ನೀವು ನನಗೆ ಸಹಾಯ ಮಾಡಿ, ನಾನು ನಿಮಗೆ ಸಹಾಯ ಮಾಡ್ತೇನೆ, ಟ್ರಂಪ್-ಪುಟಿನ್ 90 ನಿಮಿಷಗಳ ರಹಸ್ಯ ಮಾತುಕತೆ – Kannada News | Trump Putin Secret Talk: Ukraine Ceasefire, Iran Tensions and Zelenskyy Discussed

ವಾಷಿಂಗ್ಟನ್, ಏಪ್ರಿಲ್ 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಸಿದರು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಈ ಮಾತುಕತೆಯಲ್ಲಿ ಉಕ್ರೇನ್ ಸಂಘರ್ಷ ಮತ್ತು ಇರಾನ್ ಉದ್ವಿಗ್ನತೆಯ ಕುರಿತು ಗಂಭೀರ ಚರ್ಚೆಗಳು ನಡೆದಿವೆ.

ಇರಾನ್ ಯುದ್ಧ, ಉಕ್ರೇನ್ ಸಂಘರ್ಷ ಮತ್ತು ಇತ್ತೀಚೆಗೆ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಗುಂಡಿನ ದಾಳಿ ಸೇರಿದಂತೆ ಹಲವಾರು ಜಾಗತಿಕ ವಿಷಯಗಳ ಕುರಿತು ಚರ್ಚಿಸಲಾಯಿತು. ಜಾಗತಿಕ ಕೋಲಾಹಲದ ನಡುವೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಕ್ರೆಮ್ಲಿನ್ ಪ್ರಕಾರ, ಇರಾನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಪರಮಾಣು ಯುದ್ಧವನ್ನು ಕೊನೆಗೊಳಿಸಲು ಪುಟಿನ್ ಈಗ ವೈಯಕ್ತಿಕವಾಗಿ ಮುಂದೆ ಬಂದಿದ್ದಾರೆ. ಅಧ್ಯಕ್ಷ ಟ್ರಂಪ್ ಅವರು ಉಕ್ರೇನ್ ಯುದ್ಧದಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸುವಂತೆ ಪುಟಿನ್ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಮೇ 9 ರಂದು ಆಚರಿಸಲಾಗುವ ‘ವಿಜಯ ದಿನ’ದ ಅಂಗವಾಗಿ ಈ ಕದನ ವಿರಾಮವನ್ನು ಘೋಷಿಸಲು ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಉಷಾಕೋವ್ ತಿಳಿಸಿದ್ದಾರೆ. ರಷ್ಯಾ ಮತ್ತು ಅಮೆರಿಕ ನಡುವಿನ ಐತಿಹಾಸಿಕ ವಿಜಯವನ್ನು ಈ ದಿನ ಗುರುತಿಸುವುದರಿಂದ ಟ್ರಂಪ್ ಕೂಡ ಈ ಪ್ರಸ್ತಾವನೆಯನ್ನು ಬೆಂಬಲಿಸಿದ್ದಾರೆ.

ಐದನೇ ವರ್ಷಕ್ಕೆ ಕಾಲಿಟ್ಟಿರುವ ಉಕ್ರೇನ್ ಸಂಘರ್ಷದ ಕುರಿತು ಉಭಯ ನಾಯಕರು ವಿಸ್ತಾರವಾಗಿ ಚರ್ಚಿಸಿದರು. ಈ ವೇಳೆ ಪುಟಿನ್ ಅವರು, ಮೇ 9 ರಂದು ಆಚರಿಸಲಾಗುವ ‘ವಿಜಯ ದಿನ’ದ (Victory Day) ಅಂಗವಾಗಿ ಕದನ ವಿರಾಮ ಘೋಷಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಯುದ್ಧಭೂಮಿಯಲ್ಲಿ ರಷ್ಯಾದ ಪಡೆಗಳು ಮೇಲುಗೈ ಸಾಧಿಸಿದ್ದು, ಶತ್ರುಗಳನ್ನು ಹಿಂದಕ್ಕೆ ತಳ್ಳುತ್ತಿವೆ ಎಂದು ಪುಟಿನ್ ವಿವರಿಸಿದ್ದಾರೆ.

ಪರ್ಷಿಯನ್ ಕೊಲ್ಲಿಯ ಪರಿಸ್ಥಿತಿಯ ಕುರಿತು ಚರ್ಚಿಸಿದ ಪುಟಿನ್, ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸುವ ಟ್ರಂಪ್ ಅವರ ನಿರ್ಧಾರವನ್ನು ಶ್ಲಾಘಿಸಿದರು. ಮಾತುಕತೆಗೆ ಅವಕಾಶ ನೀಡುವ ಈ ಕ್ರಮವು ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಮೆರಿಕ ಮತ್ತು ಇಸ್ರೇಲ್ ಮತ್ತೊಮ್ಮೆ ಮಿಲಿಟರಿ ಕ್ರಮ ಕೈಗೊಂಡರೆ ಅದು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಹಾನಿಕಾರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಗಮನಾರ್ಹವಾಗಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ನಡವಳಿಕೆಯ ಬಗ್ಗೆ ಟ್ರಂಪ್ ಮತ್ತು ಪುಟಿನ್ ಇಬ್ಬರೂ ಒಂದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈವ್ ಆಡಳಿತವು ಯುರೋಪಿಯನ್ನರ ಪ್ರಚೋದನೆಯೊಂದಿಗೆ ಸಂಘರ್ಷವನ್ನು ಹೆಚ್ಚಿಸುವ ನೀತಿಯನ್ನು ಅನುಸರಿಸುತ್ತಿದೆ ಎಂದು ಉಭಯ ನಾಯಕರು ಮೌಲ್ಯಮಾಪನ ಮಾಡಿದ್ದಾರೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರ ಬಗ್ಗೆ ಇಬ್ಬರೂ ನಾಯಕರು ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಪ್ರಸ್ತುತ ಉಕ್ರೇನಿಯನ್ ಆಡಳಿತವು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬದಲು ಹೆಚ್ಚಿಸುತ್ತಿದೆ ಎಂದು ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೋಷಕರೇ ಎಚ್ಚರ! ಮಕ್ಕಳ ಜೀವದ ಜೊತೆ ಆಟವಾಡಬೇಡಿ: ಬೆಂಗಳೂರಿನಲ್ಲಿ ಆರು ಮಕ್ಕಳ ಕಿಕ್ಕಿರಿದ ಸ್ಕೂಟರ್ ಜರ್ನಿ – Kannada News | Parental Negligence: Bengaluru Outraged by 6 Children on One Scooter, Violating Traffic Rules

