ನೀಟ್ ಪೇಪರ್ ಲೀಕ್ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ; ಹಿಂಸಾಚಾರಕ್ಕೆ ಸಲ್ಲು ಬೇಸರ – Kannada News | NEET Paper Leak: Salman Khan Supports Protesting Students, Urges Govt Action

ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸಿಜೆಪಿ ಬೆಂಬಲಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಈ ಕುರಿತು ಸುದೀರ್ಘ ಟ್ವೀಟ್ ಮಾಡಿರುವ ಅವರು, ವಿದ್ಯಾರ್ಥಿಗಳ ಧೈರ್ಯವನ್ನು ಶ್ಲಾಘಿಸುವುದರ ಜೊತೆಗೆ, ಈ ಹೋರಾಟವನ್ನು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಬೇಸರ ತಂದಿದೆ

‘ಇದು ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟವಾಗಿತ್ತು. ಆದರೆ ಇದು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದನ್ನು ನೋಡಿ ನನಗೆ ತೀವ್ರ ಬೇಸರವಾಗಿದೆ. ಈ ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಪರವಾಗಿ ನನ್ನ ಹೃದಯ ಮಿಡಿಯುತ್ತಿದೆ’ ಎಂದು ಸಲ್ಮಾನ್ ಖಾನ್ ವಿಷಾದ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಬೆನ್ನಿಗೆ ನಿಂತ ಸಲ್ಲು

‘ಪ್ರಶ್ನೆ ಪತ್ರಿಕೆ ಸೋರಿಕೆಯು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ದೇಶದ ಮಕ್ಕಳೆಲ್ಲರೂ ಒಂದಾಗಿರುವುದನ್ನು ಮತ್ತು ಅವರಿಗೆ ಪೋಷಕರು ಬೆಂಬಲ ನೀಡುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಕಷ್ಟಪಟ್ಟು ಓದಿ ಉತ್ತಮ ಭವಿಷ್ಯವನ್ನು ಹಾಗೂ ಸುಶಿಕ್ಷಿತ ಭಾರತವನ್ನು ಕಟ್ಟಲು ವಿದ್ಯಾರ್ಥಿಗಳು ತೋರಿಸುತ್ತಿರುವ ಸಮರ್ಪಣಾ ಭಾವ ಮತ್ತು ಪ್ರಾಮಾಣಿಕತೆಯನ್ನು ನಾನು ಪ್ರಶಂಸಿಸುತ್ತೇನೆ. ಈ ತಲೆಮಾರು ಭಾರತ ಹೆಮ್ಮೆ ಪಡುವಂತೆ ಮಾಡುತ್ತದೆ’ ಎಂದು ವಿದ್ಯಾರ್ಥಿಗಳ ಧೈರ್ಯವನ್ನು ಕೊಂಡಾಡಿದ್ದಾರೆ.

ಸಲ್ಮಾನ್ ಖಾನ್ ಟ್ವೀಟ್

ಇದು ವಿದ್ಯಾರ್ಥಿಗಳ ಹೋರಾಟ, ರಾಜಕೀಯ ಬಣ್ಣ ಬಳಿಯಬೇಡಿ

‘ಈ ಸಮಸ್ಯೆ ಇರುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವೆ. ಇದನ್ನು ಯಾರೂ ರಾಜಕೀಯವಾಗಿ ಬಳಸಿಕೊಳ್ಳಬಾರದು. ಇದರ ಸಂಪೂರ್ಣ ಕ್ರೆಡಿಟ್ ನಮ್ಮ ದೇಶದ ವಿದ್ಯಾರ್ಥಿಗಳಿಗೆ ಮಾತ್ರ ಸಲ್ಲಬೇಕು. ಸರ್ಕಾರ ಕೂಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ, ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ನಂಬಿಕೆ ನನಗಿದೆ. ಒಂದು ಸಕಾರಾತ್ಮಕ ತೀರ್ಮಾನ ಬರಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಭಾರತ ಜಾಗತಿಕ ಶಿಕ್ಷಣದ ಕೇಂದ್ರವಾಗಲಿ

‘ಶಿಕ್ಷಣವೇ ಮುಂದಿನ ದಿನಗಳಲ್ಲಿ ದೇಶದ ದೊಡ್ಡ ಟ್ರೆಂಡ್ ಆಗಬೇಕು. ಅದು ವರ್ಷದಿಂದ ವರ್ಷಕ್ಕೆ ಎಷ್ಟು ಜನಪ್ರಿಯವಾಗಬೇಕೆಂದರೆ, ವಿದೇಶಗಳಿಂದಲೂ ಜನರು ಓದಲು ಭಾರತಕ್ಕೆ ಬರುವಂತಾಗಬೇಕು. ಆ ಮೂಲಕ ಭಾರತವು ಜಾಗತಿಕ ಶಿಕ್ಷಣದ ಪ್ರಮುಖ ಕೇಂದ್ರವಾಗಬೇಕು’ ಎಂದು ಸಲ್ಮಾನ್ ಖಾನ್ ತಮ್ಮ ಟ್ವೀಟ್‌ನಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಸಲ್ಮಾನ್ ಫಾರ್ಮ್‌ಹೌಸ್‌ಗೆ ಹೋಗೋದು ಸುಲಭ, ಆದ್ರೆ ವಾಪಸ್ ಬರೋದು ಭಾಯ್ ಇಷ್ಟ’

ಸದ್ಯ ಸಲ್ಮಾನ್ ಖಾನ್ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನ್ಯಾಯಕ್ಕಾಗಿ ಬೀದಿಗಿಳಿದಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ದೊಡ್ಡ ನೈತಿಕ ಬೆಂಬಲ ಸಿಕ್ಕಂತಾಗಿದೆ.

ಪ್ರಶ್ನೆ: ದೆಹಲಿಯಲ್ಲಿ ಪ್ರತಿಭಟನೆ ಏಕೆ?
ಉತ್ತರ: ನೀಟ ಪೇಪರ್ ಲೀಕ್ ವಿರೋಧಿಸಿ ಪ್ರತಿಭಟನೆ

ಪ್ರಶ್ನೆ: ಯಾರೆಲ್ಲ ಬೆಂಬಲ?
ಉತ್ತರ:
ಸಿಜೆಪಿ, ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್

ಪ್ರಶ್ನೆ: ಯಾವ ಚಿತ್ರರಂಗದ ಬೆಂಬಲ
ಉತ್ತರ:
ಕನ್ನಡ, ಹಿಂದಿ, ತಮಿಳು ಸೇರಿದಂತೆ ಎಲ್ಲ ರಂಗದವರ ಬೆಂಬಲ

Source link

Karnataka Weather Forecast: ಮತ್ತೆ ಮುಂಗಾರು ಚುರುಕು; ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ – Kannada News | Karnataka Weather Today July 23: Heavy Rain Alert for Coastal, Malnad Districts; Schools Closed in Dakshina Kannada

ಬೆಂಗಳೂರಿನ ಹೆಣ್ಣೂರಿನಲ್ಲಿ ಬುಧವಾರ ಸುರಿದ ಮಳೆಗೆ ರಸ್ತೆ ಜಲಾವೃತಗೊಂಡಿರುವುದುImage Credit source: tv9

ಬೆಂಗಳೂರು, ಜುಲೈ 23: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon Rain) ಮತ್ತೊಮ್ಮೆ ಬಿರುಸುಗೊಂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದ ಮುನ್ಸೂಚನೆಯ (Bengaluru Weather Forecast) ಪ್ರಕಾರ, ಜುಲೈ 23ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದೆರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಉತ್ತರ ಒಳನಾಡಿಗೂ ಮಳೆ ಮುನ್ಸೂಚನೆ

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯೊಂದಿಗೆ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲೂ ಸಾಧಾರಣ ಮಳೆಯೊಂದಿಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೂ ಮಳೆ ಅಲರ್ಟ್

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ದಾವಣಗೆರೆ, ಮೈಸೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ.

