ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ! – Kannada News | Drought vs Determination: Elderly Bidar Couple Inspires by Re sowing Crop Despite Failure

ಬೀದರ್, ಜುಲೈ 18: ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹಳ್ಳಿಕೇಡ್ ಗ್ರಾಮದಲ್ಲಿ ವೃದ್ಧ ದಂಪತಿಗಳಾದ ತಿಪ್ಪಣ್ಣ ಮತ್ತು ಗಂಗಮ್ಮ ಅವರು ತೀವ್ರ ಬರಗಾಲದ ನಡುವೆಯೂ ತಮ್ಮ ಹೊಲದಲ್ಲಿ ಮರುಬಿತ್ತನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ದಂಪತಿಗಳು ತಮ್ಮ ಹೊಟ್ಟೆಪಾಡಿಗಾಗಿ ಸಣ್ಣ ತುಂಡುಭೂಮಿಯನ್ನೇ ನಂಬಿಕೊಂಡಿದ್ದಾರೆ. ದೊಡ್ಡ ಜಮೀನು ಇಲ್ಲದ ಇವರು, ಪ್ರಸ್ತುತ ಮಳೆ ಕೊರತೆ ಮತ್ತು ಬೆಳೆ ವೈಫಲ್ಯದ ಹೊರತಾಗಿಯೂ ಮತ್ತೆ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಗಂಗಮ್ಮ ಅವರು ತಮ್ಮ ಪತಿ ತಿಪ್ಪಣ್ಣ ಅವರಿಗೆ ಹೆಗಲು ಕೊಟ್ಟು ಜಮೀನಿನಲ್ಲಿ ಉಳುಮೆ ಮಾಡುತ್ತಿರುವುದು ಅವರ ಆರ್ಥಿಕ ಸಂಕಷ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ತೊಗರಿ ಬೆಳೆ ಹಾಕಿ ಅದು ವಿಫಲವಾದ ನಂತರವೂ, ಬದುಕು ಸಾಗಿಸಲು ಅನಿವಾರ್ಯವಾಗಿ ಮತ್ತೊಮ್ಮೆ ಬಿತ್ತನೆಗೆ ಮುಂದಾಗಿದ್ದಾರೆ. ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಈ ದಂಪತಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ತಲೆದೋರಿರುವ ಮಳೆ ಅಭಾವ ಮತ್ತು ಬರಗಾಲದ ಸಂಕಷ್ಟಕ್ಕೆ ಈ ದಂಪತಿಯ ಹೋರಾಟ ಒಂದು ಜೀವಂತ ಉದಾಹರಣೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BMRCL Recruitment 2026: ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ; ಆ. 10ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ – Kannada News | Namma Metro DGM Job: Apply Online for Operation Safety Post by Aug 10

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಸಹಭಾಗಿತ್ವದ ಸಂಸ್ಥೆಯಾದ ನಮ್ಮ ಮೆಟ್ರೋ, ನಿಯೋಜನೆ ಅಥವಾ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ.

ಯಾವ ಹುದ್ದೆಗೆ ನೇಮಕಾತಿ?

ಮೆಟ್ರೋ ರೈಲು ನಿಗಮದ ಯೋಜನಾ ವಿಭಾಗದಲ್ಲಿ ಉಪ ಪ್ರಧಾನ ವ್ಯವಸ್ಥಾಪಕರು (Operation Safety – Deputy General Manager) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಸ್ತುತ ಈ ವಿಭಾಗದಲ್ಲಿ 01 ಹುದ್ದೆ ಖಾಲಿ ಇದ್ದು, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾಗಿರುವ ಅರ್ಹ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು ಮತ್ತು ಸಮಯ:

ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್​ 10. ಇದಲ್ಲದೇ ಸಹಿ ಮಾಡಿದ ಭೌತಿಕ ಅರ್ಜಿ (Hard Copy) ತಲುಪಿಸಲು ಆಗಸ್ಟ್​ 13 ಸಂಜೆ 4:00 ಗಂಟೆಯ ವರೆಗೆ ಸಮಯವಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮೊದಲು ಅರ್ಜಿ ಸಲ್ಲಿಸಬೇಕು. ತದನಂತರ ಡೌನ್‌ಲೋಡ್ ಮಾಡಿದ ಮತ್ತು ಸಹಿ ಮಾಡಿದ ಅರ್ಜಿಯ ಪ್ರತಿಯನ್ನು ಅಗತ್ಯವಿರುವ ಎಲ್ಲಾ ಪೂರಕ ದಾಖಲೆಗಳೊಂದಿಗೆ (Documents) ಬಿಎಂಆರ್‌ಸಿಎಲ್ ಕಚೇರಿಗೆ ನಿಗದಿತ ಸಮಯದೊಳಗೆ ತಲುಪಿಸಬೇಕಾಗುತ್ತದೆ. ಈ ಹುದ್ದೆಗೆ ಬೇಕಾಗುವ ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಅರ್ಜಿ ಪ್ರಕ್ರಿಯೆಯ ಸಂಪೂರ್ಣ ವಿವರಗಳಿಗಾಗಿ ಅಭ್ಯರ್ಥಿಗಳು ಬಿಎಂಆರ್‌ಸಿಎಲ್‌ನ ಅಧಿಕೃತ ವೆಬ್‌ಸೈಟ್ ಆದ www.bmrc.co.in/Career Section ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ತಡರಾತ್ರಿ ಬೆಂಗಳೂರಿನ 150ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ರೈಡ್ – Kannada News | DCP Saidulla Leads Massive Whitefield Operation Against Rowdies in Bengaluru

ಬೆಂಗಳೂರು, ಜು.18: ರಾಜಧಾನಿಯಲ್ಲಿ ರೌಡಿ ಚಟುವಟಿಕೆಗಳು ಹಾಗೂ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ವೈಟ್‌ಫೀಲ್ಡ್ ವಿಭಾಗದ ಪೊಲೀಸರು ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ (DCP) ಸೈದುಲ್ಲಾ ಅಡಾವತ್ ಅವರ ನೇತೃತ್ವದಲ್ಲಿ ಏಕಕಾಲಕ್ಕೆ 150ಕ್ಕೂ ಹೆಚ್ಚು ಹಳೆಯ ಹಾಗೂ ಸಕ್ರಿಯ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಲಾಗಿದೆ.

ನಗರದ ವೈಟ್‌ಫೀಲ್ಡ್, ವರ್ತೂರು, ಮಹದೇವಪುರ, ಕೆ.ಆರ್. ಪುರಂ ಹಾಗೂ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ತಡರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆಯವರೆಗೆ ಪೊಲೀಸರು ರೌಡಿಗಳ ಮನೆಗಳನ್ನು ಜಾಲಾಡಿದ್ದಾರೆ. ಈ ಮೆಗಾ ರೈಡ್‌ಗಾಗಿ ಒಟ್ಟು 28 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಒಟ್ಟು 140ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಏಕಕಾಲಕ್ಕೆ ರೌಡಿಗಳ ಮನೆಗಳಿಗೆ ನುಗ್ಗಿದ್ದಾರೆ.

