೆಯ ಪ್ರಕಾರ, ವಶಪಡಿಸಿಕೊಂಡ ಈ ದೊಡ್ಡ ಪ್ರಮಾಣದ ಗಾಂಜಾ ಲಂಡನ್‌ಗೆ ತಲುಪಬೇಕಿತ್ತು. ಈ ಸರಕನ್ನು ಡೆಲ್ಟಾ ಲಾಜಿಸ್ಟಿಕ್ಸ್ ಮೂಲಕ ಕಳುಹಿಸಲು ಯೋಜಿಸಲಾಗಿತ್ತು. ದಿವೇಶ್ ಚರಂಜಿತ್ ಭೂತಾನಿ ಮತ್ತು ಸಂದೀಪ್‌ಕುಮಾರ್ ರಾಜ್‌ಪಾಲ್ ಬೈಸೋಯಾ ಅವರು ವೀರೇಂದ್ರ ಸಿಂಗ್ ಬಸೋಯಾ ಅವರ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ಏರ್ ಇಂಡಿಯಾದ ಎಲ್ಲ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ

ವೀರೇಂದ್ರ ಸಿಂಗ್ ಬಸೋಯಾ ಮಾದಕ ವಸ್ತುಗಳ ಸಂಪೂರ್ಣ ಪೂರೈಕೆ ಮತ್ತು ವಿದೇಶಗಳಿಗೆ ಅವುಗಳ ಸಾಗಣೆಗೆ ವ್ಯವಸ್ಥೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತೋರಿಸಲಾಗಿದೆ. ಈ ಪ್ರಕರಣದಲ್ಲಿ ಡೆಲ್ಟಾ ಲಾಜಿಸ್ಟಿಕ್ಸ್ ಮಾಲೀಕ ಸಂದೀಪ್ ಹನುಮಾನ್ ಸಿಂಗ್ ಯಾದವ್ ಮತ್ತು ಕಂಪನಿಯ ವ್ಯವಸ್ಥಾಪಕ ದೇವೇಂದ್ರ ರಾಮ್‌ಫುಲ್ ಯಾದವ್ ಅವರನ್ನು ಫೆಬ್ರವರಿ 21, 2024ರಂದು ಬಂಧಿಸಲಾಯಿತು.

ತನಿಖಾ ಸಂಸ್ಥೆಗಳ ಪ್ರಕಾರ, ಇಡೀ ಜಾಲವು ಲಾಜಿಸ್ಟಿಕ್ಸ್ ಮತ್ತು ಕನ್ಸೈನ್‌ಮೆಂಟ್ ವ್ಯವಸ್ಥೆಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದ ಗಾಂಜಾವನ್ನು ದೇಶದಿಂದ ಹೊರಗೆ ಸಾಗಿಸುತ್ತಿತ್ತು. 970 ಕೆಜಿ ಗಾಂಜಾ ವಶಪಡಿಸಿಕೊಳ್ಳುವಿಕೆಯು ಈ ಜಾಲದ ತೀವ್ರತೆಯನ್ನು ತೋರಿಸುತ್ತದೆ. ಪ್ರಸ್ತುತ ವಿದೇಶದಲ್ಲಿರುವ ವೀರೇಂದ್ರ ಬಸೋಯಾ ಅವರ ಮಗ ರಿಷಭ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Spiritual Wisdom: ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಏಕೆ? – Kannada News | Why not speak ill of the dead spiritual wisdom for inner peace and humanity

ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು

ಮೃತ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂಬುದು ನಮ್ಮ ಹಿರಿಯರು ಮತ್ತು ಆಧ್ಯಾತ್ಮಿಕ ಪರಂಪರೆಗಳಿಂದ ಬಂದಿರುವ ಪ್ರಮುಖ ಜೀವನ ಮೌಲ್ಯಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿ ಬದುಕಿದ್ದಾಗ ನಮಗೆ ಎಷ್ಟೇ ನೋವು ಅಥವಾ ಅನ್ಯಾಯ ಮಾಡಿದ್ದರೂ, ಅವರ ಮರಣದ ನಂತರ ಅವರ ತಪ್ಪುಗಳನ್ನು ಪದೇಪದೇ ನೆನಪಿಸುವ ಬದಲು ಅವರ ಒಳ್ಳೆಯ ಗುಣಗಳನ್ನು ಸ್ಮರಿಸುವುದು ಮಾನವೀಯತೆಯ ಸಂಕೇತ.

