ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!; ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು – Kannada News | Belagavi: Giant Tree Crashes on Tractor in Shivoli Amidst Rain; Driver Unharmed

ಖಾನಾಪುರ, ಜು.6: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಭಾರಿ ಮಳೆಗೆ ಚಲಿಸುತ್ತಿದ್ದ ಟ್ರ್ಯಾಕ್ಟರ್ ಒಂದರ ಮೇಲೆ ದೈತ್ಯ ಮರವೊಂದು ಮುರಿದು ಬಿದ್ದಿರುವ ಆಘಾತಕಾರಿ ಘಟನೆ ನಡೆದಿದೆ. ಆದರೆ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾನೆ. ಖಾನಾಪುರ ತಾಲೂಕಿನ ಶಿವೋಲಿ ಗ್ರಾಮದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿಯಾದ ಪುಂಡಲೀಕ್ ಪಾಟೀಲ್ ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್ ಇದಾಗಿದ್ದು, ಎಂದಿನಂತೆ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಹಠಾತ್ ಆಗಿ ರಸ್ತೆ ಬದಿಯ ದೈತ್ಯ ಮರವೊಂದು ಮುರಿದು ನೇರವಾಗಿ ಟ್ರ್ಯಾಕ್ಟರ್ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಟ್ರ್ಯಾಕ್ಟರ್‌ನ ಮುಂಭಾಗದ ಎಂಜಿನ್ ಸಂಪೂರ್ಣವಾಗಿ ಜಜ್ಜುಗುಜ್ಜಾಗಿದ್ದು, ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಇಂಜಿನ್ ಮೇಲೆಯೇ ಮರ ಬಿದ್ದಿದ್ದರೂ ಚಾಲಕನ ಸಮಯಪ್ರಜ್ಞೆಯಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣವೇ ಸ್ಥಳೀಯ ನಿವಾಸಿಗಳು ರಕ್ಷಣೆಗೆ ಧಾವಿಸಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್​​ ಖರ್ಗೆ – Kannada News | ‘Permission Mandatory for RSS Route March as Long as I Am Home Minister’: Priyank Kharge Sparks Row

ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
Image Credit source: PTI

ಕಲಬುರಗಿ, ಜುಲೈ 06: ನಾನು ಗೃಹಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪ್ರಿಯಾಂಕ್​​ ಖರ್ಗೆ ಹೇಳಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಕರ್ನಾಟಕ ಸರ್ಕಾರದ ನಡುವೆ ಮತ್ತೊಂದು ಹೊಸ ಸಮರ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಆರ್​​ಎಸ್​​ಎಸ್​​ ನೋಂದಣಿ ಬಗ್ಗೆ ಮಾತಾಡುತ್ತಲೇ ಬಂದಿರುವ ಸಚಿವರು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರೋದು ರಾಜಕೀಯ ಜಟಾಪಟಿಗೆ ನಾಂದಿ ಹಾಡಿದೆ.

ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಹೇಳಿದ್ದೇನು?

ಆರ್​​ಎಸ್​​ಎಸ್​​ನವರು ಪಥಸಂಚಲನಕ್ಕೆ ಅನುಮತಿ ತೆಗೆದುಕೊಳ್ಳಬೇಕು. ಜಸ್ಟ್ ಈಗ ಮೋಹನ್​ ಭಾಗವತ್​​ ಅವರಿಗೆ ಪತ್ರ ಬರೆದಿದ್ದೇನೆ. 100 ವರ್ಷದ ಸಂಘಟನೆ ಕಾಗದಗಳು ಎಲ್ಲೋ ಇರಬಹುದು. ಹುಡುಕುತ್ತಿದ್ದಾರೆ ಹುಡುಕಿಕೊಂಡು ಬರಲಿ. ಇಷ್ಟು ಕೇಳಿದ್ದಕ್ಕೆ ನನ್ನ ವೈಯಕ್ತಿಕ ಮಾಹಿತಿ ಕೆದಕುತ್ತಿದ್ದಾರೆ. ಪ್ರಿಯಾಂಕ್ ಯಾರನ್ನು ಮದುವೆಯಾಗಿದ್ದು, ಮಕ್ಕಳು ಯಾರು? ಪ್ರಿಯಾಂಕ್ ಕಪ್ಪಗಿದ್ದಾನಾ, ಬೆಳ್ಳಗಿದ್ದಾನಾ ಎಲ್ಲಾ ಕೆದಕುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಹಿಂದೆ ಕಲಬುರಗಿಯ ಚಿತ್ತಾಪುರ ಮತ್ತು ಯಾದಗಿರಿಯ ಕೆಂಭಾವಿಯಲ್ಲಿ RSS ಪಥಸಂಚಲ ವಿಚಾರವಾಗಿ ತೀವ್ರ ಜಟಾಪಟಿ ನಡೆದಿತ್ತು. ವಿಚಾರ ಕೋರ್ಟ್​​ ಮೆಟ್ಟಿಲು ಕೂಡ ಏರಿತ್ತು ಎಂಬುದಿಲ್ಲಿ ಗಮನಾರ್ಹ ವಿಷಯವಾಗಿದೆ.

ಇದನ್ನೂ ಓದಿ: ಆರ್​​ಎಸ್​​ಎಸ್​ ನೋಂದಣಿ, ಸದಸ್ಯತ್ವದ ಬಗ್ಗೆ ಕೋರ್ಟ್‌ನಲ್ಲೂ ಪ್ರಿಯಾಂಕ್​​ ತಕರಾರು; ಸಚಿವರಿಗೆ ಉತ್ತರಿಸಿಯೇ ನ್ಯಾಯಾಲಯದಿಂದ ಸಮನ್ಸ್​​

