Daily Devotional: ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಾಯುವ ಮುನ್ನ ಕೊನೇ ಗಳಿಗೆಯಲ್ಲಿಗಂಗಾಜಲವನ್ನ ಬಿಡುವುದು ಯಾಕೆ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಅಂತಿಮ ಘಟ್ಟದಲ್ಲಿದ್ದಾಗ, ದೇಹಕ್ಕೆ ತುಳಸಿ ಮತ್ತು ಗಂಗಾಜಲವನ್ನು ಅರ್ಪಿಸುವ ಪ್ರಾಚೀನ ಪದ್ಧತಿಯಿದೆ. ಈ ಸಂಪ್ರದಾಯವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ತುಳಸಿಯನ್ನು ವಿಷ್ಣುಪ್ರಿಯೆ ಎಂದು ಪರಿಗಣಿಸಲಾಗುತ್ತದೆ, ಇದು ಪವಿತ್ರತೆ ಮತ್ತು ವಿಷ್ಣುವಿನ ಪ್ರೀತಿಯ ಸಂಕೇತವಾಗಿದೆ. ಗಂಗಾಜಲವನ್ನು ಪಾಪನಾಶಕ ಮತ್ತು ಕರ್ಮನಾಶಕ ಎಂದು ನಂಬಲಾಗುತ್ತದೆ.

ದೇಹವು ಅಸಹನೀಯ ನೋವಿನಿಂದ ಬಳಲುತ್ತಿರುವಾಗ, ಪ್ರಜ್ಞಾರಹಿತವಾಗಿದ್ದಾಗ ಅಥವಾ ದೇಹಕ್ಕೆ ಯಾವುದೇ ಆಹಾರ ಸೇರದಿದ್ದಾಗ, ಗಂಗಾಜಲವನ್ನು ಮೂರು ಬಾರಿ ಅರ್ಪಿಸಿ ತುಳಸಿಯನ್ನು ನೀಡಲಾಗುತ್ತದೆ. ಈ ಕ್ರಿಯೆಯು ದೇಹದಲ್ಲಿ ಅಂಟಿಕೊಂಡಿರುವ ಪಾಪಗಳು ಮತ್ತು ಕರ್ಮಗಳಿಂದ ಆತ್ಮಕ್ಕೆ ಬಿಡುಗಡೆ ನೀಡುತ್ತದೆ ಎಂದು ನಂಬಲಾಗಿದೆ. ಇದು ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡಿ, ಆತ್ಮಕ್ಕೆ ಮೋಕ್ಷವನ್ನು ಪಡೆಯಲು ಮತ್ತು ಮುಂದಿನ ಪ್ರಯಾಣಕ್ಕೆ ಸುಗಮ ಮಾರ್ಗವನ್ನು ಒದಗಿಸುತ್ತದೆ. ಗರುಡ ಪುರಾಣದಲ್ಲಿ ಈ ಆಚರಣೆಯ ಕುರಿತು ಉಲ್ಲೇಖವಿದೆ ಎಂದು ಗುರೂಜಿ ತಿಳಿಸಿದ್ದಾರೆ.

Source link

Horoscope Today: ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 31, ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನದಂದು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸದ ಗ್ರೀಷ್ಮ ಋತುವಿನಲ್ಲಿ ಬರುವ ಈ ದಿನ ಹುಣ್ಣಿಮೆ ಹಾಗೂ ಅನುರಾಧ ನಕ್ಷತ್ರವನ್ನು ಒಳಗೊಂಡಿದೆ. ಇಂದು ರವಿ ವೃಷಭ ರಾಶಿಯಲ್ಲಿ ಹಾಗೂ ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಈ ದಿನದ ರಾಹುಕಾಲ ಸಂಜೆ 5:04 ರಿಂದ 6:40 ರವರೆಗೆ ಇದ್ದು, ಶುಭಕಾಲ ಬೆಳಗ್ಗೆ 10:41 ರಿಂದ ಮಧ್ಯಾಹ್ನ 12:17 ರವರೆಗೆ ಇದೆ. ಜೇಷ್ಠ ಮಾಸದ ಹುಣ್ಣಿಮೆಯ ಈ ದಿನ ದೇವತಾರಾಧನೆ ಮತ್ತು ಪ್ರಾರ್ಥನೆಗೆ ಬಹಳ ಪ್ರಾಶಸ್ತ್ಯವನ್ನು ಹೊಂದಿದೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

Horoscope Today 31 May: ಇಂದು ಈ ರಾಶಿಯವರಿಂದ ಬಾರದ ಸಮಯಕ್ಕೆ ವ್ಯಥೆ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಪರಿಘ, ಕರಣ : ಬವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:12 – 18:48, ಯಮಗಂಡ ಕಾಲ 12:22 – 13:59, ಗುಳಿಕ ಕಾಲ 15:35 – 17:12.

ಮೇಷ ರಾಶಿ: ಏಕಾಗ್ರತೆಗೆ ನಾನಾ ಪ್ರಕಾರದಲ್ಲಿ ಪರೀಕ್ಷೆಗಳು ಆಗಬಹುದು. ನಿಮ್ಮನ್ನು ಹುಡುಕಿಕೊಂಡು ಬಂದವರಿಗೆ ಸ್ವಲ್ಪ ಸಮಯವನ್ನಾದರೂ ಕೊಡಬೇಕಾಗುವುದು. ಹಣಕಾಸು ಪ್ರಗತಿಮಾರ್ಗದಲ್ಲಿದೆ ಆದರೆ ಯೋಚಿಸಿ ವೆಚ್ಚಮಾಡಿ. ಪ್ರೀತಿಯಲ್ಲಿ ನಿಗೂಢತೆಯ ಬದಲಿಗೆ ಸ್ಪಷ್ಟತೆ ಅಗತ್ಯವಿದೆ. ಕಾನೂನು ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ.

ವೃಷಭ ರಾಶಿ: ದೂರಪ್ರಯಾಣ ಸುಖಕರವಾಗಿ ಇರುವುದು.‌ ಧಾರ್ಮಿಕವಾದ ನಂಬಿಕೆಯುಳ್ಳ ನೀವು ತೀರ್ಥಕ್ಷೇತ್ರಗಳೋ ದೇವಾಲಯಕ್ಕೋ ಭೇಟಿ ಕೊಡುವಿರಿ. ಪರರ ಪ್ರಶಂಸೆಯನ್ನು ಹೃದಯದಲ್ಲಿ ಧರಿಸಿ. ಕೆಲಸದ ಮೆಚ್ಚುಗೆಗಳು ಸಂತೋಷವನ್ನು ಉಂಟುಮಾಡುತ್ತವೆ. ಹಣಕಾಸು ವಿಷಯದಲ್ಲಿ ಜಾಗ್ರತೆ ಅಗತ್ಯವಿದೆ. ಕುಟುಂಬದಲ್ಲಿ ಚಿಕ್ಕಪುಟ್ಟ ಮನಸ್ತಾಪ ಉಂಟಾಗಬಹುದು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು.

