ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ದವಸ ಧಾನ್ಯಗಳು ಸೇರಿ ಗೃಹೋಪಯೋಗಿ ವಸ್ತುಗಳು ಜಲಾಹುತಿ

ಚಾಮರಾಜನಗರ, ಮೇ 31: ಜಿಲ್ಲೆಯ ಹಲವೆಡೆ ಮಳೆ ಆರ್ಭಟ ಮುಂದುವರಿದಿದ್ದು, ವರುಣನ ಅವಾಂತರಕ್ಕೆ ಪೊನ್ನಾಚಿ ಗ್ರಾಮದಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ ಘಟನೆ ನಡೆದಿದೆ. ಮನೆಗಳ ಪಕ್ಕದ ಕಾಲುವೆಯಿಂದ ನದಿಯಂತೆ ಮಳೆ ನೀರು ಹರಿದು ಬಂದ ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯಗಳು ಸೇರಿ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಪೊನ್ನಾಚಿ ಗ್ರಾಮದ ಶಂಕರ, ಶಿವಮ್ಮ ಎಂಬುವರ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದವರು ಕಂಗಾಲಾಗಿದ್ದಾರೆ. ಕಾಲುವೆ ಸ್ವಚ್ಛಗೊಳಿಸದ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Air Quality: ಬೆಂಗಳೂರಿಗರಿಗೆ ಗುಡ್ ನ್ಯೂಸ್: ಇಂದು ರಾಜಧಾನಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಉತ್ತಮ!

ಇಂದು ರಾಜಧಾನಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಉತ್ತಮ!

ಬೆಂಗಳೂರು, ಮೇ 31: ಇಂದು ಕರ್ನಾಟಕದಾದ್ಯಂತ ವಾಯು ಗುಣಮಟ್ಟವು (Air Quality) ಬಹುತೇಕ ನಗರಗಳಲ್ಲಿ ತೃಪ್ತಿದಾಯಕ ಮತ್ತು ಉತ್ತಮ ಮಟ್ಟದಲ್ಲಿದೆ. ಇತ್ತೀಚೆಗೆ ರಾಜ್ಯದ ವಿವಿಧೆಡೆ ಸುರಿದ ಮುಂಗಾರು ಪೂರ್ವ ಮಳೆ ಹಾಗೂ ಬಲವಾದ ಬಿರುಗಾಳಿಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ಕಡಿಮೆಯಾಗಿದ್ದು, ಗಾಳಿಯ ಶುದ್ಧತೆ ಹೆಚ್ಚಾಗಿದೆ.

ಮುಖ್ಯಾಂಶಗಳು

  • ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಉತ್ತಮ ಮಟ್ಟದಲ್ಲಿ ದಾಖಲಾಗಿದೆ.
  • ಸಿಲಿಕಾನ್ ಸಿಟಿಯಲ್ಲಿ ಇಂದು ಸರಾಸರಿ AQI 34 ರಿಂದ 60ರಷ್ಟಿದೆ.
  • ಮೈಸೂರು ಮತ್ತು ಮಂಗಳೂರು ಸೇರಿದಂತೆ ರಾಜ್ಯದಾದ್ಯಂತ ಶುದ್ಧ ಗಾಳಿ ಮುಂದುವರಿದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 34 ರಿಂದ 60 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಉತ್ತಮ (Good) ಹಾಗೂ ಸಾಧಾರಣ (Moderate) ಶ್ರೇಣಿಗೆ ಸೇರುತ್ತದೆ. ವಾತಾವರಣದಲ್ಲಿ ಪ್ರಮುಖ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಮಟ್ಟಗಳು ನಿಯಂತ್ರಣದಲ್ಲಿವೆ. ಓಜೋನ್ (O3) ಮತ್ತು ಕಾರ್ಬನ್ ಮಾನಾಕ್ಸೈಡ್ (CO) ಪ್ರಮಾಣವೂ ಸಹ ಸುರಕ್ಷಿತ ಮಿತಿಯಲ್ಲೇ ಇರುವುದರಿಂದ ಬೆಂಗಳೂರಿಗರು ಯಾವುದೇ ಆರೋಗ್ಯದ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ರಾಜ್ಯದ ಪ್ರಮುಖ ನಗರಗಳ AQI ವಿವರ

ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ಇಂದಿನ ವಾಯು ಗುಣಮಟ್ಟವು ಉತ್ತಮವಾಗಿಯೇ ಮುಂದುವರಿದಿದೆ. ಕೈಗಾರಿಕಾ ಪ್ರದೇಶಗಳು ಮತ್ತು ಹೆಚ್ಚು ವಾಹನ ದಟ್ಟಣೆ ಇರುವ ನಗರಗಳಲ್ಲೂ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ.

