Horoscope Today: ಇಂದು ಈ ರಾಶಿಯವರಿಗೆ ವಾಹನ ಖರೀದಿ ಯೋಗ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 15, ಗುರುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ಶುಕ್ರವಾರವು ಪರಾಭವನಾ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷದ ತ್ರಯೋದಶಿ ಮತ್ತು ಅಶ್ವಿನಿ ನಕ್ಷತ್ರದ ವಿಶೇಷ ದಿನವಾಗಿದೆ. ಅಂತರಾಷ್ಟ್ರೀಯ ಕುಟುಂಬ ದಿನವೂ ಆಗಿರುವ ಇಂದು, ಬೆಳಗಿನ ಜಾವ 6 ಗಂಟೆ 28 ನಿಮಿಷಕ್ಕೆ ಸೂರ್ಯನು ವೃಷಭ ರಾಶಿಗೆ ಪ್ರವೇಶಿಸುವುದರಿಂದ ವೃಷಭ ಸಂಕ್ರಾಂತಿಯ ಪರ್ವಕಾಲವಿರುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link

Daily Devotional: ನುಗ್ಗೆಕಾಯಿ ಮರ ಮನೆ ಬಳಿ ಇರಬಾರದು ಯಾಕೆ ಗೊತ್ತಾ? – Kannada News | Why You Should Not Plant Drumstick Tree Near Your House: Astrology and Scientific Reasons

ನುಗ್ಗೆಕಾಯಿ ಮರ ಮನೆ ಬಳಿ ಇರಬಾರದು ಯಾಕೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನುಗ್ಗೆ ಸೊಪ್ಪು, ಕಾಯಿ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಆದರೆ, ಈ ನುಗ್ಗೆ ಮರವನ್ನು ಮನೆಯ ಅಂಗಳದಲ್ಲಿ ಅಥವಾ ಮನೆಯ ಹತ್ತಿರ ಬೆಳೆಸುವುದು ಶುಭವಲ್ಲ ಎಂದು ಶಾಸ್ತ್ರಗಳು ಮತ್ತು ವೈಜ್ಞಾನಿಕ ವಿಶ್ಲೇಷಣೆಗಳು ಹೇಳುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯ ಆಗ್ನೇಯ, ಈಶಾನ್ಯ, ವಾಯುವ್ಯ, ನೈರುತ್ಯ ಸೇರಿದಂತೆ ಯಾವುದೇ ದಿಕ್ಕಿನಲ್ಲಿ ನುಗ್ಗೆ ಮರ ಇರುವುದು ಅಶುಭ. ಇದು ವಾಸ್ತು ದೋಷಗಳಿಗೆ ಕಾರಣವಾಗಬಹುದು. ವೈಜ್ಞಾನಿಕವಾಗಿ ನೋಡಿದರೆ, ನುಗ್ಗೆ ಮರವು ಉಷ್ಣಾಂಶದ ಮರವಾಗಿದ್ದು, ಅದರ ಕಾಂಡವು ತೆಳುವಾಗಿರುತ್ತದೆ. ಇದರಿಂದ ಮಕ್ಕಳು ಅಥವಾ ಯಾರಾದರೂ ಹತ್ತಿದಾಗ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಇದರ ಆಯಸ್ಸು ಸಹ ಕಡಿಮೆ. ನಂಬಿಕೆಗಳ ಪ್ರಕಾರ, ಇದು ನಕಾರಾತ್ಮಕ ಶಕ್ತಿಗಳನ್ನು, ಪೂರ್ವಪ್ರೇತಗಳನ್ನು ಆಕರ್ಷಿಸುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರನ್ನು ಎಲ್ಲದಕ್ಕೂ ಅತಿಯಾಗಿ ಬಳಸಿಕೊಳ್ಳುವರು – Kannada News | Horoscope May 15 Friday 2026; Dina Rashi Bhavishya Today, Checkout the details here

ಮೇಷ ರಾಶಿ:

ಇಷ್ಟವಿಲ್ಲದ ವಿಚಾರಗಳೇ ನಿಮ್ಮ ಸುತ್ತ ಮಾತನಾಡಿ ಮಾನಸಿಕ ಹಿಂಸೆ ಕೊಡುವರು. ಇಂದು ಸ್ವಲ್ಪ ಮಟ್ಟಿಗೆ ಆರ್ಥಿಕ ಬೆಳವಣಿಗೆ ಕಾಣಿಸಿ ಸಮಾಧಾನವಾಗುವುದು. ಹಣಕಾಸು ಯೋಜನೆಗಳಲ್ಲಿ ಸ್ಪಷ್ಟತೆ ಇರಲಿ. ನಿದ್ದೆಯ ಕೊರತೆ ದೈನಂದಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರ‌ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು.

ವೃಷಭ ರಾಶಿ:

ಆಹಾರ ವ್ಯತ್ಯಾಸದಿಂದ ಉದರ ಬಾಧೆ ಹೆಚ್ಚಾಗುವುದು. ಹಿರಿಯರ‌ ಸೇವೆಯ ಬಗ್ಗೆ ಹೆಮ್ಮೆ ಇರಲಿದೆ. ಸರ್ಕಾರದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬೇಕಾಗುವುದು. ಉದ್ಯೋಗದಲ್ಲಿ ಸಣ್ಣ ಯತ್ನದಿಂದಲೇ ದೊಡ್ಡ ಫಲ ಸಿಗಬಹುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ಯಾರನ್ನೂ ಅಪಮಾನ ಮಾಡುವುದು ಬೇಡ. ಅಪ್ರಯೋಜಕ ಮಾತುಗಳಿಗೆ ಕಿವಿಯಾಗುವಿರಿ.