ಜುಲೈ 24ರಂದು ಸಹ ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಮಳೆಯಾಗಲಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲೂ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ, ಎಷ್ಟು?

ಜುಲೈ 22ರ ಮಧ್ಯಾಹ್ನಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಗಲ್​ಬೆಟ್‌ನಲ್ಲಿ 22 ಸೆಂ.ಮೀ. ಅತ್ಯಧಿಕ ಮಳೆಯಾಗಿದೆ. ಉಳಿದಂತೆ ಮಳೆ ವಿವರ ಹೀಗಿದೆ;

  • ಉಡುಪಿ ಜಿಲ್ಲೆಯ ಕೊಲ್ಲೂರು – 7 ಸೆಂ.ಮೀ.
  • ಬೆಳಗಾವಿ ಜಿಲ್ಲೆಯ ಲೋಂಡಾ – 6 ಸೆಂ.ಮೀ.
  • ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ – 6 ಸೆಂ.ಮೀ.
  • ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು – 4 ಸೆಂ.ಮೀ.
  • ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ – 4 ಸೆಂ.ಮೀ.
  • ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ – 3 ಸೆಂ.ಮೀ.
  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ – 3 ಸೆಂ.ಮೀ.
  • ರಾಯಚೂರು ಜಿಲ್ಲೆ ಕುರ್ಡಿ – 3 ಸೆಂ.ಮೀ.
  • ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು – 3 ಸೆಂ.ಮೀ.
  • ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ – 3 ಸೆಂ.ಮೀ.

ದಕ್ಷಿಣ ಕನ್ನಡದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜುಲೈ 23ರಂದು ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ನಿರಂತರ ಮಳೆಯಿಂದ ಭೂಕುಸಿತ ಹಾಗೂ ಪ್ರವಾಹದ ಆತಂಕ ಇರುವ ಕಾರಣ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ: ಶಾಲೆ, ಕಾಲೇಜುಗಳಿಗೆ ರಜೆ – Kannada News | Dakshina Kannada Orange Alert: Schools and Colleges Closed Today as Heavy Rain Lashes Coastal Karnataka

ಮಂಗಳೂರು, ಜುಲೈ 23: ಕರ್ನಾಟಕದ ಹಲವೆಡೆ ಮತ್ತೆ ಮುಂಗಾರು ಮಳೆ ಚುರುಕುಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಇಂದು (ಜುಲೈ 23) ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.

ಹಲವು ದಿನಗಳಿಂದ ಜಿಲ್ಲೆಯ ವಿವಿಧೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭೂಕುಸಿತ ಮತ್ತು ಪ್ರವಾಹದ ಭೀತಿಯನ್ನು ಹೆಚ್ಚಿಸಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ – Kannada News | Zodiac Sign Effects: Dr. Basavaraj Gurujis Horoscope for 23 07 2026

ಬೆಂಗಳೂರು, ಜು.23: ದಿನ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 23ರ ಗುರುವಾರದ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ನವಮಿ, ವಿಶಾಖ ನಕ್ಷತ್ರ, ಶುಭ ಯೋಗ ಮತ್ತು ಕೌಲವ ಕರಣ ಇರುತ್ತದೆ ಎಂದು ಗುರುಗಳು ತಿಳಿಸಿದ್ದಾರೆ. ರಾಹುಕಾಲ ಮಧ್ಯಾಹ್ನ 2 ಗಂಟೆಯಿಂದ 3 ಗಂಟೆ 36 ನಿಮಿಷದ ತನಕ ಇರಲಿದ್ದು, ಶುಭಕಾಲ 12 ಗಂಟೆ 26 ನಿಮಿಷದಿಂದ 2 ಗಂಟೆಯ ತನಕ ಇರಲಿದೆ. ಗುರುವಾರದ ವಿಶೇಷವಾಗಿ ಸಾಸಲಹಳ್ಳಿಯಲ್ಲಿ ರಂಗನಾಥ ಸ್ವಾಮಿಗಳ ರಥೋತ್ಸವ ಮತ್ತು ವಿದ್ಯಾಸಿಂಧು ತೀರ್ಥರ ಆರಾಧನಾ ಮಹೋತ್ಸವ ನಡೆಯಲಿದೆ. ಗ್ರಹಗತಿಗಳ ಬಗ್ಗೆ ಹೇಳುವುದಾದರೆ, ಇಂದು ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ತುಲಾ ರಾಶಿಯ ವಿಶಾಖ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ. ಮೇಷ ರಾಶಿಯವರಿಗೆ ಇಂದು ಆದಾಯದಲ್ಲಿ ಏರಿಕೆ, ಕೆಲಸ ಕಾರ್ಯಗಳಲ್ಲಿ ಶುಭವಾಗಲಿದ್ದು, ಹೂಡಿಕೆಯಿಂದ ಲಾಭ ದೊರೆಯಲಿದೆ. ಆದರೆ ಮಾನಸಿಕವಾಗಿ ಅನಗತ್ಯ ಟೆನ್ಶನ್ ಎದುರಾಗಬಹುದು. ವಿದ್ಯಾರ್ಥಿಗಳಿಗೆ, ರೈತರಿಗೆ, ಕಬ್ಬಿಣ ವ್ಯಾಪಾರಿಗಳಿಗೆ, ಹಾರ್ಡ್‌ವೇರ್ ಸ್ಟೋರ್ಸ್ ಅವರಿಗೆ, ಸಾಫ್ಟ್‌ವೇರ್ ಇಂಜಿನಿಯರ್ಸ್‌ಗೆ, ಡಾಕ್ಟರ್ಸ್‌ಗೆ ಇದು ಶುಭ ದಿನ. ವೃಷಭ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿದ್ದು, ವ್ಯಾಪಾರದಲ್ಲಿ ಲಾಭ ಇರಲಿದೆ. ಮೇಲಧಿಕಾರಿಗಳ ಜೊತೆ ಸಣ್ಣ ಪುಟ್ಟ ಕಲಹಗಳು ಉಂಟಾಗಬಹುದು. ದೂರದ ಪ್ರಯಾಣ ಯೋಗವಿದ್ದು, ವಾಹನ ಯೋಗವೂ ಚೆನ್ನಾಗಿದೆ. ಉದ್ಯೋಗದಲ್ಲಿ ಸ್ಥಾನ ಪಲ್ಲಟ ಸಾಧ್ಯತೆ ಇದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಅತಿಯಾದ ಹೂಡಿಕೆಯಿಂದ ಅವ್ಯಕ್ತ ಭಯ..‌ – Kannada News | Daily Horoscope for July 23, 2026: Uttarayan Greeshma season, Ashada Masa shukla Paksha Thursday astrology Prediction

ಮೇಷ ರಾಶಿ:

ಬಂಧುಗಳು ನಿಮ್ಮ ಆಗಬೇಕಾದ ಕೆಲಸವನ್ನು ನಿಲ್ಲಿಸುವರು. ಇಂದು ನಿಮ್ಮ ವಿರೋಧಿಗಳು ಏನಾದರೂ ತೊಂದರೆಯನ್ನು ಕೊಡಬಹುದು. ಆತುರದಲ್ಲಿ ಎಡವಿ ಬೀಳುವ ಸಾಧ್ಯತೆ ಇದೆ. ಸಣ್ಣ ಮನಸ್ತಾಪಗಳು ನಿಮಗೆ ಬೇಸರ ತರಿಸೀತು. ಬಂಧುಗಳ ಜೊತೆ ಹೆಚ್ಚು ಸಲುಗೆ ಇರಲಿದೆ. ಮಾತಿನ ವೇಗದಲ್ಲಿ ಗೌಪ್ಯತೆಯನ್ನು ಬಿಟ್ಟುಕೊಡುವಿರಿ. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಬೇಡವೆಂದರೂ ಕೆಲವು ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳಬಹುದು.

