ಆ ಒಬ್ಬ ನಟಿಗಾಗಿ ಹಾಡು ಹಾಡುವುದಿಲ್ಲ ಎಂದು ಶಪಥ ಮಾಡಿದ್ದ ಎಸ್ ಜಾನಕಿ – Kannada News | S Janaki refuse to sing for legendary actress Savitri

ಖ್ಯಾತ ಗಾಯಕಿ ಎಸ್‌ ಜಾನಕಿ (S Janaki) ನಿಧನರಾಗಿದ್ದಾರೆ. ಹಲವಾರು ಚಿತ್ರರಂಗದ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕೋಟ್ಯಂತರ ಅಭಿಮಾನಿಗಳು ಜಾನಕಿ ಅವರ ಅಗಲಿಕೆಗೆ ಕಂಬನಿ ಮಿಡಿದ್ದಾರೆ. ಸುಮಾರು 70 ವರ್ಷಗಳ ವೃತ್ತಿ ಬದುಕಿನಲ್ಲಿ ನೂರಾರು ಕಲಾವಿದರಿಗಾಗಿ ಎಸ್ ಜಾನಕಿ ಹಾಡು ಹಾಡಿದ್ದಾರೆ. ದೊಡ್ಡ ನಟಿಯಾಗಿರಲಿ, ಬಾಲ ನಟಿ ಆಗಿರಲಿ, ಹೊಸಬರಾಗಿರಲಿ, ಹಳಬರಲಾಗಿಲಿ, ನಾಯಕಿ ಆಗಿರಲಿ, ಪೋಷಕ ನಟಿ ಆಗಿರಲಿ ಯಾರಿಗೂ ಸಹ ಇಲ್ಲ ಎನ್ನದೆ ಧ್ವನಿ ನೀಡಿದ್ದಾರೆ. ಆದರೆ ಒಮ್ಮೆ ಮಾತ್ರ ತೆಲುಗಿನ ಲಿಜೆಂಡರಿ ನಟಿಯೊಬ್ಬರಿಗೆ ತಾವು ಧ್ವನಿ ನೀಡುವುದಿಲ್ಲ ಎಂದು ಶಪಥ ಮಾಡಿದ್ದರಂತೆ ಎಸ್ ಜಾನಕಿ. ಯಾರದು? ಯಾಕೆ ಅಂಥಹಾ ನಿರ್ಧಾರ ಮಾಡಿದ್ದರು?

ಎಸ್ ಜಾನಕಿ ಅವರು ಕನ್ನಡದಂತೆ ತೆಲುಗು ಚಿತ್ರರಂಗದಲ್ಲಿಯೂ ಸಹ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಂತೆ ತೆಲುಗಿನಲ್ಲಿಯೂ ಸಹ ಏಳು ದಶಕಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಅನೇಕ ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ, ಇಂದು ‘ಮಹಾನಟಿ’ ಎಂದು ಕರೆಸಿಕೊಳ್ಳುತ್ತಿರುವ ದಿವಂಗತ ಸಾವಿತ್ರಿಯವರ ಸಿನಿಮಾಗಳಿಗೆ ತಾನು ಹಾಡುವುದಿಲ್ಲ ಎಂದು ಜಾನಕಿ ಅವರು ಕಟ್ಟುನಿಟ್ಟಾಗಿ ಹೇಳಿದ್ದರಂತೆ. ಮಾತ್ರವಲ್ಲದೆ ತಮ್ಮ ನಿರ್ಧಾರದಿಂದ ಏನೇ ಆದರೂ ಹಿಂದೆ ಸರಿಯಲಿಲ್ಲವಂತೆ ಜಾನಕಿ.

ತಾವು ಸಾವಿತ್ರಿ ಅವರ ಸಿನಿಮಾಗಳಿಗೆ ಹಾಡದ ವಿಷಯದ ಬಗ್ಗೆ ಖುದ್ದು ಅವರೇ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು, ‘ಸಾವಿತ್ರಿ ಅವರ ಸಿನಿಮಾಗಳಿಗೆ ಹೆಚ್ಚಾಗಿ ಪಿ ಸುಶೀಲಾ ಹಾಡುತ್ತಿದ್ದರು. ವಿಶೇಷವಾಗಿ ಸಾವಿತ್ರಿಯವರ ಅಭಿನಯಕ್ಕೆ ಮತ್ತು ಹಾವಭಾವಗಳಿಗೆ ಸುಶೀಲ ಅವರ ಧ್ವನಿ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದು ಖುದ್ದು ನಟಿ ಸಾವಿತ್ರಿ ಬಲವಾಗಿ ನಂಬಿದ್ದರು. ಇದರಿಂದಾಗಿ ತಮ್ಮ ಸಿನಿಮಾಗಳಿಗೆ ಸುಶೀಲ ಅವರೇ ಹಾಡಬೇಕು ಎಂಬ ನಿಯಮವನ್ನು ಸಾವಿತ್ರಿ ಹಾಕಿಕೊಂಡಿದ್ದರಂತೆ. ಆದರೆ ಈ ವಿಷಯ ತಿಳಿಯದ ಜಾನಕಿ ಅವರು ಒಂದು ತಮಿಳು ಸಿನಿಮಾದಲ್ಲಿ ಸಾವಿತ್ರಿಗಾಗಿ ಹಾಡೊಂದನ್ನು ಹಾಡಿದ್ದರು. ಹಾಡು ಕೂಡ ಅದ್ಭುತವಾಗಿ ಬಂದಿತ್ತು. ಆದರೆ, ಜಾನಕಮ್ಮ ಹಾಡಿದ ಆ ಹಾಡನ್ನು ಪಕ್ಕಕ್ಕಿಟ್ಟು, ಸುಶೀಲ ಅವರಿಂದ ಮತ್ತೆ ಹಾಡಿಸಿ ಮರು-ರೆಕಾರ್ಡಿಂಗ್ ಮಾಡಿಸಿದ್ದರಂತೆ. ಇದರಿಂದ ಬೇಸರಗೊಂಡ ಜಾನಕಿ ಅವರು, ಅಂದಿನಿಂದ ಸಾವಿತ್ರಿ ಸಿನಿಮಾಗಳಿಗೆ ಹಾಡಬಾರದೆಂದು ನಿರ್ಧರಿಸಿದರಂತೆ.

