Electric Lamp: ದೇವರ ಕೋಣೆಯಲ್ಲಿ ವಿದ್ಯುತ್ ದೀಪ ಬಳಸುವುದು ಅಶುಭವೇ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Significance of Continuous Light in the Puja Room: Electric Lamp vs Oil Lamp

ದೇವರ ಕೋಣೆಯಲ್ಲಿ ವಿದ್ಯುತ್ ದೀಪImage Credit source: Pinterest

ಸಾಮಾನ್ಯವಾಗಿ, ದೇವರ ಕೋಣೆಯಲ್ಲಿ ಎಣ್ಣೆ ದೀಪಗಳನ್ನು ಹಚ್ಚುತ್ತೇವೆ. ಆದರೆ, ಎಣ್ಣೆ ದೀಪಗಳು ಅಥವಾ ತುಪ್ಪದ ದೀಪಗಳು ನಿರಂತರವಾಗಿ ಉರಿಯುವುದಿಲ್ಲ. ಬೆಳಗ್ಗೆ ಹಚ್ಚಿದ ದೀಪ ಮಧ್ಯಾಹ್ನಕ್ಕೇ ಆರಿಹೋಗಬಹುದು, ಹಾಗೆಯೇ ಸಂಜೆ ಹಚ್ಚಿದ ದೀಪ ಮಧ್ಯರಾತ್ರಿಯ ವೇಳೆಗೆ ಆರಿಹೋಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ, ಸಾಕಷ್ಟು ಜನರು ವಿದ್ಯುತ್ ದೀಪವನ್ನು ಬಳಕೆ ಮಾಡುತ್ತಾರೆ. ಆದರೆ ದೇವರಿಗೆ ವಿದ್ಯುತ್ ದೀಪ ಬಳಸುವುದು ಶುಭವೇ ಅಥವಾ ಅಶುಭವೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ದೇವರ ಮನೆಯಲ್ಲಿ ಎಣ್ಣೆ ದೀಪದ ಜೊತೆಗೆ, ಮಂದವಾದ ಜೀರೋ ಕ್ಯಾಂಡಲ್ ಬಲ್ಬ್ ಅನ್ನು ನಿರಂತರವಾಗಿ ಉರಿಸಬೇಕು. ಇದರಿಂದ ಎಣ್ಣೆ ದೀಪ ಆರಿಹೋದರೂ, ವಿದ್ಯುತ್ ದೀಪದಿಂದ ನಿರಂತರವಾದ ಬೆಳಕು ಇರುತ್ತದೆ. ಇದು ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲ, ಇದರ ಹಿಂದೆ ವೈಜ್ಞಾನಿಕ ತತ್ವಗಳೂ ಇವೆ. ರಾತ್ರಿಯ ಸಮಯದಲ್ಲಿ ಮನೆಯು ಸಂಪೂರ್ಣ ಕತ್ತಲೆಯಲ್ಲಿ ಇರುವುದು ಸೂಕ್ತವಲ್ಲ. ಬಾಡಿಗೆ ಮನೆಯೇ ಆಗಿರಲಿ, ಸ್ವಂತ ಮನೆಯೇ ಆಗಿರಲಿ, ರಾತ್ರಿ ಹೊತ್ತು ಸಂಪೂರ್ಣ ಕತ್ತಲಾಗಿ ಇಡಬಾರದು. ಹಾಲ್‌ನಲ್ಲಿ ಅಥವಾ ದೇವರ ಗುಡಿಯಲ್ಲಿ ಕನಿಷ್ಠ ಒಂದು ಮಂದವಾದ ದೀಪ ಇರಬೇಕು.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ವೈಜ್ಞಾನಿಕವಾಗಿ ನೋಡಿದರೆ, ರಾತ್ರಿ ಎದ್ದು ನೀರು ಕುಡಿಯಲು ಹೋಗುವಾಗ ಕತ್ತಲಿನಲ್ಲಿ ನಡೆದು ಏನಾದರೂ ತಲೆ ಅಥವಾ ಕೈ-ಕಾಲುಗಳಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ವೃದ್ಧರಿಗೆ, ಮಕ್ಕಳಿಗೂ ಇದು ಅನ್ವಯಿಸುತ್ತದೆ. ಒಂದು ಮಂದವಾದ ದೀಪ ಇದ್ದರೆ, ಅನಿರೀಕ್ಷಿತ ಅಪಾಯಗಳನ್ನು ತಪ್ಪಿಸಬಹುದು ಮತ್ತು ರಾತ್ರಿ ಎದ್ದಾಗ ಮನಸ್ಸಿಗೆ ಒಂದು ಪ್ರಜ್ಞೆ ಮತ್ತು ಶಾಂತಿ ಇರುತ್ತದೆ. ಕತ್ತಲಿನಲ್ಲಿ ಏನೋ ತಾಗಿ ದುರಂತವಾಗುವುದನ್ನು ತಪ್ಪಿಸಬಹುದು. ಹೀಗಾಗಿ, ದೇವರ ಮನೆಯಲ್ಲಿ ಎಣ್ಣೆ ದೀಪದ ಜೊತೆಗೆ ನಿರಂತರವಾಗಿ ಒಂದು ಜೀರೋ ಕ್ಯಾಂಡಲ್ ಬಲ್ಬ್ ಅನ್ನು ಇರಿಸುವುದರಿಂದ ಧನಾತ್ಮಕ ಶಕ್ತಿಗಳು ಹರಿಯುವುದಲ್ಲದೆ, ಪ್ರಾಯೋಗಿಕವಾಗಿಯೂ ಹಲವಾರು ಅನುಕೂಲಗಳಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಮುನ್ನೆಲೆಗೆ ಬಂತು ನಟಿ ತ್ರಿಶಾ ಕೃಷ್ಣನ್ ಸ್ನೇಹ ಮತ್ತು ಆಸ್ತಿಯ ವಿವರ; ನಟಿ ಎಷ್ಟು ಶ್ರೀಮಂತರು? – Kannada News | Thalapathy Vijay’s Political Win Reignites Trisha Marriage Rumors: Actress’s Net Worth and Film Career