ಸಾವು ಜೀವನದ ಅಂತ್ಯವಲ್ಲ ಎಂಬ ನಂಬಿಕೆ:

ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಸಾವು ಎಂದರೆ ಜೀವನದ ಸಂಪೂರ್ಣ ಅಂತ್ಯವಲ್ಲ. ಆತ್ಮವು ತನ್ನ ಮುಂದಿನ ಪಯಣವನ್ನು ಮುಂದುವರಿಸುವ ಒಂದು ಹಂತ ಎಂಬ ನಂಬಿಕೆ ಇದೆ. ಹೀಗಾಗಿ ಮೃತರನ್ನು ಗೌರವದಿಂದ ಸ್ಮರಿಸುವುದು ಮತ್ತು ಅವರ ಬಗ್ಗೆ ಅಪಮಾನಕರ ಮಾತುಗಳನ್ನು ಆಡದಿರುವುದು ಧಾರ್ಮಿಕ ಹಾಗೂ ಮಾನವೀಯ ಮೌಲ್ಯವಾಗಿ ಪರಿಗಣಿಸಲಾಗಿದೆ.

ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ:

ಮೃತ ವ್ಯಕ್ತಿಯ ಮೇಲಿನ ಕೋಪ, ದ್ವೇಷ ಮತ್ತು ಅಸಮಾಧಾನವನ್ನು ಮುಂದುವರಿಸಿಕೊಂಡು ಹೋಗುವುದರಿಂದ ಅವರಿಗಿಂತ ಹೆಚ್ಚಾಗಿ ನಮ್ಮ ಮನಸ್ಸಿನ ಮೇಲೆಯೇ ಪರಿಣಾಮ ಬೀರುತ್ತದೆ. ಹಳೆಯ ನೋವುಗಳನ್ನು ಪದೇಪದೇ ನೆನಪಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಕಡಿಮೆಯಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ಮಹಾಭಾರತದ ಸಂದೇಶ:

ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮನು ಧರ್ಮ, ಕ್ಷಮೆ ಮತ್ತು ಸಂಯಮದಂತಹ ಮೌಲ್ಯಗಳಿಗೆ ಮಹತ್ವ ನೀಡುತ್ತಾನೆ. ಮೃತ ವ್ಯಕ್ತಿಯನ್ನು ಅವಮಾನಿಸುವುದರಿಂದ ಅವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ, ಅಂತಹ ಮಾತುಗಳು ನಮ್ಮೊಳಗಿನ ಕೋಪ ಮತ್ತು ನಕಾರಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಬಹುದು.

ಅವರ ಆತ್ಮಕ್ಕೆ ಶಾಂತಿ ಸಿಗಲಿ:

ಹಿಂದಿನ ನೋವನ್ನು ಸಂಪೂರ್ಣವಾಗಿ ಮರೆಯುವುದು ಯಾವಾಗಲೂ ಸಾಧ್ಯವಾಗದಿದ್ದರೂ, ಅದನ್ನು ದ್ವೇಷವಾಗಿ ಮುಂದುವರಿಸದಿರುವುದು ಮುಖ್ಯ. “ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ; ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿ” ಎಂಬ ಹಿರಿಯರ ಮಾತಿನ ಹಿಂದೆ ಇದೇ ಜೀವನದ ಸಂದೇಶ ಅಡಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ವುಡ್ ಯು ರಾದರ್’ ವಿವಾದ, ಸಮಯ್ ರೈನಾ, ರಣ್ವೀರ್ ವಿರುದ್ಧದ ಎಲ್ಲ ಎಫ್​​ಐಆರ್ ರದ್ದು – Kannada News | Supreme Court quashes all FIR against Samay Raina and Ranveer Alhabadia

ಸಮಯ್ ರೈನಾ (Samay Raina) ನಡೆಸಿಕೊಡುತ್ತಿದ್ದ ಜನಪ್ರಿಯ ಯೂಟ್ಯೂಬ್ ಶೋ, ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಮೊದಲ ಸೀಸನ್​​ನಲ್ಲಿ ಪಾಡ್​​ಕಾಸ್ಟರ್ ರಣ್ವೀರ್ ಅಲ್ಹಾಬಾದಿಯಾ ಅತಿಥಿಯಾಗಿ ಬಂದಾಗ ಆಡಿದ್ದ ಅತ್ಯಂತ ಅಶ್ಲೀಲ ಮಾತಿನಿಂದಾಗಿ ಸಮಯ್ ರೈನಾ, ರಣ್ವೀರ್ ಅಲ್ಹಾಬಾದಿಯಾ ಸೇರಿದಂತೆ ಹಲವರ ವಿರುದ್ಧ ದೂರುಗಳು ದಾಖಲಾಗಿದ್ದವು. ವಿಶೇಷವಾಗಿ ಸಮಯ್ ರೈನಾ ಮತ್ತು ರಣ್ವೀರ್ ಅಲ್ಹಾಬಾದಿಯಾ ವಿರುದ್ಧ ಹಲವು ಕಡೆ ಎಫ್​​ಐಆರ್​​ಗಳು ದಾಖಲಾಗಿದ್ದವು. ಅದೇ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಲ್ಲಿ ಅಂಗವಿಕಲರ ಕುರಿತು ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಕ್ಕೂ ಸಹ ಎಫ್​​ಐಆರ್ ದಾಖಲಾಗಿತ್ತು. ಇದೀಗ ಎಲ್ಲ ಎಫ್​​ಐಆರ್​​ಗಳನ್ನು ರದ್ದು ಮಾಡಲಾಗಿದೆ.