ಇದನ್ನೂ ಓದಿ:ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಸಂಗೀತ ನಿರ್ದೇಶಕ ಇಳಯರಾಜ್ ಸಂತಾಪ

‘ಸಾವಿತ್ರಿ ಅವರಿಗೆ ಸುಶೀಲ ಅವರ ಧ್ವನಿಯೆಂದರೆ ಇಷ್ಟ. ಆಕೆಯ ಅಭಿನಯಕ್ಕೆ ಸುಶೀಲ ಅವರೇ ಸೂಕ್ತ ಎಂದು ಅವರ ಅಭಿಪ್ರಾಯವಿತ್ತು. ಅದಕ್ಕಾಗಿಯೇ ನಾನು ಹಾಡುತ್ತೇನೆ ಎಂದಾಗ ಅವರು ಒಪ್ಪುತ್ತಿರಲಿಲ್ಲ. ಹಾಗಾಗಿಯೇ ‘ನೀ ಲೀಲ ಪಾಡೇದ’ ಎಂಬ ಹಾಡನ್ನು ಕೂಡ ನಾನು ಹಾಡುವುದಿಲ್ಲ ಎಂದು ಹೇಳಿದ್ದೆ. ಅದು ಸಾವಿತ್ರಿ ಅವರ ಸಿನಿಮಾ ಆಗಿದ್ದರಿಂದ ಆ ಹಾಡನ್ನು ಹಾಡಲು 3 ತಿಂಗಳು ತಡೆಹಿಡಿದಿದ್ದೆ. ಕೊನೆಗೆ ಆ ಹಾಡಿನಲ್ಲಿ ಸಾವಿತ್ರಿ ನಟಿಸುತ್ತಿಲ್ಲ ಎಂದು ನಿರ್ದೇಶಕರು ಮತ್ತು ನಿರ್ಮಾಪಕರು ಹೇಳಿದ ನಂತರವೇ ನಾನು ಹಾಡಲು ಒಪ್ಪಿಕೊಂಡೆ. ಆದರೆ ಅಂತಿಮವಾಗಿ ಆ ಹಾಡಿನಲ್ಲಿ ಸಾವಿತ್ರಿಯೇ ನಟಿಸಿದರು’ ಎಂದು ತಿಳಿಸಿದ್ದರು.

ಸಾವಿತ್ರಿ ಅವರು ತೆಲುಗು ಚಿತ್ರರಂಗದ ಲಿಜೆಂಡರಿ ನಟಿ. ಈಗ ಅವರನ್ನು ‘ಮಹಾನಟಿ’ ಎಂದೇ ಕರೆಯಲಾಗುತ್ತದೆ. ತೆಲುಗಿನಲ್ಲಿ ನಟರಲ್ಲಿ ಎನ್​​ಟಿಆರ್ ಅವರಿಗಿರುವ ಸ್ಥಾಯಿಯೇ ನಟಿಯರಲ್ಲಿ ಸಾವಿತ್ರಿ ಅವರಿಗಿದೆ. ಆದರೆ ಆ ನಟಿಗೆ ಧ್ವನಿ ನೀಡಲು ನಿರಾಕರಿಸಿ, ಸ್ವಾಭಿಮಾನ ಮೆರೆದಿದ್ದರು ಜಾನಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿನ್ನೆ ಕೆಂಪು ಕೋಟೆ, ಇವತ್ತು ತಾಜ್ ಹೋಟೆಲ್; ಎರಡು ದಿನದಲ್ಲಿ ಎರಡು ಹುಸಿ ಬಾಂಬ್ ಬೆದರಿಕೆ – Kannada News | Hoax bomb threat at Mumbai Taj Hotel, a day after similar threat at Delhi Red Fort

ತಾಜ್ ಮಹಲ್ ಪ್ಯಾಲೇಸ್ ಹೋಟೆಲ್Image Credit source: PTI

ಮುಂಬೈ, ಜುಲೈ 12: ನಿನ್ನೆ ದೆಹಲಿಯ ಕೆಂಪು ಕೋಟೆಯ ಮೇಲೆ ಹುಸಿ ಬಾಂಬ್ ಬೆದರಿಕೆ ಬಂದಂತೆ ಇವತ್ತು ಮುಂಬೈನ ಐತಿಹಾಸಿಕ ಮತ್ತು ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ಗೂ (Taj Mahal Palace Hotel) ಭಾನುವಾರ ಮಧ್ಯರಾತ್ರಿ ಬಾಂಬ್ ಬೆದರಿಕೆ ಕರೆ ಬಂದು, ಭಾರಿ ಆತಂಕ ಸೃಷ್ಟಿಸಿತ್ತು. ಆದರೆ, ಪೊಲೀಸರು ನಡೆಸಿದ ತೀವ್ರ ತಪಾಸಣೆಯ ನಂತರ ಇದು ಹುಸಿ (Hoax) ಬೆದರಿಕೆ ಕರೆ ಎಂದು ತಿಳಿದುಬಂದಿದೆ.

ಭಾನುವಾರ ಮಧ್ಯರಾತ್ರಿ ಸುಮಾರು 12:13 ರ ಸುಮಾರಿಗೆ ನವಿ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ (Control Room) ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಆತ, “ದಾವೂದ್ ಇಬ್ರಾಹಿಂ ತಾಜ್ ಹೋಟೆಲ್‌ನಲ್ಲಿ ಬಾಂಬ್ ಇಟ್ಟಿದ್ದಾನೆ, ಹೋಟೆಲ್ ಅನ್ನು ಸ್ಫೋಟಿಸಲಾಗುವುದು” ಎಂದು ಬೆದರಿಕೆ ಹಾಕಿದ್ದನು. ತಕ್ಷಣವೇ ಎಚ್ಚೆತ್ತ ನವಿ ಮುಂಬೈ ಪೊಲೀಸರು ಈ ಮಾಹಿತಿಯನ್ನು ಮುಂಬೈ ಪ್ರಧಾನ ಪೊಲೀಸ್ ನಿಯಂತ್ರಣ ಕೊಠಡಿಗೆ ರವಾನಿಸಿದರು.

ತಾಜ್ ಹೋಟೆಲ್‌ನಲ್ಲಿ ಹೈ ಅಲರ್ಟ್ – ತೀವ್ರ ಶೋಧ ಕಾರ್ಯ

2008ರ 26/11 ಮುಂಬೈ ಉಗ್ರರ ದಾಳಿಯ ಪ್ರಮುಖ ಗುರಿಗಳಲ್ಲಿ ತಾಜ್ ಹೋಟೆಲ್ ಕೂಡ ಒಂದಾಗಿದ್ದರಿಂದ, ಪೊಲೀಸರು ಈ ಕರೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದರು. ಹೋಟೆಲ್‌ನಲ್ಲಿ ತಕ್ಷಣವೇ ಹೈ ಅಲರ್ಟ್ ಘೋಷಿಸಲಾಯಿತು.

ಇದನ್ನೂ ಓದಿ: ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್​ನ ವಾಟ್ಸಾಪ್ ಸ್ಕ್ರೀನ್​ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ?

ಕೊಲಾಬಾ ಪೊಲೀಸ್ ತಂಡ, ಕ್ರೈಮ್ ಬ್ರಾಂಚ್ ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS) ತಕ್ಷಣವೇ ಸ್ಥಳಕ್ಕೆ ಧಾವಿಸಿದವು. ಹೋಟೆಲ್‌ನ ಮುಖ್ಯ ಲಾಬಿ, ಈಜುಕೊಳ (Swimming Pool), ಬ್ಯಾಂಕ್ವೆಟ್ ಹಾಲ್‌ಗಳು, ರೆಸ್ಟೋರೆಂಟ್‌ಗಳು, ಪಾರ್ಕಿಂಗ್ ಪ್ರದೇಶ ಹಾಗೂ ಹೋಟೆಲ್‌ನ ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಅತ್ಯಾಧುನಿಕ ಉಪಕರಣಗಳು ಮತ್ತು ಶ್ವಾನ ದಳದೊಂದಿಗೆ ತೀವ್ರ ತಪಾಸಣೆ ನಡೆಸಲಾಯಿತು.