ಬೆಂಗಳೂರು, ಏ.30: ಪೋಷಕರ ಇಂತಹ ತಪ್ಪಿನಿಂದಲ್ಲೇ ಅಪಘಾತಗಳು ಹೆಚ್ಚಾಗಿರುವುದು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತ ಇರುತ್ತದೆ. ಅದರೂ ಈ ಪೋಷಕರಿಗೆ ಬುದ್ಧಿ ಬರುವುದಿಲ್ಲ. ಸಣ್ಣ ವಯಸ್ಸಿನಲ್ಲೇ ಈ ಎಚ್ಚರಿಕೆ ವಹಿಸಿದರೆ ಯಾವುದೇ ಅಪಾಯಗಳು ಆಗುವುದಿಲ್ಲ. ಇದೀಗ ಎಕ್ಸ್​​ ಖಾತೆಯಲ್ಲಿ ಇಂತಹದೇ ಘಟನೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ನಡೆದ ಈ ಘಟನೆ ಬಗ್ಗೆ ಏಪ್ರಿಲ್ 26ರಂದು 6 ಜನ ಚಿಕ್ಕ ಮಕ್ಕಳು ಒಂದೇ ಸ್ಕೂಟರ್‌ನಲ್ಲಿ ಕುಳಿತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ 10:45 ರ ಸುಮಾರಿಗೆ ಈ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಈ ಮಕ್ಕಳು ಪಾದರಾಯನಪುರ ಮುಖ್ಯ ರಸ್ತೆ ಬಳಿ ಒಂದೇ ಸ್ಕೂಟರ್​​ನಲ್ಲಿ ಹೋಗುವುದು ನೋಡಿದ್ದಾರೆ. ನಂತರ ಈ ಫೋಟೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿಂದ ನೆಟ್ಟಿಗರು ಈ ಫೋಟೋಗೆ ಕಾಮೆಂಟ್​ ಮಾಡಲು ಶುರು ಮಾಡಿದ್ದಾರೆ. ಇದೀಗ ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಇಲ್ಲಿದೆ ನೋಡಿ ಪೋಸ್ಟ್​​;

ಈ ಫೋಟೋವನ್ನು ಆಧಾರಿಸಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಭಾರತದಲ್ಲಿ, 50 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಮೋಟಾರ್ ಸೈಕಲ್ ಓಡಿಸಲು ಕಾನೂನುಬದ್ಧ ವಯಸ್ಸು 16 ವರ್ಷಗಳು ಮತ್ತು ಕಾರುಗಳು ಮತ್ತು ಗೇರ್ ಹೊಂದಿರುವ ಮೋಟಾರ್ ಸೈಕಲ್‌ಗಳಿಗೆ 18 ವರ್ಷಗಳು ಎಂಬ ಕಾನೂನು ಇದೆ. ಭಾರತದಲ್ಲಿ ಎರಡಕ್ಕಿಂತ ಹೆಚ್ಚು ಜನರು ದ್ವಿಚಕ್ರ ವಾಹನ ಓಡಿಸುವುದು ಕಾನೂನುಬಾಹಿರವಾಗಿದೆ. ಆದರೆ ಇಲ್ಲಿ 1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 128 ರ ಉಲ್ಲಂಘನೆಯಾಗಿದೆ. ಇದರ ಜತೆಗೆ ಒಬ್ಬರೂ ಕೂಡ ಹೆಲ್ಮೆಟ್​​​ ಹಾಕಿಲ್ಲ, ಇದು ಕೂಡ ಭಾರತ ಕಾನೂನು ವಿರೋಧಿ ಸಂಚಾರ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ: ಇಂದು ಮತ್ತೆ ಅಪ್ಪಳಿಸಲಿದೆ ರಣಮಳೆ! ಯಾವೆಲ್ಲ ಭಾಗಗಳಲ್ಲಿ ಮಳೆಯಾಗಲಿದೆ?

ಇನ್ನು ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಬೆಂಗಳೂರು ಸಂಚಾರ ಪೊಲೀಸರ ಈ ಪ್ರಕರಣವನ್ನು ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆ ಟ್ಯಾಗ್​ ಮಾಡಿದ್ದಾರೆ. ಈ ಪೋಸ್ಟ್ ಅನ್ನು ‘Shreyas35240282’ ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು 2 ದಿನಗಳ ಹಿಂದೆ ಹಂಚಿಕೊಳ್ಳಲಾಗಿತ್ತು. ಈವರೆಗೆ ಈ ಪೋಸ್ಟ್​​ 291K ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್ ಕೂಡ ಮಾಡಿದ್ದಾರೆ. ಇಲ್ಲಿ ಧೈರ್ಯಕ್ಕಿಂತ ಮಕ್ಕಳ ಜೀವದ ಜತೆಗೆ ಆಟವಾಡಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ನಿಮಯಗಳ ಉಲ್ಲಂಘನೆ ಹೆಚ್ಚಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Election Result 2026 Date: ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ, ಬೆಳಗ್ಗೆ 8ರಿಂದ ಮತ ಎಣಿಕೆ – Kannada News | Assembly Election Result 2026 Date When and Where to Watch Vidhan Sabha Poll Results Live Counting of Votes

ವಿಧಾನಸಭಾ ಚುನಾವಣಾ ಫಲಿತಾಂಶ Image Credit source: Moneycontrol.com

Assembly Election Results 2026 Date and Time : ನವದೆಹಲಿ, ಏಪ್ರಿಲ್ 30: ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣಾ ಫಲಿತಾಂಶ(Assembly Election Results) ಮೇ 4ರ ಸೋಮವಾರದಂದು ಹೊರಬೀಳಲಿವೆ. ಅಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆಯು ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಆಯಾ ರಾಜ್ಯಗಳಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.

ರಾಜ್ಯಗಳ ರಾಜಕೀಯ ಹವಾ ಮತ್ತು ಪ್ರತಿಷ್ಠೆಯ ಕದನ
ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್‌ಗೆ ಇದು ಅಗ್ನಿಪರೀಕ್ಷೆಯಾಗಿದೆ. ಬಿಜೆಪಿಯ ತೀವ್ರ ಪೈಪೋಟಿಯ ನಡುವೆ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಸವಾಲು ಅವರ ಮುಂದಿದೆ.

ತಮಿಳುನಾಡು: ಆಡಳಿತಾರೂಢ ಡಿಎಂಕೆ ತನ್ನ ಹಿಡಿತವನ್ನು ಮುಂದುವರಿಸಲು ಹವಣಿಸುತ್ತಿದ್ದರೆ, ಎಐಎಡಿಎಂಕೆ ಪುನರುಜ್ಜೀವನಕ್ಕಾಗಿ ಮತ್ತು ಬಿಜೆಪಿ ತನ್ನ ಹೆಜ್ಜೆಗುರುತು ವಿಸ್ತರಿಸಲು ಹೋರಾಡುತ್ತಿವೆ.

ಕೇರಳ: ಎಡರಂಗದ (LDF) ಪಿಣರಾಯಿ ವಿಜಯನ್ ಅವರು ಮತ್ತೆ ಇತಿಹಾಸ ಸೃಷ್ಟಿಸಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದೆ.

