ಅಭಿಷೇಕ್ ಆರ್ಭಟಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

Source link

ದೇಶಸೇವೆಯಿಂದ ರಾಜಕೀಯ ವ್ಯೂಹದತ್ತ, ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸುವೇಂದು ಆಪ್ತ ಚಂದ್ರನಾಥ್ ರಥ್ ಯಾರು? – Kannada News | Chandranath Rath Murder: Suvendu Adhikari’s Retired IAF Aide and Strategist Shot Dead in Bengal

ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal) ದ ರಾಜಕೀಯ ಅಖಾಡದಲ್ಲಿ ಸಂಚಲನ ಮೂಡಿಸಿರುವ ಉತ್ತರ 24 ಪರಗಣ ಜಿಲ್ಲೆಯ ಶೂಟೌಟ್ ಪ್ರಕರಣದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಅತ್ಯಂತ ಆಪ್ತ ಚಂದ್ರನಾಥ್ ರಥ್ (41) ಬಲಿಯಾಗಿದ್ದಾರೆ. ಭಾರತೀಯ ವಾಯುಪಡೆಯ ನಿವೃತ್ತ ಯೋಧನೊಬ್ಬ ರಾಜಕೀಯ ವ್ಯೂಹರಚನಾಕಾರನಾಗಿ ಬೆಳೆದ ಹಾದಿ ಗುಂಡಿನ ದಾಳಿಯೊಂದಿಗೆ ರಕ್ತಸಿಕ್ತವಾಗಿ ಕೊನೆಗೊಂಡಿದೆ.

ಬುಧವಾರ ರಾತ್ರಿ ಮಧ್ಯಮಗ್ರಾಮದ ದೊಹಾರಿಯಾ ಪ್ರದೇಶದ ಬಳಿ ಚಂದ್ರನಾಥ್ ರಥ್ ಅವರು ಸಂಚರಿಸುತ್ತಿದ್ದ ವಾಹನವನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಅತ್ಯಂತ ಹತ್ತಿರದಿಂದ ಗುಂಡು ಹಾರಿಸಿದ ಪರಿಣಾಮ ರಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಹತ್ಯೆಯು ಬಂಗಾಳದ ಚುನಾವಣಾ ನಂತರದ ಅಸ್ಥಿರ ವಾತಾವರಣವನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ಚಂದ್ರನಾಥ ಮೂಲತಃ ಪುರ್ಬಾ ಮೇದಿನಿಪುರದ ಚಾಂಡಿಪುರದವರಾದವರು, ರಹರಾ ರಾಮಕೃಷ್ಣ ಮಿಷನ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಇವರು, ರಾಮಕೃಷ್ಣ ಮಿಷನ್‌ನ ಆಧ್ಯಾತ್ಮಿಕ ನೀತಿಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು. ಒಂದು ಹಂತದಲ್ಲಿ ಆಧ್ಯಾತ್ಮಿಕ ಜೀವನವನ್ನೂ ಪರಿಗಣಿಸಿದ್ದರು.
ಸುಮಾರು ಎರಡು ದಶಕಗಳ ಕಾಲ ಭಾರತೀಯ ವಾಯುಪಡೆ (IAF) ಯಲ್ಲಿ ಸೇವೆ ಸಲ್ಲಿಸಿ ದೇಶದ ರಕ್ಷಣೆಯಲ್ಲಿ ತೊಡಗಿದ್ದರು.

ಮತ್ತಷ್ಟು ಓದಿ: ಬಂಗಾಳದಲ್ಲಿ ಕೇಸರಿ ಯುಗಾರಂಭ: ಮೇ 9 ರಂದು ಬಿಜೆಪಿ ಸರ್ಕಾರದ ಪಟ್ಟಾಭಿಷೇಕ, ಸಿಎಂ ರೇಸ್‌ನಲ್ಲಿ ಸುವೇಂದು ಅಧಿಕಾರಿ ಮುಂಚೂಣಿ

ವಾಯುಪಡೆಯಿಂದ ಸ್ವಯಂಪ್ರೇರಿತ ನಿವೃತ್ತಿ ಪಡೆದ ನಂತರ, ಕಾರ್ಪೊರೇಟ್ ವಲಯದಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದರು. 2019 ರಲ್ಲಿ ಸುವೇಂದು ಅಧಿಕಾರಿ ಅವರು ಸಚಿವರಾಗಿದ್ದಾಗ ಅವರ ಅಧಿಕೃತ ತಂಡವನ್ನು ಸೇರುವ ಮೂಲಕ ರಾಜಕೀಯ ಸಮನ್ವಯದ ಜವಾಬ್ದಾರಿ ವಹಿಸಿಕೊಂಡರು. ರಥ್ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ಸುವೇಂದು ಅಧಿಕಾರಿಯವರ ರಾಜಕೀಯ ಕಾರ್ಯಾಚರಣೆಗಳ ‘ಮಾಸ್ಟರ್ ಮೈಂಡ್’ ಆಗಿದ್ದರು.

ಸಾಂಸ್ಥಿಕ ಕೆಲಸಗಳ ಸಮನ್ವಯ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆಯಲ್ಲಿ ಅವರು ಸಿದ್ಧಹಸ್ತರು. ಬಿಜೆಪಿಯ ಹೈ-ವೋಲ್ಟೇಜ್ ಕದನವಾದ ಭಬಾನಿಪುರ ಪ್ರಚಾರ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಧಿಕಾರಿಯವರು ತೃಣಮೂಲ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದಾಗಲೂ, ರಥ್ ಅವರ ಕುಟುಂಬವು (ತಾಯಿ ಹಸಿ ರಥ್ ಸೇರಿದಂತೆ) ನಿಷ್ಠೆಯನ್ನು ಬದಲಿಸಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿತ್ತು.