ಪೊಲೀಸ್ ತಂಡಗಳು ರೌಡಿಶೀಟರ್‌ಗಳ ಮನೆ, ಪ್ರಸ್ತುತ ವಿಳಾಸ ಹಾಗೂ ಅವರ ಪೂರ್ವಾಪರಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಕೆಲವು ರೌಡಿಗಳನ್ನು ರಸ್ತೆಯಲ್ಲೇ ತಡೆದು ಅವರ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಸರಿಯಾದ ದಾಖಲೆ ಪತ್ರಗಳಿಲ್ಲದ ಒಟ್ಟು 13 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಜೆಪಿ ಮುಖಂಡನ ಕಾಲು ಮುರಿತ: 6 ಅಡಿ ಆಳದ ಚರಂಡಿಗೆ ಬಿದ್ದ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ

ದಾಳಿ ವೇಳೆ ರೌಡಿಶೀಟರ್‌ಗಳ ಮನೆಗಳಲ್ಲಿ ಯಾವುದೇ ಮಾರಕಾಸ್ತ್ರಗಳು ಅಥವಾ ಅಕ್ರಮ ವಸ್ತುಗಳು ಇವೆಯೇ ಎಂದು ತಪಾಸಣೆ ನಡೆಸಿದ ಪೊಲೀಸರು, ಎಲ್ಲರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಶಾಂತಿ ಭಂಗ ಉಂಟುಮಾಡುವುದು, ಹಫ್ತಾ ವಸೂಲಿ ಅಥವಾ ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಜೈಲಿಗಟ್ಟಲಾಗುವುದು ಎಂದು ಖಾಕಿ ಪಡೆ ಖಡಕ್ ವಾರ್ನಿಂಗ್ ನೀಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ ಯಶಸ್ವಿ: ಸ್ಕೈರೂಟ್ ತಂಡದೊಂದಿಗೆ ಮಾತನಾಡಿ, ಅಭಿನಂದಿಸಿದ ಪ್ರಧಾನಿ ಮೋದಿ – Kannada News | Vikram 1 Rocket Launch: India’s Private Space Triumph and Skyroot’s Historic Feat

ಶ್ರೀಹರಿಕೋಟ, ಜುಲೈ 18: ಭಾರತದ ಪ್ರಪ್ರಥಮ ಖಾಸಗಿ ರಾಕೆಟ್ ‘ವಿಕ್ರಮ್-1’ (Vikram-1)ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ದೊಡ್ಡ ಸಾಧನೆಯ ಬೆನ್ನಲ್ಲೇ ಸ್ಕೈರೂಟ್ ಏರೋಸ್ಪೇಸ್ ತಂಡದೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದು ಭಾರತದ ಬಾಹ್ಯಾಕಾಶ ಪಯಣದಲ್ಲಿ ಅತ್ಯಂತ ನಿರ್ಣಾಯಕ ಕ್ಷಣವಾಗಿದೆ. ನಮ್ಮ ಖಾಸಗಿ ವಲಯದ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯು ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತಿದೆ. ಈ ಮಹಾನ್ ಸಾಧನೆಯು ದೇಶದ ಲಕ್ಷಾಂತರ ಯುವಕರು ದೊಡ್ಡದಾಗಿ ಕನಸು ಕಾಣಲು ಮತ್ತು ನಿರ್ಭಯವಾಗಿ ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಈ ಮಿಷನ್ ಏಕೆ ಇಷ್ಟೊಂದು ವಿಶೇಷ?
ಇಸ್ರೋ ಮಾಜಿ ವಿಜ್ಞಾನಿಗಳ ಕನಸು: ಹೈದರಾಬಾದ್ ಮೂಲದ ಸ್ಕೈರೂಟ್ ಸಂಸ್ಥೆಯನ್ನು ಇಸ್ರೋದ (ISRO) ಮಾಜಿ ವಿಜ್ಞಾನಿಗಳಾದ ಪವನ್ ಚಂದ್ನಾ ಮತ್ತು ನಾಗಾ ಭರತ್ ಡಾಕಾ ಸ್ಥಾಪಿಸಿದ್ದರು. ಇಂದು ಅವರ ಪರಿಶ್ರಮಕ್ಕೆ ಜಾಗತಿಕ ಮಟ್ಟದ ಮನ್ನಣೆ ಸಿಕ್ಕಿದೆ.

ಮತ್ತಷ್ಟು ಓದಿ:ಜುಲೈ 18ರಂದು ನಭಕ್ಕೆ ಹಾರಲಿದೆ ಐತಿಹಾಸಿಕ ವಿಕ್ರಮ್-1 ರಾಕೆಟ್; ಜೊತೆಯಲ್ಲಿ ಮೋದಿ ಹಸ್ತಾಕ್ಷರದ ವಂದೇ ಮಾತರಂ ಮೆಸೇಜ್

ಗಣ್ಯರ ಗುಂಪಿಗೆ ಭಾರತಕ್ಕೆ ಎಂಟ್ರಿ: ಈ ಯಶಸ್ಸಿನೊಂದಿಗೆ ಭಾರತವು ಅಮೆರಿಕ, ಚೀನಾ ಮತ್ತು ಜಪಾನ್ ದೇಶಗಳ ನಂತರ ಖಾಸಗಿ ರಾಕೆಟ್ ಅನ್ನು ಬಾಹ್ಯಾಕಾಶದ ಕಕ್ಷೆಗೆ ಕಳುಹಿಸಿದ ವಿಶ್ವದ ಆಯ್ದ ಹೈಟೆಕ್ ದೇಶಗಳ ಗಣ್ಯರ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಮೋದಿ ಪೋಸ್ಟ್​

ಕಡಿಮೆ ವೆಚ್ಚದ ತಂತ್ರಜ್ಞಾನ: ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಸ್ಥಳೀಯವಾಗಿ ತಯಾರಾದ ಈ ರಾಕೆಟ್, ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಇದು ಮುಂದಿನ ದಿನಗಳಲ್ಲಿ ಜಾಗತಿಕ ವಾಣಿಜ್ಯ ಉಪಗ್ರಹ ಮಾರುಕಟ್ಟೆಯಲ್ಲಿ ಭಾರತದ ದರ್ಬಾರ್ ಹೆಚ್ಚಿಸಲಿದೆ.

