Headlines

ಬೆಂಗಳೂರಲ್ಲಿ ಟ್ರಾಫಿಕ್​​ ಸಮಸ್ಯೆ ನಿವಾರಣೆಗೆ ಕ್ರಮ: ಸಿಗ್ನಲ್​​ ಸಮೀಪವಿರುವ ಬಸ್​​ ನಿಲ್ದಾಣಗಳ ತೆರವಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ – Kannada News | Bengaluru Traffic: BMTC Bus Stops Within 75 Meters of Signals to be Shifted to Ease Congestion

ಬೆಂಗಳೂರು, ಜುಲೈ 15: ಕೃಷ್ಣ ಭೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ನಗರದಲ್ಲಿನ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಫುಟ್​​​ಪಾತ್​​ ಒತ್ತುವರಿ ತೆರವು, ಬಿಡಾಡಿ ವಾಹನಗಳ ಎತ್ತಂಗಡಿ ಸೇರಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಇವುಗಳ ಜೊತೆಗೀಗ ನಗರದಲ್ಲಿನ ಟ್ರಾಫಿಕ್​​ ಸಮಸ್ಯೆ ನಿವಾರಣೆ ನಿಟ್ಟಿನಲ್ಲೂ ಸಚಿವರು ಕಾರ್ಯಪ್ರವತ್ತರಾಗಿದ್ದು, ಸಿಗ್ನಲ್​​ಗಳಿಂದ 75 ಮೀಟರ್ ಒಳಗಿರುವ ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ಇತ್ತೀಚೆಗೆ ಸಚಿವ ಕೃಷ್ಣಭೈರೇಗೌಡ ಅವರ…

Read More

ಐಬಿಎಂ ಮಹಾಪತನ; ಆರು ದಶಕದಲ್ಲೇ ಹೀನಾಯ ಪ್ರದರ್ಶನ; 6.7 ಲಕ್ಷ ಕೋಟಿ ರೂ ಮೌಲ್ಯನಷ್ಟ; ಈ ಕುಸಿತಕ್ಕೆ ಏನು ಕಾರಣ? – Kannada News | IBM share price crash 25pc, biggest since 1967, reasons behind this fall

ವಾಷಿಂಗ್ಟನ್, ಜುಲೈ 15: ಜಾಗತಿಕ ತಂತ್ರಜ್ಞಾನ ದೈತ್ಯ IBM (ಇಂಟರ್ನ್ಯಾಷನಲ್ ಬಿಸಿನೆಸ್ ಮಷೀನ್ಸ್) ಕಂಪನಿಯ ಷೇರುಗಳು ಒಂದೇ ದಿನದಲ್ಲಿ ಬರೋಬ್ಬರಿ ಶೇ. 25.2 ರಷ್ಟು ಕುಸಿದಿವೆ. ಇದು ಕಂಪನಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಏಕದಿನ ಪತನವಾಗಿದ್ದು, 1987ರ ಪ್ರಸಿದ್ಧ “ಬ್ಲ್ಯಾಕ್ ಮಂಡೇ” ಮಾರುಕಟ್ಟೆ ಕುಸಿತದ ಸಂದರ್ಭದಲ್ಲೂ ಐಬಿಎಂ ಇಷ್ಟು ದೊಡ್ಡ ಹೊಡೆತ ತಿಂದಿರಲಿಲ್ಲ. ಈ ಒಂದೇ ದಿನದ ಪತನದಿಂದಾಗಿ ಕಂಪನಿಯ ಸುಮಾರು 70 ಬಿಲಿಯನ್ ಡಾಲರ್ (ಅಂದಾಜು 6.7 ಲಕ್ಷ ಕೋಟಿ ರೂ) ಮಾರುಕಟ್ಟೆ ಮೌಲ್ಯ ಧೂಳೀಪಟವಾಗಿದೆ….

Read More

ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ – Kannada News | Chikkamagaluru: Worker Rescued from 60 Foot Borewell in Koppa

ಚಿಕ್ಕಮಗಳೂರು, ಜುಲೈ 15: ಜಿಲ್ಲೆಯ ಕೊಪ್ಪ ತಾಲೂಕಿನ ಕವಡೆಕಟ್ಟೆ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಒಂದು ದುರಂತ ಸಂಭವಿಸಿದೆ. ಶಾಲೆಯ ಆವರಣದ ಕೊಳವೆ ಬಾವಿಯ ಮೇಲ್ಭಾಗವನ್ನು ಸ್ವಚ್ಛಗೊಳಿಸುವ ವೇಳೆ ವಿಶ್ವನಾಥ್ ಎಂಬ ಕಾರ್ಮಿಕ ಆಕಸ್ಮಿಕವಾಗಿ ಸುಮಾರು 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ಸ್ಥಳಕ್ಕೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ವಿಶ್ವನಾಥ್​ರನ್ನ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಬಾವಿಗೆ ಬಿದ್ದ ರಭಸಕ್ಕೆ ವಿಶ್ವನಾಥ್​ಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಚಿಕಿತ್ಸೆಗಾಗಿ ಕೊಪ್ಪ…