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಐತಿಹಾಸಿಕ ಜಯಭೇರಿ ಬಾರಿಸಿದೆ. ಈ ಬೆನ್ನಲ್ಲೇ ವಿಜಯ್ ಆಪ್ತ ಗೆಳತಿ ಎನಿಸಿಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರ (Trisha) ಹೆಸರು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಿಜಯ್ ಅವರ ರಾಜಕೀಯ ಯಶಸ್ಸಿನ ಬೆನ್ನಲ್ಲೇ ಇಬ್ಬರ ಸ್ನೇಹ ಮತ್ತು ಮದುವೆಯ ಕುರಿತಾದ ವದಂತಿಗಳು ಹೊಸ ರೂಪ ಪಡೆದುಕೊಂಡಿವೆ.

ಕಳೆದ ಸೋಮವಾರ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ವಿಜಯ್ ಅವರ ನಿವಾಸಕ್ಕೆ ತ್ರಿಶಾ ಕೃಷ್ಣನ್ ಭೇಟಿ ನೀಡಿದ್ದು ಈಗ ಚರ್ಚೆಯ ವಿಷಯವಾಗಿದೆ. ಅಲ್ಲಿ ತ್ರಿಶಾ ಅವರ ಕಾರು ಕಾಣಿಸಿಕೊಂಡ ಬೆನ್ನಲ್ಲೇ, “ಚುನಾವಣೆಯ ನಂತರ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ” ಎಂಬ ಮಾತುಗಳು ತಮಿಳುನಾಡು ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ದಶಕಗಳಿಂದ ಮಿಂಚುತ್ತಿರುವ ತ್ರಿಶಾ ಕೃಷ್ಣನ್, ತಮ್ಮ ಕಠಿಣ ಪರಿಶ್ರಮದಿಂದ ಭಾರಿ ಆಸ್ತಿ ಗಳಿಸಿದ್ದಾರೆ. ETimes ವರದಿಯ ಪ್ರಕಾರ ಅವರ ನಿವ್ವಳ ಮೌಲ್ಯದ ವಿವರ ಹೀಗಿದೆ:

ಒಟ್ಟು ಆಸ್ತಿ: ಸುಮಾರು 85 ಕೋಟಿ ರೂಪಾಯಿ.

ಐಷಾರಾಮಿ ಬಂಗಲೆ: ಚೆನ್ನೈನಲ್ಲಿ 10-12 ಕೋಟಿ ರೂ. ಮೌಲ್ಯದ ಮನೆ ಹಾಗೂ ಹೈದರಾಬಾದ್‌ನಲ್ಲಿ 6-7 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಕಾರುಗಳ ಸಂಗ್ರಹ: ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್, ಬಿಎಂಡಬ್ಲ್ಯು 5 ಸೀರಿಸ್ ಮತ್ತು ರೇಂಜ್ ರೋವರ್ ಇವೊಕ್‌ನಂತಹ ಪ್ರೀಮಿಯಂ ಕಾರುಗಳು ಇವರ ಗ್ಯಾರೇಜ್‌ನಲ್ಲಿವೆ.