ಸ್ಕೈರೂಟ್ ಸಂಸ್ಥೆಯ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಪವನ್ ಕುಮಾರ್ ಚಂದ್ನಾ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, “ನೀವು ಇಡೀ ಭಾರತ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನಿಮ್ಮ ತಂಡವು ಭಾರತದ ಆಕಾಂಕ್ಷೆಗಳನ್ನು ಬಾಹ್ಯಾಕಾಶದಲ್ಲಿ ನೆಟ್ಟಿದೆ ಮತ್ತು ದೇಶದ ಕೋಟ್ಯಂತರ ಯುವಕರ ಕನಸುಗಳಿಗೆ ಗಟ್ಟಿ ಬೇರುಗಳನ್ನು ಹಾಕಿದೆ” ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

ವಿಡಿಯೋ:

ಮಾತುಕತೆಯ ವೇಳೆ ಸಿಇಒ ಪವನ್ ಚಂದ್ನಾ ಅವರು, “ನಮ್ಮ ತಂಡದ ವಿಜ್ಞಾನಿಗಳ ಸರಾಸರಿ ವಯಸ್ಸು ಕೇವಲ 28 ವರ್ಷಗಳು” ಎಂದು ಹೆಮ್ಮೆಯಿಂದ ತಿಳಿಸಿದಾಗ ಪ್ರಧಾನಿಯವರು ಮತ್ತಷ್ಟು ಸಂತಸಪಟ್ಟರು. “ಭಾರತದ ಯುವಶಕ್ತಿಯ ಮೇಲಿನ ನನ್ನ ನಂಬಿಕೆಯನ್ನು ನಿಮ್ಮ ತಂಡ ನಿಜ ಮಾಡಿ ತೋರಿಸಿದೆ. ಒಮ್ಮೆ ನಮ್ಮ ಬಾಹ್ಯಾಕಾಶ ಕನಸುಗಳನ್ನು ಜಗತ್ತು ಅನುಮಾನಿಸಿತ್ತು. ಆದರೆ ಭಾರತೀಯ ಯುವಕರು ಮನಸ್ಸು ಮಾಡಿದರೆ ಅದ್ಭುತಗಳನ್ನೇ ಸೃಷ್ಟಿಸಬಹುದು ಎಂಬುದನ್ನು ನೀವು ಜಗತ್ತಿಗೆ ಸಾಬೀತುಪಡಿಸಿದ್ದೀರಿ” ಎಂದು ಪ್ರಧಾನಿ ಹೇಳಿದರು.

ಈ ಒಂಬತ್ತು ನಿಮಿಷಗಳ ಸುದೀರ್ಘ ಕರೆಯಲ್ಲಿ ಅತ್ಯಂತ ಭಾವುಕ ಕ್ಷಣವೊಂದು ಎದುರಾಯಿತು. ಉಡಾವಣೆಗೂ ಮುನ್ನ ಪ್ರಧಾನಿ ಮೋದಿ ಅವರು ತಮ್ಮ ಸ್ವಹಸ್ತದಿಂದ ಕೈಬರಹದಲ್ಲಿ ಬರೆದುಕೊಟ್ಟಿದ್ದ “ವಂದೇ ಮಾತರಂ” ಎಂಬ ವಿಶೇಷ ಶುಭ ಹಾರೈಕೆಯ ಪತ್ರವನ್ನು ವಿಕ್ರಮ್-1 ರಾಕೆಟ್‌ನೊಳಗೆ ಇಟ್ಟು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.

ಈ ಐತಿಹಾಸಿಕ ಕಾರ್ಯಾಚರಣೆಗೆ ‘ಆಗಮನ್’ (Aagaman) ಎಂದು ಹೆಸರಿಡಲಾಗಿದ್ದು, ಪ್ರಧಾನಿಯವರು ಈ ಹೆಸರನ್ನು ಉಲ್ಲೇಖಿಸಿ ಮಾತನಾಡಿದರು. “ಭಾರತೀಯ ಬಾಹ್ಯಾಕಾಶ ಕಥೆಯನ್ನು ನೀವು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೀರಿ. ಸ್ಕೈರೂಟ್ ಸಂಸ್ಥೆಯ ಸುದೀರ್ಘ ಪಯಣಕ್ಕೆ ಇದು ಕೇವಲ ಆರಂಭವಷ್ಟೇ. ಈ ಅದ್ಭುತ ಪ್ರತಿಭಾವಂತ ತಂಡಕ್ಕಾಗಿ ಭವಿಷ್ಯದಲ್ಲಿ ಇನ್ನೂ ಇಂತಹ ನೂರಾರು ಮೈಲಿಗಲ್ಲುಗಳು ಕಾಯುತ್ತಿವೆ” ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:35 pm, Sat, 18 July 26

Source link

ಎಸ್‌ಐಆರ್ ಕರ್ತವ್ಯಕ್ಕೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳು-ಪೋಷಕರ ಪ್ರತಿಭಟನೆ – Kannada News | SIR Duty Deployment of Teachers Disrupts Classes in Bengaluru School, Students and Parents Protest

ಬೆಂಗಳೂರು, ಜುಲೈ 18: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗೆ ಶಿಕ್ಷಕರನ್ನು ನಿಯೋಜಿಸಿರುವ ಪರಿಣಾಮ ಶಾಲಾ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಗುರುಕುಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 7 ಶಿಕ್ಷಕರ ಪೈಕಿ 6 ಮಂದಿಯನ್ನು ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ 8, 9 ಮತ್ತು 10ನೇ ತರಗತಿಗಳಿಗೆ ಒಬ್ಬ ಶಿಕ್ಷಕರೇ ಎಲ್ಲಾ ವಿಷಯಗಳನ್ನು ಬೋಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 1ರಿಂದ 7ನೇ ತರಗತಿಗಳಿಗೂ ಸೀಮಿತ ಶಿಕ್ಷಕರಿಂದಲೇ ಪಾಠ ನಡೆಯುತ್ತಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಆರೋಪಿಸಿ ಶಾಲೆಯ ಎದುರು ಪ್ರತಿಭಟನೆ ನಡೆಸಿದ ಅವರು, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆಯಾಗದಂತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರಿನ ಶಿರಾದಲ್ಲೇ ಎರಡನೇ ವಿಮಾನ ನಿಲ್ದಾಣ ಯಾಕೆ? ಮಧ್ಯ-ಉತ್ತರ ಕರ್ನಾಟಕ ಅಭಿವೃದ್ಧಿಗೆ ಇದು ಅಗತ್ಯ ಎಂದ ಸೋಮಣ್ಣ – Kannada News | Why Tumkur’s Sira is the Best Choice for Bengaluru’s Second Airport? Union Minister V Somanna Explains

ವಿ. ಸೋಮಣ್ಣ Image Credit source: Facebook

ಬೆಂಗಳೂರು, ಜುಲೈ 18: ಬೆಂಗಳೂರಿನಲ್ಲಿ (Bengaluru) ಎರಡನೇ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ, ನೂತನ ಏರ್​ಪೋರ್ಟ್​ಗೆ ತುಮಕೂರು ಜಿಲ್ಲೆಯ ಶಿರಾ ಸೂಕ್ತ ಸ್ಥಳವೆಂದು ಕೇಂದ್ರ ಸಚಿವ ವಿ. ಸೋಮಣ್ಣ ಪ್ರತಿಪಾದಿಸಿದ್ದಾರೆ. ಈ ಕುರಿತು ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರಿನ ಸಮೀಪ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವುದಕ್ಕಿಂತ ಶಿರಾದಲ್ಲಿ ನಿರ್ಮಾಣ ಮಾಡಿದರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಶಿರಾದಲ್ಲಿ ವಿಮಾನ ನಿಲ್ದಾಣ ಯಾಕೆ? ಸೋಮಣ್ಣ ಕೊಟ್ಟ ಕಾರಣ ಏನು?