ಮೃದುಭಾಷಿ ಮತ್ತು ಸರಳ ವ್ಯಕ್ತಿತ್ವದ ರಥ್ ಅವರನ್ನು ಕಳೆದುಕೊಂಡಿರುವುದು ಬಿಜೆಪಿ ಸಂಘಟನೆಗೆ ದೊಡ್ಡ ಹೊಡೆತ ನೀಡಿದೆ. ಭವಿಷ್ಯದಲ್ಲಿ ಅವರಿಗೆ ದೊಡ್ಡ ಆಡಳಿತಾತ್ಮಕ ಜವಾಬ್ದಾರಿ ನೀಡುವ ಊಹಾಪೋಹಗಳು ಪಕ್ಷದ ವಲಯದಲ್ಲಿದ್ದವು. ಆದರೆ, ಈ ಹತ್ಯೆಯು ಬಂಗಾಳದ ಕಾನೂನು ಸುವ್ಯವಸ್ಥೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.

ಬಿಜೆಪಿ ಈ ಹತ್ಯೆಯನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿದ್ದರೆ, ಇಡೀ ರಾಜ್ಯದಲ್ಲಿ ಈ ಘಟನೆ ತೀವ್ರ ಪ್ರತಿರೋಧಕ್ಕೆ ಕಾರಣವಾಗಿದೆ. ಪೊಲೀಸರು ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸರ್ಸೆ ಸರ್ಸೆ’ ಹಾಡು ತೆಗೆದರೂ ನಿಲ್ಲದ ವಿವಾದ; ನೋರಾ ಫತೇಹಿಗೆ ಇಂದು ಮಹತ್ವದ ದಿನ – Kannada News | Nora Fatehi at NCW: ‘Sarse Sarse’ Song Controversy and KD Film Vulgarity Probe

‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಸೆ ಸರ್ಸೆ’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ಹಾಡಿನಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಅವರು ಇಂದು (ಮೇ 7) ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಲಿದ್ದಾರೆ. ಈ ಮೊದಲು ಪ್ರಕರಣದ ಬಗ್ಗೆ ಮಾತನಾಡುವಾಗ ತನಗೂ ಇದಕ್ಕೂ ಸಂಬಂಧ ಇಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದರು. ಈಗ ಆಯೋಗದ ಮುಂದೆ ಅವರು ಯಾವ ರೀತಿಯಲ್ಲಿ ಹೇಳಿಕೆ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

1.‘ಸರ್ಸೆ ಸರ್ಸೆ’ ಹಾಡಿನ ವಿವಾದ

2.ಮಹಿಳಾ ಆಯೋಗದ ಎದುರು ನೋರಾ

3.ವಿವಾದ ಸೃಷ್ಟಿಸಿದ್ದ ಕೆಡಿ ಸಿನಿಮಾ ವಿವಾದ

ಈ ಮೊದಲು ನೋರಾ ಫತೇಹಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಅವರು ವಿದೇಶದಲ್ಲಿದ್ದ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದ್ದ ಅವರಿಗೆ ಆಯೋಗವು ಇಂದು ಬೆಳಿಗ್ಗೆ 11:30ಕ್ಕೆ ಸಮಯ ನಿಗದಿಪಡಿಸಿದೆ. ಈ ಹಾಡಿನ ನೃತ್ಯ ಸಂಯೋಜನೆ ಮತ್ತು ಚಿತ್ರೀಕರಣದಲ್ಲಿನ ತಮ್ಮ ಪಾತ್ರದ ಕುರಿತು ಅವರು ಆಯೋಗಕ್ಕೆ ವಿವರಣೆ ನೀಡಲಿದ್ದಾರೆ.
‘ಸರ್ಸೆ ಸರ್ಸೆ’ ಹಾಡು ಬಿಡುಗಡೆಯಾದ ಬೆನ್ನಲ್ಲೇ ಅದರಲ್ಲಿನ ದ್ವಂದ್ವಾರ್ಥದ ಸಾಹಿತ್ಯ ಮತ್ತು ಲೈಂಗಿಕ ಪ್ರಚೋದಕ ನೃತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕ ಗಣ್ಯರು ಇದನ್ನು ‘ಕಲೆ ಮತ್ತು ಸಾಹಿತ್ಯದ ಅವನತಿ’ ಎಂದು ಕರೆದಿದ್ದರು. ಸಾರ್ವಜನಿಕ ಹಿತದೃಷ್ಟಿಯಿಂದ ಮಹಿಳಾ ಆಯೋಗವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿತ್ತು.

ಸಂಜಯ್ ದತ್ ಅವರ ಕ್ಷಮೆಯಾಚನೆ

ಇದೇ ಪ್ರಕರಣದಲ್ಲಿ ಈಗಾಗಲೇ ಆಯೋಗದ ಮುಂದೆ ಹಾಜರಾಗಿದ್ದ ನಟ ಸಂಜಯ್ ದತ್, ತಮ್ಮ ನಡೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಲಿಖಿತ ಕ್ಷಮಾಪಣೆ ಸಲ್ಲಿಸಿದ್ದಾರೆ. ಪ್ರಾಯಶ್ಚಿತ್ತವಾಗಿ 50 ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸಿನಿಮಾಗಳಲ್ಲಿ ಮಹಿಳೆಯರ ಘನತೆಗೆ ಧಕ್ಕೆ ಬಾರದಂತೆ ಕಾನೂನಾತ್ಮಕ ಮುನ್ನೆಚ್ಚರಿಕೆ ವಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ‘ಸರ್ಸೆ ಸೆರಗು’ ಹಾಡಿಗೆ ಅಶ್ಲೀಲ ನೃತ್ಯ, ನೋರಾ ಫತೇಹಿ ವಿರುದ್ಧ ಫತ್ವಾ

