ತಹಶೀಲ್ದಾರ್​ ಕಚೇರಿಯಲ್ಲಿಯಿದ್ದ ಕಡತಕ್ಕೇ ಇಲ್ಲ ಸೇಫ್ಟಿ: ರಾಜ್ಯ ಮಾಹಿತಿ ಆಯೋಗದ ಸೂಚನೆ ಬೆನ್ನಲ್ಲೇ FIR – Kannada News | RTI Shock in Tumakuru: FIR Filed After Key Land File Goes Missing From Tahsildar Office

ತಹಶೀಲ್ದಾರ್​ ಕಚೇರಿಯಲ್ಲಿಯಿದ್ದ ಕಡತಕ್ಕೇ ಇಲ್ಲ ಸೇಫ್ಟಿImage Credit source: Tv9 Kannada

ತುಮಕೂರು, ಮೇ 21: ತಹಶೀಲ್ದಾರ್​ ಕಚೇರಿಯಲ್ಲಿಯಿದ್ದ ಸರ್ಕಾರಿ ಕಡತ ನಾಪತ್ತೆಯಾಗಿರುವ ಘಟನೆ ತುಮಕೂರಲ್ಲಿ (Tumakuru) ನಡೆದಿದೆ. ಈ ಸಂಬಂಧ ಅರ್ಜಿದಾರ ರಾಜ್ಯ ಮಾಹಿತಿ ಆಯೋಗದ ಮೊರೆಹೋದ ಹಿನ್ನೆಲೆ, ಪರಿಶೀಲಿಸುವಂತೆ ಆಯೋಗ ಖಡಕ್ ಸೂಚನೆ ಕೊಟ್ಟ ಕಾರಣ ತುಮಕೂರು ತಹಶೀಲ್ದಾರ್ ರಾಜೇಶ್ವರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಡತ ನಾಪತ್ತೆ ಸಂಬಂಧ ಅವರು ದೂರು ನೀಡಿದ್ದು, ಅದರನ್ವಯ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಹೆಬ್ಬೂರು ಹೋಬಳಿಯ ಜೋಡಿ ಕಲ್ಕರೆ ಗ್ರಾಮದ ದೊಡ್ಡಶಾನಯ್ಯ ಎಂಬುವರ ಸಹಿ ಇದ್ದ ಮೂಲ ಅರ್ಜಿ, ವಂಶವೃಕ್ಷ ಮರಣ ಪ್ರಮಾಣ ಪತ್ರಗಳಿದ್ದ ಕಡತ ನಾಪತ್ತೆಯಾಗಿದ್ದು, ಈ ಬಗ್ಗೆ ಅರ್ಜಿದಾರರು ಹಲವು ಬಾರಿ ಗಮನಕ್ಕೆ ತಂದರು ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಅರ್ಜಿದಾರರಿಂದ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು. ಆ ಬೆನ್ನಲ್ಲೇ ದೂರು ಪರಿಶೀಲಿಸಿದ ನಾಪತ್ತೆಯಾದ ಫೈಲ್‌ಗಳ ಬಗ್ಗೆ ಅಫಿಡವಿಟ್ ಸಲ್ಲಿಸಲು ಆಯೋಗ ಡೆಡ್‌ಲೈನ್ ಕೊಟ್ಟ ಹಿನ್ನೆಲೆ ಎಚ್ಚೆತ್ತ ತಹಶೀಲ್ದಾರ್ ಕಡತ ನಾಪತ್ತೆ ಬಗ್ಗೆ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಉತ್ತರ ಜಿಲ್ಲೆಯಾಗುವುದೇ ತುಮಕೂರು? ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್​ ರಾಜೇಶ್ವರಿ, ಅರ್ಜಿದಾರರು ವಂಶವೃಕ್ಷದ ಮೂಲ ದಾಖಲಾತಿಗಳನ್ನು ಕೇಳಿ 2023ರ ಮಾರ್ಚ್​​ 11ರಂದು ಅರ್ಜಿ ಸಲ್ಲಿಸಿದ್ದರು. ಆ ವೇಳೆ ಹಿಂದಿನ ತಹಶೀಲ್ದಾರ್​​ ಮತ್ತು ಕಚೇರಿ ಸಿಬ್ಬಂದಿ ಈ ಬಗ್ಗೆ ಹುಡುಕಾಡಿದಾಗ ಕಾಗದಪತ್ತ ನಾಪತ್ತೆ ಆಗಿರುವುದು ಗೊತ್ತಾಗಿದ್ದು, ಈ ಬಗ್ಗೆ ಅರ್ಜಿದಾರರಿಗೆ ಹಿಂಬರಹ ನೀಡಲಾಗಿತ್ತು. ಈ ವಿಚಾರ ಆರ್​​ಟಿಐ ಕಮಿಷನ್​​ಗೆ ಹೋಗಿದ್ದು, ಅವರು ಕಾಗಪತ್ರಗಳನ್ನು ಅರ್ಜಿದಾರರಿಗೆ ಹುಡುಕಿಕೊಡಿ. ಇಲ್ಲದಿದ್ದರೆ ಆ ಬಗ್ಗೆ ಪೊಲೀಸ್​​ ದೂರು ದಾಖಲಿಸುವಂತೆ ನಿರ್ದೇಶನ ಬಂದಿತ್ತು. ಆ ಕಾರಣ ಕಂಪ್ಲೇಂಟ್​​ ನೀಡಿರೋದಾಗಿ ಅವರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜಿದಾರ ಶ್ರೀನಿವಾಸ ಕಲ್ಕೆರೆ, 4 ಸರ್ವೇ ನಂಬರ್​ಗಳನ್ನು ಹೊಂದಿರುವ ಈ ಜಾಗ ಇನಾಂ ಲ್ಯಾಂಡ್​​ ಆಗಿದ್ದು ಅದು ತನಗೆ ದಕ್ಕಬಾರದು ಎಂದೇ ಕಡತ ನಾಪತ್ತೆ ಆಗಿದೆ ಎಂದು ಸೃಷ್ಟಿಸಿದ್ದಾರೆ. 2020-21 ಆರ್​​ಐ ಮತ್ತು ವಿಎ ಇಬ್ಬರೂ ಈ ಕಡತಗಳನ್ನ ಪರಿಶೀಲನೆ ಮಾಡಿದ್ದಾರೆ. ಆ ಬಳಿಕ ಅವರೇ ಕದ್ದುಹೋಗಿದ್ದು, ಈಗ ಅದು ಕಳವಾಗಿದೆ ಎಂದು ತಹಶೀಲ್ದಾರ್​​ ಪೊಲೀಸ್​​ ದೂರು ನೀಡಿದ್ದಾರೆ. 5 ಎಕ್ರೆ 28 ಗುಂಟೆ ಜಮೀನಿಗೆ ಸೇರಿದ ದಾಖಲೆ ಅದಾಗಿದ್ದು, ನನಗೆ ಈ ಕಡತ ಯಾವ ಕಾರಣಕ್ಕೆ ಬೇಕು ಎಂಬುದನ್ನು ಕೂಡ ಅರ್ಜಿಯಲ್ಲಿ ತಿಳಿಸಿದ್ದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಪ್ಲೇಆಫ್​ಗೂ ಮುನ್ನ RCBಗೆ ಗುಡ್ ನ್ಯೂಸ್..!