ವೃಷಭ ರಾಶಿ:

ವ್ಯಕ್ತಿಗತವಾದ ದ್ವೇಷವನ್ನು ಸಂಸ್ಥೆಯ ಮೇಲೆ ತೋರಿಸುವಿರಿ. ನಿಮ್ಮ ಎಲ್ಲ ನಿರ್ಧಾರವೂ ಸರಿಯಾಗಿ ಇರುವುದು ಎಂಬ ಭ್ರಮಯಲ್ಲಿ ಇರುವುದು ಬೇಡ. ನೀವು ಕೊಟ್ಟ ಗೌರವಕ್ಕೆ ಗೌರವವೇ ಸಿಗುವುದು. ದುರಭಿಮಾನಕ್ಕೆ ಯಾವುದೇ ಮದ್ದು ಸಿಗದು. ಹೊಸದಾಗಿ ಬಂದ ಸಂಗಾತಿಯನ್ನು ನೀವು ಗೌರವಿಸುವಿರಿ. ನಿಮ್ಮ ಬುತ್ತಿಯನ್ನು ನೀವೇ ಉಣಬೇಕಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸದಲ್ಲಿ ಅಪಜಯವಾಗಬಹುದು.

ಮಿಥುನ ರಾಶಿ:

ನಂಬಿಕೆಯ ಆಧಾರದ ಮೇಲೆ ಹೂಡಿಕೆಗಳನ್ನು ಮಾಡಬೇಡಿ. ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವಿರಿ. ನಿಮಗೆ ಲೆಕ್ಕಾಚಾರ ತಿಳಿದಿರಲಿ. ಗೊತ್ತಾಗದಂತೆ ಒತ್ತಡಕ್ಕೆ ಸಿಲುಕಿಕೊಳ್ಳುವಿರಿ. ವಿದ್ಯುತ್ ನಿಂದ ಅಪಾಯವಾಗಬಹುದು. ಇಂದು ಸಮಯವನ್ನು ಕಳೆಯುವ ಬಗ್ಗೆ ಚಿಂತೆಯಾದೀತು. ಯಾರದೋ ತಪ್ಪು ನಿಮ್ಮ ಮೇಲೆ ಬರಬಹುದು. ನಿಮ್ಮನ್ನು ಸಮಾಧಾನಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ.

ಕರ್ಕಾಟಕ ರಾಶಿ:

ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಆಸಕ್ತಿ ಇರುವುದು.‌ ಕಾರ್ಯಸಾಧನೆಗೆ ಮೊದಲು ವಿಶ್ವಾಸವನ್ನು ಕಳಿಸಿಕೊಳ್ಳುವಿರಿ. ಬಡ್ಡಿ ಇಲ್ಲದೇ ನಿಮಗೆ ಸಾಲ ಸಿಗಲಿದೆ. ಹಿತಶತ್ರುಗಳನ್ನು ಹಿಮ್ಮೆಟ್ಟಿಸಲಾಗದು. ನಿಮಗೆ ಸಿಕ್ಕ ಸಮಯವನ್ನು ಅಂದುಕೊಂಡ ಕಾರ್ಯಕ್ಕೆ ಬಳಸುವಿರಿ. ಸಮಾಧಾನ ಚಿತ್ತದಿಂದ‌ ಕುಳಿತು ಯೋಚಿಸಿ. ಆಪ್ತ ಸ್ನೇಹಿತರು ಪ್ರೀತಿಯ ಹಂಚಿಕೆಯಲ್ಲಿ ಬಹಳ ಉತ್ಸಾಹವನ್ನು ತೋರಿಸಬಹುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು.

ಸಿಂಹ ರಾಶಿ:

ಯಾರದೋ ಮಾತಿನಿಂದ ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವಿರಿ. ಪ್ರತ್ಯೇಕವಾಗಿ ಕಂಡಿದ್ದರ ಆಧಾರದ ಮೇಲೆ ಏನನ್ನಾದರೂ ಊಹಿಸಬೇಡಿ. ಇನ್ನೊಬ್ಬರ ಬಗ್ಗೆ ಮಾತಡುವ ಮೊದಲು ಯೊಚಿಸುವುದು ಒಳ್ಳೆಯದು. ಜನರನ್ನು ಮಾತಿನಿಂದ ಆಕರ್ಷಿಸುವಿರಿ. ನಿಮ್ಮ ಉದ್ಯೋಗಕ್ಕೆ ಬಲ ತಂದುಕೊಳ್ಳುವಿರಿ. ಆರ್ಥಿಕ ವಹಿವಾಟು ಅಧಿಕವಾಗಿದ್ದು, ಕಛೇರಿಯ ಕೆಲಸವೂ ಹೆಚ್ಚಾಗುವುದು. ಕಾನೂನಿನ ಹಾದಿಯು ನಿಮ್ಮನ್ನು ರಕ್ಷಿಸಬಹುದು.

ಕನ್ಯಾ ರಾಶಿ:

ದುರಭ್ಯಾಸವನ್ನು ಸ್ನೇಹಿತರು ನಿಮಗೆ ಹಿಡಿಸಬಹುದು. ವಿಶ್ವಾಸಘಾತಕರು ನಿಮ್ಮ ಬಳಿ ಸಾಲವನ್ನು ಕೇಳಲು ಬರಬಹುದು. ಕೊಡುವುದಕ್ಕೆ ಹೋಗಬೇಡಿ. ಮನೆಯಲ್ಲಿ ನಿಮ್ಮಿಂದ‌ ಹಣವನ್ನು ಕೇಳಬಹುದು. ಸಂಗಾತಿಯ ಮಾತುಗಳು ನಿಮ್ಮ ಪ್ರೀತಿಯನ್ನು ಹೆಚ್ಚಿಸೀತು. ಮೇಲಧಿಕಾರಿಗಳ ಜೊತೆ ಸಂವಹನವು ಸಂತೋಷವಾಗುವಂತೆ ಇರುವುದು. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ನಿಮ್ಮವರನ್ಮು ನಿಮ್ಮವರೆನ್ನಲು ಹಿಂಜರಿಯುವಿರಿ.

ತುಲಾ ರಾಶಿ:

ಸೋಮಾರಿತನದಿಂದ ಆಗುವ ನಷ್ಟವು ಇಂದು ನಿಮಗೆ ಗೊತ್ತಾಗುವುದು. ಯಾವುದಕ್ಕೂ ಕೂಡಲೇ ಫಲವು ಸಿಗದು. ಅದು ಸಿಗುವ ತನಕ ಪ್ರಯತ್ನವನ್ನು ಬಿಡಬೇಡಿ. ನಿಮಗೆ ಆಕರ್ಷಿತರಾಗಿ ನಿಮ್ಮ ಮಿತ್ರತ್ವವನ್ನು ಬಯಸಬಹುದು. ಹಣವನ್ನು ಅತಿಮುಖ್ಯವಾದ ಸಾಧನ ಎನ್ನಿಸದೇ ಇರಬಹುದು. ಮಾತಿನಿಂದ ನೀವು ಸಂಪತ್ತನ್ನು ಗಳಿಸುವಿರಿ. ಸಮಸ್ಯೆಗಳು ಬರುವಂತಹ ಮಾತುಗಳನ್ನು ಆಡಬೇಡಿ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ.