ಆಯೋಗದ ಕಠಿಣ ನಿಲುವು

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹಾಟ್ಕರ್ ಅವರು ಈ ವಿಷಯದಲ್ಲಿ ಕಟ್ಟುನಿಟ್ಟಿನ ನಿಲುವು ತಳೆದಿದ್ದಾರೆ. ‘ಸೃಜನಶೀಲತೆಯ ಹೆಸರಿನಲ್ಲಿ ಮಹಿಳೆಯರ ಘನತೆಯನ್ನು ಹರಾಜು ಹಾಕಲು ಬಿಡುವುದಿಲ್ಲ’ ಎಂದು ಅವರು ಎಚ್ಚರಿಸಿದ್ದಾರೆ. ಈ ಹಾಡನ್ನು ಯೂಟ್ಯೂಬ್​​ನಿಂದ ತೆಗೆದಿದ್ದು ಮಾತ್ರವಲ್ಲ, ಸಿನಿಮಾದಲ್ಲೂ ಅದಕ್ಕೆ ಜಾಗ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ಹೂಡಿಕೆಯಿಂದ ಲಾಭವಿದೆ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 7, ಗುರುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷದ ಷಷ್ಠಿ ತಿಥಿಯ ಈ ದಿನದ ಮಹತ್ವವನ್ನು ವಿವರಿಸಿದ್ದಾರೆ. ಇಂದು ಪೂರ್ವಾಷಾಡ ನಕ್ಷತ್ರದ ಪ್ರಭಾವವಿದ್ದು, ವಿಶೇಷವಾಗಿ ರವೀಂದ್ರನಾಥ ಟಾಗೋರ್ ಅವರ ಜನ್ಮದಿನ, ಮದ್ದೂರಿನಲ್ಲಿ ನರಸಿಂಹ ಜಯಂತಿ ಹಾಗೂ ಲಕ್ಷ್ಮೀನಾರಾಯಣ ರಥೋತ್ಸವ ನಡೆಯುವ ಪವಿತ್ರ ದಿನವಾಗಿದೆ ಎಂದು ಗುರೂಜಿ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

 

 

 

Source link

Daily Devotional: ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ – Kannada News | Spiritual Rituals to Follow Before Cutting a Coconut Tree

ತೆಂಗಿನ ಮರ ಕಡಿಯುವುದಕ್ಕೂ ಮುನ್ನ ಅನುಸರಿಸಬೇಕಾದ ವಿಧಾನ ಇಲ್ಲಿದೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ಸನಾತನ ಸಂಪ್ರದಾಯದಲ್ಲಿ ಪ್ರಕೃತಿಯೇ ದೈವ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬ ನಾಣ್ಣುಡಿಯಂತೆ, ನಾವು ಮರಗಳನ್ನು ಪೋಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ. ವಿಶೇಷವಾಗಿ ‘ಕಲ್ಪವೃಕ್ಷ’ ಎಂದು ಕರೆಯಲ್ಪಡುವ ತೆಂಗಿನ ಮರವು ಮಾನವನಿಗೆ ನೆರಳು, ಆಹಾರ, ಆರೋಗ್ಯ ಮತ್ತು ಆಶ್ರಯ ನೀಡುವ ದೈವಿಕ ಶಕ್ತಿಯ ಸಂಕೇತವಾಗಿದೆ. ಇತ್ತೀಚಿನ ದಿನಗಳಲ್ಲಿ ನಗರೀಕರಣ ಅಥವಾ ಅನಿವಾರ್ಯ ಕಾರಣಗಳಿಂದಾಗಿ ನಾವು ತೆಂಗಿನ ಮರಗಳನ್ನು ಕಡಿಯುವ ಸಂದರ್ಭ ಎದುರಾಗುತ್ತಿದೆ. ಆದರೆ, ಈ ವೃಕ್ಷವನ್ನು ಹೇಗೆಂದರೆ ಹಾಗೆ ಕಡಿಯುವುದು ಮಹಾಪಾಪ ಮತ್ತು ದೋಷಕ್ಕೆ ಕಾರಣವಾಗಬಹುದು ಎಂದು ಶಾಸ್ತ್ರಗಳು ಎಚ್ಚರಿಸುತ್ತವೆ ಎಂದು ಗುರೂಜಿ ವಿವರಿಸಿದ್ದಾರೆ.

 

 

 

 

Source link

ಪಶ್ಚಿಮ ಬಂಗಾಳ ಹಿಂಸಾಚಾರ: ಬಿಜೆಪಿ ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ – Kannada News | West Bengal Post Poll Violence: Suvendu Adhikari’s Executive Assistant Chandranath Rath Shot Dead in Madhyamgram

ಕೋಲ್ಕತ್ತಾ, ಮೇ 7: ಪಶ್ಚಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದ ವಿವಿಧೆಡೆ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ಬಿಜೆಪಿ ನಾಯಕ ಮತ್ತು ಭಾವಿ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಲಾದ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ.
  • ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಗುಂಡಿನ ದಾಳಿ.
  • ಫಲಿತಾಂಶದ ನಂತರ ರಾಜ್ಯಾದ್ಯಂತ ನಡೆದ ಹಿಂಸಾಚಾರದಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಎಫ್‌ಐಆರ್ ದಾಖಲು.

ಅಧಿಕಾರಿ ಪಿಎ ಮೇಲೆ ದಾಳಿ ನಡೆದಿದ್ದು ಹೇಗೆ?

ಪೊಲೀಸ್ ಮೂಲಗಳ ಪ್ರಕಾರ, ಬುಧವಾರ ರಾತ್ರಿ ಸುಮಾರು 10.20ಕ್ಕೆ ಚಂದ್ರನಾಥ್ ರಥ್ ಅವರು ಬಾರಾಸಾತ್‌ನಲ್ಲಿರುವ ತಮ್ಮ ಮನೆಗೆ ಕಾರಿನಲ್ಲಿ ಮರಳುತ್ತಿದ್ದರು. ದೋಹಾರಿಯಾ ಪ್ರದೇಶದಲ್ಲಿ ಮೋಟಾರ್ ಸೈಕಲ್‌ಗಳಲ್ಲಿ ಬಂದ ಅಪರಿಚಿತರು ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಒಬ್ಬ ವ್ಯಕ್ತಿ ಕಾರಿನ ಕಿಟಕಿಯ ಹತ್ತಿರ ಬಂದು ಚಂದ್ರನಾಥ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ರಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕಾರು ಚಾಲಕನನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಂದ್ರನಾಥ್ ಹತ್ಯೆ ಮಾಡಿದವರ ಸುಮ್ಮನೆ ಬಿಡಲ್ಲ: ಸುವೇಂದು ಅಧಿಕಾರಿ

