ದರ್ಶನ್ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಸೂಚನೆ – Kannada News | Court Rejects Actor Darshan In Person Hearing Plea Renukaswamy Case Video Conference Order

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಕೋರ್ಟ್ ವಿಚಾರಣೆಯಲ್ಲಿ ತಮಗೆ ವಿಡಿಯೋ ಕಾನ್ಫರೆನ್ಸ್ ಬದಲು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಲು ಅವಕಾಶ ನೀಡಬೇಕು ಎಂದು ನಟ ದರ್ಶನ್ ಅವರು ಮನವಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇಂದು (ಆಗಸ್ಟ್ 17) ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಆದೇಶ ಪ್ರಕಟಿಸಿದೆ. ದರ್ಶನ್ (Darshan Thoogudeepa) ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ಹಾಜರಿಗೆ ಸೂಚನೆ ನೀಡಲಾಗಿದೆ.

ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ವಾದ ಮಂಡಿಸಿದ್ದರು. ಖುದ್ದು ಹಾಜರುಪಡಿಸಿದರೆ ಸಾಕ್ಷ್ಯ ವಿಚಾರಣೆ ವೇಳೆ ಸೂಚನೆ ಪಡೆಯಲು ಅನುಕೂಲ ಆಗುತ್ತದೆ. ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಎಸ್​ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.

‘ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಕಾನೂನಿನಲ್ಲೇ ಅವಕಾಶವಿದೆ. ದರ್ಶನ್ ಅವರನ್ನು ಖುದ್ದು ಹಾಜರುಪಡಿಸಿದರೆ ಕೋರ್ಟ್ ಕಲಾಪಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಖುದ್ದು ಹಾಜರಿ ಅಗತ್ಯವಿಲ್ಲ’ ಎಂದು ಪ್ರಸನ್ನ ಕುಮಾರ್ ವಾದ ಮಾಡಿದ್ದರು. ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಕಾಯ್ದಿರಿಸಿದ್ದರು. ಇಂದು ಆದೇಶ ಪ್ರಕಟ ಆಗಿದ್ದು, ದರ್ಶನ್ ಅವರಿಗೆ ಹಿನ್ನಡೆ ಆಗಿದೆ.

ಇದನ್ನೂ ಓದಿ: ಮಾಫಿ ಸಾಕ್ಷಿ: ನಟ ದರ್ಶನ್ ಮೇಲ್ಮನವಿ ವಜಾ; ಹೈಕೋರ್ಟ್​ನಲ್ಲಿ ಮತ್ತೆ ಹಿನ್ನಡೆ

ಆರೋಪಿಗಳು ತಮ್ಮ ವಕೀಲರೊಂದಿಗೆ ಮಾತನಾಡಲು ಖಾಸಗಿತನದ ವ್ಯವಸ್ಥೆ ಕಲ್ಪಿಸಲು ಕೋರ್ಟ್ ಸೂಚನೆ ನೀಡಿದೆ. ನಿಯಮ 8.3 ಅಡಿಯಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಸಾಕ್ಷ್ಯ ವಿಚಾರಣೆ ವೇಳೆ ಅಗತ್ಯವಿರುವಾಗ ಸಂಪರ್ಕದ ಅವಕಾಶ ನೀಡಬೇಕು. ಸಾಕ್ಷ್ಯ ವಿಚಾರಣೆಗೆ ಮೊದಲು, ನಡುವೆ, ನಂತರ ಸಂಪರ್ಕಿಸಬಹುದು. ಸಾಕ್ಷಿಗಳ ಹೇಳಿಕೆಯನ್ನು ಸ್ಪಷ್ಟವಾಗಿ ಕೇಳುವಂತೆ ವ್ಯವಸ್ಥೆ ಕಲ್ಪಿಸಿ ಎಂದು ಸಿವಿಲ್ ಕೋರ್ಟ್​ನ ತಾಂತ್ರಿಕ ವಿಭಾಗಕ್ಕೆ ಕೋರ್ಟ್ ಸೂಚನೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಏಷ್ಯಾಕಪ್, ಏಷ್ಯನ್ ಗೇಮ್ಸ್​​ಗೆ ಪಾಕ್ ತಂಡ ಪ್ರಕಟ; ಈ ದಿನದಂದು ಭಾರತದ ವಿರುದ್ಧ ಪಂದ್ಯ – Kannada News | Pakistan Women’s Squad: 2026 T20 Asia Cup & Asian Games Team Announced

2026 ರ ಮಹಿಳಾ ಟಿ20 ಏಷ್ಯಾಕಪ್ (2026 Women’s Asia Cup) ಇದೇ ಆಗಸ್ಟ್ 28 ರಿಂದ ಆರಂಭವಾಗಲಿದೆ. ಈ ಕ್ರೀಡಾಕೂಟಕ್ಕೆ ಭಾರತ ಮಹಿಳಾ ತಂಡವನ್ನು ಕೆಲವೇ ದಿನಗಳ ಹಿಂದೆ ಬಿಸಿಸಿಐ ಪ್ರಕಟಿಸಿತ್ತು. ಇದೀಗ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮಹಿಳಾ ತಂಡವೂ ಪ್ರಕಟವಾಗಿದೆ. ಏಷ್ಯಾಕಪ್​ಗೆ ಮಾತ್ರವಲ್ಲದೆ ಅದಾದ ಬಳಿಕ ಜಪಾನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಷ್ಯನ್ ಕ್ರೀಡಾಕೂಟಕ್ಕೂ ಪಾಕ್ ಮಹಿಳಾ ತಂಡ ಪ್ರಕಟವಾಗಿದೆ. ಯುವ ಆಲ್‌ರೌಂಡರ್ ಫಾತಿಮಾ ಸನಾ ಈ ಎರಡೂ ಪಂದ್ಯಾವಳಿಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಪಾಕ್ ಮಹಿಳಾ ತಂಡ ಹೀಗಿದೆ