ಹುಸಿ ಬೆದರಿಕೆ ಎಂದು ಘೋಷಣೆ

ಹಲವು ಗಂಟೆಗಳ ಕಾಲ ಹೋಟೆಲ್‌ನ ಮೂಲೆ ಮೂಲೆಗಳನ್ನು ಜಾಲಾಡಿದ ಭದ್ರತಾ ಸಿಬ್ಬಂದಿಗೆ ಯಾವುದೇ ಆಕ್ಷೇಪಾರ್ಹ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ. ಹೀಗಾಗಿ, ಸಾರ್ವಜನಿಕರು ಮತ್ತು ಪ್ರವಾಸಿಗರು ನಿಟ್ಟುಸಿರು ಬಿಡುವಂತಾಯಿತು ಮತ್ತು ಪೊಲೀಸರು ಇದೊಂದು ಹುಸಿ ಬೆದರಿಕೆ ಕರೆ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದರು.

ತನಿಖೆ ಮತ್ತು ಆರೋಪಿಗಾಗಿ ಹುಡುಕಾಟ

ಪೊಲೀಸರ ತಾಂತ್ರಿಕ ತನಿಖೆಯಿಂದ ಈ ಬೆದರಿಕೆ ಕರೆ ನವಿ ಮುಂಬೈನ ‘ತುರ್ಭೆ’ (Turbhe) ಪ್ರದೇಶದಿಂದ ಬಂದಿರುವುದು ಪತ್ತೆಯಾಗಿದೆ. ಕರೆ ಮಾಡಲು ಬಳಕೆಯಾದ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಲು ಮುಂಬೈ ಮತ್ತು ನವಿ ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ನೆಲಸಿದ್ದ ಪಾಕಿಸ್ತಾನೀ ನಾಗರಿಕರು; ಒಬ್ಬ ಮಹಿಳೆ ಸೇರಿ ಇಬ್ಬರ ಬಂಧನ

ದೆಹಲಿಯ ರೆಡ್ ಫೋರ್ಟ್​ಗೂ ಬಂದಿತ್ತು ಬಾಂಬ್ ಬೆದರಿಕೆ

ಇದಕ್ಕೂ ಕೇವಲ ಒಂದು ದಿನ ಮುನ್ನ (ಜುಲೈ 11) ದೆಹಲಿಯ ಐತಿಹಾಸಿಕ ಕೆಂಪು ಕೋಟೆಗೂ (Red Fort) ಇದೇ ರೀತಿಯ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿದ್ದ ಆ ಕರೆಯ ನಂತರ ಕೆಂಪು ಕೋಟೆಯಲ್ಲಿ ತಪಾಸಣೆ ನಡೆಸಿ, ಅದೂ ಕೂಡ ಹುಸಿ ಕರೆ ಎಂದು ಧೃಡಪಡಿಸಲಾಗಿತ್ತು. ಸರಣಿ ಹುಸಿ ಕರೆಗಳ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಝ್ ಬಾಲ್ ಯುಗಾಂತ್ಯ; ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆಗೆ ಮೆಕಲಮ್ ರಾಜೀನಾಮೆ

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿದ್ದ ಇಂಗ್ಲೆಂಡ್‌ ತಂಡದಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ತರಬೇತಿ ನೀಡುತ್ತಿದ್ದ ನ್ಯೂಜಿಲೆಂಡ್​ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2012 ರಲ್ಲಿ ಇಂಗ್ಲೆಂಡ್‌ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೇರಿದ್ದ ಮೆಕಲಮ್ ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಟೆಸ್ಟ್ ಕ್ರಿಕೆಟ್​ಗೂ ಹೊಡಿಬಡಿ ಆಟವನ್ನು ಪರಿಚಯಿಸಿದ್ದ ಮೆಕಲಮ್ ಇಂಗ್ಲೆಂಡ್‌ ಟೆಸ್ಟ್ ತಂಡವನ್ನು ಹಲವಾರು ಸ್ಮರಣೀಯ ಗೆಲುವುಗಳಿಗೆ ಹಾಗೆಯೇ ಹಲವಾರು ಹೀನಾಯ ಸೋಲುಗಳಿಗೆ ಮುನ್ನಡೆಸಿದ್ದರು. ಇದೀಗ ಟೆಸ್ಟ್ ತಂಡದ ಕೋಚ್ ಆಗಿ ತಮ್ಮ ನಾಲ್ಕು ವರ್ಷದ ಪಯಣಕ್ಕೆ ಮೆಕಲಮ್ ಅಂತ್ಯ ಹಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್‌ ಕ್ರಿಕೆಟ್​ನಲ್ಲಿ ಬಾಝ್ ಬಾಲ್ ಕ್ರಿಕೆಟ್ ಕೂಡ ಯುಗಾಂತ್ಯವಾಗಿದೆ ಎನ್ನಬಹುದು.

Source link

IND vs ENG: 341 ರನ್​ಗಳಿಗೆ ಡಿಕ್ಲೇರ್ ಘೋಷಿಸಿದ ಭಾರತ; ಇಂಗ್ಲೆಂಡ್ ಗೆಲುವಿಗೆ 456 ರನ್ ಗುರಿ

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ತನ್ನ ಎರಡನೇ ಇನ್ನಿಂಗ್ಸ್​ ಅನ್ನು 341 ರನ್​​ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆತಿಥೇಯ ಇಂಗ್ಲೆಂಡ್‌ ಮಹಿಳಾ ತಂಡದ ಗೆಲುವಿಗೆ 457 ರನ್​ಗಳ ಬೃಹತ್ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಪರ ಯಾಸ್ತಿಕಾ ಭಾಟಿಯಾ ಸ್ಮರಣೀಯ ಶತಕ ಸಿಡಿಸಿದರೆ, ಉಪನಾಯಕಿ ಸ್ಮೃತಿ ಮಂಧಾನ ಹಾಗೂ ವಿಕೆಟ್‌ಕೀಪರ್ ರಿಚಾ ಘೋಷ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇತ್ತ ಇಂಗ್ಲೆಂಡ್‌ ಪರ ಸೋಫಿ ಎಕ್ಲೆಸ್ಟೋನ್ ಸತತ ಎರಡನೇ ಇನ್ನಿಂಗ್ಸ್​ನಲ್ಲೂ ಐದು ವಿಕೆಟ್​ಗಳ ಗೊಂಚಲು ಪಡೆದರು.