RSS ವಿರುದ್ಧ ಪ್ರಿಯಾಂಕ್​​ ಖರ್ಗೆ ವಾಗ್ದಾಳಿ

ಆರ್​​ಎಸ್​​ಎಸ್​​ನವರು ಧ್ವಜದ ಮೇಲೆ ದೇಣಿಗೆ ತೆಗೆದುಕೊಳ್ತಾರೆ. ದೇಣಿಗೆ ಪಡೆದುಕೊಳ್ಳೋಕೆ ಇವರ ಗುರು ಯಾರು?ಹಾಗಿದ್ರೆ ಇವರಗೆ ಲೆಕ್ಕ ಕೇಳಬಾರದಾ? ಎಂದು ಗೃಹ ಸಚಿವರು ಪ್ರಶ್ನಿಸಿದ್ದಾರೆ. ನಾಳೆ ನೀವೂ ಒಂದು ಧ್ವಜದ ಮೇಲೆ ಸಂಘಟನೆ ಮಾಡಿ, ಚಂದಾ ಕಲೆಕ್ಟ್‌ ಮಾಡಿ. ಅವಾಗ ಐಟಿ,ಇಡಿಯವರು ಸುಮ್ನೆ ಕೂರುತ್ತಾರಾ? ಎಲ್ಲರೂ ಹೀಗೇ ಮಾಡಲಿ ಅವಾಗ ನೋಡೋಣ ಎಂದವರು ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

W,W,W,W: 4 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಶಾನಕ! – Kannada News | Dasun Shanaka picked 4 wickets in 4 balls in MLC 2026

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2026) ಟೂರ್ನಿಯ 21ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಪೊಮೊನಾದ ನೈಟ್ ರೈಡರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ vs ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಯಾಟಲ್ ಓರ್ಕಾಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 121 ರನ್​ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ತಂಡವು 69 ರನ್​ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಪೆವಿಲಿಯನ್ ಸೇರಿದ್ದರು.

ಇದಾಗ್ಯೂ ಶುಭಂ ರಂಜಾನೆ (40) ಹಾಗೂ ಡೊನವನ್ ಫೆರೇರಾ ಹೋರಾಟ ಮುಂದುವರೆಸಿದ್ದರು. ಪರಿಣಾಮ ಕೊನೆಯ ಓವರ್​ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್  ತಂಡಕ್ಕೆ ಗೆಲ್ಲಲು 15 ರನ್​ಗಳು ಬೇಕಿತ್ತು.

ಈ ಹಂತದಲ್ಲಿ ಸಿಯಾಟಲ್ ಓರ್ಕಾಸ್ ತಂಡದ ನಾಯಕ ಮಾರ್ಕಸ್ ಸ್ಟೊಯಿನಿಸ್ ಚೆಂಡನ್ನು ಶ್ರೀಲಂಕಾದ ಸ್ಟಾರ್ ಆಲ್ ರೌಂಡರ್ ದಸುನ್ ಶಾನಕ ಅವರ ಕೈಗಿತ್ತರು.

4 ಎಸೆತಗಳಲ್ಲಿ 4 ವಿಕೆಟ್​:

ಕೊನೆಯ ಓವರ್​ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ದಸುನ್ ಶಾನಕ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ ಸಿಯಾಟಲ್ ಓರ್ಕಾಸ್ ತಂಡಕ್ಕೆ 9 ರನ್‌ಗಳ ರೋಚಕ ಜಯ ತಂದುಕೊಟ್ಟಿದ್ದಾರೆ. ಈ ಓವರ್​ನ ವಿವರಗಳು ಈ ಕೆಳಗಿನಂತಿದೆ…

    • ಮೊದಲ ಎಸೆತ (19.1): ಶುಭಂ ರಂಜಾನೆ ಪಾಯಿಂಟ್ ಮೇಲಿಂದ ಬೌಂಡರಿ ಬಾರಿಸಿದರು (ಗೆಲುವಿಗೆ 5 ಎಸೆತಗಳಲ್ಲಿ 11 ರನ್ ಬೇಕಿತ್ತು).
    •  ಎರಡನೇ ಎಸೆತ (19.2): ಒಂದು ರನ್ ಮೂಲಕ ಸಮೀಕರಣ 4 ಎಸೆತಗಳಲ್ಲಿ 10 ರನ್‌ಗಳಿಗೆ ಬಂದು ನಿಂತಿತು.
    •  ಮೂರನೇ ಎಸೆತ (19.3): ಕ್ರೀಸ್‌ನಲ್ಲಿ ಅಪಾಯಕಾರಿಯಾಗಿದ್ದ ಡೊನೊವನ್ ಫೆರೇರಾ (22 ರನ್) ಶಾನಕ ಅವರ ಅದ್ಭುತ ಸ್ಲೋವರ್ ಬಾಲ್‌ಗೆ ಕ್ಲೀನ್ ಬೌಲ್ಡ್ ಆದರು.
    •  ನಾಲ್ಕನೇ ಎಸೆತ (19.4): ಹೊಸ ಬ್ಯಾಟರ್ ಕ್ಯಾಲ್ವಿನ್ ಸ್ಯಾವೇಜ್ ಲಾಂಗ್-ಆನ್‌ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಶಿಮ್ರಾನ್ ಹೆಟ್ಮೆಯರ್ ಕೈಗೆ ಕ್ಯಾಚಿತ್ತರು.
    • ಐದನೇ ಎಸೆತ (19.5): ಆಡಮ್ ಮಿಲ್ನೆ ದೊಡ್ಡ ಶಾಟ್‌ಗೆ ಯತ್ನಿಸಿ ವಿಕೆಟ್‌ಕೀಪರ್ ಟಿಮ್ ಸೀಫರ್ಟ್‌ಗೆ ಕ್ಯಾಚ್ ನೀಡಿದರು. ಈ ಮೂಲಕ ಶಾನಕ ಹ್ಯಾಟ್ರಿಕ್ ವಿಕೆಟ್ ಪಡೆದರು.
    • ಆರನೇ ಎಸೆತ (19.6) : ಅಂತಿಮ ಎಸೆತದಲ್ಲಿ ಅಂಶಿ ಡಿ ಸಿಲ್ವಾ ಕೂಡ ದೊಡ್ಡ ಹೊಡೆತಕ್ಕೆ ಕೈಹಾಕಿ ಹೆಟ್ಮೆಯರ್ ಹಿಡಿದ ಮತ್ತೊಂದು ಅದ್ಭುತ ಕ್ಯಾಚ್‌ಗೆ ಬಲಿಯಾದರು.