ಚಿತ್ರರಂಗದಲ್ಲಿ ತ್ರಿಶಾ ಬ್ಯುಸಿ:

ರಾಜಕೀಯ ಬೆಳವಣಿಗೆಗಳ ನಡುವೆಯೂ ತ್ರಿಶಾ ತಮ್ಮ ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಮಣಿರತ್ನಂ ನಿರ್ದೇಶನದ ಅದ್ದೂರಿ ಚಿತ್ರ ‘ಥಗ್ ಲೈಫ್’ನಲ್ಲಿ ಕಮಲ್ ಹಾಸನ್ ಮತ್ತು ಸಿಲಂಬರಸನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯ್ ಪಕ್ಷಕ್ಕೆ ಮತ ಹಾಕಿ ಖುಷಿಯಿಂದ ಪೋಸ್ ಕೊಟ್ಟ ನಟಿ ತ್ರಿಶಾ ಕೃಷ್ಣನ್

ಸದ್ಯ ತಮಿಳುನಾಡಿನ ‘ಭಾವಿ ಮುಖ್ಯಮಂತ್ರಿ’ ಎಂದೇ ಬಿಂಬಿತವಾಗುತ್ತಿರುವ ವಿಜಯ್ ಅವರ ರಾಜಕೀಯ ಯಶಸ್ಸಿನ ಈ ಸಂಭ್ರಮದಲ್ಲಿ ತ್ರಿಶಾ ಅವರ ಹೆಸರು ತಳುಕು ಹಾಕಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ಪಾಕಿಸ್ತಾನಕ್ಕೆ ಬಲವಾದ ಸಂದೇಶ ಕೊಟ್ಟ ರಾಜನಾಥ್ ಸಿಂಗ್ – Kannada News | Operation Sindoor Completes One Year as India Reaffirms Security Resolve

ನವದೆಹಲಿ, ಮೇ 08: ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ದೇಶದ ದೃಢ ಸಂಕಲ್ಪದ ಸಂಕೇತವಾದ ‘ಆಪರೇಷನ್ ಸಿಂಧೂರ್’ (Operation Sindoor)ನಡೆದು ಇಂದು ಭರ್ತಿ ಒಂದು ವರ್ಷ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಹೇಯ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಈ ನಿಖರವಾದ ದಾಳಿಯು ಆಧುನಿಕ ಮಿಲಿಟರಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ರಕ್ಷಣಾ ಸಚಿವರ ನಮನ ಮತ್ತು ಎಚ್ಚರಿಕೆ
ಈ ವಿಶೇಷ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆಯ ಸಾಹಸಕ್ಕೆ ನಮಿಸಿದ್ದಾರೆ. ಆಪರೇಷನ್ ಸಿಂಧೂರ್ ರಾಷ್ಟ್ರೀಯ ಸಂಕಲ್ಪದ ಸಂಕೇತ. ಇದೇ ವೇಳೆ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ ಅವರು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದರೆ ಸಶಸ್ತ್ರ ಪಡೆಗಳು ನಿರ್ಣಾಯಕವಾಗಿ ಉತ್ತರಿಸಲು ಸದಾ ಸಿದ್ಧ ಎಂದು ಎಚ್ಚರಿಸಿದ್ದಾರೆ.

ಆಪರೇಷನ್ ಸಿಂಧೂರ್ ಹಿನ್ನೆಲೆ
ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಅಮಾಯಕ ನಾಗರಿಕರು ಬಲಿಯಾಗಿದ್ದರು. ಈ ರಕ್ತಪಾತಕ್ಕೆ ತಕ್ಕ ಪಾಠ ಕಲಿಸಲು ಭಾರತ ಮೇ 7 ರಂದು ‘ಆಪರೇಷನ್ ಸಿಂಧೂರ್’ ಆರಂಭಿಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ದಾಳಿ ನಡೆಸಿತು.

ಮತ್ತಷ್ಟು ಓದಿ: ಆಪರೇಷನ್ ಸಿಂಧೂರ್ ಅಬ್ಬರ, ಪಾಕ್ ಉಗ್ರರ ಕೋಟೆಗೆ ಲಗ್ಗೆ, ಒಂದು ವರ್ಷವಾದ್ರೂ ಹೊರಬರಲು ಹೆದರುತ್ತಿದ್ದಾರೆ ಸಯೀದ್-ಅಜರ್

ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ಸಂಘಟನೆಗಳಿಗೆ ಸೇರಿದ 9ಕ್ಕೂ ಹೆಚ್ಚು ಪ್ರಮುಖ ಕಮಾಂಡ್ ಕೇಂದ್ರಗಳನ್ನು ಭಾರತೀಯ ಸೇನೆ ಧೂಳೀಪಟ ಮಾಡಿತು. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು.