ಹಿರಿಯ ಬ್ಯಾಟರ್ ಆಲಿಯಾ ರಿಯಾಜ್ ಅವರನ್ನು ಏಷ್ಯನ್ ಗೇಮ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಆಯ್ಕೆದಾರರು ಸದಾಫ್ ಶಮಾಸ್ ಮತ್ತು ಸಿದ್ರಾ ಅಮೀನ್ ಅವರನ್ನು ಕೈಬಿಟ್ಟಿದ್ದಾರೆ. ಪಾಕಿಸ್ತಾನವು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನ ಕ್ವಾರ್ಟರ್ ಫೈನಲ್‌ಗೆ ನೇರವಾಗಿ ಪ್ರವೇಶಿಸಲಿದೆ. ಸೆಪ್ಟೆಂಬರ್ 17 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನವು ಥೈಲ್ಯಾಂಡ್ ತಂಡವನ್ನು ಎದುರಿಸಲಿದೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಪಾಕಿಸ್ತಾನ ತಂಡದಲ್ಲಿ ಮುನೀಬ್ ಅಲಿ ಸಿದ್ದಿಕಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆಯೇಷಾ ಜಾಫರ್, ಇಮಾನ್ ನಸೀರ್, ಇಮಾನ್ ಫಾತಿಮಾ, ಗುಲ್ ಫಿರೋಜಾ, ಮೊಮಿನಾ ರಿಯಾಸತ್, ನಜಿಹಾ ಅಲ್ವಿ, ನಶ್ರಾ ಸಂಧು, ಸಾದಿಯಾ ಇಕ್ಬಾಲ್, ಸೈರಾ ಜಬೀನ್, ಶಾವಲ್ ಜುಲ್ಫಿಕರ್, ತುಬಾ ಹಸನ್, ಉಮ್ಮೆ ಹನಿ, ವಹೀದಾ ಅಖ್ತರ್ ಮುಖ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಸ್ಮಿಯಾ ರುಬಾಬ್, ಹುಮ್ನಾ ಬಿಲಾಲ್, ಮಹಮ್ ಅನೀಸ್, ಸದಾಫ್ ಶಮಾಸ್ ಸ್ಟ್ಯಾಂಡ್‌ಬೈ ಆಟಗಾರ್ತಿಯರಾಗಿ ಆಯ್ಕೆಯಾಗಿದ್ದಾರೆ.

ಏಷ್ಯನ್ ಗೇಮ್ಸ್​ಗೂ ಅದೇ ತಂಡ

ಏಷ್ಯನ್ ಗೇಮ್ಸ್​ನಲ್ಲೂ ಇದೇ ತಂಡ ಕಣಕ್ಕಿಳಿಯಲಿದೆ. ಆದರೆ ಹಿರಿಯ ಬ್ಯಾಟರ್ ಆಲಿಯಾ ರಿಯಾಜ್ ಈ ಕ್ರೀಡಾಕೂಟದಲ್ಲಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ನಟಾಲಿಯಾ ಪರ್ವೇಜ್ ಮತ್ತು ರಮೀನ್ ಶಮಿಮ್‌ರಂತಹ ಆಟಗಾರ್ತಿಯರಿಗೆ ಮೀಸಲು ವಿಭಾಗದಲ್ಲಿ ಅವಕಾಶ ನೀಡಲಾಗಿದೆ. ಹೊಸ ತಂತ್ರಗಳೊಂದಿಗೆ ಮೈದಾನಕ್ಕೆ ಇಳಿಯುತ್ತಿರುವ ಪಾಕಿಸ್ತಾನ ಮಹಿಳಾ ತಂಡವು ಭಾರತೀಯ ಮಹಿಳಾ ತಂಡದೊಂದಿಗೆ ಎಷ್ಟರ ಮಟ್ಟಿಗೆ ಸ್ಪರ್ಧಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಲಾ 4 ತಂಡಗಳ 2 ಗುಂಪು

ಇನ್ನು ಹತ್ತನೇ ಆವೃತ್ತಿಯ ಮಹಿಳಾ ಟಿ20 ಏಷ್ಯಾಕಪ್ ಮೇಲೆ ಹೇಳಿದಂತೆ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಒಟ್ಟು 8 ಏಷ್ಯಾದ ದೇಶಗಳು ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ. ಅವುಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಭಾರತ- ಪಾಕ್ ಮುಖಾಮುಖಿ

ಹಾಲಿ ಚಾಂಪಿಯನ್ ಭಾರತ, ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ತಂಡಗಳು ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿವೆ. ಈ ಎರಡು ಸಾಂಪ್ರದಾಯಿಕ ಎದುರಾಳಿಗಳು ಒಂದೇ ಗುಂಪಿನಲ್ಲಿರುವುದರಿಂದ, ಲೀಗ್ ಹಂತದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುವುದು ಖಚಿತ. ಸೆಪ್ಟೆಂಬರ್ 5 ರಂದು ನಡೆಯಲಿರುವ ಗುಂಪು ಹಂತದ ಅಂತಿಮ ಮತ್ತು ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಹೈ-ವೋಲ್ಟೇಜ್ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:00 pm, Mon, 17 August 26

Source link

ಹುಬ್ಬಳ್ಳಿಯ ಚಾಲುಕ್ಯರ ಕಾಲದ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ: ಹಿಂದೂಪರ ಸಂಘಟನೆಗಳ ಆಕ್ರೋಶ – Kannada News | Hindu Organisations Demand Excavation of Allegedly Encroached Temple Pond in Hubballi

