“ಕೆಲಸ ಹೋದ ಮೇಲೆ ಸತ್ಯ ಗೊತ್ತಾಯ್ತು!”: ಬೆಂಗಳೂರು ಯುವತಿಯ ಭಾವುಕ ವಿಡಿಯೋ ವೈರಲ್; ಕೆಲಸದ ಒತ್ತಡದ ಬಗ್ಗೆ ಬಿಚ್ಚಿಟ್ಟ ಸತ್ಯ – Kannada News | Bengaluru’s Nidhi Goes Viral: ‘Work Isn’t Life’ Post Layoff Experience Resonates with Many

ಬೆಂಗಳೂರು ಕೆಲಸದ ಒತ್ತಡ ಯುವತಿ ಹೇಳಿದೆ ಸತ್ಯ

ಬೆಂಗಳೂರು, ಏ.20: ಅದೆಷ್ಟೋ ಜನ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಸ್ವಂತ ಅಥವಾ ಊರಿಗೆ ಹೋಗಿ ಬದುಕುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಇತ್ತೀಚೆಗೆ ಭಾರೀ ವೈರಲ್​ ಆಗುತ್ತಿದೆ. ಇದೀಗ ಇಲ್ಲೊಬ್ಬ ಯುವತಿ ಕೂಡ ಅಂತಹದೇ ಹಾದಿಯನ್ನು ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ. ಕೆಲಸದ ಒತ್ತಡದಿಂದಾಗಿ ತನ್ನ ವೈಯಕ್ತಿಕ ಜೀವನವನ್ನೇ ಬಲಿ ಕೊಟ್ಟಿದ್ದ ಬೆಂಗಳೂರಿನ ನಿಧಿ ಎಂಬ ಯುವತಿ, ಕೆಲಸ ಕಳೆದುಕೊಂಡ ನಂತರ ತನಗಾದ ಅನುಭವಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗವೇ ಜೀವನವಲ್ಲ ಎಂಬ ಅವರ ಮಾತುಗಳು ಈಗ ಲಕ್ಷಾಂತರ ಉದ್ಯೋಗಿಗಳ ಮನ ಗೆದ್ದಿವೆ.

“ನಾನು ಕೆಲಸದಿಂದ ವಜಾಗೊಂಡಿದ್ದೇನೆ. ಕೆಲಸ ಹೋದ ನಂತರ ನನಗೆ ಅರಿವಾದ ವಿಷಯಗಳು ನಿಜಕ್ಕೂ ಭಯಾನಕವಾಗಿವೆ” ಎಂದು ನಿಧಿ ಹೇಳಿದ್ದಾರೆ. “ನಾನು ನನ್ನ ಉದ್ಯೋಗವನ್ನೇ ನನ್ನ ಇಡೀ ಜೀವನ ಎಂದು ಭಾವಿಸಿದ್ದೆ. ನನ್ನ ಇಡೀ ಪ್ರಪಂಚ ಕೇವಲ ಮೀಟಿಂಗ್‌ಗಳು, ಡೆಡ್‌ಲೈನ್‌ಗಳು ಮತ್ತು ಒತ್ತಡದ ಸುತ್ತಲೇ ಸುತ್ತುತ್ತಿತ್ತು.ಕೆಲಸದ ಅಮಲಿನಲ್ಲಿ ನಾನು ನನ್ನ ಬಗ್ಗೆ ಕಾಳಜಿ ವಹಿಸುವುದನ್ನೇ ನಿಲ್ಲಿಸಿದೆ. ಗೆಳೆಯರನ್ನು ಭೇಟಿ ಮಾಡುವುದು, ವ್ಯಾಯಾಮ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು ಮತ್ತು ಹೊರಗಡೆ ಓಡಾಡುವುದನ್ನೆಲ್ಲಾ ಮರೆತುಬಿಟ್ಟಿದ್ದೆ.ಬೆಳಿಗ್ಗೆ ಆಫೀಸ್‌ಗೆ ಹೋಗುವುದು, ರಾತ್ರಿ ಮನೆಗೆ ಬರುವುದು ಮತ್ತು ಪುನಃ ಕೆಲಸ ಮಾಡುವುದು ಇದೇ ನನ್ನ ದಿನಚರಿಯಾಗಿತ್ತು. ನಮ್ಮಲ್ಲಿ ಅನೇಕರು ಇದೇ ರೀತಿ ರೋಬೋಟ್‌ಗಳಂತೆ ಬದುಕುತ್ತಿದ್ದಾರೆ. ಆದರೆ ನಿಜಕ್ಕೂ ನಮಗೆ ಇಂತಹ ಬದುಕು ಬೇಕಾ?” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಐಷಾರಾಮಿ ‘ಪೋರ್ಷೆ’ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಮಿಶ್ರಣ! ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಿದ ಉದ್ಯಮಿಯ ವೀಡಿಯೋ ವೈರಲ್

ಇಲ್ಲಿದೆ ನೋಡಿ ವಿಡಿಯೋ:

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ನಾವೆಲ್ಲರೂ ಆಟೋಪೈಲಟ್ ಮೋಡ್‌ನಲ್ಲಿ ಬದುಕುತ್ತಿದ್ದೇವೆ, ನಿಮ್ಮ ಮಾತುಗಳು ನೂರಕ್ಕೆ ನೂರು ನಿಜ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಆರೋಗ್ಯ ಮತ್ತು ಸಂತೋಷಕ್ಕಿಂತ ಡೆಡ್‌ಲೈನ್‌ಗಳು ಮುಖ್ಯವಲ್ಲ” ಎಂದು ಬರೆದಿದ್ದಾರೆ. “ಕೆಲಸ ಎಂಬುದು ಜೀವನದ ಒಂದು ಭಾಗ ಮಾತ್ರ, ಅದೇ ಪೂರ್ಣ ಜೀವನವಲ್ಲ ಎಂದು ಅರಿವಾಗಲು ನಮಗೆ ಇಂತಹ ಹೊಡೆತಗಳೇ ಬೇಕು” ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಲ ಝಳಕ್ಕೆ ಬೆಂದ ಕರ್ನಾಟಕ: ಆಸ್ಪತ್ರೆಗೆ ಫ್ಯಾನ್ ತಂದ ಪೋಷಕರು, ಪೊಲೀಸ್ ಶ್ವಾನಗಳಿಗೂ ಕೂಲರ್-ಎಳನೀರು ಭಾಗ್ಯ! – Kannada News | Karnataka Heatwave: People Bring Fans to Koppal Hospital; air cooler to police Dogs in Kalaburagi Beat Heat