ಮಿಥುನ ರಾಶಿ: ಇಂದು ನಿಮಗೆ ಸಾಧ್ಯವಾದ ಕೆಲಸಗಳನ್ನು ಮಾಡಿ. ಆಲಸ್ಯ ಬೇಡ. ಸ್ವಂತ ಭೂಮಿಯನ್ನು ಮಾರುವ ಸ್ಥಿತಿಯು ಎದುರಾದೀತು. ಕೆಟ್ಟ ಅನುಭವಗಳನ್ನು ಆತ್ಮೀಯರ ಜೊತೆ ಹಂಚಿಕೊಳ್ಳುವಿರಿ. ಹಳೆಯ ವಿಷಯಗಳನ್ನು ನೆನೆಸಿಕೊಳ್ಳದೇ ಪ್ರಸ್ತುತದತ್ತ ಗಮನ ಹರಿಸಿ. ಹೂಡಿಕೆಯೊಳಗಿನ ಲಾಭದಿಂದ ಹಣಕಾಸು ಬೆಂಬಲ ಸಿಗಬಹುದು. ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ನಿಮ್ಮ ಕೆಲಸಗಳು ಅಚ್ಚುಕಟ್ಟಾಗಿ ಇರಬೇಕಿದೆ.

ಕರ್ಕಾಟಕ ರಾಶಿ: ದಾಂಪತ್ಯದಲ್ಲಿ ಉಂಟಾದ ವೈಮನಸ್ಯವನ್ನು ಪ್ರಕಟಗೊಳಿಸಿದೇ ಅಲ್ಲಿಯೇ ಸರಿಮಾಡಿಕೊಳ್ಳಿ. ಮನೆಗೆ ಊಹಿಸಿದ್ದಕ್ಕಿಂತ ಹೆಚ್ಚಿನವರ ಆಗಮನವಾಗಲಿದೆ, ಆತಂಕ ಹೆಚ್ಚುಮಾಡಿಕೊಳ್ಳುವಿರಿ. ಮಾತುಗಳು ಹೊಸ ಅವಕಾಶಗಳನ್ನು ತಂದೀತು. ಕಾನೂನು ಕೆಲಸದಲ್ಲಿ ಎಚ್ಚರಿಕೆ ಇರಲಿ. ಹಣಕಾಸು ಒತ್ತಡದಿಂದ ಚಿಕ್ಕ ಏರುಪೇರು ಆಗಬಹುದು. ಎಲ್ಲರ ಜೊತೆ ಜಗಳವಾಡುತ್ತ ಇರುವುದು ನಿಮಗೆ ಇಷ್ಟವಾಗಬಹುದು. ಆಸ್ತಿಯ ವಿಚಾರದಲ್ಲಿ ಆಸೆಯನ್ನು ಅತಿಯಾಗಿ ಇಟ್ಟುಕೊಳ್ಳುವಿರಿ.

ಸಿಂಹ ರಾಶಿ: ಸಾಮಾಜಿಕ ಕಾರ್ಯದಲ್ಲಿ ನಿಮಗೆ ಆಸಕ್ತಿಯು ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಜಾಣೆ ಅಗತ್ಯ. ಮೌಖಿಕ ವಿಚಾರವನ್ನು ಯಾರೂ ಗಂಭೀರವಾಗಿ ಪರಿಗಣಿಸಲಾರರು. ಸಣ್ಣ ಖರ್ಚು ಕೂಡ ದೊಡ್ಡದಾಗಬಹುದು. ಕುಟುಂಬದವರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ. ದೂರದ ಸಂಬಂಧಿಯವರಿಂದ ಸಂವೇದನೆಗಳ ಬದಲಾವಣೆ ಉಂಟಾಗಬಹುದು. ಮೋಹದಿಂದ ಸರಿ ತಪ್ಪುಗಳ ವಿವೇಚನೆ ದೂರಾಗುವುದು. ಯಾರಾದರೂ ನಿಮ್ಮನ್ನು ತೆಗಳಿದರೆ ಅದನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ.

ಕನ್ಯಾ ರಾಶಿ: ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಖರ್ಚಿಲ್ಲದೇ ಎಲ್ಲ ಓಡಾಟವನ್ನು ಮಾಡುವ ಯೋಚನೆ. ಕೆಲಸದಲ್ಲಿ ನಿಮ್ಮ ಚುರುಕು ಮೆಚ್ಚುಗೆಯನ್ನು ಗಳಿಸಬಹುದು. ಹಳೆಯ ಹೂಡಿಕೆಗಳು ಲಾಭದ ಸಂಕೇತ ತೋರಿಸುತ್ತವೆ. ಮನೆಯ ವಿಷಯದಲ್ಲಿ ಹೆಚ್ಚು ಸಮಯ ಕೊಡಬೇಕಾಗಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಬಂಧುಗಳ ಜೊತೆ ಆತ್ಮೀಯ ಒಡನಾಟ ಮಾಡುವಿರಿ.

ತುಲಾ ರಾಶಿ: ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ಮೇಲಧಿಕಾರಿಗಳಿಂದ ಕ್ಷಣಕಾಲ ತಪ್ಪಿಸಿಕೊಂಡರೆ ಅಷ್ಟೇ ಸಾಕು. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಹೂಡಿಕೆಗೆ ಮೊದಲು ಎಲ್ಲವನ್ನೂ ಅಧ್ಯಯನ ಮಾಡಿ. ಕುಟುಂಬದವರೊಂದಿಗೆ ಕಳೆಯುವ ಸಮಯ ಹೃದಯ ತಣಿಸುತ್ತದೆ. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು.