ಹುಬ್ಬಳ್ಳಿ, ಆ,17: ಜಿಲ್ಲೆಯ ಅಸಾರ ಓಣಿಯಲ್ಲಿರುವ ಪ್ರಾಚೀನ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪವು ವಿವಾದಕ್ಕೆ ಕಾರಣವಾಗಿದೆ. ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನದ ಪುಷ್ಕರಣಿ ಇದ್ದ ಜಾಗದಲ್ಲಿ ಆಗಸ್ಟ್ 5ರಂದು ಹುಬ್ಬಳ್ಳಿ ಪಾಲಿಕೆ 25 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸಿದೆ ಎನ್ನಲಾಗಿದೆ. ಈ ಕುರಿತು ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ನಿರ್ಮಿಸಿರುವ ಜಾಗದಲ್ಲಿ ದೇವಸ್ಥಾನಕ್ಕೆ ಸೇರಿದ ಪುಷ್ಕರಣಿ ಇತ್ತು ಎಂದು ಪ್ರತಿಪಾದಿಸಿವೆ. ಪುಷ್ಕರಣಿಯನ್ನು ಉಳಿಸಿ, ಉತ್ಖನನ ಮಾಡುವಂತೆ ಆಗ್ರಹಿಸಿವೆ. ಆದರೆ, ರಾಜ್ಯ ಪುರಾತತ್ವ ಇಲಾಖೆ ಹಾಗೂ ಪಾಲಿಕೆಯ ಅಧಿಕಾರಿಗಳು ಪುಷ್ಕರಣಿ ಇರುವ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸ್ಥಳೀಯರು ಹಲವು ವರ್ಷಗಳ ಹಿಂದೆ ಪುಷ್ಕರಣಿ ಇದ್ದ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಹಿಂದೂಪರ ಸಂಘಟನೆಗಳು ಆಗಸ್ಟ್ 22ರೊಳಗೆ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನಿವಾಸಿ ಭಾರತೀಯರ ಎಫ್​ಸಿಎನ್​ಆರ್ ಠೇವಣಿಗಳು: ಗಡುವನ್ನು ಒಂದು ತಿಂಗಳು ಹಿಂದೂಡಿದ ಆರ್​ಬಿಐ – Kannada News | FCNRB deposit special window date advanced by RBI, here is the details

ನವದೆಹಲಿ, ಆಗಸ್ಟ್ 17: ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 8 ರಂದು ಪ್ರಾರಂಭಿಸಿದ್ದ ಎಫ್‌ಸಿಎನ್‌ಆರ್‌ಬಿ – Foreign Currency Non-Resident (Bank) ವಿಶೇಷ ಫೊರೆಕ್ಸ್ ಸ್ವ್ಯಾಪ್ ಸೌಲಭ್ಯದ ಮುಕ್ತಾಯದ ದಿನಾಂಕವನ್ನು ಸೆಪ್ಟೆಂಬರ್ 30 ರಿಂದ ಆಗಸ್ಟ್ 31 ಕ್ಕೆ ಹಿಂದೂಡಲಾಗಿದೆ. ಈ ರಿಯಾಯಿತಿ ಸ್ವ್ಯಾಪ್ ಸೌಲಭ್ಯಕ್ಕೆ ಬ್ಯಾಂಕುಗಳು ಮತ್ತು ಅನಿವಾಸಿ ಭಾರತೀಯರಿಂದ (NRI) ಅತ್ಯದ್ಭುತ ಸ್ಪಂದನೆ ದೊರೆತಿದ್ದು, ಬೃಹತ್ ಪ್ರಮಾಣದ ವಿದೇಶಿ ವಿನಿಮಯ (Forex) ಭಾರತಕ್ಕೆ ಹರಿದುಬಂದಿದೆ. ಈ ಕಾರಣಕ್ಕೆ ಈ ವಿಂಡೋವನ್ನು ಒಂದು ತಿಂಗಳು ಬೇಗನೇ ಅಂತ್ಯಗೊಳಿಸಲು ಆರ್ಬಿಐ ನಿರ್ಧರಿಸಿದೆ ಎನ್ನಲಾಗಿದೆ.

ಏನದು ಎಫ್​ಸಿಎನ್​ಆರ್​ಬಿ ಸ್ಕೀಮ್?

ಫಾರೀನ್ ಕರೆನ್ಸಿ ನಾನ್ ರೆಸಿಡೆಂಟ್ ಡೆಪಾಸಿಟ್ ಎಂದರೆ, ಅನಿವಾಸಿ ಭಾರತೀಯರ ಕರೆನ್ಸಿ ಠೇವಣಿ ಯೋಜನೆ. ಅನಿವಾಸಿ ಭಾರತೀಯರು ಅವರ ಹಾಲಿ ದೇಶಗಳ ಕರೆನ್ಸಿ ಹಣವನ್ನೇ ಭಾರತೀಯ ಬ್ಯಾಂಕುಗಳಲ್ಲಿ ಠೇವಣಿ ಇಡುವ ಅವಕಾಶ ಇದು. ಅವರ ದೇಶಗಳ ಬ್ಯಾಂಕುಗಳಿಗಿಂತ ಬಹಳ ಹೆಚ್ಚಾದ ಬಡ್ಡಿದರವನ್ನು ಭಾರತೀಯ ಬ್ಯಾಂಕುಗಳು ಆಫರ್ ಮಾಡುತ್ತಿವೆ. ಈ ಸ್ಕೀಮ್​ನಿಂದ ಆರ್​ಬಿಐಗೆ ಆಗುವ ದೊಡ್ಡ ಅನುಕೂಲವೆಂದರೆ, ವಿದೇಶೀ ಕರೆನ್ಸಿಗಳ ಹರಿವು.

ಇದನ್ನೂ ಓದಿ: 2040ರಲ್ಲಿ ಅಮೆರಿಕ, ಯೂರೋಪ್​ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ

ಎನ್​ಆರ್​ಐಗಳಿಂದ ಬಂದ ಕರೆನ್ಸಿಗಳನ್ನು ಬ್ಯಾಂಕುಗಳು ಆರ್​ಬಿಐಗೆ ಮಾರುತ್ತವೆ. ನಿರ್ದಿಷ್ಟ ಅವಧಿ ಬಳಿಕ ಪೂರ್ವನಿಗದಿತ ದರಕ್ಕೆ ಈ ಬ್ಯಾಂಕುಗಳು ಮತ್ತೆ ಆ ಕರೆನ್ಸಿಗಳನ್ನು ಖರೀದಿಸಬೇಕು. ಇದು ಕರೆನ್ಸಿ ಸ್ವಾಪಿಂಗ್ ಕ್ರಿಯೆ. ಆರ್​ಬಿಐ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಡೆಪಾಸಿಟ್​ಗು ಬಂದಿದ್ದರಿಂದ ಕರೆನ್ಸಿ ಸ್ವಾಪಿಂಗ್ ವಿಂಡೋ ಮುಚ್ಚಲು ನಿರ್ಧರಿಸಿದೆ.