ಮೊದಲ ಇನ್ನಿಂಗ್ಸ್​ನಲ್ಲಿ 285 ರನ್​ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ, ಆತಿಥೇಯ ಇಂಗ್ಲೆಂಡ್‌ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 170 ರನ್​​ಗಳಿಗೆ ಕಟ್ಟಿಹಾಕಿತು. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 115 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಮೊದಲ ವಿಕೆಟ್​ಗೆ 88 ರನ್​ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ಆಟಗಾರ್ತಿ ಶಫಾಲಿ 33 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ಇದಾದ ಬಳಿಕ ಜೊತೆಯಾದ ಸ್ಮೃತಿ ಹಾಗೂ ಯಾಸ್ತಿಕಾ ಎರಡನೇ ವಿಕೆಟ್‌ಗೆ 73 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದೇ ವೇಳೆ ಸ್ಮೃತಿ ಸತತ ಎರಡನೇ ಇನ್ನಿಂಗ್ಸ್​ನಲ್ಲೂ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದಾಗ್ಯೂ ಎರಡನೇ ಇನ್ನಿಂಗ್ಸ್​ನಲ್ಲೂ ಶತಕ ವಂಚಿತರಾದ ಸ್ಮೃತಿ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

Source link

Grapes Cleaning Tips: ದ್ರಾಕ್ಷಿ ಹಣ್ಣನ್ನು ಸ್ವಚ್ಛಗೊಳಿಸಲು ಈ ಕ್ರಮಗಳನ್ನು ಅನುಸರಿಸಿ – Kannada News | The correct way to clean grapes

ಇಂದಿನ ಕಾಲದಲ್ಲಿ ಹೆಚ್ಚು ರಾಸಾಯನಿಕ ಮತ್ತು ಕೀಟನಾಶಗಳನ್ನು ಬಳಸಿಯೇ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಅದಕ್ಕಾಗಿಯೇ ಮಾರುಕಟ್ಟೆಯಿಂದ ತಂದಂತಹ ಹಣ್ಣು ಮತ್ತು ತರಕಾರಿಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸಿಯೇ ಬಳಸಬೇಕು ಎಂದು ತಜ್ಞರು ಸಲಹೆ ನೀಡುವುದು. ಆದರೆ ದ್ರಾಕ್ಷಿ ಹಣ್ಣಿನ (grapes) ವಿಚಾರಕ್ಕೆ ಬಂದ್ರೆ ಇದನ್ನು ಬರೀ ನೀರಿನಿಂದ ತೊಳೆದರೆ ಸಾಕಾಗುವುದಿಲ್ಲ, ಇದನ್ನು ಸ್ವಚ್ಛಗೊಳಿಸಲು ಸರಿಯಾದ ಕ್ರಮಗಳನ್ನು ಪಾಲಿಸಬೇಕಾಗುವುದು ತುಂಬಾನೇ ಮುಖ್ಯ. ಹೌದು ಇದರ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ, ರಾಸಾಯನಿಕಗಳನ್ನು ಅಂಟಿರುವುದರಿಂದ ಅವನ್ನು ಸಂಪೂರ್ಣವಾಗಿ ಹೋಗಲಾಡಿಸಲು, ದ್ರಾಕ್ಷಿ ಕ್ಲೀನ್‌ ಮಾಡುವ ಸಮಯದಲ್ಲಿ ಈ ಒಂದಷ್ಟು ಕ್ರಮಗಳನ್ನು ಅನುಸರಿಸಬೇಕು.

ದ್ರಾಕ್ಷಿಯಲ್ಲಿ ಹೆಚ್ಚು ಕೀಟನಾಶಕಗಳು ಏಕೆ ಇರುತ್ತವೆ? 

ಬೇರೆ ಹಣ್ಣುಗಳಿಗೆ ಹೋಲಿಸಿದರೆ ದ್ರಾಕ್ಷಿ ಹಣ್ಣಿನಲ್ಲಿ ಹೆಚ್ಚಿನ ಕೀಟನಾಶಕ, ರಾಸಾಯನಿಕಗಳಿರುತ್ತವೆ. ಇದರ ಹಿಂದಿನ ಕಾರಣವೆಂದರೆ ಕೃಷಿಯ ಸಮಯದಲ್ಲಿ ದ್ರಾಕ್ಷಿಗಳಿಗೆ ಕೀಟಗಳು ಹೆಚ್ಚು ಆವರಿಸುತ್ತದೆ, ಅಲ್ಲದೆ ಇವುಗಳಲ್ಲಿ ಶಿಲೀಂಧ್ರಗಳು ಬೆಳೆಯುತ್ತವೆ. ಈ ಸಮಸ್ಯೆಗಳಿಂದ ದ್ರಾಕ್ಷಿಯನ್ನು ಕಾಪಾಡಿಕೊಳ್ಳಲು ಹೆಚ್ಚು ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ.

ದ್ರಾಕ್ಷಿ ಹಣ್ಣು ತೊಳೆಯುವ ಸರಿಯಾದ ಕ್ರಮ ಯಾವುದು?

ಉಪ್ಪು ನೀರಿನಿಂದ ತೊಳೆಯಿರಿ: ಬರೀ ನೀರಿನ ಬದಲು ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಅದರಲ್ಲಿ ದ್ರಾಕ್ಷಿ ಹಣ್ಣನ್ನು ತೊಳೆಯಿರಿ. ಅದಕ್ಕಾಗಿ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಟೀಚಮಚ ಉಪ್ಪು ಸೇರಿಸಿ ಅದರಲ್ಲಿ ದ್ರಾಕ್ಷಿಯನ್ನು 15 ರಿಂದ 20 ನಿಮಿಷಗಳ ಕಾಲ ನೆನೆಸಿ. ನಂತರ ಅವುಗಳನ್ನು ಮತ್ತೊಮ್ಮೆ ಶುದ್ಧ ನೀರಿನಿಂದ ತೊಳೆಯಿರಿ.ಉಪ್ಪು ನೀರುಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.

ಅಡುಗೆ ಸೋಡಾ: ದ್ರಾಕ್ಷಿಯಲ್ಲಿ ಅಂಟಿರುವ ರಾಸಾಯನಿಕಗಳನ್ನು ತೆಗೆದುಹಾಕಲು ನೀವು ಅಡುಗೆ ಸೋಡಾವನ್ನು ಬಳಸಬಹುದು. ನೀರಿಗೆ ಅರ್ಧ ಟೀ ಚಮಚ ಅಡಿಗೆ ಸೋಡಾವನ್ನು ಹಾಕಿ, ದ್ರಾಕ್ಷಿಯನ್ನು ಈ ದ್ರಾವಣದಲ್ಲಿ 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಸ್ವಚ್ಛ ನೀರಿನಿಂದ ತೊಳೆಯಿರಿ. ಈ ವಿಧಾನ ದ್ರಾಕ್ಷಿಯಲ್ಲಿ ಅಂಟಿರುವ ರಾಸಾಯನಿಕ ಮತ್ತು ಕೀಟನಾಶಕಗಳನ್ನು ತೆಗೆದುಹಾಕಲು ತುಂಬಾನೇ ಸಹಕಾರಿ.