ವೃಶ್ಚಿಕ ರಾಶಿ: ಸಾಲಬಾಧೆ ಎದುರಾಗಲಿದ್ದು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಹಠವನ್ನು ಮುಂದಿಡುವುದು ಬೇಡ. ಒಂಟಿಯಾಗಿಯೇ ಇರಬೇಕಾಗುವುದು. ಕೆಲಸದಲ್ಲಿ ಅವಕಾಶಗಳು ಸಿಗಬಹುದು ಆದರೆ ತೀರ್ಮಾನದಲ್ಲಿ ತಾಳ್ಮೆ ಅಗತ್ಯ. ಖರ್ಚುಗಳು ನಿಮ್ಮ ಮೇಲೆ ಒತ್ತಡ ತರುತ್ತವೆ. ಮನೆಯ ಅಲಂಕರಣದ ಚಿಂತನೆ ಮೂಡಬಹುದು ಆದರೆ ಮುಂದಕ್ಕೆ ಹಾಕುವುದು ಉತ್ತಮ. ಸಂತಾನದ ಬಗ್ಗೆ ನಿಮಗೆ ಅತಿಯಾದ ಆಸೆಯಾಗುವುದು.

ಧನು ರಾಶಿ: ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸಿದರೆ ನಕಾರಾತ್ಮಕ ಉತ್ತರವನ್ನು ಕೊಡಬೇಡಿ. ಧೈರ್ಯದಿಂದ ಕೆಲಸದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಮಾತಿನಂತೆ ನಡಿಗೆ ನೂಲಿನಂತೆ ಬಟ್ಟೆ ಇರುವಂತೆ ಇರಬೇಕು. ಹಣಕಾಸು ಸ್ಥಿತಿಯಲ್ಲಿ ಸ್ಥಿರತೆ ಇರುತ್ತದೆ. ಖರ್ಚುಗಳಲ್ಲಿ ನಿಯಂತ್ರಣ ವಹಿಸಿ. ಮನೆಯವರು ನಿಮ್ಮ ಸಮಯ ಮತ್ತು ಪ್ರೀತಿಗೆ ಕಾಯುತ್ತಿದ್ದಾರೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು.

ಮಕರ ರಾಶಿ: ಕಾರ್ಯದ ಒತ್ತಡ ನಿಮ್ಮನ್ನು ಇಂದು ಬಂಧಿಸಿ ಇಡಲಿದೆ. ಹೊಸ ವಸ್ತ್ರದ ಖರೀದದಿಯಾಗಲಿದೆ‌. ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಿದರೂ ಮನಸ್ಸು ಬೇರೆಡೆ ಇರಬಹುದು. ಹಣಕಾಸು ಸ್ಥಿತಿಯಲ್ಲಿ ನಿರ್ವಹಣಾ ಜಾಣ್ಮ ಅಗತ್ಯ. ಕೈ ಮೀರಿದ ಆರೋಗ್ಯವನ್ನು ನಿಯಂತ್ರಣಕ್ಕೆ ತರಲಾಗದು. ಸಹೋದ್ಯೋಗಿಯಿಂದ ಸ್ಪರ್ಧಾತ್ಮಕ ಮನೋಭಾವನೆ ಎದುರಾಗಬಹುದು. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು.

ಕುಂಭ ರಾಶಿ: ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಯಾರ ಮೇಲೂ ದ್ವೇಷವನ್ನು ಸಾಧಿಸಿ ಆಗುವುದೇನಿಲ್ಲ. ಸಮಯ ಹಾಳು ಅಷ್ಟೇ. ಉದ್ಯೋಗದಲ್ಲಿ ಚುರುಕು ಮತ್ತು ಯೋಜನೆ ಮುಖ್ಯ. ಹಣಕಾಸಿನಲ್ಲಿ ಸ್ಥಿರತೆ ಇದ್ದರೂ ಸಾಲ ಅಥವಾ ಸಾಲಕೊಡಿಕೆ ಬೇಡ. ಪ್ರೀತಿಯಲ್ಲಿ ಸಹನಶೀಲತೆಯಿಂದ ಸ್ಪಂದಿಸಿ, ಅತಿವಿಚಾರ ಬೇಡ. ನಿಮ್ಮ ತಂದೆಯ ಜೊತೆ ಸ್ನೇಹದ ಸಂಬಂಧವನ್ನು ಇಟ್ಟುಕೊಳ್ಳುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು.

ಮೀನ ರಾಶಿ: ಉದ್ಯೋಗ ಸೃಷ್ಟಿಗೆ ಬೇಕಾದ ಬಂಡವಾಳವು ಸಿಗಲಿದೆ. ಸಾಲ ಪಡೆದವರು ಮರಳಿ ನೀಡಲಿದ್ದಾರೆ. ಹಣಕಾಸು ಸಂಬಂಧಿತ ವಿಷಯಗಳು ನಿಮ್ಮ ಗಮನಕ್ಕೆ ಬರುತ್ತವೆ. ನೀವು ಸೇವಿಸುವ ಔಷಧ ಅಡ್ಡ ಪರಿಣಾಮ ನೀಡಬಹುದು. ತಪ್ಪುಗಳು ನಡೆದಾಗ ನಿಮ್ಮ ಪರವಾದ ಮಾತುಗಳು ಕೇಳಿಸದೇ ಇರಬಹುದು. ಸಾಲಕ್ಕೆ ಏನನ್ನಾದರೂ ಅಡವಿಡಬೇಕಾಗಬಹುದು. ವಾಹನಕ್ಕಾಗಿ ಖರ್ಚು ಮಾಡಬೇಕಾಗುವುದು. ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು.

ಲೋಹಿತ ಹೆಬ್ಬಾರ್-8762924271 (what’s app only)

Source link

ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ನಟ ಶಿವರಾಜ್ ಕುಮಾರ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಚರಣ್ ಪಾತ್ರಕ್ಕೆ ಕುಸ್ತಿ ಕಲಿಸುವ ಗುರುವಿನ ಪಾತ್ರ ಶಿವರಾಜ್ ಕುಮಾರ್ ಅವರದ್ದು. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಮ್ ಚರಣ್, ಶಿವರಾಜ್ ಕುಮಾರ್ ಅವರೊಟ್ಟಿಗೆ ಸೇರಿ ಸಿನಿಮಾ ಪ್ರಚಾರ ಮಾಡಿದರು. ಈ ವೇಳೆ ಅನುಶ್ರೀ ಎದುರು ಸಂದರ್ಶನದಲ್ಲಿ ರಾಮ್ ಚರಣ್ ಅವರು, ಶಿವಣ್ಣನ ರೀತಿ ಮಚ್ಚು ಹಿಡಿದು ಶಿವಣ್ಣನ ಡೈಲಾಗ್ ಸಹ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಫೈನಲ್ ಪಂದ್ಯ ರದ್ದಾದರೆ ಯಾರಿಗೆ ಸಿಗಲಿದೆ ಟ್ರೋಫಿ?