ಮಿಥುನ ರಾಶಿ:

ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯ ಕಾರಣ ಕಾರ್ಯವು ಸೂಚಿಸದೇ ಬಹಳ ಜಡರಾಗುವಿರಿ‌. ಹಣ ನಷ್ಟದಿಂದ ಚಿಂತೆ ಆಗಬಹುದಾದರೂ ಶೀಘ್ರವೇ ಪರಿಹಾರ ಕಂಡುಬರಲಿದೆ. ನಿಮಗೆ ಸರಿಕಂಡ ಕಾರ್ಯವನ್ನು ಯಾವುದೇ ಹಿಂಜರಿಕೆ ಇಲ್ಲದೇ ಮಾಡುವಿರಿ. ಸ್ನೇಹಿತರಿಂದ ಸಣ್ಣ ಹಾಸ್ಯದ ಸಂದರ್ಭಗಳು ಒತ್ತಡ ತಗ್ಗಿಸಬಲ್ಲವು. ದಿನದ ಅಂತ್ಯದಲ್ಲಿ ಆನಂದದ ಕ್ಷಣಗಳು ನಿಮ್ಮನ್ನು ಹತ್ತಿರದಿಂದ ತಲುಪುತ್ತವೆ. ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಉದ್ಯಮವನ್ನು ಅನ್ಯ ಮಾರ್ಗದಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ.

ಕರ್ಕಾಟಕ ರಾಶಿ:

ಮಕ್ಕಳಿಗಾಗಿ ವಿಶೇಷ ಅಡುಗೆಯನ್ನು ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಕಲ್ಪನೆಯ ಶಕ್ತಿ ಹೆಚ್ಚಾಗುತ್ತದೆ, ಆದರೆ ಅದು ದುರ್ಬಳಕೆಗೆ ಕಾರಣವಾಗಬಾರದು. ಕೆಲಸದಲ್ಲಿ ಗಮನ ಹರಿಸುವ ಅಗತ್ಯವಿದೆ. ವಾಹನ‌ ದುರಸ್ತಿ ಅನಿರೀಕ್ಷಿತವಾಗಬಹುದು. ಖರ್ಚು ನಿಯಂತ್ರಣ ಮಾಡದಿದ್ದರೆ ಹಣಕಾಸಿನಲ್ಲಿ ಅಸ್ವಸ್ಥತೆ ಉಂಟಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಓಡಾಟವನ್ನು ಮಾಡಬೇಕಾಗುವುದು. ಅಸೂಯೆಯ ಕಾರಣ ದ್ವೇಷಭಾವವು ಸಹೋದ್ಯೋಗಿಯ ಬಗ್ಗೆ ನಿಮ್ಮಲ್ಲಿ ಮೂಡಬಹುದು.

ಸಿಂಹ ರಾಶಿ:

ನಿಮ್ಮನ್ನು ಉಪಯೋಗಿಸಿಕೊಳ್ಳುವವರ ಜೊತೆ ವಾಗ್ವಾದ. ಕಠಿಣ ಪರಿಶ್ರಮ ಇಂದು ಫಲ ನೀಡಲಿದೆ. ಉದ್ಯೋಗದಲ್ಲಿ ಉನ್ನತಿ ಅಥವಾ ಬದಲಾವಣೆಯ ಸೂಚನೆ ಇದೆ. ಹಣಕಾಸಿನಲ್ಲಿ ಲಾಭದ ಸಂದರ್ಭ ಎದುರಾಗಬಹುದು. ಕುಟುಂಬದಲ್ಲಿ ಸಣ್ಣ ಸಂಗತಿಗಳು ಸಂತೋಷ ನೀಡಬಹುದು. ಮನೋರಂಜನೆಗೆ ನಿಮಗೆ ಸಮಯವು ಸಿಗುವುದು. ಇನ್ನೊಬ್ಬರ ಕೆಲಸದ ಹೊರೆಯೂ ನಿಮಗೆ ಬರಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು.

ಕನ್ಯಾ ರಾಶಿ:

ಉದ್ಯೋಗದಲ್ಲಿ ಒತ್ತಡ ನಿವಾರಣೆಯನ್ನು ನೀವೇ ಸ್ವತಃ ಮಾಡಿಕೊಳ್ಳಬೇಕಾಗುವುದು. ಮಾತುಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಎಚ್ಚರಿಕೆಯಿಂದ ಮಾತನಾಡಿ. ಒಪ್ಪಂದಗಳಿಂದ‌ ಜಾರಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಪಡೆಯುವ ಸಂಭವ. ಹಣಕಾಸಿನಲ್ಲಿ ಜ್ಞಾನದಿಂದ ನಿರ್ವಹಣೆ ಅಗತ್ಯವಿದೆ. ಸಂಗಾತಿಯ ಆರೋಗ್ಯವನ್ನು ನೋಡಿಕೊಳ್ಳುವ ಭರದಲ್ಲಿ ಕೆಲವು ಕಾರ್ಯಗಳನ್ನು ಮರೆಯಬಹುದು. ಪಾಲುದಾರಿಕೆಯಲ್ಲಿ ಆದ ಮನಸ್ತಾಪವನ್ನು ಮುಂದುವರಿಸದೇ ಸುಮ್ಮನಿರಿ.

