Gold Rate: ಚಿನ್ನದ ಬೆಲೆ ಗ್ರಾಮ್​ಗೆ 70 ರೂ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 15th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 15: ಕಳೆದ ಎರಡು ದಿನದಲ್ಲಿ ಗ್ರಾಮ್​ಗೆ 140 ರೂ ಕಡಿಮೆಗೊಂಡಿದ್ದ ಬಂಗಾರದ ದರ (Gold Price) ಇವತ್ತು ಬುಧವಾರ 70 ರೂ ಹೆಚ್ಚಿದೆ. ಇದರ ನಡುವೆಯೂ ಕಳೆದ ಎರಡು ವಾರದಲ್ಲಿ ಚಿನ್ನದ ಬೆಲೆ 1,700 ರೂಗಳಷ್ಟು ಕಡಿಮೆ ಆಗಿದೆ. ಮೇ ಎರಡನೇ ವಾರದಲ್ಲಿ ಆಭರಣ ಚಿನ್ನದ ಬೆಲೆ 14,850 ರೂವರೆಗೂ ಏರಿತ್ತು. ಬೆಳ್ಳಿ ಬೆಲೆ ಇವತ್ತೂ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 15ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,357 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,160 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,767 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,357 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,160 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,160 ರೂ
  • ಚೆನ್ನೈ: 13,180 ರೂ
  • ಮುಂಬೈ: 13,160 ರೂ
  • ದೆಹಲಿ: 13,175 ರೂ
  • ಕೋಲ್ಕತಾ: 13,160 ರೂ
  • ಕೇರಳ: 13,160 ರೂ
  • ಅಹ್ಮದಾಬಾದ್: 13,165 ರೂ
  • ಜೈಪುರ್: 13,175 ರೂ
  • ಲಕ್ನೋ: 13,175 ರೂ
  • ಭುವನೇಶ್ವರ್: 13,160 ರೂ

ಇದನ್ನೂ ಓದಿ: ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 543 ರಿಂಗಿಟ್ (12,818 ರುಪಾಯಿ)
  • ದುಬೈ: 491.25 ಡಿರಾಮ್ (12,859 ರುಪಾಯಿ)
  • ಅಮೆರಿಕ: 135 ಡಾಲರ್ (12,976 ರುಪಾಯಿ)
  • ಸಿಂಗಾಪುರ: 177.60 ಸಿಂಗಾಪುರ್ ಡಾಲರ್ (13,230 ರುಪಾಯಿ)
  • ಕತಾರ್: 491 ಕತಾರಿ ರಿಯಾಲ್ (12,797 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,975 ರುಪಾಯಿ)
  • ಓಮನ್: 51.95 ಒಮಾನಿ ರಿಯಾಲ್ (12,970 ರುಪಾಯಿ)
  • ಕುವೇತ್: 40.90 ಕುವೇತಿ ದಿನಾರ್ (12,776 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:22 am, Wed, 15 July 26

Source link

Mysore Big Tech Show: ಜಾಗತಿಕ ಮಾರುಕಟ್ಟೆಗೆ ನಿಮ್ಮ ಉದ್ಯಮವನ್ನು ವಿಸ್ತರಿಸಲು ಇಲ್ಲಿದೆ ಅಪೂರ್ವ ಅವಕಾಶ! – Kannada News | Mysore Big Tech Show: KDEM and Munde Banni Partner for Global Market Access for Karnataka Entrepreneurs

ಕರ್ನಾಟಕದಲ್ಲಿ ಸರ್ಕಾರ ಮತ್ತು ಉದ್ಯಮ ಲೋಕದ ನಡುವೆ ಜ್ಞಾನ ಸೇತುವೆಯಂತೆ ಕೆಲಸ ಮಾಡುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್ ಇದೇ ಜುಲೈ 22 ಮತ್ತು 23ರಂದು ಮೈಸೂರಿನಲ್ಲಿ ನಡೆಯುತ್ತಿರುವ ಮೈಸೂರು ಬಿಗ್ ಟೆಕ್ ಶೋಗೆ ‘ಮುಂದೆ ಬನ್ನಿ’ ಸಂಸ್ಥೆಯನ್ನು ಅಧಿಕೃತ ಕಮ್ಯೂನಿಟಿ ಪಾರ್ಟನರ್ ಆಗಿ ಗುರುತಿಸಿದೆ. ಬೆಂಗಳೂರು ಟೆಕ್ ಸಮ್ಮಿಟ್ ಗೆ ಪೂರ್ವಭಾವಿಯಾಗಿ ಕರ್ನಾಟಕದ ಆರು ನಗರಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇದು ಮೊದಲನೆಯದ್ದು.

ಎರಡು ದಿನಗಳ ಕಾಲ ಉದ್ಯಮ ಲೋಕದ ದಿಗ್ಗಜರು, ಸರ್ಕಾರದ ಪ್ರತಿನಿಧಿಗಳು, ಮೈಸೂರು ಭಾಗದ ಉದ್ಯಮ ವಲಯದ ಇಕೋ ಸಿಸ್ಟಂ ರೂಪಿಸುತ್ತಿರುವ ಎಲ್ಲರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಯುವ ಉದ್ಯಮಿಗಳಿಗೆ ಮಾರ್ಗದರ್ಶನ, ಸಂಪರ್ಕ, ತಿಳಿವು ನೀಡುವ ಹಲವಾರು ಉಪಯುಕ್ತ ಕಾರ್ಯಕ್ರಮಗಳು ಇಲ್ಲಿರಲಿವೆ.