ಅಸ್ಸಾಂ: ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಮೈತ್ರಿಕೂಟವು ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಪುದುಚೇರಿ: 2026ರ ಪುದುಚೇರಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳ (Exit Polls) ಪ್ರಕಾರ, ಎನ್‌ಡಿಎ (NDA) ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಒಟ್ಟು 30 ಸ್ಥಾನಗಳ ಪೈಕಿ ಎನ್‌ಡಿಎ 17-21 ಸ್ಥಾನಗಳನ್ನು ಗಳಿಸಬಹುದು, ಆದರೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು 7-9 ಸ್ಥಾನಗಳಿಗೆ ಸೀಮಿತಗೊಳ್ಳುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?
ಭಾರತೀಯ ಚುನಾವಣೆಗಳಲ್ಲಿ ಮತ ಎಣಿಕೆಯು ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ ಹಂತ-ಹಂತದ ಪ್ರಕ್ರಿಯೆಯೊಂದಿಗೆ ನಡೆಯುತ್ತದೆ. ಇದು ಬೆಳಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳೊಂದಿಗೆ ಪ್ರಾರಂಭವಾಗುತ್ತದೆ. ಇದಾದ ನಂತರ, ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ (ಇವಿಎಂ) ಸಂಗ್ರಹವಾಗಿರುವ ಮತಗಳನ್ನು ಎಣಿಸಲಾಗುತ್ತದೆ, ಸಾಮಾನ್ಯವಾಗಿ ಸುಮಾರು 30 ನಿಮಿಷಗಳ ನಂತರ ಪ್ರಾರಂಭವಾಗುತ್ತದೆ. ಕಾಗದದ ಮತಪತ್ರಗಳಿಗಿಂತ ಭಿನ್ನವಾಗಿ, ಅಧಿಕಾರಿಗಳು ಮತ್ತು ಪಕ್ಷದ ಪ್ರತಿನಿಧಿಗಳ ಸಮ್ಮುಖದಲ್ಲಿ ಫಲಿತಾಂಶ ಗುಂಡಿಯನ್ನು ಸಕ್ರಿಯಗೊಳಿಸಿದಾಗ ಇವಿಎಂಗಳು ಪ್ರತಿ ಅಭ್ಯರ್ಥಿಗೆ ದಾಖಲಾದ ಒಟ್ಟು ಮತಗಳನ್ನು ಪ್ರದರ್ಶಿಸುತ್ತವೆ.

ಮತ್ತಷ್ಟು ಓದಿ: ಕರ್ನಾಟಕ ಸೇರಿ ಆರು ರಾಜ್ಯಗಳಲ್ಲಿ ಏ. 9, 23ರಂದು ಉಪಚುನಾವಣೆ; ಮೇ 4ರಂದು ಫಲಿತಾಂಶ

ಬಹು ಸುತ್ತುಗಳಲ್ಲಿ ಎಣಿಕೆ ಮುಂದುವರೆದಂತೆ, ಆರಂಭಿಕ ಪ್ರವೃತ್ತಿಗಳು ಬೆಳಗ್ಗೆ ಅಥವಾ ಮಧ್ಯಾಹ್ನದ ವೇಳೆಗೆ ಹೊರಹೊಮ್ಮಲು ಪ್ರಾರಂಭಿಸುತ್ತವೆ, ಆದರೆ ಸಾಮಾನ್ಯವಾಗಿ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಮತ್ತು ಹೆಚ್ಚು ಸ್ಥಿರವಾದ ಚಿತ್ರಣವು ಬೆಳೆಯುತ್ತದೆ. ಅಂಚೆ ಮತಪತ್ರಗಳು ಮತ್ತು ಇವಿಎಂ ಎಣಿಕೆಗಳು ಸೇರಿದಂತೆ ಎಲ್ಲಾ ಸುತ್ತುಗಳು ಪೂರ್ಣಗೊಂಡು ಪರಿಶೀಲಿಸಿದ ನಂತರ ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.
ಆರಂಭಿಕ ಪ್ರವೃತ್ತಿಗಳು ಮೊದಲ ಕೆಲವು ಗಂಟೆಗಳಲ್ಲಿ ಲಭ್ಯವಾಗಲಿದ್ದು, ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್ eci.gov.in ನಲ್ಲಿ ನೋಡಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಬಾಲಕಿ ಬಲಿ ಪಡೆದ ರಣಮಳೆ: ಶಾಪಿಂಗ್​​ಗೆ ಹೋದವಳು ಶವವಾದಳು! – Kannada News | Birthday Celebration Turns Tragic: Girl Dies in Wall Collapse

ಆಸ್ಪತ್ರೆಯ ಕಾಂಪೌಂಡ್ ಕುಸಿದು ಅನಾಹುತ

ಬೆಂಗಳೂರು, ಏಪ್ರಿಲ್​​ 30: ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ದುರಂತದಲ್ಲಿ 6 ವರ್ಷದ ಮಗು ಸೇರಿ ಒಟ್ಟು 7 ಮಂದಿ ಬಲಿಯಾಗಿರುವ ಘಟನೆ ನಿನ್ನೆ ಸಂಭವಿಸಿತ್ತು. ಆ ಬೆನ್ನಲ್ಲೇ ಮನಕಲಕುವ ವಿಷಯವೊಂದು ಬಹಿರಂಗಗೊಂಡಿದ್ದು ಮೃತ ಬಾಲಕಿ ಮುಸಾವಿರ್ ಬೇಗಂ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದಳು ಎಂಬುದು ಗೊತ್ತಾಗಿದೆ. ತನ್ನ ಬರ್ತ್​​ ಡೇಗಾಗಿ ಬಟ್ಟೆ ಖರೀದಿಗೆ ಕುಟುಂಬಸ್ಥರ ಜೊತೆಗೆ ಬಂದಿದ್ದ ಈಕೆ ಅವಘಡದಲ್ಲಿ ದಾರುಣವಾಗಿ ಮೃತಪಟ್ಟಿರೋದು ಕುಟುಂಬಸ್ಥರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.

ತಂದೆ ತಾಯಿಗೆ ಓರ್ವಳೇ ಮಗಳು!

ಮೇ 3ರಂದು ತನ್ನ ಹುಟ್ಟುಹಬ್ಬದ ಹಿನ್ನೆಲೆ ಬಟ್ಟೆ ಸೇರಿ ವಿವಿಧ ವಸ್ತುಗಳ ಖರೀದಿಗೆಂದು ತಾಯಿ ಮುಬೀನ್ ತಾಜ್ ಮತ್ತು ಅತ್ತೆ ತಬ್ರೀನ್ ತಾಜ್ ಅವರೊಂದಿಗೆ ಮುಸಾವಿರ್ ಶಿವಾಜಿ ನಗರಕ್ಕೆ ಬಂದಿದ್ದಳು. ಈ ವೇಳೆ ಮಳೆ ಆರಂಭವಾಗಿದ್ದು, ಹೊಸ ಬಟ್ಟೆಗಳನ್ನು ಆಯ್ಕೆ ಮಾಡುತ್ತಾ ಖರೀದಿಯಲ್ಲಿ ತೊಡಗಿದ್ದ ಮುಸಾವಿರ್, ಬೋರಿಂಗ್ ಆಸ್ಪತ್ರೆ ಸಮೀಪ ಗೋಡೆ ಕುಸಿದಾಗ ಅದರ ಅವಶೇಷಗಳಡಿ ಸಿಲುಕಿ ಒದ್ದಾಡಿ ಪ್ರಾಣಬಿಟ್ಟಿದ್ದಾಳೆ. ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರೂ ಆಕೆಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ದುರ್ದೈವ ಎಂದರೆ ಮುಬೀನ್ ಮತ್ತು ಚಂದ್ ಪಾಶಾ ದಂಪತಿಗೆ ಮುಸಾವಿರ್ ಏಕೈಕ ಪುತ್ರಿ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮನೇಲಿದ್ದಾಗ್ಲೇ ಕಂಪೌಂಡ್ ಮೇಲೆ ಬಿದ್ದ ಮರದ ಕೊಂಬೆಗಳು, ಕಬ್ಬಿಣದ ವಾಲ್‌ಗಳು! ತಪ್ಪಿದ ಅನಾಹುತ