ಭಾರತೀಯ ವಾಯುಪಡೆಯು ಕಾರ್ಯಾಚರಣೆಯ ರೋಚಕ ವೀಡಿಯೋವನ್ನು ಹಂಚಿಕೊಂಡಿದ್ದು, ಭಾರತ ಯಾವುದನ್ನೂ ಮರೆಯುವುದಿಲ್ಲ, ಯಾವುದನ್ನೂ ಕ್ಷಮಿಸುವುದಿಲ್ಲ ಎಂದು ಗುಡುಗಿದೆ.

ನಾಲ್ಕು ದಿನಗಳ ಸುದೀರ್ಘ ಸಂಘರ್ಷ
ಭಾರತದ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನ ಮೇ 8 ರಿಂದ 10 ರವರೆಗೆ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ, ಭಾರತವು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಪಾಕಿಸ್ತಾನದ ಸೇನಾ ನೆಲೆಗಳಿಗೇ ತಿರುಗೇಟು ನೀಡಿತು. ನಾಲ್ಕು ದಿನಗಳ ಕಾಲ ಗಡಿಯಲ್ಲಿ ಭೀಕರ ಘರ್ಷಣೆ ನಡೆದ ನಂತರ, ಪಾಕಿಸ್ತಾನದ ಕೋರಿಕೆಯ ಮೇರೆಗೆ ಮೇ 10 ರಂದು ಶಾಂತಿ ಸ್ಥಾಪನೆಯಾಯಿತು.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು ತನ್ನ ಗಡಿ ಮತ್ತು ಜನರ ರಕ್ಷಣೆಗಾಗಿ ಗಡಿಯಾಚೆ ನುಗ್ಗಿ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂಬುದನ್ನು ಆಪರೇಷನ್ ಸಿಂಧೂರ್ ಜಗತ್ತಿಗೆ ಸಾರಿದೆ. ಆತ್ಮನಿರ್ಭರತೆಯತ್ತ ಹೆಜ್ಜೆ ಹಾಕುತ್ತಿರುವ ಭಾರತಕ್ಕೆ ಈ ಕಾರ್ಯಾಚರಣೆಯು ಮಿಲಿಟರಿ ಸಾಮರ್ಥ್ಯದ ದೊಡ್ಡ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

LSG vs RCB ಪಂದ್ಯಕ್ಕೆ 5 ಆಟಗಾರರು ಅಲಭ್ಯ

Source link

ದಳಪತಿ ವಿಜಯ್ 80 ಕೋಟಿ ರೂ. ನಿವಾಸಕ್ಕೆ ಹಾಲಿವುಡ್​ ನಟನ ಈ ಮನೆಯೇ ಸ್ಫೂರ್ತಿ

ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅಭೂತಪೂರ್ವ ಜಯಗಳಿಸಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ವಿಜಯದ ಸಂಭ್ರಮದ ನಡುವೆಯೇ, ವಿಜಯ್ ಅವರ ಐಷಾರಾಮಿ ಜೀವನಶೈಲಿ ಮತ್ತು ಅವರು ವಾಸಿಸುವ ಸುಂದರ ಬಂಗಲೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು ಮತ್ತೆ ಮುನ್ನೆಲೆಗೆ ಬಂದಿವೆ.

ವಿಜಯ್ ಐಷಾರಾಮಿ ಮನೆಯ ಕುರಿತಾದ ವಿಶೇಷ ಮಾಹಿತಿ ಇಲ್ಲಿದೆ:

ಹಾಲಿವುಡ್ ಶೈಲಿಯ ಬಂಗಲೆ: ಎಲ್ಲಾ ಚಿತ್ರರಂಗದ ಸ್ಟಾರ್‌ಗಳಂತೆ ವಿಜಯ್ ಕೂಡ ಐಷಾರಾಮಿ ಮನೆ ಕಟ್ಟುವ ಹಂಬಲ ಹೊಂದಿದ್ದರು. ಅದರಂತೆ ಚೆನ್ನೈನ ಸಮುದ್ರ ತೀರದಲ್ಲಿ ಅವರು ಸುಂದರವಾದ ಬಂಗಲೆಯನ್ನು ನಿರ್ಮಿಸಿದ್ದಾರೆ.