  • ಬೆಂಗಳೂರು: 34 – 60 (ಉತ್ತಮ/ಸಾಧಾರಣ – ಪ್ರದೇಶಗಳಿಗೆ ಅನುಗುಣವಾಗಿ ಮಾರ್ಪಾಡಾಗಿದೆ)
  • ಮೈಸೂರು: 28 (ಉತ್ತಮ – ಸಾಂಸ್ಕೃತಿಕ ನಗರಿಯ ಗಾಳಿ ಅತ್ಯಂತ ಶುದ್ಧವಾಗಿದೆ)
  • ಮಂಗಳೂರು ಹಾಗೂ ಉಡುಪಿ: 32 (ಉತ್ತಮ – ಕರಾವಳಿ ಭಾಗದಲ್ಲಿ ಮಳೆಯಿಂದಾಗಿ ಶುದ್ಧ ಗಾಳಿ ಇದೆ)
  • ಬೆಳಗಾವಿ ಮತ್ತು ಧಾರವಾಡ: 42 (ಉತ್ತಮ – ಉತ್ತರ ಒಳನಾಡಿನ ಈ ಭಾಗಗಳಲ್ಲಿ ಹವಾಮಾನ ಆಹ್ಲಾದಕರವಾಗಿದೆ)
  • ಕಲಬುರಗಿ ಮತ್ತು ಬಳ್ಳಾರಿ: 55 (ಸಾಧಾರಣ – ಇಲ್ಲಿನ ಶುಷ್ಕ ಹವಾಮಾನದ ನಡುವೆಯೂ ಮಾಲಿನ್ಯ ನಿಯಂತ್ರಣದಲ್ಲಿದೆ)

AQI ಪ್ರಮಾಣವು 0-50 ರಷ್ಟಿದ್ದರೆ ಅದನ್ನು ‘ಉತ್ತಮ’ ಎಂದು, 51-100 ರಷ್ಟಿದ್ದರೆ ‘ಸಾಧಾರಣ’ ಎಂದು ಪರಿಗಣಿಸಲಾಗುತ್ತದೆ. ಸದ್ಯ ಕರ್ನಾಟಕದ ಬಹುತೇಕ ನಗರಗಳು ಇದೇ ಸುರಕ್ಷಿತ ವಲಯದಲ್ಲಿವೆ. ಉಸಿರಾಟದ ತೊಂದರೆ ಇರುವವರು ಮತ್ತು ಮಕ್ಕಳು ಯಾವುದೇ ಆತಂಕವಿಲ್ಲದೆ ನಿಶ್ಚಿಂತೆಯಿಂದ ಇರಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೆಟ್ರೋ ಪ್ರಯಾಣಿಕರೇ ಗಮನಿಸಿ: ನೇರಳೆ ಮಾರ್ಗ ಸಂಬಂಧ ಮಹತ್ವದ ಮಾಹಿತಿ ಹಂಚಿಕೊಂಡ BMRCL

ಬೆಂಗಳೂರು, ಮೇ 31: ನಿರ್ವಹಣಾ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳು ಇಂದು (ಮೇ 31) ಬೆಳಿಗ್ಗೆ 7 ಗಂಟೆಯಿಂದಲೇ ಸಂಪೂರ್ಣವಾಗಿ ಲಭ್ಯವಿರುತ್ತವೆ. ಹೀಗಾಗಿ ಪ್ರಯಾಣಿಕರು ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್​​ಸಿಎಲ್​​ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನೇರಳೆ ಮಾರ್ಗದ ಕೆಲ ನಿಲ್ದಾಣಗಳ ನಡುವೆ ಇಂದು ಸಂಚಾರ ವ್ಯತ್ಯಯದ ಬಗ್ಗೆ ಈ ಹಿಂದೆಯೇ BMRCL ಮಾಹಿತಿ ನೀಡಿತ್ತು.

BMRCL ಪ್ರಕಟಣೆಯಲ್ಲಿ ಏನಿದೆ?

ನೇರಳೆ ಮಾರ್ಗದಲ್ಲಿರುವ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಭಾಗದಲ್ಲಿ ಅತ್ಯಗತ್ಯ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವ ಉದ್ದೇಶದಿಂದ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಮೇ 31ರಂದು ಬದಲಾವಣೆ ಮಾಡಲಾಗಿದೆ. ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್ ಮೆಜೆಸ್ಟಿಕ್) ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 7 ಗಂಟೆಯಿಂದ 9ರ ವರೆಗೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಬೆಳಿಗ್ಗೆ 9 ಗಂಟೆಯ ನಂತರ ಇಡೀ ನೇರಳೆ ಮಾರ್ಗದಲ್ಲಿ ಎಂದಿನಂತೆ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಮೇ 29ರಂದು ಪ್ರಕಟಣೆ ಮೂಲಕ ಬಿಎಂಆರ್​​ಸಿಎಲ್​​ ತಿಳಿಸಿತ್ತು. ಆದರೆ ನಿರ್ವಹಣಾ ಕಾಮಗಾರಿಗಳು ನಿಗದಿತ ಸಮಯಕ್ಕೂ ಮೊದಲೇ ಮುಗಿದಿರುವ ಕಾರಣ ಬೆಳಿಗ್ಗೆ 9 ಗಂಟೆಯ ಬದಲು 7 ಗಂಟೆಯಿಂದಲೇ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ.