ಆಸ್ಪತ್ರೆಗೆ ಫ್ಯಾನ್ ತಂದ ಪೋಷಕರು, ಪೊಲೀಸ್ ಶ್ವಾನಗಳಿಗೆ ಕೂಲರ್-ಎಳನೀರು ಭಾಗ್ಯ!Image Credit source: tv9

ಬೆಂಗಳೂರು, ಏಪ್ರಿಲ್ 20: ಕರ್ನಾಟಕದಲ್ಲಿ ಬಿಸಿಲಿನ ತಾಪ (Karnataka Heatwave) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೂರ್ಯನ ರಣಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಪರಿಸ್ಥಿತಿ ಕೈಮೀರಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನಸಾಮಾನ್ಯರು ಮತ್ತು ಪ್ರಾಣಿಗಳು ಪರದಾಡುವಂತಾಗಿದೆ. ಕೊಪ್ಪಳ, ಕಲಬುರಗಿ, ಯಾದಗಿರಿಯಲ್ಲಿ ಜನ ಬಿಸಿಲ ಝಳಕ್ಕೆ ಕಂಗೆಟ್ಟಿದ್ದು, ಫ್ಯಾನ್​ಗಳು, ಎಸಿ, ಏರ್​​ ಕೂಲರ್​ಗಳ ಮೊರೆ ಹೋಗುತ್ತಿದ್​ದಾರೆ.

ಆಸ್ಪತ್ರೆಗೆ ಮನೆಯಿಂದಲೇ ಫ್ಯಾನ್ ತಂದ ಪೋಷಕರು!

ಕೊಪ್ಪಳ ಜಿಲ್ಲೆಯಲ್ಲಿ ತಾಪಮಾನ 38ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಎಸಿ ಮತ್ತು ಫ್ಯಾನ್‌ಗಳು ಕೆಟ್ಟು ನಿಂತಿರುವ ಕಾರಣ, ತಾಪಮಾನಕ್ಕೆ ತತ್ತರಿಸಿದ ಪುಟ್ಟ ಪುಟ್ಟ ಮಕ್ಕಳು ಉಸಿರುಗಟ್ಟುವ ವಾತಾವರಣದಲ್ಲಿ ನರಳುತ್ತಿದ್ದಾರೆ. ಅನಿವಾರ್ಯವಾಗಿ ಆಸ್ಪತ್ರೆಗೆ ಮನೆಯಿಂದಲೇ ಫ್ಯಾನ್ ತಂದ ಪೋಷಕರು, ಮಕ್ಕಳ ಬೆಡ್ ಪಕ್ಕದಲ್ಲಿ ಇರಿಸಿ ಧಗೆಯಿಂದ ರಕ್ಷಿಸಲು ಮುಂದಾಗಿದ್ದಾರೆ. ಐಸಿಯುನಲ್ಲಿಯೂ ಎಸಿ ಕೆಲಸ ಮಾಡುತ್ತಿಲ್ಲ ಎಂಬ ಅಳಲನ್ನು ಪೋಷಕರು ತೋಡಿಕೊಂಡಿದ್ದಾರೆ.

ರಾಯಚೂರು: ಹೀಟ್ ಸ್ಟ್ರೋಕ್ ವಾರ್ಡ್ ಸ್ಥಾಪನೆ

ಬಿಸಿಲೂರು ರಾಯಚೂರಿನಲ್ಲಿ ಉಷ್ಣಾಂಶ 42 ಡಿಗ್ರಿ ದಾಟುತ್ತಿದ್ದು, ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ಭೀತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ‘ಹೀಟ್ ಸ್ಟ್ರೋಕ್ ವಾರ್ಡ್’ ಸ್ಥಾಪಿಸಲಾಗಿದೆ. ವಾಂತಿ, ಭೇದಿ ಮತ್ತು ಜ್ವರದ ಲಕ್ಷಣವಿರುವವರಿಗೆ ಇಲ್ಲಿ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ.

ಬೀದರ್: ಮನೆ ಮೇಲ್ಚಾವಣಿ ಮೇಲೆ ನೀರು!

ಬೀದರ್ ಜಿಲ್ಲೆಯಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನ ವಿಭಿನ್ನ ಹಾದಿ ತುಳಿದಿದ್ದಾರೆ. ಮರ್ಕಲ್ ಗ್ರಾಮದ ಕುಟುಂಬವೊಂದು ತನ್ನ ಮೇಲ್ಚಾವಣಿ ಮೇಲೆ ನೀರು ತುಂಬಿಸಿದ ಜನ! ಎಂಬಂತೆ ಮನೆ ಮೇಲೆ ಟಾರ್ಪಲ್ ಹೊದಿಸಿ ಅದರಲ್ಲಿ ನೀರು ನಿಲ್ಲಿಸಿದ್ದಾರೆ. ಇದರಿಂದ ಮನೆಯೊಳಗೆ ಬರುವ ಬಿಸಿಲಿನ ತಾಪ ಕಡಿಮೆಯಾಗುತ್ತಿದೆ.

ಕಲಬುರಗಿ: ಶ್ವಾನದಳಕ್ಕೆ ವಿಶೇಷ ವ್ಯವಸ್ಥೆ

ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳೂ ಬಿಸಿಲಿಗೆ ಹೈರಾಣಾಗಿವೆ. ಕಲಬುರಗಿಯಲ್ಲಿ ಪೊಲೀಸ್ ಇಲಾಖೆಯು ತನ್ನ ಶ್ವಾನದಳದ 5 ಶ್ವಾನಗಳಿಗೆ ಶ್ವಾನಗಳಿಗೆ ಏರ್​ಕೂಲರ್ ವ್ಯವಸ್ಥೆ ಮಾಡಿದೆ. ಅಲ್ಲದೆ, ಶ್ವಾನಗಳಿಗೆ ಪೊಲೀಸರು ಎಳನೀರು ಕುಡಿಸಿದ್​ದಾರೆ. ಶ್ವಾನಗಳನ್ನು ತಂಪಾಗಿರಿಸಲು ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ಕಾಪಾಡಲು ಎಳನೀರು ಕುಡಿಸಲಾಗುತ್ತಿದೆ.