ದಸುನ್ ಶಾನಕ ಅವರ ಈ ಮಾರಕ ಡೆತ್-ಓವರ್ ಸ್ಪೆಲ್‌ನಿಂದಾಗಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ 112 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸಿಯಾಟಲ್ ಓರ್ಕಾಸ್ ತಂಡವು 9 ರನ್‌ಗಳ ಸ್ಮರಣೀಯ ಜಯ ದಾಖಲಿಸಿತು.

Source link

Karnataka Dam Water Level: ಮಲೆನಾಡು ಮಳೆಗೆ ಹೆಚ್ಚಿದ ಒಳಹರಿವು; ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ – Kannada News | Karnataka Dam Water Levels: Inflow Increases Across Major Reservoirs due to Heavy Rain

ಕೆಆರ್​ಎಸ್ ಡ್ಯಾಮ್Image Credit source: gettyimages.com

ಬೆಂಗಳೂರು, ಜುಲೈ 06: ರಾಜ್ಯದಲ್ಲಿ ಮುಂಗಾರು ಮಳೆ (Monsoon rain) ಚುರುಕುಗೊಂಡಿರುವುದರಿಂದ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಆರಂಭವಾಗಿದೆ. ಜೂನ್ ತಿಂಗಳಲ್ಲಿ ಮಳೆ ಕೈಕೊಟ್ಟಿದ್ದರಿಂದ ಆತಂಕದಲ್ಲಿದ್ದ ರೈತರಿಗೆ ಈಗ ಜಲಾಶಯಗಳಿಗೆ ಹರಿದುಬರುತ್ತಿರುವ ನೀರು ಕೊಂಚ ನಿರಾಳ ತಂದಿದ್ದು, ಕೃಷಿ ಚಟುವಟಿಕೆಗಳಿಗೆ ಮರುಜೀವ ಬಂದಂತಾಗಿದೆ. ಕಾವೇರಿ ಹಾಗೂ ಕೃಷ್ಣಾ ನದಿ ಪ್ರದೇಶದ ಡ್ಯಾಂಗಳು ಭರ್ತಿಯಾಗುವ ಮುನ್ಸೂಚನೆ ಸಿಕ್ಕಿದೆ.

ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ (ಜುಲೈ 06)

ಮುಂದಿನ ದಿನಗಳಲ್ಲಿ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಏರಿಕೆ

ಶಿವಮೊಗ್ಗದ ಗಾಜನೂರು ಡ್ಯಾಂ ಈಗಾಗಲೇ ಸಂಪೂರ್ಣ ಭರ್ತಿಯಾಗಿದ್ದು, 14 ಗೇಟ್‌ಗಳ ಮೂಲಕ 18 ಸಾವಿರ ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಸಲಾಗುತ್ತಿದೆ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಳೆದ 6 ದಿನಗಳಲ್ಲಿ ಡ್ಯಾಂ ಮಟ್ಟ 5.5 ಅಡಿಯಷ್ಟು ಏರಿಕೆಯಾಗಿದ್ದು, ವಿದ್ಯುತ್ ಉತ್ಪಾದನೆಗೆ ಕೊಂಚ ನಿರಾಳ ತಂದಿದೆ. ಹಾಗೆಯೇ ಕಬಿನಿ ಮತ್ತು ತುಂಗಭದ್ರಾ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ ಕೊಂಚ ಕಡಿಮೆಯಿದೆ.

ಒಟ್ಟಾರೆಯಾಗಿ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಇರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ವೇಗವಾಗಿ ಏರಿಕೆಯಾಗಲಿದ್ದು, ಜಲಕ್ಷಾಮದ ಆತಂಕ ದೂರಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:10 am, Mon, 6 July 26

Source link

ಜೂನಿಯರ್​ ಎನ್​​ಟಿಆರ್ ಸಿಎಂ ಆಗೋದು ಯಾವಾಗ? ಅವರಿಂದ ಸಿಕ್ಕಿತು ಉತ್ತರ ಏನು? – Kannada News | Junior NTR Breaks Silence on Becoming Andhra Pradesh CM and Taking Over TDP Legacy in Old video

ಹಿಂದಿನ ಸಂದರ್ಶನವೊಂದರಲ್ಲಿ, ಜೂನಿಯರ್ ಎನ್‌ಟಿಆರ್ ತಮ್ಮ ವೈಯಕ್ತಿಕ ಸಂಬಂಧಗಳು ಮತ್ತು ರಾಜಕೀಯ ದೃಷ್ಟಿಕೋನಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಈ ವೇಳೆ ನಟ ನಂದಮೂರಿ ಬಾಲಕೃಷ್ಣ ಅವರ ಮೇಲಿನ ಅಪಾರ ಪ್ರೀತಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಬಗೆಗಿನ ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದ್ದರು. ನಂದಮೂರಿ ಬಾಲಕೃಷ್ಣ ಅವರನ್ನು ತಾವು ತುಂಬಾ ಇಷ್ಟಪಡುವುದಾಗಿ ಜೂನಿಯರ್ ಎನ್‌ಟಿಆರ್ ಪದೇ ಪದೇ ಒತ್ತಿ ಹೇಳಿದ್ದರು. ‘ನನಗೆ ಬಾಲಾ ಬಾಬಾಯಿ (ಚಿಕ್ಕಪ್ಪ) ಅಂದರೆ ತುಂಬಾ ಇಷ್ಟ. ಅವರು ಅದ್ಭುತ ವ್ಯಕ್ತಿ ಹಾಗೂ ತುಂಬಾ ಒಳ್ಳೆಯ ಮನಸ್ಸಿನವರು’ ಎಂದು ಹೊಗಳಿದ್ದರು. ಬಾಲಕೃಷ್ಣ ಅವರ ಕೋಪದ ಸ್ವಭಾವದ ಬಗ್ಗೆ ಹೊರಗಿನವರು ಆಡುವ ಮಾತುಗಳನ್ನು ನಿರಾಕರಿಸಿದ್ದ ಅವರು, ಅವುಗಳನ್ನು ಉದ್ದೇಶಪೂರ್ವಕವಲ್ಲದ ಕೋಪದ ಪ್ರಕೋಪಗಳಷ್ಟೇ ಎಂದು ತಳ್ಳಿಹಾಕಿದ್ದರು. ನಂದಮೂರಿ ಕುಟುಂಬದಲ್ಲಿ ಬಾಲಕೃಷ್ಣ ಅವರು ತಮಗೆ ತುಂಬಾ ವಿಶೇಷ ವ್ಯಕ್ತಿ ಎಂದು ಎನ್‌ಟಿಆರ್ ಸ್ಪಷ್ಟಪಡಿಸಿದ್ದರು.