ವೃಶ್ಚಿಕ ರಾಶಿ:

ದೇಹಕ್ಕೆ ಸಂಬಂಧಪಟ್ಟಂತೆ ಅದರ ಆರೈಕೆಯನ್ನು ಹೆಚ್ಚು ಮಾಡುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಉಂಟಾಗುವುದು. ಅಧಿಕ‌ ಹಣವನ್ನು ಸಂಪಾದಿಸಲು ನೀವು ಹೊಸ ಯೋಚನೆಯನ್ನು ಮಾಡುವಿರಿ. ವ್ಯವಹಾರ ಕುದುರದೇ ಬಂದ ದಾರಿಗೆ ಪ್ರಯೋಜನ ಆಗದು. ನಾಚಿಕೆಯ ಸ್ವಭಾವವು ಪಡೆದುಕೊಳ್ಳುವ ವಿಚಾರದಲ್ಲಿ ಹಿಂದೆ ಇರುವಂತೆ ಮಾಡೀತು. ಸಿಕ್ಕ ಅಧಿಕಾರವು ಅಲ್ಪ ಕಾಲದ್ದು ಎಂಬ ಭಾವ ಇರಲಿ. ಚಿಕ್ಕ ಕೆಲಸವಾದರೂ ಬಹಳ ಅಚ್ಚುಕಟ್ಟಿನಿಂದ ಮಾಡುವಿರಿ.

ಧನು ರಾಶಿ:

ನಿಮಗೆ ಸಂಬಂಧಿಸದ ಇನ್ನೊಬ್ಬರ ವಿಚಾರದಲ್ಲಿ ಮಧ್ಯಪ್ರವೇಶ ಬೇಡ. ಬೇಕಾದರೆ ಅವರೇ ಕರೆಯುತ್ತಾರೆ. ಯಾರನ್ನೋ ಮೆಚ್ಚಿಸಲು ಹೋಗಿ ಸಮಯವನ್ನು ಶ್ರಮವನ್ನೂ ವ್ಯಯಮಾಡಿಕೊಳ್ಳಬಹುದು. ಸ್ನೇಹಿತರ ಸತ್ಯವನ್ನು ಗುಟ್ಟು ಮಾಡಲು ಹೋಗಿ ಅದನ್ನೇ ಹೇಳಬೇಕಾದೀತು. ನಿಮ್ಮವರ‌ ಮಾತು ಕೇವಲ ಭರವಸೆಯಾಗಿ ಇರುವುದೆಂದು ಅನ್ನಿಸಬಹುದು. ಅದನ್ನು ಅತಿಯಾದ ಪ್ರಯತ್ನದಿಂದ ಪಡೆಯುವ ಅವಶ್ಯಕತೆ ಇಲ್ಲ.

ಮಕರ ರಾಶಿ:

ನಿಮ್ಮ ಮಕ್ಕಳು ನಿರೀಕ್ಷೆಗಳನ್ನು ಹುಸಿಗೊಳಿಸದೇ ಸಮಾಧಾನ ಮಾಡಿ. ಕಾನೂನಿಗೆ ಸಮ್ಮತವಾಗಿರುವ ದಾಖಲೆಗಳು ಇರುವಾಗ ಭಯಪಡಬೇಕಾದ ಅವಶ್ಯಕತೆ ಇಲ್ಲ. ನಿಮಗಿಂದು ವಿಶ್ರಾಂತಿ ಬೇಕೆನಿಸಬಹುದು. ಒಮ್ಮೆಲೆ ಎಲ್ಲ ಕೆಲಸವನ್ನು ನಿಭಾಯಿಸುವುದು ಕಷ್ಟದ ಕೆಲಸ. ನಿಮ್ಮ ಕೆಲಸದಿಂದ ಅದ್ಭುತವನ್ನು ಸಾಧಿಸುವ ನಿರೀಕ್ಷಿಸುವಿರಿ. ಅಕಾಲದಲ್ಲಿ ಆಗುವ ಮಳೆಯಿಂದ ನಿಮಗೆ ಕಷ್ಟವೆನಿಸೀತು. ಅಕಾಲದಲ್ಲಿ ನಿಮ್ಮ ಪ್ರತಿಷ್ಠೆಯನ್ನು ತೋರಿಸುವುದು ಬೇಡ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

ಕುಂಭ ರಾಶಿ:

ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಹಳೆಯ ಖಾಯಿಲೆಗಳು ಪುನಃ ಬಂದೀತು.‌ ವೈದ್ಯರ ಚಿಕಿತ್ಸೆಯನ್ನು ಒಡೆಯಿರಿ.‌ ಅನಿರೀಕ್ಷಿತ ಹಣ ಬಂದರೂ ಕೂಡಲೇ ಖರ್ಚಾಗುವುದು. ಚೂರಾದ ಕನ್ನಡಿಯಲ್ಲಿ ಜೋಡಿಸಲಾಗದು. ಜೋಡಿಸದರೂ ಮೊದಲಿನಂತೆ ಸುಂದರವಾಗಿ‌ ಕಾಣಿಸದು. ಹಿತಶತ್ರುಗಳನ್ನು ಸ್ವಂತ ಬುದ್ಧಿಯಿಂದ ಪ್ರಯತ್ನ ದೂರಮಾಡಬೇಕು. ಆಪತ್ತಿಗಾಗಿ ನೀವು ಹಣವನ್ನು ಸಂಗ್ರಹಿಸುವಿರಿ. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು.

ಮೀನ ರಾಶಿ:

ತಾಯಿಯ ಪ್ರೀತಿಯಿಂದ ನಿಮಗೆ ನೆಮ್ಮದಿ ಸಿಗಲಿದೆ. ಎಷ್ಟೇ ಪ್ರಯತ್ನಿಸಿದರೂ ಮನಸ್ಸು ನಕಾರಾತ್ಮಕ ಚಿಂತನೆಯನ್ನು ಬಿಡದು. ಸಂಗಾತಿಯ ಕೋಪವನ್ನು ಸಮಾಧಾನ ಮಾಡುವಿರಿ. ನಿಮ್ಮವರು ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಹೇಳಿದರೂ ಅಂತರಂಗದಲ್ಲಿ ಬೇರೆಯದನ್ನೇ ಆಲೋಚಿಸುವರು. ನಿಮ್ಮ ನುಡಿಗಳು ಸಂಗಾತಿಗೆ ಹಿತವೆನಿಸಬಹುದು. ಬೇಡ ವಿಚಾರಗಳಿಂದ ನಿಮ್ಮ ತಲೆ ಹಾಳಾಗಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಗುರು, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಬ್ರಹ್ಮ, ಕರಣ : ಬಾಲವ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:02 – 15:37, ಯಮಗಂಡ ಕಾಲ 06:04 – 07:40, ಗುಳಿಕ ಕಾಲ 09:15 – 10:51

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುಣೆಯಲ್ಲಿ ಕಾರಿನ ಮೇಲೆ ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ – Kannada News | Pune 3 murder accused paraded on police vehicle bonnet woman attacked in slipper

ಪುಣೆ, ಜುಲೈ 22: ಮಹಾರಾಷ್ಟ್ರದ ಪುಣೆಯಲ್ಲಿ (Pune News) 17 ವರ್ಷದ ಬಾಲಕನನ್ನು ಅತ್ಯಂತ ಅಮಾನವೀಯವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಪೊಲೀಸರು ಭಾರಿ ಮಳೆಯ ನಡುವೆಯೇ ಪೊಲೀಸ್ ವಾಹನದ ಬಾನೆಟ್‌ಗೆ ಕಟ್ಟಿ, ಅಪರಾಧ ನಡೆದ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಆಕ್ರೋಶದಿಂದ ಆ ಮೂವರು ಕೊಲೆ ಆರೋಪಿಗಳಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ತಕ್ಷಣ ಪೊಲೀಸರು ಆಕೆಯನ್ನು ದೂರಕ್ಕೆ ಎಳೆದುಕೊಂಡು ಹೋಗಿದ್ದಾರೆ.