ಇದನ್ನೂ ಓದಿ: ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ ‘ಕೂಲ್’ ಟ್ರೀಟ್ಮೆಂಟ್!

ಒಟ್ಟಾರೆಯಾಗಿ ರಾಜ್ಯಾದ್ಯಂತ ಬಿಸಿಲಿನ ಪ್ರಕೋಪ ಹೆಚ್ಚಾಗಿದ್ದು, ತಂಪು ಪಾನೀಯ, ಎಸಿ, ಫ್ಯಾನ್‌ಗಳ ಮೊರೆ ಹೋದರೂ ಜನರ ಸಂಕಷ್ಟ ಮಾತ್ರ ತೀರದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊರ ರಾಜ್ಯದಿಂದ ಬಂದ IPS ಅಧಿಕಾರಿಗಳಿಂದ ಕನ್ನಡಿಗ ಅಧಿಕಾರಿಗಳ ಮೇಲೆ ದೌರ್ಜನ್ಯ?, ಡಿಜಿ ಮತ್ತು ಐಜಿಪಿಗೆ ಪತ್ರ – Kannada News | DCRE SP Kashi Demands Probe into Harassment of Kannada Officers by Out of State IPS

ಬೆಂಗಳೂರು, ಏಪ್ರಿಲ್​​ 20: ಡಿಸಿಆರ್‌ಇ ಎಸ್‌ಪಿ ಕಾಶಿ ಅವರು ಕನ್ನಡಿಗ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಡಿಜಿ ಮತ್ತು ಐಜಿಪಿ ಸಲೀಂ ಅವರಿಗೆ ಪತ್ರ ಬರೆದಿರುವ ಕಾಶಿ, ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ನೇರವಾಗಿ ಆರೋಪಿಸಿದ್ದಾರೆ. ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ. ಹೊರರಾಜ್ಯದಿಂದ ಬಂದಿರುವ ಐಪಿಎಸ್ ಅಧಿಕಾರಿಗಳು ಕನ್ನಡಿಗ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಸುಳ್ಳು ಕಾರಣಗಳನ್ನು ಹೇಳಿ ಮೆಮೊ ನೀಡುವುದು ಅಥವಾ ಇನ್ನಿತರ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಸಮ್ಮುಖದಲ್ಲಿ ಈ ಕುರಿತು ಮುಕ್ತವಾಗಿ ಮಾತನಾಡಲು ಅವಕಾಶ ನೀಡುವಂತೆ ಮನವಿ ಮಾಡಿರುವ ಅವರು, ಕೇವಲ 30 ನಿಮಿಷಗಳಲ್ಲಿ ಎಲ್ಲ ಕರ್ಮಕಾಂಡಗಳನ್ನು ಬಿಚ್ಚಿಡುವುದಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

RR ಸೋಲುತ್ತಿದ್ದಂತೆ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ: ವಿಡಿಯೋ ವೈರಲ್ – Kannada News | Vaibhav Sooryavanshi Seen Crying After RR’s Defeat to KKR

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 29ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಎಲ್ಲರ  ಕಣ್ಣು ನೆಟ್ಟಿದ್ದು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ 19.4 ಓವರ್​ಗಳಲ್ಲಿ 161 ರನ್​ಗಳಿಸಿ 4 ವಿಕೆಟ್​ಗಳ ಜಯ ಸಾಧಿಸಿತು.

ಅತ್ತ ಕೆಕೆಆರ್ ಆಟಗಾರರು ಗೆದ್ದ ಖುಷಿಯಲ್ಲಿದ್ದರೆ, ಇತ್ತ ಸೋತ ನೋವಿನಲ್ಲಿ ವೈಭವ್ ಸೂರ್ಯವಂಶಿ ಭಾವುಕರಾಗಿ ಕಣ್ಣೀರಿಟ್ಟರು. ಇದೀಗ ಯುವ ಆಟಗಾರ ಕಣ್ಣೀರಿಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನ ಮಿಡಿಯುವಂತೆ ಮಾಡಿದೆ.

ಅಬ್ಬರದ ಆರಂಭ, ಆಘಾತಕಾರಿ ಅಂತ್ಯ:

ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ 46 ರನ್ ಬಾರಿಸಿ ರಾಜಸ್ಥಾನ್ ರಾಯಲ್ಸ್​ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದರು. ಅವರ ಬ್ಯಾಟಿಂಗ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಆದರೆ, ವರುಣ್ ಚಕ್ರವರ್ತಿ ಎಸೆದ 9ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟ್ ಆಗಿದ್ದು ಪಂದ್ಯದ ಲಯವನ್ನೇ ಬದಲಿಸಿತು.

ವೈಭವ್ ಸೂರ್ಯವಂಶಿ ಔಟಾಗುತ್ತಿದ್ದಂತೆ ಆರ್​ಆರ್ ತಂಡ ರನ್​ ಗತಿ ಇಳಿಕೆಯಾಯಿತು. ಇದರ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ಆರ್​ಆರ್ 20 ಓವರ್​ಗಳಲ್ಲಿ 155 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು.

ಗೆಲ್ಲುವ ಅವಕಾಶ ಕೈ ಚೆಲ್ಲಿದ ಆರ್​ಆರ್:

ಅಲ್ಪ ಮೊತ್ತವನ್ನು ಕಲೆಹಾಕಿದ್ದರೂ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್​ಗಳು ಅತ್ಯುತ್ತಮ ದಾಳಿ ಸಂಘಟಿಸಿದ್ದರು. ಪರಿಣಾಮ ಕೆಕೆಆರ್ ತಂಡಕ್ಕೆ ಕೊನೆಯ ಮೂರು ಓವರ್​ಗಳಲ್ಲಿ 28 ರನ್​ಗಳು ಬೇಕಿದ್ದವು. 18ನೇ ಓವರ್​ ಎಸೆದ ಬ್ರಿಜೇಶ್ ನೀಡಿದ್ದು ಕೇವಲ 7 ರನ್​ಗಳು ಮಾತ್ರ.