Read More

ಕರ್ನಾಟಕ ಕಂದಾಯ ಇಲಾಖೆಯಲ್ಲಿ 572 ವಿಎಒ ಹುದ್ದೆಗಳ ನೇಮಕಾತಿ: ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ – Kannada News | Karnataka Village Administrative Officer Recruitment 2026: Complete Application Guide

ಕಂದಾಯ ಇಲಾಖೆಯ 572 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ಆರಂಭImage Credit source: Getty Images ಕರ್ನಾಟಕ ಕಂದಾಯ ಇಲಾಖೆಯು (Karnataka Revenue Department) 2026ನೇ ಸಾಲಿನ 572 ಗ್ರಾಮ ಆಡಳಿತಾಧಿಕಾರಿ (Village Administrative Officer – VAO) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಈ ನೇಮಕಾತಿ ನಡೆಯಲಿದ್ದು, ಪಿಯುಸಿ /12ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಇದು ಉತ್ತಮ…

Read More

Loan Account: ಲೋನ್ ಅಕೌಂಟ್‌ನಲ್ಲಿನ ನಾಮಿನಿ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ – Kannada News | Loan Account: How to add a new nominee’s name to a loan account

ಎಷ್ಟೇ ಪರಿಚಯಸ್ಥರೇ ಆಗಲಿ, ಸಾಲ (loan) ಪಡೆಯುತ್ತಿದ್ದರೆ ಆ ಸಾಲಕ್ಕೆ ನಾಮಿನಿಯಾಗಿ ತಮ್ಮ ಹೆಸರನ್ನು ಹಾಕಲು ಹಿಂದೇಟು ಹಾಕುತ್ತೇವೆ. ಒಂದು ವೇಳೆ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಆ ಸಾಲದ ಹೊರೆ ನಮ್ಮ ಮೇಲೆ ಬರುತ್ತದೆ ಎಂಬ ಭಯ ಕಾಡುವುದು ಸಹಜ. ಆದರೆ ಈ ಸಾಲದ ಅವಧಿಯಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ, ಕಾನೂನು ಪ್ರಕ್ರಿಯೆಗಳನ್ನು ಸುಲಭಗೊಳಿಸುವುದೇ ಈ ನಾಮಿನಿ ಹೆಸರು (nominee name). ಸಾಲಗಾರನು ಈ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆ. ಸಾಲದ ಖಾತೆಯಲ್ಲಿರುವ…

Read More

ದೆಹಲಿ ಪ್ರಯಾಣಕ್ಕೂ ಮುನ್ನ ಸಿದ್ದರಾಮಯ್ಯರನ್ನು ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್: ಸಂಪುಟ ವಿಸ್ತರಣೆ ಬಗ್ಗೆ ಸುದೀರ್ಘ ಚರ್ಚೆ – Kannada News | Karnataka Cabinet Expansion: CM Shivakumar Meets Siddaramaiah before Travel to Delhi

ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಚಟುವಟಿಕೆಗಳು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದ ಈ ಭೇಟಿಯಲ್ಲಿ ಸಂಪುಟ ವಿಸ್ತರಣೆ ಕುರಿತು ಪ್ರಾಥಮಿಕ ಸಮಾಲೋಚನೆ ನಡೆಸಲಾಗಿದೆ. ಉಭಯ ನಾಯಕರು 40 ನಿಮಿಷಕ್ಕೂ ಹೆಚ್ಚು ಕಾಲ ಒನ್ ಟು ಒನ್ ಮಾತುಕತೆ ನಡೆಸಿದ್ದು, ಕಾವೇರಿ ನಿವಾಸದಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಇಂದು ಸಂಜೆ ಒಂದೇ ವಿಮಾನದಲ್ಲಿ…

Read More

ಇವಿ ಬ್ಯಾಟರಿ ಸ್ಫೋಟಗೊಳ್ಳುವುದು ಯಾಕೆ? ಸುರಕ್ಷಿತವಾಗಿ ಚಾರ್ಜಿಂಗ್ ಮಾಡುವುದು ಹೇಗೆ? – Kannada News | Fire accident during scooter battery charging at Noida, Things to remember when charging EVs

ಎವಿ ಚಾರ್ಜರ್Image Credit source: Marcin Golba/NurPhoto via Getty Images) ನವದೆಹಲಿ, ಜುಲೈ 15: ನೋಯ್ಡಾದ ಬಹುಮಹಡಿ ಕಟ್ಟಡವೊಂದರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಚಾರ್ಜ್ ಮಾಡುವಾಗ ಸಂಭವಿಸಿದ ಭೀಕರ ಶಾರ್ಟ್ ಸರ್ಕ್ಯೂಟ್ ಮತ್ತು ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ನಿಜಕ್ಕೂ ಆತಂಕಕಾರಿ. ಇತ್ತೀಚಿನ ದಿನಗಳಲ್ಲಿ ಇವಿ (EV – Electric Vehicle) ಬ್ಯಾಟರಿಗಳು ಚಾರ್ಜ್ ಆಗುವಾಗ ಅಥವಾ ಬಳಕೆಯಲ್ಲಿರುವಾಗ ದಿಢೀರನೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ಹಾಗಾದರೆ, ಈ ಬ್ಯಾಟರಿಗಳಲ್ಲಿ ಇಂತಹ ಅಪಾಯಗಳು ಏಕೆ…

