ಭಾರತದಲ್ಲಿ ಸೂಪರ್ ಹಿಟ್ ಆದ ಹಾಲಿವುಡ್ ಸಿನಿಮಾ ‘ಅಬ್ಸೆಷನ್’ ಒಟಿಟಿಗೆ ಬರೋದು ಯಾವಾಗ? – Kannada News | Obsession Hollywood Horror movie 2026 Box Office Hit OTT Release Date

ನಿರ್ದೇಶಕ ಕರಿ ಬಾರ್ಕರ್ ಅವರ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಸಿನಿಮಾ ‘ಅಬ್ಸೆಷನ್’ (Obsession) ಈ ವರ್ಷದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ತೀರಾ ಸಣ್ಣ ಬಜೆಟ್‌ನಲ್ಲಿ ಭಿನ್ನವಾದ ಕಥಾಹಂದರದೊಂದಿಗೆ ತಯಾರಾದ ಈ ಸಿನಿಮಾ, ನಿರೀಕ್ಷೆಗೂ ಮೀರಿದ ಯಶಸ್ಸು ಕಂಡು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಒಟಿಟಿ (OTT) ರಿಲೀಸ್ ಸಲುವಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಆ ಬಗ್ಗೆ ಸುದ್ದಿ ಕೇಳಿಬಂದಿದೆ.

ಥಿಯೇಟರ್‌ಗಳಲ್ಲಿ ಸಿನಿಮಾ ಸೂಪರ್ ಹಿಟ್ ಆಗಿದ್ದರಿಂದಲೇ ‘ಅಬ್ಸೆಷನ್’ ಸಿನಿಮಾದ ಡಿಜಿಟಲ್ ರಿಲೀಸ್ ಯೋಜನೆಯನ್ನು ಮುಂದೂಡಲಾಗಿತ್ತು. ಆದರೆ ಈಗ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಜೂನ್ 30ರಿಂದ ಪ್ರೀಮಿಯಂ ವಿಡಿಯೋ-ಆನ್-ಡಿಮ್ಯಾಂಡ್ (PVOD) ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಲಭ್ಯವಾಗಲಿದೆ ಎಂದು ವರದಿಯಾಗಿದೆ.

ಬರೋಬ್ಬರಿ 100 ಕೋಟಿ ರೂಪಾಯಿ ಸನಿಹ:

ಭಾರತದಲ್ಲೂ ಈ ಸಿನಿಮಾ ಹಾರರ್ ಪ್ರೇಮಿಗಳ ನೆಚ್ಚಿನ ಆಯ್ಕೆಯಾಗಿದೆ. ಪ್ರಮುಖ ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್‌ಮೈಶೋ’ ಚಾರ್ಟ್‌ನಲ್ಲಿ ಸದಾ ಮುಂಚೂಣಿಯಲ್ಲಿರುವ ಈ ಸಿನಿಮಾ, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆಯ ಸನಿಹದಲ್ಲಿದೆ. ಯಾವುದೇ ದೊಡ್ಡ ಸ್ಟಾರ್ ನಟರಿಲ್ಲದೆ ಈ ಸಾಧನೆ ಮಾಡಿರುವುದು ಹಾಲಿವುಡ್ ಚಿತ್ರರಂಗದಲ್ಲೇ ದೊಡ್ಡ ದಾಖಲೆಯಾಗಿದೆ.

ಭಾರತದ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯ?

ಆದರೆ ಭಾರತೀಯ ಒಟಿಟಿ ವೀಕ್ಷಕರಿಗೆ ಸಣ್ಣದೊಂದು ಟ್ವಿಸ್ಟ್ ಇದೆ. ಅಮೆಜಾನ್ ಪ್ರೈಮ್ ವಿಡಿಯೋ, ಆಪಲ್ ಟಿವಿ ಅಥವಾ ಬಿಎಂಎಸ್ ಸ್ಟ್ರೀಮ್ ಮುಂತಾದ ಪ್ರಮುಖ ಪ್ಲಾಟ್‌ಫಾರ್ಮ್‌ಗಳು ಇದರ ಸ್ಟ್ರೀಮಿಂಗ್ ಹಕ್ಕುಗಳನ್ನು ಖರೀದಿಸುವುದರ ಮೇಲೆ ಭಾರತದ ಡಿಜಿಟಲ್ ಬಿಡುಗಡೆ ನಿರ್ಧಾರವಾಗಲಿದೆ. ಮೂಲಗಳ ಪ್ರಕಾರ, ಸಿನಿಮಾ ಭಾರತದಲ್ಲಿ ಬಿಡುಗಡೆಯಾದರೆ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಅಬ್ಸೆಷನ್’ ಚಿತ್ರಕ್ಕೆ ಹೆಚ್ಚು ಶೋ: ತಮ್ಮ ಸಿನಿಮಾಗೆ ಚಿತ್ರಮಂದಿರ ಸಿಗದಿದ್ದಕ್ಕೆ ಅನುರಾಗ್ ಕಶ್ಯಪ್ ಬೇಸರ

ನಾಯಕಿ ಅಭಿನಯಕ್ಕೆ ಭರ್ಜರಿ ಮೆಚ್ಚುಗೆ:

‘ಅಬ್ಸೆಷನ್’ ಚಿತ್ರದಲ್ಲಿ ಮೈಕೆಲ್ ಜಾನ್​ಸ್ಟನ್ ಮತ್ತು ಇಂಡಿ ನವರೇಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವಿಶೇಷವಾಗಿ ನಾಯಕಿ ಇಂಡಿ ನವರೇಟಿ ಅವರ ನಟನೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರಿಗೆ ಹಾಗೂ ಮತ್ತೊಮ್ಮೆ ಮನೆಯಲ್ಲೇ ಕುಳಿತು ಹಾರರ್ ಅನುಭವ ಪಡೆಯಲು ಕಾಯುತ್ತಿರುವ ಪ್ರೇಕ್ಷಕರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು, ಮುಂಬೈನಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಕಚೇರಿಗಳ ಮೇಲೆ ಇಡಿ ದಾಳಿ; ಮಹತ್ವದ ಸಾಕ್ಷ್ಯಗಳು ವಶಕ್ಕೆ – Kannada News | Rajesh Exports Ltd, ED raids Bangalore and Mumbai offices of REL, seize important documents

ರಾಜೇಶ್ ಎಕ್ಸ್​ಪೋರ್ಟ್ಸ್ ಕಂಪನಿಯ ಒಡೆಯ ರಾಜೇಶ್ ಮೆಹ್ತಾImage Credit source: Hemant Mishra/Mint via Getty Images

ಬೆಂಗಳೂರು, ಜೂನ್ 24: ಜಾರಿ ನಿರ್ದೇಶನಾಲಯವು (ED) ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮುಂಬೈನಲ್ಲಿರುವ ರಾಜೇಶ್ ಎಕ್ಸ್‌ಪೋರ್ಟ್ಸ್‌ನ (REL- Rajesh Exports Ltd) ಒಟ್ಟು 9 ಕಚೇರಿಗಳ ಮೇಲೆ ದಾಳಿ ನಡೆಸಿದೆ. ಆಭರಣಗಳನ್ನು ರಫ್ತು ಮಾಡುವ ಸಂಸ್ಥೆಯಾದ ರಾಜೇಶ್ ಎಕ್ಸ್​ಪೋರ್ಟ್ಸ್ ಕೆಲ ಅಕ್ರಮಗಳನ್ನು ಎಸಗಿರುವುದು ತನಿಖೆಗಳಿಂದ ಬೆಳಕಿಗೆ ಬಂದಿದೆ. ವಿದೇಶದ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಕಂಪನಿ ವಿಫಲವಾಗಿದೆ.