ಇನ್ನು 19ನೇ ಓವರ್​ನಲ್ಲಿ ಜೋಫ್ರಾ ಆರ್ಚರ್ 12 ರನ್ ಬಿಟ್ಟು ಕೊಟ್ಟರು. ಇದಾಗ್ಯೂ ಕೊನೆಯ ಓವರ್​ನಲ್ಲಿ 9 ರನ್​ಗಳು ಬೇಕಿದ್ದವು. ಈ ವೇಳೆ ದಾಳಿಗಿಳಿದ ಬ್ರಿಜೇಶ್ ಶರ್ಮಾ 4, 4, 6 ಹೊಡೆಸಿಕೊಳ್ಳುವ ಮೂಲಕ ಪಂದ್ಯವನ್ನು ಕೈಚೆಲ್ಲಿಕೊಂಡರು.

ಇದನ್ನೂ ಓದಿ: ಸಿಕ್ಸರ್‌ಗಳ ಸುರಿಮಳೆಗೆ ಕಾರಣವಾಯ್ತು ಶ್ರೇಯಸ್ ಅಯ್ಯರ್ ಅವರ ಆ ಒಂದು ಸವಾಲು!

ಭಾವುಕರಾದ ವೈಭವ್:

ರಾಜಸ್ಥಾನ್ ರಾಯಲ್ಸ್ ತಂಡವು ಕೊನೆಯ ಓವರ್​ನಲ್ಲಿ ಸೋಲುತ್ತಿದ್ದಂತೆ ಭಾವುಕರಾದ ವೈಭವ್ ಸೂರ್ಯವಂಶಿ ಮೈದಾನದ ಹೊರಕ್ಕೆ ಬಂದು ಕೂತು ಕಣ್ಣೀರಿಟ್ಟರು. ಹೀಗೆ ವೈಭವ್ ಅಳುತ್ತಿರುವುದನ್ನು ಕಂಡ ಆರ್​ಆರ್ ಮತ್ತು ಕೆಕೆಆರ್ ಆಟಗಾರರು ಯುವ ದಾಂಡಿಗನನ್ನು ಸಂತೈಸಿದರು. ಇದೀಗ ವೈಭವ್ ಸೂರ್ಯವಂಶಿ ಅಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Source link

ಬಿಸಿಲ ಬೇಗೆಗೆ ಕಾಡಾನೆಯ ಮಣ್ಣಿನ ಮಜ್ಜನ! ಸಫಾರಿಗೆ ಹೋದವರಿಗೆ ಕಂಡ ಮನಮೋಹಕ ದೃಶ್ಯ ಇಲ್ಲಿದೆ ನೋಡಿ – Kannada News | Elephant Mud Bath: Thrilled Tourists Witness Wild Elephant Beat Heat on Safari

ಚಾಮರಾಜನಗರ, ಏಪ್ರಿಲ್ 20: ನಗರದ ಕೆ.ಗುಡಿಯ ಅರಣ್ಯ ಪ್ರದೇಶದಲ್ಲಿ ಬಿಸಿಲಿನ ತೀವ್ರತೆಯಿಂದ ತಪ್ಪಿಸಿಕೊಳ್ಳಲು ಕಾಡಾನೆ ಮಣ್ಣಿನಲ್ಲಿ ಮಜ್ಜನ ಮಾಡಿಕೊಳ್ಳುತ್ತಿರುವ ಮನಮೋಹಕ ದೃಶ್ಯ ಗಮನ ಸೆಳೆದಿದೆ. ಜಂಗಲ್ ಲಾಡ್ಜ್ ಸಫಾರಿಗೆ ತೆರಳಿದ್ದ ಪ್ರವಾಸಿಗರು ಈ ಅಪರೂಪದ ಕ್ಷಣವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ತಾಪಮಾನ ಏರಿಕೆಯಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಿಕೊಳ್ಳಲು ಮತ್ತು ಚರ್ಮವನ್ನು ರಕ್ಷಿಸಿಕೊಳ್ಳಲು ಆನೆಗಳು ಮಣ್ಣು ಅಥವಾ ಕೆಸರಿನಲ್ಲಿ ಮಜ್ಜನ ಮಾಡುವುದು ಸಾಮಾನ್ಯ. ಇಲ್ಲಿ ಗಜರಾಜನು ಮಣ್ಣಿನಲ್ಲೇ ಮಿಂದೆದ್ದಿರುವುದು ಪ್ರವಾಸಿಗರನ್ನು ಪುಳಕಿತರನ್ನಾಗಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮೂರು ವಾರ ಕಣಕ್ಕಿಳಿಯಲ್ಲ CSK ಆಟಗಾರ..! – Kannada News | CSK’s Ayush Mhatre Out for 3 Weeks

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸೋಲು-ಗೆಲುವುಗಳ ಲೆಕ್ಕಾಚಾರದೊಂದಿಗೆ ಸಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಯುವ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಅವರು ಹ್ಯಾಮ್‌ಸ್ಟ್ರಿಂಗ್ (ಸ್ನಾಯು ಸೆಳೆತ) ಗಾಯದ ಸಮಸ್ಯೆಯಿಂದಾಗಿ ಸುಮಾರು ಮೂರು ವಾರಗಳ ಕಾಲ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆದ ಪಂದ್ಯದ ವೇಳೆ ಆಯುಷ್ ಮ್ಹಾತ್ರೆ ಗಾಯಗೊಂಡಿದ್ದರು. ಐದನೇ ಓವರ್‌ನಲ್ಲಿ ಎರಡನೇ ರನ್‌ಗಾಗಿ ಓಡುತ್ತಿದ್ದಾಗ ಅವರ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಯಿತು. ಈ ನೋವಿನ ನಡುವೆ ಬ್ಯಾಟ್ ಬೀಸಿದ ಆಯುಷ್ 30 ರನ್​ಗಳಿಸಿ ಔಟಾಗಿದ್ದರು.