ಪುಣೆಯ ಕಾತ್ರಾಜ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಬಾಲಕನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಅಪ್ರಾಪ್ತ ಬಾಲಕನ ಕೊಲೆ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಬಾಲಕ ತನ್ನ ಸ್ನೇಹಿತನೊಂದಿಗೆ ಮೊಬೈಲ್ ಫೋನ್ ತರಲು ಹೋಗಿದ್ದಾಗ, ಮೂರು ಬೈಕ್‌ಗಳಲ್ಲಿ ಬಂದ 7 ಮಂದಿ ಆತನನ್ನು ಬೆನ್ನಟ್ಟಿದ್ದರು. ಬಾಲಕ ತಪ್ಪಿಸಿಕೊಂಡು ಓಡಲು ಯತ್ನಿಸಿದನಾದರೂ, ದಾಳಿಕೋರರು ಆತನನ್ನು ಹಿಡಿದು ಚೂಪಾದ ಆಯುಧಗಳಿಂದ ಹಲ್ಲೆ ನಡೆಸಿದ್ದರು. ಆ ಬಾಲಕ ನೆಲಕ್ಕೆ ಕುಸಿದುಬಿದ್ದ ನಂತರವೂ ಆತನ ಮೇಲೆ ದಾಳಿ ಮುಂದುವರಿಸಿದ್ದರು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಹಳೇ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಂತರ್ ಮಂತರ್‌ನಲ್ಲಿ ಮತ್ತೆ ಭುಗಿಲೆದ್ದ ಗಲಭೆ; ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ, ಎಸಿಪಿಗಳಿಗೆ ಗಾಯ – Kannada News | Fresh clashes near Jantar Mantar as CJP protesters throw stones bottles at Delhi Police ACPs injured

ನವದೆಹಲಿ, ಜುಲೈ 22: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಜಂತರ್ ಮಂತರ್ ಬಳಿಯ ಕನ್ನಾಟ್ ಪ್ಲೇಸ್‌ನ ಟಾಲ್‌ಸ್ಟಾಯ್ ಮಾರ್ಗದಲ್ಲಿ ಇಂದು ರಾತ್ರಿ ಸುಮಾರು 8.30ಕ್ಕೆ ತೀವ್ರ ಉದ್ವಿಗ್ನತೆ ಉಂಟಾಗಿದೆ. ಪ್ರತಿಭಟನಾಕಾರರ ಗುಂಪೊಂದು ದೆಹಲಿ ಪೊಲೀಸರ ಮೇಲೆ ದಿಢೀರ್ ದಾಳಿ ನಡೆಸಿದೆ. ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದ್ದ ಗುಂಪು ದಿಢೀರನೆ ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ಮತ್ತು ಬಾಟಲಿಗಳನ್ನು ಎಸೆಯಲಾರಂಭಿಸಿತು. ಈ ಹಿಂಸಾಚಾರದಲ್ಲಿ ಕನ್ನಾಟ್ ಪ್ಲೇಸ್ ವಿಭಾಗದ ಎಸಿಪಿ ವಿವೇಕ್ ಭಗತ್ ಅವರಿಗೆ ಗಾಯಗಳಾಗಿವೆ. ಹಿರಿಯ ಪೊಲೀಸ್ ಅಧಿಕಾರಿಗಳು ಗಾಯಗೊಂಡ ಅಧಿಕಾರಿಯನ್ನು ತಕ್ಷಣವೇ ಚಿಕಿತ್ಸೆಗಾಗಿ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ, ಟಾಲ್‌ಸ್ಟಾಯ್ ಮಾರ್ಗದಲ್ಲಿ ಗಲಭೆಕೋರರು ಪೊಲೀಸರು ಮತ್ತು ಆರ್‌ಎಎಫ್ ತಂಡಗಳ ಮೇಲೆ ದೊಡ್ಡ ಕಲ್ಲುಗಳನ್ನು ಎಸೆದರು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಲಾಠಿ ಪ್ರಹಾರ ನಡೆಸಿದರು. ಆಗ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸುವ ಮೂಲಕ ಪ್ರತಿಕ್ರಿಯಿಸಿದರು. ಕೊನೆಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಈ ಘಟನೆಯ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಘಟನೆಯ ಕುರಿತು ಸಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ: ಚಲೋ ಸಂಸದ್ ಪ್ರತಿಭಟನೆ ವೇಳೆ ಪೊಲೀಸರು- ಪ್ರತಿಭಟನಾಕಾರರ ನಡುವೆ ಕಲ್ಲು ತೂರಾಟ!

ಇಂಟರ್ನೆಟ್ ಸ್ಥಗಿತಗೊಂಡಿದ್ದರೂ ಸಂದೇಶ ರವಾನೆ:

ಮೂಲಗಳ ಪ್ರಕಾರ, ನವದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತಗೊಂಡಿದ್ದರೂ, ಜಂತರ್ ಮಂತರ್ ಮತ್ತು ಕನ್ನಾಟ್ ಪ್ಲೇಸ್ ಪ್ರದೇಶಗಳು, ವಿಶೇಷವಾಗಿ ಟಾಲ್‌ಸ್ಟಾಯ್ ಮಾರ್ಗ ಮತ್ತು ಜನಪಥ್ ಪ್ರದೇಶಗಳಲ್ಲಿ ಹೆಚ್ಚಿನ ಮೆಸೇಜುಗಳನ್ನು ಕಳುಹಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಅತಿ ಹೆಚ್ಚು ನೆಟ್‌ವರ್ಕ್ ಸಂಪರ್ಕಗಳು ಮತ್ತು SMS ವಿನಿಮಯಗಳು ಕಂಡುಬರುತ್ತಿವೆ.