Source link

Ebola Virus Threat: ಜಗತ್ತಿಗೆ ಮತ್ತೊಂದು ಮಾರಣಾಂತಿಕ ವೈರಸ್ ಎಂಟ್ರಿ!: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ – Kannada News | Global Ebola Alert: Africa Outbreak Sparks WHO Emergency Declaration, India Prepares

ದೆಹಲಿ, ಮೇ.21: ಜಗತ್ತು ಕೊರೊನಾ ಮಹಾಮಾರಿಯ ಕರಾಳ ದಿನಗಳಿಂದ ಈಗ ತಾನೇ ಹೊರ ಬಂದಿದೆ. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಭೀಕರ ಸೂಕ್ಷ್ಮಾಣು ಜೀವಿ ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಆಫ್ರಿಕಾ ಖಂಡದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಮಾರಣಾಂತಿಕ ‘ಎಬೋಲಾ ವೈರಸ್’ (Ebola Virus) ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯು (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು (PHEIC) ಘೋಷಿಸಿದೆ. ಇದರ ಬೆನ್ನಲ್ಲೇ ಭಾರತದಲ್ಲೂ ಸಹ ಮುನ್ನೆಚ್ಚರಿಕೆ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.

ಲಸಿಕೆ ಇಲ್ಲದ ಅಪರೂಪದ ತಳಿ; ಕೋವಿಡ್‌ನಂತೆ ಹರಡುವುದಿಲ್ಲ:

ಡಾ. ದಿವ್ಯಾ ಅವರ ಪ್ರಕಾರ, ಪ್ರಸ್ತುತ ಔಟ್‌ಬ್ರೇಕ್ (Outbreak) ಆಗಿರುವ ಎಬೋಲಾ ಬುಂಡಿಬುಗ್ಯೊ ತಳಿಗೆ ಯಾವುದೇ ಅಧಿಕೃತ ಲಸಿಕೆ (Vaccine) ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಈ ವೈರಸ್ ಸೋಂಕು ತಗುಲಿದರೆ ಸಾವಿನ ಪ್ರಮಾಣ (Mortality Rate) ಅತ್ಯಂತ ಹೆಚ್ಚಾಗಿದೆ. ಆದರೆ, ಇದು ಕೋವಿಡ್ ಮಹಾಮಾರಿಯಂತೆ ಗಾಳಿಯಲ್ಲಿ ಅತಿ ವೇಗವಾಗಿ ಪೆಂಡಾಮಿಕ್ (Pandemic) ಆಗುವ ಸಾಧ್ಯತೆ ತೀರಾ ಕಡಿಮೆ. ಈ ವೈರಸ್ ಮೂಲತಃ ಫ್ರೂಟ್ ಬಾವಲಿಗಳಿಂದ (Fruit Bats) ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಹರಡಲು ಸೋಂಕಿತರ ರಕ್ತ ಅಥವಾ ಶರೀರದ ದ್ರವಗಳ (Blood or Body Fluids) ನೇರ ಸಂಪರ್ಕ ಅಗತ್ಯವಾಗುತ್ತದೆ.

ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಠಿಣ ನಿಗಾ ಅಗತ್ಯ:

ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೆ, ರಿಸ್ಕ್ (Risk) ಹೆಚ್ಚಿರುವ ಕಾಂಗೋ, ಉಗಾಂಡ ಮತ್ತು ಇತರೆ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು. ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಸ್ಕ್ರೀನಿಂಗ್ (Screening at Airports) ನಡೆಸುವ ಜೊತೆಗೆ, ಅಗತ್ಯವಿದ್ದರೆ ಆಫ್ರಿಕಾ ಪ್ರವಾಸಿಗರಿಗೆ ಕ್ವಾರಂಟೈನ್ (Quarantine) ವ್ಯವಸ್ಥೆ ಮಾಡುವುದು ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿದೆ ಎಂದು ಡಾ. ದಿವ್ಯಾ ತಿಳಿಸಿದ್ದಾರೆ. ಸಾರ್ವಜನಿಕರು ಆಫ್ರಿಕಾ ದೇಶಗಳ ಪ್ರವಾಸದ ಬಗ್ಗೆ ಸದ್ಯಕ್ಕೆ ಎಚ್ಚರಿಕೆ ವಹಿಸುವುದು ಉತ್ತಮ.

ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ 4 ದಿನ ಭಾರಿ ಮಳೆ: ವಚನಾನಂದ ಸ್ವಾಮೀಜಿಗೆ ಜೈಲಾ? ಬೇಲಾ? ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು

ಎಬೋಲಾ ವೈರಸ್‌ನ ಪ್ರಮುಖ ಲಕ್ಷಣಗಳು:

ಸೋಂಕು ತಗುಲಿದ ನಂತರ ಆರಂಭದಲ್ಲಿ ತೀವ್ರ ಜ್ವರ, ತಲೆನೋವು, ಮೈಕೈನೋವು, ವಾಂತಿ ಮತ್ತು ಭೇದಿ ಕಂಡುಬರುತ್ತದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಲಿವರ್ ಮತ್ತು ಶ್ವಾಸಕೋಶದ ವೈಫಲ್ಯ (Liver and Lungs Failure) ಸಂಭವಿಸಿ ಸಾವು ಸಂಭವಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಪಿಂಗ್​ಗೆ ಅಸಿಸ್ಟೆಂಟ್​ಗಳನ್ನು ಕೊಡುತ್ತೆ ಈ ಸ್ಟಾರ್ಟಪ್; ಲಗೇಜ್ ಹೊರೋದ್ರಿಂದ ಹಿಡಿದು, ಗಾಡಿ ಹತ್ತಿಸೋವರೆಗೂ ಎಲ್ಲಾ ನೆರವೂ ಕೊಡ್ತಾರಂತೆ – Kannada News | Carrymen startup hassle free shopping delhi bag carrier service