ಇದೀಗ ಅವರ ಸ್ಕ್ಯಾನಿಂಗ್ ರಿಪೋರ್ಟ್ ಬಂದಿದ್ದು, ಈ ವರದಿಯಲ್ಲಿ ಗಾಯವು ಗಂಭೀರವಾಗಿ ಎಂಬುದು ತಿಳಿದು ಬಂದಿದೆ. ಹೀಗಾಗಿ ಆಯುಷ್ ಮ್ಹಾತ್ರೆಗೆ ಮೂರು ವಾರಗಳ ವಿಶ್ರಾಂತಿ ನೀಡಲು ವೈದ್ಯರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಸಿಎಸ್​ಕೆ ತಂಡಕ್ಕೆ ಹಿನ್ನಡೆ:

ಈ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಯುಷ್ ಮ್ಹಾತ್ರೆ ಅದ್ಭುತ ಲಯದಲ್ಲಿದ್ದರು. ಆಡಿರುವ 6 ಪಂದ್ಯಗಳಲ್ಲಿ 177ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಗಳಿಸಿದ್ದರು. ಇದೀಗ ಉತ್ತಮ ಫಾರ್ಮ್​ನಲ್ಲಿರುವ ಆಟಗಾರನೇ ಗಾಯಗೊಂಡು ಹೊರ ನಡೆಯುತ್ತಿರುವುದು ಸಿಎಸ್​ಕೆ ಪಾಲಿಗೆ ಹಿನ್ನಡೆಯಾಗಲಿದೆ.

ಬದಲಿ ಆಟಗಾರ ಯಾರು?

ಆಯುಷ್ ಮ್ಹಾತ್ರೆ ಅವರ ಅಲಭ್ಯತೆಯಲ್ಲಿ ತಂಡವು ಉರ್ವಿಲ್ ಪಟೇಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಅದರಂತೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಉರ್ವಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.

ಗಾಯದ ಸಮಸ್ಯೆಯಲ್ಲಿ ಸಿಎಸ್‌ಕೆ:

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿಗಳಾದ ಖಲೀಲ್ ಅಹ್ಮದ್, ನಾಥನ್ ಎಲ್ಲಿಸ್ ಮತ್ತು ಸ್ಪೆನ್ಸರ್ ಜಾನ್ಸನ್ ಈಗಾಗಲೇ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಕೂಡ ಫಿಟ್​ನೆಸ್ ಸಮಸ್ಯೆಗೀಡಾಗಿದ್ದಾರೆ.

ಇದನ್ನೂ ಓದಿ: ಸೂರ್ಯನಿಗೆ ಗೇಟ್ ಪಾಸ್ ಖಚಿತ: ಇವರಂತೆ ಟೀಮ್ ಇಂಡಿಯಾದ ಮುಂದಿನ ನಾಯಕ..!

ಇದೀಗ ಆಯುಷ್ ಮ್ಹಾಮ್ಹಾತ್ರೆ ಅವರ ಗಾಯವು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮ್ಯಾನೇಜ್‌ಮೆಂಟ್‌ಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಸಿಎಸ್‌ಕೆ, ಏಪ್ರಿಲ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎಲ್​ಕ್ಲಾಸಿಕೊ ಪಂದ್ಯವಾಡಲಿದೆ.

Source link

ಅಡುಗೆ ಮನೆಯಲ್ಲಿ ಹಾಲು ಉಕ್ಕಿ ಚೆಲ್ಲಿದ್ದಕ್ಕೆ ದಂಪತಿ ನಡುವೆ ಜಗಳ ಪತಿ ನೇಣಿಗೆ ಶರಣು – Kannada News | Spilled Milk Leads to Suicide: Kadapa Man’s Tragic End Highlights Mental Health Crisis

ಕಡಪ, ಏಪ್ರಿಲ್ 20: ಇಂದಿನ ಕಾಲದಲ್ಲಿ ಮನುಷ್ಯನ ಸಹನೆ ಎಷ್ಟು ಕ್ಷೀಣಿಸುತ್ತಿದೆ ಎಂದರೆ, ಮೊಬೈಲ್ ಸಿಗದಿದ್ದಕ್ಕೆ ಅಥವಾ ಟಿವಿ ರಿಮೋಟ್ ಕೈ ತಪ್ಪಿದ್ದಕ್ಕೋ ಪ್ರಾಣ ಬಿಡುವ ಹಂತಕ್ಕೆ ತಲುಪುತ್ತಿದ್ದಾರೆ. ಇಂತಹದ್ದೇ ಒಂದು ವಿಚಿತ್ರ ಹಾಗೂ ಮನಕಲಕುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಾಲಾಜಿನಗರದಲ್ಲಿ ನಡೆದಿದೆ. ಇದು ಕೇವಲ ಒಂದು ಅಪಘಾತವಲ್ಲ, ಮನುಷ್ಯನ ಹಠಾತ್ ಸಿಟ್ಟು ಮತ್ತು ಮಾನಸಿಕ ಒತ್ತಡ ಒಂದು ಸುಂದರ ಸಂಸಾರವನ್ನು ಹೇಗೆ ಬೀದಿಪಾಲು ಮಾಡುತ್ತದೆ ಎಂಬುದಕ್ಕೆ ಕನ್ನಡಿ.

ವೆಂಕಟ ಸುಬ್ಬಯ್ಯ (53) ಅವರು ಗಲ್ಫ್ ರಾಷ್ಟ್ರಗಳಲ್ಲಿ ವರ್ಷಗಳ ಕಾಲ ಕಷ್ಟಪಟ್ಟು ದುಡಿದು, ಇತ್ತೀಚೆಗಷ್ಟೇ ತಾಯ್ನಾಡಿಗೆ ಮರಳಿದ್ದರು. ತನ್ನ ಪತ್ನಿ ಅನುರಾಧ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಖವಾಗಿ ಬಾಳಬೇಕೆಂಬ ಆಸೆಯಿಂದ ಊರಿನಲ್ಲೇ ಒಂದು ಸಣ್ಣ ಅಂಗಡಿ ಇಟ್ಟುಕೊಂಡಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಸಣ್ಣಪುಟ್ಟ ವಿಷಯಗಳಿಗೆ ದಂಪತಿಗಳ ನಡುವೆ ನಡೆಯುತ್ತಿದ್ದ ಜಗಳ ಅಂದು ವಿಕೋಪಕ್ಕೆ ತಿರುಗಿತ್ತು.