ರಾಜೇಶ್ ಎಕ್ಸ್​ಪೋರ್ಟ್ಸ್ ವಿಚಾರದಲ್ಲಿ ಇಡಿ ಪತ್ತೆಹಚ್ಚಿರುವ ಪ್ರಮುಖ ಅಕ್ರಮಗಳು

  • ದಾಖಲೆಗಳ ಕೊರತೆ: ಕಂಪನಿಯು ತನ್ನ ವಿದೇಶಿ ವ್ಯವಹಾರಗಳಾದ ಆಮದು, ರಫ್ತು, ವಿದೇಶಿ ಹೂಡಿಕೆಗಳು ಮತ್ತು ವಹಿವಾಟುಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಒದಗಿಸಲು ವಿಫಲವಾಗಿದೆ.
  • ಆಫ್ರಿಕನ್ ಗಣಿಗಳಲ್ಲಿ ಹೂಡಿಕೆ: ಆಫ್ರಿಕನ್ ಗಣಿಗಳಲ್ಲಿ 1,035 ಕೋಟಿ ರೂಪಾಯಿ ಹೂಡಿಕೆ ಮಾಡಿರುವುದಾಗಿ ಹೇಳಿಕೊಂಡಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯವಿಲ್ಲ.
  • ಸಂದೇಹದಾಯಕ ವ್ಯವಹಾರಗಳು: ಯುಎಇ (UAE) ಮತ್ತು ಇತರ ದೇಶಗಳಲ್ಲಿನ ಕೆಲವು ಅನುಮಾನಾಸ್ಪದ ಸಂಸ್ಥೆಗಳೊಂದಿಗೆ ಸುಮಾರು 3,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಹಿವಾಟುಗಳನ್ನು ಕಂಪನಿಯು ನಡೆಸಿದೆ.
  • ಸ್ಟಾಕ್ ವ್ಯತ್ಯಾಸ: ಕಂಪನಿಯ ಫ್ಯಾಕ್ಟರಿ ರಿಜಿಸ್ಟರ್‌ನಲ್ಲಿ ದಾಖಲಾಗಿರುವ ಸ್ಟಾಕ್ ಮತ್ತು ವಾಸ್ತವವಾಗಿ ದಾಳಿಯ ವೇಳೆ ಪತ್ತೆಯಾದ ಸ್ಟಾಕ್ ನಡುವೆ ಸುಮಾರು 40% ವ್ಯತ್ಯಾಸವಿದೆ.

ಇದನ್ನೂ ಓದಿ: ಷೇರುಬಜಾರು ಕಂಬ್ಯಾಕ್; ನಿನ್ನೆ ಕುಸಿದಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಳ್ಳಲು ಏನು ಕಾರಣ?

ರಾಜೇಶ್ ಎಕ್ಸ್​ಪೋರ್ಟ್ಸ್ ಕಂಪನಿಯ ಮ್ಯಾನೇಜ್ಮೆಂಟ್​ನಲ್ಲಿರುವ ಅನುಮಾನಾಸ್ಪದ ಅಂಶಗಳು

ಕಂಪನಿಯ ವಾರ್ಷಿಕ ವಹಿವಾಟು ಸುಮಾರು 7.7 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದರೂ, ಉನ್ನತ ಸ್ತರದ ಮ್ಯಾನೇಜ್ಮೆಂಟ್ ಟೀಮ್​ಗೆ ನೀಡುವ ವೇತನವು ಅಸಹಜವಾಗಿ ಕಡಿಮೆ ಇದೆ. ಮುಖ್ಯ ಹಣಕಾಸು ಅಧಿಕಾರಿ (CFO- Chief Financial Office) ಅವರು 2020ರಿಂದ ಯಾವುದೇ ವೇತನವನ್ನೇ ಪಡೆದಿಲ್ಲ. ಎಂಡಿಯವರಿಗಂತೂ ಮಾಸಿಕ 17,000 ರೂ ಮಾತ್ರವೇ ವೇತನ ಹೋಗುತ್ತಿರುವುದು. ಈ ವೈರುದ್ಧ್ಯಗಳನ್ನು ಇಡಿ ತನಿಖೆಯಲ್ಲಿ ಪತ್ತೆ ಹಚ್ಚಲಾಗಿದೆ.

ರಾಜೇಶ್ ಎಕ್ಸ್​ಪೋರ್ಟ್ಸ್​ನಿಂದ ಷೇರು ಮಾರುಕಟ್ಟೆ ಅಕ್ರಮಗಳು

NRI ಬೆನಾಮಿದಾರರನ್ನು ಬಳಸಿಕೊಂಡು ಷೇರು ಮರುಪಾವತಿಯ ಮೂಲಕ ಭಾರತದಿಂದ ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ಸಾಗಿಸಲಾಗಿದೆ (Siphoning of money) ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಸೂರ್ಯಾಸ್ತ ನಿಯಮ ತರಲು ಭಾರತದ ಯತ್ನ; ಏನಿದು ಸನ್​​ಸೆಟ್ ಕ್ಲಾಸ್?

ಅಲ್ಲದೆ, ಇಂಟರ್‌ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ICIJ) ಲೀಕ್ ಮಾಡಿದ ಪಟ್ಟಿಯಲ್ಲಿರುವ ವ್ಯಕ್ತಿಗಳೊಂದಿಗೆ ಕಂಪನಿಯು ಸಂಪರ್ಕ ಹೊಂದಿರುವ ಅನುಮಾನಗಳಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

ಪ್ರಸ್ತುತ, ಈ ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:05 pm, Wed, 24 June 26

Source link

ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಕಲಬುರಗಿ ಹೈಕೋರ್ಟ್‌ ಪೀಠದಿಂದ ಷರತ್ತುಬದ್ಧ ಅನುಮತಿ: ಏನೆಲ್ಲ ಕಂಡಿಷನ್​​? – Kannada News | Kalaburagi High Court Grants Conditional Nod for Basavadi Sharanara Hindu Sammelan Led by Kanneri Swamiji

ಕಲಬುರಗಿ/ಬೀದರ್​​, ಜೂನ್​​ 24: ಕನ್ನೇರಿ ಶ್ರೀಗಳು ಭಾಗಿಯಾಗಲಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಕಲಬುರಗಿ ಹೈಕೋರ್ಟ್ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಜೂನ್​​ 28ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕನ್ನೇರಿ ಸ್ವಾಮೀಜಿ ಭಾಷಣ ಮಾಡದಂತೆ ಅಫಿಡವಿಟ್ ಸಲ್ಲಿಕೆ ಹಿನ್ನೆಲೆ ಕೋರ್ಟ್​​ ಅನುಮತಿ ನೀಡಿದೆ. ಕಾರ್ಯಕ್ರಮದಲ್ಲಿ 2,500 ಜನ ಭಾಗಿಯಾಗಲು ನ್ಯಾಯಾಲಯ ಸಮ್ಮತಿಸಿದ್ದು, ಕಾನೂನು ಸುವ್ಯವಸ್ಥೆ ಹಾಳಾಗದಂತೆ ಕಾರ್ಯಕ್ರಮ ನಡೆಸಲು ಸೂಚಿಸಿದೆ. ಒಂದೊಮ್ಮೆ ಕಾನೂನು‌ ಸುವ್ಯವಸ್ಥೆಗೆ ಭಂಗವಾದರೆ ಕಾರ್ಯಕ್ರಮದ ಆಯೋಜಕರೇ ನೇರ ಹೊಣೆ ಎಂದೂ ತಿಳಿಸಿದೆ. ಸ್ವಾಮೀಜಿ ಪರ ವಕೀಲ ವೆಂಕಟೇಶ್ ದಳವಾಯಿ ಮತ್ತು ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡನೆ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಈ ಸಂಬಂಧ ಆದೇಶ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೊಲ್ಕತ್ತಾದಲ್ಲಿ ಭೀಕರ ದುರಂತ; ಗೋದಾಮಿನ ಕಟ್ಟಡ ಕುಸಿದು ಬಿದ್ದು 5 ಜನ ಸಾವು – Kannada News | Kolkata Warehouse Collapse 5 killed 18 Injured CM Suvendu Adhikari reviews rescue operation

