ಬೆಂಗಳೂರು, ಮಾ.21: ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕೋರಮಂಗಲದ ಕಸ-ರಸ ಘಟಕದಲ್ಲಿ ಹಸಿ ಕಸದಿಂದ ಬಯೋಗ್ಯಾಸ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡಲಾಗಿದೆ. ಹಿಂದೆ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿದ್ದ ಈ ಸ್ಥಳದಲ್ಲಿ ಈಗ ಪ್ರತಿದಿನ 13 ಟನ್ ಹಸಿ ಕಸದಿಂದ ಗ್ಯಾಸ್ ಉತ್ಪಾದಿಸಲಾಗುತ್ತಿದೆ. 2018ರಲ್ಲಿ ಕಾರ್ಬನ್ ಮಾಸ್ಟರ್ಸ್ ಕಂಪನಿಯು 4 ಕೋಟಿ ರೂಪಾಯಿ ವೆಚ್ಚದಲ್ಲಿ ದಿನಕ್ಕೆ 8 ಟನ್ ಸಾಮರ್ಥ್ಯದ ಘಟಕವನ್ನು ಪ್ರಾರಂಭಿಸಿತ್ತು. ಇದೀಗ ಹೆಚ್ಚುವರಿ 5 ಟನ್ ಸಾಮರ್ಥ್ಯಕ್ಕೆ ಚಾಲನೆ ನೀಡಲಾಗಿದ್ದು, ಒಟ್ಟು 13 ಟನ್ ಹಸಿ ಕಸದಿಂದ ಗ್ಯಾಸ್ ಉತ್ಪಾದಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿದಿನ 2,500 ರಿಂದ 3,000 ಟನ್ ಹಸಿ ಕಸ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ ಅರ್ಧದಷ್ಟು ಹಸಿ ಕಸವೇ ಇರುತ್ತದೆ. ಹಸಿ ಕಸವನ್ನು ಡಂಪಿಂಗ್ ಯಾರ್ಡ್‌ಗಳಿಗೆ ಸುರಿಯುವುದರಿಂದ ವಾಸನೆ, ಸೊಳ್ಳೆ ಮತ್ತು ಜಲಮೂಲಗಳ ಮಾಲಿನ್ಯದಂತಹ ಸಮಸ್ಯೆಗಳು ಉಂಟಾಗುತ್ತವೆ. ಬಯೋಗ್ಯಾಸ್ ಉತ್ಪಾದನೆಯಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿ ಇದೆ. ಈ ಯೋಜನೆಯು ಇತರ ಕ್ಷೇತ್ರಗಳಿಗೂ ಮಾದರಿಯಾಗಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗವು (UPSC) ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ (CMS) 2026ರ ಅಡಿಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1,300ಕ್ಕೂ ಹೆಚ್ಚು ವೈದ್ಯಕೀಯ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ upsconline.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31.
ಹುದ್ದೆಗಳ ವಿವರ ಮತ್ತು ಹಂಚಿಕೆ:
ಒಟ್ಟು 1,300ಕ್ಕೂ ಅಧಿಕ ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:
ವೈದ್ಯಕೀಯ ಅಧಿಕಾರಿ ದರ್ಜೆ (ಸಾಮಾನ್ಯ ಕರ್ತವ್ಯ): 864 ಹುದ್ದೆಗಳು
ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿ: 450 ಹುದ್ದೆಗಳು
ದೆಹಲಿ ಮಹಾನಗರ ಪಾಲಿಕೆ (GDMO Grade-II): 30 ಹುದ್ದೆಗಳು
ನವದೆಹಲಿ ಮುನ್ಸಿಪಲ್ ಕೌನ್ಸಿಲ್ (MO): 14 ಹುದ್ದೆಗಳು
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಭಾರತೀಯ ವೈದ್ಯಕೀಯ ಮಂಡಳಿಯಿಂದ (NMC/MCI) ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಕಡ್ಡಾಯವಾಗಿ MBBS ಪದವಿ ಪಡೆದಿರಬೇಕು.