ಇದನ್ನೂ ಓದಿ: ಚಹಾ ತಯಾರಿಸುವಾಗ, ಸೇವಿಸುವಾಗ ಮಾಡುವ ತಪ್ಪುಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು

ಬಿಳಿ ವಿನೆಗರ್: ಬಿಳಿ ವಿನೆಗರ್‌ ಕೂಡ ದ್ರಾಕ್ಷಿಯನ್ನು ಸ್ವಚ್ಛಗೊಳಿಸಲು ಸಹಕಾರಿ. ಒಂದು ಬೌಲ್‌ ನೀರಿಗೆ ಸ್ವಲ್ಪ ವಿನೆಗರ್‌ ಸೇರಿಸಿ ಈ ಮಿಶ್ರಣದಲ್ಲಿ ದ್ರಾಕ್ಷಿಯನ್ನು 10 ರಿಂದ 15 ನಿಮಿಷಗಳ ಕಾಲ ಅದರಲ್ಲಿ ನೆನೆಸಿಡಿ. ನಂತರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ವಿನೆಗರ್  ದ್ರಾಕ್ಷಿಯಲ್ಲಿನ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಮತ್ತು ಅವುಗಳ ಮೇಲ್ಮೈಗೆ ಅಂಟಿಕೊಂಡಿರುವ ಯಾವುದೇ ಕೊಳಕು ಅಥವಾ ಶೇಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಹೀಗೆ ದ್ರಾಕ್ಷಿ ಹಣ್ಣನ್ನು ಚೆನ್ನಾಗಿ ತೊಳೆದ ನಂತರ, ಅವುಗಳನ್ನು ಸ್ವಚ್ಛವಾದ ಹತ್ತಿ ಬಟ್ಟೆ ಅಥವಾ ಟಿಶ್ಯೂ ಪೇಪರ್ ಮೇಲೆ ಹರಡಿ ಒಣಗಲು ಬಿಡಿ. ನಂತರವೇ ಅವುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಪ್ರಿಯಾಂಕ್ ಖರ್ಗೆಗೆ ಪ್ರಲ್ಹಾದ್​ ಜೋಶಿ ತಿರುಗೇಟು – Kannada News | Pralhad Joshi Sparks Priyank Kharge Over RSS Riot Claims

ಬಾಗಲಕೋಟೆ, ಜುಲೈ 12: ‘‘RSS ಬೈದಿದ್ದಕ್ಕೆ ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಮಾಧ್ಯಮಗಳಲ್ಲಿ ಜಾಗ ಸಿಗುತ್ತಿದೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದ್ದೇನೆ. ಬಾಲಿಶತನದ ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ’’ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ. ಆ ಮೂಲಕ RSS​ ಸಭೆ ನಂತರ ಗಲಭೆಗಳಾಗುತ್ತವೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್​ ಜೋಶಿ, ‘‘ಅದರ ಬಗ್ಗೆ ಕ್ರಮಕೈಗೊಳ್ಳಲು ಹೇಳಿ ಯಾರು ಬೇಡ ಅಂದಿದ್ದಾರೆ. ಪೆಡ್ಲರ್​ಗಳನ್ನು ಯಾಕೆ ಬಂಧಿಸಿಲ್ಲ ಅಂತಾ ನೀವು ಪ್ರಶ್ನಿಸಬಾರದು, ಅದಕ್ಕಾಗಿಯೇ ಅವರು ಈ ರೀತಿ ಹೇಳುತ್ತಿದ್ದಾರೆ. ಪ್ರಿಯಾಂಕ್ ಹೇಳಿಕೆಗೆ ಉತ್ತರ ನೀಡಬೇಡಿ ಅಂತಾ ನಮ್ಮವರಿಗೆ ಹೇಳಿದ್ದೀನಿ. ಸರಸಂಘಚಾಲಕ ಮೋಹನ್ ಭಾಗವತ್ ಒಮ್ಮೆ ಉತ್ತರ ಕೊಟ್ಟಿದ್ದಾರೆ. ಅದಾದ ನಂತರ ಏನೂ ಹೇಳಿಲ್ಲ, ಅವರ ಕೆಲಸ ಮಾಡಿಕೊಂಡು ಇದ್ದಾರೆ. ಈ ನೂರು ವರ್ಷಗಳಲ್ಲಿ ಇಂತಹವನ್ನೆಲ್ಲಾ ಬಹಳ ನೋಡಿ ಆಗಿದೆ. BJP ಮತ್ತು ಸಂಘದ ಅನೇಕ ಸಂಘಟನೆಗಳು ಅನೇಕ ವರ್ಷಗಳಿಂದ ಇವೆ. ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ. ರಿಜಿಸ್ಟ್ರೇಷನ್ ರಿಜಿಸ್ಟ್ರೇಷನ್ ಅಂತಾರಾ, ಏನು ಮಾಡುತ್ತಾರೆ ನೋಡೋಣ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ತಮಿಳು ಸ್ಟಾರ್ ನಟನ ವಿರುದ್ಧ ವಂಚನೆ ಪ್ರಕರಣ ದಾಖಲು – Kannada News | Cheating Case registered against Tamil actor Arya

ಇತ್ತೀಚೆಗೆ ತಮಿಳು ಚಿತ್ರರಂಗದ (Kollywood) ನಾಯಕ ನಟರುಗಳು ಕೆಟ್ಟ ಕಾರಣಗಳಿಗೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ರವಿ ಮೋಹನ್, ಧನುಶ್ ತಮ್ಮ ವಿಚ್ಛೇದನ ಮತ್ತು ಅಫೇರ್​​ಗಳ ಕಾರಣಕ್ಕೆ ಸುದ್ದಿ ಆದರು. ನಟ ವಿಶಾಲ್ ಹಣಕಾಸು ವಂಚನೆ ಕಾರಣಕ್ಕೆ ಸುದ್ದಿ ಆದರು. ಇದೆಲ್ಲದರ ನಡುವೆ ಇದೀಗ ತಮಿಳಿನ ಜನಪ್ರಿಯ ನಾಯಕ ನಟನೊಬ್ಬನ ವಿರುದ್ಧ ಹೈದರಾಬಾದ್​​ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ತಮಿಳು ಮಾತ್ರವೆ ಅಲ್ಲದೆ ತೆಲುಗು ಭಾಷೆಗಳಲ್ಲಿ ನಟಿಸಿರುವ ನಟ ಆರ್ಯ ವಿರುದ್ಧ ಈಗ ಹೈದರಾಬಾದ್​​ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅವರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಮೆರಾ ಉಪಕರಣಗಳನ್ನು ಬಾಡಿಗೆಗೆ ನೀಡುವ ಕಂಪನಿಯೊಂದು ನಟ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದು, ಹಣಕಾಸು ವಂಚನೆ ಮಾಡಿದ್ದಾರೆಂದು ಆರೋಪಿಸಿದೆ.

ದೂರಿನ ಪ್ರಕಾರ, ಆರ್ಯ, ನಿರ್ಮಾಪಕ ವಿನೋದ್ ಮತ್ತು ಪ್ರೊಡಕ್ಷನ್ ಹೌಸ್‌ನ ಪ್ರತಿನಿಧಿಗಳು ‘ಅನಂತನ್ ಕಾಡು’ ಸಿನಿಮಾದ ಚಿತ್ರೀಕರಣಕ್ಕಾಗಿ ಅತ್ಯುತ್ತಮ ಗುಣಮಟ್ಟದ, ಬಲು ದುಬಾರಿಯಾದ ಡಿಜಿಟಲ್ ಕ್ಯಾಮೆರಾಗಳು, ಲೈಟಿಂಗ್ ಯೂನಿಟ್‌ಗಳು ಮತ್ತು ಇತರೆ ಕೆಲವು ಶೂಟಿಂಗ್​ಗೆ ಅಗತ್ಯವಿರುವ ಉಪಕರಣಗಳನ್ನು ಮುಂಗಡ ಹಣ ನೀಡಿ ಬಾಡಿಗೆಗೆ ಪಡೆದಿದ್ದರು. ಎಲ್ಲಾ ಬಾಕಿ ಹಣವನ್ನು ಯಾವುದೇ ವಿಳಂಬವಿಲ್ಲದೆ ಪಾವತಿಸುವುದಾಗಿ ಅವರು ಕಂಪನಿಗೆ ಭರವಸೆ ನೀಡಿದ್ದರು, ಆದರೆ ಹಣ ಪಾವತಿ ಮಾಡಿಲ್ಲವೆಂದು ದೂರಿದೆ.