ಇದೇ ವೇಳೆ ತಮ್ಮ ರಾಜಕೀಯ ಭವಿಷ್ಯ ಹಾಗೂ ಅಜ್ಜನ ರಾಜಕೀಯ ಪರಂಪರೆಯನ್ನು ಯಾವಾಗ ವಹಿಸಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಜೂನಿಯರ್ ಎನ್‌ಟಿಆರ್ ನೇರವಾದ ಉತ್ತರ ನೀಡಿದ್ದರು. ತಾವು ಸದ್ಯ ತೆಲುಗು ದೇಶಂ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷದ ನಿಷ್ಠಾವಂತನಾಗಿ ಜೀವನ ನಡೆಸಲು ಬಯಸುವುದಾಗಿ ಹೇಳಿದ್ದರು. ‘ಭವಿಷ್ಯ ಏನೆಂದು ನಾವು ಈಗಲೇ ಊಹಿಸಲು ಸಾಧ್ಯವಿಲ್ಲ. ಸಮಯ ಬರುವ ಮುನ್ನ ಅದರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ’ ಎಂದಿದ್ದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಹುದ್ದೆಯ ಮೇಲೆ ತಮಗೆ ಸದ್ಯಕ್ಕೆ ಯಾವುದೇ ಆಸೆ ಅಥವಾ ಯೋಜನೆಗಳಿಲ್ಲ. ಒಂದು ವೇಳೆ ಭವಿಷ್ಯದಲ್ಲಿ ಅಂತಹ ಸಂದರ್ಭ ಎದುರಾದರೆ ಮಾತ್ರ ಅದನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದರು. ಸಿಎಂ ಆಗಲು ಕೇವಲ ಆಸೆ ಇದ್ದರೆ ಸಾಲದು, ಅದಕ್ಕೆ ತಕ್ಕ ಮುತ್ಸದ್ದಿತನ ಹಾಗೂ ಅನುಭವ ಇರಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. ಎಲ್ಲದಕ್ಕೂ ವಿಧಿಯ ಆಟ ಮುಖ್ಯ ಎಂದು ನಂಬಿರುವ ಅವರು, ಹಣೆಬರಹದಲ್ಲಿದ್ದರೆ ಖಂಡಿತಾ ಆಗುತ್ತದೆ, ಇಲ್ಲದಿದ್ದರೆ ಎಷ್ಟೇ ಪ್ರಯತ್ನಿಸಿದರೂ ಸಿಗುವುದಿಲ್ಲ ಎಂದಿದ್ದರು.

ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಹಾಗೂ ತಮ್ಮ ಅಜ್ಜ ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಸ್ಥಾಪಿಸಿದ ಪಕ್ಷದ ಮೇಲೆ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಅಪಾರ ಗೌರವ ಹಾಗೂ ನಂಬಿಕೆ ಇದೆ ಎಂದು ಜೂನಿಯರ್ ಎನ್‌ಟಿಆರ್ ಹೇಳಿದ್ದರು.

ಇದನ್ನೂ ಓದಿ: ಜೂ ಎನ್​ಟಿಆರ್ ಸಿನಿಮಾ: ಬಿಡುಗಡೆ ತಡೆಯುವುದಾಗಿ ಎಚ್ಚರಿಸಿದ ರಾಜಕಾರಣಿ

‘ಟಿಡಿಪಿ ಪಕ್ಷದ ಹಳದಿ ಧ್ವಜವನ್ನು ನೋಡಿದಾಗ ನಮಗೆ ಏನೋ ಒಂದು ರೀತಿಯ ಹೆಮ್ಮೆ ಮೂಡುತ್ತದೆ. ನಮ್ಮ ಹೃದಯವೇ ಆ ಧ್ವಜಕ್ಕಾಗಿ ಮಿಡಿಯುತ್ತದೆ’ ಎಂದು ಹೇಳುವ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದರು. ತಮ್ಮ ಅಜ್ಜ ಎನ್‌ಟಿಆರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಚಂದ್ರಬಾಬು ನಾಯ್ಡು ಅವರು ಪಕ್ಷದ ಚುಕ್ಕಾಣಿ ಹಿಡಿದ ಘಟನೆಯ ಬಗ್ಗೆ ಕೇಳಿದಾಗ ಜೂನಿಯರ್ ಎನ್‌ಟಿಆರ್ ಬಹಳ ಜಾಣ್ಮೆಯಿಂದ ಪ್ರತಿಕ್ರಿಯಿಸಿದ್ದರು. ಒಬ್ಬ ಮೊಮ್ಮಗನಾಗಿ, ತಮ್ಮ ಅಜ್ಜ ಇಂದು ಜೀವಂತವಾಗಿದ್ದು ತಮ್ಮ ಯಶಸ್ಸನ್ನು ನೋಡಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಆಸೆ ಇರುವುದಾಗಿ ತಿಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಡಾ ಸೈಟ್ ಹಂಚಿಕೆ ಕೇಸ್ ಹಿನ್ನೆಲೆ ಯತೀಂದ್ರ ಖಾತೆ ಬದಲಾವಣೆಗೆ ಆಗ್ರಹ: ನೈಜ ಹೋರಾಟಗಾರರ ವೇದಿಕೆಯಿಂದ ಸಿಎಂಗೆ ಪತ್ರ – Kannada News | MUDA Row: NGO Demands CM DK Shivakumar to Change Minister Dr Yatindra’s Urban Development Portfolio