ಭಾನುವಾರ ಮನೆಯಲ್ಲಿ ಎಲ್ಲವೂ ಮಾಮೂಲಿಯಾಗಿತ್ತು. ಅನುರಾಧ ಒಲೆಯ ಮೇಲೆ ಹಾಲು ಇಟ್ಟಿದ್ದರು. ಯಾವುದೋ ಕೆಲಸದ ನಡುವೆ ಅವರು ಹಾಲಿನ ಕಡೆಗೆ ಗಮನ ಹರಿಸಲಿಲ್ಲ. ಹಾಲು ಕುದಿದು ಒಲೆಯ ಮೇಲೆ ಚೆಲ್ಲಿತು. ಇದನ್ನು ನೋಡಿದ ವೆಂಕಟ ಸುಬ್ಬಯ್ಯ ಅವರಿಗೆ ಕೋಪ ಬಂದಿತು. ಎಷ್ಟು ಬಾರಿ ಹೇಳಿದರೂ ನಿನಗೆ ಬುದ್ಧಿ ಬರುವುದಿಲ್ಲವೇ ಎಂದು ಕಿರುಚುತ್ತಾ, ಆ ಕ್ಷಣದ ಆವೇಶದಲ್ಲಿ ತನ್ನ ತಲೆಯನ್ನು ತಾನೇ ಗೋಡೆಗೆ ಚಚ್ಚಿಕೊಂಡರು.

ಮತ್ತಷ್ಟು ಓದಿ: ಮಮತೆಯ ಮುಂದೆ ಮಣಿದ ವೈಕಲ್ಯ, ಬಾಯಿಯಿಂದ ಬಟ್ಟೆ ಹೊಲಿಯುತ್ತಾ ಮಕ್ಕಳ ಬಾಳು ಬೆಳಗಿದ ಮಹಿಳೆಯ ಅಪೂರ್ವ ಸಾಹಸ

ಪತಿಯ ಈ ಉಗ್ರ ರೂಪ ಮತ್ತು ರಕ್ತ ನೋಡಿ ಹೆದರಿದ ಅನುರಾಧ, ಪರಿಸ್ಥಿತಿ ತಣ್ಣಗಾಗಲಿ ಎಂದು ಮನೆಯಿಂದ ಹೊರಬಂದು ಕುಳಿತರು. ಪತ್ನಿ ಹೊರಗೆ ಹೋಗಿದ್ದನ್ನು ಕಂಡ ಸುಬ್ಬಯ್ಯ ಅವರ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು.

ಅನುರಾಧ ಹೊರಗೆ ಹೋದ ಕೆಲವೇ ನಿಮಿಷಗಳಲ್ಲಿ, ಮನೆಯೊಳಗೆ ವೆಂಕಟ ಸುಬ್ಬಯ್ಯ ಫ್ಯಾನ್‌ಗೆ ನೇಣು ಬಿಗಿದುಕೊಂಡರು. ಸ್ವಲ್ಪ ಸಮಯದ ನಂತರ ಅನುರಾಧ ಒಳಗೆ ಹೋದಾಗ ಕಂಡ ದೃಶ್ಯ ಅವರ ಬದುಕನ್ನೇ ಕಸಿದುಕೊಂಡಿತ್ತು. ಕಿರುಚಾಟ ಕೇಳಿ ಓಡಿ ಬಂದ ನೆರೆಹೊರೆಯವರು ಸುಬ್ಬಯ್ಯ ಅವರನ್ನು ಕೆಳಗೆ ಇಳಿಸಿದರೂ ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು.

ಒಂದು ಲೀಟರ್ ಹಾಲು ಚೆಲ್ಲಿತು ಎಂಬ ಸಣ್ಣ ಕಾರಣ, ಒಬ್ಬ ವ್ಯಕ್ತಿಯ ಜೀವವನ್ನೇ ಬಲಿಪಡೆದು, ಇಬ್ಬರು ಹೆಣ್ಣು ಮಕ್ಕಳನ್ನು ಅನಾಥರನ್ನಾಗಿ ಮಾಡಿತು.
ಎಸ್‌ಐ ಮೊಹಮ್ಮದ್ ರಫಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ಘಟನೆ ಸಮಾಜಕ್ಕೆ ದೊಡ್ಡ ಸಂದೇಶ ನೀಡುತ್ತಿದೆ. ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಸೋಲುಗಳು ಅಥವಾ ಅಸಮಾಧಾನಗಳನ್ನು ತಡೆದುಕೊಳ್ಳುವ ಶಕ್ತಿ ನಾವು ಕಳೆದುಕೊಳ್ಳುತ್ತಿದ್ದೇವೆಯೇ? ಕುದಿಯುವ ಹಾಲನ್ನು ಆರಿಸುವ ತಾಳ್ಮೆ ನಮಗಿದ್ದರೆ, ಇಂದು ಒಂದು ಜೀವ ಉಳಿಯುತ್ತಿತ್ತು. ನಿಮ್ಮ ಸಿಟ್ಟು ನಿಮ್ಮ ಕುಟುಂಬದ ಭವಿಷ್ಯಕ್ಕಿಂತ ದೊಡ್ಡದಲ್ಲ ಎಂಬುದು ಪ್ರತಿಯೊಬ್ಬರೂ ನೆನಪಿಡಬೇಕಾದ ಸತ್ಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:27 pm, Mon, 20 April 26

