10 ಫೋರ್, 2 ಸಿಕ್ಸ್​: ವಿಶ್ವ ದಾಖಲೆಯೇ ಉಡೀಸ್! – Kannada News | Fatima Sana Smashes Fastest Fifty in Women’s T20Is

ಪಾಕಿಸ್ತಾನ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಫಾತಿಮಾ ಸನಾ, ಕೇವಲ 15 ಎಸೆತಗಳಲ್ಲಿ 50 ರನ್ ಪೂರೈಸಿದರು. ಈ ಮೂಲಕ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಸನಾ ಇನಿಂಗ್ಸ್​ನ ಮುಖ್ಯಾಂಶಗಳು:

  •  ಬಿರುಗಾಳಿ ಬ್ಯಾಟಿಂಗ್: 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಫಾತಿಮಾ ಸನಾ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಬ್ಯಾಕ್ ಟು ಬ್ಯಾಕ್ ಸಿಕ್ಸ್-ಫೋರ್​ಗಳ ಸುರಿಮಳೆಯಾಯಿತು.
  •  ಒಂದೇ ಓವರ್‌ನಲ್ಲಿ 24 ರನ್: ಝಿಂಬಾಬ್ವೆಯ ನೋಮ್ವೆಲೊ ಸಿಬಾಂಡಾ ಎಸೆದ 19ನೇ ಓವರ್‌ನಲ್ಲಿ ಸನಾ 4, 4, 6, 6, 4 ರನ್ ಚಚ್ಚುವ ಮೂಲಕ ಕೇವಲ ಒಂದು ಓವರ್‌ನಲ್ಲಿ 24 ರನ್ ಕಲೆಹಾಕಿದರು.
  • ಅಂತಿಮ ಸ್ಕೋರ್: ಕೇವಲ 19 ಎಸೆತಗಳನ್ನು ಎದುರಿಸಿದ ಸನಾ, 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 62 ರನ್ ಚಚ್ಚಿದರು.

ದಾಖಲೆಗಳು ಉಡೀಸ್:

ಫಾತಿಮಾ ಸನಾ 15 ಎಸೆತಗಳ ಅರ್ಧಶತಕ ಸಿಡಿಸಿ ಮಹಿಳಾ ಮತ್ತು ಪುರುಷರ ಕ್ರಿಕೆಟ್‌ನ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ. ಅವುಗಳೆಂದರೆ…

  • ವಿಶ್ವ ದಾಖಲೆ ಉಡೀಸ್:  ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೋಫಿ ಡಿವೈನ್ (ನ್ಯೂಝಿಲೆಂಡ್), ಫೀಬಿ ಲಿಚ್‌ಫೀಲ್ಡ್ (ಆಸ್ಟ್ರೇಲಿಯಾ) ಮತ್ತು ರಿಚಾ ಘೋಷ್ (ಭಾರತ) 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು. ಇದೀಗ 15 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿ ಫಾತಿಮಾ ಸನಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
  • ಪಾಕಿಸ್ತಾನದ ಸಾರ್ವಕಾಲಿಕ ದಾಖಲೆ: ಪಾಕಿಸ್ತಾನ ಮಹಿಳಾ ತಂಡದ ನಿದಾ ದಾರ್ (20 ಎಸೆತ) ಮತ್ತು ಪಾಕಿಸ್ತಾನ ಪುರುಷರ ತಂಡದ ಶೋಯೆಬ್ ಮಲಿಕ್ (18 ಎಸೆತ) ಅವರ ಅತೀ ವೇಗದ ಅಂತಾರಾಷ್ಟ್ರೀಯ ಹಾಫ್ ಸೆಂಚುರಿ ದಾಖಲೆಗಳನ್ನೂ ಕೂಡ ಸನಾ ಮುರಿದಿದ್ದಾರೆ.

ಮಹಿಳಾ ಟಿ20ಐನಲ್ಲಿನ ಅತ್ಯಂತ ವೇಗದ ಅರ್ಧಶತಕಗಳು:

  1. ಫಾತಿಮಾ ಸನಾ (ಪಾಕಿಸ್ತಾನ್) – 15 ಎಸೆತಗಳು (vs ಝಿಂಬಾಬ್ವೆ, 2026)
  2.  ಸೋಫಿ ಡಿವೈನ್ (ನ್ಯೂಝಿಲೆಂಡ್) – 18 ಎಸೆತಗಳು (vs ಭಾರತ, 2015)
  3.  ಫೀಬಿ ಲಿಚ್‌ಫೀಲ್ಡ್ (ಆಸ್ಟ್ರೇಲಿಯಾ) – 18 ಎಸೆತಗಳು (vs ವೆಸ್ಟ್ ಇಂಡೀಸ್, 2023)
  4. ರಿಚಾ ಘೋಷ್ (ಭಾರತ) – 18 ಎಸೆತಗಳು (vs ವೆಸ್ಟ್ ಇಂಡೀಸ್, 2024)

ಇದನ್ನೂ ಓದಿ: ಸ್ವಾಭಿಮಾನವೇ ಮುಖ್ಯ… ಟೆಸ್ಟ್ ನಿವೃತ್ತಿಗೆ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಪಾಕ್ ತಂಡಕ್ಕೆ ಗೆಲುವು:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ ತಂಡ 17.1 ಓವರ್​ಗಳಲ್ಲಿ ಕೇವಲ 90 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕಿಸ್ತಾನ್ ತಂಡ 133 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

Source link

ನೀಟ್ ಹಗರಣಕ್ಕೆ ಮತ್ತೊಂದು ಬಲಿ; ಪತ್ರಿಕೆ ಸೋರಿಕೆಯಿಂದ ಪರೀಕ್ಷೆ ರದ್ದಾಗಿದ್ದಕ್ಕೆ 22 ವರ್ಷದ ವಿದ್ಯಾರ್ಥಿ ಸಾವು – Kannada News | Rajasthan NEET student Dies By Suicide in Sikar amid Paper leak Row