ಯತೀಂದ್ರ ಮತ್ತು ನೈಜ ಹೋರಾಟಗಾರರ ವೇದಿಕೆಯ ಪತ್ರದ ಪ್ರತಿImage Credit source: tv9

ಬೆಂಗಳೂರು, ಜುಲೈ 6: ಕರ್ನಾಟಕ ರಾಜಕಾರಣದಲ್ಲಿ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಬದಲಿ ನಿವೇಶನ ಹಂಚಿಕೆ ಹಗರಣದ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಡಾ. ಯತೀಂದ್ರ (Yathindra Siddaramaiah) ಅವರ ಖಾತೆ ಬದಲಾವಣೆಗೆ ತೀವ್ರ ಒತ್ತಡ ವ್ಯಕ್ತವಾಗಿದೆ. ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿರುವ ಡಾ. ಯತೀಂದ್ರ ಅವರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ಖಾತೆಯಿಂದ ಮುಕ್ತಿ ನೀಡಿ, ಬದಲಿ ಇಲಾಖೆಯನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ‘ನೈಜ ಹೋರಾಟಗಾರರ ವೇದಿಕೆ’ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ (DK Shivakumar) ಪತ್ರ ಬರೆದು ಆಗ್ರಹಿಸಿದೆ.

ನ್ಯಾಯಾಲಯ ವಿಚಾರಣೆ, ಇಡಿ ತನಿಖೆ ಹಂತದಲ್ಲಿರುವ ಪ್ರಕರಣ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಬದಲಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಯತೀಂದ್ರ ತಂದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿದ್ದು, ತಾಯಿ ಪಾರ್ವತಿ ಎರಡನೇ ಆರೋಪಿಯಾಗಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ಜೊತೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕ್ರಿಮಿನಲ್ ಪ್ರಕರಣ (PCR 42/24), ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಮತ್ತು ಜಾರಿ ನಿರ್ದೇಶನಾಲಯದಲ್ಲಿ (ED) ಪ್ರಕರಣವೂ ದಾಖಲಾಗಿ ಸದ್ಯ ವಿಚಾರಣೆಯ ಹಂತದಲ್ಲಿದೆ.

ನೈಜ ಹೋರಾಟಗಾರರ ವೇದಿಕೆ ಪತ್ರದಲ್ಲೇನಿದೆ?

ವೇದಿಕೆಯ ಪರವಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ಬರೆದಿರುವ ಪತ್ರದಲ್ಲಿ ಗಂಭೀರ ಕಾನೂನು ಮತ್ತು ನೈತಿಕ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ‘ಮುಡಾ ಹಗರಣದಲ್ಲಿ ಯತೀಂದ್ರರ ತಂದೆ ಮತ್ತು ತಾಯಿಯೇ ಪ್ರಮುಖ ಆರೋಪಿಗಳಾಗಿದ್ದಾರೆ. ಹೀಗಿರುವಾಗ ಅವರ ಮಗನೇ ಇಡೀ ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿ ಅಧಿಕಾರ ಚಲಾಯಿಸುವುದು ಮತ್ತು ನಿರ್ಧಾರಗಳನ್ನು ಕೈಗೊಳ್ಳುವುದು ಖಂಡಿತವಾಗಿಯೂ ‘ಹಿತಾಸಕ್ತಿ ಸಂಘರ್ಷ’ಕ್ಕೆ (Conflict of Interest) ಎಡೆಮಾಡಿಕೊಡುತ್ತದೆ. ಇದರಿಂದಾಗಿ ಸಾರ್ವಜನಿಕರಲ್ಲಿ, ‘ತಂದೆ-ತಾಯಿಯ ರಕ್ಷಣೆಗಾಗಿ ಅಧಿಕಾರ ದುರುಪಯೋಗವಾಗಬಹುದು’ ಎಂಬ ಅನುಮಾನ ಮೂಡುವುದು ಸಹಜ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

‘ಸೆಕ್ಷನ್ 167 ಮತ್ತು 169 ರ ಪ್ರಕಾರ ಸಾರ್ವಜನಿಕ ಸೇವೆಯಲ್ಲಿರುವವರು ತಪ್ಪು ದಾಖಲೆ ಸೃಷ್ಟಿಸುವುದು ಅಥವಾ ಕಾನೂನುಬಾಹಿರವಾಗಿ ಆಸ್ತಿ ಖರೀದಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಡಾ. ಯತೀಂದ್ರ ಇದೇ ಇಲಾಖೆಯಲ್ಲಿ ಮುಂದುವರಿದರೆ ಮುಡಾ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗಿ ನ್ಯಾಯ ಸಿಗುವುದು ಮರೀಚಿಕೆಯಾಗುತ್ತದೆ. ಆಡಳಿತಾತ್ಮಕ ಮತ್ತು ಸಂವಿಧಾನದ ಆರ್ಟಿಕಲ್ 311 ರ ನಿಯಮಾವಳಿಗಳ ಅನ್ವಯ ಪಾರದರ್ಶಕತೆ ಕಾಯ್ದುಕೊಳ್ಳಲು ಅವರನ್ನು ನಗರಾಭಿವೃದ್ಧಿ ಇಲಾಖೆಯಿಂದ ದೂರವಿಡಬೇಕು. ರಾಜ್ಯದ ನಾಗರಿಕರಲ್ಲಿ ಮೂಡಿರುವ ಗೊಂದಲಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿಗಳು ತಕ್ಷಣವೇ ಅವರಿಗೆ ಯಾವುದೇ ಒತ್ತಡವಿಲ್ಲದ ಮತ್ತೊಂದು ಬದಲಿ ಖಾತೆಯನ್ನು ನೀಡಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು’ ಎಂದು ಹೆಚ್.ಎಂ. ವೆಂಕಟೇಶ್ ಸಿಎಂ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿ ಮನೆಗೆ ಪತ್ನಿಯ ಕರೆಸಿಕೊಂಡು ಗುಂಡಿಕ್ಕಿ ಕೊಂದು, ನೇಪಾಳಕ್ಕೆ ಓಡಿ ಹೋದ ಪತಿ ಕೊನೆಗೂ ಅರೆಸ್ಟ್​ – Kannada News | Love Triangle Takes Shocking Turn as Couple Flees Across Border After Woman Found Dead