ಐಪಿಎಲ್ 2026 (IPL 2026) ರ ಚಾಂಪಿಯನ್‌ ಪಟ್ಟಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳು ಸೆಣಸಲಿವೆ. ಮೇ 31 ರ ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಎರಡೂ ತಂಡಗಳು ಸೀಸನ್ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ಚಾಂಪಿಯನ್ ಆಗುವತ್ತ ಅಂತಿಮ ಹೆಜ್ಜೆ ಇಟ್ಟಿವೆ. ಆದರೆ ಫೈನಲ್ ಪಂದ್ಯದ ದಿನದಂದು ಮಳೆ ಬಂದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಅಥವಾ ಇತರೆ ಕಾರಣದಿಂದಾಗಿ ಪಂದ್ಯ ನಡೆಯದಿದ್ದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗಲಿದೆ? ಹಾಗೆಯೇ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.

ಫೈನಲ್ ಪಂದ್ಯಕ್ಕಿದೆ ಮೀಸಲು ದಿನ

ಐಪಿಎಲ್‌ನಲ್ಲಿ ಲೀಗ್ ಹಂತ ಹಾಗೂ ಪ್ಲೇಆಫ್‌ ಸುತ್ತಿಗೆ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಲೀಗ್ ಹಂತದಲ್ಲಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತಿತ್ತು. ಆದರೆ ಪ್ಲೇಆಫ್‌ ಸುತ್ತಿಗೆ ಆ ನಿಯಮ ಅನ್ವಯವಾಗುತ್ತಿರಲಿಲ್ಲ. ಹೀಗಾಗಿ ಪ್ಲೇಆಫ್‌ ಸುತ್ತಿನಲ್ಲಿ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಯಾವ ತಂಡ ಮೇಲಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತಿತ್ತು. ಏಕೆಂದರೆ ಪ್ಲೇಆಫ್‌ಗೂ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಆದರೆ ಫೈನಲ್ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ. ಏಕೆಂದರೆ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.

ಮೀಸಲು ದಿನದಂದು ಪಂದ್ಯ ನಡೆಯದಿದ್ದರೆ?

ಫೈನಲ್ ಪಂದ್ಯವನ್ನು ಮೇ 31 ರಂದೇ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಆದಾಗ್ಯೂ ನಿರಂತರವಾಗಿ ಮಳೆ ಬಂದರೆ, ಓವರ್‌ಗಳನ್ನು ಕಡಿಮೆ ಮಾಡಲಾಗುತ್ತದೆ. ಮಳೆ ಮುಂದುವರಿದರೆ, ಹೆಚ್ಚುವರಿಯಾಗಿ 120 ನಿಮಿಷಗಳನ್ನು ಸಹ ನೀಡಲಾಗುತ್ತದೆ. ಹಾಗೆಯೇ ವಿಜೇತರನ್ನು ನಿರ್ಧರಿಸಲು ಪ್ರತಿ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಐದು ಓವರ್‌ಗಳನ್ನು ಆಡಲಾಗುತ್ತದೆ. ಅದಾಗ್ಯೂ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ, ಜೂನ್ 1 ರಂದು ಪಂದ್ಯವನ್ನು ನಡೆಸಲಾಗುವುದು. ಏಕೆಂದರೆ ಜೂನ್ 1 ಅನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ.

IPL 2026 Final: ಸತತ 2ನೇ ಬಾರಿಗೆ ಚಾಂಪಿಯನ್; ಮತ್ತೊಂದು ದಾಖಲೆ ಸೃಷ್ಟಿಸುವ ಸನಿಹದಲ್ಲಿ ಆರ್​ಸಿಬಿ

ಜೂನ್ 1 ರಂದು ಸಹ ಮಳೆಯಿಂದಾಗಿ ಪಂದ್ಯ ಆರಂಭವಾಗದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಅಗ್ರಸ್ಥಾನ ಪಡೆದಿರುತ್ತದೋ ಆ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ. ಇದರರ್ಥ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್​ಸಿಬಿ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇತ್ತ ಎರಡನೇ ಸ್ಥಾನ ಪಡೆದುಕೊಂಡಿದ್ದ ಗುಜರಾತ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯ ಶಿವಕುಮಾರ್..ಚುನಾವಣೆಯಲ್ಲಿ ಸೋಲಬಹುದು, ಸೈದ್ಧಾಂತಿಕವಾಗಿ ಸೋಲಬೇಡಿ: ಡಿಕೆಶಿಗೆ ಸಿದ್ದರಾಮಯ್ಯ ಭಾವುಕ ಪತ್ರ

ಬೆಂಗಳೂರು, (ಮೇ 30): ಡಿಕೆ ಶಿವಕುಮಾರ್ (dk shivakumar) ಅವರು ಇಂದು (ಮೇ 30) ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಜೂನ್ 3 ಸಂಜೆ 4.5ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಸಿದ್ದರಾಮಯ್ಯ (siddaramaiah), ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು ತಿಳಿಸುತ್ತಾ ಭಾವನಾತ್ಮಕ ಪತ್ರವೊಂದು ಬರೆದಿದ್ದು, ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು 2ನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ ಎಂದು ಡಿಕೆಶಿಗೆ ಅಭಯ ನೀಡಿದ್ದಾರೆ.

ಮುಖ್ಯಾಂಶಗಳು

  • ಹೊಸ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಡಿ ಕೆ ಶಿವಕುಮಾರ್
  • ಕರ್ನಾಟಕದ ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್​ಗೆ ಅಭಿನಂದನೆ ತಿಳಿಸಿದ ಸಿದ್ದರಾಮಯ್ಯ
  • ಭಾವನಾತ್ಮ ಪತ್ರದ ಮೂಲಕ ಅಭಿನಂದನೆ ತಿಳಿಸಿದ ಹಂಗಾಮಿ ಸಿಎಂ
  • ಜೊತೆಗೆ ಡಿಕೆ ಶಿವಕುಮಾರ್​​​ಗೆ ಕೆಲ ಸಲಹೆ ಸೂಚನೆಗಳನ್ನ ನೀಡಿದ ಸಿದ್ದರಾಮಯ್ಯ

ಸಿದ್ದರಾಮಯ್ಯನವರ ಪತ್ರದಲ್ಲೇನಿದೆ?