ಕಂಪನಿಯು ದುಬಾರಿ ಉಪಕರಣಗಳನ್ನು ಹೈದರಾಬಾದ್‌ನಿಂದ ಕೇರಳದ ಶೂಟಿಂಗ್ ಲೊಕೇಶನ್​​ಗೆ ತನ್ನ ಸ್ವಂತ ವೆಚ್ಚದಲ್ಲಿ ಸಾಗಿಸಿದೆ ಮತ್ತು ಶೂಟಿಂಗ್‌ನಾದ್ಯಂತ ಅಗತ್ಯ ಬೆಂಬಲವನ್ನು ನೀಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದಾಗ್ಯೂ, ಚಿತ್ರೀಕರಣ ಮುಗಿದ ನಂತರ, ನಿರ್ಮಾಪಕರು ಒಟ್ಟು 2.12 ಕೋಟಿ ರೂಪಾಯಿಗಳ ಪೈಕಿ 1.80 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಾವತಿಸಿಲ್ಲ ಎಂದು ಕಂಪೆನಿ ಆರೋಪ ಮಾಡಿದೆ.

ಇದನ್ನೂ ಓದಿ:ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ; ಡಾ. ರಾಜ್ ರೀತಿ ನೇತ್ರದಾನ

ನಿರ್ಮಾಪಕರು ಬಾಕಿ ಹಣವನ್ನು ಪಾವತಿ ಮಾಡುವುದಾಗಿ ಲಿಖಿತ ರೂಪದಲ್ಲಿ ಒಪ್ಪಿಕೊಂಡಿದ್ದರು ಮತ್ತು ಚಿತ್ರ ಬಿಡುಗಡೆಗೂ ಮುನ್ನ ಬಾಕಿಯನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು ಆದರೆ ಫೋನ್ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ಪದೇ ಪದೇ ನೆನಪಿಸಿದರೂ, ಹಣ ಪಾವತಿಯಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಹಣ ಮರು ಪಾವತಿ ಮಾಡುವಂತೆ ಕೇಳಿದ್ದಕ್ಕೆ ನಟ ಆರ್ಯ, ನಿರ್ಮಾಪಕ ವಿನೋದ್ ಮತ್ತು ಅವರ ವೈಯಕ್ತಿಕ ಸಹಾಯಕ ಕಂಪನಿಯ ಮ್ಯಾನೇಜರ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಮಿಳು ನಟ ಆರ್ಯ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ನಾನ್ ಕಡವುಲ್’, ‘ಅರಣ್​​ಮಣಿ’, ‘ರಾಜಾ ರಾಣಿ’, ‘ಸರ್ಪಟ್ಟ ಪರಂಬರೈ’, ಮಲಯಾಳಂನ ‘ಉರುಮೈ’, ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ‘ವರುಡು’ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಯ ನಟಿಸಿದ್ದಾರೆ. ನಟನೆ ಜೊತೆಗೆ ಅವರು ನಿರ್ಮಾಪಕರು ಸಹ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಲಾರ್ಡ್ಸ್‌ನಲ್ಲಿ ಶತಕ ಬಾರಿಸದಿದ್ದರೂ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನ – Kannada News | Smriti Mandhana Dominates Lord’s Test: India’s Star Breaks Records and Outshines Sachin Kohli

ಲಾರ್ಡ್ಸ್‌ನಲ್ಲಿ ಆಡಿದ ಐದು ಟೆಸ್ಟ್ ಪಂದ್ಯಗಳ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಸಚಿನ್ ಕೇವಲ 195 ರನ್ ಗಳಿಸಿದರೆ, ಮತ್ತೊಂದೆಡೆ ಕೊಹ್ಲಿಗೆ, ಈ ಒಂದು ಪಂದ್ಯದಲ್ಲಿ ಮಂಧಾನ ಗಳಿಸಿದಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ಲಾರ್ಡ್ಸ್‌ನಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 127 ರನ್ ಗಳಿಸಿದರೆ, ಮಂಧಾನ ಕೇವಲ ಒಂದು ಪಂದ್ಯದಲ್ಲಿ 153 ರನ್ ಕಲೆಹಾಕಿದರು (PC- Mint).

Source link

ರಾಜ್ಯದಲ್ಲಿ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ಜಾರಿಗೆ ಮುಂದಾದ ಶಿಕ್ಷಣ ಇಲಾಖೆ – Kannada News | Education Department Plans to Reintroduce Public Style Assessment Exams Across the State

ಪ್ರಾತಿನಿಧಿಕ ಚಿತ್ರImage Credit source: Getty images

ಬೆಂಗಳೂರು, ಜುಲೈ 12: ರಾಜ್ಯದಲ್ಲಿ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ಜಾರಿಗೆ ಶಿಕ್ಷಣ ಇಲಾಖೆ (education department) ಮುಂದಾಗಿದೆ. 5, 7, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ ಮೌಲ್ಯಮಾಪನ ಪರೀಕ್ಷೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆ. ಆದರೆ ಈ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆ ಎಂದು ಕರೆಯದೇ, ಮೌಲ್ಯಮಾಪನ ಪರೀಕ್ಷೆ ಮಾದರಿಯಲ್ಲಿ ಪರೀಕ್ಷೆ ನಡೆಸಲು ಸಜ್ಜಾಗಿದೆ. ಎರಡು ವರ್ಷಗಳ ಹಿಂದೆ ಇದೇ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಸಲು ಇಲಾಖೆ ಯೋಜನೆ ರೂಪಿಸಲು ಮುಂದಾಗಿದೆ.

ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ 5, 7, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ನಿಖರವಾಗಿ ಅಳೆಯುವ ಉದ್ದೇಶದಿಂದ ಈ ಪರೀಕ್ಷೆ ನಡೆಸಲು ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಕರ್ನಾಟಕದ 2 ಸೇರಿ ಭಾರತದ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್; ಕಾರಣ ಗೊತ್ತಾ?