ವಯೋಮಿತಿ: ಆಗಸ್ಟ್ 1, 2026ಕ್ಕೆ ಅಭ್ಯರ್ಥಿಯ ವಯಸ್ಸು 32 ವರ್ಷ ಮೀರಿರಬಾರದು (ಅಂದರೆ ಆಗಸ್ಟ್ 2, 1994ಕ್ಕಿಂತ ಮೊದಲು ಜನಿಸಿರಬಾರದು). ಮೀಸಲಾತಿ ವರ್ಗದವರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
UPSC CMS ಆಯ್ಕೆ ಪ್ರಕ್ರಿಯೆಯು ಎರಡು ಮುಖ್ಯ ಹಂತಗಳನ್ನು ಒಳಗೊಂಡಿದೆ:
ಹಂತ 1 (ಕಂಪ್ಯೂಟರ್ ಆಧಾರಿತ ಪರೀಕ್ಷೆ): ತಲಾ 250 ಅಂಕಗಳ ಎರಡು ಪತ್ರಿಕೆಗಳಿರುತ್ತವೆ. ಇದರಲ್ಲಿ ಜನರಲ್ ಮೆಡಿಸಿನ್, ಸರ್ಜರಿ, ಗೈನೆಕಾಲಜಿ, ಪೀಡಿಯಾಟ್ರಿಕ್ಸ್ ಮತ್ತು ಸೋಶಿಯಲ್ ಮೆಡಿಸಿನ್ ವಿಷಯಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಹಂತ 2 (ವ್ಯಕ್ತಿತ್ವ ಪರೀಕ್ಷೆ/ಸಂದರ್ಶನ): ಮೊದಲ ಹಂತದಲ್ಲಿ ಉತ್ತೀರ್ಣರಾದವರನ್ನು 100 ಅಂಕಗಳ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅಂತಿಮವಾಗಿ ಆಯ್ಕೆಯಾದ ವೈದ್ಯರನ್ನು ಭಾರತೀಯ ರೈಲ್ವೆ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ವಿವಿಧ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 200ರೂ. ಶುಲ್ಕವಿರುತ್ತದೆ. ಆದರೆ ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ (PwD) ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜೀವನದಲ್ಲಿ ತಾಳ್ಮೆ ಎನ್ನುವಂತಹದ್ದು ತುಂಬಾನೇ ಮುಖ್ಯ. ಈ ತಾಳ್ಮೆ ಮತ್ತು ಸಹನೆ ಯಶಸ್ವಿ ಜೀವನಕ್ಕೆ ದಾರಿಮಾಡಿಕೊಡುತ್ತದೆ. ಹೀಗಿದ್ದರೂ ಸಹ ಅನೇಕರು ತಾಳ್ಮೆಯನ್ನು ಕಳೆದುಕೊಂಡು ಆತುರದ ನಿರ್ಧಾರಗಳನ್ನು (hasty decisions) ತೆಗೆದುಕೊಳ್ಳುತ್ತಾರೆ. ಈ ಆತುರದ ನಿರ್ಧಾರಗಳಿಂದ ಒಳ್ಳೆಯದಕ್ಕಿಂತ ಕೆಟ್ಟದ್ದು ಸಂಭವಿಸುವುದೇ ಹೆಚ್ಚು. ಹಾಗಾಗಿ ಯಾವುದೇ ವಿಚಾರದಲ್ಲೂ ಸಹ ಆತುರ ಪಡಬಾರದು ಎಂದು ಹಿರಿಯರು ಕಿವಿ ಮಾತು ಹೇಳುವುದು. ಅದರಲ್ಲೂ ಯಶಸ್ವಿ, ಸಮೃದ್ಧ ಜೀವನವನ್ನು ಬಯಸುವವರು ಜೀವನಕ್ಕೆ ಸಂಬಂಧಿಸಿದ ಈ ಐದು ವಿಚಾರಗಳ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಆತುರ ಪಡಲೇಬಾರದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಿದ್ರೆ ಚಾಣಕ್ಯರ ಪ್ರಕಾರ ಯಶಸ್ವಿ ಜೀವನಕ್ಕಾಗಿ ಯಾವ ವಿಚಾರಗಳ ಬಗ್ಗೆ ಆತುರ ಪಡಬಾರದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ.
ಜೀವನದಲ್ಲಿ ಎಂದಿಗೂ ಈ ವಿಚಾರಗಳಲ್ಲಿ ಆತುರ ಪಡಬಾರದು:
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮನುಷ್ಯನಾದವನು ತನ್ನ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡಲೇಬಾರದು ಎಂದು ಹೇಳಿದ್ದಾರೆ. ಮುಖ್ಯವಾಗಿ ಉದ್ಯೋಗ, ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸುವಂತಹ ಪ್ರಮುಖ ಸಂಗತಿಗಳ ಬಗ್ಗೆ ಆತುರಪಡಬಾರದು ಎಂದು ಹೇಳುತ್ತಾರೆ. ಸಂಪೂರ್ಣ ಮಾಹಿತಿಯನ್ನು ತಿಳಿಯದೆ ಮತ್ತು ಮುಂದೆ ಅದರಿಂದ ಏನೆಲ್ಲಾ ತೊಂದರೆಗಳು ಎದುರಾಗಬಹುದು ಎಂಬುದನ್ನು ತಿಳಿಯದೆ ತೆಗೆದುಕೊಳ್ಳುವ ನಿರ್ಧಾರಗಳು ನಂತರದ ಜೀವನದಲ್ಲಿ ಗಮನಾರ್ಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಜೀವನದ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ತಾಳ್ಮೆಯಿಂದ ವರ್ತಿಸುವುದು ಅತ್ಯಗತ್ಯ.