ಈ ಕುಟುಂಬವು ಕಡುಗೋಂಡನಹಳ್ಳಿಯ ಸಮೀಪದ ವೆಂಕಟೇಶಪುರದಲ್ಲಿ ವಾಸಿಸುತ್ತಿದ್ದು, ಘಟನೆಯಲ್ಲಿ ಮುಸಾವಿರ್ ಜೊತೆಗಿದ್ದ ಆಕೆಯ ಅತ್ತೆಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದೆ. ಇದೇ ಅವಘಡದಲ್ಲಿ ಬೆಂಗಳೂರಿನ ಜೆಸಿ ನಗರದ ಮೊಹಮ್ಮದ್ ಅಬ್ದುಲ್ (52), ಡಿ.ಜೆ.ಹಳ್ಳಿಯ ಫಯಾಜ್ ಅಹ್ಮದ್ (39), ಕೇರಳದ ಎರ್ನಾಕುಲಂನ ಸ್ಮಿತಾ (47) ಹಾಗೂ ಲತಾ (57), ಕಾರ್ ಸ್ಟಿಕ್ಕರಿಂಗ್ ಕೆಲಸ ಮಾಡುತ್ತಿದ್ದ ಅಸ್ಸಾಂನ ನಸೀಮುಲ್ಲಾ (19) ಮತ್ತು ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36) ಪ್ರಾಣಬಿಟ್ಟಿದ್ದರು. ಆಸ್ಪತ್ರೆ ಆವರಣದ ಖಾಲಿ ಜಾಗದಲ್ಲಿ ಮಣ್ಣನ್ನು ಅಗೆದು ಗೋಡೆಯ ಅಂಚಿಗೆ ಸುರಿದಿದ್ದಲ್ಲದೆ ಸುತ್ತಲೂ ಗಿಡಗಳನ್ನು ನೆಟ್ಟಿರುವುದು ಗೋಡೆಯನ್ನು ದುರ್ಬಲಗೊಳಿಸಿದೆ. ಇದರ ಪರಿಣಾಮವಾಗಿ, ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ನೀರು ಗೋಡೆಯ ಮೇಲೆ ಒತ್ತಡ ಹೇರಿ ಗೋಡೆ ಕುಸಿದಿದೆ ಎನ್ನಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಸ್ಥಳ ಪರಿಶೀಲನೆ ಬಳಿಕ ಲೋಕಾಯುಕ್ತ ಶಾಕಿಂಗ್ ಹೇಳಿಕೆ – Kannada News | Bowring Hospital Tragedy: Lokayukta to File Suo Motu Case Against Chief Secretary and Top Officials

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ಸ್ಥಳದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್Image Credit source: tv9

ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ (Bengaluru) ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಅಮಾಯಕರು ಬಲಿಯಾದ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತವು (Lokayukta) ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಘಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ (Suo Motu Case) ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಪರಿಶೀಲನೆ ಬಳಿಕ ಲೋಕಾಯುಕ್ತರು ಹೇಳಿದ್ದೇನು?

ಸ್ಥಳ ಪರಿಶೀಲನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಬಿಎಸ್ ಪಾಟೀಲ್, ‘ಕಾಂಪೌಂಡ್‌ನ ಅಡಿಪಾಯ (Foundation) ಅತ್ಯಂತ ದುರ್ಬಲವಾಗಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ. ನಗರದಲ್ಲಿ ಪ್ರತಿ ವರ್ಷ ಮಳೆ ಬರುತ್ತದೆ ಎಂಬುದು ಗೊತ್ತಿದ್ದರೂ, ಇಂತಹ ದುರ್ಬಲ ಗೋಡೆಗಳ ಪಕ್ಕದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಿರುವುದು ಅಧಿಕಾರಿಗಳ ಬೇಜವಾಬ್ದಾರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಒಂದು ಗಂಟೆ ಮಳೆ ಬಂದಿದ್ದಕ್ಕೇ ಗೋಡೆ ಕುಸಿಯುತ್ತಿದೆ ಎಂದರೆ ಕಾಮಗಾರಿಯ ಗುಣಮಟ್ಟ ಎಷ್ಟಿರಬಹುದು ಎಂದು ಅವರು ಪ್ರಶ್ನಿಸಿದ್ದಾರೆ.

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ಸ್ಥಳ ಪರಿಶೀಲನೆ ನಡೆಸಿದ ಲೋಕಾಯುಕ್ತರು

ಉನ್ನತ ಅಧಿಕಾರಿಗಳ ವಿರುದ್ಧ ತೂಗುಗತ್ತಿ

ಈ ಪ್ರಕರಣದಲ್ಲಿ ಕೇವಲ ಕೆಳಹಂತದ ಸಿಬ್ಬಂದಿಯನ್ನಷ್ಟೇ ಅಲ್ಲದೆ, ಉನ್ನತ ಮಟ್ಟದ ಅಧಿಕಾರಿಗಳನ್ನೂ ಹೊಣೆಗಾರರನ್ನಾಗಿ ಮಾಡಲು ಲೋಕಾಯುಕ್ತರು ಮುಂದಾಗಿದ್ದಾರೆ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

  • ಲೋಕಾಯುಕ್ತದಿಂದ ಸ್ವಯಂಪ್ರೇರಿತ ಪ್ರಕರಣ: ಯಾರೆಲ್ಲ ಆರೋಪಿಗಳು?
  • ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್
  • ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್
  • ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ, ಅಪರ ಕಾರ್ಯದರ್ಶಿ
  • 5 ಪಾಲಿಕೆಗಳ ವಲಯ ಆಯುಕ್ತರು

ಇವರೆಲ್ಲರನ್ನೂ ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಬೌರಿಂಗ್ ಆಸ್ಪತ್ರೆ ಆವರಣದ ಇನ್​​ಚಾರ್ಜ್ ಹರೀಶ್ ಕುಮಾರ್​​ನನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಲು ಲೋಕಾಯುಕ್ತರು ಸೂಚಿಸಿದ್ದಾರೆ.


ಭಾರಿ ಗಾಳಿ, ಮಳೆಗೆ ಸಂಭವಿಸಿತು ಘೋರ ದುರಂತ

ಏಪ್ರಿಲ್ 29ರ ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಭೀಕರ ಆಲಿಕಲ್ಲು ಮಳೆ ಹಾಗೂ ಗಾಳಿ-ಮಳೆಯಿಂದ ರಕ್ಷಣೆ ಪಡೆಯಲು ಪಾದಚಾರಿಗಳು ಮತ್ತು ವ್ಯಾಪಾರಿಗಳು ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯ ಬಳಿ ನಿಂತಿದ್ದರು. ಮಳೆಯ ತೀವ್ರತೆಗೆ ಸುಮಾರು 100 ಅಡಿ ಉದ್ದದ ಗೋಡೆ ಏಕಾಏಕಿ ಕುಸಿದುಬಿದ್ದಿತ್ತು. ಈ ಅವಶೇಷಗಳಡಿ ಸಿಲುಕಿ ಇಬ್ಬರು ಮಹಿಳೆಯರು, ಪುಟ್ಟ ಮಗು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂ. ಹಾಗೂ ಪ್ರಧಾನಿ ಕಾರ್ಯಾಲಯ2 ಲಕ್ಷ ರೂ. ಪರಿಹಾರ ಘೋಷಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:04 pm, Thu, 30 April 26

Source link

ಟಿ20 ವಿಶ್ವಕಪ್​ಗೆ ನ್ಯೂಝಿಲೆಂಡ್ ತಂಡ ಪ್ರಕಟ – Kannada News | New Zealand squad for Women’s T20 World Cup 2026

2026ರ ಜೂನ್ 12ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯು 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಹಾಲಿ ಚಾಂಪಿಯನ್ ಆಗಿರುವ ನ್ಯೂಝಿಲೆಂಡ್ ತಂಡವನ್ನು ಈ ಬಾರಿ ಸ್ಟಾರ್ ಆಲ್-ರೌಂಡರ್ ಅಮೆಲಿಯಾ ಕೆರ್ (Amelia Kerr) ಮುನ್ನಡೆಸಲಿದ್ದಾರೆ.