ಕೊಲ್ಕತ್ತಾ, ಜೂನ್ 24: ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ (Kolkata) ನಿರ್ಮಾಣ ಹಂತದಲ್ಲಿದ್ದ ದೊಡ್ಡ ಗೋದಾಮಿನ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ 5 ಜನರು ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಕಾರ್ಮಿಕರು ಸಿಲುಕಿಕೊಂಡಿರುವ ಆತಂಕವಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಮೂಲಗಳ ಪ್ರಕಾರ, ಗೋದಾಮಿನ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಕಟ್ಟಡದ ಒಂದು ದೊಡ್ಡ ಭಾಗ ಕುಸಿದು ಬಿದ್ದಿದೆ. ಆ ಸಮಯದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಿಮೆಂಟ್ ಮತ್ತು ಕಬ್ಬಿಣದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಘಟನೆ ನಡೆದ ತಕ್ಷಣವೇ ಸ್ಥಳೀಯರು ಧಾವಿಸಿ ಬಂದು ರಕ್ಷಣೆಗೆ ಮುಂದಾಗಿದ್ದಾರೆ.

ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಜೆಸಿಬಿ ಮತ್ತು ಗ್ಯಾಸ್ ಕಟರ್‌ಗಳನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: ಲಕ್ನೋ ಬೆಂಕಿ ದುರಂತಕ್ಕೆ ತಲೆದಂಡ; ಉತ್ತರ ಪ್ರದೇಶದ 4 ಅಧಿಕಾರಿಗಳ ಅಮಾನತು, ನಾಲ್ವರ ಬಂಧನ

ಇದುವರೆಗೆ ಅವಶೇಷಗಳಿಂದ ಹೊರತೆಗೆಯಲಾದ ಹಲವು ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಕಟ್ಟಡ ನಿರ್ಮಾಣದಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿತ್ತು ಮತ್ತು ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಂಡಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಸ್ಥಳದಲ್ಲಿ ಎನ್‌ಡಿಆರ್‌ಎಫ್, ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಒಟ್ಟಾಗಿ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದುವರೆಗೆ 21 ಜನರನ್ನು ರಕ್ಷಿಸಲಾಗಿದೆ. ದುರದೃಷ್ಟವಶಾತ್ 3 ಜನರು ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದಿಂದ ತವರಿಗೆ ಬಂದ ಭಾರತ ಮೂಲದ ಎಐ ಸಂಶೋಧಕ; ಭಾರತದಲ್ಲಿ ಮಹತ್ವದ ಎಐ ಪ್ರಾಜೆಕ್ಟ್​ನಲ್ಲಿ ಭಾಗಿ? – Kannada News | Former OpenAI researcher Shyamal Anadkat returns to India, eyes great AI project

ನವದೆಹಲಿ, ಜೂನ್ 24: ವಿಶ್ವಪ್ರಸಿದ್ಧ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಸ್ಥೆಯಾದ OpenAI ನ ಮಾಜಿ ರಿಸರ್ಚರ್ ಶ್ಯಾಮಲ್ ಅನಾಡ್ಕತ್ (Shyamal Anadkat) ಅವರು ಅಮೆರಿಕದ ಸಿಲಿಕಾನ್ ವ್ಯಾಲಿಯನ್ನು (ಸ್ಯಾನ್ ಫ್ರಾನ್ಸಿಸ್ಕೋ) ತೊರೆದು ಭಾರತಕ್ಕೆ ಮರಳಿದ್ದಾರೆ. ಎಐನ ಅಡ್ಡಾ ಬಿಟ್ಟು ಭಾರತದಂತಹ ಜಾಗಕ್ಕೆ ಬರುವ ಅವರ ನಿರ್ಧಾರ ಬಹಳ ಮಂದಿಗೆ ಅಚ್ಚರಿ ಮೂಡಿಸಿರಬಹುದು. ಆದರೆ, ಶ್ಯಾಮಲ್ ಅವರ ಚಿಂತನೆಯಲ್ಲಿ ಸ್ಪಷ್ಟತೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಗಮನದ ಸಂಗತಿಯನ್ನು ಬಹಿರಂಗಪಡಿಸಿರುವ ಅವರು, ಭಾರತದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಪರಿಸರ ವ್ಯವಸ್ಥೆಯು (tech ecosystem) ಈ ತಲೆಮಾರಿನ ಅತ್ಯಂತ ದೊಡ್ಡ ಅವಕಾಶವಾಗಿದೆ ಎಂದಿದ್ದಾರೆ. ಹಾಗೆಯೇ, ಯಾವುದೋ ಮಹತ್ವದ ಎಐ ಪ್ರಾಜೆಕ್ಟ್​ಗಾಗಿ ಅವರು ಬಂದಿರಬಹುದು ಎನ್ನುವ ಸುಳಿವನ್ನೂ ಕೊಟ್ಟಿದ್ದಾರೆ.

ಶ್ಯಾಮಲ್ ಅನಾಡ್ಕತ್ ಯಾರು?

ಶ್ಯಾಮಲ್ ಅವರು OpenAI ಸಂಸ್ಥೆಯಲ್ಲಿ ಸುಮಾರು 4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ‘ಅಪ್ಲೈಡ್ ಇವಾಲ್ಸ್’ (Applied Evals) ತಂಡದ ನೇತೃತ್ವ ವಹಿಸಿದ್ದರು. ಕೃತಕ ಬುದ್ಧಿಮತ್ತೆಯ ಮುಂದುವರಿದ ಮಾದರಿಗಳ (Advanced AI models) ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವುದು ಹಾಗೂ ಅವುಗಳನ್ನು ಸುಧಾರಿಸುವುದು ಇವರ ಮುಖ್ಯ ಜವಾಬ್ದಾರಿಯಾಗಿತ್ತು.

ಇದನ್ನೂ ಓದಿ: ಬೆಂಗಳೂರು, ಮುಂಬೈನಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಕಚೇರಿಗಳ ಮೇಲೆ ಇಡಿ ದಾಳಿ; ಮಹತ್ವದ ಸಾಕ್ಷ್ಯಗಳು ವಶಕ್ಕೆ

ಶ್ಯಾಮಲ್ ಅನಾಡ್ಕತ್ ಭಾರತಕ್ಕೆ ಮರಳಲು ಕಾರಣವೇನು?

ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ಯಾಮಲ್, ಕೇವಲ ಸಿಲಿಕಾನ್ ವ್ಯಾಲಿಯಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ದೊಡ್ಡ AI ಸಂಸ್ಥೆಗಳನ್ನು ಭಾರತದಂತಹ ದೇಶಗಳಲ್ಲೂ ಕಟ್ಟಿ ಬೆಳೆಸಬಹುದು ಎಂಬುದನ್ನು ಸಾಬೀತುಪಡಿಸಲು ತಾವು ಭಾರತಕ್ಕೆ ಮರಳಿರುವುದಾಗಿ ತಿಳಿಸಿದ್ದಾರೆ.