ನವದೆಹಲಿ, ಮೇ 20: ಶಾಪಿಂಗ್ ಎಂದ್ರೆ ಯಾವ ಮಹಿಳೆಗೆ ಇಷ್ಟವಿಲ್ಲ ಹೇಳಿ..! ಆದರೆ, ಬಹಳ ಮಂದಿ ಶಾಪರ್ಸ್​ಗೆ ಒಂದೇ ಪ್ರಮುಖ ತಲೆನೋವು. ಅದು ಲಗೇಜ್​ಗಳನ್ನು ಹೊತ್ತು ಶಾಪ್​ನಿಂದ ಶಾಪ್​ಗೆ ತಿರುಗೋದು. ಕೈಯಲ್ಲಿ ಐದಾರು ಬ್ಯಾಗ್​ಗಳನ್ನು ಇಟ್ಟುಕೊಂಡು ನಡೆದಾಡುವುದರಿಂದ ಶಾಪಿಂಗ್​ನ ಖುಷಿಯೇ ಬತ್ತಿಹೋಗಿರುತ್ತೆ ಹೆಂಗಳೆಯರಿಗೆ. ಆ ಮಹಿಳೆಯ ಜೊತೆ ಶಾಪಿಂಗ್​ಗೆ ಬರುವ ಆಕೆಯ ಗಂಡನಿಗೋ ಅಥವಾ ಮಗನಿಗೋ ಈ ಲಗೇಜುಗಳನ್ನು ಹೊರುವ ಕಷ್ಟ ಬರಬಹುದು. ಈ ಕಷ್ಟ ನೋಡಲಾಗದೆ ದಿಲ್ಲಿಯ ಸ್ಟಾರ್ಟಪ್​ವೊಂದು ಪರಿಹಾರ ಹುಡುಕಿದೆ. ಅದೇ ಶಾಪಿಂಗ್ ಅಸಿಸ್ಟೆಂಟ್ ಸೇವೆ. ಈ ಸ್ಟಾರ್ಟಪ್​ನ ಹೆಸರು ಕ್ಯಾರಿಮೆನ್ (CarryMen).

‘ನೀವು ಶಾಪಿಂಗ್ ಮಾಡಿ, ನಾವು ಹೊರೆ ಹೊರುತ್ತೇವೆ’. ಇದು ದೆಹಲಿಯ ಕ್ಯಾರಿಮೆನ್ ಸಂಸ್ಥೆಯ ಧ್ಯೇಯ ನುಡಿ. ಗಂಟೆಗೆ 149 ರೂ ಚಾರ್ಜ್ ಮಾಡಲಾಗುತ್ತದೆ. 2 ಗಂಟೆ, 3 ಗಂಟೆ, 4 ಗಂಟೆಯ ಪ್ಯಾಕೇಜ್​ಗಳಿವೆ. ತರಬೇತಿ ಪಡೆದ ಸಹಾಯಕರನ್ನು ಜೊತೆಗೆ ಕಳುಹಿಸಿಕೊಡಲಾಗುತ್ತದೆ.

ಈ ಸಹಾಯಕರು ಶಾಪಿಂಗ್ ಬ್ಯಾಗ್​ಗಳನ್ನು ಹೊತ್ತುಕೊಂಡು ಜೊತೆಯಲ್ಲಿ ಬರುತ್ತಾರೆ. ಶಾಪ್​ಗಳಿಗೆ ಕರೆದೊಯ್ಯುತ್ತಾರೆ. ಗ್ರಾಹಕರನ್ನು ಕುಳ್ಳಿರಿಸಿ ಆಹಾರದ ಕ್ಯೂಗಳಲ್ಲಿ ತಾವು ನಿಲ್ಲುತ್ತಾರೆ. ಶಾಪಿಂಗ್ ಮಧ್ಯೆ ಗ್ರಾಹಕರಿಗೆ ಕೂರಲು ಜಾಗದ ವ್ಯವಸ್ಥೆ ಮಾಡುತ್ತಾರೆ. ಕೂರುವ ಜಾಗ ಸಿಗದೇ ಹೋದರೆ ತಾವೇ ತಂದ ಫೋಲ್ಡಬಲ್ ಚೇರ್ ಅನ್ನು ಕೊಟ್ಟು ಕೂರಿಸಲು ಸಹಾಯವಾಗುತ್ತಾರೆ.

ಇದನ್ನೂ ಓದಿ: ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ

‘ಜನರಿಗೆ ಶಾಪಿಂಗ್ ಮಾಡುವುದೆಂದರೆ ಇಷ್ಟ. ಆದರೆ, ಅದರಿಂದ ದೈಹಿಕ ಆಯಾಸವೂ ಇರುತ್ತದೆ. ಜನರು ಶಾಪಿಂಗ್ ಬ್ಯಾಗ್ ಹೊರಲೂ ಆಗದೆ, ಕೈಯಲ್ಲಿರುವ ಮೋಮೋ ತಿನ್ನಲೂ ಆಗದೆ ಚಿಂತಿತರಾಗುವುದುಂಟು. ಶಾಪಿಂಗ್ ಬ್ಯಾಗ್​ಗಳ ಹೊರೆ ಬಿಟ್ಟು ಜನರು ಶಾಪಿಂಗ್​ನ ಆನಂದ ಅನುಭವಿಸಬೇಕೆಂಬುದು ನಮ್ಮ ಉದ್ದೇಶ’ ಎಂದು ಕ್ಯಾರಿಮೆನ್ ಸಂಸ್ಥೆ ಹೇಳುತ್ತದೆ.

ಗರ್ಭಿಣಿಯಾಗಿರುವವರು, ಸಣ್ಣ ಮಕ್ಕಳಿರುವವರು, ಜನಸಂದಣಿ ಇರುವ ಮಾರುಕಟ್ಟೆ ಪ್ರದೇಶಗಳಲ್ಲಿ ಶಾಪಿಂಗ್ ಮಾಡುವವರು, ಜೊತೆಗೆ ಸಾಮಾನು ಹೊರಲು ನೆರವಾಗಲು ಯಾರೂ ಇಲ್ಲದವರು, ಇಂಥವರಿಗೆ ಶಾಪಿಂಗ್ ಅಸಿಸ್ಟೆಂಟ್​ಗಳು ಬೇಕಾಗಬಹುದು. ಗಂಟೆ ಲೆಕ್ಕದಲ್ಲಿ ಶುಲ್ಕ ಪಡೆಯಲಾಗುತ್ತದೆ.