ಇನ್ನು ತಂಡದಲ್ಲಿ ಅನುಭವಿ ಆಟಗಾರ್ತಿಯರಾದ ಸೂಝಿ ಬೆಟ್ಸ್, ಸೋಫಿ ಡಿವೈನ್, ಲಿಯಾ ತಹುಹು ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ನೆನ್ಸಿ ಪಟೇಲ್ ಮತ್ತು ಇಸಿ ಶಾರ್ಪ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಟಿ20 ವಿಶ್ವಕಪ್​ಗೆ ನ್ಯೂಝಿಲೆಂಡ್ ತಂಡ ಈ ಕೆಳಗಿನಂತಿದೆ…

  1.  ಅಮೆಲಿಯಾ ಕೆರ್ (ನಾಯಕಿ)
  2.  ಸೂಝಿ ಬೇಟ್ಸ್
  3.  ಸೋಫಿ ಡಿವೈನ್
  4.  ಲಿಯಾ ತಹುಹು
  5.  ಮ್ಯಾಡಿ ಗ್ರೀನ್
  6.  ಬ್ರೂಕ್ ಹಾಲಿಡೇ
  7.  ಇಸಿ ಗೇಝ್ (ವಿಕೆಟ್ ಕೀಪರ್)
  8.  ಪಾಲಿ ಇಂಗ್ಲಿಸ್ (ವಿಕೆಟ್ ಕೀಪರ್)
  9.  ಜೆಸ್ ಕೆರ್
  10.  ರೋಸ್ಮೇರಿ ಮೇರ್
  11.  ಜಾರ್ಜಿಯಾ ಪ್ಲಿಮ್ಮರ್
  12.  ಫ್ಲೋರಾ ಡೆವೊನ್‌ಶೈರ್
  13. ಬ್ರೀ ಇಲ್ಲಿಂಗ್
  14.  ನೆನ್ಸಿ ಪಟೇಲ್
  15.  ಇಸಿ ಶಾರ್ಪ್

ದಿಗ್ಗಜರ ವಿದಾಯ:

ಈ ಬಾರಿಯ ಟಿ20 ವಿಶ್ವಕಪ್​ನೊಂದಿಗೆ ನ್ಯೂಝಿಲೆಂಡ್​ನ ದಿಗ್ಗಜ ಆಟಗಾರ್ತಿಯರಾದ ಸೋಫಿ ಡಿವೈನ್, ಸೂಝಿ ಬೇಟ್ಸ್ ಮತ್ತು ಲಿಯಾ ತಹುಹು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಅಂದರೆ ಈ ಮೂವರು ಅನುಭವಿ ಆಟಗಾರ್ತಿಯರಿಗೆ ಇದು ಕೊನೆಯ ವಿಶ್ವಕಪ್​. ಈ ವರ್ಲ್ಡ್​ಕಪ್​ನೊಂದಿಗೆ ಕಿವೀಸ್ ಪಡೆಯ ತ್ರಿಮೂರ್ತಿಗಳು ಕೆರಿಯರ್ ಅಂತ್ಯಗೊಳಿಸಲಿದ್ದಾರೆ.

ಹೊಸ ಪ್ರತಿಭೆಗಳು:

2024ರಲ್ಲಿ ವಿಶ್ವಕಪ್ ಗೆದ್ದಿದ್ದ ನ್ಯೂಝಿಲೆಂಡ್​ ತಂಡದ 10 ಆಟಗಾರ್ತಿಯರನ್ನು ಈ ಬಾರಿಯೂ ಉಳಿಸಿಕೊಳ್ಳಲಾಗಿದೆ. ಇವರ ಜೊತೆ ಇಬ್ಬರು ಯುವ ಪ್ರತಿಭೆಗಳು ಕೂಡ ಆಯ್ಕೆಯಾಗಿದ್ದಾರೆ. ಅದರಂತೆ ನೆನ್ಸಿ ಪಟೇಲ್ ಮತ್ತು ಇಸಿ ಶಾರ್ಪ್ ಚೊಚ್ಚಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಇನ್ನು ತಂಡದ ಪ್ರಮುಖ ಸ್ಪಿನ್ನರ್ ಎಡೆನ್ ಕಾರ್ಸನ್ ಅವರು ಮೊಣಕೈ ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ಕಣಕ್ಕಿಳಿಯದಿರಲು ಇದುವೇ ಅಸಲಿ ಕಾರಣ!

ಗ್ರೂಪ್​-ಬಿ ನಲ್ಲಿ ಕಿವೀಸ್ ಪಡೆ:

ನ್ಯೂಝಿಲೆಂಡ್ ತಂಡವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳೊಂದಿಗೆ ಸೆಣಸಲಿದೆ. ಜೂನ್ 13 ರಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದೊಂದಿಗೆ ನ್ಯೂಝಿಲೆಂಡ್ ತನ್ನ ಅಭಿಯಾನವನ್ನು ಆರಂಭಿಸಲಿದೆ.

Source link

‘ಧುರಂಧರ್ 2’ ಬಳಿಕ ರಣವೀರ್ ಸಿಂಗ್ ಮುಂದಿನ ಸಿನಿಮಾ ಇದೇ ನೋಡಿ – Kannada News | Ranveer Singh’s ‘Pralay’ Zombie Film Not Stalled: 300 Crore Budget Confirmed

‘ಧುರಂಧರ್’ ಹಾಗೂ ‘ಧುರಂದರ್ 2’ ಯಶಸ್ಸಿನ ಬಳಿಕ ರಣವೀರ್ ಸಿಂಗ್ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಮೂಡಿದೆ. ಅವರ ನಟನೆಯ ‘ಡಾನ್ 3’ ಸಿನಿಮಾ ಸೆಟ್ಟೇರುವುದು ಅನುಮಾನ ಎಂದು ಹೇಳಲಾಗುತ್ತಾ ಇದೆ. ಅವರ ‘ಪ್ರಳಯ್’ ಚಿತ್ರದ ಬಗ್ಗೆಯೂ ನಿರೀಕ್ಷೆ ಮೂಡಿದೆ. ಈ ಸಿನಿಮಾ ಹಲವು ಅಡೆತಡೆಗಳನ್ನು ಎದುರಿಸುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ. ಈ ಸಿನಿಮಾ ನಿಗದಿತ ವೇಳಾಪಟ್ಟಿಯಂತೆ ಆಗಸ್ಟ್ 2026ರಲ್ಲಿ ಶೂಟಿಂಗ್ ಆರಂಭಿಸಲಿದೆ ಎಂಬ ಹೊಸ ಮಾಹಿತಿ ಹೊರಬಿದ್ದಿದೆ.