ಭಾರತದಲ್ಲಿ ಬೆಳೆದ ತಮಗೆ ಇಲ್ಲಿನ ತಂತ್ರಜ್ಞಾನ ವಲಯದೊಂದಿಗೆ ಯಾವಾಗಲೂ ಆಳವಾದ ಸಂಪರ್ಕವಿತ್ತು. ಆರಂಭದಲ್ಲಿ ಜಾಗತಿಕ ತಂತ್ರಜ್ಞಾನದ ಕೇಂದ್ರಬಿಂದುವಾದ ಸಿಲಿಕಾನ್ ವ್ಯಾಲಿಯನ್ನು ಬಿಟ್ಟು ಬರುವುದು ತಪ್ಪು ನಿರ್ಧಾರ ಎನಿಸಿದರೂ, ಈಗ ಅದು ಅತ್ಯುತ್ತಮ ನಿರ್ಧಾರ ಎಂದು ತಮಗೆ ಮನವರಿಕೆ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಇಂಜಿನಿಯರ್‌ಗಳ ಬಗ್ಗೆ ಶ್ಯಾಮಲ್ ಅವರ ಅಭಿಪ್ರಾಯ

ಕಳೆದ ಕೆಲವು ವಾರಗಳಿಂದ ಭಾರತ ಮತ್ತು ಏಷ್ಯಾ-ಪೆಸಿಫಿಕ್ ವಲಯದ ಇಂಜಿನಿಯರ್‌ಗಳು, ಸಂಶೋಧಕರು ಮತ್ತು ಚಿಂತಕರೊಂದಿಗೆ ಶ್ಯಾಮಲ್ ಮಾತನಾಡಿದ್ದಾರೆ. ಭಾರತದಲ್ಲಿ ಪ್ರತಿಭೆ ಅಥವಾ ಸಾಮರ್ಥ್ಯದ ಕೊರತೆಯಿಲ್ಲ, ಆದರೆ ಜಾಗತಿಕ ಮಟ್ಟದಲ್ಲಿ ಜಗತ್ತನ್ನೇ ಬದಲಾಯಿಸಬಲ್ಲ ಸಂಸ್ಥೆಗಳನ್ನು ನಾವು ಇಲ್ಲೇ ನಿರ್ಮಿಸಬಹುದು ಎಂಬ “ಸಾಮೂಹಿಕ ಆತ್ಮವಿಶ್ವಾಸದ” (Collective Desire) ಕೊರತೆ ಮಾತ್ರ ಇತ್ತು, ಅದನ್ನು ಈಗ ಬದಲಾಯಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಷೇರುಬಜಾರು ಕಂಬ್ಯಾಕ್; ನಿನ್ನೆ ಕುಸಿದಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಳ್ಳಲು ಏನು ಕಾರಣ?

ಶ್ಯಾಮಲ್ ಅವರ ಮುಂದಿನ ಯೋಜನೆ ಏನು?

ಶ್ಯಾಮಲ್ ಅವರು ತಮ್ಮ ಮುಂದಿನ ರಹಸ್ಯ ಪ್ರಾಜೆಕ್ಟ್ ಅಥವಾ ಸ್ಟಾರ್ಟ್‌ಅಪ್‌ನ ನಿಖರವಾದ ವಿವರಗಳನ್ನು ಇನ್ನು ಬಹಿರಂಗಪಡಿಸಿಲ್ಲ. ಆದರೆ, ವಿಜ್ಞಾನದ ಪ್ರಗತಿಯನ್ನು ವೇಗಗೊಳಿಸುವ ಮತ್ತು ಎಲ್ಲರಿಗೂ ಪ್ರಯೋಜನಕಾರಿಯಾಗುವಂತಹ “ಸೂಪರ್ ಇಂಟೆಲಿಜೆನ್ಸ್” (Superintelligence) ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಾವು ಕೆಲಸ ಮಾಡುವುದಾಗಿ ಅವರು ಸುಳಿವು ನೀಡಿದ್ದಾರೆ. ತಮ್ಮ ಈ ಕನಸಿಗೆ ಕೈಜೋಡಿಸಲು ಇಚ್ಛಿಸುವ ಆಸಕ್ತರನ್ನು ತಮ್ಮನ್ನು ಸಂಪರ್ಕಿಸುವಂತೆ ಅವರು ಆಹ್ವಾನಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇಡಿ ಖೆಡ್ಡಾಕ್ಕೆ ಬಿದ್ದ ಸಚಿವ ಜಾರಕಿಹೊಳಿ ಬಾಮೈದ: ಮೆಗಾ ಕಾರ್ಯಾಚರಣೆಯಲ್ಲಿ ಏನೆಲ್ಲಾ ಸಿಕ್ತು? – Kannada News | ED Raid on Minister Satish Jarkiholi’s Relative: Benami Properties and Bar Licenses Unearthed

ಬೆಳಗಾವಿ, ಜೂನ್​​ 24: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್​​ಗೆ​ ಇಂದು ಇ.ಡಿ ಅಧಿಕಾರಿಗಳು (ED Raid) ಶಾಕ್ ಕೊಟ್ಟಿದ್ದಾರೆ. ಗೋವಾ, ಕರ್ನಾಟಕ, ರಾಜಸ್ಥಾನದ ಇ.ಡಿ ಅಧಿಕಾರಿಗಳ ತಂಡ ಮಂಜುನಾಥ್‌ಗೆ ಸಂಬಂಧಿಸಿದ 10ಕ್ಕೂ ಹೆಚ್ಚು ಕಡೆ ದಾಳಿ ಮಾಡಿದ್ದಾರೆ. ಬೇನಾಮಿ ಹೆಸರಿನಲ್ಲಿ ಜಮೀನು, ಬಾರ್, ರೆಸ್ಟೋರೆಂಟ್ ಸೇರಿದಂತೆ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ದಾಳಿ ಮಾಡಲಾಗಿದ್ದು, ದಾಳಿ ವೇಳೆ ಅವರ ಮನೆಯಲ್ಲಿ ಮಹತ್ವದ ದಾಖಲೆಗಳು, ಬೇನಾಮಿ ಬಾರ್​​ ಲೈಸೆನ್ಸ್, ಕೆಲ ಗುತ್ತಿಗೆ ದಾಖಲೆ, ಬಾಂಡ್​ಗಳು ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಆ ಮೂಲಕ ಬೇನಾಮಿ ಆಸ್ತಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದೀಗ ಮಂಜುನಾಥ್​ಗೆ ಬಂಧನದ ಭೀತಿ ಶುರುವಾಗಿದೆ.

ಮಂಜುನಾಥ್​ಗೆ ಬಂಧನದ ಭೀತಿ

ಇ.ಡಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡುವ ಮೂಲಕ ವೈ. ಮಂಜುನಾಥ್​​ಗೆ​ ಶಾಕ್​​ ನೀಡಿದ್ದಾರೆ. ಸದ್ಯ ಇನ್ನು 10 ಸ್ಥಳಗಳಲ್ಲಿ ಪರಿಶೀಲನೆ ಮುಂದುವರೆದಿದೆ. ಸತತ 10 ಗಂಟೆಗಳಿಂದ ದಾಖಲೆ ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ಗೌಪ್ಯ ಸ್ಥಳದಲ್ಲಿ ಮಂಜುನಾಥ್​ ವಿಚಾರಣೆ ನಡೆಸಿ ಇಡಿ ಅಧಿಕಾರಿಗಳು ವಾಪಸ್ ನಿವಾಸಕ್ಕೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಸತೀಶ್ ಜಾರಕಿಹೊಳಿ‌ ಬಾಮೈದ ಮಂಜುನಾಥ್​ಗೆ ಬಂಧನದ ಭೀತಿ ಶುರುವಾಗಿದ್ದು, ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆ ಇದೆ.

ಮೆಗಾ ಕಾರ್ಯಾಚರಣೆ ವೇಳೆ ಏನೆಲ್ಲಾ ಸಿಕ್ತು

ಬೆಳಗಾವಿಯ ಮಂಜುನಾಥ್ ಮನೆಯಲ್ಲಿ ಬೇನಾಮಿ ಆಸ್ತಿ ಪತ್ರ, ಬೇನಾಮಿ ಬಾರ್ ಲೈಸೆನ್ಸ್ ಪತ್ತೆಯಾಗಿದೆ. ಜೊತೆಗೆ ಚಿನ್ನಾಭರಣ ಮತ್ತು ಬೆಳ್ಳಿ ಸೇರಿದಂತೆ ಗುತ್ತಿಗೆ ದಾಖಲೆ, ಬಾಂಡ್‌ಗಳು ಸಿಕ್ಕಿವೆ. ಇತ್ತ ಬೆಂಗಳೂರಿನ ಮಂಜುನಾಥ್ ಮನೆಯಲ್ಲಿ ಬೇನಾಮಿ ಬಾರ್ ಲೈಸೆನ್ಸ್ ಜೊತೆಗೆ ಹಣ ಮತ್ತು ದಾಖಲೆ ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಮೈಸೂರಿನ ಮನೆಯಲ್ಲಿ ಬೈನಾಮಿ ಬಾರ್ ಲೈಸೆನ್ಸ್ ಸಿಕ್ಕಿದ್ದು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ಬಾರ್ ಓಪನ್ ಮಾಡಿದ್ದಾರೆ ಎನ್ನಲಾಗಿದೆ. ನೂರಕ್ಕೂ ಹೆಚ್ಚು ಬೇನಾಮಿ ಬಾರ್ ಇರಬಹುದು ಅಂತಾ ಲಿಕ್ಕರ್ ಮರ್ಚೆಂಟ್ಸ್ ಅಧ್ಯಕ್ಷ ಎಸ್.ಚಂದ್ರಶೇಖರ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್: ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ದಾಳಿ

ಮಂಜುನಾಥ್​ ರಿಯಲ್ ಎಸ್ಟೇಟ್, ವಿದೇಶದಲ್ಲಿ ಅಕ್ರಮ ಹಣ ಹೂಡಿಕೆ ಹಾಗೂ ಅನೇಕ ವ್ಯವಹಾರದಲ್ಲಿ ಹಣ ತೊಡಗಿಸಿದ್ದರು ಎನ್ನಲಾಗಿದೆ. ಇನ್ನು ಮೈಸೂರಿನಲ್ಲಿರುವ ಮಂಜುನಾಥ್​ ಆಪ್ತೆ ಯಮುನಾ ಮನೆ ಮೇಲೆಯೂ ದಾಳಿ ಮುಂದುವರೆದಿದೆ. ಯಮುನಾ ಮನೆಯಲ್ಲಿಯೂ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಅಬಕಾರಿ ಇಲಾಖೆಯ ತುಮಕೂರು ಡಿಸಿ ಸತೀಶ್ ಕಾಗಲೆ ಸೇರಿದ ಬೆಳಗಾವಿಯ ಐನಾಪುರ, ಸದಾಶಿವ ನಗರದ ಎಂಎಸ್‌ಐಎಲ್ ಮಾರ್ಟ್ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ.

ನಾಳೆ ಕೂಡ ದಾಳಿ ಮುಂದುವರೆಯುವ ಸಾಧ್ಯತೆ

ಇತ್ತ ಚಿಕ್ಕೋಡಿ ಡಿವೈಎಸ್ಪಿ ವಿಶ್ವನಾಥ ಗಾಣಿಗೇರ್ ಸೇರಿದ ಬಸವ ಕಾಲೋನಿಯ ಮನೆ ಹಾಗೂ ಶ್ರೀನಗರದ ಕಚೇರಿ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಳಗಾವಿಯ ಖ್ಯಾತ ರಿಯಲ್ ಎಸ್ಟೆಟ್ ಉದ್ಯಮಿ ನೂರಾನಿ ಸೇರಿದ ಜಾಧವ ನಗರದ ಅಪಾರ್ಟ್ ಮೆಂಟ್ ಮೇಲೂ ದಾಳಿ ಮಾಡಿ ಇಡಿ ಅಧಿಕಾರಿಗಳು ತಲಾಷ್ ನಡೆಸುತ್ತಿದ್ದಾರೆ. ದಾಳಿ ನಾಳೆಯೂ ಮುಂದುವರೆಯುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊಚ್ಚಿಯಿಂದ ಮುಂಬೈವರೆಗೆ, ಸಿನಿಪ್ರಿಯರ ಮನ ಗೆಲ್ಲುತ್ತಿರುವ ‘ಬಾಲನ್’ – Kannada News | Malayalam movie Balan The Boy getting good reviews from all over

ಮಲಯಾಳಂ ಚಿತ್ರರಂಗ (Malayalam Industry), ಪ್ರಸ್ತುತ ಭಾರತದ ಎಲ್ಲ ಚಿತ್ರರಂಗಗಳಿಗಿಂತಲೂ ಅತ್ಯಂತ ಗುಣಮಟ್ಟದ ಸಿನಿಮಾಗಳನ್ನು, ಕಂಟೆಂಟ್ ಹೊಂದಿರುವ ಸಿನಿಮಾಗಳನ್ನು ನೀಡುತ್ತಿದೆ. ಕಡಿಮೆ ಬಜೆಟ್​​ನ ಸಿನಿಮಾಗಳಾದರು ಕಂಟೆಂಟ್ ಮತ್ತು ಗುಣಮಟ್ಟದ ವಿಷಯದಲ್ಲಿ ಎಲ್ಲ ಚಿತ್ರರಂಗಗಳನ್ನು ಮಲಯಾಳಂ ಚಿತ್ರರಂಗ ಹಿಂದಿಕ್ಕಿದೆ. ಭಾರತೀಯ ಸಿನಿಮಾ ಪ್ರೇಮಿಗಳಲ್ಲಿ ‘ಮಲಯಾಳಂ ಸಿನಿಮಾ ಪ್ರೇಮಿಗಳು’ ಎಂಬ ಸಬ್ ಕ್ಯಾಟೆಗರಿ ಹುಟ್ಟಿಕೊಂಡಿದೆ. ಆ ಮಟ್ಟಿಗೆ ಮಲಯಾಳಂ ಸಿನಿಮಾಗಳು ಜನರನ್ನು ಸೆಳೆಯುತ್ತಿವೆ. ಇದೀಗ ಈ ಚಿತ್ರರಂಗದಿಂದ ಮತ್ತೊಂದು ಒಳ್ಳೆಯ ಸಿನಿಮಾ ತೆರೆಗೆ ಬಂದಿದೆ. ಅದುವೇ ‘ಬಾಲನ್: ದಿ ಬಾಯ್’.