ಗುರುಗ್ರಾಮ, ಜುಲೈ 06: ಮದುವೆ(Marriage)ಯಾಗಿ ಕೇವಲ ಮೂರೇ ತಿಂಗಳಾಗಿದ್ದ ನವವಿವಾಹಿತೆಯನ್ನು ಪತಿ ಹಾಗೂ ಆತನ ಪ್ರೇಯಸಿ ಸೇರಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಮಾನೇಸರ್‌ನಲ್ಲಿ ನಡೆದಿದೆ. ಮೂರು ವರ್ಷಗಳ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಪತ್ನಿಯನ್ನೇ ಮುಗಿಸಿದ ಪತಿ ಹಾಗೂ ಆತನ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೆಳತಿಯ ಮನೆಗೆ ಪತ್ನಿಯನ್ನು ಕರೆಸಿ ಅಲ್ಲೇ ಇಬ್ಬರು ಸೇರಿ ಆಕೆಯನ್ನು ಹತ್ಯೆಗೈದಿದ್ದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಫೆಬ್ರವರಿಯಲ್ಲಿ ಮಾನೇಸರ್ ನಿವಾಸಿ ಅಂಕಿತ್ (25) ಎಂಬಾತನೊಂದಿಗೆ 22 ವರ್ಷದ ಯುವತಿಯ ಮದುವೆಯಾಗಿತ್ತು. ಆದರೆ, ಮೇ 21 ರಂದು ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಅತ್ತೆ ಮನೆಯವರಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಸಿಗದಿದ್ದಾಗ, ಗಾಬರಿಗೊಂಡ ಯುವತಿಯ ತಾಯಿ ಮೇ 22 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಮೇ 22 ರಂದೇ ಮಾನೇಸರ್‌ನ ಬಾಡಿಗೆ ಕೋಣೆಯೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.

3 ವರ್ಷಗಳ ಅಕ್ರಮ ಸಂಬಂಧ: ತಂಬಾಕು ಅಂಗಡಿ ನಡೆಸುತ್ತಿದ್ದ ಅಂಕಿತ್ ಹಾಗೂ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ರಜನಿ ದೇವಿ (38) ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಮತ್ತಷ್ಟು ಓದಿ: Chanakya Niti: ಇಂತವರನ್ನು ಮದುವೆಯಾದರೆ ಜೀವನ ತುಂಬಾನೇ ಕಷ್ಟ ಎಂದಿದ್ದಾರೆ ಚಾಣಕ್ಯ

ರೂಮ್‌ನಲ್ಲಿ ನಡೆದ ಹತ್ಯೆ: ರಜನಿಯ ಬಾಡಿಗೆ ಕೋಣೆಯಲ್ಲೇ ಇಬ್ಬರು ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದರು. ಇದಕ್ಕಾಗಿಯೇ ಎರಡು ತಿಂಗಳ ಮೊದಲೇ ಉತ್ತರ ಪ್ರದೇಶದಿಂದ ಗನ್ ಖರೀದಿಸಿದ್ದರು.ಮೇ 21 ರಂದು ಪತ್ನಿಯನ್ನ ನಂಬಿಸಿ ಗೆಳತಿ ರಜನಿಯ ಕೋಣೆಗೆ ಕರೆತಂದ ಅಂಕಿತ್, ಇಬ್ಬರೂ ಸೇರಿ ಆಕೆಯನ್ನು ಗುಂಡಿಟ್ಟು ಕೊಂದಿದ್ದಾರೆ.

ನೇಪಾಳಕ್ಕೆ ಪಲಾಯನ, ಕೊನೆಗೂ ಸಿಕ್ಕಿಬಿದ್ದರು
ಹತ್ಯೆಯ ನಂತರ ಸಿಕ್ಕಿಬೀಳುವ ಭಯದಿಂದ ಅಂಕಿತ್ ಮತ್ತು ರಜನಿ ಮೊದಲು ಹರಿದ್ವಾರಕ್ಕೆ ಓಡಿಹೋಗಿ, ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಿದ್ದರು. ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗಳು ಜೂನ್ 30 ರಂದು ಭಾರತಕ್ಕೆ ಮರಳಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕ್ರೈಂ ಬ್ರಾಂಚ್ ಪೊಲೀಸರು ಇಬ್ಬರನ್ನೂ ಮಾನೇಸರ್‌ನಲ್ಲಿ ಬಂಧಿಸಿದ್ದಾರೆ.

ಸದ್ಯ ಕೋರ್ಟ್ ಆರೋಪಿಗಳನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:13 am, Mon, 6 July 26

Source link

Gold Rate: ಚಿನ್ನದ ಬೆಲೆ ಗ್ರಾಮ್​ಗೆ 10 ರೂ, ಬೆಳ್ಳಿ ಬೆಲೆ 5 ರೂ ಇಳಿಕೆ – Kannada News | Gold Price Today on 6th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 6: ಚಿನ್ನದ ಬೆಲೆ ಮತ್ತೆ ಅಲ್ಪ ಇಳಿಕೆ ಕಂಡಿದೆ. ವಾರಾಂತ್ಯದಲ್ಲಿ 25 ರೂ ಕಡಿಮೆಗೊಂಡಿದ್ದ ಬಂಗಾರದ ದರ ಇಂದು ಸೋಮವಾರ 10 ರೂ ತಗ್ಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಅಲ್ಪ ಸ್ವಲ್ಪ ವ್ಯತ್ಯಯ ಆಗಿದೆ. ಬೆಳ್ಳಿ ಬೆಲೆಯೂ ಇವತ್ತು ಭಾರತದಲ್ಲಿ ಕಡಿಮೆ ಆಗಿದೆ. ಗ್ರಾಮ್​ಗೆ 5 ರೂನಷ್ಟು ತಗ್ಗಿರುವ ಅದರ ಬೆಲೆ 245 ರೂ ತಲುಪಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ (Gold Rates) 1,34,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,46,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,34,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 6ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,662 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,440 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,997 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,662 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,440 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,440 ರೂ
  • ಚೆನ್ನೈ: 13,560 ರೂ
  • ಮುಂಬೈ: 13,440 ರೂ
  • ದೆಹಲಿ: 13,455 ರೂ
  • ಕೋಲ್ಕತಾ: 13,440 ರೂ
  • ಕೇರಳ: 13,440 ರೂ
  • ಅಹ್ಮದಾಬಾದ್: 13,445 ರೂ
  • ಜೈಪುರ್: 13,455 ರೂ
  • ಲಕ್ನೋ: 13,455 ರೂ
  • ಭುವನೇಶ್ವರ್: 13,440 ರೂ

