ತುಮಕೂರು: ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಸ್ಮಶಾನ, ಗೋಮಾಳದಲ್ಲಿ ಪತ್ತೆ – Kannada News | Tumakuru: Govt Hospital Meds Found Dumped in Koratagere, Water Pollution Risk
ಕೊರಟಗೆರೆ, ಜು.15: ಬಡ ರೋಗಿಗಳಿಗೆ ಉಚಿತವಾಗಿ ಸಿಗಬೇಕಾದ ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಸ್ಮಶಾನ ಹಾಗೂ ಜಾನುವಾರುಗಳು ಮೇಯುವ ಗೋಮಾಳದಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹುಲಿಕುಂಟೆ ಸಮೀಪದ ಕಾಮೇನಹಳ್ಳಿಯಲ್ಲಿ ನಡೆದಿದೆ. ಇನ್ನೂ ಬಳಸಲು ಯೋಗ್ಯವಾಗಿದ್ದ ಸಾವಿರಾರು ಮಾತ್ರೆಗಳನ್ನು ಯಾರಿಗೂ ತಿಳಿಯದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರೆಗಳು ಸಿಕ್ಕ ಜಾಗದ ಸಮೀಪದಲ್ಲೇ ಪ್ರಮುಖ ಕೆರೆಯೊಂದಿದ್ದು, ಮಳೆ ಬಂದರೆ ಈ ಮಾತ್ರೆಗಳ ರಾಸಾಯನಿಕ ನೀರು ಕೆರೆ ಸೇರಿ ಇಡೀ ಗ್ರಾಮದ…