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ‘ಬಾಲನ್: ದಿ ಬಾಯ್’ ಕಳೆದ ವಾರವಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕಳೆದು ಹೋಗಿರುವ ತನ್ನ ತಾಯಿಯನ್ನು ಹುಡುಕುತ್ತಾ ಹೊರಡುವ ಯುವಕನಿಗೆ ಎದುರಾಗುವ ಸತ್ಯಗಳು, ತನ್ನ ಬಾಲ್ಯ, ಎದುರಿಸುವ ಕಷ್ಟಗಳು, ಸಮಾಜದ ನಿಕೃಷ್ಟತೆ ಇನ್ನೂ ಹಲವು ವಿಷಯಗಳ ಮೇಲೆ ‘ಬಾಲನ್: ದಿ ಬಾಯ್’ ಸಿನಿಮಾ ಬೆಳಕು ಚೆಲ್ಲುತ್ತದೆ. ಸಿನಿಮಾ ನೋಡಿದವರೆಲ್ಲ ಸಿನಿಮಾದ ಕತೆ, ನಿರೂಪಣೆ, ಚಿತ್ರೀಕರಣ ಮತ್ತು ಸಂಗೀತವನ್ನು ಕೊಂಡಾಡುತ್ತಿದ್ದಾರೆ.

‘ಮಂಜ್ಞುಮೆಲ್ ಬಾಯ್ಸ್’ ಅಂಥಹಾ ಬ್ಲಾಕ್ ಬಸ್ಟರ್, ಅವಾರ್ಡ್ ವಿನ್ನಿಂಗ್ ಸಿನಿಮಾ ನಿರ್ದೇಶನ ಮಾಡಿರುವ ಚಿದಂಬರಂ ಇದೀಗ ‘ಬಾಲನ್’ ಸಿನಿಮಾ ಅನ್ನೂ ನಿರ್ದೇಶಿಸಿದ್ದಾರೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಮರ್ಶೆಗಳು ತುಂಬಿ ಹೋಗಿದ್ದು, ಎಲ್ಲ ವಿಮರ್ಶೆಗಳು ಸಹ ಇದೊಂದು ಅದ್ಭುತ ಸಿನಿಮಾ ಎಂದು ಸಾರಿ-ಸಾರಿ ಹೇಳುತ್ತಿವೆ. ಸಿನಿಮಾ ಅನ್ನು ಹಲವಾರು ಸಿನಿಮಾ ಸೆಲೆಬ್ರಿಟಿಗಳು ಸಹ ವೀಕ್ಷಿಸಿದ್ದು, ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಿಚ್ಚ ಸುದೀಪ್?

ಕೆವಿಎನ್ ಪ್ರೊಡಕ್ಷನ್ಸ್​​ ನವರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾ ಜೂನ್ 19ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಐದು ದಿನದಲ್ಲಿ ಸಿನಿಮಾ 10 ಕೋಟಿ ಮಾತ್ರವೇ ಗಳಿಕೆ ಮಾಡಿದೆ. ಆದರೆ ನಿಧಾನಕ್ಕೆ, ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚು ಮಾಡಿಕೊಳ್ಳುತ್ತಾ ಸಾಗುತ್ತಿದೆ. ಯಾವುದೇ ಸ್ಟಾರ್ ಹೀರೋ ಇಲ್ಲದೆ, ಕೇವಲ ಬಾಲಕ, ಯುವಕ ಮತ್ತು ಒಬ್ಬ ತಾಯಿಯೇ ಪ್ರಧಾನ ಪಾತ್ರವಾಗಿರುವ ಈ ಸಿನಿಮಾ ಐದು ದಿನಕ್ಕೆ 10 ಕೋಟಿ ಗಳಿಕೆ ಮಾಡಿರುವುದು ಸಣ್ಣ ಸಾಧನೆಯಲ್ಲ. ಸಿನಿಮಾದ ಬಗ್ಗೆ ಬಾಯಿ ಪ್ರಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಿನಿಮಾ ಇನ್ನಷ್ಟು ಹೆಚ್ಚು ಗಳಿಕೆ ಮಾಡುವ ವಿಶ್ವಾಸ ಸಿನಿಮಾ ಪ್ರೇಮಿಗಳದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ಣನ ಪಾತ್ರದಲ್ಲಿ ಮಿಂಚಲಿರುವ ಸಲ್ಮಾನ್ ಖಾನ್, ಪ್ರಭಾಸ್​​ರ ಮೀರಿಸಬಲ್ಲರೆ? – Kannada News | Salman Khan to act as Karna in Rakesh Omprakash’s movie

ಸಲ್ಮಾನ್ ಖಾನ್ (Salman Khan) ಇತ್ತೀಚೆಗೆ ಸಾಮಾನ್ಯ ಕಮರ್ಶಿಯಲ್ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ಎಲ್ಲ ಸಿನಿಮಾಗಳಲ್ಲೂ ಅವರದ್ದು ಒಂದೇ ರೀತಿಯ ನಟನೆ, ಒಂದೇ ರೀತಿಯ ಮ್ಯಾನರಿಸಂ. ಅವರ ವಯಸ್ಸು, ಅವರಿಗಿರುವ ಜನಪ್ರಿಯತೆ ಎಲ್ಲದರ ದೃಷ್ಟಿಯಿಂದ ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ಒಂದೇ ಟೆಂಪ್ಲೆಟ್​​ನ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಆದರೆ ಇದೀಗ ಸಲ್ಮಾನ್ ಖಾನ್ ತಮ್ಮ ಹಾದಿ ಬದಲಿಸುವ ಸೂಚನೆ ನೀಡಿದ್ದು, ‘ಮಾತೃಭೂಮಿ’ ಸಿನಿಮಾ ಮೂಲಕ ದೇಶಪ್ರೇಮದ ಕತೆ ಕೈಗೆತ್ತಿಕೊಂಡಿದ್ದಾರೆ. ಅದರ ಬಳಿಕ ಸೂಪರ್ ಹೀರೋ ಸಿನಿಮಾ ಒಂದನ್ನು ಸಹ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಆಶ್ಚರ್ಯಕರ ರೀತಿಯಲ್ಲಿ ಪೌರಾಣಿಕ ಕತೆಯುಳ್ಳ ಸಿನಿಮಾನಲ್ಲಿ ನಟಿಸಲು ಸಲ್ಮಾನ್ ಖಾನ್ ಮುಂದಾಗಿದ್ದಾರೆ.

ಸಲ್ಮಾನ್ ಖಾನ್​, ಇದೀಗ ಮಹಾಭಾರತದ ಅಪ್ರತಿಮ ಪಾತ್ರ ಕರ್ಣನ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ‘ರಂಗ್ ದೇ ಬಸಂತಿ’ ಅಂಥಹಾ ಬ್ಲಾಕ್ ಬಸ್ಟರ್ ಕಲ್ಟ್ ಸಿನಿಮಾ ನೀಡಿರುವ ನಿರ್ದೇಶಕ ರಾಕೇಶ್ ಓಂಪ್ರಕಾಶ್ ನಿರ್ದೇಶಿಸಲಿರುವ ಪೌರಾಣಿಕ ಸಿನಿಮಾನಲ್ಲಿ ಸಲ್ಮಾನ್ ಖಾನ್ ಕರ್ಣನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ಕರ್ಣನ ಕುರಿತಾದ ಕತೆಯನ್ನೇ ಹೊಂದಿದ್ದು, ಸಿನಿಮಾನಲ್ಲಿ ಸಲ್ಮಾನ್ ಖಾನ್ ಅವರದ್ದೇ ಪ್ರಮುಖ ಪಾತ್ರ ಆಗಲಿದೆ.

