Headlines

ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ: ಅನ್ಬು ಕುಮಾರ್ – Kannada News | Chief Electoral Officer Anbu Kumar Addresses Concerns on Voter List Revision and Facilitation Centres

ಬೆಂಗಳೂರು, ಜು.15: ಸುದ್ದಿಗೋಷ್ಠಿಯಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ವಿವರವಾದ ಮಾಹಿತಿ ನೀಡಿದರು. ಫಾರ್ಮ್‌ಗಳ ವಿತರಣೆ, ಮತದಾರರ ಪಟ್ಟಿಗಳಲ್ಲಿನ ವಿಳಾಸದ ವ್ಯತ್ಯಾಸಗಳು ಮತ್ತು ದೂರುಗಳ ನಿರ್ವಹಣೆಯ ಕುರಿತು ಮಾಧ್ಯಮಗಳಿಂದ ಎದುರಾದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಮತದಾರರ ಪಟ್ಟಿಗೆ ಸಂಬಂಧಿಸಿದ ಒಂದೇ ಒಂದು ಫಾರ್ಮ್ ಸಹ ತಪ್ಪು ಪೋಲಿಂಗ್ ಸ್ಟೇಷನ್‌ಗೆ ತಲುಪಿಲ್ಲ ಎಂದು ಅನ್ಬು ಕುಮಾರ್ ಸ್ಪಷ್ಟಪಡಿಸಿದರು. ದೂರುಗಳಿದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಮತ್ತು ಸರಿಪಡಿಸುವುದಾಗಿ…

Read More

ಕೋಲ್ಕತ್ತಾದಿಂದ ಬೆಂಗಳೂರು ಸೇರಿ ನಾಲ್ಕು ಮಹಾನಗರಗಳಿಗೆ ಐಷಾರಾಮಿ ಬಸ್ ಸೇವೆ ಆರಂಭ: ಪ್ರಯಾಣದ ಸಮಯ, ಟಿಕೆಟ್​​ ದರದ ಬಗ್ಗೆ ಇಲ್ಲಿದೆ ಮಾಹಿತಿ – Kannada News | Luxury Bus Services Launches From Kolkata to Bengaluru, Delhi, Chennai, and Puri: Check Travel Time, Ticket Fares and Amenities

ಕೋಲ್ಕತ್ತಾದಿಂದ ಬೆಂಗಳೂರಿಗೆ ಐಷಾರಾಮಿ ಬಸ್ ಸೇವೆ ಆರಂಭ ಕೋಲ್ಕತ್ತಾ, ಜುಲೈ 15: ಕೋಲ್ಕತ್ತಾದಿಂದ ದೂರ ಪ್ರಯಾಣ ಮಾಡುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು, ದೆಹಲಿ, ಚೆನ್ನೈ ಹಾಗೂ ಪುರಿಗೆ ಐಷಾರಾಮಿ ಬಸ್ ಸೇವೆ ಆರಂಭಿಸಲಾಗಿದೆ. ರೈಲು ಹಾಗೂ ವಿಮಾನ ಪ್ರಯಾಣಕ್ಕೆ ಪರ್ಯಾಯವಾಗಿ ಈ ಸೇವೆಯನ್ನು ಪರಿಚಯಿಸಲಾಗಿದೆ. ಈ ಬಸ್‌ಗಳು ಕರುಣಾಮಯಿ ಬಸ್ ಟರ್ಮಿನಸ್‌ನಿಂದ ಸಂಚಾರ ಆರಂಭಿಸಲಿದ್ದು, ವಾರದ ಎಲ್ಲಾ ದಿನಗಳಲ್ಲೂ ಸೇವೆ ಲಭ್ಯವಿರಲಿದೆ ಎಂದು ಸಂಸ್ಥೆ ತಿಳಿಸಿದೆ. ಮಾರ್ಗಗಳು ಮತ್ತು ಪ್ರಯಾಣ ದರ ಕೋಲ್ಕತ್ತಾ–ದೆಹಲಿ: ₹2,500 ರಿಂದ ₹3,000,…