ಇದನ್ನೂ ಓದಿ: ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ; BMRCL ವಿರುದ್ಧ ಪ್ರಯಾಣಿಕರ ಆಕ್ರೋಶ

ವಾರಾಂತ್ಯ ಪ್ರಯಾಣಿಕರು ನಿರಾಳ

ರಜೆಯ ದಿನವಾದ ಭಾನುವಾರವೇ ಮೆಟ್ರೋ ಸೇವೆಯಲ್ಲಿ ವ್ಯತ್ಯಯದ ಬಗ್ಗೆ ಈ ಹಿಂದೆ ಬಿಎಂಆರ್​​ಸಿಎಲ್​​ ತಿಳಿಸಿದ್ದ ಕಾರಣ ಪ್ರಯಾಣಿಕರು ಕೊಂಚ ನಿರಾಸೆಗೊಂಡಿದ್ದರು. ಆದರೆ ಅವರಿಗೀಗ ಬಿಎಂಆರ್​​ಸಿಎಲ್​​ ನೀಡಿರುವ ಸುದ್ದಿ ನಿರಾಳರಾಗುವಂತೆ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:54 am, Sun, 31 May 26

Source link

RCB vs GT: ಯಾರೇ ಗೆದ್ದರೂ 2ನೇ ಬಾರಿ ಚಾಂಪಿಯನ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾರೇ ಗೆದ್ದರೂ 2ನೇ ಬಾರಿ ಚಾಂಪಿಯನ್ ಆಗಲಿದೆ.

  • ಗುಜರಾತ್ ಟೈಟಾನ್ಸ್ ತಂಡವು 2022 ರಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025 ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತ್ತು.

ಇದೀಗ ಒಂದು ಬಾರಿ ಟ್ರೋಫಿ ಗೆದ್ದಿರುವ ಎರಡು ತಂಡಗಳು ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಯಾರೇ ಗೆದ್ದರೂ ಎರಡು ಬಾರಿ ಟ್ರೋಫಿ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇನ್ನು ಫೈನಲ್ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…

ಫೈನಲ್ ಪಂದ್ಯ ಯಾವಾಗ?

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್​ ಫೈನಲ್ ಪಂದ್ಯವು ಮೇ 31  ರಂದು, ಅಂದರೆ ಇಂದು ನಡೆಯಲಿದೆ.

ಫೈನಲ್ ಮ್ಯಾಚ್ ನಡೆಯುವುದು ಎಲ್ಲಿ?

  • ಈ ಬಾರಿಯ ಫೈನಲ್ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ. ಅಂದರೆ ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನದಲ್ಲಿಅಂತಿಮ ಪಂದ್ಯ ನಡೆಯುತ್ತಿರುವುದು ವಿಶೇಷ.

ಎಷ್ಟು ಗಂಟೆಗೆ ಮ್ಯಾಚ್ ಶುರು?

  • ಫೈನಲ್ ಪಂದ್ಯವು ರಾತ್ರಿ 7.30 ರಿಂದ ಶುರುವಾಗಲಿದೆ. ಹಾಗೆಯೇ ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ.

ಉಭಯ ತಂಡಗಳು ಈ ಕೆಳಗಿನಂತಿದೆ:

ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಇದನ್ನೂ ಓದಿ: 20 ಓವರ್ ಆಡಿಯೂ ಸೋತ ಟೀಮ್ ಇಂಡಿಯಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್.

Published On – 7:48 am, Sun, 31 May 26

Source link

Karnataka Weather Forecast: ಬೆಂಗಳೂರಿನಲ್ಲಿಂದು ಭಾರೀ ಮಳೆ! 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮೇ 31: ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ರಾಜ್ಯದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (Weather) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ.

ಮುಖ್ಯಾಂಶಗಳು

  • ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಭಾರಿ ಮಳೆಯ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
  • ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 40-50 ಕಿಮೀ ವೇಗದ ಬಿರುಗಾಳಿ ಸಹಿತ ಮಳೆಯಾಗಲಿದೆ.
  • ಕರಾವಳಿ ಮತ್ತು ಉತ್ತರ ಒಳನಾಡಿನ ಹಲವೆಡೆ ಗುಡುಗು ಸಹಿತ ಹಗುರ ಮ ಮುನ್ಸೂಚನೆ.