ತುಲಾ ರಾಶಿ:

ಆರ್ಥಿಕ ವ್ಯವಹಾರವನ್ನು ಮತ್ತೊಬ್ಬರ ಸಹಾಯದಿಂದ ಸರಿ ಮಾಡಿಕೊಳ್ಳುವಿರಿ. ಹಣಕಾಸು ಪ್ರಗತಿಗೆ ಯೋಗ್ಯ ಸಮಯ. ಸರ್ವತೋಮುಖ ವಿಕಾಸಕ್ಕೆ ಸಮಯ ಸಾಕಾಗದು. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಬಹುದು. ಆರೋಗ್ಯದಲ್ಲಿ ಒತ್ತಡದ ಕಾರಣ ತಲೆನೋವು ಉಂಟಾಗಲಿದೆ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳುವಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಮನೆಯಿಂದ ದೂರವಿರಲು ಯತ್ನಿಸುವಿರಿ.

ವೃಶ್ಚಿಕ ರಾಶಿ:

ಉದ್ಯೋಗದಲ್ಲಿ ನೀವು ಬಹಳ ಪ್ರಾಮಾಣಿಕವಾಗಿ ಇರುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಬೆಳವಣಿಯಾಗುವುದು ಖುಷಿ ಕೊಡುವುದು. ಒತ್ತಡ ಹೆಚ್ಚಾದರೂ ಅದು ನಿಮ್ಮ ಉತ್ಸಾಹದ ಮೇಲೆ ಪರಿಣಾಮ ಬೀರದು. ವಿದ್ಯಾರ್ಥಿಗಳು ಓದಿನ ಕಡೆ ವಿಶೇಷ ಗಮನವನ್ನು ಕೊಡುವುದು ಕಷ್ಟವಾದೀತು. ಬಂಧುಗಳ ಕುಹಕಕ್ಕೆ ಸಿಲುಕುವಿರಿ. ಆಸ್ತಿಯಲ್ಲಿ ಪಾಲುದಾರಿಕೆಯು ನಿಮಗೆ ಸಮಾಧಾನ ಕೊಡದು.

ಧನು ರಾಶಿ:

ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆ ಗುರುತಿಸಲ್ಪಡುತ್ತದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ. ಇಂದು ಕೈ ಹಾಕಿದ ಹೊಸ ಕೆಲಸ ಶುಭದಾಯಕವಾಗಬಹುದು. ರಾಜಕೀಯದಲ್ಲಿ ಕೈಜೋಡಿಸುವ ಬಗ್ಗೆ ಕುತೂಹಲವಿರುವುದು. ಸಾಮಾಜಿಕ ಕಾರ್ಯವು ನಿಮ್ಮನ್ನು ಸೆಳೆಯುವುದು. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು.

ಮಕರ ರಾಶಿ:

ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ನಿಮಗೆ ಅನಾನುಕೂಲ ಉಂಟಾಗುವುದು. ಇಂದು ಸೃಜನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ದಿನ. ವಿದ್ಯಾರ್ಥಿಗಳಿಗೆ ಉತ್ತಮ ಅಭ್ಯಾಸದಿಂದ ಲಾಭ. ಹಣಕಾಸಿನಲ್ಲಿ ಖರ್ಚು ಹೆಚ್ಚಾಗಬಹುದು. ಇಂದು ನಿಮ್ಮ ನಿರ್ಧಾರಗಳು ಉತ್ತಮ ಫಲ ನೀಡಲಿವೆ. ಮೇಲಧಿಕಾರಿಗಳ ಜೊತೆಗಿನ ಸಲುಗೆಯು ದುರುಪಯೋಗ ಆಗಬಹುದು. ವ್ಯವಹಾರದಲ್ಲಿ ಚುರುಕು ಸಾಲದು. ನಿಮ್ಮ ಸರಳತೆಯು ಜೊತೆಗಾರರಿಗೆ ಇಷ್ಟವಾಗುವುದು.

ಕುಂಭ ರಾಶಿ:

ನೆರೆ ಹೊರೆಯವರು ನಿಮಗೆ ಸಹಕಾರ ನೀಡದೇ ಕಷ್ಟವಾಗುವುದು. ಸಂಗಾತಿಯ ಜೊತೆ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ದಿನ. ಕೆಲಸದಲ್ಲಿ ನೀವು ನಿರೀಕ್ಷಿಸುವ ಪ್ರಗತಿ ಕಾಣಬಹುದು. ಹಣಕಾಸಿನಲ್ಲಿ ಬುದ್ಧಿವಂತಿಕೆ ಅಗತ್ಯವಿದೆ. ನಿಮಗೆ ಕಾರ್ಯಗಳು ನಿಮಗೆ ತೃಪ್ತಿಯನ್ನು ಕೊಡುವಂತಿರಲಿ. ಆತುರದಲ್ಲಿ ಯಾವ ನಿರ್ಧಾರಕ್ಕೂ ಬರದೇ, ತಾಳ್ಮೆಯಿಂದ ಎಲ್ಲವೂ ತಿಳಿಯಾದಮೇಲೆ ನಿರ್ಧರಿಸಿ. ಎಲ್ಲವೂ ಸರಿಯಾಗುವುದು.