ಕರ್ನಾಟಕದಾದ್ಯಂತ ಆಹಾರ ಉತ್ಪನ್ನಗಳು (ಜೇನು ತುಪ್ಪ, ಮಸಾಲೆ ಪದಾರ್ಥಗಳು, ಆರ್ಗ್ಯಾನಿಕ್ ಉತ್ಪನ್ನಗಳು, ಸುಸ್ಥಿರ ಆರ್ಥಿಕತೆಗೆ ಪೂರಕವಾದ ಉತ್ಪನ್ನಗಳು (ಅಡಿಕೆ ಹಾಳೆಯ ಪ್ಲೇಟು, ಚಮಚ ಇತ್ಯಾದಿ), ಟೆಕ್ನಾಲಜಿ, ಐಟಿ ಸೇವೆ ಹೀಗೆ ಯಾವುದೇ ವಲಯದಲ್ಲಿ ಉತ್ಪನ್ನ ಇಲ್ಲವೇ ಸೇವೆ ಕಲ್ಪಿಸುತ್ತಿರುವ ಉದ್ಯಮಿಗಳು ತಮ್ಮ ಉದ್ಯಮವನ್ನು ಭಾರತದ ಆಚೆ ಹರಡಲು ಬಯಸುತ್ತಿದ್ದಲ್ಲಿ ಮುಂದೆ ಬನ್ನಿ ಮತ್ತು KDEM ಜೊತೆಗೂಡಿ ಹಮ್ಮಿಕೊಳ್ಳುತ್ತಿರುವ Global Market Access ಸೆಶನ್ ಅಲ್ಲಿ ಪಾಲ್ಗೊಳ್ಳಬಹುದು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ನೆದರ್ ಲ್ಯಾಂಡ್, ಫ್ರಾನ್ಸ್ ಮತ್ತು ಜಪಾನ್ ದೇಶದ ಪ್ರತಿನಿಧಿಗಳು ಈ ಸೆಶನ್ ಅಲ್ಲಿ ಭಾಗವಹಿಸಿ ನಿಮ್ಮ ಉತ್ಪನ್ನಗಳನ್ನು ಆ ದೇಶದ ಮಾರುಕಟ್ಟೆಗೆ ಒಯ್ಯುವ ಬಗೆಯನ್ನು ವಿವರಿಸಲಿದ್ದಾರೆ. ನಿಮ್ಮ ಕಂಪನಿಯನ್ನು ಭಾರತದ ಆಚೆಗೆ ಒಯ್ಯಬೇಕು ಅನ್ನುವ ಆಸಕ್ತಿ ಇದ್ದಲ್ಲಿ ನೀವು ಪಾಲ್ಗೊಳ್ಳಬಹುದು. ಆಯ್ಕೆಯಾದ 30 ಜನರಿಗೆ ಮುಂದೆ ಬನ್ನಿ ವತಿಯಿಂದ ಉಚಿತ ಪ್ರವೇಶ ಕಲ್ಪಿಸಲಾಗುವುದು. ಆಸಕ್ತ ಉದ್ಯಮಿಗಳು ರಿಜಿಸ್ಟರ್ ಮಾಡಿಕೊಳ್ಳಿ. 18ನೇ ತಾರೀಕು ಕೊನೆಯ ದಿನ.

ಆಸಕ್ತ ಉದ್ಯಮಿಗಳು ರೆಜಿಸ್ಟರ್ ಮಾಡಿಕೊಳ್ಳಿ: forms.gle/r51hiUjhdQ6azELH9

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 12:04 pm, Wed, 15 July 26

Source link

ಭಾರತದಲ್ಲಿ ಬೆಳೆಯುತ್ತಿರುವ ಡೇಟಾ ಸೆಂಟರ್​ಗಳಿಂದ ಭರ್ಜರಿ ಉದ್ಯೋಗ ಸೃಷ್ಟಿ; 4 ವರ್ಷದಲ್ಲಿ 1 ಲಕ್ಷ ಎಂಜಿನಿಯರುಗಳಿಗೆ ಉದ್ಯೋಗಾವಕಾಶ – Kannada News | Data Centre industry fast growing in India, may have demand 1 lakh engineering jobs in 4 years

ನವದೆಹಲಿ, ಜುಲೈ 15: ಡೇಟಾ ಸೆಂಟರ್​ಗಳಲ್ಲಿ ಹೂಡಿಕೆ ಹೆಚ್ಚು, ಉದ್ಯೋಗ ಕಡಿಮೆ ಎನ್ನುವ ಆರೋಪಗಳ ನಡುವೆ ಹೊಸ ವರದಿಯೊಂದು ಬೇರೆಯದೇ ಕಥೆ ಹೇಳುತ್ತಿದೆ. ಡೇಟಾ ಸೆಂಟರ್ (Data Centre) ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಇದು ಅತಿ ಉದ್ಯೋಗ ಸೃಷ್ಟಿಯಲ್ಲೂ ಪ್ರಮುಖ ಎನಿಸಿದೆ. ಎನ್​ಎಲ್​ಬಿ ಸರ್ವಿಸಸ್ ಕಲೆಹಾಕಿದ ದತ್ತಾಂಶದ ಪ್ರಕಾರ, ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಗಳಲ್ಲಿ ಡೇಟಾ ಸೆಂಟರ್ ಕೂಡ ಒಂದೆನಿಸುತ್ತಿದೆ. 2030ರ ವೇಳೆಗೆ ಈ ವಲಯದಲ್ಲಿ ಸುಮಾರು 1 ಲಕ್ಷ ಎಂಜಿನಿಯರುಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ.

ಪ್ರಸ್ತುತ ಭಾರತದಲ್ಲಿರುವ ಡೇಟಾ ಸೆಂಟರ್‌ಗಳ ಸಾಮರ್ಥ್ಯ ಸುಮಾರು 1.5 ಗಿಗಾವ್ಯಾಟ್ (GW) ಇದ್ದು, ಇದು ಈ ದಶಕದ ಅಂತ್ಯದ ವೇಳೆಗೆ (2030) 6.5 GW ಗೆ ಏರಿಕೆಯಾಗುವ ಅಂದಾಜಿದೆ. ಭಾರತದ ಈ ಮಾರುಕಟ್ಟೆಯು 22 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆಯಿದೆ. ಈಗಾಗಲೇ ಈ ವಲಯದಲ್ಲಿ ಜಾಗತಿಕವಾಗಿ ಸುಮಾರು 126 ಬಿಲಿಯನ್ ಡಾಲರ್‌ಗೂ ಹೆಚ್ಚು ಹೂಡಿಕೆ ಮಾಡಲು ಒಪ್ಪಂದಗಳಾಗಿವೆ.

ಇದನ್ನೂ ಓದಿ: ಮ್ಯಾನುಫ್ಯಾಕ್ಚರಿಂಗ್​ಗೆ ಇದೆ ಸೂಚ್ಯಂಕ; ಈಗ ಸೇವಾ ವಲಯದ ಉತ್ಪಾದನೆಗೂ ಸರ್ಕಾರ ತಂದಿದೆ ಹೊಸ ಸೂಚ್ಯಂಕ

ಡೇಟಾ ಸೆಂಟರ್ ಉದ್ಯಮದಲ್ಲಿ ಕೌಶಲ್ಯದ ಕೊರತೆ

ಡೇಟಾ ಸೆಂಟರ್ ಉದ್ಯಮವು ಇಷ್ಟು ವೇಗವಾಗಿ ಬೆಳೆಯುತ್ತಿದ್ದರೂ, ಮಾರುಕಟ್ಟೆಯಲ್ಲಿ ಅಗತ್ಯವಿರುವ ತಾಂತ್ರಿಕ ಕೌಶಲ್ಯ ಹೊಂದಿದ ಉದ್ಯೋಗಿಗಳ ಕೊರತೆಯಿದೆ ಎನ್ನುವ ಸಂಗತಿಯನ್ನು ಎನ್​ಎಲ್​ಬಿ ಸರ್ವಿಸಸ್​ನ ವರದಿಯಲ್ಲಿ ಎತ್ತಿ ತೋರಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ನೀತಿ ನಿರೂಪಕರು ಒಟ್ಟಾಗಿ ಕೆಲಸ ಮಾಡಿ ಮುಂದಿನ ಪೀಳಿಗೆಯನ್ನು ಈ ತಂತ್ರಜ್ಞಾನಕ್ಕೆ ಸಜ್ಜುಗೊಳಿಸದಿದ್ದರೆ, ಈ ಬೆಳವಣಿಗೆಗೆ ಹಿನ್ನಡೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಯಾವ ರೀತಿಯ ಉದ್ಯೋಗಗಳಿಗೆ ಬೇಡಿಕೆ ಇದೆ?