ಭಾರಿ ಮಳೆಯ ಮುನ್ನೆಚ್ಚರಿಕೆ

ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಿರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಗುಡುಗು ಸಹಿತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ. ಇದರೊಂದಿಗೆ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಬಳ್ಳಾರಿ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಗಾಳಿ ಸಹಿತ ಸಾಧಾರಣ ಜಿಟಿಜಿಟಿ ಮಳೆಯಾಗಬಹುದು.

ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳ ಸ್ಥಿತಿ

ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಗುರವಾದ ಮಳೆಯಾಗಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಹಾವೇರಿ, ಗದಗ, ಕೊಪ್ಪಳ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆ ಇದೆ. ಆದರೆ, ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾರ್ವಜನಿಕರಿಗೆ ಸೂಚನೆ

ಬಿರುಗಾಳಿ ಮತ್ತು ಗುಡುಗು ಮುನ್ಸೂಚನೆ ಇರುವುದರಿಂದ ಮರದ ಕೆಳಗೆ ಅಥವಾ ದುರ್ಬಲ ಕಟ್ಟಡಗಳ ಬಳಿ ಆಶ್ರಯ ಪಡೆಯಬೇಡಿ. ವಾಹನ ಸವಾರರು ಜಾಗರೂಕರಾಗಿರಲು ಹವಾಮಾನ ಇಲಾಖೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನ ಬಹುತೇಕ ಕೆರೆಗಳ ನೀರಲ್ಲಿ ಯುರೇನಿಯಂ ಪತ್ತೆ: ಆತಂಕಕಾರಿ ಸತ್ಯ ಬಿಚ್ಚಿಟ್ಟ ಐಐಎಸ್ಸಿ ವರದಿ

ಬೆಂಗಳೂರು, ಮೇ 31: ನಗರದ ಬಹುತೇಕ ಕೆರೆಗಳಲ್ಲಿ ಇತ್ತೀಚೆಗೆ ಸಾವಿರಾರು ಮೀನುಗಳು ನಿಗೂಢವಾಗಿ ಮೃತಪಟ್ಟಿದ್ದವು. ಈ ಹಿನ್ನೆಲೆ ಐಐಎಸ್ಸಿ ತಜ್ಞರು ಕೆರೆಗಳ ನೀರನ್ನು ಪರೀಕ್ಷೆ ಮಾಡಿದ್ದು, ಆಘಾತಕಾರಿ ಸತ್ಯವೊಂದನ್ನು ಬಯಲು ಮಾಡಿದ್ದಾರೆ.  ಬೆಂಗಳೂರಿನ (Bengaluru) ಅಂತರ್ಜಲ ಕಲುಷಿತಗೊಂಡಿರುವ ಬಗ್ಗೆ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ನಗರದ ಬಹುತೇಕ ಕೆರೆಗಳ ನೀರಲ್ಲಿ ಯುರೇನಿಯಂ ಪತ್ತೆಯಾಗಿದೆಯಂತೆ. ಈ ಕೆರಗಳ ನೀರು ಇತರ ಜಲ ಮೂಲಗಳಿಗೂ ಸೇರುತ್ತಿರುವ ಕಾರಣ ಜನರು ಕುಡಿಯುತ್ತಿರೋದು ನೀರಲ್ಲ ವಿಷ ಎಂಬುದೀಗ ಬಹಿರಂಗಗೊಂಡಿದೆ.

ಮುಖ್ಯಾಂಶಗಳು

  • ತೀವ್ರ ಕಲುಷಿತಗೊಂಡಿರುವ ಬೆಂಗಳೂರು ನಗರದ ಅಂತರ್ಜಲ
  • ನಗರದ ಬಹುತೇಕ ಕೆರೆಗಳ ನೀರಲ್ಲಿ ವಿಷಕಾರಿ ಅಂಶ ಪತ್ತೆ
  • ಐಐಎಸ್ಸಿ ತಜ್ಞರ ವರದಿಯಲ್ಲಿ ಶಾಕಿಂಗ್​​ ವಿಚಾರ ಬಹಿರಂಗ

ಯಾವೆಲ್ಲ ಕೆರೆಗಳ ನೀರು ಪರೀಕ್ಷೆ?

ನಗರದ ಸಾಕಷ್ಟು ಕೆರೆಗಳಲ್ಲಿ ನೀರು ಬಹಳ ಕಲುಷಿತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆ ಜಕ್ಕೂರು, ಯಲಹಂಕ, ಲಕ್ಷ್ಮೀಪುರ, ರಾಮಸಂದ್ರ, ಹೆಸರಘಟ್ಟ, ಹಲಸೂರು, ಮಡಿವಾಳ, ವರ್ತೂರು, ಘಟ್ಟಹಳ್ಳಿ ಕೆರೆಯ ನೀರನ್ನು ಐಐಎಸ್ಸಿ ತಜ್ಞರು ಪರೀಕ್ಷಿಸಿದ್ದರು. ಈ ವರದಿಯಲ್ಲಿ ನಗರದ ಕೆರೆಗಳ ನೀರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದು, ಹೆವಿ ಮೆಟಲ್‌ ಯುರೇನಿಯಂ ನೀರಲ್ಲಿ ಸೇರಿಕೊಂಡಿವೆ ಎಂಬುದು ದೃಢವಾಗಿದೆಯಂತೆ.