ಇದನ್ನೂ ಓದಿ: ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 562 ರಿಂಗಿಟ್ (13,131 ರುಪಾಯಿ)
  • ದುಬೈ: 503 ಡಿರಾಮ್ (13,048 ರುಪಾಯಿ)
  • ಅಮೆರಿಕ: 137.50 ಡಾಲರ್ (13,097 ರುಪಾಯಿ)
  • ಸಿಂಗಾಪುರ: 184.80 ಸಿಂಗಾಪುರ್ ಡಾಲರ್ (13,621 ರುಪಾಯಿ)
  • ಕತಾರ್: 504 ಕತಾರಿ ರಿಯಾಲ್ (13,170 ರೂ)
  • ಸೌದಿ ಅರೇಬಿಯಾ: 518 ಸೌದಿ ರಿಯಾಲ್ (13,143 ರುಪಾಯಿ)
  • ಓಮನ್: 53.40 ಒಮಾನಿ ರಿಯಾಲ್ (13,213 ರುಪಾಯಿ)
  • ಕುವೇತ್: 42.07 ಕುವೇತಿ ದಿನಾರ್ (13,016 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 245 ರೂ
  • ಚೆನ್ನೈ: 250 ರೂ
  • ಮುಂಬೈ: 245 ರೂ
  • ದೆಹಲಿ: 245 ರೂ
  • ಕೋಲ್ಕತಾ: 245 ರೂ
  • ಕೇರಳ: 250 ರೂ
  • ಅಹ್ಮದಾಬಾದ್: 245 ರೂ
  • ಜೈಪುರ್: 245 ರೂ
  • ಲಕ್ನೋ: 245 ರೂ
  • ಭುವನೇಶ್ವರ್: 250 ರೂ
  • ಪುಣೆ: 245

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:03 am, Mon, 6 July 26

Source link

Viral: 500 ಅರ್ಜಿ ಹಾಕಿದ್ರು ಸಿಗದ ಕೆಲಸ, ರ‍್ಯಾಪಿಡೋ ಚಾಲಕನಾಗಿ ವೃತ್ತಿ ಜೀವನ ಆರಂಭಿಸಿದ ಯುವಕ – Kannada News | Young man rapido driver after failing to find a job despite having a Computer Science degree.

ಉದ್ಯೋಗ (job)ಎಲ್ಲರಿಗೂ ಅತ್ಯವಶ್ಯಕ. ಕೈಯಲ್ಲಿ ಒಂದು ಕೆಲಸವಿದ್ದರೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿಕೊಂಡಿದ್ದರೂ ಉದ್ಯೋಗ ಸಿಗುವುದೇ ಕಷ್ಟ ಎನ್ನುವಂತಾಗಿದೆ. ದಿನಬೆಳಗಾದರೆ ಅದೆಷ್ಟೋ ಯುವಕ ಯುವತಿಯರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಎಷ್ಟೋ ಯುವಕರು ಓದಿದ್ದೆ ಬೇರೆ ಈಗ ಮಾಡುತ್ತಿರುವ ಕೆಲಸವೇ ಬೇರೆಯಾಗಿದೆ. ಆದರೆ ಅನಿವಾರ್ಯಕ್ಕೆ ಕಟ್ಟುಬಿದ್ದು ಜೀವನ ನಿರ್ವಹಣೆಗಾಗಿ ಇನ್ಯಾವುದೋ ಕೆಲಸ ನೆಚ್ಚಿಕೊಂಡಿದ್ದಾರೆ. ಆದರೆ ಯುವಕನೊಬ್ಬ 500ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಹಾಕಿದ್ರು ಕೆಲಸ ಸಿಗಲೇ ಇಲ್ಲ. ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ರು ಯಾವುದಕ್ಕೂ ಹಿಂದೆ ಸರಿಯದೇ ರ‍್ಯಾಪಿಡೋ ಚಾಲಕನಾಗಿ (Rapido driver) ಕೆಲಸ ಮಾಡುತ್ತಿದ್ದಾನೆ. ಈ ಯುವಕನ ವೃತ್ತಿ ಜೀವನದ ಬಹುದೊಡ್ಡ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀರಜ್ (Niraj) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ನಾನು ರ‍್ಯಾಪಿಡೋ ರೈಡರ್ ನ ಹೆಲ್ಮೆಟ್‌ನಲ್ಲಿ ಕಾಲೇಜು ಸ್ಟಿಕ್ಕರ್ ಗಮನಿಸಿದೆ. ಟ್ರಾಫಿಕ್‌ ನಡುವೆ ಸಿಲುಕಿಕೊಂಡಾಗ ಈ ಯುವಕನ ಜತೆಗೆ ಸಂಭಾಷಣೆಗೆ ಇಳಿದೆ. ಈ ವೇಳೆ ಯುವಕ ಕಳೆದ ಎರಡು ತಿಂಗಳಿನಲ್ಲಿ ಸುಮಾರು 500ಕ್ಕೂ ಹೆಚ್ಚು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದೇನೆ. ಆದರೆ ಒಂದೇ ಒಂದು ಕಂಪನಿನಿಂದ ಸಂದರ್ಶನಕ್ಕಾಗಿ ಕಾಲ್ ಬಂದಿಲ್ಲ. ಕೊನೆಗೆ ಜೀವನ ನಿರ್ವಹಣೆಗಾಗಿ ರ‍್ಯಾಪಿಡೋ ಚಾಲಕ ವೃತ್ತಿ ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾನೆ.