ನಿಧಿ ಸಂಗ್ರಹಣೆ ವಿವರ (ಆಗಸ್ಟ್ 13 ರವರೆಗೆ)

ಆರ್‌ಬಿಐ ಜಾರಿಗೊಳಿಸಿದ ವಿಶೇಷ ಯೋಜನೆಗಳ ಮೂಲಕ ಒಟ್ಟು $56.85 ಬಿಲಿಯನ್ ಹರಿದುಬಂದಿದೆ. 2013ರಲ್ಲಿ ಆರ್‌ಬಿಐ ನಡೆಸಿದ್ದ ಇಂಥದ್ದೇ ಪ್ರಯತ್ನದಲ್ಲಿ ಸಿಕ್ಕಿದ್ದ ಹಣಕ್ಕಿಂತ ಎರಡಕ್ಕೂ ಹೆಚ್ಚು ಪಟ್ಟು ಅಧಿಕವಾಗಿದೆ.

ಪ್ರಮುಖ ನಿಯಮಗಳು ಮತ್ತು ದಿನಾಂಕಗಳು

  • ಹೊಸ ಠೇವಣಿ ಸಂಗ್ರಹಣೆ ಗಡುವು: ಆಗಸ್ಟ್ 31
  • ಬ್ಯಾಂಕುಗಳು ಆರ್‌ಬಿಐ ಜೊತೆ ಸ್ವ್ಯಾಪ್ ಮಾಡುವ ಕೊನೆಯ ದಿನ: ಸೆಪ್ಟೆಂಬರ್ 11
  • ECB ಮತ್ತು OFCB ಸ್ವ್ಯಾಪ್ ಯೋಜನೆಗಳು: ಡಿಸೆಂಬರ್ 31 ರವರೆಗೆ ಯಥಾವತ್ತಾಗಿ ಮುಂದುವರಿಯಲಿವೆ.

ಇದನ್ನೂ ಓದಿ: ನೀವು ಎಟಿಎಂನಲ್ಲಿ ಹಣ ಡ್ರಾ ಮಾತ್ರ ಮಾಡ್ಬಹುದು ಅಂದುಕೊಂಡ್ರಾ? ಈ ಕೆಲ್ಸಗಳನ್ನು ಮಾಡ್ಬಹುದು

ಎನ್ಆರ್‌ಐ ಮತ್ತು ಬ್ಯಾಂಕುಗಳ ಮೇಲೆ ಬೀರುವ ಪರಿಣಾಮ

FCNR(B) ಯೋಜನೆ ನಿಲ್ಲುತ್ತಿಲ್ಲ: ಆರ್‌ಬಿಐ ಮುಚ್ಚುತ್ತಿರುವುದು ತನ್ನ ವಿಶೇಷ ಸ್ವ್ಯಾಪ್ ರಿಯಾಯಿತಿ ಸೌಲಭ್ಯವನ್ನು ಮಾತ್ರ, FCNR(B) ಠೇವಣಿ ಖಾತೆಗಳನ್ನಲ್ಲ. ಆಗಸ್ಟ್ 31ರ ನಂತರವೂ ಎನ್‌ಆರ್‌ಐಗಳು ಸಾಮಾನ್ಯ ನಿಯಮಗಳ ಅಡಿಯಲ್ಲಿ ಎಫ್‌ಸಿಎನ್‌ಆರ್‌ಬಿ ಠೇವಣಿಗಳನ್ನು ಮಾಡಬಹುದು.

ಬ್ಯಾಂಕುಗಳಿಗೆ ಸೌಲಭ್ಯ: ಆರ್‌ಬಿಐ ಬ್ಯಾಂಕುಗಳಿಗೆ ನೀಡುತ್ತಿದ್ದ ಹೆಡ್ಜಿಂಗ್ (Hedging) ವೆಚ್ಚದ ಬೆಂಬಲ ಹಾಗೂ ವಿನಾಯಿತಿಗಳಿಂದಾಗಿ ಬ್ಯಾಂಕುಗಳು ಎನ್‌ಆರ್‌ಐಗಳಿಗೆ ಶೇ. 7% ವರೆಗೆ ಆಕರ್ಷಕ ಬಡ್ಡಿ ದರಗಳನ್ನು ನೀಡಲು ಸಾಧ್ಯವಾಗಿತ್ತು. ಆಗಸ್ಟ್ 31ರ ನಂತರ ಆರ್‌ಬಿಐನ ಈ ವಿಶೇಷ ಸ್ವ್ಯಾಪ್ ಬೆಂಬಲ ಸಿಗದ ಕಾರಣ, ಬ್ಯಾಂಕುಗಳು ನೀಡುವ FCNR ಬಡ್ಡಿ ದರಗಳು ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ.

ರೂಪಾಯಿ ಮತ್ತು ಫೊರೆಕ್ಸ್ ಮೀಸಲು: ಈ ಭಾರಿ ಡಾಲರ್ ಹರಿವಿನಿಂದ ಭಾರತದ ವಿದೇಶಿ ವಿನಿಮಯ ಸಂಗ್ರಹಣೆ (Forex Reserves) $707 ಬಿಲಿಯನ್ ದಾಟಿ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಲು ನೆರವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs SL: 3ನೇ ದಿನದಾಟದ 2ನೇ ಸೆಷನ್ ಶ್ರೀಲಂಕಾ ಪಾಲು – Kannada News | Galle Test Day 3: Dickwella Dinusha Century Partnership Resurrects Sri Lanka Innings

ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಎರಡನೇ ಸೆಷನ್​ನಲ್ಲಿ ಶ್ರೀಲಂಕಾ ತಂಡ ಭರ್ಜರಿ ಪುನರಾಗಮನ ಮಾಡಿದೆ. ಹೀಗಾಗಿ ಚಹಾ ವಿರಾಮದ ವೇಳೆಗೆ ಶ್ರೀಲಂಕಾ 57 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 214 ರನ್ ಗಳಿಸಿದೆ. ಆದಾಗ್ಯೂ ಟೀಂ ಇಂಡಿಯಾ 248 ರನ್‌ಗಳ ಮುನ್ನಡೆಯಲ್ಲಿದೆ. ಲಂಕಾ ಪರ ಸೋನಲ್ ದಿನುಷಾ 62 ರನ್ ಮತ್ತು ನಿರೋಷನ್ ಡಿಕ್ವೆಲ್ಲಾ 71 ರನ್ ಗಳಿಸಿ ಕ್ರೀಸ್​​ನಲ್ಲಿದ್ದಾರೆ.