ಇದನ್ನೂ ಓದಿ: ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ; ಅಲೋಕ್ ಕುಮಾರ್ ಎಂಟ್ರಿ ಬೆನ್ನಲ್ಲೇ ಎಫ್‌ಐಆರ್

ನೀರು ಮಲಿನಗೊಳ್ಳಲು ಕಾರಣ ಏನು?

ಕೊಳಚೆ ನೀರರನ್ನು ಸಂಸ್ಕರಣೆ ಮಾಡದೆ ನೇರವಾಗಿ ಕೆರೆಗಳಿಗೆ ಬಿಡುತ್ತಿರುವುದೇ ವಿಷಕಾರಿ ಅಂಶಗಳ ಪತ್ತೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಹೀಗಾಗಿ ಕೆರೆಗಳ ನೀರಲ್ಲಿದ್ದ ಸಾವಿರಾರು ಮೀನುಗಳು ಪ್ರಾಣ ಕಳೆದುಕೊಂಡಿವೆ. ಇನ್ನು ತಜ್ಞರು ನೀರಿನ ಪರೀಕ್ಷೆ ನಡೆಸಿರುವ ಕೆರೆಗಳ ಪೈಕಿ ವರ್ತೂರು ಕೆರೆ ಅತಿಹೆಚ್ಚು ಕಲುಷಿತಗೊಂಡಿದೆಯಂತೆ. ಕೆರೆಗಳ ನೀರು ಮಲಿನಗೊಂಡ ಪರಿಣಾಮ ಇವುಗಳ ಅಕ್ಕಪಕ್ಕದ ಬೋರ್ವೆಲ್​​ಗಳ ನೀರಲ್ಲಿಯೂ ವಿಷಕಾರಿ ಅಂಶಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ. ಈ ನೀರು ಬಳಕೆ ಮಾಡುವುದರಿಂದ ಅನಾರೋಗ್ಯದ ಸಮಸ್ಯೆ ಎದುರಾಗುವ ಸಾಧ್ಯತೆ ಬಗ್ಗೆಯೂ ಎಚ್ಚರಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

20 ಓವರ್ ಆಡಿಯೂ ಸೋತ ಟೀಮ್ ಇಂಡಿಯಾ

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸೋಲನುಭವಿಸಿದೆ. ಬ್ರಿಸ್ಟಲ್​ನ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ಷಾರ್ಲೆಟ್ ಡೀನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 165 ರನ್​​ ಕಲೆಹಾಕಿತು.

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಸ್ಮೃತಿ ಮಂಧಾನ (33) ಹಾಗೂ ಶಫಾಲಿ ವರ್ಮಾ (22) ಉತ್ತಮ ಆರಂಭ ಒದಗಿಸಿದ್ದರು. ಇದಾದ ಬಳಿಕ ಬಂದ ಯಾಸ್ತಿಕಾ ಭಾಟಿಯಾ 33 ರನ್​​ಗಳ ಕೊಡುಗೆ ನೀಡಿದರು. ಇನ್ನು ನಾಯಕಿ ಹರ್ಮನ್​ಪ್ರೀತ್ ಕೌರ್ 28 ರನ್​ ಬಾರಿಸಿದ್ದರು.

ಈ ನಾಲ್ವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಟೀಮ್ ಇಂಡಿಯಾ ದಿಢೀರ್ ಕುಸಿತಕ್ಕೊಳಗಾಯಿತು. ಇದರ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್ ಬೌಲರ್​ಗಳು ರನ್ ಗತಿಯನ್ನು ನಿಯಂತ್ರಿಸಿದರು. ಪರಿಣಾಮ ಟೀಮ್ ಇಂಡಿಯಾ 20 ಓವರ್​ಗಳನ್ನು ಆಡಿದರೂ 9 ವಿಕೆಟ್ ಕಳೆದುಕೊಂಡು 142 ರನ್​ಗಳಿಸಲಷ್ಟೇ ಶಕ್ತರಾದರು.

ಈ ಮೂಲಕ ಇಂಗ್ಲೆಂಡ್ ತಂಡವು 26 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯು 1-1 ಅಂತರದಿಂದ ಸಮಗೊಂಡಿದ್ದು, ಮೂರನೇ ಟಿ20 ಪಂದ್ಯವು ಸರಣಿ ನಿರ್ಣಾಯಕವಾಗಿ ಮಾರ್ಪಟ್ಟಿದೆ.