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಂಗಾತಿ ಡಿ.ಕೆ.ಶಿವಕುಮಾರ್ ಅವರಿಗೆ ಹಾರ್ದಿಕವಾದ ಅಭಿನಂದನೆಗಳು.

ಪ್ರಿಯ ಶಿವಕುಮಾರ್, ನಿಮ್ಮಲ್ಲಿರುವ ಅದಮ್ಯವಾದ ಕ್ರಿಯಾಶೀಲತೆ, ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಾಯತೀತ ನಿಷ್ಠೆಯನ್ನು ಒಬ್ಬ ಸಹದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ ರಾಜ್ಯದ ಜನತೆಗೆ ಆಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುವೆ.ಇಂದು ಕರ್ನಾಟಕ ತಲಾವಾರು ಆದಾಯದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿರುವುದು ಮಾತ್ರವಲ್ಲ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿಯೂ ದೇಶಕ್ಕೆ ಮಾದರಿಯಾಗಿದೆ. ನಾವು ಪ್ರಾರಂಭಿಸಿರುವ ಪ್ರತಿಯೊಂದು ಯೋಜನೆಯನ್ನೂ ಉಳಿದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ‍್ಠಾನಕ್ಕೆ ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗಾತಿಯಾಗಿದೆ ಎಂದಿದ್ದಾರೆ.

ಇದನ್ನೂ ನೋಡಿ: ಶಾಸಕಾಂಗ ಸಭೆಯಲ್ಲಿ ಅಚ್ಚರಿ ಬೆಳವಣಿಗೆ, ಒಂದು ಕ್ಷಣ ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ

ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆಯನ್ನು ಮಾಡಲು ಒದಗಿಬಂದಿದ್ದ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸಿದ ಹೆಮ್ಮೆ ನನ್ನದಾಗಿದೆ. ಈ ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಅದಕ್ಕೆ ಬೇಕಾಗಿರುವ ಬದ್ದತೆ, ಸಾಮರ್ಥ್ಯ ಮತ್ತು ಮುನ್ನೋಟ ನಿಮ್ಮಲ್ಲಿದೆ ಎನ್ನುವ ನಂಬಿಕೆ ನನ್ನದು.

ಇಡೀ ದೇಶ ಇಂದು ಆರ್ಥಿಕ ಅಭದ್ರತೆಯಲ್ಲಿ ಭೀತಿಗೊಳಗಾಗಿರುವ ಸ್ಥಿತಿಯಲ್ಲಿ ರಾಜ್ಯದ ಜನತೆ ಕೂಡಾ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಸಮರ್ಥ ಆಡಳಿತದ ಮೂಲಕ ಅವರಲ್ಲಿ ಭರವಸೆಯನ್ನು ಹುಟ್ಟಿಸುವ ಜೊತೆಯಲ್ಲಿ ರಾಜ್ಯವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ.

ಚುನಾವಣೆಯಲ್ಲಿ ಸೋಲಬಹುದು, ಸೈದ್ಧಾಂತಿಕವಾಗಿ ಸೋಲಬೇಡಿ

ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಸ್ವಲ್ಪ ಹಿನ್ನಡೆಯಾಗಿದೆ. ನಾವು ಚುನಾವಣೆಯಲ್ಲಿ ಸೋಲಬಹುದು, ಗೆಲ್ಲಬಹುದು. ಆದರೆ ಸೈದ್ಧಾಂತಿಕವಾಗಿ ಎಂದೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ ಆ ಪಕ್ಷ ಚುನಾವಣೆಯನ್ನು ಗೆಲ್ಲಲಾಗದೆ ನಾಶವಾಗುತ್ತದೆ ಎಂದು ನಂಬಿದವನು ನಾನು.

ರಾಜ್ಯದ ಅಭಿವೃದ್ಧಿಯ ಜೊತೆಯಲ್ಲಿ ನಮ್ಮೆಲ್ಲರ ಮಾತೃಸ್ವರೂಪಿಯಾಗಿರುವ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸುವ ಹೊಣೆಗಾರಿಕೆ ಕೂಡಾ ನಮ್ಮೆಲ್ಲರ ಮೇಲಿದೆ. ಕಾಂಗ್ರೆಸ್ ಪಕ್ಷ ಇಂತಹ ಸವಾಲಿನ ಅನೇಕ ಅಗ್ನಿದಿವ್ಯಗಳನ್ನು ಯಶಸ್ವಿಯಾಗಿ ದಾಟಿ ಬಂದಿರುವ ಇತಿಹಾಸ ನಮಗೆಲ್ಲರಿಗೂ ಪ್ರೇರಣೆಯಾಗಲಿ. ನಿಮ್ಮ ನಾಯಕತ್ವ ಬಲ ಈ ಪ್ರಯತ್ನವನ್ನು ಸಫಲಗೊಳಿಸಲಿ.

ಕಾಂಗ್ರೆಸ್ ಪಕ್ಷದ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಜಾತಿ-ಧರ್ಮಗಳ ಹೆಸರಲ್ಲಿ ಒಡೆದು ಹಾಕಲಾಗುತ್ತಿದೆ. ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವವರ ದಮನ ಮಾಡಲಾಗುತ್ತಿದೆ. ಗಾಂಧಿಯವರನ್ನು ಕೊಂದವರು ಇಂದು ಗೋಡ್ಸೆಯನ್ನು ಮೆರೆಸಲು ಹೊರಟಿದ್ದಾರೆ.

2ನೇ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿದ್ದೇವೆ

ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನೇ ತನ್ನ ಸಿದ್ಧಾಂತವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ತಳಮಟ್ಟದಿಂದಲೇ ಗಟ್ಟಿಗೊಳಿಸಲು ಮುಂದಾಗುವುದೇ ದೇಶವನ್ನು ಉಳಿಸಲು ನಮಗೆ ಇರುವ ಏಕೈಕ ಮತ್ತು ಸರಿಯಾದ ದಾರಿಯಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ.

ನಿಮಗೆ ಸದಾ ಯಶಸ್ಸು ಸಿಗಲಿ ಎಂದು ಡಿಕೆ ಶಿವಕುಮಾರ್​​​ಗೆ ಟ್ಯಾಗ್ ಮಾಡಿದ್ದಾರೆ.