Read More

ಭ್ರಷ್ಟಾಚಾರದ ವಿರುದ್ಧ ವಿಜಯ್ ಕರೆ ನೀಡಿದ ಬೆನ್ನಲ್ಲೇ ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ – Kannada News | BJP releases TVK Bribery Video Tamil Nadu CM Vijay opens Helpline Number Against Corruption

ಚೆನ್ನೈ, ಜುಲೈ 15: ಭ್ರಷ್ಟಾಚಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ಕರೂರ್ ರ್‍ಯಾಲಿಯಲ್ಲಿ ನೀಡಿದ್ದ ಭಾಷಣದ ವಿಡಿಯೋ ಭಾರಿ ವೈರಲ್ ಆಗುತ್ತಿರುವ ಬೆನ್ನಲ್ಲೇ, ಅವರದ್ದೇ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಜಿಲ್ಲಾ ಪದಾಧಿಕಾರಿಯೊಬ್ಬರು ಲಂಚ ಪಡೆಯುತ್ತಿರುವ ಆಪಾದಿತ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ. ತಮಿಳುನಾಡು ಬಿಜೆಪಿ ನಾಯಕ ವಿನೋಜ್ ಪಿ. ಸೆಲ್ವಂ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಿಜಯ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ….

Read More

ಸೆಮಿಕಂಡಕ್ಟರ್, ಮೂಲಸೌಕರ್ಯ, ಮೊಬೈಲ್ ಫೋನ್ ಉತ್ಪಾದನೆ ಸೇರಿದಂತೆ ಏಳು ಪ್ರಮುಖ ಯೋಜನೆಗಳಿಗೆ ಸರ್ಕಾರದ ಅನುಮೋದನೆ – Kannada News | Union Cabinet approves few big steps, including Semicon mission, mobile PLI, Varanasi projects

ನವದೆಹಲಿ, ಜುಲೈ 15: ಭಾರತದಲ್ಲಿ ತಯಾರಿಕಾ ಕ್ಷೇತ್ರ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ಮತ್ತಷ್ಟು ಪುಷ್ಟಿ ಕೊಡಲು ಸರ್ಕಾರ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ ಕೆಲ ಮಹತವದ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಮತ್ತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ದೇಶದ ಮೂಲಸೌಕರ್ಯ, ಸೆಮಿಕಂಡಕ್ಟರ್, ಕೃಷಿ ಮತ್ತು ರೈಲ್ವೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 2,19,353 ಕೋಟಿ ರೂ ವೆಚ್ಚದ 7 ಪ್ರಮುಖ ಐತಿಹಾಸಿಕ ನಿರ್ಧಾರಗಳಿಗೆ ಅನುಮೋದನೆ…

Read More

ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ: “ನನಗೇನು ಸಮಸ್ಯೆ ಇರಲಿಲ್ಲ, ಅದಕ್ಕೆ ಹೋಗಲಿಲ್ಲ” – Kannada News | Ramalinga Reddy Dismisses Dissatisfaction Rumours After Skipping CMs Bengaluru Meeting

ಬೆಂಗಳೂರು ಜು.15: ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರು ಇತ್ತೀಚೆಗೆ ಕರೆದಿದ್ದ ಬೆಂಗಳೂರು ಶಾಸಕರ ಸಭೆಗೆ ಗೈರು ಆಗಿರುವ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. “ಸಮಸ್ಯೆಗಳಿದ್ದವರು ಮುಖ್ಯಮಂತ್ರಿಗಳ ಸಭೆಗೆ ಹೋಗಿದ್ದರು. ನನಗೇನು ಸಮಸ್ಯೆಗಳಿರಲಿಲ್ಲ, ಆದ್ದರಿಂದ ನಾನು ಹೋಗಲಿಲ್ಲ,” ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಡಾ. ಜಿ. ಪರಮೇಶ್ವರ ಅವರು ಬೆಂಗಳೂರಿಗೆ ಸಂಬಂಧಿಸಿದ BMRDA ಮತ್ತು BDA ಖಾತೆಗಳನ್ನು ಹೊಂದಿದ್ದಾರೆ. ಸಮಸ್ಯೆಗಳಿದ್ದ ಶಾಸಕರು ಸಭೆಗೆ ಹಾಜರಾಗಿದ್ದರು. ತಮಗೆ ಯಾವುದೇ ವಿಷಯಗಳ ಕುರಿತು ಚರ್ಚೆ ಅಗತ್ಯವಿಲ್ಲದ ಕಾರಣ…