ಮೀನ ರಾಶಿ:

ಕೆಟ್ಟ ವಾಹನದ ಚಾಲನೆಯಿಂದ ಅಪಘಾತ ಸಂಭವಿಸಬಹುದು. ನ್ಯಾಯಾಲಯದ ಬಗ್ಗೆ ನಿಮಗೆ ಬಹಳ ಚಿಂತೆ‌ ಕಾಡುವುದು. ನಿಮ್ಮ ಹಣಕಾಸಿನ ಸ್ಥಿತಿಯನ್ನು ಹೇಳಿಕೊಳ್ಳಲು ಇಷ್ಟವಾಗದು. ಹೊಸ ಯೋಚನೆಗಳು ಬೆಳಕಿಗೆ ಬರುತ್ತವೆ. ಉದ್ಯೋಗದಲ್ಲಿ ಹೊಸ ಯೋಜನೆ ಆರಂಭವಾಗುವ ಯೋಗವಿದೆ. ಹಣಕಾಸಿನಲ್ಲಿ ನೂತನ ಆದಾಯದ ಮಾರ್ಗಗಳು ರೂಪುಗೊಳ್ಳಬಹುದು. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 43 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:45 – 12:21, ಯಮಗಂಡ ಕಾಲ 15:32 – 17:08, ಗುಳಿಕ ಕಾಲ 07:34 – 09:10

-ಲೋಹಿತ ಹೆಬ್ಬಾರ್ – 8762924271 (what’s app only)

Source link

PBKS vs MI: ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿ ಗೆದ್ದ ಬುಮ್ರಾ; ಪಂಜಾಬ್​ಗೆ ಸತತ 5ನೇ ಸೋಲು – Kannada News | IPL 2026: Tilak Varma’s Heroics Secure MI Win vs PBKS; Bumrah’s Captaincy Debut Triumph

ಐಪಿಎಲ್ 2026 ರ 58ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಈ ಪಂದ್ಯ ಪ್ಲೇಆಫ್ ದೃಷ್ಟಿಯಿಂದ ಆತಿಥೇಯ ಪಂಜಾಬ್​ಗೆ ಅತ್ಯಂತ ನಿರ್ಣಾಯಕವಾಗಿತ್ತು. ಆದರೆ ಪಂಜಾಬ್ ಗೆಲುವಿನ ಕನಸಿಗೆ ನೀರೆರೆಚಿದ ತಿಲಕ್ ವರ್ಮಾ ಏಕಾಂಗಿಯಾಗಿ ನಿಂತು ಮುಂಬೈ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಪ್ಲೇಆಫ್ ರೇಸ್​ನಿಂದ ಮುಂಬೈ ಅಧಿಕೃತವಾಗಿ ಹೊರಬಿದ್ದಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿತ್ತು. ಆದರೆ ಮೊಟ್ಟ ಮೊದಲ ಬಾರಿಗೆ ಮುಂಬೈ ತಂಡದ ನಾಯಕತ್ವವಹಿಸಿಕೊಂಡಿದ್ದ ಜಸ್ಪ್ರೀತ್ ಬುಮ್ರಾ ತಮ್ಮ ನಾಯಕತ್ವದ ಮೊದಲ ಪಂದ್ಯದಲ್ಲೇ ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಗೆಲುವಿನ ರುಚಿ ತೋರಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 201 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ 20ನೇ ಓವರ್​ನ 5ನೇ ಎಸೆತದಲ್ಲಿ ಗೆಲುವಿನ ದಡ ಮುಟ್ಟಿತು.

Published On – 11:37 pm, Thu, 14 May 26

Source link

ಇಂಧನ ಉಳಿಸಲು ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್

ಮುಂಬೈ, ಮೇ 14: ಪ್ರಧಾನಿ ನರೇಂದ್ರ ಮೋದಿ (PM Modi) ಇಂಧನ ಬಳಕೆ ಕಡಿಮೆ ಮಾಡುವಂತೆ ಮನವಿ ಮಾಡಿದ ನಂತರ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಕಾರು ಹಾಗೂ ಬೆಂಗಾವಲು ವಾಹನವನ್ನು ಬಿಟ್ಟು ಬೈಕ್​ನಲ್ಲೇ ಇಂದು ವಿಧಾನ ಭವನಕ್ಕೆ ಆಗಮಿಸಿದ್ದಾರೆ. ಹೊಸದಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರ ಪ್ರಮಾಣವಚನ ಸಮಾರಂಭಕ್ಕೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್​ನಲ್ಲಿ ಸಿಎಂ ಫಡ್ನವೀಸ್​ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾವಿರಾರು ಕೋಟಿ ರೂ. ವಂಚನೆ: ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ ಮೇಲೆ ದಾಳಿ – Kannada News | Raid Conducted On Shivam Associates Office In Belagavi for Cheating rs 4500 crore

ಬೆಳಗಾವಿ, (ಮೇ 14): ಶಿವಂ ಅಸೋಸಿಯೇಟ್ (Shivam Associates) ಮಾಲೀಕನ ಕಚೇರಿ ಮೇಲೆ ಬೆಳಗಾವಿ (Belagavi) ಉಪ ವಿಭಾಗಾಧಿಕಾರಿ ಶ್ರವಣ ನಾಯಕ್ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಂದಾಜು 4,500 ಕೋಟಿ ಹಣ ವಂಚನೆ ಮಾಡಿದ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಸೂಚನೆಯ ಮೇರೆಗೆ ಶಿವಾನಂದ ನೀಲಣ್ಣನವರ್​​ಗೆ ಸೇರಿದ 2 ಕಚೇರಿ ಮೇಲೆ ದಾಳಿ ಮಾಡಲಾಗಿದ್ದು, ಕಳೆದ 8 ಗಂಟೆಗಳಿಂದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇನ್ನು ದಾಖಲೆ ಪರಿಶೀಲನೆ ವೇಳೆ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.