‘ಧುರಂಧರ್’ ಫ್ರಾಂಚೈಸಿಯ ಯಶಸ್ಸಿನ ನಂತರ ರಣವೀರ್ ಸಿಂಗ್ ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎನ್ನುವ ಕುತೂಹಲ ಇತ್ತು. ಹೀಗಿರುವಾಗಲೇ ಅವರು ನಿರ್ದೇಶಕ ಜೈ ಮೆಹ್ತಾ ಅವರ ‘ಪ್ರಳಯ್’ ಸಿನಿಮಾದಲ್ಲಿ ನಟಿಸೋ ಮಾಹಿತಿ ಹೊರ ಬಿತ್ತು. ಆದರೆ, ನಿರ್ದೇಶಕ ಹಾಗೂ ರಣವೀರ್ ಸಿಂಗ್ ಮಧ್ಯೆ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗುತ್ತಿದೆ. ಇದರಿಂದ ಸಿನಿಮಾ ಸ್ಥಗಿತಗೊಂಡಿದೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ಈ ಸುದ್ದಿಯನ್ನು ಚಿತ್ರತಂಡದ ಆಪ್ತ ಮೂಲಗಳು ನಿರಾಕರಿಸಿವೆ. ‘ಪ್ರಳಯ್’ ಚಿತ್ರದ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸುಳ್ಳು ಎಂದು ಹೇಳಲಾಗಿದೆ. ರಣವೀರ್ ಮತ್ತು ಜೈ ನಿರಂತರವಾಗಿ ಸ್ಕ್ರಿಪ್ಟ್ ಚರ್ಚೆ ನಡೆಸಿ ಅದನ್ನು ಫೈನಲ್ ಮಾಡಿದ್ದಾರೆ. ಸಿನಿಮಾ ಈಗಾಗಲೇ ಪ್ರೀ-ಪ್ರೊಡಕ್ಷನ್ ಹಂತಕ್ಕೆ ತಲುಪಿದೆಎಂದು ಮೂಲಗಳು ತಿಳಿಸಿವೆ.

‘ಪ್ರಳಯ್’ ಭಾರತೀಯ ಚಿತ್ರರಂಗದಲ್ಲಿ ಸಿದ್ಧವಾಗಲಿರುವ ದುಬಾರಿ ಜಾಂಬಿ ಶೈಲಿಯ ಸಿನಿಮಾ ಆಗಲಿದೆ. ಹಿಂದಿ ಚಿತ್ರರಂಗದಲ್ಲಿ ಈ ಮಟ್ಟದ ಬೃಹತ್ ಜಾಂಬಿ ಸಿನಿಮಾ ಇದುವರೆಗೆ ಬಂದಿಲ್ಲ. ಈ ಚಿತ್ರವು ಸುಮಾರು 300 ಕೋಟಿ ರೂಪಾಯಿಗಳ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಬಾಲಿವುಡ್‌ನ ಅತ್ಯಂತ ದುಬಾರಿ ಸಿನಿಮಾಗಳ ಪಟ್ಟಿಗೆ ಸೇರಲಿದೆ.

ಇದನ್ನೂ ಓದಿ: ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ

ನಿರ್ದೇಶಕ ಜೈ ಮೆಹ್ತಾ ಮತ್ತು ‘ಲೂಟೇರೆ’ ಖ್ಯಾತಿಯ ವಿಶಾಲ್ ಕಪೂರ್ ಈ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರಕ್ಕಾಗಿ ರಣವೀರ್ ಸಿಂಗ್ ವಿಶೇಷ ಲುಕ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 2027ಕ್ಕೆ ಸಿನಿಮಾ ತೆರೆಗೆ ಬರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

44 ವರ್ಷಗಳ ಬಳಿಕ ಒಟಿಟಿಗೆ ಬರುತ್ತಿದೆ ಕಲ್ಟ್ ಕ್ಲಾಸಿಕ್ ಸಿನಿಮಾ – Kannada News | Kamal Haasan starrer Moondram Pirai movie releasing on OTT

ಹಳೆಯ ಹಿಟ್ ಸಿನಿಮಾಗಳು, ಕಲ್ಟ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ (Theater) ಮರು ಬಿಡುಗಡೆ ಆಗಿ ದೊಡ್ಡ ಮೊತ್ತ ಗಳಿಸುತ್ತಿವೆ. ತೆಲುಗಿನಲ್ಲಂತೂ ವಾರಕ್ಕೊಂದು ಹಳೆಯ ಸಿನಿಮಾಗಳನ್ನು ರೀ ರಿಲೀಸ್ ಮಾಡಿ ದುಡ್ಡು ಮಾಡಲಾಗುತ್ತಿದೆ. ಅಂಥಹದರಲ್ಲಿ 44 ವರ್ಷ ಹಿಂದಿನ ಆದರೆ ಈಗಲೂ ಇನ್​​ಸ್ಟಾಗ್ರಾಂ, ಯೂಟ್ಯೂಬ್ ಶಾರ್ಟ್ಸ್​​ಗಳಲ್ಲಿ ಟ್ರೆಂಡಿಂಗ್ ನಲ್ಲಿ ಕಮಲ್ ಹಾಸನ್ ನಟಿಸಿರುವ ಕಲ್ಟ್ ಕ್ಲಾಸಿಕ್ ಸಿನಿಮಾ ಒಂದು ಈಗ ಒಟಿಟಿಗೆ ಬರುತ್ತಿದೆ. ಸಿನಿಮಾದ ಹೆಸರು ‘ಮೂಂಡ್ರಂ ಪಿರಯ್’. 1982 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.

ಕಮಲ್ ಹಾಸನ್, ಶ್ರೀದೇವಿ ನಟಿಸಿ, ಬಾಲು ಮಹೇಂದ್ರನ್ ನಿರ್ದೇಶನ ಮಾಡಿರುವ ‘ಮೂಂಡ್ರಂ ಪಿರಯ್’ ಸಿನಿಮಾ ಅದ್ಧೂರಿ ಬ್ಲಾಕ್ ಬಸ್ಟರ್ ಮಾತ್ರವಲ್ಲ. ಇಂದಿಗೂ ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ಕಮಲ್ ಹಾಸನ್ ಸಿನಿಮಾ. ಶ್ರೀದೇವಿ ಮತ್ತು ಕಮಲ್ ಹಾಸನ್ ತಮ್ಮ ಜೀವಮಾನದ ಅತ್ಯುತ್ತಮ ನಟನೆಯನ್ನು ಸಿನಿಮಾನಲ್ಲಿ ನೀಡಿದ್ದರು. ಸಿನಿಮಾದ ಹಾಡುಗಳು ಇಂದಿಗೂ ಟ್ರೆಂಡಿಂಗ್​​ನಲ್ಲಿವೆ.

ಸಿನಿಮಾವನ್ನು ಸತ್ಯ ಜೋತಿ ಫಿಲಮ್ಸ್ ನಿರ್ಮಾಣ ಮಾಡಿತ್ತು. ಇದೀಗ ಆ ಸಿನಿಮಾವನ್ನು ರೀಮಾಸ್ಟರ್ ಮಾಡಿ ಒಟಿಟಿಗೆ ಬಿಡುಗಡೆ ಮಾಡುತ್ತಿದ್ದು, ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಆದರೆ ಅಮೆಜಾನ್ ಪ್ರೈಂನಲ್ಲಿ ಕೇವಲ ತಮಿಳು ಆವೃತ್ತಿಯಲ್ಲಿ ಮಾತ್ರವೇ ಈ ಸಿನಿಮಾ ವೀಕ್ಷಣೆಗೆ ಲಭ್ಯವಿರಲಿದೆ. ತೆಲುಗು ಅಥವಾ ಇನ್ಯಾವುದೇ ಭಾಷೆಯಲ್ಲಿ ಲಭ್ಯ ಇರುವುದಿಲ್ಲ.