ಆಪ್ತನ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸುವೇಂದು ಅಧಿಕಾರಿ ಆಸ್ಪತ್ರೆಗೆ ಧಾವಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಪ್ರತಿಕ್ರಿಯಿಸಿ, ‘ಇದು ನಿರೀಕ್ಷಿತವಾಗಿತ್ತು. ಟಿಎಂಸಿ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ನಾವು ಭಾವಿಸಿರಲಿಲ್ಲ. ವಿರೋಧ ಪಕ್ಷದ ನಾಯಕನ ಆಪ್ತ ಸಹಾಯಕನನ್ನೇ ಕೊಲ್ಲುವ ಮೂಲಕ ಏನು ಸಂದೇಶ ಕೊಡಲು ಹೊರಟಿದ್ದಾರೆ? ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಚಂದ್ರನಾಥ್ 2018 ರಿಂದ ಸುವೇಂದು ಅವರೊಂದಿಗೆ ಗುರುತಿಸಿಕೊಂಡಿದ್ದರು ಮತ್ತು ಈ ಹಿಂದೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು.

ಹಿಂಸಾಚಾರ ಖಂಡಿಸಿದ ಟಿಎಂಸಿ

ತೃಣಮೂಲ ಕಾಂಗ್ರೆಸ್ ಕೂಡ ಈ ಹತ್ಯೆಯನ್ನು ಖಂಡಿಸಿದ್ದು, ಬಿಜೆಪಿ ಮೇಲೆಯೇ ಪ್ರತ್ಯಾರೋಪ ಮಾಡಿದೆ. ಮಧ್ಯಮಗ್ರಾಮದಲ್ಲಿ ಚಂದ್ರನಾಥ್ ರಥ್ ಹತ್ಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆದರೆ ಕಳೆದ ಮೂರು ದಿನಗಳಲ್ಲಿ ಬಿಜೆಪಿ ಪ್ರೇರಿತ ದುಷ್ಕರ್ಮಿಗಳು ನಮ್ಮ ಮೂವರು ಕಾರ್ಯಕರ್ತರನ್ನು ಕೊಂದಿದ್ದಾರೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಎಕ್ಸ್ ಸಂದೇಶದಲ್ಲಿ ಟಿಎಂಸಿ ಆಗ್ರಹಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಬಿಜೆಪಿ-ಟಿಎಂಸಿ ಕಾರ್ಯಕರ್ತರ ಮಧ್ಯೆ ಭಾರೀ ಸಂಘರ್ಷ, ನಾಲ್ವರು ಸಾವು, ಉದ್ವಿಗ್ನ ಪರಿಸ್ಥಿತಿ

ಫಲಿತಾಂಶ ಪ್ರಕಟವಾದ ಮೇ 4 ರಿಂದ ಬಂಗಾಳದಲ್ಲಿ ಬೆದರಿಕೆ, ಹಲ್ಲೆ ಮತ್ತು ಕೊಲೆಗಳ ಸರಣಿ ಮುಂದುವರಿಯುತ್ತಿದೆ. ಡಿಜಿಪಿ ಸಿದ್ಧನಾಥ್ ಗುಪ್ತಾ ನೀಡಿರುವ ಮಾಹಿತಿಯಂತೆ, ಇದುವರೆಗೆ 200ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿದ್ದು, 433 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ 1,100ಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ನ್ಯಾನೂರ್ ಮತ್ತು ನ್ಯೂ ಟೌನ್ ಭಾಗದಲ್ಲೂ ತಲಾ ಒಂದು ಸಾವು ವರದಿಯಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಮನೋಬಲ ಎಲ್ಲದಕ್ಕೂ ಹೆಚ್ಚಿರಲಿದೆ – Kannada News | Horoscope May 07 Thursday 2026; Dina Rashi Bhavishya Today, Checkout the details here

ಮೇಷ ರಾಶಿ :

ಸಂಗಾತಿಯ ಆಯ್ಕೆಯನ್ನು ನೀವೇ ಮಾಡಿ. ಫಲಾಪೇಕ್ಷೆ ಇಲ್ಲದೇ ಇಂದು ಕಾರ್ಯ ಮಾಡುವಿರಿ. ಸಾಲದಿಂದ ಮುಕ್ತವಾಗುವ ಲಕ್ಷಣಗಳು ಕಂಡುಬರುತ್ತವೆ ಮತ್ತು ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸಂಜೆ ಸ್ನೇಹಿತರೊಂದಿಗೆ ಸಮಯ ಕಳೆಯಬಹುದು. ಕೆಲಸದಲ್ಲಿ ವೇಗ ಇರುತ್ತದೆ ಮತ್ತು ಯೋಜನೆಗಳು ಯಶಸ್ವಿಯಾಗುತ್ತವೆ. ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇದ್ದರೂ ಸಮಯವು ಮಾತ್ರ ಸಿಗದೇಹೋದೀತು. ಹಿತಶತ್ರುಗಳಿಂದ ಸಣ್ಣ ಆಪತ್ತು ಬರಬಹುದು.

ವೃಷಭ ರಾಶಿ :

ಒತ್ತಡದಿಂದ ಮುಕ್ತಿ ಪಡೆದು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ನೀವು ನಿಷ್ಣಾತರಂತೆ ತೋರಿಸಿಕೊಳ್ಳುವಿರಿ. ಖರ್ಚುಗಳ ಮೇಲೆ ನಿಯಂತ್ರಣ, ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಕೆಲಸ ವೇಗವನ್ನು ಪಡೆದ ಕಾರಣ ಆದಾಯವು ಹೆಚ್ಚಾಗುತ್ತದೆ. ಸಂಗಾತಿಯು ನಿಮ್ಮ ಮೇಲೆ ಬೇಸರಗೊಂಡಾರು. ವೃತ್ತಿಯಲ್ಲಿ ಕಿರಿಕಿರಿ ಅಧಿಕವಾಗಬಹುದು. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು.