ಸೋಮಣ್ಣ ಪ್ರಕಾರ, ಶಿರಾದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಮಧ್ಯ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕೈಗಾರಿಕೆ, ವ್ಯಾಪಾರ, ಹೂಡಿಕೆ ಮತ್ತು ಸಾರಿಗೆ ವ್ಯವಸ್ಥೆಗೆ ದೊಡ್ಡ ಉತ್ತೇಜನ ಸಿಗಲಿದೆ. ಈಗಾಗಲೇ ಅಭಿವೃದ್ಧಿ ಬೆಂಗಳೂರು ಕೇಂದ್ರಿತವಾಗಿರುವ ಹಿನ್ನೆಲೆಯಲ್ಲಿ, ಹೊಸ ಮೂಲಸೌಕರ್ಯಗಳನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಶಿರಾಕ್ಕೆ ಇರುವ ಪ್ರಮುಖ ಅನುಕೂಲಗಳು

ಶಿರಾ ಭಾಗದಲ್ಲಿ ಈಗಾಗಲೇ ಮುಂಬೈ–ಬೆಂಗಳೂರು ಕೈಗಾರಿಕಾ ಕಾರಿಡಾರ್, ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (NIMZ) ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.

ಇದಲ್ಲದೆ, ರಸ್ತೆ ಮತ್ತು ರೈಲು ಸಂಪರ್ಕವೂ ಉತ್ತಮವಾಗಿದ್ದು, ಭೂಮಿ ಲಭ್ಯತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ದೃಷ್ಟಿಯಿಂದಲೂ ಶಿರಾ ಸೂಕ್ತ ಸ್ಥಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡಿಜಿಸಿಎ ನಿಯಮಕ್ಕೂ ಅನುಕೂಲ

ಡಿಜಿಸಿಎ (DGCA) ನಿಯಮಗಳ ಪ್ರಕಾರ, ಶಿರಾ ನಗರವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಾಂತ್ರಿಕ ಅಡ್ಡಿಯೂ ಇರುವುದಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.

ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವಂತೆ ಸಲಹೆ

ಬೆಂಗಳೂರು ಸುತ್ತಮುತ್ತ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಿದರೆ ಅಭಿವೃದ್ಧಿ ಮತ್ತೆ ಒಂದೇ ಭಾಗಕ್ಕೆ ಸೀಮಿತವಾಗುವ ಸಾಧ್ಯತೆ ಇದೆ. ಆದರೆ ಶಿರಾದಲ್ಲಿ ನಿರ್ಮಿಸಿದರೆ ಮಧ್ಯ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿದ್ದು, ರಾಜ್ಯದ ಸಮತೋಲಿತ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 350ಕ್ಕೆ ಹೆಚ್ಚಿಸುವ ಗುರಿ: ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣದ ಭರವಸೆ

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ಕೇಂದ್ರಿತ ದೃಷ್ಟಿಕೋನದಿಂದ ಹೊರಬಂದು, ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಮಾನದಂಡವಾಗಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ವಿ. ಸೋಮಣ್ಣ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:10 pm, Sat, 18 July 26

Source link

ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರ ಕೇಳಿದ್ರೆ ದಂಗಾಗುವುದು ಗ್ಯಾರೆಂಟಿ! – Kannada News | FIFA World Cup 2026 Final Tickets Spark Price Records

ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರಗಳು ಗಗನಕ್ಕೇರಿವೆ. ಅಮೆರಿಕದ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ (ಜುಲೈ 19) ನಡೆಯಲಿರುವ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಈ ಮಹಾಸಮರ ಕ್ರೀಡಾ ಲೋಕದ ಅತ್ಯಂತ ದುಬಾರಿ ಈವೆಂಟ್ ಆಗಿ ಹೊರಹೊಮ್ಮಿದೆ. ಲಿಯೋನೆಲ್ ಮೆಸ್ಸಿ ಮತ್ತು ಸ್ಪೇನ್‌ನ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ನಡುವಿನ ಈ ಪಂದ್ಯವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಕೋಟಿ ಕೋಟಿ ಖರ್ಚು ಮಾಡಲು ಸಿದ್ಧರಾಗಿದ್ದಾರೆ.

ಫಿಫಾ ಟಿಕೆಟ್​ಗಳ ಮಾರಾಟ ವಿವರ:

  • ಅತ್ಯಂತ ಕನಿಷ್ಠ ದರ: ಕ್ರೀಡಾಂಗಣದ ಅತ್ಯಂತ ಮೇಲಿನ ಸ್ಟ್ಯಾಂಡ್‌ನ (300 ಲೆವೆಲ್) ಒಂದು ಸೀಟಿನ ಬೆಲೆ $6,943 ರಿಂದ $7,600 ಕ್ಕೆ (ಸುಮಾರು ₹5.8 ಲಕ್ಷದಿಂದ ₹6.3 ಲಕ್ಷ) ಮಾರಾಟವಾಗಿದೆ.
  • ಸರಾಸರಿ ಟಿಕೆಟ್ ಬೆಲೆ: ಅಭಿಮಾನಿಗಳು ಪಂದ್ಯ ವೀಕ್ಷಿಸಲು ಖರೀದಿಸಿರುವ ಸರಾಸರಿ ಟಿಕೆಟ್ ಬೆಲೆ ಬರೋಬ್ಬರಿ $11,327 (ಸುಮಾರು ₹9.4 ಲಕ್ಷ) ಆಗಿದೆ. ಇದು ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಸರಾಸರಿಯಾಗಿದೆ.
  • ಪ್ರೀಮಿಯಂ/ವಿಐಪಿ ಟಿಕೆಟ್: ಮೈದಾನಕ್ಕೆ ಅತ್ಯಂತ ಹತ್ತಿರವಿರುವ ಫ್ರಂಟ್ ಸೆಕ್ಷನ್‌ನ (115A) ಒಂದು ಟಿಕೆಟ್ $28,479 (ಸುಮಾರು ₹23.7 ಲಕ್ಷ) ಗೆ ಮಾರಾಟವಾಗಿದೆ. ಕೆಲವು ವಿಐಪಿ ಟ್ರೋಫಿ ಲಾಂಜ್ ಪ್ಯಾಕೇಜ್‌ಗಳ ಬೆಲೆ ₹30 ಲಕ್ಷದ ಗಡಿ ದಾಟಿದೆ.