ನವದೆಹಲಿ, ಮೇ 16: ಮೇ ಮೊದಲ ವಾರದಲ್ಲಿ ನಡೆದಿದ್ದ ನೀಟ್ (NEET 2026) ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಆದೇಶ ಹೊರಡಿಸಿದೆ. ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಶುಕ್ರವಾರ ರಾಜಸ್ಥಾನದ ಸಿಕಾರ್‌ನಲ್ಲಿ 22 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಸಿಬಿಐ ತನಿಖೆ ಮುಂದುವರಿದಿದೆ. ಈಗಾಗಲೇ ಈ ಪ್ರಕರಣದ ಮುಖ್ಯ ಆರೋಪಿಯಾದ ಪ್ರೊಫೆಸರ್ ಪಿವಿ ಕುಲಕರ್ಣಿ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಆತನ ಸಾವಿಗೆ ಪರೀಕ್ಷೆ ರದ್ದತಿಯಿಂದ ಉಂಟಾದ ಖಿನ್ನತೆಯೇ ಕಾರಣ ಎಂದು ಹೇಳಿದ್ದು, ಅದರಲ್ಲಿ ಆತ ಉತ್ತಮ ಅಂಕಗಳನ್ನು ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದ ಎಂದು ಹೇಳಿದ್ದಾರೆ. ರಾಜಸ್ಥಾನದ ಜುನ್ಜುನು ಜಿಲ್ಲೆಯ ನಿವಾಸಿ ಪ್ರದೀಪ್ ಮೇಘವಾಲ್ ಎಂಬ 22 ವರ್ಷದ ಯುವಕನೇ ಮೃತ ವಿದ್ಯಾರ್ಥಿ. ಪ್ರದೀಪ್ ತನ್ನ ಸಹೋದರಿಯರೊಂದಿಗೆ ಸಿಕಾರ್‌ನ ಬಾಡಿಗೆ ರೂಂನಲ್ಲಿ ವಾಸಿಸುತ್ತಿದ್ದರು. ಕಳೆದ 3 ವರ್ಷಗಳಿಂದ ನೀಟ್‌ಗೆ ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ ಸಿಕ್ಕಿಬಿದ್ದ ನೀಟ್ ಹಗರಣದ ಕಿಂಗ್​ಪಿನ್; ಕೋಚಿಂಗ್​ ಕ್ಲಾಸ್​ನಲ್ಲಿ ಪ್ರಶ್ನೆ ಪತ್ರಿಕೆ ಹಂಚಿದ್ದ ಪ್ರೊಫೆಸರ್ ಬಂಧನ

ನೀಟ್ ಪರೀಕ್ಷೆ ರದ್ದಾದಾಗಲಿಂದ ಬಹಳ ಬೇಸರಗೊಂಡಿದ್ದ ಪ್ರದೀಪ್ ರೂಂನಲ್ಲಿಯೇ ತನ್ನ ಸಹೋದರಿಯ ದುಪಟ್ಟಾದಿಂದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. 3 ವರ್ಷಗಳಿಂದ ನೀಟ್​​ಗೆ ತಯಾರಿ ನಡೆಸುತ್ತಿದ್ದ ಪ್ರದೀಪ್ ಈ ಬಾರಿ ಸುಮಾರು 650 ಅಂಕಗಳನ್ನು ನಿರೀಕ್ಷಿಸಿದ್ದರು. ಆದರೆ ಪರೀಕ್ಷೆ ರದ್ದಾದ ನಂತರ ದುಃಖಿತನಾಗಿದ್ದರು ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ, ಪ್ರದೀಪ್ ಅವರ ಅಕ್ಕ ಬಾತ್​​ರೂಂನಲ್ಲಿದ್ದಾಗ ಅವರು ನೇಣು ಹಾಕಿಕೊಂಡಿದ್ದಾರೆ. ಬಾತ್​​ರೂಂನಿಂದ ಬಂದ ಆಕೆ ಪ್ರದೀಪ್ ಸೀಲಿಂಗ್ ಫ್ಯಾನ್‌ನಲ್ಲಿ ನೇತಾಡುತ್ತಿರುವುದನ್ನು ಕಂಡು ಆಘಾತಗೊಂಡು ತಕ್ಷಣ ಕತ್ತರಿಯಿಂದ ದುಪಟ್ಟಾ ಕತ್ತರಿಸಿದ್ದಾರೆ. ತಕ್ಷಣ ಮನೆ ಮಾಲೀಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರದೀಪ್​ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಅಲ್ಲಿ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಸಿಬಿಐನಿಂದ ಮಹತ್ವದ ಸಾಕ್ಷಿ ಪತ್ತೆ

ನೀಟ್ ಪರೀಕ್ಷೆ ರದ್ದಾದ ಬಳಿಕ ದೇಶಾದ್ಯಂತ ಇದೇ ರೀತಿಯ ಕೆಲವು ಘಟನೆಗಳಳು ನಡೆದಿವೆ. ದೆಹಲಿಯ ಆಜಾದ್‌ಪುರದಲ್ಲಿ 20 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಅಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿರಲಿಲ್ಲ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ.

ಉತ್ತರ ಪ್ರದೇಶದ ಲಖಿಂಪುರ ಖೇರಿಯ 21 ವರ್ಷದ ರಿತಿಕ್ ಮಿಶ್ರಾ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ತಿಳಿದು ಮನನೊಂದು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಅವರು ಮೂರನೇ ಬಾರಿ ನೀಟ್ ಪರೀಕ್ಷೆ ಬರೆದಿದ್ದು, ಉತ್ತೀರ್ಣವಾಗುವ ನಿರೀಕ್ಷೆಯಲ್ಲಿದ್ದರು. ಅಲ್ಲಿ ಕೂಡ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಆದರೆ, ಅವರ ಕುಟುಂಬವು ಈ ಘಟನೆಗೆ ಪರೀಕ್ಷಾ ವಿವಾದವೇ ಕಾರಣ ಎಂದು ಹೇಳಿದೆ.

ಹಾಗೇ, ದಕ್ಷಿಣ ಗೋವಾ ಜಿಲ್ಲೆಯಲ್ಲಿ 17 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಸಂಜೆ ಮಾರ್ಗೋದಲ್ಲಿರುವ ತನ್ನ ಮನೆಯಲ್ಲಿ ಅವರು ನೇಣು ಬಿಗಿದುಕೊಂಡಿದ್ದರು. ನೀಟ್-ಯುಜಿ 2026 ಪರೀಕ್ಷೆಗೆ ಹಾಜರಾಗಿದ್ದ ಆತ ಸೂಸೈಡ್ ನೋಟ್​​ನಲ್ಲಿ ತನ್ನ ಸಾವಿಗೆ ಶೈಕ್ಷಣಿಕ ಒತ್ತಡ ಕಾರಣ ಎಂದು ಬರೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಯೂಆರ್ ಕೋಡ್ ಮೆನು ಬಳಸಿ ಫುಡ್​ ಆರ್ಡರ್​ ಮಾಡಿದ ಯುವತಿ; ಮಧ್ಯರಾತ್ರಿ ರೆಸ್ಟೋರೆಂಟ್ ಸಿಬ್ಬಂದಿಯಿಂದ ಮೆಸೇಜ್​ ಮೂಲಕ ಕಿರುಕುಳ! – Kannada News | Customer Data Security: Pune QR Code Scam and Digital Menu Privacy Concerns

ಯುವತಿಗೆ ಕಂಟಕವಾದ ಕ್ಯೂಆರ್ ಕೋಡ್Image Credit source: Pinterest

ಪುಣೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಡಿಜಿಟಲ್ ಆರ್ಡರ್ ವ್ಯವಸ್ಥೆಯಲ್ಲಿ ಗ್ರಾಹಕರ ವೈಯಕ್ತಿಕ ಮಾಹಿತಿ (Data Privacy) ಎಷ್ಟು ಸುರಕ್ಷಿತವಾಗಿದೆ ಎಂಬ ಗಂಭೀರ ಪ್ರಶ್ನೆಯನ್ನು ಮೂಡಿಸಿದೆ. ರೆಸ್ಟೋರೆಂಟ್‌ನ ಕ್ಯೂಆರ್ ಕೋಡ್ ಆಧಾರಿತ ಮೆನು ಬಳಸಿ ಊಟ ಆರ್ಡರ್​​ ಮಾಡಿದ್ದ ಯುವತಿಯ ಫೋನ್ ನಂಬರ್ ಪಡೆದ ಸಿಬ್ಬಂದಿ, ಆಕೆಗೆ ಮಧ್ಯರಾತ್ರಿ ಅಸಭ್ಯವಾಗಿ ಮೆಸೇಜ್ ಮಾಡಿ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಏನಿದು ಘಟನೆ?