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆ ಹೆಚ್ಚಾಗುತ್ತಿರುವುದರಿಂದ, ಡೇಟಾ ಸೆಂಟರ್‌ಗಳ ಒಟ್ಟು ಸಾಮರ್ಥ್ಯದ ಶೇ. 30 ರಷ್ಟು ಭಾಗ ಕೇವಲ AI ಕೆಲಸಗಳಿಗೇ ಬಳಕೆಯಾಗಲಿದೆ. ಹಾಗಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ತಾಂತ್ರಿಕ ನುರಿತವರಿಗೆ ಭಾರಿ ಬೇಡಿಕೆ ಇರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆ ಕ್ಷೇತ್ರಗಳು ಈ ಕೆಳಕಾಣಿಸಿದಂತಿವೆ:

ಡಿಜಿಟಲ್ ಮತ್ತು ಸಾಫ್ಟ್‌ವೇರ್ ವಿಭಾಗ:

  • AI ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ (AI ಮೂಲಸೌಕರ್ಯ ಎಂಜಿನಿಯರಿಂಗ್)
  • ಕ್ಲೌಡ್ ಆಪರೇಷನ್ಸ್ (Cloud Operations)
  • ಪ್ಲಾಟ್‌ಫಾರ್ಮ್ ಎಂಜಿನಿಯರಿಂಗ್, DevOps ಮತ್ತು MLOps
  • ಡೇಟಾ ಸೆಂಟರ್ ಆಟೊಮೇಷನ್ (ಸ್ವಯಂಚಾಲಿತ ತಂತ್ರಜ್ಞಾನ)

ಇದನ್ನೂ ಓದಿ: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿ: ಸಾಮಾನ್ಯ ಜನರಿಗೆ ಹಬ್ಬ, ಕಾರು, ವಿಸ್ಕಿ, ಚಾಕೊಲೇಟ್ ಭಾರಿ ಅಗ್ಗ

ಭೌತಿಕ ಮೂಲಸೌಕರ್ಯ (Physical Infrastructure) ವಿಭಾಗ:

  • ಲಿಕ್ವಿಡ್ ಕೂಲಿಂಗ್ ಎಂಜಿನಿಯರ್‌ಗಳು (ಡೇಟಾ ಸೆಂಟರ್‌ಗಳನ್ನು ತಂಪಾಗಿಡುವ ತಂತ್ರಜ್ಞಾನ)
  • ಇಂಧನ ದಕ್ಷತೆ ತಜ್ಞರು (Energy Optimisation Specialists)
  • ಪವರ್ ಸಿಸ್ಟಮ್ಸ್ ಎಕ್ಸ್‌ಪರ್ಟ್ಸ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇನ್ಮುಂದೆ 15 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಆ್ಯಂಬುಲೆನ್ಸ್: ಲೇಟಾಗಿ ಬಂದ್ರೆ ಬೀಳುತ್ತೆ 5 ಸಾವಿರ ದಂಡ – Kannada News | Karnataka Health: Strict 108 Ambulance 15 Min Response Rule and Fines

ಬೆಂಗಳೂರು, ಜು.15: ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಜೀವದಾತನಾಗಿರುವ 108 ಆ್ಯಂಬುಲೆನ್ಸ್ ಸೇವೆಗೆ ಸಂಬಂಧಿಸಿದಂತೆ ಕರ್ನಾಟಕ ಆರೋಗ್ಯ ಇಲಾಖೆಯು ದೇಶದಲ್ಲೇ ಅತ್ಯಂತ ನಾವೀನ್ಯ ಹಾಗೂ ಕಟ್ಟುನಿಟ್ಟಾದ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ಇನ್ಮುಂದೆ ಕರೆ ಮಾಡಿದ ಕೇವಲ 15 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ರೋಗಿಯಿರುವ ಸ್ಥಳಕ್ಕೆ ತಲುಪದಿದ್ದರೆ, ಸಂಬಂಧಪಟ್ಟ ಚಾಲಕರಿಗೆ ಅಥವಾ ಏಜೆನ್ಸಿಗೆ 5,000 ರೂಪಾಯಿ ಭಾರಿ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಈ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ತುರ್ತು ವೈದ್ಯಕೀಯ ಸೇವೆಯಲ್ಲಿ ಇನ್ಮುಂದೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ನಿಯಮ ಅನ್ವಯವಾಗಲಿದ್ದು ಈ ಬಗ್ಗೆ ಪ್ರಮುಖ ಎಚ್ಚರಿಕೆಗಳನ್ನು ನೀಡಿದೆ.

ಆ್ಯಂಬುಲೆನ್ಸ್ ಸಿಬ್ಬಂದಿಗೆ ರೋಗಿಯಿರುವ ಸ್ಥಳವನ್ನು ತಲುಪಲು 13 ರಿಂದ ಗರಿಷ್ಠ 15 ನಿಮಿಷಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ನಿಗದಿತ ಸಮಯ ಮೀರಿದರೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಚಾಲಕರ ವಿಳಂಬ ಧೋರಣೆಗೆ ಅವರನ್ನು ನಿಯೋಜಿಸಿರುವ ಆ್ಯಂಬುಲೆನ್ಸ್ ಏಜೆನ್ಸಿಯೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇನ್ನು ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ನೆಪವೊಡ್ಡಿ ಅನಗತ್ಯ ವಿಳಂಬ ಮಾಡಲು ಇನ್ಮುಂದೆ ಅವಕಾಶವಿಲ್ಲ. ಸಮಯ ಪಾಲನೆ ಮಾಡುವುದು ಚಾಲಕರು ಹಾಗೂ ಸೇವಾ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.