ಮೂಲಗಳ ಪ್ರಕಾರ 45 ಸಾವಿರ ಜನರಿಂದ ಹಣ ಹೂಡಿಕೆ ಮಾಡಿದ್ದು, ಹಣದ ಲೆಕ್ಕಹಾಕೋಕೆ ಅಧಿಕಾರಿಗಳು ಪರದಾಡುತ್ತಿದ್ದಾರೆ. ಅಂದಾಜು 4,500 ಕೋಟಿ ಹಣ ವಂಚನೆ ಮಾಡಿದ ಶಂಕೆ ವ್ಯಕ್ತವಾಗಿದ್ದು, ಸದ್ಯ 400 ಕೋಟಿ ರೂ. ಮೌಲ್ಯದ ಬಾಂಡ್ ಪೇಪರ್​ಗಳು, ಸ್ಟಾಕ್​ಮಾರ್ಕೆಟ್, ರಿಯಲ್ ಎಸ್ಟೇಟ್‌, ರೆಸಾರ್ಟ್​​ಗಳಲ್ಲಿ ಹೂಡಿಕೆ ಮಾಡಿರುವುದು ಹಾಗೂ ಆನ್​ಲೈನ್​​ನಲ್ಲಿ ಹಣದ ವ್ಯವಹಾರ ನಡೆದಿರುವ ಮಾಹಿತಿ ಸಿಕ್ಕಿದೆ. ಕರ್ನಾಟಕ ಸೇರಿ ಮಹಾರಾಷ್ಟ್ರ ಜನರಿಂದ ಹಣ ಹೂಡಿಕೆ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ 4 ಖಾತೆಗಳನ್ನು ಫ್ರೀಜ್ ಮಾಡಿ ಅಧಿಕಾರಿಗಳು ನಿಗಾವಹಿಸಿದ್ದಾರೆ. ಇನ್ನು ತಡರಾತ್ರಿ ಶಿವಾನಂದ ನೀಲಣ್ಣವರ್ ಅವರನ್ನ ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಪ್ರದೇಶದಲ್ಲಿ ಭಾರೀ ಮಳೆ, ಬಿರುಗಾಳಿ; ಒಂದೇ ದಿನದಲ್ಲಿ 111 ಜನ ಸಾವು, 72 ಮಂದಿಗೆ ಗಾಯ – Kannada News | 111 people died after Dust Storm and Heavy Rainfall in Uttar Pradesh

ಲಕ್ನೋ, ಮೇ 14: ಉತ್ತರ ಪ್ರದೇಶದಲ್ಲಿ ಮೇ 13ರಂದು ಉಂಟಾದ ತೀವ್ರ ಗುಡುಗು, ಆಲಿಕಲ್ಲು ಮಳೆ ಮತ್ತು ಮಿಂಚು ಭಾರೀ ಹಾನಿಯನ್ನುಂಟುಮಾಡಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದ 26 ಜಿಲ್ಲೆಗಳಲ್ಲಿ 111 ಜನರು ಸಾವನ್ನಪ್ಪಿದ್ದಾರೆ ಮತ್ತು 72 ಜನರು ಗಾಯಗೊಂಡಿದ್ದಾರೆ. ಇದಲ್ಲದೆ, 170 ಪ್ರಾಣಿಗಳು ಸಾವನ್ನಪ್ಪಿವೆ ಮತ್ತು 227 ಮನೆಗಳು ಹಾನಿಗೊಳಗಾಗಿವೆ. ಪ್ರಯಾಗ್‌ರಾಜ್‌ನಲ್ಲಿ ಅತಿ ಹೆಚ್ಚು ಸಾವುನೋವುಗಳು ದಾಖಲಾಗಿದ್ದು, ಅಲ್ಲಿ 21 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ ಮಿರ್ಜಾಪುರದಲ್ಲಿ 19, ಭದೋಹಿ (ಸಂತ ರವಿದಾಸ್ ನಗರ)ಯಲ್ಲಿ 16 ಮತ್ತು ಫತೇಪುರದಲ್ಲಿ 11 ಜನರು ಸಾವನ್ನಪ್ಪಿದ್ದಾರೆ.

ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲು ಮತ್ತು ಮುಂದಿನ 24 ಗಂಟೆಗಳಲ್ಲಿ ಪರಿಹಾರ ನಿಧಿಯನ್ನು ವಿತರಿಸಲು ನಿರ್ದೇಶನ ನೀಡಿದ್ದಾರೆ. ಸಂತ್ರಸ್ತರ ಕುಟುಂಬಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Uttar Pradesh Rains: ಉತ್ತರ ಪ್ರದೇಶದಲ್ಲಿ ವರುಣಾರ್ಭಟ; ಭೀಕರ ಬಿರುಗಾಳಿ ಮಳೆಗೆ 74 ಮಂದಿ ಸಾವು, ಹಲವೆಡೆ ರೆಡ್ ಅಲರ್ಟ್

ಬಿರುಗಾಳಿ, ಮಳೆ, ಸಿಡಿಲು ಮತ್ತು ಆಲಿಕಲ್ಲು ಮಳೆಯಿಂದ ಉಂಟಾದ ಹಾನಿಯ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳನ್ನು ನೇರವಾಗಿ ಭೇಟಿ ಮಾಡುವಂತೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಗಳನ್ನು ಅನುಸರಿಸಿ, ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮತ್ತು ಸಂತ್ರಸ್ತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಇದನ್ನೂ ಓದಿ: ಮುಂಗಾರು ಮಳೆ ಮುನ್ನವೇ ಈ ಲೇಔಟ್ ನಿವಾಸಿಗಳಿಗೆ ನಡುಕ ಶುರು: ವರ್ಷವಾದ್ರು ಮುಗಿಯದ ರಾಜಕಾಲುವೆ ಕಾಮಗಾರಿ

ಜಿಲ್ಲಾ ನ್ಯಾಯಾಧೀಶರು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನಿಧಿಯನ್ನು ವಿತರಿಸಲು ಪ್ರಾರಂಭಿಸಿದ್ದಾರೆ. ಅಗತ್ಯವಿರುವ ಕುಟುಂಬಗಳಿಗೆ ತಕ್ಷಣದ ನೆರವು ನೀಡುವಂತೆ ಎಲ್ಲಾ ಜಿಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಲಾಗಿದೆ. ಸಂತ್ರಸ್ತ ಕುಟುಂಬಗಳನ್ನು ನಿರ್ಲಕ್ಷಿಸುತ್ತಿರುವುದು ಕಂಡುಬಂದರೆ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್? – Kannada News | Trisha Krishnan reportedly offered Rs 12 Cr remuneration for Rajinikanth Kamal Haasan movie

ರಜನಿಕಾಂತ್ ಮತ್ತು ಕಮಲ್ ಹಾಸನ್ (Kamal Haasan) ಒಟ್ಟಿಗೆ ನಟಿಸಲಿರುವ ಹೊಸ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ. ತ್ರಿಶಾ ಕೃಷ್ಣನ್ (Trisha Krishnan) ಹೆಸರು ಬಲವಾಗಿ ಕೇಳಿಬರುತ್ತಿದೆ. ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ತ್ರಿಶಾ ಅವರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಈ ಸಿನಿಮಾಗಾಗಿ ಅವರು ದೊಡ್ಡ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ತ್ರಿಶಾ ಕೃಷ್ಣನ್ ನಾಯಕಿ ಆಗಿದ್ದಾರೆ ಎಂಬ ವಿಷಯವನ್ನು ಚಿತ್ರತಂಡದ ಯಾರೊಬ್ಬರೂ ಇನ್ನೂ ಖಚಿತಪಡಿಸಿಲ್ಲ. ನಿರ್ಮಾಪಕರ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿರಸಿಯ 3ನೇ ಕ್ಲಾಸ್​ ವಿದ್ಯಾರ್ಥಿಯಿಂದ ವಿಶ್ವದಾಖಲೆ: ಶೀರ್ಷಾಸನದಲ್ಲಿ ಶಿವತಾಂಡವ ಪಠಿಸಿದ ಬಾಲ ಪ್ರತಿಭೆ – Kannada News | Sirsi Boy Om Sets World Record by Reciting Shiv Tandav Stotra in Sirsasana

ಬಾಲಕ ಓಂ, ತಂದೆ ಶ್ರೀನಿವಾಸ ನಾಯ್ಕImage Credit source: tv9 kannada

ಕಾರವಾರ, ಮೇ 14: ಸಾಧಿಸುವ ಛಲ ಒಂದಿದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಶಿರಸಿಯ 3ನೇ ತರಗತಿಯ ವಿದ್ಯಾರ್ಥಿ (student) ಓಂ ಮಾದರಿಯಾಗಿದ್ದಾನೆ. ಶೀರ್ಷಾಸನದಲ್ಲಿ ಅಂದರೆ ತಲೆಕೆಳಗಾಗಿ ನಿಂತು ಕೇವಲ 3 ನಿಮಿಷ 47 ಸೆಕೆಂಡುಗಳಲ್ಲಿ ಸಂಪೂರ್ಣ ಶಿವತಾಂಡವ ಸ್ತೋತ್ರವನ್ನು (Shiv Tandav Stotra) ಪಠಿಸುವ ಮೂಲಕ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾನೆ.

ಮುಖ್ಯಾಂಶಗಳು

  • ವಿಶಿಷ್ಟ ವಿಶ್ವದಾಖಲೆ ಬರೆದ ಮೂರನೇ ತರಗತಿಯ ಬಾಲಕ
  • ಶೀರ್ಷಾಸನದಲ್ಲಿ ಶಿವತಾಂಡವ ಸ್ತೋತ್ರ ಪಠಣ
  • ಮತ್ತೊಮ್ಮೆ ವಿಶ್ವದಾಖಲೆ ಬರೆದ ಓಂ