ಬ್ಲ್ಯಾಕ್ ಮಾರ್ಕೆಟ್ ಹಾಗೂ ಅಧಿಕೃತ ರಿಸೇಲ್ ವೆಬ್‌ಸೈಟ್‌ಗಳಲ್ಲಿ (ಉದಾಹರಣೆಗೆ TickPick) ಟಿಕೆಟ್ ಬೆಲೆಗಳು ಸೃಷ್ಟಿಸಿರುವ ಹೊಸ ದಾಖಲೆಯ ವಿವರಗಳು ಹೀಗಿವೆ.

ಟಿಕೆಟ್ ವಿಭಾಗ USD INR
ಅಧಿಕೃತ ಆರಂಭಿಕ ಹಂತದ ಟಿಕೆಟ್ $2,030 – $7,600 ₹1.95 ಲಕ್ಷ – ₹6.3 ಲಕ್ಷ
ಸ್ಟ್ಯಾಂಡರ್ಡ್ ಟಾಪ್-ಟೈರ್ $10,990 ₹10.58 ಲಕ್ಷ
ಸರಾಸರಿ ಮರುಮಾರಾಟ ಖರೀದಿ ಬೆಲೆ $11,327 ₹10.90 ಲಕ್ಷ
 ಆನ್-ಫೀಲ್ಡ್ ಹಾಸ್ಪಿಟಾಲಿಟಿ (12 ಜನರ ಖಾಸಗಿ ಬಾಕ್ಸ್) $1,000,000+ ₹9.62 ಕೋಟಿ+
ಗರಿಷ್ಠ ಮರುಮಾರಾಟ ಮಾರುಕಟ್ಟೆ ದರ $2,300,000 ₹22.14 ಕೋಟಿ

22 ಕೋಟಿ ರೂ.!

ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನ ಲೋವರ್ ಡೆಕ್‌ನ ಬ್ಲಾಕ್ 124, ರೋ 45 ರಲ್ಲಿರುವ (Block 124, Row 45) ನಾಲ್ಕು ಪ್ರೀಮಿಯಂ ಟಿಕೆಟ್‌ಗಳನ್ನು ತಲಾ $2.3 ಮಿಲಿಯನ್ ಅಂದರೆ ಸುಮಾರು ₹21.68 ಕೋಟಿಯಿಂದ ₹22.14 ಕೋಟಿ ಬೆಲೆಗೆ ಫಿಫಾ ರಿಸೇಲ್ ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗಿದೆ.

ಫಿಫಾ ರಿಸೇಲ್ ಮಾರುಕಟ್ಟೆಯಲ್ಲಿ ಬರೋಬ್ಬರಿ ₹22.14 ಕೋಟಿಗೆ (ಸುಮಾರು $2.3 ಮಿಲಿಯನ್) ಲಿಸ್ಟ್ ಆಗಿರುವ ಆ ಪ್ರೀಮಿಯಂ ಟಿಕೆಟ್‌ಗಳ ಅಸಲಿ ಮೂಲ ಬೆಲೆ ಕೇವಲ ₹5.36 ಲಕ್ಷದಿಂದ ₹10.18 ಲಕ್ಷ ($5,785 ರಿಂದ $10,990) ಆಗಿತ್ತು.

ಇದೀಗ ಸ್ಟೇಡಿಯಂನ ಲೋವರ್ ಡೆಕ್‌ನ ಬ್ಲಾಕ್ 124, ರೋ 45 ರಲ್ಲಿರುವ (Block 124, Row 45) ಇಂತಹ ನಾಲ್ಕು ಪ್ರೀಮಿಯಂ ಟಿಕೆಟ್‌ಗಳನ್ನು ಒಟ್ಟಾರೆಯಾಗಿ ಬರೋಬ್ಬರಿ ₹88 ಕೋಟಿ ರೂಪಾಯಿಗೆ ಮರುಮಾರಾಟಕ್ಕಿಡಲಾಗಿದೆ.

ಟಿಕೆಟ್ ದುಬಾರಿಯಾಗಲು ಕಾರಣವೇನು?

39 ವರ್ಷದ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಇದಾಗುವ ಸಾಧ್ಯತೆ ಇರುವುದರಿಂದ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಜಗತ್ತಿನಾದ್ಯಂತ ಜನರು ಮುಗಿಬಿದ್ದಿದ್ದಾರೆ.

ಹಾಗೆಯೇ ಫುಟ್‌ಬಾಲ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಮೆಸ್ಸಿ ಒಂದು ಕಡೆಯಿದ್ದರೆ, ಮತ್ತೊಂದು ಕಡೆ ಸ್ಪೇನ್‌ನ 19 ವರ್ಷದ ಹೊಸ ಸೆನ್ಸೇಷನ್ ಲಾಮಿನ್ ಯಮಾಲ್ ಇದ್ದಾರೆ. ಇದು ‘ಸೌತ್ ಅಮೆರಿಕ vs ಯುರೋಪ್’ ಕದನ ಮಾತ್ರವಲ್ಲದೆ, ಇಬ್ಬರು ತಲೆಮಾರುಗಳ ಶ್ರೇಷ್ಠ ಆಟಗಾರರ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ.

ಮತ್ತೊಂದೆಡೆ, ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರಗಳನ್ನು ಹೆಚ್ಚಿಸುವ ಫಿಫಾದ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ರಿಸೇಲ್ ಮಾರುಕಟ್ಟೆಯಲ್ಲಿ ಬೆಲೆಗಳು ರಾಕೆಟ್ ವೇಗದಲ್ಲಿ ಜಿಗಿದಿವೆ.

ಇದನ್ನೂ ಓದಿ: T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ

ಫೈನಲ್ ಪಂದ್ಯ ಯಾವಾಗ?

ಫಿಫಾ ವಿಶ್ವಕಪ್​ನ ಫೈನಲ್​ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ, ಜುಲೈ 20ರ ಮಧ್ಯರಾತ್ರಿ 12:30ಕ್ಕೆ ಆರಂಭವಾಗಲಿದೆ. ಅರ್ಜೆಂಟೀನಾ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲಲು ಸಜ್ಜಾಗಿದ್ದರೆ, ಸ್ಪೇನ್ 16 ವರ್ಷಗಳ ನಂತರ ಚಾಂಪಿಯನ್ ಪಟ್ಟಕ್ಕೇರಲು ಕಾಯುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

Source link

ಕೊಪ್ಪಳ: ಕಲ್ಯಾಣಿ ಸ್ಟೀಲ್ಸ್‌ಗೆ ಷರತ್ತುಬದ್ಧ ಅನುಮತಿ; ಜಿಲ್ಲಾಡಳಿತದ ನಡೆಗೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನ! – Kannada News | Koppal Kalyani Steels Gets Conditional Permission to Reopen Amid Controversy

ಕಲ್ಯಾಣಿ ಸ್ಟೀಲ್ಸ್‌ಗೆ ಷರತ್ತುಬದ್ಧ ಅನುಮತಿ

ಕೊಪ್ಪಳ, ಜುಲೈ 18: ತಾಲೂಕಿನ ಗಿಣಗೇರಾ ಬಳಿ ಇರುವ ಪ್ರಸಿದ್ಧ ‘ಕಲ್ಯಾಣಿ ಸ್ಟೀಲ್ಸ್ ಆಂಡ್ ಪವರ್ ಲಿಮಿಟೆಡ್’ ಕಾರ್ಖಾನೆಗೆ ಕೊನೆಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪುನರಾರಂಭಿಸಲು ಷರತ್ತುಬದ್ಧ ಅನುಮತಿ ನೀಡಿದೆ. ಆದರೆ, ಕಾರ್ಖಾನೆ ಬಂದ್ ಮಾಡುವ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ನಡೆದುಕೊಂಡ ರೀತಿಯು ಸಾರ್ವಜನಿಕರಲ್ಲಿ ಮತ್ತು ಪರಿಸರ ಪ್ರೇಮಿಗಳಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಪರಿಸರ ನಿಯಮ ಉಲ್ಲಂಘನೆ: ಏನಿದು ಹಿನ್ನೆಲೆ?