Source link

ಉಚಿತ ಭಾಗ್ಯದ ಬಸ್‌ಗಳಿಗೆ ತಳ್ಳುವ ಭಾಗ್ಯ: ಚಿಕ್ಕಮಗಳೂರಿನಲ್ಲಿ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್, ಪ್ರಯಾಣಿಕರ ಆಕ್ರೋಶ – Kannada News | Public Outrage in Chikkamagaluru: Passengers Forced to Push Broken Down KSRTC Bus; Lack of Maintenance Amid Freebies

ಉಚಿತ ಭಾಗ್ಯದ ಬಸ್‌ಗಳಿಗೆ ತಳ್ಳುವ ಭಾಗ್ಯ: ಪೋಸ್ಟ್ ವೈರಲ್Image Credit source: tv9

ಚಿಕ್ಕಮಗಳೂರು, ಏಪ್ರಿಲ್ 20: ಸರ್ಕಾರದ ಉಚಿತ ಯೋಜನೆಗಳ ಆರ್ಭಟದ ನಡುವೆ ಸಾರಿಗೆ ಬಸ್‌ಗಳ ನಿರ್ವಹಣೆ ಅಧೋಗತಿಗೆ ತಲುಪಿದೆಯೇ? ಇಂತಹದೊಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ನಗರದ ಮಧ್ಯರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ (KSRTC Bus) ಬಸ್‌ವೊಂದು ಕೆಟ್ಟು ನಿಂತಿದ್ದು, ಪ್ರಯಾಣಿಕರೇ ಬಸ್ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವಾಗಿ ‘ಕರ್ನಾಟಕ ಪೋರ್ಟ್​​ಫೋಲಿಯೋ’ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಲಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸದ್ಯ ಈ ಪೋಸ್ಟ್ ಹಾಗೂ ವಿಡಿಯೋ ವೈರಲ್ ಆಗುತ್ತಿದೆ.

ರಸ್ತೆಯಲ್ಲೇ ನಿಂತ ಕೆಎಸ್‌ಆರ್‌ಟಿಸಿ ಬಸ್

ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ಕಳಸಾಪುರಕ್ಕೆ ತೆರಳುತ್ತಿದ್ದ ಬಸ್, ನಗರದ ಎನ್‌ಎಂಸಿ (NMC) ಸಿಗ್ನಲ್ ಬಳಿ ತಲುಪುತ್ತಿದ್ದಂತೆ ತಾಂತ್ರಿಕ ದೋಷದಿಂದ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ಟ್ರಾಫಿಕ್ ದಟ್ಟಣೆ ಇರುವ ಪ್ರದೇಶದಲ್ಲೇ ಬಸ್ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಈ ವೇಳೆ ಪ್ರಯಾಣಿಕರು ಅನಿವಾರ್ಯವಾಗಿ ಬಸ್‌ನಿಂದ ಕೆಳಗಿಳಿದು ರಸ್ತೆಯಲ್ಲೇ ಬಸ್ ತಳ್ಳುವ ಮೂಲಕ ಡಿಪೋಗೆ ಕಳುಹಿಸಿಕೊಟ್ಟಿದ್ದಾರೆ.

ಸಾರ್ವಜನಿಕರ ಆಕ್ರೋಶ

ಒಂದೆಡೆ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡುತ್ತಿದೆ. ಆದರೆ, ಬಸ್‌ಗಳ ಸುಸ್ಥಿತಿಯ ಬಗ್ಗೆ ಮಾತ್ರ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ‘ಫ್ರೀ ಕೊಡುವುದು ಮುಖ್ಯವಲ್ಲ, ನಾವು ಪ್ರಯಾಣಿಸುವ ಬಸ್ ಸುರಕ್ಷಿತವಾಗಿರಬೇಕು. ರಸ್ತೆಯಲ್ಲಿ ಬಸ್ ಕೆಟ್ಟು ನಿಂತರೆ ಪ್ರಯಾಣಿಕರ ಸಮಯ ಮತ್ತು ಘನತೆಗೆ ಬೆಲೆ ಇಲ್ಲವೇ?’ ಎಂದು ಸ್ಥಳೀಯರು ಮತ್ತು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಉಚಿತ ಯೋಜನೆಗಳ ಪ್ರಚಾರಕ್ಕೆ ನೀಡುವ ಆದ್ಯತೆಯನ್ನು ಬಸ್‌ಗಳ ನಿರ್ವಹಣೆಗೆ ನೀಡುತ್ತಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಬಗ್ಗೆಯೂ ‘ಕರ್ನಾಟಕ ಪೋರ್ಟ್​​ಫೋಲಿಯೋ’ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಬಸ್‌ಗಳ ಕಳಪೆ ನಿರ್ವಹಣೆಯಿಂದಾಗಿ ಪ್ರಯಾಣಿಕರು ಹೈರಾಣಾಗುತ್ತಿದ್ದು, ಸರ್ಕಾರ ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಉಚಿತ ಯೋಜನೆಗಳನ್ನು ನೀಡದೆ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ ‘ಕೂಲ್’ ಟ್ರೀಟ್ಮೆಂಟ್! – Kannada News | Karnataka Police Dog Squad Gets Coolers and Coconut Water to Beat Scorching Heat