ಸಮಯಕ್ಕೆ ಸರಿಯಾಗಿ ಸೇವೆ ಒದಗಿಸಲು ಮತ್ತು ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಸರ್ಕಾರ ಮೂಲಸೌಕರ್ಯ ಬದಲಾವಣೆಗೆ ಮುಂದಾಗಿದೆ. ಪದೇ ಪದೇ ಕೈಕೊಡುವ ಹಾಗೂ ರಸ್ತೆಯಲ್ಲಿ ನಿಧಾನವಾಗಿ ಸಾಗುವ ಹಳೆಯ ಎಲ್ಲಾ 108 ಆ್ಯಂಬುಲೆನ್ಸ್ ವಾಹನಗಳನ್ನು ತಕ್ಷಣವೇ ಗುಜರಿಗೆ ಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ಹ್ಯಾಂಗ್ ಆಗಲ್ಲ, ಪಾವತಿ ವಿಫಲಗೊಳ್ಳಲ್ಲ,ಇನ್ಮುಂದೆ ರೈಲಿನಲ್ಲಿ ನೀವೇ ಆರಿಸಿಕೊಳ್ಳಿ ನಿಮ್ಮಿಷ್ಟದ ಸೀಟು, ಹೊಸ ವೆಬ್​ಸೈಟ್ ಬಿಡುಗಡೆ ಮಾಡಿದ ಐಆರ್​ಸಿಟಿಸಿ

ಹಳೆಯ ವಾಹನಗಳ ಜಾಗಕ್ಕೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಹೊಸ ಆ್ಯಂಬುಲೆನ್ಸ್‌ಗಳನ್ನು ಖರೀದಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. “ತುರ್ತು ವೈದ್ಯಕೀಯ ಸೇವೆ ಎನ್ನುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಅದರಲ್ಲಿ ನಿಮಿಷಗಳ ವಿಳಂಬವೂ ಕೂಡ ಒಂದು ಜೀವಕ್ಕೆ ಕಂಟಕ ತರಬಹುದು. ಹೀಗಾಗಿ ಆ್ಯಂಬುಲೆನ್ಸ್ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಈ ನಿಯಮ ತರಲಾಗಿದೆ. ನಿಗದಿತ ಸಮಯದಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವುದು ನಮ್ಮ ಆದ್ಯತೆ. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,” ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಸಿದ್ದಾರೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Anganwadi Recruitment 2026: ಮಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ! – Kannada News | Mangaluru Anganwadi Recruitment 2026: Apply for Worker and Helper Jobs Deadline Aug 10

ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳಾ ಅಭ್ಯರ್ಥಿಗಳಿಗೆ ಇಲಾಖೆಯು ಉತ್ತಮ ಅವಕಾಶವೊಂದನ್ನು ತಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಆಫ್‌ಲೈನ್ ಮೂಲಕ ನಡೆಯಲಿದ್ದು, ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ನಡೆಯುತ್ತಿರುವ ತಾಲೂಕುಗಳು, ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಕಚೇರಿಯ ವಿಳಾಸಗಳ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.

ವಿವಿಧ ತಾಲೂಕುವಾರು ಖಾಲಿ ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯಡಿ ಮಂಗಳೂರಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಒಟ್ಟು ಆರು ಪ್ರಮುಖ ವ್ಯಾಪ್ತಿಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ 7 ಅಂಗನವಾಡಿ ಕಾರ್ಯಕರ್ತೆ ಹಾಗೂ 32 ಸಹಾಯಕಿ ಹುದ್ದೆಗಳಿದ್ದು, ಗ್ರಾಮಾಂತರ ವ್ಯಾಪ್ತಿಯಲ್ಲಿ 4 ಕಾರ್ಯಕರ್ತೆ ಹಾಗೂ 39 ಸಹಾಯಕಿ ಹುದ್ದೆಗಳು ಖಾಲಿ ಇವೆ. ಉಳಿದಂತೆ ತಾಲೂಕುಗಳ ವಿವರ ಹೀಗಿದೆ:

  • ಮಂಗಳೂರು ತಾಲೂಕು ವ್ಯಾಪ್ತಿ: 14 ಸಹಾಯಕಿ ಹುದ್ದೆಗಳು.
  • ಮುಲ್ಕಿ ತಾಲೂಕು ವ್ಯಾಪ್ತಿ: 3 ಸಹಾಯಕಿ ಹುದ್ದೆಗಳು.
  • ಮೂಡುಬಿದಿರೆ ತಾಲೂಕು ವ್ಯಾಪ್ತಿ: 4 ಸಹಾಯಕಿ ಹುದ್ದೆಗಳು.
  • ಉಳ್ಳಾಲ ತಾಲೂಕು ವ್ಯಾಪ್ತಿ: 4 ಅಂಗನವಾಡಿ ಕಾರ್ಯಕರ್ತೆ ಹಾಗೂ 18 ಸಹಾಯಕಿ ಹುದ್ದೆಗಳು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಅರ್ಜಿ ಸಲ್ಲಿಕೆಯ ವಿಧಾನ ಮತ್ತು ಕೊನೆಯ ದಿನಾಂಕ:

ಅರ್ಹ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಫ್‌ಲೈನ್ (Offline) ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 10 ರೊಳಗಾಗಿ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಅಥವಾ ಗ್ರಾಮಾಂತರ ಕಚೇರಿಗೆ ತಲುಪಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಕಚೇರಿ ವಿಳಾಸಗಳು:

ಅರ್ಜಿ ನಮೂನೆ ಹಾಗೂ ನೇಮಕಾತಿಯ ಇತರ ನಿಯಮಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯು ನಗರ ಮತ್ತು ಗ್ರಾಮಾಂತರ ಭಾಗಕ್ಕೆ ಪ್ರತ್ಯೇಕ ಕಚೇರಿಗಳ ವಿಳಾಸವನ್ನು ನೀಡಿದೆ.

  • ಮಂಗಳೂರು ನಗರ ವ್ಯಾಪ್ತಿ: ನಗರದ ವೆಲೆನ್ಸಿಯಾ ಸಿಲ್ಕ್ ಕ್ರಾಸ್ ರೋಡ್ ರಸ್ತೆಯಲ್ಲಿರುವ ‘ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ’ಯನ್ನು ಸಂಪರ್ಕಿಸಬಹುದು.
  • ಮಂಗಳೂರು ಗ್ರಾಮಾಂತರ ವ್ಯಾಪ್ತಿ: ನಗರದ ಉರ್ವ ಮಾರ್ಕೆಟ್ ಕಟ್ಟಡದ 3ನೇ ಮಹಡಿಯಲ್ಲಿರುವ ‘ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಕಚೇರಿ’ಯನ್ನು ಭೇಟಿ ಮಾಡಬಹುದು.

ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಮಂಗಳೂರು ಭಾಗದ ಅರ್ಹ ಮಹಿಳೆಯರು ಈ ಆಫ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಬಳಸಿಕೊಂಡು, ಆಗಸ್ಟ್ 10ರ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಿ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 12:57 pm, Wed, 15 July 26

Source link

ಕನಕಗಿರಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾವಳಿ: ನೆಮ್ಮದಿ ಕಳೆದುಕೊಂಡು ಬೀದಿಗಿಳಿದು ಕಣ್ಣೀರು ಹಾಕಿದ ಮಹಿಳೆಯರು! – Kannada News | Koppal: Women Protest in Kanakagiri Against Rampant Illegal Liquor Sales in Residential Areas

ನೆಮ್ಮದಿ ಕಳೆದುಕೊಂಡು ಬೀದಿಗಿಳಿದು ಕಣ್ಣೀರು ಹಾಕಿದ ಮಹಿಳೆಯರು

ಕೊಪ್ಪಳ, ಜುಲೈ 15: ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಅಕ್ರಮ ಮದ್ಯ ಮಾರಾಟ ಜಾಲ ಹೆಮ್ಮರವಾಗಿ ಬೆಳೆದಿದ್ದು, ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬದುಕು ನಡೆಸುವುದೇ ದುಸ್ತರವಾಗಿದೆ. ಪಟ್ಟಣದ 16 ನೇ ವಾರ್ಡ್‌ನಲ್ಲಿ ಅಕ್ರಮ ಮದ್ಯ ಮಾರಾಟ ಮಿತಿಮೀರಿದ್ದು, ಸಣ್ಣ ಪುಟ್ಟ ಕಿರಾಣಿ ಅಂಗಡಿಗಳು, ಹೋಟೆಲ್‌ಗಳು ಹಾಗೂ ಮನೆಗಳೇ ಈಗ ಮದ್ಯದ ಅಡ್ಡೆಗಳಾಗಿ ಮಾರ್ಪಟ್ಟಿವೆ. ಇದರಿಂದ ರೋಸಿಹೋದ ಸ್ಥಳೀಯ ಮಹಿಳೆಯರು ಇಂದು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಗಲ್ಲಿ ಗಲ್ಲಿಗಳಲ್ಲೂ ರಾಜಾರೋಷವಾಗಿ ದಂಧೆ

ಕನಕಗಿರಿಯಲ್ಲಿ ಲೈಸೆನ್ಸ್ ಇಲ್ಲದಿದ್ದರೂ ಪ್ರತಿಯೊಂದು ಗಲ್ಲಿಗಳಲ್ಲಿ, ಸಣ್ಣ ಪುಟ್ಟ ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮ ದಂಧೆಯ ದೃಶ್ಯಗಳನ್ನು ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಸಾರ್ವಜನಿಕವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾನೂನಿನ ಯಾವುದೇ ಭಯವಿಲ್ಲದೆ ಸಣ್ಣ ಮಕ್ಕಳ ಕೈಯಲ್ಲೂ ಮದ್ಯ ಸಿಗುವಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮನೆಗಳಲ್ಲಿ ಊಟಕ್ಕೂ ಗತಿಯಿಲ್ಲ

ಸ್ಥಳೀಯ ಮಹಿಳೆಯರು ಕಣ್ಣೀರು ಹಾಕುತ್ತಾ, ನಮ್ಮ ವಾರ್ಡ್‌ನಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಮನೆ ಮನೆಗಳಲ್ಲೂ ಮದ್ಯ ಸಿಗುತ್ತಿರುವುದರಿಂದ ಪುರುಷರು ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಸುರಿಯುತ್ತಿದ್ದಾರೆ. ಇತ್ತ ಮನೆಯಲ್ಲಿ ಊಟಕ್ಕೂ ಗತಿಯಿಲ್ಲದಂತಾಗಿದೆ. ಸಂಜೆ ವೇಳೆಗೆ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು ರಸ್ತೆಯಲ್ಲಿ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಈ ಅಕ್ರಮ ಮಾರಾಟವನ್ನು ಬಂದ್ ಮಾಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪವಿತ್ರ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲೇ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಶಿಲ್ಪಾ, ಪದಮ್ಮ, ಸಿದ್ದಲಿಂಗಮ್ಮ, ಅಯ್ಯಮ್ಮ, ಗೌರಮ್ಮ, ಚಾಂದಿನಿಬೇಗಂ, ಸಾವಿತ್ರಮ್ಮ, ಶಿವಮ್ಮ, ಲಕ್ಷ್ಮೀ, ದೂಡ್ಡಲಕ್ಷ್ಮೀ, ದುರಗಮ್ಮ, ರೇಣುಕಾ, ದೀಪಮ್ಮ, ಹುಲಿಗೆಮ್ಮ ಸೇರಿದಂತೆ ಹಲವರು ಭಾಗಿಯಾಗಿದ್ದರು. ಅಕ್ರಮ ಮದ್ಯದ ಅಡ್ಡೆಗಳ ಮೇಲೆ ತಕ್ಷಣ ದಾಳಿ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ವಾರ್ಡ್‌ಗಳಲ್ಲಿ ಸೂಕ್ತ ಪೊಲೀಸ್ ಗಸ್ತು ವ್ಯವಸ್ಥೆ ಜಾರಿಗೊಳಿಸಬೇಕು ಎನ್ನುವುದು ಇವರ ಮುಖ್ಯ ಬೇಡಿಕೆಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಅಕ್ರಮ ದಂಧೆಗೆ ಬ್ರೇಕ್ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರಕ್ಕೆ ಬೇಕಾಗಿದ್ದಾರೆ ಬಾಸ್: ಸಿಇಒ ಹುದ್ದೆಗೆ 1,000 ಮಂದಿಯಿಂದ ಅರ್ಜಿ, ಜುಲೈ 22ಕ್ಕೆ ಅಂತಿಮ ಮುದ್ರೆ – Kannada News | Ram Mandir Ayodhya CEO: Over 1000 Applications for Key Role, Selection by July 22