ಜಂತರ್ ಮಂತರ್‌ನಲ್ಲಿರುವ ಪ್ರತಿಭಟನಾಕಾರರು ನವದೆಹಲಿಯ ಇತರ ಭಾಗಗಳಲ್ಲಿರುವ ಪ್ರತಿಭಟನಾಕಾರರೊಂದಿಗೆ ಸಂವಹನ ನಡೆಸಲು ಎಸ್‌ಎಂಎಸ್ ಬಳಸಿದ್ದಾರೆಯೇ ಮತ್ತು ಈ ಸಂವಹನವು ಹಿಂಸಾಚಾರಕ್ಕೆ ಕಾರಣವಾಯಿತೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದ್ದು, ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ – Kannada News | Kumar Bangarappa talks about Ragini Dwivedi in Sarkari Nyaya Bele Angadi movie press meet

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಮತ್ತು ಕುಮಾರ್ ಬಂಗಾರಪ್ಪ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ನಟಿಸಿದ ಅನುಭವಗಳನ್ನು ಕುಮಾರ್ ಬಂಗಾರಪ್ಪ ಅವರು ಹಂಚಿಕೊಂಡರು. ತಮ್ಮ ಜೊತೆ ನಟಿಸಿದ ರಾಗಿಣಿ (Ragini Dwivedi) ಅವರನ್ನು ಕುಮಾರ್ ಬಂಗಾರಪ್ಪ ಹೊಗಳಿದರು. ‘ರಾಗಿಣಿ ಅವರು ಉತ್ತಮ ನಟಿ. ಬಹಳ ಬದ್ಧತೆಯಿಂದ ಈ ಸಿನಿಮಾ ಮಾಡಿದ್ದಾರೆ. ಅವರಿಗೆ ಇದ್ದ ಇಮೇಜ್ ಬದಲಿಸುವ ಪಾತ್ರ ಇದು. ಹಾಡುಗಳ ಮೂಲಕ ಅವರು ಪ್ರತಿ ಹಳ್ಳಿಗೂ ತಲುಪಿದ್ದಾರೆ. ಆದರೆ ಈ ಬಾರಿ ಅವರು ತಲುಪುವ ರೀತಿಯೇ ಬೇರೆ ಇರುತ್ತದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಅವರಿಗೆ ಹಾರೈಸುತ್ತೇನೆ’ ಎಂದು ಕುಮಾರ್ ಬಂಗಾರಪ್ಪ ಅವರು ಹೇಳಿದ್ದಾರೆ. ಈ ವೇಳೆ ಪಕ್ಕದಲ್ಲೇ ನಿಂತಿದ್ದ ರಾಗಿಣಿ ದ್ವಿವೇದಿ ಅವರು ಖುಷಿಯಿಂದ ತಬ್ಬಿಕೊಂಡರು. ಸುದ್ದಿಗೋಷ್ಠಿಯ ವೇದಿಕೆಯಲ್ಲಿ ಕುಮಾರ್ ಬಂಗಾರಪ್ಪ ಅವರು ಮಾತನಾಡಿದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆ 15ಕ್ಕೆ ಪಿಂಕ್ ಲೈನ್ ಮೆಟ್ರೋ ಮಾರ್ಗ ಓಪನ್ ಆಗೋದು ಡೌಟ್! ಇಲ್ಲಿದೆ ಅಸಲಿ ಕಾರಣ – Kannada News | Namma Metro Pink Line Update: August 15 Launch Doubtful, Passengers Disappointed

ಬೆಂಗಳೂರು, ಜುಲೈ 22: ಪಿಂಕ್ ಲೈನ್ ಬೆಂಗಳೂರಿನ ಬಹುನಿರೀಕ್ಷಿತ ಮೆಟ್ರೋ ಮಾರ್ಗ. ಆಗಸ್ಟ್ 15ರಂದು ಪಿಂಕ್ ಲೈನ್​ನಲ್ಲಿ (Pink Line) ರೈಲು ಸಂಚಾರ ಮಾಡಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಆರ್ಡಿಎಸ್​ಓದಿಂದ ಅನುಮತಿ ಸಿಗದ ಹಿನ್ನೆಲೆ ಮತ್ತೆ ಮೆಟ್ರೋ ಓಪನ್ ಆಗುವುದು ಡೌಟ್​​ ಎನ್ನಲಾಗುತ್ತಿದ್ದು, ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ನಿರಾಸೆ ಮೂಡಿದೆ.

ಆಗಸ್ಟ್ 15ಕ್ಕೆ ಪಿಂಕ್ ಲೈನ್ ಓಪನ್ ಡೌಟ್​

ನಮ್ಮ ಮೆಟ್ರೋ ಪಿಂಕ್ ಲೈನ್ ರೈಲುಗಳಿಗೆ ಈಗಾಗಲೇ ಅಧಿಕೃತ ಸ್ಪೀಡ್ ಸರ್ಟಿಫಿಕೇಟ್ ನೀಡಲಾಗಿದೆ. ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ ವೇಗ ಪ್ರಮಾಣ ಪತ್ರವನ್ನು ನೀಡಿದೆ. ಯಾವುದೇ ವೇಗದ ನಿರ್ಬಂಧಗಳಿಲ್ಲದೆ, ಗಂಟೆಗೆ 90 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಬೆಮಲ್​ನಿಂದ 6 ರೈಲು ಕೂಡ ಬಂದಿದೆ.‌ ಹಾಗಾಗಿ ಆಗಸ್ಟ್ 15ಕ್ಕೆ ಪಿಂಕ್ ಲೈನ್ ಓಪನ್ ಮಾಡುವುದಾಗಿ ಬಿಎಂಆರ್​ಸಿಎಲ್​ ಅಧಿಕಾರಿಗಳು ಹೇಳಿದ್ದರು.

ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಪಿಂಕ್ ಲೈನ್ ಓಪನ್ ಸಾಧ್ಯತೆ? 

ಈಗಾಗಲೇ ಪಿಂಕ್ ಲೈನ್​ನಲ್ಲಿ ಆರ್ಡಿಎಸ್ಓ ಬಂದು ಪಿಂಕ್ ಲೈನ್ ಅನ್ನು ಎಲ್ಲಾ ತಪಾಸಣೆ ಮಾಡಿದರೂ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಆರ್ಡಿಎಸ್ಓ ಗ್ರೀನ್ ಸಿಗ್ನಲ್ ನೀಡಿದ ನಂತರ ಸಿಎಂಆರ್​​ಎಸ್​ ಅಂತಿಮ ಹಂತದ ತಪಾಸಣೆ ಮಾಡಬೇಕು. ನಂತರ ವರದಿಯನ್ನು ರೈಲ್ವೆ ಬೋರ್ಡ್​ಗೆ ಕಳಿಸಲಾಗುತ್ತದೆ. ಅಲ್ಲಿಂದ ಅನುಮತಿ ನೀಡಿದ ಮೇಲೆ ಪಿಂಕ್ ಲೈನ್ ಓಪನ್ ಆಗಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಪಿಂಕ್ ಓಪನ್ ಆಗಬಹುದು ಎನ್ನಲಾಗುತ್ತಿದ್ದು, ಇದಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಂಕ್ ಲೈನ್ ಮಾರ್ಗ ಎಲ್ಲಿಂದ ಎಲ್ಲಿಯವರೆಗೆ 

ಇನ್ನೂ ಸುಮಾರು 7.5 ಕಿ.ಮೀ ಉದ್ದದ ಎಲಿವೇಟೆಡ್ ಮಾರ್ಗವಾಗಿದ್ದು, ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಆರು ನಿಲ್ದಾಣಗಳಿವೆ. ವಿಶೇಷವಾಗಿ ಜಯದೇವ ಆಸ್ಪತ್ರೆಯ ಇಂಟರ್‌ಚೇಂಜ್ ನಿಲ್ದಾಣವು, ಪ್ರಯಾಣಿಕರಿಗೆ ಭಾರಿ ಅನುಕೂಲ ಕಲ್ಪಿಸಲಿದೆ. ಇದು ಈಗ ಬೆಂಗಳೂರು ಮೆಟ್ರೋ ಜಾಲವನ್ನು 103.6 ಕಿ.ಮೀ. ಗೆ ವಿಸ್ತರಿಸುತ್ತದೆ. ಕಾಳೇನ ಅಗ್ರಹಾರ ಟು ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿರುವ ಪಿಂಕ್ ಲೈನ್ 21.25 ಕಿಮೀ ವಿಸ್ತೀರ್ಣ, 18 ಮೆಟ್ರೋ ಸ್ಟೇಷನ್ಗಳು.