ಅಸಲಿಗೆ ಕೆಲ ವರ್ಷಗಳ ಮುಂಚೆ ಇದೇ ಕತೆಯನ್ನು ರಾಕೇಶ್ ಓಂಪ್ರಕಾಶ್ ಅವರು ತಮಿಳಿನ ಸ್ಟಾರ್ ನಟ ಸೂರ್ಯಗೆ ಹೇಳಿದ್ದರಂತೆ. ಈ ಸಿನಿಮಾ ಮೂಲಕ ಸೂರ್ಯ ಬಾಲಿವುಡ್​​ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿತ್ತು. ಆದರೆ ಇದೀಗ ರಾಕೇಶ್ ಅವರು ಸಲ್ಮಾನ್ ಖಾನ್ ಅವರನ್ನು ನಾಯಕನನ್ನಾಗಿ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಕರ್ಣನ ಪಾತ್ರ, ಸಲ್ಮಾನ್ ಖಾನ್ ಅವರಿಗೆ ಸೂಟ್ ಆಗುತ್ತದೆಯೇ ಇಲ್ಲವೇ ಎಂಬ ಬಗ್ಗೆ, ಖುದ್ದು ಸಲ್ಮಾನ್ ಖಾನ್ ಅಭಿಮಾನಿಗಳಿಗೇ ಈ ಬಗ್ಗೆ ಗೊಂದಲ ಇದೆ.

ಇದನ್ನೂ ಓದಿ:ರವಿವರ್ಮಾ ಅನ್ನು ಆತ್ಮೀಯವಾಗಿ ಆಲಿಂಗಿಸಿದ ಸಲ್ಮಾನ್ ಖಾನ್, ಆಮಿರ್ ಖಾನ್

2024ರಲ್ಲಿ ಬಿಡುಗಡೆ ಆದ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಅವರನ್ನು ಕರ್ಣನ ಪಾತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನಿ ಬಲು ಅದ್ಧೂರಿಯಾಗಿ ತೋರಿಸಿದ್ದಾರೆ. ಕರ್ಣ ಎಂದರೆ ಸಿನಿಮಾ ಪ್ರೇಮಿಗಳಿಗೆ ಪ್ರಭಾಸ್ ಪಾತ್ರವೇ ನೆನಪಾಗುವಂತಾಗಿದೆ. ಹೀಗಿರುವಾಗ ಸಲ್ಮಾನ್ ಖಾನ್ ಅವರು, ಪ್ರಭಾಸ್ ಅವರನ್ನು ಮೀರಿಸುವಂತೆ ಕರ್ಣನ ಪಾತ್ರಕ್ಕೆ ಜೀವ ತುಂಬಬಲ್ಲರೆ ಕಾದು ನೋಡಬೇಕಿದೆ.

ಸಲ್ಮಾನ್ ಖಾನ್ ಪ್ರಸ್ತುತ ‘ಮಾತೃಭೂಮಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ರಾಜ್ ಮತ್ತು ಡಿಕೆ ನಿರ್ದೇಶಿಸಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಜೊತೆಗೆ ಯಶ್ ರಾಜ್ ಫಿಲಮ್ಸ್​​ನವರು ‘ಟೈಗರ್’ ಸರಣಿಯ ಹೊಸ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಸಹ ಸಲ್ಮಾನ್ ಖಾನ್​​ಗೆ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. ಇವುಗಳ ಜೊತೆಗೆ ಇದೀಗ ಕರ್ಣ ಕತೆ ಆಧರಿತ ಸಿನಿಮಾನಲ್ಲಿ ನಟಿಸಲು ಸಲ್ಮಾನ್ ಖಾನ್ ಮುಂದಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್​ ಸೂರ್ಯವಂಶಿಗೆ ಇಂಗ್ಲೆಂಡ್‌ನಲ್ಲಿ ಪ್ರತ್ಯೇಕ ಡ್ರೆಸಿಂಗ್ ರೂಂ! ಕಾರಣವೇನು ಗೊತ್ತಾ? – Kannada News | Vaibhav Sooryavanshi: Why India’s Youngest Cricketer Needs a Separate Dressing Room in England

ಭಾರತ ಹಾಗೂ ಐರ್ಲೆಂಡ್ ನಡುವೆ ಎರಡು ಪಂದ್ಯಗಳ ಟಿ20 ಸರಣಿ ಜೂನ್ 26 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಐರ್ಲೆಂಡ್ ತಲುಪಿದೆ. ಈ ಸರಣಿ ಮುಗಿದ ಕೂಡಲೇ ಟೀಂ ಇಂಡಿಯಾ, ಇಂಗ್ಲೆಂಡ್​ಗೆ (India vs England) ಹಾರಲಿದೆ. ಅಲ್ಲಿ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಎರಡೂ ಪ್ರವಾಸಗಳಿಗೂ ಟೀಂ ಇಂಡಿಯಾದಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಆಯ್ಕೆಯಾಗಿದ್ದಾರೆ. ಕೇವಲ 15ನೇ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗನೆಂಬ ದಾಖಲೆ ವೈಭವ್ ಪಾಲಾಗಲಿದೆ. ಐರ್ಲೆಂಡ್ ಪ್ರವಾಸದಲ್ಲಿ ವೈಭವ್​ಗೆ ಆಡುವ ಅವಕಾಶ ಸಿಗದಿದ್ದರೂ, ಇಂಗ್ಲೆಂಡ್​ನಲ್ಲಿ ವೈಭವ್ ಆಡುವುದು ಖಚಿತ. ಈ ನಡುವೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಇಂಗ್ಲೆಂಡ್​ನಲ್ಲಿ ವೈಭವ್ ಪ್ರತ್ಯೇಕ ಡ್ರೆಸ್ಸಿಂಗ್ ರೂಂ ಬಳಸಬೇಕಾಗುತ್ತದೆ.

ವೈಭವ್​ಗೆ ಪ್ರತ್ಯೇಕ ಡ್ರೆಸಿಂಗ್ ರೂಂ

ವಾಸ್ತವವಾಗಿ ತಂಡದ ಎಲ್ಲಾ ಆಟಗಾರರು ಒಂದೇ ಡ್ರೆಸ್ಸಿಂಗ್ ರೂಮ್ ಬಳಸುವುದು ವಾಡಿಕೆ. ಆದರೆ ಇಂಗ್ಲೆಂಡ್​ನಲ್ಲಿ ಮಾತ್ರ ವೈಭವ್​ಗೆ ಈ ನಿಯಮ ಅನ್ವಯವಾಗುವುದಿಲ್ಲ. ಹೀಗಾಗಿ ವೈಭವ್ ಆಂಗ್ಲರ ನಾಡಿನಲ್ಲಿ ನಡೆಯುವ ಎಲ್ಲಾ 5 ಪಂದ್ಯಗಳಲ್ಲೂ ತಮ್ಮ ಬಟ್ಟೆ ಬದಲಿಸಲು ಪ್ರತ್ಯೇಕ ಡ್ರೆಸ್ಸಿಂಗ್ ರೂಮ್ ಬಳಸಬೇಕಾಗುತ್ತದೆ. ಇದಕ್ಕೆ ಕಾರಣ ಐಸಿಸಿ ಮತ್ತು ಇಂಗ್ಲೆಂಡ್‌ ಕ್ರಿಕೆಟ್​ನಲ್ಲಿನ ನಿಯಮ. ಅಷ್ಟಕ್ಕೂ ವೈಭವ್ ಯಾವ ಕಾರಣಕ್ಕೆ ಪ್ರತ್ಯೇಕ ಡ್ರೆಸ್ಸಿಂಗ್ ಕೊಠಡಿ ಬಳಸಬೇಕು? ಭಾರತದಲ್ಲಿ ಅಥವಾ ಇತರೆ ದೇಶಗಳಲ್ಲಿ ವೈಭವ್​ಗೆ ಯಾಕೆ ಈ ನಿಯಮ ಅನ್ವಯವಾಗಲಿಲ್ಲ ಎಂಬುದನ್ನು ನೋಡುವುದಾದರೆ..