Read More

Auto Tips: ವಿವಿಧ ರೀತಿಯ ಹೈಬ್ರಿಡ್ ಕಾರುಗಳು ಯಾವುವು?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ? – Kannada News | Auto Tips Types of hybrid cars explained parallel series plug in mild hybrid guide

ಇಂಧನ ಬೆಲೆ ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಹೈಬ್ರಿಡ್ ಕಾರುಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯ ಪೆಟ್ರೋಲ್ (Petrol) ಅಥವಾ ಡೀಸೆಲ್ ಕಾರುಗಳಿಗಿಂತ ಉತ್ತಮ ಮೈಲೇಜ್ ನೀಡುವ ಕಾರಣದಿಂದ ಅನೇಕರು ಹೈಬ್ರಿಡ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೈಬ್ರಿಡ್ ಕಾರುಗಳಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟರ್ ಕೂಡ ಇರುತ್ತದೆ. ಈ ಎರಡೂ ವ್ಯವಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸುವುದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ ಮತ್ತು ಕಾರಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಆದರೆ ಹೈಬ್ರಿಡ್ ಕಾರುಗಳು ಒಂದೇ ಮಾದರಿಯಲ್ಲ. ಅವು ಹಲವು ವಿಧಗಳಾಗಿದ್ದು,…

Read More

ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಬಂಡಾಯ ಬಣ ಸೇರಿದ ಟಿಎಂಸಿ ಹಿರಿಯ ನಾಯಕ ಮದನ್ ಮಿತ್ರ – Kannada News | Another big blow to Mamata Banerjee TMC Leader Madan Mitra joins rebel faction

ಕೊಲ್ಕತ್ತಾ, ಜುಲೈ 15: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ಟಿಎಂಸಿಯ ಹಿರಿಯ ನಾಯಕ ಮದನ್ ಮಿತ್ರ ಇಂದು ಟಿಎಂಸಿ ಪಕ್ಷ ತೊರೆದು, ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಟಿಎಂಸಿ ಬಣವನ್ನು ಸೇರಿಕೊಂಡಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಮರ್ಹಾಟಿ ಕ್ಷೇತ್ರದಿಂದ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದ ಮದನ್ ಮಿತ್ರ ಪಕ್ಷದ ಇತ್ತೀಚಿನ ಆಂತರಿಕ ಬಿಕ್ಕಟ್ಟಿನ ಸಮಯದಲ್ಲೂ ಮಮತಾ ಬ್ಯಾನರ್ಜಿ ಪರ ನಿಂತಿದ್ದರು. ಆದರೆ…

Read More

ಬೆಂಗಳೂರಲ್ಲಿ ದಾಖಲೆ ಬರೆದ ಉಷ್ಣಾಂಶ: 112 ವರ್ಷಗಳ ಬಳಿಕ ಜುಲೈನಲ್ಲಿ ಅತ್ಯಧಿಕ ತಾಪಮಾನ ದಾಖಲು – Kannada News | Karnataka Weather Updates: Bengaluru Records 33.6°C, Breaking 112 Year Old Maximum Temperature Record for July