ಕಲ್ಯಾಣಿ ಸ್ಟೀಲ್ ಕಾರ್ಖಾನೆಯು ವಾಟರ್ ಆ್ಯಕ್ಟ್ (ಜಲ ಮಾಲಿನ್ಯ ತಡೆ ಕಾಯ್ದೆ) ಹಾಗೂ ವಾಯು ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಕಾರ್ಖಾನೆಯಿಂದ ಹೊರಬೀಳುವ ಹೊಗೆ ಮತ್ತು ಧೂಳಿನಿಂದಾಗಿ ಸ್ಥಳೀಯರ ಆರೋಗ್ಯ ಹಾಗೂ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಜುಲೈ 3ರಂದೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ (Closure Notice) ಕಡಕ್ ಆದೇಶ ಹೊರಡಿಸಿತ್ತು.

ಜಿಲ್ಲಾಡಳಿತದ ವಿಳಂಬ ನೀತಿ

ಕೇಂದ್ರ ಮಂಡಳಿಯು ಜುಲೈ 3ರಂದೇ ಆದೇಶ ನೀಡಿದ್ದರೂ, ಕೊಪ್ಪಳ ಜಿಲ್ಲಾಡಳಿತ ಮಾತ್ರ ಈ ಬಗ್ಗೆ ತಕ್ಷಣ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದೇಶ ಹೊರಬಿದ್ದ ಬರೋಬ್ಬರಿ 11 ದಿನಗಳ ಬಳಿಕ, ಅಂದರೆ ಜುಲೈ 14ರಂದು ಜಿಲ್ಲಾಧಿಕಾರಿಗಳು ಕಾರ್ಖಾನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜೆಸ್ಕಾಂ (GESCOM) ಸಿಬ್ಬಂದಿಗೆ ಸೂಚನೆ ನೀಡಿದರು. ಅದರಂತೆ ಜುಲೈ 15ರಂದು ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪವರ್ ಕಟ್ ಮಾಡಿದ್ದರು.

ಕೇಂದ್ರದ ಆದೇಶ ಜಾರಿಗೆ ತರಲು ಜಿಲ್ಲಾಡಳಿತ ಇಷ್ಟೊಂದು ದಿನ ವಿಳಂಬ ಮಾಡಿದ್ದೇಕೆ? ಕಾರ್ಖಾನೆಯ ಮ್ಯಾನೇಜ್‌ಮೆಂಟ್‌ಗೆ ಸಮಯಾವಕಾಶ ಮಾಡಿಕೊಡಲಾಯಿತೇ? ಎಂಬ ಪ್ರಶ್ನೆಗಳು ಈಗ ಜಿಲ್ಲಾಡಳಿತದ ಮೇಲೆ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ.

ಪವರ್ ಕಟ್ ಆದ ಮರುದಿನವೇ ಸಿಕ್ಕಿತು ಅನುಮತಿ!

ಇನ್ನು ಎಲ್ಲಕ್ಕಿಂತ ರೋಚಕ ತಿರುವು ಸಿಕ್ಕಿದ್ದು ಜುಲೈ 16ರಂದು. ಜೆಸ್ಕಾಂ ಸಿಬ್ಬಂದಿ ಜುಲೈ 15ರಂದು ವಿದ್ಯುತ್ ಕಡಿತಗೊಳಿಸಿದ ಬೆನ್ನಲ್ಲೇ, ಮರುದಿನವೇ (ಜುಲೈ 16) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಯನ್ನು ಪುನರಾರಂಭಿಸಲು 3 ತಿಂಗಳ ಕಾಲಾವಧಿಯ ಷರತ್ತುಬದ್ಧ ಅನುಮತಿಯನ್ನು ನೀಡಿದೆ.

ಮಂಡಳಿ ವಿಧಿಸಿರುವ ಪ್ರಮುಖ ಷರತ್ತುಗಳು ಇವು

ಕಾರ್ಖಾನೆ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರೂ, ಮುಂದಿನ 3 ತಿಂಗಳು ತೀವ್ರ ನಿಗಾದಲ್ಲಿ ಇಡಲಾಗುತ್ತಿದ್ದು, ಈ ಕೆಳಗಿನ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.

  • ಕಾರ್ಖಾನೆಯಿಂದ ಹೊರಬರುವ ಹೊಗೆಯ ಪ್ರಮಾಣವನ್ನು ನಿರಂತರವಾಗಿ ಗಮನಿಸಬೇಕು.
  • ಕೈಗಾರಿಕೆಗೆ ಬಳಸುವ ಕಚ್ಚಾ ವಸ್ತುಗಳು ಗಾಳಿಗೆ ಹರಡದಂತೆ ಸಂಪೂರ್ಣವಾಗಿ ಮುಚ್ಚಿಡಬೇಕು.
  • ಹೊಗೆ ಗೂಡುಗಳ (Chimneys) ಮಾಲಿನ್ಯದ ದತ್ತಾಂಶವನ್ನು (Data) ಸರಿಯಾಗಿ ನಿರ್ವಹಿಸಬೇಕು ಹಾಗೂ ಆನ್‌ಲೈನ್ ಮಾನಿಟರಿಂಗ್ ಸಿಸ್ಟಮ್ ಸಮರ್ಪಕವಾಗಿರಬೇಕು.
  • ಕಚೇರಿ ಹಾಗೂ ಕಾರ್ಖಾನೆಯ ಸುತ್ತಮುತ್ತ ಸಾರ್ವಜನಿಕರಿಗೆ ತೊಂದರೆಯಾಗದಂತೆ ಧೂಳು ಹರಡದಂತೆ ಸೂಕ್ತ ಮೇಲ್ವಿಚಾರಣೆ ನಡೆಸಬೇಕು.
  • ತ್ಯಾಜ್ಯ ಸಂಗ್ರಹಿಸುವ ಹೂಳಿನ ಹೊಂಡದ (Sludge pond/Waste handling) ಬಾಕಿ ಇರುವ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು.