ಇದನ್ನೂ ಓದಿ:‘ಕೆಡಿ’ ಸಿನಿಮಾ ರಿಲೀಸ್​​ಗೂ ಮೊದಲು ತಲೆ ಎತ್ತಿತು ಬೃಹತ್​ ಕಟೌಟ್

‘ಮೂಂಡ್ರಂ ಪಿರಯ್’ ಸಿನಿಮಾ ಬಿಡುಗಡೆ ಆದಾಗ ಅದನ್ನು ತೆಲುಗಿಗೆ ‘ವಸಂತ ಕೋಕಿಲ’ ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಆದರೆ ಒಟಿಟಿಯಲ್ಲಿ ತಮಿಳಿನಲ್ಲಿ ಮಾತ್ರ ಲಭ್ಯವಿದೆ. ಅಸಲಿಗೆ ಇದೇ ಸಿನಿಮಾ ಯೂಟ್ಯೂಬ್​​ನಲ್ಲಿ ಉಚಿತವಾಗಿ ವೀಕ್ಷಣೆಗೆ ಈಗಾಗಲೇ ಲಭ್ಯವಿದೆ. ಆದರೆ ಅದು ರೀ ಮಾಸ್ಟರ್ ಮಾಡಿರುವ ಆವೃತ್ತಿ ಅಲ್ಲ.

ಇತ್ತೀಚೆಗೆ ‘ಮೂಂಡ್ರಂ ಪಿರಯ್’ ಸಿನಿಮಾದ ಹಲವು ತುಣುಕು ದೃಶ್ಯಗಳು, ಆ ಸಿನಿಮಾದ ಹಾಡುಗಳು ಇನ್​​ಸ್ಟಾಗ್ರಾಂನಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಹಲವು ಜನಪ್ರಿಯ ಸಿನಿಮಾ ನಿರ್ದೇಶಕರು, ನಟರುಗಳು ಸಹ ‘ಮೂಂಡ್ರಂ ಪಿರಯ್’ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದು, ಅದರ ತುಣುಕುಗಳು ಸಹ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೆ ಯುವತಿಯೊಬ್ಬಾಕೆ, ಯೂಟ್ಯೂಬ್​​ನಲ್ಲಿ ‘ಮೂಂಡ್ರಂ ಪಿರಯ್’ ಕ್ಲೈಮ್ಯಾಕ್ಸ್ ನೋಡಿ ಅಳುತ್ತಿರುವ ದೃಶ್ಯವೂ ಸಖತ್ ವೈರಲ್ ಆಗಿತ್ತು. ಹೊಸ ತಲೆಮಾರಿನವರಿಗೆ ಆ ಸಿನಿಮಾದ ಮೇಲಿನ ಆಸಕ್ತಿ ಗಮನಿಸಿ ಇದೀಗ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ.

ಅಂದಹಾಗೆ ‘ಮೂಂಡ್ರಂ ಪಿರಯ್’ ಸಿನಿಮಾದ ಕತೆಯನ್ನು ಆಧರಿಸಿ ಕನ್ನಡದಲ್ಲಿಯೂ ಒಂದು ಸಿನಿಮಾ ಬಂದು ಸೂಪರ್ ಹಿಟ್ ಆಯ್ತು. ಅದುವೇ ಸುದೀಪ್ ನಟನೆಯ ‘ನಲ್ಲ’. ‘ಮೂಂಡ್ರಂ ಪಿರಯ್’ ಸಿನಿಮಾದ ಕತೆಯನ್ನು ಆಧರಿಸಿದ ಸಿನಿಮಾ ಆಗಿದ್ದರೂ ಸಹ ಇದು ನೇರ ರೀಮೇಕ್ ಆಗಿರಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೋಹಿತ್ ಶರ್ಮಾ ಕಣಕ್ಕಿಳಿಯದಿರಲು ಇದುವೇ ಅಸಲಿ ಕಾರಣ! – Kannada News | Why rohit sharma is not playing in ipl 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ 8 ಪಂದ್ಯಗಳನ್ನಾಡಿದೆ. ಈ ಎಂಟು ಮ್ಯಾಚ್​ಗಳಲ್ಲಿ ರೋಹಿತ್ ಶರ್ಮಾ (Rohit Sharma) ಕಾಣಿಸಿಕೊಂಡಿರುವುದು ಮೊದಲ ನಾಲ್ಕು ಪಂದ್ಯಗಳಲ್ಲಿ ಮಾತ್ರ. ಇದಾದ ಬಳಿಕ ಸತತ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಇದಾಗ್ಯೂ ಪ್ರತಿ ಪಂದ್ಯದ ವೇಳೆ ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮ್​ ಹಾಗೂ ಡಗೌಟ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಹಿಟ್​ಮ್ಯಾನ್ ಯಾಕೆ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

ಏಪ್ರಿಲ್ 12ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ಹ್ಯಾಮ್‌ಸ್ಟ್ರಿಂಗ್ (Hamstring injury) ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದಾದ ಬಳಿಕ ಅವರು ಯಾವುದೇ ಪಂದ್ಯವಾಡಿಲ್ಲ.

ರೋಹಿತ್ ಶರ್ಮಾ ಅವರ ಹ್ಯಾಮ್‌ಸ್ಟ್ರಿಂಗ್ ಸ್ನಾಯು ಸೆಳೆತದ ಸಮಸ್ಯೆಯು ಗಂಭೀರವಾಗಿದ್ದು, ಹೀಗಾಗಿ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿಯೇ ಹಿಟ್​ಮ್ಯಾನ್ ತಂಡದೊಂದಿಗೆ ಕಾಣಿಸಿಕೊಂಡರೂ ಮೈದಾನಕ್ಕಿಳಿಯುತ್ತಿಲ್ಲ. ಅಲ್ಲದೆ ತಮ್ಮ ಕೆರಿಯರ್​ನ ಅಂಚಿನಲ್ಲಿರುವ ರೋಹಿತ್ ಶರ್ಮಾ ಕೂಡ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ.

ಅಂದರೆ 2027ರ ಏಕದಿನ ವಿಶ್ವಕಪ್​ ಆಡುವ ಇರಾದೆ ಹೊಂದಿರುವ ರೋಹಿತ್ ಶರ್ಮಾ ಹ್ಯಾಮ್‌ಸ್ಟ್ರಿಂಗ್ ಸ್ನಾಯು ಸೆಳೆತವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಸಂಪೂರ್ಣ ಫಿಟ್​ ಆದ ಮೇಲೆ ಮಾತ್ರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅತ್ತ ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್‌ಮೆಂಟ್ ಅವರ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ. ಆದರೆ ಇತ್ತ ಹಿಟ್​ಮ್ಯಾನ್ ಅನುಪಸ್ಥಿತಿಯು ಮುಂಬೈ ಇಂಡಿಯನ್ಸ್ ತಂಡದ ಫಲಿತಾಂಶದ ಮೇಲೆ ಪ್ರಭಾವ ಬೀರಿರುವುದಂತು ನಿಜ. ಪರಿಣಾಮ ಹಾರ್ದಿಕ್ ಪಾಂಡ್ಯ ಪಡೆ ಕಳೆದ 4 ಪಂದ್ಯಗಳಲ್ಲಿ ಮೂರರಲ್ಲಿ ಸೋಲನುಭವಿಸಿದೆ. ಹೀಗಾಗಿಯೇ ಹಿಟ್​ಮ್ಯಾನ್ ಶೀಘ್ರದಲ್ಲೇ ಚೇತರಿಸಿಕೊಂಡು ಮೈದಾನಕ್ಕೆ ಮರಳುವುದನ್ನು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Published On – 12:52 pm, Thu, 30 April 26