ಪುಣೆ ಮೂಲದ ಕಂಟೆಂಟ್ ಕ್ರಿಯೇಟರ್ ಮತ್ತು ಇನ್‌ಫ್ಲುಯೆನ್ಸರ್ ಆದ ರಿಷಿಕಾ ದತ್ತಾ ಅವರು ಇತ್ತೀಚೆಗೆ ಪುಣೆಯ ಎಫ್.ಸಿ. ರೋಡ್‌ನಲ್ಲಿರುವ ರೆಸ್ಟೋರೆಂಟ್‌ ಒಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ ಊಟದ ಆರ್ಡರ್ ಮಾಡಲು ಡಿಜಿಟಲ್ ಮೆನು ನಿಯಮದಂತೆ ಟೇಬಲ್ ಮೇಲಿದ್ದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದರು. ಆದರೆ, ರೆಸ್ಟೋರೆಂಟ್‌ನಿಂದ ಮನೆಗೆ ಮರಳಿದ ನಂತರ ಆಕೆಗೆ ಅಪರಿಚಿತ ನಂಬರ್‌ನಿಂದ ಮಧ್ಯರಾತ್ರಿ ವಾಟ್ಸಾಪ್ ಸಂದೇಶಗಳು ಬರಲಾರಂಭಿಸಿದವು. ಮೆಸೇಜ್ ಕಳುಹಿಸಿದ ವ್ಯಕ್ತಿ ತಾನು ರೆಸ್ಟೋರೆಂಟ್‌ನ ಸಿಬ್ಬಂದಿ (ಶೇಖ್ ಶಫಿ) ಎಂದು ಪರಿಚಯಿಸಿಕೊಂಡಿದ್ದಲ್ಲದೆ, “ನಿಮ್ಮ ವಯಸ್ಸೇನು?”, “ನನಗೆ ನೀವಂದ್ರೆ ಇಷ್ಟ” ಎಂದು​ ಕಳುಹಿಸಿದ್ದಾನೆ.

ವಿಡಿಯೋ ಮೂಲಕ ಆಕ್ರೋಶ ಹೊರಹಾಕಿದ ಯುವತಿ:

“ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಕೇವಲ ಊಟವನ್ನು ಆರ್ಡರ್ ಮಾಡುತ್ತಿಲ್ಲ, ಬದಲಿಗೆ ನಿಮ್ಮ ಸುರಕ್ಷತೆ ಮತ್ತು ವೈಯಕ್ತಿಕ ಮಾಹಿತಿಯನ್ನು ತಟ್ಟೆಯಲ್ಲಿಟ್ಟು ಅವರಿಗೆ ಸರ್ವ್ ಮಾಡುತ್ತಿದ್ದೀರಿ,” ಎಂದು ರಿಷಿಕಾ ದತ್ತಾ ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯ ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅರೆಬರೆ ಬಟ್ಟೆ ತೊಟ್ಟು ರೀಲ್ಸ್​ ಮಾಡುತ್ತಿದ್ದ ಹೆಂಡತಿ; ಅವಮಾನ ತಾಳಲಾರದೇ ಆಕೆಗೆ ‘ಪಿಂಡದಾನ’ ಮಾಡಿದ ಗಂಡ!

ರೆಸ್ಟೋರೆಂಟ್ ಮ್ಯಾನೇಜ್‌ಮೆಂಟ್ ಸ್ಪಷ್ಟನೆ:

ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ರೆಸ್ಟೋರೆಂಟ್ ಸಂಸ್ಥೆ, ರಿಷಿಕಾ ಅವರ ಪೋಸ್ಟ್‌ಗೆ ಅಧಿಕೃತವಾಗಿ ಕ್ಷಮೆಯಾಚಿಸಿದೆ. ತಪ್ಪು ಮಾಡಿದ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಗ್ರಾಹಕರ ಡೇಟಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿ ಭರವಸೆ ನೀಡಿದೆ.

ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರುವುದು ಹೇಗೆ?

  • ನಂಬರ್ ನೀಡುವುದು ಕಡ್ಡಾಯವೇ ಪರಿಶೀಲಿಸಿ: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಫೋನ್ ನಂಬರ್ ಕೇಳಿದರೆ, ಅದು ಕಡ್ಡಾಯವೇ? (Mandatory) ಎಂದು ನೋಡಿ. ಇಲ್ಲದಿದ್ದರೆ ಅದನ್ನು ‘Skip’ ಮಾಡಿ.
  • UPI ಐಡಿ ಬದಲಾಯಿಸಿ: ಬಿಲ್ ಪಾವತಿಸುವಾಗ ನಿಮ್ಮ ಫೋನ್ ನಂಬರ್ ಇರುವ UPI ಐಡಿ (ಉದಾಹರಣೆಗೆ: 1234567890@ybl) ಬದಲಾಗಿ, ನಿಮ್ಮ ಹೆಸರಿರುವ ಸಾಮಾನ್ಯ ಐಡಿ ಬಳಸಿ.
  • ಪ್ರಿಂಟ್ ಮೆನು ಕಾರ್ಡ್ ಕೇಳಿ: ಯಾವುದೇ ಡಿಜಿಟಲ್ ಆಪ್‌ಗಳು ನಿಮ್ಮ ವೈಯಕ್ತಿಕ ಮಾಹಿತಿ ಕೇಳಿದರೆ, ನೇರವಾಗಿ ಹಾರ್ಡ್ ಕಾಪಿ ಮೆನು ಕಾರ್ಡ್ ನೀಡುವಂತೆ ಸಿಬ್ಬಂದಿಯನ್ನು ಒತ್ತಾಯಿಸಿ.
  • ಧೈರ್ಯದಿಂದ ದೂರು ನೀಡಿ: ಇಂತಹ ಕಿರುಕುಳ ಎದುರಾದರೆ ತಕ್ಷಣ ಮ್ಯಾನೇಜ್‌ಮೆಂಟ್‌ಗೆ ಅಥವಾ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿ. ಭಾರತದ DPDP ಕಾಯ್ದೆ ಪ್ರಕಾರ ಗ್ರಾಹಕರ ಅನುಮತಿಯಿಲ್ಲದೆ ಡೇಟಾ ಬಳಸುವುದು ಅಪರಾಧವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:07 am, Sat, 16 May 26

Source link

ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!