12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​ಗಳಿದ್ದು, ಆಗಸ್ಟ್- 15 ರಂದು ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಬಿಎಂಆರ್ಸಿಎಲ್. ಉಳಿದ 13.76. ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್​ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಪ್ರೇಮ್, ‘ಇದರಿಂದ ಬನ್ನೇರುಘಟ್ಟ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಲಿದೆ ಎಂದಿದ್ದಾರೆ’.

ಇದನ್ನೂ ಓದಿ: ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು

ಒಟ್ಟಿನಲ್ಲಿ ಆಗಸ್ಟ್- 15ರಂದು ಪಿಂಕ್ ಲೈನ್ ಮಾರ್ಗದ 6 ಮೆಟ್ರೋ ಸ್ಟೇಷನ್​ಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿತ್ತು, ಆದರೆ ಆರ್ಡಿಎಸ್ಓ ಅನುಮತಿ ನೀಡದ ಹಿನ್ನೆಲೆ
ಆಗಸ್ಟ್- 15 ರಂದು ಮೆಟ್ರೋ ಸಂಚಾರ ಮಾಡುವುದು ಡೌಟ್ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವೃಶ್ಚಿಕಕ್ಕೆ ಕೋಪ, ತುಲಾಗೆ ಧನ ನಷ್ಟದ ಎಚ್ಚರಿಕೆ: ಈ ಎರಡು ರಾಶಿಯವರು ತಪ್ಪದೇ ವಹಿಸಬೇಕು ಜಾಗ್ರತೆ – Kannada News | Shukra Kuja Rashi July 2026: Libra Scorpio Horoscope and Remedies

ಜುಲೈ ತಿಂಗಳಲ್ಲಿ ತುಲಾ ಮತ್ತು ವೃಶ್ಚಿಕ ರಾಶಿಗಳಿಗೆ ಈ ತಿಂಗಳಿನಲ್ಲಿ ಕಂಡುಬರುವ ಹಾಗೂ ಎದುರಾಗಬಹುದಾದ ಪ್ರಮುಖ ಸಮಸ್ಯೆಗಳನ್ನು ಮತ್ತು ಜಾಗ್ರತೆ ವಹಿಸಬೇಕಾಗುವುದು.

ಪ್ರಸ್ತುತ ಗ್ರಹಗಳ ಗೋಚಾರವು ಮಿಶ್ರಫಲ ನೀಡುತ್ತಿದ್ದು, ಕೆಲವು ಪ್ರಮುಖ ಭಾವಗಳಲ್ಲಿ ಗ್ರಹಗಳ ಸಂಚಾರದಿಂದಾಗಿ ತೊಂದರೆಗಳು ಎದುರಾಗುವ ಸಾಧ್ಯತೆಯಿದೆ.

ಎದುರಾಗಬಹುದಾದ ಪ್ರಮುಖ ಸಮಸ್ಯೆಗಳು:

10ನೇ ಭಾವದಲ್ಲಿ ಸೂರ್ಯ-ಗುರು ಯುತಿ :

​ತುಲಾ ರಾಶಿಗೆ ೧೦ನೇ ಮನೆಯಲ್ಲಿ ಸೂರ್ಯ ಮತ್ತು ಉಚ್ಚ ಗುರು ಅಸ್ತಂಗತನಾಗಿ ಸ್ಥಿತರಾಗಿದ್ದಾನೆ. ಉದ್ಯೋಗ ಮತ್ತು ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ​ಮೇಲಾಧಿಕಾರಿಗಳೊಂದಿಗೆ ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಕಷ್ಟಪಟ್ಟು ಕೆಲಸ ಮಾಡಿದರೂ ತಕ್ಷಣಕ್ಕೆ ಸರಿಯಾದ ಶ್ರೇಯಸ್ಸು ಸಿಗದೆ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು.

8ನೇ ಭಾವದಲ್ಲಿ ಮಂಗಳ :

​ಅಷ್ಟಮ ಸ್ಥಾನದಲ್ಲಿ ಮಂಗಳನ ಉಪಸ್ಥಿತಿಯು ತುಲಾ ರಾಶಿಯವರಿಗೆ ಶಾರೀರಿಕ ಆಯಾಸ, ಹಠಾತ್ ಆರೋಗ್ಯ ಸಮಸ್ಯೆಗಳು ಅಥವಾ ಗಾಯಗಳಾಗುವ ಸೂಚನೆ ನೀಡುತ್ತದೆ. ​ಪ್ರಯಾಣದ ಸಮಯದಲ್ಲಿ ವಿಶೇಷವಾಗಿ ವಾಹನ ಚಾಲನೆ ಮಾಡುವಾಗ ಮತ್ತು ತೀಕ್ಷ್ಣವಾದ ವಸ್ತುಗಳನ್ನು ಬಳಸುವಾಗ ಹೆಚ್ಚಿನ ಜಾಗ್ರತೆ ಅಗತ್ಯ. ಹಠಾತ್ ಧನವ್ಯಯ ಅಥವಾ ಹಣಕಾಸಿನ ನಷ್ಟದ ಸಾಧ್ಯತೆಯಿದೆ.

5ನೇ ಭಾವದಲ್ಲಿ ಚಂದ್ರ-ರಾಹು, ೧೧ನೇ ಭಾವದಲ್ಲಿ ಕೇತು-ಶುಕ್ರ ಸಂಯೋಗ:

​ಪಂಚಮ ಭಾವದಲ್ಲಿ ಚಂದ್ರ ಮತ್ತು ರಾಹು ಇರುವುದರಿಂದ ಮಾನಸಿಕ ಅಸ್ಥಿರತೆ, ಅನಗತ್ಯ ಚಿಂತೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ​ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು. ಹೂಡಿಕೆ ಅಥವಾ ಶೇರ್ ಮಾರುಕಟ್ಟೆಯಲ್ಲಿ ಹಣ ಹೂಡಿದರೆ ನಷ್ಟವಾಗುವ ಸಂಭವವಿದೆ. ​೧೧ನೇ ಭಾವದಲ್ಲಿ ಶುಕ್ರನ ಜೊತೆ ಕೇತು ಇರುವುದರಿಂದ ಸ್ನೇಹಿತರೊಂದಿಗೆ ಅಥವಾ ದೊಡ್ಡ ಸಹೋದರರೊಂದಿಗೆ ಮನಸ್ತಾಪಗಳು ಬರಬಹುದು. ಲಾಭದ ಹರಿವಿನಲ್ಲಿ ವಿಳಂಬ ಉಂಟಾಗಬಹುದು.

6ನೇ ಭಾವದಲ್ಲಿ ವಕ್ರ ಶನಿ :

​ಶತ್ರು ಮತ್ತು ಋಣ ಸ್ಥಾನದಲ್ಲಿ ಶನಿ ಇರುವುದರಿಂದ ಹಳೆಯ ಸಾಲಗಳು ಅಥವಾ ರೋಗಗಳು ಮರುಕಳಿಸಬಹುದು. ಕಾನೂನುಬದ್ಧ ವಿಚಾರಗಳಲ್ಲಿ ವಿಳಂಬ ಧೋರಣೆ ಕಂಡುಬರಬಹುದು.