ಅಯೋಧ್ಯೆ, ಜುಲೈ 15: ಜಗತ್ಪ್ರಸಿದ್ಧ ಅಯೋಧ್ಯೆಯ ರಾಮ ಮಂದಿರ(Ram Mandir)ದಲ್ಲಿ ಇತ್ತೀಚೆಗೆ ಕೇಳಿಬಂದಿದ್ದ ದೇಣಿಗೆ ದುರುಪಯೋಗದ ಆರೋಪಗಳಿಗೆ ಶಾಶ್ವತ ಬ್ರೇಕ್ ಹಾಕಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಸ್ಟರ್ ಪ್ಲಾನ್ ಮಾಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮಂದಿರದ ದೈನಂದಿನ ನಿರ್ವಹಣೆಗಾಗಿ ‘ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ’ (CEO) ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಈ ಉನ್ನತ ಹುದ್ದೆಗಾಗಿ ಕೇವಲ 5 ದಿನಗಳಲ್ಲಿ ಬರೋಬ್ಬರಿ 1,000 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ದೇಶದ ಹಿರಿಯ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ಮಾಜಿ ಸೇನಾ ಅಧಿಕಾರಿಗಳು, ಪ್ರಸಿದ್ಧ ರಾಜಕಾರಣಿಗಳು ಹಾಗೂ ಪ್ರಭಾವಿ ಕಾರ್ಪೊರೇಟ್ ವಲಯದ ತಜ್ಞರು ಸೇರಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜುಲೈ 18, 2026

ಅರ್ಜಿಗಳ ಪರಿಶೀಲನೆ ಆರಂಭ: ಜುಲೈ 19, 2026

ಅಂತಿಮ ಆಯ್ಕೆ ಪ್ರಕಟಣೆ: ಜುಲೈ 22, 2026 (ಟ್ರಸ್ಟ್‌ನ ಮಹತ್ವದ ಸಭೆಯಲ್ಲಿ ನಿರ್ಧಾರ)

ಅರ್ಹತೆಗಳೇನು? ‘ರಾಮಭಕ್ತ’ ಆಗಿರುವುದು ಕಡ್ಡಾಯ
ರಾಮ ಮಂದಿರದ ಸಿಇಒ ಹುದ್ದೆ ಸುಮ್ಮನೆ ಸಿಗುವಂತದ್ದಲ್ಲ. ಇದಕ್ಕೆ ಟ್ರಸ್ಟ್ ಅತ್ಯಂತ ಕಠಿಣ ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿದೆ.

ವಯಸ್ಸು ಮತ್ತು ಅನುಭವ: ಅಭ್ಯರ್ಥಿಗೆ 50 ರಿಂದ 70 ವರ್ಷ ವಯಸ್ಸಾಗಿರಬೇಕು. ಯಾವುದೇ ದೊಡ್ಡ ಸರ್ಕಾರಿ ಇಲಾಖೆ, ಸಂಸ್ಥೆ ಅಥವಾ ಕಂಪನಿಯಲ್ಲಿ ಕನಿಷ್ಠ 20 ವರ್ಷಗಳ ಉನ್ನತ ವ್ಯವಸ್ಥಾಪಕ ಅನುಭವ ಇರಬೇಕು.

ಧಾರ್ಮಿಕ ಹಿನ್ನೆಲೆ: ಅಭ್ಯರ್ಥಿಯು ಕಡ್ಡಾಯವಾಗಿ ಹಿಂದೂ ಧರ್ಮವನ್ನು ಪಾಲಿಸುವವರಾಗಿರಬೇಕು ಮತ್ತು ‘ಶ್ರೀರಾಮನ ಪರಮ ಭಕ್ತ’ ಆಗಿರಬೇಕು. ಅದರಲ್ಲೂ ವೈಷ್ಣವ ಸಂಪ್ರದಾಯಕ್ಕೆ ಸೇರಿದವರಾಗಿದ್ದರೆ ಮೊದಲ ಆದ್ಯತೆ ನೀಡಲಾಗುತ್ತದೆ.

ಭಾಷಾ ಜ್ಞಾನ: ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಮತ್ತು ಬರೆಯುವ ಜ್ಞಾನವಿರಬೇಕು.

ಮತ್ತಷ್ಟು ಓದಿ: ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು

ಆಯ್ಕೆಯಾಗುವ ಸಿಇಒ ಅವರನ್ನು ಆರಂಭದಲ್ಲಿ 3 ವರ್ಷಗಳ ಒಪ್ಪಂದದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರ ಕೆಲಸದ ದಕ್ಷತೆಯನ್ನು ನೋಡಿ ಅವಧಿಯನ್ನು ವಿಸ್ತರಿಸಲಾಗುತ್ತದೆ. ಇವರ ಕಚೇರಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲೇ ಇರಲಿದ್ದು, ವೇತನವನ್ನು ಚರ್ಚೆಯ ಮೂಲಕ ನಿಗದಿಪಡಿಸಲಾಗುತ್ತದೆ.

ಆಯ್ಕೆ ಮಾಡುವುದು ಯಾರು? ಸಾವಿರಾರು ಅರ್ಜಿಗಳ ಪೈಕಿ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ವ್ಯಕ್ತಿಯನ್ನು ಹುಡುಕಲು ಟ್ರಸ್ಟ್ ಮೂವರು ಸದಸ್ಯರ ಹೈ-ಪ್ರೊಫೈಲ್ ಸಮಿತಿಯನ್ನು ರಚಿಸಿದೆ.

ನ್ಯಾ. ಪ್ರಮೋದ್ ಕೊಹ್ಲಿ

ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ (ನಿವೃತ್ತ ಸೇನಾ ಅಧಿಕಾರಿ)

ಸುರೇಶ್ ಹವಾರೆ (ಖ್ಯಾತ ಟ್ರಸ್ಟಿ)

ತಿರುಪತಿ ಮಾದರಿಯಲ್ಲಿ ಅಯೋಧ್ಯೆ ನಿರ್ವಹಣೆ
ರಾಮ ಮಂದಿರಕ್ಕೆ ಕೋಟ್ಯಂತರ ರೂಪಾಯಿ ದೇಣಿಗೆ ಹರಿದು ಬರುತ್ತಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಇಷ್ಟೊಂದು ದೊಡ್ಡ ವ್ಯವಸ್ಥೆಯನ್ನು ಕೇವಲ ಅರ್ಚಕರು ಅಥವಾ ಟ್ರಸ್ಟಿಗಳು ಮಾತ್ರ ನಿರ್ವಹಿಸುವುದು ಕಷ್ಟಸಾಧ್ಯ.