ಬೆಂಗಳೂರು, ಮೇ 16: ಇಂಧನ ಮಿತವ್ಯಯ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಓಗೊಟ್ಟು, ಮುಂದಿನ ದಿನಗಳಲ್ಲಿ ಮೆಟ್ರೋ ಬಳಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧರಿಸಿದ್ದು, ಇಂದು ಬೆಳಗ್ಗೆ 8 ಗಂಟೆಗೆ ಕುಂಬಳಗೋಡಿನ ಗಾರ್ಡನ್ ಏಷ್ಯಾ ರೆಸಾರ್ಟ್‌ನಲ್ಲಿ ನಡೆಯಲಿರುವ ಬಿಜೆಪಿಯ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಭಾಗವಹಿಸಲು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಕುಂಬಳಗೋಡಿಗೆ ಮೆಟ್ರೋ ರೈಲಿನ ಮೂಲಕವೇ ಪ್ರಯಾಣಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಧುಗಳ ಸೋಗಿನಲ್ಲಿ ಬರ್ತಾರೆ; ಹಣ ಒಡವೆ ದೋಚುತ್ತಾರೆ! ಈ ಖತರ್ನಾಕ್ ಗ್ಯಾಂಗ್ ಹೇಗೆ ನಿಮ್ಮನ್ನು ಯಾಮಾರಿಸುತ್ತೆ ಗೊತ್ತಾ? – Kannada News | Raichur Crime: Hypnotic ‘Sadhu’ Gang Robs Medical Shop Owner in Sindhanoor

ಖದೀಮ ಸಾಧುಗಳ ಓಡಾಟದ ಸಿಸಿಟಿವಿ ದೃಶ್ಯ

ರಾಯಚೂರು, ಮೇ 16: ಕಾವಿ ಬಟ್ಟೆ ಹಾಕಿಕೊಂಡು, ಸಾಧು ಸಂತರಂತೆ ಬಂದು ನಿಮ್ಮನ್ನ ಹಾಡಿ ಹೊಗಳುವವರನ್ನು ನಂಬುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ರಾಯಚೂರಿನ (Raichur) ಸಿಂಧನೂರು ನಗರದಲ್ಲಿ ನಡೆದ ಘಟನೆಯೇ ಸಾಕ್ಷಿ. ನಗರದಲ್ಲಿ ಸಾಧು ಸಂತರ ಸೋಗಿನಲ್ಲಿ ಬಂದು, ಹೂವುಗಳನ್ನು ನೀಡಿ, ಸಮ್ಮೋಹನ (Hypnotize) ಮಾಡುವ ಮೂಲಕ ಸಾರ್ವಜನಿಕರ ಹಣ ಮತ್ತು ಚಿನ್ನಾಭರಣಗಳನ್ನು ದೋಚುತ್ತಿರುವ ಖದೀಮರ ಕೃತ್ಯ ಈಗ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಸಿಕ್ಕಿದೆ. ಧರ್ಮ, ಭಕ್ತಿ ಮತ್ತು ಸತ್ಕಾರದ ಹೆಸರಿನಲ್ಲಿ ಜನರನ್ನು ಮಂಕುಬೂದಿ ಎರಚಿ ಲೂಟಿ ಮಾಡುವ ‘ಖದೀಮ ಸಾಧುಗಳ’ ಗ್ಯಾಂಗ್ ಈಗ ಜಿಲ್ಲೆಯಲ್ಲಿ ತೀವ್ರ ಆತಂಕ ಮೂಡಿಸಿದೆ.

ಮುಖ್ಯಾಂಶಗಳು

  • ರಾಯಚೂರಿನ ಸಿಂಧನೂರಿನಲ್ಲಿ ಸಾಧು ಸಂತರ ಸೋಗಿನ ಖದೀಮರಿಂದ ಲೂಟಿ.
  • ಹೂವಿನ ವಾಸನೆ ತೋರಿಸಿ ಮೆಡಿಕಲ್ ಮಾಲೀಕನಿಗೆ ಮಂಕುಬೂದಿ ಎರಚಿದ ವಂಚಕರು.
  • ಹತ್ತು ಸಾವಿರ ನಗದು, ಬಂಗಾರದ ಉಂಗುರ ದೋಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

ಸತ್ಕಾರ ಮಾಡಿದ್ದಕ್ಕೆ ಸಿಕ್ಕಿದ್ದೇನು?

ಸಿಂಧನೂರು ನಗರದ ಪ್ರಮುಖ ರಸ್ತೆಯಲ್ಲಿರುವ ‘ಸಾಯಿ ಮೆಡಿಕಲ್ಸ್’ ಫಾರ್ಮಸಿಗೆ ಸಾಧುವೊಬ್ಬರು ಆಗಮಿಸಿದ್ದರು. ಬಿಸಿಲಿನ ಬೇಗೆಯಿಂದ ಬಳಲಿದ್ದ ಆ ಸಾಧು, ಕುಡಿಯಲು ನೀರು ಕೇಳಿದ್ದಾರೆ. ಮೆಡಿಕಲ್ ಅಂಗಡಿಯ ಮಾಲೀಕರಾದ ವಿಷ್ಣುದತ್ತು ಮಾನವೀಯತೆ ಮತ್ತು ಸಾಧುಗಳ ಮೇಲಿನ ಭಕ್ತಿಯಿಂದ ತಕ್ಷಣವೇ ಫ್ರಿಡ್ಜ್‌ನಿಂದ ತಣ್ಣನೆಯ ನೀರನ್ನು ತಂದುಕೊಟ್ಟು ಸತ್ಕರಿಸಿದ್ದಾರೆ. ನೀರು ಕುಡಿದ ಸಾಧು, ಮಾಲೀಕರ ಭಕ್ತಿಗೆ ಮೆಚ್ಚುಗೆ ಸೂಚಿಸುವಂತೆ ನಟಿಸಿದ್ದಾನೆ. ನಿನಗೆ ಮತ್ತು ನಿನ್ನ ಮಕ್ಕಳಿಗೆ ಒಳಿತಾಗಲಿದೆ. ನಿಮ್ಮ ಸಂಕಷ್ಟಗಳೆಲ್ಲವೂ ದೂರಾಗಲಿವೆ ಎಂದು ಹರಸುತ್ತಾ ತನ್ನ ಕೈಯಲ್ಲಿದ್ದ ಎರಡು ಹೂವುಗಳನ್ನು ವಿಷ್ಣುದತ್ತು ಅವರ ಕೈಗೆ ನೀಡಿದ್ದಾನೆ.

ಹೂವು ಮೂಸುತ್ತಿದ್ದಂತೆ ಏನಾಯ್ತು?