ಕಲಬುರಗಿ, ಏಪ್ರಿಲ್ 20: ರಾಜ್ಯದೆಲ್ಲೆಡೆ ಮೈ ಸುಡುವ ಬಿಸಿಲು ಕೇವಲ ಮನುಷ್ಯರನ್ನು ಮಾತ್ರವಲ್ಲ, ಪ್ರಾಣಿಗಳನ್ನೂ ಕಾಡುತ್ತಿದೆ. ಈ ಹಿನ್ನೆಲೆ ಜಿಲ್ಲೆಯ ಪೊಲೀಸ್ ಇಲಾಖೆ ಮಾನವೀಯ ಕ್ರಮ ಕೈಗೊಂಡಿದ್ದು, ಹೀಟ್​ ಸ್ಟ್ರೋಕ್​ನಿಂದ ಶ್ವಾನದಳದ ರಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿದೆ. ಸಿಆರ್ ಮೈದಾನದಲ್ಲಿರುವ ಶ್ವಾನದಳ ಘಟಕದಲ್ಲಿ ಐದು ಪೊಲೀಸ್ ಶ್ವಾನಗಳಿಗೆ ತಂಪು ವಾತಾವರಣ ಕಲ್ಪಿಸಲು ಮೂರು ದೊಡ್ಡ ಏರ್ ಕೂಲರ್‌ಗಳನ್ನು ಅಳವಡಿಸಲಾಗಿದೆ. ರಣಬಿಸಿಲಿಗೆ ಕಂಗೆಟ್ಟಿದ್ದ ಶ್ವಾನಗಳಿಗೆ ತಂಪಾದ ಗಾಳಿ ಒದಗಿಸುವುದರ ಜೊತೆಗೆ, ದೇಹದ ತಾಪಮಾನ ಕಡಿಮೆ ಮಾಡಲು ಏಳನೀರು ಸಹ ನೀಡಲಾಗುತ್ತಿದೆ. ಬಿಸಿಲಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಶ್ವಾನಗಳ ಆರೋಗ್ಯ ಕಾಪಾಡಲು ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀದಿ ನಾಯಿಗೆ ಅನ್ನ ಹಾಕಿ ಪೇಚೆಗೆ ಸಿಲುಕಿದ ವ್ಯಕ್ತಿ; ಗ್ರಾಮ ಪಂಚಾಯತಿಯಿಂದ ಬಂತು ನೋಟಿಸ್! – Kannada News | Karwar Street Dog Bite: Man Who Fed It Held Responsible by Panchayat; Appeals DC

ಬೀದಿ ನಾಯಿಗೆ ಅನ್ನ ಹಾಕಿ ಪೇಚೆಗೆ ಸಿಲುಕಿದ ವ್ಯಕ್ತಿ!

ಕಾರವಾರ, ಏಪ್ರಿಲ್ 20: ಹಲವರು ಬೀದಿ ನಾಯಿಗಳಿಗೆ (Street Dog) ಆಹಾರ ಹಾಕುವ ಹವ್ಯಾಸ ಹೊಂದಿರುತ್ತಾರೆ. ದಿನಕ್ಕೆ ಒಮ್ಮೆಯಾಗಲಿ, ಮೂರು ಹೊತ್ತಾಗಲಿ ಮನೆಯಲ್ಲಿ ತಾವು ತಿನ್ನುವ ಆಹಾರದಲ್ಲೇ ಸ್ವಲ್ಪ ಪ್ರಮಾಣವನ್ನು ಬೀದಿ ನಾಯಿಗಳಿಗೂ ಹಾಕುತ್ತಾರೆ. ಅಂತೆಯೇ ಕಾರವಾರದಲ್ಲಿ ಬೀದಿ ನಾಯಿಯೊಂದಕ್ಕೆ ಆಹಾರ ಹಾಕುತ್ತಿದ್ದ ಯುವಕ ಪೇಚೆಗೆ ಸಿಲುಕಿರುವ ಘಟನೆ ನಡೆದಿದೆ. ಆ ನಾಯಿ ಊರಲ್ಲಿ ಕೆಲವರ ಮೇಲೆ ದಾಳಿ ಮಾಡಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಒ, ಅದರ ತಪ್ಪನ್ನು ಯುವಕನ ಮೇಲೆ ಹೊರಿಸಿದ್ದಾರೆ. ಇದನ್ನು ಪ್ರಶ್ನಿಸಿ ವ್ಯಕ್ತಿ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾನೆ.

ಹಲವರ ಮೇಲೆ ದಾಳಿ ಮಾಡಿರುವ ನಾಯಿ

ಬೈರಾ ಗ್ರಾಮದ ತುಶಾರ್ ಲೊಳೆಕರ ಅವರು ಬಸ್ ನಿಲ್ದಾಣದ ಬಳಿ ಇದ್ದ ಅನಾರೋಗ್ಯ ಪೀಡಿತ ಬಿದಿ ನಾಯಿಗೆ ಕಳೆದ ಕೆಲ ದಿನಗಳಿಂದ ನಿತ್ಯ ಆಹಾರ ನೀಡುತ್ತಿದ್ದರು. ಮಾನವೀಯತೆ ದೃಷ್ಟಿಯಿಂದ ಮಾಡಿದ ಈ ಕಾರ್ಯ ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಇತ್ತೀಚೆಗೆ ಆ ಶ್ವಾನದಲ್ಲಿ ಅಸಹಜ ವರ್ತನೆ ಕಾಣಿಸಿಕೊಂಡಿದ್ದು, ಕೆಲವರ ಮೇಲೆ ದಾಳಿ ಮಾಡಿದ ಘಟನೆಗಳೂ ವರದಿಯಾಗಿವೆ.

ವ್ಯಕ್ತಿ ಹೇಳಿದ್ದೇನು ಕೇಳಿ

ಜಿಲ್ಲಾಧಿಕಾರಿ ಮೊರೆ ಹೋದ ವ್ಯಕ್ತಿ

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯ್ತಿಗೆ ದೂರು ನೀಡಿದ್ದು, ಪರಿಶೀಲನೆ ನಡೆಸಿದ ಪಂಚಾಯ್ತಿ ಅಧಿಕಾರಿಗಳು, ಶ್ವಾನಕ್ಕೆ ಆಹಾರ ನೀಡುತ್ತಿದ್ದ ತುಶಾರ್ ಅವರನ್ನೇ ಅದರ ನಿರ್ವಹಣೆಗೆ ಹೊಣೆಗಾರರನ್ನಾಗಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಶ್ವಾನದ ಸಂಪೂರ್ಣ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಳ್ಳಲಾಗದ ತುಶಾರ್, ತಾವು ಕೇವಲ ಮಾನವೀಯತೆಯಿಂದ ಆಹಾರ ನೀಡಿದ್ದಷ್ಟೇ ಹೊರತು ಶ್ವಾನದ ಮಾಲೀಕರಲ್ಲ ಎಂದು ಹೇಳಿ ಪಂಚಾಯ್ತಿಯ ಕ್ರಮ ಪ್ರಶ್ನಿಸಿ ಜಿಲ್ಲಾಧಿಕಾರಿಯ ಮೊರೆ ಹೋಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version