ಕೆ.ಎಚ್.ಬಿ. ಕಾಲೋನಿಯ ನಿವಾಸಿಯಾಗಿರುವ ಓಂ, ಶ್ರೀನಿಕೇತನ ಶಾಲೆಯ ವಿದ್ಯಾರ್ಥಿ. ಮಾಜಿ ಸೈನಿಕರಾಗಿರುವ ತಂದೆ ಶ್ರೀನಿವಾಸ ನಾಯ್ಕ ಅವರು ಧಾರ್ಮಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಚಿಕ್ಕಂದಿನಿಂದಲೇ ಮಗನಿಗೆ ಯೋಗ, ಧ್ಯಾನ, ಸಂಗೀತ ಹಾಗೂ ಹಿಂದೂ ಧರ್ಮದ ಮೌಲ್ಯಗಳನ್ನು ಕಲಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: 10.45 ಗಂಟೆಯಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜಿದ ಜೋಡಿ: ಐತಿಹಾಸಿಕ ಸಾಧನೆ ಮಾಡಿದ ಬೆಂಗಳೂರಿನ ದಂಪತಿ

ಶೀರ್ಷಾಸನ ಹಾಕುವ ಅಭ್ಯಾಸದ ಜೊತೆಗೆ ಶಿವತಾಂಡವ ಸ್ತೋತ್ರವನ್ನು ಯಾವುದೇ ತೊಡಕಿಲ್ಲದೆ ಹೇಳುವುದನ್ನು ಓಂ ಕರಗತ ಮಾಡಿಕೊಂಡಿದ್ದಾನೆ. ಒಂದು ವರ್ಷದ ನಿರಂತರ ಅಭ್ಯಾಸದ ಫಲವಾಗಿ, ತಲೆಯ ಮೇಲೆ ಇಡೀ ದೇಹದ ಭಾರ ಹೊತ್ತು ಶ್ಲೋಕ ಪಠಿಸುವುದರಲ್ಲಿ ಪಕ್ವತೆ ಸಾಧಿಸಿದ್ದಾನೆ. ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಓಂಗೆ ವಿಶ್ವದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ.

ಓಂನ ಸಾಧನೆ ಇದೇ ಮೊದಲಲ್ಲ

ಇದು ಓಂನ ಮೊದಲ ಸಾಧನೆ ಅಲ್ಲ. ಕೇವಲ 6ನೇ ವಯಸ್ಸಿನಲ್ಲಿ, 1 ನಿಮಿಷ 42 ಸೆಕೆಂಡುಗಳಲ್ಲಿ ಏಷ್ಯಾ ಖಂಡದ 48 ದೇಶಗಳ ಹೆಸರು, ರಾಜಧಾನಿ ಹಾಗೂ ಕರೆನ್ಸಿಗಳನ್ನು ನೋಡದೆ ಸರಾಗವಾಗಿ ಹೇಳುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದ. ತಂದೆ ಹಾಗೂ ಶಾಲೆಯಲ್ಲಿ ಹೇಳಿಕೊಟ್ಟ ಪಾಠ ಇದೀಗ ಈ ಪುಟ್ಟ ಬಾಲಕ ದೊಡ್ಡ ಸಾಧನೆ ಮಾಡಿದ್ದಾನೆ. ತಾನು ಇನ್ನೂ ಸಾಧನೆ ಮಾಡಬೇಕು ಎಂಬ ಹಂಬಲದಲ್ಲಿರುವ ಈತ ಇದೀಗ ಎರಡು ಸಾಧನೆಗಳನ್ನ ಮಾಡುವ ಜೊತೆ ಇನ್ನೂ ದೊಡ್ಡ ಸಾಧನೆ ಗುರಿ ಇಟ್ಟುಕೊಂಡು ತನ್ನ ಕಾರ್ಯ ಮುಂದುವರೆಸಿದ್ದಾನೆ.

ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್​ ಸೇರಿದ 2 ವರ್ಷದ ಬಾಲಕ ಆದಿತ್ಯ: ಈತ ಮಾಡಿದ ಸಾಧನೆ ಬಗ್ಗೆ ಕೇಳಿದ್ರೆ ಅಚ್ಚರಿಯಾಗ್ತೀರಿ!

ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು ಬಾಲ್ಯವನ್ನು ಹಾಳುಮಾಡಿಕೊಳ್ಳುತ್ತಿರುವಾಗ, ಬಾಲಕ ಓಂನ ಶ್ರದ್ಧೆ, ಶ್ರಮ ಮತ್ತು ಸಾಧನೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ಸ್ಟೇಷನ್ ಬಳಿ ವಾಹನ ಸವಾರರಿಗೆ ಹೊಸ ಸಮಸ್ಯೆ