ಸಂಬಂಧಗಳನ್ನು ಬೆಳೆಸುವುದು ಮತ್ತು ಮುರಿಯುವುದು: ಚಾಣಕ್ಯ ನೀತಿಯ ಪ್ರಕಾರ, ಯಾರೊಂದಿಗಾದರೂ ಸ್ನೇಹ, ಸಂಬಂಧ ಬೆಳೆಸುವುದು ಅಥವಾ ಸಂಬಂಧವನ್ನು ಮುರಿಯುವುದು ಎರಡೂ ಬಹಳ ಸೂಕ್ಷ್ಮ ವಿಷಯಗಳು. ಕೆಲವೊಮ್ಮೆ, ಜನರು ಕೋಪದಿಂದ ಸಂಬಂಧವನ್ನು ಮುರಿಯುತ್ತಾರೆ, ಭಾವನೆಗಳಿಗೆ ಒಳಗಾಗಿ ಸಂಬಂಧವನ್ನು ಬೆಳೆಸುತ್ತಾರೆ. ಸಂಬಂಧಕ್ಕೆ ಸಂಬಂಧಿಸಿದ ಈ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದರಿಂದ ಮುಂದೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ, ಹಾಗಾಗಿ ಸಂಬಂಧಗಳ ವಿಷಯಕ್ಕೆ ಬಂದಾಗ, ನೀವು ಯಾವಾಗಲೂ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ: ಹಣದ ವಿಚಾರಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಚಾಣಕ್ಯ. ಹೂಡಿಕೆ ಮಾಡುವಾಗ, ಆಸ್ತಿ-ಬಂಗಾರದಂತಹ ಮೌಲ್ಯಯುತ ವಸ್ತುಗಳನ್ನು ಖರೀದಿಸುವಾಗ ನೂರು ಬಾರಿ ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಕೋಪದಲ್ಲಿರುವಾಗ ನಿರ್ಧಾಗಳನ್ನು ತೆಗೆದುಕೊಳ್ಳಬೇಡಿ: ಚಾಣಕ್ಯ ಹೇಳುವಂತೆ ಕೋಪವು ವ್ಯಕ್ತಿಯ ಬಹುದೊಡ್ಡ ಶತ್ರುವಾಗಿದ್ದು, ಇದು ಒಬ್ಬ ವ್ಯಕ್ತಿಯನ್ನು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಕೋಪದ ಸಮಯದಲ್ಲಿ ತೆಗೆದುಕೊಳ್ಳುವ ಮಾತುಗಳು ಮತ್ತು ಕ್ರಿಯೆಗಳು ನಿಮ್ಮ ಸಂಬಂಧಗಳಿಗೆ ಮಾತ್ರವಲ್ಲದೆ ನಿಮ್ಮ ಖ್ಯಾತಿಗೂ ತೀವ್ರ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ಕೋಪಗೊಂಡ ಸಂದರ್ಭದಲ್ಲಿ ಪ್ರತಿಕ್ರಿಯಿಸುವ ಮೊದಲು ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ನಂತರ ಶಾಂತವಾಗಿ ವಿಷಯಗಳ ಬಗ್ಗೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ.
ಯಾರನ್ನಾದರೂ ತಕ್ಷಣವೇ ನಂಬಲು ಹೋಗಬೇಡಿ: ಕೆಲವರು ತಮಗೆ ಯಾರೇ ಪರಿಚಯವಾದರೂ ಅವರನ್ನು ಬಹುಬೇಗನೆ ನಂಬುತ್ತಾರೆ. ಹೀಗೆ ನೀವು ಭೇಟಿಯಾಗುವ ಪ್ರತಿಯೊಬ್ಬರೂ ವಿಶ್ವಾಸಾರ್ಹರಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಏನು ಯೋಚಿಸದೆ ಯಾರನ್ನಾದರೂ ಕುರುಡಾಗಿ ನಂಬುವುದರಿಂದ ನೀವು ನಂಬಿಕೆ ದ್ರೋಹಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾರನ್ನೂ ಸಹ ಆತುರದಲ್ಲಿ ನಂಬಲು ಹೋಗಬೇಡಿ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ.
ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇತ್ತೀಚೆಗಷ್ಟೆ ಸಿನಿಮಾದ ವಿಶೇಷ ಪ್ರೀಮಿಯರ್ ಶೋ ಪ್ರದರ್ಶಿಸಲಾಯ್ತು. ಈ ಶೋನಲ್ಲಿ ಪವನ್ ಕಲ್ಯಾಣ್, ಚಿರಂಜೀವಿ, ಪವನ್ ಕಲ್ಯಾಣ್ ಪತ್ನಿ, ಚಿರಂಜೀವಿ ಪತ್ನಿ, ನಿರ್ದೇಶಕ ಹರೀಶ್ ಶಂಕರ್, ನಟಿ ಶ್ರೀಲೀಲಾ ಇನ್ನೂ ಹಲವರು ಭಾಗಿ ಆಗಿದ್ದರು. ನಟ ಚಿರಂಜೀವಿ ಅವರು, ಶ್ರೀಲೀಲಾ ಪಕ್ಕದಲ್ಲೇ ಕೂತು ಇಡೀ ಸಿನಿಮಾ ನೋಡಿದರು. ಸಿನಿಮಾ ನೋಡುವಾಗ ನಗುತ್ತಾ, ಕುಳಿತಿದ್ದ ಸೀಟಿನಲ್ಲೇ ಡ್ಯಾನ್ಸ್ ಮಾಡುತ್ತಾ ಸಖತ್ ಎಂಜಾಯ್ ಮಾಡಿದರು. ವಿಡಿಯೋ ನೋಡಿ…
ಸಿನಿಮಾ (Cinema) ರಂಗವೇ ಹಾಗೆ. ಎಲ್ಲೋ, ಹೇಗೋ ಇದ್ದವರು ಸಹ ಸ್ಟಾರ್ ಆಗಿ ಬಿಡುತ್ತಾರೆ, ಸ್ಟಾರ್ ಆಗಿ ಮೆರೆದವರು ಸಹ ಅದೃಷ್ಟ ಕೈಕೊಟ್ಟು ಪಾತಾಳ ಸೇರಿಬಿಡುತ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ದಕ್ಷಿಣ ಭಾರತ ಚಿತ್ರರಂಗದಲ್ಲಿದೆ. ಐಶ್ವರ್ಯಾ ರೈ, ಮಮ್ಮುಟಿ, ಮಾಧವನ್ ಇನ್ನೂ ಹಲವಾರು ಸ್ಟಾರ್ ನಟ-ನಟಿಯರು, ಹಲವು ಅತ್ಯುತ್ತಮ ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡಿ, ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ನಟನೋರ್ವ ಆ ಬಳಿಕ ಎಲ್ಲವನ್ನೂ ಕಳೆದುಕೊಂಡು ಚಿತ್ರರಂಗದಿಂದಲೇ ದೂರಾಗಿ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಾ, ಲಾರಿ ಓಡಿಸುತ್ತಾ ಜೀವನ ನಡೆಸಿ, ಇದೀಗ ಬರೋಬ್ಬರಿ 11 ವರ್ಷದ ಬಳಿಕ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಅದು ಇನ್ಯಾರೂ ಅಲ್ಲ ಕನ್ನಡದಲ್ಲೂ ನಟಿಸಿರುವ ತಮಿಳಿನ ನಟ ಅಬ್ಬಾಸ್.
1996 ರ ಬ್ಲಾಕ್ ಬಸ್ಟರ್, ಕಲ್ಟ್ ಕ್ಲಾಸಿಕ್ ಸಿನಿಮಾ ‘ಪ್ರೇಮ ದೇಸಂ’ ಸಿನಿಮಾ ಮೂಲಕ ನಟನೆ ಆರಂಭಿಸಿದ ಅಬ್ಬಾಸ್ ತಮ್ಮ ಅತ್ಯುತ್ತಮ ನಟನೆ ಮತ್ತು ಅದ್ಭುತ ಲುಕ್ಸ್ನಿಂದಾಗಿ ಬಹು ಬೇಗ ಸ್ಟಾರ್ ನಟ ಎನಿಸಿಕೊಂಡರು. ವರ್ಷಕ್ಕೆ ಏಳು-ಎಂಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದರು. ಕನ್ನಡದಲ್ಲಿ ಮಾಧವನ್ ಜೊತೆಗೆ ‘ಶಾಂತಿ, ಶಾಂತಿ ಶಾಂತಿ’ ಹೆಸರಿನ ಸಿನಿಮಾನಲ್ಲಿಯೂ ನಟಿಸಿದ್ದರು. ಐಶ್ವರ್ಯಾ ರೈ, ಕಮಲ್ ಹಾಸನ್, ರಜನೀಕಾಂತ್, ಮಮ್ಮುಟಿ ಇನ್ನೂ ಹಲವರೊಟ್ಟಿಗೆ ನಟಿಸಿದರು ಅಬ್ಬಾಸ್, 2000 ದಶಕದಲ್ಲೂ ಸ್ಟಾರ್ ಆಗಿದ್ದರು, ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದರು. ಆದರೆ ಆ ಬಳಿಕ ಅವರಿಗೆ ಅವಕಾಶಗಳು ಕಡಿಮೆ ಆದವು.
2015ರ ಬಳಿಕ ಚಿತ್ರರಂಗದಿಂದಲೇ ದೂರಾದ ಅಬ್ಬಾಸ್ ವಿದೇಶಕ್ಕೆ ಹೋದರು ಅಲ್ಲಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿದರು. ಲಾರಿ ಡ್ರೈವಿಂಗ್ ಮಾಡಿದರು. ಕಸ್ಟ್ರಕ್ಷನ್ ನಲ್ಲಿ ಕೆಲಸ ಮಾಡಿದರು. ಬಳಿಕ ಮೋಟಿವೇಷನಲ್ ಸ್ಪೀಕರ್ ಆದರು. ಆದರೆ ಇದೀಗ ಅವರು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಇದೀಗ 11 ವರ್ಷಗಳ ನಂತರ ಅಬ್ಬಾಸ್ ಮತ್ತೆ ಬಣ್ಣ ಹಚ್ಚಿದ್ದಾರೆ. ಜಿ.ವಿ. ಪ್ರಕಾಶ್ ನಟನೆಯ ‘ಹ್ಯಾಪಿ ರಾಜ್’ ಎಂಬ ತಮಿಳು ಚಿತ್ರದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಟ್ರೈಲರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅದರ ಜೊತೆಗೆ ಮಲಯಾಳಂನ ‘ಹಾಫ್’ ಹೆಸರಿನ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ಅದರ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ.