ಆರಂಭದಲ್ಲಿ ಭಾರತದ ಮೇಲುಗೈ

ಮೂರನೇ ದಿನದಂದು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್​ನ ಎರಡನೇ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಮೊದಲ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಿಸಿಕೊಟ್ಟರು. ಆ ಬಳಿಕ ಬಂದ ಮಾನವ್ ಸುತಾರ್ ಕೂಡ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಈ ಎರಡು ಸೆಷನ್​ಗಳಲ್ಲಿ ಭಾರತ 5 ಬೌಲರ್‌ಗಳನ್ನು ಬಳಸಿಕೊಂಡಿತು. ಪ್ರಸಿದ್ಧ್ ಕೃಷ್ಣ ಹೊರತುಪಡಿಸಿ, ಎಲ್ಲರೂ ವಿಕೆಟ್ ಪಡೆದರು.

6ನೇ ವಿಕೆಟ್​ಗೆ ಶತಕದ ಜೊತೆಯಾಟ

ಆದಾಗ್ಯೂ 6ನೇ ವಿಕೆಟ್​ಗೆ ಸೋನಲ್ ದಿನುಷಾ ಮತ್ತು ನಿರೋಷನ್ ಡಿಕ್ವೆಲ್ಲಾ ಶತಕದ ಜೊತೆಯಾಟವನ್ನಾಡಿದ್ದಾರೆ. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾವನ್ನು ಒತ್ತಡಕ್ಕೆ ಸಿಲುಕಿಸಿದೆ. ಇವರಿಬ್ಬರ ಜೊತೆಯಾಟಕ್ಕೆ ರಾಹುಲ್ ಕೈಬಿಟ್ಟ ಕ್ಯಾಚ್ ಕೂಡ ಕಾರಣವಾಯಿತು. ನಿರೋಷನ್ ಡಿಕ್ವೆಲ್ಲಾ 20 ರನ್ ಬಾರಿಸಿ ಆಡುತ್ತಿದ್ದಾಗ, ಮಾನವ್ ಸುತಾರ್ ಬೌಲಿಂಗ್​ನಲ್ಲಿ ಸ್ಲಿಪ್​ನಲ್ಲಿ ನಿಂತಿದ್ದ ರಾಹುಲ್​ಗೆ ಕ್ಯಾಚ್ ನೀಡಿದರು. ಆದರೆ ಸ್ವಲ್ಪ ಕಷ್ಟಕರವಾದ ಕ್ಯಾಚ್ ಅನ್ನು ಹಿಡಿಯುವಲ್ಲಿ ರಾಹುಲ್ ವಿಫಲರಾದರು. ಚೆಂಡು ರಾಹುಲ್​ ಅವರ ಕೈಗೆ ತಾಗಿ ನೆಲಕ್ಕುರುಳಿತು. ಈ ಜೀವದಾನವನ್ನು ಸದುಪಯೋಗಪಡಿಸಿಕೊಂಡಿರುವ ನಿರೋಷನ್ ಡಿಕ್ವೆಲ್ಲಾ ಅರ್ಧಶತಕ ಬಾರಿಸಿ ಮುನ್ನಗ್ಗುತ್ತಿದ್ದಾರೆ.

ಇತ್ತ ಶ್ರೀಲಂಕಾ ಪರ ಆರಂಭಿಕ ನಿಶಾನ್ ಫೆರ್ನಾಂಡೊ ಖಾತೆ ತೆರೆಯದೆ ಔಟಾದರೆ, ಲಹಿರು ಉದಾರ 27, ದಿನೇಶ್ ಚಾಂಡಿಮಲ್ 4, ಕಾಮಿಂದು ಮೆಂಡಿಸ್ 14 ಮತ್ತು ಧನಂಜಯ್ ಡಿ ಸಿಲ್ವಾ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಭಾರತದ ಪರ ಮಾನವ್ ಸುತಾರ್ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

Published On – 3:34 pm, Mon, 17 August 26

Source link

ಯಾರು ಬಂದ್ರೂ ಬದಲಾಗದ ಪರಪ್ಪನ ಅಗ್ರಹಾರ ಜೈಲು: ಪ್ರಜ್ವಲ್ ಬಳಿ ಮತ್ತೊಂದು ಮೊಬೈಲ್ ಪತ್ತೆ – Kannada News | One More Mobile Found In Prajwal revanna at Parappana agrahara central Jail bengaluru