ಸಾಧು ನೀಡಿದ ಆ ಎರಡು ಹೂವುಗಳ ವಾಸನೆ ತಗುಲಿದ ಕೆಲವೇ ಕ್ಷಣಗಳಲ್ಲಿ ಮಾಲೀಕ ಪ್ರಜ್ಞೆ ತಪ್ಪಿದವರಂತೆ, ಮಂಕು ಬಡಿದ ಸ್ಥಿತಿಗೆ ತಲುಪಿದ್ದಾರೆ. ತಮಗೆ ಅರಿವಿಲ್ಲದಂತೆಯೇ ಸಮ್ಮೋಹನಕ್ಕೆ ಒಳಗಾದ ಮಾಲೀಕರು, ಖುದ್ದು ತಾವೇ ತಮ್ಮ ಜೇಬಿನಲ್ಲಿದ್ದ 10 ಸಾವಿರ ರೂಪಾಯಿ ನಗದು ಹಣ ಮತ್ತು ಕೈಯಲ್ಲಿದ್ದ ಬೆಲೆಬಾಳುವ ಬಂಗಾರದ ಉಂಗುರವನ್ನು ಬಿಚ್ಚಿ ಆ ಖದೀಮ ಸಾಧುವಿನ ಕೈಗೆ ಕೊಟ್ಟಿದ್ದಾರೆ. ಹಣ ಮತ್ತು ಚಿನ್ನವನ್ನು ಲೂಟಿ ಮಾಡಿದ ಆ ಸಾಧು, ಅಲ್ಲಿಂದ ಕ್ಷಣಾರ್ಧದಲ್ಲಿ ಕಾಲ್ಕಿತ್ತಿದ್ದಾನೆ. ಕೆಲ ಹೊತ್ತಿನ ಬಳಿಕ ವಿಷ್ಣುದತ್ತು ಅವರು ಸಂಪೂರ್ಣ ಪ್ರಜ್ಞಾವಸ್ಥೆಗೆ ಬಂದಾಗ ತಮಗೆ ವಂಚನೆಯಾಗಿರುವುದು ಅರಿವಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಜಾಲ

ಈ ವಿಚಿತ್ರ ಲೂಟಿ ಪ್ರಕರಣದ ಕುರಿತು ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಸಾಯಿ ಮೆಡಿಕಲ್ಸ್ ಹಾಗೂ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಸಾಧುಗಳ ಸೋಗಿನಲ್ಲಿರುವ ಖದೀಮರ ಇಡೀ ತಂಡ ನಗರದಾದ್ಯಂತ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪತ್ತೆಯಾಗಿದೆ. ಈ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಟಿಟಿಗೆ ಬಂದಿವೆ ಬ್ಲಾಕ್ ಬಸ್ಟರ್ ಸಿನಿಮಾಗಳು: ಇಲ್ಲಿದೆ ಪಟ್ಟಿ

Source link

ಸ್ವಾಭಿಮಾನವೇ ಮುಖ್ಯ… ಟೆಸ್ಟ್ ನಿವೃತ್ತಿಗೆ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ – Kannada News | Why Virat Kohli Retired From Test Cricket

ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ (Virat Kohli), ತಮ್ಮ ಹಠಾತ್ ನಿವೃತ್ತಿಯ ಹಿಂದಿನ ಅಸಲಿ ಕಾರಣವನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ (RCB) ಪಾಡ್‌ಕಾಸ್ಟ್‌ನಲ್ಲಿ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಅವರೊಂದಿಗೆ ಮಾತನಾಡಿದ ಕೊಹ್ಲಿ, ತಂಡದ ಒಳಗಿನ ಗೊಂದಲಮಯ ವಾತಾವರಣ ಮತ್ತು ಗೌರವದ ಕೊರತೆಯೇ ತಮ್ಮ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಪರೋಕ್ಷವಾಗಿ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಿವೃತ್ತಿಯ ಹಿಂದಿನ ಕಹಿ ಸತ್ಯ:

2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಂತರ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ್ದರು. ಆರ್​ಸಿಬಿ ಪಾಡ್​ಕಾಸ್ಟ್​ನಲ್ಲಿ ಆ ದಿನಗಳನ್ನು ನೆನೆದ ಕೊಹ್ಲಿ, “ನನ್ನ ಮೇಲೆ ಮತ್ತು ನನ್ನ ಆಟದ ಮೇಲೆ ನಂಬಿಕೆ ಇಲ್ಲದ ವಾತಾವರಣದಲ್ಲಿ ನನಗೆ ಮುಂದುವರಿಯಲು ಸಾಧ್ಯವಿರಲಿಲ್ಲ. ನನ್ನ ಸಾಮರ್ಥ್ಯ ಮತ್ತು ತಂಡಕ್ಕೆ ನಾನೇನು ಎಂಬ ಮೌಲ್ಯವನ್ನು ಪದೇ ಪದೇ ಸಾಬೀತುಪಡಿಸಬೇಕಾದ ಪರಿಸ್ಥಿತಿ ಬಂದರೆ, ನಾನು ಆ ಜಾಗದಲ್ಲಿ ಇರಲು ಇಷ್ಟಪಡುವುದಿಲ್ಲ. ಟೆಸ್ಟ್​ ಕ್ರಿಕೆಟ್ ಬಿಡುವುದು ಸುಲಭವಾಗಿರಲಿಲ್ಲ, ಆದರೆ ಆ ಸಮಯದಲ್ಲಿ ಆ ನಿರ್ಧಾರವೇ ಸರಿಯಾಗಿತ್ತು. ಏಕೆಂದರೆ ಎಲ್ಲಕ್ಕಿಂತ ಸ್ವಾಭಿಮಾನವೇ ಮುಖ್ಯಎಂದು ನೇರವಾಗಿ ಹೇಳುವ ಮೂಲಕ ಗೌರವ ಸಿಗದ ಕಡೆ ಇರಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದರೊಂದಿಗೆ ವಿರಾಟ್ ಕೊಹ್ಲಿಗೆ ತಂಡದಲ್ಲಿ ಸಿಗಬೇಕಾದ ಗೌರವ ಸಿಗುತ್ತಿರಲಿಲ್ಲ ಎಂಬುದು ಬಹಿರಂಗವಾಗಿದೆ. ಅಲ್ಲದೆ ಟೆಸ್ಟ್ ನಿವೃತ್ತಿಗೆ ಮ್ಯಾನೇಜ್ಮೆಂಟ್ ಹಾಗೂ ಕೋಚ್ ಕಡೆಯಿಂದ ಅವರ ಮೇಲೆ ಒತ್ತಡಗಳಿದ್ದವು ಎಂಬ ಎಂಬ ವಿಚಾರ ಕೂಡ ಮತ್ತೆ ಮುನ್ನಲೆಗೆ ಬಂದಿದೆ. ಇದಾಗ್ಯೂ ಕಿಂಗ್ ಕೊಹ್ಲಿ 2027ರ ಏಕದಿನ ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬುದೇ ಪ್ರಶ್ನೆ.

2027ರ ವಿಶ್ವಕಪ್ ಆಡ್ತಾರಾ?

ಪ್ರಸ್ತುತ ಭಾರತ ಏಕದಿನ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಕೊಹ್ಲಿ ತೀಕ್ಷ್ಣವಾಗಿ ಉತ್ತರಿಸಿದ್ದಾರೆ. “ನಾನು ನನ್ನ ವೃತ್ತಿಜೀವನದ ಅಂತಹ ಹಂತದಲ್ಲಿದ್ದೇನೆ, ಇಲ್ಲಿ ನಾನು ಯಾರಿಗೂ ನನ್ನ ಯೋಗ್ಯತೆ ಅಥವಾ ತಂಡಕ್ಕೆ ನನ್ನ ಮೌಲ್ಯ ಏನು ಎಂಬುದನ್ನು ಪದೇ ಪದೇ ಸಾಬೀತುಪಡಿಸುವ ಅಗತ್ಯವಿಲ್ಲ”.