ಅಬ್ಬಾಸ್, ತಮಿಳಿನ ಜೊತೆಗೆ ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಸಿನಿಮಾನಲ್ಲಿಯೂ ನಟಿಸಿದ್ದಾರೆ. ಕನ್ನಡದ ‘ಶಾಂತಿ ಶಾಂತಿ ಶಾಂತಿ’ ಸಿನಿಮಾ ಅದಾದ ಬಳಿಕ ‘ಶ್ವೇತ ನಾಗ’, ‘ಅಪ್ಪು ಪಪ್ಪು’, ‘ಸವಾರಿ 2’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿರುವುದು ಅವರ ಹಳೆಯ ಅಭಿಮಾನಿಗಳಿಗೆ ಖುಷಿ ತಂದಿದೆ. ಮೊದಲಿನಂತೆ ಅವರಿಗೆ ಸ್ಟಾರ್ ಗಿರಿ ದೊರಕುತ್ತದೆಯೋ ಕಾದು ನೋಡಬೇಕಿದೆ.
ನೆಲಮಂಗಲ, ಮಾ.21: ಯುಗಾದಿ ಹಬ್ಬ ಮುಗಿಸಿ ಸಡಗರದಿಂದ ದೇವಸ್ಥಾನಕ್ಕೆ ಹೊರಟಿದ್ದ ಕುಟುಂಬಕ್ಕೆ ಕಾದಿತ್ತು ವಿಧಿಯ ಆಟ. ಶನಿವಾರದ ಹಿನ್ನೆಲೆ ಆಂಜನೇಯ ಸ್ವಾಮಿಯ ದರ್ಶನ ಪಡೆಯಲು ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ತಾಯಿಯ ಕಣ್ಣೆದುರೇ ಯಮಸ್ವರೂಪಿಯಾಗಿ ಬಂದ ಕ್ಯಾಂಟ್ರೋ ಲಾರಿ, ನಾಲ್ಕು ವರ್ಷದ ಮಗುವಿನ ಮೇಲೆ ಹರಿದು ಸಜೀವ ದಹನ ಮಾಡಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನುಮಂತೇಗೌಡನ ಪಾಳ್ಯದಲ್ಲಿ ನಡೆದಿದೆ.ನಾಲ್ಕು ವರ್ಷದ ನಿಶಿಕಾ ಮೃತಪಟ್ಟ ದುರ್ದೈವಿ. ಈಕೆ ರಾಜೇಂದ್ರ ಮತ್ತು ಲಾವಣ್ಯ ದಂಪತಿಯ ಮೊದಲ ಮಗಳು.
ತಾಯಿ ಲಾವಣ್ಯ ಅವರು ತನ್ನ ಎರಡನೇ ಮಗುವನ್ನು ಕಂಕಳಲ್ಲಿ ಇರಿಸಿಕೊಂಡು, ಮೊದಲ ಮಗಳು ನಿಶಿಕಾಳ ಕೈಹಿಡಿದು ಗೊಲ್ಲಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಿರಿದಾದ ರಸ್ತೆಯಲ್ಲಿ ವೇಗವಾಗಿ ಬಂದ ಕ್ಯಾಂಟ್ರೋ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಮಗುವಿನ ಮೇಲೆ ಹರಿದಿದೆ.