ಬೆಂಗಳೂರಲ್ಲಿ 112 ವರ್ಷದ ಬಳಿಕ ಜುಲೈನಲ್ಲಿ ದಾಖಲೆ ತಾಪಮಾನImage Credit source: Getty Images ಬೆಂಗಳೂರು, ಜುಲೈ 15: ನೈಋತ್ಯ ಮುಂಗಾರು ದುರ್ಬಲಗೊಂಡಿರುವ ಪರಿಣಾಮ ಕರ್ನಾಟಕದಾದ್ಯಂತ ತಾಪಮಾನ ಏರಿಕೆಯಾಗಿದ್ದು, ಮಂಗಳವಾರ (ಜುಲೈ 14)ರಂದು ಬೆಂಗಳೂರಲ್ಲಿ ಗರಿಷ್ಠ ತಾಪಮಾನ 33.6 ಡಿಗ್ರಿ ಸೆಲ್ಸಿಯಸ್ ಕಂಡುಬಂದಿದೆ. ಜುಲೈ ತಿಂಗಳಲ್ಲಿ 112 ವರ್ಷಗಳ ಬಳಿಕ ನಗರದಲ್ಲಿ ದಾಖಲಾಗಿರುವ ಅತ್ಯಧಿಕ ತಾಪಮಾನ ಇದಾಗಿದೆ. ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ 33.3 ಡಿಗ್ರಿ…

Read More

ಬೆಂಗಳೂರು: ಶಿಥಿಲಾವಸ್ಥೆಗೆ ತಲುಪಿದ ಫ್ಲೈಓವರ್ ತಡೆಗೋಡೆ; ಜನರ ಜೀವಕ್ಕೆ ಕಂಟಕ! – Kannada News | Bengaluru Flyover Retaining Wall on the Verge of Collapse; Poses Serious Threat to Public Safety

ಬೀಳುವ ಹಂತದಲ್ಲಿರುವ ಫ್ಲೈಓವರ್ ತಡೆಗೋಡೆImage Credit source: tv9 kannada ಬೆಂಗಳೂರು, ಜುಲೈ 15: ಸಿಲಿಕಾನ್ ಸಿಟಿಯಲ್ಲಿ (Bengaluru) ರಸ್ತೆ ಗುಂಡಿಗಳಿಂದ ಹೈರಾಣಾಗಿರುವ ವಾಹನ ಸವಾರರಿಗೆ ಈಗ ಮತ್ತೊಂದು ಹೊಸ ಗಂಡಾಂತರ ಎದುರಾಗಿದೆ. ನಗರದ ಪ್ರಮುಖ ರಸ್ತೆಯೊಂದರಲ್ಲಿ ಶಿಥಿಲಾವಸ್ಥೆಗೊಂಡು ರಸ್ತೆಯ ಕಡೆಗೆ ವಾಲಿ ನಿಂತಿರುವ ತಡೆಗೋಡೆಯೊಂದು ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಅಪಾಯ ಕಣ್ಣೆದುರೇ ಕಾಣುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಮೇಲ್ಸೇತುವೆ ತಡೆಗೋಡೆ ದುರಸ್ತಿಗೆ ಜಿಬಿಎ (GBA) ಮೀನಾಮೇಷ ಎಣಿಸುತ್ತಿದೆ. ಶಿಥಿಲಾವಸ್ಥೆಗೆ ತಲುಪಿದ ಮೇಲ್ಸೇತುವೆಯ…

Read More

ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ – Kannada News | Actor CM Vijay Jana Nayagan movie Release Date Confirmed July 23 KVN Productions

ಕಾಲಿವುಡ್ ಸ್ಟಾರ್ ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Thalapathy Vijay) ಅವರ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಬಿಡುಗಡೆ ದಿನಾಂಕ (Jana Nayagan Release Date) ಘೋಷಣೆ ಆಗಿದೆ. ಈ ಬಹುನಿರೀಕ್ಷಿತ ಸಿನಿಮಾಗೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆ ಬಂಡವಾಳ ಹೂಡಿದ್ದು, ಈಗ ಚಿತ್ರದ ಬಿಡುಗಡೆಗೆ ಸಕಲ ತಯಾರಿ ಮಾಡಿಕೊಂಡಿದೆ. ಕಳೆದ ಏಳು ತಿಂಗಳಿನಿಂದ ಎದುರಿಸುತ್ತಿದ್ದ ಎಲ್ಲಾ ಕಾನೂನು ಹೋರಾಟಗಳು ಮತ್ತು ಸೆನ್ಸಾರ್ ಮಂಡಳಿ ಜೊತೆಗಿನ ವಿವಾದಗಳಿಗೆ ತೆರೆ…

Read More