“ನನಗೆ 2027ರ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸುವ ಆಸೆಯಿದೆ. ಆದರೆ, ಅದಕ್ಕೆ ಒಂದು ಷರತ್ತಿದೆ. ಪ್ರತಿ ವಾರವೂ ನನ್ನ ಬ್ಯಾಟಿಂಗ್ ಶೈಲಿಯನ್ನು ಪ್ರಶ್ನಿಸುವ ಅಥವಾ ಹೊಗಳುವ ವಾತಾವರಣ ನನಗೆ ಬೇಡ. ತಂಡದ ಮ್ಯಾನೇಜ್‌ಮೆಂಟ್ ನನ್ನನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಮತ್ತು ನನ್ನ ಅವಶ್ಯಕತೆ ಇದೆ ಎಂದು ಭಾವಿಸಿದರೆ ಮಾತ್ರ ನಾನು ಆಡುತ್ತೇನೆ” ವಿರಾಟ್ ಕೊಹ್ಲಿ ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ವಿರಾಟ್ ಕೊಹ್ಲಿ ಅವರ ಈ ಮಾತುಗಳು ಕೇವಲ ಒಂದು ಸಂದರ್ಶನವಲ್ಲ, ಅದು ಒಬ್ಬ ದಿಗ್ಗಜ ಆಟಗಾರನ ಸ್ವಾಭಿಮಾನದ ಧ್ವನಿ. ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದರೂ, ಐಪಿಎಲ್ 2026 ರಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಟೀಕಾಕಾರರಿಗೆ ಮೈದಾನದಲ್ಲೇ ಉತ್ತರ ನೀಡುತ್ತಿದ್ದಾರೆ.

ಇದನ್ನೂ ಓದಿ: ಓಯ್ ಅಂಧೇರೇ… ತಿಲಕ್ ವರ್ಮಾಗೆ ಅರ್ಷದೀಪ್ ನಿಂದನೆ! ಭಾರೀ ಆಕ್ರೋಶ

ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿರುವ ಕೊಹ್ಲಿಗೆ ಈಗ ರನ್ ಗಳಿಸುವುದಕ್ಕಿಂತ ತಂಡದಲ್ಲಿ ಸಿಗುವ ಗೌರವ ಮತ್ತು ನಂಬಿಕೆ ಮುಖ್ಯವಾಗಿದೆ. ಮ್ಯಾನೇಜ್‌ಮೆಂಟ್ ಇವರ ಈ ಷರತ್ತಿಗೆ ಗೌರವ ನೀಡಿದರೆ, 2027ರ ವಿಶ್ವಕಪ್‌ನಲ್ಲಿ ‘ಕಿಂಗ್ ಕೊಹ್ಲಿ’ ಮತ್ತೊಮ್ಮೆ ಭಾರತಕ್ಕೆ ಕಿರೀಟ ತೊಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Source link

ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ತನಿಖೆ ವೇಳೆ ಅಚ್ಚರಿಯ ಅಂಶ ಬಯಲಿಗೆ – Kannada News | Twist in Bengaluru PM Modi Security Case: Material Found Near Route Confirmed as Ammonium Nitrate Gel

ಬೆಂಗಳೂರು, ಮೇ 16: ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಪತ್ತೆಯಾದ ವಸ್ತುವಿನ ಕುರಿತು ಪೊಲೀಸರ ತನಿಖೆಯಿಂದ ಹೊಸ ಮಾಹಿತಿ ಹೊರಬಿದ್ದಿದೆ. ಆರಂಭದಲ್ಲಿ ಜಿಲೆಟಿನ್ ಕಡ್ಡಿಗಳು ಎಂದು ಭಾವಿಸಲಾಗಿದ್ದರೂ, ಇದು ಅಮೋನಿಯಂ ನೈಟ್ರೇಟ್ ಜೆಲ್ ಎಂದು ದೃಢಪಟ್ಟಿದೆ. ಅಮೋನಿಯಂ ನೈಟ್ರೇಟ್ ಎಂಬುದು ಸ್ಪೋಟಕಗಳಲ್ಲಿ ಬಳಸುವ ಅಪಾಯಕಾರಿ ವಸ್ತುವಾಗಿದ್ದು, ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘಟನೆಯು ಮೇ 9ರ ರಾತ್ರಿ 8:05 ರಿಂದ ಮೇ 10ರ ಬೆಳಗ್ಗೆ 7:00 ಗಂಟೆಯ ನಡುವೆ, ಅಂದರೆ ಸುಮಾರು 11 ಗಂಟೆಗಳ ಅವಧಿಯಲ್ಲಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಸ್ಥಳದಲ್ಲಿ ಪೊಲೀಸರ ಗಸ್ತು ಇರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಕೂಡ ಇಲ್ಲದಿರುವುದು ತನಿಖೆಗೆ ಸವಾಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತಾಂತ್ರಿಕ ವಿಶ್ಲೇಷಣೆಗಳನ್ನು ಅವಲಂಬಿಸಿದ್ದಾರೆ. ಸ್ಪೋಟಕಕ್ಕೆ ಯಾವುದೇ ಡಿಟೋನೇಟರ್‌ಗಳು ಸಿಗದ ಕಾರಣ, ಸ್ಫೋಟದ ಸಾಧ್ಯತೆ ಕಡಿಮೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

National Dengue Day 2026: ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಸಣ್ಣ ಅಸಡ್ಡೆಯೂ ಜೀವಕ್ಕೆ ಮಾರಕ – Kannada News | National Dengue Day 2026: Why celebrate National Dengue Day? Here’s the information

ರಾಷ್ಟ್ರೀಯ ಡೆಂಗ್ಯೂ ದಿನImage Credit source: Freepik

ಡೆಂಗ್ಯೂ (Dengue) ಜ್ವರ ಈಡೀಸ್‌ ಈಜಿಪ್ಟಿ ಜಾತಿಯ ಹೆಣ್ಣು ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಗಂಭೀರ ಕಾಯಿಲೆಯಾದ್ದು, ಇದರ ಸಣ್ಣ ನಿರ್ಲಕ್ಷ್ಯ ಕೂಡ ಜೀವಕ್ಕೆ ಮಾರಕವಾಗಿದೆ. ಈ ಜ್ವರದ ಲಕ್ಷಣ ಆರಂಭದಲ್ಲಿ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಆನಂತರದಲ್ಲಿ ವಿಪರೀತ ತಲೆನೋವು, ಅತಿಯಾದ ಮೈಕೈ ನೋವು, ಕೀಲು ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಜ್ವರದ ರೋಗಲಕ್ಷಣಗಳನ್ನು ಆರಂಭದಲ್ಲಿ ತಿಳಿದುಕೊಂಡು ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಳ್ಳದಿದ್ದರೆ, ಶ್ವಾಸಕೋಶ, ಲಿವರ್‌ ಇತ್ಯಾದಿ ದೇಹದ ಪ್ರಮುಖ ಅಂಗಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡು ಇದು ಜೀವಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಹಾಗಾಗಿ ಈ ಮಾರಣಾಂತಿಕ ಕಾಯಿಲೆ, ಇದರ ರೋಗ ಲಕ್ಷಣಗಳು ಹಾಗೂ ಸೂಕ್ತ ರೋಗ ನಿರ್ಣಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ರಾಷ್ಟ್ರೀಯ ಡೆಂಗ್ಯೂ ದಿನದ ಇತಿಹಾಸ ಹಾಗೂ ಮಹತ್ವವೇನು?