ತಿರುಪತಿ ಮಾದರಿ ಆಡಳಿತ: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನವನ್ನು (TTD) ಐಎಎಸ್ ಅಧಿಕಾರಿಗಳು ಐಎಎಸ್ ಮಾದರಿಯಲ್ಲೇ ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುತ್ತಾರೆ. ಅದೇ ಮಾದರಿಯನ್ನು ಈಗ ಅಯೋಧ್ಯೆಯಲ್ಲೂ ತರಲಾಗುತ್ತಿದ್ದು, ಆಡಳಿತ, ಹಣಕಾಸು, ಭದ್ರತೆ, ಮಾನವ ಸಂಪನ್ಮೂಲ (HR) ಮತ್ತು ಐಟಿ (IT) ವಿಭಾಗಗಳನ್ನು ಈ ಹೊಸ ಸಿಇಒ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಪಾರದರ್ಶಕತೆಗೆ ಆದ್ಯತೆ: ಇತ್ತೀಚಿನ ವಿವಾದಗಳಿಂದ ಟ್ರಸ್ಟ್‌ನ ಇಮೇಜ್‌ಗೆ ಧಕ್ಕೆಯಾಗಿತ್ತು. ಈಗ ಹೊಸ ಸಿಇಒ ನೇಮಕದಿಂದ ಇಡೀ ಮಂದಿರದ ಆರ್ಥಿಕ ವಹಿವಾಟು ಅತ್ಯಂತ ಪಾರದರ್ಶಕವಾಗಲಿದ್ದು, ಭಕ್ತರ ಪ್ರತಿಯೊಂದು ರೂಪಾಯಿ ಕಾಣಿಕೆಗೂ ಲೆಕ್ಕ ಸಿಗಲಿದೆ. ಇದು ದೇಶದ ಅತಿ ದೊಡ್ಡ ಧಾರ್ಮಿಕ ಕೇಂದ್ರದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಆಡಳಿತಾತ್ಮಕ ಬದಲಾವಣೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಎಂಟಿಸಿ ಪ್ರಯಾಣಿಕರೇ ಎಚ್ಚರ: ಪ್ರಯಾಣಿಕರ ಸೋಗಿನಲ್ಲಿ ಬಂದು ಕಂಡಕ್ಟರ್ ಬ್ಯಾಗನ್ನೇ ಎಗಿರಿಸಿದ ಮಹಿಳೆ, ವಿಡಿಯೋ ವೈರಲ್

ಬೆಂಗಳೂರು, ಜುಲೈ 15: ಬೆಂಗಳೂರು ನಗರದಲ್ಲಿ KA 57F 6331 ಸಂಖ್ಯೆಯ ಬಿಎಂಟಿಸಿ ಬಸ್‌ಗೆ ಪ್ರಯಾಣಿಕಳಂತೆ ಹತ್ತಿದ್ದ ಮಹಿಳೆಯೊಬ್ಬಳು ನಿರ್ವಾಹಕರ ಗಮನ ಬೇರೆಡೆ ಇದ್ದಾಗ ಹಣದ ಬ್ಯಾಗ್ ಅನ್ನು ತನ್ನ ಚೀಲದಲ್ಲಿ ಇಟ್ಟುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಕಳ್ಳತನದ ಬಳಿಕ ಬಸ್‌ನಲ್ಲೇ ಅಮಾಯಕಳಂತೆ ವರ್ತಿಸುತ್ತಿದ್ದ ವೇಳೆ ನಿರ್ವಾಹಕರಿಗೆ ಅನುಮಾನ ಬಂದಿದೆ. ಬಳಿಕ ಮಹಿಳೆಯನ್ನು ಪ್ರಶ್ನಿಸಿದಾಗ ಆಕೆ ಪರಾರಿಯಾಗಲು ಯತ್ನಿಸಿದ್ದಾಳೆ. ಈ ವೇಳೆ ಸ್ಥಳಕ್ಕೆ ಬಂದ ಮಹಿಳಾ ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿದ್ದಾಗ, ‘ನಾನು ಮನೆಗೆ ಹೋಗಬೇಕು, ನನ್ನ ಗಂಡನಿಗೆ ಆರೋಗ್ಯ ಸರಿಯಿಲ್ಲ’ ಎಂದು ಹೇಳುತ್ತಾ ಹೈಡ್ರಾಮಾ ನಡೆಸಿದ್ದಾಳೆ. ಆದರೆ, ಆಕೆಯ ಚೀಲ ಪರಿಶೀಲಿಸಿದಾಗ ನಿರ್ವಾಹಕರ ಹಣದ ಬ್ಯಾಗ್ ಪತ್ತೆಯಾಗಿದೆ.

ಬಸ್ ನಿರ್ವಾಹಕರು ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಬಸ್ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಸರಗಳ್ಳತನ ಮತ್ತು ಪಿಕ್‌ಪಾಕೆಟ್ ಪ್ರಕರಣಗಳಲ್ಲಿ ಮಹಿಳೆಯರ ಶಾಮೀಲಾಗುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಶ್ ಒಬ್ಬ ಕವಿ, ಮುಂಚೆ ಕವಿತೆ ಬರೀತಿದ್ದ: ಯೋಗರಾಜ್ ಭಟ್ – Kannada News | Yogaraj Bhatt said Yash also a poet he used write poems

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಸಿನಿಮಾದ ‘ತಬಾಹಿ’ ಹಾಡು ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ‘ತಬಾಹಿ’ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಸಿನಿಮಾದ ಹಾಡು ಬರೆದ ಅನುಭವದ ಬಗ್ಗೆ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ಖುದ್ದು ಯಶ್ ಸಹ ಒಬ್ಬ ಕವಿ. ಮುಂಚೆ ಅವರು ಧಾರಾವಾಹಿಗಳಲ್ಲಿ ನಟಿಸುವ ಸಂದರ್ಭದಲ್ಲಿ ಅವರು ಕವಿತೆಗಳನ್ನು ಬರೆಯುತ್ತಿದ್ದರು. ಅವರ ಕವಿತೆಗಳನ್ನು ಆಗ ನಾನೂ ಸಹ ಓದಿದ್ದೆ’ ಎಂದಿದ್ದಾರೆ. ‘ತಬಾಹಿ‘ ಹಾಡು ಬರೆಯುವಾಗ ಸಹ ಯಶ್ ಸಾಕಷ್ಟು ಮೌಲ್ವಿಕ ಸಲಹೆಗಳನ್ನು ನೀಡಿದರು’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘‘ನನ್ನ ಮಗ ಬಾತ್​ರೂಮ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಾನೆ’’ ಎಂದ ತಾಯಿಗೆ ಮನೋವೈದ್ಯರ ಉತ್ತರವೇನು ನೋಡಿ – Kannada News | Child Spending too much time in bathroom parents psychologist advice

ಮಕ್ಕಳು (Children) ಬೆಳೆದಂತೆ ಅವರ ದೇಹ ಮತ್ತು ಮನಸ್ಸಿನಲ್ಲಿ ಸಹಜವಾಗಿ ಹಲವು ಬದಲಾವಣೆಗಳು ಆರಂಭವಾಗುತ್ತವೆ. ಈ ಸಮಯದಲ್ಲಿ ಅವರ ಕೆಲವು ವರ್ತನೆಗಳು ಪೋಷಕರಲ್ಲಿ ಆತಂಕ ಉಂಟುಮಾಡಬಹುದು. ಅದರಲ್ಲೂ, ಮಗು ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ “ಯಾವುದಾದರೂ ತಪ್ಪು ಅಭ್ಯಾಸ ಬೆಳೆಸಿಕೊಂಡಿದ್ದಾರೆಯೇ?” ಎಂಬ ಅನುಮಾನ ಹಲವರಿಗೆ ಬರುತ್ತದೆ. ಆದರೆ ಮನೋವೈದ್ಯರು ಹೇಳುವಂತೆ, ಇಂತಹ ಸಂದರ್ಭಗಳಲ್ಲಿ ಆತಂಕ ಅಥವಾ ಗದರಿಕೆಗಿಂತ ತಿಳುವಳಿಕೆಯಿಂದ ನಡೆದುಕೊಳ್ಳುವುದು ಅತ್ಯಂತ ಮುಖ್ಯ.