ಒಟ್ಟಿನಲ್ಲಿ, ಮಾಲಿನ್ಯದ ದೂರಿನ ಮೇರೆಗೆ ಬಂದ್ ಆಗಿದ್ದ ಕಲ್ಯಾಣಿ ಸ್ಟೀಲ್ಸ್ ಕೇವಲ ಮೂರೇ ದಿನಗಳಲ್ಲಿ ಮತ್ತೆ ಕಾರ್ಯಾರಂಭ ಮಾಡಲು ಸಜ್ಜಾಗಿದೆ. ಆದರೆ, ಇಡೀ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತದ ತಡವಾದ ನಡೆ ಮಾತ್ರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NEET UG 2026: ಕುರಿ ಕಾಯುತ್ತಲೇ ನೀಟ್‌ನಲ್ಲಿ ಅಪ್ರತಿಮ ಸಾಧನೆ; ದೇಶಕ್ಕೇ 694ನೇ ರ‍್ಯಾಂಕ್ ಪಡೆದ ಕೊಪ್ಪಳದ ಹಳ್ಳಿ ಹೈದ! – Kannada News | Koppal’s Puttaraj Bheemanur: Overcoming Poverty, Achieving Top NEET Rank

ಕೊಪ್ಪಳ: ಕಠಿಣ ಪರಿಶ್ರಮ ಮತ್ತು ಛಲವೊಂದಿದ್ದರೆ ಎಂತಹ ಬಡತನವೂ ಸಾಧನೆಗೆ ಅಡ್ಡಿಯಾಗಲ್ಲ ಎಂಬುದನ್ನು ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿಭಾನ್ವಿತ ಯುವಕನೊಬ್ಬ ಸಾಬೀತುಪಡಿಸಿದ್ದಾನೆ. ಹಗಲಲ್ಲಿ ಕುರಿ ಕಾಯುತ್ತಾ, ಸಗಣಿ ಬಳಿಯುತ್ತಾ ಕಡು ಬಡತನದಲ್ಲೇ ಓದಿದ ಈ ಹಳ್ಳಿ ಹೈದ ಪುಟ್ಟರಾಜ್ ಭೀಮನೂರ ನೀಟ್ (NEET) ಪರೀಕ್ಷೆಯಲ್ಲಿ ದೇಶಕ್ಕೇ ಅದ್ಭುತ ರ್ಯಾಂಕ್ ಪಡೆಯುವ ಮೂಲಕ ಇಡೀ ಜಿಲ್ಲೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ.

ಕೊಪ್ಪಳ ತಾಲೂಕಿನ ನಿವಾಸಿಯಾದ ಪುಟ್ಟರಾಜ್ ಭೀಮನೂರ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವನು. ಇವರ ತಂದೆ ತಾಯಿ ಇಂದಿಗೂ ದಿನಗೂಲಿಗಾಗಿ ಕೃಷಿ ಕೆಲಸವನ್ನೇ ನೆಚ್ಚಿಕೊಂಡಿದ್ದಾರೆ. ಸ್ವಂತ ಸೂರಿಲ್ಲದೆ ಊರು ಬಿಟ್ಟು ತೋಟದ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಬಡತನದ ಬೇಗೆಯ ನಡುವೆಯೂ ಮಗನ ಓದಿಗೆ ಪೋಷಕರು ಶಕ್ತಿ ಮೀರಿ ಪ್ರೋತ್ಸಾಹ ನೀಡಿದ್ದು, ಇದೀಗಾ ಮಗನ ಸಾಧನೆಯಿಂದ ಈ ಪುಟ್ಟ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ

ರಜೆಯಲ್ಲಿ ಕುರಿ ಕಾಯುತ್ತಲೇ ಸಾಗುತ್ತಿತ್ತು ಅಧ್ಯಯನ:

ಗಂಗಾವತಿಯ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದ ಪುಟ್ಟರಾಜುಗೆ ವೈದ್ಯೆಯಾಗಬೇಕೆಂಬ ಬಲವಾದ ಕನಸಿತ್ತು. ಕಾಲೇಜಿಗೆ ರಜೆ ಸಿಕ್ಕಾಗಲೆಲ್ಲಾ ಮನೆಗೆ ಬಂದು ಸುಮ್ಮನೆ ಕುಳಿತುಕೊಳ್ಳದೆ, ಪೋಷಕರಿಗೆ ಆಸರೆಯಾಗಲು ಕುರಿ ಕಾಯುವ ಮತ್ತು ಸಗಣಿ ಬಳಿಯುವ ಕೆಲಸ ಮಾಡುತ್ತಿದ್ದನು. ಕುರಿ ಮೇಯಿಸಲು ಹೋದಾಗಲೂ ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಿದ್ದ ಈತನ ದೃಢ ಸಂಕಲ್ಪವೇ ಇಂದು ಈತನನ್ನು ಯಶಸ್ಸಿನ ಶಿಖರಕ್ಕೇರಿಸಿದೆ.

ಒಂದು ವರ್ಷದ ತಪಸ್ಸಿಗೆ ಸಿಕ್ಕಿತು ಪ್ರತಿಫಲ:

ಪಿಯುಸಿ ಮುಗಿದ ಬಳಿಕ ಡಾಕ್ಟರ್ ಆಗುವ ಹಂಬಲದಿಂದ ಪುಟ್ಟರಾಜ್ ಒಂದು ವರ್ಷ ಕಾಲ ‘ಲಾಂಗ್ ಟರ್ಮ್’ (Long Term Coaching) ಕೋಚಿಂಗ್ ಪಡೆದು ಕಠಿಣ ಅಭ್ಯಾಸ ನಡೆಸಿದ್ದನು. ದಿನದ ಬಹುಪಾಲು ಸಮಯವನ್ನು ಓದಿಗಾಗಿಯೇ ಮೀಸಲಿಟ್ಟ ಈತನ ಶ್ರಮ ವ್ಯರ್ಥವಾಗಲಿಲ್ಲ. ಇದೀಗ ಪ್ರಕಟಗೊಂಡಿರುವ ನೀಟ್ ಫಲಿತಾಂಶದಲ್ಲಿ ಪುಟ್ಟರಾಜ್ ಎಸ್‌ಟಿ (ST) ಕೆಟಗೇರಿಯಲ್ಲಿ ದೇಶಕ್ಕೇ 694ನೇ ರ್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾನೆ.