ವಿವಾದದ ಬಳಿಕ ಸಮಯ್ ರೈನಾ ಮತ್ತು ರಣ್ವೀರ್ ವಿರುದ್ಧ ಹಲವು ರಾಜ್ಯಗಳಲ್ಲಿ ದೂರುಗಳು ದಾಖಲಾಗಿದ್ದವು. ಅದರಂತೆ ಎಫ್​​ಐಆರ್ ಸಹ ದಾಖಲಾಗಿತ್ತು. ಸಮಯ್ ರೈನಾ ಮತ್ತು ರಣ್ವೀರ್ ಅಲ್ಹಾಬಾದಿಯಾ ಅವರನ್ನು ಮುಂಬೈ ಪೊಲೀಸರು ವಿಚಾರಣೆ ಸಹ ನಡೆಸಿದ್ದರು. ಅವರನ್ನು ಮಾತ್ರವೇ ಅಲ್ಲದೆ, ‘ಇಂಡಿಯಾ ಗಾಟ್ ಲೇಟೆಂಟ್’ಶೋನ ಆ ನಿಗದಿತ ಎಪಿಸೋಡ್​​ನಲ್ಲಿ ಭಾಗಿ ಆಗಿದ್ದ ಪ್ರೇಕ್ಷಕರನ್ನು ಸಹ ವಿಚಾರಣೆ ಮಾಡಲಾಗಿತ್ತು. ಶೋಗೆ ಅದಕ್ಕೆ ಮುಂಚೆ ಅತಿಥಿಗಳಾಗಿ ಹೋಗಿದ್ದವರನ್ನು ಸಹ ವಿಚಾರಣೆ ಮಾಡಲಾಗಿತ್ತು.

ನಂತರ ರಣ್ವೀರ್ ಅಲಹಾಬಾದಿಯಾ ಹಾಗೂ ಸಮಯ್ ರೈನಾ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿ, ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಒಂದೆಡೆ ಸೇರಿಸುವಂತೆ ಮತ್ತು ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿದ್ದರು. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಅವರ ಹೇಳಿಕೆಗಳನ್ನು ಬಲವಾಗಿ ಟೀಕಿಸಿತು ಮತ್ತು ಇಬ್ಬರಿಗೂ ದಂಡವನ್ನು ಸಹ ಹೇರಿತು ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ಕೆಲಸ ಮಾಡುವಂತೆ ಸಮಯ್​​ ರೈನಾಗೆ ಆದೇಶಿಸಿತ್ತು.

ಇದನ್ನೂ ಓದಿ:ಆಲಿಯಾ ಮೇಲೆ ಪ್ರೀತಿ, ‘ಆಲ್ಫಾ’ ನೋಡಲು ಇಡೀ ಚಿತ್ರಮಂದಿರ ಬುಕ್ ಮಾಡಿದ ಸಮಯ್ ರೈನಾ

ಇದೀಗ ಸುಪ್ರೀಂಕೋರ್ಟ್, ಶುಕ್ರವಾರ ನೀಡಿದ ಆದೇಶದಲ್ಲಿ ಸಮಯ್ ರೈನಾ ಮತ್ತು ರಣ್ವೀರ್ ಅಲ್ಹಾಬಾದಿಯಾ ವಿರುದ್ಧ ದಾಖಲಾಗಿದ್ದ ಎಲ್ಲ ಎಫ್​​ಐಆರ್​​ಗಳನ್ನು ರದ್ದು ಮಾಡಿದೆ. ಈ ಮೂಲಕ ಸಮಯ್ ರೈನಾ ಮತ್ತು ರಣ್ವೀರ್ ಇಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸಮಯ್ ರೈನಾ ಇದೀಗ ‘ಇಂಡಿಯಾ ಗಾಟ್ ಲೇಟೆಂಟ್’ ಶೋನ ಎರಡನೇ ಸರಣಿ ಪ್ರಾರಂಭ ಮಾಡಿದ್ದಾರೆ. ಈ ಬಾರಿ ಶೋ, ಯೂಟ್ಯೂಬ್ ಮತ್ತು ನೆಟ್​​ಫ್ಲಿಕ್ಸ್​ ಎರಡರಲ್ಲೂ ಒಟ್ಟಿಗೆ ಪ್ರಸಾರ ಆಗುತ್ತಿದೆ. ಕಳೆದ ಬಾರಿಗಿಂತಲೂ ಒಳ್ಳೆಯ ಪ್ರತಿಕ್ರಿಯೆಯನ್ನು ಶೋ ಪಡೆದುಕೊಳ್ಳುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version