ರಾಷ್ಟ್ರೀಯ ಡೆಂಗ್ಯೂ ದಿನವು ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಯೋಜನೆಯಾಗಿದ್ದು, ಡೆಂಗ್ಯೂ ವಿರೋಧಿ ದಿನ ಅಥವಾ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಪ್ರತಿ ವರ್ಷ ಮೇ 16 ರಂದು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶವೇ ರೋಗ, ಅದರ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈ ದಿನದಂದು ಡೆಂಗ್ಯೂ ತಡೆಗಟ್ಟುವ ಬಗೆಗಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸುವ ಉದ್ದೇಶವೇನು?

  • ಡೆಂಗ್ಯೂ ಎಂಬ ಗಂಭೀರ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ.
  • ಡೆಂಗ್ಯೂ ತಡೆಗಟ್ಟುವ ಕ್ರಮಗಳು, ರೋಗಲಕ್ಷಣಗಳನ್ನು ಗುರುತಿಸುವುದು ಮತ್ತು ಸೂಕ್ತ ಚಿಕಿತ್ಸೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ.
  • ರಾಷ್ಟ್ರೀಯ ಡೆಂಗ್ಯೂ ದಿನದಂದು, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಡೆಂಗ್ಯೂ ಲಕ್ಷಣಗಳು, ಅದರ ಹರಡುವಿಕೆ ಮತ್ತು ತಡೆಗಟ್ಟುವ ಕ್ರಮಗಳನ್ನು ಚರ್ಚಿಸಲಾಗುತ್ತದೆ.

ಡೆಂಗ್ಯೂ ಜ್ವರದ ಲಕ್ಷಣಗಳೇನು?

ಡೆಂಗ್ಯೂ ಲಕ್ಷಣಗಳು ಸೌಮ್ಯ ಅಥವಾ ತೀವ್ರವಾಗಿರಬಹುದು. ಸೋಂಕು ತಗುಲಿದ ನಾಲ್ಕರಿಂದ ಏಳು ದಿನಗಳಲ್ಲಿ ಸೌಮ್ಯ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.  ತಲೆನೋವು, ಜ್ವರ, ಸ್ನಾಯು, ಮೂಳೆ ಮತ್ತು ಕೀಲು ನೋವು, ವಾಂತಿ, ಕಣ್ಣು ನೋವು ಕಾಣಿಸಿಕೊಳ್ಳುತ್ತದೆ.

ಡೆಂಗ್ಯೂ ಜ್ವರ ಉಲ್ಬಣಗೊಂಡರೆ, ದೇಹದಲ್ಲಿ ಪ್ಲೇಟ್‌ಲೆಟ್ ಎಣಿಕೆಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಇದಲ್ಲದೆ ತೀವ್ರ ಹೊಟ್ಟೆ ನೋವು, ನಿರಂತರ ವಾಂತಿ, ಒಸಡುಗಳು ಅಥವಾ ಮೂಗಿನಿಂದ ರಕ್ತಸ್ರಾವ, ಮೂತ್ರ, ಮಲ ಅಥವಾ ವಾಂತಿಯಲ್ಲಿ ರಕ್ತ, ಉಸಿರಾಟದ ತೊಂದರೆ, ಸುಸ್ತು, ಕಿರಿಕಿರಿ ಅಥವಾ ಚಡಪಡಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಯೂರಿನ್ ಇನ್ಫೆಕ್ಷನ್ ಯಾವಾಗ ಅಪಾಯಕಾರಿಯಾಗಬಹುದು ಗೊತ್ತಾ? ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಡೆಂಗ್ಯೂ ತಡೆಗಟ್ಟಲು ಕ್ರಮಗಳೇನು?

  • ಕೂಲರ್‌ಗಳು ಮತ್ತು ನಿಮ್ಮ ಮನೆಯ ಇತರ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
  • ಮಲಗುವಾಗ ಸೊಳ್ಳೆ ಪರದೆ ಅಥವಾ ಸೊಳ್ಳೆ ನಿವಾರಕಗಳನ್ನು ಬಳಸಿ.
  • ನಿಮ್ಮ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆದಿಡುವುದನ್ನು ತಪ್ಪಿಸಿ.
  • ಸೊಳ್ಳೆಗಳಿಂದ ದೂರವಿರಲು ಉದ್ದ ತೋಳಿನ ಬಟ್ಟೆಗಳನ್ನು ಧರಿಸಿ.
  • ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ತಿಳಿ ಬಣ್ಣದ ಬಟ್ಟೆಗಳು ಶಾಖದಿಂದ ಮಾತ್ರವಲ್ಲದೆ ಸೊಳ್ಳೆಗಳಿಂದಲೂ ರಕ್ಷಿಸುತ್ತವೆ. ಸೊಳ್ಳೆಗಳು ಗಾಢ ಬಣ್ಣಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ.
  • ಚರಂಡಿಗಳು, ಹೂವಿನ ಕುಂಡಗಳು ಮತ್ತು ಇತರ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಅವುಗಳಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shani Jayanti 2026: ಶನಿ ದೋಷ, ಸಾಡೆಸಾತಿಯಿಂದ ಮುಕ್ತಿ ಪಡೆಯಲು ಇಂದು ತಪ್ಪದೇ ಈ ಕೆಲಸ ಮಾಡಿ – Kannada News | Shani jayanti 2026 effective remedies for saturn dosha and malefic effects