ಮಿಥುನ ರಾಶಿ :

ಪ್ರಸಿದ್ಧಿಯ ಬಯಕೆ ನಿಮಗೆ ಬರಲಿದೆ. ಹೊಸ ಅವಕಾಶಗಳನ್ನು ಅನ್ವೇಷಣೆ ಮಾಡಲು ನಿಮಗೆ ಧೈರ್ಯ ಮತ್ತು ತಾಳ್ಮೆ ಬೇಕಾಗುತ್ತದೆ. ಹಳೆಯ ಯೋಜನೆಯನ್ನು ಪುನರಾರಂಭಿಸಲು ಅವಕಾಶ ಸಿಗುತ್ತದೆ. ಸರಿಯಾದ ಸಮಯ ಮತ್ತು ಸರಿಯಾದ ನಿರ್ಧಾರಕ್ಕಾಗಿ ಕಾಯಬೇಕು. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಉದ್ಯೋಗವನ್ನು ಬದಲಿಸಿದ ಕಾರಣ ಸಮಯವು ಓಡಾಟದಲ್ಲಿ ವ್ಯರ್ಥವಾಗಬಹುದು. ಸಾಮಾಜಿಕ ಕಾರ್ಯಕ್ಕೆ ನಿಮಗೆ ಪ್ರಶಂಸೆಯು ಸಿಗುವುದು.

ಕರ್ಕಾಟಕ ರಾಶಿ :

ಯಾರ ಒತ್ತಾಯಕ್ಕೋ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ. ಈ ದಿನ ಒಳ್ಳೆಯ ಸುದ್ದಿಗಳೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಎಲ್ಲಾ ಚಿಂತೆಗಳನ್ನು ಮರೆತು ನೀವು ಸಂತೋಷವಾಗಿರುತ್ತೀರಿ. ಯುವಕರು ತಮ್ಮ ವೃತ್ತಿಜೀವನದ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ನಿಮ್ಮ ಸಂತೋಷವನ್ನು ವ್ಯಕ್ತಪಡಿಸುವ ವಿಧಾನವು ವಿಭಿನ್ನವಾಗಿರಲಿದೆ. ಯಾವ ನೋವನ್ನೂ ನಿರ್ಲಕ್ಷಿಸುವುದು ಬೇಡ. ನಿಮ್ಮಿಂದ ಉಪಕಾರವನ್ನು ಕೇಳಿ ಬರಬಹುದು.

ಸಿಂಹ ರಾಶಿ :

ಹೆಚ್ಚು ಮಾತನಾಡಿ ನಿಮ್ಮನ್ನು ನೀವೇ ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ಕೆಲಸದ ಹೊರೆ ಹೆಚ್ಚಿರಬಹುದು ಮತ್ತು ಸ್ವಲ್ಪ ಆಲಸ್ಯವಿರಬಹುದು. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ನಿಮಗೆ ಪ್ರಯಾಣಿಸಲು ಅವಕಾಶ ಸಿಗುತ್ತದೆ. ಮಾನಸಿಕ ಒತ್ತಡವನ್ನು ನಿಯಂತ್ರಿಸುವುದು ಅವಶ್ಯಕ. ನಿಮ್ಮನ್ನು ಮೆಚ್ಚಿಸಿ ಕೆಲಸಗಳನ್ನು ಇಂದು ಮಾಡಿಸಿಕೊಳ್ಳುವರು. ಗುರಿಯನ್ನು ಯಾರಾದರೂ ತಪದಪಿಸಬಹಿದಿ.

ಇದನ್ನೂ ಓದಿ: ಹೂಡಿಕೆಯನ್ನು ಪ್ರತಿಷ್ಠೆಯಾಗಿ ಈ ತಿಂಗಳಲ್ಲಿ ಕಾಣುವುದು ಬೇಡ

ಕನ್ಯಾ ರಾಶಿ :

ಮನೆಯ ಹಿರಿಯರ ವಿರುದ್ಧ ಮಾತನಾಡುವಿರಿ. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಹಣದ ಒಳಹರಿವು ಸುಗಮವಾಗಿರುತ್ತದೆ. ಒಳ್ಳೆಯ ಸುದ್ದಿ ಆಕಸ್ಮಿಕವಾಗಿ ಸಿಗುತ್ತದೆ ಮತ್ತು ಕುಟುಂಬದಲ್ಲಿ ಸಂತೋಷವಿರಲಿದೆ. ನೂತನ ಗೃಹ ನಿರ್ಮಾಣದ ಬಗ್ಗೆ ನುರಿತವರ ಜೊತೆ ಚರ್ಚೆಯನ್ನು ನಡೆಸುವು ಯೋಚನೆ ಇರುವುದು. ವಾಹನ ಓಡಾಟದಿಂದ ನಿಮಗೆ ಸುಖವಿರದು.

ತುಲಾ ರಾಶಿ :

ಅನ್ಯರ ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ಸಾಕಷ್ಟು ತಾಳ್ಮೆ ಮತ್ತು ತಿಳುವಳಿಕೆಯನ್ನು ಹೊಂದಿರುವುದು ಮುಖ್ಯ. ಜೊತೆಗೆ ನೀವು ದಿನವಿಡೀ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅತಿಯಾದ ಸಿಹಿಯನ್ನು ತಿಂದು ದೇಹವನ್ನು ಕೆಡಿಸಿಕೊಳ್ಳಬೇಡಿ. ವ್ಯಾಪಾರದಲ್ಲಿ ತೊಡಕು ಬರಬಹುದು. ತಪ್ಪಿದ ಯೋಚನೆಯಿಂದ ನೀವು ಸರಿಯಾಗಬೇಕಾಗುವುದು. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೆ ಬರುವುದು.

ವೃಶ್ಚಿಕ ರಾಶಿ :

ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ‌. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆದು ನೋವನ್ನು ಹಂಚಿಕೊಳ್ಳುವರು. ನೀವು ಕೆಲವು ಹಳೆಯ ವಿವಾದದಿಂದ ಪರಿಹಾರ ಪಡೆಯಬಹುದು. ಇದರಿಂದಾಗಿ ಕುಟುಂಬದ ವಾತಾವರಣವು ಹಗುರ ಮತ್ತು ಶಾಂತಿಯುತವಾಗಿರುತ್ತದೆ. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು.