 

Source link

ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಅತಿಯಾಗಿ ಆಡಿದ್ದ ರಶ್ಮಿಕಾಗೆ ತಿರುಗೇಟು ಕೊಟ್ಟ ಶಾಹಿದ್ ಕಪೂರ್

ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor), ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಅಭಿನಯದ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ (Cocktail 2) ಸಿನಿಮಾ ಜೂನ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಸಿನಿಮಾ ತೆರೆಗೆ ಬರುವ ಮುನ್ನವೇ ಚಿತ್ರದ ಪ್ರಚಾರದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಟ್ಟಿಗೆ ನಿಂತು ಫೋಟೋಗೆ ಪೋಸ್ ನೀಡುವಾಗ ಶಾಹಿದ್ ಕಪೂರ್ ಅವರು ರಶ್ಮಿಕಾ ಮಂದಣ್ಣ (Rashmika Mandanna) ಅವರ ಹೆಗಲ ಮೇಲೆ ಕೈ ಹಾಕಿದ್ದಕ್ಕೆ ದೊಡ್ಡ ಸೀನ್ ಕ್ರಿಯೇಟ್ ಆಗಿತ್ತು. ಹಾವು ಬಿಟ್ಟವರಂತೆ ವರ್ತಿಸಿದ್ದ ರಶ್ಮಿಕಾಗೆ ಈಗ ಶಾಹಿದ್ ಕಪೂರ್ ತಿರುಗೇಟು ನೀಡಿದ್ದಾರೆ.

ಘಟನೆ ವಿವರ: ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಕಾಕ್‌ಟೇಲ್ 2’ ಚಿತ್ರದ ಮ್ಯೂಸಿಕ್ ಲಾಂಚ್ ಸಮಾರಂಭದಲ್ಲಿ, ಪಾಪರಾಜಿಗಳಿಗೆ ಫೋಟೋ ನೀಡುವಾಗ ಶಾಹಿದ್ ಕಪೂರ್ ಅವರು ರಶ್ಮಿಕಾ ಹೆಗಲ ಮೇಲೆ ಕೈ ಹಾಕಲು ಹೋಗಿದ್ದರು. ಈ ವೇಳೆ ರಶ್ಮಿಕಾ ತಕ್ಷಣವೇ ಒಂದು ಹೆಜ್ಜೆ ಹಿಂದೆ ಸರಿದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಯಿತು. ‘ಶಾಹಿದ್ ವರ್ತನೆಯಿಂದ ರಶ್ಮಿಕಾ ಅಸಹಜವಾಗಿ ಫೀಲ್ ಮಾಡಿದ್ರು’ ಎಂದು ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭಿಸಿದ್ದರು. ಆದರೆ ಈ ಬಗ್ಗೆ ಶಾಹಿದ್ ಕಪೂರ್ ಆಗಲಿ, ರಶ್ಮಿಕಾ ಅವರಾಗಲಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ, ಶುಕ್ರವಾರ (ಮೇ 29) ನಡೆದ ಸಿನಿಮಾದ ಮತ್ತೊಂದು ಪ್ರಚಾರದ ಈವೆಂಟ್‌ನಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಂಡರು. ಈ ವೇಳೆ ಶಾಹಿದ್ ಕಪೂರ್ ಹಳೇ ವಿವಾದವನ್ನು ನೆನೆದು ವೇದಿಕೆಯಲ್ಲೇ ತಮಾಷೆ ಮಾಡಿದ್ದಾರೆ. ಫೋಟೋಗೆ ಫೋಸ್ ನೀಡುವಾಗ ರಶ್ಮಿಕಾ ಮಂದಣ್ಣ ಹಿಂದೆ ಸರಿದಿದ್ದ ರೀತಿಯನ್ನೇ ಶಾಹಿದ್ ತಮಾಷೆಯಾಗಿ ಅಣಕಿಸಿದ್ದಾರೆ.

ಶಾಹಿದ್ ಕಪೂರ್ ವೈರಲ್ ವಿಡಿಯೋ:

ಶಾಹಿದ್ ಅವರ ಈ ತಮಾಷೆ ನೋಡಿ ಪಕ್ಕದಲ್ಲೇ ಇದ್ದ ಕೃತಿ ಸನೋನ್ ಜೋರಾಗಿ ನಗಲು ಪ್ರಾರಂಭಿಸಿದರು. ರಶ್ಮಿಕಾ ಮಂದಣ್ಣ ಕೂಡ ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಮುಗುಳ್ನಕ್ಕಿದ್ದಾರೆ. ಅಷ್ಟೇ ಅಲ್ಲದೆ, ‘ನಾನು ಆ ಉದ್ದೇಶದಿಂದ ಹಾಗೆ ಮಾಡಿರಲಿಲ್ಲ’ ಎಂದು ರಶ್ಮಿಕಾ ನಗುತ್ತಲೇ ಶಾಹಿದ್‌ಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಇಬ್ಬರ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂಬುದು ಜಗಜ್ಜಾಹೀರಾಗಿದೆ.