ಎಕ್ಸ್ ಪೋಸ್ಟ್ ಇಲ್ಲಿದೆ

ನಾನು ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ದು, ಚಾಲಕನಾಗಿ ಕೆಲಸ ಮಾಡುವುದು ನನ್ನ ಹೆತ್ತವರಿಗೆ ತಿಳಿದಿಲ್ಲ. ನನ್ನ ಮನೆಯವರು ಸಾಫ್ಟ್‌ವೇರ್ ಕೆಲಸದ ಸಂದರ್ಶನಗಳಿಗೆ ತಯಾರಿ ನಡೆಸುತ್ತಿದ್ದೇನೆ ಎಂದುಕೊಂಡಿದ್ದು, ನನ್ನ ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ಹೇಗೆ ವಿವರಿಸಬೇಕೆಂದು ತಿಳಿದಿಲ್ಲ ಎಂದು ಹೇಳಿಕೊಂಡಿರುವುದನ್ನು ಈ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗಾಗಿ 32 ಲಕ್ಷ ರೂ ವಾರ್ಷಿಕ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಐಐಟಿ ಪದವೀಧರೆ

ಈ ಪೋಸ್ಟ್ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಶಿಕ್ಷಣ ಪಡೆದ್ರು ಕಷ್ಟ ಪಡೆಯದೇ ಇದ್ರೂ ಕಷ್ಟ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ಇಂದಿನ ಯುವಕ ಪರಿಸ್ಥಿತಿ ಎಂದಿದ್ದಾರೆ. ಮತ್ತೊಬ್ಬರು, ಒಂದೆರಡು ವರ್ಷಗಳಲ್ಲಿ ಉದ್ಯೋಗ ಮಾರುಕಟ್ಟೆ ತುಂಬಾ ಸ್ಪರ್ಧಾತ್ಮಕವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್​​ಗೆ ಕಾದು ಕುಳಿತವರಿಗೆ ಗುಡ್ ನ್ಯೂಸ್ – Kannada News | Toxic Tabahi Song Yash Kiara Bold Video Release Sparks Hype for August 26 Premiere

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ (Toxic Movie) ‘ತಬಾಹಿ’ ವಿಡಿಯೋ ಸಾಂಗ್ ಈಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಈ ಹಾಡಿನ ಲಿರಿಕಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಧೂಳೆಬ್ಬಿಸಿತ್ತು. ಇದೀಗ ಚಿತ್ರದ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದು, ಚಿತ್ರತಂಡವು ಪ್ರೇಕ್ಷಕರಿಗೆ ಬಿಗ್ ಸರ್ಪ್ರೈಸ್ ನೀಡಲು ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಪ್ರಚಾರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಚಿತ್ರತಂಡ ನಿರ್ಧರಿಸಿದೆ. ಅದರ ಮೊದಲ ಭಾಗವಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ‘ತಬಾಹಿ’ ಹಾಡಿನ ಪೂರ್ಣ ಪ್ರಮಾಣದ ವಿಡಿಯೋ ಸಾಂಗ್ ಅನ್ನು ಇದೇ ವಾರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಆಗಸ್ಟ್ 15ಕ್ಕೆ ಬೆಂಗಳೂರಲ್ಲಿ ‘ಟಾಕ್ಸಿಕ್’ ಭರ್ಜರಿ ಈವೆಂಟ್? ಹೇಳಿದ್ದನ್ನು ಮಾಡಿ ತೋರಿಸಿದ ಯಶ್

ಗಾಂಧಿನಗರದ ಮೂಲಗಳ ಪ್ರಕಾರ ಈ ‘ತಬಾಹಿ’ ವಿಡಿಯೋ ಸಾಂಗ್ ಸಖತ್ ಬೋಲ್ಡ್ ಆಗಿ ಮೂಡಿಬಂದಿದೆಯಂತೆ. ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಹಾಡಿನ ಮೇಕಿಂಗ್ ಮತ್ತು ದೃಶ್ಯಗಳು ಅತ್ಯಂತ ಶ್ರೀಮಂತವಾಗಿ ಮತ್ತು ಬೋಲ್ಡ್ ಆಗಿ ಮೂಡಿಬಂದಿವೆ ಎನ್ನಲಾಗಿದೆ. ಲಿರಿಕಲ್ ವಿಡಿಯೋ ನೋಡಿದಾಗಲೇ ಥ್ರಿಲ್ಲಾಗಿದ್ದ ಅಭಿಮಾನಿಗಳಿಗೆ, ಈಗ ಬರಲಿರುವ ಒರಿಜಿನಲ್ ವಿಡಿಯೋ ಸಾಂಗ್ ಕಣ್ಣಿಗೆ ಹಬ್ಬವನ್ನು ಉಣಿಸುವುದು ಗ್ಯಾರಂಟಿ ಎನ್ನಲಾಗಿದೆ.

ಇದೇ ವಾರಾಂತ್ಯದೊಳಗೆ ಈ ಹಾಡು ಅಧಿಕೃತವಾಗಿ ಯೂಟ್ಯೂಬ್‌ನಲ್ಲಿ ಲಾಂಚ್ ಆಗುವ ಸಾಧ್ಯತೆ ದಟ್ಟವಾಗಿದೆ. ಆಗಸ್ಟ್ 26ರಂದು ಬೆಳ್ಳಿಪರದೆಗೆ ಅಪ್ಪಳಿಸಲಿರುವ ಯಶ್ ಅವರ ‘ಟಾಕ್ಸಿಕ್’ ಚಿತ್ರದ ಮೇಲೆ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಭಾರಿ ನಿರೀಕ್ಷೆಗಳು ಮೂಡಿದ್ದು, ಈ ಬೋಲ್ಡ್ ವಿಡಿಯೋ ಸಾಂಗ್ ಸಿನಿಮಾದ ಹೈಪ್ ಅನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಕಿಯಾರಾ ಜೊತೆ ರುಕ್ಮಿಣಿ ವಸಂತ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version