ಈ ಹಿಂದೆ ಬೋರ್ಡ್ ಮಾದರಿಯ ವಾರ್ಷಿಕ ಪರೀಕ್ಷೆ ಎಂಬ ಹೆಸರಿನಲ್ಲಿ ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದ್ದಾಗ ಪೋಷಕರು, ಖಾಸಗಿ ಶಾಲೆಗಳು ಹಾಗೂ ಶಿಕ್ಷಣ ತಜ್ಞರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಳಿಕ ಕೋರ್ಟ್ ಮೊರೆ ಕೂಡ ಹೋಗಲಾಗಿತ್ತು. ಆದರೆ ಈ ಬಾರಿ ಅದೇ ಪರೀಕ್ಷೆಯನ್ನು ಮೌಲ್ಯಮಾಪನ ಪರೀಕ್ಷೆ ಎಂಬ ಮಾದರಿಯಲ್ಲಿ ಫೇಲ್ ಮಾಡದೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹಾಗೂ ಕಲಿಕಾ ಸುಧಾರಣೆ ಕ್ರಮಗಳನ್ನ ರೂಪಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಪ್ಲ್ಯಾನ್​ಗೆ ಮುಂದಾಗಿದೆ.

ಮೌಲ್ಯಮಾಪನ ಪರೀಕ್ಷೆಯ ವಿಶೇಷತೆಗಳು ಏನು?

  • 5, 7, 8 ಹಾಗೂ 9ನೇ ತರಗತಿಗಳಿಗೆ ಅನ್ವಯ
  • ಬೋರ್ಡ್ ಪರೀಕ್ಷೆ ಎಂದು ಕರೆಯುವ ಬದಲು ಮೌಲ್ಯಮಾಪನ ಪರೀಕ್ಷೆ ಎಂಬ ಹೆಸರಿನಲ್ಲಿ ಪರೀಕ್ಷೆ
  • ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮೌಲ್ಯಮಾಪನ ಉದ್ದೇಶ
  • ಪರೀಕ್ಷಾ ಮಂಡಳಿಯಿಂದ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುವುದು.
  • ತಾಲೂಕು ಮಟ್ಟದಲ್ಲಿ ಮೌಲ್ಯಮಾಪನ ಮಾಡಿ, ಉತ್ತರ ಪತ್ರಿಕೆಗಳನ್ನು ಶಾಲೆಗಳಿಗೆ ರವಾನೆ ಮಾಡಲಾಗುವುದು.
  • ಮಕ್ಕಳ ಕಲಿಕಾ ಪ್ರಗತಿಗೆ ಅನುಕೂಲ ಜೊತೆಗೆ ಮಕ್ಕಳ ವಾರ್ಷಿಕ ಕಲಿಕಾ ಮಟ್ಟ ಪರಿಶೀಲನೆ

ಪರೀಕ್ಷಾ ಮಂಡಳಿಯೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಸಿದ್ಧಪಡಿಸಿ ಆಯಾ ಶಾಲೆಗಳಿಗೆ ಕಳುಹಿಸಲಿದೆ. ಬಳಿಕ ತಾಲೂಕು ಮಟ್ಟದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರಿಂದ ರಾಜ್ಯಾದ್ಯಂತ ಏಕರೂಪದ ಮೌಲ್ಯಮಾಪನ ಸಾಧ್ಯವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು

ಇನ್ನು ಈ ಕ್ರಮಕ್ಕೆ ಆರಂಭದಲ್ಲೇ ಪರ-ವಿರೋಧ ಕೇಳುಬಂದಿದ್ದವು. ಪುಟ್ಟ ಮಕ್ಕಳ ಮೇಲೆ ಪರೀಕ್ಷೆಯ ಒತ್ತಡ ಹೆಚ್ಚಾಗುವ ಸಾಧ್ಯತೆ ಎಂಬ ಆತಂಕ ವ್ಯಕ್ತವಾಗಿತ್ತು. ಪಬ್ಲಿಕ್ ಮಾದರಿಯಂತೆಯೇ ಪರೀಕ್ಷೆ ಇರಲಿದೆಯೇ? ಅಥವಾ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಇದು ಪರಿಣಾಮಕಾರಿ ಹೆಜ್ಜೆಯಾಗಲಿದೆಯಾ ಕಾದು ನೋಡಬೇಕಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿಶ್ಯೂ ಪೇಪರ್‌ಗಳು ಬಿಳಿ ಬಣ್ಣದಲ್ಲಿ ಮಾತ್ರ ಲಭ್ಯವಿರಲು ಇದುವೇ ಕಾರಣವಂತೆ – Kannada News | Why is tissue paper in white? know the fact about it

ದಿನನಿತ್ಯವೂ ಟಿಶ್ಯೂ (tissue paper) ಪೇಪರ್‌ಗಳನ್ನು ಬಳಕೆ ಮಾಡುತ್ತೇವೆ. ಹೌದು ಹಗುರ ಮತ್ತು ಮೃದುವಾಗಿರುವ ಈ ಕಾಗದವನ್ನು ಮುಖದ ಬೆವರು ಒರೆಸಲು, ಮೇಕಪ್‌ ತೆಗೆಯಲು, ಒದ್ದೆ ಕೈಯನ್ನು ಒರೆಸಲು, ಕನ್ನಡಿ ಸೇರಿದಂತೆ ಗಾಜಿನ ವಸ್ತುಗಳ ಮೇಲಿನ ಕಲೆ, ಧೂಳುಗಳನ್ನು ತೆಗೆದು ಹಾಕಲು ಬಳಸುತ್ತೇವೆ. ಹೀಗೆ ಹೋಟೆಲ್‌ ರೆಸ್ಟೋರೆಂಟ್‌ನಿಂದ ಹಿಡಿದು ಮನೆ, ಕಚೇರಿಗಳಲ್ಲೂ ವ್ಯಾಪಕವಾಗಿ ಟಿಶ್ಯೂ ಪೇಪರ್‌ಗಳನ್ನು ಬಳಸಲಾಗುತ್ತಿದ್ದು, ಇದು ನಮ್ಮ ಜೀವನ ಇದು ನಮ್ಮ ಜೀವನದ ಭಾಗವಾಗಿ ಹೋಗಿದೆ ಅಂತಾನೇ ಹೇಳಬಹುದು.  ನಾವು ಬಳಸುವ ಎಲ್ಲಾ ಟಿಶ್ಯೂ ಪೇಪರ್‌ಗಳು ಕೂಡ ಬಿಳಿ ಬಣ್ಣದಲ್ಲಿಯೇ ಇರುತ್ತವೆ. ಇದು ಬೇರೆ ಬಣ್ಣಗಳಲ್ಲಿ ಏಕಿಲ್ಲ, ಬಿಳಿ ಬಣ್ಣದಲ್ಲಿ ಮಾತ್ರ ಏಕೆ ತಯಾರಿಸಲಾಗುತ್ತದೆ ಎಂಬ ಯೋಚನೆ ನಿಮಗೂ ಬಂದಿದ್ಯಾ? ಹೀಗೆ ಟಿಶ್ಯೂ ಪೇಪರ್‌ ಬಿಳಿ ಬಣ್ಣದಲ್ಲಿಯೇ ಇರಲು ಹಲವು ಕಾರಣಗಳಿವೆಯಂತೆ, ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಟಿಶ್ಯೂ ಪೇಪರ್‌ ಬಳಿ ಬಣ್ಣದಲ್ಲಿಯೇ ಏಕಿರುತ್ತವೆ?