Read More

ಕಲಬುರಗಿ ಸೆಂಟ್ರಲ್ ಜೈಲಿನಿಂದ ಕೈದಿಗಳು ಪರಾರಿ ಕೇಸ್: 8 ಜೈಲಧಿಕಾರಿಗಳ ಅಮಾನತು – Kannada News | 8 Jail Officials Suspended After Prisoners Escape from Central Jail

ಜೈಲಿನಿಂದ ಕೈದಿಗಳು ಪರಾರಿ ಕೇಸ್​Image Credit source: tv9 kannada ಕಲಬುರಗಿ,  ಜುಲೈ 15: ನಗರದ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳು ಪರಾರಿ (Jail Escape) ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಹಿನ್ನೆಲೆ 8 ಜೈಲಧಿಕಾರಿಗಳನ್ನು ಅಮಾನತುಗೊಳಿಸಿ (Suspension) ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಜೈಲಾಧಿಕಾರಿಗಳ ಈ ಬೇಜವಾಬ್ದಾರಿತನದ ಕುರಿತು ಟಿವಿ9 ಕನ್ನಡ ವಾಹಿನಿ ಸಾಕ್ಷಿ ಸಮೇತ ವರದಿ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಅಮಾನತುಗೊಳಿಸಲಾಗಿದೆ. ಯಾರೆಲ್ಲಾ ಅಮಾನತು? ಕಲಬುರಗಿ…

Read More

ಮೇಕಪ್ ಇಲ್ಲದೇ ಬಂದ ಮೌನಿ ರಾಯ್; ಫೋಟೋ ತೆಗೆಯಲು ಬಂದವರ ಮೇಲೆ ಗರಂ – Kannada News | Actress Mouni Roy loses cool at Paparazzi in Mumbai See Viral Video

ಬಾಲಿವುಡ್‌ನ ಗ್ಲಾಮರಸ್ ನಟಿ ಮೌನಿ ರಾಯ್ ಅವರು ಇತ್ತೀಚೆಗೆ ಮುಂಬೈನಲ್ಲಿ ಪಾಪರಾಜಿಗಳ (Paparazzi) ವರ್ತನೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾರಿನೊಳಗೆ ಕುಳಿತಿದ್ದರೂ ಬಿಡದೇ ಕ್ಯಾಮೆರಾ ಹಿಡಿದು ಬೆನ್ನತ್ತಿದ ಫೋಟೋಗ್ರಾಫರ್‌ಗಳ ವಿರುದ್ಧ ನಟಿ ತೀವ್ರವಾಗಿ ಕಿಡಿಕಾರಿದ್ದು, ‘ವಿಡಿಯೋ ಮಾಡುವುದನ್ನು ನಿಲ್ಲಿಸಿ’ ಎಂದು ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮಂಗಳವಾರ (ಜುಲೈ 14) ರಾತ್ರಿ ಮುಂಬೈನ ಬಾಂದ್ರಾದಲ್ಲಿರುವ ರೆಸ್ಟೋರೆಂಟ್‌ ಒಂದರಿಂದ ನಟಿ ಮೌನಿ ರಾಯ್ (Mouni Roy) ಅವರು ತಮ್ಮ ಆಪ್ತ…

Read More

ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ: ಅನ್ಬು ಕುಮಾರ್ – Kannada News | Chief Electoral Officer Anbu Kumar Addresses Concerns on Voter List Revision and Facilitation Centres

ಬೆಂಗಳೂರು, ಜು.15: ಸುದ್ದಿಗೋಷ್ಠಿಯಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ವಿವರವಾದ ಮಾಹಿತಿ ನೀಡಿದರು. ಫಾರ್ಮ್‌ಗಳ ವಿತರಣೆ, ಮತದಾರರ ಪಟ್ಟಿಗಳಲ್ಲಿನ ವಿಳಾಸದ ವ್ಯತ್ಯಾಸಗಳು ಮತ್ತು ದೂರುಗಳ ನಿರ್ವಹಣೆಯ ಕುರಿತು ಮಾಧ್ಯಮಗಳಿಂದ ಎದುರಾದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಮತದಾರರ ಪಟ್ಟಿಗೆ ಸಂಬಂಧಿಸಿದ ಒಂದೇ ಒಂದು ಫಾರ್ಮ್ ಸಹ ತಪ್ಪು ಪೋಲಿಂಗ್ ಸ್ಟೇಷನ್‌ಗೆ ತಲುಪಿಲ್ಲ ಎಂದು ಅನ್ಬು ಕುಮಾರ್ ಸ್ಪಷ್ಟಪಡಿಸಿದರು. ದೂರುಗಳಿದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಮತ್ತು ಸರಿಪಡಿಸುವುದಾಗಿ…

Read More