ಕುರಿ ಕಾಯುವ ಹುಡುಗ ಈಗ ದೇಶ ಮೆಚ್ಚುವ ರ್ಯಾಂಕ್ ಗಳಿಸಿ, ಡಾಕ್ಟರ್ ಆಗ ಹೊರಟಿರುವುದು ಇಡೀ ಕೊಪ್ಪಳ ಜಿಲ್ಲೆಗೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ. ಸೌಲಭ್ಯಗಳ ಕೊರತೆಯ ನಡುವೆಯೂ ಕೇವಲ ಸ್ವಪ್ರಯತ್ನ ಮತ್ತು ನಿರಂತರ ಅಭ್ಯಾಸದಿಂದ ಪುಟ್ಟರಾಜ್ ಈ ಮೈಲಿಗಲ್ಲು ತಲುಪಿದ್ದಾನೆ. ವೈದ್ಯನಾಗಿ ಸಮಾಜದ ಸೇವೆ ಮಾಡಬೇಕೆಂಬ ಈ ಹಳ್ಳಿ ಹೈದನ ಕನಸು ನನಸಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:41 pm, Sat, 18 July 26

Source link

ಮೊದಲ ದಿನವೇ 480 ಕೋಟಿ ಗಳಿಸಿದ ‘ಆಡಸ್ಸಿ’, ಭಾರತದಲ್ಲಿ ಗಳಿಸ್ಸಿದ್ದೆಷ್ಟು? – Kannada News | The Odyssey movie first day collection in India and world box office

ಕ್ರಿಸ್ಟೋಫರ್ ನೋಲನ್ (christopher nolan) ನಿರ್ದೇಶನದ ‘ದಿ ಆಡಸ್ಸಿ’ (The Odyssey) ಸಿನಿಮಾ ಜುಲೈ 17ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ವಿಶ್ವದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿತ್ತು ‘ದಿ ಆಡಸ್ಸಿ’. ಈ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ವರ್ಷಕ್ಕೆ ಮುಂಚೆಯೇ ಮಾರಾಟವಾಗಿದ್ದವು. ಮ್ಯಾಟ್ ಡೇಮನ್, ಟಾಮ್ ಹಾಲೆಂಡ್, ಅನ್ನಾ ಹಾಥ್​​ವೇ, ಜೆಂಡೆಯಾ ಸೇರಿದಂತೆ ಇನ್ನೂ ಹಲವು ದೊಡ್ಡ ಸ್ಟಾರ್ ನಟ-ನಟಿಯರು ನಟಿಸಿದ್ದಾರೆ. ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಭಾರತದಲ್ಲೂ ಸಹ ದೊಡ್ಡ ಮೊತ್ತವನ್ನು ಗಳಿಕೆ ಮಾಡಿದೆ ‘ಆಡಸ್ಸಿ’.

‘ದಿ ಆಡಸ್ಸಿ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಮೊದಲ ದಿನವೇ 50 ಮಿಲಿಯನ್ ಡಾಲರ್ ಮೊತ್ತ ಗಳಿಕೆ ಮಾಡಿದೆ. ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಈ ಸಿನಿಮಾ ಮೊದಲ ದಿನವೇ ಬರೋಬ್ಬರಿ 481 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಕ್ರಿಸ್ಟೊಫರ್ ನೋಲನ್ ನಿರ್ದೇಶನ ಮಾಡಿರುವ ಈ ವರೆಗಿನ ಸಿನಿಮಾಗಳಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ ‘ದಿ ಆಡಸ್ಸಿ’.

‘ದಿ ಆಡಸ್ಸಿ’ ಸಿನಿಮಾ ಭಾರತದಲ್ಲಿ ಸಹ ದೊಡ್ಡ ಮೊತ್ತದ ಗಳಿಕೆಯನ್ನೇ ಮಾಡಿದೆ. ಬಹುತೇಕ ಮೆಟ್ರೋ ನಗರಗಳಲ್ಲಿ ಮಲ್ಟಿಪ್ಲೆಕ್ಸ್​​ಗಳಲ್ಲಿ ಮಾತ್ರವೇ ಬಿಡುಗಡೆ ಆಗಿರುವ ಸಿನಿಮಾ ಮೊದಲ ದಿನ 17.40 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಅಡ್ವಾನ್ಸ್ ಬುಕಿಂಗ್ ಎಲ್ಲವೂ ಸೇರಿ ಸುಮಾರು 20 ಕೋಟಿ ಗಳಿಕೆ ಮೊದಲ ದಿನವೇ ಆಗಿದೆ. ಹಾಲಿವುಡ್ ಸಿನಿಮಾ ಒಂದು ಭಾರತದಲ್ಲಿ ಮೊದಲ ದಿನ ಗಳಿಸಿದ ದೊಡ್ಡ ಮೊತ್ತಗಳಲ್ಲಿ ಇದೂ ಸಹ ಒಂದಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ‘ದಿ ಆಡಸ್ಸಿ’ಯನ್ನು ಹಿಂದಿಕ್ಕಿದ ‘ಸ್ಪೈಡರ್​​ಮ್ಯಾನ್’

‘ದಿ ಆಡಸ್ಸಿ’ ಸಿನಿಮಾ, ಭಾರತದಲ್ಲಿ ಇಂಗ್ಲೀಷ್​​ನಲ್ಲಿ ಮಾತ್ರವೇ ಅಲ್ಲದೆ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಸಹ ಬಿಡುಗಡೆ ಆಗಿತ್ತು. ಸಿನಿಮಾದ ಇಂಗ್ಲೀಷ್ ಆವೃತ್ತಿ ಭಾರತೀಯ ಭಾಷೆಯ ಆವೃತ್ತಿಗಳಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಸಿನಿಮಾದ ಇಂಗ್ಲೀಷ್ ಆವೃತ್ತಿ 13.75 ಕೋಟಿ ರೂಪಾಯಿ ಗಳಿಕೆ ಮಾಡಿದ್ದರೆ. ಹಿಂದಿ ಆವೃತ್ತಿ ಸುಮಾರು ಎರಡು ಕೋಟಿ, ತೆಲುಗು ಆವೃತ್ತಿ 1.10 ಕೋಟಿ ಮತ್ತು ತಮಿಳು ಆವೃತ್ತಿ 65 ಲಕ್ಷ ರೂಪಾಯಿ ಗಳಿಸಿದೆ.

ಭಾರತದಲ್ಲಿ ಹಲವು ಹಾಲಿವುಡ್ ಸಿನಿಮಾಗಳು ದೊಡ್ಡ ಮೊತ್ತದ ಗಳಿಕೆ ಮಾಡಿವೆ. ‘ಅವತಾರ್’ ಸಿನಿಮಾ ಸರಣಿ, ‘ಅವೇಂಜರ್ಸ್’ ಸರಣಿ ಭಾರತದಲ್ಲಿ ಭರ್ಜರಿ ಗಳಿಕೆ ಮಾಡಿದ ಹಾಲಿವುಡ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲಲ್ಲಿವೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಡೆಡ್​​ಪೂಲ್-ವೋಲ್ವರಿನ್’ ಸಿನಿಮಾ ಮೊದಲ ದಿನವೇ 21 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೇ ತಿಂಗಳ ಅಂತ್ಯಕ್ಕೆ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆ ಆಗಲಿದ್ದು, ಆ ಸಿನಿಮಾ ಸಹ ಭಾರಿ ದೊಡ್ಡ ಗಳಿಕೆಯನ್ನೇ ಭಾರತದಲ್ಲಿ ಮಾಡುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version