Source link

ಪ್ರಮಾಣವಚನಕ್ಕೂ ಮುನ್ನವೇ ಡಿಕೆ ಶಿವಕುಮಾರ್​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ

ಬೆಂಗಳೂರು, ಮೇ 30: ಕರ್ನಾಟಕದ ಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ನಡೆದ ಸಿಎಲ್​ಪಿ ಸಭೆಯಲ್ಲಿ, ಅಧಿಕೃತವಾಗಿ ಡಿಕೆ ಶಿವಕುಮಾರ್​ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆಗಿದ್ದಾರೆ. ಜೂನ್ 3 ರಂದು ಅಂದ್ರೆ ಬುಧವಾರ ಸಂಜೆ ಡಿಕೆ ಪದಗ್ರಹಣ ನಡೆಯಲಿದೆ. ಇನ್ನು ಡಿ.ಕೆ. ಶಿವಕುಮಾರ್​ಗೆ ರಾಜ್ಯಪಾಲರು ಸರ್ಕಾರ ರಚಿಸಲು ಅಧಿಕೃತ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿಯೋಜಿತ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭಾರೀ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರ ನಿವಾಸದ ಮುಖ್ಯದ್ವಾರದಲ್ಲಿ ಪ್ರವೇಶಿಸುವವರಿಗಾಗಿ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತಿದೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ

ಬೆಂಗಳೂರು, (ಮೇ 30): ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ.ಶಿವಕುಮಾರ್ ಅವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ನೂತನ ಆಯ್ಕೆ ನಡೆಯಿತು. ಹೊಸ ಶಾಸಕಾಂಗ ಪಕ್ಷದ ನಾಯಕರಾಗಿ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದರು. ಡಾ. ಜಿ ಪರಮೇಶ್ವರ್ ಅವರು ಅನುಮೋದಿಸಿದರು. ಇದನ್ನು ಸಭೆಯು ಒಕ್ಕೊರಲಿನಿಂದ ಬೆಂಬಲಿಸಿತು. ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ , ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ.ಶಿವಕುಮಾರ್​ ಆಯ್ಕೆಯಾಗಿದ್ದಾರೆ ಎಂದು ಅವರು ಘೋಷಿಸಿದರು. ಇನ್ನು ಸಿಎಲ್​​ಪಿ ಸಭೆಯಲ್ಲಿ ಏನೆಲ್ಲಾ ಆಯ್ತು ಎನ್ನುವ ವಿಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಂಧನ ದರ ಏರಿಕೆ ಎಫೆಕ್ಟ್​​: ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ‘ಇವಿ’ ವಾಹನಗಳ ಧಮಾಕಾ!

ಬೆಂಗಳೂರು, ಮೇ 30: ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ದರಗಳು ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ಕಂಗೆಟ್ಟಿರುವ ಬೆಂಗಳೂರಿಗರು (Bangaluru) ಈಗ ಇವಿ ಅಂದರೆ ಎಲೆಕ್ಟ್ರಿಕ್ ವಾಹನಗಳ (Electric Vehicles) ಮೊರೆ ಹೋಗುತ್ತಿದ್ದಾರೆ. ನಗರದಲ್ಲಿ ಇವಿ ವಾಹನಗಳಿಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಪ್ರತಿ ತಿಂಗಳು ನೂರಾರು ವಾಹನಗಳು ಮಾರಾಟವಾಗುತ್ತಿವೆ. ಇತ್ತ ವಾಹನ ಮಾಲೀಕರು ಮತ್ತೆ ಡೀಸೆಲ್ ದರ ಹೆಚ್ಚಾಗುತ್ತದೆ, ಹಾಗಾಗಿ ಇವಿ ಮೊರೆ ಹೋಗುತ್ತಿದ್ದೇವೆ ಎನ್ನುತ್ತಿದ್ದಾರೆ.

ಮುಖ್ಯಾಂಶಗಳು

  • ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಕಂಗೆಟ್ಟು ಇವಿ ಮೊರೆ ಹೋದ ಬೆಂಗಳೂರಿಗರು
  • ಶೋರೂಂಗಳಲ್ಲಿ ಖಾಲಿಯಾದ ಎಲೆಕ್ಟ್ರಿಕ್ ವಾಹನಗಳ ಸ್ಟಾಕ್!
  • ಇವಿ ಸ್ಕೂಟರ್, ಕಾರ್ ಬುಕ್ ಮಾಡಿದ್ರೆ 2 ರಿಂದ 3 ತಿಂಗಳು ವೇಟಿಂಗ್ ಪಿರಿಯಡ್!

ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡಿದ ಜನ

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂಧನ ದರಗಳು ಗಗನಕ್ಕೇರುತ್ತಿವೆ. ಈಗಾಗಲೇ ದೇಶದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಇತ್ತ ಸಿಎನ್‌ಜಿ ಮತ್ತು ಎಲ್‌ಪಿಜಿ ಬೆಲೆಯೂ ಗ್ರಾಹಕರ ಕೈ ಸುಡುತ್ತಿದೆ. ಇಂಧನ ದರ ಏರಿಕೆಯ ಈ ಶಾಕ್‌ನಿಂದಾಗಿ ಹೊಸದಾಗಿ ವಾಹನ ಖರೀದಿಸಲು ಮುಂದಾಗುತ್ತಿರುವ ಸಿಲಿಕಾನ್ ಸಿಟಿ ಮಂದಿ, ಪೆಟ್ರೋಲ್-ಡೀಸೆಲ್ ಸಹವಾಸವೇ ಬೇಡ ಎಂದು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಕಿರಿಕಿರಿ, ದುಬಾರಿ ಬಾಡಿಗೆ ಇದ್ರೂ ಬೆಂಗಳೂರು ಬಿಡಲ್ಲ ಜನ! ಬಿಹಾರಿ ಯುವಕನ ವಿಡಿಯೋ ವೈರಲ್

ಇದಕ್ಕೆ ಸಾಕ್ಷಿ ಎಂಬಂತೆ ನಗರದ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂಗಳಲ್ಲಿ ವಾಹನಗಳ ಮಾರಾಟದ ಗ್ರಾಫ್ ದಿಢೀರ್ ಏರಿಕೆಯಾಗಿದೆ. ಕಳೆದ ತಿಂಗಳಷ್ಟೇ ಕೇವಲ 40 ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದ ಶೋರೂಂ ಮಾಲೀಕರು, ಇಂಧನ ದರ ಹೆಚ್ಚಳವಾದ ಈ ಒಂದೇ ತಿಂಗಳಿನಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ಸೇಲ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಇಂಧನ ದರ ಹೆಚ್ಚಾಗುತ್ತಿರುವುದರಿಂದ ಇವಿ ಸ್ಕೂಟರ್‌ಗಳೇ ಬೆಸ್ಟ್ ಆಪ್ಷನ್ ಎಂದು ಗ್ರಾಹಕರಾದ ಶಶಿಕಾಂತ್ ರಾಣೆ ಅವರ ಮಾತು.