ಬೆಂಗಳೂರು, (ಆಗಸ್ಟ್ 17): ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ದಿನಾಲೂ ಸುದ್ದಿಯಲ್ಲಿರುತ್ತೆ.ಕಾರಣ ವಿಐಪಿ ಖೈದಿಗಳ ಸಂಖ್ಯೆ ಜಾಸ್ತಿ ಆಗಿರೋದು.ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗ ಜೈಲಿನಲ್ಲಿ ಮತ್ತೆ ಸದ್ದು ಮಾಡಿದ್ದು, ಫೋನ್,ಪೆನ್ ಡ್ರೈವ್ ಇಟ್ಟುಕೊಂಡು ಸಿಸಿಬಿ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಮೊಬೈಲ್ ಪತ್ತೆಯಾಗಿದ್ದು, ಕಾರಾಗೃಹ ಇಲಾಖೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಹೌದು…ಮೊನ್ನೇ ಅಷ್ಟೇ ಸಿಸಿಬಿ ದಾಳಿ ಮಾಡಿದ್ದ ವೇಳೆ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಸಿಕ್ಕಿತ್ತು. ಇನ್ನು ಅದೇ ದಿನ ಜೈಲು ಅಧಿಕಾರಿಗಳು ದಾಳಿ ಮಾಡಿದ್ದಾಗ ಪ್ರಜ್ವಲ್ ಬಳಿ ಮತ್ತೊಂದು ಮೊಬೈಲ್ ಪತ್ತೆಯಾಗಿದೆ. ದೇವರ ಫೋಟೊ‌ ಹಿಂದೆ ಇರಿಸಲಾಗಿದ್ದ ವಿವೋ ಕಂಪನಿಯ ಮೊಬೈಲ್ ಪತ್ತೆಯಾಗಿದ್ದು, ಸಿಮ್ ಇಲ್ಲದೆ ಸ್ವಿಚ್ ಆಫ್ ಆಗಿದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ FIR​ ದಾಖಲಾಗಿದ್ದು, ಯಾರು ಈ ಮೊಬೈಲ್ ಬಳಸುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರ ಶೂಟೌಟ್ ಪ್ರಕರಣ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕಿಡಿ – Kannada News | Cauvery Sanctuary Shooting: Karnataka CM Orders Magisterial Inquiry After 3 Deaths

ಚೆನ್ನೈ, ಆ.17: ಚಾಮರಾಜನಗರ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ತಮಿಳು ಮೂಲದ ಮೂವರು ಮೃತಪಟ್ಟ ಘಟನೆಯನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯನ್ನು “ಹತ್ಯಾಕಾಂಡ” (Massacre) ಎಂದು ಕರೆದಿರುವ ಅವರು, ಪ್ರಕರಣದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.

“ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಿವಾಸಿಗಳಾದ ಆಂಥೋನಿ ಸಾಮಿ, ಜಾನ್ ರೋಸ್ ಪೀಟರ್ ಹಾಗೂ ಕುಮಾರ್ ಅವರನ್ನು ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ಗುಂಡಿಕ್ಕಿ ಕೊಂದು ಹಾಕಿರುವುದು ತೀವ್ರ ಹೃದಯವಿದ್ರಾವಕ. ಈ ದೌರ್ಜನ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.

“ಕರ್ನಾಟಕ ಅರಣ್ಯ ಇಲಾಖೆ ನೀಡುತ್ತಿರುವ ವಿವರಣೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಘಟನೆಯ ನೈಜತೆ ಹೊರಬರಲು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಕರ್ನಾಟಕ ಸರ್ಕಾರ ಎಚ್ಚರವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣ: ಘಟನೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ!

ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ ಸಿಎಂ ಡಿ.ಕೆ. ಶಿವಕುಮಾರ್:

ಮತ್ತೊಂದೆಡೆ, ಚಾಮರಾಜನಗರ ಜಿಲ್ಲೆಯ ಶಾಗ್ಯ ಗ್ರಾಮದ ಬಳಿ ನಡೆದ ಈ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಪ್ರತಿಕ್ರಿಯಿಸಿದ್ದು, ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

“ಘಟನೆಯ ಬಗ್ಗೆ ಮುಂಜಾನೆ 5 ಗಂಟೆಗೆ ಮಾಹಿತಿ ಸಿಕ್ಕಿದೆ. ಹಲವು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಲಾಗಿದ್ದು, ಬಂದೂಕುಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಗಿದ ನಂತರವೇ ಪೂರ್ಣ ಸತ್ಯಾಂಶ ತಿಳಿಯಲಿದೆ” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಹನೂರು ತಾಲೂಕಿನ ಮಾರಿಯ ಮಂಗಲ ಬೀಟ್ ಪ್ರದೇಶದಲ್ಲಿ ಶಂಕಿತ ಬೇಟೆಗಾರರು ಅರಣ್ಯ ಸಿಬ್ಬಂದಿಯತ್ತ ಗನ್ ಗುರಿಮಾಡಿದಾಗ, ಆತ್ಮರಕ್ಷಣೆಗಾಗಿ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಮೃತಪಟ್ಟವರನ್ನು ತೋಮಿಯರ್ ಪಾಳ್ಯದ ನಿವಾಸಿಗಳು ಎಂದು ಗುರುತಿಸಲಾಗಿದೆ. ಸದ್ಯ ಮೃತದೇಹಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಸ್ಥಳೀಯವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿನಯ್ ಮಾತಿಗೆ ಹೆದರಿ ‘ಅಗ್ನಿಪರೀಕ್ಷೆ’ಯಿಂದ ಅರ್ಧಕ್ಕೆ ನಡೆದ ಅಮುಕು ಡುಮುಕು ಮಂಜು – Kannada News | Amuku Dumuku Manju Walks Out Of Bigg Boss Agnipareeksha After Argument With Vinay Gowda

ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದವರು ಅಮುಕು ಡುಮುಕು ಮಂಜು. ರಿಯಾಲಿಟಿ ಶೋ ಒಂದರಲ್ಲಿ ಅವರು ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಗೆ ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಿಕ್ಕ ಜನಪ್ರಿಯತೆಯೇ ಇಲ್ಲಿವರೆಗೆ ಕರೆದುಕೊಂಡು ಬಂದಿತ್ತು. ಆದರೆ, ಈ ಅವಕಾಶವನ್ನು ಅವರು ಕೈ ಚೆಲ್ಲಿದ್ದಾರೆ. ಅವರು ಟಾಸ್ಕ್​​ನ ಅರ್ಧದಲ್ಲೇ ಹೊರ ನಡೆದಿದ್ದಾರೆ.

