ಕೋಪದಲ್ಲಿ ಕೋರ್ಟ್ ಕಡತ ಎಸೆದ ವಕೀಲ, ಕೆಂಡಾಮಂಡಲವಾದ ನ್ಯಾಯಮೂರ್ತಿ – Kannada News | Andhra High Court: Lawyer Throws Files, Justice Orders Contempt Action
ಅಮರಾವತಿ, ಮೇ 06: ಆಂಧ್ರಪ್ರದೇಶ ಹೈಕೋರ್ಟ್ನ ನ್ಯಾಯಾಲಯ(Court)ದ ಕೊಠಡಿಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟ ಅಪರೂಪದ ಘಟನೆಯೊಂದು ಜರುಗಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಯುವ ವಕೀಲರೊಬ್ಬರು ವರ್ತಿಸಿದ ರೀತಿಯಿಂದ ನ್ಯಾಯಮೂರ್ತಿ ಟಿ. ರಾಜಶೇಖರ್ ರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಕೀಲರನ್ನು ನ್ಯಾಯಾಂಗ ನಿಂದನೆ ಆರೋಪದ ಮೇಲೆ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ನ್ಯಾಯಮೂರ್ತಿ ಟಿ. ರಾಜಶೇಖರ್ ರಾವ್ ಅವರ ಪೀಠದ ಮುಂದೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದಾಗ, ಯುವ ವಕೀಲರು ತಮ್ಮ ವಾದದ ಭರದಲ್ಲಿ ನ್ಯಾಯಪೀಠದ ಮೇಲಿದ್ದ ಕಡತಗಳನ್ನು (Files) ಎಸೆದಿದ್ದಾರೆ….