ಲಾರಿ ತಾಯಿ ಮತ್ತು ಮಗುವಿನ ಮೇಲೆಯೇ ಬಂದಿದ್ದರೂ, ತಾಯಿ ಲಾವಣ್ಯ ಮತ್ತು ಕಂಕಳಲ್ಲಿದ್ದ ಮತ್ತೊಂದು ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ನಿಶಿಕಾ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾಳೆ.ಅಪಘಾತದಿಂದ ರೊಚ್ಚಿಗೆದ್ದ ಸ್ಥಳೀಯರು ಲಾರಿಯ ಗಾಜುಗಳನ್ನು ಪುಡಿಪುಡಿ ಮಾಡಿ, ಚಾಲಕನಿಗೆ ತಕ್ಕ ಶಾಸ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಆನೇಕಲ್, ಮಾರ್ಚ್ 21: ಶಿವಮೊಗ್ಗದ ಹುಲಿಧಾಮದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹಾಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಮೃತ ಸಮೀಕ್ಷಾ ರೆಡ್ಡಿ ಮಾವ ನವೀನ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕಂದಿನಿಂದಲೂ ಕಾಡು ಪ್ರಾಣಿಗಳೆಂದರೆ ಸಮೀಕ್ಷಾಗೆ ಹೆಚ್ಚು ಪ್ರೀತಿ. ನೂರಾರು ಕೋಟಿ ರೂ ಆಸ್ತಿ ಇದ್ರೂ ಸೇವೆ ಮಾಡಬೇಕೆಂಬ ಹಂಬಲ ಇತ್ತು. ಮದುವೆ ಮಾಡಿಕೊಳ್ಳುವ ಯೋಚನೆ ಕೂಡ ಸಮೀಕ್ಷಾಗೆ ಇರಲಿಲ್ಲ. ಅಧಿಕಾರಿಗಳೇ ಹಾಸ್ಟೆಲ್ ಬಳಿ ಜೀಪ್ ಕಳುಹಿಸಿದ್ದಾರೆ. ಹಾಸ್ಟೆಲ್ ವಾರ್ಡನ್ ಇಬ್ಬರು ಯುವತಿಯರನ್ನ ಜೊತೆಗೆ ಕಳಿಸಿದ್ದಾರೆ. ಒಬ್ಬ ಹುಡುಗಿಯನ್ನು ನೀರಾನೆ ಬಳಿ ಕಳಿಸಲು ಕಾಮನ್ಸೆನ್ಸ್ ಬೇಕು. 20 ಸಿಂಹಗಳು ಸಹ ಒಂದು ನೀರಾನೆ ಸಮೀಪ ಹೋಗಲ್ಲ, ಅದರಲ್ಲೂ ನೀರಾನೆ ಗರ್ಭಿಣಿ ಇದ್ದು ಭಯ ಇರುತ್ತೆ. ವೈಲ್ಡ್‌ಲೈಫ್ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದಿದ್ದಾರೆ.
ಹಾಲಿ ಚಾಂಪಿಯನ್ ಆರ್ಸಿಬಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಇರಾದೆಯೊಂದಿಗೆ 2026 ರ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಿದೆ. ಇದಕ್ಕಾಗಿ ತಂಡ ಕೂಡ ಸಾಕಷ್ಟು ಬೆವರು ಹರಿಸುತ್ತಿದೆ. ಈಗಾಗಲೇ ಭಾಗಶಃ ಆಟಗಾರರು ತಂಡವನ್ನು ಕೂಡಿಕೊಂಡಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದಾಗ್ಯೂ ಕಳೆದ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದ್ದ ವೇಗದ ಬೌಲರ್ ಸುಳಿವೆ ಇಲ್ಲ.
ವಾಸ್ತವವಾಗಿ 2025 ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ತಂಡವನ್ನು ಚಾಂಪಿಯನ್ ಮಾಡಿದ ಬಳಿಕ ತಂಡದೊಂದಿಗೆ ಸಂಭ್ರಮಾಚರಣೆ ನಡೆಸಿ ತವರಿಗೆ ಮರಳಿದ್ದ ಯುವ ವೇಗದ ಬೌಲರ್ ಯಶ್ ದಯಾಳ್ ಅದಾದ ಬಳಿಕ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿದ್ದು ತೀರ ಕಡಿಮೆ. ಆದಾಗ್ಯೂ ಅವರು ಕೆಲವೇ ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿರುವುದಾಗಿ ವರದಿಯಾಗಿತ್ತು. ಇದಕ್ಕೆ ಪೂರಕವಾಗಿ ಫೋಟೋಗಳು ಕೂಡ ವೈರಲ್ ಆಗಿದ್ದವು.
ವೈಯಕ್ತಿಕ ಜೀವನದಲ್ಲಿ ಎದ್ದಿರುವ ಬಿರುಗಾಳಿಗೆ ಸಿಲುಕಿ ಒದ್ದಾಡುತ್ತಿರುವ ಯಶ್ ದಯಾಳ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದಂತೆ ಕಾಣುತ್ತಿದೆ. ಏಕೆಂದರೆ ಕಳೆದೊಂದು ವರ್ಷದಿಂದ ದಯಾಳ್ ದೇಶಿಯ ಕ್ರಿಕೆಟ್ನಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ಐಪಿಎಲ್ ಆರಂಭಕ್ಕೆ ಕೆಲವೇ ದಿನ ಬಾಕಿ ಉಳಿದಿದೆಯಾದರೂ ಆರ್ಸಿಬಿ ತಂಡದಲ್ಲಿ ಯಶ್ ದಯಾಳ್ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಇದು ಅಭಿಮಾನಿಗಳಲ್ಲಿ ಸಾಕಷ್ಟುನ ಅನುಮಾನಗಳನ್ನು ಹುಟ್ಟುಹಾಕಿದೆ. ವೈಯಕ್ತಿಕ ಬದುಕಿನಲ್ಲಿ ಎರಡೆರಡು ಅತ್ಯಾಚಾರ ಪ್ರಕರಣಗಳನ್ನು ಯಶ್ ದಯಾಳ್ ಎದುರಿಸುತ್ತಿದ್ದಾರೆ. ಒಂದು ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮತ್ತು ಇನ್ನೊಂದು ರಾಜಸ್ಥಾನದ ಜೈಪುರದಲ್ಲಿ ದಾಖಲಾಗಿದೆ. ಈ ಕಾನೂನು ತೊಡಕುಗಳು ಅವರ ಕ್ರಿಕೆಟ್ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತಿವೆ.