ಶನಿ ಜಯಂತಿಯು ಶನಿದೇವನ ಜನ್ಮದಿನವಾಗಿ ಆಚರಿಸಲ್ಪಡುವ ಪ್ರಮುಖ ಹಬ್ಬವಾಗಿದೆ. ಜೇಷ್ಠ ಮಾಸದಲ್ಲಿ ಶನಿವಾರ ಬರುವ ಅಮಾವಾಸ್ಯೆಯನ್ನು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಉದಾಹರಣೆಗೆ, 2026ರ ಮೇ 16ರಂದು ಬಂದ ಈ ಜೇಷ್ಠ ಅಮಾವಾಸ್ಯೆ, ಅಂದರೆ ಬಾದಾಮಿ ಅಮಾವಾಸ್ಯೆ, ಶನಿ ದೋಷ ನಿವಾರಣೆಗೆ ಅತ್ಯಂತ ಪ್ರಶಸ್ತವಾಗಿದೆ. ಅಮಾವಾಸ್ಯೆಯು ಬೆಳಗ್ಗೆ 5:11ಕ್ಕೆ ಪ್ರಾರಂಭವಾಗಿ, ಮರುದಿನ ಬೆಳಗ್ಗೆ 1:30ಕ್ಕೆ ಕೊನೆಗೊಳ್ಳುತ್ತದೆ. ಈ ದಿನದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಶನಿ ಭಗವಾನನನ್ನು ನ್ಯಾಯಕಾರಕ ಹಾಗೂ ಕರ್ಮಫಲದಾತ ಎಂದು ಪರಿಗಣಿಸಲಾಗಿದೆ. ನಮ್ಮ ಜನ್ಮ ಕುಂಡಲಿಯಲ್ಲಿ ಸಾಡೆ ಸಾತಿ, ಅರ್ಧಾಷ್ಟಮ ಶನಿ, ಅಷ್ಟಮ ಶನಿ, ಪಂಚಮ ಶನಿ ಅಥವಾ ಶನಿ ದೃಷ್ಟಿ ಇರುವವರು ಆಗಾಗ ಎದುರಿಸುವ ಸ್ಪೀಡ್ ಬ್ರೇಕರ್‌ಗಳಂತಹ ಅಡೆತಡೆಗಳಿಂದ ಮುಕ್ತಿ ಪಡೆಯಲು ಈ ಶನಿ ಜಯಂತಿ ಅತ್ಯಂತ ಪವಿತ್ರ ದಿನ.

ಶನಿದೋಷ ನಿವಾರಣೆಗಾಗಿ ಹಲವು ವಿಧಿ ವಿಧಾನಗಳನ್ನು ಅನುಸರಿಸಬಹುದು. ಉಪವಾಸ, ಧ್ಯಾನ, ಪೂಜೆ, ಹಾಗೂ ದಾನ ಕಾರ್ಯಗಳನ್ನು ಮಾಡುವುದು ಶುಭ. ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಎಳ್ಳಿನ ಬತ್ತಿ ದೀಪಗಳನ್ನು ಶನಿ ದೇವಸ್ಥಾನದಲ್ಲಿ ಹಚ್ಚುವುದು, ಶನಿ ಅಷ್ಟೋತ್ತರ ಸ್ಮರಣೆ ಮಾಡುವುದು, ಶನಿಗೆ ವಸ್ತ್ರ ಮತ್ತು ನೈವೇದ್ಯ ಅರ್ಪಿಸುವುದು ಗ್ರಹಕಾಟಗಳನ್ನು ಕಡಿಮೆ ಮಾಡುತ್ತದೆ. ಈ ದಿನ, ಹನುಮಾನ್ ಮತ್ತು ವೆಂಕಟೇಶ್ವರ ಸ್ವಾಮಿ ದರ್ಶನ ಮಾಡುವುದೂ ಸಹ ಶನಿ ದೇವರ ಪ್ರೀತಿಗೆ ಪಾತ್ರರಾಗಲು ಸಹಕಾರಿ. ಸಾಡೆಸಾತಿ, ಆರೋಗ್ಯ ಸಮಸ್ಯೆ ಅಥವಾ ಶಸ್ತ್ರಚಿಕಿತ್ಸೆಯಲ್ಲಿ ಅಡೆತಡೆಗಳಿರುವವರು ತಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸುವುದೂ ಫಲಪ್ರದ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಶನಿ ದೋಷ ನಿವಾರಣೆಗೆ ಒಂದು ವಿಶಿಷ್ಟ ತಂತ್ರವನ್ನು ವಿವರಿಸಲಾಗಿದೆ. ಒಂದು ಬಿಡಿಸಿದ ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಪೂರ್ಣವಾಗಿ ಕಪ್ಪು ಹತ್ತಿ ಬಟ್ಟೆಯಿಂದ ಸುತ್ತಿ. ನಂತರ ಮೂರು ಎಳೆಯ ದಾರಗಳನ್ನು (ಕಪ್ಪು, ಬಿಳಿ, ಕೆಂಪು) ಆ ತೆಂಗಿನಕಾಯಿಗೆ ಸುತ್ತಿ. ಈ ತೆಂಗಿನಕಾಯಿಯನ್ನು ಎರಡೂ ಕೈಗಳಿಂದ ಹಿಡಿದು, ಪೂರ್ವಕ್ಕೆ ಅಭಿಮುಖವಾಗಿ ನಿಂತು, ನಿಮ್ಮ ತಲೆಯ ಸುತ್ತ ಎಂಟು ಬಾರಿ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ. ನಂತರ, ಇದನ್ನು ಶನಿ ದೇವಸ್ಥಾನಕ್ಕೆ ಕೊಂಡೊಯ್ದು, ದೇವಸ್ಥಾನದ ಪ್ರಾಕಾರವನ್ನು ಎಂಟು ಬಾರಿ ಪ್ರದಕ್ಷಿಣೆ ಹಾಕಿ. ದೇವಸ್ಥಾನದ ಹೊರಗೆ ಆ ತೆಂಗಿನಕಾಯಿಯನ್ನು ಒಡೆದು, ಅದರ ಮೇಲಿದ್ದ ಬಟ್ಟೆಯನ್ನು (ಎಳ್ಳೆಣ್ಣೆಯಲ್ಲಿ ಅದ್ದಿದ್ದರೆ ಉತ್ತಮ) ಅಲ್ಲಿ ಉರಿಯುತ್ತಿರುವ ದೀಪಕ್ಕೆ ಹಾಕಿ. ಸ್ವಲ್ಪ ಸಮಯ ಅಲ್ಲೇ ಕುಳಿತುಕೊಂಡು, ಓಂ ಶಂ ಶನೇಶ್ಚರಾಯ ನಮಃ ಮಂತ್ರವನ್ನು 17 ಅಥವಾ 26 ಬಾರಿ ಜಪಿಸಿ, ನೇರವಾಗಿ ಮನೆಗೆ ಹಿಂದಿರುಗಿ. ಈ ವಿಧಾನದಿಂದ ಶನಿ ಕಾಟ ಕಡಿಮೆಯಾಗುತ್ತದೆ.

ಇದಲ್ಲದೆ, ಸಾಸಿವೆ ಎಣ್ಣೆ, ಎಳ್ಳೆಣ್ಣೆ ಅಥವಾ ಎಳ್ಳಿನ ಉಂಡೆಗಳನ್ನು ನೈವೇದ್ಯವಾಗಿ ಇಡಬಹುದು. ಸಣ್ಣ ಕಪ್ಪು ಬಟ್ಟೆಯನ್ನು ಜೋಬಿನಲ್ಲಿ ಇಟ್ಟುಕೊಂಡು, ಸಂಧ್ಯಾಕಾಲದಲ್ಲಿ ಅದನ್ನು ಎಲ್ಲಾದರೂ ಬಿಸಾಡುವುದರಿಂದಲೂ ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version