ಧನು ರಾಶಿ :

ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ನಿಮಗೆ ಸಂಬಂಧವೇ ಇಲ್ಲದ ವಿಷಯಗಳಲ್ಲಿ ಭಾಗಿಯಾಗುವ ಬದಲು, ನಿಮ್ಮ ಕೆಲಸವನ್ನು ಮಾಡುತ್ತಲೇ ಇರಿ, ಇಲ್ಲದಿದ್ದರೆ ಅದು ನಿಮ್ಮ ಘನತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಗುರಿಯನ್ನು ಬದಲಿಸದೇ ಮುನ್ನಡೆಯುವಿರಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ.

ಮಕರ ರಾಶಿ :

ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಯಶಸ್ಸಿನ ಜೊತೆಗೆ ಆರ್ಥಿಕ ಲಾಭವೂ ಇರುತ್ತದೆ. ಗೌರವ ಮತ್ತು ಪ್ರಭಾವ ಹೆಚ್ಚಾಗುತ್ತದೆ. ಉತ್ಸಾಹ ಉಳಿಯುತ್ತದೆ ಮತ್ತು ದೊಡ್ಡ ಯಶಸ್ಸಿನ ಲಕ್ಷಣಗಳು ಕಂಡುಬರುತ್ತವೆ. ಹೊಸ ಆದಾಯದ ಮೂಲಗಳು ಅಭಿವೃದ್ಧಿಗೊಳ್ಳುತ್ತವೆ ಮತ್ತು ಬಾಕಿ ಇರುವ ಹಣವನ್ನು ಪಡೆಯಬಹುದು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು.

ಕುಂಭ ರಾಶಿ :

ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಕೆಲವು ಯೋಜನೆಗಳು ಸಹ ಮುಂದುವರಿಯುತ್ತವೆ. ಸ್ವಲ್ಪ ಸಮಯ ಒಳ್ಳೆಯ ಮತ್ತು ಜ್ಞಾನವುಳ್ಳ ಪುಸ್ತಕಗಳನ್ನು ಓದುವುದರಲ್ಲಿಯೂ ಕಳೆಯಿರಿ. ಅಜಾಗರೂಕತೆಯು ನಷ್ಟಕ್ಕೆ ಕಾರಣವಾಗಬಹುದು. ಯಾರೊಂದಿಗೂ ಪ್ರಮುಖ ವಾದಗಳಲ್ಲಿ ತೊಡಗಬೇಡಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಪರಿಶೀಲಿಸಿ.

ಮೀನ ರಾಶಿ :

ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ಗುರಿಯ ಮೇಲೆ ಮಾತ್ರ ಗಮನಹರಿಸುವ ಸಮಯ. ಅತಿಯಾದ ಖರ್ಚು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಸ್ವಲ್ಪ ಬುದ್ದಿವಂತರಾಗಿರಿ. ಕೋಪಗೊಳ್ಳುವುದರಿಂದ ನೀವು ಈಗಾಗಲೇ ಮಾಡಿರುವ ಯಾವುದೇ ಕೆಲಸವು ಹಾಳಾಗಬಹುದು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸಾಧ್ಯ, ಕರಣ : ಗರಜ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:56 – 15:31, ಯಮಗಂಡ ಕಾಲ 06:01 – 07:36, ಗುಳಿಕ ಕಾಲ 09:11 – 10:46

-ಲೋಹಿತ ಹೆಬ್ಬಾರ್ 

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಿಟಿಲೈಟ್ಸ್‌’ ಹಾಡು ಬಿಡುಗಡೆ: ಹೊಸ ಪ್ರತಿಭೆಗೆ ದುನಿಯಾ ವಿಜಿ ಬೆಂಬಲ – Kannada News | New song released from City Lights movie directing by Duniya Vijay

ದುನಿಯಾ ವಿಜಯ್ (Duniya Vijay) ನಿರ್ದೇಶನದ ಮೂರನೇ ಸಿನಿಮಾ ‘ಸಿಟಿಲೈಟ್ಸ್‌’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿಂದೆ ‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ಮೂಲಕ ಭರ್ಜರಿ ಜಯ ಕಂಡಿರುವ ದುನಿಯಾ ವಿಜಿ, ಇದೇ ಮೊದಲ ಬಾರಿಗೆ ತಮ್ಮ ನಿರ್ದೇಶನದಲ್ಲಿ ಮತ್ತೊಬ್ಬ ನಾಯಕನಿಗೆ ಅವಕಾಶ ನೀಡಿದ್ದಾರೆ. ‘ಸಿಟಿ ಲೈಟ್ಸ್’ ಸಿನಿಮಾನಲ್ಲಿ ವಿನಯ್ ರಾಜ್​ಕುಮಾರ್ ನಾಯಕ, ದುನಿಯಾ ವಿಜಿ ಅವರ ಪುತ್ರಿಯೇ ನಾಯಕಿ. ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇದೀಗ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ‘ಬಾವ ಬಾವ’ ಎಂಬ ವಿಶಿಷ್ಟ ರ್ಯಾಪ್ ಹಾಡಿನ ಮೂಲಕ ವಿಜಯ್ ಮತ್ತೊಮ್ಮೆ ಟ್ರೆಂಡಿ ಸಾಂಗ್ ಒಂದನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.

ಚರಣ್ ರಾಜ್ ಸಂಗೀತದಲ್ಲಿ ‘ಬಾವ ಬಾವ’ ಹಾಡು ಮೂಡಿಬಂದಿದ್ದು, ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚರಣ್ ರಾಜ್ ಅವರ ಸಂಗೀತವನ್ನು ದುನಿಯಾ ವಿಜಿ ಕೊಂಡಾಡಿದರು. ದುನಿಯಾ ವಿಜಿ ಅವರು ಹೊಸ ಪ್ರತಿಭೆಗಳಿಗೆ ತಮ್ಮ ಸಿನಿಮಾನಲ್ಲಿ ಅವಕಾಶ ನೀಡುತ್ತಾ ಬಂದಿದ್ದಾರೆ. ಈಗ ಬಿಡುಗಡೆ ಆಗಿರುವ ‘ಬಾವ ಬಾವ’ ಹಾಡನ್ನು ಅಂಕಿತ್‌ ಕುಮಾರ್‌ ಬಾವ ಅವರೇ ಬರೆದು ಧ್ವನಿ ನೀಡಿದ್ದಾರೆ.