ಆಗಸ್ಟ್ 16ರಿಂದ ಬಿಗ್ ಬಾಸ್ ಅಗ್ನಿಪರೀಕ್ಷೆ ಆರಂಭ ಆಗಿದೆ. ಎರಡನೇ ದಿನದಲ್ಲಿ ಅಮುಕು ಡುಮುಕು ಅವರು ಆಗಮಿಸಿದ್ದರು. ಅವರು ವೇದಿಕೆಗೆ ಎಂಟ್ರಿ ಕೊಡುವಾಗಲೇ ವಿಚಿತ್ರವಾಗಿ ಆಗಮಿಸಿದ್ದರು. ಇದನ್ನು ನೋಡಿಯೇ ಮನೆಯ ಜಡ್ಜ್ ಶಾಕ್ ಆಗಿದ್ದರು. ನಿಮ್ಮ ಬಗ್ಗೆ ಹೇಳಿಕೊಳ್ಳುವಂತೆ ಮಂಜುಗೆ ಕೇಳಲಾಯಿತು. ‘ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆಯುವ ಆಸೆ ಇತ್ತು. ಹೀಗೆ ಖ್ಯಾತಿ ಪಡೆದುಕೊಂಡೆ’ ಎಂದರು. ‘ಗರ್ಲ್​​ ಫ್ರೆಂಡ್ ಇದ್ದಾರಾ’ ಎಂದು ಕೇಳಲಾಯಿತು. ‘ಇಲ್ಲ’ ಎಂದರು ಅಮುಕು ಡುಮುಕು.

‘ಸಂಗೀತಾ ಅವರನ್ನು ಇಂಪ್ರೆಸ್ ಮಾಡಬೇಕು’ ಎಂದು ಚಾಲೆಂಜ್ ಕೊಡಲಾಯಿತು. ‘ನಾನು ಮಾಡಲ್ಲ’ ಎಂದರು ಅಮುಕು ಡುಮುಕು. ‘ಸಂಗೀತಾ ಅವರದ್ದು ಕರಗುವ ಮನಸೇ ಅಲ್ಲ, ಅದಕ್ಕೆ ಮಾಡಲ್ಲ. ನಾನು ಹೀಗೆ ಇರ್ತೀನಿ. ನಾನು ಯಾರನ್ನೂ ಇಂಪ್ರೆಸ್ ಮಾಡೋಕೆ ಬಂದಿಲ್ಲ. ಇಷ್ಟ ಇದ್ರೆ ಕಳಿಸಿ, ಇಲ್ದಿದ್ರೆ ಇಲ್ಲ. ಫಿಲ್ಟರ್ ಹಾಕ್ಕೊಂಡು ಇರಲ್ಲ’ ಎಂದರು ಮಂಜು.

ಇದನ್ನೂ ಓದಿ: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಜಡ್ಜ್ ಆಗಿ ಮಿಂಚಿದ ಸಂಗೀತಾ ಶೃಂಗೇರಿ

‘ಆಗ ವಿನಯ್ ಸಿಟ್ಟಿಗೆದ್ದರು. ವೇದಿಕೆಗೆ ಮರ್ಯಾದೆ ಇದೆ. ನಿನಗೆ ಇಷ್ಟ ಬಂದಹಾಗೆ ಮಾತಾಡೋಕೆ ಅಲ್ಲ ಈ ವೇದಿಕೆ ಇರೋದು. ಟಾಸ್ಕ್ ಮಾಡೋಕೆ ರೆಡಿ ಇಲ್ಲ ಎಂದರೆ ಹೊರಟುಬಿಡು’ ಎಂದರು. ಹೀಗೆ ಹೇಳುತ್ತಿದ್ದಂತೆ ಮಂಜು ಹೊರಟುಬಿಟ್ಟರು. ಅವರು ಹೋಗಿದ್ದು ನೋಡಿ ಎಲ್ಲಾ ಜಡ್ಜ್​ಗಳು ಶಾಕ್ ಆದರು. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಾರಿಗೆ ಇಲಾಖೆಗೆ ತೆರಿಗೆ ವಂಚಿಸುತ್ತಿದ್ದ ಕಾರು ಮಾಲೀಕರಿಗೆ ಶಾಕ್: 3 ಕೋಟಿ ರೂ. ದಂಡ ವಸೂಲಿ ಮಾಡಿದ RTO – Kannada News | Massive Bengaluru RTO Drive: 200 Illegal Out of State Vehicles Seized, Tax Evaders Fined

ಬೆಂಗಳೂರು, ಆ.17 : ರಾಜ್ಯ ಸಾರಿಗೆ ಇಲಾಖೆಗೆ ನೂರಾರು ಕೋಟಿ ರೂಪಾಯಿ ತೆರಿಗೆ ವಂಚಿಸುತ್ತಿದ್ದ ಹೊರರಾಜ್ಯ ನೋಂದಣಿಯ ಐಷಾರಾಮಿ ಹಾಗೂ ನಾರ್ಮಲ್ ವಾಹನಗಳ ವಿರುದ್ಧ ಬೆಂಗಳೂರಿನಲ್ಲಿ ಆರ್‌ಟಿಒ (RTO) ಅಧಿಕಾರಿಗಳು ಇಂದು (ಆ.17) ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಸಾರಿಗೆ ಇಲಾಖೆ ಆಯುಕ್ತರ ಖಡಕ್ ಸೂಚನೆ ಮೇರೆಗೆ 10 ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ದಾಳಿ ನಡೆಸಿದ ಅಧಿಕಾರಿಗಳು, ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 200ಕ್ಕೂ ಹೆಚ್ಚು ಕಾರುಗಳನ್ನು ಜಪ್ತಿ (Seize) ಮಾಡಿ, 3 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಪಾಂಡಿಚೇರಿ, ತಮಿಳುನಾಡು, ನಾಗಾಲ್ಯಾಂಡ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಗೋವಾ, ಗುಜರಾತ್, ಉತ್ತರಾಖಂಡ ಹಾಗೂ ಹರಿಯಾಣ ನೋಂದಣಿಯ ಆಡಿ , ಬೆಂಜ್, ಟಾಟಾ ಹ್ಯಾರಿಯರ್, ಮಹೀಂದ್ರಾ ಸ್ಕಾರ್ಪಿಯೋ ಸೇರಿದಂತೆ 200ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ. KA-03 ಕಸ್ತೂರಿ ನಗರ RTO ವ್ಯಾಪ್ತಿಯ ಒಂದೇ ಕಡೆಯಲ್ಲಿ 30ಕ್ಕೂ ಹೆಚ್ಚು ಹೊರರಾಜ್ಯದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರ್‌ಟಿಒ ಅಧಿಕಾರಿಗಳನ್ನು ಕಂಡು ಓಡಿಸ್ಸಾ (OD) ನೋಂದಣಿಯ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಮೇತ ಇಬ್ಬರು ಸವಾರರು ರಸ್ತೆಯಲ್ಲಿ ಮುಗ್ಗರಿಸಿ ಬಿದ್ದ ಘಟನೆಯೂ ಜರುಗಿದೆ. ಕರ್ನಾಟಕದಲ್ಲಿ ರಸ್ತೆ ತೆರಿಗೆ (Road Tax) ಪಾವತಿಸುವುದ ತಪ್ಪಿಸಲು ವಾಹನ ಮಾಲೀಕರು ಬೇರೆ ರಾಜ್ಯಗಳಲ್ಲಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿ, ಬೆಂಗಳೂರಿನಲ್ಲಿ ತಂದು ಓಡಿಸುತ್ತಿದ್ದರು.

ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣ: ಘಟನೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ!

ನಿಯಮಗಳ ಪ್ರಕಾರ ಹೊರರಾಜ್ಯದ ವಾಹನಗಳನ್ನು ದೀರ್ಘಕಾಲದವರೆಗೆ ಸ್ಥಳೀಯ ರಸ್ತೆ ತೆರಿಗೆ ಕಟ್ಟದೆ ಬಳಸುವುದು ಕಾನೂನುಬಾಹಿರ. ಇದರಿಂದ ರಾಜ್ಯ ಸಾರಿಗೆ ಇಲಾಖೆಗೆ ನೂರಾರು ಕೋಟಿ ರೂಪಾಯಿ ರಾಜಸ್ವ ನಷ್ಟ ಉಂಟಾಗುತ್ತಿತ್ತು. ಈ ತಿಂಗಳ ಕೊನೆಯವರೆಗೂ ಹೊರರಾಜ್ಯದ ಎಲ್ಲಾ ಅಕ್ರಮ ವಾಹನಗಳ ವಿರುದ್ಧ ಕಠಿಣ ಕಾರ್ಯಾಚರಣೆ ಮುಂದುವರಿಸಲು ಆಯುಕ್ತರು ಸ್ಪಷ್ಟ ಆದೇಶ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಆರು ವರ್ಷಗಳ ಬಳಿಕ ವಿದೇಶದಿಂದ ಬಂದು ವೈದ್ಯೆ ಪತ್ನಿಗೆ ಸರ್ಪ್ರೈಸ್ ಕೊಟ್ಟ ಪತಿ – Kannada News | Husband surprises his doctor wife after returning from abroad after six years.

ಪ್ರೀತಿ (love) ಅನ್ನೋದು ಸುಂದರವಾದ ಭಾವನೆ. ಒಬ್ಬೊಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರುತ್ತದೆ. ಆದರೆ ಹೆಣ್ಣಿಗೆ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಗಂಡ ಸಿಕ್ಕರೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ಇದೀಗ ಆರು ವರ್ಷಗಳ ಬಳಿಕ ವಿದೇಶದಿಂದ ಬಂದ ಪತಿಯೊಬ್ಬ (husband) ಕರ್ತವ್ಯದಲ್ಲಿದ್ದ ವೈದ್ಯ ಪತ್ನಿಗೆ ಸರ್ಪ್ರೈಸ್ ನೀಡಿದ್ದಾನೆ. ವೈದ್ಯಕೀಯ ತಪಾಸಣೆಯ ನೆಪದಲ್ಲಿ ಕ್ಲಿನಿಕ್‌ಗೆ ಬಂದು ಪತ್ನಿಯ ಮುಂದೆ ನಿಂತಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

ರಮೇಶ್ ತಿವಾರಿ (Ramesh Tiwari) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವೈದ್ಯೆಯಾಗಿರುವ ಪತ್ನಿಯು ಕರ್ತವ್ಯದಲ್ಲಿ ನಿರತರಾಗಿದ್ದಾಳೆ.. ಇತ್ತ ಪತಿಯೂ ಆರು ವರ್ಷಗಳ ಬಳಿಕ ವಿದೇಶದಿಂದ ಬಂದಿದ್ದಾನೆ. ಪತ್ನಿಯ ಕ್ಲಿನಿಕ್ ಗೆ ರೋಗಿಯ ವೇಷದಲ್ಲಿ ಹೋಗಿದ್ದಾನೆ. ತನ್ನ ಗಂಡನ ಗುರುತು ಸಿಕ್ಕೊಡನೆ ಹೆಂಡತಿ ಕಣ್ಣಲ್ಲಿ ಸಂತೋಷದ ಕಣ್ಣೀರು ಜಾರಿದೆ. ಆ ಬಳಿಕ ಈ ದಂಪತಿ ಪರಸ್ಪರ ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವೆಡ್ಡಿಂಗ್ ಆನಿವರ್ಸರಿ ದಿನ ಬೈಕ್ ಗಿಫ್ಟ್ ಕೊಟ್ಟ ಮಡದಿ, ಸರ್ಪ್ರೈಸ್‌ಗೆ ಪತಿ ಭಾವುಕ

ಆಗಸ್ಟ್ 14 ರಂದು ಹಂಚಿಕೊಂಡ ಈ ವಿಡಿಯೋ ಏಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದೂರವಿದ್ದಾಗಲೇ ಒಬ್ಬರ ಬೆಲೆ ಇನ್ನೊಬ್ಬರಿಗೆ ತಿಳಿಯೋದು ಎಂದಿದ್ದಾರೆ. ಇನ್ನೊಬ್ಬರು, ಆರು ವರ್ಷಗಳ ಪುನರ್ಮಿಲನ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಜಕ್ಕೂ ನೀನು ಪುಣ್ಯವಂತೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version