Source link

Budh Gochar 2026: ಮೇಷ ರಾಶಿಗೆ ಬುಧನ ಪ್ರವೇಶ; ಇಂದಿನಿಂದ ಮೇ 14 ರವರೆಗೆ ಈ ರಾಶಿಗೆ ‘ಸುವರ್ಣ ಕಾಲ’! – Kannada News | Budh gochar 2026 mercury in mesha rashi impact on 12 signs and remedies

ಮೇಷ ರಾಶಿಗೆ ಬುಧನ ಪ್ರವೇಶImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಮಾನವನ ಜೀವನದ ಮೇಲೆ ನಿರಂತರ ಪ್ರಭಾವ ಬೀರುತ್ತದೆ. ಇಂದು ಅಂದರೆ ಏಪ್ರಿಲ್ 30, ಮಂಗಳವಾರ ಬೆಳಿಗ್ಗೆ 6:52 ಕ್ಕೆ, ಬುದ್ಧಿಶಕ್ತಿ, ವ್ಯಾಪಾರ ಮತ್ತು ಸಂವಹನದ ಕಾರಕನಾದ ‘ಬುಧ’ ಗ್ರಹವು ಮೇಷ ರಾಶಿಗೆ ಪದಾರ್ಪಣೆ ಮಾಡಿದೆ. ಈ ಸಂಚಾರವು ಮೇ 14 ರವರೆಗೆ ಮುಂದುವರಿಯಲಿದ್ದು, ದ್ವಾದಶ ರಾಶಿಗಳ ಮೇಲೆ ಮಿಶ್ರ ಪರಿಣಾಮ ಬೀರಲಿದೆ.

ವಿಶೇಷವಾಗಿ ಐದು ರಾಶಿಯವರಿಗೆ ಇದು ಅತ್ಯಂತ ಲಾಭದಾಯಕ ಸಮಯವಾಗಿದ್ದರೆ, ಉಳಿದವರು ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಯಾರಿಗೆ ಜಾಗರೂಕತೆ ಅಗತ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ.

ಅದೃಷ್ಟದ ಶಿಖರ ಏರಲಿರುವ 5 ರಾಶಿಗಳು!

ಮೇಷ ರಾಶಿ:

ನಿಮ್ಮದೇ ರಾಶಿಯಲ್ಲಿ ಬುಧನ ಸಂಚಾರ ನಡೆಯುತ್ತಿರುವುದರಿಂದ, ಈ ಅವಧಿಯಲ್ಲಿ ನೀವು ರಾಜನಂತಹ ಸುಖ-ಸಂತೋಷವನ್ನು ಅನುಭವಿಸುವಿರಿ. ಭೌತಿಕ ಸೌಕರ್ಯಗಳು ವೃದ್ಧಿಯಾಗಲಿವೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದೆ. ಮೇ 14 ರವರೆಗೆ ಹಸಿರು ಬಟ್ಟೆ ಧರಿಸುವುದನ್ನು ತಪ್ಪಿಸಿ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ಸಂಚಾರವು ಹಣಕಾಸಿನ ಲಾಭವನ್ನು ತರಲಿದೆ. ಕುಟುಂಬದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ಸಂತೋಷದ ವಾತಾವರಣ ಇರಲಿದೆ. ಶುಭ ಫಲಕ್ಕಾಗಿ ದೇವಸ್ಥಾನದಲ್ಲಿ ಮಣ್ಣಿನ ಪಾತ್ರೆಯನ್ನು ದಾನ ಮಾಡಿ.

ಮಿಥುನ ರಾಶಿ:

ನಿಮ್ಮ ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮಕ್ಕಳು ಶಿಕ್ಷಣದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಾರೆ. ದುರ್ಗಾ ದೇವಿಯ ಆರಾಧನೆ ಮಾಡಿ.

ಧನು ರಾಶಿ:

ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಪೂರ್ವಜರ ಆಸ್ತಿಯಿಂದ ದೊಡ್ಡ ಮಟ್ಟದ ಲಾಭವಾಗುವ ಸಾಧ್ಯತೆಯಿದೆ. ಹಸುಗಳಿಗೆ ಹಸಿರು ಹುಲ್ಲು ತಿನ್ನಿಸಿ.

ಕುಂಭ ರಾಶಿ:

ಒಡಹುಟ್ಟಿದವರೊಂದಿಗೆ ಇದ್ದ ಮನಸ್ತಾಪಗಳು ದೂರವಾಗಿ ಸಂಬಂಧ ಸುಧಾರಿಸಲಿದೆ. ನಿಮ್ಮ ಆಕರ್ಷಕ ಮಾತಿನ ಶೈಲಿಯಿಂದ ಇತರರ ಮೇಲೆ ಪ್ರಭಾವ ಬೀರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು ಏಕೆ? ವಾಸ್ತು ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು:

  • ಕರ್ಕಾಟಕ: ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆಡಳಿತಾತ್ಮಕ ಕೆಲಸಗಳು ನಿಮ್ಮ ಪರವಾಗಿದ್ದರೂ, ಮಾತಿನ ಮೇಲೆ ನಿಗಾ ಇರಲಿ.
  • ಸಿಂಹ: ಅದೃಷ್ಟಕ್ಕಿಂತ ಹೆಚ್ಚಾಗಿ ಕೆಲಸದ ಮೇಲೆ ನಂಬಿಕೆ ಇಡಿ. ಕೊಟ್ಟ ಭರವಸೆಯನ್ನು ತಪ್ಪಬೇಡಿ.
  • ತುಲಾ: ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ವಾದ ಬೇಡ. (ಪರಿಹಾರವಾಗಿ ಹಸಿರು ಹೆಸರುಕಾಳನ್ನು ದಾನ ಮಾಡಿ).
  • ಮಕರ: ಆರ್ಥಿಕವಾಗಿ ಸಾಧಾರಣ ಫಲಿತಾಂಶವಿರಲಿದೆ. ದೂರದ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡಿ.

ಇತರ ರಾಶಿಗಳ ಮೇಲೆ ಪ್ರಭಾವ:

ಕನ್ಯಾ ರಾಶಿಯವರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿ ಕಾರ್ಯನಿರ್ವಹಿಸಲಿದ್ದಾರೆ. ವೃಶ್ಚಿಕ ರಾಶಿಯವರ ವಾಕ್ಚಾತುರ್ಯ ಹೆಚ್ಚಾಗಲಿದೆ ಮತ್ತು ಮೀನ ರಾಶಿಯವರಿಗೆ ವ್ಯವಹಾರದಲ್ಲಿ ಲಾಭದಾಯಕ ಅವಕಾಶಗಳು ಸಿಗಲಿವೆ.

ಸಲಹೆ: ಬುಧನ ಈ ಸಂಚಾರದ ಸಮಯದಲ್ಲಿ ಭಾವೋದ್ರೇಕಕ್ಕೆ ಒಳಗಾಗದೆ, ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಉತ್ತಮ ಫಲ ನೀಡುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version