ಟಾಮ್ ಕ್ರ್ಯೂಸ್ ಸ್ಫೂರ್ತಿ: ಹಾಲಿವುಡ್‌ನ ಟಾಮ್ ಕ್ರ್ಯೂಸ್ ಅವರ ಬೀಚ್ ಸೈಡ್ ಮನೆಯ ವಿನ್ಯಾಸ ವಿಜಯ್ ಅವರಿಗೆ ಬಹಳ ಇಷ್ಟವಾಗಿತ್ತು. ಶೂಟಿಂಗ್ ನಿಮಿತ್ತ ಅಮೆರಿಕಕ್ಕೆ ತೆರಳಿದಾಗ ಆ ಮನೆಯನ್ನು ನೋಡಿದ್ದ ವಿಜಯ್, ಅದೇ ಮಾದರಿಯಲ್ಲಿ ತಮ್ಮ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ.

80 ಕೋಟಿ ರೂಪಾಯಿ ಬೆಲೆ: ಚೆನ್ನೈನ ನೀಲಕಾರೈ ಭಾಗದಲ್ಲಿರುವ ಈ ಅದ್ದೂರಿ ಮನೆಯ ಬೆಲೆ ಸುಮಾರು 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಟಾಮ್ ಕ್ರ್ಯೂಸ್ ಅವರ ಮನೆಯನ್ನೇ ರೆಫರೆನ್ಸ್ ಆಗಿ ಇಟ್ಟುಕೊಂಡು ಇದನ್ನು ಕಟ್ಟಲಾಗಿದೆ.

ಅಭಿಮಾನಿಗಳ ಶಕ್ತಿ: ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿ ಅಪಾರ ಅಭಿಮಾನಿ ಬಳಗ ಹೊಂದಿರುವ ವಿಜಯ್ ಅವರಿಗೆ ಈ ಮನೆ ದೇವಸ್ಥಾನವಿದ್ದಂತೆ. ಹಿಂದೆ ಈ ಮನೆಗೆ ಬಾಂಬ್ ಬೆದರಿಕೆಯ ಹುಸಿ ಕರೆ ಬಂದಾಗ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.

ಇದನ್ನೂ ಓದಿ: ಕೆಲಸ ಮಾಡಿತು ದಳಪತಿ ವಿಜಯ್ ಮಾಡಿದ ಆ ಸೀಕ್ರೆಟ್ ಪ್ಲ್ಯಾನ್; ಭರ್ಜರಿ ಗೆಲುವಿಗೆ ಇದೇ ಕಾರಣ

ಸದ್ಯ ರಾಜಕೀಯದಲ್ಲಿ ಭರ್ಜರಿ ಯಶಸ್ಸು ಕಂಡಿರುವ ವಿಜಯ್, ಎಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಸಿನಿಮಾದ ರಿಲೀಸ್​​ಗೆ ಕಾದಿದ್ದಾರೆ. ಈ ಚಿತ್ರದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಜಕೀಯ ರಂಗದಲ್ಲೂ ಹೊಸ ಸುನಾಮಿ ಎಬ್ಬಿಸಿರುವ ‘ಜನ ನಾಯಕ’ನ ಮುಂದಿನ ನಡೆಗಳ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ರಾಜ್ಯಾದ್ಯಂತ ರೈಲು ಸಂಚಾರ ಬಂದ್ ಮಾಡುವ ಎಚ್ಚರಿಕೆ ನೀಡಿದ ಕರವೇ – Kannada News | Railway Promotion Exam Row: KRV Warns to Stop Trains Across Karnataka Over Exclusion of Kannada Language

ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡImage Credit source: tv9

ಬೆಂಗಳೂರು, ಮೇ 7: ನೈರುತ್ಯ ರೈಲ್ವೆ (South Western Railway) ಇಲಾಖೆಯು ನಡೆಸುತ್ತಿರುವ ವಿವಿಧ ಹುದ್ದೆಗಳ ಮುಂಬಡ್ತಿ (Promotion) ಪರೀಕ್ಷೆಗಳಲ್ಲಿ ಕನ್ನಡ (Kannada) ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಈ ಹಿಂದೆ ಪ್ರತಿಭಟನೆಗಳ ನಂತರ ಪರೀಕ್ಷೆಯನ್ನು ಮುಂದೂಡಲಾಗಿದ್ದರೂ, ಇದೀಗ ಮತ್ತೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲು ರೈಲ್ವೆ ಮಂಡಳಿ ಮುಂದಾಗಿದೆ. ಇಲಾಖೆಯ ಈ ಕ್ರಮದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ರೈಲು ಸಂಚಾರ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.