  • ಐಸಿಸಿ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸುರಕ್ಷತೆ ಮತ್ತು ಮಕ್ಕಳ ರಕ್ಷಣಾ ನೀತಿಗಳ ಅಡಿಯಲ್ಲಿ, 16 ವರ್ಷದೊಳಗಿನ ಆಟಗಾರರು ವಯಸ್ಕರೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳುವಂತಿಲ್ಲ.
  • ಈ ನಿಯಮದನ್ವಯ 15 ವರ್ಷದವರಾಗಿರುವ ವೈಭವ್ ಇಂಗ್ಲೆಂಡ್‌ನ ಎಲ್ಲಾ ಐದು ಸ್ಥಳಗಳಲ್ಲಿ ಪಂದ್ಯಗಳ ಮೊದಲು ಮತ್ತು ನಂತರ ಬಟ್ಟೆ ಬದಲಾಯಿಸಲು ಅಥವಾ ಸಿದ್ಧರಾಗಲು ಪ್ರತ್ಯೇಕವಾದ ಬಟ್ಟೆ ಬದಲಾಯಿಸುವ ಕೋಣೆಯನ್ನು ಬಳಸಲಿದ್ದಾರೆ.
  • ಈ ನಿಯಮದಿಂದಾಗಿ ವೈಭವ್ ಅವರ ಆಟದ ಮೇಲಾಗಲಿ ಅಥವಾ ತಂಡದ ಮೀಟಿಂಗ್​ನ ಮೇಲಾಗಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಪಂದ್ಯಗಳ ಸಮಯದಲ್ಲಿ ಮತ್ತು ತಂಡದ ಮಾತುಕತೆಯ ವೇಳೆ ವೈಭವ್ ತಂಡದೊಂದಿಗೆ ಇರಬಹುದಾಗಿದೆ.

IND A vs SL A: ವೈಭವ್ ಸಿಡಿಲಬ್ಬರ..​ ತ್ರಿಕೋನ ಸರಣಿ ಗೆದ್ದ ಟೀಂ ಇಂಡಿಯಾ

ಈ ನಿಯಮವನ್ನು ಏಕೆ ಜಾರಿಗೆ ತರಲಾಗಿದೆ?

  • ಇಂಗ್ಲೆಂಡ್​ನ ಕ್ರೀಡಾ ವ್ಯವಸ್ಥೆಯಲ್ಲಿ ಇದು ಮಕ್ಕಳ ಸುರಕ್ಷತೆಗಾಗಿ ಸಾಮಾನ್ಯ ಆಡಳಿತಾತ್ಮಕ ನಿಯಮವಾಗಿದೆ. ಇದಕ್ಕೂ ಮೊದಲು, ಇಂಗ್ಲಿಷ್ ಫುಟ್‌ಬಾಲ್‌ನಲ್ಲಿ, ಆರ್ಸೆನಲ್ ಆಟಗಾರ ಮ್ಯಾಕ್ಸ್ ಡೌಮನ್‌ಗೆ 16 ವರ್ಷ ತುಂಬುವವರೆಗೆ ಪ್ರತ್ಯೇಕ ಬಟ್ಟೆ ಬದಲಾಯಿಸುವ ಕೋಣೆಯನ್ನು ನೀಡಲಾಗಿತ್ತು. ಅದರಂತೆ ಇದೀಗ ವೈಭವ್​​ಗೆ ಪ್ರತ್ಯೇಕ ಕೊಠಡಿ ನೀಡಲಾಗುತ್ತದೆ.
  • ಹಾಗೆಯೇ ಇಡೀ ಇಂಗ್ಲೆಂಡ್‌ ಪ್ರವಾಸದಲ್ಲಿ ವೈಭವ್ ಅವರ ಪೋಷಕರು ಕೂಡ ವೈಭವ್ ಅವರೊಂದಿಗೆ ಇರಲಿದ್ದಾರೆ. ಅಲ್ಲದೆ ತಂಡ ತಂಗುವ ಹೋಟೆಲ್‌ನಲ್ಲಿಯೇ ವೈಭವ್ ಪೋಷಕರು ವಾಸ್ತವ್ಯ ಹೂಡಲಿದ್ದು, ವೈಭವ್ ಅವರೊಂದಿಗೆ ಅವರ ಹೆತ್ತವರು ಕೂಡ ಒಂದೇ ಕೋಣೆಯಲ್ಲಿ ಇರುವ ಸಾಧ್ಯತೆಯೂ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:17 pm, Wed, 24 June 26

Source link

ಫುಟ್ ಪಾತ್ ತೆರವಿಗೆ ದಿಟ್ಟ ಹೆಜ್ಜೆ: ತೊಂದ್ರೆ ಬಂದ್ರೆ ನಿಮ್ಮ ಬೆನ್ನಿಗೆ ನಾನಿದ್ದೇನೆ ಎಂದ ಕೃಷ್ಣ ಬೈರೇಗೌಡ – Kannada News | Krishna byre gowda continues Meeting with GBA Officers, To Takes Class about Bengaluru Footpath

ಬೆಂಗಳೂರು, (ಜೂನ್ 24): ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (krishna byre gowda) ಅವರು ಪ್ರತಿದಿನ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು,  ಬೆಂಗಳೂರು ರಸ್ತೆಗಳ ಬಗ್ಗೆ  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾಯ್ತು. ಇದೀಗ ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಮುಂದಾಗಿದ್ದು, ಈ ಸಂಬಂಧಅದರಂತೆ ಇಂದು (ಜೂನ್ 24)  GBA ಮುಖ್ಯ ಆಯುಕ್ತರು, ನಗರ ಪಾಲಿಕೆಗಳ ಆಯುಕ್ತರು, ಜಂಟಿ ಆಯುಕ್ತರ ಸಭೆ ನಡೆಸಿದ್ದಾರೆ.  ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ ಜನ ಉಪಯೋಗಕ್ಕೆ ನೆರವಾಗುವಂತೆ ದುರಸ್ತಿ ಕಾಮಗಾರಿಗಳನ್ನು ನಡೆಸುವ ಕುರಿತು ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಫುಟ್ ಪಾತ್ ತೆರವಿಗೆ ಸಂಬಂಧ ತೊಂದರೆ ಬಂದರೆ ಅಧಿಕಾರಿಗಳ ಬೆನ್ನಿಗೆ ನಿಲ್ಲುವ ಮಾತುಗಳನ್ನಾಡಿದ್ದಾರೆ.

ಜನರ ಕಣ್ಣಿಗೆ ಕಾಣುವ ರೀತಿ ಸುಧಾರಣೆ ಆಗಲೇಬೇಕು. ಫುಟ್ ಪಾತ್ ಅತಿಕ್ರಮಣ ತಪ್ಪಿಸೋಕೆ ಕ್ರಿಯಾಯೋಜನೆ ಮಾಡಬೇಕು. ಫುಟ್ ಪಾತ್ ಅತಿಕ್ರಮಣ ಮಾಡದಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ಇದೆ . ಈ ವಿಚಾರವಾಗಿ ಈಗಾಗಲೇ ಸಾವಿರ ಬಾರಿ ಚರ್ಚೆ ಆಗಿದೆ. ಅದರ ಅರಿವು ನನಗೆ ಇದೆ. ಅಧಿಕಾರಿಗಳು Helpless ಇರಬಹುದು. ಆದರೆ, ಸರ್ಕಾರ helpless ಅಲ್ಲ. ಪಾದಚಾರಿ ಒತ್ತುವರಿ ತೆರವಿಗೆ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಜರುಗಿಸಿ. ನಿಮಗೆ ಏನೇ ತೊಂದರೆ ಬಂದರೂ ನಿಮ್ಮ ಬೆನ್ನಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version