ಹೀಗಾಗಿ ಕ್ರಿಕೆಟ್ನಿಂದ ದೂರ ಉಳಿದಿರುವ ಯಶ್ ದಯಾಳ್ಗೆ ಆರ್ಸಿಬಿ ತಂಡದಿಂದ ಗೇಟ್ಪಾಸ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದಾಗ್ಯೂ ತಂಡದ ಬಸ್ನಲ್ಲಿನ ಗ್ರಾಫಿಕ್ಸ್ನಿಂದ ಯಶ್ ದಯಾಳ್ ಅವರನ್ನು ತೆಗೆದುಹಾಕಿರುವುದರಿಂದ ಈ ವದಂತಿಗಳು ಹರಡುತ್ತಿವೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಯಶ್ ದಯಾಳ್ ಕ್ರಿಕೆಟ್ನಿಂದ ದೂರವಿದ್ದು, ಅವರು ತಮ್ಮ ಬಾಲ್ಯದ ಕೋಚ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರ ಜೊತೆಗೆ ಕಳೆದ ಸೆಪ್ಟೆಂಬರ್ನಲ್ಲಿ ಯಶ್ ದಯಾಳ್ ಅವರಿಗೆ ಸೆಂಟರ್ ಆಫ್ ಎಕ್ಸಲೆನ್ಸ್ನಿಂದ ಕರೆ ಹೋಗಿತ್ತಾದರೂ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಯುಪಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ದಯಾಳ್ ತಮ್ಮ ಫೋನ್ ನಂಬರ್ ಅನ್ನು ಸಹ ಬದಲಾಯಿಸಿದ್ದಾರೆ ಎಂದು ವರದಿಯಾಗಿತ್ತು.
ಬೆಂಗಳೂರಿನ ಬೊಮ್ಮನಹಳ್ಳಿಯ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಸಿ. ಲೇಔಟ್‌ನ ಸಾಯಿ ರೆಸಿಡೆನ್ಸಿಯಲ್ಲಿ ಯುಗಾದಿ ದಿನದಂದು ಎರಡು ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ಮನೆ ಮುಂದಿನ ಸಿಸಿಟವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಕೃತ್ಯದ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಾಗತಿಕ ಯುದ್ಧದ ಆತಂಕದಿಂದ ಹೆಚ್ಚಿದ ಬೇಡಿಕೆಯೇ ಕಳ್ಳತನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಳ್ಳರ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇವತ್ತಿನ ಕಾಲದಲ್ಲಿ ಮೊಬೈಲ್ (mobile) ನಮ್ಮ ಜೀವನದ ಭಾಗವಾಗಿ ಹೋಗಿದೆ. ಕೆಲವರಂತೂ ತಮ್ಮ ದಿನದ ಹೆಚ್ಚಿನ ಸಮಯವನ್ನು ಮೊಬೈಲ್ ನೋಡುವುದರಲ್ಲಿಯೇ ಕಳೆಯುತ್ತಿದ್ದಾರೆ. ಹೆಚ್ಚು ಹೊತ್ತು ಮೊಬೈಲ್ ಬಳಸುವುದು ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಸಹ ಅನೇಕರು ಮೊಬೈಲ್ ಬಿಟ್ಟು ಇರುವುದೇ ಇಲ್ಲ. ಅದರಲ್ಲೂ ಅನೇಕರಿಗೆ ಮಲಗುವ ಮುನ್ನ ಮೊಬೈಲ್ ನೋಡ್ಲೇ ಬೇಕು. ಹೌದು ಹಲವರು ಸೋಷಿಯಲ್ ಮೀಡಿಯಾ ನೋಡುತ್ತಾ ರಾತ್ರಿ 12, 1 ಗಂಟೆಗಳ ಕಾಲ ಎಚ್ಚರವಾಗಿಯೇ ಇರುತ್ತಾರೆ. ಹೀಗೆ ಮಲಗುವ ಸಂದರ್ಭದಲ್ಲಿ ಮೊಬೈಲ್ ನೋಡುವಂತಹ ಅಭ್ಯಾಸ ನಿದ್ರೆಯ ಗುಣಮಟ್ಟ ಮಾತ್ರವಲ್ಲದೆ ಮಾನಸಿಕ, ದೈಹಿಕ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮವನ್ನು ಬೀರುತ್ತವೆ. ಹೀಗಿರುವಾಗ ಸತತ ಒಂದು ತಿಂಗಳುಗಳ ಕಾಲ ಮಲಗುವ ಮುನ್ನ ಮೊಬೈಲ್ ಬಳಸುವುದನ್ನು ನಿಲ್ಲಿಸಿದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.