ಮುಖ್ಯಾಂಶಗಳು

  • ಆಫೀಸ್ ಸೂಪರಿಂಟೆಂಡೆಂಟ್ ಸೇರಿದಂತೆ ಒಟ್ಟು 73 ಮುಂಬಡ್ತಿ ಪೋಸ್ಟ್‌ಗಳಿಗಾಗಿ ನಡೆಯುತ್ತಿದೆ ಪರೀಕ್ಷೆ.
  • ಕನ್ನಡಕ್ಕೆ ಅವಕಾಶ ನೀಡದಿದ್ದರೆ ರಾಜ್ಯದಲ್ಲಿ ಒಂದೂ ರೈಲು ಓಡಲು ಬಿಡುವುದಿಲ್ಲ ಎಂದು ಕರವೇ ಎಚ್ಚರಿಕೆ.
  • ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ ಸಿಎಂ ಸಿದ್ದರಾಮಯ್ಯ.

ಏನಿದು ವಿವಾದ?

ನೈರುತ್ಯ ರೈಲ್ವೆಯ ಆಫೀಸ್ ಸೂಪರಿಂಟೆಂಡೆಂಟ್ (39 ಪೋಸ್ಟ್), ಸೀನಿಯರ್ ಕ್ಲರ್ಕ್ (25) ಮತ್ತು ಇಂಟರ್ಮೀಡಿಯೆಟ್ ಅಪ್ರೆಂಟಿಸ್ ಮೆಕ್ಯಾನಿಕ್ಸ್ (9) ಸೇರಿದಂತೆ ಒಟ್ಟು 73 ಹುದ್ದೆಗಳಿಗೆ ಮುಂಬಡ್ತಿ ಪರೀಕ್ಷೆ ನಡೆಯುತ್ತಿದೆ. ಆದರೆ, ಈ ಪರೀಕ್ಷೆಗಳನ್ನು ಬರೆಯಲು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ತಾರತಮ್ಯದ ವಿರುದ್ಧ ಕೆರಳಿ ಕೆಂಡವಾಗಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ‘ರೈಲ್ವೆ ಪರೀಕ್ಷೆಗಳಲ್ಲಿ ತ್ರಿಭಾಷಾ ಸೂತ್ರದಡಿ ಕನ್ನಡ-ಇಂಗ್ಲಿಷ್-ಹಿಂದಿ ವ್ಯವಸ್ಥೆಯನ್ನು ಅಳವಡಿಸಲೇಬೇಕು. ಅಧಿಕಾರಿಗಳು ತಮ್ಮ ಸುತ್ತೋಲೆಯಲ್ಲಿನ ದೋಷ ಸರಿಪಡಿಸಿ ಕನ್ನಡದಲ್ಲಿ ಪರೀಕ್ಷೆ ನಡೆಸಲು ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ಮೇಲೆ ಒತ್ತಡ

ಈಗಾಗಲೇ ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಲಾಗಿದೆ. ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪರೀಕ್ಷೆ ನಡೆಸುತ್ತಿರುವುದು ಕೇಂದ್ರ ಸರ್ಕಾರ, ಹೀಗಾಗಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಪರೋಕ್ಷವಾಗಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕೆ ಮತ್ತೆ ಕೊಕ್: ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ; ಸಿಡಿದೆದ್ದ ಕರವೇ

ಕಳೆದ ಬಾರಿ ನಡೆದ ಪರೀಕ್ಷೆಗಳ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನ ಪರೀಕ್ಷಾ ಕೇಂದ್ರಗಳಿಗೆ ನುಗ್ಗಿ ಪ್ರತಿಭಟನೆ ನಡೆಸಿದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಅದೇ ಸಮಸ್ಯೆ ಪುನರಾವರ್ತನೆಯಾಗುತ್ತಿರುವುದರಿಂದ, ರೈಲ್ವೆ ಇಲಾಖೆ ತನ್ನ ಧೋರಣೆ ಬದಲಿಸಿಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ ಉತ್ತಮ – Kannada News | Bangalore Air Pollution Crisis: Bengaluru and Mangalore Air Quality gets better

ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ ಉತ್ತಮ

ಬೆಂಗಳೂರು, ಮೇ 07: ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ಏರ್ ಕ್ವಾಲಿಟಿ  (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಮಂಗಳೂರು ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಕೇವಲ 122ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಏರ್ ಕ್ವಾಲಿಟಿ ಇಂದು 63ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 122
  • ಮಂಗಳೂರು-63
  • ಮೈಸೂರು – 82
  • ಬೆಳಗಾವಿ – 62
  • ಕಲಬುರ್ಗಿ-64
  • ಶಿವಮೊಗ್ಗ –66
  • ಬಳ್ಳಾರಿ – 86
  • ಹುಬ್ಬಳ್ಳಿ- 87
  • ಉಡುಪಿ –64
  • ವಿಜಯಪುರ – 67