ಅಸಿಸ್ಟೆಂಟ್​​ಗೆ ಹೆಚ್ಚು ಭಾರ ಹೊರಿಸುವಂತಿಲ್ಲ

ಮೇಲೆ ಹೇಳಲಾದಂತೆ ಶಾಪಿಂಗ್ ಅಸಿಸ್ಟೆಂಟ್​ಗಳಿಗೆ ಗಂಟೆಯ ಲೆಕ್ಕದಲ್ಲಿ ಶುಲ್ಕ ಇರುತ್ತದೆ. ಗಂಟೆಗೆ 149 ರೂ ನಿಗದಿ ಮಾಡಲಾಗಿದೆ. ಆದರೆ, ಒಬ್ಬ ಸಹಾಯಕರು ಎಲ್ಲಾ ತೂಕವನ್ನೂ ಹೊರಲು ಆಗುವುದಿಲ್ಲ. ಒಬ್ಬ 12 ಕಿಲೋ ಮಾತ್ರ ಹೊರುವುದು. ಅದಕ್ಕಿಂತ ಹೆಚ್ಚಿನ ತೂಕದ ಶಾಪಿಂಗ್ ಬ್ಯಾಗ್ಗಳಿದ್ದರೆ ಮತ್ತೊಬ್ಬ ಅಸಿಸ್ಟೆಂಟ್ ಅನ್ನು ಬುಕ್ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್

ದೆಹಲಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಈ ಸ್ಟಾರ್ಟಪ್ ಆರಂಭವಾಗಿದೆ. ಮೊದಲ ತಿಂಗಳಲ್ಲೇ 50 ಬುಕಿಂಗ್ ಆಗಿದೆಯಂತೆ. ದೊಡ್ಡ ಪ್ರಚಾರ ಇಲ್ಲದೆ, ಸೋಷಿಯಲ್ ಮೀಡಿಯಾ ಹಾಗೂ ಬಾಯಿಯಿಂದ ಬಾಯಿಗೆ ಈ ಸ್ಟಾರ್ಟಪ್ ಸೇವೆ ಪ್ರಚಾರ ಪಡೆಯುತ್ತಿದೆಯಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Tv9 Kannada News Live: ಇಂದಿನಿಂದ ರಾಜ್ಯಾದ್ಯಂತ 4 ದಿನ ಭಾರಿ ಮಳೆ: ವಚನಾನಂದ ಸ್ವಾಮೀಜಿಗೆ ಜೈಲಾ? ಬೇಲಾ? ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು – Kannada News | Today’s Top Karnataka Headlines: Rain Warning, Vachananda Case and Kusuma’s SSLC Success

ಬೆಂಗಳೂರು, ಮೇ.21: ಇಂದಿನಿಂದ ಮುಂದಿನ 4 ದಿನಗಳ ಕಾಲ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪೋಕ್ಸೊ ಪ್ರಕರಣದ ಆರೋಪಿ ವಚನಾನಂದ ಸ್ವಾಮೀಜಿ ಜಾಮೀನು ರದ್ದತಿ ಅರ್ಜಿಯ ವಿಚಾರಣೆ ಮೇ 29 ರಂದು ದಾವಣಗೆರೆ ಕೋರ್ಟ್‌ನಲ್ಲಿ ನಡೆಯಲಿದೆ. ಬೆಳಗಾವಿಯ ನಿಪ್ಪಾಣಿಯ ಪಟ್ಟಣಕುಡಿಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದ ಆಶ್ರಯ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ಗಲಾಟೆ ನಡೆದಿದೆ. ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಧೃತಿಗೆಡದೆ ಸ್ಟ್ರೇಚರ್ ಮೇಲೆಯೇ ಮಲಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಪಾಸಾದ ಕೋಲಾರದ ಕುಸುಮಾಳ ಸ್ಪೂರ್ತಿದಾಯಕ ಯಶೋಗಾಥೆ ಇಲ್ಲಿದೆ ನೋಡಿ.

ಇಂದಿನಿಂದ ರಾಜ್ಯಾದ್ಯಂತ 4 ದಿನ ಭಾರಿ ಮಳೆ:

ರಾಜ್ಯದ ಜನತೆಗೆ ಹವಾಮಾನ ಇಲಾಖೆ ಪ್ರಮುಖ ಮುನ್ಸೂಚನೆಯೊಂದನ್ನು ನೀಡಿದ್ದು, ಇಂದಿನಿಂದ (ಮೇ 21) ಮುಂದಿನ 4 ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ಗದಗದಂತಹ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ವಚನಾನಂದ ಸ್ವಾಮೀಜಿಗೆ ಜೈಲಾ? ಬೇಲಾ? ಮೇ 29ಕ್ಕೆ ನಿರ್ಧಾರ:

ಪೋಕ್ಸೊ (POCSO) ಪ್ರಕರಣದ ಆರೋಪ ಎದುರಿಸುತ್ತಿರುವ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರ ಕಾನೂನು ಹೋರಾಟ ತೀವ್ರಗೊಂಡಿದೆ. ಪ್ರಕರಣ ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಪಡೆದಿದ್ದ ಸ್ವಾಮೀಜಿಯ ಜಾಮೀನನ್ನು ರದ್ದುಗೊಳಿಸುವಂತೆ ಪೊಲೀಸರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದಾವಣಗೆರೆಯ ವಿಶೇಷ ಪೋಕ್ಸೊ ನ್ಯಾಯಾಲಯವು ಇದೇ ಮೇ 29 ರಂದು ಕೈಗೆತ್ತಿಕೊಳ್ಳಲಿದೆ.

ಶಾಸಕಿ ಶಶಿಕಲಾ ಜೊಲ್ಲೆ ಕಾರ್ಯಕ್ರಮಕ್ಕೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದಲ್ಲಿ ಆಶ್ರಯ ಯೋಜನೆಯ ಮನೆ ಹಂಚಿಕೆ ಕಾರ್ಯಕ್ರಮದ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಕಿತ್ತಾಟ ನಡೆದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ನಿಪ್ಪಾಣಿ ತಾಲೂಕಿನ ಪಟ್ಟಣಕುಡಿ ಗ್ರಾಮದಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಲಾಟರಿ ಮೂಲಕ 950 ಮನೆಗಳನ್ನು ಹಂಚಿಕೆ ಮಾಡುವ ಅಧಿಕೃತ ಕಾರ್ಯಕ್ರಮವನ್ನು ಶಾಸಕಿ ಶಶಿಕಲಾ ಜೊಲ್ಲೆ ಹಮ್ಮಿಕೊಂಡಿದ್ದರು.