ತಮ್ಮ ಹಳೆಯ ಹಾಡುಗಳನ್ನು ನೋಡಿ ದುನಿಯಾ ವಿಜಯ್ ಅವರು ಅವಕಾಶ ನೀಡಿದ್ದಕ್ಕೆ ಹಾಡುಗಾರ ಅಂಕಿತ್ ಕುಮಾರ್ ಬಾವ ಭಾವುಕರಾದರು. ‘ನಮ್ಮ ತಂಡವನ್ನು ಕರೆಸಿ ಅವಕಾಶ ಕೊಡುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ವಿಜಯ್ ಸರ್ ನನ್ನ ಪ್ರತಿಭೆಯನ್ನು ಗುರುತಿಸಿ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ’ ಎಂದು ತಮ್ಮ ಸಂತಸ ಹಂಚಿಕೊಂಡರು ಅಂಕಿತ್ ಕುಮಾರ್.

ಇದನ್ನೂ ಓದಿ:‘ನೀರಿಗೆ ಬಾರೆ ಚನ್ನಿ’ ಹಾಡಿಗೆ ರಚಿತಾ-ದುನಿಯಾ ವಿಜಯ್ ಡ್ಯಾನ್ಸ್

ಚಿತ್ರದ ನಾಯಕ ವಿನಯ್ ರಾಜ್‌ಕುಮಾರ್ ಮಾತನಾಡಿ, ‘ನಾನು ಚರಣ್ ಸರ್ ಬಳಿ ಒಂದು ಒಳ್ಳೆ ಹಾಡು ಕೇಳಿದ್ದೆ, ಆದರೆ ಅವರು ಐದು ಅದ್ಭುತ ಹಾಡುಗಳನ್ನು ಕೊಟ್ಟಿದ್ದಾರೆ. ಈ ಚಿತ್ರದ ಜರ್ನಿ ತುಂಬಾ ಖುಷಿ ಕೊಡುತ್ತಿದೆ’ ಎಂದಿದ್ದಾರೆ. ಚಿತ್ರದಲ್ಲಿ ಹಳ್ಳಿಯಿಂದ ಬೆಂಗಳೂರಿಗೆ ಬಂದ ಯುವಕನ ಪಾತ್ರದಲ್ಲಿ ವಿನಯ್ ಮಿಂಚಲಿದ್ದಾರೆ.

ಈ ಸಿನಿಮಾ ಮೂಲಕ ದುನಿಯಾ ವಿಜಯ್ ತಮ್ಮ ಪುತ್ರಿ ಮೋನಿಷಾ ವಿಜಯ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ನಾಯಕಿ ಮೋನಿಷಾ ಮಾತನಾಡಿ, ‘ವಿನಯ್ ರಾಜ್‌ಕುಮಾರ್ ಅವರ ಜೊತೆ ಕೆಲಸ ಮಾಡಿದ್ದು ದೊಡ್ಡ ಅನುಭವ. ಅವರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ’ ಎಂದರು. ಇನ್ನು ವಿಜಯ್ ಕುಮಾರ್ ಮಾತನಾಡಿ, ‘ರ್ಯಾಪ್ ಹಾಡುಗಳು ನೋವನ್ನು ಹೇಳಿಕೊಳ್ಳುವ ಮಾಧ್ಯಮ. ಈ ಸಿನಿಮಾನಲ್ಲಿ ನೋವಿನ ಕತೆಯನ್ನು ಹೇಳೋಕೆ ಹೊರಟಿದ್ದೀನಿ, ಈ ಕಥೆಗೆ ವಿನಯ್ ಅವರೇ ಸೂಕ್ತ ಎಂದು ನನಗನ್ನಿಸಿತು, ನನಗೂ ಸಹ ವಿನಯ್ ಬಹಳ ಇಷ್ಟ’ ಎಂದರು.

ಹಳ್ಳಿಯಿಂದ ನಗರಕ್ಕೆ ವಲಸೆ ಬರುವ ಇಬ್ಬರು ಯುವಜನರು ಎದುರಿಸುವ ಸವಾಲುಗಳೇ ಚಿತ್ರದ ಹೂರಣ. ಸಿನಿಮಾಕ್ಕೆ ಶಿವಸೇನಾ ಅವರ ಛಾಯಾಗ್ರಹಣ ಇದೆ, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ದುನಿಯಾ ಟಾಕೀಸ್ ಮತ್ತು ಯಂತ್ರೋದ್ದಾರಕ ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಂ ಆರ್ಯಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SRH vs PBKS: ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿ ಹ್ಯಾಟ್ರಿಕ್ ಸೋಲಿಗೆ ಕೊರಳೊಡ್ಡಿದ ಪಂಜಾಬ್ – Kannada News | IPL 2026: Punjab Kings’ Poor Fielding and Batting Lead to Third Consecutive Loss vs SRH

ಐಪಿಎಲ್ 2026 (IPL 2026) ರ49ನೇ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಪಂಜಾಬ್ ಕಿಂಗ್ಸ್ (SRH vs PBKS) ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಂಜಾಬ್ ತಂಡ ತನ್ನ ಕಳಪೆ ಫಿಲ್ಡಿಂಗ್ ಹಾಗೂ ಕಳಪೆ ಬ್ಯಾಟಿಂಗ್​ನಿಂದಾಗಿ ಟೂರ್ನಿಯಲ್ಲಿ ಸತತ ಮೂರನೇ ಸೋಲಿಗೆ ಕೊರಳೊಡ್ಡಬೇಕಾಯಿತು. ಇಡೀ ಆವೃತ್ತಿಯಲ್ಲಿ ಪಂಜಾಬ್ ತಂಡದ ಫಿಲ್ಡಿಂಗ್ ಅತ್ಯಂತ ಕಳಪೆಯಾಗಿದೆ. ಇದರ ನಡುವೆ ಬ್ಯಾಟ್ಸ್‌ಮನ್​ಗಳ ಅಬ್ಬರದಿಂದಾಗಿ ಪಂಜಾಬ್ ಪಂದ್ಯಗಳನ್ನು ಗೆಲ್ಲುತ್ತಿತ್ತು. ಆದರೆ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡದ ಈ ಎರಡು ವಿಭಾಗವೂ ವಿಫಲವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 235 ರನ್ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಲಾಗದೆ ಪಂಜಾಬ್ ಹ್ಯಾಟ್ರಿಕ್ ಸೋಲಿನ ಆಘಾತಕ್ಕೆ ಒಳಗಾಯಿತು. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಪಂಜಾಬ್ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ.