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ವಾರಕ್ಕೆ ‘ಕೆಡಿ’ ಸಿನಿಮಾ ಗಳಿಕೆ ಮಾಡಿದ್ದೆಷ್ಟು? ಇಲ್ಲಿದೆ ಲೆಕ್ಕಾಚಾರ – Kannada News | KD Movie 1 Week Box Office Collection: Dhruva Sarja’s Controversial Film Earns 16 Cr in 1 Week

‘ಕೆಡಿ’ ಸಿನಿಮಾ (KD Movie) ವಿವಾದಗಳ ಮೇಲೆ ವಿವಾದ ಮಾಡಿಕೊಂಡಿತು. ಮೊದಲು ‘ಸರ್ಸೆ ಸರ್ಸೆ’ ಹಾಡಿನ ಕಾರಣಕ್ಕೆ ವಿವಾದ ಸೃಷ್ಟಿ ಆದರೆ, ನಂತರ ಟ್ರೇಲರ್ ವಿಷಯದಲ್ಲಿ ತೊಂದರೆ ಆಯಿತು. ‘ಸರ್ಸೆ ಸರ್ಸೆ’ ಹಾಡನ್ನು ಯೂಟ್ಯೂಬ್ ಹಾಗೂ ಸಿನಿಮಾದಿಂದ ತೆಗೆಯಲಾಗಿದೆ. ಟ್ರೇಲರ್ ಕೂಡ ಯೂಟ್ಯೂಬ್​​ನಿಂದ ತೆಗೆದು ಮತ್ತೆ ಹಾಕಲಾಗಿದೆ. ಇಷ್ಟೆಲ್ಲ ಅಡೆತಡೆಗಳ ಬಳಿಕ ಸಿನಿಮಾ ರಿಲೀಸ್ ಆದರೂ ಮೆಚ್ಚುಗೆ ಪಡೆಯಿತು. ಈ ಚಿತ್ರ ಬಾಕ್ಸ್ ಆಫೀಸ್​​ನಲ್ಲಿಯೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಹಾಗಾದರೆ, ಸಿನಿಮಾ ಒಂದು ವಾರದಲ್ಲಿ ಮಾಡಿದ ಗಳಿಕೆ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಯಿತು. ಈಗ ಚಿತ್ರ ರಿಲೀಸ್ ಆಗಿ ಏಳು ದಿನ ಕಳೆದಿದೆ. ಮೇ 4ರಂದು ಸಿನಿಮಾದ ಗಳಿಕೆ ಕೊಂಚ ಕಡಿಮೆ ಆಗಿದೆ. ಸಿನಿಮಾ ಕೇವಲ 84 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಹಾಗಾದರೆ, ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟು? ಅದಕ್ಕೂ ಉತ್ತರ ಇದೆ.

‘ಕೆಡಿ’ ಸಿನಿಮಾ ಈವರೆಗೆ 16.83 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ವಾರ ಯಾವುದೇ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಹೀಗಾಗಿ, ಈ ವಾರವೂ ಸಿನಿಮಾ ಉತ್ತಮವಾಗಿ ಗಳಿಕೆ ಮಾಡಬಹುದು. ಈ ಚಿತ್ರದ ನೆಟ್ ಕಲೆಕ್ಷನ್ 14.47 ಕೋಟಿ ರೂಪಾಯಿ ಇದೆ.

ಇದನ್ನೂ ಓದಿ: ಸೋಮವಾರವೂ ‘ಕೆಡಿ’ ಭರ್ಜರಿ ಕಲೆಕ್ಷನ್; ಕೆವಿಎನ್​​ಗೆ ಒಂದೇ ದಿನ ಡಬಲ್ ಧಮಾಕ

‘ಕೆಡಿ’ ಸಿನಿಮಾ ಬಗ್ಗೆ ಕೆಲವರು ಪಾಸಿಟಿವ್ ಆಗಿ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ನೋರಾ ಫತೇಹಿ, ಕಿಚ್ಚ ಸುದೀಪ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ. ಈ ಚಿತ್ರದ ಒಟ್ಟಾರೆ ಎಷ್ಟು ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಟಿವಿ ಹಕ್ಕು, ಒಟಿಟಿ ಹಕ್ಕು ಒಳ್ಳೆಯ ಬೆಲೆಗೆ ಮಾರಾಟ ಆಗಿದೆ ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ನಾಗರಹಾವು – Kannada News | Boy Rescued After Getting Trapped in Narrow Crevice in Odisha