ಇದನ್ನೂ ಓದಿ: ‘ಸುಪ್ರೀಂ’ನಲ್ಲಿ ಇಂದು ನಿರ್ಧಾರವಾಗುತ್ತಾ ಶೃಂಗೇರಿ ಮರು ಮತ ಎಣಿಕೆ ಭವಿಷ್ಯ?: ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು

ಕುಸುಮಾಗೆ ಶಾಸಕಿ ರೂಪಕಲಾ ಬಂಪರ್ ಗಿಫ್ಟ್!

ಕೋಲಾರದ ಕುಸುಮಾ ದೃಢ ಸಂಕಲ್ಪದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ದರ್ಜೆ ಗಳಿಸಿದ್ದಾರೆ. ಆಸ್ಪತ್ರೆಯಿಂದಲೇ ಪರೀಕ್ಷೆಗೆ ಬಂದ ಈಕೆಯ ಸಾಧನೆಗೆ ಶಾಸಕಿ ರೂಪಕಲಾ ಶಶಿಧರ್ ಸ್ಪಂದಿಸಿದ್ದಾರೆ. ಅವರಿಗೆ ವೈದ್ಯಕೀಯ ಹಾಗೂ ‘ಲೈಫ್ ಸೇವರ್’ ಸಹಯೋಗದೊಂದಿಗೆ ರೋಬೋಟಿಕ್ ಕೃತಕ ಕಾಲುಗಳನ್ನು ಜೋಡಿಸಲು ವ್ಯವಸ್ಥೆ ಮಾಡಿದ್ದಾರೆ. ಕುಸುಮಾಳ ಛಲ ಮತ್ತು ಶಾಸಕಿಯ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:57 am, Thu, 21 May 26

Source link

Video:ಮಗಳು ಕಾಣೆಯಾಗಿದ್ದಾಳೆ ಸ್ವಾಮಿ ಹುಡುಕಿಕೊಡಿ ಅಂದ್ರೆ, ಗಾಡೀಲಿ ಡೀಸೆಲ್​ ಇಲ್ಲ ಹಣ ಕೊಡಿ ಎಂದ ಪೊಲೀಸ್ ಇನ್​ಸ್ಪೆಕ್ಟರ್ – Kannada News | Viral Video Puts Nagpur Police Under Scrutiny in Missing Girl Case

ನಾಗ್ಪುರ, ಮೇ 21: ಮಹಾರಾಷ್ಟ್ರದ ನಾಗ್ಪುರದಲ್ಲಿ ಇಡೀ ಪೊಲೀಸ್ ವ್ಯವಸ್ಥೆಯೇ ತಲೆತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಪಂಚಪಾವೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರದಿಂದ ಅಪ್ರಾಪ್ತ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ದೂರು ನೀಡಲು ಠಾಣೆಗೆ ಓಡಿ ಬಂದಾಗ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಬುರಾವ್ ರಾವತ್ ಅವರು, ನಮ್ಮ ವಾಹನದಲ್ಲಿ ಡೀಸೆಲ್ ಇಲ್ಲ, ನಿಮ್ಮ ಮಗಳನ್ನು ಹುಡುಕಬೇಕಾದರೆ ಇಂಧನಕ್ಕೆ ಹಣ ಕೊಡಿ ಎಂದು ಉಡಾಫೆಯಾಗಿ ಹೇಳಿದ್ದಾರೆ.

ಈ ದಿಗ್ಭ್ರಮೆಗೊಳಿಸುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು. ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಈ ವಿಡಿಯೋವನ್ನು ಹಂಚಿಕೊಂಡು, ಇದು ವ್ಯವಸ್ಥೆಯ ಕುಸಿತ. ಗೃಹ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ಇರುವುದೇ? ಎಂದು ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರ, ತುರ್ತು ಸೇವೆಗಳಿಗೆ ಇಂಧನ ನೀಡುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಈ ಘಟನೆ ತೀವ್ರ ರಾಜಕೀಯ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು, ಬೇಜವಾಬ್ದಾರಿ ತೋರಿದ ಇನ್ಸ್‌ಪೆಕ್ಟರ್ ಬಾಬುರಾವ್ ರಾವತ್ ಅವರನ್ನು ತಕ್ಷಣವೇ ಕಂಟ್ರೋಲ್ ರೂಮ್‌ಗೆ ವರ್ಗಾಯಿಸಿ ತನಿಖೆಗೆ ಆದೇಶಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಪೊಲೀಸ್ ಅಧಿಕಾರಿಗೆ ಹಣ ಕೊಡುತ್ತಿರುವುದನ್ನು ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Pooja Guidelines: ಶಿವಲಿಂಗಕ್ಕೆ ಅರಿಶಿನ ಏಕೆ ಅರ್ಪಿಸಬಾರದು? ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ – Kannada News | Why Turmeric is Not Offered to Shivlinga: Spiritual Reasons and Pooja Guidelines

ಶಿವಲಿಂಗಕ್ಕೆ ಅರಿಶಿನವನ್ನು ಏಕೆ ಅರ್ಪಿಸಬಾರದು?Image Credit source: Pinterest

ಹಿಂದೂ ಧರ್ಮದಲ್ಲಿ ಶಿವಾರಾಧನೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭೋಲೇನಾಥ ಎಂದು ಕರೆಯಲ್ಪಡುವ ಶಿವನು ತನ್ನ ಭಕ್ತರ ಸಣ್ಣ ಭಕ್ತಿಗೂ ಪ್ರಸನ್ನನಾಗುವ ಮುಗ್ಧ ದೇವರೆಂಬ ನಂಬಿಕೆಯಿದೆ. ಶಿವನ ಪೂಜೆಯಲ್ಲಿ ಬಿಲ್ವಪತ್ರೆ, ಧತ್ತೂರಿ, ಗಂಗಾಜಲ, ಶ್ರೀಗಂಧ, ಭಾಂಗ್ ಮತ್ತು ಹಸಿ ಹಾಲನ್ನು ಅರ್ಪಿಸುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಆದರೆ, ಶಿವಪೂಜೆಯಲ್ಲಿ ಅರಿಶಿನವನ್ನು ಬಳಸುವುದು ನಿಷಿದ್ಧ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸುವುದರಿಂದ ಶಿವನು ಕೋಪಗೊಳ್ಳುತ್ತಾನೆ ಎಂಬ ನಂಬಿಕೆಯೂ ಇದೆ. ಹಾಗಾದರೆ, ಶಿವಲಿಂಗಕ್ಕೆ ಅರಿಶಿನವನ್ನು ಏಕೆ ಅರ್ಪಿಸಬಾರದು ಎಂಬುದರ ಹಿಂದಿನ ಕಾರಣಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಪುರುಷ ತತ್ವದ ಸಂಕೇತವಾಗಿರುವ ಶಿವಲಿಂಗ:

ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳ ಪ್ರಕಾರ, ಶಿವಲಿಂಗವನ್ನು ಬ್ರಹ್ಮಾಂಡದ ಶಕ್ತಿ ಮತ್ತು ಪುರುಷ ತತ್ವದ (ವೀರ್ಯ/ಸೃಷ್ಟಿಯ ಮೂಲ) ಸಂಕೇತವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಅರಿಶಿನವನ್ನು ಮುಖ್ಯವಾಗಿ ಸ್ತ್ರೀ ಸೌಂದರ್ಯ, ಶೃಂಗಾರ ಮತ್ತು ಸ್ತ್ರೀತ್ವಕ್ಕೆ ಸಂಬಂಧಿಸಿದ ವಸ್ತು ಎಂದು ಪರಿಗಣಿಸಲಾಗುತ್ತದೆ. ಅರಿಶಿನವು ಮಹಿಳೆಯರ ಸೌಂದರ್ಯ ವರ್ಧಕ ವಸ್ತುವಾಗಿರುವುದರಿಂದ, ಪುರುಷ ತತ್ವದ ಸಂಕೇತವಾದ ಶಿವಲಿಂಗಕ್ಕೆ ಇದನ್ನು ಅರ್ಪಿಸುವುದು ಶಾಸ್ತ್ರೋಕ್ತವಾಗಿ ಸೂಕ್ತವಲ್ಲ ಎಂದು ಹೇಳಲಾಗುತ್ತದೆ.

ಶಿವನಿಗೆ ಪ್ರಿಯವಾದ ತಂಪು ವಸ್ತುಗಳು:

ಜ್ಯೋತಿಷ್ಯ ಮತ್ತು ಆಯುರ್ವೇದದ ಪ್ರಕಾರ, ಅರಿಶಿನದ ಗುಣವು ತುಂಬಾ ಉಷ್ಣವಾಗಿರುತ್ತದೆ (ಬಿಸಿ). ಆದರೆ ಭಗವಾನ್ ಶಿವನು ಸದಾ ಶಾಂತ ಮತ್ತು ತಂಪಾದ ಪರಿಸರವನ್ನು ಇಷ್ಟಪಡುವ ದೇವನಾಗಿದ್ದಾನೆ. ಪೌರಾಣಿಕ ಕಥೆಗಳ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ಹೊರಬಂದ ಹಾಲಾಹಲ ವಿಷವನ್ನು ಶಿವನು ಕುಡಿದಾಗ, ಅವನ ದೇಹದಲ್ಲಿ ಅತಿಯಾದ ಶಾಖ ಉಂಟಾಯಿತು. ಆ ಶಾಖವನ್ನು ತಣಿಸಲು ದೇವತೆಗಳು ಅವನಿಗೆ ಜಲ, ಗಂಗಾಜಲ, ಹಾಲು ಮತ್ತು ಬಿಲ್ವಪತ್ರೆಗಳಂತಹ ತಂಪಾದ ವಸ್ತುಗಳನ್ನು ಅರ್ಪಿಸಿದರು. ಅರಿಶಿನವು ಬಿಸಿಯಾಗಿರುವುದರಿಂದ, ಅದನ್ನು ಶಿವಲಿಂಗಕ್ಕೆ ಅರ್ಪಿಸುವುದಿಲ್ಲ. ಬದಲಾಗಿ ಶಿವನಿಗೆ ತಂಪು ನೀಡುವ ವಸ್ತುಗಳನ್ನೇ ಅರ್ಪಿಸಲಾಗುತ್ತದೆ.

ಹರಿ-ಹರ ಪೂಜೆಯಲ್ಲಿನ ವ್ಯತ್ಯಾಸ:

ಭಗವಾನ್ ವಿಷ್ಣು (ಹರಿ) ಮತ್ತು ದೇವಗುರು ಬೃಹಸ್ಪತಿಯ ಪೂಜೆಯಲ್ಲಿ ಅರಿಶಿನದ ಬಳಕೆಗೆ ಅತ್ಯಂತ ಪ್ರಾಮುಖ್ಯತೆ ಇದೆ. ವಿಷ್ಣುವಿನ ಆರಾಧನೆಯಲ್ಲಿ ಅರಿಶಿನವನ್ನು ಮಂಗಳಕರ ಮತ್ತು ಪವಿತ್ರತೆಯ ಸಂಕೇತವಾಗಿ ಬಳಸಲಾಗುತ್ತದೆ. ಆದರೆ ಸಂಹಾರಕನೂ, ವೈರಾಗ್ಯದ ಮೂರ್ತಿಯೂ ಆದ ಶಿವನ (ಹರ) ಪೂಜಾ ವಿಧಾನಗಳು ವಿಷ್ಣುವಿನ ಪೂಜೆಗಿಂತ ಭಿನ್ನವಾಗಿವೆ. ಈ ಕಾರಣದಿಂದಲೂ ಶಿವಲಿಂಗಕ್ಕೆ ಅರಿಶಿನವನ್ನು ಹಚ್ಚುವುದಿಲ್ಲ.

ಜಲಧಾರಿಗೆ ಅರಿಶಿನ ಅರ್ಪಿಸಬಹುದೇ?

ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸುವುದು ನಿಷೇಧವಾಗಿದ್ದರೂ, ಶಿವಲಿಂಗದ ಕೆಳಗಿರುವ ಜಲಧಾರಿ ಅಥವಾ ಪಾಣಿಪೀಠಕ್ಕೆ ಅರಿಶಿನವನ್ನು ಅರ್ಪಿಸಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವಲಿಂಗದ ಮೇಲ್ಭಾಗವು ಭಗವಾನ್ ಶಿವನ ಸಂಕೇತವಾಗಿದ್ದರೆ, ಅದರ ಕೆಳಗಿರುವ ಜಲಧಾರಿಯು ಜಗನ್ಮಾತೆಯಾದ ಪಾರ್ವತಿ ದೇವಿಯ ಸ್ವರೂಪವಾಗಿದೆ. ಪಾರ್ವತಿ ದೇವಿಯು ಸ್ತ್ರೀ ಶಕ್ತಿಯಾಗಿರುವುದರಿಂದ, ದೇವಿಯನ್ನು ಪ್ರಸನ್ನಗೊಳಿಸಲು ಮತ್ತು ಆಕೆಯ ಆಶೀರ್ವಾದ ಪಡೆಯಲು ಜಲಧಾರಿಯ ಭಾಗಕ್ಕೆ ಭಕ್ತರು ಅರಿಶಿನವನ್ನು ಅರ್ಪಿಸಬಹುದಾಗಿದೆ.

ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲಿದೆಯೇ ಹೊರತು ಯಾವುದೇ ಮೂಢನಂಬಿಕೆಯನ್ನು ಉತ್ತೇಜಿಸುವುದಿಲ್ಲ.

Source link

Tamil Nadu Cabinet Expansion: ತಮಿಳುನಾಡು ಸರ್ಕಾರದ ಸಂಪುಟ ವಿಸ್ತರಣೆ, ವಿಜಯ್ ಸಂಪುಟ ಸೇರಿದ 23 ಶಾಸಕರು, ಕಾಂಗ್ರೆಸ್ ಶಾಸಕರಿಗೂ ಸಚಿವ ಸ್ಥಾನ – Kannada News | Tamil Nadu Cabinet Expansion: Congress Leaders Among New Faces in Tamil Nadu Cabinet Reshuffle

ಚೆನ್ನೈ, ಮೇ 21: ತಮಿಳುನಾಡು(Tamil Nadu) ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.. ಇಂದು (ಗುರುವಾರ) ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲರು ಒಟ್ಟು 23 ಶಾಸಕರಿಗೆ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ವಿಸ್ತರಣೆಯು ತಮಿಳುನಾಡು ರಾಜಕೀಯದಲ್ಲಿ ಹೊಸದೊಂದು ಯುಗಕ್ಕೆ ನಾಂದಿ ಹಾಡಿದೆ.

ಕಾಂಗ್ರೆಸ್‌ನ 59 ವರ್ಷಗಳ ವನವಾಸ ಅಂತ್ಯ
ಈ ಸಂಪುಟ ವಿಸ್ತರಣೆಯ ಅತ್ಯಂತ ಪ್ರಮುಖ ಹೈಲೈಟ್ ಎಂದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ 59 ವರ್ಷಗಳ ಸುದೀರ್ಘ ರಾಜಕೀಯ ಬರಗಾಲ ಕೊನೆಗೊಂಡಿದೆ. ಬರೋಬ್ಬರಿ 59 ವರ್ಷಗಳ ನಂತರ ಕಾಂಗ್ರೆಸ್ ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗಿದೆ. ಕಾಂಗ್ರೆಸ್‌ನ ಒಟ್ಟು 5 ಶಾಸಕರಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರೊಂದಿಗೆ ಮೈತ್ರಿಪಕ್ಷವಾದ ವಿಸಿಕೆ (VCK) ಯ ಇಬ್ಬರು ಶಾಸಕರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಲಾಗಿದೆ.

ಮತ್ತೊಂದು ಮಿತ್ರಪಕ್ಷವಾದ ಐಯುಎಂಎಲ್ ಕೂಡ ಸರ್ಕಾರ ಸೇರಲು ನಿರ್ಧರಿಸಿದೆಯಾದರೂ ಇಂದಿನ ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿದಿದೆ. ತನ್ನ ಇಬ್ಬರು ಶಾಸಕರಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಗೊಂದಲ ಇನ್ನೂ ಬಗೆಹರಿಯದ ಕಾರಣ, ಅಂತಿಮ ನಿರ್ಧಾರವಾದ ಬಳಿಕ ಅದರ ಶಾಸಕರು ಸಚಿವರಾಗಲಿದ್ದಾರೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆಯಲ್ಲಿ ವಿದೇಶಿಗರಿಂದ ಮತಚಲಾವಣೆ?: 10ಕ್ಕೂ ಹೆಚ್ಚು ಮಂದಿ ಬಂಧನ; ಫೇಲ್​​ ಆಯ್ತಾ SIR?

ವಿಜಯ್ ಸರ್ಕಾರದ ಬಲವೇನು?
ಇತ್ತೀಚಿನ ಚುನಾವಣೆಯಲ್ಲಿ ಸಿಎಂ ವಿಜಯ್ ಅವರ ಟಿವಿಕೆ (TVK) ಪಕ್ಷವು ಸ್ವಂತ ಬಲದಿಂದ 108 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಬಹುಮತಕ್ಕೆ 118 ಶಾಸಕರ ಅಗತ್ಯವಿತ್ತು. ಹೀಗಾಗಿ ವಿಜಯ್ ಅವರು ಕಾಂಗ್ರೆಸ್, ಎಡಪಂಥೀಯರು ಮತ್ತು ಐಯುಎಂಎಲ್ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಿದರು. ಅಷ್ಟೇ ಅಲ್ಲದೆ, ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಯ ಸಂದರ್ಭದಲ್ಲಿ ವಿರೋಧ ಪಕ್ಷವಾದ ಎಡಿಎಂಕೆಯ (ADMK) 24 ಬಂಡಾಯ ಶಾಸಕರು ಕೂಡ ವಿಜಯ್ ಅವರ ಕೈಹಿಡಿದರು. ಹೀಗಾಗಿ ಬಹುಮತಕ್ಕಿಂತ 26 ಹೆಚ್ಚು ಅಂದರೆ ಬರೋಬ್ಬರಿ 144 ಶಾಸಕರ ಬೆಂಬಲದೊಂದಿಗೆ ವಿಜಯ್ ಸರ್ಕಾರ ಸದ್ಯ ಸುಭದ್ರವಾಗಿದೆ.

ವಿಡಿಯೋ

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖ 23 ಶಾಸಕರು

ಶ್ರೀನಾಥ್, ಕಮಲಿ ಎಸ್., ಸಿ.ವಿಜಯಲಕ್ಷ್ಮಿ, ಆರ್.ವಿ. ರಂಜಿತ್‌ಕುಮಾರ್, ವಿನೋದ್, ರಾಜೀವ್, ಬಿ.ರಾಜ್‌ಕುಮಾರ್, ವಿ.ಗಾಂಧಿರಾಜ್, ಮಥನ್ ರಾಜಾ ಪಿ, ಜೆಗದೇಶ್ವರಿ ಕೆ, ರಾಜೇಶ್ ಕುಮಾರ್ ಎಸ್, ಎಂ.ವಿಜಯ್ ಬಾಲಾಜಿ, ಲೋಗೇಶ್ ತಮಿಳ್ಸೆಲ್ವನ್ ಡಿ, ವಿಜಯ್ ತಮಿಳನ್ ಪಾರ್ತಿಬನ್, ರಮೇಶ್, ಪಿ.ವಿಶ್ವನಾಥನ್, ಕುಮಾರ್ ಆರ್, ತೆನ್ನರಸು ಕೆ, ವಿ.ಸಂಪತ್ ಕುಮಾರ್, ಮೊಹಮ್ಮದ್ ಫರ್ವಾಸ್ ಜೆ ಮತ್ತು ಡಿ. ಇಂದು. ಒಟ್ಟಾರೆಯಾಗಿ, ಈ ನೂತನ ಸಂಪುಟ ವಿಸ್ತರಣೆಯು ತಮಿಳುನಾಡಿನಲ್ಲಿ ಸಿಎಂ ವಿಜಯ್ ಅವರ ಆಡಳಿತವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೈದಿಗಳಿಗೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ – Kannada News | Karnataka Prisons Undergo Major Reforms: DGP Alok Kumar Takes Strict Action