ಇವಿ ಕ್ರಾಂತಿಗೆ ಸೈ ಎಂದ ಚಾಲಕರು

ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸರಿಸುಮಾರು 8 ರೂಪಾಯಿಯಷ್ಟು ಭಾರಿ ಏರಿಕೆಯಾಗಿರುವ ಕಾರಣ, ಹೊಸ ಕಾರು ಖರೀದಿಸಲು ಪ್ಲ್ಯಾನ್ ಮಾಡಿದ್ದ ಮಧ್ಯಮ ವರ್ಗದ ಜನರೆಲ್ಲಾ ಇವಿ ಕಾರುಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಇದರ ನಡುವೆ ಯುದ್ಧದ ಎಫೆಕ್ಟ್‌ನಿಂದಾಗಿ ಎಲ್‌ಪಿಜಿ ಸಿಗದೆ ಪರದಾಡಿದ್ದ ಆಟೋ ಚಾಲಕರು ಸಹ ಈಗ ಇವಿ ಕ್ರಾಂತಿಗೆ ಸೈ ಎಂದಿದ್ದಾರೆ. ಹಿಂದೆ ಲೀಟರ್‌ಗೆ 55 ರೂ. ಇದ್ದ ಎಲ್‌ಪಿಜಿ ದರ ಈಗ ಬರೋಬ್ಬರಿ 95 ರೂಪಾಯಿಗೆ ತಲುಪಿರುವುದರಿಂದ, ನಿರಂತರ ದರ ಏರಿಕೆಗೆ ಬ್ರೇಕ್ ಹಾಕಲು ಎಲೆಕ್ಟ್ರಿಕ್ ಆಟೋಗಳ ಖರೀದಿಗೆ ಮುಂದಾಗುತ್ತಿದ್ದಾರೆ.

ಭಾರಿ ಬೇಡಿಕೆ ಮಧ್ಯೆ ಸಪ್ಲೈ ಕೊರತೆ

ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದ್ದು, ಶೋರೂಂ ಮಾಲೀಕರು ಗ್ರಾಹಕರಿಗೆ ವಾಹನಗಳನ್ನು ಸಪ್ಲೈ ಮಾಡಲು ಹೈರಾಣಾಗುತ್ತಿದ್ದಾರೆ. ಸದ್ಯ ಇವಿ ವಾಹನಗಳನ್ನು ಬುಕ್ ಮಾಡಿದರೆ ವಿತರಣೆಗಾಗಿ ಕನಿಷ್ಟ ಎರಡರಿಂದ ಮೂರು ತಿಂಗಳು ಕಾಯಬೇಕು ಎಂದು ಸ್ಕೂಟರ್ ಶೋರೂಂನ ಸೇಲ್ಸ್ ಎಕ್ಸಿಕ್ಯುಟಿವ್ ಹರ್ಷಿತ್​ ಹೇಳಿದ್ದಾರೆ.

ಇದನ್ನೂ ಓದಿ: ಇಂಧನ ದರ ಏರಿಕೆ ಬರೆ: ಸರಕು ಸಾಗಣೆ ದರ ಹೆಚ್ಚಳಕ್ಕೆ ಲಾರಿ ಮಾಲೀಕರ ನಿರ್ಧಾರ, ಪ್ರಧಾನಿ ಮೋದಿಗೆ ಸಿಮ್ಟಾ ಪತ್ರ

ಒಟ್ಟಿನಲ್ಲಿ, ಜಾಗತಿಕ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ ದರಗಳು ದಿನ ನಿತ್ಯವೂ ಏರಿಕೆ ಆಗ್ತಿದ್ದಂತೆ, ಇತ್ತ ಜನರು ಮಾತ್ರ ಸ್ಮಾರ್ಟ್ ಆಗಿ ಇವಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಆದರೆ ಬೇಡಿಕೆ ಹೆಚ್ಚಾಗಿರುವ ಕಾರಣ ಮಾರುಕಟ್ಟೆಯಲ್ಲಿ ವಾಹನಗಳ ಕೊರತೆ ಎದುರಾಗಿರುವುದಂತೂ ಸತ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಲಿಗೆ ಬಿದ್ದ ಧೋನಿ ಪತ್ನಿ, ಗಾಬರಿಯಾದ ನಟ, ನಿಜಕ್ಕೂ ಆಗಿದ್ದೇನು?

ಎಂಎಸ್ ಧೋನಿ (MS Dhoni), ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ. ಐಪಿಎಲ್ ಸಮಯದಲ್ಲಿ ಧೋನಿಯ ಪತ್ನಿ ಮತ್ತು ಮಗಳು ಸಹ ಕ್ರೀಡಾಂಗಣಕ್ಕೆ ಬಂದು ಧೋನಿಯ ಬೆಂಬಲಿಸುತ್ತಾರೆ. ಐಪಿಎಲ್ ವೇಳೆ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಸಹ ಕ್ರೀಡಾಂಗಣಕ್ಕೆ ಬಂದಿರುತ್ತಾರೆ. ಈ ವೇಳೆ ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರ ನಡುವೆ ಮಾತುಕತೆ, ಭೇಟಿ, ಪರಿಚಯಗಳು ಆಗುತ್ತವೆ. ಹಾಗೆಯೇ ಇತ್ತೀಚೆಗೆ ಒಬ್ಬ ದಕ್ಷಿಣ ಭಾರತದ ಹಿರಿಯ ನಟ ಹೇಳಿಕೊಂಡಿರುವಂತೆ, ಅವರು ಐಪಿಎಲ್ ನೋಡಲು ಹೋಗಿದ್ದಾಗ ಇದ್ದಕ್ಕಿದ್ದಂತೆ ಧೋನಿಯ ಪತ್ನಿ ಸಾಕ್ಷಿ ಬಂದು ಅವರ ಕಾಲಿಗೆ ನಮಸ್ಕರಿಸಿದರಂತೆ. ಇದು ನೋಡಿ ಖುದ್ದು ಆ ನಟನೇ ಗಾಬರಿಯಾಗಿ ಗೊಂದಲಕ್ಕೆ ಒಳಗಾಗಿದ್ದರಂತೆ. ಏನದು ಕತೆ? ಇಲ್ಲಿದೆ ಮಾಹಿತಿ…