ಸುಲಭ ಕ್ಯಾಚ್​ಗಳ ಡ್ರಾಪ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 235 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆರಂಭದಿಂದಲೇ ಪಂಜಾಬ್ ಬೌಲರ್‌ಗಳ ಮೇಲೆ ದಾಳಿ ನಡೆಸಿದ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಇದಕ್ಕೆ ಪೂರಕವೆಂಬಂತೆ ಪಂಜಾಬ್ ಫಿಲ್ಡರ್​ಗಳು 3 ಸುಲಭ ಕ್ಯಾಚ್​ಗಳನ್ನು ಕೈಚೆಲ್ಲುವ ಮೂಲಕ ಇಶಾನ್ ಕಿಶನ್ ಹಾಗೂ ಕ್ಲಾಸೆನ್​ಗೆ ಎರಡೆರಡು ಜೀವದಾನಗಳನ್ನು ನೀಡಿದರು. ಇದರ ಲಾಭ ಪಡೆದ ಇವರಿಬ್ಬರು ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಈ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.

ಪಂಜಾಬ್​ಗೆ ಆರಂಭಿಕ ಆಘಾತ

236 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡವು ಮೊದಲ ಓವರ್​ನಲ್ಲೇ ಆಘಾತ ಎದುರಿಸಿತು. ಮೊದಲ ಓವರ್​ನಲ್ಲೇ ಪ್ಯಾಟ್ ಕಮ್ಮಿನ್ಸ್, ಪ್ರಿಯಾಂಶ್ ಆರ್ಯ ಅವರನ್ನು ಕೇವಲ 1 ರನ್​ಗೆ ಔಟ್ ಮಾಡಿದರು. ನಂತರ ನಿತೀಶ್ ರೆಡ್ಡಿ ಮುಂದಿನ ಓವರ್​ನಲ್ಲಿ ಪ್ರಭ್ಸಿಮ್ರನ್ ಅವರನ್ನು 3 ರನ್​ಗೆ ಔಟ್ ಮಾಡಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ 5 ರನ್ ಗಳಿಸಿ ಔಟಾದರು. ಸ್ಟೊಯಿನಿಸ್ 28 ಮತ್ತು ಸೂರ್ಯಾಂಶ್ ಶೆಡ್ಜ್ 25 ರನ್ ಗಳಿಗೆ ಸುಸ್ತಾದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕೂಪರ್ ಕೊನೊಲಿ ಶತಕದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಪಾಯಿಂಟ್ ಟೇಬಲ್‌ ಸ್ಥಿತಿ

ಹೈದರಾಬಾದ್ ತಂಡವು 11 ಪಂದ್ಯಗಳಿಂದ 14 ಅಂಕಗಳೊಂದಿಗೆ ಐಪಿಎಲ್ 2026 ಅಂಕಗಳ ಪಟ್ಟಿಯಲ್ಲಿ ಈಗ ಅಗ್ರಸ್ಥಾನದಲ್ಲಿದ್ದರೆ, ಸತತ ಮೂರನೇ ಸೋಲನ್ನು ಅನುಭವಿಸಿರುವ ಪಂಜಾಬ್, 13 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿ ಒಂಬತ್ತು ಪಂದ್ಯಗಳಿಂದ 12 ಅಂಕಗಳನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ಕೂಡ 10 ಪಂದ್ಯಗಳಿಂದ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:08 pm, Wed, 6 May 26

Source link

ಎಗರಿಸಿದ್ದ ಮಾಂಗಲ್ಯ ಸರ ಮನೆ ಮುಂದೆ ಪ್ರತ್ಯಕ್ಷ: ಆದ್ರೂ ಅವನ್ನ ಹೊಡಿಬೇಕು ಎಂದ ಮಹಿಳೆ – Kannada News | Chikkaballapur Shock: Thieves Return Stolen Gold Chain; Victim Demands Justice

ಚಿಕ್ಕಬಳ್ಳಾಪುರ, ಮೇ 06: ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದುಷ್ಕರ್ಮಿಗಳು ತಾವು ಕದ್ದ ಮಾಂಗಲ್ಯ ಸರವನ್ನು ವಾಪಸ್​ ಮನೆ ಮುಂದೆ ಬಿಸಾಕಿ ಹೋಗಿರುವಂತಹ ಘಟನೆ ನಡೆದಿದೆ. ಮನೆ ಮುಂದೆ ಚಿನ್ನದ ಸರ ಕಂಡು ಮಹಿಳೆಗೆ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಕಳೆದುಕೊಂಡಿದ್ದ ಚಿನ್ನದ ಮಾಂಗಲ್ಯ ಸರ ಸಿಕ್ಕರೂ ಮಹಿಳೆಗೆ ಸಮಾಧಾನವಿಲ್ಲ. ಇನ್ನು ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಶ್ರೀಮತಿ ಪ್ರಿಯಾ, ದುಷ್ಕರ್ಮಿಗಳು ನನ್ನ ಕೈಗೆ ಸಿಗಬೇಕು, ನಾನು ಅವನಿಗೆ ಹೊಡೆಯಬೇಕು. ನನಗೆ ಆದಂತೆ ಬೇರೆಯವರಿಗೆ ಆಗಬಾರದು ಎಂದು ಹೇಳಿದ್ದಾರೆ. ಮೇ 3ರಂದು ಸಂಜೆ ಪ್ರಿಯಾ ಎಂಬುವವರು ತಮ್ಮ ಮನೆಯ ಹೊರಗಿದ್ದ ನೀರಿನ ಸಂಪ್ ಪರಿಶೀಲಿಸಲು ಹೊರಬಂದಿದ್ದರು. ಆ ಸಂದರ್ಭದಲ್ಲಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version