​ವೃಶ್ಚಿಕ ರಾಶಿ :

​ವೃಶ್ಚಿಕ ರಾಶಿಯವರಿಗೆ ಗ್ರಹಗಳ ಸ್ಥಾನಮಾನವು ಕಾರ್ಯಕ್ಷೇತ್ರ, ಕೌಟುಂಬಿಕ ಜೀವನ ಮತ್ತು ದಾಂಪತ್ಯದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ಕಾಯ್ದುಕೊಳ್ಳಲೇಬೇಕು.

7ನೇ ಭಾವದಲ್ಲಿ ಮಂಗಳ:

​ಸಪ್ತಮ ಭಾವದಲ್ಲಿ ಮಂಗಳ ಸಂಚರಿಸುತ್ತಿರುವುದರಿಂದ ದಾಂಪತ್ಯ ಜೀವನದಲ್ಲಿ ಅಥವಾ ವ್ಯಾಪಾರ ಪಾಲುದಾರಿಕೆಯಲ್ಲಿ ಘರ್ಷಣೆಗಳು ಉಂಟಾಗಬಹುದು. ​ಸಣ್ಣ ವಿಷಯಗಳಿಗೂ ಕೋಪ ಅಥವಾ ಆವೇಶ ಹೆಚ್ಚಾಗಿ ಮಾತಿನ ಚಕಮಕಿ ನಡೆಯಬಹುದು. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಹರಿಸುವುದು ಅಗತ್ಯ.

9ನೇ ಭಾವದಲ್ಲಿ ಸೂರ್ಯ-ಗುರು :

​ಭಾಗ್ಯ ಸ್ಥಾನದಲ್ಲಿ ಸೂರ್ಯ ಮತ್ತು ಗುರು ಇರುವುದು ಸಾಮಾನ್ಯವಾಗಿ ಒಳ್ಳೆಯದೇ ಆದರೂ, ಗುರು ಅಸ್ತಂಗತನಾಗಿರುವುದರಿಂದ ತಂದೆಯವರ ಅಥವಾ ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು. ​ಧಾರ್ಮಿಕ ಕಾರ್ಯಗಳಿಗೆ ಅಥವಾ ದೂರದ ಪ್ರಯಾಣಗಳಿಗೆ ಅಡೆತಡೆಗಳು ಎದುರಾಗಬಹುದು. ಕೆಲಸ ಕಾರ್ಯಗಳು ಕೊನೆಯ ಕ್ಷಣದಲ್ಲಿ ಕೈತಪ್ಪುವ ಸಾಧ್ಯತೆ ಇರುತ್ತದೆ.

4ನೇ ಭಾವದಲ್ಲಿ ಚಂದ್ರ-ರಾಹು :

​ಚತುರ್ಥ ಭಾವದಲ್ಲಿ ಅಂದರೆ ಮಾತೃ ಮತ್ತು ಸುಖ ಸ್ಥಾನದಲ್ಲಿ ಚಂದ್ರ ಮತ್ತು ರಾಹು ಒಟ್ಟಿಗಿರುವುದರಿಂದ ಗೃಹ ವಾತಾವರಣದಲ್ಲಿ ಅಶಾಂತಿ ಅಥವಾ ಮಾನಸಿಕ ನೆಮ್ಮದಿಯ ಕೊರತೆ ಉಂಟಾಗಬಹುದು.
​ತಾಯಿಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆಸ್ತಿ, ಮನೆ ಅಥವಾ ವಾಹನಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಮೋಸ ಹೋಗುವ ಅಥವಾ ತೊಂದರೆಗೆ ಸಿಲುಕುವ ಸಾಧ್ಯತೆಯಿರುತ್ತದೆ.

​10ನೇ ಭಾವದಲ್ಲಿ ಕೇತು-ಶುಕ್ರ, ೫ನೇ ಭಾವದಲ್ಲಿ ವಕ್ರ ಶನಿ:

​ಉದ್ಯೋಗ ಸ್ಥಾನದಲ್ಲಿ ಕೇತುವಿನ ಪ್ರಭಾವದಿಂದಾಗಿ ಕೆಲಸದಲ್ಲಿ ನಿರಾಸಕ್ತಿ ಅಥವಾ ಕೆಲಸ ಬದಲಾಯಿಸುವ ಆಲೋಚನೆಗಳು ಬರಬಹುದು. ​ಪಂಚಮ ಭಾವದಲ್ಲಿ ಶನಿ ವಕ್ರಿಯಾಗಿರುವುದರಿಂದ ಮಕ್ಕಳ ಶಿಕ್ಷಣ ಅಥವಾ ಪ್ರಗತಿಗೆ ಸಂಬಂಧಿಸಿದಂತೆ ಕಳವಳ ಉಂಟಾಗಬಹುದು.

ಇದನ್ನೂ ಓದಿ: ರಾತ್ರಿ ವೇಳೆಯಲ್ಲಿ ಬಟ್ಟೆ ಒಗೆಯಬಾರದು ಏಕೆ? ಜ್ಯೋತಿಷ್ಯ ಮತ್ತು ಧಾರ್ಮಿಕ ಕಾರಣ ಇಲ್ಲಿದೆ

​ಜುಲೈ ತಿಂಗಳ ಅಂತ್ಯದ ಈ ಗ್ರಹಚಾರದ ಪ್ರಕಾರ ತುಲಾ ರಾಶಿಯವರು ತಮ್ಮ ಆರೋಗ್ಯ ಹಾಗೂ ಹಣಕಾಸಿನ ವಿಷಯದಲ್ಲಿ ಅಷ್ಟಮ ಮಂಗಳ ಇರುವ ಕಾರಣ ಎಚ್ಚರಿಕೆಯಿಂದಿರಬೇಕು. ವೃಶ್ಚಿಕ ರಾಶಿಯವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ದಾಂಪತ್ಯ ಮತ್ತು ಕೌಟುಂಬಿಕ ವಿಚಾರಗಳಲ್ಲಿ ತಾಳ್ಮೆಯಿಂದಿರಬೇಕು.

ಪರಿಹಾರ: ರಾತ್ರಿ ವೇಳೆಯಲ್ಲಿ ಬಟ್ಟೆ ಒಗೆಯಬಾರದು ಏಕೆ? ಜ್ಯೋತಿಷ್ಯ ಮತ್ತು ಧಾರ್ಮಿಕ ಕಾರಣ ಇಲ್ಲಿದೆ

​ತುಲಾ ರಾಶಿಯವರು ದಿನನಿತ್ಯ ಸುಬ್ರಹ್ಮಣ್ಯ ಸ್ವಾಮಿ ಅಥವಾ ಹನುಮಾನ್ ಚಾಲೀಸಾ ಪಠಿಸುವುದು ಮತ್ತು ದುರ್ಗಾ ದೇವಿಯ ಆರಾಧನೆ ಮಾಡುವುದು ಶುಭ.
​ವೃಶ್ಚಿಕ ರಾಶಿಯವರು ಶಿವನಿಗೆ ಜಲಾಭಿಷೇಕ ಮಾಡುವುದು ಹಾಗೂ ದಿನವೂ ವಿಷ್ಣು ಸಹಸ್ರನಾಮ ಕೇಳುವುದು ಅಥವಾ ಪಠಿಸುವುದು ಮನಸ್ಸಿಗೆ ಶಾಂತಿ ನೀಡುತ್ತದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:46 pm, Wed, 22 July 26

Source link

Exit mobile version