ನಯಾಗಢ, ಮೇ 07: ಒಡಿಶಾದ ನಯಾಗಢದಲ್ಲಿ ಜೇನುತುಪ್ಪ ತರಲು ಹೋದ ಶಿಬಾ ಪ್ರಧಾನ್ ಎಂಬ ಬಾಲಕನ ಪಾಲಿಗೆ ಕಾಡು ದುಃಸ್ವಪ್ನವಾಯಿತು. ಬಂಡೆಯ ಬಿರುಕಿನಲ್ಲಿದ್ದ ಜೇನುಗೂಡು ತೆಗೆಯಲು ಹೋದಾಗ, ಬಾಲಕನ ತಲೆ ಇಕ್ಕಟ್ಟಾದ ಸಂದಿಯಲ್ಲಿ ಸಿಲುಕಿಕೊಂಡಿತು. ಆತಂಕದ ವಿಷಯವೆಂದರೆ, ಅದೇ ಕಿರಿದಾದ ಜಾಗದಲ್ಲಿ ಬಾಲಕನ ಮುಖದ ಮುಂದೆಯೇ ಭೀಕರ ವಿಷಪೂರಿತ ಹಾವೊಂದು ಹೆಡೆ ಎತ್ತಿ ಕುಳಿತಿತ್ತು. ಅತ್ತ ಕದಲಲಾಗದೆ, ಇತ್ತ ಹಾವಿನ ಭಯದಿಂದ ಬಾಲಕ ಎಂಟು ಗಂಟೆಗಳ ಕಾಲ ಸಿಲುಕಿಯೇ ಇದ್ದ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಎರಡು ತಂಡಗಳು ಹಾವಿನ ಸವಾಲನ್ನೂ ಮೀರಿ ಕಾರ್ಯಾಚರಣೆ ನಡೆಸಿ, ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಕಿರಿದಾದ ಸಂದು, ಎದುರಿಗಿದ್ದ ಹಾವು ಮತ್ತು ಎಂಟು ಗಂಟೆಗಳ ಹೋರಾಟ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇಂದೂ ಇರಲಿದೆ ವರುಣಾರ್ಭಟ! ಕೊಡಗು, ಹಾಸನದಲ್ಲಿ ಆಲಿಕಲ್ಲು ಮಳೆ​ – Kannada News | Bengaluru temperature: Thundershowers in Bengaluru, Hailstorm in South interior Karnataka

ಬೆಂಗಳೂರಿನಲ್ಲಿ ಇಂದೂ ಇರಲಿದೆ ವರುಣಾರ್ಭಟ!

ಬೆಂಗಳೂರು, ಮೇ 07: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ (Weather) ತಿಳಿಸಿದೆ. ಹಾಸನ, ಕೊಡಗು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಇಂದು ಆಲಿಕಲ್ಲು ಮಳೆಯಾಗಲಿದ್ದು, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಮುಂದಿನ 3 ದಿನಗಳವರೆಗೆ ಬೆಂಗಳೂರಿನಲ್ಲಿ ಮಳೆ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಬ್ಬರ
  • ಕೊಡಗು, ಹಾಸನ ಸೇರಿದಂತೆ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಆಲಿಕಲ್ಲು ಮಳೆ

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಷ್ಕ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ ಹಾಸನ, ಮಂಡ್ಯ, ಮೈಸೂರು ಮತ್ತು ಕೊಡಗು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ಬಿರುಗಾಳಿಯೊಂದಿಗೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಗದಗ, ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಳಹವೆಯಿರಲಿದೆ.

ಇದನ್ನೂ ಓದಿ ಮುಂದಿನ 7 ದಿನ ರಾಜ್ಯದಲ್ಲಿ ಬಿಸಿಲಿನ ನಡುವೆ ಅಲ್ಲಲ್ಲಿ ಮಳೆ ಸಾಧ್ಯತೆ

ಇನ್ನೂ ಮೂರು ದಿನ ಗುಡುಗು, ಮಳೆಯಬ್ಬರ!

ಮೇ 7 ಮತ್ತು 8 ರಂದು ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಇವುಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದ್ದು, ಎಲ್ಲೋ ಅಲರ್ಟ್ ಜಾರಿಯಲ್ಲಿರುತ್ತದೆ. ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದೆ. ಈ ಆರು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆಲ್ಲಾ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version