ಬೆಂಗಳೂರು, ಮೇ 21: ಕರ್ನಾಟಕ ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಯಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ. ಜೈಲುಗಳಲ್ಲಿ ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ನೆಲೆಸಿದ್ದ ಕೈದಿಗಳಿಗೆ ಬಿಗ್ ಶಾಕ್ ನೀಡಲಾಗಿದ್ದು, ಅವರ ಬ್ಯಾರಕ್‌ಗಳನ್ನು ಬದಲಾಯಿಸಲು ಸೂಚನೆ ನೀಡಲಾಗಿದೆ. ಸುಮಾರು 10, 15, 20 ವರ್ಷಗಳಿಂದ ಒಂದೇ ಬ್ಯಾರಕ್‌ನಲ್ಲಿ ಇರುತ್ತಿದ್ದ ಕೈದಿಗಳಿಗೆ ಇನ್ನು ಮುಂದೆ ಆಲ್ಫಾಬೆಟಿಕ್ ಆಧಾರದ ಮೇಲೆ ಬ್ಯಾರಕ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಕ್ರಮವು ಕೈದಿಗಳ ಆಯ್ಕೆಯ ಬ್ಯಾರಕ್‌ಗಳಿಗೆ ಕಡಿವಾಣ ಹಾಕುತ್ತದೆ. ಅಲ್ಲದೆ, ಮೊಬೈಲ್ ಫೋನ್‌ಗಳ ಅಕ್ರಮ ಬಳಕೆ ಮತ್ತು ಜೈಲಾಧಿಕಾರಿಗಳ ಮೂಲಕ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೂ ಈ ವ್ಯವಸ್ಥೆ ಬ್ರೇಕ್ ಹಾಕಲಿದೆ. ಹಿರಿಯ ಕೈದಿಗಳು ತಮ್ಮ ಪ್ರಭಾವ ಬಳಸಿಕೊಂಡು ತಮ್ಮಿಷ್ಟದ ಸೆಲ್‌ಗಳನ್ನು ಪಡೆಯುವುದನ್ನು ಮತ್ತು ಇತರ ಕೈದಿಗಳೊಂದಿಗೆ ಡೀಲ್ ಮಾಡುವುದನ್ನು ಈ ಹೊಸ ನಿಯಮಗಳು ತಡೆಯಲಿವೆ. ರಾಜ್ಯದ ಎಲ್ಲಾ ಜೈಲುಗಳಲ್ಲಿ ಈ ಹೊಸ ನಿಯಮ ಜಾರಿಯಾಗಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸಹ ಇದಕ್ಕೆ ಒಳಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rate: ಚಿನ್ನದ ಬೆಲೆ 145 ರೂ, ಬೆಳ್ಳಿ ಬೆಲೆ 5 ರೂ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 21st May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 21: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಗುರುವಾರ ಹೆಚ್ಚಿವೆ. ಅಪರಂಜಿ ಚಿನ್ನದ ಬೆಲೆ (gold rates) 16,000 ರೂ ಸಮೀಪಕ್ಕೆ ಹೋಗಿದೆ. 18 ಕ್ಯಾರಟ್ ಚಿನ್ನದ ಬೆಲೆ 12,000 ರೂ ಸಮೀಪ ದೌಡಾಯಿಸಿದೆ. 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು ಗ್ರಾಮ್​ಗೆ 145 ರೂ ಹೆಚ್ಚಿದೆ. ಕಳೆದ ಮೂರು ದಿನಗಳಿಂದ ಇದರ ಬೆಲೆಯಲ್ಲಿ 340 ರೂನಷ್ಟು ಏರಿದೆ. ವಿದೇಶಗಳಲ್ಲಿ ಇದರ ಬೆಲೆ ಏರುಪೇರಾಗಿದೆ. ಬೆಳ್ಳಿ ಬೆಲೆ ಸತತ ಇಳಿಕೆಯ ನಂತರ ಇಂದು ಗ್ರಾಮ್​ಗೆ 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,59,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 21ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,993 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,660 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,995 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,993 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,660 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,660 ರೂ
  • ಚೆನ್ನೈ: 14,810 ರೂ
  • ಮುಂಬೈ: 14,660 ರೂ
  • ದೆಹಲಿ: 14,675 ರೂ
  • ಕೋಲ್ಕತಾ: 14,660 ರೂ
  • ಕೇರಳ: 14,660 ರೂ
  • ಅಹ್ಮದಾಬಾದ್: 14,665 ರೂ
  • ಜೈಪುರ್: 14,675 ರೂ
  • ಲಕ್ನೋ: 14,675 ರೂ
  • ಭುವನೇಶ್ವರ್: 14,660 ರೂ

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 556 ರಿಂಗಿಟ್ (13,505 ರುಪಾಯಿ)
  • ದುಬೈ: 507 ಡಿರಾಮ್ (13,309 ರುಪಾಯಿ)
  • ಅಮೆರಿಕ: 141.50 ಡಾಲರ್ (13,640 ರುಪಾಯಿ)
  • ಸಿಂಗಾಪುರ: 180.90 ಸಿಂಗಾಪುರ್ ಡಾಲರ್ (13,628 ರುಪಾಯಿ)
  • ಕತಾರ್: 502.50 ಕತಾರಿ ರಿಯಾಲ್ (13,290 ರೂ)
  • ಸೌದಿ ಅರೇಬಿಯಾ: 514 ಸೌದಿ ರಿಯಾಲ್ (13,206 ರುಪಾಯಿ)
  • ಓಮನ್: 53.60 ಒಮಾನಿ ರಿಯಾಲ್ (13,423 ರುಪಾಯಿ)
  • ಕುವೇತ್: 41.70 ಕುವೇತಿ ದಿನಾರ್ (13,103 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 290 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 290 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version