ಇತ್ತೀಚೆಗೆ ಒಬ್ಬ ತಾಯಿ ತಮ್ಮ 9 ವರ್ಷದ ಮಗ ಬಾತ್‌ರೂಮ್‌ನಲ್ಲಿ ತುಂಬಾ ಹೊತ್ತು ಕಳೆಯುತ್ತಾನೆ ಎಂದು ಮನೋವೈದ್ಯೆ ಕೋಮಲ್ ಬಕ್ಷಿ ಅವರ ಬಳಿ ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮಕ್ಕಳು 8-9 ವರ್ಷದ ವಯಸ್ಸಿನಿಂದ ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕುತೂಹಲ ಹೊಂದುವುದು ಸಹಜ ಎಂದು ಹೇಳಿದ್ದಾರೆ. ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ದೇಹವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇದನ್ನು “ಕೆಟ್ಟ ಅಭ್ಯಾಸ” ಎಂದು ಪರಿಗಣಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ತಜ್ಞರ ಪ್ರಕಾರ, ದೇಹದ ಬಗ್ಗೆ ಕುತೂಹಲ ಇರುವುದು ಹುಡುಗರಲ್ಲಷ್ಟೇ ಅಲ್ಲ, ಹುಡುಗಿಯರಲ್ಲಿಯೂ ಸಾಮಾನ್ಯ. ತಮ್ಮ ದೇಹದ ರಚನೆ, ಬೆಳವಣಿಗೆ ಮತ್ತು ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳನ್ನು ಬೈಯಿವುದು, ಗದರಿಸುವುದು ಅಥವಾ “ಇದು ತಪ್ಪು” ಎಂದು ಭಯ ಹುಟ್ಟಿಸುವುದು ಅವರ ಮಾನಸಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇಂತಹ ಸಂದರ್ಭಗಳಲ್ಲಿ ಪೋಷಕರು ಮಾಡಬೇಕಾದ ಮೊದಲ ಕೆಲಸ ಎಂದರೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವುದು. ದೇಹದಲ್ಲಿ ಆಗುವ ಬದಲಾವಣೆಗಳು ಸಹಜ ಎಂಬುದನ್ನು ಅವರ ವಯಸ್ಸಿಗೆ ತಕ್ಕ ಸರಳ ಭಾಷೆಯಲ್ಲಿ ವಿವರಿಸಬೇಕು. ಮಕ್ಕಳು ಯಾವುದೇ ಪ್ರಶ್ನೆ ಕೇಳಲು ಹಿಂಜರಿಯದಂತಹ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು. ಹೀಗೆ ಮಾಡಿದರೆ ಅವರು ತಪ್ಪು ಮಾಹಿತಿಯಿಂದ ದೂರವಿರುತ್ತಾರೆ ಮತ್ತು ದೇಹದ ಬಗ್ಗೆ ಆರೋಗ್ಯಕರ ತಿಳುವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ.

ಸಂಪೂರ್ಣ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

ಇದರ ಜೊತೆಗೆ, ಇಂಟರ್ನೆಟ್‌ನಲ್ಲಿ ಲಭ್ಯವಿರುವ ಅಶ್ಲೀಲ ಅಥವಾ ವಯಸ್ಸಿಗೆ ಸೂಕ್ತವಲ್ಲದ ವಿಷಯಗಳಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಡಬೇಕು. ಮೊಬೈಲ್ ಮತ್ತು ಇಂಟರ್ನೆಟ್ ಬಳಕೆಯ ಮೇಲೆ ಸೂಕ್ತ ನಿಗಾ ಇರಿಸುವುದೂ ಅಗತ್ಯ. ಆದರೆ ಇದು ಮಕ್ಕಳ ಖಾಸಗಿತನಕ್ಕೆ ಧಕ್ಕೆಯಾಗದ ರೀತಿಯಲ್ಲಿರಬೇಕು ಎಂದು ತಜ್ಞರು ಸೂಚಿಸುತ್ತಾರೆ.

ಹೊಳೆಯುವ ತ್ವಚೆ ನಿಮ್ಮದಾಗಲು ಬೆಳಗಿನ ದಿನಚರಿಯಲ್ಲಿ ತಪ್ಪದೇ ಈ ಕಾರ್ಯಗಳನ್ನು ಮಾಡಿ

ಮಕ್ಕಳು ದಿನವಿಡೀ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಆಟ, ಕ್ರೀಡೆ, ಓದು, ಹವ್ಯಾಸಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರತರಾಗಿದ್ದರೆ ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಉತ್ತಮವಾಗಿರುತ್ತದೆ.

ಅತ್ಯಂತ ಮುಖ್ಯವಾಗಿ, ಮಗು ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆದಿದೆ ಎಂಬ ಕಾರಣಕ್ಕೆ ಅವನನ್ನು ಅಥವಾ ಅವಳನ್ನು ವಿಚಾರಣೆ ಮಾಡುವುದು, ನಾಚಿಕೆಪಡಿಸುವುದು ಅಥವಾ ಹಾಸ್ಯ ಮಾಡುವುದು ತಪ್ಪು. ಇಂತಹ ವರ್ತನೆಯಿಂದ ಮಕ್ಕಳು ಪೋಷಕರಿಂದ ದೂರವಾಗುವ ಸಾಧ್ಯತೆ ಇದೆ. ಬದಲಿಗೆ, ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ವಿಶ್ವಾಸದೊಂದಿಗೆ ಮಾತನಾಡಿದರೆ, ಬೆಳವಣಿಗೆಯ ಈ ಹಂತವನ್ನು ಅವರು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದು ಮನೋವೈದ್ಯರು ಸಲಹೆ ನೀಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:27 pm, Wed, 15 July 26

Source link

Exit mobile version