ಬೆಂಗಳೂರು, (ಮೇ 14): ಮೆಟ್ರೋ ಹಳದಿ ಮಾರ್ಗದಲ್ಲಿ (Yellow Metro Line) ಸಂಚಾರ ದಟ್ಟಣೆ (Traffic)  ನಿಯಂತ್ರಿಸುವ ಉದ್ದೇಶದೊಂದಿಗೆ ನಿರ್ಮಿಸಲಾದ ಡಬಲ್ ಡೆಕ್ಕರ್ ಫ್ಲೈ ಓವರ್ (double decker flyover) ನಿಜಕ್ಕೂ ವಾಹನ ಸವಾರರಿಗೆ ರಿಲೀಫ್ ತಂದಿದೆ. 449 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಲೂಪ್ ಮತ್ತು ಇಳಿಜಾರು ಸೇರಿ 5.12 ಕಿಲೋ ಮೀಟರ್ ಉದ್ದವಿರುವ ಮೇಲ್ಸೇತುವೆ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೆ ಸಂಪರ್ಕ ಕಲ್ಪಿಸುತ್ತೆ. ಆದರೆ ಮೇಲ್ಸೇತುವೆ ನಿರ್ಗಮನದ ಬಳಿ ಸಂಚಾರ ದಟ್ಟಣೆ ಗಮನಾರ್ಹ ರೀತಿಯಲ್ಲಿ ಹೆಚ್ಚಾಗುತ್ತಿದೆ. ಹೌದು… ರಾಗಿಗುಡ್ಡ ಮೆಟ್ರೋ ನಿಲ್ದಾಣ ಬಳಿ ಫ್ಲೈ ಓವರ್ ಇಳಿಯುವ ಮುಂಚೆಯೇ ಕಿಲೋ ಮೀಟರ್ ನಷ್ಟು ಟ್ರಾಫಿಕ್ ಜಾಮ್ ಎದುರಾಗುತ್ತಿದೆ.

  • ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ಸ್ಟೇಷನ್ ಬಳಿ ಹೆಚ್ಚಾದ ಟ್ರಾಫಿಕ್ ಜಾಮ್.
  • ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಗಮನದಲ್ಲಿ ಸಂಚಾರ ಕಿರಿಕಿರಿ
  • ಪೀಕ್ ಅವರ್ ನಲ್ಲಂತೂ ಕಿಲೋ ಮೀಟರ್ ಗಟ್ಟಲೆ ಜಾಮ್
  • ಈ ಬಗ್ಗೆ ಬೆಂಗಳೂರು ನಗರ ಉಸ್ತುವಾರಿ ಡಿಸಿಎಂ ಡಿಕೆ ಶಿವಕುಮಾರ್ ಗಮನಕ್ಕೆ ತಂದ ತೇಜಸ್ವಿ ಸೂರ್ಯ

ಇನ್ನು ಪೀಕ್ ಅವರ್ ನಲ್ಲಂತೂ ವಾಹನ ಸವಾರರ ಪಾಡು ಹೇಳತೀರದಾಗಿದೆ. ಸಿಲ್ಕ್ ಬೋರ್ಡ್ ಕಡೆಯಿಂದ ರಾಗಿಗುಡ್ಡ ಕಡೆಗೆ ಬರುವ ವಾಹನಗಳು ಇಳಿಯುವ ವೇಳೆ ಬಾಟಲ್ ನೆಕ್ ವಿನ್ಯಾಸ ಮಾಡಲಾಗಿದೆ. ಇಳಿದ ಕೂಡಲೇ 200 ಮೀಟರ್ ಅಂತರದಲ್ಲಿ ಟ್ರಾಫಿಕ್ ಸಿಗ್ನಲ್ ಕೂಡ ಇದೆ. ಹೀಗಾಗಿ ಮೇಲ್ಸೇತುವೆ ವಿನ್ಯಾಸದ ವೇಳೆ ಇದನ್ನೆಲ್ಲ ಪರಿಗಣಿಸಬೇಕಿತ್ತು ಅಂತ ವಾಹನ ಸವಾರರು ಹೇಳಿದ್ದಾರೆ. ಅಲ್ಲದೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಟ್ರಾಫಿಕ್ ಕಿರಿಕಿರಿ ಮತ್ತಷ್ಟು ಕಗ್ಗಂಟಾಗಿ ಕಾಡಲಿದೆ ಅಂತಲೂ ಬೇಸರ ಹೊರಹಾಕಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೂಡ ಈ ವಿಚಾರವನ್ನು ಸಾಮಾಜಿಕ ಜಾಲತಾಣ X ನಲ್ಲಿ ಪ್ರಸ್ತಾಪಿಸಿ ಡಿಸಿಎಂ ಡಿಕೆ ಶಿವಕುಮಾರ್ ಕಾಲೆಳೆದಿದ್ದಾರೆ.

ಇದನ್ನು ಓದಿ: ವಾಹನ ಸವಾರರ ಗಮನಕ್ಕೆ: ಕಳೆದ 15 ದಿನಗಳಿಂದ ಬೆಂಗಳೂರಿನ ಈ ರಸ್ತೆ ಬಂದ್, ಆ ಕಡೆ ಹೋಗ್ಬೇಡಿ

ಒಟ್ಟಾರೆ ಡಬಲ್ ಡೆಕ್ಕರ್ ಫ್ಲೈ ಓವರ್ ಬೆಂಗಳೂರಿನ ಮತ್ತಷ್ಟು ಹೊಸ ಮಾರ್ಗಗಳಲ್ಲಿ ಬರಬೇಕು ಎಂಬ ಕೂಗು ಹೆಚ್ಚಾಗಿದೆ. ಆದರೆ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣದ ಬಳಿಕ ಆಗುವ ಸಾಧಕ ಬಾಧಕ ಬಗ್ಗೆಯೂ ಅಧಿಕಾರಿಗಳು ನಿಗಾ ವಹಿಸಬೇಕು. ಇಲ್ಲವಾದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಗಳು ಟ್ರಾಫಿಕ್ ದಟ್ಟಣೆಯನ್ನು ಶಿಫ್ಟ್ ಮಾಡುತ್ತದೆ ಹೊರತು ನಿವಾರಣೆ ಮಾಡಲ್ಲ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

Source link

Exit mobile version