‘ಕಾಂತಾರ 2’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಮಲಯಾಳಂ ನಟ ಜಯರಾಂ ಇತ್ತೀಚೆಗೆ ತಮ್ಮ ಹೊಸ ಸಿನಿಮಾ ‘ಪರಿಮಳ ಆಂಡ್ ಕೋ’ ಸಿನಿಮಾದ ಪ್ರಚಾರದಲ್ಲಿರುವಾಗ, ಅಭಿಮಾನಿಯೊಬ್ಬರು ಜಯರಾಮ್ ಅವರಿಗೆ ಯಾವ ಅಭಿಮಾನಿಗಳ ಭೇಟಿ ನಿಮಗೆ ಅತ್ಯಂತ ಸಂತೋಷ ನೀಡಿತು ಎಂದು ಕೇಳಿದರು. ಅದಕ್ಕೆ ಅವರು, ಸಾಕ್ಷಿ ಧೋನಿಯ ಕತೆ ವಿವರಿಸಿದರು. ‘ಕೇವಲ ಒಂದು ವಾರದ ಹಿಂದೆ, ನಾನು ಚೆನ್ನೈನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದೆ. ಅಲ್ಲಿ ಧೋನಿಯ ಪತ್ನಿ ಸಾಕ್ಷಿ ಸಹ ಇದ್ದರು. ಆದರೆ ಹಠಾತ್ತನೆ, ಸಾಕ್ಷಿ ಧೋನಿ ನನ್ನ ಬಳಿ ಬಂದು, ನನ್ನ ಪಾದ ಮುಟ್ಟಿ ತಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದರು. ನಾನು ದಿಗ್ಭ್ರಮೆಗೊಂಡೆ, ಗೊಂದಲಕ್ಕೂ ಒಳಗಾದೆ. ಅವರು ನನ್ನನ್ನು ಬೇರೆಯವರೆಂದು ತಪ್ಪಾಗಿ ಭಾವಿಸಿದ್ದಾರೆಯೇ ಎಂದು ಅನಿಸಿತು’ ಎಂದರು.

ಖುದ್ದು ಜಯರಾಮ್ ಅವರು ಸಾಕ್ಷಿಯನ್ನುದ್ದೇಶಿಸಿ, ‘ನೀವು ತಪ್ಪಾಗಿ ತಿಳಿದಂತಿದ್ದೀರಿ, ನೀವು ಖಂಡಿತವಾಗಿಯೂ ನನ್ನ ಅಭಿಮಾನಿಯೇನಾ?’ ಎಂದು ಕೇಳಿದರಂತೆ. ಅದಕ್ಕೆ ಸಾಕ್ಷಿ, ‘ನನಗೆ ನೀವು ಯಾರೆಂದು ಚೆನ್ನಾಗಿ ಗೊತ್ತು’ ಎಂದರಂತೆ. ಸಾಕ್ಷಿ ಮತ್ತು ಧೋನಿಯ ಮಗಳು ಜೀವಾಳ ಕೇರ್‌ಟೇಕರ್ (ನಾನ್ನಿ) ಮಲಯಾಳಿಯಾಗಿದ್ದರಂತೆ. ಜೀವಾ ಚಿಕ್ಕವಳಿದ್ದಾಗ, ಅವಳಿಗೆ ನಿದ್ದೆ ಬರಿಸಲು ಜಯರಾಮ್ ಅವರ ‘ಅಂಬಲಪ್ಪುಳ ಉಣ್ಣಿಕಣ್ಣನೋಡು’ ಹಾಡನ್ನು ಹಾಡುತ್ತಿದ್ದರಂತೆ ಎಂದು ಜಯರಾಮ್ ವಿವರಿಸಿದ್ದಾರೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾದ ಧೋನಿ

2017 ರಲ್ಲಿ, ಜೀವಾಗೆ ಕೇವಲ ಎರಡು ವರ್ಷ ವಯಸ್ಸಾಗಿದ್ದಾಗ, ತನ್ನ ಕೇರ್‌ಟೇಕರ್ ‘ಶೀಲಾ ಆಂಟಿ’ಯಿಂದ ಕಲಿತ ಮಲಯಾಳಿ ಹಾಡನ್ನು ಹಾಡುವ ಮೂಲಕ ಅವಳು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದ್ದಳು. ಅವಳು ಹಾಡಿದ್ದ ಹಾಡು ಪ್ರಿಯದರ್ಶನ್ ಅವರ ‘ಅದ್ವೈತಂ’ ಚಿತ್ರದ ‘ಅಂಬಲಪ್ಪುಳ ಉಣ್ಣಿಕಣ್ಣನೋಡು’ ಆಗಿತ್ತು. 1991 ರ ಈ ಚಿತ್ರದಲ್ಲಿ ಮೋಹನ್‌ಲಾಲ್, ಜಯರಾಮ್ ಮತ್ತು ರೇವತಿ ನಟಿಸಿದ್ದರು. ಜೀವಾ ಹಾಡುತ್ತಿರುವ ಆ ವಿಡಿಯೋ ಆಗ ವೈರಲ್ ಆಗಿತ್ತು. ಅದೇ ಕಾರಣಕ್ಕೆ ಸಾಕ್ಷಿ ಅವರು ಜಯರಾಂ ಅವರ ಬಗ್ಗೆ ತಿಳಿದುಕೊಂಡು ಅವರ ಅಭಿಮಾನಿ ಆಗಿದ್ದಾರೆ.

ಜಯರಾಮ್ ಅವರು ಮಲಯಾಳಂ ಚಿತ್ರರಂಗದ ಹಿರಿಯ ನಟ. ಅವರು ಮಲಯಾಳಂ ಮಾತ್ರವೇ ಅಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. 1988 ರ ‘ಅಪರನ್‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, 1993 ರ ‘ಮೇಲೆಪರಂಬಿಲ್ ಆಣ್ವೀಡು’ ಚಿತ್ರದ ಮೂಲಕ ಪ್ರಸಿದ್ಧಿ ಪಡೆದರು. ಅವರು ನುರಿತ ಚೆಂಡೆ (Chenda) ಕಲಾವಿದರೂ ಆಗಿದ್ದು, ಕೇರಳದ ದೇವಸ್ಥಾನಗಳ ಹಬ್ಬಗಳಲ್ಲಿ ಹೆಚ್ಚಾಗಿ ಪ್ರದರ್ಶನ ನೀಡುತ್ತಾರೆ. ಕೆಲ ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್​​ಕುಮಾರ್ ಅವರ ನೆನೆದು ಕನ್ನಡ ಹಾಡು ಹಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version