ಇದನ್ನೂ ಓದಿ: ವೇದಿಕೆ ಮೇಲೆ F ಪದ ಬಳಕೆ ಮಾಡಿದ ರಶ್ಮಿಕಾ ಮಂದಣ್ಣ; ವೇದಿಕೆಯಲ್ಲೇ ಕ್ಷಮೆ ಕೇಳಿದ ನ್ಯಾಷನಲ್ ಕ್ರಶ್

ಪ್ರಚಾರದ ಈವೆಂಟ್‌ನ ಈ ಹೊಸ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಇಬ್ಬರ ನಡುವಿನ ಉತ್ತಮ ಬಾಂಧವ್ಯಕ್ಕೆ ಇದು ಸಾಕ್ಷಿಯಾಗಿದೆ. ಸೋಶಿಯಲ್ ಮೀಡಿಯಾ ವದಂತಿಗಳಿಗೆ ಈ ಜೋಡಿ ನಗುತ್ತಲೇ ಫುಲ್ ಸ್ಟಾಪ್ ಇಟ್ಟಿದೆ. ಅಂದಹಾಗೆ, ‘ಕಾಕ್‌ಟೇಲ್ 2’ ಚಿತ್ರವನ್ನು ಹೋಮಿ ಅದಾಜಾನಿಯಾ ನಿರ್ದೇಶಿಸಿದ್ದಾರೆ. ಇದು 2012ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟನೆಯ ‘ಕಾಕ್‌ಟೇಲ್’ ಚಿತ್ರದ ಸೀಕ್ವೆಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL Final 2026: ಬೆಂಗಳೂರಲ್ಲಿ ಸಂಭ್ರಮಾಚರಣೆಗೆ ಬ್ರೇಕ್​​, ಅಭಿಮಾನಿಗಳಿಗೆ ಪೊಲೀಸರಿಂದ ಖಡಕ್​​ ಎಚ್ಚರಿಕೆ

ಅಭಿಮಾನಿಗಳಿಗೆ ಬೆಂಗಳೂರು ಪೊಲೀಸರಿಂದ ಖಡಕ್​​ ಎಚ್ಚರಿಕೆ

ಬೆಂಗಳೂರು, ಮೇ 31: ಕಳೆದ ವರ್ಷ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ತಂಡ ಐಪಿಎಲ್​ ಟ್ರೋಫಿ ಗೆದ್ದ ಬಳಿಕ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ ದುರಂತ ನಡೆದು 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಆ ಬಳಿಕ ಬೆಂಗಳೂರಿನಲ್ಲಿ ನಡೆದ ಪ್ರತಿಯೊಂದು ಐಪಿಎಲ್​​ ಪಂದ್ಯಕ್ಕೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಈ ನಡುವೆ ಇಂದು (ಮೇ 31) ಬೆಂಗಳೂರು ‌ಮತ್ತು ಗುಜರಾತ್ ತಂಡಗಳ ನಡುವೆ ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದರೂ ಫಲಿತಾಂಶದ ಬಳಿಕ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಲರ್ಟ್​​ ಆಗಿದ್ದಾರೆ. ಅಭಿಮಾನಿಗಳಿಗೆ ಖಡಕ್​​ ಎಚ್ಚರಿಕೆ ನೀಡಿ ಮಾರ್ಗಸೂಚಿ ರಿಲೀಸ್​​ ಮಾಡಿದ್ದಾರೆ.

ಪೊಲೀಸರ ಮಾರ್ಗಸೂಚಿಯಲ್ಲಿ ಏನಿದೆ?

  • ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ
  • ಅನುಮತಿ ಇಲ್ಲದೆ ರಸ್ತೆಗಳಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸುವಂತಿಲ್ಲ
  • ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳನ್ನು ಬಳಸಬಾರದು
  • ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಶಾಂತಿ, ಶಿಸ್ತು ಪಾಲಿಸಬೇಕು
  • ಸಂಚಾರ ವಿಭಾಗದ ಪೊಲೀಸರು ನೀಡುವ ಸಲಹೆ ಸೂಚನೆ ಪಾಲಿಸಬೇಕು
  • ಬೈಕ್ ರ್ಯಾಲಿ, ಅತಿವೇಗದ ಚಾಲನೆ, ಸ್ಟಂಟ್, ಹಾರ್ನ್ ಮಾಡುವಂತಿಲ್ಲ
  • ರಸ್ತೆ ತಡೆದು ಸಂಭ್ರಮಾಚರಣೆ ಮಾಡುವಂತಿಲ್ಲವೆಂದು ಪೊಲೀಸರ ಸೂಚನೆ
  • ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸಬಾರದು
  • ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಟಿಸುವ ಪೋಸ್ಟ್ ಹಾಕುವಂತಿಲ್ಲ
  • ಸಾಮಾಜಿಕ ಜಾಲತಾಣದಲ್ಲಿ ದ್ವೇಷಪೂರಿತ ಪೋಸ್ಟ್ ಹಂಚಿಕೊಳ್ಳಬಾರದು
  • ಫಲಿತಾಂಶದ ಹೆಸರಿನಲ್ಲಿ ಬೇರೆ ತಂಡದ ಅಭಿಮಾನಿಗಳನ್ನು ನಿಂದಿಸಬಾರದು