ಒಂದು ತಿಂಗಳು ಮಲಗುವ ಮುನ್ನ ಮೊಬೈಲ್ ನೋಡದಿದ್ದರೆ ಏನಾಗುತ್ತದೆ ಗೊತ್ತಾ?
ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಮಲಗುವ ಮುನ್ನ ನಿಮ್ಮ ಮೊಬೈಲ್ ಫೋನ್ ನೋಡದಿರುವುದು ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಮೊಬೈಲ್ ಪರದೆಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ಉಂಟುಮಾಡುವ ಹಾರ್ಮೋನ್ ಆದ ಮೆಲಟೋನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಸರಿಯಾಗಿ ನಿದ್ರೆ ಬರುವುದಿಲ್ಲ. ಹೀಗಿರುವಾಗ ಮಲಗುವ ಮುನ್ನ ಮೊಬೈಲ್ ನೋಡದೆ, ಪುಸ್ತಕಗಳನ್ನು ಓದಿ ಮಲಗುವುದರಿಂದ ಮನಸ್ಸಿಗೆ ವಿಶ್ರಾಂತಿಯೂ ದೊರೆಯುತ್ತದೆ ಒಳ್ಳೆಯ ನಿದ್ರೆಯನ್ನೂ ಪಡೆಯಬಹುದು.
ಮಾನಸಿಕ ಶಾಂತಿ ಮತ್ತು ಗಮನವನ್ನು ಸುಧಾರಿಸುತ್ತದೆ: ರಾತ್ರಿ ಮಲಗುವ ಮುನ್ನ ಮೊಬೈಲ್ ಫೋನ್ ನೋಡುವುದನ್ನು ನಿಲ್ಲಿಸುವುದರಿಂದ ಮನಸ್ಸು ಸಕ್ರಿಯವಾಗಿರುತ್ತದೆ. ಮತ್ತು ಮಲಗುವ ಮುನ್ನ ಮನಸ್ಸು ಶಾಂತವಾಗಲು ಸಮಯ ಸಿಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಗಮನವನ್ನು ಸುಧಾರಿಸುತ್ತದೆ, ಮನಸ್ಸು ನಿರಾಳವಾಗಿ ನೆಮ್ಮದಿಯೂ ದೊರೆಯುತ್ತದೆ.
ಕಣ್ಣಿನ ಆಯಾಸ ಕಡಿಮೆ: ಮೊಬೈಲ್ ಪರದೆಗಳನ್ನು ನಿರಂತರವಾಗಿ ನೋಡುವುದರಿಂದ ಕಣ್ಣುಗಳ ಮೇಲೆ ಒತ್ತಡ ಉಂಟಾಗುತ್ತದೆ. ಹೀಗಿರುವಾಗ ಮಲಗುವ ಮುನ್ನ ಮೊಬೈಲ್ ಪರದೆಗಳನ್ನು ಬಳಸುವುದನ್ನು ನಿಲ್ಲಿಸುವುದರಿಂದ ಕಣ್ಣಿನ ಕಿರಿಕಿರಿ, ಶುಷ್ಕತೆ ಮತ್ತು ಆಯಾಸ ಕಡಿಮೆಯಾಗುತ್ತದೆ. ಈ ಅಭ್ಯಾಸವು ದೀರ್ಘಾವಧಿಯಲ್ಲಿ ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ದೈನಂದಿನ ದಿನಚರಿಯಲ್ಲಿ ಸುಧಾರಣೆ: ರಾತ್ರಿಯಲ್ಲಿ ಮೊಬೈಲ್ ಬಳಕೆ ಕಡಿಮೆಯಾದಾಗ, ನಿಯಮಿತವಾಗಿ ಮಲಗುವ ಸಮಯ ಸ್ಥಾಪನೆಯಾಗುತ್ತದೆ. ಇದು ಕ್ರಮೇಣ ದೇಹದ ನಿದ್ರೆಯ ಚಕ್ರವನ್ನು ಸಮತೋಲನಗೊಳಿಸುತ್ತದೆ. ನಿಮ್ಮ ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಒಟ್ಟಾರೆಯಾಗಿ ಒಂದು ತಿಂಗಳುಗಳ ಕಾಲ ಮಲಗುವ ಮುನ್ನ ಮೊಬೈಲ್ ಫೋನ್‌ಗಳನ್ನು ಬಳಸದಿರುವುದು ಒಂದು ಸಣ್ಣ ಬದಲಾವಣೆಯಂತೆ ಕಾಣಿಸಬಹುದು, ಆದರೆ ಇದು ನಿದ್ರೆ, ಮಾನಸಿಕ ಸ್ಥಿತಿಯ ಮೇಲೆ ಬೀರುವ ಸಕಾರಾತ್ಮಕ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಅಭ್ಯಾಸವನ್ನು ನಿರಂತರವಾಗಿ ಅಳವಡಿಸಿಕೊಂಡರೆ, ದೀರ್ಘಾವಧಿಯಲ್ಲಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.