ಮುಖ್ಯವಾಗಿ ಹೇಳುವುದಾದರೆ ಟಿಶ್ಯೂ ಪೇಪರ್‌ಗಳನ್ನು ಮರದ ತಿರುಳುಗಳಿಂದ ತಯಾರಿಸಲಾಗುತ್ತದೆ. ಮರದ ಮೂಲ ಬಣ್ಣ ಕಂದು ಬಣ್ಣವಾಗಿದ್ದು, ಟಿಶ್ಯೂ ಪೇಪರ್‌ ತಯಾರಿಕೆಯ ಪ್ರಕ್ರಿಯೆಯಲ್ಲಿ, ತಿರುಳನ್ನು ಬ್ಲೀಚ್‌ ಮಾಡಿ ಲಿಗ್ನಿನ್‌ ಅಂಶವನ್ನು ತೆಗೆದುಹಾಕಿ ಕಾಗದವನ್ನು ಮೃದುಗೊಳಿಸಲಾಗುತ್ತದೆ. ಈ ಬ್ಲೀಚಿಂಗ್‌ ಪ್ರಕ್ರಿಯೆಯು ಮರದ ತಿರುಳನ್ನು ಬಿಳಿ ಬಣ್ಣಕ್ಕೆ ತಿರುಗಿಸುತ್ತವೆ. ಇದಕ್ಕೆ ಯಾವುದೇ ಹೆಚ್ಚಿನ ರಾಸಾಯನಿಕಗಳು ಮತ್ತು ಬಣ್ಣಗಳನ್ನು ಸೇರಿಸದಿರುವ ಕಾರಣ ಟಿಶ್ಯೂ ಯಾವಾಗಲೂ ಬೀಳಿ ಬಣ್ಣದಲ್ಲಿಯೇ ಇರುತ್ತವೆ.

ಅಲರ್ಜಿಯ ಅಪಾಯ ಕಡಿಮೆ: ಬಣ್ಣ ಬಣ್ಣಗಳ ಟಿಶ್ಯೂ ಪೇಪರ್‌ ತಯಾರಿಸಲು ವಿವಿಧ ಕೃತಕ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಬಣ್ಣಗಳನ್ನು ಬಳಸಬೇಕಾಗುತ್ತದೆ. ಈ ರಾಸಾಯನಿಕಗಳು ಸೂಕ್ಷ್ಮ ಚರ್ಮದ ಮೇಲೆ ತಾಕಿದಾಗ ಅಲರ್ಜಿ, ತುರಿಕೆ, ಚರ್ಮದ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಈ ರೀತಿಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಲು ಯಾವುದೇ ಹೆಚ್ಚುವರಿ ರಾಸಾಯನಿಕಗಳಿಲ್ಲದೆ ಬಿಳಿ ಬಣ್ಣದಲ್ಲಿಯೇ ಟಿಶ್ಯೂ ಪೇಪರ್‌ಗಳನ್ನು ತಯಾರಿಸಲಾಗುತ್ತದೆ.

ವಿಲೇವಾರಿ ಸುಲಭ: ಬಿಳಿ ಟಿಶ್ಯೂ ಪೇಪರ್‌ ಯಾವುದೇ ಕೃತಕ ಬಣ್ಣಗಳು ಅಥವಾ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಇವುಗಳು ನೀರಿನ ಸಂಪರ್ಕಕ್ಕೆ ಬಂದರೆ  ಬೇಗನೆ ಕರಗಿ ಹೋಗುತ್ತವೆ. ಹಾಗಾಗಿ ಈ ಸುಲಭ ವಿಲೇವಾರಿಯ ಕಾರಣಕ್ಕೂ ಯಾವುದೇ ರಾಸಾಯನಿಕಗಳನ್ನು ಬಳಸದೆ ಟಿಶ್ಯೂ ಪೇಪರ್‌ಗಳನ್ನು ಬಿಳಿ ಬಣ್ಣದಲ್ಲಿಯೇ ತಯಾರಿಸಲಾಗುತ್ತದೆ.

ಪರಿಸರ ಸ್ನೇಹಿ: ಕೃತಕ ಬಣ್ಣಗಳು ಮತ್ತು ಭಾರವಾದ ರಾಸಾಯನಿಕಗಳಿರುವ ಟಿಶ್ಯೂ ಪೇಪರ್‌ಗಳು ಮಣ್ಣಿನಲ್ಲಿ ಸೇರಿದರೆ ಇದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ ಜೊತೆಗೆ ಮಣ್ಣು ಮಾಲಿನ್ಯವಾಗುತ್ತದೆ. ಹಾಗಾಗಿ ಮಣ್ಣು ಮತ್ತು ನೀರಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲು ನಾವು ನಿತ್ಯ ಬಳಸುವ ಟಿಶ್ಯೂ ಪೇಪರ್‌ಗಳನ್ನು ಹೆಚ್ಚು ರಾಸಾಯನಿಕಗಳನ್ನು ಹಾಕದೆ  ಬಿಳಿ ಬಣ್ಣದಲ್ಲಿಯೇ ತಯಾರಿಸಲಾಗುತ್ತದೆ.

ಇದನ್ನೂ ಓದಿ: ಗೋಮೂತ್ರದಿಂದ ತಲೆ, ಮುಖವನ್ನು ತೊಳೆಯುವ ವಿಶಿಷ್ಟ ಬುಡಕಟ್ಟು ಜನಾಂಗವಿದು

ಬಿಳಿ ಟಿಶ್ಯೂ ತುಂಬಾನೇ ಅಗ್ಗ: ಟಿಶ್ಯೂ ಪೇಪರ್‌ಗಳನ್ನು ಬೃಹತ್‌ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಹೀಗಿರುವಾಗ ಇದಕ್ಕೆ ಕೃತಕ ಬಣ್ಣ ಸೇರಿಸಿದರೆ ಇದರ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ, ಉತ್ಪನ್ನದ ವೆಚ್ಚವೂ ಹೆಚ್ಚಾಗುತ್ತದೆ. ಆದರೆ ಬಿಳಿ ಬಣ್ಣದ ಟಿಶ್ಯೂ ತಯಾರಿಸುವುದು ಅಷ್ಟು ದುಬಾರಿಯಲ್ಲ. ಹಾಗಾಗಿ ಟಿಶ್ಯೂಗಳನ್ನು ಬಿಳಿ ಬಣ್ಣದಲ್ಲಿಯೇ ತಯಾರಿಸಲಾಗುವುದು.

ಸ್ವಚ್ಛತೆಯ ಭಾವನೆಯನ್ನು ಸೃಷ್ಟಿಸುತ್ತದೆ: ಬಿಳಿ ಬಣ್ಣವು ಸಾಮಾನ್ಯವಾಗಿ ಶುದ್ಧತೆ ಮತ್ತು ಶುಚಿತ್ವದೊಂದಿಗೆ ಸಂಬಂಧ ಹೊಂದಿದೆ. ಮುಖ, ಕೈಗಳು ಅಥವಾ ಆಹಾರ ಮತ್ತು ಪಾನೀಯಗಳನ್ನು ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ, ಆದ್ದರಿಂದ ಬಿಳಿ ಬಣ್ಣವು ಜನರಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯ ಭಾವನೆಯನ್ನು ಸೃಷ್ಟಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version