ಇದನ್ನೂ ಓದಿ: ಫೈನಲ್ ಪ್ಲೇಯಿಂಗ್ ಇಲೆವೆನ್; RCB ಮುಂದಿದೆ 2 ಆಯ್ಕೆ

IPL ಫೈನಲ್ ಹಿನ್ನೆಲೆ ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ಪೊಲೀಸರು ಈ ಸೂಚನೆಗಳನ್ನು ಪಾಲಿಸುವಂತೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕ್ರೀಡೆಯನ್ನ ಕ್ರೀಡೆಯಾಗಿ ಸ್ವೀಕರಿಸಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಸೂಚಿಸಲಾಗಿದ್ದು, ಇದನ್ನು ಮೀರಿ ಹುಚ್ಚಾಟ ನಡೆಸಿದರೆ ಕಾನೂನು ಕ್ರಮ ಫಿಕ್ಸ್​​ ಎಂಬ ಎಚ್ಚರಿಕೆಯನ್ನೂ ನಗರ ಪೊಲೀಸ್​​ ಆಯುಕ್ತ ಸೀಂಮತ್ ಕುಮಾರ್‌ ಸಿಂಗ್ ನೀಡಿದ್ದಾರೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:53 am, Sun, 31 May 26

Source link

Daily Devotional: ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಾಯುವ ಮುನ್ನ ಕೊನೇ ಗಳಿಗೆಯಲ್ಲಿಗಂಗಾಜಲವನ್ನ ಬಿಡುವುದು ಯಾಕೆ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಅಂತಿಮ ಘಟ್ಟದಲ್ಲಿದ್ದಾಗ, ದೇಹಕ್ಕೆ ತುಳಸಿ ಮತ್ತು ಗಂಗಾಜಲವನ್ನು ಅರ್ಪಿಸುವ ಪ್ರಾಚೀನ ಪದ್ಧತಿಯಿದೆ. ಈ ಸಂಪ್ರದಾಯವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ತುಳಸಿಯನ್ನು ವಿಷ್ಣುಪ್ರಿಯೆ ಎಂದು ಪರಿಗಣಿಸಲಾಗುತ್ತದೆ, ಇದು ಪವಿತ್ರತೆ ಮತ್ತು ವಿಷ್ಣುವಿನ ಪ್ರೀತಿಯ ಸಂಕೇತವಾಗಿದೆ. ಗಂಗಾಜಲವನ್ನು ಪಾಪನಾಶಕ ಮತ್ತು ಕರ್ಮನಾಶಕ ಎಂದು ನಂಬಲಾಗುತ್ತದೆ.

ದೇಹವು ಅಸಹನೀಯ ನೋವಿನಿಂದ ಬಳಲುತ್ತಿರುವಾಗ, ಪ್ರಜ್ಞಾರಹಿತವಾಗಿದ್ದಾಗ ಅಥವಾ ದೇಹಕ್ಕೆ ಯಾವುದೇ ಆಹಾರ ಸೇರದಿದ್ದಾಗ, ಗಂಗಾಜಲವನ್ನು ಮೂರು ಬಾರಿ ಅರ್ಪಿಸಿ ತುಳಸಿಯನ್ನು ನೀಡಲಾಗುತ್ತದೆ. ಈ ಕ್ರಿಯೆಯು ದೇಹದಲ್ಲಿ ಅಂಟಿಕೊಂಡಿರುವ ಪಾಪಗಳು ಮತ್ತು ಕರ್ಮಗಳಿಂದ ಆತ್ಮಕ್ಕೆ ಬಿಡುಗಡೆ ನೀಡುತ್ತದೆ ಎಂದು ನಂಬಲಾಗಿದೆ. ಇದು ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡಿ, ಆತ್ಮಕ್ಕೆ ಮೋಕ್ಷವನ್ನು ಪಡೆಯಲು ಮತ್ತು ಮುಂದಿನ ಪ್ರಯಾಣಕ್ಕೆ ಸುಗಮ ಮಾರ್ಗವನ್ನು ಒದಗಿಸುತ್ತದೆ. ಗರುಡ ಪುರಾಣದಲ್ಲಿ ಈ ಆಚರಣೆಯ ಕುರಿತು ಉಲ್ಲೇಖವಿದೆ ಎಂದು ಗುರೂಜಿ ತಿಳಿಸಿದ್ದಾರೆ.

Source link

Exit mobile version